ಸಾಲಿ ಹುಡಗೋರ ಲೀಲಾ ಹೇಳತೇನ
ಕುಂತಕೇಳರಿ ಈಗ
ಕೆಲಸವಿಲ್ಲದೆ ಇವರು ಕಾಲಿ ತಿರಗತಾರ
ಸಿಕ್ಕಾಂಗ ಊರಾಗ ||

ಬಣ್ಣ ಬಣ್ಣದ ಲುಂಗಿ ಸುತ್ತಿಕೊಂಡ
ಮಾಡತಾರ ಇವ್ರು ಸೋಗ
ಅಯಿಟ ಕಾಣುವಂತೆ ಬೂಟ ಮೆಟ್ಟಕೊಂಡ
ಜುಟ್ಟಲ ತೆಲಿಮ್ಯಾಗ ||

ಕರೆ ಹೇಳತೇನ ಕಣ್ಣ ಇಟ್ಟ ಇವರು
ಹೆಣ್ಣ ಹುಡಗೋರ ಮ್ಯಾಗ
ಬುದ್ಧಿ ಹೇಳಿದರ ಗುದ್ದ್ಯಾಡತಾರ
ಬುದ್ಧಿಬಂತ ನನಗ ||

ಸಾಲಿ ಕಲಿತೆವಂತ ಖಾಲಿ ತಿರಗಾಡವರಿಗೆ
ಚಾಲ ಬಿದ್ದಿತೊ ಹಿಂಗ
ಕೆಟ್ಟ ಮ್ಯಾಲ ಇವರ ಗಮಜ ಇಳೀತೈತಿ
ಗಜ್ಜ ತಿಂದ ಮ್ಯಾಗ ||

ತಿಳಿಗೇಡಿ ಜನರ ಕಳಾ ತಿಳದೀತು
ತಿಗಡೊಳ್ಳಿ ಬಲಭೀಮಗ
ನೀತಿವಂತರಾಗಿ ಖ್ಯಾತಿ ಹೊಂದಿರೆಂತ
ಮರಿಕಲ್ಲ ಹೇಳಿದೀಗ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು