ನಾಚೋದಿತಾಹ[1]ವಾಕ್ವದತಿಸತ್ಯಾಹ್ಯೇಷಾಸರಸ್ವತೀ|| ೯೪ || ೧೪೨೮ ||

ಅರ್ಥ : ಏಷಾ = ಈ, ವಾಕ್ = ನುಡಿ, ಸತ್ಯಾ = ದಿಟಂ, ಸರಸ್ವತೀ = ಸರಸ್ವತಿ, ಹಿ = ಆವುದೊಂದುಕಾರಣದಿನದುಕಾರದಿಂ, ಅಚೋದಿತಾ = ನುಡಿವವನಂ (ಮನದಪ್ರೇರಣೆಯಿಲ್ಲದೆ) ಪ್ರೇರಿಸದೆ, ವಾಕ್ = ವಚನಂ, ನವದತಿ = ನುಡಿಯದು || ನುಡಿವಪ್ರಯತ್ನಮಿಲ್ಲದೆವಾಕ್ಪ್ರವೃತ್ತಿಯಿಂದಕಾರಣದಿಂಪಿರಿಯಮಱೆವನುಡಿಅಪ್ರಯತ್ನದಿಂನುಡಿವನೆಂಬುದುತಾತ್ಪರ್ಯಂ ||

ವ್ಯಭಿಚಾರಿವಚನೇಷುನೈಹಿಕೀಪಾರಲೌಕಿಕೀವಾಕ್ರಿಯಾಸಮಸ್ತಿ|| ೯೫ || ೧೪೨೯ ||

ಅರ್ಥ : ವ್ಯಭಿಚಾರಿವಚನೇಷು = ತಪ್ಪಿನುಡಿವವರೊಳ್, ಐಹಿಕೀ = ಈಭವದೊಳಪ್ಪಪಾರಲೌಕಿಕೀವಾ = ಮಱುಭವದೊಳಪ್ಪಮೇಣ್, ಕ್ರಿಯಾ = ಒಳಿತಪ್ಪನೆಗಳ್ತೆ, ನಸಮಸ್ತಿ = ಇಲ್ಲ || ದಿಟಮಂನುಡಿವಂಗುಭಯಭವದಸಿದ್ಧಿಯಕ್ಕುಮೆಂಬುದುತಾತ್ಪರ್ಯಂ || ಪರಮಪಾತಕಮಿದೆಂಬುದುತ್ತರವಾಕ್ಯಂ :

ವಿಶ್ವಾಸಘಾತಕಾತ್ಪರಂಪಾತಕಮಸ್ತಿ|| ೯೬ || ೧೪೩೦ ||

ಅರ್ಥ : ವಿಶ್ವಾಸಘಾತಕಾತ್ = ನಂಬಿದನಂಕಿಡಿಸುವುದಱತ್ತಣಿಂ, ಪರಂ = ಪೆಱತು, ಪಾತಕಂ = ಪಾತಕಂ, ನಾಸ್ತಿ = ಇಲ್ಲ || ಎಲ್ಲಾದೋಷಂಗಳಿಂದಧಿಕದೋಷಮೆಂಬುದುತಾತ್ಪರ್ಯಂ || ಅಸತ್ಯರದೋಷಮಂಪೇಳ್ವುದುತ್ತರವಾಕ್ಯಂ :

ವಿಶ್ವಸ್ತೋಪಘಾತಕಃ[2]ಸರ್ವವಿಶ್ವಾಸಂಕರೋತಿ|| ೯೭ || ೧೪೩೧ ||

ಅರ್ಥ : ವಿಶ್ವಸ್ತೋಪಘಾತಕಃ = ನಂಬಿದನಂಕಿಡಿಸುವಂ, ಸರ್ವಾವಿಶ್ವಾಸಂ = ಎಲ್ಲರ್ಗಂನಂಬುಗೆಯಿಲ್ಲದುದಂ, ಕರೋತಿ = ಮಾಳ್ಕುಂ ||

—-

೯೪. ಪ್ರಚೋದನೆಯಿಲ್ಲದೆಆಡಿದಮಾತುದಿಟವಾಗಿಯೂಸರಸ್ವತಿಯಮಾತೇ.

೯೫. ತಪ್ಪಿನುಡಿಯುವವರಮಾತಿನಲ್ಲಿಇಹಲೋಕದಮತ್ತುಪರಲೋಕದಕ್ರಿಯೆಗಳಲ್ಲಿಹೊಂದಾಣಿಕೆಇರುವುದಿಲ್ಲ.

೯೬. ನಂಬಿದವರನನ್ನುಮೋಸಗೊಳಿಸುವುದಕ್ಕಿಂತಹೆಚ್ಚಿನಪಾತಕವಿಲ್ಲ.

೯೭. ವಿಶ್ವಾಸಘಾತುಕನುಎಲ್ಲರಲ್ಲಿಯೂಅವಿಶ್ವಾಸವನ್ನುಹುಟ್ಟಿಸುತ್ತಾನೆ.

—-

ಅಸತ್ಯ[3]ಸಂಧಿಷುಕೋಶಪಾನಂಜಾತಾನಜಾತಾಂಶ್ಚಹಂತಿ|| ೯೮ || ೧೪೩೨ ||

ಅರ್ಥ : ಅಸತ್ಯ = ಪುಸಿಯಪ್ಪ, ಸಂಧಿಷು = ಪ್ರತಿಜ್ಞೆಯನುಳ್ಳರೊಳ್, ಕೋಶಪಾನಂ = ಬಳಿನೀರ್, ಜಾತಾನ್ = ಪುಟ್ಟಿದವರುಮಂ, ಅಜಾತಾಂಶ್ಚ = ಪುಟ್ಟಿದರುಮಂ, ಹಂತಿ = ಕೆಡಿಸುವುದು || [4]ಬಳಿನೀರ್ಗುಡಿದುಪುಸಿವನಸಂತಾನಕ್ಷಯಮಕ್ಕುಮೆಂಬುದುತಾತ್ಪರ್ಯಂ ||

ಅಸತ್ಯವಾದಿನೋಮೃತಸ್ಯಾಪಿದುರ್ಯಶೋsಯಶಂವಿನಶ್ಯತಿ[5]|| ೯೯ || ೧೪೩೩ ||

ಅರ್ಥ : ಅಸತ್ಯವಾದಿನಃಪುಸಿನುಡಿವಂಗೆ, ಮೃತಸ್ಯಾಪಿ = ಸತ್ತನಾದೊಡಂ, ದುರ್ಯಶಃ = ಅಪಕೀರ್ತಿ, ಅಯಶಃ = ಅಯಶಂ, ನವಿನಶ್ಯತಿ = ಕಿಡದು ||

ಸಕೃದುತ್ಥಿತಾಪ್ಯಪ್ರಸಿದ್ಧಿರ್ದೈವೈರಪಿನಿವಾರಯಿತುಂಶಕ್ಯತೇ|| ೧೦೦ || ೧೪೩೪ ||

ಅರ್ಥ : ಸಕೃತ್ = ಒರ್ಮೆ, ಉತ್ಥಿತಾ = ನೆಗರ್ದ (ಹುಟ್ಟಿದ), ಅಪ್ರಸಿದ್ಧಿಃ = ಅಪಕೀರ್ತಿ, ದೈವೈರಪಿ = ದೇವರಿಂದೆಯುಂ, ನಿವಾರಯಿತುಂ = ಮಾಣಿಸಲ್ಕೆನಶಕ್ಯತೇ = ಬಾರದು || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ

ತಥಾಹಿಧರ್ಮಪುತ್ರಃಕಿಲಾಸತ್ಯಮಭಾಷತೋsಪೀಯತಮದ್ಯಮಿತ್ಯಾದ್ಯಾಪ್ಯಸ್ತಿದುಃಪ್ರಸಿದ್ಧಿಃ[6]|| ೧೦೧ || ೧೪೩೫ ||

ಅರ್ಥ : ತಥಾಹಿ, ಕಿಲ = ಅಂತೆಯಲ್ಲದೆ, ಧರ್ಮಪುತ್ರಃ = ಧರ್ಮಪುತ್ರಂ, ಅಸತ್ಯಂ = ಪುಸಿಯಂ, ಅಭಾಷತ = ನುಡಿದಂ, ಅಪೀಯತ = ಕುಡಿದಂ, ಮದ್ಯಮಿತಿ = ಕಳ್ಳನೆಂದಿಂತು, ಅದ್ಯಾಪಿ = ಇನ್ನುಂ (ಈಗಳು), ದುಃಪ್ರಸಿದ್ಧಿಃ = ದುರ್ಯಶಂ, ಅಸ್ತಿ = ಉಂಟು || ಪುಸಿಯನುಡಿಯಲಾಗಹದೆಂಬುದಿದಱತಾತ್ಪರ್ಯಂ || ಅಪ್ರಸಿದ್ಧಿಯಫಲಮಂಪೇಳ್ವುದುತ್ತರವಾಕ್ಯಂ :

—-

೯೮. ಸತ್ಯಸಂಧನಲ್ಲದವನುತಾನುಹೇಳಿದ್ದುಸತ್ಯವೆಂದುಸಾಧಿಸುವುದರಿಂದಅವನೊಂದಿಗೆಹುಟ್ಟಿದವರೂಮುಂದೆಹುಟ್ಟುವವರೂನಾಶಹೊಂದುತ್ತಾರೆ.

೯೯. ಅಸತ್ಯವಾದಿಗಳಅಪಕೀರ್ತಿಯುಸತ್ತಮೇಲೆಕೂಡನಾಶವಾಗದು.

೧೦೦. ಒಮ್ಮೆಬಂದಅಪಕೀರ್ತಿಯನ್ನುದೇವರುಕೂಡಹೋಗಲಾಡಿಸಲಾರನು.

೧೦೧. ಉದಾಹರಣೆಗೆಧರ್ಮಪುತ್ರನುಸುಳ್ಳುಹೇಳಿದನು, ಮದ್ಯವನ್ನುಕುಡಿದನುಎಂಬಅಪಕೀರ್ತಿಈಗಲುಇದೆ.

—-

ಯಶೋವಧಃಪ್ರಾಣಿವಧಾದ್ಗರೀಯಾನ್|| ೧೦೨ || ೧೫೩೬ ||

ಅರ್ಥ : ಯಶೋವಧಃ = ಜಸಮಂಕಿಡಿಪುದು, ಪ್ರಾಣಿವಧಾತ್ = ಪ್ರಾಣಿಯಕೊಲ್ವುದಱತ್ತಣಿಂ, ಗರೀಯಾನ್ = ಪಿರಿದು || ಸಾವುದುಲೇಸುಜಸದಕೇಡಲ್ಲೆಂಬುದುತಾತ್ಪರ್ಯಂ || ಒಡ್ಡನೊಡ್ಡುವುದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

 ಬಲಂಬುದ್ಧಿರ್ಭೂಮಿಗ್ರಹಾನುಲೋಮ್ಯಂಪರೋದೋಗಶ್ಚಪ್ರತ್ಯೇಕಂಬಹುವಿಕಲ್ಪದಂಡಮಂಡಲಭೋಗಾಸಂಹತವ್ಯೂಹವಿರಚನ್ಯ[7]ಹೇತವಃ || ೧೦೩ || ೧೪೩೭ ||

ಅರ್ಥ : ಬಲಂ = ಚತುರಂಗಬಲಮುಂ, ಬುದ್ಧಿಃ = ಬುದ್ಧಿಯುಂ, ಭೂಮಿಃ = ಭೂಮಿಯುಂ, ಗ್ರಹಾನುಲೋಮ್ಯಂ = ಗ್ರಹಂಗಳನುಕೂಲತೆಯುಂ, ಪರೋದ್ಯೋಗಶ್ಚ = ಹಿರಿದಹಉದ್ಯೋಗಮೆಂಬಿವು, ಪ್ರತ್ಯೇಕಂ = ಅವಿನಿಂತುಂ, ಬೇಱೆಬೇಱೆಂ, ಬಹುವಿಕಲ್ಪ = ಪಲತೆಱದ, ದಂಡ = ಕಾವಿನಂತಸಿವಾಗೊಡ್ಡುವುದುಂ, ಮಂಡಲ = ಬಟ್ಟಿತ್ತಾಗೊಡ್ಡುವುದುಂ, ಭೋಗಃ = ಪಾವಿನಪೆಡೆಯಂತೊಡ್ಡಿನಿಲ್ವುದುಂ, ಅಸಂಹತ = ಪರಪಿಂಡೊಡ್ಡುವುದುಮೆಂದಿವು, ವ್ಯೂಹವಿರಚನಸ್ಯಒಡ್ಡನೊಡ್ಡುವುದಕ್ಕೆ, ಹೇತವಃ = ಕಾರಣಂಗಳ್ || ಬಲಮುಂ, ನೆರಮುಂನೆಲಬಲಮುಂಗ್ರಹಬಲಮುಂಬುದ್ಧಿಯುಂಪೆಱರ್ವ್ಯವಸಾಯಮುಮೆಂಬಿವನಱಿಯದನೊಡ್ಡನೊಡ್ಡಲಱಿಯನೆಂಬುದುತಾತ್ಪರ್ಯಂ || ಕಾದುವಲ್ಲಿಯೊಡ್ಡೊಡ್ಡಿದಕ್ರಮದಿಂನಿಲರೆಂಬುದುತ್ತರವಾಕ್ಯಂ :

ಸಾಧುವಿರಚಿತೋsಪಿವ್ಯೂಹಸ್ತಾವತ್ತಿಷ್ಠತಿಯಾವನ್ನಪರಬಲದರ್ಶನಂ|| ೧೦೪ || ೧೪೩೮ ||

ಅರ್ಥ : ಸಾದುವಿರಚಿತೋsಪಿ = ಲೇಸಾಗಿರಚಿಯಸಲ್ಪಟ್ಟುದಾಗಿಯಿಂ, ವ್ಯೂಹಃ = ಒಡ್ಡುತಾವತ್ತಿಷ್ಠತಿ = ಅನ್ನೆವರಮಿರ್ಕ್ಕುಂ, ಯಾವತ್ = ಎನ್ನೆವರಂ, ಪರಬಲದರ್ಶನಂ = ಪಗೆವಡೆಯಂಕಾಣುಹಂ, ನ = ಇಲ್ಲ || ಪರಬಲಮಂಕಂಡೊಡೆಯಲಾಗದೆಂಬುದುತಾತ್ಪರ್ಯಂ || ಇಂತಿಱಿವುದೆಂಬುದುತ್ತರವಾಕ್ಯಂ :

—-

೧೦೨. ಅಪಕೀರ್ತಿಯುಪ್ರಾಣವಧೆಗಿಂತಹೆಚ್ಚಿನದು.

೧೦೩. ಸೈನ್ಯ, ಬಲ, ಬುದ್ಧಿ, ಭೂಮಿ, ಗ್ರಹಗಳಅನುಕೂಲತೆ, ಹಲವೆಡೆಗಳಲ್ಲಿಸೈನ್ಯವಿಸ್ತರಣಇವುದಂಡ, ಮಂಡಲ, ಆಭೋಗ, ಸಂಹತಎಂಬವ್ಯೂಹರಚನೆಗೆಕಾರಣಗಳು.

೧೦೪. ವ್ಯೂಹವನ್ನುಎಷ್ಟುಚೆನ್ನಾಗಿರಚಿಸಿದ್ದರೂಅದುನಿಲ್ಲುವುದುಶತ್ರುಸೈನ್ಯವನ್ನುಕಾಣುವವರೆಗೆಮಾತ್ರವೇ.

—-

ಹಿಶಸ್ತ್ರಶಿಕ್ಷಾಕ್ರಮೇಣಯೋದ್ಧವ್ಯಂಕಿಂತುಪರಪ್ರಹಾರಭಿಪ್ರಾಯೇಣ|| ೧೦೫ || ೧೪೩೯ ||

ಅರ್ಥ : ಶಸ್ತ್ರಶಿಕ್ಷಾಕ್ರಮೇಣ = ಆಯುಧಂಗಳಕಲಿಪೆಯಕ್ರಮದಿ, ನಯೋದ್ಧವ್ಯಂಹಿ = ಕಾದಲ್ಪಡುವುದಲ್ಲ, ಕಿಂತು = ಮತ್ತೆ, ಪರಪ್ರಹಾರಾಭಿಪ್ರಾಯೇಣ = ಪೆಱರಿಱಿವುದನಱಿದಿಱಿವಮತಿಯಿಂದಿಱಿಗೆ || ಪೆಱನಿಱಿವುದುಮಂವಂಚಿಸಿಇಱಿವುದೆಂಬುದುತಾತ್ಪರ್ಯಂ || ಯುದ್ಧದಭೇದಮಂಪೇಳ್ವುದುತ್ತರವಾಕ್ಯಂ

[8]ನಿರ್ದಿಷ್ಟದೇಶಕಾಲಂಪ್ರಕಾಶಯುದ್ಧಂ|| ೧೦೬ || ೧೪೪೦ ||

ಅರ್ಥ : ನಿರ್ದಿಷ್ಟ = ಪೇಳ್ವ, ದೇಶ = ಎಡೆಯುಂ, ಕಾಲಂ = ಪೊತ್ತುಮೆಂಬಿವನುಳ್ಳದು, ಪ್ರಕಾಶಯುದ್ಧಂ = ಪ್ರಕಾಶಯುದ್ಧಮೆಂಬುದು || ಕಳ್ಳಮುಮಂಪೊಳ್ತುಮಂಪೇಳ್ದುಕಾದುವುದುಪ್ರಕಟಯುದ್ಧಮೆಂಬುದು ||

ವ್ಯಸನೇಷುಪ್ರಮಾದೇಷುವಾಪರೇಷ್ವಭಿಷೇಣ[9]ನಮವಸ್ಕಂಶಃ|| ೧೦೭ || ೧೪೪೧ ||

ಅರ್ಥ : ಪರೇಷು = ಪಗೆವರೊಳ್, ವ್ಯಸನೇಷು = ಆಯಾಸಂಗಳಾಗೆ, ಪ್ರಮಾದೇಷುವಾ = ಮಱವಿಗಳಾಗಲ್ಮೇಣ್, ಅಭಿಷೇಣನಂ = ಮೇಲೆವರಿಯಿಸುವುದು, ಅವಸ್ಕಂಧಃ = ದಾಳಿಯೆಂಬುದು || ಪಗೆವರ್ಗೆಕ್ಲೇಶಮುಂಮಱವಿಯುಮಾಗಲುಮೇಲೆವರಿಯಿಸುವುದುಧಾಳಿಯೆಂಬುದು ||

—-

೧೦೫. ಶಸ್ತ್ರಾಭ್ಯಾಸಮಾಡಿದಕ್ರಮದಲ್ಲಿಮಾತ್ರಯುದ್ಧಮಾಡಲಾಗದು. ಶತ್ರುವನ್ನುಹೊಡೆದೋಡಿಸುವದಕ್ಕೆಸಾಧ್ಯವಾಗುವರೀತಿಯಲ್ಲಿಯುದ್ಧಮಾಡಬೇಕು.

೧೦೬. ನಿರ್ದಿಷ್ಟವಾದಸ್ಥಳ, ಕಾಲಗಳಲ್ಲಿಹೋರಾಡುವುದುಪ್ರಕಾಶಯುದ್ಧ.

೧೦೭. ಶತ್ರುಗಳುಕಷ್ಟಸ್ಥಿತಿಯಲ್ಲಿದ್ದಾಗಅಥವಾಮೈಮರೆತಿದ್ಧಗಅವರಮೇಲೆಏರಿಹೋಗುವದುಅವಸ್ಕಂಧವು.

—-

ಅನ್ಯಾಭಿಮುಖಂಪ್ರಯಾಣಮುಪಕ್ರಮ್ಯಾನ್ಯೋಪಘಾತಕರಣಂಕೂಟಯುದ್ಧಂ|| ೧೦೮ || ೧೪೪೨ ||

ಅರ್ಥ : ಅನ್ಯಾಭಿಮುಖಂ = ಮತ್ತೋರ್ವನತ್ತಮುಂತಾಗಿ, ಪ್ರಯಾಣಂ = ಪ್ರಯಾಣಮುಂ, ಉಪಕ್ರಮ್ಯ = ಮಾಡಿ, ಅನ್ಯೋಪಘಾತಕರಣಂ = ಮತ್ತೋರ್ವನಂಕೊಲ್ವುದು, ಕೂಟಯುದ್ಧಂ = ಮಱೆಗಾಳಗಮೆಂಬುದು || ಒಂದೆಸೆಗೆನಡೆವಂಮತ್ತೊಂದೆಸೆಗೆನಡೆದುಕಿಡಿಸುವುದುವಂಚನೆಯಕಾಳಗಮೆಂಬುದುತಾತ್ಪರ್ಯಂ ||

ವಿಷವಿಷಮಪುರುಷೋಪನಿಷದಿಕಯೋಗೋಪಚಾಪೈಃಪರೋಪಘಾತಾನುಷ್ಮಾನಂತೂಷ್ಣೀದಂಡಃ|| ೧೦೯ || ೧೪೪೩ ||

ಅರ್ಥ : ವಿಷ = ನಂಜು, ವಿಷಮಪುರುಷ = ತೀಕ್ಷ್ಣಪುರುಷರುಂ, ಉಡನಿಷದಿಕ = ವೇದರಹಸ್ಯಪ್ರವೀಣಶಿಷ್ಟಾಭಾಸರುಮೆಂದಿವರ್ಗ್ಗಳಂ, ಯೋಗ = ಮಾರಣಮಂತ್ರಂಪ್ರಯೋಗಿಸುವುದುಂ, ಉಪಚಾಪೈಃ = ಅಟ್ಟಟ್ಟಿಯುಂ, ಪರಿಗ್ರಹಮಂಭೇದಿಸುವುದುಮೆಂಬಿವಱಿಂ, ಪರೋಪಘಾತಾನುಷ್ಠಾನಂ = ಪಗೆವರ್ಗೆಕೇಡಂಮಾಳ್ಪುದು, ತೂಷ್ಣೀದಂಡಃ = ಮೌನಯುದ್ಧಮೆಂಬುದು || ಆರುಮನಱಿಯದೆಪಗೆವನಂಕಿಡಿಸುವುದುಗೂಢಯುದ್ಧಮೆಂಬುದುತಾತ್ಪರ್ಯಂ || ಪರಿಗ್ರಹಕ್ಕೋರ್ವನನೆಮುಖ್ಯನಂಮಾಡಲಾಗದೆಂಬುದುತ್ತರವಾಕ್ಯಂ :

ಏಕಂ[10]ಬಲಸ್ಯಾಧಿಕೃತಂಕುರ್ಯಾತ್|| ೧೧೦ || ೧೪೪೪ ||

ಅರ್ಥ : ಏಕಂ = ಓರ್ವನಂ, ಬಲಸ್ಯ = ಬಲಕ್ಕೆ, ಅಧಿಕೃತಂ = ಮುಖ್ಯನಂ, ನಕುರ್ಯಾತ್ = ಮಾಡದಿರ್ಕೆ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಭೇದಾಪರಾಧಶಂಕಾಯಾಮೇಕಸಮರ್ಥೋಮಹಾಂತಮನರ್ಥಂಜನಯತಿ|| ೧೧೧ || ೧೪೪೫ ||

ಅರ್ಥ : ಭೇದ = ಬೇರ್ಮನಮುಂ, ಅಪರಾಧ = ದೋಷಮುಮೆಂಬ, ಶಂಕಾಯಾಂ = ಆಶಂಕೆಯಾಗುತ್ತಿರಲ್, ಏಕಃ = ಓರ್ವಂ, ಸಮರ್ಥಃ = ಸಮರ್ಥನಪ್ಪಂ, ಜನಯತಿ = ಪುಟ್ಟಿಸುಗುಂ, ಮಹಾಂತಂ = ಪಿರಿದಪ್ಪ, ಅನರ್ಥಂಕ್ಲೇಶಮುಂ || ಪಲಂಬರ್ಮುಖ್ಯಮ್ಮಾಡಲೋರ್ವಂನಿಘಟಿಸಿದೊಡಂರಾಜ್ಯಂ.[11]ವಿಮಮೆಂಬುದುತಾತ್ಪರ್ಯಂ || ಇಂತಪ್ಪರಂಪೊರೆಯದಿರ್ದೊಡೆದೋಷಮೆಂಬುದುತ್ತರವಾಕ್ಯಂ :

—-

೧೦೮. ಒಬ್ಬಶತ್ರುವಿನಮೇಲೆಯುದ್ಧಕ್ಕಾಗಿಸೈನ್ಯವನ್ನುಕಳುಹಿಸಿಮತ್ತೊಬ್ಬನನ್ನುಮುತ್ತಿಯುದ್ಧಮಾಡುವುದುಕೂಟಯುದ್ಧವು.

೧೦೯. ವಿಷಪ್ರಯೋಗದಿಂದ, ಕ್ರೂರಪುರುಷರನ್ನುಕಳುಹಿಸುವುದರಿಂದ, ರಹಸ್ಯಪ್ರಯೋಗಗಳಿಂದದೂತರನ್ನುಕಳುಹಿಸಿಭೇದಿಸುವುದರಿಂದ, ಶತ್ರುಗಳಿಗೆಕೇಡನ್ನುಂಟುಮಾಡುವುದುತೂಷ್ಣೀದಂಡಎಂದರೆಮೌನಯುದ್ಧ.

೧೧೦. ಸೈನ್ಯಕ್ಕೆಒಬ್ಬನನ್ನೇಅಧಿಕಾರಿಯನ್ನಾಗಿಮಾಡಬಾರದು.

೧೧೧. ಭಿನ್ನಾಭಿಪ್ರಾದ, ಅಪರಾದ, ಅನುಮಾನವಿದ್ದಾಗಒಬ್ಬನೇಸಮರ್ಥನುಮಹಾಅನರ್ಥಕ್ಕೆಕಾರಣನಾಗುತ್ತಾನೆ.

—-

[12]ರಾಜಾರಾಜಕಾರ್ಯೇಷುಸಮಾಪ್ತಾನಾಂ[13]ಸಂತತಿಮಪ್ಪೋಷಯನ್ನೃಣಭಾಗೀಸ್ಯಾತ್|| ೧೧೨ || ೧೪೪೬ ||

ಅರ್ಥ : ರಾಜಕಾರ್ಯೇಷು = ಸ್ವಾಮಿಯಕಾರ್ಯಗಳೊಳ್, ಸಮಾಪ್ತಾನಾಂ = ಸತ್ತವರ್ಗಳ, ಸಂತತಿಂ = ಸಂತಾನಮಂ, ಅಪೋಷಯನ್ = ಪೊರೆಯದ, ರಾಜಾ = ಅರಸಂ, ಋಣಭಾಗೀಸ್ಯಾತ್ = ಅವರಿಗೆಋಣಸ್ಥನಕ್ಕುಂ || ಸ್ವಾಮಿಕಾರ್ಯದೊಳ್ಸತ್ತವರ್ಗಳಸಂತಾನಮಂಪೊರೆವನೆಪಿರಿಯರಸೆಂಬುದುತಾತ್ಪರ್ಯಂ || ಇಂತಪ್ಪಪರಿಗ್ರಹದೊಡನೆಕೂಡಿನೆಗಳ್ವುದೆಂಬುದತ್ತರವಾಕ್ಯಂ :

ಸಾಧುನೋಪಚರ್ಯೇತತಂತ್ರೇಣ|| ೧೧೩ || ೧೪೪೭ ||

ಅರ್ಥ : ಸಾಧುನಾ = ಒಳ್ಳಿತಪ್ಪ, ತಂತ್ರೇಣ = ಪರಿಗ್ರಹದೊಡನೆ, ಉಪಚರ್ಯೇತ = ಕೂಡಿನೆಗಳ್ಗೆ || ಮನದನ್ನರಪ್ಪಪರಿಗ್ರಹದೊಡನೆಕೂಡಿಕಾದುವುದೆಂಬುದುತಾತ್ಪರ್ಯಂ || ಕಲಿಗೆಗತಿಯಂಪೇಳ್ವುದುತ್ತರವಾಕ್ಯಂ :

[14]ಸರ್ವಧಾರ್ಮಿಕೇಭ್ಯಃಪರಾಗತಿಃಶೂರಾಣಾಂ|| ೧೧೪ || ೧೪೪೮ ||

ಅರ್ಥ : ಸರ್ವಧಾರ್ಮಿಕೇಭ್ಯಃ = ಎಲ್ಲಾಧಾರ್ಮಿಕರಂನೋಡಲ್ಕೆ, ಪರಾ = ಉತ್ತಮಮಪ್ಪ, ಗತಿಃ = ಗತಿಯು, ಶೂರಾಣಾಂ = ಕಲಿಗಳ್ಗೆ || ಓಡಿದಂಗೆಸುಗತಿಇಲ್ಲೆಂಬುದುತಾತ್ಪರ್ಯಂ || ಅದಕ್ಕೆತಾತ್ಪರ್ಯಂಪೇಳ್ವುದುತ್ತರವಾಕ್ಯಂ :

—-

೧೧೨. ರಾಜಕಾರ್ಯದಲ್ಲಿನಿರತರಾಗಿದ್ದಾಗಮೃತಮಟ್ಟವರಸಂತತಿಯನ್ನುಪೋಷಿಸಿದರಾಜನುಋಣಭಾಗಿಯಾಗುತ್ತಾನೆ.

೧೧೩. ಅನುಕೂಲವಾದಅಧಿಕಾರಿಗಳೊಡನೆಕೂಡಿಕೆಲಸಮಾಡಬೇಕು.

೧೧೪. ಎಲ್ಲಧಾರ್ಮಿಕರಿಗಿಂತಶ್ರೇಷ್ಠವಾದಸದ್ಗತಿಶೂರರಿಗುಂಟು.

—-

ಯುಧಿಪೃಷ್ಠದಂಬ್ರಹ್ಮಹಾಣಮಾಹುಃ|| ೧೧೫ || ೧೪೪೯ ||

ಅರ್ಥ : ಯುಧಿ = ಕಾಳೆಗದೊಳ್, ಪೃಷ್ಠದಂ = ಬೆನ್ನೀವನಂ (ಬೆಂಗೊಟ್ಟೋಡುವವನು), ಬ್ರಹ್ಮಹಾಣಂ = ಬ್ರಹ್ಮಘಾತಕನೆಂದು, ಆಹುಃ = ಪೇಳ್ವರು || ಸ್ವಾಮಿಯಂಕಾದುಕೊಂಡುತೊಲಗುವುದಕ್ಕೆಕಾರಣಫಲಮಂಪೇಳ್ವುದುತ್ತರವಾಕ್ಯಂ :

ಸ್ವಾಮಿನಾಸಹಪಸರಣ[15]ಮಶ್ವಮೇಧಫಲಸಮಂ|| ೧೧೬ || ೧೪೫೦ ||

ಅರ್ಥ : ಸ್ವಾಮಿನಾಸಹ = ಆಳ್ದನೊಡನೆ, ಅಪಸರಣಂ = ಹಿಮ್ಮೆಟ್ಟುವುದುಸಾವುದೆಂಬುದು, ಅಶ್ವಮೇಧಫಲಂ = ಅಶ್ವಮೇಧಫಲಮೆಂಬಯಾಗದೊಳ್ಸಮಾನಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಯುಧಿಸ್ವಾಮಿನಂಪರಿತ್ಯಜತೋನಾಸ್ತೀಹಾಮುತ್ರಕುಶಲಂ|| ೧೧೭ || ೧೪೫೧ ||

ಅರ್ಥ : ಯುಧಿ = ಸಂಗ್ರಾಮದೊಳಂ, ಸ್ವಾಮಿನಂ = ಆಳ್ದನಂ, ಪರಿತ್ಯಜತಃ = ಬಿಸುಡುತ್ತಿರ್ದಂಗೆ, ಇಹ = ಈಭವದೊಳಂ, ಆಮುತ್ರಚ = ಮಱುಭವದೊಳಂ, ಕುಶಲಂ = ಒಳ್ಪು, ನಾಸ್ತಿ = ಇಲ್ಲ || ಕಾಳೆಗದೊಳ್ಸಾವುದಂನೋಡಲ್ಸ್ವಾಮಿಯಂಕಾದುಕೊಂಡುಬರ್ಪ್ಪುದುಲೇಸೆಂಬುದುತಾತ್ಪರ್ಯಂ || ಕಾಳಗಕ್ಕೆನಡೆವನಪರಿಗ್ರಹಮಿಂತಿರವೇಳ್ಕುಮೆಂಬುದುತ್ತರವಾಕ್ಯಂ :

[16]ವಿಗ್ರಹಾಯೋಚ್ಚಲಿತಸ್ಯಾರ್ಧಂಬಲಂಸದಾಸನ್ನದ್ಧಮಾಸೀತ|| ೧೧೮ || ೧೪೫೨ ||

ಅರ್ಥ : ವಿಗ್ರಹಾಯ = ಕಾಳೆಗಕ್ಕೆ, ಉಚ್ಚಲಿತಸ್ಯ = ನಡೆದನ, ಬಲಂಪರಿಗ್ರಹಂ, ಅರ್ಧಂ = ಭಾಗಂ, ಸದಾ = ಎಲ್ಲಾಗಳ್, ಸನ್ನದ್ಧಂ = ಆಯತಮಾಗಿ, ಆಸೀತ = ಇರ್ಕ್ಕೆ || ಮಱದಿರೆಕೇಡಕ್ಕುಮೆಂಬುದುತಾತ್ಪರ್ಯಂ || ನಡೆವೊಡಂಬಿಡುವೊಡಂಪರಿಗ್ರಹಮನಿಂತಿರಿಸುವುದೆಂಬುದುತ್ತರವಾಕ್ಯಂ :

—-

೧೧೫. ಯುದ್ಧದಲ್ಲಿಬೆನ್ನುತೋರಿಸುವವನನ್ನುಬ್ರಹ್ಮಘಾತನೆನ್ನುವರು.

೧೧೬. ಸ್ವಾಮಿಯೊಡನೆಹಿಮ್ಮೆಟ್ಟುವುದುಅಶ್ವಮೇಧಯಾಗದಫಲಕ್ಕೆಸಮನಾದುದು.

೧೧೭. ಯುದ್ಧದಲ್ಲಿಸ್ವಾಮಿಯನ್ನುಬಿಟ್ಟುಹೋಗುವವನಿಗೆಇಹದಲ್ಲಾಗಲಿಪರದಲ್ಲಾಗಲಿಸುಖವಿಲ್ಲ.

೧೧೮. ಯುದ್ಧಕ್ಕೆಹೊರಟರಾಜನಸೈನ್ಯದಲ್ಲಿಅರ್ಧದಷ್ಟುಸದಾಸನ್ನದ್ಧವಾಗಿರಬೇಕು.

—-

ಪ್ರಯಾಣಮಾವಾಸನಂಕುರ್ವತಶ್ಚತುರ್ದಿಶಮನೀಕಾನಿನಾತಿದೂರೇಣಸಂಚರೇಯುಸ್ತಿಷ್ಠೇಯುಶ್ಚ|| ೧೧೯ || ೧೪೫೬ ||

ಅರ್ಥ : ಪ್ರಯಾಣಂ = ಪ್ರಯಾಣಮುಂ, ಆವಾಸನಂಚ = ಬೀಡುಬಿಡುವುದುಮಂ, ಕುರ್ವತಃ = ಮಾಡುವಒಡೆಯಂಗೆ, ಅನೀಕಾನಿ = ಪಡೆಗಳ್, ಚತುರ್ದಿಶಂ = ನಾಲ್ಕುದೆಸೆಯೊಳಂಯಥಾಕ್ರಮದಿಂ, ಅತಿದೂರೇಣ = ಕರಂದೂರದಿಂ, ನಸಂಚರೇಯುಃ = ನಡೆಯದಿರ್ಕ್ಕೆ, ನತಿಷ್ಠೇಯುಶ್ಚ = ಬೀಡುಬಿಡದಿರ್ಕ್ಕೆ || ನಡೆವಲ್ಲಿಯುಂಬೀಡುಬಿಡುವಲ್ಲಿಯುಂಪರಿಗ್ರಹಮಗಳ್ದಿರಲಾಗದೆಂಬುದುತಾತ್ಪರ್ಯಂ || ಮೇಗೆಬರ್ಪರನಿವರಿಂದಱಿಯಲ್ಬರ್ಪುದೆಂಬುದುತ್ತರವಾಕ್ಯಂ :

ಧೂಮಾಗ್ನಿರಜೋವಿಷಾಣಧ್ವನಿವ್ಯಾಜೇನಾಟವಿಕಾಪ್ರಣಿಧಯಶ್ಚಪರಬಲಾನ್ಯಾಗಚ್ಛಂತೀನಿವೇದಯೇಯಃ

 || ೧೨೦ || ೧೪೫೪ ||

ಅರ್ಥ : ಧೂಮ = ಪೊಗೆಯುಂಅಗ್ನಿ = ಕಿಚ್ಚುಂ, ರಜಃ = ಮುಱವುಂ, ವಿಷಾಣಧ್ವನಿ = ಕೊಂಬಿನಧ್ವನಿ, ವ್ಯಾಜೇನ = ನೆವದಿಂ, ಅಟವಿಕಾಃ = ಅಡವಿಯೊಳಿರ್ಪವರ್ಗಳ್, ಪ್ರಣಿಧಯಶ್ಚ = ಹೆರಿಗರುಂ, ಪರಬಲಾನಿ = ಪಗೆವಡೆಗಳ್, ಆಗಚ್ಛಂತೀ = ಬರ್ಪುವಂ, ನಿವೇದಯೇಯುಃ = ತನ್ನವರ್ಗೆಅಱಿಪುವರ್ || ಈಚಿಹ್ನೆಂಗಳಿಂದಱಿದುಮುನ್ನಮೆಸನ್ನದ್ಧರಪ್ಪರೆಂಬುದುತಾತ್ಪರ್ಯಂ || ಅರಸಿಂತಪ್ಪೆಡೆಯೊಳ್ಇಕ್ಕುಳಿರ್ಪ್ಪುದೆಂಬುದುತ್ತರವಾಕ್ಯಂ :

ಪುರುಷಪ್ರಮಾಣೋತ್ಸೇಧಮಬಹುಜನನಿವೇಶನಮಾವರಣಾಪಸರಣಯುಕ್ತ[17]ಮಗ್ರತೋಮಹಾಮಂಡಪಾವಕಾಶಂತಮಂಗಮಧ್ಯಾಸ್ಯಸರ್ವದಾಸ್ಥಾನಂದದ್ಯಾತ್|| ೧೨೧ || ೧೪೫೫ ||

ಅರ್ಥ : ಪುರುಷಪ್ರಮಾಣೋತ್ಸೇಧಂ = ಒಂದುಮುಂಡದನಿತುದ್ದಮನುಳ್ಳುದುಂ (ಪುರುಷಪ್ರಮಾಣ), ಅಬಹುಜನನಿವೇಶನಂ = ಪಲರ್ಗೆಡೆಸಲ್ಲದುದುಂ, ಆವರಣ = ಮಱಿಯುಂ, ಅಪಸರಣ = ಪಿಂತೆಪೋಗಲ್ಕೆಡೆಯಮೆಂಬಿವಱೊಳಂ, ಯುಕ್ತಂ = ಕೂಡಿದುದುಂ, ಅಗ್ರತಃ = ಮುಂಚೆ, ಮಹಾಮಂಡಪಾವಕಾಶಂಚ = ಪಿರಿದಪ್ಪಮಂಡಪದೆಡೆಯನುಳ್ಳದುಂ, ತಮಂಗಂ = ತವಗವನು, ಅಧ್ಯಾಸ್ಯ = ಏಱಿ, ಸರ್ವದಾ = ಎಲ್ಲಾಕಾಲಂ, ಆಸ್ಥಾನಂ = ಓಲಗಮಂ, ದದ್ಯಾತ್ = ಕುಡುಗೆ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೧೧೯. ರಾಜನುಯುದ್ಧಕ್ಕಾಗಿಪ್ರಯಾಣಮಾಡುತ್ತಿರಲಿ, ಇಲ್ಲವೆಒಂದೆಡೆನೆಲಸಿರಲಿ, ಸೈನ್ಯವುನಾಲ್ಕುದಿಕ್ಕುಗಳಲ್ಲಿಯೂಅವನಸಮೀಪದಲ್ಲಿಸದಾಸಂಚರಿಸುತ್ತಿರಬೇಕುಅಥವಾನಿಂತಿರಬೇಕು.

೧೨೦. ಹೊಗೆ, ಬೆಂಕಿ, ಧೂಳು, ಕೊಂಬಿನಕೂಗುಇವುಗಳನೆಪದಿಂದಅಟವಿಕರು, ಗೂಢಚಾರಿಗಳು, ಶತ್ರುಸೈನ್ಯವುಬರುತ್ತಿರುವವಿಷಯವನ್ನುತಿಳಿಸಬೇಕು.

೧೨೧. ಆಳರತ್ತರವುಳ್ಳ, ಹೆಚ್ಚುಮಂದಿಗೆಸ್ಥಳವಿರದ, ಸುತ್ತಲೂಮರೆಯಿರುವ, ಹಿಂದೆಸರಿಯುವುದಕ್ಕೆಅವಕಾಶವಿರುವ, ಜನಸೇರುವುದಕ್ಕಾಗಿಮುಂದುಗಡೆದೊಡ್ಡಚಪ್ಪರವಿರುವ, ವೇದಿಕೆಯನ್ನೇರಿರಾಜನುಬೀಡುಬಿಟ್ಟಕಡೆಯಲ್ಲಿಎಲ್ಲಕಾಲದಲ್ಲಿಯೂಓಲಗಕೊಡಬೇಕು.

—-

ಸರ್ವಸಾಧಾಸಣಭೂಮಿಕಂತಿಷ್ಣತೋನಾಸ್ತಿಸಮೀಚೀನಾರಕ್ಷಾ[18]|| ೧೨೨ || ೧೪೫೬ ||

ಅರ್ಥ : ಸರ್ವಸಾಧಾರಣಭೂಮಿಕಂ = ಎಲ್ಲರುಮಿರ್ಪಭೂಮಿಯಲ್ಲಿ, ತಿಷ್ಠತಃ = ಇರುತ್ತಿರ್ದಂಗೆ (ಓಲಗವಂಗೊಟ್ಟವಂಗೆ), ಸಮೀಚೀನಾ = ಒಳ್ಳಿತಪ್ಪ, ರಕ್ಷಾ = ಕಾಪು, ನಾಸ್ತಿ = ಇಲ್ಲ || ಸಂಭ್ರಮದೊಳಂತೀಕ್ಷ್ಣಪುರುಷವ್ಯಾಪಾರಕ್ಕೆಎಡೆಯಿಲ್ಲದಿರ್ಪುದೆಂಬುದುತಾತ್ಪರ್ಯಂ || ಇಂತುಪರದೇಶಕ್ಕೆನಡೆಯಲಾಗದೆಂಬುದುತ್ತರವಾಕ್ಯಂ :

ಭೂಚರೋಂದೋಳರಸ್ತುರಂಗಚರೋವಾಕದಾಚಿತ್ಪಱಭೂಮೌಪ್ರತಿಷ್ಠೇತ[19]|| ೧೨೩ || ೧೪೫೭ ||

ಅರ್ಥ : ಭೂಚರಃ = ನೆಲನೊಳ್ನಡೆಯುತ್ತಂ, ಆಂದೋಳಚರರಃ = ಅಂದಣಮನೇಱಿಪೋಗುತ್ತಂ, ತುರಂಗಚರೋವಾ = ಕುದುರೆಏಱಿಪೋಗುತ್ತಂಮೇಣ್, ಪರಭೂಮೌ = ಪಗೆವರನಾಡೊಳ್, ಕದಾವಿತ್ = ಎಂದಪ್ಪೊಡಂ, ನಪ್ರತಿಷ್ಠೇತ = ಹೊಗಲಾಗದು || ಅದಕ್ಕೆತಾತ್ಪರ್ಯಮಂಪೇಳ್ವುದುತ್ತುರವಾಕ್ಯಂ :

ಯಂತ್ರಯಾನಂ[20]ವಾಧ್ಯಾಸೀನೇಪ್ರಭವಂತಿಕ್ಷುದ್ರೋಪದ್ರವಾಃ|| ೧೨೪ || ೧೪೫೮ ||

ಅರ್ಥ : ಕರಿಣಂ = ಆನೆಯುಮಂ, ಯಂತ್ರಯಾನಂ[21] = ರಾಜಾಧಿರಾಜನುಮಂಮೇಣ್ (ಗೂಢಾರವಾಗಲಿ), ಅಧ್ಯಾಸೀನೇ = ಏಱಿದಅರಸಿನೊಳ್, ಕ್ಷುದ್ರೋಪದ್ರವಾಃ = ದುಷ್ಟರ್ಮಾಳ್ಪಬಾಧೆಗಳ್, ನಪ್ರಭವಂತಿ = ಆಗವು ||

ಇತಿಯುದ್ಧಸಮುದ್ಧೇಶಃ || ೨೯ ||[22]

ಸಮುದ್ದೇಶದವಾಕ್ಯಂಗಳು || ೧೨೪ || ಒಟ್ಟು || ೧೪೫೮ ||

—-

೧೨೨. ಎಲ್ಲರೂಇರುವಕಡೆಯಲ್ಲಿಕೂಡುವರಾಜನಿಗೆಸರಿಯಾದರಕ್ಷಣೆಇರಲಾರದು.

೧೨೩. ಭೂಮಿಯಮೇಲೆನಡೆಯುತ್ತಾ. ಪಲ್ಲಕ್ಕಿಯಲ್ಲಿಕುಳಿತು, ಕುದುರೆಯಮೇಲೆಕುಳಿತು, ಎಂದಾದರೂವೈರಿಗಳಭೂಮಿಯನ್ನುಪ್ರವೇಶಿಸಕೂಡದು.

೧೨೪. ಆನೆಯನ್ನಾಗಲಿ, ಯಾಂತ್ರಿಕವಾಹನವನ್ನಾಗಲಿಏರಿಹೋಗುವವನಿಗೆದುರ್ಜನರಿಂದಯಾವಕ್ಷುದ್ರಭಾದೆಗಳೂಸಂಭವಿಸವು.

—-

 

[1]ಮೈ. ನಾಸ್ಯಾಪ್ರೇರಿತಾವಾಕ್ದೇವತೆಯಾವದತಿ.

ಚೌ. ನಯೋದಿತಾ. ಮೈ. ದಪಾಠವನ್ನುಅಡಿಟಿಪ್ಪಣೆಯಲ್ಲಿಕೊಡಲಾಗಿದೆ.

[2]ಮೈ. ವಿಶ್ವಾಸಘಾತಕಃ, ಸರ್ವೇಷಾಮವಿಶ್ವಾಸಂ.

[3]ಮೈಅಸತ್ಯಸಂಧೇಷುವಿಶ್ವಾಸಃಕೃತಾನ್ಯಕೃತಾನಿಚಹನ್ತಿ.

[4]ಬಳಿನೀರ್= ಅಚಮನಯಾವುದೊಂದುನಿರ್ಧಾರವನ್ನು, ಸಂಕಲ್ಪವನ್ನುಮಾಡುವಾಗಮಾಡುವಧಾರ್ಮಿಕವಿಧಿ. ಬಲಅಂಗೈಯನ್ನುಬಟ್ಟಲದಂತಾಗುವಂತೆಮುದುಡಿಸಿ (ಕೋಶ) ಸ್ವಲ್ಪನೀರುಹಾಕಿಕೊಂಡುಕುಡಿಯುವುದು. ನಂತರತನ್ನದೇಶಕಾಲ, ಗೋತ್ರ, ಪ್ರವರ, ವಂಶಾವಳಿಯನ್ನುಹೇಳಿಕೊಂಡುಕೈಯಲ್ಲಿನೀರುಧಾರೆಯನ್ನುಬಿಟ್ಟುಇಂಥದನ್ನುಮಾಡುತ್ತೇನೆಂದುಪತ್ರಿಜ್ಞೆಗೈಯ್ಯುವದು. ಇದನ್ನುಮಾಡಿದಮೇಲೆಯಾವಕಾರಣಕ್ಕೂಅದಕ್ಕೆತಪ್ಪಬಾರದುಎಂಬುದುವಿಧಿ. ಬಳಿನೀರ್ಎಂದರೆವಂಶಾವಳಿಯನ್ನುಹೇಳಿಕೊಂಡು (ಬಳಿ= ವಂಶ) ಅಚಮನಮಾಡಿಮೊದಲುಸಂಕಲ್ಪಮಾಡಿ, ನಂತರಅದಕ್ಕೆತಪ್ಪಿದರೆಅದುವಂಶವನ್ನೇನಾಶಪಡಿಸುವುದುಎಂಬುದುವಾಕ್ಯದಸಾರಾಂಶ.

[5]ಚೌಈಮತ್ತುಮುಂದಿನನಾಲ್ಕುವಾಕ್ಯಗಳಿಲ್ಲ.

[6]ಇಲ್ಲಿಮಹಾಭಾರತಯುದ್ಧದಲ್ಲಿಧರ್ಮರಾಜನುಅಶ್ವತ್ಥಾಮನುಸತ್ತನೆಂದುಸಾರಿಹೇಳಿಅಶ್ವತ್ಥಾಮನತಂದೆದ್ರೋಣಾಚಾರ್ಯರುಶಸ್ತ್ರಾಸ್ತ್ರಗಳನ್ನುಕೆಳಗಿಡುವಂತೆಮಾಡಿದನು. ಆದರೆಸುಳ್ಳನುಮರೆಮಾಡಲುಅಶ್ವತ್ಥಾಮ

ಎಂಬುದುಆನೆಯಹೆಸರುಎಂದುನಿಧಾನವಾಗಿಹೇಳಿಹೇಳಿದ್ದುಸುಳ್ಳಲ್ಲವೆಂದುಸಾಧಿಸಿದನು. ಅದುಹೇಳಿದಒಂದುಸುಳ್ಳಿನಿಂದಯುಗಗಳುಕಳೆದರೂಕಟ್ಟಹೆಸರುತಪ್ಪಲಿಲ್ಲಎಂಬುದುವಾಕ್ಯದಸಾರಾಂಶ. ಇದೇಧರ್ಮರಾಜನುಮಧ್ಯಪಾನಮಾಡಿದ್ದರಿಂದಬಂದಕೆಟ್ಟಹೆಸರುಇನ್ನೂಇದೆಎಂದುಈವಾಕ್ಯದಲ್ಲಿಹೇಳಲಾಗಿದೆಇದುಯಾವಸಂದರ್ಭದಲ್ಲಿನಡೆಯಿತುಎಂಬುದುತಿಳಿದಿಲ್ಲ.

[7]ಮೈ. ಭೋಗಾಶ್ಚಸಂಹತವ್ಯೂಹರಚನಾಯಾಃ.

[8]ಮೃ. ಚೌ. ಈವಾಕ್ಯವಿಲ್ಲ.

[9]ಚೌ. ಪರಪುರೇಸ್ಯೆನ್ಯಪ್ರೇಷಣಂ.

[10]ಮೈ. ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[11]ಇಲ್ಲಿಅಕ್ಷರಗಳುನಶಿಸಿವೆ.

[12]ಮೈಚೌ. ಮುಂದಿನವಾಕ್ಯವುಈವಾಕ್ಯದಭಾಗವೇಆಗಿದೆ.

[13]ಮೈ. ಚೌ. ಮೃತಾನಾಂ.

[14]ಚೌಈಮತ್ತುಮುಂದಿನವಾಕ್ಯವಿಲ್ಲ.

[15]ಮೈ. ಯುದ್ಧೇಸ್ವಾಮಿನಃಪುರಸ್ಸರಣಂ.

ನಮ್ಮಪ್ರತಿಯಲ್ಲಿಅಪಸರಣಂಎಂದಿದ್ದುಟೀಕಾಕಾರನುಅದನ್ನುಹಿಮ್ಮೆಟ್ಟುವುದುಎಂದುವಿವರಿಸಿದ್ದಾನೆ. ಪುರಸ್ಸರಣಂಅಂದರೆಮುಂದೆಹೊಗುವುದುಎಂಬುದುಹೆಚ್ಚುಉಚಿತವಾಗಿದೆ. ಆದರೆಟೀಕಾಕಾರನುಸ್ವಾಮಿಯೊಡನೆಸಾಯುವುದುಲೇಸುಎಂದುವಿವರಿಸುವುದುಸೂಕ್ತವಾಗಿದೆ. ಸ್ವಾಮಿಯನ್ನುಕೈಬಿಡಬಾರದುಎಂಬಅರ್ಥದಮುಂದಿನವಾಕ್ಯದಸಂದರ್ಭಕ್ಕೆಈಅರ್ಥಸರಿಹೊಂದುತ್ತದೆ.

[16]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿದ್ದುಸ್ವಲ್ಪಮಟ್ಟಿಗಿನಪಾಠಭೇದವುಇದೆ. ಆದರೂಸಾರಾಂಶವೊಂದೇ.

[17]ಮೈಚರಣಾಪಸರಣಯುಕ್ತ.

[18]ಮೈ. ಚೌ. ಶರೀರರಕ್ಷಾ.

[19]ಮೈಚೌ. ಪ್ರವಿಶೇತ.

[20]ಚೌ. ಜಂಪಾಣಂ.

[21]ಯಂತ್ರಯಾನಎಂಬುದಕ್ಕೆರಾಜಾಧಿರಾಜನುಮಂಎಂದುಟೀಕಾಕಾರನುಅರ್ಥಕೊಟ್ಟಿದ್ದಾನೆ. ಕಂಸಗಳಲ್ಲಿಗೂಢಾರಎಂದುಹೇಳಲಾಗಿದೆ. ಆದರೆ, ಅರ್ಥಸ್ಪಷ್ಟವಾಗುವುದಿಲ್ಲ. ಯಂತ್ರಯಾನಎಂದರೆಕ್ಯತ್ರಿಮವಾಗಿರಚಿತವಾದಯಾವುದೊಂದುವಾಹನಎಂದಾಗುತ್ತದೆ. ಚೌ. ದಲ್ಲಿಜಂಪಾಣಎಂಬಪಾಠಕ್ಕೆಮನುಷ್ಯರನ್ನುಬೆನ್ನಮೇಲೆಕೂಡಿಸಿಕೊಳ್ಳುವಬೆತ್ತದಬುಟ್ಟಿಎಂದುಅರ್ಥವನ್ನುಕೊಟ್ಟಿದ್ದಾರೆ.

[22]ಇದು೩೦ಎಂದಿರಬೇಕು.