ನೀನಲ್ಲದೆ ಗತಿ ಒಬ್ಬರಿಲ್ಲಾ ಗುರುದೇವ ನೀನಲ್ಲದೆ ||
ಬೇರ‍್ಯಾರು ಇಲ್ಲಾ || ಪ ||

ಭಾವಕ್ಕೆ ರಸಪೂರ್ಣನಂತೆ ಗುರುಸೇವಕರಿಗೆ ನೀನು
ಅಗಣಿತನಂತೆ | ಸಾವು ಹುಟ್ಟಿಲ್ಲದವನಂತೆ ಗುರುದೇವ
ರೊಳಗೆ || ಇವನಗ್ರೇಶನಂತೆ || ಪ ||

ಸತ್ತು ಬಿತ್ತಾನಂದ ರೂಪ | ನೀನು ಮುಕ್ತಿ ಮಾರ್ಗಕೆ
ಜ್ಞಾನ ಜ್ಯೋತಿಯ ದೀಪಾ || ಇತ್ತ ಬಾರದಂತೆ ಮಾಡೋ
ಭೂಪ || ತನ್ನೊತ್ತಿ ಪದ ಬೆರಸಿ ಸುಡಮಾನ ರೂಪಾ || ಪ ||

ಲಿಂಗದೇಹವು ಭಂಗವಾಗಿ ಅಲ್ಲಿ ಮಂಗಳಸ್ಥಿರಕಳಸ |
ಅಂಗಳಸೇರಿ ಕಂಗಳೂರಿನ ಮುಕ್ತಿದಾರಿ
ಅಲ್ಲಿ ಜಂಗಮ ರೂಪ ರೇವೆಸಮೋಳ್ ಸೇರಿ || ಪ ||

ಅರುವಿನ ಕುರುಹನ್ನ ಹಿಡಿದು ನನ್ನ ಮರುವೆಯ
ದೋಷದ ಪರಿಯನ್ನತರಿದು | ಗುರುವಿನ ಗುರುವೆಂದು
ಕರೆದು ತನ್ನ ಪರಿಪೂರ್ಣ ಕಳೆ ಬಂದು ನಾದವ ತಿಳಿದು || ೪ || ಪ ||

ವರರೇವ ರೌದ್ರಿಯನೇರಿ | ಅಲ್ಲಿ ಗುರು ಸಂಜೀವರ
ಪದಪದ್ಮಸಾರಿ | ಮಂಡ್ಯಕ್ಷೀತ್ತೊದ್ದಾರಿ | ಅಲ್ಲಿ ನಿರುತವು
ನೆಲೆಸಿಹ ಗುರುಭಕ್ತದ್ದಾರಿ || ೫ || ಪ ||