ಪ್ರಕೀರ್ಣಕಮಂಪೇಳ್ವುದುತ್ತರವಾಕ್ಯಂ :

ಅಥಪ್ರಕೀರ್ಣಕಂ|| ೧ || ೧೪೯೪ ||

ಅರ್ಥ : ಅಥ = ಇಲ್ಲಿಂದಮೇಲೆ, ಪ್ರಕೀರ್ಣಕಂ = ಚೂಳಿಕೆಯಕ್ಕುಂ || ಅದರಲಕ್ಷಣಮಂಪೇಳ್ವುದುತ್ತರವಾಕ್ಯಂ :

ಸಮುದ್ರಇವಪ್ರಕೀರ್ಣಸೂಕ್ತಿರತ್ನವಿನ್ಯಾಸವಿನಿಬಂಧನಂಪ್ರಕೀಣ್ಣಕಂ|| ೨ || ೧೪೯೫ ||

ಅರ್ಥ : ಸಮುದ್ರೇ = ಸಮುದ್ರದಲ್ಲಿ, ಪ್ರಕೀರ್ಣಇವಸೂಕ್ತಿಃ = ಒಳ್ಳಿತಪ್ಪವಚನಂಗಳೆಂಬ, ರತ್ನವಿನ್ಯಾಸ = ರತ್ನಗಳಿರವಿಂಗೆ, ವಿನಿಬಂಧನಂ = ಕಾರಣಮಪ್ಪುದು, ಪ್ರಕೀರ್ಣಕಂ = ಪ್ರಕೀರ್ಣಕಮೆಂಬುದು || ಮುನ್ನಪೇಳದವಂಪೇಳ್ದರ್ಥಂಗಳಂವಿಶೇಷಿಸಿಪೇಳ್ವುದುವಿಪ್ರಕೀರ್ಣಕಮೆಂಬುದುತಾತ್ಪರ್ಯಂ || ಅಲ್ಲಿಸಂಧಿವಿಗ್ರಹಿಯಲಕ್ಷಣಮಂಪೇಳ್ವುದುತ್ತರವಾಕ್ಯಂ :

ವರ್ಣಪದವಾಕ್ಯಪ್ರಮಾಣ[1]ಪ್ರಯೋಗನಿಷ್ಣಾತಮತಿಃಸುಮುಖಃಸುವ್ಯಕ್ತಮಧುರಗಂಭೀರಧ್ವನಿಃಪ್ರಗಲ್ಭಪ್ರತಿಭಾವಾನ್ಸಮ್ಯಗೂಹಾಪೋಹಾವಧಾರಣಗಮಕಶಖ್ತಿಸಂಪನ್ನಃ[2]ಪ್ರಜ್ಞಾತೇಲಿಪಿಭಾಷಾವರ್ಣಾಶ್ರಮಸಮಯಸ್ವಪರವ್ಯವಹಾರಸ್ಥಿತಿರಾಶುಲೇಖನವಾಚನಸಮರ್ಥಶ್ಚೇತಿಸಂಧಿವಿಗ್ರಹಿಗುಣಾಃ|| ೩ || ೧೪೯೬ ||

ಅರ್ಥ : ವರ್ಣ = ಅಕ್ಷರಮುಂ, ಪದ = ಕೃತ್ಕಾರಕತದ್ಧಿತಪದಂಗಳುಂ, ವಿವಕ್ಷಿತಮರ್ಥಂಗಳಂಪೇಳ್ವುಪಪದಂಗಳು, ವಾಕ್ಯ = ಪದಸಮಾನಮಪ್ಪವಾಕ್ಯಮುಮೆಂಬಿವಂಪ್ರಯೋಗಿಸುವವ್ಯಾಕರಣಮುಂಪ್ರಮಾಣಪ್ರಯೋಗಃ = ಅನುಮಾನಾದಿಗಳಂಪ್ರಯೋಗಿಸುವತರ್ಕಮುಮೆಂಬಿವಱೊಳ್, ನಿಷ್ಣಾತಮತಿಃ = ಪ್ರೌಢಮಪ್ಪಮತಿಯನುಳ್ಳಮ, ಸುಮುಖಃ = ನಗೆಮೊಗಮನುಳ್ಳಂ, ಸುವ್ಯಕ್ತ = ಕರಮಱೆಯಲ್ಬರ್ಪ, ಮಧುರ = ಇತಿದಪ್ಪ, ಗಂಭೀರ = ಪಿರಿದಪ್ಪ, ಧ್ವನಿ = ಧ್ವನಿಯನುಳ್ಳಮ, ಪ್ರಗಲ್ಭ = ಪ್ರೌಢನಪ್ಪ, ಪ್ರತಿಭಾವಾನ್ = ಬೇಗಮುತ್ತರಂಗಾಳ್ಬನುಂ, ಸಮ್ಯಕ್ = ಲೇಸಾಗಿ, ಊಹಾ = ಊಹಿಸುವುದುಂ, ಅಪೋಹಾ = ಕಂಡಕಾರ್ಯದೊಳಾದದೋಷಮಂಪರಿಹರಿಸುವುದುಮೆಂಬ, ಶಕ್ತಿಸಂಪನ್ನಃ = ಶಕ್ತಿಯೊಳ್ಕೂಡಿದಂ, ಪ್ರಜ್ಞಾತ = ಅಱಿಯಲ್ಪಟ್ಟ, ಸಮಸ್ತ = ಎಲ್ಲಾ, ಲಿಪಿ = ಕರ್ನಾಟನಾಗರದ್ರಾವಿಡಾದಿಲಿಪಿಗಳುಂ, ಭಾಷಾ, ಪಲವುಭಾಷೆಗಳುಂ, ವರ್ಣಾಶ್ರಮ = ವರ್ಣಾಶ್ರಮ, ಸಮಯ = ಸಮಯಂಗಳುಮೆಂಬಿವಱ, ಸಮಯ = ಆಗಮಂಗಳ, ಸ್ವ = ತನ್ನ, ಪರ = ಪೆಱರ, ವ್ಯವಹಾರಸ್ಥಿತಿ = ವರ್ತನೆಯಮೆಂಬಿವಱ, ಸ್ವರೂಪಮನುಳ್ಳಂ, ಆಶು = ಬೇಗಂ, ಲೇಖನ = ಲೇಖನಮಂಬರೆವುದುಂ, ವಾಚನ = ಬಾಚಿಸುವುದುಮೆಂಬಿವಱೊಳ್, ಸಮರ್ಥಶ್ಚೇತಿ = ದಕ್ಷನೆಂದಿಂತು, ಸಂಧಿವಿಗ್ರಹಿಗುಣಾಃ = ಸಂಧಿವಿಗ್ರಹಿಯಗುಣಂಗಳ್ || ಈಗುಣಂಗಳಿಲ್ಲದಂಸಂಧಿವಿಗ್ರಹಿಯಲ್ಲೆಂಬುದುತಾತ್ಪರ್ಯಂ || ತನಗನುಕೂಲನಲ್ಲದನಚಿಹ್ನಮಂಪೇಳ್ವುದುತ್ತರವಾಕ್ಯಂ :

—-

. ಇಲ್ಲಿಂದಮುಂದೆಪ್ರಕೀರ್ಣಕವುಆರಂಭವಾಗುತ್ತದೆ.

. ಸಮುದ್ರದಲ್ಲಿರತ್ನಗಳಿರುವಂತೆಒಳ್ಳೆಯವಚನರತ್ನಗಳಿಂದತುಂಬಿರುವಸಮುದ್ದೇಶವುಪ್ರಕೀರ್ಣಕಸಮುದ್ದೇಶ.

. ವರ್ಣ, ಪದ, ವಾಕ್ಯಗಳಪ್ರಯೋಗಕ್ಕೆಸಂಬಂಧಿಸಿದ (ವ್ಯಾಕರಣ) ಶಾಸ್ತ್ರ, ಅನುಮಾನಾದಿಪ್ರಮಾಣಗಳಪ್ರಯೋಗಕ್ಕೆಸಂಬಂಧಿಸಿದತರ್ಕಶಾಸ್ತ್ರ, ಇವುಗಳಲ್ಲಿಪರಿಣಿತಿನಗುಮುಖ, ಸ್ಪಷ್ಟವಾದಮಧುರ, ಗಂಭೀರಧ್ವನಿ, ಪ್ರೌಢಿಮೆ, ಪ್ರತಿಭೆ, ಊಹಾಪೋಹ, ಸರಿಯಾಗಿಗ್ರಹಿಸುವುದು, ಗಮಕಶಕ್ತಿಸಂಪನ್ನತೆ, ಹಲವುಲಿಪಿಗಳು, ಭಾಷೆಗಳು, ವರ್ಣಾಶ್ರಮಧರ್ಮಗಳು, ಮತಧರ್ಮಗಳು, ವ್ಯವಹಾರಸ್ಥಿತಿಗತಿಗಳುನಡವಳಿಕೆಗಳುಇವುಗಳಸ್ವರೂಪಗಳಅರಿವು, ಅಶುಲೇಖನ, ವಚನಸಾಮರ್ಥ್ಯ, ಇವುಸಂಧಿವಿಗ್ರಹಿಯಗುಣಗಳು.

—-

ಕಥಾವಿಚ್ಛೋದೋವ್ಯಾಕುಲತ್ವಂಮುಖವೈರಸ್ಯಮನವೇಕ್ಷಣಂಸ್ಥಾನತ್ಯಾಗಃಸಾಧ್ವಾಚರಿತೇsಪಿದೋಷೋದ್ಭಾವನಂವಿಜ್ಞಪ್ತೇಮೌನಮಕ್ಷಮಾಕಾಲಯಾಪನಮಾಶಾದರ್ಶನಂ[3]ವೃಥಾಭ್ಯುಪಗಮಶ್ಚೇತಿವಿರಕ್ತಲಿಂಗಾನಿ|| ೪ || ೧೪೯೭ ||

ಅರ್ಥ : ಕಥಾವಿಚ್ಛೆದಃ = ಮಾತಿನೆಡೆವಱಹಮುಂ, ವ್ಯಾಕುಲತ್ವ = ವ್ಯಗ್ರತೆಯುಂಮುಖವೈರಸ್ಯಂ = ಮೊಗಮಂಪೊಲ್ಲದುಮಾಳ್ಪುದುಂ, ಅನವೇಕ್ಷಣಂ = ನೋಡದುದುಂ, ಸ್ಥಾನತ್ಯಾಗಃ = ಇರ್ದೆಡೆಯಿಂಪೋಪುದುಂ, ಸಾಧು = ಲೇಸಾಗಿ, ಆಚರಿತೇಪಿ = ನೆಗಳ್ದೊಡಂ (ಮಾಡಿದವನಲ್ಲಿ) ದೋಷೋದ್ಭಾವನಂ = ದೋಷಮನೇಱಿಸುವುದುಂ, ವಿಜ್ಞಪ್ತೇಚ = ಬಿನ್ನವಿಸಿದಲ್ಲಿಯುಂ, ಮೌನಂ = ಉಸಿರದಿರ್ಪುವಂ, ಅಕ್ಷಮಾ = ಸೈರಿಸದುದುಂ, ಕಾಲಯಾಪನಂ = ದಿವಸಂಗಳಿಪುವುದುಂ, ಆಶಾದರ್ಶನಂ = ಆಶೆದೋರ್ಪುದುಂ, ವೃಥಾಭ್ಯುಪಗಮಶ್ಚೇತಿ = ಬಱಿದೊಡಂಬಡುವುದುಮೆಂಬಿವು, ವಿರಕ್ತಲಿಂಗಾನಿ = ತನ್ನೊಳುರಾಗಮಿಲ್ಲದಱಸಿನ, ಲಿಂಗಾನಿ = ಚಿಹ್ನಂಗಳ್ || ಈದೋಷಂಗಳಿಲ್ಲದನುರಕ್ತನೆಂಬುದುತಾತ್ಪರ್ಯಂ || ತನಗನುಕೂಲದನಚಿಹ್ನಮಂಪೇಳ್ವುದುತ್ತರವಾಕ್ಯಂ :

—-

. ತಡೆದುತಡೆದುಮಾತಾಡುವುದು, ಕಳವಳಗೊಳ್ಳುವುದು, ಮುಖದವಿಕಾರಮಾಡಿಕೊಳ್ಳುವುದುದೃಷ್ಟಿಸದಿರುವುದು, ಇದ್ದಸ್ಥಾನವನ್ನುಬಿಡುವುದು, ಸರಿಯಾದಆಚರಣೆಯಲ್ಲಿಯೂದೋಷವನ್ನುಕಾಣುವುದು, ಹೇಳುತ್ತಿದ್ದರೂಕೇಳಿಸಿಕೊಳ್ಳದೆಮೌನದಿಂದಿರುವುದುಸೈರಣೆಯಿಲ್ಲದಿರುವುದು, ಹೊತ್ತುಕಳೆಯುವುದು, ಆಶೆತೋರಿಸುವುದು, ಸುಮ್ಮನೆಒಪ್ಪಿದಂತಿರುವುದುಇವುವಿಷಯದಲ್ಲಿಆಸ್ಥೆಯಿಲ್ಲದವನಚಿನ್ಹೆಗಳು.

—-

ದೂರಾದವೇಕ್ಷಣಂಮುಖಪ್ರಸಾದಃಸಂಪ್ರಶ್ನೇಷ್ವಾದರಃಪ್ರಿಯೇಷುವಸ್ತುಷುಸ್ಮರಣಂಪರೋಕ್ಷೇಗುಣಗ್ರಹಣಂತತ್ಪರಿವಾರಸ್ಯಸದಾನುನಯವೃತ್ತಿರಿತ್ಯನುರಕ್ತಲಿಂಗಾನಿ|| ೫ || ೧೪೯೮ ||

ಅರ್ಥ : ದೂರಾದವೇಕ್ಷಣಂ = ದೂರದಿಂನೋಲ್ಪುದುಂ, ಮುಖಪ್ರಸಾದಃ = ಮುಖಪ್ರಸನ್ನತೆಯುಂ, ಸಂಪ್ರಶ್ನೇಷು = ತಾಂಬೆಸಗೊಳ್ವಲ್ಲಿ (ಬಿನ್ನವಿಸಿದಲ್ಲಿ) ಅದರಃ = ಅರ್ಥಿಯುಂ, ಪ್ರಿಯೇಷು = ಪಿಯಂಗಳಪ್ಪ, ವಸ್ತುಗಳೊಳ್, ಬಂದಕೆ, ಸ್ಮರಣಂ = ತನ್ನಪ್ರಿಯರನೆನೆವುದುಂ, ಪರೋಕ್ಷೇ = ಹಿಂಬಳಿಯೊಳ್, ಗುಣಗ್ರಹಣಂ = ಗುಣಂಗೊಳ್ಪುದುಂ (ಸ್ವೀಕರಿಸುಹ), ತತ್ವರಿವಾರಸ್ಯ = ಅವರಪರಿಗ್ರಹವನ್ನು, ಸದಾನುನಯವೃತ್ತಿರಿತಿ = ಎಲ್ಲಾಕಾಲಂಕಾರುಣ್ಯದನೆಗಳ್ತೆ (ಲೇಸಾಗಿಕೊಂಡಾಡುಹಮೆಂಬಿವು) ಯೆಂದಿತು, ಅನುರಕ್ತಲಿಂಗಾನಿ = ತನಗೊಳ್ಳಿದನಪ್ಪನಚಿಹ್ನೆಗಳು || ಈಗುಣಮಿಲ್ಲದವನನುರಕ್ತನಲ್ಲೆಂಬುದುತಾತ್ಪರ್ಯಂ || ಸತ್ಕಾವ್ಯಲಕ್ಷಮಂಪೇಳ್ವುದುತ್ತರವಾಕ್ಯಂ :

ಶ್ರುತಿಸುಖತ್ವಮಪೂರ್ವಾವಿರುದ್ಧಾರ್ಥಾತಿಶಯಯುಕ್ತತ್ವಮುಭಯಾಲಂಕಾರಸಂಪನ್ನತ್ವಮನ್ಯೂನಾಧಿಕವಚನತ್ವಮತಿ[4]ವ್ಯಕ್ತಾನ್ವಯತ್ವಮಿತಿಕಾವ್ಯಸ್ಯಗುಣಾಃ|| ೬|| ೧೪೯೯ ||

ಅರ್ಥ : ಶ್ರುತಿಸುಖತ್ವಂ = ಕಿವಿಗಿನಿದಪ್ಪುದುಂ, ಅಪೂರ್ವ = ಹೊಸತಾಗಿ, ಅವಿರುದ್ಧ = ದೇಶಕಾಲಾಗಮಾದಿವಿರುದ್ಧಮಿಲ್ಲದುದು, ಅತಿಶಯ = ಬೇಳ್ವರ್ಥದೊಳಂ, ಯುಕ್ತತ್ವಂ = ಕೂಡಿದಸ್ವರೂಪಮನುಳ್ಳಂ, ಉಭಯಾಲಂಕಾರಸಂಪನ್ನತ್ವಂ = ಶಬ್ದಾರ್ಥಾಲಂಕಾರದನೆರವಿಯುಂ, ಅನ್ಯೂನಾಧಿಕವಚನತ್ವಂ = ಅರ್ಥದಿಂಕುಂದದದಿಕಮಲ್ಲದಶಬ್ಧಮನುಳ್ಳುದುಂ, ಅತಿವ್ಯಕ್ತಾನ್ವಯತ್ವಮಿತಿ = ಕರಮಱಿಯಲ್ಬರ್ಪಸಂಬಂಧಮನುಳ್ಳುದುಮೆಂದಿಂತು, ಕಾವ್ಯಸ್ಯಗುಣಾಃಕಾವ್ಯದಗುಣಂಗಳು || ಇನಿತುಗುಣಮಿಲ್ಲದುದುಕಾವ್ಯಮಲ್ಲೆಂಬುದುತಾತ್ಪರ್ಯಂ || ಕಾವ್ಯದದೋಷಮಂಪೇಳ್ವುದುತ್ತರವಾಕ್ಯಂ :

—-

. ದೂರದಿಂದಲೇನೋಡುವುದು, ಮುಖದಲ್ಲಿಪ್ರಸನ್ನತೆ, ಬಿನ್ನವಿಸಿಕೊಳ್ಳುವುದನ್ನುಕೇಳುವಲ್ಲಿಆದರ, ಪ್ರಿಯವಾದವಸ್ತುಗಳನ್ನೂಪ್ರಿಯರನ್ನೂನೆನೆಸಿಕೊಳ್ಳುವುದು, ಹಿಂದುಗಡೆಯಲ್ಲಿಗುಣಗ್ರಹಣ, ಅವರಪರಿವಾರದವರನ್ನುಎಲ್ಲಕಾಲದಲ್ಲಿಯೂಲೇಸಾಗಿಕೊಂಡಾಡುವುದುಇವುಗಳಅನುರಾಗವುಳ್ಳವನಚಿನ್ಹೆಗಳು.

. ಕೇಳುವುದಕ್ಕೆಇಂಪಾಗಿರುವುದು, ನೂತನವಾದುದು, ದೇಶ, ಕಾಲ, ಶಾಸ್ತ್ರಾದಿಗಳಿಗೆವಿರುದ್ಧವಲ್ಲದಿರುವುದು, ಅತಿಶಯವಾದಅರ್ಥದಿಂದಕೂಡಿದುದು, ಶಬ್ದಾಲಂಕಾರ, ಅರ್ಥಾಲಂಕಾರಗಳಿಂದಸಂಪನ್ನವಾದದ್ದು, ನ್ಯೂನವೂಅಧಿಕವೂಅಲ್ಲದಮಾತುಗಳಳ್ಳದ್ದು, ಅತಿಸ್ಪಷ್ಟವುಅನ್ವಯದಿಂದಕೂಡಿದುದುಇವುಕಾವ್ಯಗುಣಗಳು.

—-

ಅತಿಪರುಷವರ್ಣವಿನ್ಯಾಸತ್ವಂಅನನ್ವಿತಗತಾರ್ಥದುರ್ಬೋಧಾನುಪಪನ್ನಪದೋಪನ್ಯಾಸತ್ವಮಯಥಾರ್ಥಯತಿನ್ಯಾಸತ್ವಮಭಿಧಾನಾಭಿದೇಯಾತಿಶಯಶೂನ್ಯತ್ವಮಿತಿಕಾವ್ಯಸ್ಯದೋಷಾಃ|| ೭ || ೧೫೦೦ ||

ಅರ್ಥ : ಅತಿಪುರುಷವರ್ಣವಿನ್ಯಾಸತ್ವಂ = ಕರಂಬೆಟ್ಟಿತಪ್ಪಕ್ಕರಂಗಳರಚನೆಯನುಳ್ಳುದ್ದು, ಅನನ್ವಿತ = ನಿಸ್ಸಂಬಂಧಮಪ್ಪ, ಗತಾರ್ಥ = ಗಥಾರ್ಥಮನುಳ್ಳ (ಪುನರುಕ್ತವಹ) ಮುನ್ನಪ್ರಸಿದ್ಧಮಪ್ಪರ್ಥಮನುಳ್ಳಮೇಣ್, ದುರ್ಬೋಧ = ಕ್ಲೇಶದಿಂದಱಿವ (ಅಱಿಯಬಾಱದ) ಆನುಪಪನ್ನಪದ = ಇಲ್ಲದಪದಮೆಂಬಿವ (ಪ್ರಸಿದ್ದವಲ್ಲದಪದಂಗಳನೀಡುಹ) ನ್ಯಾಸತ್ವಂ = ಪ್ರಯೋಗಿಸುವುದುಂ, ಅಯಥಾರ್ಥಯತಿನ್ಯಾಸತ್ವಂ = ವಿಶ್ರಾಮಸ್ಥಾನಮಲ್ಲದಲ್ಲಿ (ಯಥಾರ್ಥಮಲ್ಲದಯತಿಭಂಗಮನುಳ್ಳ) ವಿರಾಮಂಮಾಳ್ಪುದುಂ, ಅಭಿಧಾನ = ಶಬ್ದಮುಂ, ಅಭಿಧೇಯಾಃ = ಅರ್ಥಮುಮೆಂಬಿವಱ, ಅತಿಶಯಶೂನ್ಯತ್ವಮಿತಿ = ಒಪ್ಪದಿಲ್ಲಮೆಯುಮೆಂದಿಂತು, ಕಾವ್ಯಸ್ಯದೋಷಾಃ = ಕಾವ್ಯದದೋಷಂಗಳ್ || ಕಾವ್ಯದದೋಷಮಾಗಲಾಗದೆಂಬುದುತಾತ್ಪರ್ಯಂ || ಕವಿಗಳಭೇದಮಂಪೇಳ್ವುದುತ್ತರವಾಕ್ಯಂ :

ವಚ[5]ಕವಿರರ್ಥಕವಿರುಭಯಕವಿಶ್ಚಿತ್ರಕವಿದುಷ್ಕರಕವಿವರ್ಣಕಕವಿ[6]ರರೋಚಕೀಸತುಷಾಭ್ಯವಹಾರೀ[7]ಚೇತ್ಯಷ್ಟೌಕವಯಃ|| ೮ || ೧೫೦೧ ||

ಅರ್ಥ : ವಚನಕವಿಃ = ಪದರಚನೆಯನೆಲೆಮಾಳ್ಪುನುಂ, ಅರ್ಥಕವಿಃ = ಅರ್ಥರಚನೆಯನೆಲೆಮಾಳ್ಪನುಂ, ಉಭಯಕವಿಃ = ಶಬ್ದಾರ್ಥವಿಷಯಂಗಳಂಮಾಳ್ಪನುಂ, ಚಿತ್ರಕವಿಃ = ಗತಪ್ರತ್ಯಾಗತಾದಿಸಂಧಾನಮುರಜಬಂಧದಿಗಳಂಮಾಳ್ಪಬಿನ್ನಣಕವಿಯುಂ, ದುಷ್ಕರಕವಿಃ = ಶಬ್ದಾರ್ಥಂಗಳಂಕ್ಲೇಶದಿಂದಱಿವಂತುರಚಿಪನುಂ, ವರ್ಣಕಕವಿಃ = ಷಡ್ಜಾತಿಸ್ವರಂಗಳವರ್ಣನಮಂರಚಿಯಿಸುವವಾಗ್ಮಿಕಾರನುಂ, ಅರೋಚಕೀ = ಕಾವ್ಯಮಂಮಾಡಿಮೆಚ್ಚದೆಲೇಸಾಗಿಮಾಳ್ಪನುಂಸತುಷಾಭ್ಯವಹಾರೀಚೇತಿ = ತವುಡುಬೆರಸುಂಬನಂತೊಳ್ಳಿತುಂಪೊಲ್ಲದುಮಂಪೇಳ್ವನುಮೆಂದಿತುಂ, ಅಷ್ಟೌಕವಯಃ = ಕವಿಗಳ್ಎಂಟುತೆರಂ || ಕವಿಗಳನಾದರಿಸಿದಫಲಮಂಪೇಳ್ವುದುತ್ತರವಾಕ್ಯಂ :

—-

. ತುಂಬಕರ್ಕಶವಾದವರ್ಣವಿನ್ಯಾಸ, ಅಸಂಬದ್ಧವೂ, ಪ್ರಕೃತದಲ್ಲಿಅರ್ಥವಿಲ್ಲದವೂ, ಸುಲಭವಾಗಿತಿಳಿಯದವೂ, ರೂಪಸರಿಯಾಗಿಲ್ಲದವೂಆದಪದಗಳಬಳಕೆ, ಪದ್ಯದಲ್ಲಿಅರ್ಥವತ್ತಾದವಿರಾಮಸ್ಥಾನವಿಲ್ಲದಿರುವುದು, ಶಬ್ದಾರ್ಥಗಳಸಮನ್ವಯವಿಲ್ಲದಿರುವುದುಇವುಕಾವ್ಯದದೋಷಗಳು.

. ಮಾತುಗಳನ್ನುಅಂದವಾಗಿಜೋಡಿಸುವುದರತ್ತಗಮನವಿರುವುದುವಚಕವಿ, ಅರ್ಥದಕಡೆಗೆಮಾತ್ರಗಮನವಿಡುವವನುಅರ್ಥಕವಿ, ಶಬ್ದಾರ್ಥಗಳೆರಡನ್ನೂಸಮಾನವಾಗಿಜೋಡಿಸುವವನುಉಭಯಕವಿ, ಶಬ್ಆರ್ಥಗಳುಸ್ಪಷ್ಟವಿಲ್ಲದವನುದುಷ್ಕರಕವಿ, ವರ್ಣನೆಗಳೇಪ್ರಧಾನವಾಗುಳ್ಳವನುವರ್ಣಕವಿ, ರುಚಿಹುಟ್ಟಿಸದಅಥವಾರುಚಿಸದಂತೆಬರೆಯುವವನುಆರೋಚಕಕವಿ, ಹೊಟ್ಟುಕಾಳುಎರಡನ್ನೂಒಂದಾಗಿಭಾವಿಸುವಮೆರಗಿಲ್ಲದರಚನೆಗಳನ್ನುಮಾಡುವವನುಸತುಷಾಭ್ಯವಹಾರೀಆದಕವಿ, ಹೀಗೆಕವಿಗಳಲ್ಲಿಎಂಟುಬಗೆ.

—-

ಮನಃಪ್ರಸಾದಃಕಲಾಸುಕೌಶಲಂಸುಖೇನಚತುರ್ವರ್ಗವಿಷಯವ್ಯುತ್ಪತ್ತಿರಾಸಂಸಾರಂಯಶ[8]ಇತಿಕವಿಸಂಗ್ರಹಸ್ಯಗುಣ್ಯಾಃ[9]|| ೯ || ೧೫೦೨ ||

ಅರ್ಥ : ಮನಃಪ್ರಸಾದಃ = ಮನದಬಿಚ್ಚತಿಕೆಯುಂ, ಕಲಾಸುಂಕೌಶಲಂ = ಕಲೆಗಳೊಳ್ಪ್ರೌಢಿಯುಂ, ಸುಖೇನ = ಕ್ಲೇಶಮಿಲ್ಲದೆ, ಚತುರ್ವರ್ಗವಿಷಯ, ವ್ಯುತ್ಪತ್ತಿಃ = ಚತುರ್ವಿಧಪುರುಷಾರ್ಥದಱಿತಮುಂ, (ಧರ್ಮಾರ್ಥಕಾಮಮೋಕ್ಷಂಗಳವಿಷಯವಹವ್ಯುತ್ಪತ್ತಿ), ಆಸಂಸಾರಂ = ಈಸಂಸಾರಮುಳ್ಳನ್ನೆವರಂ, ಯಶಇತಿ = ಖ್ಯಾತಿಯುಮೆಂದಿಂತು, ಕವಿಸಂಗ್ರಹಸ್ಯಗುಣಾಃ = ಕವಿಗಳಂಕೈಕೊಳ್ವುದಱಗುಣಂಗಳ್ || ಕವಿಗಳಿಲ್ಲದೊಡೆಗುಣಂಗಳಾಗವೆಂಬುದುತಾತ್ಪರ್ಯಂ || ಗೀತದಗುಣಮಂಪೇಳ್ವುದುತ್ತರವಾಕ್ಯಂ

ಆಳಾಪ್ತಿಶುದ್ಧಿರ್ಮಾಧುರ್ಯಾತಿಶಯಃಪ್ರಯೋಗಸೌಂದರ್ಯಮತೀವಮಸೃಣತಾಸ್ಥಾನೇಕಂಪಿತಕುಹರಿತಾದಿಭಾವೋರಾಗಾಂತರಸಂಕ್ರಾಂತಿಃಪರಿಗೃಹೀತರಾಗನಿರ್ವಾಹೋಹೃದಯಗ್ರಾಹಿತಾ[10]ಚೇತಿಗೀತಸ್ಯಗುಣಾಃ|| ೧೦ || ೧೫೦೩ ||

ಅರ್ಥ : ಆಳಾಪ್ತಿಶುದ್ಧಿಃ = ಆಣತಿಯೊಳ್ಸಾನಖ್ಯಾತಾದಿದೋಷಮಿಲ್ಲದುದು (ಆಲಾಪಶುದ್ದಿ) ಮಾಧುರ್ಯಾತಿಶಯಃ = ಇಂಪಿನಪೊಂಪುಳಿಯುಂ, ಪ್ರಯೋಗಸೌಂದರ್ಯಂ = ಪ್ರಯೋಗದೊಳೊಪ್ಪಮುಂ, ಅತೀವಮಸೃಣತಾ = ಅತಿಕೋಮಲತೆಕರಂನುಂಹವಡೆದೆಡೆದುದು, ಸ್ಥಾನೇ = ಸ್ಥಾನವಱಿತು, ಕಂಪಿತಃ = ತಿರಿಪು, ಕುಹರಿಕಾದಿ = ವಹಣಿಮೊದಲಾಗಗೊಡೆಯವರ, ಭಾವಃ = ಸ್ವರೂಪಮುಂ, ರಾಗಾಂತರಸಂಕ್ರಾತಿಃ = ಮತ್ತೊಂದುರಾಗದಂತರಮಂತೋರ್ಪುದುಂಪರಿಗೃಹೀತರಾಗನಿರ್ವಾಹಃ = ಕೈಕೊಂಡರಾಗಮುಂತ್ರಿಸ್ಥಾನಶುದ್ಧಿಯಿಂನೆಱೆಮಾಳ್ಪುದುಂ (ನಿರ್ವಹಿಸುವ), ಹೃದಯಗ್ರಾಹಿತಾಚೇತಿ = ಸದುಹೃದಯರಮನಂಗೊಳ್ವುದು (ಮನೋರಂಜಕಮೆಂಬಿವು)ಮೆಂದಿಂತು, ಗೀತಸ್ಯಗುಣಾಃ = ಗೀತದಗುಣಂಗಳ್ || ಈಗುಣಮಿಲ್ಲದುದುಗೀತಾಭಾಸಮೆಂಬುದುತಾತ್ಪರ್ಯಂ || ವಾದ್ಯದಗುಣಮಂಪೇಳ್ವುದುತ್ತರವಾಕ್ಯಂ :

—-

. ಮನಸ್ಸಿನಸಂತೋಷ, ಕಲೆಗಳಲ್ಲಿಕುಶಲತೆ, ಸುಲಭವಾಗಿಧರ್ಮ, ಅರ್ಥ, ಕಾಮ, ಮೋಕ್ಷಗಳಅರಿವು, ವಿಶ್ವವ್ಯಾಪ್ತಿಯಾದಯಶಸ್ಸು, ಇವುಕವಿಗಳನ್ನುಹೊಂದಿರುವುದರಪ್ರಯೋಜನ.

೧೦. ಆಲಾಪನೆಯಶುದ್ಧಿ, ಅತಿಶಯವಾದಮಾಧುರ್ಯ, ಪ್ರಯೋಗದಸೌಂದರ್ಯ, ಅತೀವಕೋಮಲತೆ, ಸ್ಥಾನವರಿತಕಂಪಿತ, ಕುಹರಿತಾದಿಭಾವಗಳು (ನಡೆ, ಗತಿ, ತಿರುವುಗಳವೈಖರಿಗಳು) ರಾಗಾಂತರಗಳಸೇರಿಕೆ, ಕೈಕೊಂಡುರಾಗವನ್ನುತ್ರಿಸ್ಥಾನಶುದ್ಧಿಯಿಂದನಿರ್ವಹಿಸುವುದು, ಸಹೃದಯರಮನೋರಂಜನೆಇವುಗೀತದಗುಣಗಳು.

—-

ಸಮತ್ವಂತಾಳಾನ್ವಯತ್ವಂಗೇಯಾಭಿಗೇಯಾನುಗತತ್ವಂಶ್ಲಕ್ಷ್ಣತ್ವಂಪ್ರವ್ಯಕ್ತಯತಿಪ್ರಯೋಗತ್ವಂಶ್ರುತಿಸುಖಾವಹತ್ವಂಚೇತಿವಾದ್ಯಸ್ಯಗುಣಾಃ|| ೧೧ || ೧೫೦೪ ||

ಅರ್ಥ : ಸಮತ್ವಂ = ತಾಳದಕಳೆಗಳ್ಸಮಾನಮಪ್ಪಸ್ವರೂಪಮುಂ, ತಾಳಾನ್ವಯತ್ವಂ = ತಾಳದಪಾತಣಕ್ಕನುಸಾರಿಯಾಗಿ (ಎತ್ತಿದತಾಳದಅನುವರ್ತನ) ನಡೆವುದುಂ, ಗೇಯಾಭಿನಯಾನುಗತತ್ವಂ = ಗೀತದನೃತ್ಯದನುಸಾರಿಯೋಗಮಂಕಿಡಲೀಯದೆಬಾಜಿಪುದುಂ, ಶ್ಲಕ್ಷ್ಣತ್ವಂ = ಇಂಪು, ಪ್ರವ್ಯಕ್ತಯತಿಪ್ರಯೋಗತ್ವಂ = ದಿಟಪುಟವಪ್ಪ (ವ್ಯಕ್ತವಹಕಾಳಾಸಮನುಳ್ಳದು), ಜಾತಿಯುಂಬಾಜಿಪುದುಂ, ಶ್ರುತಿಸುಖಾವಹತ್ವಂಚೇತಿ = ಕಿವಿಗೆಸುಖಮಂಮಾಳ್ಪಮೆಯುಮೆಂದಿಂತು, ವಾದ್ಯಸ್ಯಗುಣಾಃ = ವಾದ್ಯದಗುಣಂಗಳ್ || ಈಗುಣಂಗಳಿಲ್ಲದುದುವಾದ್ಯಾಭಾಸಮೆಂಬುದುತಾತ್ಪರ್ಯಂ || ನೃತ್ಯದಗುಣಮಂಪೇಳ್ವುದುತ್ತರವಾಕ್ಯಂ :

ದೃಷ್ಟಿಹಸ್ತಪಾದಕ್ರಿಯಾಸುಸಮಸಮಾಯೋಗಃಸಂಗೀತಕಾನುಗತತ್ವಂಸುಶ್ಲಿಷ್ಟಲಲಿತಾಭಿನಯಾಂಗಹಾರಪ್ರಯೋಗಭಾವೋರಸಭಾವವೃತ್ತಿಲಾವಣ್ಯಮಿತಿನೃತ್ಯಸ್ಯಗುಣಾಃ|| ೧೨ || ೧೫೦೫ ||

ಅರ್ಥ : ದೃಷ್ಟಿ = ಕಾಂತಾದಿಷಟ್ತ್ರಿಂಶದ್ದೃಷ್ಟಿಗಳುಂ, ಹಸ್ತ = ಪತಾಕಾದಿಚತುಃಷಷ್ಟಿಹಸ್ತಂಗಳುಂ, ಪಾದ = ಸಮಪಾದಾದಿದ್ವಾತ್ರಿಂಶಚ್ಚತ್ವಾರಿಪದಂಗಳುಂ, ಕ್ರಿಯಾಸು = ಅಭಿನಯಂಗಳೊಳ್, ಸಮಸಮಾಯೋಗಃ = ಇದಕ್ಕಿದುಚಿತಮೆಂದುಅನುಸಾರಿಯಾಗಿಕೂಡಿಬರ್ಪುದುಂ, ಸಂಗೀತಕಾನುಗತತ್ವಂ = ಗೀತವಾದ್ಯಂಗಳನುಸಾರಿಯಪ್ಪುದುಂ, ಸುಶ್ಲಿಷ್ಟ = ಅಮರ್ಕ್ಕೆವಡೆದ (ಲೇಸಾಗಿಕೂಡಿದಂತಹ), ಲಲಿತ = ಕೋಮಳಿತೆವೆರಸಿದ, ಅಭಿನಯ = ಅನುಕರಣಮನುಳ್ಳ, ಅಂಗಹಾರ = ಸ್ಥಿರಹಸ್ತಾದಿತ್ರಯಸ್ತ್ರಿಂಶದಂಗಹಾರಂಗಳನುಳ್ಳ, ಪ್ರಯೋಗಭಾವಃ = ಯೋಜಿಸುವಸ್ವರೂಪಮುಂ, ರಸಭಾವವೃತ್ತಿಃ = ಸ್ವಾತ್ವಿಕಸ್ಥಾಯಿಸಂಚಾರಿರಸಭಾವಂಗಳೊಳ್ವರ್ತಿಸುವುದುಂ, ಲಾವಣ್ಯಮಿತಿ = ಸ್ವಭಾವದಿಂದಪ್ಪವೊಪ್ಪಮುಮೆಂದಿಂತು, ನೃತ್ಯಸ್ಯಗುಣಾಃ = ನೃತ್ಯದಗುಣಂಗಳ್ || ಈಗುಣಂಗಳಿಲ್ಲದುದುನೃತ್ಯಾಭಾಸಮೆಂಬುದುತಾತ್ಪರ್ಯಂ || ಇಂತಪ್ಪಂಪಿರಿಯನೆಂಬುದುತ್ತರವಾಕ್ಯಂ :

—-

೧೧. ತಾಳದಸಮವಾದನಡೆ, ತಾಳದಅನುಸರಣೆ, ಸಂಗೀತಅಭಿನಯಗಳೊಂದಿಗಿನಹೊಂದಾಣಿಕೆಕೋಮಲತೆ, ಸುವ್ಯಕ್ತವಾದನಿಲುಗಡೆಯುಳ್ಳಪ್ರಯೋಗ, ಕೇಳುವುದಕ್ಕೆಹಿತವಾಗಿರುವುದು, ಇವುವಾದ್ಯದಗುಣಗಳು.

೧೨. ದೃಷ್ಟಿ (ಕಾಂತಾದಿಮೂವತ್ತಾರುದೃಷ್ಟಿಗಳು) ಹಸ್ತ (ಪತಕಾದಿನಲ್ವತ್ತಾರುಹಸ್ತಗಳು), ಪಾದ (ಮೂವತ್ತೆರಡುಪಾದಗಳು) ಇವುಗಳಸೇರಿದಅಭಿನಯಗಳಲ್ಲಿಒಂದನ್ನೊಂದುಅನುಸರಿಸಿಬರುತ್ತಗೀತವಾದ್ಯಗಳನ್ನುಅನುಸರಿಸಿಕೊಂಡಿರುವುದು, ಹೊಂದಿಕೆಯಾದಲಲಿತಾಭಿನಯರೂಪವಾದಅವಯವಗಳಸ್ಥಿರಹಸ್ತಾದಿಮೂವತ್ತುಮೂರುಅಂಗಹಾರಗಳನುಳ್ಳಪ್ರಯೋಗ, ಸಾತ್ವಿಕ, ಸ್ಥಾಯೀಭಾವ, ಸಂಚಾರಿಭಾವಗಳಿಂದರಸಭಾವವೃತ್ತಿಯೂ, ಸ್ವಾಭಾವಿಕವಾಗಿಲಾವಣ್ಯವಿರುವುದೂನೃತ್ಯದಗುಣಗಳು.

—-

ಮಹಾನ್ಯಃಖಲ್ವಾತೋsಪಿದುರ್ವಚನಂಬ್ರೂತೇ|| ೧೩|| ೧೫೦೬ ||

ಅರ್ಥ : ಯಃ = ಅರ್ವನೋರ್ವಂ, ಆರ್ತೋಪಿ = ಕ್ಲೇಶಂಬಟ್ಟನಾಗಿಯುಂ, ದುರ್ವಚನಂ = ಪೊಲ್ಲನುಡಿಯಂ, ನಬ್ರೂತೇ = ನುಡಿವವನಲ್ಲಂ, ಸಃ = ಆತಂ, ಮಹಾನ್ = ಪಿರಿಯಂ || ನೊಂದುಸೈರಿಸುವವನೇಪಿರಿಯನೆಂಬುದುತಾತ್ಪರ್ಯಂ || ಇಂತಪ್ಪಂಗೃಹಸ್ಥನಲ್ಲೆಂಬುದುತ್ತರವಾಕ್ಯಂ :

ಕಿಂಗೃಹಾಶ್ರಮೀಯತ್ರಾಗತ್ಯಾರ್ಥಿನೋಭವಂತ್ಯಕೃತಾರ್ಥಾಃ|| ೧೪ || ೧೫೦೭ |

ಅರ್ಥ : ಯತ್ರ = ಆವನೋರ್ವನಲ್ಲಿ, ಅರ್ಥಿನಃ = ಬೇಳ್ವಂ (ಯಾಚಕರು), ಆಗತ್ಯ = ಬಂದು, ಅಕೃತಾರ್ಥಾಃ = ಸಂತುಷ್ಟರಾಗದೆ, ಯಾಂತಿ = ಪೋಪರ್, ಸಃ = ಆತಂ, ಕಿಂಗೃಹಾಶ್ರಮೀ = ಏಂಮನೆಮಾಡಿದಿರ್ದನೇ || ಅರ್ಥಿಗಳಂಸಂತರ್ಪಿಸುವನೆಗೃಹಸ್ಥನೆಂಬುದುತಾತ್ಪರ್ಯಂ || ಸಾಲಂಬಡಲಾಗದೆಂಬುದುತ್ತರವಾಕ್ಯಂ :

ಋಣಗ್ರಹಣೇನಧರ್ಮಃಸುಖಂವಾಣಿಜ್ಯಾತಾದಾತ್ವಿಕಾನಾಮಾಯತಹಿತವೃತ್ತೀನಾಂ[11]|| ೧೫ || ೧೫೦೮ ||

ಅರ್ಥ : ಋಣಗ್ರಹಣೇನ = ಸಾಲಂಗೊಳ್ವುದಱಿಂ, ಧರ್ಮಃ = ಧರ್ಮಮುಂ, ಸುಖಂ, = ಸುಖಮುಂ, ಸೇವಾ = ಓಲಗಮುಂ, ವಾಣಿಜ್ಯಾಚ = ಪರದುಂ, ತಾದಾತ್ವಿಕಾನಾಂ = ತಾದಾತ್ವಿಕಂಗೆದಿನವಸರವುನಡನಡೆ, ಏನಾದದಾಗಲಿಎಂಬಿವರಂ, ಆಯತಹಿತವೃತ್ತೀನಾಂ = ಮೇಲೆಹಿತಮಪ್ಪಂತುನೆಗಳ್ವರ್ಗೆ, ನ = ಆಗದು || ಸಾಲದಿಂಮೇಲಾಸಮೆಕ್ಕುಮೆಂಬುದುತಾತ್ಪರ್ಯಂ || ಇಂತುಕುಡುವುದೆಂಬುದುತ್ತರವಾಕ್ಯಂ :

—-

೧೩. ಕಷ್ಟದಲ್ಲಿದ್ದರೂಕೆಟ್ಟಮಾತುಗಳನ್ನಾಡದಿರುವವನೇಮಹಾತ್ಮನು.

೧೪. ಯಾರಬಳಿಗೆಬಂದು, ಯಾಚಕರುಕೃತಾರ್ಥರಾಗುವುದಿಲ್ಲವೋ, ಅವನುಗ್ರಹಾಸ್ಥಶ್ರಮಿಯೆ?

೧೫. ಸಾಲಮಾಡುವುದರಿಂದಸುಖ, ಧರ್ಮ, ಸೇವೆ, ವಾಣಿಜ್ಯಲಾಭಗಳುಸಿಗುವುದುತಾದಾತ್ವಿರಿಗೆಮಾತ್ರಭವಿಷ್ಯತ್ತಿನಲ್ಲಿಹಿತವನ್ನುಅಪೇಕ್ಷಿಸುವವರಿಗಲ್ಲ.

—-

 

[1]ಮೈಪ್ರಮಾಣಯೋಗವಿಜ್ಞಾನನಿಷ್ಣಾತಮತಿಃ.

[2]ಚೌ. ಧರಣಾಗಮಶಕ್ತಿಸಂಪನ್ನಃ.

[3]ಮೈ. ಚೌ. ಅದರ್ಶನಂ.

[4]ಮೈ. ಅಭಿವ್ಯಕ್ತಾನ್ವಯತ್ವಂ.

[5]ಮೈ. ಚೌ. ವಚನಕವಿ

[6]ಮೈ. ಚೌವರ್ಣಕವಿ.

[7]ಚೌ. ಸಮ್ಮುಖಾಭ್ಯವಹಾರೀ.

[8]ಮೈ. ಯಶಃನಿಗೂಢಸತ್ಸಂಸ್ಕಾರೋದ್ಬೋಧಶ್ಚಇತಿ.

[9]ಮೈ. ಚೌ. ಫಲಂ.

[10]ಮೈ. ಸಹೃದಯಹೃದಯಗಾತ್ರತಾಸ್ವಾಸ್ಥ್ಯಜನನಂ.

[11]ಮೈಆಯತಿಹೀನವೃತ್ತೀನಾಂ. ಚೌತಾದಾತ್ನಿಕಾನಾಂ, ನಾಯತಿಹಿತವೃತ್ತೀನಾಂ. ಇಲ್ಲಿಯನನಮ್ಮಪ್ರತಿಯಲ್ಲಿಯೂಇರಬೇಕಾಗಿತ್ತು. ಆದ್ದರಿಂದಟೀಕೆಯಲ್ಲಿಸೂಚಿಸಿದಂತೆವಾಕ್ಯದಲ್ಲಿಆಯತವೃತ್ತಿನಾಂಎಂಬುದರಕೊನೆಗೆನಎಂದುಓದಬೇಕು.