ನಾ ನಮ್ಮವರಂತ ತಿಳಿ ಹೇಳಾಂವಾ
ಕೇಳದಿದ್ದರ ಕಾಲ ಬೀಳಾಂವಾ ||
ಒದ್ದ ಹೋದರ ಸುದ್ದಾ ಬುದ್ಧಿ ಹೇಳಾಂವಾ
ಬೈಯ್ಯಾವರ ಬೆನ್ನಹತ್ತಿ ಬರಾಂವಾ
ಸಾಯೂತನ ಜೀವಾ ಅರದ ಕುಡ್ಯಾಂವ
ಸತ್ತ ಹ್ವಾದರೂ ದೆವ್ವ ಆಗಿ ಕಾಡಾಂವಾ ||

ಕೆಟ್ಟ ಕೆಲಸ ಬಿಟ್ಟಬಿಡಿರಿ ಅನ್ನಾವಾ
ಅಷ್ಟೂ ಮೀರಿ ಮಾಡಿದರ ಕೆಟ್ಟೀರೆ ಅನ್ನಾವಾ
ಖಾಲಿ ತಿರಗಾವರನ್ನ ಕಂಡ ಬೆಂಕಿ  ಕಾಣಾಂವಾ
ಕೇಳದಿದ್ದರ ಹಾಳಾಗಿ ಹೋಗ್ರಿ ಅನ್ನಾಂವಾ ||

ದುರ್ವೆಸನ ದೂರ ಮಾಡಿರಿ ಅನ್ನಾಂವಾ
ಸತ್ಕಾರ್ಯಕ್ಕೆ ಸದಾ ದುಡಿರಿ ಅನ್ನಾಂವಾ
ಸಾದೂರ ಸಂಗ ಮಾಡಿರೆಂತ ಹೇಳಾಂವಾ
ತತ್ವಜ್ಞಾನ ಗೊತ್ತ ಹಿಡೀರಿ ಅನ್ನಾಂವಾ

ಚಾಡಾ ಹೇಳೂ ಚಟಾ ಬಿಡರಿ ಅನ್ನಾಂವಾ
ಸುಳ್ಳಕರೆ ಕಂಡ ಹಿಡಿರಿ ಅನ್ನಾಂವಾ
ತಿಗಡೊಳ್ಳ್ಯಾಗ ನಾನು ಇರಾಂವಾ
ಬಲಭೀಮನ ಪಾದಾ ಹೊಂದಾವಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು