ಅರಸಂಗೆಮೊದಲೊಳಿಂತಪ್ಪುದುಂಪೇಳಲಾಗದೆಂಬುದುತ್ತರವಾಕ್ಯಂ :

[1]ಕಿಂಮಂತ್ರೀಮಿತ್ರಂ[2]ಸಹಾಯೋವಾಯಃಪ್ರಥಮಮೇವಯುದ್ಧೋದ್ಯೋಗಂಭೂಮಿತ್ಯಾಗಂಚೋಪದಿಶತಿ|| ೧ || ೧೩೩೫ ||

ಅರ್ಥ : ಸಃ = ಆತಂ, ಕಿಂಮಂತ್ರೀ = ಏಂಮಂತ್ರಿಯೇ, ಮಿತ್ರಂ = ಕಳೆಯನೇ, ಸಹಾಯೊವಾ = ಸಹಾಯಕನೇಮೇಣ್, ಯಃಆವನೋರ್ವಂ, ಪ್ರಥಮಮೇವ = ಮೊದಲೊಳೆಯುದ್ಧೋದ್ಯೋಗಂಕಾಳೆಗಕ್ಕೊಡರ್ಚುವುದಂ, ಭೂಮಿತ್ಯಾಗಂಚ = ನೆಲನಂಬಿಡಿಸುವುದುಮಂಮೇಣ್, ಉಪದಿಶತಿ = ಪೇಳ್ಗುಂ || ಕಾದನೆಲನಂಬಿಡದಿರ್ಪ್ಪುಪಾಯಮಂಪೇಳ್ವುದೆಂಬುದುತಾತ್ಪರ್ಯಂ || ಯುದ್ಧೋದ್ಯೋಗಮಂಪೇಳ್ವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಕಿಂಯೋದ್ಧಾ[3]ಯೋವ್ಯಾಹರತಿಮಹಾಂತಮನರ್ಥಸಂಶಯಂಸಂಗ್ರಾಮೇ|| ೨ || ೧೩೩೬ ||

ಅರ್ಥಯಃ = ಆವನೋರ್ವಂ, ಸಂಗ್ರಾಮೇ = ಕಾಳೆಗದಲ್ಲಿ, ಮಹಾಂತಂ = ಪಿಱಿದುಅನರ್ಥಸಂಶಯಂ = ಅನರ್ಥವಹಸಂಶಯವನು, ವ್ಯಾಹರತಿ = ನುಡಿವನು, ಸಃ = ಆತಂ, ಕಿಂಯೋದ್ಧಾ = ಕಾದುವನೆಏನು ||

[4]ವ್ಯಾಹರತಿಮಹಾಂತಮನರ್ಥಸಂಶಯಂಸಂಗ್ರಾಮೇಕೋನಾಮಾತ್ಮವಾನಾದಾದೇವಸ್ವಾಮಿನಂಪ್ರಾಣಸಂದೇಹತುಲಾಮಾರೋಹಯತಿ|| ೩ || ೧೩೩೭ ||

ಅರ್ಥ : ಸಃ = ಕಾಳಗದುದ್ಯೋಗಂ, ಮಹಾಂತಂ = ಪಿರಿದಪ್ಪ, ಅನರ್ಥಸಂಶಯಂ = ಕೇಡುಕ್ಕುಮೆಂಬಸಂದಯಮಂ, ವ್ಯಾಹರತಿ = ತಕ್ಕುಂ, ಕೋನಾಮ = ಆವಂ, ಆತ್ಮವಾನ್= ತನ್ನತಾನಱಿವಂ, ಆದೌಏವ = ಮೊದಲೊಳಗೆ, ಸ್ವಾಮಿನಂ = ಆಳ್ದನಂ, ಸಂಗ್ರಾಮೇ = ಕಾಳಗದೊಳ್, ಪ್ರಾಣಸಂದೇಹತುಲಾಂ = ಬರ್ದಂಕುಗುಂಬರ್ದುಂಕನೆಂಬಸಂದೇಹದತೊಲೆಯಂ, ಆರೋಹತಿ = ಏರಿಸುಗುಂ || ಪೆಱವುಪಾಯಂಗಳಿಂಕಾಳೆಗವಾಗಲೆಂಬುದುತಾತ್ಪರ್ಯಂ || ಭೂಮಿತ್ಯಾಗಮಂಪೇಳ್ವುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ ||

—-

. ಆರಂಭದಲ್ಲಿಯೇಯುದ್ಧಮಾಡಬೇಕೆಂದುದೇಶವನ್ನುಬಿಡಬೇಕೆಂದು, ಉಪದೇಶಿಸುವನುಮಂತ್ರಿಯೇ, ಮಿತ್ರನೇ, ಸಹಾಯಕನೇ?

. ಯುದ್ಧದಲ್ಲಿತನ್ನಪ್ರಭುವಿಗೆಮಹಾಅನರ್ಥಉಂಟಾಗುವುದೆಂಬಸಂಶಯವನ್ನುಹುಟ್ಟಿಸುವವನುಯೋಧನೇ?

. ಯಾವಬುದ್ಧಿವಂತನುಯುದ್ಧಕಿಂತಮೊದಲೇತನ್ನಒಡೆಯನನ್ನುಪ್ರಾಣಹೋದೀತೆಂದುಸಂದೇಹಕ್ಕೀಡುಮಾಡುತ್ತಾನೆ.?

—-

ಭೂಮ್ಯರ್ಥಂಭೂಪತೀನಾಂನಯೋವಿಕ್ರಮಶ್ಟನಭೂಮಿತ್ಯಾಗಾಯ|| ೪ || ೧೩೩೮ ||

ಅರ್ಥ : ಭೂಮ್ಯರ್ಥಂ = ಭೂಮಿಕಾರಣಮಾಗಿ, ಭೂಪತೀನಾಂ = ಅರಸುಗಳ್ಗೆ, ನಯಃ = ನೀತಿಯುಂ, ವಿಕ್ರಮಶ್ಚ = ಪರಾಕ್ರಮಮಂಭೂಮಿತ್ಯಾಗಾಯ = ಭೂಮಿಯಬಿಡುವುದಕ್ಕೆಕಾರಣಂ, ನ = ಅಲ್ತು || ಭೂಮಿಯಂಬಿಸುಡುವುದಂಪೇಳಲಾಗದೆಂಬುದುತಾತ್ಪರ್ಯಂ || ಇಂತಪ್ಪಾತಂಕಾದುವುದೆಂಬುದುತ್ತರವಾಕ್ಯಂ :

ಬುದ್ಧಿಯುದ್ದೇನಪರಾನ್ಜೇತುಮಶಕ್ತಃಶಸ್ತ್ರಯುದ್ಧಮುಪಕ್ರಮೇತ್|| ೫ || ೧೩೩೯ || |

ಅರ್ಥ : ಬುದ್ಧಿಯುದ್ಧೇನ = ಬುದ್ಧಿಯಿಂಕಾದುವುದರಿಂದ, ಪರಾನ್ = ಪೆಱರಂ, ಜೇತುಂ = ಗೆಲಲುಂ, ಅಶಕ್ತಃಆಱದಂ, ಶಸ್ತ್ರಯುದ್ಧಂಶಸ್ತ್ರದಿಂ = ಕಾದುವುದಂ, ಉಪಕ್ರಮೇತ್ = ಮಾಳ್ಕೆ || ಬುದ್ಧಿಯಿಂಗೆಲಲಾರ್ಪೊಡೆಕಾದಲ್ವೇಡೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ತಥೇಷವಃಪ್ರಭವಂತಿಯಥಾಪ್ರಜ್ಞಾವಂತಾಂಪ್ರಜ್ಞಾಃ|| ೬ || ೧೨೪೦ ||

ಅರ್ಥ : ಯಥಾ = ಎಂತು, ಪ್ರಜ್ಞಾವತಾಂಬುದ್ಧಿಯುಳ್ಳರ್ಗೆ, ಪ್ರಜ್ಞಾಃ = ಬುದ್ಧಿಗಳು, ಪ್ರಭವಂತಿ = ಗೆಲ್ವವು, ತಥಾ = ಅಂತೆ, ಇಷವಃ = ಅಂಬುಗಳು, ನ = ಗೆಲಲಾಱವು || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

—-

. ಅರಸರನೀತಿಯು, ಪರಾಕ್ರಮವುಭೂಮಿಯನ್ನುಪಡೆಯುವುದಕ್ಕೇಹೊರತುಕಳೆದುಕೊಳ್ಳುವುದಕ್ಕಲ್ಲ.

. ಶತ್ರುಗಳನ್ನುಬುದ್ಧಿಯುದ್ಧದಿಂದಗೆಲ್ಲುವುದಕ್ಕೆಆಗದೇಹೋದರೆಶಸ್ತ್ರಯುದ್ಧಕ್ಕೆತೊಡಗಬೇಕು.

. ಬುದ್ಧಿವಂತರಬುದ್ಧಿಯಗೆಲ್ಲುವಂತೆಬಾಣಗಳುಗೆಲ್ಲಲಾರೆವು.

—-

ದೃಷ್ಟೇsಪ್ಯರ್ಥೇಭವಂತ್ಯಪರಾದ್ಧೇಷವೋಧನುಷ್ಮಂತೋsದೃಷ್ಟಮಪ್ಯರ್ಥಂಸಾಧುಸಾಧಯಂತಿಪ್ರಜ್ಞಾವಂತಃ|| ೭ || ೧೩೪೧ ||

ಅರ್ಥ : ಧನುಷ್ಮಂತಃಬಿಲ್ಗಾಱರ್, ದೃಷ್ಟೇ = ಕಾಣಲ್ಪಟ್ಟ, ಅರ್ಥೇsಪಿ = ಗುಱಿಯೊಳಂ, ಅಪರಾದ್ಧೇಷವಃ = ತಪ್ಪಿದಂಬುಗಳನುಳ್ಳರ್, ಭವಂತಿ = ಅಪ್ಪರ್, ಅದೃಷ್ಟಮಪಿ = ಕಾಣದುದುಮಂ, ಅರ್ಥಂ = ಕಾರ್ಯಮಂ, ಸಾಧುಸಾಧಯತಿ = ಲೇಸಾಗಿಸಾಧಿಸುವರು, ಪ್ರಜ್ಞಾವಂತಃ = ಬುದ್ಧಿವಂತರ್ || ಬುದ್ಧಿಯಿಂದೃಷ್ಟಾಂತಮಕ್ಕುಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಶ್ರೂಯತೇಹಿಕಿಲದೂರಸ್ಥಾಪಿ[5]ಮಾಧವಪಿತಾಕಾಮುಂಧಕೀ[6]ಪ್ರಯೋಗೇಣಮಾಧವಾಯಮಾಳಂತೀಂಸಾಧಯಾಮಸೇತಿ|| ೮ || ೧೩೪೨ ||

ಅರ್ಥ : ಶ್ರೂಯತೇಹಿಕಿಲ = ಕೇಳಲ್ಪಟ್ಟುದಲ್ತೆ, ದೂರಸ್ಥಾಪಿ5 = ದೂರದೊಳಿರ್ದನಾಗಿಯುಂ, ಮಾದವಪಿತಾ = ಮಾಧವನತಂದೆ, ಕಾಮಾಂಧಕೀ6ಪ್ರಯೋಗೇಣ = ಕಾಮಾಂಧಕೀಎಂಬದೂತಿಯನಟ್ಟುವುದಱಿಂ, ಮಾಧವಾಯ = ಮಾಧವಂಗೆ, ಮಾಲತೀಂ = ಮಾಲತಿಎಂಬಕನ್ನೆಯಂ, ಸಾಧಯಾಮಾಸಇತಿ = ಸಾಧಿಸಿದನೆಂತು ||[7] ಪ್ರಜ್ಞೆಯಕಾರ್ಯಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

. ಎದುರಿಗೆಕಾಣುವವಸ್ತುವಿನಮೇಲೂಬಿಲ್ಲುಗಾರರುಗುರಿತಪ್ಪಬಹುದುಆದರೆಬುದ್ಧಿಶಾಲಿಗಳುಕಾಣದವಿಷಯವನ್ನುಸಹಸರಿಯಾಗಿಸಾಧಿಸುತ್ತಾರೆ.

. ಮಾಧವನತಂದೆಯದೂರದಲ್ಲಿದ್ದರೂಕಾಮುಂದಕಿಯನ್ನುಉಪಯೋಗಿಸಿಮಾಧವನಿಗೆಮಾಲತಿಯನ್ನುಸಾಧಿಸಿಕೊಟ್ಟನುಎಂದುಕೇಳಿಬರುತ್ತದೆ.

—-

[8]ಸ್ಮೃತಿವ್ಯತೀತವಿಷಯಾಮತಿರಾಗಾವಿಗೋಚರಾಬುದ್ಧಿಸ್ತಾತಾತಕೀಪ್ರೋಕ್ತಾಪ್ರಜ್ಞಾತ್ರೈಕಾಲಿಕೀಘೃತಾ[9] || ಪ್ರಜ್ಞಾಹತಾಃ[10]ಕುಲಿಶಹತಾಇವಪುನಃಪ್ರಾದುರ್ಭವಂತಿಭೂಮಿಭೃತಃ|| ೯ || ೧೩೪೩ ||

ಅರ್ಥ : ಕುಲಿಶಹತಾಃ = ವಜ್ರದಿಂಪೊಯ್ಯಲ್ಪಟ್ಟ, ಭೂಮಿಭೃತಇವ = ಪರ್ವತಂಗಳಂತೆ, ಪ್ರಜ್ಞಾಹತಾಃ= ಬುದ್ಧಿಯಿಂಕೆಡಿಸಲ್ಪಟ್ಟ, ಭೂಮಿಭೃತಃ = ಅರಸುಗಳು, ಪುನಃಮತ್ತೆ, ನಪ್ರಾದುರ್ಭವಂತಿ = ಎಚ್ಚಱಲಾಱರ್ || ಮತಿಗೆಅಸಾಧ್ಯಮಿಲ್ಲೆಂಬುದುತಾತ್ಪರ್ಯಂ || ಇಂತಪ್ಪಲ್ಲಿಭಯವಾಗಲಾಗದೆಂಬುದುತ್ತರವಾಕ್ಯಂ :

ಪರೈಃಸ್ವಸ್ಯಾಭಿಯೋಗಮಪಶ್ಯತೋಭಯಂನದೀಮಪಶೃತಉಪಾನಪರಿಪತ್ಯಜನಮಿವ[11]|| ೧೦ || ೧೩೪೪ ||

ಅರ್ಥ : ಪರೈಃ = ಪೆಱರಿಂ, ಸ್ವಸ್ಯ = ತನಗೆ, ಅಭಿಯೋಗಂ = ಕೇಡಂ, ಅಪಶ್ಯತಃ = ಕಾಣದನ, ಭಯಂ = ಭಯಂ, ನದೀಂ = ತೊಱೆಯಂ, ಅಪಶ್ಯತಃ = ಕಾಣದನ, ಉಪಾನಪರಿಪತ್ಯಜನಮಿವ11 = ಕೆರ್ಪ್ಪುಗಳೆವುದೆಂತಂತೆ || ಕಾರ್ಯಮಂಕಾಣಲಾಗದೆಂಬುದುತಾತ್ಪರ್ಯಂ || ಅತಿಕ್ರೂರನಿಂತಪ್ಪನಕ್ಕುಮೆಂಬುದುತ್ತರವಾಕ್ಯಂ :

ಅತಿತೀಕ್ಷ್ಣೋಬಲವಾನಪಿಶರಭಇವಚಿರಂನಂದತಿ|| ೧೧ || ೧೩೪೫ ||

ಅರ್ಥ : ಅತಿತೀಕ್ಷಃಕರಂಬೆಟ್ಟದನಪ್ಪಂ, ಬಲವಾನಪಿ = ಬಲ್ಲಿದನಾಗಿಯುಂಶರಭಇವ = ಶರಭನಂತೆ[12] (ಅಷ್ಟಾಪದಮೇಗದಹಾಂಗೆ) ಚಿರಂ = ಪಲಕಾಲಂ, ನನಂದತಿ = ಪೆರ್ಚ್ಚಂ || ಕಜ್ಜಗಲಿಯಪ್ಪುದೆಂಬುದುತಾತ್ಪರ್ಯಂ || ಇಂತಪ್ಪಕಾಳೆಗಂಲೇಸೆಂಬುದುತ್ತರವಾಕ್ಯಂ :

—-

. ಬುದ್ಧಿಯನ್ನುಕಳೆದುಕೊಂಡರಾಜರುಸಿಡಿಲಿನಹೊಡೆತಕ್ಕೆಸಿಕ್ಕಪರ್ವತಗಳಂತೆಪುನಃಮೇಲೇಳಲಾರರು.

೧೦. ಶತ್ರುಗಳಆಕ್ರಮಣವನ್ನುನೋಡದೆಭಯಪಡುವಡುವು, ನದಿಯನ್ನುಕಾಣುವುದಕ್ಕೆಮೊದಲೇಕಾಲಿನಚಪ್ಪಲಿಗಳನ್ನುಇತೆಗೆದುಕೈಯಲ್ಲಿಹಿಡಿದಂತೆ.

೧೧. ಎಷ್ಟುಬಲವಂತನಾದರೂಬಹಳಕ್ರೂರಿಯಾದವನುಶರಭದಂತೆಬಹಳಕಾಲಸುಖಿಯಾಗಿಇರಲಾರನು.

—-

ಪ್ರಹರತೋಪಸರತೋವಾಸಮೋವಿನಾಶೇವರಂಪ್ರಹಾರೋಯತ್ರನೈಕಾಂತಿಕೋವಿನಾಶಃ || ೧೨ || ೧೨೪೬ ||

ಅರ್ಥ : ಪ್ರಹರತಃ = ಸಂಗ್ರಾಮದಲ್ಲಿಇಱಿವುತ್ತಿರ್ದ್ದಂಗೆ, ಅಪಸರತೋವಾ = ಹಿಮ್ಮೆಟ್ಟಿರ್ದಂಗೆಮೇಣ್, ವಿನಾಶೇ = ಕೇಡು (ತನಗೆಮರಣವು) ಸಮೋ = ಸಮಾನಮಾಗುತ್ತಿರ್, ವರಂ = ಒಳ್ಳಿತು, ಪ್ರಹಾರಃ = ಇಱಿವುದು, ಯತ್ರ = ಆವುದೊಂದೆಡೆಯೊಳ್, ಏಕಾಂತಿಕೋ = ದಿಟದಿಂದಪ್ಪ, ವಿನಾಶಃ = ಕೇಡು, ನ = ಇಲ್ಲ || ಕೇಡುಂಟೆಂದಱಿದೊಡಂಕಾದಿದೊಡಮಾಗಂ, ಕೇಡುಮೆಂಬಸಂದೇಹದೊಳ್ಕಾದುವುದೆಲೇಸೆಂಬುದುತಾತ್ಪರ್ಯಂ || ಇದಕ್ಕೆಮತ್ತಂತಾತ್ಪರ್ಯಮುತ್ತರವಾಕ್ಯಂ :

ಕುಟಿಲಾಹಿಗತಿರ್ದೈವಸ್ಯಮುಮೂರ್ಷುಮಪಿಜೀವಯತಿಜಿಜೀವಿಷುಮಪಿಮಾರಯತಿ|| ೧೨ || ೧೩೪೭ ||

ಅರ್ಥ : ಹಿ = ನಿಕ್ಕುವದಿಂ, ದೈವಸ್ಯ = ದೈವದ, ಗತಿಃ = ಕ್ರಮಂ, ಕುಟಿಲಾ = ಅಱಿಯಲ್ಪಾರದು, ಮುಮೂರ್ಷುಮಪಿ = ಸಾಯಲ್ವೇಡಿರ್ದನಂ, ಜೀವಯತಿ = ಜೀವಿಸುಗುಂ, ಜಿಜೀವಿಷುಮಪಿ = ಬರ್ದುಂಕಲ್ವೇಡಿರ್ದನಂ, ಮಾರಯತಿ = ಕೊಲ್ಗುಮಪ್ಪುದಱಿಂ || ಕೇಡುದಿಟಮೆಂಸಱಿದಲ್ಲಿಇದಂಮಾಳ್ಪುದೆಂಬುದುತ್ತರವಾಕ್ಯಂ :

ದೀಪಶಿಖಾಯಾಂಪತಂಗವದೈಕಾಂತಿಕೇವಿನಾಶೇsವಿಚಾರಮಪ್ಪಸರೇತ್|| ೧೪ || ೧೩೪೮ ||

ಅರ್ಥ : ದೀಪಶಿಖಾಯಾಂ = ಸೊಡರಕುಡಿಯೊಳ್, ಪತಂಗವತ್ = ಪತಂಗವುಳುವಿಂಗೆಂತಂತೆ, ಐಕಾಂತಿಕೇ = ದಿಟದಿಂದಪ್ಪ, ವಿನಾಶೇ = ಕೇಡಾಗುತ್ತಿರೆ, ಅವಿಚಾರಂ = ವಿಚಾರಿಸದೆ, ಅಪಸರೇತ್ = ಪಿಮ್ಮೆಟ್ಟುಗೆ || ಕಿಡುವಂತೆನೆಗಳಲಾಗದೆಂಬುದುತಾತ್ಪರ್ಯಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೧೨. ಯುದ್ಧದಲ್ಲಿಶತ್ರವನ್ನುಎದುರಿಸಿಹೋರಾಟುತ್ತಿರುವವನಿಗೂಹಿಮ್ಮೆಟ್ಟುತ್ತಿರುವವನಿಗೂವಿನಾಶವುಸಮನಾಗಿರುವಲ್ಲಿವಿನಾಶನಿಶ್ಚಿತವಿಲ್ಲದಿರುವಾಗಎದುರಿಸಿಹೋರಾಟುವುದುಲೇಸು.

೧೩. ದೈವಗತಿಯುನಿಜವಾಗಿಯೂವಕ್ರವೇ. ಅದುಸಾಯಬೇಕೆಂದಿರುವವನನ್ನುಬದುಕಿಸುತ್ತದೆ. ಬದುಕಬೇಕೆಂದಿರುವವನನ್ನುಕೊಲ್ಲುತ್ತದೆ.

೧೪. ದೀಪದಕುಡಿಯಲ್ಲಿಸಿಕ್ಕಹುಳುವಿನಂತೆನಾಶವುನಿಶ್ಚಯವೆಂದಿರುವಾಗವಿಚಾರಕ್ಕೆತೊಡಗದೇಹಿಮ್ಮೆಟ್ಟಬೇಕು.

—-

ಜೀವತಃಸಂಭವೇದ್ದೈವೋದಯಾತ್[13]ಕಾಲಬಲಂ|| ೧೫ || ೧೩೪೯ ||

ಅರ್ಥ : ಜೀವತಃ = ಬರ್ದುಂಕುದಿರ್ದ್ದಂಗೆ (ಪ್ರಾಣವುಳಿದಾತಂಗೆ) ದೈವೋದಯಾತ್ = ಪುಣ್ಯೋದಯದಿಂ, ಕಾಲಬಲಂ (ಒಂದುಕಾಲಕ್ಕೆಬಲಂ) ಸಂಭವೇತ್ = ದೊರೆಕೊಳಲ್ಕೆವೇಳ್ಕುಮಪ್ಪುದಱಿಂ || ಇಂತಪ್ಪಬಲಂಲೇಸೆಂಬುದುತ್ತರವಾಕ್ಯಂ :

ವರಮಲ್ಪಮಪಿಸಾರಂಬಲಂಭೂಯಸೀಮುಂಡಲಮಂಡಲೀ|| ೧೬ || ೧೪೫೦ ||

ಅರ್ಥ : ಅಲ್ಪಮಪಿ = ಕಿಱಿದಾದೊಡೆಂಸಾರಂಬಲಂಸಾರಮಪ್ಪಬಲಂ, ವರಂ = ಲೇಸು, ಭೂಯಸೀ = ಪಿರಿದಪ್ಪ, ಮುಂಡಮಂಡಲೀ = ಬೋಳರನೆರವಿ, ನ = ಬಳ್ಳಿತ್ತಲ್ಲ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಅಸಾರಬಲಭಂಗಃಸಾರಬಲಭಂಗಕರೋತಿ|| ೧೭ || ೧೩೫೧ ||

ಅರ್ಥಅಸಾರಬಲಭಂಗಃನಿಸ್ಸಾರಮಪ್ಪಪರಿಗ್ರಹದಕೇಡು, ಸಾರಬಲಭಂಗಂ = ಸಾರಮಪ್ಪಬಲದಕೇಡಂ, ಕರೋತಿ = ಮಾಳ್ಕುಂ || ಸಾರಮಪ್ಪಪರಿಗ್ರಹಮಂಸಂವರಿಸುವುದೆಂಬುದುತಾತ್ಪರ್ಯಂ || :

ನಾಪ್ರತಿಗ್ರಹೋಯುದ್ಧಮುಪೇಯಾತ್ || ೧೮ || ೧೩೫೨ ||

ಅರ್ಥ : ಅಪ್ರತಿಗ್ರಹೋ(ಪರಿ) = ಪಡಿವಲ್ಲಮಿಲ್ಲದಂ, ಯುದ್ಧಂ = ಕಾಳೆಗಮಂ, ನೋಪೇಯಾತ್ = ಮಾಡದಿರ್ಕ್ಕೆ || ಅಂಕೆಯಬಲಮಿಲ್ಲದೆಕಾದಲಾಗದೆಂಬುದುತಾತ್ಪರ್ಯಂ || ಪಡಿವಲದಲಕ್ಷಣಂಪೇಳ್ವುದುತ್ತರವಾಕ್ಯಂ :

ರಾಜನ್ಯಂ[14]ಜನಂಪುರಸ್ಕೃತ್ಯಪಶ್ಚಾತ್ಸ್ವಾಮ್ಯಧಿಷ್ಟಿತಸಾರಬಲಸ್ಯನಿವೇಶನಂಪ್ರತಿಗ್ರಹಃ|| ೧೯ || ೧೩೫೩ ||

ಅರ್ಥ : ರಾಜನ್ಯಂ = ವೀರರಹಅರಸೆನಿಸಿದ, ಜನಂ = ಪರಿಗ್ರಹಮಂ, ಪುರಸ್ಕೃತ್ಯ = ಮುಂತುಮಾಡಿ, ಪಶ್ಚಾತ್ = ಪಿಂತೆ, ಸ್ವಾಮ್ಯಧಿಷ್ಟಿತಸ್ಯ = ಸ್ವಾಮಿಯನೊಳಗಿಕ್ಕಿಕೊಂಡುಕೂಡಿದ, ಸಾರಬಲಸ್ಯ = ಸಾರಬಲದ, ನಿವೇಶನಂ = ಇರಿಸುಹಂ (ಒಡ್ಡು), ಪ್ರತಿಗ್ರಹಃ = ಪಡಿವಲಮೆಂಬುದು || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೧೫. ಬದುಕಿದವನಿಗೆದೈವಕೃಪೆಯಿಂದಎಂದಿಗಾದರೂಬಲಶಾಲಿಯಾಗುವಕಾಲವುಬರಬಹುದು.

೧೬. ಸ್ವಲ್ಪವೇಆದರೂಸಾರವತ್ತಾದಸೈನ್ಯವಿರುವದುಒಳ್ಳೆಯದು. ಕೇವಲಸಂಖ್ಯಾಬಲಮಾತ್ರವಿದ್ದುಸಾರವಿಲ್ಲದಸೈನ್ಯದಿಂದಪ್ರಯೋಜನವಿಲ್ಲ.

೧೭. ಸಾರವಿಲ್ಲದಸೈನ್ಯಕ್ಕುಂಟಾದಅಪಜಯವುಸತ್ವಶಾಲಿಯಾದಸೈನ್ಯದಪರಾಜಯಕ್ಕೆಕಾರಣವಾಗುತ್ತದೆ.

೧೮. ಪ್ರತಿಗ್ರಹವಿಲ್ಲದೆಯುದ್ಧಕ್ಕೆಹೋಗಕೂಡದು.

೧೯. ಕ್ಷತ್ರಿಯರಸೈನ್ಯವನ್ನುಮುಂದೆಮಾಡಿ, ಹಿಂದೆಸ್ವಾಮಿಯನ್ನೊಳಗೊಂಡಸಾರವತ್ತಾದಬಲವನ್ನಿಟ್ಟುಕೊಳ್ಳುವುದುಪ್ರತಿಗ್ರಹ.

—-

ಸಪ್ರತಿಗ್ರಹಂಬಲಂಪರಿಗ್ರಹಂಸಾಧುಯುದ್ಧಾಯೋತ್ಸಹತೇ|| ೨೦ || ೧೩೫೪ ||

ಅರ್ಥ : ಸಪ್ರತಿಗ್ರಹಂ = ಅಂಕೆಯಬಲಮನುಳ್ಳಬಲಂ, ಪರಿಗ್ರಹಂಯುದ್ಧಾಯ = ಕಾದಲ್ವೇಡಿ, ಸಾಧು, ಲೇಸಾಗಿ, ಉತ್ಸಹತೇ = ಉತ್ಸಾಹಂಮಾಳ್ಕು || ಮುಂತಣಬಲವಳಿದೊಡಂಪಿಂತಣಬಲಂನೂಕೆಜಯಮಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನೆಲಂಬಲಕ್ಕೆಲೇಸೆಂಬುದುತ್ತರವಾಕ್ಯಂ :

ಪೃಷ್ಠತಃಸದುರ್ಗಜಲಾಭೂಮಿರ್ಬಲಸ್ಯಮಹಾನಾಶ್ವಾಸಃ|| ೨೧ || ೧೩೫೫ ||

ಅರ್ಥ : ಪೃಷ್ಠತಃ = ಪಿಂತೆ, ಸದುರ್ಗಜಲಾ = ದುರ್ಗಮುಮಂನೀರುಮನುಳ್ಳ, ಭೂಮಿಃ = ನೆಲಂ, ಬಲಸ್ಯ = ಬಲಕ್ಕೆ, ಮಹಾನ್ = ಪಿರಿದಪ್ಪ, ಆಶ್ವಾಸಃ = ಉಸಿರ್ಪ್ಪತ್ತು (ಆಧಾರವು) || ಇದಕ್ಕೆದೃಷ್ಟಾಂತದಿಂತಾತ್ಪರ್ಯಂಪೇಳ್ವುದುತ್ತರವಾಕ್ಯಂ :

ನದ್ಯೋನೀಯಮಾನಸ್ಯತಟಸ್ಥಪುರುಷದರ್ಶನಮಪಿಜೀವಿತಹೇತುಃ|| ೨೨ || ೧೩೫೬ ||

ಅರ್ಥ : ನದ್ಯಃ = ತೊಱಿಯಿಂ, ನೀಯಮಾನಸ್ಯ = ಎಳೆಯಲ್ಪಡುತ್ತಿರ್ದಂ, ತಟಸ್ಥಪುರುಷದರ್ಶನಮಪಿ = ತಡಿಯಲ್ಲಿರ್ದರಂ, ಕಾಣ್ಪುದು, ಜೀವಿತಹೇತುಃ = ಬರ್ದುಂಕುವುದಕ್ಕೆಕಾರಣಮೆಂತಂತೆ |

ನಿರನ್ನಮಪಿಸಪ್ರಾಣಮೇವಬಲಂಜಲಂಯದಿಲಭತೇ|| ೨೩ || ೧೩೫೬ ||

ಅರ್ಥ : ನಿರನ್ನಮಪಿ = ಆಹಾರಮಿಲ್ಲದುದಾಗಿಯುಂ, ಬಲಂ = ಪಡೆ, ಸಪ್ರಾಣಮೇವ = ಶಕ್ತಿಯುಳ್ಳದೆಅಹುದು, ಜಲಂ = ನೀರು, ಯದಿಲಭತೇ = ಪಡೆದುದಪ್ಪೊಡೆ || ನೀರನುಳ್ಳಡೆಯೊಳ್ಒತ್ತುಗೊಂಡೊಡ್ಡನಿಡುವುದೆಂಬುದುತಾತ್ಪರ್ಯಂ ||

—-

೨೦. ಪ್ರತಿಗ್ರಹದಬೆಂಬಲವುಸೈನ್ಯಕ್ಕೆಹೋರಾಡಲುಉತ್ಸಾಹವಿರುತ್ತದೆ.

೨೧. ಹಿಂಬದಿಯಲ್ಲಿದುರ್ಗವುಜಲಸಮೃದ್ಧಿಯುಳ್ಳಯುದ್ಧಭೂಮಿಯೂಇರುವುದಾದರೆಅದುಸೈನ್ಯಕ್ಕೆಬಲವಾದಆಧಾರವು.

೨೨. ನದಿಯಲ್ಲಿಕೊಚ್ಚಿಕೊಂಡುಹೋಗುತ್ತಿರುವವನಿಗೆದಡದಲ್ಲಿರುವವರನ್ನುನೋಡುವುದೇಬದುಕುವುದಕ್ಕೆಕಾರಣವಾಗುತ್ತದೆ.

೨೩. ಆಹಾರವಿಲ್ಲದಿದ್ದರೂನೀರುಸಿಕ್ಕಿದರೆಸೈನ್ಯವುಬದುಕುತ್ತದೆ.

—-

ಬಲವತಾಗಿಗೃಹ್ಣೀತಸ್ಯ[15]ತದ್ದಾಯಾದಪರಿಗ್ರಹಃಸ್ವಮಂಡಲೇsಪಿ[16]ಖಂಡಿಮಂಡೂಕಪ್ರವೇಶಇವ|| ೨೪ || ೧೩೫೮ ||

ಅರ್ಥ : ಬಲವತಾ = ಬಲ್ಲಿದನೊಳ್, ವಿಗೃಹ್ಣೀತಸ್ಯ = ವಿಗ್ರಹಮಂಮಾಡಿದನು, ತದ್ದಾಯಾದಪರಿಗ್ರಹ = ಆದಾಯಾದ್ಯರಕೈಕೊಳ್ಳುಹಂ, ಸ್ವಮಂಡಲೇ = ತನ್ನನಾಡೊಳ್, ಖಂಡಿಮಂಡೂಕಪ್ರವೇಶಇವ = ಚೆಂಡಿಕೆಯಕಪ್ಪೆಪುಗುವುತ್ಸಾತಮೆಂತಂತೆ || ಬಲ್ಲಿದರಪಗೆಯನೊಳಕೊಂಡೊಡೆಕೇಡಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನುತ್ಸಾಹಮೇನುಮಂತೀರ್ಚದೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಆತ್ಮಶಕ್ತಿಮವಿಜ್ಞಾಯೋತ್ಸಾಹಃಶಿರಸಾಪರ್ವತಭೇದನಮಿವ|| ೨೫ || ೧೩೫೯ ||

ಅರ್ಥ : ಆತ್ಮಶಕ್ತಿಂ = ತನ್ನಶಕ್ತಿಯಂ, ಅವಿಜ್ಞಾಯ = ಅಱಿಯದೆಉತ್ಸಾಹಃ = ಕಾದಿಹೆನೆಂಬಉತ್ಸಾಹಂ, ಶಿರಸಾ = ತಲೆಯಂ, ಪರ್ವತಭೇದಮಿವ = ಪರ್ವತಮನೊಡೆವಂತುಟೇ || ಶಕ್ತಿಯಱಿದುವಿಗ್ರಹಂಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪಲ್ಲಿಯುದ್ಧಂವೇಡಂಬುದುತ್ತರವಾಕ್ಯಂ :

ಸಾಮಸಾಧ್ಯಂಯುದ್ಧಸಾಧ್ಯಂಕುರ್ಯಾತ್|| ೨೬ || ೧೩೬೦ ||

ಅರ್ಥ : ಸಾಮಸಾಧ್ಯಂ = ಸಾಮದಿಂಸಾಧಿಸಲ್ಪಡುವವನ, ಯುದ್ಧಸಾಧ್ಯಂ = ಯುದ್ಧದಿಂಸಾಧಿಸಲ್ಪಡುವವನು, ನಕುರ್ಯಾತ್ = ಮಾಡದಿರ್ಕ್ಕೆ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಗುಡಾದಭಿಪ್ರೇತಸಿದ್ಧೌಕೋನಾಮವಿಷಂಪ್ರಯುಂಜೀತ|| ೨೭ || ೧೩೬೧ ||

ಅರ್ಥ : ಗುಡಾತ್ = ಬೆಲ್ಲದತ್ತಣಿಂ, ಅಭಿಪ್ರೇತಸಿದ್ಧೌ = ಇಷ್ಟಮಪ್ಪುದಾಗುತ್ತಿರಲ್, ಕೋನಾಮ = ಆವಂ, ವಿಷಂ = ವಿಷಮಂ, ಪ್ರಯುಂಜೀತ = ಪ್ರಯೋಗಿಸುಗುಂ || ಸಾಮದಿಂಸಾಧ್ಯಮಾಗೆದಂಡಮಂಪ್ರಯೋಗಿಸಲ್ವೇಡೆಂಬುದುತಾತ್ಪರ್ಯಂ || ಉಪಪ್ರಧಾಮನಿಲ್ಲದನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೨೪. ಬಲವಿದ್ದವನವಿರೋಧಕಟ್ಟಿಕೊಂಡುಅವನದಾಯಾದ್ಯರನ್ನುಸೇರಿಸಿಕೊಳ್ಳುವದುತನ್ನನಾಡಿನಲ್ಲಿಚಂಡಿಕೆಯಕಪ್ಪೆಪ್ರವೇಶಿಸಿದಂತೆ.

೨೫. ತನ್ನಶಕ್ತಿಯೆಷ್ಟೆಂಬುದನ್ನುತಿಳಿಯದೆಕಾದುವೆನೆಂದುಉತ್ಸಾಹಿಸುವುದುತಲೆಯಿಂದಪರ್ವತವನ್ನುಒಡೆಯುವಪ್ರಯತ್ನದಂತೆ.

೨೬. ಸಾಮೋಪಾಯದಿಂದಸಾಧ್ಯವಿರುವಾಗಅದನ್ನುಯುದ್ಧದಿಂದಸಾಧಿಸಬಾರದು.

೨೭. ಬೆಲ್ಲದಿಂದಇಷ್ಟಸಿದ್ಧಿಯಾಗುತ್ತಿರುವಲ್ಲಿಯಾರುತಾನೆವಿಷವನ್ನುಪ್ರಯೋಗಿಸಿಯಾರು?

—-

ಅಲ್ಪವ್ಯಯಭಯಾತ್ಸರ್ವನಾಶಂಕರೋತಿಮೂರ್ಖಃ|| ೨೮ || ೧೩೬೨ ||

ಅರ್ಥ : ಅಲ್ಪವ್ಯಯಭಯಾತ್ = ಕಿಱಿದುಬೀಯಕ್ಕಂಜಿ, ಸರ್ವನಾಶಂ = ಎಲ್ಲಕೇಡಂ, ಮೂರ್ಖಃ = ಮೂರ್ಖಂ, ಕರೋತಿ = ಮಾಳ್ಕುಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕೋನಾಮಕೃತಧೀಃಭಯಾದ್ಭಾಂಡಂಪರಿತ್ಯಜತಿ|| ೨೯ || ೧೩೬೩ ||

ಅರ್ಥ : ಕೋನಾಮ = ಆವಂ, ಕೃತಧೀಃ = ಬುದ್ಧಿವಂತನಪ್ಪಂ, ಶುಲ್ಕಭಯಾತ್ = ಸುಂಕಕ್ಕಂಜಿ, ಬಾಂಡಂ = ಭಂಡಮಂ, ಪರಿತ್ಯಜತಿ = ಬಿಸುಳ್ಗು || ಅದಕ್ಕೆದೃಷ್ಟಾಂತದಿಂತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಕಿಂವ್ಯಯೋಯೋಮಹಾಂತಮರ್ಥಂರಕ್ಷತಿ|| ೩೦ || ೧೩೬೪ ||

ಅರ್ಥ : ಸಃ = ಅದು, ಕಿಂವೃಯೆಃ = ಏಂಬೀಯಮೇ, ಯಃ = ಆವುದೊಂದು, ಮಹಾಂತಂ = ಪಿರಿದಪ್ಪ, ಅರ್ಥಂ = ಅರ್ಥಮಂರಕ್ಷತಿ = ರಕ್ಷಿಸುಗುಂ ||

ಪೂರ್ಣಃಸರಃಸಲಿಲಸ್ಯಹೀನಪರಿವಾಹಾದಪಸಿರೋsಸ್ತಿ[17]ರಕ್ಷಣೋಪಾಯಃ|| ೩೧ || ೧೩೬೫ ||

ಅರ್ಥ : ಪೂರ್ಣಃ = ತೀವಿದ, ಸರಸ್ಸಲಿಲಸ್ಯ = ಜಲಾಶ್ರಯಂಗಳನೀರ್ಗ್ಗೆ, ಹೀನಪ್ರವಾಹತ್ = ಕಡೆಗೋಡಿಯಂಬಿಟ್ಟು, ಅಪರಃ = ಪೆಱತು, ಹಿ, ನಿಶ್ಚಯದಿಂ, ರಕ್ಷಣೋಪಾಯಃ = ಕಾವುಪಾಯಂ, ನಾಸ್ತಿ = ಇಲ್ಲ || ಉಪಪ್ರಧಾನಮಿಲ್ಲದೊಡೆಇಂತಕ್ಕುಮೆಂಬುದುತ್ತರವಾಕ್ಯಂ :

—-

೨೮. ಅಲ್ಪವ್ಯಯದಭಯದಿಂದಮೂರ್ಖನುಸರ್ವನಾಶಮಾಡಿಕೊಳ್ಳುತ್ತಾನೆ.

೨೯. ಯಾವಬುದ್ಧಿವಂತನುತಾನೆಸುಂಕದಭಯದಿಂದಸರಕನ್ನುಬಿಸುಡುತ್ತಾನೆ?

೩೦. ಅತ್ಯಧಿಕವಾದಧನವನ್ನುರಕ್ಷಿಸಿಕೊಳ್ಳುವುದಕ್ಕಾಗಿಮಾಡಿದವ್ಯಯವುವ್ಯಯವೆ?

೩೧. ತುಂಬಿದಜಲಾಶಯದನೀರನ್ನುಉಳಿಸಿಕೊಳ್ಳುವುದಕ್ಕೆಕಡೆಯಕೋಡಿಯಕಡೆಯಿಂದಸ್ವಲ್ಪನೀರನ್ನುಬಿಡುವುದಕ್ಕಿಂತಬೇರೆಉಪಾಯವಿಲ್ಲ?

—-

 

[1]ಚೌ. ಈಮತ್ತುಮುಂದಿನವಾಕ್ಯವುಬದಲಾವಣೆಗಳೊಂದಿಗೆಒಂದರಲ್ಲೇಸೇರಿವೆ.

[2]ಮೈ. ಚೌ. ಮಿತ್ರಂವಾ.

[3]ಮೈ. ಸಹಾಯಃ

[4]ವ್ಯಾಹರತಿ…. . . . ಸಂಗ್ರಾಮವೇಈವಾಕ್ಯವುತಪ್ಪಿನಿಂದಾಗಿಪುನರುಕ್ತವಾಗಿದೆ.

[5]ದೂರಸ್ಥೋಎಂದುಓದಬೇಕು.

[6]ಕಾಮಂದಕೀಎಂದುಓದಬೇಕು.

[7]ಇಲ್ಲಿಸಂಸ್ಕೃತಕವಿಭವಭೂತಿಯಮಾಲತೀಮಾಧವಎಂಬನಾಟಕದಉಲ್ಲೇಖವಿದೆ. ನಾಟಕದಕತೆಯಂತೆಮಾಲತಿಯಮದುವೆಬೇರೊಬ್ಬನೊಡನೆಆಗುವದಿದ್ದಾಗಕಾಮುಂದಕಿಯೆಂಬಬೌದ್ಧಭಿಕ್ಷುಣಿಯುಅದನ್ನುತಪ್ಪಿಸಿಉಪಾಯದಿಂದಮಾಧವನಜೊತೆಆಗುವಂತೆಮಾಡಿದಳು. ಮಾಧವನತಂದೆಇದಕ್ಕೆಕಾರಣವೆಂದುಇಲ್ಲಿಹೇಳಿದ್ದರೂನಾಟಕದಲ್ಲಿಅವನಪಾತ್ರಅಷ್ಟಾಗಿಲ್ಲ.

[8]ಇಲ್ಲಿಒಂದುವಾಕ್ಯಬಿಟ್ಟುಹೋಗಿದೆ. ಅದರವೃತ್ತಿಯನ್ನುಹೊಡೆದುಹಾಕಲಾಗಿದೆ, ಜೊತೆಗೆಉದಾಹರಣೆಗೆಂದುಒಂದುಶ್ಲೋಕವನ್ನುಕೊಡಲಾಗಿದೆ.

[9]ಇದುಸ್ಮೃತಾಎಂದಿರಬೇಕು.

[10]ಮೈ. ಚೌ. ಒಂದುಹೆಚ್ಚಿನವಾಕ್ಯವಿದೆ.

[11]ಪರಿತ್ಯಜನಎಂದುಓದಬೇಕು.

[12]ಶರಭಅಷ್ಟಾಪದವೆಂಬಕಾಲ್ಪನಿಕಪ್ರಾಣಿ, ಉಗ್ರತೆಗೆ, ಕ್ರೋಧಕ್ಕೆಹೆಸರಾದುದು. ಅದರಕ್ರೋಧಎಷ್ಟೆಂದರೆಗುಡುಗಿನಗರ್ಜನೆಕೇಳಿಆನೆಯಘೀಳೆಂದುತಿಳಿದುಅದರಮೇಲೆರಲುಗುಡ್ಡದಮೇಲಿಂದಜಿಗಿದುಸತ್ತಿತಂತೆ.

ಅದರಲ್ಲಿಯೂಬಲವಿದ್ದರೂಕ್ರೋಧದಿಂದಾಗಿಬಹುಕಾಲಬಾಳಲಿಲ್ಲ. ಅರಸನೂಹಾಗೆಯೇ. ಬಲವಿದ್ದರೂಕ್ರೋಧಿ, ಕ್ರೂರಿಯಾಗಿದ್ದರೆಬಹಳದಿನತಡೆಯಲಾರಎಂಬುದುಈವಾಕ್ಯದತಾತ್ಪರ್ಯ.

[13]ಚೌ. ದೈವೋದೇಯಾತ್.

[14]ಮೈ. ಚೌ. ರಾಜವ್ಯಂಜನಂ.

[15]ಚೌ. ಈವಾಕ್ಯವಿಲ್ಲಮೈ. ವಿಗ್ರಹಹೀತಸ್ಯ.

[16]ಮೈ. ಶ್ವಮಂಡಲೇಶಿಖಿಮಂಡಕ.

[17]ಅಪರೋನಾಸ್ತಿಎಂದಿರಬೇಕು.