ವ್ಯವಹಾರಮಂವಿಚಾರಿಸುವವರಿಂತಪ್ಪನಾಗಲ್ವೇಳ್ಕುಮೆಂಬುದುತ್ತರವಾಕ್ಯಂ :

[1]ಗುಣದೋಷಯೋಸ್ತುಲಾದಂಡಸಮೋರಾಜಾ|| ೧ || ೧೧೬೮ ||

ಅರ್ಥ : ಗುಣದೋಷಯೋಃ = ಗುಣಮುಂದೋಷಮುಮೆಂಬೀಎಱಡರೊಳ್, ತುಲಾದಂಡಸಮಃ = ತೊಲೆಯದಂಡಿಗೆಯೊಳ್ಸಮಾನಂ, ರಾಜಾ = ಅರಸಂ || ಗುಣಮಂದೋಷಮಂಮಾಡಂ, ದೋಷಮಂಗುಣಮಂಮಾಡನೆಂಬುದುತಾತ್ಪರ್ಯಂ || ಈಗುಣದೋಷಂಗಳಫಲಮುಮನರಸನವಕ್ಕೆಮಾಡುವುದಂಪೇಳ್ವುದುತ್ತರವಾಕ್ಯಂ :

ಸ್ವಗುಣದೋಷಾಭ್ಯಾಂಜಂತುಷುಗೌರವಲಾಘುವೇರಾಜಾತುಪರಂಸಮವರ್ತಿವತ್ತತ್ಫಲಮನುಭಾವಯತಿ|| ೨ || ೧೧೬೯ ||

ಅರ್ಥ : ಸ್ವ = ತಮ್ಮ, ಗುಣದೋಷಾಭ್ಯಾಂ = ಗುಣಮುಂ, ದೋಷಮುಮೆಂಬೀಎರಡಱರತ್ತಣಿಂ, ಜಂತುಷು = ಪ್ರಾಣಿಗಳೊಳ್, ಗೌರವಲಾಘವೇ = ಕ್ರಮದಿಂಗುರುತ್ವಮುಂಲಘುತ್ವಮುಕ್ಕುಂ, ರಾಜಾ = ಅರಸು, ತು = ಮತ್ತೆ, ಪರಂ = ನಿಶ್ಚಯದಿಂ (ಪಿರಿದು) ಸಮವರ್ತಿವತ್ = ಯಮನಂತೆ, ತತ್ಫಲಂ = ಅವರುಮಾಡಿದಗುಣದೋಷಂಗಳಫಲಮಂ, ಅನುಭಾವಯತಿ = ಅನುಭವಿಸುಗುಂ (ಪ್ರಕಟಿಸುವನು) || ಗುಣದಿಂದೊಳ್ಳಿದನುಂದೋಷದಿಂಪೊಲ್ಲದನುಮಾಗಲರಸನವರ್ಗ್ಗೆಮನ್ನಣೆಯುಮಂದಂಡನೆಯುಮಂಮಾಳ್ಪನೆಂಬುದುತಾತ್ಪರ್ಯಂ || ಸಭ್ಯರಸ್ವರೂಪಮಂಪೇಳ್ವುದುತ್ತರವಾಕ್ಯಂ :

ಆದಿತ್ಯವದ್ಯಥಾವಸ್ಥಿತಾರ್ಥಪ್ರಕಾಶನಪ್ರತಿಭಾಃ[2]ಸಭ್ಯಾಃ|| ೩ || ೧೧೭೦ ||

ಅರ್ಥ : ಆದಿತ್ಯವತ್ = ಆದಿತ್ಯನಂತೆ, ಯಥಾವಸ್ಥಿತಾರ್ಥ = ವಸ್ತುವೆಂತಿರ್ದುದಂತೆ, ಪ್ರಕಾಶನ = ಪ್ರಕಟಿಸುವ, ಪ್ರತಿಭಾಃ = ಬೇಗಮುತ್ತರಮಂಪೇಳ್ವತಿಶಯಮನುಳ್ಳರ್, ಸಭ್ಯಾಃ = ಸಭ್ಯರ್ || ವಸ್ತುವೆಂತಿರ್ದುದಂತೆಕಂಡುಬೇಗಂಪರಿಹಾರಮಂಕುಡಲಾಱದಂ[3]ಸಭ್ಯನೆಂಬುದುತಾತ್ಪರ್ಯಂ || ಇಂತಪ್ಪರುಸಭ್ಯರಲ್ಲೆಂಬುದುತ್ತರವಾಕ್ಯಂ :

—-

. ಗುಣದೋಷಗಳನ್ನುನಿರ್ಣಯಿಸುವಲ್ಲಿರಾಜನುತಕ್ಕಡಿಯದಂಡಿಗೆಗೆಸಮಾನನು.

. ಜನರಲ್ಲಿಅವರವರಗುಣದೋಷಗಳಬಗೆಗೆಗುರುತ್ವವಾಗಲಿಲಘುತ್ವವಾಗಲಿಇರುತ್ತವೆ. ರಾಜನಾದರೋಸಮವರ್ತಿಯಾಗಿಜನಗಳುಅವರವರತಪ್ಪುಒಪ್ಪುಗಳಫಲವನ್ನುಅನುಭವಿಸುವಂತೆಮಾಡುತ್ತಾನೆ.

—-

ಅದೃಷ್ಟಶ್ರುತವ್ಯವಹಾರಃಪ್ರತ್ಯರ್ಥಿನಃ[4]ಸಾಮಿಷಾಶ್ಚನಸಭ್ಯಾಃ|| ೪ || ೧೧೭೧ || |

ಅರ್ಥ : ಅದೃಷ್ಟಶ್ರುತವ್ಯವಹಾರಾಃ = ವ್ಯವಹಾರಶಾಸ್ತ್ರಮಂಕಂಡು, ಕೇಳ್ದುಮಱಿಯದರುಂ, ಪ್ರತ್ಯರ್ಥಿನಃ = ಪ್ರತಿವಾದಿಗಳುಂ, ಸಾಮಿಷಾಶ್ಚ[5] = ಲಂಚಗೊಂಡರುಂ, ನಸಭ್ಯಾಃ = ಸಭ್ಯರಲ್ಲರು || ಮತ್ತಮಿಂತಪ್ಪವರ್ಸಭ್ಯರಾದೊಡೆದೋಷಮಂಪೇಳ್ವುದುತ್ತರವಾಕ್ಯಂ :

ಲೋಭಪಕ್ಷಪಾತಾಭ್ಯಾಂಅಯಥಾರ್ಥಪ್ರವೃತ್ತಯಃಸಭ್ಯಾಃಸಭಾಪತೇಃಸದ್ಯೋಮಾನಾರ್ಥಹಾನಿಂಲಭಂತೇ|| ೫ || ೧೧೭೨ ||

ಅರ್ಥ : ಲೋಭ = ಲೋಭಮುಂ, ಪಕ್ಷಪಾತಾಭ್ಯಾಂ = ಪಕ್ಷಪಾತಮುಮೆಂಬಿವಱಿಂ, ಅಯಥಾರ್ಥಪ್ರತ್ತಯಃ = ವಸ್ತುವೆಂತಿರ್ದುದಂತೆನೆಗಳದ, ಸಭ್ಯಾಃ = ಸಭ್ಯರ್, ಸಭಾಪತೇಃ = ಸಭಾಪತಿಗೆ, ಸದ್ಯಃ = ಆಗಳೆ, ಮಾನ = ಅಭಿಮಾನಮುಂ, ಅರ್ಥಮುಮೆಂಬಿವಱ, ಹಾನಿಂ = ಕೇಡಂಲಭಂತೇ = ಪಡೆವರ್ || ಲಂಚಕ್ಕೆಱಗುವರುಮಂಪಕ್ಷಪಾತಿಗಳುಮಂಮಧ್ಯಸ್ಥರಂಮಾಡವೇಡೆಂಬುದುತಾತ್ಪರ್ಯಂ || ಇಂತಪ್ಪಲ್ಲಿವಿಚಾರವೇಡೆಂಬುದುತ್ತರವಾಕ್ಯಂ :

ತತ್ರಾಲಂವಿವಾದೇನಸ್ವಯಮೇವಸಭಾಪತಿಃಪ್ರತ್ಯಥ. || ೬ || ೧೧೭೩ ||

ಅರ್ಥ : ಯತ್ರ = ಎಲ್ಲಿ, ಸಭಾಪತಿಃ = ಸಭೆಗೆಮುಖ್ಯನಪ್ಪಂ, ಸ್ವಯಮೇವ = ತಾನೇ, ಪ್ರತ್ಯರ್ಥೀ = ಪ್ರತಿಕೂಲಂ (ಮಾರ್ಕೊಂಡಾಡುವನಹನು) ತತ್ರ = ಅಲ್ಲಿ, ಅಲಂವಿವಾದೇನ = ವಿಚಾರಂ (ವಾದವಿವಾದಂ) ಬೇಡ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

. ವ್ಯವಹಾರಗಳನ್ನುಕಂಡುಬಲ್ಲವರಲ್ಲದವರೂ, ವ್ಯವಹಾರಗಳಲ್ಲಿಪ್ರತಿವಾದಿಗಳಾಗಿದ್ದವರೂ, ಲಂಚತೆಗೆದುಕೊಂಡವರೂಸಭ್ಯರಾಗಬಾರದು.

. ಲೋಭ, ಪಕ್ಷಪಾತಗಳಿಂದಕೂಡಿಯಥಾರ್ಥಪ್ರವೃತ್ತಿಯಿಲ್ಲದಸಭಾಸದರುಸಭಾಪತಿಯಮಾನ, ಅರ್ಥಗಳಹಾನಿಗೆಕಾರಣರಾಗುತ್ತಾರೆ.

. ಯಾವಾಗಸಭಾಪತಿಯುತಾನೇಪ್ರತಿವಾದಿಯೂಆಗಿರುವನೋಆಗವಾದವಿವಾದಕ್ಕೆಆಸ್ಪದವಿಲ್ಲ.

—-

[6]ಸಭ್ಯಸಭಾಪತ್ಯೋರಸಾಮಂಜಸ್ಯೇಕುತೋ[7]|| ೭ || ೧೧೭೪ ||

ಅರ್ಥ : ಸಭ್ಯ-ಸಭಾಪತ್ಯೋಃ = ಸಭೆಗಂಸಭಾಪತಿಗಂ, ಅಸಾಮಜಸ್ಯೇ = ಮಧ್ಯಸ್ಥಮಿಲ್ಲದಿರಲ್‌, ಕುತಃ = ಎತ್ತಣ್ತು, ಜಯಃ = ಗೆಲವು || ವಿಚಾರ (ವಿವಾದ)ಕ್ಕೆಮಧ್ಯಸ್ಥರಾಗಲ್ವೇಳ್ಕುಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕಿಂಬಹುಭಿಶ್ಫಗಲಃಶ್ವಾನಃಕ್ರಿಯತೇ|| ೮ || ೧೧೭೫ ||

ಅರ್ಥ : ಬಹುಭಿಃ = ಪಲಂಬರಿಂ, ಚ್ಛಗಲಃ = ಆಡು, ಶ್ವಾನಃಕ್ರೀಯತೇ, ಕಿಂ = ಏಂನಾಯ್‌[8]ಮಾಡಲ್ಪಡುವುದಿಲ್ಲ || ಗಾಯಿಲರಾಡಂನಾಯ್ಮಾಡದಿರೆಂಬುದುನಾಳ್ಗಾದೆ || ಸೋಲ್ತರಚಿಹ್ನೆಂಗಳಂಪೇಳ್ವುದುತ್ತರವಾಕ್ಯಂ :

ವಿವಾದಮಾಸ್ಥಾಯಯಃಸಭಾಯಾಂನೋಪತಿಷ್ಠತೇಸಮಾಹೂತೋs ಪ್ಯಪಸರತಿಪೂರ್ವೋಕ್ತಮುತ್ತರೋಕ್ತೇನಬಾಧತೇನಿರುತ್ತರಃಪರೋಕ್ತೇಷುಯುಕ್ತಮುಕ್ತಂಪ್ರತಿದ್ಯತೇಸ್ವದೋಷಮನುಧೃತ್ಯಪರದೋಷಮುಪಾಲಭತೇಯಥಾರ್ಥವಾದೇsಪಿವಿದ್ವೇಷ್ಟಿಸಭಾಮಿತಿಪರಾಜಿತಲಿಂಗಾನಿ|| ೯ || ೧೧೭೬ ||

ಅರ್ಥ : ವಿವಾದಮಾಸ್ಥಾಯ = ವಿಚಾರಕ್ಕೆವಂದು, ಯಃ = ಆವನೋರ್ವಂ, ಸಭಾಯಾಂ = ಸಭೆಯೊಳ್‌, ನೋಪತಿಷ್ಠತೇ = ಇರಂ, ಸಮಾಹೂತೋsಪಿ = ಕರೆಯಲ್ಪಟ್ಟನಾಗಿಯುಂ, ಅಪಸರತಿ = ಬಿನ್ನವಿಸದೆತೊಲಗುವಂ, ಪೂರ್ವೋಕ್ತಂ = ಮುನ್ನುಡಿದುದಂ, ಉತ್ತರೋಕ್ತೇನ = ಬಳಿಕಿನನುಡಿಯಿಂ, ಬಾಧತೇ = ಬಾಧಿಸುಗುಂ, ಪೆಱರನುಡಿಗಳೊಳ್, ನಿರುತ್ತರಃ = ಉತ್ತರಮಿಲ್ಲದಿರ್ಪಂ, ಯುಕ್ತ = ಯೋಗ್ಯನಪ್ಪ, ಉಕ್ತಂ = ನುಡಿಯಂ, ನಪ್ರತಿಪದ್ಯತೇ = ಕೈಕೊಳಂ, ಸ್ವದೋಷಂ= ತನ್ನದೋಷಮಂ, ಅನುಧೃತ್ಯ = ಪರಿಹರಿಸದೆ, ಪರಂ = ಪೆಱರ, ದೋಷಂ = ದೋಷಮಂ, ಉಪಾಲಭತೇ = ದೂಷಿಸುವಂ, ಯಥಾರ್ಥವಾದೇsಪಿಚ = ಉಳ್ಳುದಂನುಡಿದೊಡಂ, ಸಭಾಂವಿದ್ವೇಷ್ಟಿ = ಸಭೆಗೆಮುಳಿವಂ, ಇತಿ = ಇಂತು, ಪರಾಜಿತಲಿಂಗಾನಿ = ಸೋಲ್ತವನಚಿಹ್ನೆಂಗಳ್ || ಇನಿತಱಿಂದರ್ಥಕೆಡದೆಂಬುದುತ್ತರವಾಕ್ಯಂ :

—-

. ಸಭ್ಯಸಭಾಪತಿಗಳಲ್ಲಿಹೊಂದಾಣಿಕೆಇಲ್ಲದಿರುವಲ್ಲಿನ್ಯಾಯಕ್ಕೆಗೆಲುವೆಲ್ಲಿಯದು?

. ಬಹುಮಂದಿಒಟ್ಟಾಗಿಆಡನ್ನುನಾಯಿಮಾಡುವರೆ?

. ಧರ್ಮಾಸನದಲ್ಲಿವಿವಾದವನ್ನುಹೂಡಿಸಭೆಗೆಬರದವನು. ಕರೆದರೂಬರದೆಹೋಗುವವನು. ಮೊದಲುಹೇಳಿದ್ದಕ್ಕೆವಿರುದ್ಧವಾಗಿಅನಂತರಹೇಳುವವನು. ಇತರರುಹೇಳಿದ್ದಕ್ಕೆಪ್ರತಿಯಾಗಿಸರಿಯಾದಉತ್ತರವನ್ನುಹೇಳದವನು. ಎದುರಾಳಿಯುಹೇಳಿದ್ದುಯುಕ್ತವಾದದ್ದಾದರೂಅದನ್ನುಅಂಗೀಕರಿಸಿದವನು, ತನ್ನದೋಷವನ್ನುಪರಿಹರಿಸದೆಪರರದೋಷವನ್ನುತೋರಿಸುವವನು. ಯಥಾರ್ಥವನ್ನುಹೇಳಿದರೂಸಭೆಯನ್ನೂದ್ವೇಷಿಸುವವನು. ಇವುಸೋತವನಚಿಹ್ನೆಗಳು.

—-

ಛಲೇನಾಪ್ರತಿಭಾನೇನವಚನಾಕೌಶಲೇನವಾನಾಸ್ತ್ಯರ್ಥ[9]ಹಾನಿಃ|| ೧೦ || ೧೧೭೭ ||

ಅರ್ಥ : ಛಲೇನ = ಛಲದಿಂ (ಎಡಹಿಮಡಿದುದರಿಂದ) ಅಪ್ರತಿಭಾನೇನ = ಉತ್ತರಮುಮಂಮಾಡದುದಱಿಂ, ವಚನಾಕೌಶಲೇನವಾ = ನುಡಿಯನಱಿಯದುದಱಿಂ, ಮೇಣ್, ಅರ್ಥಹಾನಿಃ = ಅರ್ಥದಕೇಡುನಾಸ್ತಿ = ಇಲ್ಲ(ಆಗದು), ಮತ್ತಂವಿಚಾರಿಲ್ಬೇಕುಮೆಂಬುದುತಾತ್ಪರ್ಯಂ || ಪ್ರಮಾಣಂಗಳೊಳಧಿಕಂಎಂಬುದುತ್ತರವಾಕ್ಯಂ :

ಭುಕ್ತಿಸಾಕ್ಷಿಶಾಸನೇಷುಪೂರ್ವಂಪೂರ್ವಂ[10]ಪ್ರಮಾಣಂ|| ೧೧ || ೧೧೭೮ ||

ಅರ್ಥ : ಭುಕ್ತಿ = ಊಟಮುಂ[11], ಸಾಕ್ಷಿ = ಸಾಕ್ಷಿಯುಂಶಾಸನೇಷು = ಶಾಸನಮೆಂಬಿವಱೊಳ್, ಪೂರ್ವಂಪೂರ್ವಂ = ಮುನ್ನಿನಮುನ್ನಿನದಂಪ್ರಮಾಣಂ = ಪ್ರಮಾಣಂ || ಮೇಗಣಮೇಗಣಪ್ರಮಾಣಂಗಳ್ವಲವಂತಂಗಳಲ್ಲಮೆಂಬುದುತಾತ್ಪರ್ಯಂ || ಇಂತಪ್ಪಂಭುಕ್ತ್ಯಾದಿಗಳ್ಪ್ರಮಾಣಮಲ್ಲೆಂಬುದುತ್ತರವಾಕ್ಯಂ :

[12]ಭುಕ್ತಿಃಸಾಕ್ರೋಶಾಸಾಕ್ಷಿಣೋವಿಪ್ರತಿಪನ್ನಾಃಶಾಸನಂಕೂಟಲಿಖಿತಮಿತಿವಿವಾದಂಸಮಾಪಯಂತಿ|| ೧೨ || ೧೧೭೮ ||

ಅರ್ಥ : ಸಾಕ್ರೋಶಾ = ಪುಯ್ಯಲುಬೆರಸಿದ, ಭುಕ್ತಿಃ = ಊಟಮುಂ (ಭೋಗ), ವಿಪ್ರತಿಪನ್ನಾಪ್ರತಿಕೂಲರಪ್ಪ, ಸಾಕ್ಷಿಣಃ = ಸಾಕ್ಷಿಗಳುಂ, ಕೂಟಲಿಖಿತಂ = ಕೇಳ್ದುಬರೆಯದ(ಕಳ್ಳಪತ್ರಮೆಂಬವು) ಶಾಸನಂಚೇತಿ = ಶಾಸನಮೆಂಬಿವು, ವಿವಾದಂ = ತೋಟಿಯಂ, ನಸಮಾಪತಿಯಂತಿ = ತೀರ್ಚವುಂ || ನಿರ್ವಿವಾದಭುಕ್ತ್ಯಾದಿಯೇಪ್ರಮಾಣಮೆಂಬುದುತಾತ್ಪರ್ಯಂ || ಇಂತಪ್ಪುದುಪ್ರಮಾಣಮಲ್ಲೆಂಬುದುತ್ತರವಾಕ್ಯಂ :

—-

೧೦. ಹಟದಿಂದ, ದಿಕ್ಕುತೋಚದೆ. ಸರಿಯಾಗಿಮಾತನಾಡಲುಬಾರದೇಇರುವುದರಿಂದಅರ್ಥಹಾನಿಯಾಗುತ್ತದೆ.

೧೧. ಉಪಯೋಗ. ಸಾಕ್ಷಿ. ಶಾಸನ (ಕಾನೂನು) ಇವುಗಳ್ಳಲ್ಲಿಮುನ್ನಿನಮುನ್ನಿನದು(ಹೆಚ್ಚ) ಪ್ರಮಾಣಭೂತವು.

೧೨. ಆಕ್ಷೇಪಣೆಯಿಂದಕೂಡಿದಉಪಭೋಗ. ಪ್ರತಿಕೂಲವಾದಸಾಕ್ಷಿಗಳು. ಕೃತಕಪತ್ರಗಳುವಿವಾದವನ್ನುಕೊನೆಗಾಣಿಸಲಾರವು.

—-

ಬಲಾತ್ಕೃತಮನ್ಯಾಯಕೃತಂರಾಜೋಪದೀಕೃತಂ[13]ಪ್ರಮಾಣಂ|| ೧೩ || ೧೧೮೦ ||

ಅರ್ಥ : ಬಲಾತ್‌ಕೃತಂ = ಬಲ್ಲಾಳ್ಕೆಯಿಂಮಾಡಲ್ಪಟ್ಟುದುಂ, ಅನ್ಯಾಯಕೃತಂ = ನ್ಯಾಯಮಂಮೀಱಿಮಾಡಿದುದುಂ, ರಾಜೋಪದೀಕೃತಂಚ = ಅರಸಂಪೊರ್ದಿಮಾಡಿದುದುಮೆಂದಿವು, ನಪ್ರಮಾಣಂ = ಪ್ರಮಾಣಮಲ್ಲದು || ನ್ಯಾಯದಿಂದಾದಭುಕ್ತ್ಯಾದಿಯೇಪ್ರಮಾಣಮೆಂಬುದು || ತಾತ್ಪರ್ಯಂ || ಜೂದುಗಾಱರ್ಗ್ಗಂಸೂಳೆಯರ್ಗ್ಗಮಿಂತಪ್ಪುದಂಪ್ರಮಾಣಮಾಳ್ಪುದೆಂಬುದುತ್ತರವಾಕ್ಯಂ :

ವೇಶ್ಯಾಕಿತಯೋರುಕ್ತಂಗ್ರಹಣಕಾನುಸಾರಿತಯಾಪ್ರಮಾಣಯಿತವ್ಯಂ|| ೧೪ || ೧೧೮೧ ||

ಅರ್ಥ : ವೇಶ್ಯಾಕಿತಯೋಃ = ಸೂಳೆಯುಂಜೂದುಗಾಱನುಮೆಂದಿವಱ, ಉಕ್ತಂ = ವಚನಂಗ್ರಹಣಕಾನುಸಾರಿತಯಾ = ಒತ್ತೆಗೆತಕ್ಕಂತು, ಪ್ರಮಾಣಯಿತವ್ಯಂ = ಪ್ರಮಾಣಂಮಾಡಲ್ಪಡುವುದು (ಒತ್ತೆಯಿಟ್ಟುದಱಅನುಸಾರಿತ್ವದಿಂದಅವರವಚನಮಂನಂಬುವುದು) || ಇವರ್ಗೀಒತ್ತೆಯೆಂದಱಿದುಪ್ರಮಾಣಿಸುವುದೆಂಬುದುತಾತ್ಪರ್ಯಂ || ಇಂತಪ್ಪವ್ಯವಹಾರದಲ್ಲಿತೊಡರ್ಪಿಲ್ಲೆಂಬುದುತ್ತರವಾಕ್ಯಂ :

ಅಸತ್ಯಂಕಾರೇವ್ಯವಹಾರೇನಾಸ್ತಿವಿವಾದಃ|| ೧೫ || ೧೧೮೨ ||

ಅರ್ಥ : ಅಸತ್ಯಂಕಾರೇ = ಸಂಚಕರಮಿಲ್ಲದ, ವ್ಯವಹಾರೇ = ವ್ಯವಹಾರದೊಳ್, ವಿವಾದಃ = ವ್ಯಾಜ್ಯಂ, ನಾಸ್ತಿ = ಇಲ್ಲ || ಸಂಚಕರಮಿಲ್ಲದೆತನ್ನಿಚ್ಛೆಯಿಂಕೊಡಲುಂಕೊಳ್ಳಲುಂಬಕ್ಕುದಿರ್ಪುದೆಂಬುದುತಾತ್ಪರ್ಯಂ ||

—-

೧೩. ಒತ್ತಾಯದಿಂದ. ಅನ್ಯಾಯದರೀತಿಯಿಂದ. ರಾಜನ (ಆಡಳಿತಗಾರರ) ಬೆದರಿಕೆಯಿಂದಒದಗಿಸಿದಸಾಕ್ಷ್ಯವುಪ್ರಮಾಣವಲ್ಲ.

೧೪. ವೇಶ್ಯೆಯರು. ಜೂಜುಗಾರರುಹೇಳಿದಸಾಕ್ಷ್ಯಗಳನ್ನುಗ್ರಾಹ್ಯವಾದಇತರಸಾಕ್ಷಿಗಳಿಗೆಹೊಂದಿಕೆಯಾಗುವಹಾಗಿದ್ದಲ್ಲಿಪ್ರಮಾಣವಾಗಿಸ್ವೀಕರಿಸಬಹುದು.

೧೫. ಪ್ರಮಾಣರಹಿತವಾದವ್ಯವಹಾರಗಳಲ್ಲಿವಿವಾದಕ್ಕೆಅವಕಾಶವಿಲ್ಲ.

—-

[14]ನೀವೀನಾಶೇಷು[15]ವಿವಾದಃಪುರುಷಪ್ರಾಣ್ಯಾತ್ಸತ್ಯಾಪಯಿತವ್ಯೊದಿವ್ಯ[16]ಕ್ರಿಯಾಯಾಂ|| ೧೬ || ೧೧೮೩ ||

ಅರ್ಥ : ಯಾರೊಬ್ಬರಬಳಿಇಟ್ಟಹಣವುಕಳೆದುಹೋದರೆಅದಕ್ಕೆಸಂಬಂಧಿಸಿದವರಪ್ರಮಾಣವಚನದಮೇಲೆಅಥವಾದಿವ್ಯದಮೂಲಕವಿವಾದವನ್ನುನಿರ್ಧರಿಸಬೇಕು.

ಯಾದೃಶೇತಾದೃಶೇಸಾಕ್ಷಿಣಿದೈವೀಕ್ರಿಯಾಸ್ತಿಕಿಂಪುನರುಭಯಸಮ್ಮತೇಮನುಷ್ಯೇ|| ೧೭ || ೧೧೮೪ ||

ಅಂಥಿಂಥವರಿಂದಶಪಥಮಾಡಿಸಲುಬಾರದಿದ್ದಾಗವಾದಿಪ್ರತಿವಾದಿಗಳಿಬ್ಬರೂಒಪ್ಪಿಗೆಯಾದವನಿಂದಶಪಥಮಾಡಲುಬಂದೀತೆ?

[17]ಶ್ರೂಯತೇಹಿವನಸ್ಪತಿಮಾರ್ಜಾರಾಭ್ಯಾಂಸಾಕ್ಷಿಭ್ಯಾಮರ್ಥಸಿದ್ಧೇಃ|| ೧೮ || ೧೧೮೫ ||

ಗಿಡಮತ್ತುಬೆಕ್ಕುಗಳಸಾಕ್ಷಿಗಳಿಂದಒಬ್ಬನುಹಣಪಡೆದನೆಂದು[18]ಹೇಳಲಾಗುತ್ತದೆ.

—-

೧೬. ಮೂಲಧನಮತ್ತುನ್ಯಾಸಗಳ (ಠೇವಣಿಗಳ)ವಿಷಯಗಳವಿವಾದಗಳನ್ನುಸಂಬಂಧಪಟ್ಟವರಪ್ರಾಮಾಣಿಕತೆಯನ್ನುಆಧರಿಸಿಯಾಗಲಿ. ದಿವ್ಯಕ್ರಿಯೆಯಿಂದಾಗಲಿನಿರ್ಧರಿಸಬೇಕು.

೧೭.ದಿವ್ಯಕ್ರಿಯೆಯನ್ನುಎಲ್ಲಸಾಕ್ಷಿಗಳವಿಷಯದಲ್ಲಿಯೂಮಾಡದಿರುವಾಗಉಭಯಪಕ್ಷಗಳವರೂಒಪ್ಪಿದಮನುಷ್ಯನಿಂದಆಗಬಹುದೆ?

೧೮. ವೃಕ್ಷವೊಂದರಮತ್ತುಅಡವಿಬೆಕ್ಕಿನಸಾಕ್ಷ್ಯಾಧಾರದಮೇಲೆವಿವಾದವೊಂದುನಿರ್ಣಯವಾಯಿತೆಂದುಕೇಳಿಬರುತ್ತದೆ.

—-

ಯೋಭಿಯುಂಜೀತ[19]ವಾಲುಂಪೇತವಾತಸ್ಯಶಪಥಂಕೋಶೋದಿವ್ಯಂವಾ || ೧೯ || ೧೧೮೬ ||

ಯಾವನೊಬ್ಬನುಇನ್ನೊಬ್ಬನಹಣವನ್ನುಅಪಹರಿಸಿದರೆಅಥವಾನಾಶಪಡಿಸಿದರೆಪ್ರಮಾಣವಚನ, ಕೋಶಪಾನಅಥವಾದಿವ್ಯಗಳಿಂದವಿವಾದವನ್ನುನಿರ್ಧರಿಸಬೇಕು.

ಅಭಿಚಾರಯೋಗ್ಯಃವಿಶುದ್ಧಸ್ಯಾಭಿಯುಕ್ತಾರ್ಥಸಂಭಾವನಾಯಾಂಪ್ರಾಣಾವಶೇಷಾರ್ಥೋಪಹಾರಃ|| ೨೦ || ೧೧೮೭ ||

ಮೋಸದಿಂದತಾನುತಪ್ಪಿತಸ್ಥನಲ್ಲವೆಂದುಸಿದ್ಧಪಡಿಸಿದವನೊಬ್ಬನುತಪ್ಪಿತಸ್ಥನೆಂದುತಿಳಿದುಬಂದರೆಪ್ರಾಣವೊಂದನ್ನುಬಿಟ್ಟುಅವನದೆಲ್ಲವನ್ನೂಕಸಿದುಕೊಳ್ಳಬೇಕು. ಶುದ್ಧನಪ್ಪಂಗೆ,[20]ಅಭಿಯುಕ್ತಾರ್ಥಸಂಭಾವನಾಯಾಂ = ಆಮಱಸಿದರ್ಥಮಱಿತಮಾಗೆ, ಪ್ರಾಣಾವಶೇಷುಃ = ಪ್ರಾಣವುಳಿಯೆ, ಅರ್ಥಾಪಹಾರಃ = ಅರ್ಥಮಂಕೊಳ್ವುದಕ್ಕುಂ (ಸರ್ವಸ್ವಾಪಹಾರವಮಾಡುವುದು) || ದ್ವಿತೀಯಾಪರಾಧಕ್ಕೆದಂಡಮೆಂಬುದುತಾತ್ಪರ್ಯಂ || ಇಂತಪ್ಪರ್ಗೆದೈವಿಕಕ್ರಿಯೆಯಿಲ್ಲೆಂಬುದುತ್ತರವಾಕ್ಯಂ :

[21]ಅನಂಗಃ (ವಿಲಿಂಗಃ) ನಾಸ್ತಿಕಸ್ವಾಚಾರಚ್ಯುತಪತಿತಾರಾಂ[22]ದೈವೀಕ್ರಿಯಾಸ್ತಿತೇಷಾಂಯುಕ್ತಿತೋsರ್ಥಸಿದ್ಧಿರಸಿದ್ಧಿರ್ವಾ|| ೨೧ || ೧೧೮೮ ||

ಅರ್ಥ : ಅನಂಗಃ = ಅಂಗಹೀನರುಂ (ವಿಲಿಂಗಿ = ಪಾಷಂಡಿಗಳುಂ) ನಾಸ್ತಿಕ = ನಿರ್ದೈವರುಂ, ಸ್ವಾಚಾರಚ್ಯುತ = ತಮ್ಮಆಚಾರದಿಂಕೆಟ್ಟರುಂ, ಪತಿತಾನಾಂ = ಬ್ರಹ್ಮಹತ್ಯಾದೋಷಮನುಳ್ಳರುಮೆಂದಿವರ್ಗ್ಗೆ, ದೈವೀಕ್ರಿಯಾ = ದೈವಿಕಕ್ರಿಯೆ, ನಾಸ್ತಿ = ಇಲ್ಲ, ತೇಷಾಂ = ಅವರ್ಗೆ, ಯುಕ್ತಿತಃ = ಯುಕ್ತಿಯಿಂ, ಅರ್ಥಸ್ಯಸಿದ್ಧಿಃ = ಅರ್ಥದಯ್ದುಗೆ, ಅಸಿದ್ಧಿರ್ವಾ = ಇಲ್ಲಮೆಮೇಣ್‌ || ಪಾಪಕ್ಕಂಜುವರ್ಗ್ಗೆದೈವೀಕ್ರಿಯೆಯೆಂಬುದುತಾತ್ಪರ್ಯಂ || ಪತ್ರಮುಳ್ಳೊಡಿಂತುಮಾಳ್ಕೆಂಬುದುತ್ತರವಾಕ್ಯಂ :

—-

೧೯. ಪರದ್ರವ್ಯವನ್ನುಬಲಾತ್ಕಾರವಾಗಿಅಪಹರಿಸಿದವನನ್ನುಅಥವಾನಷ್ಟಗೊಳಿಸಿದವನನ್ನುವಿಚಾರಣೆಗೊಳಪಡಿಸಿಆಚಮನದಿಂದ. ಶಪಥಮಾಡಿಸುವುದರಮೂಲಕಇಲ್ಲವೆದಿವ್ಯಕ್ಕೆಒಳಪಡಿಸುವುದರಮೂಲಕಇತ್ಯರ್ಥಪಡಿಸಬೇಕು.

೨೦. ವಿಚಾರಣೆಯಅಕ್ರಮದಿಂದಅಪರಾಧಿಯಲ್ಲವೆಂದುಬಿಡುಗಡೆಹೊಂದಿದ್ದಅಪರಾಧಿಯನ್ನುಪುನಃವಿಚಾರಣೆಗೊಳಪಡಿಸಿ, ಅವನಲ್ಲಿಮೋಸದಿಂದಅಪಹರಿಸಿದಅರ್ಥವಿರುವುದುಪತ್ತೆಯಾದರೆ. ಅವನಪ್ರಾಣವನ್ನುಮಾತ್ರಉಳಿಸಿಅವನಸರ್ವಸ್ವವನ್ನೂವಶಪಡಿಸಿಕೊಳ್ಳಬೇಕು.

೨೧. ಅಂಗಹೀನರು, ನಾಸ್ತಿಕರು, ತಮ್ಮತಮ್ಮಆಚಾರದಿಂದಭ್ರಷ್ಟರಾದವರು, ಪತಿತರುಎಂದರೆಬ್ರಹ್ಮಹತ್ಯಾದೋಷದೂಷಿತರುಇವರಿಗೆದೈವೀಕ್ರಿಯೆಇಲ್ಲ. ಇವರವಿವಾದಗಳನ್ನುಯುಕ್ತಿಯುಕ್ತವಾಗಿನಿರ್ಧರಿಸಬೇಕು.

—-

ಪತ್ರಸ್ಥೇ[23]ಭಾಷೋತ್ತರೇವಿಚಾರ್ಯಪರಿಚ್ಛಿದ್ಯಾತ್|| ೨೨ || ೧೧೮೯ ||

ಅರ್ಥ : ಭಾಷೋತ್ತರೇ = ಮಾತಿನುತ್ತರಂ (ಉತ್ತರಪ್ರತಿಜ್ಞೆಗಳನು) ಪತ್ರಸ್ಥೇ = ಪತ್ರದೊಳಿರ್ದುದಾದೊಡೆ, ವಿಚಾರ್ಯ = ವಿಚಾರಿಸಿ, ಪರಿಚ್ಛಿದ್ಯಾತ್‌ = ತಱಿಸಲವಂಮಾಳ್ಕೆ || ಪತ್ರಭಾಷೆಯೇಪ್ರಮಾಣಮೆಂಬುದುತಾತ್ಪರ್ಯಂ || ಇಂತಪ್ಪವಿಚಾರಕ್ಕೆತಱಿಸಲವಿಲ್ಲೆಂಬುದಂಕಾರಣಂಬೆರಸಿಪೇಳ್ವುದುತ್ತರವಾಕ್ಯಂ :

ಪರಸ್ಪರ[24]ವಿಪ್ರಲಾಪೇನಯುಗೈರಪಿವಿವಾದಸಮಾಪ್ತಿರಾನಂತ್ಯಾದ್ವಿ[25]ಪ್ರಕೃತೋಕ್ತೀನಾಂ|| ೨೩ || ೧೧೯೦ ||

ಅರ್ಥ : ಪರಸ್ಪರವಿಪ್ರಲಾಪೇನ = ಓರ್ವೋರ್ವರತೋಟಿಯನುಡಿವುದಱಿಂ, ಯುಗೈರಪಿ = ಪಲವುಯುಗಂಗಳಿಂದಮುಂ, ವಿವಾದಸಮಾಪ್ತಿಃ = ತೋಟಿಯತೀರ್ಕಣೆ, ನ = ಇಲ್ಲ, ವಿಪ್ರಕೃತೋಕ್ತೀನಾಂ = ಕಾರ್ಯೋಚಿತಮಲ್ಲದನುಡಿಗಳ್ಗೆ, ಅನಂತ್ಯಾತ್‌ = ಕಡೆಯಿಲ್ಲಪ್ಪುದುಕಾರಣಮಾಗಿ || ಪರಿಮಿತವಚನಂಗಳಿಂವಿಚಾರಿಸುವುದೆಂಬುದುತಾತ್ಪರ್ಯಂ || ಸಭೆಯೊಳಿಂತಪ್ಪುದಂಮಾಡವೇಡೆಂಬುದುತ್ತರವಾಕ್ಯಂ :

[26]ಸಭಾಯಾಂಪರಭೂಮಿಂನಾಭಿನಿವೇಶೇತಮಿಥಃಸಂಜಲ್ಪಂವಾಕುರ್ವೀತ|| ೨೪ || ೧೧೯೧ ||

ಅರ್ಥ : ಸಭಾಯಾಂ = ಸಭೆಯಲಿರ್ದವರ್‌, ಪರಭೂಮಿಂ = ಸ್ಥಾನಪಲ್ಲಟದಿಂ, ನಾಭಿನಿವೇಶೇತ = ಕುಳ್ಳಿರಲಾಗದುಂ, ಮಿಥಃಸಂಜಲ್ಪಂವಾ = ಏಕಾಂತದನುಡಿಯನು, ಮೇಣ್‌, ನಕುರ್ವೀತ = ಮಾಡಲಾಗದು ||

—-

೨೨. ಒಪ್ಪಂದಗಳುಪತ್ರಸ್ಥವಾಗಿದ್ದರೆವಿಚಾರಿಸಿತೀರ್ಮಾನಿಸಬೇಕು.

೨೩. ಪರಸ್ಪರವ್ಯರ್ಥಾಲಾಪಗಳಿಂದಕಾರ್ಯೋಚಿತವಲ್ಲದಮಾತುಕತೆಗಳಿಗೆಕೊನೆಯೇಇಲ್ಲದಂತಾಗಿಯುಗಗಳುರುಳಿದರೂವಿವಾದವುಸಮಾಪ್ತಿಯಾಗದು.

೨೪. ನ್ಯಾಯಸ್ಥಾನದಲ್ಲಿಒಬ್ಬರಜಾಗೆಯಲ್ಲಿಇನ್ನೊಬ್ಬರುಕುಳಿತುಕೊಳ್ಳಕೂಡದುಅಥವಾಒಬ್ಬರೊಡನೊಬ್ಬರುಮಾತುಗಳಲ್ಲಿತೊಡಗಕೂಡದು.

—-

 

[1]ಚೌ. ಈಮತ್ತುಮುಂದಿನವಾಕ್ಯದಅರ್ಧಭಾಗಒಂದರಲ್ಲೇಅಡಕವಾಗಿವೆ.

[2]ಮೈ. ಪ್ರಕಾಶನಪರಾಃ

[3]ಇಲ್ಲಿಕೊಡುವವನುಎಂಬಅರ್ಥವಿರಬೇಕು.

[4]ಚೌಪರಿಪಂಥಿನಃ.

[5]ಸಾಮಿಷಅಂದರೆಸಾಮಾನ್ಯವಾಗಿಆಸೆಬುರುಕಎಂದರ್ಥ. ಟೀಕಾಕಾರನುಇಲ್ಲಿಲಂಚತೆಗೆದುಕೊಳ್ಳುವವರುಎಂದುಹೇಳಿದ್ದಾನೆ.

[6]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[7]ಮೈ. ನ್ಯಾಯಸ್ಯಕುತೋಜಯಃ.

[8]ಬಹಳಷ್ಟುಜನಅಡಿಗೆನಾಯಿಎಂದರೆಅದುನಾಯಿಯಾಗುವುದಿಲ್ಲ. ಇಲ್ಲಿಹಿತೋಪದೇಶದಲ್ಲಿಯಒಂದುಕತೆಯಸೂಚನೆಯಿದೆ. ಒಮ್ಮೆಒಬ್ಬಬ್ರಾಹ್ಮಣಬಂದುಆಡನ್ನುಹೊತ್ತುಕೊಂಡುಹೋಗುತ್ತಿದ್ದ. ಅದನ್ನುಕಂಡುಧೂರ್ತರುಅವನನ್ನುಮೋಸಗೊಳಿಸಬೇಕೆಂದುನಿರ್ಧರಿಸಿಎಲ್ಲರೂಒಬ್ಬರಾದಮೇಲೆಒಬ್ಬರುಭೇಟಿಯಾಗಿಈನಾಯಿಯನ್ನುಏಕೆಹೊತ್ತುಕೊಂಡುಹೋಗುತ್ತೀಎಂದುಕೇಳತೊಡಗಿದರು. ಮೊದಲುಬ್ರಾಹ್ಮಣನುನಂಬದಿದ್ದರೂಕೊನೆಗೆಇದುನಾಯಿಯಿರಬಹುದೆಂದುಭ್ರಮಿಸಿಆಡನ್ನುಬಿಟ್ಟುಹೋದಎಂಬುದುಕತೆ. ಸುಳ್ಳಿಗೆಬಹುಮತವಿದ್ದರೂಅದುಸತ್ಯವಾಗಲಾರದುಭ್ರಮಿಸಿಆಡನ್ನುಬಿಟ್ಟುಹೋದಎಂಬುದುಕತೆ. ಸುಳ್ಳಿಗೆಬಹುಮತವಿದ್ದರೂಅದುಸತ್ಯವಾಗಲಾರದುಎಂಬುದುವಾಕ್ಯದತಾತ್ಪರ್ಯ.

[9]ಇಲ್ಲಿನಾಸ್ತಿಎಂಬಪದಅನವಶ್ಯಕವಾಗಿದೆ. ಅದುಅಪೇಕ್ಷಿತವಿರುದ್ಧವಾಗುತ್ತದೆ. ಮೈ. ಚೌ. ಗಳಲ್ಲಿಈಪದವಿಲ್ಲ.

[10]ಚೌ. ಪೂರ್ವಂಪೂರ್ವಂಎಂಬಪದಗಳಿಲ್ಲ.

[11]ಇಲ್ಲಿಊಟಎಂದರೆಉಪಯೋಗಎಂದಥ್.

[12]ಮೈ., ಚೌ. ಭುಕ್ತಿಃಸಾಪವಾದಾ.

[13]ಮೈ., ಚೌ. ರಾಜೋಪಧಿಕೃತಂ.

[14]೧೬ರಿಂದ೨೦ರವರೆಗಿನವಾಕ್ಯಗಳುಳ್ಳಓಲೆಯುನಮ್ಮಹಸ್ತಪ್ರತಿಯಲ್ಲಿಕಾಣೆಯಾಗಿದೆ. ಆದ್ದರಿಂದಬೇರೊಂದುಹಸ್ತಪ್ರತಿಯಿಂದಈವಾಕ್ಯಗಳನ್ನುಇಟ್ಟುಕೊಡಲಾಗಿದೆ. ಈಹಸ್ತಪ್ರತಿಯಲ್ಲಿಯವ್ಯಾಖ್ಯೆಯುಸಂಸ್ಕೃತದಲ್ಲಿದ್ದುಅದನ್ನಿಲ್ಲಿಕೊಡಲಾಗಿಲ್ಲ. ಕನ್ನಡವಿವರಣೆಯನ್ನುಸಂಪಾದಕರೇಕೊಟ್ಟಿದ್ದೇವೆ.

[15]ಮೈ. ನೀವೀನ್ಯಾಸೇಪು.

[16]ದಿವ್ಯವೆಂದರೆದೈವೀಶಕ್ತಿಯಆಧಾರದಮೇಲೆನ್ಯಾಯವನ್ನುನಿರ್ಣಯಿಸುವುದು. ಅಂದರೆದೇವರಮೇಲೆಆಣೆಯಿಟ್ಟು, ಕೈಯಲ್ಲಿಬೆಂಕಿಹಿಡಿದೋ, ಕುದಿಯುತ್ತಿರುವಎಣ್ಣೆಯಲ್ಲಿಕೈಅದ್ದಿಯೋತಮ್ಮಪ್ರಾಮಾಣಿಕತೆಯನ್ನುಸಿದ್ಧಪಡಿಸಬೇಕು. ಕಾಗದಪತ್ರಇತ್ಯಾದಿಬೇರೆಸಾಕ್ಷ್ಯಾಧಾರಗಳುಇಲ್ಲದಿದ್ದಾಗಇಂಥಪದ್ಧತಿಯನ್ನುನುಸರಿಸಲಾಗುತ್ತಿದ್ದಿತು. ದಿವ್ಯವನ್ನುಕುರಿತುವಿವರಗಳಿಗಾಗಿನೋಡಿರಿ: Kane P. V. History of Dharmashastra. Vol. III.

[17]ಈವಾಕ್ಯಚೌ. ದಲ್ಲಿಲ್ಲ.

[18]ಸಂಸ್ಕೃತವ್ಯಾಖ್ಯೆಯಲ್ಲಿಈವಿವರಣೆಇದೆ. : ಒಮ್ಮೆವ್ಯಾಪಾರಿಯೊಬ್ಬನುಸಾಮಾನುಗಳನ್ನುಮಾರಿಹಣವನ್ನುತೆಗೆದುಕೊಂಡುಅಡವಿಯೊಳಗೆಹೊರಟಿದ್ದನು. ಆಗಕಳ್ಳರಿಂದಹಿಡಿಯಲ್ಪಟ್ಟಾಗಅವನುಮನವೊಲಿಸುವರೀತಿಯಲ್ಲಿಮಾತನಾಡಿದನು. ಕಳ್ಳರುಅವನನ್ನುಪ್ರಲೋಭಿಸಲುಹೀಗೆಂದರು: ನಾವುನಿನ್ನಹಣವನ್ನುಕೊಡುತ್ತೇವೆ. ಆದರೆಈಗಹಸಿವಾದುದರಿಂದತೆಗೆದುಕೊಳ್ಳುತ್ತೇವೆ. ಆನಂತರಕೊಡುತ್ತೇವೆಎಂಬಅರ್ಥದಲ್ಲಿ. ಇದಕ್ಕೆಸಾಕ್ಷಿಯೇನುಎಂದುಕೇಳಿದಾಗ, ಏನೂಇಲ್ಲಎಂದುಅವರುಹೇಳಿದರು. ಆಗವ್ಯಾಪಾರಿಯುಸಮೀಪದಗಿಡಮತ್ತುಬೆಕ್ಕುಗಳನ್ನುಸಾಕ್ಷಿಯಾಗಿಮಾಡಿದನು. ಕಳ್ಳರುಅದನ್ನುಒಪ್ಪಿಕಂಡರು. ಕೆಲಕಾಲದನಂತರವ್ಯಾಪಾರಿಯುಕಳ್ಳರನ್ನುಭೆಟ್ಟಿಯಾಗಿಅಧಿಕಾರಿಗಳಕಡೆಗೆಕರೆದುಕೊಂಡುಹೋಗಿಸಾಕ್ಷಿಗಳಮುಖಾಂತರಹಣವನ್ನುಮರಳಿಪಡೆದನು. ಯಾವದೇವ್ಯವಹಾರಕ್ಕೆಸಾಕ್ಷಿಬೇಕುಎಂದುಇಲ್ಲಿಹೇಳಿದಂತೆತೋರುತ್ತದೆ.

[19]ಚೌ. ಯಃಪರದ್ರವ್ಯಮಭಿಯಂಜೀತಾಭಿಲುಂಪತೇ.

[20]ಈವಾಕ್ಯದಕನ್ನಡವ್ಯಾಖ್ಯೆಯಭಾಗವನ್ನುಹಾಗೆಯೇಇಡಲಾಗಿದೆ.

[21]ಮೈ. ಲಿಂಗವಿಟನಾಸ್ತಿಕ, ಚೌ. ಲಿಂಗನಾಸ್ತಿಕ.

[22]ಮೈ. ಚ್ಯುತಾನಂಗಪತಿತಾನಾಂ.

[23]ಚೌ. ಸಂದಿಗ್ಧೇಪತ್ರೇ, ಸಾಕ್ಷ್ಯೇವಾವಿಚಾರ್ಯ.

[24]ಚೌ. ಪರಸ್ಪರವಿವಾದೇ.

[25]ಚೌ. ವಿಪರೀತಪ್ರಯುಕ್ತೀನಾಂ.

[26]ಚೌ. ಈವಾಕ್ಯವಿಲ್ಲ.