[1]ದಾಯಾದಾದಪರಃಪರಬಲಸ್ಯಾಕರ್ಷಣಮಂತ್ರೋಸ್ತ್ಯತೋಯಮಭಿಗಚ್ಛೇದವಶ್ಯಂತಸ್ಯದಾಯಾದಮುತ್ಥಾಪಯೇತ್|| ೬೫ || ೧೩೯೯ ||

ಅರ್ಥ : ದಾಯಾದಾತ್‌ = ದಾಯಿಗನತ್ತಣಿಂ, ಅಪರಃ = ಮತ್ತೊಂದು, ಪರಬಲಸ್ಯ = ಪೆಱರಬಲದ, ಆಕರ್ಷಣಮಂತ್ರಃ = ತನ್ನಲ್ಲಿಗೈತಪ್ಪಮಂತ್ರಂ, ನಾಸ್ತಿ = ಇಲ್ಲ, ಆತಃ = ಅದುಕಾರಣದಿಂ, ಯಂ = ಆವನೋರ್ವನಮೇಲೆ, ಅಭಿಗಚ್ಛೇತ್‌ = ಎತ್ತಿನಡೆವಂ, ತಸ್ಯ = ಆತನ, ದಾಯಾದಂ = ದಾಯಿಗನಂ, ಅವಶ್ಯಂ = ಎಂತಾದೊಡಂ, ಉತ್ಥಾಪಯೇತ್‌ = ಎತ್ತಿಕೊಳ್ಗೆ (ಎಬ್ಬಿಸುವುದು) || ಪಗೆವನದಾಯಿಗಂತನ್ನೊಳಿಲ್ಲದಿರೆಪಗೆವನಪರಿಗ್ರಹಂಭೇದಿಸಲ್ಬಾರದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕಂಟಕೇನಕಂಟಕಮಿವಪರೇಣಪರಂಸಮುದ್ಧರೇತ್|| ೬೬ || ೧೪೦೦ ||

ಅರ್ಥ : ಕಂಟಕೇನ = ಮುಳ್ಳಿನಿಂ, ಕಂಟಕಮಿವ = ಮುಳ್ಳನೆಂತಂತೆ, ಪರೇಣ = ಪಗೆಯಿಂ, ಪರಂ = ಪಗೆಯಂ, ಉದ್ಧರೇತ್‌ = ಎತ್ತಿಕೊಳ್ಗೆ ||

ಬಿಲ್ವೇನಹಿಬಿಲ್ವಂಹನ್ಯಮಾನಮುಭಯಥಾಪ್ಯಾತ್ಮಲಾಭಾಯ|| ೬೭ || ೧೪೦೧ ||

ಅರ್ಥ : ಬಿಲ್ವೇನ = ಬೆಳಲಹಣ್ಣಿನಿಂ, ಬಿಲ್ವಂ = ಬೆಳಲಹಣ್ಣಂ (ಬೆಲ್ಲವತ್ತ), ಹನ್ಯಮಾನಂ = ಒಡೆಯಲ್ಪಡುತ್ತಿರ್ದುದು, ಹಿ = ಎಂತೀಗ, ಉಭಯಥಾಪಿ = ಇತ್ತೆಱನಿಂ, ಆತ್ಮನಃ = ತನಗೆ, ಲಾಭಾಯ = ಲಾಭಕ್ಕೆಕಾರಣಂ || ಪಗೆಯೊಳ್ಸಂಧಿಯನಿಂತುಮಾಳ್ಕೆಂಬುದುಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೬೫. ಶತ್ರುವನ್ನುತನ್ನಕಡೆಗೆತಿರುಗಿಸಿಕೊಳ್ಳುವುದಕ್ಕೆಶತ್ರುವಿನದಾಯಾದಿಯೇಉಪಾಯವು. ಕಾರಣದಿಂದಯಾರಮೇಲೆಯುದ್ಧಕ್ಕೆಹೋಗಬೇಕೋಅವನದಾಯಾದಿಯನ್ನುಹೇಗಾದರೂಮಾಡಿ. ಶತ್ರುವಿಗೆಎದುರುಬೀಳುವಂತೆಮಾಡಬೇಕು.

೬೬. ಮುಳ್ಳನ್ನುಮುಳ್ಳಿನಿಂದಲೇತೆಗೆಯುವಂತೆ, ಶತ್ರುವನ್ನುಶತ್ರುವಿನಿಂದಲೇಹೋಗಲಾಡಿಸಬೇಕು.

೬೭. ಬೇಲದಹಣ್ಣನ್ನುಬೇಲದಹಣ್ಣಿನಿಂದಲೇಒಡೆದರೆಎರಡರಿಂದಲೂತನಗೆಲಾಭ.

೬೮. ಶತ್ರುವುಎಷ್ಟುಅಪಕಾರಮಾಡುವನೋಅದಕ್ಕಿಂತಹೆಚ್ಚುಅಪಕಾರಮಾಡಿಸಂಧಿಮಾಡಿಕೊಳ್ಳಬೇಕು. ಲೋಹದತುಂಡನ್ನುಚೆನ್ನಾಗಿಕಾಯಿಸದೆ. ಕಾಯಿಸಿದಲೋಹದತುಂಡಿನೊಡನೆಸೇರಿಸುವುದಕ್ಕಾಗುವುದಿಲ್ಲ.

—-

ಯಾವತ್ಪರೇಣಾಪಕೃತಂತಾವತೋಧಿಕಮಪಕೃತ್ಸಂಧಿಮುಪೇಯಾನ್ನ[2]ತಪ್ತಲೋಹಂತಪ್ತಲೋಹೇನಸಹಸಂಧತ್ತೇ|| ೬೮ || ೧೪೦೨ ||

ಅರ್ಥ : ಯಾವತ್‌ = ಎನಿತು, ಪರೇಣ = ಪರನಿಂದ, ಅಪಕೃತಂ = ತನಗೆಅಪಕಾರಂಮಾಡಲ್ಪಟ್ಟುದು, ತಾವತಃ = ಅನಿತಱತ್ತಣಿಂ, ಅಧಿಕಂ = ಅಧಿಕಮಪ್ಪಂತು, ಅಪಕೃತ್ಯ = ಅಪಕಾರಂಮಾಡಿ, ಸಂಧೀಂ = ಸಂಧಿಯಂ, ಉಪೇಯಾತ್‌ = ಮಾಳ್ಕೆ, ಅತಪ್ತಲೋಹಂ = ಕಾಯದಕರ್ಬ್ಬೋನ್‌, ತಪ್ತಲೋಹೇನಸಹ = ಕಾದಕರ್ಬ್ಬೋನ್ನಿನೊಡನೆ, ನಸಂಧತ್ತೇ = ಸಂಧಿಸದು || ಪರಪ್ರತಾಪಂಕಾಣದನ್ನೆವರಂಸಂಧಿಯನಾವನುಮೊಲ್ಲನೆಂಬುದುತಾತ್ಪರ್ಯಂ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ತೇಜೋಹಿಸಂಧಾನಕಾರಣಂನಾಪರಾದ್ಧಸ್ಯ[3]ಕ್ಷಾಂತಿರುಪೇಕ್ಷಾವಾ|| ೬೯ || ೧೪೦೩ ||

ಅರ್ಥ : ಹಿ = ಆವುದೊಂದುಕಾರಣದಿಂ, ತೇಜಃ = ತೇಜಂ, ಸಂಧಾನಕಾರಣಂ = ಸಂಧಿಗೆಕಾರಣಂ, ಅಪರಾದ್ಧಸ್ಯಕಾಯಲ್ವೇಡಿರ್ದಂಗೆ (ಪರರುಮಾಡಿದಹೊಲ್ಲೆಹಕ್ಕೆ), ಕ್ಷಾಂತಿ = ಕ್ಷಮೆಯಂಮಾಳ್ಪುದುಂ, ಉಪೇಕ್ಷಾವಾ = ಉಪೇಕ್ಷೆಯಂಮೇಣ್‌, ನ = ಸಂಧಿಗೆಕಾರಣಮಲ್ಲ || ಪೆರ್ಚುತ್ತಿರ್ದನಿಂತುಮಾಳ್ಕೆಂಬುಧುತ್ತರವಾಕ್ಯಂ

ಉದೀಯಮಾನೋ[4]ಘಟೇನೈವಾಶ್ಮಾಹೀನೇನಸಹವಿಗ್ರಹಂಕುರ್ಯಾತ್|| ೭೦ || ೧೪೦೪ ||

ಅರ್ಥ : ಉದೀಯಮಾನಃ = ಪೆರ್ಚ್ಚುತಿರ್ದ್ದಂ, ಹೀನೇನಸಹ = ಕ್ಷೀಣನೊಡನೆಯಂ, ವಿಗ್ರಹಂನಕುರ್ಯಾತ್‌ = ಕಾಳೆಗಮಂಮಾಡದಿಕ್ಕೆ, ಅಶ್ಮಾ = ಕಲ್ಲು, ಘಟೇನೇವ = ಕೊಡನೊಡನೆಂತಂತೆ[5] || ವಿಜಿಗೀಷುಪಗೆವಂಬಡವನಿವನೆಂದುಪೇಕ್ಷಿಸಲ್ವೇಡೆಂಬುದುತಾತ್ಪರ್ಯಂ || ಪೆರ್ಚುಗೆಯಸ್ವರೂಪಮಂಪೇಳ್ವುದುತ್ತರವಾಕ್ಯಂ :

—-

೬೯. ತೇಜಸ್ಸೇಸಂಧಾನಕ್ಕೆಕಾರಣ. ಅಪರಾಧವನ್ನುಕ್ಷಮಿಸುವುದರಿಂದಲೂಉಪೇಕ್ಷಿಸುವುದರಿಂದಲೂಸಂಧಾನವುಕುದುರದು.

೭೦. ಅಧಿಕಪರಾಕ್ರಮಿಯುಅಲ್ಪಪರಾಕ್ರಮಿಯೊಡನೆಯುದ್ಧಮಾಡಬಾರದು; ಹಾಗೆಮಾಡಿದರೆಕಲ್ಲುಮಡಕೆಯನ್ನುಒಡೆದಂತಾಗುತ್ತದೆ.

—-

ದೈವಾನುಲೋಮ್ಯಂಯುಗ್ಯಪುರುಷೋಪಚಯೋsಪ್ರತಿಪಕ್ಷತಾವಿಜಿಗೀಷೋರುದಯಃ[6]|| ೭೧ || ೧೪೦೫ ||

ಅರ್ಥ : ದೈವಾನುಲೋಮ್ಯಂ = ದೈವಾನುಕೂಲತೆಯು, ಯುಗ್ಯಪುರುಷೋಪಚಯಃ = ಕಾರ್ಯಭರಕ್ಷಮರಪ್ಪಪುರುಷರಕೂಟಮುಂ, ಅಪ್ರತಿಪಕ್ಷತಾಚ = ಪ್ರತಿಕೂಲದಿಲ್ಲಮೆಯುಂ, ವಿಜಿಗೀಷೋಃ = ವಿಜಿಗೀಷುವಿನ, ಉದಯಃ = ಉದಯಮೆಂಬುದು || ಇಂತಪ್ಪಹೀನನೆನ್ನದೆಸಂಧಿಯಂಮಾಳ್ಪುದೆಂಬುದುತ್ತರವಾಕ್ಯಂ

ಪರಾಕ್ರಮಕರ್ಕಶಃಪ್ರವೀರಾನೀಕಶ್ಚೇದ್ಧೀನಃಸಂಧಧಾಯಸಾಧೂಪಚರಿತವ್ಯಃ|| ೭೨ || ೧೪೦೬ ||

ಅರ್ಥ : ಹೀನಃ = ಹೀನನಪ್ಪಂ, ಪರಾಕ್ರಮಕರ್ಕಶಃ = ಕಟ್ಟಣ್ಮಿನಜಟ್ಟಿಗಂ (ಪರಾಕ್ರಮದಿಂದಕರ್ಕಶವಾದ), ಪ್ರವೀರಾನೀಕಶ್ಚೇತ್‌ = ಕರಂಕೂರಾಳ್ಗಳನೆರವನುಳ್ಳನಕ್ಕುಮಪ್ಪೊಡೆ (ಅತಿವೀರರಪ್ಪಶತ್ರುಗಳಪಡೆಯಾದೊಡೆ), ಸಂಧಾಯ = ಸಂಧಿಮಾಡಿ, ಸಾಧು = ಲೇಸಾಗಿ, ಉಪಚರಿತವ್ಯಃ = ಉಪಚರಿಸಲ್ಪಡುವಂ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ದುಃಖಾಮರ್ಷಜಂಹಿತೇಜೋವಿಕ್ರಮಯತಿ|| ೭೩ || ೧೪೦೭ ||

ಅರ್ಥ : ದುಃಖ = ದುಃಖಮಂ, ಅಮರ್ಷಜಂ = ಪುರುಡುಮೆಂಬಿವಱಿಂದಾದ, ತೇಜಃ = ತೇಜಂ, ಹಿ = ನೆಟ್ಟನೆ, ವಿಕ್ರಮಯತಿ = ಪರಾಕ್ರಮಂಮಾಡಿಸುಗುಂ ||

ಸ್ವಜೀವಿತೇಹಿನಿರಾಶಸ್ಯಾವಾರ್ಯೋಭವತಿವೀರ್ಯವೇಗಃ|| ೭೪ || ೧೪೦೮ ||

ಅರ್ಥ : ಸ್ವಜೀವಿತೇ = ತನ್ನಬಾಳ್ಕೆಯೊಳ್‌, ನಿರಾಶಸ್ಯಂ = ಆಸೆಯಿಲ್ಲದವಂ, ವೀರ್ಯವೇಗಃ = ಪರಾಕ್ರಮದತೀವ್ರತೆ, ಅವಾರ್ಯಃ = ಬಾರಿಸಲ್ಬಾರದು, ಹಿ = ನಿಶ್ಚಯದಿಂ, ಭವತಿ = ಅಕ್ಕುಂ ||

—-

೭೧. ದೈವಾನುಕೂಲತೆ, ಕಾರ್ಯಸಮರ್ಥರಾದಜನರನ್ನುಸೇರಿಸಿಕೊಳ್ಳುವುದು. ಪ್ರತಿಕೂಲಪಕ್ಷವಿಲ್ಲದಿರುವುದುಇವುವಿಜಿಗೀಷುವಿನಅಭಿವೃದ್ಧಿಗೆಕಾರಣ.

೭೨.ಶತ್ರುವುಪ್ರಬಲನಾದಪರಾಕ್ರಮಿಯಾಗಿ. ಶ್ರೇಷ್ಠ, ಪರಾಕ್ರಮಿಗಳುಳ್ಳಸೈನ್ಯವನ್ನುಹೊಂದಿದ್ದರೆ, ಶಕ್ತಿಹೀನನಾದರಾಜನುಅಂಥವನೊಡನೆಸಂಧಿಯನ್ನುಮಾಡಿಕೊಂಡುಯೋಗ್ಯರೀತಿಯಲ್ಲಿಸಹಕರಿಸಬೇಕು.

೭೩. ದುಃಖಮತ್ತುರೋಷದಿಂದಉಂಟಾದಶಕ್ತಿಯುಗೆಲುವಿಗೆಕಾರಣವಾಗುತ್ತದೆ.

೭೪. ಜೀವನದಲ್ಲಿನಿರಾಶೆಗೊಂಡನಾದರೆಪರಾಕ್ರಮದತೀವ್ರತೆಯನ್ನುನಿವಾರಿಸಲಾಗುವುದಿಲ್ಲ.

—-

ಲಘುರಪಿಸಿಂಹಶಾಬೋಹಂತ್ಯೇವಹಸ್ತಿನಂ|| ೭೫ || ೧೪೦೯ ||

ಅರ್ಥ : ಲಘುರಪಿ = ಕಿಱಿದಾಗಿಯುಂ, ಸಿಂಹಶಾಬಃ = ಸಿಂಹದಮಱಿ, ಹಸ್ತಿನಂ = ಆನೆಯಂ, ಹಂತ್ಯೇವ = ಕೊಲ್ಗುಮೇ ||

ಚಾತಿಭಗ್ನಂಪೀಡಯೇತ್|| ೭೬ || ೧೪೧೦ ||

ಅರ್ಥ : ಅತಿಭಗ್ನಂಚ = ಹಿರಿದುಮುರಿದವನನು, ನಪೀಡಯೇತ್‌ = ಪೀಡಿಸಲಾಗದು ||

ಶೌರ್ಯ್ಯೆಕಧನಸ್ಯಪ್ರಿಯೋಪಚಾರೋನಮಸಿತಚ್ಛಗಳಸ್ಯಸತ್ಕಾರಇವ|| ೭೭ || ೧೪೧೧ ||

ಅರ್ಥ : ಶೌರ್ಯ್ಯಕಧನಸ್ಯ = ಶೌರ್ಯಮನೆಧನಮಾಗುಳ್ಳನ, ಪ್ರಿಯೋಪಚಾರಃ = ಕೂರ್ಮೆಯನೆಗಳ್ತೆ, ನಮಸಿತಚ್ಛಗಲಸ್ಯ = ಪರಸಿದಾಡಿನಂತೆಮಾಳ್ಪ, ಸತ್ಕಾರಇವ = ಆದರಣೆಯಂತೆ || ಅತಿಕ್ರೂರಂಮಾಳ್ವಹಿತೋಪಚಾರಮಂನಂಬಲುಬಾರದೆಂಬುದುತಾತ್ಪರ್ಯಂ || ಸಮಬಲನೊಡನೆಕಾದಿದೊಡಿಂತಕ್ಕುಮೆಂಬುದುತ್ತರವಾಕ್ಯಂ :

[7]ಸಮಸ್ಯಸಮೇನಸಹವಿಗ್ರಹವೇನಿಶ್ಚಿತಂಮರಣಂಜಯೋತುಸಂದೇಹಃ|| ೭೮ || ೧೪೧೨ ||

ಅರ್ಥ : ಸಮಸ್ಯ = ಸಮನಪ್ಪಂಗೆ, ಸಮೇನಸಹ = ಸಮಾನನೊಡನೆ, ವಿಗ್ರಹೇ = ಕಾಳೆಗಮಾಗೆ, ಮರಣಂ = ಸಾವು, ನಿಶ್ಚಿತಂ = ನಿಶ್ಚೈಸಲ್ಪಟ್ಟುದು, ತು = ಮತ್ತೆ, ಜಯೇ = ಗೆಲವಿನೊಳ್‌, ಸಂದೇಹಃ = ಸಂದೇಹಮಕ್ಕುಂ || ಸಮನೊಳದಿಕನೊಳಂವಿಗ್ರಹಂಬೇಡೆಂಬುದುತಾತ್ಪರ್ಯಂ || ಸಮಂಗೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಆಮಂಹಿಪಾತ್ರಮಾಮೇನಾಭಿಹತಂಉಭಯತಃಕ್ಷಯಮೇವಕರೋತಿ|| ೭೯ || ೧೪೧೩ ||

ಅರ್ಥ : ಆಮಂ = ಹಸಿಯಪ್ಪ, ಪಾತ್ರಂ = ಭಾಜನಂ, ಆಮೇನ = ಪಸಿಯಭಾಜನದಿಂ, ಅಭಿಹತಂ = ತಾಗಲ್ಪಟ್ಟುದಾಗಿ, ಉಭಯತಃ = ಇರ್ಮೆಯ್ಯಿಂ, ‌ಕ್ಷಯಮೇವ = ಕೇಡನೇ, ಹಿ = ನಿಶ್ಚಯದಿಂ, ಕರೋತಿ = ಮಾಳ್ಕುಂ || ಅಧಿಕನೊಳ್‌ ಯುದ್ಧಂಪೊಲ್ಲೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೭೫. ಸಿಂಹದಮರಿಯುಚಿಕ್ಕದಾದರೂಆನೆಯನ್ನುಕೊಂದೇತೀರುತ್ತದೆ.

೭೬. ಅತಿಯಾದಸೋಲನ್ನನುಭವಿಸಿದಶತ್ರುವನ್ನುಹಿಂಸಿಸಬಾರದು.

೭೭.ಶೂರನುದುರ್ಬಲನಿಗೆಮಾಡುವಸ್ನೇಹಪೂರಿತಉಪಚಾರವುಹರಕೆಯಆಡಿಗೆಮಾಡಿದಉಪಚಾರದಂತೆ.

೭೮. ಸಮಾನಶಕ್ತಿಯುಳ್ಳವರನಡುವಿನಯುದ್ಧದಿಂದಮರಣವುನಿಶ್ಚಿತ, ಜಯವುಸಂದೇಹಾಸ್ಪದ

೭೯. ಒಂದುಹಸಿಮಡಕೆಯುಇನ್ನೊಂದುಹಸಿಮಡಕೆಯನ್ನುತಾಗಿದರೆನಿಶ್ಚಯವಾಗಿಯೂಎರಡೂನಾಶವಾಗುತ್ತವೆ.

—-

ಜ್ಯಾಯಸಾಸಹವಿಗ್ರಹಹೋಹಸ್ತಿನಾಸಹಪಾದಯುದ್ಧಮಿವ[8]|| ೮೦ || ೧೪೧೪ ||

ಅರ್ಥ : ಜ್ಯಾಯಸಾಸಹ = ಅಧಿಕನೊಡನೆ, ವಿಗ್ರಹಃ = ಪಗೆ, ಹಸ್ತಿನಾಸಹ = ಆನೆಯೊಡೆನೆ, ಪಾದಯುದ್ಧಮಿವ = ಕಾಲಲೊದೆದುಕಾದುವಂತೆ || ಅಧಿಕನೊಡನೆವಿಗ್ರಹದವಾರ್ತೆಯಾಗಲಾಗದೆಂಬುದುತಾತ್ಪರ್ಯಂ || ವಿಗಿಜೀಷುವಿನಭೇದಮಂಪೇಳ್ವುದುತ್ತರವಾಕ್ಯಂ :

ಧರ್ಮವಿಜಯೀಯೋರಾಜಾವಿಧೇಯತ್ವಮಾತ್ರೇಣೈವಸಂತುಷ್ಟಃಪ್ರಾಣಾರ್ಥಾಭಿಮಾನೇಷುವ್ಯಭಿಚರತಿ|| ೮೧ || ೧೪೧೫ ||

ಅರ್ಥ : ಸಃ = ಆತಂ, ಧರ್ಮವಿಜಯೀ = ಧರ್ಮದಿಂಗೆಲ್ವನೆಂಬ, ರಾಜಾ = ಅರಸಂ. ಯಃ = ಆವನೋವಂ, ವಿಧೇಯತ್ವಮಾತ್ರೇಣೈವ = ತನಗೆಬೆಸಕೆತ್ವಯದಱಿಂದಮೆ (ವೈರಿತನ್ನಹೇಳಿತಾನುಕೇಳುವನೆಂಬಇಷ್ಟದಿಂದವೆ), ಸಂತುಷ್ಟಃ = ಸಂತೋಷಂಬಡುವಂ, ಪ್ರಾಣ = ಪ್ರಾಣಮುಂ, ಅರ್ಥ = ಅರ್ಥಮುಂ, ಅಭಿಮಾನೇಷು = ಅಭಿಮಾನಮೆಂಬಿವಱೊಳ್, ನವ್ಯಭಿಚರತಿ = ತಪ್ಪುವನಲ್ಲಂ || ಈಗುಣಮುಳ್ಳವನೆಉತ್ತಮನೆಂಬುದುತಾತ್ಪರ್ಯಂ ||

ಲೋಭವಿಜಯೀಯೋರಾಜಾದ್ರವೈಣಕೃತಪ್ರೀತಿಃಪ್ರಾಣಾರ್ಥಾಭಿಮಾನೇಷುವ್ಯಭಿಚರತಿ|| ೮೨ || ೧೪೧೬ ||

ಅರ್ಥ : ಸಃ = ಆತಂ, ಲೋಭವಿಜಯೀ = ಲೋಭವಿಜಯಿಯೆಂಬಂ, ಯಃ = ಆವನೋರ್ವಂ, ರಾಜಾ = ಅರಸಂ, ದ್ರವೈಣ = ದ್ರವ್ಯದಿಂ, ಕೃತಪ್ರೀತಿಃ = ಮಾಡಿದಸ್ನೇಹಮನುಳ್ಳವನಾಗಿ, ಪ್ರಾಣಾರ್ಥಾಭಿಮಾನೇಷು = ಪ್ರಾಣಾರ್ಥಾಭಿಮಾನಮೆಂಬಿವಱೊಳು, ನವ್ಯಭಿಚತರಿ = ತಪ್ಪಂಮಾಳ್ವನಲ್ಲಂ || ಇಂತಪ್ಪಮಧ್ಯಮನೆಂಬುದುತಾತ್ಪರ್ಯಂ ||

—-

೮೦. ಅಧಿಕಬಲನೊಡನೆಯುದ್ಧವುಆನೆಯೊಡನೆಯುದ್ಧಮಾಡಿದಂತಾಗುತ್ತದೆ.

೮೧. ಶತ್ರುಗಳಹೇಳಿದಂತೆಕೇಳುವುದಕ್ಕೆಒಪ್ಪಿದಮಾತ್ರದಿಂದಲೇಸಂತುಷ್ಟನಾಗಿಪ್ರಾಣ, ಅರ್ಥ. ಮಾನಗಳಿಗೆಹಾನಿಯುಂಟುಮಾಡದರಾಜನುಧರ್ಮವಿಜಯಿಯು.

೮೨. ಶತ್ರುವಿನದ್ರವ್ಯದಿಂದಸಂತುಷ್ಟನಾಗಿಅವನಪ್ರಾಣ, ಅರ್ಥ, ಅಭಿಮಾನಗಳಿಗೆಕುಂದುತರದರಾಜನುಲೋಭವಿಜಯಿಯು.

—-

ಸೋsಸುರವಿಜಯೀರಾಜಾಯೋsರ್ಥಾಭಿಮಾನಪ್ರಾಣಸಂಘಾತೇನಮಹೀಮಭಿಲಷತಿ|| ೮೩ || ೧೪೧೭ ||

ಅರ್ಥ : ಸಃ = ಆತಂ, ಅಸುರವಿಜಯೀ = ಅಸುರವಿಜಯಿಯೆಂಬ, ರಾಜಾ = ಅರಸು, ಯಃ = ಆವನೋರ್ವಂ, ಅರ್ಥಾಭಿಮಾನಪ್ರಾಣ = ಅರ್ಥಾಭಿಮಾನಪ್ರಾಣಮೆಂಬಿವಱ, ಸಂಘಾತೇನ = ಕಿಡಿಸುವುದಱಿಂ, ಮಹೀಂ = ಭೂಮಿಯಂ, ಆಭಿಲಷತಿ = ಬಯಸುಗುಂ || ಇಂತಪ್ಪಂಜಘನ್ಯನೆಂಬುದುತಾತ್ಪರ್ಯಂ || ಅಸುರವಿಜಯಯಂಪೊರ್ದಲಿಂತಕ್ಕುಮೆಂಬುದುತ್ತರವಾಕ್ಯಂ :

ಅಸುರವಿಜಯಿನಃಸಂಶ್ರಯಃಸೂನಾಕಾರಗೃಹೇಮೃಗಪ್ರವೇಶಇವ|| ೮೪ || ೧೪೧೮ ||

ಅರ್ಥ : ಅಸುರವಿಜಯಿನಃ = ಅಸುರವಿಜಯಿಯ, ಸಂಶ್ರಯಃ = ಪೊರ್ದುಗೆ, ಸೂನಾಕಾರಗೃಹೇ = ಸೂನೆಗಾಱರಮನೆಯೊಳ್‌, ಮೃಗಪ್ರವೇಶಇವ = ಮೃಗಂಪೊಗುವಂತೆ || ಇಂತಪ್ಪನಂಪೊರ್ದಲಾಗದೆಂಬುದುತಾತ್ಪರ್ಯಂ |

ಯಾದೃಶಸ್ತಾದೃಶೋವಾಯಾಯಿನಃಸ್ಥಾಯೀಬಲವಾನ್ಯದಿಸಾಧುಚರಸಂಚಾರಸನ್ನದ್ದಶ್ಚ[9]|| ೮೫ || ೧೪೧೯ ||

ಅರ್ಥ : ಯಾದೃಶಸ್ತಾದೃಶೋವಾ = ಎಂತಪ್ಪನಾದೊಡಂ, ಸ್ಥಾಯೀ = ಇರ್ದವಂ, ಯಾಯಿನಃ = ಮೇಲ್ಪರಿದಂಗೆ (ಪೋಪವನತ್ತಣಿಂದ), ಬಲವಾನ್‌ = ಬಲ್ಲಿದಂ, ಸಾಧು = ಒಳ್ಳಿತಪ್ಪ, ಚರಸಂಚಾರ = ಹೇರಿಗರೆಡೆಯಾಟಮನುಳ್ಳಂ (ಬೇಹುನಡೆವಾತನು), ಸನ್ನದ್ಧಶ್ಚ = ಆಯತನಾಗಿರ್ದನಂ, ಯದಿ = ಅಂತಪ್ಪೊಡೆ || ಹೇರಿಗರೆಲ್ಲರುಮಾಯತರಾಗದರುಂಕಿಡುಗುಮೆಂಬುದುತಾತ್ಪರ್ಯ || ಇಂತಪ್ಪನಂಕೊಂದೊಡೆದೋಷಮುಂಟೆಂಬುದುತ್ತರವಾಕ್ಯಂ :

ರಣೇಷು[10]ಭೀತಮಶಸ್ತ್ರಂಹಿಂಸನ್ಬ್ರಹ್ಮಹಾಭವತಿ|| ೮೬ || ೧೪೨೦ ||

ಅರ್ಥ : ರಣೇಷು = ಕಾಳೆಗದೊಳ್‌, ಭೀತಂ = ಅಂಜಿದವನಂ, ಅಶಸ್ತ್ರಂಚ = ಕೈದುಮಿಲ್ಲದವನಂ, ಹಿಂಸನ್‌ = ಕೊಲ್ಲುತಿರ್ದಂ, ಬ್ರಹ್ಮಹಾ = ಬ್ರಹ್ಮಘಾತಕಂ, ಭವತಿ= ಅಕ್ಕುಂ || ಇದಿರ್ಚಿದನಲ್ಲದೆಕೊಲಲಾಗದೆಂಬುದುತಾತ್ಪರ್ಯಂ || ಪತಿಯಿಂತಪ್ಪುದಂಮಾಡವೇಡೆಂಬುದುತ್ತರವಾಕ್ಯಂ :

—-

೮೩. ಶತ್ರುವಿನಪ್ರಾಣ, ಅರ್ಥ, ಅಭಿಮಾನಗಳಿಗೆಹಾನಿಯನ್ನುಂಟುಮಾಡಿಭೂಮಿಯನ್ನುಆಕ್ರಮಿಸಿಕೊಳ್ಳುವವನುಅಸುರವಿಜಯಿಯು.

೮೪. ಅಸುರವಿಜಯಿಯನ್ನುಆಶ್ರಯಿಸುವುದುಜಿಂಕೆಯುಕಟುಕನಮನೆಯನ್ನುಪ್ರವೇಶಿಸಿದಂತೆ.

೮೫. ಯುದ್ಧಕ್ಕಾಗಿಸಾಗುವವನಿಗಿಂತಲೂಒಳ್ಳೆಯಗೂಢಚಾರವ್ಯವಸ್ಥೆಯುಳ್ಳಮತ್ತುಸದಾಯುದ್ಧಸನ್ನದ್ಧನಾದತನ್ನರಾಜ್ಯದಲ್ಲಿಯೇನೆಲೆನಿಂತರಾಜನುಬಲವಂತನು.

೮೬. ಯುದ್ಧದಲ್ಲಿಅಂಜಿದವನನ್ನು, ಶಸ್ತ್ರವಿಲ್ಲದವನನ್ನು, ಹಿಂಸಿಸುವವನುಬ್ರಹ್ಮಹತ್ಯೆಯಪಾಪಕ್ಕೆಗುರಿಯಾಗುತ್ತಾನೆ.

—-

[11]ಸಂಗ್ರಾಮವೃತೇಷುಯಾಯಿಷುಸತ್ಕೃತ್ಯವಿಸರ್ಗ್ಗಃ[12]ಸ್ಥಾಯಿಷುಸಂಸರ್ಗಃಸೇನಾಪತ್ಯಾಯತ್ತಃಶ್ರೇಯಾನ್|| ೮೭ || ೧೪೨೧ ||

ಅರ್ಥ : ಸಂಗ್ರಾಮವೃತೇಷು = ಕಾಳೆಗದಲ್ಲಿಹಿಡಿದವರ್, ಯಾಯಿಷು = ಹೋಹಡೆ, ಸತ್ಕೃತ್ಯ = ಸತ್ಕಾರಮಂಮಾಡಿ, ವಿಸರ್ಗ್ಗಃ = ಕಳಿಪುವುದು, ಸ್ಥಾಯಿಷು = ಇಂತಪ್ಪವರ್ಗಳೊಳು(ಅವರುಈಹ), ಸಂಸರ್ಗಶ್ಚ = ಕೂಟಂ (ಇರಿಸುಹವು), ಸೇನಾಪತ್ಯಾಯತ್ತಃ = ದಂಡನಾಯಕನಾಧೀನಮಪ್ಪುದು, ಶ್ರೇಯಾನ್ = ಒಳ್ಳಿತ್ತು || ಕಾಳಗಂತೀರಲೊಡನೆಪೋಪನಾತಕರಂಮನ್ನಿಸಿಕಳಿಪುವುದುಂಇರ್ದರೊಡನೆಸ್ನೇಹಮುಮೆಂದಿವಂಸೇನೆಗೆಮುಖ್ಯನಪ್ಪಂಮಾಡಲ್ಪರಿಗ್ರಹದಮೈವೆತ್ತುಗೆಯಾಗಲಾವರಾಜಕಾರ್ಯಮುಂತೀರ್ಪುದುಮೆಂಬುದುತಾತ್ಪರ್ಯಂ || ಇಲ್ಲಿಗುಪಯೋಗಮಪ್ಪಮತಿಯವಿಕಲ್ಪಮಂಪೇಳ್ವುದುತ್ತರವಾಕ್ಯಂ :

[13]ಮತಿನದೀಯಂನಾಮಸರ್ವೇಷಾಂಪ್ರಾಣಿನಾಮುಭಯತೋವಹತಿಪಾಪಾಯಧರ್ಮಾಯ|| ೮೮ || ೧೪೨೨ ||

ಅರ್ಥ : ಸರ್ವೇಷಾಂಪ್ರಾಣಿನಾಂ = ಎಲ್ಲಾಜೀವಂಗಳ, ಇಯಂಈ, ಮತಿನದೀ = ಬುದ್ಧಿಎಂಬತೊಱೆ, ನಾಮ = ನಿಶ್ಚಯದಿಂ, ಉಭಯತಃ = ಇತೆಱದಿಂದಂ, ವಹತಿ = ಪರಿಗುಂ, ಪಾಪಾಯ = ಪಾಪಕ್ಕಂ, ಧರ್ಮಾಯ = ಧರ್ಮಕ್ಕಂ || ಅವರೊಳಿದುಪಡೆಯಲ್ಬರ್ಪುದುಬಾರದೆಂಬುದಂಪೇಳ್ವುದುತ್ತರವಾಕ್ಯಂ :

ತತ್ರಾದ್ಯಂಸ್ತ್ರೋತೋತೀವಸುಲಭಂದುರ್ಲಭಂದ್ವಿತೀಯಮಿತಿ|| ೮೯ || ೧೪೨೩ ||

ಅರ್ಥ : ತತ್ರ = ಅವಱೊಳ್, ಆದ್ಯಂ = ಮೊದಲಸ್ತ್ರೋತಃ = ಪೊನಲ್, ಅತೀವ = ಸುಲಭಂಕರಂಪಡೆಯಲ್ಬರ್ಪುದು, ತತ್ = ಆಪೊನಲ್, ದ್ವಿತೀಯಂ = ಎರಡನೆಯದು, ದುರ್ಲಭಮಿತಿ = ಪಡೆಯಲ್ಬಾರದೆಂತಿಂತು || ನಿಃಪಾಪಮತಿಗಳೆಂಕೆಲಂಬರೆಬುದುತಾತ್ಪರ್ಯಂ || ಇಂತಪ್ಪಲ್ಲಿಶಪಥಬೇಡಂಬುದುತ್ತರವಾಕ್ಯಂ :

—-

೮೭. ಸಂಗ್ರಾಮದಲ್ಲಿಸೆರೆಹಿಡಿದವರನ್ನು, ಹೋಗುವವರನ್ನ, ಸತ್ಕರಿಸಿಬಿಟ್ಟುಬಿಡುವುದು, ಇದ್ದವರೊಡನೆಸೇರಿಸಂಬಂಧವಿಟ್ಟುಕೊಳ್ಳುವುದು, ಸೇನಾಪತಿಯಅಭಿಪ್ರಾಯದಂತೆನಡೆಯುವುದುಶ್ರೇಯಸ್ಕರ.

೮೮. ಎಲ್ಲಪ್ರಾಣಿಗಳಬುದ್ಧಿಯೆಂಬನದಿಯುನಿಶ್ಚಯವಾಗಿಯೂಪಾಪಮತ್ತುಧರ್ಮಎಂಬಎರಡುಮಾರ್ಗಗಳಲ್ಲಿಯೂಹರಿಯುತ್ತದೆ.

೮೯. ಅವುಗಳಲ್ಲಿಮೊದಲನೆಯಪ್ರವಾಹವುಸುಲಭವೂ, ಎರಡನೆಯದುದುರ್ಲಭವೂಇರುತ್ತವೆ.

—-

[14]ಸತ್ಯೇನಾಪಿಶಪ್ತವ್ಯಂ[15]|| ೯೦ || ೧೪೨೪ ||

ಅರ್ಥ : ಸತ್ಯೇನಾಪಿದಿಟದೊಳಂ = (ಸತ್ಯವಚನದಿಂದವು), ನಶಪ್ತವ್ಯಂ = ಸೂರುಳಲ್ಪಡದು, ಶಪಥವಮಾಡಿಸಿಕೊಳಬೇಡ || ಸತ್ಯಕ್ಕಾದೊಡಂಪ್ರತ್ಯಯಂಗೈಯ್ಯೆನೊಚ್ಚಿದನಕ್ಕುಮೆಂಬುದುತಾತ್ಪರ್ಯಂ || ಪಿರಿಯಂನಂಬುಗೆಯನಿಂತುಮಾಳ್ಕೆಂಬುದುತ್ತರವಾಕ್ಯಂ :

ಮಹತಾಮಭಯಪ್ರದಾಯಿವಚನಮೇವಶಪಥಃ|| ೯೧ || ೧೪೨೫ ||

ಅರ್ಥ : ಮಹತಾಂ = ಪಿರಿಯರ್ಗೆಮಅಭಯಪ್ರದಾಯಿ = ಅಭಯಮಂಕೊಡುವ, ವಚನಮೇವ = ನುಡಿಯೇ, ಶಪಥಃ = ಸೂರುಳ್ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

[16]ಸತಾಮಸತಾಂವಚನಾಯತ್ತಾಃಖಲುಸರ್ವೇವ್ಯವಹಾರಾಃ|| ೯೨ || ೧೪೨೬ ||

ಅರ್ಥ : ಸತಾಂ = ಸತ್ಪುರುಷರ, ಅಸತಾಂಚ = ಕಾಪುರುಷರ, ವಚನಾಯತ್ತಾಃ = ವಚನಾಧೀನಂಗಳ್, ಖಲು = ನೆಟ್ಟನೆ, ಸರ್ವೇವ್ಯವಹಾರಾಃ = ಎಲ್ಲಾವ್ಯವಹಾರಂಗಳ್ || ವಚನಂಗಳಂನಂಬಿವ್ಯವಹಾರಂಗಳ್ನಡೆವುವೆಂಬುದುತಾತ್ಪರ್ಯಂ || ಇಂತಪ್ಪನುತ್ತಮನೆಂಬುದುತ್ತರವಾಕ್ಯಂ :

ಏವಸರ್ವಲೋಕಮಹನೀಯೋಯಸ್ಯವಚನಮನ್ಯಮನಸ್ಕತಯಾಪ್ಯಾಯಾತಂಭವತಿಶಾಸನಂ|| ೯೩ || ೧೪೨೭ ||

ಅರ್ಥ : ಸಏವ = ಆತನೇ, ಸರ್ವಲೋಕಮಹನೀಯಃ = ಎಲ್ಲಾಜನಂಗಳಿಂಪೂಹಿಸಲ್ಪಡುವಂ, ಯಸ್ಯ = ಆವನೋರ್ವನ, ವಚನಂ = ನುಡಿ, ಅನ್ಯಮನಸ್ಕತಯಾಪಿ = ಬೇರ್ಮನಮಾಗಲು, ಆಯಾತಂ = ಬಂದುದು, ಶಾಸನಂಭವತಿ = ಶಾಸನಮಕ್ಕು || ಮಱೆದುನುಡಿದುದುಮಂಪ್ರತಿಪಾಲಿಸುವನುತ್ತಮನೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೯೦. ಸತ್ಯದಹೆಸರಿನಲ್ಲಿಪ್ರತಿಜ್ಞೆಮಾಡಬಾರದು.

೯೧. ದೊಡ್ಡವರುಅಭಯಪ್ರಧಾನಮಾಡುವುದೇಶಪಥ.

೯೨. ಸತ್ಪುರುಷರಹಾಗೂಕಾಪುರುಷರಮಾತುಗಳಆಧಾರದಮೇಲೆಯೇಎಲ್ಲವ್ಯವಹಾರಗಳೂನಡೆಯುತ್ತವೆ.

೯೩. ಯಾರಮಾತು, ಅಜಾಗರೂಕತೆಯಿಂದಆಡಿದ್ದರೂನಿರ್ಣಾಯಕವಾಗುತ್ತದೋಆತನೇಎಲ್ಲರಿಗೂಪುಜ್ಯನು.

—-

 

[1]ಮೈ. ಚೌ. ಈವಾಕ್ಯವುಎರಡಾಗಿವಿಭಜಿಸಲ್ಪಟ್ಟಿದೆ.

[2]ಮುಪೇಯಾನ್ನಾತಪ್ತ, ಎಂದುಓದಬೇಕು. ಮೈ. ದಲ್ಲಿಇದುಎರಡುವಾಕ್ಯಗಳಾಗಿವಿಭಜಿಸಲ್ಪಟ್ಟಿದೆ.

[3]ನಾಪರಾಧಸ್ಯಎಂದುಓದಬೇಕು. ಮೈ. ಚೌ. ದಲ್ಲಿಹಾಗೆಇದೆ.

[4]ಮೈ. ಚೌ. ಉಪಚೀಯಮಾನಃ.

[5]ಇಲ್ಲಿಕೊಡಮತ್ತುಕಲ್ಲುಗಳಉದಾಹರಣೆಯುಸಂದರ್ಭಕ್ಕೆತಕ್ಕಂತೆಇಲ್ಲವೆಂದುತೋರುತ್ತದೆ.

[6]ಚೌ. ವಿಜಗೀಷೋರುಪಚಯಃ.

[7]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[8]ಮೈ ಚೌ. ಪದಾತಿಯದ್ಧಮಿವ

[9]ಚೌ. ಯದಿಸಾಧುಚರಸಂಸಾರಃ.

[10]ಮೈ. ರಣೇಷುಚರಣಪತಿತಂಭೀತಂ.

[11]ಮೈ. ಸಂಗ್ರಾಮವೃತ್ತೇಷುಚೌ. ಸಂಗ್ರಾಮಧೃತೇಷು.

[12]ಚೌ. ಸ್ಥಾಯಿಷುಚಸಂಸರ್ಗಃಇತ್ಯಾದಿಮುಂದಿನಪದಗಳುಇಲ್ಲ.

[13]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[14]ಮೈಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[15]ಮೈ. ಚೌ. ಸತ್ಯೇನಾಪಿಶಪ್ತವ್ಯಂ.

[16]ಮೈ. ಚೌ. ಸತ್ಯೇನಾಪಿಮುಂದಿನವಾಕ್ಯವುಒಂದರಲ್ಲೇಸೇರಿವೆ.