ನಾದ ನಿಂದ ಬಿಂದು ನಂದ
ಪಾವನಿಂದ ಕಾವನಂದ
ತಂತಿನಿಂದ ಕಡ್ಡಿನಂದ
ತೂತನಿಂದಾ ಗೂಟನಂದಾ ||
ಗುಡಿನಿಂದ ಗುರುನಂದ
ಮರವನಿಂದ ಅರವನಂದ
ಗುಳದಾಳಿ ಗುರುಪಂದ
ಬ್ರಹ್ಮಸ್ವರೂಪ ನಂದಾ ||
ದವತಿನಿಂದ ಟಾಕನಂದ
ಕಾಗದೆನಿಂದ ಮಸಿನಂದ
ಬರಿ ಎಂದ ನಿಂತ ಪದಾ
ಅವನಿಂದ ಆಗೋದ ಸದ್ಬೋದಾ ||
ತಿಗಡೊಳ್ಳಿ ಊರ ಚಂದ
ಕಲ್ಮೇಶ್ವರ ಗುಡಿಮುಂದ
ಹಾಡತೇವಿ ನಿಮ್ಮ ಮುಂದ
ಕುಂತ ಕೇಳರಿ ಚಂದಾ ||
ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು
Leave A Comment