ರಾಜಾತ್ಮದೈವದ್ರವ್ಯಪ್ರಕೃತಿಸಂಪನ್ನಃನಯವಿಕ್ರಮಯೋರಧಿಷ್ಠಾನಂವಿಜಿಗೀಷುಃ|| ೨೫ || ೧೨೫೩ ||

ಅರ್ಥ : ರಾಜಾ = ಅರಸಂ, ಆತ್ಮ = ತಾನುಂ, ದೈವ = ಪುಣ್ಯಮುಂ, ದ್ರವ್ಯ = ಅರ್ಥಮುಂ, ಪ್ರಕೃತಿ = ಪರಿಗ್ರಹಮುಮೆಂಬಿವಱಿಂ, ಸಂಪನ್ನಃನೆಱೆದ, ನಯ = ನೀತಿಯುಂ, ವಿಕ್ರಮಯೋಃ = ಶೌರ್ಯಮೆಂಬಿವಕ್ಕೆಅಧಿಷ್ಠಾನಂ = ಯೆಡೆಯಪ್ಪಂ, ವಿಜಿಗೀಷುಃ = ವಿಜಿಗೀಷುಯೆಂಬಂ || ಅರಿಯಲಕ್ಷಣಮಂಪೇಳ್ವುದುತ್ತರವಾಕ್ಯಂ :

ಏವಸ್ವಸ್ಯಾಹಿತಾನುಷ್ಠಾನೇನಪ್ರಾತಿಕೂಲ್ಯಂಭಿಭರ್ತಿಸಏವಾರಿಃ|| ೨೬ || ೧೨೫೪ ||

ಅರ್ಥ : ಯಃಏವ = ಆವನೋರ್ವನೇ, ಸ್ವಸ್ಯ = ತನಗೆ, ಅಹಿತಾನುಷ್ಠಾನೇನ = ಹಿತಮಲ್ಲದುದನೆಗಳ್ವುದಱಿಂ, ಪ್ರಾತಿಕೂಲ್ಯಂ = ಮಾರ್ಪಡೆತನಮುಂಬಿಭರ್ತಿ = ತಾಳ್ದನುಂ, ಸಏವ = ಆತನೇ, ಅರಿಃ = ಅರಿಎಂಬಂ ||

ಮಿತ್ರಲಕ್ಷಣಮುಕ್ತಂಪುರಸ್ತಾತ್|| ೨೭ || ೧೨೫೫ ||

ಅರ್ಥ : ಮಿತ್ರಲಕ್ಷಣಂ = ಮಿತ್ರನಸ್ವರೂಪಂ, ಉಕ್ತಂ = ಪೇಳಲ್ಪಟ್ಟದು, ಪುರಸ್ತಾತ್‌ = ಮುನ್ನಂ || ಪಾರ್ಷ್ಣಿಗ್ರಾಹನಲಕ್ಷಣಮಂಪೇಳ್ವುದುತ್ತರವಾಕ್ಯಂ :

ಯೋsತ್ರವಿಜಿಗೀಷೌಪ್ರಸ್ಥಿತೇಪ್ರತಿಷ್ಠಮಾಣೇವಾಪಶ್ಚಾತ್ಕೋಪಂಜನಯತಿಪಾರ್ಷ್ಣಿಗ್ರಾಹಃ|| ೨೮ || ೧೨೫೬ ||

ಅರ್ಥ : ವಿಜಿಗೀಷೌ = ವಿಜಿಗೀಷುವಪ್ಪಂ, ಪ್ರಸ್ಥಿತೇ = ಪಗೆಯಮೇಲೆನಡೆಯಲುಂ, ಪ್ರತಿಷ್ಠಮಾಣೇವಾ = ನಡೆವುತ್ತಿರಲ್‌ ಮೇಣ್‌, ಪಶ್ಚಾತ್‌ = ಪಿಂತೆ, ಯಃಆವನೋರ್ವಂ, ಕೋಪಂಜನಯತಿ = ಕೋಪಮಂಪುಟ್ಟಸುಗುಂ, ಸಃ = ಆತಂ (ಅತ್ರ= ಇಲ್ಲಿ) ಪಾರ್ಷ್ಣಿಗ್ರಾಹಃ = ಪಾರ್ಷ್ಣಿಗ್ರಾಹನೆಂಬಂ || ಆಕ್ರಂದನಲಕ್ಷಣಮಂಪೇಳ್ವುದುತ್ತರವಾಕ್ಯಂ :

—-

೨೫. ಬುದ್ಧಿಬಲ, ದೈವಬಲ, ಪ್ರಕೃತಿಸಂಪತ್ತುಉಳ್ಳವನಾಗಿನೀತಿ, ವಿಕ್ರಮಗಳನೆಲೆಯಾದರಾಜನುವಿಜಿಗೀಷುವು.

೨೬. ತನಗೆಅಹಿತಉಂಟಾದರೂವೈರಭಾವವುಳ್ಳವನುಶತ್ರುವು.

೨೭. ಮಿತ್ರನಲಕ್ಷಣವನ್ನುಮೊದಲೇಹೇಳಲಾಗಿದೆ.

೨೮. ವಿಜಗೀಷುವುವಿಜಯಯಾತ್ರೆಗೆಹೋರಟಮೇಲಾಗಲಿ, ಹೊರಟಿರುವಾಗಆಗಲಿಜನತೆಯಲ್ಲಿಅಂಜಿಕೆಯನ್ನುಹುಟ್ಟಿಸುವವನುಪಾರ್ಷ್ಣಿಗ್ರಾಹನು.

—-

ಪಶ್ಚಾದ್ವಿಜಿಗೀಷೋರ್ಮಿತ್ರಮಾಕ್ರಂದಃ|| ೨೯ || ೧೨೫೭ ||

ಅರ್ಥ : ವಿಜಿಗೀಷೋಃ = ವಿಜಿಗೀಷುವಿಂಗೆ, ಪಶ್ಚಾತ್‌ = ಪಿಂತಣ, ಮಿತ್ರಂ = ಕೆಳೆಯಂ, ಆಕ್ರಂದಃ = ಆಕ್ರಂದನೆಂಬಂ || ಆಸಾರಲಕ್ಷಣಮಂಪೇಳ್ವುದುತ್ತರವಾಕ್ಯಂ ||

ಪಾರ್ಪ್ಣಿಗ್ರಾಹಮಿತ್ರಮಾಸಾರಃಆಕ್ರಂದಮಿತ್ರಂವಾ|| ೩೦ || ೧೨೫೮ ||

ಅರ್ಥ : ಪಾರ್ಷ್ಣಿಗ್ರಾಹಮಿತ್ರಂ = ಪಾರ್ಷ್ಣಿಗ್ರಾಹನ = ಕೆಳೆಯನಂ, ಆಸಾರಃ = ಆಸಾರನೆಂಬುದು, ಆಕ್ರಂದಮಿತ್ರಂವಾ = ಆಕ್ರಂದನಕೆಳೆಯಂಮೇಣ್‌ ಆಸಾರನಂಬುದು || ಅಂತರ್ಧಿಯಲಕ್ಷಣಮಂಪೇಳ್ವುದುತ್ತರವಾಕ್ಯಂ :

ಅರಿವಿಜಿಗೀಷೋರ್ಮಂಡಲಾಂತರ್ವಿಹಿತವೃತಿರುಭಯವೇತನಃಪರ್ವತಾಟವ್ಯಾಶ್ರಯಶ್ಚಾಂತರ್ದ್ಧಿ|| ೩೧ || ೧೨೫೯ ||

ಅರ್ಥ : ಅರಿವಿಜಿಗೀಷೋಃ = ಅರಿ-ವಿಜಿಗೀಷುಎಂಬೀರ್ವರ, ಮಂಡಲಾಂತರ್ವಿಹಿತವೃತ್ತಿಃ = ನಾಡನಡುವಿರ್ಪಂ, ಉಭಯವೇತನಃ = ಈರ್ವರ್ಗಂ (ಎರಡುಕಡೆಯಲುಊಱುಕೇಱಿಗಳಕೊಂಬ) ಬೆಸಕೆಯಂ, ಪರ್ವತಾಟವ್ಯಾಶ್ರಯಶ್ಚ = ಪರ್ವತಂಅಡವಿಮೊದಲಾಗೊಡೆಯವಂಪೊರ್ದಿರ್ಪಂ, ಅಂತರ್ಧಿಃ = ಅಂತರ್ಧಿಎಂಬವಂ || ಇಂತಪ್ಪರೊಡನೆಕಾದುವುದೆಂಬುದುತ್ತರವಾಕ್ಯಂ)

—-

೨೯. ವಿಜಗೀಷುವಿನಹಿಂಬದಿಯಲ್ಲಿರುವಮಿತ್ರನುಆಕ್ರಂದನು.

೩೦. ಪಾರ್ಷ್ಣಿಗ್ರಾಹನಅಥವಾಆಕ್ರಂದನಮಿತ್ರನುಆಸಾರನು.

೩೧. ಶತ್ರು, ವಿಜಗೀಷುಗಳಮಂಡಲಗಳಮಧ್ಯದಲ್ಲಿದ್ದು, ಇಬ್ಬರಕಡೆಯಿಂದಲೂವೇತನವನ್ನುಪಡೆಯುತ್ತಪರ್ವತಗಳಮೇಲೆ, ಅಡವಿಗಳಲ್ಲಿವಾಸಿಸುವವನುಅಂತರ್ಧಿಯು.

—-

ಯೋರಾಜಾ[1]ವಿಜಿಗೀಷುಸ್ತೇನಲುಬ್ಧಕ್ಷುದ್ರವಿರಕ್ತಪ್ರಕೃತಿರನ್ಯಾಯಪರೋಪವ್ಯಸನಿವಿಪ್ರತಿಪನ್ನಾಮಾತ್ಯಮಿತ್ರಮಂತ್ರಿಸೇನಾಪತಿಸಾಮಂತಶತ್ರುರಭಿಯೋಕ್ತವ್ಯಃ|| ೩೨ || ೧೨೬೦ ||

ಅರ್ಥ : ಯಃ = ಆವನೋರ್ವಂ, ರಾಜಾ = ಅರಸಂ, ವಿಜಿಗೀಷು = ವಿಜಿಗೀಷುವಹನು, ತೇನ = ಆತನಿಂದ, ಲುಬ್ಧ = ಲೋಭಿಯಪ್ಪಂ (ಪ್ರಾಣದಲೋಭಮನುಳ್ಳ) ಕ್ಷುದ್ರ = ದುಷ್ಟನಪ್ಪಂ (ಕಪಟ) ವಿರಕ್ತ = ತನ್ನನೊಲ್ಲದನುಮಪ್ಪ, ಪ್ರಕೃತಿಃ = ಪರಿಗ್ರಹಮನುಳ್ಳಂ, ಅನ್ಯಾಯಪರಃ = ಆಉಕ್ತಿಯಿಂನೆಗಳ್ವ, ವ್ಯಸನಿ = ಪರದಾರಗಮನದ್ಯೂತಾದಿವೃಸವಮನುಳ್ಳಂ, ವಿಪ್ರತಿಪನ್ನ = ಪ್ರತಿಕೂಲರಾದ, ಮಿತ್ರ = ಕೆಳೆಯರುಂ, ಅಮಾತ್ಯ = ಪೆರ್ಗಡೆಯುಂ, ಮಂತ್ರಿ = ಮಂತ್ರಿಗಳುಂ, ಸೇನಾಪತಿ = ಪಡೆವಳರುಂ, ಸಾಮಂತ = ಸಾಮಂತರುಮೆಂಬಿವಱನುಳ್ಳಂ, ಶತ್ರು = ಪಗೆ, ಅಭಿಯೋಕ್ತವ್ಯ = ಕಾದಲೆಪಡುವಂ || ಅನುಕೂಲಪರಿಗ್ರಹಪ್ರಜೆಯನುಳ್ಳವ್ಯಸನಿಯಲ್ಲದಂನೀತಿಯೊಳ್‌ ನೆಗಳ್ವಸಮರ್ಥರೊಡನೆಕಾದಲ್ಕೆವೇಡೆಂಬುದುತಾತ್ಪರ್ಯಂ|| ಇಂತಪ್ಪಗಿಂತುಮಾಳ್ಕೆಂಬುದುತ್ತರವಾಕ್ಯಂ :

[2]ಅನಪಾಶ್ರಯೋದುರ್ಬಲಾಶ್ರಯೋವಾಶತ್ರುರುಚ್ಛೇದನೀಯೋವಿಪರ್ಯಯೋಪೀಡನೀಯಃಕರ್ಷಣಿಯೋವಾ|| ೩೩ || ೧೨೬೧ ||

ಅರ್ಥ : ಅನಪಾಶ್ರಯಃ = ಆಶ್ರಯಮಿಲ್ಲದ, ದುರ್ಬಲಾಶ್ರಯೋವಾ = ಬಲ್ಲಮಿಲ್ಲದನಂಪೊರ್ದಿದಂಮೇಣ್‌, ಶತ್ರುಃ = ಪಗೆ, ಉಚ್ಛೇದನೀಯಃ = ಕೆಡಿಸಲ್ಕೆಪಡುವಂ, ವಿಪರ್ಯಯೋsಪಿ = ಆಶ್ರಯಮುಳ್ಳೊಡಂ, ಬಲಮುಳ್ಳರಂಪೊರ್ದಿದೊಡಂ, ಪೀಡನೀಯಃ = ಪೀಡಿಸಲ್ಪಡುವಂ, ಕರ್ಷಣೀಯೋವಾ = ಬಡವಂ (ಘಾಸಿ)ಮಾಡೆಪಡುವಂಮೇಣ್‌ || ಎತ್ತಿಹೋಗಿಕಾದಲಾಗದು, ಸಾಮಗ್ರಿಯಿಲ್ಲದಪಗೆಯನೆಱಗಿಸುವುದುಕಿಡಿಸಲ್ಬಾರದಂತಪ್ಪನಂಸಂತಮಿರಲೀಯಬೇಡೆಂಬುದುತಾತ್ಪರ್ಯ || ಇಂತಪ್ಪಂಗೆಪಗೆಯಕ್ಕುಮಾಗದಿರಲುಮಕ್ಕುಮೆಂಬುದುರಕಾರಣಂಬೆರಸುಪೇಳ್ವುದುತ್ತರವಾಕ್ಯಂ :

—-

೩೨. ವಿಜಗೀಷುವಾದರಾಜನು, ಪ್ರಾಣಲೋಭವನ್ನುಳ್ಳವನ್ನೂ, ನೀಚನೂ, ಪ್ರಜೆಗಳಲ್ಲಿಅನುರಾಗವಿಲ್ಲದವನೂ, ಅನ್ಯಾಯಪರನೂ, ದುರ್ವ್ಯಸನಿಯೂಆದಮತ್ತುಪ್ರತಿಕೂಲಮಿತ್ರರುಅಮಾತ್ಯರು. ಮಂತ್ರಿಗಳುಸಾಮಂತರು, ಸೇನಾಧಿಪತಿಗಳುಇರುವಂಥಶತ್ರುವಿನಮೇಲೆಯುದ್ಧಕ್ಕೆಸಾಗಬೇಕು.

೩೩. ಆಶ್ರಯವಿಲ್ಲದ, ದುರ್ಬಲರನ್ನುಆಶ್ರಯಿಸಿದಶತ್ರುವನ್ನುನಿರ್ಮೂಲನಮಾಡಬೇಕು. ಶತ್ರುವುಆಶ್ರಯವುಳ್ಳವನಾದರೆಬಲವಂತನನ್ನುಆಶ್ರಯಿಸುವವನಾದರೆಅಂಥವನನ್ನುದಂಡಿಸಬೇಕು. ಅಥವಾತನ್ನಕಡೆಗೆಎಳೆದುಕೊಳ್ಳಬೇಕು.

—-

[3]ಸನಾಭಿಜನಃ[4]ಸಹಜಃಶತ್ರುರ್ವಿರೋದ್ಧೋವಿರೋದ್ಧಯಿತಾವಾಕೃತ್ರಿಮಃಶತ್ರುರನಂತರಃಶತ್ರುರೇಕಾಂತರಿತೋಮಿತ್ರಮಿತಿನೈಷಏಕಾಂತಃಕಾರ್ಯಂಹಿಮಿತ್ರತ್ವಾಮಿತ್ರತ್ವಯೋಃಕಾರಣಂಪುನರ್ವಿಪ್ರಕರ್ಷಸನ್ನಿಕರ್ಷೋವಾ|| ೩೪ || ೧೨೬೨ ||

ಅರ್ಥ : ಸನಾಭಿಜನಃ = ಅನ್ವಯದಿಂಬಂದವಿರೋಧಮನುಳ್ಳವನು, ಸಹಜಃಶತ್ರುಃವಿರೋದ್ಧಃ = ತನ್ನೊಳೆಡಱುವನುಂ, ವಿರೋದ್ಧಯಿತಾವಾ = ಮುನ್ನಿಲ್ಲದಕಲಹಮಂಮಾಡುತ್ತಿರ್ದಂಮೇಣ್‌, (ವಿರೋಧಿಸಿಕೊಂಬಾತನು) ಕೃತ್ರಿಮಃಶತ್ರುಃ = ಕೂಟದಿಂದಾದಪಗೆ, ಅನಂತರಃ = ನೆರದಾತಂ (ತನ್ನವರುವಾಯದಹಗೆ) ಶತ್ರುಃ = ಪಗೆ, ಏಕಾಂತರಿತಃಶತ್ರುಃ = ಏಕಾಂತರಿತಶತ್ರು, ಇತಿ = ಹೀಗೆ, ಸಹಜಕೃತ್ರಿಮೈಕಾಂತಭೇದದಿಂದಒಂದುನಾಡನೆಡೆಯಿಕ್ಕಿದನಾಡಾತಂ, ಮಿತ್ರಮಿತಿ = ಕೆಳೆಯನೆಂಬ, ಏಷಃ = ಈ, ಏಕಾಂತಃ = ನಿಯಮ, ನ = ಇಲ್ಲ, ಮತ್ತೇನೆಂದೊಡೆ, ಕಾರ್ಯಂಹಿ = ಪ್ರಯೋಜನಮೇ (ತಾನುಮಾಡುವಕಾರ್ಯವೇ) ಮಿತ್ರತ್ವ = ಕೆಳೆತನವಕ್ಕುಂ, ಅಮಿತ್ರತ್ವಯೋಃ = ಪಗೆಯುಮೆಂಬಿವಕ್ಕೆ, ಕಾರಣಂ = ಕಾರಣಂ, ಪುನಃ = ಮತ್ತೆ, ವಿಪ್ರಕರ್ಷ = ಗೆಂಟುಂ, ಸನ್ನಿಕರ್ಷೋವಾ = ಸಮೀಪಮುಮೆಂಬೀಎರಡುಂಯಥಾಕ್ರಮದಿಂಕೆಳೆಗಂಪಗೆಗಂಕಾರಣಮಲ್ಲವು || ಸವತಿಯಮಗಂಸಹಜಶತ್ರುವಸ್ತುಸ್ತ್ರೀಪೈಶೂನ್ಯಾಪರಾಧಾದಿಜನಿತಶತ್ರುತ್ವಂಕಾರಣಶತ್ರುತ್ವವೆಂಬುದುತಾತ್ಪರ್ಯಂ || ಶಕ್ತಿತ್ರಯಂಗಳ್‌ ಮಂತ್ರಶಕ್ತಿಯಂಪೇಳ್ವುದುತ್ತರವಾಕ್ಯಂ :

ಜ್ಞಾನಬಲಂ[5]ಮಂತ್ರಶಕ್ತಿಃ|| ೩೫ || ೧೬೩ ||

ಅರ್ಥ : ಜ್ಞಾನಬಲಂ = ಬುದ್ಧಿಯಬಲಂ, ಮಂತ್ರಶಕ್ತಿಃ = ಮಂತ್ರಶಕ್ತಿಯೆಂಬುದು || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಶಶಕೇನಸಿಂಹವ್ಯಾಪಾದನಮತ್ರದೃಷ್ಟಾಂತಃ[6]|| ೩೬ || ೧೨೬೪ ||

ಅರ್ಥ : ಶಶಕೇನ = ಮೊಲನಿಂ, ಸಿಂಹವ್ಯಾಪಾದನಂ = ಸಿಂಹದಕೊಲೆ, ಅತ್ರ = ಇಲ್ಲಿ, ದೃಷ್ಟಾಂತಃ = ದೃಷ್ಟಾಂತಂ || ಅಲ್ಲಿಂಪ್ರಭುಶಕ್ತಿಯಂಪೇಳ್ವುದುತ್ತರವಾಕ್ಯಂ :

—-

೩೪. ವಂಶಪಾರಂಪರ್ಯದಿಂದಬಂದವಿರೋಧವುಳ್ಳವನುಸಹಜಶತ್ರುವು. ವಿರೋಧಿಸುವವನೂ, ವಿರೋಧಕ್ಕೆಗುರಿಯಾದವನೂಕೃತ್ರಿಮಶತ್ರುವು, ದೂರದಲ್ಲಿಇರುವವನುಶತ್ರುವು. ಅವನಿಂದಆಚೆಗಿರುವವನುಮಿತ್ರನು. ಎಂದುನಿಶ್ಚಿತವಾಗಿಹೇಳುವುದಕ್ಕೆಅವಕಾಶವಿಲ್ಲ. ಏಕೆಂದರೆ, ಮಿತ್ರತ್ವಶತ್ರುತ್ವಗಳಿಗೆಕಾರಣವುಪರಸ್ಪರವಾದಪ್ರವರ್ತನೆಯೇವಿನಃದೂರ, ಹತ್ತರಎನ್ನುವುದುಕಾರಣವಲ್ಲ.

೩೫. ಮಂತ್ರಶಕ್ತಿಯೆಂಬುದುಬುದ್ಧಿಬಲ.

೩೬. ಮೊಲದಿಂದಸಿಂಹಕೊಲೆಯಾದುದುಇದಕ್ಕೆದೃಷ್ಟಾಂತ.

—-

[7]ಕೋಶದಂಡಬಲಂಪ್ರಭುಶಕ್ತಿಃ|| ೩೭ || ೧೨೬೫ ||

ಅರ್ಥ : ಕೋಶ = ಭಂಡಾರಮುಂ, ದಂಡಬಲಂ = ಚತುರಂಗದಬಲಂ, ಪ್ರಭುಶಕ್ತಿಃ = ಪ್ರಭುಶಕ್ತಿಯೆಂಬುದು || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಶೂದ್ರಿ[8]ಕಶಕ್ತಿಕುಮಾರಾವತ್ರದೃಷ್ಟಾಂತೌ|| ೩೮ | ೧೨೬೬ ||

ಅರ್ಥ : ಶೂದ್ರಿಕ = ಶೂದ್ರಿಕನುಂ, ಶಕ್ತಿಕುಮಾರೌ = ಶಕ್ತಿಕುಮಾರನುಮೆಂಬೀರ್ವರುಂ, ಅತ್ರ = ಇಲ್ಲಿ, ದೃಷ್ಟಾಂತೌ = ದೃಷ್ಟಾಂತಪುರುಷರ್ || ಅಲ್ಲಿಉತ್ಸಾಹಶಕ್ತಿಯಂಪೇಳ್ವುದುತ್ತರವಾಕ್ಯಂ :

ವಿಕ್ರಮಬಮಮುತ್ಸಾಹಶಕ್ತಿರತ್ರರಾಮೋದೃಷ್ಟಾಂತಃಹ|| ೩೯ || ೧೨೬೭ ||

ಅರ್ಥ : ವಿಕ್ರಮಬಲಂ = ಪರಾಕ್ರಮಬಲಂ, ಉತ್ಸಾಹಶಕ್ತಿಃ = ಉತ್ಸಾಹಶಕ್ತಿಎಂಬುದು, ಅತ್ರ = ಇಲ್ಲಿ, ರಾಮಃ = ರಾಮಸ್ವಾಮಿ[9], ದೃಷ್ಟಾಂತಃ = ಉಪಮೇಯಪುರುಷರ್‌ ||

ಶಕ್ತಿತ್ರಯೋಪಚಿತೋ[10]ಜ್ಯಾಯಾನ್|| ೪೦ || ೧೨೬೮ ||

ಅರ್ಥ : ಶಕ್ತಿತ್ರಯೋಪಚಿತಃ = ಮೂಱುಶಕ್ತಿಯೊಳ್ಕೂಡಿದಂ, ಜ್ಯಾಯಾನ್‌ = ಅರಸುಗಳೊಳುತ್ತಮಂ || ಅರಸಂಪ್ರಭುಮಂತ್ರೋತ್ಸಾಹಶಕ್ತಿಯಾಗಲ್ವೇಳ್ಕುಮೆಂಬುದುತಾತ್ಪರ್ಯಂ || ಇಂತಪ್ಪಂಹೀನನೆಂಬುದುತ್ತರವಾಕ್ಯಂ :

—-

೩೭. ಭಂಡಾರಮತ್ತುಚತುರಂಗಬಲಗಳು. ಪ್ರಭುಶಕ್ತಿ.

೩೮. ಶೂದ್ರಿಕ, ಶಕ್ತಿಕುಮಾರರುಇದಕ್ಕೆಉದಾಹರಣೆ

೩೯. ವಿಕ್ರಮಬಲವುಉತ್ಸಾಹಶಕ್ತಿ, ರಾಮನುಇದಕ್ಕೆಉದಾಹರಣೆ.

೪೦. ಮೂರುಶಕ್ತಿಗಳಿದ್ದವನುಶ್ರೇಷ್ಠನು.

—-

ಶಕ್ತಿತ್ರಯಾಪಚಿತೋಹೀನಃ || ೪೧ || ೧೨೬೯ ||

ಅರ್ಥ : ಶಕ್ತಿತ್ರಯಾಪಚಿತಃ = ಮೂಱುಶಕ್ತಿಗಳಿಲ್ಲದಂ, ಹೀನಃ = ಹೀನನು || ಜಘನ್ಯನೆಂಬುದುತಾತ್ಪರ್ಯಂ || ಇಂತಪ್ಪಂಸಮನೆಂಬುದುತ್ತರವಾಕ್ಯಂ :

ಸಮಾನಶಕ್ತಿತ್ರಯಃಸಮಃ|| ೪೨ || ೧೨೭೦ ||

ಅರ್ಥ : ಸಮಾನಶಕ್ತಿತ್ರಯಃ = ಮೂಱುಶಕ್ತಿಗಳಿಂಸಮನಪ್ಪಂ, ಸಮಃ = ಸಮನೆಂಬಂ || ಷಡ್ಗುಣಗಳಂಗಳಂಪೇಳ್ವುದುತ್ತರವಾಕ್ಯಂ :

ಸಂಧಿವಿಗ್ರಹಯಾನಾಸನಸಂಶ್ರಯದ್ವೈಧೀಭಾವಾಃಷಾಡ್ಗುಣ್ಯಂ|| ೪೩ || ೧೨೭೧ ||

ಅರ್ಥ : ಸಂಧಿ = ಸಂಧಿಯುಂ, ವಿಗ್ರಹ = ವಿಗ್ರಹಮುಂ, ಯಾನ = ಯಾನಮುಂ, ಆಸನ = ಆಸನಮುಂ, ಸಂಶ್ರಯ = ಸಂಶ್ರಯಮುಂ, ದ್ವೈಧೀಬಾವಾಃ = ದ್ವೈಧೀಭಾವಮುಮೆಂಬಿವು, ಷಾಡ್ಗುಣ್ಯಂ = ಅರಸುಗಳಆಱುಗುಣಂಗಳ್‌ || ಅಲ್ಲಿಸಂಧಿಯಂಪೇಳ್ವುದುತ್ತರವಾಕ್ಯಂ :

ಪಣಸಂಬಂಧಃಸಂಧಿಃ|| ೪೪ || ೧೨೭೨ ||

ಅರ್ಥ : (ತತ್ರ) ಪಣಸಂಬಂಧಃ = ಕಾರ್ಯಮಂಕುಱಿತ್ತುಅರ್ಥಮಂದೇಶಮಂಕುಡುವುದುಮೇಣ್‌, ಸಂಧಿಃ = ಸಂಧಿಎಂಬುದುಂ || ವಿಗ್ರಹಮಂಪೇಳ್ವುದುತ್ತರವಾಕ್ಯಂ :

ಅಪಕಾರೋ[11]ವಿಗ್ರಹಃ|| ೪೫ || ೧೨೭೩ ||

ಅರ್ಥ : ಅಪಕಾರಃ = ಕಲಹಂ, ವಿಗ್ರಹಃ = ವಿಗ್ರಹಮೆಂಬುದು || ಯಾನಮಂಪೇಳ್ವುದುತ್ತರವಾಕ್ಯಂ :

ಅಭ್ಯುಚ್ಚಯೋ[12]ಯಾನಂ|| ೪೬ || ೧೨೭೪ ||

ಅರ್ಥ : ಅಭ್ಯುಚ್ಚಯಃ = ನಡೆದರ್ಥಮನುಪಾರ್ಜಿಸುವುದು, ಪಗೆಗಿದಿರಾಗಿನಡೆವುದುಮೇಣ್‌, ಯಾನಂ = ಯಾನಮೆಂಬುದು || ಆಸನಮಂಪೇಳ್ವುದುತ್ತರವಾಕ್ಯಂ :

—-

೪೧. ಶಕ್ತಿಗಳಿಲ್ಲದವನುಹೀನನು.

೪೨. ಶಕ್ತಿತ್ರಯಗಳುಸಮಾನವಾಗಿಉಳ್ಳವನುಸಮನು.

೪೩. ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೈಧೀಭಾವಇವುಆರುಗುಣಗಳು.

೪೪. ಕಾರ್ಯಕ್ಕೆಸಂಬಂಧಿಸಿದಂತೆಅರ್ಥವನ್ನೂ, ಭೂಮಿಯನ್ನುಕೊಡುವ, ತೆಗೆದುಕೊಳ್ಳುವಒಪ್ಪಂದವುಸಂಧಿ.

—-

ಉಪೇಕ್ಷಣಮಾಸನಂ|| ೪೭ || ೧೨೭೫ ||

ಅರ್ಥ : ಉಪೇಕ್ಷಣಂ = ಕಾರ್ಯಮಂಕುಱೆತ್ತುಸಿರದೊಂದೆಡೆಯೊಳಿರ್ಪುದುಮೇಣ್‌ ಆಸನಮೆಂಬುದು || ಸಂಶ್ರಯಮಂಪೇಳ್ವುದುತ್ತರವಾಕ್ಯಂ :

ಪರಸ್ಯಾತ್ಮಾರ್ಪಣಂಸಂಶ್ರಯಃ|| ೪೮ || ೧೨೭೬ ||

ಪರಸ್ಯ = ಪೆಱಂಗೆಆತ್ಮಾರ್ಪಣಂ = ಈರಾಜ್ಯಾದಿಗಳ್ನಿನ್ನವೆಂದುತನ್ನಂಸಮರ್ಪಿಸುವುದುಂ, ಸಂಶ್ರಯಃ = ಸಂಶ್ರಯಮೆಂಬುದು || ದ್ವೈಧೀಭಾವಮಂಪೇಳ್ವುದುತ್ತರವಾಕ್ಯಂ :

ಏಕೇನಸಹಸಂಧಾಯಾನ್ಯೇನಸಹವಿಗ್ರಹಕರಣಮೇಕತ್ರವಾಶತ್ರೌಸಂಧಾನಪೂರ್ವಂವಿಗ್ರಹೋದ್ವೈಧೀಭಾವಃ|| ೪೯ || ೧೨೭೭ ||

ಅರ್ಥ : ಏಕೇನಸಹ = ಓರ್ವಶತ್ರುವಿನೊಡನೆ, ಸಂಧಾಯ = ನಂಟುಮಾಡಿ, ಅನ್ಯೇನಸಹ = ಮತ್ತೋರ್ವಶತ್ರುವಿನೊಡನೆ, ವಿಗ್ರಹಕರಣಂ = ಪಗೆಯಂಮಾಳ್ಪುದು, ದ್ವೈಧೀಭಾವಃ = ದ್ವೈಧೀಭಾವಮೆಂಬುದು, ವಾ = ಮೇಣ್‌, ಏಕತ್ರಶತ್ರೌ = ಒಬ್ಬನೇಶತ್ರುವಾದೊಡೆಆತನಲ್ಲಿ, ಸಂಧಾನಪೂರ್ವಂ = ನಂಟುಮುಂದಿಟ್ಟು, ವಿಗ್ರಹೋವಾ = ಕಲಹಂಮಾಳ್ಪುದುಮೇಣ್‌, ದ್ವೈಧೀಭಾವಃ = ದ್ವೈಧೀಭಾವಮೆಂಬುದು || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಪ್ರಥಮಪಕ್ಷೇಸಂಧೀಯಮಾನೋವಿಗೃಹೈಮಾಣೋವಿಜಿಗೀಷರಿತಿತ್ರ್ಯಾಶ್ರಯೋದ್ವೈಧೀಭಾವ[13]|| ೫೦ || ೧೨೭೮ ||

ಅರ್ಥ : ಪ್ರಥಮಪಕ್ಷೇ = ಮೊದಲಪಕ್ಷದೊಳ್‌, ಸಂಧೀಯಮಾನಃ = ಸಂಧಿಮಾಲ್ಪಡುತ್ತಿರ್ದ್ದಂ (ಸಂಧಾನವಮಾಡುತಲೆ) ವಿಗೃಹ್ಯಮಾಣಃ = ವಿರೋಧಂಮಾಡುತಿರ್ದಂಮೇಣ್‌, ವಿಜಿಗೀಷುರಿತಿ = ಗೆಲಲ್ವೇಡಿರ್ದನುಮೆಂದು, ತ್ರ್ಯಾಶ್ರಯಃ = ಮೂವಱಪೊಲನಾಗುಳ್ಳುದು, ದ್ವೈಧೀಭಾವಃ = ದ್ವೈಧೀಭಾವಮೆಂಬುದು :

—-

೪೭. ಕಾರ್ಯವನ್ನುಕುರಿತುಏನೂಹೇಳದೆ. ಸಮಯಕ್ಆಗಿನಿರೀಕ್ಷಿಸಿಕೊಂಡಿರುವುದುಆಸನ.

೪೮. ವೈರಿಗೆಆತ್ಮಾರ್ಪಣಮಾಡಿಕೊಳ್ಳುವುದುಸಂಶ್ರಯ.

೪೯. ಒಬ್ಬಶತ್ರುವಿನೊಡನೆಸಂಧಿಮಾಡಿಕೊಂಡು, ಮತ್ತೊಬ್ಬಶತ್ರುವಿನೊಂದಿಗೆವಿರೋಧವನ್ನುಮುಂದುವರಿಸುವುದುದ್ವೈಧೀಭಾವಇಲ್ಲವೆಒಬ್ಬನೇಶತ್ರುವಾದಲ್ಲಿಆತನಲ್ಲಿಸಂಧಾನವನ್ನುಮುಂದಿಟ್ಟುಕಲಹಮಾಡುವುದೂದ್ವೈಧೀಭಾವವು.

೫೦.ಮೊದಲಪಕ್ಷದಲ್ಲಿಸಂಧಿಮಾಡಿಕೊಳ್ಳುವುದು. ವಿರೋಧಿಸುವುದು, ಜಯಿಸುವಇಚ್ಛೆಯಿರುವುದು. ಎಂದುದ್ವೈಧೀಭಾವವುಮೂರುವಿಧವಾಗಿರುತ್ತದೆ.

—-

[14]ದ್ವಿತೀಯೇತುಪಕ್ಷೇದ್ವ್ಯಾಶ್ರಯಃ|| ೫೧ || ೧೨೭೯ ||

ಅರ್ಥ : ದ್ವಿತೀಯೇ = ಎರಡನೆಯ, ಪಕ್ಷೇ = ಪಕ್ಷದೊಳ್‌, ತು = ಮತ್ತೆ, ದ್ವ್ಯಾಶ್ರಯಃ = ಪಗೆವರು (ಸಂಧಿವಿಗ್ರಹವನೆಆಶ್ರಯಿಸಿ)ಮೆಂದೀರ್ವರನರಪೊಲನಾಗುಳ್ಳದು || ಪೇಳ್ವಾರುಗುಣಂಗಳೊಳ್ಸಂಧಿಯನಿಂತುಮಾಳ್ಪುದೆಂಬುದುತ್ತರವಾಕ್ಯಂ :

ಹೀಯಮಾನಃಪಣಬಂಧೇನಸಂಧಿಮುಪೇಯಾದ್ಯದ್ಯಸ್ತಿಪರೇಷಾಂಪರಿಪಣಿತೇsರ್ಥೇ[15]ಮರ್ಯಾದೋಲ್ಲಂಘನಂ|| ೫೨ || ೧೨೮೦ ||

ಅರ್ಥ : ಹೀಯಮಾನಃ = ಕುಂದುತ್ತಿರ್ದಂ, ಪಣಬಂಧೇನ = ದೇಶಮನರ್ಥಮಂಕುಡುವುದಱಿಂ, ಸಂಧಿಮುಪೇಯಾತ್‌ = ಸಂಧಿಯಂಮಾಳ್ಕೆ, ಪರಿಪಣಿತೇsರ್ಥೇ = ಕೊಟ್ಟರ್ಥದೊಳ್‌ (ಒಡಂಬಟ್ಟರ್ಥದಲ್ಲಿ) ಮರ್ಯಾದೋಲ್ಲಂಘನಂ = ಮರ್ಯಾದೆಯಂಮೀರುವುದು, ಪೆರೇಷಾಂ = ಪೆಱರ್ಗೆ, ಯದಿನಾಸ್ತಿ = ಇಲ್ಲಕ್ಕುಮಪ್ಪೊಡೆ || ಶಕ್ತಿಯಲ್ಲದಿರೆಕೊಟ್ಟುನಂಟಂಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪಂವಿಗ್ರಹಮಂಮಾಳ್ಪುದೆಂಬುದುತ್ತರವಾಕ್ಯಂ :

ಅಭ್ಯುಚ್ಚೀಯಮಾನಃಪರಂವಿಗೃಹ್ಣೀಯಾದ್ಯದಿನಾಸ್ತ್ಯಾತ್ಮಬಲೇಷುಕ್ಷೋಭಃ|| ೫೩|| ೧೨೮೧ ||

ಅರ್ಥ : ಅಭ್ಯುಚ್ಚೀಯಮಾನಃ = ಪೆರ್ಚ್ಚುತ್ತಿರ್ದಂ (ಎತ್ತಿನಡೆವಾತನು), ಪರಂ = ಪಗೆಯಂ, ವಿಗೃಹ್ಣೀಯಾತ್‌ = ಕಾದುಗೆ, ಆತ್ಮಬಲೇಷು = ತನ್ನಬಲಂಗಳೊಳ್‌, ಕ್ಷೋಭಃ = ಕದಡುಹಂ, ಯದಿನಾಸ್ತಿ = ಇಲ್ಲಕ್ಕುಮಪ್ಪೊಡೆ || ಯಾನಮನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೫೧. ಎರಡನೇಪಕ್ಷದಲ್ಲಿಸಂಧಿಯನ್ನಾಗಲಿವಿಗ್ರಹವನ್ನಾಗಲಿಆಶ್ರಯಿಸಿದಎರಡುವಿಧಗಳುಇರುತ್ತವೆ.

೫೨. ಒಪ್ಪಂದದಕರಾರುಗಳನ್ನುಶತ್ರುವುಉಲ್ಲಂಘಿಸಲಾರನುಎಂಬನಂಬಿಕೆಇರುವುದಾದರೆ, ದುರ್ಬಲಗೊಂಡುಸೋಲಬಹುದಾದರಾಜನುದೇಶಭಾಗವನ್ನಾಗಲಿ, ಹಣವನ್ನಾಗಲಿಕೊಡುವಷರತ್ತುಗಳಿಂದಕೂಡಿದಒಪ್ಪಂದವನ್ನುಮಾಡಿಕೊಳ್ಳಬೇಕು.

೫೩. ಏರಿಹೋಗುವತನ್ನಸೈನ್ಯದಲ್ಲಿಕ್ಷೋಭೆಇಲ್ಲವೆಂಬನಂಬಿಕೆಯಿದ್ದರೆಶತ್ರುವಿನೊಡನೆಕಾದಬಹುದು.

—-

 

[1]ಮೈ. ಚೌ. ಅರಾಜಬೀಜೀಲುಬ್ಧ.

[2]ಚೌ. ಈ. ವಾಕ್ಯವುಎರಡಾಗಿವಿಭಜಿಸಲ್ಪಟ್ಟಿದೆ.

[3]ಮೈ. ಈವಾಕ್ಯವುಎರಡರಲ್ಲಿವಿಭಜಿಸಲ್ಪಟ್ಟಿದೆ. ಚೌ. ಈವಾಕ್ಯವುಮೂರರಲ್ಲಿವಿಭಜಿಸಲ್ಪಟ್ಟಿದೆ.

[4]ಮೈ. ಚೌ. ಸಮಾಭಿಜನಃ.

[5]ಮೈ. ಚೌ. ಈವಾಕ್ಯವಿಲ್ಲ. ಇದಕ್ಕೆಬದಲಾಗಿಬುದ್ಧಿಶಕ್ತಿರಾತ್ಮಶಕ್ತೇರಪಿಗರೀಯಸಿಎಂಬವಾಕ್ಯವಿದೆ. ಮೈ. ದಲ್ಲಿಮುಂದಿನವಾಕ್ಯವುಇದಕ್ಕೆಸೇರಿದೆ.

[6]ಇಲ್ಲಿಮೊಲವುಸಿಂಹಕ್ಕೆಬಾವಿಯಲ್ಲಿಅದರಪ್ರತಿಬಿಂಬವನ್ನುತೋರಿಸಿಕೊಂದಪಂಚತಂತ್ರದಕತೆಯಉಲ್ಲೇಖವಿದೆ.

[7]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[8]ಶೂದ್ರಕಎಂದುಓದಬೇಕು. ಇಲ್ಲಿಶೂದ್ರಕನೆಂಬರಾಜನುತನ್ನಧನಹಾಗೂಸೈನ್ಯಬಲದಿಂದಶಕ್ತಿಕುಮಾರನೆಂಬನನ್ನುಕೊಂದಕಥೆಯಉಲ್ಲೇಖವಿದೆ.

[9]ದಾಶರಥಿರಾಮನದೈವತ್ವವನ್ನುಸೂಚಿಸುವುದಕ್ಕಾಗಿರಾಮಸ್ವಾಮಿಎಂಬಗೌರವಸೂಚಕಪದವನ್ನುಟೀಕಾಕಾರನುಬಳಸಿದ್ದಾನೆ.

[10]ಮೈ. ಚೌ. ಈಮತ್ತುಮುಂದಿನಎರಡುವಾಕ್ಯಗಳುಒಂದರಲ್ಲೇಅಡಕವಾಗಿವೆ.

[11]ಚೌ. ಅಪರಾಧೋ.

[12]ಚೌ. ಅಭ್ಯುದಯೋ. ಮೈ. ಎರಡೂಪಾಠಗಳಿವೆ.

[13]ಚೌ. ದ್ವೈಧೀಭಾವೋಬುದ್ಧ್ಯಾಶ್ರಯಃ.

[14]ಮೈ. ಈವಾಕ್ಯವುಹಿಂದಿನದರಲ್ಲಿಯೇಸೇರಿದೆ. ಚೌ. ಈವಾಕ್ಯವಿಲ್ಲ.

[15]ಚೌ. ವಿಪಣಿತೇ.