ದ್ವಾದಶವರ್ಷಾಸ್ತ್ರೀಷೋಡಶವರ್ಷಃಪುಮಾನ್ಪ್ರಾಪ್ತವ್ಯವಹಾರೌ|| ೧ || ೧೪೫೯ ||

ಅರ್ಥ : ದ್ವಾದಶವರ್ಷಾ = ಪನ್ನೇರಡುವರ್ಷದಪ್ರಾಯಮನುಳ್ಳ, ಸ್ತ್ರೀ = ಸ್ತ್ರೀಯುಂ, ಷೋಡಶವರ್ಷಃ = ಪದಿನಾರುವರ್ಷದಹರೆಯಮನುಳ್ಳ, ಪುಮಾನ್‌ = ಪುರುಷರುಮೆಂದೀರ್ವರುಂ, ಪ್ರಾಪ್ತವ್ಯವಹಾರೌ = ವಿಷಯೋಪಭೋಗಾದಿವ್ಯವಹಾರಮನೆಯ್ದಿದರ್‌(ವಿವಾಹಕರ್ಮಕ್ಕೆಯೋಗ್ಯರ್‌) || ಸ್ತ್ರೀಸಂಭೋಗಾದಿವ್ಯವಹಾರಮನಱಿಯದಂವಿವಾಹಯೋಗ್ಯನಲ್ಲೆಂಬುದುತಾತ್ಪರ್ಯಂ || ಕುಲಮಿಂತುಕಿಡದಿರ್ಕ್ಕುಮೆಂಬುದುತ್ತರವಾಕ್ಯಂ :

ವಿವಾಹಪೂರ್ವೋವ್ಯವಹಾರಶ್ಚಾತುರ್ವಣ್ಯಂಕುಲೀನಯತಿ|| ೨ || ೧೪೬೦ ||

ಅರ್ಥ : ವಿವಾಹಪೂರ್ವಃ = ಮದುವೆಯನೆಮುಂತಾಗುಳ್ಳ, ವ್ಯವಹಾರಃ = ಸ್ತ್ರೀಪುರುಷರವ್ಯವಹಾರಂ, ಚಾತುರ್ವರ್ಣ್ಯಂ = ನಾಲ್ಕುವರ್ಣಮಂ, ಕುಲೀನಯತಿ = ಕುಲಜರಂಮಾಳ್ಕುಂ || ವಿವಾಹಂಮಾಡೆಪಲರಱಿವರದಱಿಂನ್ಯಾಯಂವರ್ತಿಸದೆಂಬುದುತಾತ್ಪರ್ಯಂ || ವಿವಾಹಲಕ್ಷಣಮಂಪೇಳ್ವುದುತ್ತರವಾಕ್ಯಂ :

ಯುಕ್ತಿತೋವರಣವಿಧಾನಮಗ್ನಿದೇವದ್ವಿಜಸಾಕ್ಷಿಕಂಪಾಣಿಗ್ರಹಣಂವಿವಾಹಃ|| ೩ || ೧೪೬೧ ||

ಅರ್ಥ : ಯುಕ್ತಿತಃ = ವ್ಯವಹಾರಕ್ರಮದಿಂ, ವರಣವಿಧಾನಂ = ಕನ್ನೆಯಂಬೇಳ್ಪಕ್ರಮದಿಂ, ಅಗ್ನಿ = ಕಿಚ್ಚುಂ, ದೇವ = ದೇವರು, ದ್ವಿಜ = ಬ್ರಾಹ್ಮಣರುಮೆಂದಿವರ್‌, ಸಾಕ್ಷಿಕಂಚ = ಸಾಕ್ಷಿಯಾಗುಳ್ಳ, ಪಾಣಿಗ್ರಹಣಂ = ಕೆಯ್ವಿಡಿವುದುಂ, ವಿವಾಹಃ = ವಿವಾಹಮೆಂಬುದು || ಈಕ್ರಮಮಿಲ್ಲದುದುವಿವಾಹಮಲ್ಲೆಂಬುದುತಾತ್ಪರ್ಯಂ || ವಿವಾಹದಭೇದಮಂಪೇಳ್ವುದುತ್ತರವಾಕ್ಯಂ :

ಬ್ರಾಹ್ಮ್ಯೋ[1]ವಿವಾಹೋಯತ್ರವರಾಯಾಲಂಕೃತಕನ್ಯಾಪ್ರದೀಯತೇ|| ೪ || ೧೪೬೨ ||

ಅರ್ಥ : ಯತ್ರ = ಎಲ್ಲಿ, ಅಲಂಕೃತ = ಶೃಗಾರಂಗೆಯಸಿ, ಕನ್ಯಾ = ಕನ್ನೆ, ವರಾಯ = ಮದವನಿಗಂಗೆ, ಪ್ರದೀಯತೇ = ಕುಡಲ್ಪಡೆಗುಂ, ಸಃ = ಆ, ವಿವಾಹಂ = ಮದುವೆ, ಬ್ರಾಹ್ಮಯಃ = ಬ್ರಾಹ್ಮ್ಯವಿವಾಹಮೆಂಬುದು ||

—-

. ಹನ್ನೆರಡುವರ್ಷವಯಸ್ಸಾದಹೆಣ್ಣು, ಹದಿನಾರುವರ್ಷವಯಸ್ಸಾದಗಂಡುವಿವಾಹಯೋಗ್ಯವಯಸ್ಕರು.

. ವಿವಾಹಪೂರ್ವಕವಾದವ್ಯವಹಾರಗಳುನಾಲ್ಕುವರ್ಣದವರನ್ನುಶುದ್ಧಗೊಳಿಸುತ್ತವೆ.

. ವ್ಯವಹಾರಕ್ರಮದಿಂದವಧೂವರರನ್ನುಆರಿಸುವುದು. ಅಗ್ನಿ, ದೇವ, ದ್ವಿಜರಸಾಕ್ಷಿಯಾಗಿಕನ್ಯೆಯಕೈಹಿಡಿಯುವುದುವಿವಾಹವು.

. ಸಾಲಂಕೃತಕನ್ಯೆಯನ್ನುವರನಿಗೆಕೊಡುವುದುಬ್ರಾಹ್ಮವಿವಾಹ.

—-

[2]ತ್ವಂಭವಾಸ್ಯಮಹಾಭಾಗಸ್ಯಸಧರ್ಮಚಾರಿಣೀತಿವಿನಿಯೋಗೇನಕನ್ಯಾಪ್ರದಾನಾತ್ಪ್ರಾಜಾಪತ್ಯಃ|| ೫ || ೧೪೬೩ ||

ಅರ್ಥ : ಮಹಾಭಾಗಸ್ಯ = ಪಿರಿದಪ್ಪಪುಣ್ಯಮನುಳ್ಳ, ಅಸ್ಯ = ಈತಂಗೆ, ತ್ವಂ = ನೀಂ, ಸಧರ್ಮಚಾರಿಣೀ = ಸಮಾನಮಪ್ಪನೆಗಳ್ತೆಯೊಳ್‌ ನೆಗಳ್ವೆ, ಭವಇತಿ = ಆಗೆಂದಿಂತು, ವಿನಿಯೋಗೇನ = ಕ್ರಮದಿಂ, ಕನ್ಯಾಪ್ರದಾನಾತ್‌ = ಕನ್ಯೆಯಂಕುಡುವುದಱಿಂದಮುಂ, ಪ್ರಾಜಾಪತ್ಯಃ = ಪ್ರಾಜಾಪತ್ಯಮೆಂಬವಿವಾಹಂ ||

[3]ಗೋಭೂಮಿಸುವರ್ಣದಾನಪುರಸ್ಸರಂಕನ್ಯಾದಾನಾದಾರ್ಷಃ|| ೬ || ೧೪೬೪ ||

ಅರ್ಥ : ಗೋ = ಪಶುವುಂ, ಭೂಮಿ = ನೆಲನುಂ, ಸುವರ್ಣ = ಪೊನ್ನುಮೆಂದಿವಂ, ದಾನಪುರಸ್ಸರಂ = ಕೊಡುವುದುಮೆಂದಿವಂಮೊದಲಾಗಿ, ಕನ್ಯಾಪ್ರದಾನಾತ್‌ = ಕನ್ಯೆಯರಂಕುಡುವುದಱತ್ತಣಿಂ, ಆರ್ಷಃ = ಆರ್ಷಮೆಂಬವಿವಾಹಂ ||

ದೈವೋವಿವಾಹೋಯತ್ರಯಜ್ಞಾರ್ಥಮೃತ್ವಿಜಃ[4]ಕನ್ಯಾಪ್ರದಾನಮೇವದಕ್ಷಿಣಾ|| ೭ || ೧೪೬೫ ||

ಅರ್ಥ : ಯತ್ರ = ಎಲ್ಲಿ, ಯಜ್ಞಾರ್ಥಂ = ಯಜ್ಞಕಾರಣಮಾಗಿ, ಋತ್ವಿಜಃ = ಋತ್ವಿಜಂಗೆ = ಯಜ್ವಮಾಡಿದಾತಂಗೆ, ಕನ್ಯಾಪ್ರದಾನಮೇವ = ಕನ್ನೆಯಂಕುಡುವುದೇ, ದಕ್ಷಿಣಾ = ದಕ್ಷಿಣಂ, ಸಃ = ಅದು, ದೈವೋವಿವಾಹಃ = ದೈವಿವಾಹಮೆಂಬುದು ||

ಏತೇಚತ್ವಾರೋಧರ್ಮವಿವಾಹಾಃ = ಧರ್ಮದಮದುವೆಗಳ್|| ೮ || ೧೪೬೬ ||

ಅರ್ಥ : ಏತೇ = ಈ, ಚತ್ವಾರಃ = ನಾಲ್ಕುಂ, ಧರ್ಮವಿವಾಹಾಃ = ಧರ್ಮದಮದುವೆಗಳ್‌ ||

—-

. ನೀನುಮಹಾನುಭಾವನಸಹಧರ್ಮಚಾರಿಣಿಯಾಗುಎಂದುಕ್ರಮದಿಂದಮಾಡುವಕನ್ಯಾದಾನವುಪ್ರಾಜಾಪತ್ಯವಿವಾಹವು.

. ಗೋವು, ಭೂಮಿ, ಸುವರ್ಣದಾನಪರಸ್ಪರವಾಗಿಮಾಡುವಕನ್ಯಾದಾನವುಆರ್ಷವಿವಾಹ.

. ಯಜ್ಞಮಾಡಿಸುವಋತ್ವಿಜನಿಗೆಕನ್ಯಾಪ್ರದಾನವೇದಕ್ಷಿಣೆಯಾಗಿರುವುದುದೈವವಿಹಾಹ.

. ನಾಲ್ಕುವಿಧವಾದವಿವಾಹಗಳುಧರ್ಮವಿವಾಹಗಳು.

—-

ಮಾತುಃಪಿತುರ್ಬಂಧೂನಾಂಪ್ರಾಮಾಣ್ಯಾತ್[5]ಪರಸ್ಪರಾನುರಾಗೇಣಮಿಥಸ್ಸಮವಾಯಾತ್ಗಾಂಧರ್ವಃ|| ೯ || ೧೪೬೭ ||

ಅರ್ಥ : ಮಾತುಃ = ತಾಯ, ಪಿತುಃ = ತಂದೆಯ, ಬಂಧೂನಾಂಚ = ನೆಂಟರ, ಪ್ರಾಮಾಣ್ಯಾತ್‌[6] = ಸಾಕ್ಷಿಯಿಂದಮುಂ, ಪರಸ್ಪರಾನುರಾಗೇಣ = ಓರೋರ್ವರಸ್ನೇಹದಿಂ, ಮಿಥಃ = ಒಡನೆ, ಸಮವಾಯಾತ್‌ = ಕೂಡುವುದಱಿಂ, ಗಾಂಧರ್ವ = ಗಾಂಧರ್ವವಿವಾಹಮೆಂಬುದು ||

ಪಣಬಂಧೇನಕನ್ಯಾಪ್ರದಾನಾದಸುರಃ|| ೧೦ || ೧೪೬೮ ||

ಅರ್ಥ : ಪಣಬಂಧೇನ = ಪೊನ್ನುನುಡಿವುದಱಿಂ, ಕನ್ಯಾಪ್ರದಾನಾತ್‌ = ಕುಮಾರಿಯಂಕುಡುವುದಱಿಂ, ಅಸುರಃ = ಅಸುರವಿವಾಹಮೆಂಬುದು ||

ಕನ್ಯಾಯಾಃಪ್ರಸಹ್ಯಾದಾನಾದ್ರಾಕ್ಷಸಃ|| ೧೧ || ೧೪೬೯ |

ಅರ್ಥ : ಕನ್ಯಾಯಾಃ = ಕನ್ನೆಯಂ, ಪ್ರಸಹ್ಯಾದಾನಾತ್‌ = ಬಲಾತ್ಕಾರದಿಂದಎಳೆದುಕೊಳ್ವುದಱತ್ತಣಿಂ, ರಾಕ್ಷಸಃ = ರಾಕ್ಷಸವಿವಾಹಮೆಂಬುದು ||

ಸುಪ್ತಪ್ರಮತ್ತಕನ್ಯಾದಾನಾತ್6 ಪೈಶಾಚಃ|| ೧೨ || ೧೪೭೦ ||

ಅರ್ಥ : ಸುಪ್ತ = ನಿದ್ರೆಗೈಯ್ದು, ಪ್ರಮತ್ತ = ಮಱೆದಿರ್ದ, ಕನ್ಯಾದಾನಾತ್‌ = ಕನ್ನೆಯಂಕೊಳ್ವುದಱಿಂ, ಪೈಶಾಚಃ = ಪೈಶಾಚವಿವಾಹಮೆಂಬುದು ||

—-

. ತಾಯಿ, ತಂದೆ, ಬಂಧುಗಳುಇವರುಸಾಕ್ಷಿಗಳಾಗಿರಲುಪರಸ್ಪರಅನುರಾಗದಿಂದಗಂಡುಹೆಣ್ಣುಒಡನೆಕೂಡುವುದುಗಾಂಧರ್ವವಿವಾಹ. (ಟಿಪ್ಪಣಿನೋಡಿರಿ)

೧೦.ಒಂದುಒಪ್ಪಂದಕ್ಕೆಒಳಪಡಿಸಿದಕನ್ಯಾಪ್ರದಾನವುಅಸುರವಿವಾಹ.

೧೧. ಕನ್ಯೆಯನ್ನುಬಲಾತ್ಕಾರದಿಂಎಳೆದುಕೊಂಡುಹೋಗುವುದುರಕ್ತಸವಿವಾಹ.

೧೨. ನಿದ್ರೆಮಾಡುತ್ತಿದ್ದ, ಮೈಮರೆತಿದ್ದಕನ್ಯೆಯನ್ನುಅಪಹರಿಸಿಕೊಂಡುಹೋಗುವುದುಪೈಶಾಚವಿವಾಹ.

—-

ಏತೇಚತ್ವಾರೋsಧಮ್ಯಾ[7]ಅಪಿನಾಧರ್ಮ್ಯಾಯದೃಸ್ತಿವಧೂವರಯೋರನಪವಾದಂಪರಸ್ಪರಾನುಭಾವ್ಯತ್ವಂ|| ೧೩ || ೧೪೭೧ ||

ಅರ್ಥ : ಏತೇ = ಈ, ಚತ್ವಾರಃ = ನಾಲ್ಕುಮದುವೆಗಳ್‌, ಅಧರ್ಮ್ಮ್ಯಾಅಪಿ = ಧರ್ಮಮಿಲ್ಲದುದಾಗಿಯುಂ, ನಾಧಮ್ಮ್ಯಾಃ = ಧರ್ಮಮಿಲ್ಲದವಲ್ಲದವು, ಪರಸ್ಪರ = ಓರೋರ್ವರ್ಗ್ಗೇ, ಅನುಭಾವ್ಯತ್ವಂ = ಮೇಲೆಯಪ್ಪಸ್ವರೂಪಂ (ಅನುರಾಗವಿಶೇಷವು), ವಧೂವರಯೋಃ = ಮದವಕ್ಕಳ್ಗೆ, ಅನಪವಾದಂ[8] = ಆಚಾರಕುಲಾಚಾರಶ್ರೇಷ್ಠತೆಗೆ, ಪಳಿಯಿಲ್ಲದುದು, ಯದ್ಯಸ್ತಿ = ಉಂಟಕ್ಕುಮಪ್ಪೊಡೆ || ಕನ್ನೆಯದೋಷಮಂಪೇಳ್ವುದುತ್ತರವಾಕ್ಯಂ :

ಉನ್ನತತ್ವಂಕನಿಷ್ಠಿಕಲಯೋ[9]ರ್ಲೋಮಶತ್ವಂಜಂಘಯೋರಮಾಂಸಲತ್ವಮೂರ್ವೋರಚಾರುತ್ವಂ, ಕಟಿನಾಭಿಜಠರಕುಚಗಲೇಷು[10] ಶಿರಾಲತ್ವಂ ಅಶುಭಸಂಸ್ಥಾನತ್ವಂ,ಬಾಹ್ವೋಃಕೃಷ್ಣತ್ವಂತಾಳುಜಿಹ್ವಾಧರಹರಿತಕೇಷು[11], ವಿಷಮವಿರಳಭಾವೋದಶನೇಷುಸಕೂಪತ್ವಂಕಪೋಲಯೋಃಪಿಂಗಲತ್ವಮಕ್ಷ್ಣೋರ್ಲಗ್ನತ್ವಂಚಿಲ್ಲಿಕಯೋಃಸ್ಥಪುಟತ್ವಂನಿಟಿಲೇದುಸ್ಸನ್ನಿವೇಶತ್ವಂಶ್ರವಣಯೋಃಸ್ಥೂಲಪರುಷಕಪಿಲಭಾವಃಕೇಶೇಷುಅತಿದೀರ್ಘಾತಿಲಘೂನ್ನ್ಯೂನಾಧಿಕಸಮವಿಕಟಕುಬ್ದವಾಮನಕಿರಾತಾಂಗತ್ವಂ, ಜನ್ಮದೇಹಾಭ್ಯಾಂಸಮಾನತ್ವಾಧಿಕತ್ವಂಚೇತಿಕನ್ಯಾದೋಷಾಃ || ೧೪ || ೧೪೭೨ ||

ಅರ್ಥ : ಕನಿಷ್ಠಿಕಯೋಃ = ಕಾಲಕಿಱುಕುಣಿಕೆಯಬೆರಳ್ಗಳೊಳ್‌, ಉನ್ನತತ್ವಂ = ಉದ್ದತನಮುಂ, ಜಂಘಯೋಃ = ಕಿಱುತೊಡೆಗಳೊಳ್‌, ಲೋಮಶತ್ವಂ = ಪಲವುರೋಮಮನುಳ್ಳುದುಂ, ಊರ್ವೋಃ = ತೊಡೆಗಳೊಳ್‌, ಅಮಾಂಸಲತ್ವಂ = ಕೊರ್ವಿನಿಲ್ಲಮೆಯುಂ, ಕಟಿ = ಸೊಂಟ, ನಾಭಿ = ನಾಭಿಯುಂ, ಜಠರ = ಬಸಿಱುಂ, ಕುಚ = ಮೊಲೆಯುಂ, ಗಲೇಷು = ಕೊರಲುಮೆಂಬಿವಱೊಳ್‌, ಅಚಾರುತ್ವಂ = ಒಪ್ಪಮಿಲ್ಲದುದುಂ (ದೃಷ್ಟಿಪ್ರೀತಿಯಿಲ್ಲದುದು) ಬಾಹ್ವೋಃ = ತೋಳ್ಗಳೊಳ್‌, ಶಿರಾಲುತ್ವಂ, = ಸೆರೆಗಳನುಳ್ಳಸ್ವರೂಪಮುಂ, ಅಶುಭಸಂಸ್ಥಾನತ್ವಂ = ಆಕಾರವೊಳ್ಳಿತ್ತಲ್ಲದಿಹವು, ತಾಲುಜಿಹ್ವಾಧರಹರೀತಕೇಷು = ತಾಲುಗೆ, ನಾಲಗೆ, ಅಧರ, ಚರ್ಮಗೀಲಗಳೆಂಬಸ್ಥಾನಂಗಳಲ್ಲಿಕೃಷ್ಣತ್ವಂ = ಕಪ್ಪಾಗಿಹವುಂ, ದಶನೇಷು = ಪಲ್ಗಳಲ್ಲಿ, ವಿಷಮವಿರಳಭಾವಃ = ಸಮನಾಗಿಲ್ಲದೆಯುಂವಿರಲಮಾಗಿಪ್ಪುದುಂ, ಕಪೋಲಯೋ = ಗಲ್ಲಂಗಳೊಳ್‌, ಸಕೂಪತ್ವಂ = ಕುಳಿಯಾಗಿಪ್ಪುದುಂ, ಅಕ್ಷ್ಣೋಃ = ಕಣ್ಗಳೊಳ್‌, ಪಿಂಗಲತ್ವಂ = ಕಪಿಲತ್ವಮುಂ, ಚಿಲ್ಲಿಕಯೋಃ = ಪುರ್ವುಗಳೊಳ್‌ (ಕಡೆಗಣ್ಣಿಂಕೆಳಗೆತೆವರಾಗಿರ್ದಚಿಲ್ಲಿಕಯೆಂಬಸ್ಥಾನಂಗಳಲ್ಲಿ) ಲಗ್ನತ್ವಂ = ಮುಟ್ಟಿರುಹಂ (ನಗುವಲ್ಲಿ, ನೋಡುವಲ್ಲಿಸೂಜಿಯನೂರಿದಂತೆಕುಳಿಯಾಗಿಹುದುಅಥವಾಎಮೆಗಳಲ್ಲಿಕುಟಿಲತ್ವಂ, ಹಳದಿಯಬಣ್ಣವು) ನಿಟಿಲೇ = ನೊಸಲೊಳ್‌, ಸಂಪುಟತ್ವಂ = ಕುಳಿತೆವರಾಗಿಹಮುಂ, ಶ್ರವಣಯೋಃ = ಕಿವಿಗಳೊಳ್‌, ದುಃಸನ್ನಿವೇಶತ್ವಂ = ಪೊಲ್ಲನಿಱುಗೆಯುಂಅತಿಲಘು = ಕರಂಕಿಱುನೆಲೆಯಂ, ನ್ಯೂನ = ಅವಯವಂಗಳ್‌ ಕುಂದಿರ್ಪುದುಂ, ಅಧಿಕ = ಅವಯಮಂಗಳಧಿಕಮಾಗಿರ್ಪ್ಪುದುಂ, ಸಮ = ಸಮದಂಡನಾಗಿರ್ಪುದುಂ, ವಿಕಟ = ನೆರ್ಪಿಲ್ಲದುದುಂ, ಕುಬ್ಜ = ಕೂನನಾಗಿಕಿಱಿದಪ್ಪಟ್ಟೆಯನುಳ್ಳುದು, ವಾಮನ = ಅಟ್ಟೆಪಿರಿದಾಗಿಕೈಕಾಲುಕಿಱಿದಾಗಿರ್ಪ್ಪುದುಂ, ಕಿರಾತಂಗತ್ವಂ = ಸರ್ವಾವಂಗಳುಂಕಿಱಿದಾಇರ್ಪ್ಪುದುಂ, ಜನ್ಮ = ಪ್ರಾಯಮುಂ, ದೇಹಾಭ್ಯಾಂ = ಶರೀರವುಮೆಂಬಿವಱಿಂ, ಕ್ರಮದಿಂ, ಸಮಾನತ್ವಂ = ಸಮಾನತ್ವಮಪ್ಪುದುಂ, ಅಧಿಕಂಚೇತಿ = ಅಧಿಕತನಮುಮೆಂದಿಂತು, ಕನ್ಯಾದೋಷಃ = ಕನ್ನೆಯದೋಷಂಗಳ್‌ || ಇಂತಪ್ಪಕನ್ನೆಯಂತರಲಾಗದೆಂಬುದುತಾತ್ಪರ್ಯಂ || ಈಪೇಳ್ದದೋಷಂಗಳಿಲ್ಲದಕನ್ನೆಯಂ = ಮತ್ತಮಿಂತಪ್ಪವಱಿಂಪರೀಕ್ಷಿಸುವುದೆಂಬುದುತ್ತರವಾಕ್ಯಂ :

—-

೧೩. ನಾಲ್ಕುವಿವಾಹಗಳುಅಧರ್ಮ್ಯವಿವಾಹಗಳಾದರೂವಧೂವರರಪರಸ್ಪರವಾದಅಪವಾದವಿಲ್ಲದೆ, ಹೊಂದಾಣಿಕೆಇರುವುದಾದರೆ, ಅಧರ್ಮ್ಯವಲ್ಲ.

೧೪. ಕಾಲಿನಕಿರುಬೆರಳುಗಳುಮೇಲೆದ್ದಿರುವುದು. ಕಣ್ಣುಗುಡ್ಡೆಗಳುಉಬ್ಬಿರುವುದು. ಕೆಳತೊಡೆಯಲ್ಲಿಹೆಚ್ಚುಕೂದಲಿರುವುದು. ತೊಡೆಗಳುಕೊಬ್ಬಿಲ್ಲದೆತೆಳ್ಳಗಿರುವುದು. ಸೊಂಟ, ಹೊಕ್ಕಳು, ಹೊಟ್ಟೆ, ಕುಚಯುಗಳಗಳು. ಕೊರಳು, ಇವುಗಳುಒಪ್ಪವಾಗಿಲ್ಲದಿರುವುದು. ಬಾಹುಗಳಲ್ಲಿನರಗಳೆದ್ದುಕಾಣುತ್ತಿದ್ದುಅಶುಭತ್ವಸೂಚಕವಾಗಿರುವುದು. ನಾಲಗೆ, ತುಟಿಗಳು, ಚರ್ಮಕಪ್ಪಾಗಿರುವುದು.

—-

ಸಹರಾ[12]ತದ್ಗೃಹೇಸ್ವಯಮಾಗತಸ್ಯದೂತಸ್ಯಭುಕ್ತ್ವಾವ್ಯಾಧಿಮತೀರುದಂತೀಪತಿರ್ಘನೀಸುಪ್ತಾಸ್ತೋಕಾಯುಷ್ಕಾಅಪ್ರಸನ್ನಾದುಃಖಿತಾಬಹಿರ್ಗತಾಕುಲಟಾಕಲಹೋದ್ಯುಕ್ತಾಪರಿಜನೋದ್ವಾಸಿನೀಅಪ್ರಿಯದರ್ಶನಾದುರ್ಭಗಾಇತಿತಾಂವೃಣೀತ|| ೧೫ || ೧೪೭೩ ||

ಅರ್ಥ : ತದ್‌ಗೃಹೇ = ಕನ್ನೆಯಮನೆಯೊಳ್‌, ಸಹಸಾ = ತೊಟ್ಟನೆ, ಸ್ವಯಂ = ತಾಂ, ಆಗತಸ್ಯ= ಬಂದನ, ದೂತಸ್ಯವಾ = ಬಂದದೂತನಮುಂದೆಮೇಣ್‌, ಭುಕ್ತ್ವಾಉಂಡು (ಅಭ್ಯುಕ್ತಾ = ಮೀವುತಿರ್ದ್ದಡೆ) ವ್ಯಾಧಿಮತೀ = ವ್ಯಾಧಿಯನುಳ್ಳಳ್‌, ರುದಂತೀ = ಅಳುತಿರ್ದಳ್‌, ಪತಿಘ್ನೀ = ಗಂಡನಂಕೊಲ್ವಳ್‌, ಸುಪ್ತಾ = ನಿದ್ರೆಗೆಯ್ವಳ್‌, ಸ್ತೋಕಾಯುಷ್ಕಾ = ಅಲ್ಪಾಯುಷ್ಕೆ, ಅಪ್ರಸನ್ನಾ = ಹೊಗೆವುತ್ತಿರ್ದಳ್‌, ದುಃಖಿತಾ = ದುಃಖಿತೆಯಕ್ಕುಂ, ಬಹಿರ್ಗತಾ = ಪೊಱಗಣ್ಗೆಪೊಱಮಟ್ಟಳ್‌, ಕುಲಟಾ = ಹಾದರಗಿತಿ, ಕಲಹೋದ್ಯುಕ್ತಾ = ಕಲಹಂಗೆಯ್ಯುತ್ತಿರ್ದ್ದಳ್‌, ಪರಿಜನೋದ್ವಾಸಿನೀ = ಪರಿಗ್ರಹಂಗಳನೆ (ಜನ)ತ್ತಿಕಳೆವಳ್‌, ಅಪ್ರಿಯದರ್ಶನಾಚ = ಕಣ್ಗೆಸೊಗಸದಳ್‌ (ಮಲಿನವಾಗಿರ್ದಡೆ) ದುರ್ಭಗಾಇತಿಹಡಣಿಗೆಯಗಳೆಂದಿಂತು, ತಾಂಕನ್ಯಾಂ = ಆಕನ್ನೆಯಂನವೃಣೀತ (ಬೇಡದಿರ್ಕ್ಕೆ) ಮದುವೆಯಾಗದಿರ್ಕ್ಕೆ || ಈದೋಷಮಿಲ್ಲದಕನ್ನೆಯಂಬೇಳ್ಪುದೆಂಬುದುತಾತ್ಪರ್ಯಂ || ಮದುವೆನಿಲ್ವವಸರದೊಳಿಂತಪ್ಪಕುಱುಪುಗಳಿಂದಿಂತಕ್ಕುಮೆಂಬುದುತ್ತರವಾಕ್ಯಂ :

ಶಿಥಿಲೇಪಾಣಿಗ್ರಹಣೇವರಃಕನ್ಯಯಾಪರಿಭೂಯತೇ|| ೧೬ || ೧೪೭೪ ||

ಅರ್ಥ : ಪಾಣಿಗ್ರಹಣೇ = ಕೈವಿಡಿಹಂ, ಶಿಥಿಲೇ = ಸಡಿಲಮಾಗೆ, ವರಃ = ಮದವನಿಗಂ, ಕನ್ಯಯಾ = ಕಂನ್ನೆಯಿಂ, ಪರಿಭೂಯತೇ = ಪರಿಭವಿಸೆಪಡುವಂ ||

—-

೧೫. ತಾನಾಗಿಮುನ್ಸೂಚನೆಯನ್ನುಕೊಡದೆಅಥವಾತನ್ನಪರವಾಗಿಯಾರಾದರೂಕನ್ಯೆಯಮನೆಗೆಹೋದಾಗಕನ್ಯೆಊಟಮಾಡಿ. (ಅಭ್ಯಂಗ) ಸ್ನಾನಮಾಡಿಎದುರಿಗೆಬಂದರೆಆಕೆವ್ಯಾಧಿಯುಳ್ಳವಳಾಗುತ್ತಾಳೆ. ಅಳುತ್ತಿದ್ದರೆಅದುಗಂಡನಮರಣಸೂಚಕ. ನಿದ್ರಿಸುತ್ತಿದ್ದರೆ, ಅಲ್ಪಾಯುಷಿ, ಅಪ್ರಸನ್ನಳಾಗಿದ್ದರೆದುಃಖಿತೆಯಾಗುತ್ತಾಳೆ. ಮನೆಯಿಂದಹೊರಗೆಹೋಗಿದ್ದರೆಕುಲಟೆಯೆನಿಸುತ್ತಾಳೆ, ಯಾರೊಂದಿಗಾದರೂಜಗಳಮಾಡುತ್ತಿದ್ದರೆಬಂಧುಜನರನ್ನುದೂರಮಾಡುತ್ತಾಳೆ, ಕಣ್ಣಿಗೆಸೊಗಸದರೀತಿಯಲ್ಲಿಮಲಿನಳಾಗಿದ್ದರೆದೌರ್ಭಾಗ್ಯಕ್ಕೆಗುರಿಯಾಗುತ್ತಾಳೆ. ಇಂತಹಕನ್ಯೆಯನ್ನುಮದುವೆಯಾಗಬಾರದು.

೧೬. ಪಾಣಿಗ್ರಹಣದಲ್ಲಿಕೈಹಿಡಿತವುಸಡಿಲವಾದರೆಕನ್ಯೆಯವರನನ್ನುತಿರಸ್ಕರಿಸುವವಳಾಗುತ್ತಾಳೆ.

—-

ಮುಖಂ[13]ಪಶ್ಯತೋವರಸ್ಯಾನಿಮೀಲಿತ[14]ಲೋಚನಾಕನ್ಯಾಭವತಿಪ್ರಚಂಡಾ|| ೧೭ || ೧೪೭೫ ||

ಅರ್ಥ : ಮುಖಂಪಶ್ಯತಃ = ಮುಖಮಂನೋಡುತ್ತಿರ್ದ, ವರಸ್ಯ = ವರಂಗೆ, ಅನಿಮೀಲಿತಲೋಚನಾ = ಕಣ್ಣೆಮೆಯಿಕ್ಕದದೃಷ್ಟಿಯನುಳ್ಳ, ಕನ್ಯಾ = ಕನ್ನೆ, ಪ್ರಚಂಡಾಭವತಿ = ಬೆಟ್ಟಿದಳಕ್ಕುಂ || ಮದುವೆಯಾದಿಂಬಳಿಕಿಂತುನೆಗಳಲಾಗದೆಂಬುದುತ್ತರವಾಕ್ಯಂ :

[15]ಸಹಶಯಾನಸ್ತೂಷ್ಠೀಂಭವನ್ಪಶುವನ್ಮನ್ಯತೇ|| ೧೮ || ೧೪೭೬ ||

ಅರ್ಥ : ಸಹಶಯಾನಃ = ಒಡನೆಪಟ್ಟಿರ್ದಂ, ತೂಷ್ಣೀ< ಭವನ್‌ = ಉಸಿರದಿರ್ದಂ, ಪಶುವತ್‌ ಮಾನ್ಯತೇ = ಪಶುವಿನಂತೆಬಗೆಯಲ್ಪಡುವಂ ||

ಬಲಾದಾಕ್ರಮನ್ನಾಜನ್ಮವಿದ್ವೇಷ್ಯೋಭವತಿ|| ೧೯ || ೧೪೭೭ ||

ಅರ್ಥ : ಬಲಾತ್‌ = ಬಾಳ್ಕೆಯಂಆಕ್ರಮನ್‌ = ಅತಿಕ್ರಮಿಸುತ್ತಿರ್ದ್ದಂ, ಆಜನ್ಮವಿದ್ವೇಷ್ಯೋ = ಬರ್ದುಂಕುವನ್ನೆವರಂದ್ವೇಷಿಸಲ್ಪಡುವಂ, ಭವತಿ = ಅಕ್ಕುಂ || ಅದಕ್ಕೆತಾತ್ಪರ್ಯಂಪೇಳ್ವುದುತ್ತರವಾಕ್ಯಂ :

ಧೈರ್ಯಚಾತುರ್ಯಾಯತ್ತಂಹಿಕನ್ಯಾವಿಶ್ರಂಭಣಂ|| ೨೦ || ೧೪೭೮ ||

ಅರ್ಥ : ಹಿ = ಆವುದೊಂದುಆಕಾರಣದಿಂ, ಧೈರ್ಯ = ಸ್ಥಿರತೆಯುಂ, ಚಾತುರ್ಯಂ = ಚದುರತನಮೆಂಬಿವಱ, ಆಯತ್ತಂ = ವಶಮಪ್ಪುದು, ಕನ್ಯಾವಿಶ್ರಂಭಣಂ = ಕನ್ನೆಯಬಿಚ್ಚತಿಕೆ (ಕನ್ನೆಯತನ್ನಾಧೀನಂಮಾಳ್ಪುದೆಂಬುದು) || ಇಂತಪ್ಪರ್ಗೆಮದುವೆಯಕ್ಕುಮೆಂಬುದುತ್ತರವಾಕ್ಯಂ :

ಸಮವಿಭವಾಭಿಜನಯೋರಸಮಗೋತ್ರಯೋಶ್ಚವಿವಾಹಸಂಬಂಧಃ|| ೨೧ || ೧೪೭೯ ||

ಅರ್ಥ : ಸಮ = ಸಮಾನಮಪ್ಪ, ವಿಭವಃ = ಸಿರಿಯುಂ, ಅಭಿಜನಯೋಃ = ಪರಿವಾರ (ಕುಲ) ಜನಮುಮೆಂಬಿವನುಳ್ಳವರ್ಗೆ, ಅಸಮಗೋತ್ರಯೋಶ್ಚ = ಗೋತ್ರದಿಂಸಮಾನಮಲ್ಲದರ್ಗೆ, ವಿವಾಹಸಂಬಂಧಃ = ಮದುವೆಯಿಂದಪ್ಪನಂಟು || ಅದಕ್ಕೆವ್ಯತಿರೇಕದಿಂತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೧೭. ವರನುಮುಖವನ್ನುನೋಡುತ್ತಿರಲುಕಣ್ಣೆವೆಯಿಕ್ಕದೆನೋಡುವಕನ್ಯೆಪ್ರಬಲಳಾಗುತ್ತಾಳೆ.

೧೮. ಕೂಡಿಮಲಗಿರುವಲ್ಲಿಸುಮ್ಮನಿರುವವನುಪಶುಸಮಾನನೆಂದುಭಾವಿಸಲ್ಪಡುತ್ತಾನೆ.

೧೯. ಬಲವಂತವಾಗಿಆಕ್ರಮಿಸಿದರೆಬದುಕ್ಕಿದ್ದಷ್ಟುಕಾಲವೂದ್ವೇಷಿಸಲ್ಪಡುತ್ತಾನೆ.

೨೦. ಕನ್ಯೆಯವಿಶ್ವಾಸವನ್ನುಗಳಿಸುವುದುಗಂಡಿನಧೈರ್ಯ, ಚಾತುರ್ಯಗಳನ್ನವಲಂಬಿಸಿರುತ್ತದೆ.

೨೧. ಸಮಾನವಾದಸಿರಿಮತ್ತುಪರಿವಾರಜನಹಾಗೂಭಿನ್ನಗೋತ್ರಗಳಿರುವಲ್ಲಿವಿವಾಹಸಂಬಂಧವಾಗಬೇಕು.

—-

ಮಹತಃಪಿತುರೈಶ್ವರ್ಯಾತ್ಕನ್ಯಾಅಲ್ಪಂ[16]ಹ್ಯವಗಣಯತಿ|| ೨೨ || ೧೪೮೦ ||

ಅರ್ಥ : ಮಹತಃ = ಸಿರಿವಂತನ, ಕನ್ಯಾ = ಕುಮಾರಿ, ಪಿತುಃ = ತಂದೆಯ, ಐಶ್ವರ್ಯಾತ್‌ = ಸಿರಿಯಮದದಿಂ, ಅಲ್ಪಂ = ಪುರುಷಂಬಡವನೆಂದು, ಅವಗಣಯತಿ = ಉದಾಸೀನಂಗೆಯ್ಗುಂ ||

[17]ಅಲ್ಪಸ್ಯಕನ್ಯಯಾ[18]ಪಿತುರ್ದೌರ್ಬಲ್ಯಾನ್ಮಹತಾವಜ್ಞಾಯತೇ|| ೨೩ || ೧೪೮೧ ||

ಅರ್ಥ : ಅಲ್ಪಸ್ಯ = ಬಡತನ, ಕನ್ಯಯಾ = ಕೂಸು, ಪಿತುಃ = ತಂದೆಯ, ದೌರ್ಬಲ್ಯಾತ್‌ = ಬಡತನದತ್ತಣಿಂ, ಮಹತಾ = ಸಿರಿವಂತನಪ್ಪನಿಂದಂ (ಸಮರ್ಥನಹಗಂಡನದೆಸೆಯಿಂದ) ಅವಜ್ಞಾಯತೇ = ಅವಜ್ಞೆಯನೆಯ್ದುವಳು ||

ಅಲ್ಪಸ್ಯಮಹತಾಸಹಸಂವ್ಯವಹಾರೋಮಹಾನ್ವ್ಯಯೋಲ್ಪಶ್ಚಾಯಃ|| ೨೪ || ೧೪೮೨ ||

ಅರ್ಥ : ಅಲ್ಪಸ್ಯ = ಬಡವಂಗೆ, ಮಹತಾಸಹ = ಸಿರಿಯೊಡೆಯನೊಡನೆ, ಸಂವ್ಯವಹಾರಃ = ವಿವಾಹಸಂಬಂಧವಾಗಲ್‌, ಮಹಾನ್‌ = ಪಿರಿದು, ವ್ಯಯಃ = ಬೀಯಂ, ಆಯಶ್ಚ = ಆಯಮುಂ, ಆಲ್ಪಃ = ಕಿಱಿದು || ಇಂತಪ್ಪಮದುವೆಪೊಲ್ಲೆಂಬುದುತ್ತರವಾಕ್ಯಂ :

ವರಂವೇಶ್ಯಾಸಂಗ್ರಹೋನಾವಿಶುದ್ಧಕನ್ಯಾಪರಿಗ್ರಹಃ|| ೨೫ || ೧೪೮೩ ||

ಅರ್ಥ : ವೇಶ್ಯಾಸಂಗ್ರಹಃ = ಸೂಳೆಯರನಿರಿಸುವುದು, ವರಂ = ಒಳ್ಳಿತ್ತು, ಅವಿಶುದ್ಧ = ಶುದ್ಧಮಲ್ಲದ, ಕನ್ಯಾಪರಿಗ್ರಹಃ = ಕನ್ನೆಯಮದುವೆನಿಲ್ವುದು, ನವರಂ = ಒಳ್ಳಿತ್ತಲ್ಲ ||

—-

೨೨. ಹೆಚ್ಚುಸಿರಿವಂತನಮಗಳುಬಡವನಾದಗಂಡನನ್ನುಉದಾಸೀನಮಾಡುತ್ತಾಳೆ.

೨೩. ಬಡವನಮಗಳುತಂದೆಯಬಡತನದಕಾರಣವಾಗಿಸಿರಿವಂತನಾದಪತಿಯಅವಹೇಳನಕ್ಕೆಪಾತ್ರಳಾಗುತ್ತಾಳೆ.

೨೪. ಸಿರಿವಂತನೊಡನೆಬಡವನವಿವಾಹಸಂಬಂಧವುಹೆಚ್ಚಿನವ್ಯಯಕ್ಕೂಕಡಿಮೆಆಯಕ್ಕೂಕಾರಣವಾಗುತ್ತಾಳೆ.

೨೫. ಪರಿಶುದ್ಧಳಿಲ್ಲದಕನ್ಯೆಯನ್ನುಮದುವೆಯಾಗುವುದಕ್ಕಿಂತಸೂಳೆಯನ್ನಿರಿಸಿಕೊಳ್ಳುವುದುಮೇಲು.

—-

ವರಂಕನ್ಯಾಯಾಃಜನ್ಮನಾಶೋನಾಕುಲೀನೇsವಕ್ಷೇಪಃ|| ೨೬ || ೧೪೮೪ ||

ಅರ್ಥ : ಕನ್ಯಾಯಾಃ = ಕನ್ನೆಯ, ಜನ್ಮನಾಶಃ = ಜಾತಿಯಕೇಡುಸಾವುಮೇಣ್‌, ವರಂ = ಒಳ್ಳಿತ್ತು, ಅಕುಲೀನೇಷು = ಕುಲಮಿಲ್ಲದರೊಳ್‌, ಅವಕ್ಷೇಪಃ = ನೂಂಕುವುದು, ನ = ಒಳ್ಳಿತ್ತಲ್ತು || ಕುಲಮಂವಿಚಾರಿಸದೆಮದುವೆಯಂಮಾಡಲಾಗದೆಂಬುದುತಾತ್ಪರ್ಯಂ || ಮದವಳಿಗೆಯನನ್ನೆವರಂಸಂದೇಹಿಸುವುದೆಂಬುದುತ್ತರವಾಕ್ಯಂ :

ಸಮ್ಯಗ್ವೃತ್ತಾಪಿಕನ್ಯಾತಾವತ್ಸಂದೇಹ್ಯಾಯಾವನ್ನಪಾಣಿಗ್ರಹಃ|| ೨೭ || ೧೪೮೫ ||

ಅರ್ಥ : ಸಮ್ಯಕ್‌ = ಆರಯ್ದು, ವೃತ್ತಾಪಿ = ಕೈಕೊಳಲ್ಪಟ್ಟಳಾಗಿಯುಂ, ಕನ್ಯಾ = ಕನ್ನೆ, ತಾವತ್‌ = ಅನ್ನೆವರಂ, ಸಂದೇಹ್ಯಾ = ಸಂದೇಹಿಸಲ್ಪಡುಗುಂ, ಯಾವತ್‌ = ಎನ್ನೆವರಂ, ಪಾಣಿಗ್ರಹಃ = ಕೈಪಿಡಿವುದು, ನ = ಇಲ್ಲ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ವಿಪ್ರಕೃಃಪ್ರತಿರೂಢೋsಪಿ (ವಿಪ್ರಕೃತ[19]ಪತಿರೂಢೋಪಿ) ಪುನರ್ವಿವಾಹದೀಕ್ಷಾಮರ್ಹತೀತಿಸ್ಮೃತಿಕಾರಾಃಪ್ರಾಹುಃ|| ೨೮ || ೧೪೮೬ ||

ಅರ್ಥ : ವಿಪ್ರಕೃತ19ಪತಿರೂಢೋಪಿ = ಜಾತಿಕುಲಾದಿಗಳಿಂವಿಕಾರಮನೆಯ್ದಗಂಡನನುಳ್ಳಮದುವೆಯಾದಕನ್ನಿಕೆಯಾದಡು, ಪುನರ್ವಿವಾಹದೀಕ್ಷಾಂ = ಮದುವೆಗೆತಕ್ಕಳೆಂದಿಂತು, ಸ್ಮೃತಿಕಾರಾಃ = ಸ್ಮೃತಿಕಾರರು, ಪ್ರಾಹುಃ[20] = ಪೇಳ್ವರು || ಈಜಾತಿಯಕನ್ನೆಯೊಳಿವರ್‌ ಮದುವೆನಿಲಲಕ್ಕುಮೆಂಬುದುತ್ತರವಾಕ್ಯಂ :

ಅನುಲೋಮ್ಯೇನಚತುಸ್ತ್ರಿದ್ವಿವರ್ಣಕನ್ಯಾಭಾಜನಾಬ್ರಾಹ್ಮಣಕ್ಷತ್ರಿಯವಿಶಃ|| ೨೯ || ೧೪೮೭ ||

ಅರ್ಥ : ಬ್ರಾಹ್ಮಣ = ಬ್ರಾಹ್ಮಣರುಂ, ಕ್ಷತ್ರಿಯ = ಕ್ಷತ್ರಿಯರುಂ, ವಿಶಃ = ವೈಶ್ಯರುಮೆಂಬಿವಂ, ಅನುಲೋಮ್ಯೇನ = ಕ್ರಮದಿಂ, ಚತುಃ = ನಾಲ್ಕು, ತ್ರಿ = ಮೂಱು, ದ್ವಿ = ಎರಡುಮೆಂಬೀ, ವರ್ಣ = ಜಾತಿಗಳ, ಕನ್ಯಾಭಾಜನಾಃ = ಕುಮಾರಿಯರ್ಗೆತಕ್ಕರ್‌ || ನಾಲ್ಕುಜಾತಿಯಕುಮಾರಿಯರ್ಗೆಬ್ರಾಹ್ಮಣಂ, ಕ್ಷತ್ರಿಯ, ವೈಶ್ಯ, ಶೂದ್ರಕುಮಾರಿಯರ್ಗ್ಗೆಕ್ಷತ್ರಿಯಂ, ವೈಶ್ಯಶೂದ್ರಕುಮಾರಿಯರ್ಗ್ಗೆವೈಶ್ಯಂ, ಶೂದ್ರರ್ಗೆಶೂದ್ರಂಯೋಗ್ಯನೆಂಬುದುತಾತ್ಪರ್ಯಂ || ತಾಯೊಡಹುಟ್ಟಿದಸೋದರಮಾವನಮಗಳೊಳ್ಳಿತ್ತಪ್ಪಲ್ಲಿವಿವಾಹಮಕ್ಕುಮೆಂಬುದುತ್ತರವಾಕ್ಯಂ :

—-

೨೬. ಕನ್ಯೆಯನ್ನುಸತ್ಕುಲಜರಲ್ಲದವರಲ್ಲಿಗೆತಳ್ಳುವುದಕ್ಕಿಂತಕನ್ಯೆಯಮರಣವೇಲೇಸು.

೨೭. ಎಷ್ಟುಒಳ್ಳೆಯನಡವಳಿಕೆಯುಳ್ಳವಳಾಗಿದ್ದರೂಕನ್ಯೆಯುವಿವಾಹವಾಗುವವರೆಗೆಸಂದೇಹಾಸ್ಪದಳಾಗಿಯೇಇರುತ್ತಾಳೆ.

೨೮. ಜಾತಿಕುಲಾದಿಗಳಿಂದವಿಕಾರವನ್ನುಳ್ಳವನೊಂದಿಗೆಮದುವೆಯಾದಕನ್ಯೆಯುಪುನರ್ವಿವಾಹಕ್ಕೆಅರ್ಹಳೆಂದುಸ್ಮೃತಿಕಾರರುಹೇಳುತ್ತಾರೆ.

೨೯. ಬ್ರಾಹ್ಮಣ, ಕ್ಷತ್ರಿಯ, ವೈಶ್ಯವರ್ಣದವರುನಾಲ್ಕು, ಮೂರುಮತ್ತುಎರಡುವರ್ಣಗಳಕನ್ಯೆಯರನ್ನುವಿವಾಹವಾಗಬಹುದು.

—-

ದೇಶಕುಲಾಪೇಕ್ಷಯಾ[21]ಮಾತುಲಸಂಬಂಧಃ|| ೩೦ || ೧೪೮೮ ||

ಅರ್ಥ : ದೇಶ = ದೇಶಮುಂ, ಕುಲ = ಕುಲಮುಮೆಂಬಿವಂ, ಅಪೇಕ್ಷಯಾ = ಅಪೇಕ್ಷಿಸುವುದರಿಂ, ಮಾತುಲಸಂಬಂಧಃ = ಸೋದರಮಾವನಮಕ್ಕಳಮದುವೆ || ದೇಶಕುಲಂಗಳೊಳ್‌ ಕೆಲವರೊಳಕ್ಕುಕೆಲವರೊಳಾಗದೆಂಬುದುತಾತ್ಪರ್ಯಂ || ಮದುವೆಯಫಲಮಂಪೇಳ್ವುದುತ್ತರವಾಕ್ಯಂ :

ಧರ್ಮಾಸ್ಸಂತತಿರನುಪಹತಾರತಿರ್ಗೃಹವಾರ್ತಾಸುವಿಹಿತತ್ವಮಾಭಿಜಾತ್ಯಾಚಾರವಿಶುದ್ಧತ್ವಂದೇವದ್ವಿಜಾತಿಥಿಬಾಂಧವಸತ್ಕಾರಾನ[22]ವದ್ಯತ್ವಂದಾರಕರ್ಮಣಃಫಲಂ|| ೩೧ || ೧೪೮೯ ||

ಅರ್ಥ : ಧರ್ಮಾಃ = ಧರ್ಮಂಗಳ್‌ (ಧರ್ಮಸಂತಾನವು), ಸಂತತಿಃ = ಸಂತಾನಮುಂ, ಅನುಪಹತಾ = ಬಾಧೆಯಿಲ್ಲದ, ರತಿಃ = ಕಾಮಮುಂ, ಗೃಹವಾರ್ತಾಸು = ಮನೆವಾರ್ತೆಗಳೊಳುಂ, ಸುವಿಹಿತತ್ವಂ = ಕರಂಹಿತತನಮುಂ, ಸ್ತ್ರೀಯಂಮಾಡಲ್ವೇಳ್ಕುಮೆಂಬಕ್ರಮಂಮೇಣ್‌, ಅಭಿಜಾತ್ಯಾಕುಲಮುಂಆಚಾರನೆಗಳ್ತೆಯುಮೆಂಬಿವಱ, ವಿಶುದ್ದತ್ವಂ, = ವಿಶುದ್ಧತನಮುಂ, ದೇವ = ದೇವರುಂ, ದ್ವಿಜ = ಬ್ರಾಹ್ಮಣರುಂ, ಅತಿಥಿ = ಅತಿಥಿಗಳುಂ, ಬಾಂಧವ = ನಂಟರುಮೆಂದಿವಱ, ಸತ್ಕಾರ = ಸತ್ಕಾರಮಾಳ್ಪಲ್ಲಿ, ಅನವದ್ಯತ್ವಂಚ = ದೋಷಮಿಲ್ಲಮೆಯುಂ, ದಾರಕರ್ಮಣಃ = ಮದುವೆನಿಲ್ವುದಱ, ಫಲಂ = ಕಾರ್ಯಂ || ಸ್ತ್ರೀಯಿಲ್ಲದಂಗೆಧರ್ಮಾದಿಗಳಿಲ್ಲೆಂಬುದುತಾತ್ಪರ್ಯಂ || ಸ್ತ್ರೀಯೆಗೃಹಮೆಂಬುದುತ್ತರವಾಕ್ಯಂ :

—-

೩೦. ದೇಶಾಚಾರವನ್ನೂ, ಕುಲಾಚಾರವನ್ನೂಅನುಸರಿಸಿಸೋದರಮಾವನಮಕ್ಕಳನ್ನುಮದುವೆಯಾಗಬಹುದು.

೩೧.ಧರ್ಮಸಂತಾನ, ಅಡ್ಡಿಯಲ್ಲದರತಿಸುಖ, ಮನೆವಾರ್ತೆಯಯೋಗ್ಯನಿರ್ವಹಣೆ, ಕುಲಾಚಾರಗಳನಡವಳಿಕೆಯಲ್ಲಿಪರಿಶುದ್ಧಿ, ದೇವತೆಗಳು, ಬ್ರಾಹ್ಮಣರು, ಅತಿಥಿಗಳು, ಬಾಂಧವರುಇವರುಗಳಸತ್ಕಾರದಲ್ಲಿಲೋಪದೋಷಗಳಿಲ್ಲದಿರುವಿಕೆಇವುಮದುವೆಯಾಗುವುದರಪ್ರಯೋಜನಗಳು.

—-

ಗೃಹಿಣೀಗೃಹಮುಚ್ಯತೇಪುನಃಕುಡ್ಯಕಟಸಂಘಾತಃ|| ೩೨ || ೧೪೯೦ ||

ಅರ್ಥ : ಗೃಹಿಣೀ = ಗೃಹಿಣಿಯೇ, ಗೃಹಂಉಚ್ಯತೇ = ಗೃಹಮೆಂದುನುಡಿಯೆಪಡುವಳ್‌, ಕುಡ್ಯ = ಕೇಳುಂ (ಗೋಡೆ), ಕಟ = ಹುಲ್ಲು, ತಟ್ಟಿಗಳುಮೆಂಬಿವಱ, ಸಂಘಾತಃ = ನೆರವಿ, ನಪುನಃ = ಮನೆಯಲ್ಲದು || ಸ್ತ್ರೀಯಿಲ್ಲದಮನೆಮನೆಯಲ್ಲೆಂಬುದುತಾತ್ಪರ್ಯಂ || ಕುಲಸ್ತ್ರೀಯಂಕಾವುಪಾಯಮಂಪೇಳ್ವುದುತ್ತರವಾಕ್ಯಂ :

ಗೃಹಕರ್ಮವಿನಿಯೋಗಃಪರಿಮಿತಾರ್ಥತ್ವಮಸ್ವಾತಂತ್ರ್ಯಂಸದಾ[23]ಮಾತೃವ್ಯಸ್ತ್ರೀಜನಾವರೋಧ[24]ಇತಿಕುಲವಧೂನಾಂರಕ್ಷಣೋಪಾಯಾಃ|| ೩೩ || ೧೪೯೧ |

ಅರ್ಥ : ಗೃಹಕರ್ಮವಿನಿಯೋಗಃ = ಮನೆವಾರ್ತೆಯಮುಖ್ಯತೆಯುಂ, ಪರಿಮಿತಾರ್ಥತ್ವಂ = ಪವಣಿಸಿದರ್ಥಮನುಳ್ಳಸ್ವರೂಪಮುಂ, ಅಸ್ವಾತಂತ್ರ್ಯಂ = ತನ್ನಿಚ್ಛೆಯಿಂನಡೆಯದುದುಂ, ಸದಾ = ಎಲ್ಲಾಕಾಲಂ, ಮಾತೃವ್ಯಸ್ತ್ರೀಜನಾವರೋಧಇತಿ = ತಾಯದೆಸೆಯ, ಅತ್ತೆ, ಅತ್ತಿಗೆಸ್ತ್ರೀಯರ್ಕಳ್‌ ಸುತ್ತಿರ್ಪುದುಮೆಂದಿಂತಿವು, ಕುಲವಧೂನಾಂ = ಕುಲಸ್ತ್ರೀಯರ, ರಕ್ಷಣೋಪಾಯಾಃ = ಕಾವುಪಾಯಂಗಳ್‌ || ಪೆಱವುಪಾಯಂಗಳಿಲ್ಲೆಂಬುದುತಾತ್ಪರ್ಯಂ || ಕುಲಜಂಗೆಸೂಳೆವೇಡೆಂಬುದುತ್ತರವಾಕ್ಯಂ :

ರಜಕಶಿಲಾಕುಕ್ಕುರಖರ್ಪರಸಮಾಹಿವೇಶ್ಯಾಃಕಸ್ತಾಸ್ವಭಿಜಾತೋನುರಜ್ಯೇತ|| ೩೪ || ೧೪೯೨ ||

ಅರ್ಥ : ರಜಕಶಿಲಾ = ಆಗಸರೊಗೆವಕಲ್ಲು, ಕುಕ್ಕುರಖರ್ಪರಃ = ನಾಯುಂಬಹಂಚುಮೆಂಬಿವರೊಳ್‌, ಸಮಾಃ = ಸಮಾನೆಯರು, ಹಿ = ನಿಶ್ಚಯದಿಂ, ವೇಶ್ಯಾಃ = ಸೂಳೆಯರು, ತಾಸು = ಅವರೊಳ್‌, ಅಭಿಜಾತಃ = ಕುಲಜಂ, ಕಃ = ಆವಂ, ಅನುರಜ್ಯೇತ = ಕೂರ್ಮೆಯಂಮಾಳ್ಕುಂ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೩೨. ಗೃಹಿಣಿಯೇಗೃಹವೆನ್ನುವರು, ಗೋಡೆಗಳು, ಛಾವಣಿಗಳಿಂದಕೂಡಿದಕಟ್ಟಡವಲ್ಲ.

೩೩. ನೆಯಕೆಲಸಗಳಲ್ಲಿತೊಡಗಿರುವುದು, ಹಣದವ್ಯವಹಾರದಲ್ಲಿಮಿತವಾದಅಧಿಕಾರ, ಸ್ವೇಚ್ಛಾಪ್ರವರ್ತನೆಯಿಲ್ಲದಿರುವುದು. ಎಲ್ಲಕಾಲದಲ್ಲಿಯೂತಾಯಿಸಂಬಂಧಿಕರಾದಸ್ತ್ರೀಯರೊಡನಿರುವುದುಇವುಕುಲಸ್ತ್ರೀಯರರಕ್ಷಣೆಯಉಪಾಯಗಳು.

೩೪.ವೇಶ್ಯೆಯರುಅಗಸರಒಗೆಯುವಕಲ್ಲಿಗೆ, ನಾಯಿಉಣ್ಣುವಮಡಕೆಯಜೋಕಿಗೆ, ಸಮಾನರಾದವರು. ಕುಲಜನಾದಯಾರುತಾನೆಅವರನ್ನುಪ್ರೀತಿಸಿಯಾನು?

—-

ದಾನೇ[25]ದೌರ್ಭಾಗ್ಯಂಸತ್ಕೃತೌ[26]ಪರೋಪಭೋಗ್ಯತ್ವಮಾಸಕ್ತೌ[27]ಪರಿಭವೋಮರಣಂವಾಮಹೋಪರೇs[28]ಪ್ಯನಾತ್ಮೀಯತ್ವಂಬಹುಕಾಲಸಂಬಂಧೆs[29]ಪಿತ್ಯಕ್ತಾನಾಂತದೈವಪುರುಷಾಂತರಗಾಮಿತ್ವಂಇತಿವೇಶ್ಯಾನಾಂಕುಲಾಗತೋಧರ್ಮಃ[30]|| ೩೫ || ೧೪೯೩ ||

ಅರ್ಥ : ದಾನೇ = ಕೊಟ್ಟೊಡೆ, ದೌರ್ಭಾಗ್ಯಂ = ಸೊಬಗಿನಕೇಡುಂ, (ತೃಪ್ತಿಯಿಲ್ಲದುದು), ಸತ್ಕೃತೌ = ವಸ್ತ್ರಾಭರಣಂಗಳಿಂಮನ್ನಿಸೆ, ಪರೋಪಭೋಗ್ಯತ್ವಂ, = ಪೆಱರಿಂಭೋಗಿಸಲ್ಪಡುವಸ್ವರೂಪಮುಂ, ಆಸಕ್ತೌ = ಕೂರ್ತಡೆ, ಪರಿಭವಃ = ಅಭಿಮಾನದಕೇಡುಂ, ಮರಣಂ, ವಾ = ಸಾವುಂಮೇಣ್‌, ಮಹೋಪಕಾರೇsಪಿ = ಪಿರಿದಪ್ಪುಪಕಾರವಮಾಡಿದೊಡಂ, ಅನಾತ್ಮೀಯತ್ವಂ = ತನ್ನವಳಾಗದುದಂ, ಬಹುಕಾಲಸಂಬಂಧೇsಪಿ = ಪಲಕಾಲಮೊಡನಿರ್ದೊಡಂ, ತ್ಯಕ್ತಾನಾಂ = ಬಿಸುಟರ್ಗೆ, ತದೈವ = ಆಗಳೆ, ಪುರುಷಾಂತರಗಾಮಿತ್ವಂಇತಿ = ಮತ್ತೋರ್ವಪುರುಷನಲ್ಲಿಗೆಪೋಪಸ್ವರೂಪಮುಮೆಂದಿಂತು, ವೇಶ್ಯಾನಾಂ = ಸೂಳೆಯರ, ಕುಲಾಗತಃ = ಕುಲದಿಂಬಂದ, ಧರ್ಮಃ = ಧರ್ಮಂ || ಸೂಳೆಯರ್‌ ಹಿತವೆಯರುಂಶುಚಿಗಳುಮಲ್ಲೆಂಬುದುತಾತ್ಪರ್ಯಂ ||

ಇತಿವಿವಾಹಸಮುದ್ದೇಶಃ|| ೩೦ ||[31]

ಸಮುದ್ದೇಶದವಾಕ್ಯಂಗಳ್‌ || ೩೫ || ಒಟ್ಟುವಾಕ್ಯಂಗಳು || ೧೪೯೩ ||

—-

೩೫. ಎಷ್ಟುಕೊಟ್ಟರೂದರಿದ್ರಸ್ಥಿತಿಯಲ್ಲಿರುವುದು. ಇತರರುಅನುಭವಿಸುವುದಕ್ಕೆಅನುಕೂಲವಾಗಿರುವಂತೆಅಲಂಕರಿಸಿಕೊಳ್ಳುವುದು. ಅನುಭವಿಸುವವನುಅಸಕ್ತನಾದಾಗಅವನನ್ನುಅವಮಾನಿಸುವುದುಇಲ್ಲವೇಕೊಲ್ಲುವುದು. ಎಷ್ಟುಹೆಚ್ಚುಉಪಕಾರವನ್ನುಹೊಂದಿದರೂತನ್ನವರುಎಂಬಅಭಿಮಾನವಿಲ್ಲದಿರುವುದು. ಬಹುಕಾಲದಿಂದಇರುವಸಂಬಂಧವನ್ನುಕೂಡಬಿಟ್ಟುಬೇಗನೆಇನ್ನೊಬ್ಬನೊಡನಿರುವುದು. ಇವುವೇಶ್ಯೆಯರಕುಲಕ್ರಮಾಗತರೀತಿಯು.

—-

 

[1]ಮೈ. ಚೌ. ಬ್ರಾಹ್ಮೋ.

[2]ಚೌ. ವಿನಿಯೋಗೇನಕನ್ಯಾಪ್ರದಾನಾತ್‌ ಪ್ರಜಾಪತ್ಯಃ.

[3]ಮೈ. ಚೌ. ಗೋಮಿಥುನಪುರಸ್ಸರಂ

[4]ಋತ್ವಿಜೇಎಂದುಓದಬೇಕು.

[5]ಇಲ್ಲಿಮೂಲಪ್ರತಿಯಲ್ಲಿಪ್ರಾಮಾಣ್ಯಾತ್‌ ಎಂಬಅಪಪಾಠವಿದ್ದುಟೀಕಾಕಾರನುಅದನ್ನೇಗ್ರಹಿಸಿತಂದೆತಾಯಿ, ಬಂಧುಗಳಸಾಕ್ಷಿಯಿಂದಪರಸ್ಪರಅನುರಾಗದಿಂದಅದುಮದುವೆಗಾಂಧರ್ವವಿವಾಹಎಂದುವಿವರಿಸಿದ್ದಾನೆ. ಆದರೆ, ಇತರಪ್ರತಿಗಳಲ್ಲಿಚಾಪ್ರಾಮಾಣ್ಯಾತ್‌ ಎಂಬಸರಿಯಾದಪಾಠವಿದ್ದುತಂದೆ, ತಾಯಿ, ಬಂಧುಗಳಸಾಕ್ಷಿಯಿಲ್ಲದೆಆದವಿವಾಹವುಗಾಂಧರ್ವವಿವಾಹಎಂದುಅರ್ಥವಾಗುತ್ತದೆ. ಇದೇಸರಿಯಾದವಿವರಣೆ.

[6]ಮೈಕನ್ಯಾಪಹರಣಾತ್‌. ಇದೇಸೂಕ್ತವಾದಪಾಠ.

[7]ಮೈ. ಅಧಮಾಅಪಿ.

[8]ಗಾಂಧರ್ವ, ಅಸುರ, ರಾಕ್ಷಸ, ಪೈಶಾಚಎಂಬನಾಲ್ಕುವಿಧವಾದವಿವಾಹಗಳುಅಧರ್ಮ್ಯಅಥವಾಧರ್ಮವಿರುದ್ಧವಾದವುಎಂದುಸ್ಮೃತಿಗಳಲ್ಲೂಹೇಳಿದೆ. ಆದರೆ, ಇವುಗಳಲ್ಲಿಯೂವಧೂವರರಲ್ಲಿಪರಸ್ಪರಅನುರಾಗವಿದ್ದರೆಹಾಗೂಅವರಕುಲಅಚಾರಗಳಿಗೆಧಕ್ಕೆಯುಂಟಾಗದಿದ್ದರೆಅವೂಧರ್ಮಸಮ್ಮತವೇಎಂದುತಿಳಿಯಬಹುದುಎಂದುಹೇಳಿಅವುಗಳಿಗೂಧಾರ್ಮಿಕಸ್ವರೂಪಕೊಟ್ಟುದುನಂತರದಬೆಳವಣಿಗೆಎಂದುತೋರುತ್ತದೆ.

[9]ಮೈ. ಕನೀನಯೋ. ಚೌ. ಕನೀನಿಕಯೋ.

[10]ಮೈ. ಚೌ. ಕುಚಯುಗಲೇಪು.

[11]ಮೈ. ತಾಲುಜಿಹ್ವಾಧರೇಷು, ಚೌ. ಹರಿತಕೀವ.

ಹಲ್ಲುಗಳುವಿರಳವಾಗಿದ್ದುಒಂದೇಸಮನಾಗಿಲ್ಲದಿರುವುದು, ಕೆನ್ನೆಗಳಲ್ಲಿಗುಳಿಗಳಿರುವುದು, ಕಣ್ಣುಕೆಂಚಗಿರುವುದು, ಹಣೆಯಲ್ಲಿಸುಕ್ಕುಗಳಿರುವುದು, ಕಿವಿಗಳುಸರಿಯಾದಸ್ಥಿತಿಯಲ್ಲಿಇಲ್ಲದಿರುವುದು, ತುಂಬದಟ್ಟವಾಗಿ, ಕೆಂಪಾಗಿ, ಒರಟಾಗಿ, ಅತಿದೀರ್ಘವಾಗಿರುವತಲೆಗೂದಲಿರುವುದು, ತುಂಬಎತ್ತರಅಥವಾತುಂಬಕುಳ್ಳಾಗಿ, ನ್ಯೂನಾಧಿಕತೆಯುಳ್ಳಅವಯವಗಳಿರುವುದು, ವಯಸ್ಸಿನಲ್ಲಿಯೂ, ಶರೀರದಲ್ಲಿಯೂಸಮಾನಅಥವಾಅಧಿಕವಾಗಿರುವುದು. ಇವುಕನ್ಯಾದೋಷಗಳು.

[12]ಚೌ. ಈವಾಕ್ಯಹಿಂದಿನವಾಕ್ಯದಲ್ಲಿಯೇಸೇರಿದೆ. ಈಎರಡೂವಾಕ್ಯಗಳಿಗೆಸಂಬಂಧಿಸಿದಂತೆಮೂರುಪ್ರತಿಗಳಲ್ಲಿಯೂಅಲ್ಪಸ್ವಲ್ಪಪಾಠಬೇದಗಳಿದ್ದುಅರ್ಥಒಂದೇಇದೆ.

[13]ಮೈ. ಚೌ. ಮುಖಮಪಶ್ಯತೋ. ನಮ್ಮ‌ಪ್ರತಿಯಲ್ಲಿಯಪಾಠವೇಸರಿಯಾದುದು.

[14]ಚೌ. ನಿಮೀಲಿತಲೋಚನಾ.

[15]ಮೈ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[16]ಮೈ. ಪತಿಮವಗಣಯತಿ.

[17]ಚೌ. ದಲ್ಲಿಈವಾಕ್ಯಬಹಳಭಿನ್ನವಾಗಿದೆ.

[18]ಕನ್ಯಾಎಂದಿರಬೇಕು.

[19]ವಿಕೃತಎಂದುಓದಬೇಕು. ಮೈ. ಚೌ. ವಿಕೃತಪ್ರತ್ಯೂಢಾsಪಿ.

[20]ವಿಕೃತವರನೊಡನೆಬಹುಶಃಮೋಸದಿಂದಮದುವೆಯಾದಕನ್ಯೆಪುನರ್ವಿವಾಹಮಾಡಿಕೊಳ್ಳಬಹುದೆಂಬಅಭಿಪ್ರಾಯವಿದೆಎಂದುಈವಾಕ್ಯದಅರ್ಥ.

[21]ಮೈ. ದೇಶಾಪೇಕ್ಷೋ. ಸೋದರಮಾವನಮಗಳನ್ನುಮದುವೆಯಾಗುವಪದ್ಧತಿಸಾರ್ವತ್ರಿಕವಾದುದಲ್ಲ. ಅದುಕರ್ನಾಟಕದಲ್ಲಿಪ್ರಚಲಿತವಿದೆ. ಉತ್ತರಭಾರತದಲ್ಲಿಲ್ಲ. ಸೋಮದೇವನಪ್ರಕಾರಅದುದೇಶ, ಕುಲಗಳನ್ನುಅವಲಂಬಿಸಿದೆ. ಅಂದರೆ, ಕೆಲವುಪ್ರದೇಶಗಳಲ್ಲಿಕೆಲವುಮನೆತನಗಳಲ್ಲಿಪ್ರಚಲಿತವಿತ್ತು. ಅದನ್ನೇಟೀಕಾಕಾರನುಕೆಲವರಲ್ಲಿಇದೆ. ಕೆಲವರಲ್ಲಿಇಲ್ಲಎಂದುಹೇಳಿದ್ದಾನೆ.

[22]ಮೈ. ನಿಃಶ್ರೇಯಸಮಾರ್ಗೇಷ್ವಸಂಕುಚಿತಃಸಂಚಾರಃಸಾಧಕಾನಾಂಹಸ್ತಾವಲಂಬನವಿಧಾನಂಎಂಬಹೆಚ್ಚಿನಪದಗಳಿವೆ.

[23]ಮೈ. ಸದಾಚಾರಃ.

[24]ಮೈ. ಸ್ವರಸತಃಸ್ವಾಂತಸ್ಯಸದ್ವಿಷಯೋನ್ಮುಖತಾಪಾದನಂಚೇತಿ.

[25]ಮೈ. ದಾನ್ಯೆರಪಿ.

[26]ಮೈ. ಸಂಸ್ಕೃತ್ಯ, ಸಂಸ್ಕೃತ್ಯ.

[27]ಮೈ. ಉಪಭೋಕ್ತುರಕ್ತಾಸಕ್ತೌ.

[28]ಮಹೋಪಕಾರೇಎಂದುಓದಬೇಕು.

[29]ಮೈ. ಸಂಬಂಧಮಪಿತ್ಯಕ್ತ್ವಾ.

[30]ಮೈ. ಇನ್ನೂಎರಡುಹೆಚ್ಚಿನವಾಕ್ಯಗಳಿವೆ.

[31]ಇದು೩೧ಎಂದುಇರಬೇಕು.