ನೀನೆ ದಯಾಮಯ, ಇನ್ನಾರಿರುವರು ನಿನ್ನಂದದ ಹಿತಕಾರಿ ?
ನೋವು ನಲಿವಿನಲಿ ಸಮೀಪ ಬಂಧುವು, ಶೋಕತಾಪ ಭಯಹಾರಿ.
ಸಂಕಟಪೂರಿತ ಮೋಹ ಭವಾರ್ಣವದುತ್ತರಣಕೆ ನೀ ಸಹಕಾರಿ
ಪ್ರಸನ್ನವಾಗಿಸು ಈ ಬಿರುಗಾಳಿಯ, ರಿಪುದಲವಿಪ್ಲವಕಾರೀ !
ಪಾಪದಹನ ಪರಿತಾಪವನಾರಿಸು, ವರ್ಷಿಸು ಶೀತಲವಾರಿ
ಎಲ್ಲರು ತ್ಯಜಿಸುವ ಅಂತಿಮ ಕಾಲದ ನೀನೇ ಆಶ್ರಯಕಾರಿ !
Leave A Comment