ಗುಣಾತಿಶಯಯುಕ್ತೋಯಾಯಾದ್ಯದಿಸಂತಿರಾಷ್ಟ್ರಕಂಟಕಾಃಭವತಿವಾಪಶ್ಚಾತ್ಕೋಪಃ|| ೫೪ || ೧೨೮೨ ||

ಅರ್ಥ : ಗುಣಾತಿಶಯಯುಕ್ತಃ = ವಿಜಿಗೀಷುಗುಣಸಾಮಗ್ರಿಯಿಂಕೂಡಿದಂ, ಯಾಯಾತ್‌ = ಪಗೆಯಮನೆಗೆನಡೆಗೆ, ರಾಷ್ಟ್ರಕಂಟಕಾಃ = ತನ್ನನಾಡಿಂಗೆಕಂಟಕರು, ಯದಿನಸಂತಿ = ಇಲ್ಲಕ್ಕುಮಪ್ಪೊಡೆ, ಪಶ್ಚಾತ್‌ = ಪಿಂತೆ, ಕೋಪಃ = ಕೋಪ, ಪಾರ್ಷ್ಣಿಗ್ರಾಹನಿಂಕ್ಷೋಭಂ, ನಭವತಿವಾ = ಆಗದಿರ್ಪಡೆಮೇಣ್‌ || ತನ್ನಭ್ಯುದಯಕಾಲದೊಳ್‌ ವಿಗ್ರಹಂಮಾಳ್ಪುದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಸ್ವಮಂಡಲಮನಪಾಯ[1]ಪರಮಂಡಲಾಭಿಯೋಗೋನಿವಸನೇನ[2]ಶಿರೋವೇಷ್ಟನಮಿವ|| ೫೫ || ೧೨೮೩ ||

ಅರ್ಥ : ಸ್ವಮಂಡಲಂ = ತನ್ನನಾಡಂ, ಅನಪಾಯ = ಕಾಯದೆ, ಪರಮಂಡಲಾಭಿಯೋಗಃ = ಪಗೆಯನಾಡಮೇಲೆನಡೆವುದು, ನಿವಸನೇನ = ಉಟ್ಟುದಱಿಂದಮೇ (ಸೀಱೆಯನುಬಿಟ್ಟು) ಶಿರೋವೇಷ್ಟನಮಿವ = ತಲೆಯಂಸುತ್ತುವಂತೆ ||

ಅಂಧಸ್ಯ[3]ರಜ್ಜುವಲನಮಿವ|| ೫೬ || ೧೨೮೪ ||

ಅರ್ಥ : ಅಂಧಸ್ಯ = ಕುರುಡನ, ರಜ್ಜುವಲನಮಿವ = ನೂಲಹೊಸೆಹದಂತಕ್ಕುಮೇಣ್‌ (ಸರವಿಯಹೊಸೆವಪರಿ) || ಆಸನವನಿಂತಪ್ಪಂಮಾಳ್ಕೆಂಬುದುತ್ತರವಾಕ್ಯಂ :

ಮಾಂಪರೋನಾಹಂಪರಮುಪಹಂತುಂಶಕ್ತಇತ್ಯಾಸೀತಯದ್ಯಾಯತ್ಯಾಮಸ್ತಿಕುಶಲಂ|| ೫೭ || ೧೨೮೫ ||

ಅರ್ಥ : ಮಾಂ = ಎನ್ನಂ, ಪರಂ = ಪೆಱಂ, ಉಪಹಂತುಂ = ಕೆಡಿಸಲ್ಕೆ, ನಶಕ್ತಃ = ಇತಿ = ಆಱನೆಂದಿಂತು, ನಿಶ್ಚಯಿಸಿ, ಆಸೀತ = ಉಸಿರದಿರ್ಕ್ಕೆ, ಆಯತ್ಯಾಂ = ಮೇಲೆ, ಕುಶಲಂ = ಒಳ್ಪು, ಯದ್ಯಸ್ತಿ = ಉಂಟಕ್ಕುಮಪ್ಪೊಡೆ || ತನಗೆಪೆರ್ಚ್ಚು-ಕುಂದುಮಿಲ್ಲದಸಮಕಾಲದೊಳ್‌ ವಿಗ್ರಹಮುಂಯಾನಮುಂಬೇಡೆಂಬುದುತಾತ್ಪರ್ಯಂ || ಇಂತಪ್ಪನಾಶ್ರಯಮಂಮಾಳ್ಪುದೆಂಬುದುತ್ತರವಾಕ್ಯಂ :

—-

೫೪. ತನ್ನನಾಡಿಗೆಕಂಟಕರಿಲ್ಲದಿದ್ದರೆಅಥವಾಕಾರ್ಯಾಚರಣೆಯನಂರತನ್ನವರುಕ್ರುದ್ಧರಾಗದಿದ್ದರೆಹೆಚ್ಚಿನಸಾಮರ್ಥ್ಯವಿರುವರಾಜನುದಂಡೆತ್ತಿಹೋಗಬಹುದು.

೫೫. ತನ್ನದೇಶವನ್ನುರಕ್ಷಿಸದೆಹಗೆಯಮೇಲೆಏರಿಹೋಗುವುದುಉಟ್ಟುದನ್ನುಬಿಚ್ಚಿತಲೆಗೆಸುತ್ತಿಕೊಂಡಂತೆ.

೫೬. ಇದುಕುರುಡನುಹಗ್ಗಹೊಸೆಯುವಂತೆ.

೫೭. ನನ್ನನ್ನುಶತ್ರುವುಕೊಲ್ಲಲಾರನು. ನಾನುಶತ್ರುವನ್ನುಕೊಲ್ಲಲಾರೆನುಎನ್ನುವಸ್ಥಿತಿಯಲ್ಲಿ. ಭವಿಷ್ಯತ್ತಿನಲ್ಲಿಅದುಕ್ಷೇಮಕರಎಂಬನಂಬಿಕೆಯಿರುವಪಕ್ಷದಲ್ಲಿ, ಏನನ್ನೂಮಾಡದಿರಬೇಕು.

—-

ಶಕ್ತಿಹೀನಃಸಂಶ್ರಯಂಕುರ್ಯಾದ್ಯದಿನಭವತಿಪರೇಷಾಮಾಮಿಷಂ|| ೫೮ || ೧೨೮೬ ||

ಅರ್ಥ : ಶಕ್ತಿಹೀನಃ = ಕಾದಲುಮಿರಲುಮಾಱದಂ, ಸಂಶ್ರಯಂಕುರ್ಯಾತ್‌ = ಸಂಶ್ರಯಮಂಮಾಳ್ಕೆ (ಬಲವಂತರಆಶ್ರಯವನುಮಾಳ್ಕೆ), ಪರೇಷಾಂ = ಪೆಱರ್ಗ್ಗೆ, ಆಮಿಷಂ = ಆಹಾರಂ (ತಿಂಗುಱಿ) ಯದಿನಭವತಿ = ಆಗನಕ್ಕುಮಪ್ಪೊಡೆ || ತನ್ನಂಕಿಡಿಸದನಂಪೊರ್ದುವುದೆಂಬುದುತಾತ್ಪರ್ಯಂ || ಇಂತಪ್ಪನಂಪೊರ್ದಲಾಗದೆಂಬುದುತ್ತರವಾಕ್ಯಂ :

ಬಲವದ್ಭಯಾದಬಲಾಶ್ರಯಣಂಹಸ್ತಿಭಯಾದೇರಂಡಾಶ್ರಯಣಮಿವ|| ೫೯ || ೧೨೮೭ ||

ಅರ್ಥ : ಬಲವದ್ಭಯಾತ್‌ = ಬಲ್ಲಿದನಭಯದತ್ತಣಿಂ, ಅಬಲಾಶ್ರಯಣಂ = ಬಲ್ಲಿದನಲ್ಲದವನಂಪೊರ್ದುವುದು, ಹಸ್ತಿಭಯಾತ್‌ = ಆನೆಯಭಯದಿಂ, ಏರಂಡಾಶ್ರಯಮಿವ = ಅವುಡಲಿಕೆಯಂಮಱೆಗೊಳ್ವಂತೆ ||

ಸ್ವಯಮಸ್ಥಿರೇಣಾಸ್ಥಿರಸ್ಯಾಶ್ರಯಣಂನದ್ಯಾಂವಹಮಾನೇನವಹಮಾನಸ್ಯಾಶ್ರಯಣಮಿವ|| ೬೦ || ೧೨೮೮ ||

ಅರ್ಥ : ಸ್ವಯಂ = ತಾಂ, ಅಸ್ಥಿರೇಣ = ಸ್ಥಿರನಲ್ಲದನಿಂ, ಅಸ್ಥಿರಸ್ಯ = ಸ್ಥಿರನಲ್ಲದನ, ಆಶ್ರಯಣಂ = ಪೊರ್ದುವುದು, ನದ್ಯಾಂ = ತೊಱೆಯೋಳ್‌, ವಹಮಾನೇನ = ಎಳೆಯಲ್ಪಡುತ್ತಿರ್ದನ, ಆಶ್ರಯಣಮಿವ = ಪೊರ್ದುವಮೆಂತಂತೆ || [4][ಪರಾಶ್ರಯ] ಸಲ್ಲೆಂಬುದುತ್ತರವಾಕ್ಯಂ :

—-

೫೮. ಇತರರುತನ್ನನ್ನುನುಂಗಿಬಿಡುವಸಂಭವವಿಲ್ಲದಿದ್ದರೆಶಕ್ತಿಹೀನನುಅವರನ್ನುಆಶ್ರಯಿಸಬೇಕು.

೫೯. ಬಲವಂತರಭಯದಿಂದದುರ್ಬಲರನ್ನುಆಶ್ರಯಿಸುವುದು. ಆನೆಗೆಹೆದರಿಔಡಲಗಿಡವನ್ನುಆಶ್ರಯಿಸಿದಂತೆ.

೬೦. ತಾನೇಸ್ಥಿರವಾಗಿಲ್ಲದವನುಅಸ್ಥಿರನೊಬ್ಬನನ್ನುಆಶ್ರಯಿಸುವುದುನದಿಯಲ್ಲಿಕೊಚ್ಚಿಹೋಗುತ್ತಿರುವವನುಅಂಥಹಇನ್ನೊಬ್ಬನನ್ನುಆಶ್ರಯಿಸಿದಂತೆ.

—-

ವರಂಮಾನಿನೋಮರಣಂಪರೇಚ್ಛಾನುವರ್ತನಾದಾತ್ಮವಿಕ್ರಯಃ[5] || ೬೧ || ೧೨೮೯ ||

ಅರ್ಥ : ಮಾನಿನಃ = ಅಭಿಮಾನಿಯಪ್ಪಂಗೆ, ಮರಣಂ = ಸಾವು, ವರಂ = ಒಳ್ಳಿತ್ತು, ಪರೇಚ್ಛಾನುವರ್ತನಾತ್‌ = ಪೆಱರಇಚ್ಛೆಯಲಿನಡೆವುದರಿಂದ, ಆತ್ಮವಿಕ್ರಯಃ = ತನ್ನಮಾಱುವುದು, ನ = ಒಳಿತಲ್ಲ || ಆಸೆಯಂಕಾಯಲಾರದನಂಪೊರ್ದಿಅವನಿಚ್ಛೆಯಂತನ್ನಂಮಾಱುವುದಱಿಂಪಗೆಗಿದಿರ್ಚ್ಚಿಸಾವುದುಲೇಸೆಂಬುದುತಾತ್ಪರ್ಯಂ || [ಇಂತಪ್ಪ]ಱನಂಪೊರ್ದಿಪುದೆಂಬುದುತ್ತರವಾಕ್ಯಂ :

ಆಯತಿಕಲ್ಯಾಣೀಸತಿಕಸ್ಮಿಂಶ್ಚಿತ್ಸಂಬಂಧೇಪರಸಂಶ್ರಯಃಶ್ರೇಯಾನ್|| ೬೨ || ೧೨೯೦ ||

ಅರ್ಥ : ಕಸ್ಮಿಂಶ್ಚಿತ್‌ = ಆವುದಾನುಮೊಂದು, ಸಂಬಂಧೇ = ನಂಟು, ಆಯತಿಕಲ್ಯಾಣೀ = ಮುಂದೆಲೇಸು, ಸತಿ = ಉಂಟಾಗುತ್ತಿರಲು, ಪರಸಂಶ್ರಯಃ = ಪೆಱನಂಪೊರ್ದುವುದು, ಶ್ರೇಯಾನ್‌ = ಒಳ್ಳಿತ್ತು || ಮೇಲೊಳ್ಳಿತಕ್ಕುಮೆಂದಱಿಯದೆನಂಟುಳ್ಳನುಮಂಪೊರ್ದಲಾಗದೆಂಬುದುತಾತ್ಪರ್ಯಂ || ಇಂತಪ್ಪಲ್ಲಿಮಾಳ್ಪುದೆಂಬುದುತ್ತರವಾಕ್ಯಂ :

ಅನ್ಯತ್ರ[6]ಶತ್ರಾಸಂಧಿವಿಗ್ರಹಾಭ್ಯಾಂದ್ವೈದೀಭಾವಂಗಚ್ಛೇದ್ಯದ್ಯನ್ಯೋsವಶ್ಯಮಾತ್ಮನಾಸಹೋತ್ಸಹೇತ|| ೬೨ || ೧೨೯೧ ||

ಅರ್ಥ : ಅನ್ಯತ್ರ = ಪಗೆಪೊಱಗಾಗಿ, ಮತ್ತೋರ್ವನಲ್ಲಿ, ಶತ್ರೌಚ = ಪಗೆಯೊಳಂ, ಸಂಧಿವಿಗ್ರಹಾಭ್ಯಾಂ = ಕ್ರಮದಿಂಸಂಧಿಯುಂ, ವಿಗ್ರಹಮುಮೆಂಬೆಱಡಱಿಂ, ದ್ವೈಧೀಭಾವಂ = ದ್ವೈಧೀಭಾವಕ್ಕೆ, ಗಚ್ಛೇತ್‌ = ಸಲ್ಗೆ, ಅನ್ಯಃ = ತನ್ನೊಳ್ಕೊಡಿದಪೆಱಂ, ಆತ್ಮನಾಸಹ = ತನ್ನೊಡನೆಮಾಡಿ, ಅವಶ್ಯ = ದಿಟದಿಂ, ಉತ್ಸಹೇತಯದಿ = ವಿಗ್ರಹಮಂಮಾಳ್ಕುಮಪ್ಪೊಡೆ, ಚಶಬ್ದದಿಂ ಪಗೆವನೋರ್ವನೊಳ್‌ ಸಂಧಿಯಂಮಾಡುತ್ತಂದಿಟ್ಟಕ್ಕೆವಿಗ್ರಹಮಂಮಾಳ್ಪುದು || ಯಭಿಚಾರಿಯಲ್ಲದೋsರ್ವನೊಳ್‌ ನಂಟಂಮಾಡಿಪಗೆವನೊಳಿಱಿವುದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೬೧. ಪರರಇಚ್ಛೆಯಂತೆನಡೆದುಆತ್ಮವಿಕ್ರಯಮಾಡಿಕೊಳ್ಳುವುದಕ್ಕಿಂತಆತ್ಮಾಭಿಮಾನಿಗೆಮರಣವೇಲೇಸು.

೬೨. ಭವಿಷ್ಯತ್ತಿನಲ್ಲಿಒಳ್ಳೆಯದಾಗುವಂತಿದ್ದರೆಯಾವದಾದರೂಒಂದುಸಂಬಂಧವನ್ನುಕಲ್ಪಿಸಿಕೊಂಡುಇತರರನ್ನುಆಶ್ರಯಿಸುವುದುಒಳ್ಳೆಯದು.

೬೩. ಅನ್ಯನುತನ್ನೊಂದಿಗೆಸೇರಿತಪ್ಪದೆವಿಜಯವನ್ನುಸಾಧಿಸುವಉತ್ಸಾಹವನ್ನುತೋರಿದರೆಅವನೊಂದಿಗೆಸಂಧಿ. ಶತ್ರುವಿನೊಂದಿಗೆವಿಗ್ರಹಹೀಗೆದ್ವೈಧೀಭಾವವನ್ನುಆಶ್ರಯಿಸಬೇಕು.

—-

ಬಲವದ್ದ್ವಯಮಧ್ಯಸ್ಥಿತಃಶತ್ರುರುಭಯಸಿಂಹಮಧ್ಯಗತಃಕರೀವಭವತಿಸುಖೇನಸಾಧ್ಯಃ|| ೬೪ || ೧೨೯೨ ||

ಅರ್ಥ : ಬಲವದ್ದ್ವಯಮಧ್ಯಸ್ಥಿತಃ = ಬಲ್ಲಿದಱೇರ್ವರನಡುವಿರ್ದ್ದ, ಶತ್ರು = ಪಗೆ, ಉಭಯಸಿಂಹಮಧ್ಯಗತಃ = ಸಿಂಹವೆಱಡಱನಡುವಿರ್ದ, ಕರೀವ = ಹಸ್ತಿಯಂತೆ, ಸುಖೇನ = ಸುಖದಿಂದ, ಸಾಧ್ಯಃ = ಸಾಧಿಸಲ್ಪಡುವಂ, ಭವತಿ = ಅಕ್ಕುಂ || ಬಲ್ಲಿದರೀರ್ವರೊಳ್‌ ಪಗೆಮಾಡವೇಡೆಂಬುದುತಾತ್ಪರ್ಯಂ || ಸಂಧಿಯಂಮಾಳ್ಪಲ್ಲಿದೇಶಮನಿಂತುಕುಡುವುದೆಂಬುದುತ್ತರವಾಕ್ಯಂ :

ಭೂಮ್ಯರ್ಥೀನಂ[7]ಭೂಫಲದಾನೇನಸಂಧಧ್ಯಾನ್ನತುಭುವಾಂಫಲದಾನಂನಿತ್ಯಂ|| ೬೫ || ೧೨೯೩ ||

ಅರ್ಥ : ಭೂಫಲದಾನೇನ = ಭೂಮಿಯಫಲಮಂಕುಡುವುದಱಿಂ, ಭೂಮ್ಯರ್ಥಿನಂ = ದೇಶಮಂಬೇಳ್ಪನಂ, ಸಂಧಧ್ಯಾತ್‌ = ಸಂಧಿಯಂಮಾಳ್ಕೆ, ಭುವಾಂ = ಭೂಮಿಗಳ, ಫಲದಾನಂ = ಫಲಮಂಕುಡುಹಂ, ನಿತ್ಯಂ = ಸ್ಥಿರಮಪ್ಪುದು, ನಾಸ್ತಿ = ಇಲ್ಲ || ಈನಾಡಿಂಗರ್ಥಮೆಂದುತೆಱುವುದಲ್ಲದೆದೇಶಮಂಕುಡಲಾಗದೆಂಬುದುತಾತ್ಪರ್ಯಂ || ದೇಶಮಂಕುಡುವುದಕ್ಕೆದೂಷಣಮಂಪೇಳ್ವುದುತ್ತರವಾಕ್ಯಂ :

ಪರೇಷುಗತಭೂಮಿರ್ಗತೈವ|| ೬೬ || ೧೨೯೪ ||

ಅರ್ಥ : ಪರೇಷು = ಪೆಱರಲ್ಲಿಗೆ, ಗತಾ = ಪೋದ, ಭೂಮಿಃ = ಭೂಮಿ, ಗತೈವ = ಸಲೆಪೋದುದೇ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೬೪. ಇಬ್ಬರುಬಲಿಷ್ಠರನಡುವೆಇರುವಶತ್ರುವುಎರಡುಸಿಂಹಗಳಮಧ್ಯೆಸಿಕ್ಕಿಕೊಂಡಆನೆಯಂತೆಸುಲಭವಾಗಿಸೋಲಿಸಲ್ಪಡುತ್ತಾನೆ.

೬೫. ಸಂಧಿಗೆತೊಡಗಿದಾಗಭೂಮಿಯನ್ನುಕೇಳುವವರಿಗೆಭೂಮಿಯಉತ್ಪತ್ತಿಯನ್ನುಕೊಡುವುದಾಗಿಒಪ್ಪಿಸಂಧಿಮಾಡಿಕೊಳ್ಳಬೇಕು. ಭೂಮಿಯಫಲವುಯಾವಾಗಲೂತಪ್ಪದೆಬರುತ್ತದೆಎನ್ನುವುದಂತೂಇಲ್ಲ.

೬೬. ಯಾಕೆಂದರೆಭೂಮಿಯುಇತರರಕೈಸೇರಿದರೆಅದುಹೋದಂತೆಯೇಸರಿ.

—-

ಅವಜ್ಞಯಾಪಿಭೂಮೌವಾರೋಪಿತಸ್ತರುರ್ಭವತಿ, ಬದ್ಧಮೂಲಃಕಿಂಪುನರ್ನಭೂಮಿಪತಿಃ|| ೬೮ || ೧೨೯೫ ||

ಅರ್ಥ : ಅವಜ್ಞಯಾಪಿ = ಎಳಿದಿಕೆಯಿಂದಮುಂ, ಭೂಮೌ = ನೆಲನೊಳ್‌, ಆರೋಪಿತಃ = ನಟ್ಟ, ತರುಃ = ಮರಂ, ಬದ್ಧಮೂಲಃ = ಬಲಿದಬೇರನುರ್ಳಳುದು, ಭವತಿ = ಅಕ್ಕುಂ, ಭೂಮಿಪತಿಃ = ಅರಸಂ, ಪುನಃ = ಮತ್ತೆ, ಕಿಂನ = ಏಂಬದ್ಧಮೂಲನಾಗನೇ || ಈರಾಜಕಾರ್ಯಮೀಕಾಲದೊಳಕ್ಕುಮೀಕಾಲದೊಳಾಗದೆಂಬನಿಯಮಮಿಲ್ಲೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ರಾಜಕಾರ್ಯೇಕಾಲನಿಯಮೋನಾಸ್ತಿಮೇಘವದುತ್ಥಾನಂರಾಜಕಾರ್ಯಾಣಾಂ|| ೬೮ || ೧೨೯೬ ||

ಅರ್ಥ : ರಾಜಕಾರ್ಯೇ = ಅರಸುಗಳಪ್ರಯೋಗದೊಳು, ಕಾಲನಿಯಮಃ = ಕಾಲನಿಯಮಂ, ನಾಸ್ತಿ = ಇಲ್ಲ, ರಾಜಕಾರ್ಯಾಣಾಂ = ರಾಜಕಾರ್ಯಂಗಳ, ಉತ್ಥಾನಂ = ಪುಟ್ಟುಹಂ, ಮೇಘವತ್‌ = ಮುಗಿಲ್ಗಳನೆಗಹಂ || ಕಾಲನಿಯಮಮಿಲ್ಲದೆಂತಕ್ಕುಮಂತೆ || ಇಂತಪ್ಪರಸುಪೆರ್ಚುವನೆಂಬುದುತ್ತರವಾಕ್ಯಂ :

ಉಪಾಯೋಪಪನ್ನವಿಕ್ರಮೋನುರಕ್ತಪ್ರಕೃತಿರಲ್ಪದೇಶೋsಪಿಭೂಪತಿರ್ಭವತಿಸಾರ್ವಭೌಮಃ|| ೬೯ || ೧೨೯೭ ||

ಅರ್ಥ : ಉಪಾಯೋಪಪನ್ನವಿಕ್ರಮಃ = ಉಪಾಯದೊಳ್‌ ಕೂಡಿದಪರಾಕ್ರಮಮನುಳ್ಳಂಅನುರಕ್ತಪ್ರಕೃತಿಃ = ತನಗೆಹಿತವರಪ್ಪಪರಿಗ್ರಹಮನುಳ್ಳಂ, (ಪ್ರಜೆಪರಿವಾರ) ಭೂಪತಿಃ = ಅರಸಂ, ಅಲ್ಪದೇಶೋsಪಿ = ಕಿಱಿದಪ್ಪನಾಡನುಳ್ಳನಾಗಿಯುಂ, ಸಾರ್ವಭೌಮಃ = ಚಕ್ರವರ್ತಿ, ಭವತಿ = ಅಕ್ಕುಂ || ಉಪಾಯಶೌರ್ಯಪ್ರಜಾನುರಾಗಮಿಲ್ಲದಂಕಿಡುವನೆಂಬುದುತಾತ್ಪರ್ಯಂ || ಈಯರ್ಥಮನೆಸಮರ್ಥಿಸಿಪೇಳ್ವುದುತ್ತರವಾಕ್ಯಂ :

ನಹಿಕುಲಾಗತಾಕಸ್ಯಾಪಿಭೂಮಿಃಕಿಂತುವೀರಭೋಜ್ಯಾ[8]ವಸುಂಧರಾ|| ೭೦ || ೧೨೯೮ ||

ಅರ್ಥ : ಕಸ್ಯಾಪಿ = ಆವಂಗಂ, ಕುಲಾಗತಾ = ಅನ್ವಯದಿಂದಬಂದ, ಭೂಮಿಃ = ದೇಶಂ, ಹಿ = ನಿಶ್ಚಯದಿಂ, ನ = ಇಲ್ಲ, ಕಿಂತು = ಮತ್ತೆ, ವೀರಭೋಜ್ಯಾ = ಕಲಿಯಿಂಭೋಗಿಸಲ್ಪಡುವುದು, ವಸುಂಧರಾ = ನೆಲನುಂ || ಉಪಾಯಂಗಳಿವೆಂಬುದುತ್ತರವಾಕ್ಯಂ :

—-

೬೭. ತಿಳಿಯದೆಭೂಮಿಯಲ್ಲಿನೆಟ್ಟಮರವುಸಹಬಲಿತುಬೇರುಬಿಟ್ಟುಬೆಳೆಯುತ್ತದೆ. ಹೀಗಿರುವಲ್ಲಿರಾಜನುಸ್ಥಿರವಾಗಿನಿಲ್ಲಲಾರನೇ?

೬೮. ರಾಜಕಾರ್ಯದಲ್ಲಿಕಾಲನಿಯಮಎಂಬುದಿಲ್ಲಮೇಘಗಳಂತೆಅದುಹಠಾತ್ತಾಗಿಹುಟ್ಟಿಕೊಳ್ಳುತ್ತದೆ.

೬೯. ಉಪಾಯದಿಂದಕೂಡಿದಪರಾಕ್ರಮವುಳ್ಳವನೂ. ಅನುರಾಗದಿಂಕೂಡಿದಪ್ರಜೆಗಳುಳ್ಳವನೂಆದರಾಜನುಚಿಕ್ಕದಾದರಾಜ್ಯವುಳ್ಳವನಾದರೂಸಾರ್ವಭೌಮನಾಗುತ್ತಾನೆ.

೭೦. ಭೂಮಿಯುಯಾರಿಗೂಕುಲಕ್ರಮದಿಂದಬರುವುದಲ್ಲ. ಅದುವೀರರಿಂದಮಾತ್ರಅನುಭವಿಸಲ್ಪಡುತ್ತದೆ.

—-

ಸಾಮೋಪಪ್ರದಾನಭೇದದಂಡೋಪಾಯಾಃ[9]|| ೭೧ || ೧೨೯೯ ||

ಅರ್ಥ : ಸಾಮ = ಸಾಮಮುಂ, ಉಪಪ್ರದಾನ = ಉಪಪ್ರದಾನಮುಂ, ಭೇದ = ಭೇದಮುಂ, ದಂಡ = ದಂಡಮುಮೆಂಬಿವುಉಪಾಯಂಗಳು || ಅಲ್ಲಿಸಾಮಭೇದಮಂಪೇಳ್ವುದುತ್ತರವಾಕ್ಯಂ :

ತತ್ರಸಾಮಪಂಚವಿಧಂಗುಣಸಂಕೀರ್ತನಂ, ಸಂಬಂಧೋಪಾಖ್ಯಾನಂ, ಪರಸ್ಪರೋಪಕಾರದರ್ಶನಮಾಯತಿಪ್ರದರ್ಶನಮಾತ್ಮೋಪನಿವಾಸನಮಿತಿ[10]|| ೭೨ || ೧೩೦೦ ||

ಅರ್ಥ : ತತ್ರ = ಅಲ್ಲಿ, ಸಾಮ = ಸಾಮಮೆಂಬುಪಾಯಂ, ಪಂಚವಿಧಂ = ಆಯ್ದುತೆಱಂ, ಗುಣಸಂಕೀರ್ತನಂ = ಪ್ರತ್ಯಕ್ಷಪರೋಕ್ಷಂಗಳೊಳುಪೆಱನಗುಣಮಂಪೊಗಳ್ಪುದುಂ, ಸಂಬಂಧೋಪಾಖ್ಯಾನಂ = ಪಿರಿಯರಿಂಬಂಧಸ್ನೇಹಸಂಬಂಧಮಂಪೇಳ್ವುದುಂ, ಪರಸ್ವರೋಪಕಾರದರ್ಶನಂ = ಓರೋರ್ವರ್ಗುಪಕಾರಮಂತೋರ್ಪುದುಂ (ಮಾಡಿದುಪಕಾರಂಗಳನಾಡಿತೋಱುಹವು) ಆಯತಿಪ್ರದರ್ಶನಂ = ಮೇಲಪ್ಪಹಿತಪ್ರಯೋಜನಮಂತೋರ್ಪುದುಂ, ಆತ್ಮೋಪನಿವಾಸನಮಿತಿ = ತನ್ನಂಸಮೀಪಂಮಾಳ್ಪನೆಂದಿಂತು || ಅವರೊಳ್ಕಡೆಯಉಪಾಯದಸ್ವರೂಪಮಂಪೇಳ್ವುದುತ್ತರವಾಕ್ಯಂ :

ಯನ್ಮದ್ದ್ರವ್ಯಂತದ್ಭವತಾಸ್ವಕೃತ್ಯೇಷುಪ್ರಯುಜ್ಯತಾಮಿತ್ಯಾತ್ಮೋಪನಿದಾನಂ|| ೭೩ || ೧೩೦೧ ||

ಅರ್ಥ : ಯತ್‌ = ಆವುದೊಂದು, ಮದ್ದ್ರವ್ಯಂ = ಎನ್ನೊಡಮೆ, ತತ್‌ = ಅದು, ಭವತಾ = ನಿನ್ನಿಂ, ಸ್ವಕೃತ್ಯೇಷು = ನಿನ್ನಕಾರ್ಯಂಗಳೊಳು, ಪ್ರಯುಜ್ಯತಾಮಿತಿ = ಯೋಜಿಸಲ್ಪಡುವುದು, ಆತ್ಮೋಪನಿದಾನಂ = ಆತ್ಮೋಪನಿದಾನಮೆಂಬುದು ||

—-

೭೧. ಸಾಮ, ದಾನ, ಭೇದ, ದಂಡಗಳುಉಪಾಯಗಳು.

೭೨. ಗುಣಗಳನ್ನುಹೊಗಳುವದು, ತಮ್ಮಲ್ಲಿರುವಹಿರಿಯರಿಂದಬಂದಸಂಬಂಧಗಳನ್ನುಕುರಿತುಹೇಳಿಕೊಳ್ಳುವುದು. ಪರಸ್ಪರವಾಗಿಉಪಕಾರಪ್ರದರ್ಶನ, ಭವಿಷ್ಯತ್ತಿನಲ್ಲಿಒದಗಬಹುದಾದಹಿತಪ್ರಯೋಜನಗಳನ್ನುತೋರಿಸುವುದು. ತನ್ನನ್ನುಹತ್ತಿರದವನನ್ನಾಗಿಮಾಡಿಕೊಳ್ಳುವುದು. ಇವುಸಾಮದಐದುವಿಧಗಳು.

೭೩. ನನ್ನದ್ರವ್ಯವನ್ನುನೀನು. ನಿನ್ನಕೆಲಸಗಳಲ್ಲಿವಿನಿಯೋಗಿಸಿಕೊಳ್ಳಬಹುದುಎನ್ನುವುದುಆತ್ಮೋಪನಿವಾದಾನವೆಂಬಉಪಾಯ.

—-

[11]ಸಾಮ್ಯೇನಯತ್ರಸಿದ್ಧಿರ್ನತತ್ರದಂಡೋಬುಧೇನವಿನಿಯೋಜ್ಯಃ|| ೭೪ || ೧೩೦೨ ||

ಅರ್ಥ : ಸಾಮ್ಯೇನ = ಸಾಮದಿಂ, ಯತ್ರ = ಆವುದೊಂದುಕಾರ್ಯದಲ್ಲಿಯ, ಸಿದ್ಧಿಃ = ಸಿದ್ಧಿಯು, ನ = ಇಲ್ಲ, ತತ್ರ = ಅಲ್ಲಿ, ದಂಡಃ = ದಂಡವು, ಬುಧೇನ = ನೀತಿವಿದನಿಂದ, ನವಿನಿಯೋಜ್ಯಃ = ಪ್ರಯೋಗಿಸಲುಯೋಗ್ಯವಲ್ಲ[12] || ಈಉಪಾಯಂಗಳಪರನರೂಕ್ಷಹೃದಯಮಂನನಯಿಸುವುದೆಂಬುದುತಾತ್ಪರ್ಯಂ || ಉಪಪ್ರದಾನದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಬಹ್ವುರ್ಥಸಂರಕ್ಷಣಾಯಾಲ್ಪಾರ್ಥದಾನೇನಪರಪ್ರಸಾಧನಮುಪಪ್ರದಾನಂ|| ೭೫ || ೧೩೦೩ ||

ಅರ್ಥ : ಬಹ್ವರ್ಥಸಂರಕ್ಷಣಾಯ = ಪಿರಿದಪ್ಪಧನಮಂರಕ್ಷಿಸಲವೇಡಿ, ಅಲ್ಪಾರ್ಥದಾನೇನ = ಕಿಱಿದಪ್ಪರ್ಥಮಂಕುಡುವುದಱಿಂ, ಪರಪ್ರಸಾಧನಂ = ಪೆಱಗೆಪ್ರೀತಿಯಹುಟ್ಟಿಸುವುದು, ಉಪಪ್ರಧಾನಂ = ಉಪಪ್ರದಾನಮೆಂಬುದು || ಕಿಱಿದಂಕುಡದೆಪಿರಿದಂಕಿಡಿಸಲಾಗದೆಂಬುದುತಾತ್ಪರ್ಯಂ || ಭೇದದಲಕ್ಷಣಮಂಪೇಳ್ವುದುತ್ತರವಾಕ್ಯಂ :

ಯೋಗತೀಕ್ಷಗೂಢಪುರುಷೋಭಯವೇತನೈಃಪರಬಲಸ್ಯಪರಸ್ಪರಶಂಕಾಜನನಂನಿರ್ಭತ್ಸನಂವಾಭೇದಃ|| ೭೬ || ೧೩೦೪ ||

ಅರ್ಥ : ಯೋಗಃ = ಯೋಗಪುರುಷರುಷರುಂ, ತೀಕ್ಷ್ಣ = ಕ್ರೂರರುಂ, ಗೂಢಪುರುಷಾಃ = ಹೆರಿಗರರುಂಉಭಯನೇತನ್ಯಃಈರ್ವ್ವರಸಂಬಂಧಮಪ್ಪಪುರುಷರುಮೆಂದಿವರಿಂ, ಪರಬಲಸ್ಯ = ಪಗೆವಡೆಯ, ಪರಸ್ಪರ = ಓರೋರ್ವರ್ರೋಳ್‌, ಶಂಕಾಜನನಂ = ಶಂಕೆಯಂಪುಟ್ಟಿಸುವುದುಂ, ನಿರ್ಭೇದನಂವಾ = ಬೇರ್ಕೆಯ್ವದುಮೇಣ್‌ (ಓರೋರ್ವರನುದಟ್ಟಿಸಿನುಡಿಹವುಮೇಣ್‌)ಭೇದಃ = ಭೇದಮೆಂಬುದು || ಪಗೆವಡೆಯನೊಡೆದುಬಡವುಮಾಡಿಕಾದುವುದೆಂಬುದುತಾತ್ಪರ್ಯಂ || ದಂಡದಲಕ್ಷಣಮಂಪೇಳ್ವುದುತ್ತರವಾಕ್ಯಂ :

—-

೭೪. ಸಾಮದಿಂದಕಾರ್ಯಸಿದ್ಧಿಯಾಗುವಲ್ಲಿದಂಡವನ್ನುಬುದ್ಧಿವಂತನುಪ್ರಯೋಗಿಸಬಾರದು.

೭೫. ಹೆಚ್ಚಿನಧನವನ್ನುಸಂರಕ್ಷಿಸಿಕೊಳ್ಳುವುದಕ್ಕಾಗಿ. ಸ್ವಲ್ಪಧನವನ್ನುಕೊಟ್ಟುಇನ್ನೊಬ್ಬನಿಗೆಸಂತೋಷವನ್ನುಂಟುಮಾಡುವುದುಉಪಪ್ರದಾನ.

೭೬. ಯೋಗಪುರುಷರು, ಕ್ರೂರರು, ಗೂಢಪುರುಷರು (ಹೆಂಗಸರು, ಗೂಢಚಾರರು) ಉಭಯವೇತನರು (ಎರಡಪಕ್ಷಗಳಿಂದಲೂವೇತನವನ್ನುಪಡೆಯುವವರು), ಇವರುಗಳಿಂದಶತ್ರುಸೈನ್ಯದಲ್ಲಿಪರಸ್ಪರಶಂಕೆಯನ್ನುಅಥವಾದ್ವೇಷವನ್ನುಹುಟ್ಟಿಸುವುದುಭೇದವು.

—-

ವಧಃಪರಿಕ್ಲೇಶೋsರ್ಥಹರಣಂವಾದಂಡಃ|| ೭೭ || ೧೩೦೫ ||

ಅರ್ಥ : ವಧಃ = ಕೊಲೆಯುಂ, ಪರಿಕ್ಲೇಶಃ = ದುಃಖಂಬಡಿಪುದುಂ, ಅರ್ಥಹರಣಂವಾ = ಅರ್ಥಮಂಕೊಳ್ವುದುಮೇಣ್‌, ದಂಡಃ = ದಂಡಮೆಂಬುದು || ದುಷ್ಟರ್ದಂಡದಿಂದಲ್ಲದಳ್ಕರೆಂಬುದುತಾತ್ಪರ್ಯಂ || ಪಗೆಯುತ್ತಣಿಂಬಂದನಮನಿಂತುಕ್ಕೆಕೊಳ್ವುದೆಂಬುದುತ್ತರವಾಕ್ಯಂ

ಕಿಮಾರಣ್ಯಜಮೌಷಧಂಭವತಿಕ್ಷೇಮಾಯ|| ೭೯ || ೧೩೦೭ ||

ಅರ್ಥ : ಅರಣ್ಯಜಂ = ಅಡವಿಯೊಳ್‌ ಪುಟ್ಟಿದ, ಔಷಧಂ = ಮರ್ದು, ಕ್ಷೇಮಾಯ = ಆರೋಗ್ಯಕ್ಕೆಕಾರಣಂ, ಕಿಂನಭವತಿ = ಏನಾಗದೇ || ಪಗೆಯತ್ತಣಿಂಬಂದದುಷ್ಟನನಿಂತುಮಾಳ್ಕೆಂಬುದುತ್ತರವಾಕ್ಯಂ :

ಗೃಹಪ್ರವಿಷ್ಟಃಕಪೋತಇವಾಲ್ಪೋsಪಿಶತ್ರುಸಂಬಂಧಿಲೋಕಸ್ತಂತ್ರಮುದ್ವಾಸಯತಿ|| ೮೦ || ೧೩೦೮ ||

ಅರ್ಥ : ಗೃಹಪ್ರವಿಷ್ಟಃ = ಮನೆಯೊಳ್ಪೊಕ್ಕ, ಕಪೋತಇವ = ಹೊಱಸಿನಂತೆ, ಶತ್ರುಸಂಬಂಧಿ = ಪಗೆಯಸಂಬಂಧಿಯಪ್ಪ, ಲೋಕಃ = ಜನಂ, ಅಲ್ಪೋಪಿ = (ಸ್ವಲ್ಪ) ಎಳಿದುದಾಗಿಯುಂ, ತಂತ್ರಂ = ಪರಿಗ್ರಹಮಂ, ಉದ್ವಾಸಯತಿ = ಎತ್ತಿಕಳೆವುದುಂ || ಬಂದನಧಿಕನೆನ್ನದೆಪಗೆಯತ್ತಣಿಂಬಂದ ದುಷ್ಟನನಾವನನಾದೊಡಂಕೈಕೊಳಲಾಗದೆಂಬುದುತಾತ್ಪರ್ಯಂ || ಇಂತಪ್ಪಲಾಭಲೇಸೆಂಬುದುತ್ತರವಾಕ್ಯಂ :

—-

೭೭. ಕೊಲ್ಲುವುದು, ಹಿಂಸಿಸುವುದುಅಥವಾಅರ್ಥಹರಣವುದಂಡವು.

೭೮. ಶತ್ರುವಿನಕಡೆಯಿಂದಬಂದವರನ್ನುಲೇಸಾಗಿಪರೀಕ್ಷಿಸಿಒಳ್ಳೆಯವನನ್ನುಅನುಗ್ರಹಿಸಬೇಕು.

೭೯. ಅಡವಿಯಲ್ಲಿಹುಟ್ಟಿದಮೂಲಿಕೆಯುಆರೋಗ್ಯಕ್ಕೆಹಿತವಾಗದೆ?

೮೦. ಶತ್ರುವಿಗೆಸಂಬಂಧಿಸಿದವನುಅಲ್ಪನಾದರೂಮನೆಯೊಳಗೆಹೊಕ್ಕಪರಿವಾಳದಂತೆರಕ್ಷಣಾವ್ಯವಸ್ಥೆಯನ್ನುಅಸ್ತವ್ಯಸ್ತಗೊಳಿಸುತ್ತಾನೆ.

—-

 

[1]ಮೈ. ಚೌ. ಅಪರಿಪಾಲಯತಃ.

[2]ಮೈ. ಚೌ. ವಿವಸನಸ್ಯ.

[3]ಮೈ. ಹಿಂದಿನವಾಕ್ಯದಲ್ಲಿಯೇಸೇರಿದೆ. ಚೌ. ಮುಂದಿನವಾಕ್ಯದಲ್ಲಿಸೇರಿದೆ. ಮುದ್ರಣದೋಷವೆಂದುತೋರುತ್ತದೆ.

[4]ತಾಡೋಲೆಮುರಿದಿದ್ದರಿಂದಕೆಲಅಕ್ಷರಗಳುಹೋಗಿವೆ, ಇರಬಹುದೆಂದುನಮ್ಮಲಿಪಿಕಾರನುಕಂಸಗಳಲ್ಲಿಸೂಚಿಸಿದ್ದಾನೆ.

[5]ಹೋಲಿಸಿರಿವರಂತೇಜಸ್ವಿನೋಮೃತ್ಯುಃನತುಮಾನವಖಂಡನಂ (ಕಪ್ಪೆಆರಭಟ್ಟನಶಾಸನ, ಬಾದಾಮಿ).

[6]ಮೈ. ಚೌ. ಇದಕ್ಕೆಮುಂಚೆಇನ್ನೊಂದುವಾಕ್ಯವಿದ್ದುಅದುನಮ್ಮಪ್ರತಿಯಲ್ಲಿಮುಂದೆಬಂದಿದೆ. ಚೌ. ದಲ್ಲಿಅದುಮತ್ತುಮುಂದಿನದುಅರ್ಧಮರ್ಧಕೂಡಿಕೊಂಡುಅರ್ಥಕ್ಕೆವ್ಯತ್ಯಯುವುಂಟಾಗಿದೆ.

[7]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[8]ಹೋಲಿಸಿರಿನಶ್ರೀಕುಲಕ್ರಮಂಯಾತಿಶಾಸನೇಲಿಖಿತಾಪಿವಾಖಡ್ಗಮಾಶ್ರಯತೇಲಕ್ಷ್ಮೀಃವೀರಭೋಜ್ಯಾವಸುಂಧರಾ. (Karnatak Inscriptions, Vol. No. 25, lines 66-67)

[9]ಮೈ. ಚೌ. ದಂಡಾಉಪಾಯಾಃ.

[10]ಮೈ. ಆತ್ಮೋಪನಿದಾನಂ, ಚೌ, ಆತ್ಮೋಪನಿಬಂಧನಂ. ಮುಂದಿನವಾಕ್ಯದಲ್ಲಿನಮ್ಮಪ್ರತಿಯಲ್ಲಿನಿವಾಸನಂಬದಲಾಗಿನಿದಾನಎಂದೇಇದೆ.

[11]ಮೈ. ಚೌ. ಈವಾಕ್ಯವಿಲ್ಲ.

[12]ವಾಕ್ಯಸರಿಯಿದ್ದರೂಟೀಕಾಕಾರನುತಪ್ಪಾಗಿತಿಳಿದುಕೊಂಡುವಿರುದ್ಧಾರ್ಥಬರುವಂತೆವಿವರಿಸಿದ್ದಾನೆ. ನಾಮದಿಂದಕಾರ್ಯಸಾಧಿಸುವಂಥದ್ದಾದರೆ, ಅಂಥಪ್ರಸಂಗದಲ್ಲಿದಂಡವನ್ನುಉಪಯೋಗಿಸಬಾರದೆಂಬುದುಇದರಅರ್ಥ. ಆದರೆ, ಟೀಕಾಕಾರನುನಎಂಬುದುಎರಡುಸಲಇದೆಎಂದುಭಾವಿಸಿಸಾಮದಿಂದಕಾರ್ಯಸಿದ್ಧಿಯಾಗದಿದ್ದರೆದಂಡವನ್ನುಉಪಯೋಗಿಸಬಾರದೆಂದುವಿವರಿಸಿದ್ದಾನೆ. ಇದರಿಂದಅರ್ಥಸ್ಪಷ್ಟವಾಗುವುದಿಲ್ಲ.