ಗ್ರಾಮಪುರವೃತ್ತ[1]ವ್ಯವಹಾರೈಃಸತಿವಿವಾದೇರಾಜಾನಮುಪೇಯಾತ್|| ೨೫ || ೧೧೯೨ ||

ಅರ್ಥ : ಗ್ರಾಮಪುರವೃತ್ತವ್ಯವಹಾರೈಃ = ಊರುಂ, ಹೊಲನುಮೆಂಬಿವಱಿಂದಾದವ್ಯವಹಾರಂಗಳಿಂದಾದ, ವಿವಾದೇಸತಿ = ಬರ್ಕುಡಿಯಾಗೆ, ರಾಜಾನಂ = ಅರಸನಂ, ಉಪೇಯಾತ್‌ = ಪೊರ್ದುಗೆ || ಈವಿಚಾರಮನರಸಲ್ಲದೆತಿರ್ದಲಾರನೆಂಬುದುತಾತ್ಪರ್ಯಂ ||

ರಾಜ್ಞಾs[2]ದೃಷ್ಟೇವ್ಯವಹಾರೇನಾಸ್ತ್ಯನುಬಂಧಃ|| ೨೬ || ೧೧೯೩ ||

ಅರ್ಥ : ರಾಜ್ಞಾ = ಅರಸನಂ, ಅದೃಷ್ಟೇ = ಕಾಣದಿರ್ದೊಡೆ, ವ್ಯವಹಾರೇ = ವ್ಯವಹಾರದಲ್ಲಿ, ಅನುಬಂಧಃ = ಹೆಂಗೆಹಾಂಗೆಎಂಬುದು, ನಾಸ್ತಿ = ಇಲ್ಲ || ಅರಸರಾಜ್ಞೆಯಂಮಿಱಿದೊಡಿಂತುಮಾಳ್ಕೆಂಬುದುತ್ತರವಾಕ್ಯಂ :

ರಾಜಾಜ್ಞಾಂಮರ್ಯಾದಾಂವಾತಿಕ್ರಮನ್ಸದ್ಯಃಫಲೇನದಂಡೇನೋಪಹಂತವ್ಯಃ|| ೨೭ || ೧೧೯೪ ||

ಅರ್ಥ : ರಾಜಾಜ್ಞಾಂ = ಅರಸನಾಣೆಯುಮಂ, ಮರ್ಯಾದಾಂವಾ = ಮರ್ಯಾದೆಯಂಮೇಣ್‌, ಅತಿಕ್ರಮನ್‌ = ದಾಂಟುತಿರ್ದಂ, ಸದ್ಯಃಫಲೇನ = ಆಗಳೆಫಲಮಂತೋರ್ಪ, ದಂಡೇನ = ದಂಡದಿಂ, ಉಪಹಂತವ್ಯಃಕಿಡಿಸಲ್ಪಡುವಂ || ಆಣೆಯಂಮೀಱಿಚರಿಯಿಸಲಾಗದೆಂಬುದುತಾತ್ಪರ್ಯಂ || ಅದಕ್ಕೆಕಾರಣಂಪೇಳ್ವುದುತ್ತರವಾಕ್ಯಂ :

—-

೨೫. ಒಟ್ಟುಗ್ರಾಮದವ್ಯವಹಾರಗಳಿಗೆಸಂಬಂಧಿಸಿದವಿವಾದಗಳತೀರ್ಮಾನಕ್ಕೆರಾಜನೆಡೆಗೆಹೋಗಬೇಕು.

೨೬. ವ್ಯವಹಾರವನ್ನುರಾಜನುಪರಿಶೀಲಿಸಿದಮೇಲೆಮತ್ತೆಅದರಮುಂದುವರಿಕೆಇಲ್ಲ.

೨೭. ರಾಜಾಜ್ಞೆಯನ್ನುಮತ್ತುಕಟ್ಟುಪಾಡನ್ನು, ಅತಿಕ್ರಮಿಸುವವನನ್ನುಕೂಡಲೇದಂಡಿಸಬೇಕು.

—-

[3]ಹಿದುರ್ವೃತಾನಾಂದಂಡಾದನ್ಯೋsಸ್ತಿವಿನಯೋಪಾಯಃ|| ೨೮ || ೧೧೯೫ ||

ಅರ್ಥ : ದುರ್ವೃತ್ತಾನಾಂ = ಪೊಲ್ಲನೆಗಳ್ವರ್ಗಳ, ವಿನಯೋಪಾಯಃ = ಶಿಕ್ಷಿಪುಪಾಯಂ, ದಂಡಾತ್‌ = ದಂಡದತ್ತಣಿಂ, ಅನ್ಯಃ = ಪೆಱತು, ಹಿ = ನೆಟ್ಟನೆ, ನಾಸ್ತಿ = ಇಲ್ಲ || ತೇಜವುಳ್ಳಂಗಳ್ಕುವರೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಅಗ್ನಿಸಂಯೋಗಏವವಕ್ರಂಕಾಷ್ಠಂಸರಲಯತಿ|| ೨೯ || ೧೧೬೯ ||

ಅರ್ಥ : ವಕ್ರಂ = ಕೊಂಕಿರ್ದ, ಕಾಷ್ಠಂ = ಮರನಂ, ಅಗ್ನಿಸಂಯೋಗ, ಏವ = ಕಿಚ್ಚಿನಪೊರ್ದುಗೆಯೇ, ಸರಲಯತಿ = ಸಸಿನಂಮಾಳ್ಕುಂ || ಋಜುವಪ್ಪಂಬಾಧೆಪಡುವನೆಂಬುದುತ್ತರವಾಕ್ಯಂ :

[4]ಋಜುಂಸರ್ವೇsಪಿಪರಿಭವಂತಿ|| ೩೦ || ೧೧೯೭ ||

ಅರ್ಥ : ಋಜುಂ = ವಕ್ರನಲ್ಲದನಂ, ಸರ್ವೇsಪಿ = ಎಲ್ಲರುಂ, ಪರಿಭವಂತಿ = ಪರಿಭವಿಪರ್‌ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಹಿತಥಾವಕ್ರಸ್ತರುಶ್ಫಿದ್ಯತೇಯಥಾಸರಲಃ|| ೩೧ || ೧೧೯೮ ||

ಅರ್ಥ : ಸರಲಃ = ಸಸಿನವಪ್ಪ, ತರುಃ = ಮರಂ, ಯಥಾ = ಎಂತು, ಛಿದ್ಯತೇ = ಕಡಿಯಲ್ಪಡುಗುಂ, ತಥಾ = ಅಂತೆ, ವಕ್ರಃ = ಕೊಂಕನಪ್ಪಮರಂ, ನಛಿದ್ಯತೇ = ಕಡಿಯಿಸಲ್ಪಡದು || ಮಯಾವಿಗಳೊಳ್‌ ಮಾಯೆಯಂಋಜುಗಳೊಳ್‌ ಋಜುತ್ವಮಂಮಾಳ್ಪುದೆಂಬುದುತಾತ್ಪರ್ಯಂ || ದೋಷಿಗಳಂಸೈರಿಸಲಾಗದೆಂಬುದುತ್ತರವಾಕ್ಯಂ :

[5]ಶಕ್ತಸ್ಯಾಪರಾಧಿಷುಕ್ಷಮಾನಹ್ಯಾತ್ಮತಿರಸ್ಕಾರಃ1|| ೩೨ || ೧೧೯೯ ||

ಅರ್ಥ : ಶಕ್ತಸ್ಯ = ಸಮರ್ಥಂಗೆ, ಅಪರಾಧಿಷುಚ = ದೋಷಿಗಳೊಳ್‌, ಕ್ಷಮಾ = ಸೈರಣೆ, ಆತ್ಮತಿರಸ್ಕಾರಃ = ತನ್ನತಿರಸ್ಕಾರಂ, ನಹಿ = ಆಗದು|| ದುಷ್ಟನಿಗ್ರಹಂಮಾಡದನಂಕೈಕೊಳರೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೨೮. ದುರ್ನಡತೆಯುಳ್ಳವರನ್ನುಹದ್ದಿನಲ್ಲಿಡುವುದಕ್ಕೆದಂಡನೆಯಲ್ಲದೆಬೇರೆಉಪಾಯವಿಲ್ಲ.

೨೯. ಬಾಗಿದಕೋಲನ್ನುನೇರಗೊಳಿಸಬೇಕಾದರೆಬೆಂಕಿಯಲ್ಲಿಕಾಯಿಸಲೇಬೇಕು.

೩೦. ನೇರವಾದನಡವಳಿಕೆಯುಳ್ಳವನನ್ನುಸಾಮಾನ್ಯವಾಗಿಎಲ್ಲರೂಅವಮಾನಿಸುತ್ತಾರೆ.

೩೧. ನೇರವಾದಮರವನ್ನುಕಡಿಯುವಷ್ಟುಸುಲಭವಾಗಿಬಾಗಿದಮರವನ್ನುಕಡಿಯಲಾಗುವದಿಲ್ಲ.

೩೨. ಸಮರ್ಥನಾದವನುಅಪರಾಧಿಗಳನ್ನುಕ್ಷಮಿಸುವುದುಹೇಡಿತನವಲ್ಲ.

—-

[6]ಅತಿಕ್ರಮ್ಯವರ್ತಿಷುಸರ್ಪಾದಿವ[7]ದೃಷ್ಟಪ್ರತ್ಯವಾಯಾದ್ರಾಜ್ಞಃಸರ್ವೋsಪಿಬಿಭೇತಿ|| ೩೩ || ೧೨೦೦ ||

ಅರ್ಥ : ಅತಿಕ್ರಮ್ಯವರ್ತಿಷು = ಮೀಱಿನೆಗಳ್ವರೊಳ್‌, ದೃಷ್ಟಪ್ರತ್ಯವಾಯಾತ್‌ = ಕಾಣಲ್ಪಟ್ಟಕೇಡನುಳ್ಳ, ರಾಜ್ಞಃ = ಅರಸನತ್ತಣಿಂ, ಸರ್ಪಾದಿವ = ಪಾವಿನತ್ತಣಿಂದಮೆಂತಂತೆ, ಸರ್ವೋsಪಿ = ಎಲ್ಲಾಜನಂ, ಬಿಭೇತಿ = ಅಂಜುಗುಂ || ಇಂತಪ್ಪಸಭೆಯಂಪುಗಲಾಗದೆಂಬುದುತ್ತರವಾಕ್ಯಂ :

[8]ಅನಾಯಕಾಂಬಹುನಾಯಕಾಂವಾಸಭಾಂಪ್ರವಿಶೇತ್|| ೩೪ || ೧೨೦೧ ||

ಅರ್ಥ : ಅನಾಯಕಾಂ = ಪ್ರಭುವಿಲ್ಲದ, ಬಹುನಾಯಕಾಂವಾ = ಪಲಬರ್‌ ಮುಖ್ಯರಪ್ಪಮೇಣ್‌, ಸಭಾಂಸಭೆಯಂ, ನಪ್ರವಿಶೇತ್‌ = ಪುಗದಿರ್ಕ್ಕೆ || ಶಿಕ್ಷಿಸುವರಿಲ್ಲದಲ್ಲಿಪುಗಲಾಗದೆಂಬುದುತಾತ್ಪರ್ಯಂ || ಬಹುನಾಯಕಮಪ್ಪಲ್ಲಿಪುಗಲಾಗದೆಂಬುದುತ್ತರವಾಕ್ಯಂ :

ಗಣಪುರಶ್ಚಾರಿಣಃಸಿದ್ದೇಕಾರ್ಯೇಸ್ವಸ್ಯಕಿಂಚಿದಸಿದ್ದೇಧ್ರುವಂಚಾತ್ಮಪ್ರತ್ಯವಾಯಃ|| ೩೫ || ೧೨೦೨ ||

ಅರ್ಥ : ಗಣಪುರಶ್ಚಾರಿಣಃ = ಪಲಂಬರಮುಂದೆನಡೆವಂಗೆ, ಕಾರ್ಯೇ = ಕಾರ್ಯಂ, ಸಿದ್ಧೇ = ತೀರ್ದುದಾದೊಡೆ, ಸ್ವಸ್ಯ = ತನಗೆ, ಕಿಂಚಿತ್‌ = ಏನುಂನ = ಇಲ್ಲ, ಚ = ಮತ್ತೆ, ಅಸಿದ್ಧೇ = ಸಿದ್ಧಿಸದಿರಲು, ದೃಢಂ = ನಿಶ್ಚಯದಿಂ, ಆತ್ಮಪ್ರತ್ಯವಾಯಃ = ತನಗೆಕೇಡಕ್ಕುಂ || ಪಲಂಬರ್‌ ಮುಖ್ಯರುಗಳಭಿಪ್ರಾಯದಿಂನಡೆವನಂರಕ್ಷಿಸರೆಂಬುದುತಾತ್ಪರ್ಯಂ || ಇಂತಪ್ಪಗೋಷ್ಠಿವೇಡೆಂಬುದುತ್ತರವಾಕ್ಯಂ :

—-

೩೩. ಮಿತಿಮೀರಿವರ್ತಿಸುವವನನ್ನುನಿಗ್ರಹಿಸುವರಾಜನನ್ನುಕಂಡರೆ, ಸರ್ಪವನ್ನುಕಂಡುಭಯಪಡುವಂತೆಜನರುಹೆದರುತ್ತಾರೆ.

೩೪. ನಾಯಕನಿಲ್ಲದಅಥವಾಬಹುಮಂದಿನಾಯಕರಿರುವಸಭೆಗೆಹೋಗಬಾರದು.

೩೫. ಗುಂಪನ್ನುಹಿಂದಿಟ್ಟುಕೊಂಡುಮುಂದೆಹೋಗುವನಾಯಕನಿಗೆಕಾರ್ಯಸಿದ್ಧಿಯಾದರೆಲಾಭವಿಲ್ಲ. ಕಾರ್ಯಸಿದ್ಧಿಯಾಗದಿದ್ದರೆಮಾತ್ರಹಾನಿತಪ್ಪದು.

—-

ಸಾಗೋಷ್ಠೀಪ್ರಸ್ತೋತವ್ಯಾಯತ್ರಪರೇಷಾಮಪಾಯಃ[9] || ೩೬ || ೧೨೦೩ ||

ಅರ್ಥ : ಯತ್ರ = ಆವುದೊಂದರೊಳ್‌, ಪರೇಷಾಂ = ಪೆಱರ್ಗೆ, ಅಪಾಯಃ = ಕೇಡಕ್ಕುಂ, ಸಾಗೋಷ್ಠೀ = ಆಗೋಷ್ಟಿ, ನಪ್ರಸ್ತೋತವ್ಯಾ = ಪ್ರಸ್ತುತಂಮಾಡೆಪಡದು || ತನಗಂಪೆಱರ್ಗಂಹಿತಮಪ್ಪವಚನಂಪ್ರಸ್ತುತಂಮಾಳ್ಪುದೆಂಬುದುತಾತ್ಪರ್ಯಂ || ಇಂತುಮಾತಾಡುಗೆಂಬುದುತ್ತರವಾಕ್ಯಂ :

[10]ಸ್ವೋಪಾಲಂಭಪರಿಹಾರೇಣಪರಮುಪಾಲಂಭೇತ|| ೩೭ || ೧೨೦೪ ||

ಅರ್ಥ : ಸ್ಟೋಪಾಲಂಭಪರಿಹಾರೇಣ = ತನ್ನದೋಷಮಂಪರಿಹರಿಸುವುದಱಿಂ, ಪರಂ = ಪೆಱನಂ, ಉಪಾಲಂಭೇತ = ದೋಷಿಯಂಮಾಳ್ಕುಂ || ತನ್ನಂತಪ್ಪಿಸಿಪೆಱನಂದೋಷಿಯಂಮಾಳ್ಕೆಂಬುದುತಾತ್ಪರ್ಯಂ || ಗೋಷ್ಠಿಯನಿಂತುಮಾಳ್ಕೆಂಬುದುತ್ತರವಾಕ್ಯಂ :

ಸ್ವಾಮಿನಮುತ್ಕರ್ಷಯನ್ಗೋಷ್ಠಿಮವತಾರಯೇತ್|| ೩೮ || ೧೨೦೫ ||

ಅರ್ಥ : ಸ್ವಾಮಿನಂ = ಸ್ವಾಮಿಯಂ, ಉತ್ಕರ್ಷಯನ್‌ = ಪೆರ್ಚ್ಚಸುತ್ತಂ, ಗೋಷ್ಠಿ = ಸುಖದಮಾತಂ, ಅವತಾರಯೇತ್‌ = ಅವತರಿಸುತಿರ್ಕ್ಕೆ || ಸ್ವಾಮಿಯನಿಳಿಕೆಗೆಯ್ದುಗೋಷ್ಠಿಮಾಡವೇಡೆಂಬುದುತಾತ್ಪರ್ಯಂ || ಆಗೋಷ್ಠಿಯೊಳಿಂತುಮಾಡವೇಡೆಂಬುದುತ್ತರವಾಕ್ಯಂ :

ಹಿಭರ್ತುರಭಿಯೋಗಾತ್ಪರಂಸತ್ಯಮಸತ್ಯಂವಾವದಂತಮವಗೃಹ್ಣೀಯಾತ್|| ೩೯ || ೧೨೦೬ ||

ಅರ್ಥ : ಭರ್ತುಃ = ಆಳ್ದನ, ಅಭಿಯೋಗಾತ್ಪರಂ = ಸ್ವಾಮಿದ್ರೋಹಂಪೊಱಗಾಗಿ, ಸತ್ಯಂ = ಉಳ್ಳುದಂ, ಆಸತ್ಯಂವಾ = ಇಲ್ಲದುದಂಮೇಣ್‌, ವದಂತಂ = ನುಡಿವುತಿರ್ದನಂ, ನಾವಗೃಹ್ಣೀಯಾತ್‌ = ಇಳಿಕೆಗೆಯ್ಕದಿರ್ಕ್ಕೆ || ಸ್ವಾಮಿದ್ರೋಹಮಿಲ್ಲದವಚನಮನೇನನಾದೊಡಂಕೇಳ್ಪುದೆಂಬುದುತಾತ್ಪರ್ಯಂ || ಒಡನಿರವುಮರ್ಥಸಂಬಂಧಮುಮಿಂತುಮಾಳ್ಪುದೆಂಬುದುತ್ತರವಾಕ್ಯಂ :

—-

೩೬. ಯಾವಗೋಷ್ಠಿಯಲ್ಲಿಇತರರಿಗೆಅಪಾಯವಿದೆಯೋಅದನ್ನುಹೊಗಳಕೂಡದು.

೩೭. ಇತರರಿಂದತನಗುಂಟಾದನಿಂದೆಯನ್ನುಪರಿಹರಿಸಿಕೊಂಡುಇತರರನ್ನುನಿಂದಿಸಬೇಕು.

೩೮. ತನ್ನಸ್ವಾಮಿಯಮೇಲ್ಮೈಯನ್ನುಶ್ಲಾಘಿಸುತ್ತಾಗೋಷ್ಠಿಯನ್ನುಪ್ರಾರಂಭಿಸಬೇಕು.

೩೯. ರಾಜನಒತ್ತಾಯಕ್ಕೊಳಗಾಗಿಸತ್ಯವನ್ನುಅಥವಾಅಸತ್ಯವನ್ನುಹೇಳಿದವನನ್ನುಶಿಕ್ಷಿಸಕೂಡದು.

—-

[11]ಅರ್ಥಸಂಬಂಧಃಸಹವಾಸಶ್ಚನಾಕಲಹೋsಸ್ತಿ|| ೪೦ || ೧೨೦೭ ||

ಅರ್ಥ : ಅರ್ಥಸಂಬಂಧಃ = ಅರ್ಥಸಂಬಂಧಮುಂ, ಸಹವಾಸಶ್ಚ = ಒಡನಿರವುಂ, ಅಕಲಹಃ = ಕಲಹಮಿಲ್ಲದುದಂ, ನಾಸ್ತಿ = ಇಲ್ಲ || ಕೆಳೆಯನೊಳರ್ಥಸಂಬಂಧಮುಮೊಡನಿರವುಂಬೇಡೆಂಬುದುತಾತ್ಪರ್ಯಂ || ಇಂತಪ್ಪಸಿರಿಯಂದೆಂಬುದುತ್ತರವಾಕ್ಯಂ :

ನಿಧಿರಾಕಸ್ಮಿಕೋವಾರ್ಥಲಾಭಸ್ಸಹಪ್ರಾಣೈಃಸಂಚಿತಮಪ್ಯಪಹಾರಯತಿ|| ೪೧ || ೧೨೦೮ ||

ಅರ್ಥ : ನಿಧಿಃ = ನಿಧಿಯುಂ, ಆಕಸ್ಮಿಕಃ = ವ್ಯವಹಾರವಿಲ್ಲದೆತೊಟ್ಟನೆಯಾದ, ಅರ್ಥಲಾಭಃವಾ = ಅರ್ಥದಪಡೆಪುಮೇಣ್‌, ಪ್ರಾಣೈಃಸಹ = ಪ್ರಾಣಂಗಳ್ವೆರಸು, ಸಂಚಿತಂ = ನೆರಪಿದ, ಅರ್ಥಮಪಿ = ತಾನುಗಳಿಸಿದಅರ್ಥಮುಮಂ, ಅಪಹರಯತಿ = ಕಳೆದುಕೊಳಿಸುಗುಂ || ನಿಧಿಯುಮಂವ್ಯವಹಾರಂಚಿತಿಮಲ್ಲದರ್ಧಮಂಕೊಳಲಾಗದೆಂಬುದುತಾತ್ಪರ್ಯಂ || ಇಂತಪ್ಪರ್ಗಿದುಶಪಥಮೆಂಬುದುತ್ತರವಾಕ್ಯಂ :

[12]ಬ್ರಾಹ್ಮಣಾನಾಂಹಿರಣ್ಯಯಜ್ಞೋಪವೀತಯೋರುಪಸ್ಪರ್ಶನಂಶಪಥ|| ೪೨ || ೧೨೦೯ ||

ಅರ್ಥ : ಬ್ರಾಹ್ಮಣಾನಾಂ = ಪಾರ್ವ್ವರ್ಗೆ, ಹಿರಣ್ಯಯಜ್ಞೋಪವೀತಯೋಃ = ಪೊನ್ನಜಿನಿವರಮೆಂಬಿವಱ, ಉಪಸ್ಪರ್ಶನಂ = ಮುಟ್ಟುಹಂ, ಶಪಥಃ = ಸೂಱುಳ್‌ ||

ಕ್ಷತ್ರಿಯಾಣಾಂಅಸ್ತ್ರರತ್ನಭೂಮಿವಾಹನಪರ್ಯಾಣಾನಾಂ|| ೪೩ || ೧೨೧೦ ||

ಅರ್ಥ : ಕ್ಷತ್ರಿಯಾಣಾಂ = ಕ್ಷತ್ರಿಯರ್ಗೆ, ಅಸ್ತ್ರ = ಆಯುಧಮುಂ, ರತ್ನ = ರತ್ನಂಗಳುಂ, ಭೂಮಿ = ನೆಲನುಂವಾಹನ = ವಾಹನಂಗಳುಂ, ಪರ್ಯಾಣಾನಾಂ = ಪಲ್ಲಣಮೆಂಬಿವಱಮುಟ್ಟುಹವುಂಸೂಱುಳ್‌ ||

ವೈಶ್ಯಾನಾಂವೈಶ್ರವಣಪೋತಯೋಃ[13]ಕಾಕಿಣಿಹಿರಣ್ಯಯೋರ್ವಾ|| ೪೪ || ೧೨೧೧ ||

ಅರ್ಥ : ವೈಶ್ಯಾನಾಂ = ವೈಶ್ಯರ್ಗೆ, ವೈಶ್ರವಣ = ಕುಬೇರನುಂ, ಪೋತಯೋಃ = ಪೊನ್ನಚೀಲ (ಬಹಿತ್ರ) ಮೆಂಬಿಹಂಮುಟ್ಟುಹಂ, ಕಾಕಿಣಿಹಿರಣ್ಯಯೋರ್ವಾ = ಬಳಹಮುಂಹೊನ್ನಮೆಂಬಿವಱಮುಟ್ಟುಹಂಮೇಣ್‌ ಸೂಱುಳ್‌ ||

—-

೪೦. ಅರ್ಥಸಂಬಂಧವೂ, ಸಹವಾಸವೂಇದ್ದಲ್ಲಿಕಲಹವಿಲ್ಲದಿಲ್ಲ.

೪೧. ನಿಧಿಯೂ, ಆಕಸ್ಮಿಕಧನಲಾಭವೂಪ್ರಾಣದೊಂದಿಗೆಮೊದಲುಸಂಪಾದಿಸಿದ್ದಹಣವನ್ನೂಕಳೆದುಕೊಳ್ಳುವುದಕ್ಕೆಕಾರಣವಾಗುತ್ತದೆ.

೪೨. ೪೫ಬ್ರಾಹ್ಮಣರುಹೊನ್ನುಅಥವಾಜನಿವಾರವನ್ನುಮುಟ್ಟಿಯೂ. ಕ್ಷತ್ರಿಯರುಅಸ್ತ್ರ, ರತ್ನ, ಭೂಮಿವಾಹನಗಳು. ಹಲ್ಲಣ (ಜೀನು)ಗಳನ್ನುಮುಟ್ಟಿಯೂ, ವೈಶ್ಯರುಕುಬೇರನಮೇಲೂ, ಹಡಗಿನಮೇಲೂ, ಹೊನ್ನುಗಳನ್ನುಮುಟ್ಟಿಯೂ, ಶೂದ್ರರುಹಾಲು, ಬೀಜ, ಹುತ್ತವನ್ನುಮುಟ್ಟಿಯೂಶಪಥಮಾಡಬೇಕು.

—-

ಶೂದ್ರಾಣಾಂಕ್ಷೀರಬೀಜಯೋರ್ವಲ್ಮೀಕಸ್ಯಚೋಪಸ್ಪರ್ಶನಂಶಪಥಃ|| ೪೫ || ೧೨೧೨ ||

ಅರ್ಥ : ಶೂದ್ರಾಣಾಂ = ಒಕ್ಕಲಿಗರ್ಗೆ, ಕ್ಷೀರಬೀಜಯೋಃ = ಹಾಲು, ಬೀಜಮೆಂಬಿವಱಮುಟ್ಟುಹಂ, ವಲ್ಮೀಕಸ್ಯಚ = ಪುತ್ತಂಮುಟ್ಟಿಸುಹಂಮೇಣ್‌ ಸೂಱುಳ್‌ ||

ಕಾರುಕಾಣಾಂ[14]ಯೋಯೇನಕರ್ಮಣಾಜೀವತಿತಸ್ಯತತ್ಕರ್ಮೋಪಕರಣಾನಾಂ|| ೪೬ || ೧೨೧೩ ||

ಅರ್ಥ : ಕಾರುಕಾಣಾಂ = ಕಾರುಕರ್ಗ್ಗೆ, ಯಃ = ಆವನೋರ್ವಂ, ಯೇನಕರ್ಮಣಾ = ಆವಕೆಲಸದಿಂ, ಜೀವತಿ = ಬರ್ದುಂಕುಗುಂ, ತಸ್ಯ = ಆತಂಗೆ, ಶತ್ಕರ್ಮೋಪಕರಣಾನಾಂ = ಆಕೆಲಸದಮುಟ್ಟುಗಳಂಮುಟ್ಟುಹಂಸೂಱುಳ್ ||

ವ್ರತೀನಾಮನ್ಯೇಷಾಂಚೇಷ್ಟದೇವತಾಪಾದಸ್ಪರ್ಶನಾಪ್ರದಕ್ಷಿಣೀಕರಣಂದಿವ್ಯಕೋಶದಂಡ[15]ತುಲಾರೋಹಣೈರ್ವಿಶುದ್ಧಿಃ|| ೪೭ || ೧೨೧೪ ||

ಅರ್ಥ : ವ್ರತೀನಾಂ = ವ್ರತಿಕರ್ಗೆ, ಅನ್ಯೇಷಾಂಚ = ಉಳಿದರ್ಗೆಲ್ಲಮುಂ, ಇಷ್ಟದೇವತಾ = ತಂತಮ್ಮದೇವರ, ಪಾದಸ್ಪರ್ಶನಂ = ಕಾಲಂಮುಟ್ಟಿವುದುಂ, ಅಪ್ರದಕ್ಷಿಣೀಕರಣಂ = ಎಡದೊಳಿಕ್ಕೆಪೋಪುದುಂ (ಪ್ರದಕ್ಷಿಣವಮಾಡುಹವು) ದಿವ್ಯ = ದಿವ್ಯಮುಂ, ಕೋಶಃ = ಬಳಿನೀರುಂ, ದಂಡ = ಅಱಯಿದಕ್ಕೆ, ತುಲಾರೋಹಣೈಃ = ತೊಲೆಯನೇಱಿಸುವುದುಮೆಂದಿವಱಿಂ, ವಿಶುದ್ಧಿಃ = ವಿಶುದ್ಧತೆಯಕ್ಕುಂ || .

—-

೪೬. ಕಾರ್ಮಿಕರುಯಾರುಯಾವಕರ್ಮದಿಂದಜೀವಿಸುತ್ತಾರೋಅವರಕರ್ಮಕ್ಕೆಸಂಬಂಧಿಸಿದಉಪಕರಣಗಳನ್ನುಮುಟ್ಟಿಪ್ರಮಾಣಮಾಡಬೇಕು.

೪೭. ವರತಿಗಳಿಗೂ, ಉಳಿದವರೆಲ್ಲರಿಗೂಇಷ್ಟದೇವತಾಪಾದಸ್ಪರ್ಶನ, ಅಪ್ರದಕ್ಷಿಣೀಕರಣ, ದಿವ್ಯದಂಡ, ತುಲಾರೋಹಣದಿಂದವಿಶುದ್ಧಿಯು.

—-

ವ್ಯಾಧಾನಾಂಧನುರ್ಲಂಘನಂ|| ೪೮ || ೧೨೧೫ ||

ಅರ್ಥ : ವ್ಯಾಧಾನಾಂ = ಬೇಡರ್ಗೆ, ಧನುರ್ಲಂಘನಂ = ಬಿಲ್ಲಂದಾಂಟಿಪುದೆಶಪಥಂ ||

[16]ಅಂತ್ಯವರ್ಣಾವಸಾಯಿನಾಮಾರ್ದ್ರಚರ್ಮಾರೋಹಣಂ|| ೪೯ || ೧೨೧೬ ||

ಅರ್ಥ : ಅಂತ್ಯವರ್ಣಾವಸಾಯಿನಾಂ = ಹೊಲೆಯರುಂಮಾದಿಗರುಮೆಂದಿವರ್ಗೆ, ಆರ್ದ್ರಚರ್ಮಾರೋಹಣಂ = ಪಸಿಯತೊವಲನೇಱೆಪುದುಸೂಱುಳ್‌ || ಜಾತ್ಯನುರೂಪಮಪ್ಪಶಪಥಂಗಳಿಂನಂಬುವುದುಸರ್ವಸಂಶಯಂಬೇಡೆಂಬುದುತಾತ್ಪರ್ಯಂ || ಇವುಶಾಶ್ವತಂಗಳಲ್ಲಮೆಂಬುದುತ್ತರವಾಕ್ಯಂ :

ವೇಶ್ಯಾಮಹಿಳಾಭಂಡೋಭೃತ್ಯಃಕ್ರೇಣಿರ್ನಿಯೋಗೋನಿಯೋಗೀಮಿತ್ರಮಿತಿಚತ್ವಾರ್ಯಶಾಶ್ವತಾನಿ|| ೫೦ || ೧೨೧೭ ||

ಅರ್ಥ : ವೇಶ್ಯಾ = ಸೂಳೆಯಪ್ಪ, ಮಹಿಳಾ = ಸ್ತ್ರೀಯುಂ, ಭಂಡಃ = ಭೂತಪ್ಪ, ಭೃತ್ಯಃ = ಬಂಟನುಂ, ಕ್ರೇಣಿಃ = ಕ್ರೇಣಿಯಪ್ಪ, ನಿಯೋಗಃ = ಅಧಿಕಾರಮುಂನಿಯೋಗೀಚ = ಅಧಿಕಾರಿಯಪ್ಪ, ಮಿತ್ರಂಇತಿ = ಕೆಳೆಯನುಮೆಂದಿಂತು, ಚತ್ಪಾರಿ = ನಾಲ್ಕು, ಅಶಾಶ್ವತಾನಿ = ನಿಚ್ಚೆಯಲ್ಲವು || ಇವರೊಳ್‌ ಪಿರಿದುಪತ್ತುಗೆಯಂಮಾಡವೇಡೆಂಬುದುತಾತ್ಪರ್ಯಂ || ಸ್ತ್ರೀಯರೊಳತ್ಯಾಸಕ್ತಿಯಾಗವೇಡೆಂಬುದುತ್ತರವಾಕ್ಯಂ :

ಕ್ರೀತೇಷ್ಟ್ವಾಹಾರೇಷ್ವಿವಪಣ್ಯಸ್ತ್ರೀಜನೇಷುಅಸ್ವಾದಃ|| ೫೧ || ೧೨೧೮ ||

ಅರ್ಥ : ಕ್ರೀತೇಷು = ಮಾರುಕೊಂಡ, ಆಹಾರೇಷುಇವ = ಆಹಾರಂಗಳೊಳೆಂತಂತೆ, ಪುಣ್ಯಸ್ತ್ರೀಜನೇಷು = ವೇಶ್ಯಾಸ್ತ್ರೀಯರ್ಕಳೊಳ್‌, ಕಃ = ಆವುದು, ಆಸ್ವಾದಃ = ಸಮಿ (ರಸವು) || ಕಾಂಕ್ಷೋಪಶಮಮೇಸಾಲ್ಗುಮೆಂಬುದುತಾತ್ಪರ್ಯಂ || ಪರಿಗ್ರಹಂಪಿರಿದುಂಕಿಱಿದುಮಾಯಾಸಂಬಂಧಿಸುಗುಮೆಂಬುದುತ್ತರವಾಕ್ಯಂ :

—-

೪೮. ವ್ಯಾಧರಿಗೆಧನುಸ್ಸನ್ನುದಾಟುವುದೇಶಪಥ.

೪೯. ಅಂತ್ಯವರ್ಣದವರಿಗೆಹಸಿಯಚರ್ಮವನ್ನೇರುವುದೇಶಪಥ.

೫೦. ವೇಶ್ಯೆಯು (ಯೋಗ್ಯಸ್ತ್ರೀಯಾಗಿ) ಗೃಹಿಣಿಯಾಗಿರುವುದೂ, ವಿದೂಷಕನುಭೃತ್ಯನಾಗಿರುವುದೂ, ಶಿಲ್ಪಿಗಳು, ವರ್ತಕರುಮೊದಲಾದಗುಂಪಿನನಿಯೋಗವಾಗುವದೂ. ಅಧಿಕಾರಿಯುಮಿತ್ರನಾಗುವದು. ನಾಲ್ಕೂಶಾಶ್ವತವಲ್ಲ.

೫೧. ಬೆಲೆಕೊಟ್ಟುಕೊಂಡಆಹಾರಗಳಂತೆಬೆಲೆವೆಣ್ಣುಗಳಲ್ಲಿಸವಿಯೇನಿದೆ?

—-

ಯಸ್ಯಯಾವಾನ್ಪರಿಗ್ರಹಸ್ತಸ್ಯತಾವಾನೇವತಂಸಂತಾಪಯತಿ|| ೫೨ || ೧೨೧೯ ||

ಅರ್ಥ : ಯಸ್ಯ = ಆವನೋರ್ವಂಗೆ, ಯಾವಾನ್‌ = ಎನಿತ್ತು, ಪರಿಗ್ರಹಃ = ಬಾಹ್ಯವಸ್ತು, ಸಃ = ಅದು, ತಂ = ಆತನಂ, ತಾವಾನೇವ = ಅನಿತೇ, ಸಂತಾಪಯತಿ = ಆಯಾಸಂಬಡಿಸುಗುಂ || ನಿಃಪರಿಗ್ರಹನೇಸುಖಿಯೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯ :

ಗಜೇಗರ್ದಭೇರಾಜರಜಕಯೋಃಸಮಏವಚಿಂತಾಭಾರಃ|| ೫೩ || ೧೨೨೦ ||

ಅರ್ಥ : ಗಜೇ = ಆನೆಯೊಳಂ, ಗರ್ದಭೇಚ = ಕಳ್ತೆಯೊಳಂ, ರಾಜಾರಜಕಯೋಃಅರಸನಗಸನೆಂಬೀರ್ವರ್ಗಂಚಿಂತಾಭಾರಃ = ಚಿಂತೆಯಹೊರೆಸಮ = ಸಮವೇ || ಮೂರ್ಖನಾಗ್ರಹಮಿಂತುಮಾಳ್ಕೆಂಬುದುತ್ತರವಾಕ್ಯಂ :

ಮೂರ್ಖಸ್ಯಾಗ್ರಹೋನಾಪಾಯನವಾಪ್ಯನಿವರ್ತತೇ|| ೫೪ || ೧೨೨೧ ||

ಅರ್ಥ : ಮೂರ್ಖಸ್ಯ = ಮೂರ್ಖನ, ಆಗ್ರಹಃ = ಆಗ್ರಹಂ, ಅಪಾಯಂ = ಕೇಡಂ, ಅನವಾಪ್ಯ = ಎಯ್ದದೆ, ನನಿವರ್ತತೇ = ಮಾಣದು (ತಿರುಗದು) || ಮೂರ್ಖಂಕೇಡುಕೆಡುವಡೆದಲ್ಲದೆಮಾಣನೆಂಬುದುತಾತ್ಪರ್ಯಂ || ಅವರೊಳಿಂತಪ್ಪದೆಂಬುದುತ್ತರವಾಕ್ಯಂ :

ಕಾರ್ಪಾಸಾಗ್ನೇರಿವಮೂರ್ಖಸ್ಯೋಪಶಾಂತಿಮುಪೇಕ್ಷಣಮೇಔಷಧಂ|| ೫೫ || ೧೨೨೨ ||

ಅರ್ಥ : ಕಾರ್ಪಾಸಾಗ್ನೇರಿವ = ಪತ್ತಿಯಕಿಚ್ಚಿಗೆಂತಂತೆ, ಮೂರ್ಖಸ್ಯ = ಮೂರ್ಖನ, ಉಪಶಾಂತಿಂ = ಆಗ್ರಹಂಮಗ್ಗಿಪಲ್ಲಿ, ಉಪೇಕ್ಷಣಮೇವ = ಉಪೇಕ್ಷಿಪುದೇ (ಸುಮ್ಮನಿಹುದು) ಔಷಧಂ = ಮರ್ದು || ಯುಕ್ತಿಯಿಂದುಪಸಮಿಪವನಲ್ಲೆಂಬುದುತಾತ್ಪರ್ಯಂ || ಮೂರ್ಖಂಗೊಡಂಬಡಲ್ಪೇಡೆಂಬುದುತ್ತರವಾಕ್ಯಂ :

ಮೂರ್ಖಸ್ಯಾಭ್ಯುಪತ್ತಿಕರಣಮುದ್ದೀಪನಪಿಂಡಃ|| ೫೬ || ೧೨೨೩ ||

ಅರ್ಥ: ಮೂರ್ಖಸ್ಯ = ಮೂರ್ಖಂಗೆ, ಅಭ್ಯುಪಕರಣಂ = ಒಡಂಬಡಿಕೆಯಂಮಾಳ್ಪುದು, ಉದ್ದೀಪನಪಿಂಡಃ = ಗಜಕ್ಕೆಯ್ಪುಪುಟ್ಟಿಪಕವಳಮೆಂತಂತೆ || ಉಪಶಮಿಸಲ್ಪೇಳ್ಕೆಂಬುದುತಾತ್ಪರ್ಯಂ || ಕರಂಮುಳಿದಾಗಳೆತಿಳಿಯರೆಂಬುದುತ್ತರವಾಕ್ಯಂ :

—-

೫೨. ಯಾರುಎಷ್ಟುಸ್ವತ್ತುಗಳನ್ನೂಪರಿಜನರನ್ನೂಹೊಂದಿರುತ್ತಾನೋಅವನಿಗೆಅವಲ್ಲೆವೂಅಷ್ಟುಬಾಧೆಗಳಿಗೆಕಾರಣವಾಗುತ್ತವೆ.

೫೩. ಆನೆ, ಕತ್ತೆಗಳಬಗ್ಗೆ, ಅರಸ, ಅಗಸಇವರಿಗೆಅನುಕ್ರಮವಾಗಿಸಮನಾದಚಿಂತೆಯಿರುತ್ತದೆ.

೫೪. ಮೂರ್ಖನಆಗ್ರಹವುಅಪಾಯವನ್ನುತಂದೊಡ್ಡದೆಬಿಡುವುದಿಲ್ಲ.

೫೫. ಹತ್ತಿಗೆಬಿದ್ದಬೆಂಕಿಯಂತೆಮೂರ್ಖನಆಗ್ರಹವನ್ನುತಗ್ಗಿಸಲುಉಪೇಕ್ಷೆಯೇಮದ್ದು.

೫೬. ಮೂರ್ಖನುಹೇಳಿದಂತೆಕೇಳುವುದುಮೂರ್ಖತ್ವವನ್ನುಹೆಚ್ಚಿಸುವಶಕ್ತಿವರ್ಧಕವಿದ್ದಹಾಗೆ.

—-

ಕ್ರೋಧಾಗ್ನಿಜ್ವಲಿತೇಷು[17]ತಕ್ಷ್ಮಣಪ್ರಶಮನಾಗ್ರಹೋಘೃತಾಹುತಿನಿಕ್ಷೇಪಇವ|| ೫೭ || ೧೨೨೪ ||

ಅರ್ಥ : ಕ್ರೋಧಾಗ್ನಿಜ್ವಲಿತೇಷು = ಕ್ರೋಧಮೆಂಬಕಿಚ್ಚಿಂದುರಿವರೊಳ್‌, ತತ್‌ಕ್ಷಣಪ್ರಶಮನಾಗ್ರಹಃ = ಆಗಳೇತಿಳಿಪುವಾಗ್ರಹಂ, ಘೃತಾಹುತಿನಿಕ್ಷೇಪಇವ = ತುಪ್ಪದಾಹುತಿಯನಿಕ್ಕುವಂತೆ || ಪುರುಷಾಂತರಮುಮಂಮುಳಿಸಿನಂತರಮುಮಂಅಱಿತುತಿಳಿಪುದೆಂಬುದುತಾತ್ಪರ್ಯಂ || ಕೊರಡಿಗನಾಗ್ರಹಂಗೆಯ್ಯಲಿಂತುಮಾಳ್ಕೆಂಬುದುತ್ತವಾಕ್ಯಂ :

[18]ಅನವಸ್ಥಿತೋsನಡ್ವಾನಿವದ್ರೀಯಮಾಣೋಮೂರ್ಖಃಖರ[19]ಮಾಕರ್ಷಯತಿ[20]|| ೫೮ || ೧೨೨೫ ||

ಅರ್ಥ : ಅನವಸ್ಥಿತಃಮೂಗೂಱದ, ಅನಡ್ವಾನಿವ = ಎತ್ತಿನಂತೆ, ದ್ರೀಯಮಾಣಃ = ಪಿಡಿಯಲ್ಪಡುತ್ತಿರ್ದನಾಗಿ, ಮೂರ್ಖಃ = ಖರಂ = ಬೆಟ್ಟಿತ್ತಾಗಿ, ಆಕರ್ಷಯತಿ = ತನ್ನತ್ತತೆಗೆಯದು || ಪಿಡಿವಿಡಿಯೆಆರ್ಯನಪ್ಪನೆಂಬುದುತಾತ್ಪರ್ಯಂ ||

[21]ಜಲೈಃಸಂಸಿಚೈಮಾನಃಸಣ[22]ಗುಣಗ್ರಂಥಿರಿವಾನುನಯೇನಕರ್ಮಣಾಕರ್ಕಶೋಮೂರ್ಖಃ|| ೫೯ || ೧೨೨೬ ||

ಅರ್ಥ : ಜಲೈಃ = ಉದಕಂಗಳಿಂ, ಸಂಸಿಚ್ಯಮಾನಃ = ನಾದಿದ, ಸಣಗುಣಗ್ರಂಥಿರಿವ = ಸಣಬಿನನೇಣಿನಗಂಟಿನಹಾಂಗೆ, ಅನುನಯೇನಕರ್ಮಣಾ = ವಿನಯವ್ಯಾಪಾರದಿಂ, ಮೂರ್ಖಃ = ಮುರ್ಖನು, ಕರ್ಕಶಃ = ಕಠಿನನಹನು || ಜಲದಿಂಪೊಲ್ಲಪ್ಪುದುಪಕ್ಷಪಾತದಿಂದೊಳ್ಳಿತ್ತಾಗದೆಂಬುದುತ್ತರವಾಕ್ಯಂ :

—-

೫೭. ಕ್ರೋಧಾಗ್ನಿಯಿಂದಉರಿಯುತ್ತಿರುವವರನ್ನುತಕ್ಷಣಸಮಾಧಾನಪಡಿಸುವುದುಉರಿಯುತ್ತಿರುವಬೆಂಕಿಯಲ್ಲಿತುಪ್ಪವನ್ನುಸುರಿದಂತೆ.

೫೮. ಮೂಗುದಾರವನ್ನುಹಾಕಿಹಿಡಿತಕ್ಕೆತಂದಿಲ್ಲದಗೂಳಿಯಂತೆಕೋಪಗೊಂಡಮೂರ್ಖನುಸಮಾಧಾನಮಾಡುವುದಕ್ಕೆಬಂದವರಮೇಲೆಬೀಳುತ್ತಾನೆ.

೫೯.ಅನುನಯವನ್ನುತೋರಿದರೆ, ಮೂರ್ಖನುನೀರಿನಲ್ಲಿನೆಂದಸೆಣಬಿನಗಂಟಿನಂತೆಇನ್ನಷ್ಟುಬಿಗಿದುಕೊಳ್ಳುತ್ತಾನೆ.

—-

ಸ್ವಯಮಗುಣಂ[23]ವಸ್ತುನಖಲುಪಕ್ಷಪಾತಾದ್ಗುಣವದ್ಭವತಿ|| ೬೦ || ೧೨೨೭ ||

ಅರ್ಥ : ಸ್ವಯಂ = ನಿಜದಿಂ, ಅಗುಣಂ = ಗುಣಮಿಲ್ಲದ, ವಸ್ತು = ಪದಾರ್ಥಂ, ಪಕ್ಷಪಾತಾತ್‌ = ಕ್ಕೆವಾರದತ್ತಣಿಂ, ಗುಣವತ್‌ = ಗುಣಮನುಳ್ಳುದು (ಷಾಡ್ಗುಣ್ಯ)ನಭವತಿ = ಆಗದು || ನಿರ್ಗುಣಿಗೆಪಕ್ಷಪಾತಂಬೇಡೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ನಖಲುಗೋಪಾಲಕಸ್ನೇಹಾದುಪೇಕ್ಷೋ[24]ಕ್ಷರತಿಕ್ಷೀರಂ|| ೬೧ || ೧೨೨೮ ||

ಅರ್ಥ : ಗೋಪಾಲಕಸ್ನೇಹಾತ್‌ = ಗೋವನಕೂರ್ಮೆಯಿಂಉಪೇಕ್ಷಾ = ಎಳ್ತು, ಕ್ಷೀರಂ = ಪಾಲಂ, ಖಲು = ನೆಟ್ಟನೆ, ನಕ್ಷರತಿ = ಕಱೇವುದಲ್ಲದು ||

ಇತಿವಿಚಾರಸಮುದ್ದೇಶಃ || ೨೭ ||[25]

ಸಮುದ್ದೇಶದವಾಕ್ಯಂಗಳುಃ || ೬೧ || ಒಟ್ಟು || ೧೨೨೮ ||

—-

೬೦. ತನ್ನದೇಆದಗುಣವಿಲ್ಲದವಸ್ತುವುಪಕ್ಷಪಾತವನ್ನುತೋರಿಸುವುದರಿಂದಗುಣವುಳ್ಳವಸ್ತುವಾಗದು.

೬೧. ದನಕಾಯುವವನಅತಿಶಯವಾದಒಲುಮೆಯಿಂದಎತ್ತುಹಾಲುಕರೆಯುವುದಿಲ್ಲ.

—-

 

[1]ಮೈ. ಚೌ. ಗ್ರಾಮೇಪುರೇವಾ. ಟೀಕಾಕಾರನುಹೇಳಿದಅರ್ಥಸ್ಪಷ್ಟವಿಲ್ಲ. ಪುರಎಂಬಪದಕ್ಕೆಹೊಲಎಂಬಅರ್ಥಸರಿಯಲ್ಲ. ಮೈ. ಚೌ. ಗಳಪಾಠದಂತೆ, ಗ್ರಾಮಮತ್ತುಪುರಗಳಲ್ಲಿನಿರ್ಣಯಿಸಲ್ಪಟ್ಟವ್ಯವಹಾರಗಳಲ್ಲಿಮತ್ತೆವಿವಾದವುಂಟಾದರೆಅರಸನಕಡೆಗೆಹೋಗಬೇಕುಎಂಬುದುಸಂದರ್ಭಕ್ಕೆಸರಿಯಾಗಿದೆ.

[2]ಮೈ. ಚೌ. ರಾಜ್ಞಾದೃಷ್ಟೇ. ನಮ್ಮಪ್ರತಿಯಲ್ಲಿಯರಾಜ್ಞಾಅದೃಷ್ಟೇಎಂಬಪಾಠವುಮತ್ತುಅರಸನುನೋಡದಿದ್ದ, ಅಂದರೆಪರೀಕ್ಷಿಸದಿದ್ದವ್ಯವಹಾರದಲ್ಲಿಅನುಮಾನಹೆಂಗೆಹಾಂಗೆಇಲ್ಲಎಂದುಟೀಕಾಕಾರನುಕೊಟ್ಟಅರ್ಥವುವಾಕ್ಯದಆಶಯಕ್ಕೆವಿರುದಧವಾಗಿದೆಯೆನಿಸುತ್ತದೆ. ಇತರಪಾಠಗಳಪ್ರಕಾರರಾಜನುನೋಡಿದಅಂದರೆನಿರ್ಣಯಿಸಿದವ್ಯವಹಾರದಲ್ಲಿಮರುವಿಚಾರಣೆಅಥವಾದೋಷವಿಲ್ಲಎಂಬಅರ್ಥವುಹೆಚ್ಚುಸೂಕ್ತವಾದುದು.

[3]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[4]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿದೆ.

[5]ಚೌ. ಈವಾಕ್ಯವಿಲ್ಲ. ಮೈ. ಯಾಶಕ್ತಸ್ಯಾಪರಾಧಿಷುಕ್ಷಮಾಸಾತಸ್ಯಾತ್ಮನಸ್ತಿರಸ್ಕಾರಃ.

[6]ಚೌ. ಈವಾಕ್ಯವಿಲ್ಲ.

[7]ಮೈ. ನಿಗ್ರಹಕರ್ತುಃರಾಜ್ಞಃಸರ್ಪಾದಿವ.

[8]ಚೌ. ಈವಾಕ್ಯವಿಲ್ಲ.

[9]ಮೈ. ಪ್ರತಾಪಃ.

[10]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[11]ಇದಕ್ಕೆಮೊದಲುಮೈ. ದಲ್ಲಿಒಂದುಹೆಚ್ಚಿನವಾಕ್ಯವಿದೆ.

[12]ಮೈ. ಈಮತ್ತುಮುಂದಿನನಾಲ್ಕುವಾಕ್ಯಗಳುಒಂದರಲ್ಲೇಅಡಕವಾಗಿವೆ.

[13]ಚೌ. ಶ್ರವಣಪೋತಸ್ಪರ್ಶನಾತ್‌.

[14]ಮೈ. ಚೌ. ಕಾರೂಣಾಂ.

[15]ಚೌ. ತಂಡುಲ.

[16]ಮೈ. ಅಂತ್ಯಾವಸಾಯಿನಾಂ.

[17]ಚೌ. ಜ್ವಲಿತೇಪುಮುರ್ಖೇಪು.

[18]ಮೈ. ಈವಾಕ್ಯವಿಲ್ಲ.

[19]ಚೌ. ಪರಂ. ನಮ್ಮಪ್ರತಿಯಲ್ಲಿಖರಂಎಂಬುದನ್ನುಪರಂಎಂದಾಗಲಿಕರಂಎಂದಾಗಲಿಓದಬೇಕು, ಕರಂಎಂದರೆಟೀಕೆಯಲ್ಲಿಬೆಟ್ಟತ್ತಾಗಿಎಂದುವಿವರಿಸಿದುದುಸರಿಯಾಗಿದೆ.

[20]ಮೂಗುದಾಣವಿಲ್ಲದಎತ್ತಿನಂತೆಮೂರ್ಖನನ್ನುನಿಗ್ರಹಿಸುವುದುಕಠಣ. ಬಿಗಿಹಿಡಿದರೆಸುಧಾರಿಸುವನುಎಂಬಅರ್ಥವಿದ್ದಂತಿದೆ.

[21]ಚೌ. ಈವಾಕ್ಯವಿಲ್ಲ.

[22]ಮೈ. (ಪಣ)

[23]ಇದಕ್ಕೆಮೊದಲುಮೈ. ದಲ್ಲಿಹೆಚ್ಚಿನವಾಕ್ಯವಿದೆ. ಚೌ. ದಲ್ಲಿಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿವೆ.

[24]ಮೈ. ಚೌ. ಉಷಾಇದೇಸರಿಯಾದಪಾಠ.

[25]ಇತಿವಿವಾದಸಮುದ್ದೇಶಃ೨೮ಎಂದಿರಬೇಕು.