ಸ್ವಸ್ಯ[1]ವಿದ್ಯಮಾನಮರ್ಥಿನೇದೀಯತೇನಾವಿದ್ಯಮಾನಂ|| ೧೬ || ೧೫೦೯ ||

ಅರ್ಥ : ಸ್ವಸ್ಯ = ತನಗೆ, ವಿದ್ಯಮಾನಂ = ಉಳ್ಳುದು, ಅರ್ಥಿನೇ = ಬೇಳ್ವಂಗೆ, ದೀಯತೇ = ಕುಡಲ್ಪಡುಗುಂ, ಅವಿದ್ಯಮಾನಂ = ಇಲ್ಲದುದು, ನ = ಕುಡಲ್ಪಡದು || ಸಾಲಂಗೊಂಡುತ್ಯಾಗಮಂಮಾಡಲಾಗದೆಂಬುದುತಾತ್ಪರ್ಯಂ || ಸಾಲಂಗೊಡುವಂಗಿದುಲಾಭಮೆಂಬುದುತ್ತರವಾಕ್ಯಂ :

ಋಣಿ[2]ದಾತುರಾಸನ್ನಂಫಲಂಪರೋಪಾಸ್ತಿಃಕಲಹಃಪರಿಭವಃಪ್ರಸ್ತಾವೇsರ್ಥಾಲಾಭಶ್ಚೇತಿ|| ೧೭ || ೧೫೧೦ ||

ಅರ್ಥ : ಋಣದಾತುಃ = ಸಾಲವಕೊಟ್ಟವಂಗೆ, ಪರೋಪಾಸ್ತಿಃ = ಸಾಲುವನಂಬೇಡಿಯೊಲಗಿಸುವುದುಂ, ಕಲಹಃ = ತೋಟಿಯುಂ, ಪರಿಭವಃ = ಅಭಿಮಾನದಕೇಡುಂ, ಪ್ರಸ್ತಾವೇ = ಬೇಡಿದಾಗಳ್, ಅರ್ಥಾಲಾಭಶ್ಚೇತಿ = ಅರ್ಥಮಂಪಡೆಯದುದುಮೆಂದಿವು, ಆಸನ್ನಫಲಂ = ಮೊದಲಫಲಂ || ಬಳಿಕರ್ಥಮಂಪಡೆಗುಂಮೇಣ್ಪಡೆಯದಿರ್ಕ್ಕುಮದಱಿಂಸಾಲಂಗುಡಲ್ವೇಡೆಂಬುದುತಾತ್ಪರ್ಯಂ || ಸಾಲಂಗೊಳ್ವಲಕ್ಷಣಮಂಪೇಳ್ವುದುತ್ತರವಾಕ್ಯಂ :

ಆದಾತುಸ್ತಾವತ್ಸ್ನೇಹಸೌಜನ್ಯಂಪ್ರಿಯಭಾಷಣಂಸಾಧುತಾಯಾವನ್ನರ್ಥಾವಾಪ್ತಿಃ|| ೧೮ || ೧೫೧೧ ||

ಅರ್ಥ : ಆದಾತುಃ = ಬೇಳ್ವಂಗೆ(ಸಾಲವಕೊಂಬಾತಂಗೆ), ತಾವತ್ = ಅನ್ನೆವರಂ, ಸ್ನೇಹ = ಸ್ನೇಹಮುಂ, ಸೌಜನ್ಯಂ = ಸೌಜನ್ಯತ್ವಂ, ಪ್ರಿಯಭಾಷಣಂ = ಪ್ರಿಯವಹನುಡಿಯುಂ, ಸಾಧುತಾಚ = ಒಳ್ಮನಸಿಕೆಯುಂ, ಯಾವತ್ = ಎನ್ನೆವರಂ, ಅರ್ಥಾವಾಪ್ತಿಃ = ಅರ್ಥದಪಡೆಪು, = ಇಲ್ಲ || ಅರ್ಥಮಂಕೊಂಡಂಬಳಿಕ್ಕಿನಿತುಂಕಿಡುವುದೆಂಬುದುತಾತ್ಪರ್ಯಂ || ಇಂತಪ್ಪಲ್ಲಿಪುಸಿಯಕ್ಕುಮೆಂಬುದುತ್ತರವಾಕ್ಯಂ :

—-

೧೬. ಬೇಡುವವನಿಗೆತನ್ನಲ್ಲಿರುವುದನ್ನುಕೊಡಬಹುದೇವಿನಾಇಲ್ಲದ್ದನ್ನುಅಲ್ಲ.

೧೭. ಸಾಲಕೊಡುವವನಿಗೆಮುಂದಾಗಿಲಭಿಸುವಫಲವೆಂದರೆಸಾಲವನ್ನುಬೇಡಲುಬಂದವರಹೊಗಳಿಕೆಯಮಾತುಗಳು, ಜಗಳ, ಅವಮಾನ, ಕೇಳಿದಾಗಹಣವುಹಿಂದಕ್ಕೆದೊರೆಯದಿರುವುದುಇವುಗಳೇ.

೧೮. ಸಾಲವನ್ನುಬೇಡುವವನಸ್ನೇಹ, ಸೌಜನ್ಯ, ಪ್ರಿಯವಾದಮಾತುಗಳು, ಒಳ್ಳೆಯತನಗಳುಸಾಲವನ್ನುಪಡೆಯುವವರೆಗೆಮಾತ್ರ.

—-

ತದಸತ್ಯಮಪಿನಾಸತ್ಯಂಯತ್ರಸಂಭಾವ್ಯಾರ್ಥಹಾನಿಃ|| ೧೯ || ೧೫೧೨ ||

ಅರ್ಥ : ತತ್ = ಅದು, ಅಸತ್ಯಮಪಿ = ಪುಸಿಯಾಗಿಯುಂ, ನಾಸತ್ಯಂ = ಪುಸಿಯಲ್ಲದುದು, ಯತ್ರ = ಎಲ್ಲಿ, ಅರ್ಥಹಾನಿಃ = ಅರ್ಥದಕೇಡು, ನಸಂಭಾವ್ಯಾ = ಆಗದು || ಕೊಟ್ಟರ್ಥಂಕಿಡುವಡಂಮುನ್ನಮೆಇಲ್ಲೆಂದೊಡೆದೋಷಮಲ್ಲೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಪ್ರಾಣಬಾಧೇ[3]ಕಸ್ಯನಾಮಾಸ್ತಿಸತ್ಯವಾದಃ|| ೨೦ || ೧೫೧೩ ||

ಅರ್ಥ : ಪ್ರಾಣಬಾಧೇ = ಪ್ರಾಣಂಗಳಕೇಡಿನಲ್ಲಿ, ಕಸ್ಯ = ಆವಂಗೆ, ನಾಮ = ನಿಶ್ಚಯದಿಂ, ಸತ್ಯವಾದಃ = ಸತ್ಯದನುಡಿ, ಅಸ್ತಿ = ಉಂಟು (ಪ್ರಾಣಬಾಧೇನಾಸ್ತಿಕಸ್ಯಸತ್ಯವಾದಃ) || ಪ್ರಾಣಮನೆಂತುರಕ್ಷಿಸುವನಂತೆಅರ್ಥಮನೆಲ್ಲಾತೆಱದಿಂರಕ್ಷಿಸುವುದೆಂಬುದುತಾತ್ಪರ್ಯಂ || ಅದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಅರ್ಥಾಯಮಾತರಮಪಿಲೋಕೋಹಿನಸ್ತಿಕಿಂಪುನರನೃತಂಭಾಷೆತೇ|| ೨೧ || ೧೫೧೪ ||

ಅರ್ಥ : ಅರ್ಥಾಯ = ಅರ್ಥಂಕಾರಣಮಾಗಿ, ಮಾತರಮಪಿ = ತಾಯುಮನಾದೊಡಂ, ಲೋಕಃ = ಜನಂ, ಹಿನಸ್ತಿ = ಕೊಲ್ಗುಂ, ಪುನಃ = ಮತ್ತೆ, ಅನೃತಂ = ಪುಸಿಯಂ, ಕಿಂನಭಾಷತೇ = ಏಂನುಡಿಯದೇ || ಇಂತಪ್ಪಲ್ಲಿಪುಸಿವರ್ತಿಸುವುದೆಂಬುದುತ್ತರವಾಕ್ಯಂ :

—-

೧೯. ಅರ್ಥಹಾನಿಯುಸಂಭವಿಸದಿರುವಾಗಹೇಳಿದಸುಳ್ಳುಸುಳ್ಳಲ್ಲ.

೨೦. ಪ್ರಾಣಕ್ಕೆಅಪಾಯವುಂಟಾದಾಗಯಾರುತಾನೆಸತ್ಯವನ್ನುಹೇಳುತ್ತಾರೆ?

೨೧. ಹಣಕ್ಕಾಗಿಜನರುತಾಯಿಯನ್ನೇಹಿಂಸಿಸುವಾಗಸುಳ್ಳುಹೇಳಲುಹೇಸುವರೇ?

—-

ಸಕಲಾಸತ್ಯೋಪಾಯನಂ[4]ಹಿವಿವಾಗಕರ್ಮದೈವಾಯತ್ತೋವಧೂವರಯೋರ್ನಿರ್ವಾಹಃ|| ೨೨ || ೧೫೧೫ ||

ಅರ್ಥ : ಸಕಲಾಸತ್ಯಂ = ಎಲ್ಲಾಪುಸಿಗಳನೆ, ಉಪಾಯನಂಹಿ = ಪುಣ್ಯಕಾರಮಾಗಳುದು (ಕಾಣಿಕೆಯಾಗುಳ್ಳುದು), ವಿವಾಹಕರ್ಮ = ಮದುವೆಯವ್ಯಾಪಾರಂ, ದೈವಾಯತ್ತಃ = ಪುಣ್ಯಾಧೀನಂ, ತು = ಮತ್ತೆ, ವಧೂವರೆಯೋಃ = ಸ್ತ್ರೀಪುರುಷರ, ನಿರ್ವಾಹಃ = ಬಾಳ್ಕೆ ||

ರತಿಕಾಲೇತನ್ನಾಸ್ತಿಯನ್ನಬ್ರೂತೇಪುಮಾನ್ನ[5]ಚೇತಾವತಾತತ್ಪ್ರಮಾಣಂ|| ೨೩ || ೧೫೧೬ ||

ಅರ್ಥ : ರತಿಕಾಲೇ = ಸಂಭೋಗಕಾಲದೊಳ್, ತನ್ನಾಸ್ತಿ = ಅಂತಪ್ಪುದಿಲ್ಲ, ಯತ್ = ಆವುದೊಂದಂ, ನಬ್ರೂತೇ = ನುಡಿಯಂ, ಪುಮಾನ್ = ಪುರುಷಂ, ಏತಾವತಾ = ಇನಿತಱಿಂದಮೇ, ತತ್ = ಅದು, ನಚಪ್ರಮಾಣಂ = ಪ್ರಮಾಣಮಲ್ಲ || ಇಂತಪ್ಪಲ್ಲಿಪುಸಿದೊಡಲ್ಲದೊಪ್ಪಂಬಡೆಯಲ್ಬಾರದೆಂಬುದುತಾತ್ಪರ್ಯಂ || ಸ್ತ್ರೀಪುರುಷರಪ್ರೀತಿಯಿಂತುಕಿಡುಗುಮೆಂಬುದುತ್ತರವಾಕ್ಯಂ :

ತಾವತ್ಸ್ತ್ರೀಪುರುಷಯೋಃಪರಸ್ಪರಂಪ್ರೀತಿರ್ಯಾವತ್ಪ್ರಾತಿಲೋಮ್ಯಂಕಲಹೋರತಿಕೈತವತ್ವಂ|| ೨೪ || ೧೫೧೭ ||

ಅರ್ಥ : ತಾವತ್ = ಅನ್ನೆವರಂ, ಸ್ತ್ರೀಪುರುಷಯೋಃ = ಸ್ತ್ರೀಪುರುಷರ, ಪರಸ್ಪರ = ಓರೋರ್ವರೊಳ್, ಪ್ರೀತಿಃ = ಕೂರ್ಮೆ, ಯಾವತ್ = ಎನ್ನೆವರಂ, ಪ್ರಾತಿಲೋಮ್ಯಂ = ಇದಿರಾಗುಹಮುಂ, ಕಲಹಃ = ತೋಟಿಯುಂ, ರತಿಕೈತವತ್ವಂಚ = ಕೂಟದೊಳ್ಮೆಯಿದೆಗೆವುದು (ರತಿಯಲ್ಲಿಠಕ್ಕುತನವು), ನ = ಇಲ್ಲ || ಪಿರಿಯಕಲಹಾದಿಗಳಾಗೆನೇಹಂಕಿಡುಗುಮೆಂಬುದುತಾತ್ಪರ್ಯಂ || ಇಂತಪ್ಪಬಲಂಬಲಮಲ್ಲೆಂಬುದುತ್ತರವಾಕ್ಯಂ :

ತಾದಾತ್ವಿಕಬಲಸ್ಯಕುತೋರಣೇಷುಜಯಃಪ್ರಾಣಾರ್ಥಸ್ತ್ರೀಷುಕಲ್ಯಾಣಂವಾ|| ೨೫ || ೧೫೧೮ ||

ಅರ್ಥ : ತಾದಾತ್ವಿಕಬಲಸ್ಯ = ಕೂಟಕುಳಿಯಪ್ಪ (ಆಗಳಹಬಲಮನುಳ್ಳಂಗೆ) ಬಲವನುಳ್ಳಂಗೆರಣೇಷು = ಕಾಳೆಗಂಗಳೊಳ್, ಜಯ = ಗೆಲವು, ಪ್ರಾಣ = ಪ್ರಾಣದೊಳ್, ಅರ್ಥ = ಅರ್ಥದೊಳಂ, ಸ್ತ್ರೀಷು = ಸ್ತ್ರೀಯರೊಳಂ, ಕಲ್ಯಾಣಂವಾ = ಕಾಪಿನೊಳಪ್ಪೊಳ್ಪು (ಲೇಸು) ಮೇಣ್, ಕುತಃ = ಎತ್ತಣ್ತು || ಮೂಲಬಲಮಿಲ್ಲದಂಗೇನುಮಿಲ್ಲೆಂಬುದುತಾತ್ಪರ್ಯಂ || ಎಲ್ಲಾಕಾಲಮೊಳ್ಳಿದನಿಲ್ಲೆಂಬುದುತ್ತರವಾಕ್ಯಂ :

—-

೨೨. ವಿವಾಹಕರ್ಮವುಎಲ್ಲಾಸುಳ್ಳುಗಳನ್ನುಒಳಗೊಂಡಿರುತ್ತದೆ. ವಧುವರರಸಮರಸವಾದಜೀವನವುಮಾತ್ರದೈವಾಧೀನವಾಗಿರುತ್ತದೆ,

೨೩. ರತಿಕಾಲದಲ್ಲಿಗಂಡಸುಹೇಳದಿರುವಮಾತೇಇಲ್ಲ; ಅವೆಲ್ಲವೂಪ್ರಮಾಣೀಭೂತವಾಗಲಾರವು.

೨೪. ಎಲ್ಲಿಯವರೆಗೆಪರಸ್ಪರಪ್ರತಿಕೂಲತೆ, ಕಲಹ, ವಿರಸ, ಲೈಂಗಿಕಸಂಬಂಧದಲ್ಲಿಮೋಸ, ಇವುಗಳಿರುವುದಿಲ್ಲವೋಅಲ್ಲಿಯವರೆಗೆಮಾತ್ರದಂಪತಿಗಳಲ್ಲಿಪರಸ್ಪರಪ್ರೀತಿಇರುತ್ತದೆ.

೨೫. ತಾತ್ಕಾಲಿಕಸೈನ್ಯವುಳ್ಳಅರಸನಿಗೆಯುದ್ಧದಲ್ಲಿಜಯವಾಗಲಿ, ಪ್ರಾಣ, ಅರ್ಥಹಾಗೂಸ್ತ್ರೀಯರರಕ್ಷಣೆಯಾಗಲಿಹೇಗೆಸಾಧ್ಯ?

—-

ತಾವತ್ಸರ್ವಃಸರ್ವಸ್ಯಾನುನಯವೃತ್ತಿಪರೋಯಾವನ್ನಭವತಿಕೃತಾರ್ಥಃ|| ೨೬ || ೧೫೧೯ ||

ಅರ್ಥ : ಯಾವತ್ = ಎನ್ನೆವರಂ, ಕೃತಾರ್ಥಃ = ನೆಱೆದಕಾರ್ಯಮನುಳ್ಳದು, ನಭವತಿ = ಆಗದು, ತಾವತ್ = ಅನ್ನೆವರಂ, ಸರ್ವೋಪಿ = ಎಲ್ಲಾಜನಮುಂ, ಸರ್ವಸ್ಯ = ಎಲ್ಲರ್ಗಂ, ಅನುನಯವೃತ್ತಿಃ = ಇಚ್ಛೆವಳಿಯಲಿನೆಗಳ್ವುದು || ಕಾರ್ಯಮುಳ್ಳನ್ನೆವರಮೆಲ್ಲರುಮೊಳ್ಳಿದರಾಗಿರ್ಪರೆಂಬುದುತಾತ್ಪರ್ಯಂ || ಇದನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

[6]ಸಹಸಂಭವೋಪಿದೇಹೋನಾಮುತ್ರಸಹಾನುಯಾಯಿಕಿಂಪುನರನ್ಯಃ|| ೨೭ || ೧೫೩೦ ||

ಅರ್ಥ : ಸಹಸಂಭವಃ = ಒಡನೆಹುಟ್ಟಿದ, ದೇಹೋಪಿ = ಶರೀರಮುಂ, ಅಮುತ್ರ = ಪರಲೋಕಕ್ಕೆ, ಸಹಾನುಯಾಯೀ = ಒಡವೋಪುದು, ನ = ಅಲ್ಲ, ಪುನಃ = ಮತ್ತೆ, ಅನ್ಯಃ = ಪೆಱಂ, ಕಿಂ = ಏನೊಡಪೋಪನೇ || ಇಂತಪ್ಪಲ್ಲಿಕಾಲಮುಂಕಳಿಪುವುದೆಂಬುದುತ್ತರವಾಕ್ಯಂ :

ಅಶುಭಸ್ಯಕಾಲಹರಣಮೇವಪ್ರತೀಕಾರಃ|| ೨೮ || ೧೫೨೧ ||

ಅರ್ಥ : ಅಶುಭಸ್ಯ = ಪೊಲ್ಲದುದಕ್ಕೆ, ಕಾಲಹರಣಮೇವ = ಕಾಲಮಂಕಳಿಪುವುದೆ, ಪ್ರತೀಕಾರಃ = ಪಿಂಗಿಸುವುಪಾಯಂ || ಹಿತಮಂಬೇಗಂಮಾಳ್ಪುದೆಂಬುದುತಾತ್ಪರ್ಯಂ || ಸ್ತ್ರೀಯರೊಳಿಂತುವರ್ತಿಸುವುದೆಂಬುದುತ್ತರವಾಕ್ಯಂ :

ಪಕ್ವಾನ್ನಾದಿವಸ್ತ್ರೀಜನಾದ್ದೇಹತಾಪೋಪಶಾಂತಿರೇವ[7]ಪ್ರಯೋಜನಂಕಿಂತತ್ರಾನುರಾಗವಿರಾಗಾಭ್ಯಾಂ|| ೨೯ || ೧೫೨೨ ||

ಅರ್ಥ : ಪಕ್ವಾನ್ನಾದಿವ = ಅಟ್ಟಕೂಳಿಂದಮೆಂತಂತೆ, ಸ್ತ್ರೀಜನಾತ್ = ಸ್ತ್ರೀಯತ್ತಣಿಂ, ದೇಹತಾಪೋಪಶಾಂತಿರೇವ = ಮೈಯಮಱುಕಮಂಮಾಣಿಸುವುದುಮೇಣ್ (ದೇಹತಾಪೋಪಶಾಂತಿಯೆಪ್ರಯೋಜನವು) ಪ್ರಯೋಜನಂ = ಕಾರ್ಯಂ, ತತ್ರ = ಅಲ್ಲಿ, ಅನುರಾವಿರಾಗಾಭ್ಯಾಂ = ಒಸಗೆಮುನಿಸೆಂಬಿವಱಿಂ, ಕಿಂ = ಏನು || ಸ್ತ್ರೀಯರೊಳ್ಕೊರ್ಮೆಯಂನೋಡದೆವ್ಯವಹಾರಸಿದ್ಧಿಯನೆಮಾಳ್ಪುದೆಂಬುದುತಾತ್ಪರ್ಯಂ || ಆವನುಮನುದಾಸೀನಂಗೆಯ್ಯಲಾಗದೆಂಬುದುತ್ತರವಾಕ್ಯಂ :

—-

೨೬. ಹಿಡಿದಕಾರ್ಯಸಿದ್ಧಿಸುವವರೆಗೆಎಲ್ಲರಿಗೂಎಲ್ಲರೂಒಳ್ಳೆಯವರೇ.

೨೭. ಒಡಹುಟ್ಟಿದದೇಹವೇತನ್ನೊಡನೆಪರಲೋಕಕ್ಕೆಬರದಿರುವಾಗಅನ್ಯರುಬರುವುದುಂಟೆ?

೨೮. ಅಶುಭವನ್ನುಮುಂದೂಡಲಿಕ್ಕೆಕಾಲಹರಣವೇಉಪಾಯವು.

೨೯. ಪಕ್ವಾನ್ನದಿಂದಹಸಿವೆಹಿಂಗುವಹಾಗೆಸ್ತ್ರೀಯರಿಂದದೇಹತಾಪದಶಾಂತಿಯೇಮುಖ್ಯ. ಅನುರಾಗವಿರಾಗಗಳಿಂದೇನು?

—-

ತೃಣೇನಾಪಿಪ್ರಯೋಜನಮಸ್ತಿಕಿಂಪುನರ್ನಪಾಣಿಪಾದವತಾಮನುಷ್ಯೇಣ|| ೩೦ || ೧೫೨೩ ||

ಅರ್ಥ : ತೃಣೇನಾಪಿ = ಪುಲ್ಲಿಂದೆಯುಂ, ಪ್ರಯೋಜನಮಸ್ತಿ = ಪ್ರಯೋಜನಮುಂಟು, ಪುನಃ = ಮತ್ತೆ, ಪಾಣಿಪಾದವತಾ = ಕೈಕಾಲನುಳ್ಳ, ಮನುಷ್ಯೇಣ = ಮನುಷ್ಯನಿಂ, ಕಿಂನ = ಏನುಪ್ರಯೋಜಮಿಲ್ಲವೇ || ಎಂತಪ್ಪನುಮೊಂದೆಡೆಗೆಪ್ರಯೋಜಮಕ್ಕುಮೆಂಬುದುತಾತ್ಪರ್ಯಂ || ಓಲೆಯನಾಗನಟ್ಟಿದೊಡಂಕೈಕೊಳ್ವುದೆಂಬುದುತ್ತರವಾಕ್ಯಂ :

[8]ಕಸ್ಯಾಪಿಲೇಖಂನಾವಮನ್ಯೇತ|| ೩೧ || ೧೫೨೪ ||

ಅರ್ಥ : ಲೇಖಂ = ಓಲೆಯಂ, ಕಸ್ಯಾಪಿ = ಆವಂಗಾದೊಡಂ, ನಾವಮನ್ಯೇತ = ಅವಮನ್ನಿಸದಿರ್ಕ್ಕೆ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಲೇಖಪ್ರಧಾನಾಹಿರಾಜಾನಸ್ತನ್ಮೂಲತ್ವಾತ್ಸಂಧಿವಿಗ್ರಹಯೋಃಸಕಲಸ್ಯಜಗದ್ವ್ಯಾಪಾರಸ್ಯ[9]|| ೩೨ || ೧೫೨೫ ||

ಅರ್ಥ : ಹಿ = ಆವುದೊಂದುಕಾರಣದಿಂ, ರಾಜಾನಃ = ಅರಸುಗಳು, ಲೇಖಪ್ರಧಾನಾಃ = ಓಲೆಯನೆಮುಖ್ಯಮಾಗುಳ್ಳರ್, ತನ್ಮೂಲತ್ವಾತ್ = ಓಲೆಯನೆಕಾರಣಮಾಗುಳ್ಳಸ್ವರೂಪಮುಂಟಪ್ಪುದಱಿಂ, ಸಂಧಿವಿಗ್ರಹಯೋಃ = ಸಂಧಿಯುಂ, ವಿಗ್ರಹಮುಮೆಂಬೀಎರಡಕ್ಕಂ, ಸಕಲಸ್ಯಚ =

—-

೩೦. ಹುಲ್ಲುಕಡ್ಡಿಯಿಂದಲೂಪ್ರಯೋಜನವಿರುವಾಗಕೈಕಾಲುಗಳಿರುವಮನುಷ್ಯನಿಂದಪ್ರಯೋಜನವಿಲ್ಲವೇ?

೩೧. ಪತ್ರವುಯಾರಿಂದಲೇಬರಲಿ. ಅದನ್ನುತಿರಸ್ಕರಿಸಕೂಡದು.

೩೨. ರಾಜರಿಗೆಓಲೆಗಳೇಮುಖ್ಯ, ಅವುಗಳಮೂಲಕವೇಸಂಧಿವಿಗ್ರಹಗಳುಮತ್ತುಉಳಿದಎಲ್ಲರಾಜಕಾರ್ಯಗಳುನಡೆಯುವವು.

—-

ಪುಷ್ಪಯುದ್ಧಮಪಿನೀತಿವಿದೋನೇಚ್ಛಂತಿಕಿಂಪುನಃಶಸ್ತ್ರಯುದ್ಧಂ|| ೩೩ || ೧೫೨೬ ||

ಅರ್ಥ : ಪುಷ್ಪಯುದ್ಧಮಪಿ = ಹೂವಿನೊಡನೆಂಪೊರ್ಕ್ಕುಳಿಯುಮಂ, ನೀತಿವಿದಃ = ನೀತಿಯಂಬಲ್ಲರ್, ನೆಚ್ಛಂತಿ = ಒಲ್ಲರ್, ಪುನಃ = ಮತ್ತೆ, ಶಸ್ತ್ರಯುದ್ಧಂ = ಕೈಯ್ದುಗಾಳೆಗಮಂ, ಕಿಂ = ಏನೊಲ್ವರೇ || ಆವನೊಳಾದೊಡಂನಂಟುಮಾಳ್ಪುದೆಂಬುದುತಾತ್ಪರ್ಯಂ || ಇಂತಪ್ಪಪಿರಿಯನೆಂಬುದುತ್ತರವಾಕ್ಯಂ :

ಸಃ[10]ಪ್ರಭುರ್ಯೋಬಹೂನ್ಬಿಭರ್ತಿ|| ೨೪ || ೧೫೨೭ ||

ಅರ್ಥ : ಯಃ = ಆವನೋರ್ವಂ, ಬಹೂನ್‌ = ಪಲಂಬರಂ, ಬಿಭರ್ತಿ = ಪೊರೆವಂ, ಸಃ = ಆತಂ, ಪ್ರಭುಃ = ಪಿರಿಯನೆಂಬಂ || ಪಲರಂಪೊರೆಯದಂಪಿರಿಯನಲ್ಲೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

ಕಿಮರ್ಜುನತರೋಃಫಲಸಂಪದಾಯಾಭೂಭವತಿಪರೇಷಾಮುಪಭೋಗ್ಗಯಾ|| ೩೫ || ೧೫೨೮ ||

ಅರ್ಥ : ಅರ್ಜುನತರೋಃ = ಮತ್ತಿಯಮರನ, ಫಲಸಂಪದಾ = ಫಲದಸಿರಿಯಿಂ, ಕಿಂ = ಏನು, ಯಾಭೂ = ಆವುದೊಂದುಸಿರಿ, ಪರೇಷಾಂ = ಪೆಱರ್ಗೆ, ಉಪಭೋಗ್ಯಾ = ಸೇವಿಸಲ್ಕೆ, ನಭವತಿ = ಆಗದು || ಇಂತಪ್ಪಂತ್ಯಾಗಿಯೆಂಬುದುತ್ತರವಾಕ್ಯಂ :

ಮಾರ್ಗಪಾದಪಇವತ್ಯಾಗೀಯಸ್ಸಹತೇಸರ್ವೇಷಾಂಸಂಬಾಧಂ|| ೩೬ || ೧೫೨೯ ||

ಅರ್ಥ : ಮಾರ್ಗಪಾದಪಇವ = ಬಟ್ಟೆಯಪಣ್ತಮರನಂತೆ, [11]ಯಃ = ಆವನೋರ್ವಂ, ಸವೇಷಾಂ = ಎಲ್ಲರ, ಸಂಬಾಧಂ = ಬಾಧೆಯಂ, ಸಹತೇ = ಸೈರಿಸುಗುಂ, ಸಃ = ಆತಂ, ತ್ಯಾಗೀ = ತ್ಯಾಗಿಯೆಂಬಂ || ಆರ್ಕಾಮಿಸಿಬೇಡಿದೊಡಂಮನಂಮುಳಿಯದಿತ್ತುಪೊರೆವನೆಪಿರಿಯನೆಂಬುದಿನತಱತಾತ್ಪರ್ಯಂ || ಅರಸುಗಳ್ದೂರದಿಂದಿಂತಾಗಿತೋರ್ಪರೆಂಬುದುತ್ತರವಾಕ್ಯಂ :

—-

೩೩. ಹೂವಿನಿಂದಹೊಡೆದಾಡುವುದನ್ನೂಖಂಡಿಸುವನೀತಿಶಾಸ್ತ್ರಜ್ಞರುಶಸ್ತ್ರಯುದ್ಧವನ್ನುಅಪೇಕ್ಷಿಸುವರೇ?

೩೪. ಬಹಳಜನರನ್ನುರಕ್ಷಿಸುವವನೇಅರಸನು.

೩೫. ಮತ್ತಿಯಮರದಹಣ್ಣುಗಳುಯಾರಸೇವನೆಗೂಬರುವುದಿಲ್ಲ. ಅವುಎಷ್ಟಿದ್ದರೇನು?

೩೬. ಹೆದ್ದಾರಿಯಲ್ಲಿರುವಹೆಣ್ಣಿನಮರದಂತೆಬಾಧೆಯನ್ನುಸಹಿಸುವವನೇತ್ಯಾಗಿ.

—-

ರಾಜಾನಃಪರ್ವತಾಇವದೂರತೋ[12]ಸುಂದರಾಲೋಕಾಃ|| ೩೭ || ೧೫೩೦ ||

ಅರ್ಥ : ಪರ್ವತಾಇವ = ಬೆಟ್ಟಂಗಳಂತೆ, ದೂರತಃ = ದೂರದಿಂ, ಸುಂದರಾಲೋಕಾಃ = ಲೇಸಾಗಿತೋರ್ಪರ್‌ (ನೋಟಕ್ಕೆಚೆಲುವರು), ರಾಜಾನಃ = ಅರಸುಗಳ್‌ || ಪೊರ್ದರೊಳ್ಳಿದರಲ್ಲೆಂಬುದುತಾತ್ಪರ್ಯಂ|| ಇಂತಪ್ಪುದುಕಿವಿಗೆಸೊಗಯಿಸುವುದೆಂಬುದುತ್ತರವಾಕ್ಯಂ :

ವಾರ್ತಾ[13]ರಮಣೀಯಃಸರ್ವೋಪಿದೇಶಃ|| ೩೮ || ೧೫೩೧ ||

ಅರ್ಥ : ಸರ್ವೋಪಿದೇಶಃ = ಎಲ್ಲಾನಾಡುಂ, ವಾರ್ತಾರಮಣೀಯಃ = ಪೇಳ್ಕೆಯಿಂದೊಪ್ಪುವರ್‌ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

ಅಧನಸ್ಯಾಬಾಂಧವಸ್ಯಜನಸ್ಯಮನುಷ್ಯವತ್ಯಪಿಭೂಮಿರ್ಭವತ್ಯರಣ್ಯಾನೀ|| ೩೯ || ೧೫೩೨ ||

ಅರ್ಥ : ಜನಸ್ಯ = ಜನಕ್ಕೆ, ಅಧನಸ್ಯ = ಬಡವಂಗಂ, ಅಬಾಂಧವಸ್ಯಚ = ನಂಟರಿಲ್ಲದವಂಗಂಭೂಮಿಃ = ಭೂಮಿ, ಮನುಷ್ಯವತ್ಯಪಿ = ಮನುಷ್ಯರುಳ್ಳರಾದೊಡಂ, ಅರಣ್ಯಾನೀ = ಪಿರಿದಪ್ಪಟಿವಿ, ಭವತಿ = ಅಕ್ಕುಂ || ಸಿರಿಯುಳ್ಳಂಗಾಯಾಸಮಿಲ್ಲೆಂಬುದುತ್ತರವಾಕ್ಯ :

ಶ್ರೀಮತೋರಣ್ಯಾನ್ಯಪಿಹಿಭವತಿರಾಜಧಾನೀ|| ೪೦ || ೧೫೩೩ ||

ಅರ್ಥ : ಶ್ರೀಮತಃ = ಸಿರಿವಂತಂಗೆ, ಅರಣ್ಯಾನ್ಯಪಿ = ಪೇರಡವಿಯುಂ, ರಾಜಧಾನೀ = ರಾಜಾಶ್ರಯಂ, ಹಿ = ನಿಶ್ಚಯದಿಂ, ಭವತಿ = ಅಕ್ಕುಂ || ಧನಮಿಲ್ಲದಂಗೆಲ್ಲಿಯುಂಸುಖಮಿಲ್ಲೆಂಬುದುತಾತ್ಪರ್ಯಂ || ಕೆಡಡಸಿದನಮತಿಯಿಂತಕ್ಕುಮೆಂಬುದುತ್ತರವಾಕ್ಯಂ :

—-

೩೭.ರಾಜನುಪರ್ವತಗಳಂತೆದೂರದಿಂದಷ್ಟೇಚೆನ್ನಾಗಿಕಾಣುವರು.

೩೮. ಸಾಧಾರಣವಾಗಿಎಲ್ಲದೇಶಗಳೂಸುದ್ದಿಗಳಲ್ಲಿಮಾತ್ರಅಂದವಾಗಿರುತ್ತವೆ.

೩೯. ಬಡವರೂಬಂಧುಗಳಿಲ್ಲದವರೂಆದಜನರಿಗೆಭೂಮಿಯಮೇಲೆಎಷ್ಟೋಜನರಿದ್ದರೂ, ಅದುಅರಣ್ಯವೇಸರಿ.

೪೦. ಶ್ರೀಮಂತರಿಗೆಅರಣ್ಯವೂರಾಜಧಾನಿಯೇಆಗುತ್ತದೆ.

—-

 

[1]ಮೈ. ದ್ರವ್ಯಂ.

[2]ಋಣದಾತುಎಂದುಓದಬೇಕು. ಈಸರಿಯಾದಪಾಠಟೀಕೆಯಲ್ಲಿದೆ.

[3]ಈವಾಕ್ಯದಲ್ಲಿಪಾಠಾಂತರಗಳಿದ್ದುಟೀಕೆಮತ್ತುಮೈ. ಚೌ. ಗಳಿಂದಸ್ಪಷ್ಟವಾಗುತ್ತದೆ.

[4]ಮೈ. ಚೌ. ಸತ್ಯಲಾಸತ್ಯೋಪಾಸನಂ.

[5]ಮೈಚೌ. ಕಾಮಾರ್ತೋಪುಮಾನ್.

[6]ಚೌ. ಈವಾಕ್ಯವಿಲ್ಲ.

[7]ಚೌ. ದೋಷಶಾಂತಿ.

[8]ಮೈಚೌ. ಈಮತ್ತುಮುಂದಿನವಾಕ್ಯಗಳುಒಂದರಲ್ಲೇಸೇರಿವೆ.

[9]ಮೈ. ರಾಜ್ಯವ್ಯಾಪಾರಸ್ಯಚ.

ಎಲ್ಲರ, ಜಗದ್‌ ‌ವ್ಯಾಪಾರಸ್ಯಚ= ಲೋಕವ್ಯವಹಾರಕ್ಕಂ|| ಎಂತಪ್ಪನೊಳಂತೋಟಿವೇಡೆಂಬುದುತ್ತರವಾಕ್ಯಂ:

[10]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಸೇರಿವೆ.

[11]ದಾನಶೀಲನೊಬ್ಬನವರ್ಣನೆಯನ್ನುಮಾಡುವಾಗಈಹೋಲಿಕೆಶಾಸನವೊಂದರಲ್ಲಿಹೀಗೆಬರುತ್ತದೆ. ಕಾಂತಾರದೊಳ್‌ ಪಣ್ತುನೆಲನಂಮೋದುವಮಾಮರಂ.

[12]ಮೈ. ಕೇಚನದೂರತಃಸುಂದರಾಃ.

[13]ಮೈ. ಇಲ್ಲಿಈವಾಕ್ಯವುಬಹಳಷ್ಟುಭಿನ್ನವಾಗಿದೆ.