ಸರ್ವಸ್ಯಾಪ್ಯಾಸನ್ನವಿನಾಶಸ್ಯಮತಿಃಪ್ರಾಯೇಭವತಿವಿಪರ್ಯಸ್ತಾ[1]|| ೪೧ || ೧೫೩೪ ||

ಅರ್ಥ : ಅಸನ್ನವಿನಾಶಸ್ಯ = ಕೇಡೆಯ್ದಿದನ, ಸರ್ವಸ್ಯಾಪಿ = ಎಲ್ಲಾಪುರುಷರ, ಮತಿಃ = ಬುದ್ಧಿ, ಪ್ರಾಯೇಣ = ಪ್ರಚುರದಿಂ, ವಿಪರ್ಯಸ್ತಾ = ವಿಪರೀತತೆ, ಭವತಿ = ಅಕ್ಕುಂ || ಭವಿತವ್ಯಂಗೆಅನುರೂಪಮಪ್ಪಮತಿಯಕ್ಕುಮೆಂಬುದುತಾತ್ಪರ್ಯಂ || ಪುಣ್ಯಮನುಳ್ಳಂಗೆಡಱಿಲ್ಲೆಂಬುದುತ್ತರವಾಕ್ಯಂ :

ಪುಣ್ಯವತಃಪುರುಷಸ್ಯಕ್ವಚಿದಪ್ಯಸಿದೌಸ್ಥಿತ್ಯಂ|| ೪೨ || ೧೫೩೫ ||

ಅರ್ಥ : ಪುಣ್ಯವತಃ = ಪುಣ್ಯಮನುಳ್ಳ, ಪುರುಷಸ್ಯ = ಪುರುಷಂಗೆ, ದೌಸ್ಥಿತ್ಯಂ = ಬಡತನಂ, ಕ್ವಚಿದಪಿ = ಎಲ್ಲಿಯುಂ, ನಾಸ್ತಿ = ಇಲ್ಲ ||

ದೈವಮನುಕೂಲಂಕಾಂಸಂಪದಂಕರೋತಿವಿಘಟಯತಿವಾವಿಪದಂ|| ೪೩ || ೧೫೩೬ ||

ಅರ್ಥ : ದೈವಂ = ದೈವಂ, ಅನುಕೂಲಂ = ಅನುಕೂಲಮಪ್ಪುದು, ಕಾಂ = ಆವಂ, ಸಂಪದಂ = ಸಂಪತ್ತಂ, ನಕರೋತಿ = ಮಾಡದು, ವಿಪದಂ = ಆಪದಂ, ವಿಘಟಯತಿವಾ = ಪಿಂಗಿಸದುಮೇಣ್‌ || ಪುಣ್ಯಹೀನಂಕ್ಲೇಶಮನೆಯ್ದುಗುಮೆಂಬುದುತಾತ್ಪರ್ಯಂ || ಇಂತಪ್ಪವಪೊಲ್ಲೆಂಬುದುತ್ತರವಾಕ್ಯಂ :

ಅಸೂಯಕಃಪಿಶುನಃಕೃತಘ್ನಃದೀರ್ಘರೋಷಣಇತಿಚತ್ವಾರಃಕರ್ಮಚಾಂಡಾಲಾಃ|| ೪೪ || ೧೫೩೭ ||

ಅರ್ಥ : ಅಸೂಯಕಃ = ಪುರುಡಿಗನುಂ, ಪಿಶುನಃ = ಹಿಸುಣನುಂ, ಕೃತಘ್ನಃ = ಹಿತವನಱಿಯದವನುಂ (ಮಾಡಿದುದನಱಿಯದವನು), ದೀರ್ಘರೋಷಣಇತಿ = ಬಿಡದೆಮುಳಿವನುಮೆಂದಿಂತು, ಚತ್ವಾರಃ = ನಾಲ್ವರುಂ, ಕರ್ಮಚಾಂಡಾಲಾಃ = ನೆಗಳ್ತೆಯಪೊಲ್ಲೆಯರ್‌ || ಈದೋಷಮಿಲ್ಲದನೆಕುಲಜನೆಂಬುದುತಾತ್ಪಯಂ || ಪುತ್ರಭೇದಮಂಮಾನವರ್ಮಾಳ್ಪಪ್ರಯೋಜನಮಂಪೇಳ್ವುದುತ್ತರವಾಕ್ಯಂ :

—-

೪೧. ವಿನಾಶವುಸಮೀಪಿಸಿರುವಎಲ್ಲರಬುದ್ಧಿಯೂಸಾಮಾನ್ಯವಾಗಿವಿಪರೀತವಾಗುತ್ತದೆ.

೪೨. ಪುಣ್ಯವಂತನಿಗೆಎಲ್ಲಿಯೂದುಃಸ್ಥಿತಿಎಂಬುದಿಲ್ಲ.

೪೩. ದೈವಾನುಕೂಲವಿರುವಲ್ಲಿಯಾರಿಗೆತಾನೇಸಂಪತ್ತುಂಟಾಗದು? ವಿಪತ್ತುತೊಲಗಿಹೋಗದು?

೪೪. ಅಸೂಯಾಪರ, ಚಾಡಿಕೋರ, ಕೃತಘ್ನ, ದೀಘಕೋಪಿ. ನಾಲ್ವರುಕರ್ಮಚಾಂಡಾಲರು.

—-

ಔರಸಃಕ್ಷೇತ್ರಜೋದತ್ತಃಕೃತ್ರಿಮೋಗೂಢೋತ್ಪನ್ನೋsಪವಿದ್ಧಇತಿಷಟ್ಪುತ್ರಾಃದಾಯಾದಾಃಪಿಂಡದಾಶ್ಚ|| ೪೫ || ೧೫೩೮ ||

ಅರ್ಥ : ಔರಸಃ = ತನ್ನಜಾತಿಯೊಳ್‌ ಸಮಾನಮಪ್ಪಂ, ಸಮಾನಮಲ್ಲದಸ್ತ್ರೀಗಂಪುಟ್ಟಿದಗೌರಸನೆಂಬುದು, ಕ್ಷೇತ್ರಜಃ = ತನ್ನಣ್ಣತಮ್ಮಂದಿರಸಮಾನಜಾತಿಯಾಗಿ(ತನ್ನಹೆಂಡತಿಗೆಹುಟ್ಟಿದವನು), ತಾನೊಡಂಬಟ್ಟಪೆಱಗಂ, ತನ್ನಸ್ತ್ರೀಗಂಪುಟ್ಟಿದಂಕ್ಷೇತ್ರಜನೆಂಬುದು, ದತ್ತಃ = ತಾಯುಂತಂದೆಯುಂಧಾರಾಪೂರ್ವಕವಾಗಿಕುಡೆಪಡೆದಮಗಂದತ್ತನೆಂಬುದು, ಕೃತ್ರಿಮಃ = ಸಾಕಿದಮಗನಂಕೃತ್ರಿಮನೆಂಬುದು, ಗೂಢೋತ್ಪನ್ನಃ = ಆಕ್ಷೇತ್ರಜಂಬಂಧುಗಳುಗೂಢವೃತ್ತಿಯಿಂಬೆಳೆದನುಂಗೂಢೋತ್ಪನ್ನನೆಂಬುದು, (ಮಱಿವಾಳತಿಹುಟ್ಟುವನು), ಅಪವಿದ್ಧಃ = ತನ್ನಸ್ತ್ರೀಯೊಳಾವಂಗಾದೊಡಂಪುಟ್ಟಿದನಂ, ಬಂಧುಗಳ್‌ ಬಿಸುಱು[2]ಕಳೆಯೆತಾಂಕರುಣದಿಂನಡಪಿದಮಗನಂಅಪವಿದ್ಧನೆಂಬುದು, ಇತಿ = ಇಂತು, ಷಟ್‌ ಪುತ್ರಾಃ = ಆಱುಮಕ್ಕಳ್‌, ದಾಯಾದಾಃ = ದಾಯಿಗರ್‌, ಪಿಂಡದಾಶ್ಚ = ತನಗೆಪಿಂಡಕುಡುವರುಮಪ್ಪರ್‌[3] ||

ಕಾನೀನಃಸಹೋಢಃಕ್ರೀತಃಪೌನರ್ಭುವಃಸ್ವಯಂದತ್ತಃಶೌದ್ರಶ್ಚೇತಿಷಟ್ಪುತ್ರಾಃದಾಯಾದಾನಾಪಿಪಿಂಡದಾಶ್ಚ|| ೪೬ || ೧೫೩೯ ||

ಅರ್ಥ : ಕಾನೀನಃ = ತನ್ನೊಳ್‌ ಮದುವೆಯಾಗದಮುನ್ನಂಕನ್ನೆಗೆಪುಟ್ಟಿದಮಗನಂಕಾನೀನನೆಂಬುದು, ಸಹೋಢಃ = ಗರ್ಭಂಬೆರಸಿಮದುವೆಯಾದಸ್ತ್ರೀಗೆಪುಟ್ಟಿದಂಸಹೋಢ (ಮದುಮಗನೊಡನೆಮುಂಚೆಪುಟ್ಟಿದವನು)ನೆಂಬುದು, ಕ್ರೀತಃ = ಪೆರ್ಗಡೆಮಾಱಿದ (ಬೆಲೆಗೆಕೊಂಡವನು)ತನ್ನಮಗಂಕ್ರೀತನೆಂಬುದು, ಪೌನರ್ಭುವಃ = ಮಱುಮದುವೆಯಾದಳ್ಗೆಪುಟ್ಟಿದ ಮಗಂಪೌನರ್ಭುವನೆಂಬುದು, ಸ್ವಯಂದತ್ತಃ = ತಾವುಪೆಱರ್ಗೆಕೊಟ್ಟಮಗಂಸ್ವಯಂದತ್ತನೆಂಬುದು, ಶೌದ್ರಶ್ಚ = ಸೂಳೆಗೆ (ಶೂದ್ರಿಯ) ಮಗನುಪುಟ್ಟಿದಮಗಂಶೌದ್ರನೆಂಬುದು, ಇತಿ = ಇಂತು, ಷಟ್‌ ಪುತ್ರಾಃ = ಆಱುಮಕ್ಕಳ್‌, ದಾಯಾದಾಃ = ದಾಯಿಗರ್‌, ಪಿಂಡದಾಶ್ಚ = ಪಿಂಡಂಗುಡುವರುಂ, ನ = ಅಲ್ಲರ್‌ || ಧನಮಿಂತುಪಚ್ಚುಕೊಡುವುದೆಂಬುದುತ್ತರವಾಕ್ಯಂ :

—-

೪೫. ಔರಸ (ಹೊಟ್ಟೆಯಲ್ಲಿಹುಟ್ಟಿದಮಗ). ಕ್ಷೇತ್ರಜ (ನಿಯೋಗದಮೂಲಕತನ್ನಹೆಂಡತಿಯಲ್ಲಿಹುಟ್ಟಿದವನು). ದತ್ತುತೆಗೆದುಕೊಂಡವನು. ಕೃತ್ರಿಮ (ಸಾಕಿದಮಗ), ಗೂಢೋತ್ಪನ್ನ (ರಹಸ್ಯವಾಗಿಹುಟ್ಟಿದವನು), ಅಪವಿದ್ದತನ್ನಹೆಂಡತಿಯಲ್ಲಿಯಾರಿಗಾದರೂಹುಟ್ಟಿದವನು (ಬಂಧುಗಳಮನೆಬಿಟ್ಟುಬಂದುಅಲೆಯುತ್ತಿದ್ದವನನ್ನುಕರುಣೆಯಿಂದಸಾಕಿಕೊಂಡವನು) ಹೀಗೆಆರುಮಕ್ಕಳೂದಾಯಾದಿಗಳುಮತ್ತುಪಿಂಡಕೊಡುವವರು.

೪೬. ಕಾನೀನ (ವಿವಾಹವಾಗದಕನ್ಯೆಗೆತನ್ನಿಂದಹುಟ್ಟಿದವನು), ಸಹೋಢ (ಗರ್ಭವತಿಯಾಗಿದ್ದವಳನ್ನುಮದುವೆಮಾಡಿಕೊಂಡಮೇಲೆಹುಟ್ಟಿದವನು), ಕ್ರೀತ (ಬೆಲೆಗೆಕೊಂಡವನು), ಪೌನರ್ಭುನ (ವಿಧವೆಯನ್ನುಮದುವೆಯಾದಮೇಲೆಹುಟ್ಟಿದವನು). ಸ್ವಯಂದತ್ತ (ತಾವುಇತರರಿಗೆದತ್ತವಾಗಿಕೊಟ್ಟವನು), ಇಲ್ಲಿಶೌದ್ರ (ಶೂದ್ರಸ್ತ್ರೀಯಲ್ಲಿಹುಟ್ಟಿದವನು) ಆರುಮಂದಿಮಕ್ಕಳುದಾಯಾದಿಗಳಲ್ಲಮತ್ತುಪಿಂಡಪ್ರದಾನಕ್ಕೆಅರ್ಹನಲ್ಲ.

—-

ದೇಶುಕುಲಾಪತ್ಯಸ್ತ್ರೀಸಮಾಪೇಕ್ಷಾ[4]ಯತಿಕುಲರಾಜಕುಲಾಭ್ಯಾ[5]ಮನ್ಯತ್ರದಾಯಾದವಿಭಾಗಸ್ತತ್ರಏಕಏವತತ್ಪದಾರ್ಹಃ|| ೪೭ || ೧೫೪೦ ||

ಅರ್ಥ : ದೇಶ = ನಾಡುಂ, ಕುಲ = ಕುಲಮುಂ, ಅಪತ್ಯ = ಮಕ್ಕಳುಂ, ಸ್ತ್ರೀ = ಸ್ತ್ರೀಯರುಮೆಂದಿವರಂ, ಸಮಾಪೇಕ್ಷಾ = ಅಪೇಕ್ಷಿಸಿಇಪ್ಪುದು, ದಾಯಾದವಿಭಾಗಃ = ದಾಯಿಗನಪಸುಗೆ, ಯತಿಕುಲ = ಯತಿಗಳಕುಲಮುಂ, ರಾಜಕುಲಾಭ್ಯಾಂ = ಅರಸುಕುಲಮೆಂಬಿವಱತ್ತಣಿಂ, ಅನ್ಯತ್ರ = ಪೆಱವುಳಿ, ತತ್ರ = ಆರಾಜಕುಲಯತಿಕುಲಂಗಳೊಳ್‌, ಏಕಏವ = ಓರ್ವನೆ, ತತ್ಪದಾರ್ಹಃ = ಆಪದವಿಗೊಡೆಯಂ[6] || ದೇಶಾಚಾರಕುಲಾಚಾರಜ್ಯೇಷ್ಠಕನಿಷ್ಠಪುತ್ರಾದಿಗಳ್ಗೆಧನಮಂಪಚ್ಚಿಕುಡುವುದೆಂಬುದುತಾತ್ಪರ್ಯಂ || ಪಿರಿದುಪರಿಚಯಂಬೇಡೆಂಬುದುತ್ತರವಾಕ್ಯಂ :

ಅತಿಪರಿಚಯಃಕಸ್ಯಾವಜ್ಞಾಂಜನಯತಿ|| ೪೮ || ೧೫೪೧ ||

ಅರ್ಥ : ಅತಿಪರಿಚಯಃ = ಕರಮೊಳಪೊಕ್ಕುನೆಗಳ್ವುದು, ಕಸ್ಯ = ಆವಂಗೆಅವಜ್ಞಾಂ = ಇಳಿಕೆಯಂನಜನಯತಿ = ಪುಟ್ಟಿಸದು || ಸಮಂತುನೆಗಳ್ವುದೆಂಬುದುತಾತ್ಪರ್ಯಂ || ಬಂಟನದೋಷಂಸ್ವಾಮಿಯನಿಂತೆಯ್ದುಗುಮೆಂಬುದುತ್ತರವಾಕ್ಯಂ :

ಭೃತ್ಯಾಪರಾಧೇನಸ್ವಾಮಿನೋದಂಡೋಯದಿಭೃತ್ಯಂನಮುಂಚತಿ || ೪೯ || ೧೫೪೨ ||

ಅರ್ಥ : ಭೃತ್ಯಾಪರಾಧೇನ = ಬಂಟನದೋಷದಿಂ, ಸ್ವಾಮಿನಃ = ಒಡೆಯಂಗೆ, ದಂಡಃ = ದಂಡಮಕ್ಕುಂ, ಭೃತ್ಯಂ = ಬಂಟನಂ, ಯದಿನಮುಂಚತಿ = ಬಿಡದಿಪ್ಪನಪ್ಪೊಡೆ || ಪೊಲ್ಲದನಂಕೈಕೊಳಲಾಗದೆಂಬುದುತಾತ್ಪರ್ಯಂ || ಗುಣಾಂತರಮನಱಿಯದನಪೆರ್ಮೆಲೇಸಲ್ಲೆಂಬುದಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

೪೭. ದೇಶಕುಲ, ಮಕ್ಕಳು, ಹೆಂಡತಿಇವರುಗಳನ್ನುಗಮನದಲ್ಲಿರಿಸಿಕೊಂಡುಆಸ್ತಿಯ್ನುಹಂಚುವುದು. ರಾಜರುಯತಿಗಳುಇವರವಿಚಾರದಲ್ಲಿಒಬ್ಬನೇಅರ್ಹನಾಗುತ್ತಾನೆ.

೪೮. ಅತಿಪರಿಚಯವುಯಾರಲ್ಲಿತಾನೆಉಪೇಕ್ಷೆಯನ್ನುಹುಟ್ಟಿಸದು?

೪೯. ಭೃತ್ಯನುಅಪರಾಧಮಾಡಿದಾಗಭೃತ್ಯವನ್ನುಸ್ವಾಮಿಯುತೊಲಗಿಸದಿದ್ದರೆಸ್ವಾಮಿಯನ್ನುದಂಡನೆಗೆಗುರಿಪಡಿಸಬೇಕು.

—-

ಆಲಂಮಹತ್ತಯಾಸಮುದ್ರಸ್ಯಯೋಲಘುಂಶಿರಸಾಮಹತ್ಯಧಸ್ತಾನ್ನಯತಿಗುರುಂ|| ೫೦ || ೧೫೪೨ ||

ಅರ್ಥ : ಸಮುದ್ರಸ್ಯ = ಸಮುದ್ರದ, ಮಹತ್ತಯಾ = ಪೆರ್ಮೇಯಿಂ, ಅಲಂ = ಸಾಲ್ವುದು, ಯಃ = ಆವುದೊಂದು, ಲಘುಂ, = ನೊಚ್ಚಿದಪ್ಪುದು, ಶಿರಸಾ = ತಲೆಯಿಂ, ವಹತಿ = ತಾಳ್ದುಗುಂ, ಗುರುಂ = ಬಿಣ್ಣಿತಪ್ಪುದಂ, ಅಧಸ್ತಾಚ್ಚ = ಕೆಳಂಗೆ, ನಯತಿ = ಒಯ್ಗುಂ || ಪಿರಿಯಂಗುಣವಿಶೇಷಮನಱಿದುವೇಳ್ಕುಮೆಂಬುದುತಾತ್ಪರ್ಯಂ || ಇಂತಪ್ಪಲ್ಲಿಯಾರುಮನಿರಿಸಲಾದೆಂಬುದುತ್ತರವಾಕ್ಯಂ :

ರತಿಮಂತ್ರಾಹಾರ[7]ಕಾಲೇಷುಕಮಪ್ಯುಪವಿಶೇತ್|| ೫೧ || ೧೫೪೪ ||

ಅರ್ಥ : ರತಿ = ಸಂಭೋಗಮುಂ, ಮಂತ್ರ = ಆಳೋಚನೆಯುಂ, ಆಹಾರ = ಊಟಮೆಂಬಿವ, ಕಾಲೇಷು = ಕಾಲಂಗಳೊಳ್‌, ಕಮಪಿ = ಆವನುಮಂ, ನೋಪವಿಶೇತ್‌ = ಸಮೀಪನಿರಿಸದಿರ್ಕೆ || ಇಂತಪ್ಪಲ್ಲಿಮನಂವ್ಯಾಕುಲವಾಗಲಾಗದೆಂಬುದುತ್ತರವಾಕ್ಯಂ :

ಸಾಧೂಪಚರಿತೇಷ್ವಪಿತಿರ್ಯಕ್ಷುನವಿಶ್ವಾಸಂಗಚ್ಛೇತ್|| ೫೨ || ೧೫೪೫ ||

ಅರ್ಥ : ತಿರ್ಯಕ್ಷು = ತಿರ್ಯಗ್ಜೀವಂಗಳೊಳ್‌, ಸಾಧೂಪಚರಿತೇಷ್ವಪಿ = ಲೇಸಾಗಿಮೆಚ್ಚಿಸಲ್ಪಟ್ಟ (ಶಿಕ್ಷಿಸಲ್ಪಟ್ಟ) ದರೊಳ್‌, ವಿಶ್ವಾಸಂ = ನಂಬುಗೆಯಂ, ನಗಚ್ಛೇತ್‌ = ಸಲ್ಲದಿರ್ಕೆ ||

ಮತ್ತವಾರಣಾರೋಹಿಣೋಜೀವಿತವ್ಯೇಸಂದೇಹೋನಿಶ್ಚಿತಸ್ತಸ್ಯಾಪಾಯಃ|| ೫೩ || ೧೫೪೬ ||

ಅರ್ಥ : ಮತ್ತವಾರಣಾರೋಹಿಣಃಸೊಕ್ಕಿದಾನೆಯನೇಱಿದಂಗೆ, ಜೀವಿತವ್ಯೇ = ಬಾಳ್ಕೆಯೊಳ್‌, ಸಂದೇಹಃ = ಸಂಶಯಂ, ತಸ್ಯ = ಆತಂಗೆ, ಅಪಾಯಃ = ಕೇಡುಂ, ನಿಶ್ಚಿತಃ = ಸಂದೇಹಮಿಲ್ಲದುದು ||

—-

೫೦. ಸಮುದ್ರವುಹಗುರವಾದ್ದನ್ನುಮೇಲೆತ್ತಿ. ಭಾರವಾದ್ದನ್ನುಮುಳುಗಿಸುವಂತೆ, ನೀಚನನ್ನುಮೇಲಕ್ಕೆತಂದುಪೂಜಾರ್ಹನನ್ನುನಿರ್ಲಕ್ಷಿಸುವವನದೊಡ್ಡತನದಿಂದಪ್ರಯೋಜನವೇನು?

೫೧. ರತಿಸಮಯದಲ್ಲಿಯೂ, ಮಂತ್ರಾಲೋಚನೆಯಕಾಲದಲ್ಲಿಯೂ, ಭೋಜನಕಾಲದಲ್ಲಿಯೂಇತರರನ್ನುಸೇರಿಸಬಾರದು.

೫೨. ಚೆನ್ನಾಗಿಉಪಚರಿಸಲ್ಪಟ್ಟಿದ್ದರೂತಿರ್ಯಗ್ಜಂತುಗಳಲ್ಲಿನಂಬುಗೆಸಲ್ಲದು.

೫೩. ಸೊಕ್ಕಿದಆನೆಯನ್ನುಏರಿದವನಿಗೆಜೀವದಬಗ್ಗೆಸಂದೇಹವಿದ್ದರೂ, ಅಪಾಯವಂತೂನಿಶ್ಚಿತ.

—-

ಅತ್ಯರ್ಥಂಹಯವಿನೋದೋನಾಂಗಭಂಗಮನಾಪಾದ್ಯತಿಷ್ಠತಿ|| ೫೪ || ೧೫೪೭ ||

ಅರ್ಥ : ಅತ್ಯರ್ಥಂ = ಕರಂಪಿರಿದಪ್ಪ, ಹಯವಿನೋದಃ = ಕುದುರೆಯವಿನೋದಂ, ಅಂಗಭಂಗಂ = ಅವಯವಂಗಳಕೇಡಂ, ಅನಾಪಾದ್ಯ = ಮಾಡದೆ, ನತಿಷ್ಠತಿ = ನಿಲ್ಲದು || ಪಶುಗಳೊಳ್‌ ಪಿರಿದುವಿನೋದಂಬೇಡೆಂಬುದುತಾತ್ಪರ್ಯ || ಬಡವನಿಂತುಸಾಲಮಂಕಳೆವುದೆಂಬುದುತ್ತರವಾಕ್ಯಂ :

[8]ಋಣಮಧನೋದಾಸಕರ್ಮಣಾನಿರ್ಹರೇದನ್ಯತ್ರಯತಿಬ್ರಾಹ್ಮಣಕ್ಷತ್ರಿಯೇಭ್ಯಃ|| ೫೫ || ೧೫೪೮ ||

ಅರ್ಥ : ಅಧನಃ = ಬಡವಂ, ಋಣಂ = ಸಾಲಮಂ, ದಾಸಕರ್ಮಣಾ = ಬಡತನದಿಂ, [9]ನಿರ್ಹರೇತ್‌ = ಕೆಳಗೆ, ಯತಿ = ತಪಸ್ವಿಗಳುಂ, ಬ್ರಾಹ್ಮಣ = ಬ್ರಾಹ್ಮಣರುಂ, ಕ್ಷತ್ರಿಯೇಭ್ಯಃ = ಕ್ಷತ್ರಿಯರುಮೆಂದಿವರತ್ತಣಿಂ, ಅನ್ಯತ್ರ = ಪೆಱವುಳಿ || ಯತಿಬ್ರಾಹ್ಮಣರುಕ್ಷತ್ರಿಯರುಋಣಮುಳ್ಳೊಡಂನಿಚ್ಚಕರ್ಮಮಂಮಾಡರೆಂಬುದುತಾತ್ಪರ್ಯಂ || ಇಂತಪ್ಪನೊಡಲೆತನಗೆಪಗೆಯೆಂಬುದುತ್ತರವಾಕ್ಯಂ :

ತಸ್ಯಾತ್ಮದೇಹಏವವೈರಿನನುಯಥಾಲಾಭಮಶನಂಶಯನಂಸಹತೇ|| ೫೬ || ೧೫೪೯ ||

ಅರ್ಥ : ತಸ್ಯ = ಆತಂಗೆ, ಆತ್ಮದೇಹಏವ = ತನ್ನೊಡಲೇ, ವೈರೀನನು = ಪಗೆಯಲಾ, ತಥಾಲಾಭಂ[10] = ಪಡೆದಂತಪ್ಪ, ಅಶನಂ = ಆಹಾರಮುಂ, ಶಯನಂಚ = ನಿದ್ರೆಯುಮಂ, ನಸಹತೇ = ಸೈರಿಸದು, ಯಸ್ಯ = ಆವನೋರ್ವನಶರೀರಂ || ವ್ಯತಿರೇಕದಿಂದಿದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೫೪. ಅತಿಯಾದಕುದುರೆಯಸವಾರಿಯವಿನೋದವುಅವಯನಗಳಿಗೆಅಪಾಯವನ್ನುಉಂಟುಮಾಡದೆಇರದು.

೫೫. ಸನ್ಯಾಸಿ, ಬ್ರಾಹ್ಮಣ, ಕ್ಷತ್ರಿಯರನ್ನುಳಿದುಬೇರೆಯಾರಾದರೂಸಾಲಮಾಡಿತೀರಿಸಲಾಗದಿದ್ದರೆಸೇವೆಮಾಡಿತೀರಿಸಬೇಕು.

೫೬. ಸಿಕ್ಕಷ್ಟುಆಹಾರ, ಶಯನಗಳುಯಾರಿಗೆಒಗ್ಗುವುದಿಲ್ಲವೋಅಂಥವರಿಗೆಅವನದೇಹವೇಶತ್ರು.

—-

ತಸ್ಯಕಿಮಸಾಧ್ಯಂನಾಮಹಿಮಹಾಮುನಿರಿವಸರ್ವಾನ್ನೀನಃಸರ್ವಕ್ಲೇಶಸಹಃಸರ್ವತ್ರಸುಖಶಾಯೀ|| ೫೭ || ೧೫೫೦ ||

ಅರ್ಥ : ತಸ್ಯ = ಆತಂಗೆ, ಅಸಾಧ್ಯಂ = ಪಡೆಯಲ್ಬಾರದುದು, ನಾಮ = ನಿಶ್ಚಯದಿಂ, ಕಿಂ = ಏನು, ಯಃ = ಆವನೋರ್ವಂ, ಮಹಾಮುನಿರಿವ = ಉತ್ತಮಋಷಿಯಂತೆ, ಸರ್ವಾನ್ನೀನಃ = ಎಲ್ಲಾಆಹಾರಮನುಂಬಂ, ಸರ್ವಕ್ಲೇಶಸಹಃ = ಎಲ್ಲಾದುಃಖಮಂಸೈರಿಸುವಂ, ಸರ್ವತ್ರಶಾಯೀಚ = ಎಲ್ಲೆಡೆಯೊಳ್‌ ಸುಖನಿದ್ರೆಗೆಯ್ವನುಮಕ್ಕುಂ || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

ಸ್ತ್ರೀಪ್ರೀತಿರಿವಕಸ್ಯನಾಮಸ್ತ್ರೀರೇಯಂಲಕ್ಷ್ಮೀಃ|| ೫೮ || ೧೫೫೧ ||

ಅರ್ಥ : ಸ್ತ್ರೀಪ್ರೀತಿರಿವ = ಸ್ತ್ರೀಯಕೂರ್ಮೆಯೆಂತಂತೆ, ಕಸ್ಯ = ಅವರಿಗೆ, ನಾಮ = ನಿಶ್ಚಯದಿಂ, ಇಯಂಲಕ್ಷ್ಮೀ = ಈಲಕ್ಷ್ಮಿಯು, ಸ್ಥಿರಾ = ಸ್ಥಿರೆಯಪ್ಪಳು || ಅರಸಿಂಗಿಂತಪ್ಪನೊಳ್ಳಿದನೆಂಬುದುತ್ತರವಾಕ್ಯಂ :

ಪರಪೈಶೂನ್ಯೋಪಾಯನಃರಾಜ್ಞಾಂವಲ್ಲಭೋಲೋಕಃಪ್ರಾಯೇಣ|| ೫೯ || ೧೫೫೨ ||

ಅರ್ಥ : ಪರಪೈಶೂನ್ಯೋಪಾಯನಃ = ಪೆಱರಪಿಸುಣಾಡುವುಪಾಯದಿಂ, ಪ್ರಾಯೇಣ = ಪ್ರಚುರದಿಂ, ರಾಜ್ಞಾಂ = ಅರಸುಗಳ್ಗೆ, ಲೋಕಃ = ಜನಂ, ವಲ್ಲಭಃ = ಇಷ್ಟಹಿತವಕ್ಕುಂ || ಬಡಕಿವಿಯರಸುಗಳ್‌ ಕೊಂಡೆಯರ್ಗೊಳ್ಳಿದರೆಂಬುದುತಾತ್ಪರ್ಯಂ || ದುರ್ಜನಂತನಗೆಪಂಪನಿಂತುಮಾಡುವನೆಂಬುದುತ್ತರವಾಕ್ಯಂ :

[11]ಪರಾಪವಾದೇನಾತ್ಮೋತ್ಕರ್ಷಂಮನ್ಯೇತನೀಚಃ|| ೬೦ || ೧೫೫೩ ||

ಅರ್ಥ : ಪರಾಪವಾದೇನ = ಪೆಱರಂಪಳಿವುದಱಿಂ, ಆತ್ಮೋತ್ಕರ್ಷಂ = ತನ್ನಗ್ಗಳಿಕೆಯುಂಮನ್ಯೇತ = ಬಗೆಗುಂ, ನೀಚಃ = ನೀಚನಪ್ಪಂ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

೫೭. ಮಹಾಮುನಿಯಂತೆಯಾವನುಎಂಥಆಹಾರವನ್ನಾದರೂಸೇವಿಸಬಲ್ಲನೋ. ಎಲ್ಲಕಷ್ಟಗಳನ್ನೂಸಹಿಸಬಲ್ಲನೋ, ಎಲ್ಲೆಡೆಯಲ್ಲಿಯೂಸುಖನಿದ್ರೆಮಾಡಬಲ್ಲನೋಅಂಥವನಿಗೆಅಸಾಧ್ಯವಾದುದೇನಿದೆ?

೫೮. ಸ್ತ್ರೀಪ್ರೀತಿಯಂತೆಯಾರಲ್ಲಿತಾನೆಲಕ್ಷ್ಮಿಯುಸ್ಥಿರವಾಗಿಇರಬಲ್ಲಳು?

೫೯. ಸಾಧಾರಣವಾಗಿಇತರರಮೇಲೆಚಾಡಿಹೇಳುವಉಪಾಯದಿಂದಲೇಜನರುರಾಜರಿಗೆಇಷ್ಟರಾಗುತ್ತಾರೆ.

೬೦. ಇತರರನ್ನುಹಳಿಯುವುದರಿಂದಲೇತನಗೆಮೇಲ್ಮೆಯುಂಟಾಗುವುದೆಂದುನೀಚನುಭಾವಿಸುತ್ತಾನೆ.

—-

ಖಲುಪರಮಾಣೋರಲ್ಪತ್ವೇನ[12]ಮಹಾನ್ಮೇರುಃಕಿಂತುಸ್ವಗುಣೇನ|| ೬೧ || ೧೫೫೪ ||

ಅರ್ಥ : ಪರಮಾಣೋಃ = ಪರಮಾಣುವಿನ, ಅಲ್ಪತ್ವೇನ = ಕಿಱಿಯತನದಿಂ, ಮೇರುಃ = ಮಂದರಂ, ಖಲು = ನಿಶ್ಚಯದಿಂ, ಮಹಾನ್‌ = ಪಿರಿದು, ನ = ಅಲ್ಲದು, ಕಿಂತು = ಮತ್ತೆ, ಸ್ವಗುಣೇನ = ತನ್ನಗುಣದಿಂದಮೆಪಿರಿದು || ಪಿರಿಯಂಬರಿದೆಮುಳಿಯನೆಂಬುದುತ್ತರವಾಕ್ಯಂ :

ಖಲುನಿರ್ನಿಮಿತ್ತಂಮಹಾಂತೋಭವಂತಿಕಲುಷಮನೀಷಾಃ|| ೬೨ || ೧೫೫೫ ||

ಅರ್ಥ : ನಿರ್ನಿಮಿತ್ತಂ = ನಿರ್ನೇರಂ, ಮಹಾಂತಃ = ಪಿರಿಯರಪ್ಪವರ್ಗಳ್‌, ಕಲುಷಮನೀಷಾಃ = ಕದಡಿದಮನಮನುಳ್ಳರ್‌, ಖಲು = ನಿಶ್ಚಯದಿಂ, ನಭವಂತಿ = ಅಗರ್‌ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ವಹ್ನೇಃಪ್ರಭಾವೋಯತ್ಪ್ರಕೃತ್ಯಾಶೀತಮಪಿಜಲಂಭವತ್ಯುಷ್ಣಂ|| ೬೩ || ೧೫೫೬ ||

ಅರ್ಥ : ಸಃ = ಅದು, ವಹ್ನೇಃ = ಕಿಚ್ಚಿನ, ಪ್ರಭಾವಃ = ಸಾಮರ್ಥ್ಯಂ, ಯತ್‌ = ಆವುದೊಂದು, ಪ್ರಕೃತ್ಯಾ = ಸ್ವಭಾವದಿಂ, ಶೀತಲಮಪಿ = ತಣ್ಣಿತಪ್ಪ, ಜಲಂ = ನೀರುಂ, ಉಷ್ಣಂ, ಭವತಿ = ಕೀರ್ತಿಯುಮನೊಲ್ವನಿಂತುಮಾಳ್ಕೆಂಬುದುತ್ತರವಾಕ್ಯಂ :

[13]ಅಚಿರಸ್ಥಾಯಿನಂಕಾರ್ಯಾರ್ಥಿಯಶೋರ್ಥೀವಾಸಾಧೂಪಚರೇತ್|| ೬೪ || ೧೫೫೭ ||

ಅರ್ಥ : ಕಾರ್ಯಾರ್ಥೀ = ಕಾರ್ಯಾರ್ಥಿಯುಂ, ಯಶೋರ್ಥೀವಾ = ಜಸದರ್ಥಿಗಂಮೇಣ್‌, ಅಚಿರಸ್ಥಾಯಿನಂ = ಪಲಕಾಲಮಿಱದನಂ[14], ಸಾಧು = ಲೇಸಾಗಿ, ಉಪಚರೇತ್‌ = ಪತ್ತುಗೆಯಂಮಾಳ್ಕೆ || ಪಲಕಾಲಮಿಲ್ಲದನಪತ್ತುಗೆಯಿಂದೇನುಮಾಗದೆಂಬುದುತಾತ್ಪರ್ಯಂ || ನಿಂದಿರ್ಪರೊಡನಿಂತುವರ್ತಿಸವೇಡೆಂಬುದುತ್ತರವಾಕ್ಯಂ :

—-

೬೧. ಪರಮಾಣುವುಸಣ್ಣದಾಗಿರುವುದರಿಂದಮಂದರಪರ್ವತವುದೊಡ್ಡದೆನಿಸುವುದಿಲ್ಲ. ಅದುಸಹಜವಾಗಿಯೇದೊಡ್ಡದಾಗಿರುವುದರಿಂದದೊಡ್ಡದು.

೬೨. ಮಹಾತ್ಮರುನಿಶ್ಚಯವಾಗಿಯೂಕಾರಣವಿಲ್ಲದೆಕುಲುಷಿತಗೊಂಡಮನಸುಳ್ಳವರಾಗುವುದಿಲ್ಲ.

೬೩. ಸ್ವಾಭಾವಿಕವಾಗಿತಣ್ಣಗಿರುವನೀರುಬಿಸಿಯಾಗುವುದುಬೆಂಕಿಯಪ್ರಭಾವದಿಂದಲೇ.

೬೪. ಕಾರ್ಯರ್ಥಿಯಾಗಲಿ, ಯಶೋರ್ಥಿಯಾಗಲಿಬಹುಕಾಲಪ್ರಭಾವಶಾಲಿಗಳಾಗಿರುವವರನ್ನುಚೆನ್ನಾಗಿಓಲೈಸಬೇಕು.

—-

 

[1]ವಿನಾಶಕಾಲೇವಿಪರೀತಬುದ್ಧಿಃಎಂಬಸುಭಾಷಿತವನ್ನುಗಮನಿಸಬೇಕು.

[2]ಬಸಿಱುಎಂದುಓದಬೇಕು.

[3]ಟೀಕಾಕಾರನುಔರಸಕ್ಷೇತ್ರಜಗೂಢೋತ್ಪನ್ನಎಂಬಪದಗಳಿಗೆಕೊಟ್ಟಅರ್ಥಗಳುವಿಚಾರಾರ್ಹವಾಗಿವೆ.

[4]ಮೈ. ದೇಶಕುಲಾಪತ್ಯಸ್ತ್ರೀಸಮಯಾಪೇಕ್ಷಃ.

[5]ಚೌ. ಕುಲಾಭ್ಯಾಂದೊಂದಿಗೆನಿಲ್ಲುತ್ತದೆ.

[6]ಅರಸನಸಂಪತ್ತನ್ನುವಿಭಾಗಮಾಡಿಹಂಚಲುಬರುವುದಿಲ್ಲವೆಂಬತತ್ವವುಗಮನಾರ್ಹವಾದುದು. ಅರ್ಥಶಾಸ್ತ್ರ, ಶುಕ್ರನೀತಿಗಳಅಭಿಪ್ರಾಯವೂಇದೇಆಗಿದೆ.

[7]ಮೈಮಂತ್ರಹೋಮಾಹಾರ.

[8]ಚೌ. ಈವಾಕ್ಯವುಎರಡಾಗಿವಿಭಜಿಸಲ್ಪಟ್ಟಿದೆ.

[9]ದಾಸಕರ್ಮಣಾಎಂಬಪದಕ್ಕೆಬಡತನದಿಂಎಂಬಅರ್ಥವುಸರಿಯಲ್ಲ. ಹಣವಿಲ್ಲದವನುಸೇವೆಮಾಡಿಋಣತೀರಿಸಬೇಕೆಂದುಈವಾಕ್ಯದಸಾರಾಂಶ.

[10]ಯಥಾಲಾಭಂಎಂದುಓದಬೇಕು.

[11]ಚೌ. ಈವಾಕ್ಯದನಿರೂಪಣೆಯಲ್ಲಿವ್ಯತ್ಯಾಸವಿದೆ, ಅರ್ಥವೊಂದೇ.

[12]ಮೈ. ಅನ್ಯಪರಮಾಣೂನಾಮಲ್ಪತ್ವೇನ.

[13]ಮೈ. ಚೌ. ಸುಚಿರಸ್ಥಾಯಿನಂ. ಈಪಾಠವೇಸರಿಯಾದುದು. ಈಅಪಪಾಠದಿಂದಾಗಿಟೀಕೆಯಲ್ಲಿಯೂತಪ್ಪಾಗಿದೆ. ತಾತ್ಪರ್ಯಹೇಳುವಲ್ಲಿಮಾತ್ರಸರಿಯಾಗಿಗ್ರಹಿಸಲಾಗಿದೆ.

[14]ಪಲಾಕಾರಮಿಱುವನಂಎಂದುಓದಬೇಕು.