ಸ್ತ್ರೀವೊಡರ್ಪ್ಪೆಂಬುದುತ್ತರವಾಕ್ಯಂ :

ಕಲತ್ರಂನಾಮನರಾಣಾಮನಿಗಲಮಪಿದೃಢಂಬಂಧನಮಾಹುಃ|| ೧ || ೧೦೯೮ ||

ಅರ್ಥ : ನರಾಣಾಂ = ಮನುಷ್ಯರ್ಗೆ, ಕಲತ್ರಂ = ಸ್ತ್ರೀಯುಂ, ನಾಮ = ನಿಶ್ಚಯದಿಂ, ಅನಿಗಲಮಪಿ = ಸಂಕಲೆಯಲ್ಲದೆಯುಂ, ದೃಢಂಬಂಧನಂ = ಪಿರಿದಪ್ಪಕಟ್ಟೆಂದು, ಆಹುಃ = ಪೇಳ್ವರ್‌ || ಇದುಮನದಬಂಧನಮೆಂಬುದುತಾತ್ಪರ್ಯಂ || ಇಂತಪ್ಪವರನೆಂತಾಗಿಯುಂರಕ್ಷಿಸಲ್ವೇಳ್ಕುಮೆಂಬುದುತ್ತರವಾಕ್ಯಂ :

ತ್ರೀಣ್ಯವಶ್ಯಂಭರ್ತವ್ಯಾನಿ, ಮಾತಾಕಲತ್ರಮಪ್ಯಪ್ರಾಪ್ತವ್ಯವಹಾರಾಣಿ|| ೨ || ೧೦೯೯ ||

ಅರ್ಥ : ಮಾತಾ = ತಾಯಿಯುಂ, ಕಲತ್ರಂಅಪಿ = ಸ್ತ್ರೀಯುಂ, ಅಪ್ರಾಪ್ತವ್ಯವಹಾರಾಣಿ = ಏನುಮೆನಱಿಯದ (ವ್ಯವಹಾರಾದಿಗಳನಱಿಯದ) ಆಪತ್ಯಾನಿಚ = ಮಕ್ಕಳುಮೆಂದು, ತ್ರೀಣಿ = ಮೂವರುಂ, ಅವಶ್ಯಂ = ನಿಶ್ಚಯದಿಂ, ಭರ್ತವ್ಯಾನಿ = ರಕ್ಷಿಸಲ್ಪಡುವರ್‌ || ಇವರಂರಕ್ಷಿಸದಂಪುರುಷನಲ್ಲೆಂಬುದುತಾತ್ಪರ್ಯಂ || ತೀರ್ಥಸೇವೆಯಫಲಮಿದೆಂಬುದುತ್ತರವಾಕ್ಯಂ :

ದಾನಂತಪಃಪ್ರಾಯೋಪವೇಶನಂನಿಯಮವ್ಯವಸ್ಥಾಪನಂ[1]ವಾತೀರ್ಥೋಪಾಸನಸ್ಯಫಲಂ|| ೩ || ೧೧೦೦ ||

ಅರ್ಥ : ದಾನಂ = ದಾನಮುಂ, ತಪಃ = ತಪಮುಂ, ಪ್ರಾಯೋಪವೇಶನಂ = ಪಲತೆಱದುಪವಾಸಂಗಳುಂ, ನಿಯಮವ್ಯವಸ್ಥಾಪನಂ = ನಿಯಮಂಗಳಿಂದಿರ್ಪುದುವಾ = ಮೇಣ್‌, ತೀರ್ಥೋಪಾಸನಸ್ಯ = ತೀರ್ಥಸೇವನೆಯ, ಫಲಂ = ಫಲಂ || ಇನಿತಿಲ್ಲದೆತೀರ್ಥಸೇವೆಯಲ್ಲೆಂಬುದುತಾತ್ಪರ್ಯಂ || ತೀರ್ಥದೊಳಿರ್ಪ್ಪವರ್‌ ದೇವಸ್ವಂತಿನ್ನದಿರಲೆಂಬುದಂ[2]ದೃಷ್ಟಾಂತದಿಂದಪೇಳ್ವುದುತ್ತರವಾಕ್ಯಂ :

—-

. ಪುರುಷರಿಗೆಹೆಂಡತಿಯುಸಂಕೋಲೆಯಲ್ಲದಿದ್ದರೂಬಂಧನಎನ್ನುವರು

. ಮಾತಾಪಿತೃಗಳು, ಹೆಂಡತಿ, ವ್ಯವಹಾರಗಳನ್ನರಿಯದಮಕ್ಕಳುಮೂವರನ್ನುಅವಶ್ಯವಾಗಿಪೋಷಿಸಬೇಕು.

. ದಾನ, ತಪಸ್ಸು, ಹಲವುಬಗೆಯಉಪವಾಸಗಳು. ನಿಯಮಾನುಸರಣೆ, ಇವುತೀರ್ಥಕ್ಷೇತ್ರಯಾತ್ರೆಯಫಲಕೊಡುತ್ತವೆ.

—-

ತೀರ್ಥವಾಸಿಷು[3]ದೇವಸ್ವಾಹರಣಂ[4]ಕ್ರವ್ಯಾದೇಷುಕಾರುಣ್ಯಮಿವಸ್ವಾಚಾರಚ್ಯುತೇಷುಪಾಪಭೀರುತ್ವಮಿವಪ್ರಾಹುಃ|| ೪ || ೧೧೦೧ ||

ಅರ್ಥ : ತೀರ್ಥವಾಸಿಷು = ತೀರ್ಥದೊಳಿರ್ಪದೊಳ್‌, ದೇವಸ್ವಾಹರಣಂ = ದೇವರರ್ಥಮಂಕೊಳ್ಳದಿರ್ಪುದು, ಕ್ರವ್ಯಾದೇಷು = ಮಾಂಸಾಹಾರಿಗಳೊಳ್‌, ಕಾರುಣ್ಯಮಿವ = ಕರುಣಂಪಡೆಯಲ್ಬಾರದಂತೆ, ಸ್ವಾಚಾರಚ್ಯುತೇಷು = ತಮ್ಮಾಚಾರದಿಂಕೆಟ್ಟರೊಳ್‌, ಪಾಪಭೀರುತ್ವಮಿವ = ಪಾಪಕ್ಕಂಜುವುದುಪಡೆಯಲ್ಬಾರದಂತೆ, ಪ್ರಾಹುಃ = ಪೇಳ್ವರ್‌ || ತೀರ್ಥದೊಳಿರ್ಪವರ್‌ ದೇವಸ್ವಮಂಕೊಳಲಾಗದೆಂಬುದುತಾತ್ಪರ್ಯಂ || ತೀರ್ಥವಾಸಿಗಳಸ್ವಭಾವಮಂಪೇಳ್ವುದುತ್ತರವಾಕ್ಯಂ :

ಆಧಾರ್ಮಿಕತ್ವಮತಿನಿಷ್ಠುರತ್ವಮತೀವಲುಂಚಕತ್ವಂ[5]ಪ್ರಾಯೇಣ ತೀರ್ಥವಾಸೀನಾಂಪ್ರಕೃತಿ|| ೫ || ೧೧೦೨ ||

ಅರ್ಥ : ಆಧಾರ್ಮಿಕತ್ವಂ = ಧರ್ಮದೊಳ್ನೆಗಳದುದುಂ, ಅತಿನಿಷ್ಠುರತ್ವಂ = ಕ್ರೂರಮಪ್ಪಸ್ವಭಾವಂ, ಅತೀವಲುಂಚಕತ್ವಂಚ = ಆರಕೈಯಲಾದೊಡಂಕಳೆದುಕೊಳ್ಳುಹಮೆಂಬಿವು, ಪ್ರಾಯೇಣ = ಪ್ರಚುರದಿಂ, ತೀರ್ಥವಾಸೀನಾಂ = ತೀರ್ಥದೊಳಿರ್ಪರ, ಪ್ರಕೃತಿಃ = ಸ್ವಭಾವವು || ಇಂತಪ್ಪಂಸ್ವಾಮಿಯಲ್ಲೆಂಬುದುತ್ತರವಾಕ್ಯಂ :

[6]ಮೂಷಕಗೃಹೇಮೋದಕನ್ಯಾಸಇವದೇವಾದ್ಯುಪಭೋಗಾಯ[7] ಧರ್ಮವರ್ಜಿತೇಷುಧನಾರ್ಪಣಂ|| ೬ || ೧೧೦೩ ||

ಅರ್ಥ : ದೇವಾದ್ಯುಪಭೋಗಾಯ = ದೇವಪೂಜಾಗುರೂಪಾಸ್ತಿಮೊದಲಾದವಱಉಪಯೋಗಕ್ಕೆ, ಧರ್ಮವರ್ಜಿತೇಷು = ಧರ್ಮಹೀನರಲ್ಲಿ, ಧನಾರ್ಪಣಂ = ವಸ್ತುವಸಮರ್ಪಿಸುಹವು, ಮೂಷಕಗೃಹೇ = ಇಲಿಬಿಲದಲ್ಲಿ, ಮೋದಕನ್ಯಾಸಇವ = ಲಡ್ಡುಗೆಯನಿಱಿಸಿದಂತೆ ||

—-

. ಪುಣ್ಯಕ್ಷೇತ್ರವಾಸಿಗಳುದೇವರಸ್ವತ್ತನ್ನುಅಪಹರಿಸುವುದಿಲ್ಲವೆಂದರೆಕ್ರೂರಪ್ರಾಣಿಗಳು. ಕರುಣೆಯುಳ್ಳವರು. ಅನಾಚಾರಿಗಳುಪಾಪಭೀರುಗಳುಆದಂತೆಎಂದುಅನ್ನುತ್ತಾರೆ.

. ಅಧಾರ್ಮಿಕತೆ, ಕ್ರೂರಸ್ವಭಾವ. ಇತರರಸುಲಿಗೆಇವುಪ್ರಾಯಶಃತೀರ್ಥಕ್ಷೇತ್ರವಾಸಿಗಳಸ್ವಭಾವ.

. ಧರ್ಮವಿಲ್ಲದವನಿಗೆದೇವಸೇವೆಗೋಸ್ಕರಮಾಡುವಧನಾರ್ಪಣೆಯುಇಲಿಯಬಿಲದಲ್ಲಿಮೋದಕವನ್ನಿಟ್ಟಂತೆ.

—-

ಕಿಂಪ್ರಭುರ್ಯಃಕಾರ್ಯಕಾಲಏವಸಂಭಾವಯತಿ[8]ಭೃತ್ಯಾನ್|| ೭ || ೧೧೦೪ ||

ಅರ್ಥ : ಯಃ = ಆವನೋರ್ವ, ಕಾರ್ಯಕಾಲಏವ = ಪ್ರಯೋಜನಂಪುಟ್ಟಿದಲ್ಲಿಯೆ, ಭೃತ್ಯಾನ್‌ = ಬಂಟರಂ, ಸಂಭಾವಯತಿ8 = ಆರಯ್ಗುಂ, ಸಃ = ಆತಂ, ಕಿಂಪ್ರಭುಃ = ಏಂಪ್ರಭುವೇ || ಭೃತ್ಯರನೆಲ್ಲಾಕಾಲಮಾರಯ್ಯವೇಳ್ಕುಮೆಂಬುದುತಾತ್ಪರ್ಯಂ || ಇಂತಪ್ಪಬಂಟನುಂಬಂಟನುಮಲ್ಲೆಂಬುದುತ್ತರವಾಕ್ಯಂ :

ಕಿಂಭೃತ್ಯಃಸಖಾವಾಯಃಕಾರ್ಯಮುದ್ದಿಶ್ಯಾರ್ಥಂಯಾಚತೇ[9]ಕರೋತಿ ಚಅಂಗಾಕೃಷ್ಟಿಂ|| ೮ || ೧೧೦೫ ||

ಅರ್ಥ : ಯಃ = ಆವನೋರ್ವಂ, ಕಾರ್ಯಮುದ್ದಿಶ್ಯ = ಪ್ರಯೋಜನಂಕುಱಿತ್ತು, ಅರ್ಥಂ = ಅರ್ಥಮಂ, ಯಾಚತೇ = ಬೇಳ್ಕುಂ, ಅಂಗಾಕೃಷ್ಟಿಂಚ = ಕಾರ್ಯತತ್ತಲ್ಲಿಮೆಯ್ದೆಗೇವುದಂ[10], ಕರೋತಿ = ಮಾಳ್ಕುಂ, ಸಃ = ಆತಂ, ಕಿಂಭೃತ್ಯಃ = ಏಂಬಂಟನೇ, ಸಖಾವಾ = ಏಂಸಖನೇಮೇಣ್‌ || ಮೆಯ್ದೆಗೆಯದವರಸದೊಳ್‌ ಕಾರ್ಯಮಂತೀರ್ಚುವುದೆಂಬುದುತಾತ್ಪರ್ಯಂ || ಇಂತಪ್ಪಳ್‌ ಪ್ರಿಯಳಲ್ಲೆಂಬುದುತ್ತರವಾಕ್ಯಂ :

ಸಾ[11]ಕಿಂಸ್ತ್ರೀ[12]ಯಾರ್ತ್ಥೇನಪ್ರಣಯಿನೀ|| ೯ || ೧೧೦೬ ||

ಅರ್ಥ : ಯಾ = ಆವಳೋರ್ವಳ್‌, ಅರ್ಥೇನ = ಅರ್ಥದಿಂದ, ಪ್ರಣಯನೀ = ಕೂರ್ಪಳ್‌, ಸಾ = ಅವಳ್‌, ಕಿಂಸ್ತ್ರೀ = ಎಂಸ್ತ್ರೀಯೇ || ಅರ್ಥದಿಂಕೂರ್ಪವಳ್‌ ಸ್ತ್ರೀಯಲ್ಲೆಂಬುದುತಾತ್ಪರ್ಯಂ || ಇಂತಪ್ಪುದುನಾಡಲ್ಲೆಂಬುದುತ್ತರವಾಕ್ಯಂ :

—-

. ಕೆಲಸವಿದ್ದಾಗಮಾತ್ರಸೇವಕರನ್ನುಆದರಿಸುವವನುಪ್ರಭುವೆ?

. ಕೆಲಸಮಾಡಲಿಕ್ಕೆಹಣವನ್ನುಬೇಡುವವನು. ಹಿಂದೆಗೆಯುವವನುಭೃತ್ಯನೇಅಥವಾಸ್ನೇಹಿತನೇ?

. ಹಣಕ್ಕಾಗಿಪ್ರೇಮಿಸುವವಳುಸ್ತ್ರೀಯೇ?

—-

ಕಿಂದೇಶೋಯತ್ರನಾಸ್ತ್ಯಾತ್ಮನೋನಿರ್ವೃತ್ತಿಃ[13]|| ೧೦ || ೧೧೦೭ ||

ಅರ್ಥ : ಯತ್ರ = ಎಲ್ಲಿ, ಆತ್ಮನಃತನಗೆ, ನಿವೃತ್ತಿಃ = ಸುಖಂ, ನಾಸ್ತಿ = ಇಲ್ಲ, ಸಃ = ಅದು, ಕಿಂದೇಶಃ = ಏಂನಾಡೇ || ತನಗೆಸುಖಮಪ್ಪುದುನಾಡೆಂಬುದುತಾತ್ಪರ್ಯಂ || ಇಂತಪ್ಪಂನಂಟನಲ್ಲೆಂಬುದುತ್ತರವಾಕ್ಯಂ :

ಕಿಂಬಂಧುಯೋವ್ಯಸನೇನೋಪಷ್ಠತೇ || ೧೧ || ೧೧೦೮ ||

ಅರ್ಥ : ಯಃ = ಆವನೋರ್ವಂ, ವ್ಯಸನೇ = ಆಪತ್ತಿನೊಳ್, ನೋಪತಿಷ್ಠತೇ = ಉಪಕಾರಿಯಾಗಿರಂ, ಸಃ = ಆತಂ, ಕಿಂಬಂಧುಃ = ಏಂನಂಟನೇ || ಎಡಱಿಂಗಾಗದಂನಂಟನಲ್ಲೆಂಬುದುತಾತ್ಪರ್ಯಂ || ಇಂತಪ್ಪಂಕೆಳೆಯನಲ್ಲೆಂಬುದುತ್ತರವಾಕ್ಯಂ :

ತತ್ಕಿಂಮಿತ್ರಂಯತ್ರನಾಸ್ತಿವಿಶ್ರಭಃ[14] || ೧೨ || ೧೧೦೯ ||

ಅರ್ಥ : ಯತ್ರ = ಆವುದೊಂದೆಡೆಯೊಳ್, ವಿಶ್ರಂಭಃ = ಬಿಚ್ಚತಿಕೆ, ನಾಸ್ತಿ = ಇಲ್ಲ, ತತ್ = ಆತಂ, ಕಿಂಮಿತ್ರಂ = ಏಂಕೆಳೆಯನೇ || ಮನಮನಱಿಯದಂಕೆಳೆಯಲ್ಲೆಂಬುದುತಾತ್ಪರ್ಯಂ || ಇಂತಪ್ಪಗೃಹಸ್ಥನಲ್ಲೆಂಬುದುತ್ತರವಾಕ್ಯಂ :

ಕಿಂಗೃಹಸ್ಥೋಯಸ್ಯನಾಸ್ತಿಸತ್ಕಲತ್ರಸಂಪತ್ತಿಃ|| ೧೩ || ೧೧೧೦ ||

ಅರ್ಥ : ಯಸ್ಯ = ಆವನೋರ್ವಂಗೆ, ಸತ್ಕಲತ್ರಸಂಪತ್ತಿ = ಒಳಿತಪ್ಪಸ್ತ್ರೀಯೆಯ್ದುಗೆ, ನಾಸ್ತಿ = ಇಲ್ಲ, ಸಃ = ಆತಂ, ಗೃಹಸ್ಥಃಕಿಂ = ಏಂಗೃಹಸ್ಥನೇ || ಎಲ್ಲಾತೆರದಿಂಮನೋಜ್ಞಮಪ್ಪಸ್ತ್ರೀಯಂಪಡೆಯದಂಗೃಹಸ್ಥನಲ್ಲೆಂಬುದುತಾತ್ಪರ್ಯಂ || ಇಂತಪ್ಪುದುದಾನಮಲ್ಲಮೆಂಬದುತ್ತರವಾಕ್ಯಂ :

ತತ್ಕಿಂದಾನಂಯತ್ರನಾಸ್ತಿಸತ್ಕಾರ|| ೧೪ || ೧೧೧೧ ||

ಅರ್ಥ : ಯತ್ರ = ಎಲ್ಲಿ, ಸತ್ಕಾರಃ = ಮನ್ನಣೆನಾಸ್ತಿ = ಇಲ್ಲ, ಸಃಅದು, ಕಿಂದಾನಂ = ಎಂದಾನಮೇ || ಪ್ರಿಯದಿಂದೀವುದೆದಾನಮೆಂಬುದುತಾತ್ಪರ್ಯಂ || ಇಂತಪ್ಪುದೂಟಮಲ್ಲೆಂಬುದುತ್ತರವಾಕ್ಯಂ :

—-

೧೦. ಎಲ್ಲಿತನಗೆಸುಖವಿಲ್ಲವೋಅದೆಂಥದೇಶವು?

೧೧. ಕಷ್ಟಕಾಲದಲ್ಲಿಆಗದವನುಬಂಧುವೇ?

೧೨. ವಿಶ್ವಾಸಪಾತ್ರನಲ್ಲದವನುಮಿತ್ರನೇ?

೧೩. ಒಳ್ಳೆಯಹೆಂಡತಿಯಿಲ್ಲದಿರುವವನುಗ್ರಹಸ್ಥನೇ?

೧೪. ಮನ್ನಣೆಇಲ್ಲದದಾನವುದಾನವೇ?

—-

ತತ್ಕಿಂಭುಕ್ತಂಯತ್ರನಾಸ್ತ್ಯತಿಥಿಸಂವಿಭಾಗಃ || ೧೫ || ೧೧೧೨ ||

ಅರ್ಥ : ಯತ್ರ = ಎಲ್ಲಿ, ಅತಿಥಿಸಂವಿಭಾಗಃ = ಅತಿಥಿಗಳ್ದಿಕ್ಕುವುದು, ನಾಸ್ತಿ = ಇಲ್ಲ, ತತ್ = ಅದು, ಕಿಂಭುಕ್ತಂ = ಏನೂಟಮೇ || ಅತಿಥಿಗಳ್ಗಿಕ್ಕಿಯುಂಬುದೆಂಬುದುತಾತ್ಪರ್ಯಂ || ಇಂತಪ್ಪುದುಸ್ನೇಹಮಲ್ಲೆಂಬುದುತ್ತರವಾಕ್ಯಂ :

ತತ್ಕಿಂಪ್ರೇಮಯತ್ರಾಸ್ತಿಕಾರ್ಯವಶಾತ್ಪ್ರವೃತ್ತಿಃ|| ೧೬ | ೧೧೧೩ ||

ಅರ್ಥ : ಯತ್ರ = ಎಲ್ಲಿ, ಕಾರ್ಯವಶಾತ್ = ಪ್ರಯೋಜಮಂಕುಱಿತ್ತು, ಪ್ರವೃತ್ತಿಃ = ವರ್ತಿಸುವುದು, ಅಸ್ತಿ = ಉಂಟು, ತತ್ = ಅದು, ಕಿಂಪ್ರೇಮ = ಏಂಪ್ರೇಮಮೇ || ಕಾರ್ಯಮನುದ್ದೇಶಿಸದ[15]ಕೂರ್ಮೆಸ್ನೇಹಮಲ್ಲೆಂಬುದುತಾತ್ಪರ್ಯಂ || ಇಂತಪ್ಪುದುಸದಾಚಾರಮಲ್ಲೆಂಬುದುತ್ತರವಾಕ್ಯಂ :

ತತ್ಕಿಮಾಚರಣಂಯತ್ರಾಸ್ತಿವಾಚ್ಯತಾಮಾಯಾವ್ಯವಹಾರೋವಾ|| ೧೭ || ೧೧೧೪ ||

ಅರ್ಥ : ಯತ್ರ = ಎಲ್ಲಿ, ವಾಚ್ಯತ್ಯಾ = ಪೊಲ್ಲನುಡಿಗೆ (ದೂಷಣೆ)ಯಪ್ಪಸ್ವರೂಪ, ಮಾಯಾವ್ಯವಹಾರೋವಾ = ವಂಚನೆಯನೆಗಳ್ತೆಯುಮೇಣ್, ಅಸ್ತಿ = ಉಂಟು, ತತ್ = ಅದು, ಕಿಂಆಚರಣಂ = ಏಂನೆಗಳ್ತೆಯೇ || ಪಳಿವಡೆಯದನೆಗಳ್ತೆಯೇಆಚಾರಮಲ್ಲೆಂಬುದುತಾತ್ಪರ್ಯಂ || ಇಂತಪ್ಪಂಮಗನಲ್ಲೆಂಬುದುತ್ತರವಾಕ್ಯಂ :

ತತ್ಕಿಮಪತ್ಯಂಯತ್ರಾಧ್ಯಯನಂವಿನಯೋವಾ|| ೧೮ || ೧೧೧೫ ||

ಅರ್ಥ : ಯತ್ರ = ಆವನೋರ್ವನಲ್ಲಿ, ಅಧ್ಯಯನಂ = ಓದುವುದುಂ, ವಿನಯೋವಾ = ವಿನಯಂಮೇಣ್, ನ = ಇಲ್ಲ, ತತ್ = ಆತಂ, ಕಿಮಪತ್ಯಂ = ಏಂಮಗನೇ || ಸ್ವಾಧ್ಯಾಯ- ವಿನಯಂಗಳುಳ್ಳನೆಮಗನೆಂಬುದುತಾತ್ಪರ್ಯಂ || ಇಂತಪ್ಪುದುಜ್ಞಾನಮಲ್ಲೆಂಬುದುತ್ತರವಾಕ್ಯಂ :

—-

೧೫. ಅತಿಥಿಗಳಿಗೆನೀಡದಊಟವುಊಟವೇ?

೧೬. ಯಾವದಾದರೂಕೆಲಸದಉದ್ದೇಶದಿಂದಮಾಡುವವ್ಯವಹಾರವುಪ್ರೇಮವೇ?

೧೭. ದೂಷಣೆಅಥವಾವಂಚನೆಯಿಂದಕೂಡಿದವ್ಯವಹಾರವುಸದಾಚಾರವೇ?

೧೮. ವಿದ್ಯೆಅಥವಾವಿನಯವುಇಲ್ಲದವನುಮಗನೆ?

—-

ತತ್ಕಿಜ್ಞಾನಂಯತ್ರಮದೇನಾಂಧತಾಚಿತ್ತಸ್ಯ|| ೧೯ || ೧೧೧೬ ||

ಅರ್ಥ : ಯತ್ರ = ಎಲ್ಲಿ, ಮದೇನ = ಗರ್ವದಿಂ, ಅಂಧತಾ = ಕುರುಡುತನಂ, ಚಿತ್ತಸ್ಯ = ಮನಕ್ಕೆ, ತತ್ = ಅದು, ಕಿಂಜ್ಞಾನಂ = ಏಂಅಱಿತಮೇ || ಗರ್ವಮಿಲ್ಲದುದೇಜ್ಞಾನಮೆಂಬುದುತಾತ್ಪರ್ಯಂ || ಇಂತಪ್ಪುದುಸೌಜನ್ಯಮಲ್ಲೆಂಬುದುತ್ತರವಾಕ್ಯಂ :

ತತ್ಕಿಂಸೌಜನ್ಯಂಯತ್ರಪರೋಕ್ಷೇಪಿಶುನಭಾವಃ|| ೨೦ || ೧೧೧೭ ||

ಅರ್ಥ : ಯತ್ರ = ಎಲ್ಲಿ, ಪರೋಕ್ಷೇ = ಹಿಂದೆ, ಪಿಶುನಭಾವಃ = ಹಿಸುಣಾಡುಹಂ (ಕೊಂಡೆಯ) ತತ್ = ಅದು, ಕಿಂಸೌಜನ್ಯಂ = ಏಂಮಾನಸಿಕೆಯೇ|| ಹಿಸುಣಾಡದನೆಮಾನಸನೆಂಬುದುತಾತ್ಪರ್ಯಂ || ಇಂತಪ್ಪುದುಸಿರಿಯಲ್ಲೆಂಬುದುತ್ತರವಾಕ್ಯಂ :

ಸಾಕಿಂಶ್ರೀರ್ಯತ್ರಸಂತೋಷಃಸತ್ಪುರುಷಾಣಾಂ|| ೨೧ || ೧೧೧೮ ||

ಅರ್ಥ : ಯತ್ರ = ಎಲ್ಲಿ, ನಸಂತೋಷಃ = ಸಂತಸಮಿಲ್ಲ, ಸತ್ಪುರುಷಾಣಾಂಉತ್ತಮಪುರುಷರ್ಗೆ, ಸಾ = ಅದು, ಕಿಂಶ್ರೀ = ಏಂಶ್ರಿಯೇ || ಸತ್ಪುರುಷರಂತಣಿಪುವುದುಸಿರಿಯೆಂಬುದುತಾತ್ಪರ್ಯಂ || ಇಂತಪ್ಪುದುಪಕಾರಮಲ್ಲೆಂಬುದುತ್ತರವಾಕ್ಯಂ :

ತತ್ಕಿಂಕೃತಂಯತ್ರೋಕ್ತಿರುಪಕೃತ್ಯ|| ೨೨ || ೧೧೧೯ ||

ಅರ್ಥ : ಯತ್ರ = ಎಲ್ಲಿ, ಉಪಕೃತ್ಯ = ಉಪಕರಿಸುವುದಱ (ಮಾಡಿ) ಉಕ್ತಿಃ = ನುಡಿ (ಮಾಹವು) ತತ್ = ಅದು, ಕಿಂಕೃತಂ = ಏನುಪಕಾರಮೆ || ಉಪಕಾರಂಗೆಯ್ದುನುಡಿಯವೇಡೆಂಬುದುತಾತ್ಪರ್ಯಂ || ಇಂತಿಪ್ಪವರ್ಗೆನಂಟುನಡೆಯದೆಂಬುದುತ್ತರವಾಕ್ಯಂ :

[16]ತಯೋಃಕೋನಾಮನಿರ್ವಾಹೋಯೌದ್ವಾವಪಿಪ್ರಭೂ[17]ಮಾನಿನೌಪಂಡಿತೌಲುಬ್ಧೌಮೂರ್ಖಾವಸಹನೌವಾ|| ೨೩ || ೧೧೨೦ ||

ಅರ್ಥ : ದ್ವಾವಪಿ = ಇರ್ವರುಂ, ಯೌ = ಆರ್, ಪ್ರಭೂ = ಪೆಂಪಿನವರ್, ಮಾನಿನೌ = ಮಾನಿತರ್, ಪಂಡಿತೌ = ಬುದ್ಧಿವಂತರ್, ಲುಬ್ಧೌ = ಲೋಭಿಗರ್, ಮೂರ್ಖೌ = ಕೊರಡಿಗರ್, ಅಸಹನೌವಾ = ಸೈರಿಸದವರ್ಮೇಣ್, ತಯೋಃ = ಆಇರ್ವಗೆ, ಕೋನಾಮ = ಆವುದು, ನಿರ್ವಾಹಃ = ಸ್ನೇಹಂಗಿಡದೆನಡೆವುದು || ಇಂತಪ್ಪಇರುವರ್ಗ್ಗೆಸ್ನೇಹಂಗಿಡದಿರದೆಂಬುದುತಾತ್ಪರ್ಯಂ || ಇದುಸತ್ಪುರುಷರನೆಗಳ್ತೆಯೆಂಬುದುತ್ತರವಾಕ್ಯಂ :

—-

೧೯. ಗರ್ವದಿಂದಕುರುಡಾದಮನಸ್ಸಿಗೆಜ್ಞಾನವೆಲ್ಲಿಯದು

೨೦. ಬೆನ್ನಹಿಂದೆಚಾಡಿಹೇಳುವಸ್ವಭಾವವಿರುವಲ್ಲಿಸೌಜನ್ಯವೆಲ್ಲಿಯದು?

೨೧. ಸತ್ಪುರುಷರಿಗೆಸಂತೋಷವನ್ನುಂಟುಮಾಡಲಾರದಸಂಪತ್ತುಐಶ್ವರ್ಯವೇ?

೨೨. ಉಪಕಾರಮಾಡಿನಾನುಮಾಡಿದೆನೆಂದುಹೇಳಿಕೊಳ್ಳುವುದುಉಪಕಾರವೇ?

೨೩. ಇದ್ದವರಿಬ್ಬರೂದೊಡ್ಡಸ್ಥಿಕೆಇದ್ದವರು, ಗರ್ವಿಗಳು, ಬುದ್ಧಿವಂತರು, ಲೋಭಿಗಳು, ಮೂರ್ಖರು, ಅಥವಾಸಹನೆಇಲ್ಲದವರುಇದ್ದರೆಹೇಗೆಕಾರ್ಯನಿರ್ವಹಿಸುವರು?

—-

 

[1]ಚೌ. ನಿಯಮವ್ಯವಸ್ಥಾಪನಂಎಂಬಪದಗಳಿಲ್ಲ.

[2]ತಿನ್ನದಿರದೆಂಬುದಂಎಂದುಓದಿದರೆವಾಕ್ಯದಅರ್ಥಕ್ಕನುಗುಣವಾಗುತ್ತದೆ. ಅಂದರೆದೇವಾಲಯದಲ್ಲಿಕೆಲಸಮಾಡುವವರುದೇವಸ್ವನನ್ನುಹರಣಮಾಡದಿರುವುದುವಿರಳಎಂದರ್ಥ.

[3]ಮೈ., ಚೌ. ತೀರ್ಥೋಪವಾಸಿಪು.

[4]ಮೈ., ಚೌ. ದೇವಸ್ವಪರಿಹರಣಂ.

[5]ಮೈ., ಚೌ. ವಂಚಕತ್ವಂ, ಲುಂಚಕತ್ವ= ಇತರರಿಂದಹಣಇತ್ಯಾದಿಗಳನ್ನುಸೆಳೆಯುವುದು.

[6]ಚೌ. ಈವಾಕ್ಯವಿಲ್ಲ.

[7]ಮೈ. ದೇವಪೂಜಾದ್ಯುಪಯೋಗಾಯ.

[8]ಮೈ. ಚೌ. ನಸಂಭಾವಯತಿ, ಆದರೆಈಪಾಠದಿಂದಅರ್ಥಸ್ಪಷ್ಟವಾಗುವುದಿಲ್ಲ. ಅಥವಾಅಪೇಕ್ಷಿತಅರ್ಥವು. ಹೊರಡುವುದಿಲ್ಲ. ನಮ್ಮಪ್ರತಿಯಪಾಠದಂತೆ, ಕೆಲಸವಿದ್ದಾಗಮಾತ್ರಸೇವಕರನ್ನುಓಲೈಸುವವನುಒಡೆಯನೆಎಂದುಅರ್ಥವಾಗುತ್ತದೆ.

[9]ಚೌ. ಇದರಮುಂದಿನಪದಗಳಿಲ್ಲ.

[10]ಮೆಯ್ದೆಗೆವುದುಎಂದುಓದಬೇಕು.

[11]ಚೌ. ದಲ್ಲಿಪಾಠಭೇದವಿಶೇಷವಾಗಿದೆ.

[12]ಮೈ., ಚೌ. ಭಾರ್ಯಾ.

[13]ಮೈ. ನಿರ್ವೃತಿಃಈಪಾಠವೇಸರಿಯಾದುದು. ಚೌ. ಆತ್ಮನೋವೃತ್ತಿಃ

[14]ಚೌ. ವಿಶ್ವಾಸಃ.

[15]ಉದ್ದೇಶಿಸಿದಎಂದುಓದಿದರೆಸರಿಯಾದಅರ್ಥಬರುತ್ತದೆ.

[16]ಮೈ. ಈವಾಕ್ಯದಲ್ಲಿಇನ್ನೂಹೆಚ್ಚಿನಪದಗಳಿವೆ.

[17]ಮೈ., ಚೌ. ಪ್ರಭೂತಮಾನಿನೌ. ಈಪಾಠವೇಸಾಧುವೆಂದುತೋರುತ್ತದೆ. ನಮ್ಮಪ್ರತಿಯಲ್ಲಿಪ್ರಭೂಎಂದಿದ್ದುನ್ನೇಟೀಕಾಕಾರನುಪೆಂಪಿನವರ್ಎಂದುಅರ್ಥೈಸಿದ್ದಾನೆ.