ಅಕ್ಕ ತಂಗೇರ ಮುಂದ ಹೇಳುವೆನು ಕೈಮುಗದ
ಗುರ್ತ ನಿಮ್ಮ ಗಂಡಂದ ಕುಂಕುಮ ಬಟ್ಟ ಒಂದ
ಹಚ್ಚರೆವ್ವಾ ಹಣಿಯ ಮ್ಯಾಲಾ ||
ಮುಖ ಬೇಕ ಮುತ್ತೈದೆಯರಿಗಾ ನಸಲಾ ||
ಮುತ್ತೈದೇರು ಮುಂಜಾನೆದ್ದ ಗಂಡಂದಿರ ಕಾಲ ಬಿದ್ದ
ಮನಸ ಇರಬೇಕ ಸುದ್ದ
ವಿಶ್ವಾಸ ಇಡರಿ ಜನ್ಮದ ಮ್ಯಾಲಾ ||
ತಗೀವದು ಮೋಕ್ಷದ ಬಾಗಿಲಾ ||
ಗಂಡನಿಂದ ಗತಿ ಅಂತ ಹೇಳತಾರ ಗಾದಿ ಮಾತ
ಕುಂಕುಮಾ ಚೆಂದ ಹಚ್ಚರೆಂತ ಹೇಳಿದ್ರ ಸಿಟ್ಟ ಬಂತ
ಇದು ಎಂಥಾ ಕೆಡಗಾಲಾ ||
ನೀತಿವಂತಗ್ಯಾಗರೆವ್ವ ಅನುಗಾಲಾ ||
ತಿಗಡೊಳ್ಳಿಯಲ್ಲಿ ನಮ್ಮ ವಸ್ತಿ ಪದಾಮಾಡತೇವ ಭರ್ತಿ
ಸ್ವಾಮಿ ಬಲಭೀಮನ ಸ್ತುತಿ
ಮಾಡತೇವ ಅನುಗಾಲಾ ||
ಮಂದಮತಿ ಮರಿಕಲ್ಲ ಹೇಳಿದ ಅಕಲಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು