ಅಪ್ರಯಚ್ಛತೋಬಲವಾನಾರ್ಥಂಪ್ರಾಣೈಃಸಹಗೃಹ್ಣಾತಿ|| ೩೨ || ೧೩೬೬ ||

ಅರ್ಥ : ಅಪ್ರಯಚ್ಛತಃ = ಕುಡದನ, ಪ್ರಾಣೈಃಸಹ = ಪ್ರಾಣಂಗಳ್ವೆರಸು, ಅರ್ಥಂ = ಅರ್ಥಮಂ, ಬಲವಾನ್ = ಬಲ್ಲಿದನಪ್ಪಂ, ಗೃಹ್ಣಾತಿ = ಕಳೆದುಕೊಳ್ಗು[1] || ಬಡವನುಪಪ್ರದಾನದಿಂದಮೆಬರ್ದುಂಕುವನೆಂಬುದುತಾತ್ಪರ್ಯಂ || ಇಂತಪ್ಪುಪಾಯದಿಂದುಪಪ್ರದಾನಮಂಮಾಳ್ಪುದೆಂಬುದುತ್ತರವಾಕ್ಯಂ :

ಬಲವತೇsರ್ಥಂ[2]ಪ್ರಯಚ್ಛಯನ್ವಿವಾಹೋತ್ಸವಗೃಹಾಗಮನಾದಿಮಿಷೇಣಪ್ರಯಚ್ಛೇತ್|| ೩೩ || ೧೩೬೭ ||

ಅರ್ಥ : ಅರ್ಥಂಅರ್ಥಮಂ, ಪ್ರಯಚ್ಛನ್ = ಕುಡುತಿರ್ದ್ದಂ, ಬಲವತೇ = ಬಲ್ಲಿದಂಗೆ, ವಿವಾಹೋತ್ಸವ = ಮದುವೆಯೊಸಗೆ, ಗೃಹಾಗಮನಾದಿ = ಮನೆಗೆಬಹುದುಮೊದಲಾದ, ಮಿಷೇಣ = ಕಾರ್ಯವಿಶೇಷದನೆವದಿಂದ, ಪ್ರಯಚ್ಛೇತ್ = ಕುಡುಗೆ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಅಮಿಷಮರ್ಥಂಪ್ರಯಚ್ಛತೋನಿರವಧಿಃಸ್ಯಾನ್ನಿಬಂಧಶಾಸನಂ|| ೩೪ || ೧೩೬೮ ||

ಅರ್ಥ : ಅಮಿಷಂ = ನೆವಮಿಲ್ಲದೆ, ಅರ್ಥಂ = ಅರ್ಥಮಂ, ಪ್ರಯಚ್ಛತಃ = ಅಂಜಿಕಪ್ಪವಕುಡುತ್ತಿರ್ದ್ದಂಗೆ, ನಿಬಂಧಶಾಸನಂ = ವರ್ಷಂಪ್ರತಿಬೇಡುವಕಟ್ಟಿದತೆಱೆಸೆ, ನಿರವಧಿಃಸ್ಯಾತ್ = ಕಡೆಯಿಲ್ಲದುದಕ್ಕುಂ || ಕಾರ್ಯಮಂಕುಱಿತ್ತುಕುಡಲುಮಬ್ಬಾಗದಿಲುಮೆಂಬುದುತಾತ್ಪರ್ಯಂ || ಇಂತಪ್ಪನಾಡಂಬಿಡಲಾಗದೆಂಬುದುತ್ತರವಾಕ್ಯಂ :

[3]ಸ್ವಯಮಲ್ಪಬಲಕೋಶದೇಶದುರ್ಗಭೂಮಿರಪ್ರತಿವೇಶಿಕಶ್ಚಯದಿಶತ್ರುಃಸ್ವದೇಶಂಪರಿತ್ಯಜೇತ್|| ೩೫ || ೧೩೬೯ ||

ಅರ್ಥ : ಸ್ವಯಂ = ತಾಂ, ಅಲ್ಪಬಲಃಕಿಱಿದಪ್ಪ, ಸೇನೆಯನುಳ್ಳಂ, ಕೋಶಃ = ಭಂಡಾರಮುಂ, ದೇಶ = ನಾಡಂ, ದುರ್ಗಃ = ದುರ್ಗಮಂ, ಭೂಮಿಃನೆಲನುಮೆಂಬಿವನುಳ್ಳ, ಅಪ್ರತಿವೇಶಿಕತ್ಟ = ಪುಗಲೆಡೆವಡೆಯದನುಂ, ಯದಿ = ಆದನಾದೊಡೆ, ಶತ್ರುಃ = ಪಗೆವನಪ್ಪಂ, ದೇಶಂ = ನಾಡಂ, ನಪರಿತ್ಯಜೇತ್ = ಬಿಡದಿರ್ಕ್ಕೆ[4] || ಅದಕ್ಕೆತಾತ್ಪರ್ಯಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೩೨. ಕೊಡದವನಅರ್ಥವನ್ನುಬಲವಂತನುಪ್ರಾಣಸಹಿತವಾಗಿತೆಗೆದುಕೊಳ್ಳುತ್ತಾನೆ.

೩೩. ಬಲವಂತನಿಗೆಕೊಡಬೇಕಾದಲ್ಲಿಮದುವೆಯಒಸಗೆ, ಗೃಹಾಗಮನ, ಮೊದಲಾದಕಾರ್ಯವಿಶೇಷಗಳನೆಪದಲ್ಲಿಧನಾದಿಗಳನ್ನುಕೊಡಬೇಕು.

೩೪. ನೆಪವಿಲ್ಲದೆಅರ್ಥವನ್ನುಕೊಡುವುದಾದರೆಅದುಕಡ್ಡಾಯವಾಗಿಕೊನೆಯಿಲ್ಲದೆಕೊಡುವಕೊಡುಗೆಯಾಗಿಬಿಡುತ್ತದೆ.

೩೫. ತಾನೇ, ಕಡಿಮೆಸೈನ್ಯ, ಭಂಡಾರ, ದೇಶ, ದುರ್ಗವುಳ್ಳವನಾಗಿದ್ದುನಿಗ್ರಹಿಸಲಾರದಶತ್ರುವುಇದ್ದಾಗತನ್ನದೇಶವನ್ನುಬಿಡಬಾರದು.

—-

ಕೃತಸಂಘಾತ[5]ವಿಘಾತೋsರಾತಿರ್ವಿಶೀರ್ಣಯೂಥೋ[6]ಗಜಇವಕಸ್ಯಭವತಿಸಾಧ್ಯಃ|| ೩೬ || ೧೩೭೦ ||

ಅರ್ಥ : ಕೃತ = ಮಾಡೆಪಟ್ಟ, ಸಂಘಾತವಿಘಾತಃ = ನರವಿನಳಿವನುಳ್ಳಂ, ಅರಾತಿಃ = ಪಗೆವಂ, ವಿಶೀರ್ಣಯೂಥಃ = ಪರೆದಪಿಂಡನುಳ್ಳ, ವನಗಜಇವ = ಕಾಡಾನೆಯಂತೆ, ಕಸ್ಯ = ಆವಂಗೆ, ಸಾಧ್ಯಃ = ಸಾಧಿಸಲ್ಪಡುವಂ, ನಭವತಿ = ಆಗಂ ||

ವಿನಿಶ್ರಾವಿತಜಲೇಸರಸಿವಿಷಮೋsಪಿಜಲವ್ಯಾಲಃಛಾಗಲಇವ[7]|| ೩೭ || ೧೩೭೧ ||

ಅರ್ಥ : ವಿನಿಶ್ರಾವಿತಜಲೇ = ಪೊರಗೆಪರಿಯಿಸಿದನೀರನುಳ್ಳ, ಸರಸಿ = ಕೊಳನೊಳ್, ವಿಷಮೋsಪಿ = ವಿಷಮನಪ್ಪ, ಜಲವ್ಯಾಲಃ = ನೀರೊಳಗಣಕ್ರೂರಮೃಗಂ (ನೆಗಳು) ಛಾಗಲಇವ = ಪೋತೆಂತಂತೆ ||

ವನವಿನಿರ್ಗತಃಸಿಂಹೋsಪಿಸೃಗಾಲಇವ|| ೩೮ || ೧೩೭೨ ||

ಅರ್ಥ : ವನವಿನಿರ್ಗತಃ = ಅಡವಿಯಿಂಪೊಱಮಟ್ಟ, ಸಿಂಹೋsಪಿ = ಸಿಂಗಮುಂ, ಸೃಗಾಲಇವ = ನರಿಯೆಂತಂತೆ |

ವಿಚ್ಛಿನ್ನೋಪಾಂತಪ್ರತಾನೇವಂಶೇಕಿಮಸ್ತ್ಯಾಕರ್ಷಕಸ್ಯಕ್ಲೇಶಃ || ೩೯ || ೧೩೮೭೩ |

ಅರ್ಥ : ವಿಚ್ಛಿನ್ನ = ಕಡಿಯಲ್ಪಟ್ಟ, ಉಪಾಂತಪ್ರತಾನೇ = ಕೆಲದಸಿಡಿಂಬನುಳ್ಳ (ಶಾಖೆಉಪಶಾಖೆಗಂಡುಗಳನುಳ್ಳ) ವಂಶೇ = ಬಿದಿರೊಳ್, ಆಕರ್ಷಕಸ್ಯ = ತೆಗೆವಂಗೆ, ಕ್ಲೇಶಃ = ಆಯಾಸಂ, ಕಿಮಸ್ತಿ = ಏನುಂಟೇ || ನೆರವಿಯಫಲಮಂಪೇಳ್ವುದುತ್ತರವಾಕ್ಯಂ :

—-

೩೬. ಯಾರಸೈನ್ಯವುನಾಶವಾಗಿದೆಯೋಅಂತಹಶತ್ರುವನ್ನುಹಿಂಡಿನಿಂದಓಡಿಹೋದಆನೆಯನ್ನುನಿಗ್ರಹಿಸುವಂತೆಯಾರುತಾನೆನಿಗ್ರಹಿಸಲಾರರು?

೩೭. ನೀರಿಲ್ಲದಕೆರೆಯಲ್ಲಿಮೊಸಳೆಯುಕ್ರೂರವಾಗಿದ್ದರೂಮೇಕೆಯಷ್ಟೇನಿಸ್ಸಹಾಯಕವಾಗಿರುತ್ತದೆ.

೩೮. ಕಾಡಿನಿಂದಹೊರಬಿದ್ದಸಿಂಹವುನರಿಯಷ್ಟೇಬಲಹೀನವಾಗಿರುತ್ತದೆ.

೩೯. ಸುತ್ತಲಿನಟೊಂಗೆಗಳನ್ನೆಲ್ಲಕತ್ತರಿಸಿದಮೇಲೆಬಿದಿರನ್ನುತೆಗೆಯಬೇಕಾದರೆಕಷ್ಟವೇನಿದೇ?

—-

[8]ನಾಸ್ತಿ[9]ಸಂಘಾತಸ್ಯನಿಸ್ಸಾರತಾ|| ೪೦ || ೧೩೭೮ ||

ಅರ್ಥ : ಸಂಘಾತಸ್ಯ = ಸಮೂಹವಾಗಿನೆರವಿಗೆ, ನಿಸ್ಸಾರತಾ = ಬಾರ್ತೆಯಿಲ್ಲದ (ಬಲ್ಲಿತಲ್ಲಯೆಂಬುದಲ್ಲ) ಸ್ವರೂಪಂ, ನಾಸ್ತಿ = ಇಲ್ಲ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಕಿಂಸ್ಖಲಯತಿಮತ್ತಮಪಿವಾರಣಂಕುತ್ಸಿತೃಣಸಂಘಾತಃ|| ೪೧ || ೧೩೭೫ ||

ಅರ್ಥ : ವಾರಣಂ = ಆನೆಯಂ, ಮತ್ತಮಪಿ = ಸೊರ್ಕ್ಕಿದುದುಮಂ, ಕಿಂನಸ್ಖಲಯತಿ = ಏನೆಡಂಪಿಸದೇ (ತಡೆಯದೇ), ಕುತ್ಸಿತತೃಣಸಂಘಾತಃ = ಬಾರ್ತೆಗೆಟ್ಟಹುಲ್ಲನೆರವಿ ||

ದಂಡಸಾಧ್ಯೇಶತ್ರೌಉಪಾಯಾಂತರಮಗ್ನಾವಾಹುತಿಪ್ರದಾನಮಿವ|| ೪೩ || ೧೩೭೭ ||

ಅರ್ಥ : ದಂಡಸಾಧ್ಯೇ = ದಂಡದಿಂಸಾಧಿಸಲ್ಪಡುವ, ಶತ್ರೌ = ಪಗೆಯೊಳ್‌, ಉಪಾಯಾಂತರಂ = ಸಾಮಾದಿತ್ರಯಂ, ಅಗ್ನೌ = ಕಿಚ್ಚಿನೊಳ್‌, ಆಹುತಿಪ್ರದಾನಮಿವ = ಆಹುತಿಯನಿಕ್ಕುವಂತೆ || ತೀವ್ರನನುನಯಮಂಕೈಕೊಳನೆಂಬುದುತಾತ್ಪರ್ಯ || ಈಯರ್ಥಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೪೦. ಸಂಘಕ್ಕೆ (ಒಗ್ಗಟ್ಟಿಗೆ) ಶಕ್ತಿಹೀನತೆಯೆಂಬುದಿಲ್ಲ.

೪೧. ಒಟ್ಟಾಗಿಸೇರಿದಕ್ಷುಲ್ಲಕಹುಲ್ಲಿನಹಗ್ಗವುಮದಿಸಿದಆನೆಯನ್ನೂಎಡುವುವಂತೆಮಾಡುವದಿಲ್ಲವೆ?

೪೨. ಒಟ್ಟಾಗಿಸೇರಿಸಿದತಾವರೆಯದೇಟುಗಳಿಂದದಿಗ್ಗಜವೂನಿಗ್ರಹಿಸಲ್ಪಡುತ್ತದೆ.

೪೩. ದಂಡಮಾತ್ರದಿಂದಲೇಮಣಿಸಬೇಕಾದಶತ್ರುವಿನವಿಷಯದಲ್ಲಿಬೇರೆಉಪಾಯವನ್ನುಪ್ರಯೋಗಿಸುವುದುಅಗ್ನಿಯಲ್ಲಿಆಹುತಿಯನ್ನುಹಾಕಿದಂತೆ.

—-

ಯಂತ್ರಶಸ್ತ್ರಾಗ್ನಿಕ್ಷಾರಪ್ರತಿಕಾರೇವ್ಯಾಧೌಕಿಂನಾಮಾನ್ಯೌಷಧಂಕುರ್ಯಾತ್|| ೪೪ || ೧೩೭೮ ||

ಅರ್ಥ : ಯಂತ್ರ = ನಾಳಿಕಾದಿಯಂತ್ರಮುಂ, ಶಸ್ತ್ರ = ಕುಠಾರಾದಿಶಸ್ತ್ರಮುಂ, ಅಗ್ನಿ = ಕಿಚ್ಚುಂ, ಕ್ಷಾರ = ಕ್ಷಾರಮುಮೆಂಬಿವನೇ, ಪ್ರತಿಕಾರೇ = ಪ್ರತಿಕಾರಮನುಳ್ಳ, ವ್ಯಾಧೌ = ಕುತ್ತದೊಳ್‌, ಅನ್ಯತ್‌ = ಪೆಱತು, ಔಷಧಂ = ಮರ್ದು, ನಾಮ = ನಿಶ್ಚಯದಿಂ, ಕಿಂಕುರ್ಯಾತ್‌ = ಏಂಗೆಯ್ಗುಂ ||

[10]ಪರೋಯಾವದಪಕುರ್ಯಾತ್ತಂತಾವದಪಕುರ್ವೀತ|| ೪೫ || ೧೩೭೯ ||

ಅರ್ಥ : ಪರಃ = ಲೋಗರನು, ಯಾವತ್‌ = ಎನ್ನೆವರಂ, ಅಪಕುರ್ಯಾತ್‌ = ಅಪಕಾರವಮಾಡುವನು, ತಾವತ್‌ = ಅನ್ನೆವರಂ, ತಂ = ಆತನನು, ಅಪಕುರ್ವೀತ = ಅಪಕಾರವಮಾಡುವುದು || ಇಂತಪ್ಪನಾವತೆಱದಿಂಕಲಿಯೆಂಬುದುತ್ತರವಾಕ್ಯಂ :

[11]ಅವಿಜ್ಞಾತರಣರಭಸ[12]ಸರ್ವೋಪಿಭವತಿಶೂರಃ|| ೪೬ || ೧೩೮೦ ||

ಅರ್ಥ : ಅವಿಜ್ಞಾತರಣರಭಸಃ = ಕಾಳೆಗದಸವಿಯನಱೆಯದಂ, ಸರ್ವೋಪಿ = ಆವನುಂ, ಶೂರಃ = ಕಲಿ, ಭವತಿ = ಅಕ್ಕುಂ || ಅದಕ್ಕೆದೃಷ್ಟಾಂತದಿಂಕಾರಣಮಂಪೇಳ್ವುದುತ್ತರವಾಕ್ಯಂ :

ಅದೃಷ್ಟಾನ್ಯಸಾಮರ್ಥ್ಯಃಕೋನಾಮಭವತಿಸದರ್ಪಃ|| ೪೭ || ೧೩೮೧ ||

ಅರ್ಥ : ಅದೃಷ್ಟಾನ್ಯಸಾಮರ್ಥ್ಯಃ = ಪೆಱರಸಾಮರ್ಥ್ಯಮಂಕಾಣದಂ, ಕೋನಾಮ = ಆವಂ, ಸದರ್ಪಃ = ಗರ್ವಮನುಳ್ಳಂ, ನಭವತಿ = ಆಗಂ || ಕರವಣ್ಣಿದಪಗೆಯಶಸ್ತ್ರಪಾತದೊಳಂಕೂರ್ಪಗಿಡದನೆಶೂರನೆಂಬುದುತಾತ್ಪರ್ಯಂ || ಪೆರ್ಚಿದಸಿರಿಯಿಂತುಮಾಡದಿರದೆಂಬುದುತ್ತರವಾಕ್ಯಂ :

—-

೪೪. ಯಂತ್ರ, ಶಸ್ತ್ರ, ಅಗ್ನಿ, ಕಷಾರಇವುಗಳಿಂದಮಾತ್ರವೇಗುಣಪಡಿಸಬಹುದಾದವ್ಯಾಧಿಯನ್ನುಇತರಸಾಮಾನ್ಯಔಷಧವುಏನುಮಾಡೀತು?

೪೫. ವೈರಿಯುಎಲ್ಲಿಯವರೆಗೆಅಪಕಾರಮಾಡುವನೋಅಲ್ಲಿಯವರೆಗೂಆತನಿಗೆಅಪಕಾರವನ್ನೇಮಾಡಬೇಕು.

೪೬. ಯುದ್ಧದರಭಸವನ್ನುತಿಳಿಯದಪ್ರತಿಯೊಬ್ಬನೂಶೂರನೇ.

೪೭. ಇತರರಸಾಮರ್ಥ್ಯವನ್ನುಅರಿಯದವನುಗರ್ವದಿಂದಿರಲಾರನೆ?

—-

ಅತಿಪ್ರವೃದ್ಧಾಶ್ರೀಃಕಂನಾಮದರ್ಪಯತಿ|| ೪೮ || ೧೩೮೨ ||

ಅರ್ಥ : ಅತಿಪ್ರವೃದ್ಧಾ = ಕರಂಪೆರ್ಚಿದ, ಶ್ರೀಃ = ಲಕ್ಷ್ಮೀ, ಕಂ = ಆವನಂ, ನದರ್ಪಯತಿ = ಸೊಕ್ಕಿಸದು || ಲಕ್ಷ್ಮಿಪೆರ್ಚೆಸೊಕ್ಕದಿರನುತ್ತಮನೆಂಬುದುತಾತ್ಪರ್ಯಂ || ಇಂತಪ್ಪಂಮುಳಿದೊಡೇನುಮಂಮಾಡಲಾಱನೆಂಬುದುತ್ತರವಾಕ್ಯಂ :

ಕೃತಾರ್ಥಾಪಹಾರೋವಿಘಟಿತತಂತ್ರಶ್ಚಪರೋರುಷ್ಯನ್ನಪಿಕಿಂಕುರ್ಯಾತ್|| ೪೯ || ೧೩೮೩ ||

ಅರ್ಥ : ಕೃತಾರ್ಥಾಪಹಾರಃ = ಪೆಱರಿಂಕಳದುಕೊಳ್ಳಲ್ಪಟ್ಟರ್ಥಮನುಳ್ಳಂ, ವಿಘಟಿತತಂತ್ರಶ್ಚ = ಆಗಲ್ದಪರಿಗ್ರಹ (ಪರಿವಾರ)ಮನುಳ್ಳಂ, ಪರಃ = ಪಗೆ, ರುಷ್ಯನ್ನಪಿ = ಮುಳಿವುತ್ತಿರ್ದನಾಗಿಯುಂ, ಕಿಂಕುರ್ಯಾತ್‌ = ಏಂಗೆಯ್ದುಂ || ಅರ್ಥಮಂಪರಿಗ್ರಹಮುಮಿಲ್ಲದನೇನುಮಂಮಾಡಲಾಱನೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಉತ್ಪಾಟಿತದಂತಃಸರ್ಪೋರಜ್ಜುರಿವ|| ೫೦ || ೧೩೮೪ ||

ಅರ್ಥ : ಉತ್ಪಾಟಿತ = ಕೀಳಲ್ಪಟ್ಟ, ದಂತಃ = ಪಲ್ಲನುಳ್ಳ, ಸರ್ಪಃ = ಪಾವು, ರಜ್ಜುರಿವನೇಣಿನಹಾಂಗೆ ||

ಪ್ರತಿಹತಪ್ರತಾಪಾಂಗಾರಃಸಂಪತಿತೋಪಿಕಿಂಕುರ್ಯಾತ್ || ೫೧ || ೧೩೮೫ ||

ಅರ್ಥ : ಪ್ರತಿಹತಪ್ರತಾಪಃ = ಪ್ರತಾಪಂನಂದಿದ, ಅಂಗಾರಃ = ಕೆಂಡಂ, ಸಂಪತಿತೋಪಿ = ಮೇಲಿಬಿರ್ದುದಾಗಿಯುಂ, ಕಿಂಕುರ್ಯಾತ್‌ = ಏಂಗೆಯ್ದುಂ || ಇಂತಪ್ಪರೊಲ್ಮೆಯಂಕೈಕೊಳಲ್ವೇಡೆಂಬುದುತಾತ್ಪರ್ಯಂ ||

ವಿದ್ವಿಷ್ಟಾನಾಂಚಾಟುಕಾರಂಬಹುಮನ್ಯೇತ|| ೫೨ || ೧೩೮೬ ||

ಅರ್ಥ : ವಿದ್ವಿಷ್ಟಾನಾಂ = ಪಗೆವರ, ಚಾಟುಕಾರಂಓಲೆಯಂ (ಪ್ರಿಯವಚನವನು), ಬಹು = ಪಿರಿದಾಗಿ, ನಮನ್ಯೇತ = ಕೈಕೊಳದಿರ್ಕೆ (ಲೇಸೆಂದುಬಗೆಯಲಾಗದು) || ಅವರ್ಗೆತಾನೊಳ್ಳಿದನೆಂಬಂತಿರ್ಪ್ಪುದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೪೮. ಐಶ್ವರ್ಯವುಯಾರನ್ನುತಾನೆದರ್ಪವಂತನನ್ನಾಗಿಮಾಡುವುದಿಲ್ಲ?

೪೯. ಇದ್ದಐಶ್ವರ್ಯವೆಲ್ಲವೂಅಪಹರಿಸಿಸಲ್ಪಟ್ಟಮೇಲೆ, ಸೈನ್ಯವೆಲ್ಲವೂಅಗಲಿಸಲ್ಪಟ್ಟ, ಶತ್ರುವುಕೋಪಿಸಿಕೊಂಡರೂಏನುತಾನೆಮಾಡಿಯಾನು?

೫೦. ಹಲ್ಲುಕಿತ್ತಹಾವುಹಗ್ಗವೇಸರಿ.

೫೧. ಆರಿಹೋದಕೆಂಡವುಮೇಲೆಬಿದ್ದರೂಏನಾದೀತು?

೫೨. ಶತ್ರುಗಳಪ್ರಿಯವಚನವನ್ನುನಂಬಬಾರದು.

—-

ಜಿಹ್ವಯಾಪಿಲಿಹನ್ಖಂಡ್ಗೋಮಾರಯತ್ಯೇವ|| ೫೩ || ೧೩೮೭ ||

ಅರ್ಥ : ಜಿಹ್ವಯಾಪಿ = ತಾಲಗೆಯಿಂದಮಂ, ಲಿಹನ್ನಪಿ = ನೆಕ್ಕುತ್ತಿರ್ದುದಾಗಿಯುಂ, ಖಡ್ಗೋ = ಅಮ್ಮಾವು, ಮಾರಯತ್ಯೇವ = ಕೊಲ್ವುದೇ || ಇದುನೀತಿಯಲ್ಲೆಂಬುದುತ್ತರವಾಕ್ಯಂ :

ತಂತ್ರಾವಾಪೌನೀತಿಶಾಸ್ತ್ರಂ || ೫೪ || ೧೩೮೮ ||

ಅರ್ಥ : ತಂತ್ರ = ತಂತ್ರಮುಂ, ಅವಾಪೌ = ಅವಾಪಮೆಂಬೆಱಡುಂ, ನೀತಿಶಾಸ್ತ್ರಂ = ನೀತಿಶಾಸ್ತ್ರಮೆಂಬುದು || ಅಲ್ಲಿಂತಂತ್ರಮಂಪೇಳ್ದುದುತ್ತರವಾಕ್ಯಂ

ಸ್ವಮಂಡಲಪಾಲನಾಭಿಯೋಗಸ್ತಂತ್ರಃ|| ೫೫ || ೧೩೮೯ ||

ಅರ್ಥ : ಸ್ವಮಂಡಲಂ = ತನ್ನನಾಡಂ, ಪಾಲನಾಭಿಯೋಗಃ = ರಕ್ಷಿಪವ್ಯಾಪಾರ, ತಂತ್ರಃ = ತಂತ್ರಮೆಂಬುದು || ಆವಾಪಮಂಪೇಳ್ವುದುತ್ತರವಾಕ್ಯಂ :

ಪರಮಂಡಲವ್ಯಾಪ್ತ್ಯಭಿಯೋಗಃಅವಾಪಃ|| ೫೬ || ೧೩೯೦ ||

ಅರ್ಥ : ಪರಮಂಡಲವ್ಯಾಪ್ತಿಅಭಿಯೋಗಃ = ಪರಮಂಡಲವ್ಯಾಪಿಸುವವ್ಯಾಪಾರಂ, ಅವಾಪಃ = ಅವಾಪಮೆಂಬುದು || ತನ್ನನಾಡಂರಕ್ಷಿಸುವುದು, ಪೆಱನಾಡಂವ್ಯಾಪಿಪ್ಪುದುನೀತಿಶಾಸ್ತ್ರದಸಾರಮೆಂಬುದುತಾತ್ಪರ್ಯಂ || ಇಂತಪ್ಪವಿಗ್ರಹಂಬೇಡೆಂಬುದುತ್ತರವಾಕ್ಯಂ :

ಬಹೂನೇಕಧಾ[13]ವಿಗೃಹ್ಣೀಯಾತ್|| ೫೭ || ೧೩೯೧ ||

ಅರ್ಥ : ಬಹೂನ್‌ = ಪಲಂಬರನು, ಏಕಧಾ = ಒರ್ಮೆಯೂ, [14]ನವಿಗೃಹ್ಣೀಯಾತ್‌ = ವಿಗ್ರಹಂಮಾಡದಿರ್ಕೆ || ಪಲರಿಂದೋರ್ವಂಗೆಂತಾದೊಡಂಕೇಡಕ್ಕುಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

೫೩. ಖಡ್ಗವುನಾಲಿಗೆಯಿಂದನೆಕ್ಕಿದರೂಕೊಂದೇಕೊಲ್ಲುತ್ತದೆ.

೫೪. ನೀತಿಶಾಸ್ತ್ರವುತಂತ್ರಮತ್ತುಅವಾಪಎರಡನ್ನುಒಳಗೊಂಡಿರುತ್ತದೆ.

೫೫. ತನ್ನನಾಡನ್ನುರಕ್ಷಿಸುವಕಾರ್ಯವುತಂತ್ರವು.

೫೬. ವೈರಿಗಳಪ್ರದೇಶವನ್ನುಆಕ್ರಮಿಸುವವ್ಯವಹಾರವುಅವಾಪವು.

೫೭. ಒಮ್ಮೆಲೇಹಲವರೊಡನೆದ್ವೇಷಕಟ್ಟಿಕೊಳ್ಳಬಾರದು.

—-

ಸದರ್ಪೋಪಿಸರ್ಪೋವ್ಯಾಪದ್ಯತಏವಪಿಪೀಲಿಕಭಿಃ|| ೫೮ || ೧೩೯೨ ||

ಅರ್ಥ : ಸದರ್ಪೋಪಿ = ಕರಂಬಲ್ಲಿದುದಾಗಿಯುಂ, ಸರ್ಪಃ = ಪಾವುಂ, ಪಿಪೀಲಿಕಾಭಿಃ = ಇರುಪೆಗಳಿಂದಮುಂ, ಪ್ಯಾಪದ್ಯತಏವ = ಕೊಲಲ್ಪಡುಗುಂ || ಪರದೇಶಮನಿಂತುಪುಗುವುದು, ಪೊಱಮಡುವುದೆಂಬುದುತ್ತರವಾಕ್ಯಂ :

ನಾಶೋಧಿತಾಯಾಂಪರಭೂಮೌಪ್ರವಿಶೇನ್ನಿಃಕ್ರಾಮೆದ್ವಾ|| ೫೯ || ೧೩೯೩ ||

ಅರ್ಥ : ಅಶೋಧಿತಾಯಾಂ = ಶೋಧಿಸಲ್ಪಡದ, ಪರಭೂಮೌ = ಪರನಾಡೊಳ್‌, ನಪ್ರವಿಶೇತ್‌ = ಪೊಗದಿರ್ಕೆ, ನನಿಃಕ್ರಾಮೇದ್ವಾ = ಪೊಱಮಡದಿರ್ಕೆಮೇಣ್‌ || ಶೋಧಿಸದಿರಲಪಾಯಮೆಂಬುದುತಾತ್ಪಯಂ | ವಿಗ್ರಹಾವಸರದೊಳಿಂತುಮಾಡವೇಡೆಂಬುದುತ್ತರವಾಕ್ಯಂ :

[15]ವಿಗ್ರಹಕಾಲೇಪರಸ್ಮಾದಾಗತಂಕಮಪಿಸಂಗೃಹ್ಣೀಯಾತ್|| ೬೦ || ೧೩೯೪ ||

ಅರ್ಥ : ವಿಗ್ರಹಕಾಲೇ = ವಿಗ್ರಹಮಾದವಸರದೊಳ್‌, ಪರಸ್ಮಾತ್‌ = ಪಗೆಯತ್ತಣಿಂ, ಆಗತಂ = ಬಂದನಂ, ಕಮಪಿ = ಆವನುಮಂ, ನಸಂಗೃಃನೀಯಾತ್‌ = ಕೈಕೊಳದಿರ್ಕ್ಕೆ || ಕೈಕೊಂಡೊಮಿಂತುಮಾಳ್ಪುದೆಂಬುದುತ್ತರವಾಕ್ಯಂ :

ಸಂಗೃಹ್ಣನ್ವಾ (ಹೈ)ಸಹವಾಸಯೇದನ್ಯತ್ರತದ್ದಾಯಾದಾತ್|| ೬೧ || ೧೩೯೫ ||

ಅರ್ಥ : ಸಂಗೃಹ್ಣನ್‌ ವಾ = ಪಗೆಯತ್ತಣಿಂಬಂದನಂಕೈಕೊಳುತ್ತಿರ್ದ್ದಂಮೇಣ್‌, ಸಹ = ಒಡನೆ, ನಸಹವಾಸಯೇತ್‌ = ಯಿರಿಸದಿರ್ಕೆ (ಆವನನುಕೂಡಿಕೊಂಡಿರಲಾಗದು), ಅನ್ಯತ್ರತದ್ದಾಯಾದಾತ್‌ = ಪಗೆಯದಾಯಿಗಂಪೊಱಗಾಗಿ || ಪಗೆಯರದಾಯಿಗರನಂಬುವುದುಳಿದರಂನಂಬಲಾಗದೆಂಬುದೀಎರಡಱತಾತ್ಪರ್ಯಂ || ಅದಕ್ಕೆತಾತ್ಪರ್ಯದಕಥೆಯಂಪೇಳ್ವುದುತ್ತರವಾಕ್ಯಂ :

—-

೫೮. ಬಹುಬಲವುಳ್ಳಹಾವುಸಹಇರುವೆಗಳಿಂದಕೊಲ್ಲಲ್ಪಡುತ್ತದೆ.

೫೯. ಪರೀಕ್ಷಿಸಲ್ಪಡದಷರನಾಡನ್ನುಪ್ರವೇಶಿಸಕೂಡದು. ಅಲ್ಲಿಂದಹೊರಹೊರಡಲೂಕೂಡದು.

೬೦. ಯುದ್ಧಕಾಲದಲ್ಲಿಶತ್ರುವಿನಕಡೆಯಿಂದಬಂದಯಾರನ್ನೂಹತ್ತಿರಕ್ಕೆಬರಗೊಡಬಾರದು.

೬೧. ಹತ್ತಿರಬರಗೊಟ್ಟರೂ, ಅವರುಶತ್ರುಗಳದಾಯಾದಿಗಳಾಗಿದ್ದಹೊರತುಅವರೊಂದಿಗೆಸೇರಕೂಡದು.

—-

ಶ್ರೂಯತೇಹಿಕಿಲನಿಜಸ್ವಾಮಿನಾಸಹಕೂಟಕಲಹಂವಿಧಾಯಾವಾಪ್ತವಿಶ್ವಾಸಃಕ್ರುಕಲಾಸಃನಾಮಾನೀಕಪತಿರಾತ್ಮಪತಿವಿಪಕಷಂರಾಜಾನಂಜಘಾನೇತಿ[16]|| ೬೨ || ೧೯೬ ||

ಅರ್ಥ : ನಿಜಸ್ವಾಮಿನಾಸಹ = ತನ್ನೊಡೆಯನೊಡನೆ, ಕೂಟಕಲಹಂ = ಪುಸಿದೋಟಿಯಂ, ವಿಧಾಯ = ಮಾಡಿ, ಅವಾಪ್ತವಿಶ್ವಾಸಃ = ನಂಬುಗೆಯನೆಯ್ದಿದ, ಕ್ರುಕಲಾಸಃನಾಮಾ = ಕ್ರುಕಲಾಸನೆಂಬ, ಅನೀಕಪತಿಃ = ಪಡೆವಳಂ, ಆತ್ಮಪತಿವಿಪಕ್ಷಂ = ತನ್ನಾಳ್ದನಪಗೆತನಂ, ವಿರೂಪಾಕ್ಷಂ[17] = ವಿರೂಪಾಕ್ಷನೆಂಬ, ರಾಜಾನಂ = ಅರಸನನು, ಜಘಾನೇತಿ = ಕೊಂದನೆಂದಿಂತು, ಶ್ರೂಯತೇಹಿಕಿಲ = ಕೇಳಲ್ಪಟ್ಟುದಲ್ತೆ || ಪೆಱನಮೇಗಿಂತೆತ್ತುವುದೆಂಬುದುತ್ತರವಾಕ್ಯಂ :

ಬಲಮಪೀಡಯನ್ಪರಾನಭಿಷೇಣಯೇತ್|| ೬೩ || ೧೩೯೭ ||

ಅರ್ಥ : ಬಲಮಪೀಡಯನ್‌ = ಪರಿಗ್ರಹ (ತನ್ನಬಲವ)ಮಂನೋಯಿಸದೆ, ಪರಾನ್‌ = ಪಗೆವರ್ಗ್ಗೆ, ಅಭಿಷೇಣಯೇತ್‌ = ಇದಿರೆತ್ತುಗೆ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ದೀರ್ಘಪ್ರಯಾಣೋಪಹತಂಬಲಮನಾಯಾಸೇನಭವತಿಪರೇಷಾಂಸಾಧ್ಯಂ|| ೬೪ || ೧೩೯೮ ||

ಅರ್ಥ : ದೀರ್ಘಪ್ರಯಾಣೋಪಹತಂ = ಪಿರಿದಪ್ಪಪ್ರಯಾಣದಿಂಬಳಲ್ದ, ಬಲಂ = ಸೇನೆ, ಅನಾಯಾಸೇನ = ಸುಖದಿಂ, ಪರೇಷಾಂ = ಪಗೆವರ್ಗೆ, ಸಾಧ್ಯಂ = ಸಾಧಿಸಲ್ಪಡುವುದು, ಭವತಿ = ಅಕ್ಕುಂ || ಆಶಕ್ತಪರಿಗ್ರಹಂಜಯಿಸಲಾರದೆಂಬುದುತಾತ್ಪರ್ಯಂ || ಪಗೆವರಮೇಲೆನಡೆವನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೬೨. ಕ್ರುಕಲಾಸನೆಂಬಸೇನಾಪತಿಯುತನ್ನಪ್ರಭುವಿನೊಡನೆಜಗಳವಾಡಿದಂತೆನಟಿಸಿ, ನಂಬಿಸಿತನ್ನಪ್ರಭುವಿನಶತ್ರುರಾಜನನ್ನುಕೊಂದನೆಂದುಕೇಳಿಬರುತ್ತದೆ.

೬೩. ತನ್ನಸೈನ್ಯವನ್ನುನೋಯಿಸದೆಶತ್ರುವನ್ನುಎದುರಿಸಬೇಕು.

೬೪. ದೀರ್ಘಪ್ರಯಾಣದಿಂದಬಳಲಿದಸೈನ್ಯವನ್ನುಶತ್ರುಗಳುಸುಲಭವಾಗಿಸೋಲಿಸುವರು.

—-

 

[1]ತೆಗೆದುಕೊಳ್ಳುತ್ತಾನೆಎಂದುಅರ್ಥವಿರಬೇಕು.

[2]ಮೈ. ಚೌ. ಬಲವತೀಸೀಮಾಧಿಪೇರ್ಥಂ.

[3]ಚೌ. ಈವಾಕ್ಯವಿಲ್ಲ.

[4]ಈವಾಕ್ಯದಅರ್ಥಸ್ಪಷ್ಟವಿಲ್ಲ.

[5]ಮೈ. ಈವಾಕ್ಯದಅರ್ಧಭಾಗಹಿಂದಿನವಾಕ್ಯದೊಂದಿಗೆಸೇರಿದೆ.

[6]ಮೈ. ವಿಶೀರ್ಣಯೂಥೋಇತ್ಯಾದಿಭಾಗವುಪ್ರತ್ಯೇಕವಾಕ್ಯವಾಗಿದೆ.

[7]ಮೈ. ಚೌ. ಗಳಲ್ಲಿಪಾಠಭೇಧಮತ್ತುಅರ್ಥಬೇಧವಿದೆ.

[8]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[9]ಚೌ. ಸಂಘಸ್ಯ.

[10]ಮೈ. ಚೌ. ಈವಾಕ್ಯವಿಲ್ಲ.

[11]ಚೌ. ಈಮತ್ತುಮುಂದಿನಎರಡುವಾಕ್ಯಗಳಿಲ್ಲ.

[12]ಮೈ. ಅವಿಜ್ಞಾತಕರಣವೃತ್ತಃ.

[13]ಮೈ. ಬಹೂನೇಕೋ. ಚೌ. ಈಮತ್ತುಮುಂದಿನವಾಕ್ಯವುಒಂದೇವಾಕ್ಯದಲ್ಲಿಅಡಕವಾಗಿವೆ.

[14]ಒರ್ಮ್ಮೆಯೇಎಂದುಓದಬೇಕು.

[15]ಚೌ. ಈಮತ್ತುಮುಂದಿನಎರಡುವಾಕ್ಯಗಳುಒಂದರಲ್ಲೇಸೇರಿವೆ.

[16]ಇಲ್ಲಿಕ್ರುಕಲಾಸನೆಂಬುವನುಕಲಹಮಾಡಿದಂತೆನಟಿಸಿವೈರಿಯವಿಶ್ವಾಸವನ್ನುಗಳಿಸಿಅವನನ್ನುಕೊಂದನೆಂದುಹೇಳಿದೆ. ಮೈ. ಚೌ. ಪಾಠಾಂತರದಲ್ಲಿಈಅರಸನಹೆಸರುವಿರೂಪಾಕ್ಷಎಂದಿದೆ. ಆದರೆಈಘಟನೆಯಐತಿಹಾಸಿಕತೆಯನ್ನುನಿರ್ಧರಿಸಲಾಗುವುದಿಲ್ಲ.

[17]ಈಹೆಸರುಮೂಲವಾಕ್ಯದಲ್ಲಿಲ್ಲ.