ಅಣಕಿಸುತ ಆಡಬೇಡ ಅಣಕ ಜರ

ಕನಿಕರ ಇರಲಿ ಕೇಳನಕ

ಅನುವಾಗಿ ಮಾತಾಡೋ ಚಿನಕ ತಿಳಿ

ಮನದ ಮುಂದಾಗುವ ಹೊಲಗೇರಿ ಶುನಕ ||ಪ||

ಪುಣ್ಯಫಲದಿ ನರನಾದಿ ಗುರುವರನ ಬೋಧ ಕೇಳದಿಹ ಸುಳ್ಳೆವಾದಿ

ಕಣ್ಣಿದ್ದು ಕಾಣದಾದಿ ಕುಣಿಕುಣಿದಾಡಿ ಖೋಡಿ ತಿಳಿಯದೆ ಮಣ್ಣಿಗ್ಹೋದಿ

ಉಣ್ಣು ಪೂರ್ವದ ಪುಸ್ತಿ ಆಗಲಿಲ್ಲ ಬಸ್ತಿ ಅನ್ಯಥಾವಸ್ಥಿ

ಮಾನ್ಯರಿಗೆ ಜಾಸ್ತಿ ಮಾಡುವುದೋ ಯಮಬಾಧಿ ||1||

ಸೊಕ್ಕು ಮಿಕ್ಕಿತದು ಪೂರಾ ಮುದ್ದಿಕ್ಕಿ ಬರುವುದು ಘೋರಾ

ದಕ್ಕದು ಜ್ಞಾನವು ಶೂರ ಮಿಕ್ಕಾಯಿತು ಸುಖದ ಭಾರ

ತೆಕ್ಕಿಮುಕ್ತಿ ನೆಲಕಿಕ್ಕಿ ಯಮನಪುರ

ಹೊಕ್ಕಿ ಬಿಡನು ಸರಕಾರ ||2||

ಹುಷಾರಿದಪ್ಪಿ ಮೈಮೆರೆದಿ ಉಸುರ ಹಾಕುತ ಸಂಕಟಗರೆದಿ

ಮುಸುಗಿ ಮತ್ಸರದೊಳು ಉರಿದಿ ಹುಸಿ ವ್ಯಸನಕೆ ಬಾಯ್ದೆರೆದಿ

ಎಸೆವ ನೀರಲಕೆರೆ ಪಶುಪತಿ ದೇವರ

ವಶ ಮಾಡಿ ಮುಕ್ತಿ ಪಡೆ ಭರದಿ ||3||

ಅತ್ತೆಯ ಮನೆಗೆಂದರೆ ಒಲ್ಲಿ ಮತ್ತೊಬ್ಬಗೆ

ಹತ್ತಿ ಮಿಂಡನ ಬಿಡಲೊಲ್ಲಿ

ಚಿತ್ತವಿಟ್ಟು ಗಂಡ ಕರೆಯಲಿಕ್ಕೆ ಬಂದರೆ

ನೆತ್ತಿಬೇನೆ ಎಂದತ್ತು ಮಲಗತಿದ್ದಿ ಹೊಯ್ಮಾಲಿ ||ಪ|||

ಕಂಡ ಸೂಳೇರ ಸಂಗ ಮಾಡಿ

ಉಂಡುಟ್ಟು ದಿಂಡಾದವನ ಕಂಡು

ಮಿಂಡಿ ಹೌದಲೆಲೆ ತಿಂಡಿ ಮಾರಿ ಮಿಂಡರಗಳ್ಳಿ

ಜೊಂಡೊಡಲಿನ ಚಂಡಿ ಮಾರಿ ಚೆಲ್ವಿ ||1||

ಜಾತಿಯವನ ಸ್ನೇಹ ಬಿಟ್ಟಿ ಅನ್ಯ

ಜಾತಿಯವಗೆ ರತಿಗೊಟ್ಟಿ

ಪ್ರೀತಿಯೇನಿದು ಅನೀತಿ ರೀತಿ

ಕೋತಿ ಮಾರಿಯ ಲೌಡಿ ಭೀತಿಯಿಲ್ಲ ||2||

ಮೊದಲು ತಾಳಿಯ ಕಟ್ಟಿಕೊಂಡಿ ನದರಿಟ್ಟು

ಬದಲಿ ಓರ್ವನ ವಶ ಮಾಡಿಕೊಂಡಿ

ಸದನ ನೀರಲಕೆರೆ ಸದಮಲ ಗುರುಕೃಪಾ

ಸುಧೆಯ ಪಡೆದು ಬಾಳು ಹೆದರದೆ ಇನ್ನಾರಿಗೆ ||3||

ಅಲಾವಿನಾಡಿರೋ ಪೀರನ ಅಲಾವಿನಾಡಿರೊ

ಬವಸೈಕೆವಸೈ ಧೂಲ ಯಾಲ ಅನ್ನಿರಿ ಜನರೇ ||ಪ||

ಹದಿನೆಂಟು ಕುಲದ ದೈವವು ಕೂಡಿ

ಲಿಂಗದ ಮೇಲೆ ಲಾಡಿ ಹಾಕುವಿರಿ

ತುರುಕರ ಲಾಡಿ ಕೊರಳೊಳು ಹಾಕಿ

ಮುಟ್ಟೀರಿ ತಟ್ಟೀರಿ ಎಂಬುವುದೇಕೆ ||1||

ಅಡವಿಯೊಳಿರುವ ಕಲ್ಲನು ತಂದು

ಕೆತ್ತಿ ಲಿಂಗವ ಮಾಡಿ ಕಟ್ಟಿದಿರಿ

ಮುನ್ನೂರರುವತ್ತು ನಾಡಿಯನೆಳದು

ನಾಡಿಗೊಂದು ಲಿಂಗವ ತೋರುವುದೇಕೋ ||2||

ದಂಡು ನೀರಲಕೆರಿ ಗಂಡುಮೆಟ್ಟು

ನೋಡಿ ಹಿಡಕೊಂಡಿರಿ

ಪುಂಡ ಪಂಚಾಕ್ಷರ ಗಂಡನ ನುಡಿ ಕೇಳಿ

ಬಂಡು ಆದಿರಿ ದೈವವು ಎಲ್ಲಾ ||3||

ಅರಳೆ ನೋಟ ಮರದುಂಬಿ ಕೂದಲಿನ ತರುಣಿ ದಯದಿ ನೋಡೇ

ಸ್ಮರ ತಾಪದಿ ಮನ ಮರುಳುಗೊಂಡಿತೆಲೆ ಕರುಣದಿ ಮಾತಾಡೇ | |ಪ||

ಚದುರೆಯ ಚೆಲ್ವಿಕೆ ಇನ್ನೆಷ್ಟು ಹೇಳಲಿ ಮುಖ ಕಳೆಯ ಚಂದ್ರನಂತೆ

ಸುದತಿಗಿಲ್ಲ ತಿಳಿಗನ್ನಡಿ ನೋಡಲು ಎದೆ ಹೊಡೆದಿತು ಕಾಂತೆ

ಮದನಬಿಲ್ಲು ಸಮತೋರ್ಪ ಹುಬ್ಬು ಕಡೆಗಣ್ಣು ಮೀನದಂತೆ

ಮಧುರವಾಗಿ ತುಟಿ ತೊಂಡಿಹಣ್ಣು ಕಂಡು ಹತ್ತಿತಲ್ಲೆ ಭ್ರಾಂತೆ

ಮುದದಿ ಬಗರಿ ಕುಚ ಭಾರಕೆ ಮನ ಮರುಗಾಯಿತಲ್ಲೆ ಚಿಂತೆ

ಹದಿನಾರು ವರ್ಷ ಉಕ್ಕುತದೆ ಪ್ರಾಯ ಬಾರೆಲೆ ಗುಣವಂತೆ ||1||

ಹೆಣ್ಣೆ ನಿನ್ನ ಮೈಬಣ್ಣ ಬಂಗಾರದ ಬೊಂಬೆಯಂತೆ ಕಂಡು

ಸಣ್ಣ ನಡುವಿನೊಳು ಸೇರಿತು ಸಿಂಹದ ರೂಪು ಮಾಜಿಗೊಂಡು

ಭಿನ್ನವೇಕೆ ಜಡೆಗೆ ಅಳುಕುತ ಸರ್ಪ ಹುತ್ತ ಸೇರಿಕೊಂಡು

ಬಣ್ಣಿಸಲಾರೆನು ಬಾಗಿತು ರಂಭೆಯ ತೊಡೆಗೆ ಬಾಳೆದಿಂಡು

ಚನ್ನೆ ಕೇಳೆ ಜರೆದೊಣಗುತ ಬಂದು ಕಳವಳವು ಸಾಕೆಂದು ಎಂದು ||2||

ಬಗಲು ಚೌಕ ತೋಳಸರಗಿ ಬಾಜುಬಂದಿ ಒಪ್ಪುತಿಹವು ಚಂದ

ಸೊಗಸು ಸ್ತ್ರೀಯಳು ಶ್ರೀಗಂಧ ಮೈಗೆ ಹಚ್ಚಿಹಳು ಬಲು ದುಂದ

ಮಿಗಿಲು ಮಾತು ನೀನಾಡಲಮೃತವು ಸುರಿದಿತಲ್ಲೆ ಬಂದೆ

ನಗೆಯ ಮಾತ ಬಂದು ಕೇಳಲು ಸೊನ್ನಿ ಮಾಡಿದೊಂದೆ

ಮೃಗಲೋಚನೆ ಅಗಲಿಕೆ ನಿಲ್ಲದೆ ನಾಳೆ ಬರುತೇನೆಂದೆ

ಬೇಗ ಬಂದು ಪಂಚಾಕ್ಷರದೇವನ ತ್ವರಿತದಿ ನೀ ಹೊಂದೆ ||3||

ಆಶೆ ಬಹು ಜನರನು ಮಾಳ್ಪದು ಘಾಸಿ

ಆಶ್ರಯಿಸಿದ ವಾಸನೆಯಾಸೆ

ಆಶೆ ಭವಪಾಶ ಬಲು ಹೇಸಿಮನ

ಮಸಿಯಾಗಿಹ ದುಃಖದ ರಾಶಿ ||ಪ||

ನಾನಾ ಜನ್ಮಂಗಳ ತಿರುಗೇನಂತು

ಮಾನವನಾಗಿ ಬಂದು

ಹೀನ ಸಂಸಾರ ಹಿತವರಾಡಿಕೊಂತು

ಕಾನನದೊಳು ನಿಂತು

ಮಾನ ಸತ್ಪಾತ್ರರೆಲ್ಲ ದಾನ ಶಿವಸುಖ ಧ್ಯಾನ

ಆನಂದ ಮುಕ್ತಿಗೆ ಅನುಮಾನ ಶುನಿಸೂಕರ ಜನನ ||1||

ಬಂದ ಬಟ್ಟೆಯನರಿಯದೆ ಹೋಯ್ತು

ಬಂಧನದೊಳಗಾಯ್ತು

ಹಿಂದು ಮುಂದರಿಯದೆ ಮತ್ತೇನಾಯ್ತು

ಸಂದೇಹಕೆ ಹೋಯ್ತು

ಕಂದು ಕುಸ್ತಿಯಾಡುತ ನಿಂದೆಯ

ತಂದು ತನ್ನ ಬಾಯಿಗೆ ಬಂದದ್ದಂದು

ಮುಂದಳಿಸುವುದು ತನ್ನಂದು ಹಿತವಿಲ್ಲ ಎಂದೆಂದು ||2||

ದೊಡ್ಡ ದೊಡ್ಡವರಿಗೆ ಮಾಳ್ಪದು ಪ್ರೇಮ

ಹೆಡ್ಡಚ್ಚಿತು ಕಾಮ

ಜಡ್ಡು ಜಡರುಗಳರಸುತ ಕೆಡಿಸಿತು ನೇಮ

ವಡ್ಡಾಯಿತು ಧಾಮ

ದೊಡ್ಡ ನೀರಲಕೆರೆ ಗಡ್ಡ್ಯಾಗಿನ ಸನ್ಮಾರ್ಗದ ಗುರುವಿಗೆ

ದೊಡ್ಡ ದೊಡ್ಡವರ ಮಡ್ಡು ಅಳಿದೀತಡ್ಡಡ್ಡಾ ||3||

ಆಡಿಪ ದೇಹದಲಿ ಪರಮಾತ್ಮನಾಡಿಪ ದೇಹದಲಿ ||ಪ||

ಈಡಾ ಪಿಂಗಳ ನಡುನಾಡ ಗೂಡಿನೊಳು

ಕೂಡದೆ ಕುರುಹ ನೀಡಾಡಿಸಿ ಕುಣಿಸಿತು ||ಅ.ಪ||

ತನು ಕರಣಗಳ ಹಿಡಿದು ಘನವ ಇಂದ್ರಿಯದೊಳು ಜಡಿದು

ಅನುಕೂಲಿಸದೆ ಮನ ಮುನಿ ದೃಷ್ಟಿಗೆ ದಿನಕರ ಪ್ರಭೆಯಂತೆ ||1||

ಸೂತ್ರಿಕ ತಾನಾಗಿ ಸೂತ್ರಿಸಿ ಸೂಕ್ಷ್ಮದೊಳಿಹನಾಗಿ

ಗಾತ್ರ ಮೂರುತಿ ಕ್ಷೇತ್ರ ದಿಂಗಬರ ನೇತ್ರಾಲಯ ಪ್ರತಿ ನೇತ್ರದೊಳು ||2||

ಕನ್ನಡಿಯೊಳು ಬಿಂಬ ಕಣ್ಣೊಳು ಸನ್ನೆಯ ಮಾಡಿಂಬ

ಉನ್ನತ ಗುರು ಪಂಚಾಕ್ಷರ ದೇವನು ಭಿನ್ನವಿಲ್ಲದಲೆ ತನ್ನಂತಿಹ ಸಾಂಬ ||3||

ಆರತಿ ಬೆಳಗಿದೆನೇ ಶಾಂಭವಿಗಾರತಿ ಬೆಳಗಿದೆನೆ

ಆರು ನೆಲೆಯ ಮೇಲೆ ತೋರಿ ದ್ವಿದಳ ಸದರೇರಿ ರಂಜಿಪಳಿಗೆ

ಆರತಿ ಬೆಳಗಿದೆನೇ ||ಪ||

ಥಳಥಳ ಬೆಳಗೊಳಿಸಿ ತಾರಕ ಬಳಗದ ಮಳೆಗರಿಸಿ

ಸೆಳೆ ಮಿಂಚಿನ ಹೊಳಪು ತಿಳಿಯಲು ಕಳೆ ಕಾಂತಿಯ ಜಳಪು

ಸೆಲೆ ಶಶಿ ಜೊನ್ನದ ರವಿಕಿರಣಕೆ ಮೇಲೆ ಹೊಳೆವ

ನಿಲಯಾನಂದೊಳಿರುವಳಿಗೆ ಆರುತಿ ಬೆಳಗಿದೆನೇ ||1||

ಶಂಖು ಜಾಗಟೆ ಭೇರಿ ಕಿಂಕಿಣಿ ನುಡಿಸುವ ಕಿನ್ನರಿ

ಬಿಂಕದ ತುತ್ತೂರಿ ಓಂಕಾರ ಘಂಟಾನಾದವೇರಿ

ಶಂಕರ ಹರಿಪಂಕಜ ಭವರಾಡಿಪ

ಶಂಕರಿ ಶಬರಿ ಭಯಂಕರಿ ರೂಪಿಗೆ ಆರತಿ ಬೆಳಗಿದೆನೇ ||2||

ಬಿಡದಿಹ ನುಡಿ ಗಡಿಯ ನೀರಲಕೆರೆ ಪ್ರಭುವರನ

ಎಡೆದೊಡೆಯ ಹಿಡಿದು ದೈತ್ಯರ ಪಡೆಯ ಗರ್ಜಿಸುತ

ಅಡಿಗಡಿ ಧಟ್ಟಡಿಯ ಕಿಡಿಕಿಡಿ ಉದುರುವ ಸಡಗರದ ಉನ್ಮನಿ

ಬೆಡಗಿನ ಮಂಟಪದೊಡನೆ ಅಡರಿರುವಳಿಗೆ ಆರತಿ ಬೆಳಗಿದೆನೇ ||3||

ಆಗದಾಗದು ಮುಕ್ತಿ ಯೋಗ ಮಾರ್ಗದಿ ಮತ್ತೆ

ನಾಗವೇಣಿಯೆ ಕೇಳೆ ನಗೆ ಮೊಗದ ಅರಸಿ ||ಪ||

ರಾಗ ಭೋಗಗಳೆಂಬ ಎರಡು ಯೋಗಂಗಳಿರೆ

ನೀಗುವುದೆಂತು ಸಂಸೃತಿಯ ಬಂಧನವು

ಭೂಗಗನ ದಿಗ್ಭರಿತನಾದ ಅಭವನ ಕೃಪೆಯ

ಬೇಗದಿಂ ಗಳಿಸಿದಂಗಲ್ಲದೆ ಅಖಿಳರಿಗೆ ||1||

ಆಸನದಿ ಹಂಸನು ಬಲಿದು ಸ್ವಸ್ಥಾನದಲಿ ಕುಳಿತು

ಮೇಶನ ಧ್ಯಾನದೊಳು ನಾಸಿಕಾಗ್ರದಲಿ

ಆಸರವಿಡಿದು ದೃಷ್ಟಿ ಸೂಸದೆ ನಿಲ್ಲಿಸುತ

ಲೇಸು ಮಾಡಲು ಮನಸಿನ ಕಾರ್ಯವಮ್ಮ ||2||

ವಂಚನವಳಿದು ಪಂಚಾಗ್ನಿ ಮಧ್ಯದಿ ಬಾಳ

ಸಂಚಲಂಗಳ ನೀಗಿ ಸುಖದಿಚ್ಛೆಗಾಗಿ

ವಂಚಿಸಿ ಬಹಿರಂಗವಳಿದು ಹಂಚಿಕೆ ಹಾಕಿ

ಮಿಂಚಿನ ಪ್ರಭೆ ಕಾಣ್ಬುದಿದು ಬುದ್ಧಿ ಸಖಿಯೇ ||3||

ತನುಮಾನಸಾದಿ ಬುದ್ಧಿಗೆ ನಿಲುಕದಾ ಮಹ

ದನುವರಿವ ಅರುವದಿ ಏನೆಂದಡೆ

ಚಿನುಮಯ ಗಡಿ ನೀರಲಕೆರಿ ಗುಪ್ತ ಗುರು

ವೆನಗೊಲಿದು ಚಿತ್ತುವಿಗರಿಕೆ ನೀ ತಿಳುಹು ||4||

ಈವ ಸದ್ಗುರು ತನಗೊಲಿವ ಸಾಧನವಿದು

ಆವ ಪುಣ್ಯ ಫಲ ಕೊಡದಲೆ ಒಲಿಸಲು ಶಿವನಿಂದಾಗದು ||ಪ||

ಜಾಣ ಕವಿಯು ನುತಿಸಲು ಬಯ್ದ

ಬಾಣಗೊಲಿದು ಬಾಗಿಲು ಕಾಯ್ದ

ಜಾಣ ಮಗನ ಕೊಯ್ಸಿ ಉಣದೆ ಹೋದ

ಮಾಣದೆ ಹಾದರಕೆ ಹೊನ್ನ ಒಯ್ದ ||1||

ಸಿಂಧು ಬಲ್ಲಾಳಗಾದನು ಕಂದ

ಒಲ್ಲೆಂದ ಸೂಳೆಯ ಎಂಜಲ ತಿಂದ

ಕುಂದದೆ ಕಳವಿಗೆ ತಾ ಬಂದ

ಹಂದರದೊಳು ಮುಡಿಯ ಕೊಯ್ದು ಕೊಡು ಎಂದ ||2||

ರಂಡೆಗೆ ಒಲಿದು ಮುತ್ತೈದೆ ಎಂದ

ಮಿಂಡೆ ಉಗುಳಿದರೆ ಸುಖವೆಂದ

ಕಂಡು ಕೇಳಿರಿ ಈತನ ಚಂದ

ಪ್ರಚಂಡ ನೀರಲಕೆರೆಯನಾನಂದ ||3||

ಈ ದೇವರಲ್ಲದೆ ಇನ್ನಾವ ದೇವರಲ್ಲಿದೆ

ಕಾದಾಡಿ ಸಾಯುವುದೇಕವ್ವ

ಹಾದಿ ಕಲ್ಲಿಗೆ ಹೋದರೆ ಹರಿದೀತೆ ಪಾಪವು

ಭೇದಾತೀತನೊಳಗಿಹುದು ನಮ್ಮವ್ವ ||ಪ||

ಕಲ್ಲುಮಣ್ಣು ಕಟ್ಟಿಗೆಗಳನ್ನೆಲ್ಲ ದೇವರ ಮಾಡಿ

ದಲ್ಲೇನು ಕಂಡೆ ನಮ್ಮವ್ವ

ಕಲ್ಮೆತ್ತಿ ಕಣ್ಣುಗಂಡುದ ಒಮ್ಮೆ ಹೇಳುವಲ್ಲಿ

ಬಲ್ಮೆಯಾರದು ತಿಳಿಯವ್ವ

ಜುಲ್ಮಿಲ್ಲ ನೀ ಕೇಳು ಆಲ್ಮರಗು ಲಾಲಿಸು ಮತ್ತೆ

ಆಲ್ಮತ್ತಿದ ಆಲ್ಪರಿಬೇಡ ನನ್ನವ್ವ ||1||

ಕಂಚು ತಾಮ್ರ ಬೆಳ್ಳಿ ಮಿಂಚಿಟ್ಟು

ಬೊಂಬೆಗೆ ಹಂಚಿಕೆ ಹೆಸರಿಟ್ಟೆಯವ್ವ

ಪಂಚಾಳ ಮಾಡಿದ ಬಾಳ ವಂಚನೆಯಿಲ್ಲದೆ

ಹಂಚಿಕೆಯಲಿ ಕೊಂಡೆಯವ್ವ

ಸಂಚಿತವಾದ ದ್ರವ್ಯವ ಅದಕೆ ಕೊಟ್ಟು

ಮುಂಚೆ ಈ ದೇವರು ಪಂಚೇರಾದವವ್ವ ||2||

ಖಂಡಿತನೆನಿಸಿದ ಅಖಂಡ ತೇಜೋ ರೂಪ

ಮಂಡೆಯೊಳು ಮರೆಯಾಗ್ಯಾನವ್ವ

ಪುಂಡರೀಕ ಭವಾಂಡ ಪಂಡಾಂಡ

ಬ್ರಹ್ಮಾಂಡಕ್ಕೆ ತ್ರೈಬಾಗಿಲವ್ವ

ಪಂಡಿತನೆನಿಪ ಉದ್ದಂಡ ನೀರಲಕೆರೆ

ಗಂಡನೊಬ್ಬನ ಕಂಡೆ ಇಬ್ಬರಿಲ್ಲವ್ವ ||3||

ಈ ವೈಕುಂಠ ವಿಷ್ಣು ದೂರವೆನುತಿರ್ದೆನು

ಶ್ರೀರಂಗಶಾಯಿ ಎಲ್ಲೊ ಎನುತಿರ್ದೆನು

ಬಾಯಿ ಮಾತು ಶಾಸ್ತ್ರದೊಳು ಊಹಿಸಲು ಕೇಳಿ

ಮಾಯಾ ಕಲ್ಪಿತದಿ ಬಿದ್ದು ಬಹು ಕಲ್ಪನೆಗಳಿಂದ ||ಪ||

ನಳಿನ ನಾಭನ ಕಂಡೆ ಕೇಳಮ್ಮ

ಕೊಳಲನೂದುವುದ ಕಂಡೆ

ಹೊಳೆವ ಆಕಾಶದ ಹೃದಯಾಬ್ಜ ನಿಳಯದೊಳು

ಕಳೆಗೊಂಡು ಓಲೈಸುವ ಕೃಷ್ಣವರ್ಣನನು ||1||

ಕಣ್ಣಿನೊಳು ಕಣ್ತೆರೆದು ನೋಡಮ್ಮ

ಕಣ್ಣಿನೊಳು ಅವನರಿದೆ

ಪುಣ್ಯವಶದಿ ಚಕ್ರಪಾಣಿ ಚತುರ್ಭುಜ

ಪನ್ನಗ ಶಯನ ಮುಕುಂದನೆನ್ನೊಳು ಕಂಡೆ ||2||

ಗಡಿಯು ನೀರಲಕೆರೆ ಮಂದಿರ ನೋಡಮ್ಮ

ಜಡಜ ನೇತ್ರ ಜಡಿದ ಕೌಸ್ತುಭ ಮಂದಾರ

ಬಿಡದ ಅಗಣಿತ ನಾಮನೊಬ್ಬ ಪಂಚಾಕ್ಷರ

ನೋಡಲ ಭೇದದಿ ವಿಷ್ಣುಶಿವರೆಂಬ ತೊಡಕಿಲ್ಲ ||3||

ಈ ಪರಿ ಸಂಸಾರ ತಾಪದೊಳು ಕುದಿಯದೆ

ಭಾಪು ಸದ್ಗುರುವಿನ ಸೇವಿಸುತನು ದಿನ

ಆ ಪರಬ್ರಹ್ಮ ಚಿದ್ರೂಪವರಿ ಸಾಪು ಮಾಡುವ ಜನ್ಮ ವ್ಯಾಪಾರ

ಕೋಪ ಪಾಪ ಪುಣ್ಯಗಳನು ಕಳೆಯೋ ||1||

ತನು ಸಾಕ್ಷಿಕ ನಿನ್ನ ಚೈತನ್ಯ

ಅನಘಶೃತಿ ಜ್ಞಾನ ಬಲದನುಕೂಲ

ಮನದೊಳು ತಣಿದು ಹೃದಯದಿ ಮಣಿದು

ತೃಪ್ತಿಯಲಿ ಕುಣಿದು ಮುಕುತಿಯ ಸೈಪರಿ ||2||

ಹೆಚ್ಚಿನ ನೀರಲಕೆರೆ ಪಶ್ಚಿಮಗಿರಿ

ನಿಶ್ಚಲ ಗುರು ನಿರಂಜನನ ಮಚ್ಚು ಮಾಡಿಕೊ

ಸಚ್ಚಿದಾತ್ಮನ ನಚ್ಚಿನ ಭಕ್ತಿಯದು

ಹೆಚ್ಚಿ ಭಾವದೊಳು ಈ ಪರಿ ||3||

ಎಷ್ಟು ಬೇಡಿಕೊಂಡರೂ ಒಲಿವಳಲ್ಲ ಕಾಳಿ ಬಹಳ

ಕಷ್ಟವೈತಿ ಜ್ಞಾನಶಕ್ತಿಯ ಮುಟ್ಟಿ ಪೂಜೆಯ ಮಾಡುವವರಿಗೆ ||ಪ||

ಗಳಿಲನೆ ಭವಸಾಗರವ ದಾಟೆಂಬುತಾಳೆ ಅಲ್ಲಿ

ಬಲುಮೆಯುಳ್ಳ ರಕ್ಕಸರುಂಟೆಂಬುತಾಳೆ ಅವರ

ಬಲವನೆಲ್ಲ ಹೀರಿಕೊಂಡೇನೆಂಬುತಾಳೆ

ಲಲನೆಯೋರ್ವಳ ಸಂಗದಲ್ಲಿ ಲಲನೆಯಾಗಿದ್ದರೆ ನಿನ್ನ

ಲಲನೆಯಾಗಿ ಹಗಲು ಇರುಳು

ಒಲಿದು ಇದ್ದೇನೆಂಬುತಾಳೆ ||1||

ಆರು ಲಿಂಗ ಪೂಜೆಯ ಮಾಡೆಂಬುತಾಳೆ ಅಲ್ಲಿ

ಆರು ಮಂದಿ ದೇವತೆಯರುಂಟೆಂಬುತಾಳೆ ಅದಕೆ

ಆರು ವರ್ಣದ ಅಂಗ ಉಂಟೆಂಬುತಾಳೆ

ಆರು ಲಿಂಗಕೆ ಆರು ಸ್ಥಲವು ಮೀರಿದ ಪ್ರಸಾದ ಸವಿದರೆ

ನಾರಿಯಾಗಿ ಹಗಲು ಇರುಳು

ಸೇರಿಕೊಂಡೇನೆಂಬುತಾಳೆ ||2||

ಅಷ್ಟದಳದ ಮಂಟಪವ ರಚಿಸೆಂಬುತಾಳೆ ಅಲ್ಲಿ

ನಿಷ್ಠೆಯೆಂಬ ಹಾಸಿಗೆಯ ಹಾಸೆಂಬುತಾಳೆ

ಅಷ್ಟ ಪ್ರಣವ ಜ್ಯೋತಿಯ ತುಂಬೆಂಬುತಾಳೆ

ಇಷ್ಟಪ್ರಾಣ ಭಾವದಲ್ಲಿ ಗಟ್ಟಿಯಾಗಿದ್ದರೆ ನಿನ್ನ

ಪಟ್ಟದ ರಾಣಿಯಾಗಿ ನಿನ್ನ

ಮುಟ್ಟಿಕೊಂಬೆನೆಂಬುತಾಳೆ ||3||

ಅಂಗಲಿಂಗ ಪೂಜೆಯ ಮಾಡೆಂಬುತಾಳೆ ನೀನು

ಜಂಗಮನಾಗಿರಬೇಕೆಂದೆಂಬುತಾಳೆ ನೀ

ಭೃಂಗಿಯಾಗಿ ನಾಟ್ಯವನಾಡೆಂಬುತಾಳೆ

ತುಂಬ ನೀರಲಕೆರೆ ಮಂಗಳಾಂಗ ಪಂಚಾಕ್ಷರಗೆ ನಾನ

ರ್ಧಾಂಗಿಯಾಗಿ ಹಗಲು ಇರುಳು

ಹೊಂದಿಕೊಂಡೇನೆಂದೆಂಬುತಾಳೆ ||4||

ಎಲ್ಲಾನು ಬಲ್ಲಿ ಪ್ರಪಂಚದಿ ಬಿದ್ದಿ

ಎಲ್ಲಿ ಅರುವಿನ ಸುದ್ದಿ

ಕಲ್ಲು ದೇವರಲಿ ಇಲ್ಲದ ಕಲ್ಪಿಸಿದ

ಬಲ್ಲಿದ ಕಾಯಯ್ಯ ಎಂದು ಅಳುತಿದ್ದಿ ||ಪ||

ಕಾಯವು ನೆಚ್ಚಿಗಿ ಇಲ್ಲವೆಂದು ಮಾತಾಡಿ

ಬಾಯ ಮಾತಿನ ಖೋಡಿ

ಮಾಯಾ ಮದವ ಬಿಡದೆ ಮಡದಿಯ ಕೈಗೂಡಿ

ಗಾಯಕೆ ನೊಣದ ಪರಿ ಆಯಾಸಪಡುತಲಿ

ನೋಯದೆ ಬರುತಿಹ ಪರಕೆ ಓಡಾಡಿ ||1||

ಜ್ಞಾನದಿಂದರಿದೆ ನನ್ನ ನಾನಂತಿ

ಏನು ತಿಳಿಯದೆ ಕುಂತಿ

ಮಾನಾಪಮಾನವೆ ನನಗಂತಿ

ಸ್ವಾನುಭವದ ಸುಖ ನೀಗಿ ನಿರಂತರ

ಮಾನಿ ತಾ ಯಮ ಕೇಳಿದರೇನಂತಿ ||2||

ಗುರುವ ಹೊಂದಿ ಗುರಿಯ ಮರೆದು ಮತ್ತುಳಿದಿ

ಅರಿಯದೆ ಸವಿಗಳೆದಿ

ಬರಿಯ ಭ್ರಮೆಗಾಡಿ ದುಃಖವ ತಳೆದಿ

ಪರಮ ಗುರು ಪಂಚಾಕ್ಷರನ

ಅರಿಯದೆ ನಿಜ ಸುಖಾನಂದವ ಮರೆದಿ ||3||

ಎಲ್ಲಿಗೆ ಹೋದರೂ ಅಲ್ಲಿ ಇಲ್ಲೆಲೊ ಮುಕ್ತಿ

ಬಲ್ಲಿದ ಗುರುವಿನ ಅರಿಯದವಗೆ

ಕಲ್ಲಾವುಲ್ಲಿಯಲಿ ಕೆಟ್ಟು ಹೋಗುವನು

ಅಲ್ಲಮನಾಟವು ತಿಳಿಯದಲೆ ||ಪ||

ಹುಡುಗರೊಡನೆ ಗುದದಿಮ್ಮಡಿ ಒತ್ತುವ

ತುಡುಗತನವ ಮಾಡಿದರಿಲ್ಲ

ಬಡಿವಾರದಿ ಕಿವಿ ಕಣ್ಗಳ ಮುಚ್ಚುತ

ಪಿಡಿದು ಮೂಗನೊತ್ತಿದರಿಲ್ಲ

ಗುಡುಗು ಮಿಂಚು ಪರಿಪರಿಯ ಬೆಳಗಿನೊಳು

ನುಡಿವ ಸ್ವರವ ಕೇಳಿದರಿಲ್ಲ

ದೃಢ ವಿವೇಕದಿ ಒಡಲೊಳು ಹುಡುಕುತ

ಹಡಕಿ ನಾಯಿಯಂತೆ ಚರಿಸಿದರಿಲ್ಲ ||1||

ಮೂರು ವರ್ಣದಿ ಸೇರಿದೆನೆನುತಲಿ

ಧೀರತನವ ಮಾಡಿದರಿಲ್ಲ

ಕ್ರೂರ ಕರ್ಮವನು ಗೆಲಿಯದೆ ಮುದ್ರೆ

ಮೂರು ಸಾಧಿಸಿದರೆ ಇಲ್ಲ

ಚೋರನಂತೆ ಬರಿ ಮಿಡುಕಾಟಲ್ಲದೆ

ಮೀರಿದುನ್ಮನಿ ದೊರೆಯಲಿಲ್ಲ

ಘೋರ ನರಕದೊಳಗಿರುವನಲ್ಲದೆ

ಪಾರಮಾರ್ಥ ಪಥ ದೊರೆಯಲಿಲ್ಲ ||2||

ಸಣ್ಣ ಮನೆಯ ಭ್ರೂಮಧ್ಯದಿ ದೃಷ್ಟಿಯ

ಚೆನ್ನಾಗಿ ನಿಲಿಸಿದರಲ್ಲಿಲ್ಲ

ಕಣ್ಣಿನೊಳಗೆ ಕಣ್ಣು ಕಾಣುವೆನೆನುತಲಿ

ಬಣ್ಣಿಸಿ ಕಂಡಲ್ಲೇನಿಲ್ಲ

ಹುಣ್ಣಿವಿ ಚಂದ್ರನ ಕಳೆಯ ಬಣ್ಣದೊಳು

ಪುಣ್ಯಪುರುಷ ಪಂಚಾಕ್ಷರದೇವ

ರನ್ನು ಹೊಂದೆ ಇನ್ನು ಭವ ನಿಮಗಿಲ್ಲ ||3||

ಎಂಥ ಚಲುವಿಕಿ ನೋಡಿದೆ ಶಿವನಿಗೆ

ಎಂಥ ಮಗಳ ಕೊಟ್ಟೆ ಗಿರಿರಾಜನೆ

ಚಿಂತಿಸಲಿಲ್ಲ ಸಿರಿವಂತಿ ಗೌರಿಯ ಕೊಟ್ಟು

ಕುಂತಿ ನೀ ಧೈರ್ಯದ ಮಹತೇಜನೆ ||ಪ||

ಮೋರೆಗಳೈದು ಮೂರೈದು ಕಣ್ಣುಗಳಮ್ಮ

ತೋರುವ ಕೆಂಜಡಿ ನೋಡಮ್ಮ

ಸಾರಿ ಸುಡುಗಾಡ ಮನೆ ಸೇರಿ ಬಾಳುವ

ಶಿರಮಾಲೆ ಸರವ ನೋಡಮ್ಮ

ಮೀರಿ ಸರ್ಪಾಭರಣವೀ ರೀತಿ ಮೈಬೂದಿ

ಧಾರುಣಿಯೋಳು ಭಿಕ್ಷಕಾರಿಯಮ್ಮ ||1||

ಜಡೆಯಳೊಬ್ಬಳು ಸೇರಿ ತೊಡೆಯಳೊಬ್ಬಳು ಸೇರಿ

ತೊಡರಿನ ಜಡ ರೀತಿ ನೋಡಮ್ಮ

ಹಿಡಿದ ಕೈ ತಲೆಯೋಡು ಪಿಡಿದು ತಿರಿದುಣುವ

ಪೊಡವಿ ಪಾವನ ಬಡವ ನೋಡಮ್ಮ

ಗಡಿ ನೀರಲಕೆರೆ ತಕ್ತಿನ ಒಡೆಯ ಪಂಚಾಕ್ಷರನ

ಅಡಿಯ ಹೊಂದಲು ಮುಕ್ತಿ ಕೊಡುವನಮ್ಮ ||2||

ಎಂಥ ಗಾರುಡಿಗ ಗುರುರಾಯ ಕಾಂತೆ ನಿರ್ಮಾಯ

ನಿಂತು ಆಡಿಸುವ ದೇಹದಲಿ ನೋಡಮ್ಮ ತಂಗಿ ||ಪ||

ಬಾಲತ್ವ ಯೌವ್ವನ ಮುಪ್ಪುಗಳು ಕೇಳು ಅವನಿಗಿಲ್ಲ

ಕಾಲು ಕೈ ಮೊದಲಿಲ್ಲ ಆರೂ ಅರಿಯರಲ್ಲಾ

ಮೇಲು ಮಾತುಗಳು ಬಹು ಬಲ್ಲಾ ಆಲಿಸಲು ಮತ್ತೆ

ನಾಲಿಗೆ ಇಲ್ಲದಲಿ ನುಡಿಯಬಲ್ಲ ||1||

ನಡೆಗೆ ಚೈತನ್ಯ ನುಡಿಗೆ ಸಾಕ್ಷಿ ಹಿಡಿದರೆ ಸಿಗದಿರ್ಪ

ಒಡಲಿಗೆ ಒಡಲಾಗಿ ನಿಂತಿಹನು

ಎಡರರಿಯದೆ ಎಡಬಲ ತುಂಬಿರುವ ದೃಢ ನೇತ್ರದಿ ಮೆರೆವ

ಹಿಡಿದು ಕುಣಿಸ್ಯಾಡುವ ಜಡತನುವ ||2||

ಸಾವು ಹುಟ್ಟಿ ಎಂದಿಗೂ ಆವ ಕಾಣ ಜೀವಜಾಲಕೆ ತ್ರಾಣ

ಕೇವಲ ನಿಸ್ಸಂಗನೆ ನಿರ್ವಾಣ

ಓಮಕ್ಷರಕೆ ಅವ ನಿಜತ್ರಾಣ ಕಾವನು ಜಗಜಾಣ

ಭಾವಿಸೆ ಪ್ರಾಣಂಗಳಿಗೆ ಅವ ಪ್ರಾಣ ||3||

ಅಂಡ ಬ್ರಹ್ಮಾಂಡದೊಳಡಕವಾಗಿ ಪಿಂಡದಿ ಪೂರ್ಣವಾಗಿ

ಖಂಡಿತಮಿಲ್ಲೆನಿಸಿ ಕಾಣಿಸುವ

ಗಂಡು ಹೆಣ್ಣುಗಳೊಳು ಏಕವಾಗಿ ಕಂಡರೆ ಎರಡಾಗಿ

ಚಂಡ ಪ್ರಕಾಶ ಉನ್ಮನಿಯೋಗಿ ||4||

ಶಿಸ್ತಿನ ಗಡಿ ನೀರಲಕೆರೆಗೆ ಓಡಿ ವಿಸ್ತರಿಸಿದೆ ನೋಡಿ

ಪುಸ್ತಿಲಿ ನಡುಗೇರಿಯಲಿ ಮನೆ ಮಾಡಿ

ವಸ್ತು ಪಂಚಾಕ್ಷರನ ಒಡಗೂಡಿ ಮಸ್ತಿಲಿ ಚರಿಸ್ಯಾಡಿ

ಕುಸ್ತಿಲಿ ಕಡಿದು ಹಾಕಿದೆ ಭವಜಾಡಿ ||5||

ಎಂಥಾತ ಗುರುನಾಥನು ಬಹಳಂತಃಕರಣುಳ್ಳಾತನು ||ಪ||

ಕಾಂತೇ ನೀ ಬಾರೆಂದು ಏಕಾಂತಕೆ ಕರೆದೊಯ್ದು

ಎಂಥ ಮಾತ ಹೇಳಿದನು ||ಅ.ಪ||

ಸಾಧುರನು ನೆನೆಯೆಂದನು ಅವರ ಪಾದಕ್ಕೆ ಎರಗೆಂದನು

ಸಾಧು ಸತ್ಪುರುಷರ ಭೇದವ ತಿಳಿದರೆ ಬಾಧೆ ನಿನಗಿಲ್ಲೆಂದನು ||1||

ಆರು ಗುಣ ಅಳಿಯೆಂದನು ಮತ್ತೆ ಮೂರು ಗುಣ ತಿಳಿಯೆಂದನು

ಆರು ಮೂರೊಂಭತ್ತು ಭೇದವ ತಿಳಕೊಂಡು ಪಾರಾಗು ನೀನೆಂದನು ||2||

ಬಯಲಿಗೆ ಬಯಲೆಂದನು ನಿರ್ಬಯಲೊಳಗಾಡೆಂದನು

ಬಯಲು ನೀರಲಕೆರೆಯಾಲಯದೊಳು ನೀ ಲೀಲೆಯೊಳಿರು ಎಂದನು ||3||

ಏನು ಸಂಸಾರ ಸುಖದ ಅರ್ತಿ

ಹೀನ ವಿಷಯಂಗಳೊಳು ಬೆರೆತಿ ||ಪ||

ಸ್ವಾನುಭಾವವ ಮೆರೆತಿ

ಕಾನನವ ಹೊಕ್ಕು ಇರುತಿ

ಮಾನಗೆಡಿಸುವ ನಿಯಮ

ವೇನು ಮುಂದೆ ಅಪಕೀರ್ತಿ ||1||

ಆರು ನಾನೆಂದು ಅರಿಯಲಿಲ್ಲ

ನಾರಿಸುತ್ತ ನಿಲಯಾದಿಗಳ ನೆಚ್ಚಿದೆಯಲ್ಲ

ಸೇರಿ ಸತ್ ಶರಣರ ಅಡಿದಾವರೆಯ ಮೆರೆದೆಯಲ್ಲ

ಪಾರಮಾರ್ಥ ಪ್ರಭಾವ ದೊರೆಯಲಿಲ್ಲ ||2||

ಶಿವನ ನೆನೆಯದ ಶೀಲವಂತ

ಭುವನದೊಳು ಬಂದು ಮಾಡಿದುದೇನು ಭ್ರಾಂತ

ಸವಿದುಂಡಿ ಹಸಿವಿಗಾಲ್ಪರಿದು ಹುಳಿ ಸವಿಯಂತ

ಭವಭವದಿ ಬಳಲಿ ಬಾಯಾರಿ ಕೆಡುತಿರುವಂಥ ||3||

ಸಾಮರ್ಥ್ಯ ಗುರು ನೀರಲಕೆರೆಯ ಸ್ವಾಮಿ

ನೇಮರಹಿತನೆ ಕೇಳಲರಿಯಾ

ಆ ಮಹಾ ಪುರುಷನಿಂದ ಮಾಯೆ ಕರಕರಿಯಾ

ಹಮ್ಮಿಸದೆ ಭೂಮಿಯೊಳು ಮನುಜನಾಗಿರುವಿಯಾ ||4||

ಏನೆಂದು ಹೇಳಲಿ ಮಾನಿನಿ ಕೇಳೆಲೆ ||ಪ||

ಶಬ್ದವ ಕಳೆದು ನಿಶ್ಯಬ್ದ ಬ್ರಹ್ಮಸುಖವಬ್ದ

ಸ್ತಬ್ಧದೊಳು ಲುಬ್ಧವಾದುದ ಏನೆಂದು ಹೇಳಲಿ ||1||

ಸೊಲ್ಲಿಸೆನೆನಲು ಇಲ್ಲದ ತೊಡಕು ನೀ ಬಲ್ಲವಳಲ್ಲಾ

ಇಲ್ಲವಲ್ಲ ಎರವಿಲ್ಲವೆಂದು ತಿಳಿಯೆ ಏನೊಂದು ||2||

ಸ್ಥಿರ ನೀರಲಕೆರೆ ಗುರುವರ ಪಂಚಾಕ್ಷರ

ವರನಡಿಬಿಡದೆ ಅರಿವ ಸುಖವ ಏನೆಂದು ಹೇಳಲಿ ||3||

ಏನಿದು ಬಹಿಷ್ಕಾರ ಖೋಡಿ ಅನುಮಾನಿಸದೆ ನೋಡಿ ||ಪ||

ಆನೆ ಸಿಂಹಗಳೆರಡು ಕೂಡಿ ತಾನಾಗಿ ಬಾಳ್ವವೆ

ಭಾನು ಬರಲು ಕತ್ತಲಾಗ್ವದೆ ಜಗದೊಳು ||ಅ.ಪ||

ಕೋಗಿಲೆಗೆ ಕಾಗೆ ಸರಿಯೆ ಖಗರಾಜನೊಳು ಸೆಣೆಸಿ ಗೆಲುವುದೆ

ಭೋಗಿ ಮರಿಯೆ ಈಗ ಸಾಗರಕೀಡೆ ತೊರೆಯೆ

ಸಾಗಿ ಸುಡುವುದು ಗಾಳಿಗೀಡಾಗಿ ಅಗ್ನಿ ನುಂಗಿ

ಗೂಗಿ ಸಂಚಾರ ಹೋಗದೀಗ ದಿನ ಕೇಳೋ ||1||

ಮರುತನ ಗೆಲಿವುದೆ ಮೋಡ ದುರಿತ ಕೋಟಿ ಈಡಾಗ

ಲರಿಯದು ಜ್ಞಾನಕ್ಕೆ ಮೂಢ ಅರಿತುಕೋ ಮರೆಯದೆ ಗಾಢ

ಅರಸ ಆನೆಯನೇರೆ ಕಿರಿನಾಯಿ ಬೊಗಳ್ದೊಡೆ ಸರಿಯಾಗ್ವದೆ

ಪರಿಯರಿದು ಅರಿಯಲಿ ಏನಿದು ಬಹಿಷ್ಕಾರ ಖೋಡಿ ||2||

ಗೊರಲೆಗಳುಕುವುದೇನೋ ಬುರಲಿ ಕುರಿ ನಿಲ್ಲುವುದೆ ವೃಕದು

ಸುರಿಗೆ ಎದುರಿನಲಿ ಕರಡಿಯೊಳು ಕಪಿ ಗೆಲ್ಲದಿರಲಿ

ತಿರಿದುಂಡು ಬಾಳುವೆ ನೀನು ಸಿರಿವಂತನರಿಯೊ

ತರವಲ್ಲೊ ಬಿರಿಮಾತು ಮರೆ ಮತ್ತಾಡಬೇಡವೊ ||3||

ಹುಲಿಯನಂಜಿಸುವದೆ ಹುಲ್ಲೆ ಬಲುಗಜವನಳುಕಿಸುವದೆ

ಸಲಗ ತಾನಿಲ್ಲಿ ಜಲದಿ ಮೀನು ಬಕಗೀಡೆ ನಿಲ್ಲಿ

ಇಲಿಗಳುಟ್ಟುಳಿಗಂಜಿ ನಿಲ್ಲದೋಡುವುದೆ

ಬಲಹೀನ ಗೆಲಿವನೆ ಕಲಿಪಾರ್ಥಗೆದುರಾಗಿ ||4||

ಗಡಿ ನೀರಲಕೆರೆಯಾಳ್ದ ಭೂಪ ಕಡು ಶೌರ್ಯ ಪ್ರತಾಪ

ಬಿಡದೊಲಿವರ ಜನ್ಮ ಸಾಪ

ಕಡುಪಾಪ ಕುಟಿಲದೊಳಾಡ್ದರೆನಲು ಸಹಸ್ರ

ಗಡಿಗೆಗೆ ಒನಕೆ ಸಾಕು ಇನ್ನು ಅಡಿಗಡಿಗೆ ಎಚ್ಚರ ||5||

ಏಕೆ ಬೇಕು ದೇವರ ದೇವ ಸಾಕು ಮಾಡು ಮಾಯಾ ಭವವ ||ಪ||

ಕಾಕುಜನರು ಗೈದಿಹ ಬಾಧಾ ಅನೇಕವಿಹುದು ಸೈರಿಸಲೇಸು

ಮೂಕನಾಗಿರುವುದು ಲೇಸು ಸಾಕು ಮಾಡು ಮಾಯಾ ಭವವ ||1||

ನಿನ್ನ ಸೇವೆಗೈಯುವ ಎನಗೆ ಬನ್ನಗೊಳಿಸೆ ನಿನಗಿದು ಘನವೆ

ಸನ್ನುತಾತ್ಮ ಮುನಿವರ ನೀನು ಸಾಕು ಮಾಡು ಮಾಯಾಭವವ ||2||

ಪರಮನೀರಲಕೆರೆ ವಾಸ ಮರೆವರೇನೈ ಮುಕ್ತಿಕೋಶ

ಮರಣಹರಣ ಶರಣಪೋಷ ಸಾಕು ಮಾಡು ಮಾಯಾ ಭವವ ||3||

ಓದು ಗುರು ಸಾಲೆಯ ಎಲೊ ಎಲೊ ಮಾಡು ಗುರು ಭಜನೆಯ ||ಪ||

ಘನವೆಂಬ ಗಲಗಿನ ಮಠವೆಂಬ ಸ್ಥಲದಲ್ಲಿ ನಮ್ಮ

ಕಟಕಟ ಮಾಡುವ ಗುರುಸಿದ್ಧನ ಪಾದದಲ್ಲಿ ||ಅ.ಪ||

ಎನ್ನಲ್ಲಿ ಭೇದವುಂಟು ನಿನ್ನಲ್ಲಿ ಭೇದವಿಲ್ಲವೆ

ನಮ್ಮ ಸಾಧು ಸತ್ಪುರುಷರ ಪಾದವ ಪಿಡಿದು ಓದೆಲೆ ||1||

ನೀನು ನಾನೆಲೆ ಮನವೆ ನಾನು ಉಳಿಯಲಿ ಜೀವವೆ

ನಾನು ನೀನೆಂಬ ಉಭಯ ಭೇದವ ತಿಳಿದು ಓದೆಲೆ ||2||

ಗಡಿಯ ನೀರಲಕೆರೆ ಒಡೆಯ ಪಂಚಾಕ್ಷರನ

ಬಿಡದೆ ನೀ ಭಜಿಸುತ ಗುರುಸಿದ್ಧನ ಪಾದ ಓದೆಲೆ ||3||

ಓಂ ನಮಃ ಶಿವಾಯ ಎನ್ನಿರೊ ವೈಯಾರದೊಳು

ಓಂs ನಮಃ ಶಿವಾಯ ಎನ್ನಿರೊ

ಓಂ ನಮಃ ಶಿವಾಯೆನ್ನುತ ಅಜಹರಿಸುರರೆಲ್ಲ

ಮನ್ನ ಕೈವಲ್ಯ ಪಡೆದರೆಂಬುದ ಕೇಳಿ ||ಪ||

ಮಾಸ ಪಕ್ಷಗಳೇತಕೆ ಉಪವಾಸದೊಳು

ಧ್ಯಾಸ ದಂಡನೆಯೇತಕೊ

ನಾಶವಾಗುವ ದೇಹ ವಾಸನೆ ಹಿಡಿಯದೆ

ಈಶನ ನೆನೆಯಿರೊ ಮೋಸದೊಳಗಲದೆ ||1||

ಜಪ ಮೌನ ವ್ರತವಿಲ್ಲದೆ ತಪಸೆಂಬ

ಕಪಟ ಭ್ರಾಂತಿಗಳಿಲ್ಲದೆ

ಗುಪಿತದೊಳು ಗುರುತಿಟ್ಟು ಉಪಮವರಿಯದೆ

ವಿಪರೀತವಾಗದೆ ಹಗಲಿರುಳೆನ್ನದೆ ||2||

ನಡುನಾಡಿನೊಳು ಗಡಿ ನೀರಲಕೆರೆ

ಮೃಢ ಪಂಚಾಕ್ಷರನಡಿಯ

ಬಿಡದೆ ಏಳು ಕೋಟಿ ಮಂತ್ರಕೆ ತಾಯಿ

ಒಡಲಾದ ಬೆಡಗಿನ ಶಿವಮಂತ್ರ ||3||

ಕಲಿಸಿದ ಹಾದರವೆಂಥಾದ್ದು

ಒಲ್ಲೆನೆಂದರೆ ಮರುಳು ಮಾಡಿದಂಥಾದ್ದು

ನೆಲೆಯರಿಯದಿದ್ದೆ ನೆವನಿಂತಾದ್ದು

ಬಲಿ ಹಾಕಿದ ಬಾಯಿ ಬಾರದಂತಾದದ್ದು ||ಪ||

ಮಾಯ ಹಚ್ಚಿ ಮರೆಯಲಿ ನಿಂದು

ಪಾಯದೊಳು ಏಕಾಂತಕೆ ಬಂದ

ಆಯವರಿದು ಎಳೆದು ಎನಗೆ ಏನೆಂದ

ಕಾಯಗೊಡು ನೀ ಸವಿ ನೋಡು ಬಾರೆಂದ

ನ್ಯಾಯವಾಗಿ ಈ ಊರಿಗೆ ಬರಬಾರದೆಂದ

ಆಯತದ ಬಯಲ ಊರಿಗೆ ನಡೆಯೆಂದ ||1||

ತತ್ವಮಸಿ ಗುಳಿಗಿಯ ಕೊಟ್ಟ

ಮತ್ತೆ ಒಲಿಸಿಕೊಂಡ ತಾ ಬಲು ದಿಟ್ಟ

ಹತ್ತಿತ್ತು ಮನಸಿಗೆ ಬಲು ಕಷ್ಟ

ಎತ್ತ ಹೋಗದಾಯಿತೆನಗೆ ಇಕ್ಕಟ್ಟಾ

ನೆತ್ತಿಗೇರಿಸಿದ ಬಲು ಗುಟ್ಟ

ಹತ್ತಿ ಬೆನ್ನ ತಿರುಗುವಂತೆ ಮಾಡಿಟ್ಟ ||2||

ರಂಬಿಸಿ ಮಾತುಗಳು ಅರಿಯೆಂದ

ಇಂಬಾದ ಮನೆಗೆ ಬಂದಿರು ಎಂದ

ರಂಭೆ ಎನ್ನ ಕೈಗೆ ಸಿಕ್ಕಿಯೆಂದ

ಅಂಬರದ ಮಾಲು ಮೇಲೇರೆಂದ

ಗುಂಭ ನೀರಲಕೆರೆ ದೊರೆ ಬಂದ

ಸಂಭ್ರಮದಿ ಕೂಡಿ ಕೊಂಡಾಡೆಂದ ||3||

ಕನಕಗಿರಿ ನಗರರಸೆ ಕೃಪಾಂಬುಧಿ

ಕನಕಗಿರಿ ನಗರರಸೇ

ಜನನ ದೂರ ಜಗವಾದಿ ಬೀಜ ಘನ

ಮಹಿಮ ಜಗದ್ಗುರು ರಾಜ ದಿಗಂಬರ

ಸ್ಫಟಿಕ ಕಾಂತಿಕಳೆ ಪ್ರಕಟಿಸಿ ನಿಟಿಲಾ

ತಟದಿ ಘಟಿಸಿ ಘಟ ಪರವಶದೊಳಿಹ ||1||

ಅನುವರಿತು ಯೋಗನಂದದ ಸೊಬಗಿನಲಿ

ಝನನ ಝೇಂಕಾರ ನಾದವ ಕೇಳುವ ||2||

ಸೂತ್ರಿಸಿ ಸರ್ವರ ಗಾತ್ರ ಮಧ್ಯದೊಳು

ನೇತ್ರ ನಿಜಾಲಯ ಸೂತ್ರದಿ ಕುಣಿಸುವ ||3||

ತಳ್ಕಿಸುವಾಸನ ಅಳ್ಕದ ವಾಯ್ಗಳ

ಜಳ್ಕುವ ಸುಖ ಬಾಳ್ಕಳವಳ ಎಸೆದಿಹ ||4||

ನೀರಲಕೆರೆ ಗಡಿ ಸೇರಿಸಿ ಜಗದುಪ

ಕಾರಿಯೆನಿಸಿ ಹಾಲುಂಡು ಚರಿಸುತಿಹ ||5||

ಕರ್ಪುರಾರತಿ ಬೆಳಗಿರಿ ಬಂದು ಸರ್ಪಾಭರಣ ಶ್ರೀ ಸಾಂಬನಿಗಿಂದು

ಮುಪ್ಪುರಾರಿ ಮಹಾಮಹಿಮ ನೀನೆಂದು ತಪ್ಪದೆ

ತನುಮನವಪ್ಪಿತೆಂದು ||ಪ||

ಮಿಂದು ಜ್ಞಾನದ ಮಡಿ ವಸನವನುಟ್ಟು

ಹಿಂದಿನ ವಾಸನೆಯ ಮೈಲಿಗೆ ಬಿಟ್ಟು

ಬಂದು ಚಿತ್ಕಳೆಯ ಕುಪ್ಪಸ ತೊಟ್ಟು

ಹೊಂದಿರಿ ಸುಖಾನಂದವ ಮೈಗೊಟ್ಟು ||1||

ಹೃದಯ ಸದರೆಕೇರಿ ನೋಡುತಲಿ

ನದರಿನೊಳು ಚದುರಿಕೆಯ ಪಾಡುತಲಿ

ಕದಲದ ಚಿತ್ತವು ಹೊದಲದಾಡುತಲಿ

ಬದಲಿಸದೆ ಭ್ರಮೆಗಳೆದು ಪಾಡುತಲಿ ||2||

ಭಕ್ರವತ್ಸಲ ಭವ ದೂರನೆಂದು

ಭಕ್ತಿಮಾನಿ ಭಕ್ತೋದ್ಧಾರನೆಂದು

ಮುಕ್ತಾಲಯ ನೀರಲಕೆರೆ ವರನೆಂದು

ಭಕ್ತಿ ಭಾವದೊಳು ಅರಸುತ ಬಂದು ||3||

ಕರ್ಮವೆಂಬುದು ನಿತ್ಯಾಚಾರ ನಿರ್ಮಲವೆ ಗ್ರಹಾಚಾರ ||ಪ||

ದುರ್ಮತಿಗಳಿಗಿದು ಚರ್ಮ ತೊಳೆಯುವ ಧರ್ಮ

ಮರ್ಮವರಿದ ಮಹಾತ್ಮರಿಗೆ ಧರ್ಮವಿದು ಸತ್ಯ ಶಾಶ್ವತ ||1||

ಮಲಮೂತ್ರಪೂರಿತ ಹೊಲೆಮಯ ಕಾಯ

ಬಲಿದ ಮಾಂಸದ ಗಟ್ಟಿ ಮಲಿನದ ಕೋಡಿ ದೇಹ ||2||

ನೀರಲಕೆರೆ ಗುರುವರನ ಇರವ ಅರಿದಿರ್ಪ

ಪಾರ ಮಹಿಮನೆನಿಪ ಪಂಚಾಕ್ಷರಗೆ ಪರವಶ ಪರತರಗೆ ||3||

ಕರ್ಪುರಾರತಿ ಬೆಳಗಿರೇ ಕಾಮಿನಿಯರೆಲ್ಲ

ಸರ್ಪಭೂಷಣ ಸಾಂಬಗೆ ||ಪ||

ಒಪ್ಪಿಮನದಲಿ ತಪ್ಪದನುದಿನ ಕಪ್ಪುಗೊರಳಗೆ ||ಅ.ಪ||

ತನುವೆಂಬ ತಳಿಗೆಯೊಳು ಮನದ ಆರತಿ ಮಾಡಿ

ಘನಭಕ್ತಿ ತೈಲವ ನೀಡಿ ದಿನಪನುದಯದ ಜ್ಯೋತಿ ಮುಟ್ಟಿಸಿ

ಅನುಪಮಾದ್ವನೆನಿಪ ಗುರುಪದ ನೆನೆ ನೆನೆದ ನಿತ್ಯದಿ

ಮುನಿಗಳೊಡೆಯಗೆ ಮೌನಿಗೀಗಲೆ ||1||

ಸ್ಥೂಲ ಸೂಕ್ಷ್ಮದ ಕಾರಣ ಮೇಲುಮಹಲನೇರಿ ನೀಲ

ನೀಲನಿಜ ತೋರಿ ಸಾಲುಗೊಂಡು ಅನುಕೂಲ ಶಶಿರವಿ

ಜ್ವಾಲದಂದದಿ ಬಾಳಕಳೆಗಳ ಸೋಲಿಸುವ ಸುಖರೂಪ ಶಿವಗೆ

ಸಾಲಲೆಸೆದಿಹ ಶೀಲೆಯರೆಲ್ಲರು ಬಾಲಚಂದ್ರ ಧರಗೆ ಬೇಗದಿ ||2||

ಧರೆಯೊಳಧಿಕ ಗಡಿಗ್ರಾಮ ನೀರಲಕೆರೆ ಪರಮಧಾಮ

ಸ್ಥಿರಕರ ಪಂಚಾಕ್ಷರೀಶನ ಕರಮನ ಸ್ಥಿರಭಾವ ಘನ

ತುರೀಯ ಹರ್ಷದಿ ಕಂಡು ತರುಣಿನಿಕರ ಒಲಿದು

ಒಲಿದು ಪಾಡುತ ಲಲನೆಯರು ನಗುತ ವಂದಿಸಿ ||3||

ಕರ್ಪುರಾರತಿ ಬೆಳಗಿರೇ ಕರುಣಾಳು ದೇವಗೆ

ಕರಿವದನ ಜೀವಗೆ ||ಪ||

ರತ್ನ ಕಳೆಯ ನಿಳಯದೊಳು ಘನ ರತ್ನಕಾಂತಿಯ

ರತ್ನದಂತೆ ಹೊಳೆವ ಮಹಾರತ್ನ ಕಿರಣಗೆ ಚಿಜ್ಯೋತಿ ವರ್ಣಗೆ ||1||

ತಾಲಮೂಲ ದ್ವಾದಶ ನೀಲತೋಯ ನಾದಗೆ

ನೀಲ ಸುಣಿಲ ಮಂಟಪದ ಮರಿಯಾದ ಬೋಧಗೆ ಭಕ್ತ ವಿನೋದಗೆ ||2||

ಪೊಡವಿಗುತ್ತಮ ಗಡಿಯು ನೀರಲಕೆರೆವರೇಶಗೆ

ಬಿಡದೆ ಮುಡಿ ಬಾಗಿ ಭಕ್ತಿಗೊಡೆಯ ಭಾಸಗೆ ದೃಢನಾಮಧೀಶಗೆ ||3||

ಕಾಯ ಪುರುವನಾಳ್ವ ಮಾಯಕಾರ್ತಿಯ ಮನದೊಳರಿಯೊ

ದೇವದೇವರಾದಿ ಮೂರ್ತಿಯ ಜಾವಜಾವಕೆ ಕರೆಯೊ ||ಪ||

ನೇತ್ರದಿ ಪ್ರತಿ ನೇತ್ರವು ಬಲಿದು

ಸೂತ್ರದಲಿ ಸುಳಿದು ಹಿಡಿಯೊ

ಗಾತ್ರವ ಮರೆದು ಸಹಸ್ರದಳ ಸತ್

ಪಾತ್ರಳ ಕೈಯ ಹಿಡಿಯೋ ||1||

ಏಳು ಕೊಳ್ಳದ ಮಾಯೆ ಎಂದು

ಭಾಳ ಧ್ಯಾನದಲಿ ಒಲಿಯೊ

ಏಳು ಕೋಟಿ ಮಂತ್ರದೈವಳ

ಹೇಳಿ ಕೇಳಿ ತಿಳಿಯೋ ||2||

ಮುಕ್ತಿ ಮೂಲಳ ಭಕ್ತಪಾಲಳ

ವ್ಯಕ್ತ ಸುಖವನರಿಯೊ

ತಕ್ತ ನೀರಲಕೆರೆ ಮಂದಿರ

ಶಕ್ತಿಯೊಳು ಮೈಯ ಮರೆಯೋ ||3||

ಕಾಂತ ಬೆರೆದನೆನಗೆ ಸಖಿಯೆ

ಶಾಂತ ಮಾಡಿದ ವಾರಿಜ ಮುಖಿಯೆ

ಕಾಂತ ಬೆರೆದನೆನ್ನಂತರಂಗದೊಳು

ಭ್ರಾಂತಿ ಕಳೆದು ಭವ ಮಾಲೆಯ ಕೆಡಿಸಿ ||ಪ||

ಸದರು ಮೇಲು ಮಂದಿರದೊಳು

ಚದುರೆ ಬಾರೆಂದೆನ್ನ ಕರೆದು

ಒದಗಿ ಕೈ ಹಿಡಿಯುವ ರಮಿಸಿ

ಚದರು ಚೌದಳ ಮಂಚದೊಳು

ಸುದತಿ ಕೇಳು ಸದ್ಗುಣಮಣಿ ಎನುತಲಿ

ವಿಧವಿಧದಲಿ ನೆಲೆ ಕಲೆಗಳ ತೋರಿ ||1||

ಆರು ಬಾಗಿಲ ದಾಂಟಿಸಿ ಮೇಲೆ

ಮೂರು ಕೋಣೆಯ ಮಧ್ಯದೈದು

ವಾರಿ ನೋಟದಿ ನೋಡುತಲೆನ್ನ

ಸಾರಿ ತೆಕ್ಕಿಲಿ ಪಿಡಿದಾಕ್ಷಣದಿ

ಭೇರಿ ನಾದ ಝೇಂಕಾರ ಘೋಷದೊಳು

ಮೀರಿದ ಸಂಪದವ ಕೈ ಹಿಡಿಸಿ ||2||

ಸಿದ್ಧಲಿಂಗನೆ ಪಂಚಾಕ್ಷರನು

ಭದ್ರಮಂಟಪ ಬಯಲೊಳು ನಿಂತು

ಶುದ್ಧ ಸ್ಫಟಿಕ ಜ್ಯೋತಿಯ ತೋರಿ

ಮುದ್ದು ಮುಖವ ಪಡಿದಾಕ್ಷಣದಿ

ಶಬ್ದವು ಅಡಗುತಲಿ ಗಾಢವ ಕೇಳುತಲಿ

ಗದ್ದಲಿಕ್ಕಿ ಜನ್ಮವ ಕಳೆದುಳಿದೆ ||3||

ಕಾಣ ಬರುತಾನಕೋ ಸದಾಶಿವ ಕಾಣ ಬರುತಾನಕೋ

ಏಣಲೋಚನೆ ಮೂರು ಕೋಣಿ ಮಧ್ಯದೊಳು ನಿಜ ತಾಣದಿ ||ಪ||

ಪಿಂಡ ಬ್ರಹ್ಮಾಂಡದೊಳು ಉದ್ದಂಡ ಪಿಂಡಾಂಡದೊಳು

ಕುಂಡಲಿ ಪೀಠದೊಳು ಮಾರ್ತಾಂಡನಖಂಡದೊಳು

ಪುಂಡರೀಕ ಭವಾಂಡ ಮಂಡಲದೊಳಗೆ

ಖಂಡಿತನೆನಿಸಿದ ಖಂಡೇಂದುಧರ ತಾನೆ ||1||

ತುಂಬಿ ತುಳುಕದಂಬರ ಭೂ ಕದಂಬದೊಳು ಒಡವೆರೆದ

ಹಂಬಲಿಸದೆ ನೆರೆದ ಸಂಭ್ರಮ ದಿಂಗಂಬರ ತಾ ಮೆರೆದ

ಇಂಬುಗೊಂಡನು ವಿಶ್ವಡಂಬಕ ತಾನಾದ

ಅಂಬಿಕೆಯರಸನು ನಂಬಿಗಿದ್ದವರಿಗೆ ||2||

ಥಳಥಳಿಸುವ ಕಳೆಯ ಸೂಕ್ಷ್ಮದ ಸುಳುಹಿನೊಳು

ಹೊಳೆವ ಬೆಳಗಿನೊಳು ಸುಳಿ ಪೂರ್ಣನ

ತಳೆದು ಬೆಳಗಿ ತಿಳಿವ ಪ್ರಳಯರಹಿತ ಘನ

ನಿಳಯ ನೀರಲಕೆರೆ ಬಳಿಯ ಬಯಲೆಂಬ ಸ್ಥಳದಲಿ ||3||

ಕಾಮಿನಿ ಕರೆದಳೇಕಾಂತಕೆ ಬಾರೊ ಕಾಮನ ಸನ್ನಿಭನೆ ||ಪ||

ಕಾಮಾತುರದಿ ನೊಂದು ಕಾಮಿನಿ ಕರೆಯೆಂದ

ಳೀಮಾತು ಮನಸಿಗೆ ತಾರದೆ ಪ್ರೇಮ ಬಾರದು ನಿನಗೆ ||1||

ಒಲಿವ ನಾರಿಯೊಳಿಂಥ ಛಲವ ಮಾಡುವುದಲ್ಲ

ಬಲು ತಾಪಕೊಳಗಾಗಲೀಗಳೆ ಬಂದೆ ನಿನ್ನ ಬಳಿಗೆ ||2||

ಘಟಿತ ನೀರಲಕೆರೆ ವಿಟ ಪಂಚಾಕ್ಷರದೇವ

ಕುಟಿಲಳು ಮನ ಸೋತಳೋ ದಿಟ ಸಟೆಯಲ್ಲ ಕೇಳೊ ||3||

ಕುಂತು ಕೇಳಿರಿ ಸುಜ್ಞಾನಿಗಳೆಲ್ಲ ಅಂತರಂಗದರುವ

ಶಾಂತಮೂರ್ತಿ ಸತ್ಯರ ಸಂಗದಿ ಮುಕ್ತಿ ಮಾರ್ಗದಿರವ ||ಪ||

ಹಲವು ಜನ್ಮಗಳಲಿ ಬಳಲುತ ಬಂದು ಬಹು ಘಟಗಳ ಧರಿಸಿ

ಚಿಲಿಮಿಲಿಗುಟ್ಟುತ ತಳಮಳಗೊಂಡು ಬಲು ಸುಖಗಳ ಬಯಸಿ

ಹಲಬುತ ಹಲ್ಲನು ತೆರೆಯುತ ಸ್ತ್ರೀಯರ ಮೋಜಹಕೆ ಮನವೆಳಸಿ

ಕಾಲನಾಶ ಗುರು ತಾನೆ ಬಂದನು ಎನ್ನ ನೋಡಿ ರೋಸಿ

ಕೇಳು ವಿಷಯ ಸಂಸಾರದಿ ಬಿದ್ದು ವ್ಯರ್ಥವಾಗುವಿ ಘಾಸಿ

ಮೂಲಮೂರ್ತಿ ನೀನೆಂದು ತೋರಿದನು ದೇಹವೆಲ್ಲ ಸೋಸಿ ||1||

ಹೇಸಿಕಿ ದೇಹದ ಸಂಗವು ನಿನಗೆ ಲೇಶ ಮಾತ್ರವಿಲ್ಲ

ಆ ಸರ್ವೇಶನು ನೀನೆ ಎಂದು ಗುರು ತಾನೆ ತೋರಿದನಲ್ಲ

ಆಶನ ಹಾಕಿಸಿ ಆಲಿಯ ನಿಲ್ಲಿಸಿ ಸ್ವಸ್ಥ ಮಾಡಿದನಲ್ಲ

ಭಾಸುರ ಪ್ರಭೆಯೊಳು ಕೂಡಿ ಸೂಸುವ ಮನವು ಮುಳುಗಿತಲ್ಲ

ಘೋಷ ಶರಧಿ ಝೇಂಕಾರದ ಗಡಿಬಿಡಿ ನಾದ ಕೇಳಿತಲ್ಲ

ಏಸು ಜನ್ಮಗಳ ಫಲ ಕೈ ಸೇರಿತು ಸ್ವಾಮಿ ಗುರುವೆ ಬಲ್ಲ ||2||

ಬ್ರಹ್ಮ ವಿಷ್ಣು ರುದ್ರೇಶ ಸದಾಶಿವರೀಶ್ವರರಿವರೆಂದು

ಸುಮ್ಮನೆ ಶೃತಿಗಳು ಕೂಗುತಲಿಹವು ತಮ್ಮಾ ತಿಳಿಯೋ ಇಂದು

ಗಮ್ಮನೆ ತಿಳಿ ನೀ ತಿಳಿದರೆ ಜಗದೊಳು ಬ್ರಹ್ಮವೆ ನೀನೆಂದು

ತಮ್ಮ ಕೇಳೊ ತದ್‍ಬ್ರಹ್ಮನಾಗುತಲಿ ಇಳೆಯೊಳು ಮರಿಯೆಂದು

ಉಮ್ಮಯದಿಂದಲಿ ಕಳೆಯಬೇಡ ನೀ ದಿನಗಳನೊಂದೊಂದು

ಹಮ್ಮನಳಿದು ಪಂಚಾಕ್ಷರದೇವನ ನೆಮ್ಮು ತ್ವರಿತ ಬಂದು ||3||

ಕೂಗುವ ನಾದವನು ಕೇಳೆಲೆ ನಾಗವೇಣಿಯೆ

ಬೇಗ ಸ್ಫುರಿಸುತ ಅದನು

ಯೋಗನಿಷ್ಠರಿಗೆ ಅನುವಾಗಿ ಹೃದಯವೆಂಬ

ಮೇಗಿನ ಉನ್ಮನಿ ಚಿದಾಕಾಶದಿ ನೆಲೆಗೊಂಡು ||ಪ||

ಮಂತ್ರಕೆ ಮೊದಲಾಗಿದೆ ಮಹಾಮಂತ್ರ

ಮಂತ್ರ ಮತ್ತಾಗಮವು ತಾನಾಗಿದೆ

ಮಂತ್ರಪೂರ್ಣದ ಅಂತ್ಯಾದಿ ಎನಿಸುವ

ಕುಂತು ನಿಂತರೆ ಸೋಹಮೆಂದೊದರುತಿದೆ ||1||

ಪಂಕಜ ಸಹಸ್ರಾಧಾರ ಭಿನ್ನ ನಾದ ಧ್ವನಿಯು

ಹೊಂಕರಿಸುತ ಪೂರ

ಸೋಂಕಿ ಶಂಕೆಯನು ನೊಂಕಿ ಪಂಕವಳಿ

ದೋಂಕಾರವ ತುಂಬಿ ಮೃಗಾಂಕಧರ ತೋರ್ಪ ||2||

ಹತ್ತು ತೆರದಿ ಕೂಗಿ ಸುತ್ತಿ ಎನ್ನ

ಹೊತ್ತಿಗೆ ಹತ್ತಿ ಹಿಂಬಲವಾಗಿ

ಚಿತ್ತೆನಿಸದೆ ಸತ್ಯಗಾಗಿ ನೀರಲಕೆರೆ

ಗೊತ್ತಿನ ಗುರು ಪಂಚಾಕ್ಷರನ ಹೊತ್ತಿಗೆಳಸುತ ||3||

ಕೆಡಬೇಡ ನಡಿ ನಡಿ ತುರ್ತ

ಹಿಡಿ ದೃಢವ ಬಿಡದೆ ಜನ್ಮ ಸಾರ್ಥ

ತಕಿಟ ತರಕಿಟ ದಿಕ್ಕಿಟ ದಿಕುತಟಾಂಧಣಂ ಧಣಂ ||ಪ||

ಉಣಿಸಲೀ ಕ್ಷಣ ಕ್ಷಣಿಕ ಸಂಸಾರಕ್ಕಣಿಯದ ಸದ್ಗುಣ ನಿಧಿಯೆ

ಛಳಿತಕ್ಕೊಮ್ಮತ ತಕತಕಿಟ ತಳಂಗು ತದಿಗಿಣಿ ತದ್ದಿಮಿ ದಿಮಿತ ||1||

ನರಸುರ ಅಸ್ಥಿರ ಜೀವರಾಧಾರಮಂದಿರವ ಜಡಿಸೈ

ಝಣಕೃತ ಝಣಂ ಝಣತ್ಕರ ತಣಂತಣಂಕೃತ ||2||

ಸದಾ ಜ್ಞಾನಕಾಸ್ಪದ ನೀರಲಕೆರೆ ಸುಧಾಬ್ಧಿಪತಿ ಸಂಪಾದಸ್ವರವ ಕೇಳ್

ಮೃಣಂಮೃಣಗಣ ಮೃದಂಗನಾದೋನ್ಮಯ ಝಣಝಣ ||3||

ಕೆಡಕು ಕಡಿ ಮನದ ತೊಡಕು ಬಿಡು ದುಮ್ಮ

ದುಡುಕಿಲಿ ನುಡಿಯಬೇಡೆಲೊ ಚಮ್ಮ

ಹಡಿಕಿ ದೇಹವ ನೆಚ್ಚಿ ಮಿಡುಕದಲಿರು

ಒಡಲಾತ್ಮನ ಹಿಡಿ ಹಿಡಿ ತಮ್ಮಾ ||ಪ||

ಅರಗಳಿಗೆಯ ಸಂಸಾರವ ನಚ್ಚಿ ಮೇಲೆ

ತರುಣಿ ಸುತರೊಳು ರತಿ ಇಚ್ಛೆ

ಮರವೆಯೆಂಬ ಮಾಯೆ ನೆರೆ ಮುಚ್ಚಿ ನಿನ್ನ

ಅರುವು ಮರೆಯಿತು ಇನ್ನಾರ ಇಚ್ಛೆ

ಕರಕರ ಕಾಮಾತುರ ಹೆಚ್ಚಿ

ಮರೆದುರುಳಿ ಹೋಗಲಿದ್ದಿ ಕಣ್ಣು ಮುಚ್ಚಿ ||1||

ಕುಲಛಲ ಕಳಕಳಿಯಲಿ ಹೋದಿ

ಹೊಲೆಮಯ ಸಂಸಾರವೆ ನೀನಾದಿ

ಗೆಲವಿಗೆ ಹಲುಬಿ ನೆಲೆಗೆಟ್ಟು ಹೋದಿ

ಹೊಲಬ ಅರಿಯಲಿ ಒಲ್ಲದೆ ಹೀಗಾದಿ

ಒಲಿದಿ ವಾಂಛೆಗೆ ಬಲಿತಿ ಕಲಿತಿ ಕೇಳು

ಮಲೆತು ಕೆಟ್ಟು ನೆಲಮನೆಗೆ ಹೋದಿ ||2||

ಉಮ್ಮಳಿಸದೆ ಹಮ್ಮಳಿದು ಆಡೋ

ಸಮ್ಮತ ಸಂತರೊಳು ಒಡಗೂಡೊ

ಇಮ್ಮನವು ಬೇಡ ಉನ್ಮನಿಯ ನೋಡೊ

ಚಿನ್ಮಯ ಚಿದ್ರೂಪನ ಪಾಡೊ

ಬ್ರಹ್ಮಗಡಿಯದು ನೀರಲಕೆರೆ ದೇವರ

ಸಮ್ಮಿಸಿಕೊಂಡು ಮೋಕ್ಷವ ಬೇಡೊ ||3||

ಕೆಡದಿರು ಪ್ರಪಂಚ ತೊಡರಲಿ ಕೆಡದೆ

ಹಿಡಿ ಬಿಡದೆ ಹಿಡಿ ದೃಢ ಸುಖವ

ಪೊಡವಿ ಭೋಗ ಜಡತನು ಜಡರಳಿಯದೆ

ಎಡರಿಲ್ಲೆನಿಸದು ಭವ ದುಃಖವು ||ಪ||

ತನುಮನ ಧನ ವನಿತಾದಿ ವಿಷಯಕೆ

ಅನುರಾಗದೊಳು ಅನುಕರಿಸಿ ಹಿಡಿಯಬೇಡ

ಮುನಿಜನರೊಲಿಯರು ಜನನ ಮರಣ ನೀಗದು ಮೂಢ

ದಿನಪ್ರತಿ ಶ್ರವಣ ಮನನದಿ ಅನುವಿಡಿದರಿ ಆತ್ಮನು ಗಾಢ ||1||

ಆಶೆ ಹತ್ತಿ ಬಹಳ ಘಾಸಿಯಾಗದಿರು ಈಶನ ನೆನೆ

ದೋಷ ಕಾರ್ಯಕೆ ಆಶ್ರಯಿಸದ ತೆರದೊಳು

ಓಸರಿಸದೆ ನಡೆ ಲೋಕದೊಳು

ಕ್ಲೇಶ ಸಂಸಾರದ ವಾಸನೆ ಕೆಡಕು ||2||

ಭಕ್ತಿಯ ಮಾಡಲು ಮುಕ್ತನಾಹೆನೆಂಬ

ಯುಕ್ತಿ ತಿಳಿವದು ಹರ ಕರುಣ

ಭಕ್ತವತ್ಸಲ ಶಕ್ತ ನಿರಂಜನ ನಿರಾವರಣ

ಮುಕ್ತಾಲಯ ನೀರಲಕೆರೆ ತಕ್ತನೇರಿ ಅರಿ ಗುರುಚರಣ ||3||

ಕೇಳಿರಿ ಗುರುವಿನ ಹೊಂದಿ ಹೇಳಿರಿ ||ಪ||

ಕಾಳು ಸಂಸಾರ ಮೇಳದೊಳು ಮರೆಯದೆ ನೀವು

ಬಾಳಿರಿ ಯೋಗೀಶನಾಳಿದ ಸುಖವಾಂತು ||ಅ.ಪ||

ಮೆರೆಯದೆ ಬರಿಯ ಭ್ರಮೆಯೊಳು ಬೆರೆಯದೆ

ಸುಯ್ಗರಿದು ಮೈರೆಯದೆ

ಸ್ಥಿರವಲ್ಲದೀ ಶರೀರ ಸತಿಸುತ ಭೋಗದೊಳು

ಬೆರೆಯದೇಕ ಚಿತ್ತದೊಳರಿದ ಅಚ್ಚಸುಖಿಗಳು ||1||

ರೀತಿಯ ತಪ್ಪದೆ ಭವಭೀತಿಯ ಕಳೆದು ಸುವಿ

ಖ್ಯಾತಿಯ ಭೂತನಾಥನ ಭಕ್ತ

ವ್ರಾತದೊಳಗೂಡಿ ಪ್ರೀತಿಯಿಂದಲಿ ಬಂದು

ನೀತಿವಂತೆ ನೀವು ||2||

ಗಡಿ ಗ್ರಾಮ ನೀರಲಕೆರೆ ನಡುಧಾಮ

ಒಡೆಯನಿರ್ಪ ಮೃಢನಾಮ

ತೊಡರಿ ಪಂಚಾಕ್ಷರನಡಿ ಭಕ್ತಿ ದೃಢಗೊಂಡು

ಬಿಡಿಸಿ ಯಮಬಾಧೆಯ ಪಡೆಯಿರಿ ಮೋಕ್ಷವ ||3||

ಕೇಳಿರಿ ಜಾಹೀರದುತ್ತರ ಕಾಲೋಚಿಸಿದ ಪದ

ತಾಳಿ ಕೇಳಿ ಬಾಳಿ ನೀವು ಯಾರಿಗೆ ಹೇಳಿ ||ಪ||

ಖೂಳ ಕುಹಕರ ನೋಡು ಗಾಳಿಗಾಕಾಶ ಬೆದರಿ

ಬೀಳಲಹುದೆ ತಿಳಿದು ನೋಡಿರಿ

ಕೆಂಡಕಿರುವೆ ಮುತ್ತಿಕೊಂಡು ಬಾಳ್ವುದೆ ಗಜ

ಹಿಂಡಿಗೆ ಸಿಂಹ ಒಂದೇ ಸಾಕು ಸಾಕು

ಚಂಡವೀರನು ರಣಮಂಡಲದೊಳು ವೈರಿ

ಗಂಡಗಿನ್ನಾರು ಪುಸ್ತಿ ಬೇಡಬೇಕು ||1||

ಸರ್ಪನ ಬಾಯೊಳಗಿರ್ಪ ಕಪ್ಪೆಯು ತನ

ಗಿರ್ಪ ಮರಣವ ತಪ್ಪಿಸಿಕೊಳಬಹುದೆ

ಅಪ್ಪ ದೊರೆ ಮಂತ್ರಿಕಾರ್ಯ ತಪ್ಪಿ ಮಾಡ

ದಿಪ್ಪರೆ ಅರಸಿಗಳು ಸರಿಯಹುದೆ ||2||

ಗಂಡುಮೆಟ್ಟು ಗಡಿ ಪುಂಡ ನೀರಲಕೆರೆ

ಚಂಡ ಪಂಚಾಕ್ಷರೋದ್ದಂಡ ಮೂರ್ತಿ

ಕಂಡು ಸೈರಿಸದಿರ್ಪ ಭಂಡ ಬಹಿಷ್ಕಾರ ಕೊಡಲು

ಪಂಡಿತಗೇನು ಭಯ ಅಖಂಡಮೂರ್ತಿ ||3||

ಕೈಲಾಸ ಬಯಸಬೇಡೊ ಕೈವಲ್ಯ ಪಡೆದು ನೋಡೊ

ಸುಯ್ಗರಿವುತ ಹಲುಬುಗಟ್ಟಿ ಮನದಿ ||ಪ||

ಮೈ ಕೈ ಮೊಗ ಸೈ ಬಾಯ ಸವಿಗಳ ಬಿಟ್ಟು

ಬಯಲ ಗುರಿಯ ಮಾಡಿ ಭವವ ಅಳಿದುಳಿ ||1||

ದುಃಖ ಸಂಸಾರಕ್ಕೆ ಎದೆಗೊಡದಿರು ನದ

ರಿಕ್ಕಿ ಚಿತ್ಕಳೆ ರಸವುಕ್ಕಿ ಹೃದಯದೊಳು ||2||

ಉತ್ತಮ ನೀರಲಕೆರೆ ಗೊತ್ತಿನಾಲಯದ ಗುರುವ

ಉತ್ತಮನ ಅಡಿವಿಡಿದತ್ತ ಹಂಬಲಿಸುತ ||3||

ಕೊಡು ಮುಕುತಿಯ ಮನೋಲಯ

ಗಡಿ ನೀರಲಕೆರೆಯಾಲಯ ||ಪ||

ಜನನ ದೂರ ಮನೋಲಯ ಎನ್ನೊಡೆಯ

ಕನಕಗಿರಿ ಆಲಯ ||ಅ.ಪ||

ಭವಭವದಲಿ ಬಂದು ಬಳಲಿ ಬಾಯಾರಿದೆ

ಕೈವಲ್ಯ ಮೂರ್ತಿಯೆ ಕರುಣದೊಳು| ಕೈಲಾಸ

ಒಡೆಯ ನಿನ್ನ ಬೇಡುವೆನು ||1||

ಶರಣರಾಳಾಗಿ ನಿನ್ನ ಸ್ಮರಣೆಯೊಳಿರುವೆನು

ಕರಣ ಮೂರನು ಕೂಡಿ ಹುರಿ ಮಾಡಿ| ನೆನೆದೆನು

ಮರಣ ಜನನಗಳ ದೂರ ಮಾಡಿ ||2||

ಗುರ್ತು ನೀರಲಕೆರೆ ಗುರುಮನೆ

ಅರ್ತು ಕೇಳುತ ಬಂದೆ| ಗುರುರಾಯ

ಮರ್ತೆನ್ನ ಮರ್ತ್ಯರಂತಿಡಬೇಡ ||3||

ಗಗನ ಮಹಲಿನೊಳು ತಗಲಿಲ್ಲದೆ ನಾ

ನಗಲದಲೆ ಆತನ ನೋಡಿದೆ ||ಪ||

ಮೊದಲಿಗೆ ನೆನೆದೇನೆ ಮದನಾರಿ ಶರಣರ

ತುಡಿಯಲಿ ಸದಮಲ ಗುರುವಿನ| ನೆನೆನೆನೆದು

ಸದರಿಟ್ಟೆ ನಾಸಿಕದ ಕೊನೆಯ ಮೇಲೆ ||1||

ತಳತಳಿಸುವ ರೂಪ ತಾರಕ

ಬೆಳಕಿನ ತದ್ರೂಪವನು| ಕಂಡು

ಹೇಳಿ ಕೇಳಿ ಕಳವಳಗೊಂಡೆ ||2||

ಬೆರಗುಗೊಂಡಿತು ಮನ ಅರಗಳಿಗೆ ಅಗಲದಿರುವನ

ಸರವತ್ತಿನೊಳಗೆದ್ದು ಕರೆದೆನವನ| ಕೈಗೂಡಿದೆ

ಕರಮನ ಭಾವದಿ ಕರಿಗೊಂಡೆ ||3||

ಹುಣ್ಣಿವಿ ಚಂದ್ರಮನ ಬಣ್ಣದಂತಿರುಹನ

ಬಣ್ಣ ಮೂರುಂಟದರ ಬಾಗಿಲಕೆ| ಒಳ ನಿಂದು

ಕಣ್ಣಸನ್ನೆ ಮಾಡಿ ಕರೆದೆನೇ ||4||

ನೀಲವರ್ಣದಂಗಿ ಹತ್ತುವ ನೀಲಗುದರಿ ತಂಗಿ

ನೀಲಕಂಠನೆಂಬ ನಿಜ ನಾಮನ| ಕಂಡು

ಸೋಲದರಾರವ್ವ ಸುಖ ಜಾಣೆ ||5||

ಗಂಗಾ ಯಮುನಾ ನದಿಯ ಸಂಗಮ ನದಿ ತುರೀಯ

ಕಂಗಳ ಕಳೆ ಬೆಳಗಿನ ಸುಧೆಯ| ತಾ

ಮಂಗಳಾತ್ಮಗೆ ನಾ ಮರುಳಾದೆ ||6||

ಕಣ್ಣುಗಂಡಿಲಿ ತೋರಿ ಅವನ ಸಣ್ಣ ದಿಡ್ಡೀಲಿ ಬಂದೆ

ಬಣ್ಣಸಲಾರು ಈ ಜಗದಿ| ಮತ್ತವನು

ಹೊನ್ನಿನ ಮಳೆ ಕರೆಸಿದನೇ ||7||

ಜಗಜಗಿಸುವ ಸದರ ನಿಗಿನಿಗಿ ನೋಟಕೆ ತಾನಿದಿರ

ಸೊಗಸಿನಾಲಯದ ಬತ್ತಿ ಕಿಡಿಯುದರಿ| ನಡುವೆ

ಜಗದಧಿಪತಿ ಜಯ ಜಯತು ||8||

ಆತನ ಸುರತ ಈ ತೆರವಮ್ಮ

ಖ್ಯಾತಕಾಮಗೆ ಮೇಲು ಮೈಬಣ್ಣ| ದ ರೀತಿ

ಕಂಡು ಆತನಗೆ ಮನ ಸೋತೆ ||9||

ಹಂಬಲಿಸಿದೆ ನೋಡಿ ದುಂಬಾಲ ಬಿದ್ದೆನವನ

ರಂಭೆ ಬಾರೆ ಎಂದೆನ್ನ ರಮಿಸಿದ| ಕೈ ಹಿಡಿದ

ಹಂಬಲ ಹೋಗದು ಹಗಲಿರುಳ ||10||

ಈ ಕಡೆ ಸಂಸಾರ ಘೋರ ಇಲ್ಲಾ ಆ ಕಡೆ ಸುಖ ಪೂರ

ಸಾಕೀಗ ಮಕ್ಕಳ ಮನಿ ಸಂಗ| ಎನಗೆ

ವಾಕರಿಕಾಯಿತು ಬಗಿಬಗಿ ||11||

ಮನೆಯ ಗಂಡನ ಬಿಟ್ಟಿ ಘನ ರತಿಯಲವನೊಳಗಿಂಬಿಟ್ಟೆ

ಸನುಮತದಲಿ ತನು ಮನ| ಕೊಟ್ಟವನ

ಅನುಮತ ತಪ್ಪಿದೆನನುದಿನ ||12||

ಲೋಕದವರ ಸಂಗ ಸಾಕು ಸಾಕು ಜನರ ಹಂಗ

ಬೇಕಿಲ್ಲ ಪೀಕಲಾಟ ಮಾನಭಂಗ| ರ ಸಂಗ

ಈ ಕಡೆಗುಳಿದು ಕಡೆಗಾದೆ ||13||

ಸಾಧಿಸಿ ಮಾಡಿದೆ ಸಾಧು ಜನರ ಸಂಗ

ಹಾದರ ಹವಣಿಕಿ ಚದುರಂಗ| ದ ಮೇಲೆ

ಸಾಧಿಸಿಕೊಂಡೆ ಸರಿಗರತಿ ||14||

ಭ್ರಾಂತಿ ಬಯಲ ಮಾಡಿ ಮನಸಿನ ಚಿಂತೆ ಕಡೆ ಮಾಡಿ

ಸಂತರನಾಳಿದ ಸಮಶೂರ| ನ ಕೂಡಿ

ಕಾಂತೆ ನಾನಾದೆನವನಂತೆ ||15||

ಪಾಪ ಪುಣ್ಯಗಳಳಿದೆ ಈ ಪರಿ ತಾಪವ ಕಳೆದೆ

ಸಾಪಾಗಿ ಹೋದವು ಇಹಪರ| ಗಮನಗಳ

ವ್ಯಾಪಾರ ಕಳಕೊಂಡೆನವನಿಂದ ||16||

ಘನ ಗಡಿ ಹಿಡಿದೆ ನೀರಲಕೇರಿ ಚಿನುಮಯ ಸೇರಿ

ಅನುಭವದ ಒಡಲರಿದು ಆನಂದ| ಪಂಚಾಕ್ಷರನ

ಅನುವಿಂದ ಒಲಿಸಿದೆ ನಗುನಗುತ ||17||

ಗಜಿಬಿಜಿ ಏನಿದು ಎಲ್ಲವ್ವ ಈ ತಜಿವಿಜಿ ಜಗ ಸುಳ್ಳವ್ವ

ಮಜ ಭಾಪುರೆ ಎನ್ನ ಹಡೆದವ್ವ ನಿಜಸುಖ ನಿನ ಹೊರತು ಎಲ್ಲವ್ವ ||ಪ||

ಅಜಹರಹರಿಗಳಿಗೆ ಆದಿ ಶಿಖಾಮಣಿ

ಭಜಿಸಲೊಲ್ಲದ ಭಾಗ್ಯದ ಖಣಿಯೆ

ಸೃಜರಕ್ಷಣಲಯ ವಿಜಯರೆನಿಸಿ ನೀ

ಕರವಿಡಿ ದಣಿಯದೆ ಗುಣಮಣಿಯೆ ||1||

ಮಾನಿನಿ ಮಹಾಮಾಯಿ ನೀನಲ್ಲದೇನಿಲ್ಲ

ಮಾನಿತರೊಳು ಮನೆ ಮಾಡಿದಳೇ

ಮಾನಿ ಭಕ್ತಾಭಿಮಾನಿಯೆ ಮಾತಿಗೆ

ಧ್ಯಾನಿಪರ ಒಡಗೂಡಿ ಆಡುವಳೇ ||2||

ನೀರಲಕೆರೆ ವರ ನಿಜನರ್ಧಾಂಗಿಯೆ

ಸಾರಸಮುಖಿ ಶುಂಭನ ಘಾತೆ

ಧೀರ ಪರಾಕ್ರಮಿ ವೀರ ಪಂಚಾಕ್ಷರ

ಶೂರನೊಳು ಅತಿಹಿತದಲಿ ಸೋತೆ ||3||

ಗಂಗಾದೇವಿ ಕರುಣದಿ ನೋಡೆ ತುಂಗಭದ್ರೆ ಕರುಣಿ

ಮಂಗಲಾಂಗಳೆ ಭೃಂಗಗುರುಳೆ ಶೃಂಗಾರಳೆ ||ಪ||

ಜಾಹ್ನವಿ ಪರಮೋಪಕಾರಿ ಸಾರವರದೆ

ಭಿನ್ನಲೋಕರಕ್ಷಣೆಗಿನ್ನು ಕಾರಣರೂಪೆ ||1||

ಶಂಭುಜಡೆಯೊಳಿಂಬು ಮಾಡಿ ಕುಂಭಿನಿಯೊಳು

ಅಂಬಿಗರಿಗೆ ಹಂಬಲದ ಮಗಳೆನಿಸಿದಿ ||2||

ಪಾವನಾತ್ಮಕ ಜಗಜ್ಜೀವ ನೀರಲಕೆರೆ

ಕಾವ ಪಂಚಾಕ್ಷರ ದೇವಗೊಲಿದ ದೇವಿ ||3||

ಗುರು ಕರುಣವದೊಂದೆ ಸಾಕು ||ಪ||

ಜನನ ಮರಣ ಜಡರ ಅಳಿವ

ಘನ ಕಷ್ಟ ಕಾಲ ಬಾಧೆಯನು ಕಳೆವ

ತನುಮನಾದಿಗಳೊಳು ಹೊಳೆವ

ನೆನೆವರಾನಂದ ಹೃದಯದಿ ಸುಳಿವ ||1||

ಸ್ಥೂಲಾದಿ ಸೂಕ್ಷ್ಮ ಚೈತನ್ಯ ತಾನಾದ

ನೀಲ ಕಾಯದಿ ಸುನೀಲ ವಿನೋದ

ಕಾಲತ್ರಯಕೆ ಸಿಗದೆ ಹೋದ

ಜಾಲವೇದಕನಾದಿ ಅತ್ತಾದಿ ತಾನಾದ ||2||

ನೀರಲ ಕೆರೆಯೊಳು ಆನಂದ

ಪೂಕರ ರೇಚಕ ಕುಂಭಕದಿ ನಿಂದ

ಭೇರಿ ನಾದವನು ಎತ್ತಿ ತಂದ

ಧೀರ ಪಾರಮಾರ್ಥಿಕ ಪಂಚಾಕ್ಷರ ನಾನೀನೆಂದ ||3||

ಗುರುನಾಥ ಸದ್ಗುರುವೀತ

ನರನು ನಾನಿರೆ ಸಾಕ್ಷಾತ್ಕಾರ ಮಾಡಿದೆ ||ಪ||

ಉರಿಯು ಕರ್ಪುರಗೂಡಿ ಉರಿಯೊಳಡಗಿ ತನ್ನ

ಕುರುಹೇನು ತೋರದಂತೆರಡು ರೂಪ

ಮರವೆ ಮಹಾದಾನಿಗಳ ಅರುವಿನ ಹಾದಿಯೊಳು

ಬೆರೆಸಿ ಜೀವನವ ಬ್ರಹ್ಮತ್ವದೊಳು ಮೆರೆಸಿದ ||1||

ಭೃಂಗ ಸಂಪಿಗೆಯನುಂಡಂಗೆ ಆವ ಮರದಲ್ಲಿ

ಸಂಗಿಸಿ ತಿರುಗೆ ಅಡಗಿದಂತೆ

ಹಂಗಿಲ್ಲದ ತನುವು ಕರಣಂಗಳ ಅತ್ತತ್ತಲಲ್ಲಿ

ಸಂಗವಿಲ್ಲದ ವಸ್ತು ಸಂಗ ಮಾಡಿದಂತೆ ||2||

ನಾನತ್ವ ನಾನಲ್ಲದೇನು ತೋರಿಸಲಿಲ್ಲ

ತಾನೆ ನೀನೆಂದು ತತ್ವವ ಬೋಧಿಸಿ

ಜ್ಞಾನಾತ್ಮಗುರು ನೀರಲಕೆರೆ ತಕ್ತಿನ ಅಧಿಕಾರಿ

ನಾನೆ ನೀನೆಂದು ಎಚ್ಚರವರುಹಿ ನಿಶ್ಚೈಸಿದ ||3||

ಗುರುವಿನ ಮಗ ನಾನು ಸದ್ಗುರುವಿನ ಮಗ ನಾನು

ಅರಿವಿನಾತ್ಮನ ಕುರುವಿಡಿದರಿದೆನು ಮರಳೆನು ಮರ್ತ್ಯಕೆ ||ಪ||

ಸಾಧು ಬಳಗ ಕೂಡಿ ಭೇದಿಸಿ ಶ್ರವಣ ಮನನ ಮಾಡಿ

ವಾದಿ ಮೂರ್ಖರೋಳು ವಾದಿಸದೆ ನಾದ ಬ್ರಹ್ಮದಿ ಮೈಮರೆದಿಹ ||1||

ಹಸಿವಿ ತೃಷೆಗಳನಳಿದು ಮೋಹದ ವಿಷಯಗಳ ಕಳೆದು

ಮುಸುಕಿದ ಮಹದಾನಂದದ ಸೊಬಗನುಸುರದೆ ವಸುಧೆಯ ಜನರಂತಿರುತಿಹ ||2||

ಹಿಡಿದೆನು ಗಡಿಗ್ರಾಮ ನೀರಲಕೆರೆ ನಡುನಾಡಿಗೆ ಪ್ರೇಮ

ಜಡದೇಹದ ಜಡರಳಿದು ಸುಖೋನ್ಮಯ ಕನಕಗಿರಿ ಒಡೆಯ ||3||

ಗುರುವಿನ ಸರಿ ಯಾರ್ಯಾರಿಲ್ಲ ಗುರು ನಿಂದಕರಿಗೆ ಗತಿಯಿಲ್ಲ ತಂಗಿ ||ಪ||

ಸಾರಿದೆ ಬಾರೆ ಸುಳ್ಳಲ್ಲೇ ಮೂರು ಲೋಕದೊಳು ಗುರುಸಮನಿಲ್ಲೆ ||ಅ.ಪ||

ವೇದ ಪುರಾಣಗಳು ಭೇದಿಸಿದೆ ಹೋದವು

ಆದಿ ಅನಾದಿ ದೊರೆ| ಆಧಾರ ತಾನಾಗಿ

ಈ ಧರೆ ರಕ್ಷಿಸ ಬಂದ ||1||

ಗುರುವಿನಂಗಳ ಕಾಶಿ ಗುರುಮನೆ ಕೈಲಾಸ

ಗುರುವೆ ಸಾಕ್ಷಾತ್ ಪ್ರಭುವೆಂದು| ನಿಜ ಮುಕ್ತಿ ಸ್ಥಿರವೆಂದು

ಗುರುವಿನೊಳು ಪಾಡಿರೇ ||2||

ಗುರು ಮೆಚ್ಚಿದರೆ ಕೊಡುವ ಅರಿಯದ ಸಂಪತ್ತು

ಗುರು ಮುನಿದರೆ ಕೇಡಮ್ಮ| ನರಕದಿ ಹಾಕಿಸಿ

ಮರೆದಿರುವನು ಯಮರಾಯ ||3||

ಮರೆವೆಯ ದೇಹವೊಂದರುವಿನ ಆಲಯವಮ್ಮ

ಪರಿಕಿಸುತಿರುವ ಅನಂತದ| ಸಾಕ್ಷಿಯಾಗಿ

ಗುರುವೆ ನರ ರೂಪಾದ ||4||

ಒಂದು ನಿಮಿಷ ಮನ ಹೊಂದಿ ಅಗಲದಿರು

ಹಿಂದಿನ ಪಾಪವ ಸುಡುವ| ಸದ್ಗುರುರಾಯ

ಮುಂದಿನ ಬಂಧನ ಕಡಿವ ||5||

ತನು ಸಾಕ್ಷಿ ಮನ ದೂರ ಮನನಕ್ಕೆ ಮೈಗೊಟ್ಟು

ಇತೆನ್ನ ಪುಣ್ಯದ ಫಲದಿಂದ| ಘನ ಗುರು

ಒಲಿದು ತನ್ನಂತೆನ್ನಗೈದ ||6||

ದೇಹದ ಗುಡಿ ತಂಗಿ ಭಾವದ ಗದ್ದುಗಿ

ಸೋಹಮೆನಿಪ ದೇವರಲ್ಲಿ| ತೋರಿದ ಸತ್ಯ

ದೇವರೆ ಗುರುವೆನ್ನ ಬಳಗ ||7||

ತಾಪ ಮೂರನು ಸುಟ್ಟು ಕೋಪವ ಕಡಿದಿಟ್ಟು

ಈ ಪರಿ ಕೈ ತಲೆ ಮೇಲೆ| ಇಡುತಲಿ

ನೀ ಪರಬ್ರಹ್ಮವಾಗೆಂದ ||8||

ರೂಪಿನೊಳು ರೂಪಾಗಿ ದೀಪಿಸುತಿಹನು

ರೂಪುನಿರೂಪು ನೀನೆಂದ| ನಿಶ್ಚಯಿಸಿ

ಉಪಾಧಿರಹಿತನು ಉಪಕಾರಿ ||9||

ಒಡಲಾಸೆ ದೃಢವಾಗಿ ಕೆಡತಿರುವುದ ಕಂಡು

ಬಿಡದೆ ಕೈ ಹಿಡಿದ ಅನುದಯದಿ| ಒಡೆಯನ ತೋರಿದ

ಪಡೆದೆ ಕೆಡದಂಥ ಸುಖವ ||10||

ನೀರಲಕೆರೆಯೆಂಬೊ ನಿರಂಜನದ ತಕ್ತು

ಸೇರಿರ್ಪ ನಿಶ್ಚಲ ಗೊತ್ತು| ಗುರು ಹೊಂದಿ

ನಾರಿ ಭವದ ಬೇರು ಕಿತ್ತೆ ||11||

ಗುರುವಿನ ನೆನೆದೇನೆ ಮರೆಯದೆ ಮನದೊಳು

ಅರಿವಿನಾಲಯ ಮಂಟಪದ| ಮನೆಯಲ್ಲಿ

ಪರಶಿವನ ಕಂಡು ಬದುಕಿದೆ ||ಪ||

ಧರಣಿ ರಕ್ಷಣೆಗಾಗಿ ನರನ ರೂಪದಿ ಬಂದು

ಕರುಣಿ ಬಾರೆಂದು ಕರೆಯುತ| ಕಟ್ಟುತ ಬಂದ

ಧರಣಿಗುಪಕಾರಿ ಗುರುರಾಯ ||1||

ಗುರುವಿನ ಗುಪ್ತದಲಿರುವ ಶರೀರಕ್ಕೆ

ಮರಳಿ ಹುಟ್ಟು ಬಾಧೆ ಮುನ್ನಿಲ್ಲ| ಯಮರಾಯ

ಮರೆದೊಮ್ಮೆ ಮುಟ್ಟಲರಿಯನೇ ||2||

ಒಡಲ ಸಾಕ್ಷಿಕನಾದ ಒಡೆಯನ ತೋರಿದ

ಜಡದೇಹದಾಸೆ ಎನಗಿಲ್ಲ| ಗುರುಪಾದ

ಬಿಡದೆ ಹೊಂದಿ ಸುಖವ ಕಂಡೆ ||3||

ಅಂತರಂಗದ ಪೇಟೆ ಸಂತೆಗೆ ಹೋದೆ ತಂಗಿ

ಚಿಂತಿಸದೆ ಕೊಂಡೆ ರತುನವ| ಬೆಳಕೀಲಿ

ಕಾಂತೆ ಕೇಳವ್ವ ಕೌತುಕವ ||4||

ಕಂಗಳೂರನ ಕಂಡೆ ಮಂಗಳಾತ್ಮನ ಕಂಡೆ

ಗಂಗೆಯ ಕಂಡು ಗವಿ ಹೊಕ್ಕು| ಗುರುಪಾದ

ಕಂಡು ಮೈಮರೆದೆ ||5||

ಸತ್ಯ ಸದ್ಗುರು ಹೊಂದಿ ಮತ್ತೆ ಸಾವುದು ಲೇಸು

ನಿತ್ಯ ಸುಳ್ಳಾಡಿ ದಿನಗಳೆದೆ| ಸತ್ತರೆ

ಮತ್ತೆ ಹುಟ್ಟುವ ಬಾಧೆ ಬಿಡದವ್ವ ||6||

ಸಂಸಾರ ಸಂಗದ ಹತ್ತಿ ಧ್ವಂಸವಾಗಲು ಕಂಡು

ಕಂಸಾರಿ ನಮಿತ ಗುರು ಬಂದ| ಕೈ ಹಿಡಿದು

ವಂಶ ಉದ್ಧಾರ ಮಾಡಿದನೇ ||7||

ಭಕ್ತಿ ಭಾವದಿ ನಾನು ಯುಕ್ತಿ ಸಂಗ್ರಹ ಮಾಡಿ

ಮುಕ್ತಿಯ ತವರು ಮನೆಗೆ ಹೋದೆ| ಮರ್ತ್ಯವ

ತಕ್ತ ಮಾಡಿದೆನೆ ತಂಗೆಮ್ಮ ||8||

ಬಯಲು ಬಂಗಾಲವೆಲ್ಲ ಕವಲೂರು ಕಡೆಯಾದ

ಭಯವಳಿದ ಎನ್ನ ಬಳಗಮ್ಮ| ಸಾಧುಗಳ ಕೂಡಿ

ಬಯಲಾಗಿ ಬಾರದಿರುವೆ ನಾ ||9||

ಗುಪ್ತವಾದ ಗಡಿ ತಂಗಿ ಆಪ್ತ ನೀರಲಕೆರಿ

ಪ್ರಾಪ್ತನಹುದು ಪರವಸ್ತು| ಪಂಚಾಕ್ಷರನ ಒಲಿಸಿ

ದೀಪ್ತಿನಾಲಯವೇರಿದೆ ||10||

ಗುರುವಿನ ಮರೆತೆಯಲ್ಲೊ ಮರುಳೆ ನಿನಗೆ

ಅರುವು ಕೂನವಿಲ್ಲೊ

ಕರಿಕರಿ ಕಾಮನ ಬಾಧೆಗೆ ಸಿಲುಕಿ

ಮರಳು ಮಣ್ಣು ಮಸಿಯಾದೆಯಲ್ಲೊ ಭ್ರಷ್ಟಾ ||ಪ||

ಮಡದಿ ಮಕ್ಕಳಿಗಾಗಿ ದುಡಿದು

ದುಡಿದಾದೆಯಲ್ಲೊ ಮುದಿಗೂಗಿ

ಜಡಿದು ಯಮದೂತರು ಹಿಡಿದೆಳೆದೊಯ್ವಾಗ

ಬಿಡಿಸುವರಾರು ತಿಳಿಯಲಿಲ್ಲ ಕಾಗಿ ||1||

ಕಾಯಕ ನೆಚ್ಚಿಕಿ ಇಲ್ಲಾ

ಕಾಯದ ಮಾಯ ತಿಳಿಯಲಿಲ್ಲಾ

ಸಾಯುತ ಹುಟ್ಟುತ ಆಯಾಸಪಡುತ

ಬಾಯಿ ತೆರೆದು ಭ್ರಷ್ಟನಾದೆಯಲ್ಲೊ ಮರುಳೆ ||2||

ಹಮ್ಮನಳಿಯಲಿಲ್ಲ ತಮ್ಮನೇ

ಬ್ರಹ್ಮವ ತಿಳಿಯಲಿಲ್ಲ

ಸಮ್ಮತ ಗಡಿ ನೀರಲಕೆರೆ ವೃಷಭನ

ಸೋಹಂ ಎಂಬುದು ಸೋಂಕಿರಲಿಲ್ಲ ||3||

ಚಿಂತೆ ಬಿಡಿಸೆ ಮನದ ಮಹಾದೇವಿ ||ಪ||

ಚಿಂತೆ ಮನಸಿಗಿನ್ನೇನಂತಿ ಸನ್ನುತ ಸುಖ

ವಂತೆ ಶಿವನಕಾಂತೆ ಶಾಂತಿಮಯಳೆ ಮುಂತೆ ||1||

ರಂಭೆ ಮೇನಕೆಯರ ಕದಂಬ ನಮಿತೆ ಶಶಿ

ಬಿಂಬವೆನಿತಿರ್ಪೆ ಭ್ರಮರಾಂಬೆ ಹೇರಂಬ ಮಾತೆ ||2||

ವಾಣಿ ಕೃಷ್ಣನ ರಾಣಿ ಜಾಣೆ ಶಚಿಯರ್ಗೆ ಮಿಗಿಲು

ತ್ರಾಣಿ ಮೋಹನ ಶುಕವಾಣಿ ಕಾಳಾಹಿ ವೇಣಿ ||3||

ನಾಥೆ ಸದ್ಗುಣಗಣವ್ರಾತೆ ಸಜ್ಜನಘನ

ಪ್ರೀತೆ ಮಹಿಷದಳಘಾತೆ ನಿಗಮನುತೆ ||4||

ಗಡಿಯ ನೀರಲಕೆರೆಗೊಡೆಯಹಳೆ ಮಹಮಾಯೆ

ದೃಢದಿಂದ ಭಜಿಪೆ ನಿನ್ನಡಿದಾವರೆಗಳನು ||5||

ಜನರೇನು ಬಲ್ಲರು ಅನುಭವದ ನೆಲೆಯನು

ದಿನಕರ ಪ್ರಭೆ ಹೃದಯದೊಳಿಹುದು

ಚಿನುಮಯ ಗುರುವರನ ಅನುವಿನಿಂದರಿಯಲು

ಜನಿಸುತಿಹುದು ಪುಣ್ಯ ಫಲದಿ ||ಪ||

ಶರೀರ ಸುಖದುಃಖಾದಿಗಳಿಂದ ಸೊರಗುತ

ಕರಕರ ಈ ಸಂಸಾರವು ತಮ್ಮದೆಂದು

ನರಳುತ ಜನನ ಮರಣಂಗಳಿಂದ ಹೊರಳುತ

ಪರಮಾತ್ಮನಿರವನು ಕಾಣದಂತಿರುವ ||1||

ಗತಿಗಾಣದೆ ವೃತನೇಮದಲಿ ಇರುತಿರೆ

ಪ್ರತಿದಿನ ಕರ್ಮವನು ಅನುಭವಿಸಿ

ಅತಿ ದ್ವೇಷಾದಿಗಳ ಅತಿಶಯದಲಿ ಶ್ರೀಗುರು

ಮತಿಗತಿದೂರವಾಗಿ ನಿರ್ಭಯದಿಂದ ಚರಿಸುವ ||2||

ಗಡಿ ನೀರಲಕೆರೆ ಮೃಡ ಪಂಚಾಕ್ಷರನ ಅಡಿ

ಹಿಡಿಯದ ಬಡಮತಿಯತರು

ದೃಢ ಜ್ಞಾನದಿ ನಡೆನುಡಿಗಳೊಂದಾಗದೆ

ತುಡುಗತನದಿ ದೂರವಾಗಿ ಮೈಮರೆದಿಹ ||3||

ಜಯ ಜಯತು ಮಹಾದೇವಿ ದೇವಿ ||ಪ||

ಶೃಂಗಾರಿ ಶ್ರೀ ಮಂಗಳಾಂಗಿ ಸಂಗಾತೀತೆ ಸನ್ಮಹಿಮೆ

ತುಂಗಭಕ್ತರ ಅಂಗಸುಖೆ ಮಂಗಳೆ ಮಹಾನಂದ ರೂಪೆ ||1||

ಶಂಕರಿ ಶಶಾಂಕಮುಖಿ ಪಂಕಜನೇತ್ರೆಯೆ ದುರ್ಗಿ

ಓಂಕಾರಿ ಮಹಾಂಕಾಳಿ ಮಾಯೆ ಶಂಕರನರ್ಧಾಂಗಿ ಜಯತು ||2||

ಅಂತಕಾರಿ ಶಾಂತೆ ಶೌರಿ ಚಿಂತಿತಾರ್ಥವೀವೆ ಗೌರಿ

ಸಂತತ ನೀರಲಕೆರೆ ಶಾಂತಮೂರ್ತಿ ಹೋಅಂತಕಾರಿ ||3||

ಜಯತು ಶ್ರೀ ಮಹಾದೇವಿಯೆ ಮಂಗಲಮಯೆ

ಜಯತು ಸಂಗತನಹ ಪಾಂಡುರಂಗ ಮೋಹಿನಿಯೆ ||ಪ||

ತ್ರಿಗುಣ ಮೂರ್ತಿಗಳ ಜಗತ್ಪತಿಗಳ ಮಾಡಿ

ಸೊಗಲಾಡಿಪ ಜಗದ್ರಕ್ಷೆ ತ್ರೈಜಗತ್ಕುಕ್ಷೆ ||1||

ಕಾವಳಂತರ್ಯಾಮಿ ದೇವರ ಪ್ರೇಮಿ

ಭಾವದೊಳು ನೆನೆದವರ ಜೀವಿ ಬೇಡಿದಡೀವಿ ||2||

ಕಾಲಾತೀತೆ ವಿಶಾಲವಿಮಲಮತೆ

ಲೋಲ ನೀರಲಕೆರೆ ಪಾಲನಿಗತಿ ಪ್ರೀತೆ ||3||

ಜಯತು ಮಂಗಲ ಶ್ಯಾಮಲಾಂಗಿ

ಜಯ ಜಯ ಮಂಗಳಾಂಗಿ ಜಯವೆಂಬೆ ||ಪ||

ಕರುಣಾನಿಧಿಯೆ ಭಕ್ತರಾಲಯವ ಕಾಯ್ವಳೆ

ತರುಣಾರ್ಕರೊಲು ಭಾಸಮಯಳೆ ಶರಣರ ರಕ್ಷಿಪಳೆ ||1||

ಶೃತಿತತಿಗೆ ಅತಿಹಿತೆ ಮತಿಯುತ ನುತಪದೆ

ಜೊತೆಯಗಲದಿರ್ಪ ಜಾಣೆ ಗತಿಗೊಡುತಿಹ ತ್ರಾಣೆ ||2||

ಜಲಜಮುಖಿಯೆ ಬಡವರಾಶೆ ದೃಢತರಕೀರ್ತಿ

ಗಡಿ ನೀರಲಕೆರೆ ಬಿಡದರ್ತಿ ಮಡನಂತರದಿರುತಿ ||3||

ಜಯ ಜಯ ಜಯ ಜಯ ಜಯವಾಗಲೆಂದು

ಭವ ಭವಗಳ ಕಳೆ ಜಯ ಜಯತೆಂದು ||ಪ||

ಜಯವಾಗುತದೆ ಜಯವಾಗುತದೆ ಮಗಳೆ

ಬಿಡು ಬಿಡು ಬಿಡು ಬಿಡು ಬಿಡು ಮನದಾಸೆ ||ಅ.ಪ||

ಹಿಡ ಸದ್ಗುರುವರನಡಿ ಬಿಡದಾಸೆ

ಒಡಲಾಸೆಗೆ ಕೇಡು ನುಡಿದರೆ ಘಾಸಿ

ತೊಡರು ಬಿದ್ದಿತದು ಮಾಯದ ಘಾಸಿ

ಸಂಚಿತ ಗುಡಿಮನೆ ಕಟ್ಟಿದೆ ನೋಡೆ ||1||

ಪಂಚಕಲಾ ಸಂಚಲದಿ ಕೂಡಿ

ವಂಚಿಸದೆ ಪ್ರಾರಬ್ಧದೊಳಾಡಿ

ಹಂಚಿಕಿಲ್ಲದೆ ಅದು ಬರುತದೆ ಓಡಿ ||2||

ಐದು ಭೂಗಳೈದು ಇಂದ್ರಿಯಗಳಮ್ಮ

ಐದು ಕರಣದಲಾದವು ಪ್ರಾಣಗಳಮ್ಮ

ಐದು ಶಬ್ದಸ್ಪರ್ಶಾದಿಗಳೈದು

ಐದೈದು ಇಪ್ಪತ್ತೈದಾದವು ಕೂಡಿ ||3||

ಕಾಯಪುರಕೆ ಬಲ ಬಂದಿತು ಮಗಳೆ

ಮಾಯಗಾರಿಕೆಗಳು ಅಳಿದವು ತಾಯಿ

ಛಾಯಗಾರಿಕಿ ಚದುರಿಕಿ ಕಳೆಯೆ

ಆಯತವರಿದಾಚಾರ ಮಾಡಮ್ಮ ||4||

ಕಾಳಾಪುರಕೆ ನೀ ಹೋಗಬೇಡ ಮಗಳೆ

ನೆಲಯರಿದೆಲಗಲದಿನ್ನಿಯನರಿಯೆ

ಕೇಳುತ ಐದನಾಳಾಚೆಗೆ ನಡಿಯೆ

ಹೇಳುವೆ ಮೇಲೂರ ದಾರಿ ಹಿಡಿಯಮ್ಮ ||5||

ಸರ್ಜಮಿ ಸರ್ಜಾಪುರ ನೋಡಮ್ಮ

ಅರ್ಜ ಮಾಡಿಕೋ ಈ ಊರಲ್ಲಿ

ಗರ್ಜ ತೀರಿಸಿ ನೀ ನಡೀಬೇಕು ಮಗಳೆ

ಮರ್ಜಿ ಉಳುಹಿಕೊಂಡಿರಬೇಕೆಮ್ಮ ||6||

ಮೀರಿದ ಹುಣ್ಣಿವಿ ಬೆಳಗಲಿ ತಾಯಿ

ಆರು ನೆಲೆಯ ಮೇಲುಪ್ಪರಿಗಿ ಏರಿ

ಸಾರಿ ಹೇಳುವೆನು ಮರೀಬೇಡ ಮಗಳೆ

ಮೂರು ಬಾಗಿಲ ಕದ ತೆರೆಯಮ್ಮ ||7||

ಜಯವೈತಮ್ಮ ಜಯವೈತೆ ತಾಯಿ

ನಯ ಭಯದಿಂದ ಕೇಳಿರಿ ಕಿರಲಮ್ಮ

ಮೈಲಾರಲಿಂಗನ ದಯವದೆ ನಿಮಗೆ

ಬಹು ಕಾಲದ ಮನೆದೇವರ ಮಾಡೆ ||8||

ಆಲಿಸೆ ನಿನ್ನ ಗಂಡನ ಮನೆ ಸಾಕೆ

ಮೇಲೆ ನೋಡಿ ಕಾಲಗೆ ಬೇಡಿಯ ಹಾಕೆ

ಹಾಲಬೋಲು ಹಾಲು ಬೋಲಾಗುತದೆ ಮಗಳೆ

ಸೋಲು ಇಲ್ಲವ್ವ ಗೆಲವು ಅದೆ ನಿನಗೆ ||9||

ಗುರುನಾಥನ ದಯವದೆ ನಿನಗಮ್ಮ

ಬರುವ ಕಂಟಕ ಬಯಲಾಗುವುದು ತಾಯಿ

ಗುರುತು ಹಿಡಿ ಕಣ್ಣ ಮುಂದಿದೆ ನೋಡು

ಉರುತರ ಅವನಿಯ ಹೋಗಬೇಡ ಮಗಳೆ ||10||

ಆ ಕಡೆ ವಗತನ ಆಗಿ ಬರಲಿಲ್ಲ

ಸಾಕು ಸಂಸಾರ ಸುಖವಿಲ್ಲವಮ್ಮ

ಆ ಕಡೆ ಕಣ್ಣು ಕಟ್ಟಿ ಬಂದೀನಿ ತಾಯಿ

ಆಕಾಶ ಹಕ್ಕಿ ನುಡಿದಿತ್ತು ಮಗಳೆ ||11||

ಬೇಕು ಶೂನ್ಯ ಮುಂದೆ ಇರಬೇಕಮ್ಮ

ಮೂಕ ಸಕ್ಕರಿ ಮೆದ್ದಂತವ್ವ

ವ್ಯಾಕುಲವೇತಕೆ ಬಿಡು ಬಿಡು ಮಗಳೆ

ಪಾಕು ಮಾಡಿಕೊಂಡು ಉಣಬೇಕಮ್ಮ ||12||

ಬಾಳ ದಿನದ ಬುಡುಬುಡಕ್ಯಾ ನಾನು

ಹೇಳಿಕಿ ಕಟ್ಟಿದ ಗಂಟವ್ವ ತಾಯಿ

ಕೇಳು ಕೈಲಾಸಪುರ ನನ್ನ ಮನೆಯೆ

ಕೇಳಬೇಡ ಹುಸಿ ನೋಡವ್ವ ತಾಯಿ ||13||

ಮುತ್ಯನ ಹೆಸರು ಪ್ರಭುದೇವನಮ್ಮ

ಹೆತ್ತ ತಂದೆ ಶಿವದೇವನು ನೋಡೆ

ಮರ್ತ್ಯಲೋಕವನಾಳುವನಮ್ಮ

ಹೊತ್ತುಗಳೆಯಲಿಕೆ ಹೊತ್ತಿಲ್ಲವ್ವ ||14||

ಸಂತರ ಬಯಲೂರ ಒಡೆಯನೆ ತಾಯಿ

ನಿಂತು ನೀರಲಕೆರೆ ಗಡಿ ನೋಡಮ್ಮ

ಮಂತ್ರಮೂರ್ತಿ ಪಂಚಾಕ್ಷರದೇವ

ನಂತು ಭಜಿಸು ಕಡೆ ಹಾಯಿಸುವನಮ್ಮ ||15||

ಜಂಗಮಂ ಜಯತೆ ಮಂಗಲಂ ಸ್ತುತೆ

ಮಂಗಲಾಂಗ ಘನಲಿಂಗ ಸಂಗ ನಿಸ್ಸಂಗ ಮಂಗಲಾನಂಗ ಭಂಗ ||ಪ||

ಸ್ಥೂಲ ಸೂಕ್ಷ್ಮದ ಅನುಕೂಲ ಕಾರಣಕೆ ಮೂಲವಾದ ನಿಜ

ನೀಲ ತೋಯ ಸುನೀಲದಾಲಯನೆ ಕಾಲಾತೀತ ||1||

ಯೋಗಿ ಹೃದಯ ಸುಖಭೋಗದನುರಾಗ ಸೌಖ್ಯದು

ದ್ಯೋಗ ಸಾಗಿಸುವ ಆಗಮಾದಿಗಳಿಗೀಗ ನಿಲುಕದಿಹ ||2||

ಪಂಡಿತಾಖ್ಯ ಪ್ರಚಂಡ ಚಂಡಕರ ಶೌಂಡವಿತತಿ ಮಾ

ರ್ತಾಂಡ ನಿಲಯದುದ್ದಂಡ ನೀರಲಕೆರೆ ಗಂಡನೆನಿಸುವ ||3||

ಜಾಣೆ ಕಾಂತನ ಕಾಣದಿರಲಾರೆ ಕ್ಷಣ

ತ್ರಾಣಗುಂದಿತೆನ್ನ ಮನ ಪ್ರಾಣಸಖನದೇನು ಗುಣ ||ಪ||

ಹೆದರ್ದು ಎನಗೆ ಎದುರು ನುಡಿ ಸದಾ ಸುಖದಿ ತನ್ನೊಡಗೂಡಿ

ಮದನ ಸುಂದರ ಮನೆಗೆ ಬಾರದೆ ಬೆದರಿಕೆಯೇನು ಅವನಿಗಾದ ||1||

ಕಕ್ಕಸ ಕುಚಗಳ ಎದೆಗಿಕ್ಕಿ ತರ್ಕ್ಕೈಸುತ ಎನ್ನ

ಸಕ್ಕರೆದುಟಿಯ ಸವಿದು ಉಕ್ಕುವ ಚಿತ್ಕಳೆಯನ ||2||

ಆಸರಿಕೆ ಬೇಸರಿಕೆಗೆ ಶಶಿ ಮೂಡಲು ಬಿಸಿಲು ಬೇಗ

ಈಶ ನೀರಲಕೆರೆವಾಸನ ಆಸೆ ಬಿಡದವ್ವ ಇನ್ನಾ ||3||

ಜೋ ಎಂಬೆ ಶರ್ವಾಣಿ ಜಯತು ರುದ್ರಾಣಿ

ಜೋ ಎಂಬೆ ಜ್ಯೋತಿ ಸ್ವರೂಪೆ ಕಲ್ಯಾಣಿ

ಜೋ ಎಂಬೆ ಜಯತು ಕಾಳಾಹಿವೇಣಿ

ಜೋ ಎಂಬೆ ಜಯಜಯತು ಮಹಾದೇವನ ರಾಣಿ ||ಪ||

ಶ್ರೀಮತ್ಸದಾನಂದ ಶಕ್ತ ಧ್ಯಾನದೊಳು

ಪ್ರೇಮದಿಂ ಹೊತ್ತುಗಳೆದವನ ಮನಸಿನೊಳು

ಕಾಮಿಸಿದಂತೆ ಅವಗೆ ತಾನೆ ಕೊಡುತಿಹಳು

ಸೋಮಾರ್ಕ ಕಳೆಯ ಅವನ ಮುಖದೊಳಿಡುತಿಹಳು ||1||

ನಿತ್ಯ ಸ್ಮರಣೆಗೆ ನಿತ್ಯ ಮಂಗಳವು ಒಲಿದಾಡಿ

ಸತ್ಯದಲಿ ಕಣ್ದೆರೆದು ಆತನ ನೋಡಿ

ಉತ್ತರೋತ್ತರ ಸುಖ ಮತ್ತು ತಾನಾಡಿ

ಇತ್ತು ಸೌಭಾಗ್ಯವಂತರದಿ ದಯಮಾಡಿ ||2||

ಕನಕಮಯ ದನಕರುಗಳ ಹೆಚ್ಚುತ್ತ ಮಾಡಿ

ದಿನದಿನದೊಳೈಶ್ಚರ್ಯ ಘನಮಾಡಿ ನೋಡಿ

ದಿನಸು ಬಹಳೊಡವೆಗಳು ಮನೆಯೊಳಿಡು ತಾಳಿ

ಕನಿಕರವನಿಟ್ಟವಗೆ ತಾ ಬರುವಳೋಡಿ ||3||

ಮಕ್ಕಳಾಶೆ ಕರಮನದಕ್ಕರವನಿಟ್ಟು

ಗಕ್ಕನಾಲಿಸುತವರ್ಗೆ ತಕ್ಕ ಸುತರಿಟ್ಟು

ಮುಕ್ಕರಿಕೆಯೊಳು ಮೋಹ ದಕ್ಕಿಸುತ ಕೊಟ್ಟು

ಚಿಕ್ಕ ಮಕ್ಕಳಾಟಿಕೆಗಳನಕ್ಕು ತಂದಿಟ್ಟು ||4||

ಹಿಂದೆ ಮಾಳ್ಪಳು ದುಃಖ ಸುಖವ ಪೂರೈಸಿ

ಸಂದಣಿಯೆ ಭೋಗ ಭೋಜನದಿ ಕೈ ಬೆರೆಸಿ

ಬಂಧುರಾನಂದ ಗೊಂದಣದಿ ಮೈ ಮರೆಸಿ

ಮುಂದೆ ಹಿಂದೆ ಕಾಯುವಳು ಕುಂದದನುಕರಿಸಿ ||5||

ತೇಜಿಸುತ್ತ ಪೂಜ್ಯವಂತನ ಮಾಡುವಳು

ರಾಜಮನ್ನಣೆಯ ರಾಜರನು ಬೆರೆಸುವಳು

ಮಾಜದವನ ಕೀರ್ತಿ ಬಾಜಿಸಿ ನುಡಿಸುವಳು

ರಾಜರಾಜೇಶ್ವರಿಯು ತಾನೆ ಇರುತಿಹಳು ||6||

ಉದಯಾಸ್ತಮಾನ ಪದ್ಮಾಸನದಿ ನಲಿದು

ಚದಲದಲೆ ದೃಷ್ಟಿ ಭ್ರೂಮಧ್ಯದೊಳು ಬಲಿದು

ಕದಲಿಸುವ ನಾದದೋಂಕಾರ ಧ್ವನಿಗೊಲಿದು

ಸುಧೆ ಕಲೆಗಳಾನಂದ ನದರಿನೊಳು ತಳೆದು ||7||

ಈ ತೆರದಿ ತನ್ನ ಧ್ಯಾನವ ಮಾಡಲಾಗಿ

ಓತು ಕೊಡುವಳು ಸಕಲ ಸುಖವ ಸಂಯೋಗಿ

ಮಾತು ಮಹತ್ವವ ಮಾಡಿ ತೋರ್ಪಳಾ ಭೋಗಿ

ಖ್ಯಾತಿ ಮಾಳ್ಪಳು ಜಗದೊಳೀ ಶಿವಯೋಗಿ ||8||

ಸಾಧನವಾಗದ ಕಾರ್ಯ ಸಾಧಿಸುವಳೀಕೆ

ವಾದಿ ತರ್ಕವ ಗೆಲಿಸಿ ವರ್ಧಿಸುತ ಸಾಕಿ

ಭೇದ ಭ್ರಮೆ ಹೊಂದಿದಾಕ್ಷಣಕೆ ಹೊರನೂಕಿ

ತಾಗು ರೋಗಗಳಳಿದು ಮಾಳ್ಪಳು ಜ್ವಾಕಿ ||9||

ಬೋಧ ರೂಪನ ಮಾಡಿ ನಾದ ಮುಚ್ಚಿಸುತ

ವಾದಿ ನಾಲಗೆಯ ತಾ ಸೇದಿ ಬೆಚ್ಚಿಸುತ

ಕಾದುಕೊಂಡಿಹಳು ಎತ್ತ ಹೋದಡೆ ಹೆಚ್ಚಿಸುತ

ಮೋದ ಮಾಡುತ ಮಹಾದೇವಿ ಮೋಹ ಮಚ್ಚಿಸುತ ||10||

ಕುದುರೆ ಏರಿಸುತ ವೃತ್ತ ಕಹಳೆಗಳ ಒದರಿಸುತ

ಸದರ ಸಿಂಹಾಸನದೊಳಿಟ್ಟು ಸುಖಿಸುತ

ಮಧುರಾನ್ನದಮೃತವ ಉಣಿಸಿ ಪೋಷಿಸುತ

ಮದನಹರ ಭಕ್ತಿಯಲಿ ಸಂತತಿಯನರಸುತ ||11||

ತನ್ನ ಧ್ಯಾನದ ಯೋಗಿಯಾನಂದ ನೋಡಿ

ಕುನ್ನಿ ನಿಂದಿಸಲವನ ನರಕಕೆಡೆ ಮಾಡಿ

ಬಣ್ಣಿಸುತ ಭಾಪುರೆ ಎಂದವನ ಕೊಂಡಾಡಿ

ಕಣ್ಣೆವೆಯ ತೆರೆಸಿ ತನ್ನಂತೆ ದಿಟ ಮಾಡಿ ||12||

ನಿನ್ನ ವೈರಿಗಳ ವೈರಿ ನಾನಾಗಿರುವೆ

ಮುನ್ನ ನೀ ನೆನೆಸಿದಾಕ್ಷಣಕೆ ನಾ ಬರುವೆ

ಭಿನ್ನ ಮಾಡಿದ ಭ್ರಷ್ಟಗಾನು ಬೇರೆ ಇರುವೆ

ಪುಣ್ಯಾತ್ಮ ನಾ ನಿನ್ನವಸ್ಥಾಂತರದಿ ಮೆರೆವೆ ||13||

ಉದಯ ಮಧ್ಯಾಹ್ನ ಸಂಧ್ಯಾ ತ್ರಹದಿ ನೆನೆಯೆ

ಮುದವೇರಿ ಸುಖದೊಳುಕ್ಕುವ ಮನೆಯೆ

ಬೆದರಿಲ್ಲದಿರುವುದಕೆ ನಾನಲ್ಲಿರುವೆ ದಣಿಯೆ

ಸದನದೊಳು ಸತಿಸುತರ ಕೊಡುವುದಕೆ ನಾ ದಣಿಯ ||14||

ಭಾರಿ ಸಿಡಿಲಿನ ಗಾಯ ತಪ್ಪಿಸುತ ಕಾಂಬೆ

ಮಾರಿ ದುರ್ಗಿಯ ಭೀತಿ ಹರಿದುಳಿಸಿ ಕೊಂಬೆ

ಘೋರ ಮಳೆ ಸುರಿಯಲ್ಕೆ ಗಾಳಿ ಹಿಡಿಕೊಂಬೆ

ಸೇರಿ ಸುಖಿಸುವುದೆನ್ನಮರಿಯೊಳು ಇಂತೆಂಬೆ ||15||

ಅಹಿವೃಶ್ಚಿಕಾಗ್ನಿ ಹುಲಿ ಭಯವ ತಪ್ಪಿಸುವೆ

ಮಹಾಗ್ರಹ ಭೂತಗಣಗಳು ಬರಲು ಜಪ್ಪಿಸುವೆ

ವಿಹಿತ ವೇತಾಳ ದಳಪತಿಯನೊಪ್ಪಿಸುವೆ

ಬಹು ಪಿಶಾಚಿಗಳ ಅಧಿಕಾರವನು ಗಪ್ಪಿಸುವೆ ||16||

ಜಲಮೇರೆದಪ್ಪಿಸಲು ಮುಳುಗಿ ತೇಲಿಸುವೆ

ಫಲ ಮಾರಿ ಶತೃಗಳ ನೆಲದಿ ಸೋಲಿಸುವೆ

ಕಲಿಪಾರ್ಥಗಿತ್ತ ಬಲು ಶಕ್ತಿಯನು ಬಲಿಸುವೆ

ಬಲು ದೀರ್ಘದಾಯುಷ್ಯ ಮೇಲೆ ಪಾಲಿಸುವೆ ||17||

ಮಂತ್ರದೈವಕೆ ಮಹಾ ಮಂತ್ರಿಕನ ಮಾಳ್ಪೆ

ತಂತ್ರಚಾಟಕರ ಛಲ ಮುರಿದು ನೋಳ್ಪೆ

ಮಂತ್ರ ತಂತ್ರಕೆ ಪ್ರತಿ ಮಂತ್ರಕನ ಮಾಳ್ಪೆ

ಚಿಂತೆಯ ಪರಿಹರಿಸಿ ಸ್ವತಂತ್ರದಿಂದಿಡುವೆ ||18||

ನಿನ್ನ ಕೊಂಡಾಡುವರ ಮುನ್ನ ರಕ್ಷಿಸುವೆ

ನಿನ್ನೊಳು ವೈರ ಮಾಳ್ಪರಿಗೆ ಶಿಕ್ಷಿಸುವೆ

ನಿನ್ನ ನುತಿಗೇಳುವರ ಉನ್ನತವನೀಕ್ಷಿಸುವೆ

ನಿನ್ನ ನುತಿ ಬಿಟ್ಟವರ ಸೀಳಿ ಭಕ್ಷಿಸುವೆ ||19||

ಆಕರ್ಷಣವ ಕೇಳಿ ಕರೆದುಕೊಳ್ಳುವದು ಬೇಕು ಆ

ಪೋಷಣವೆನಲು ತಾನೆ ಕೊಳ್ಳುವದು

ಭೀಕರೋಚ್ಚಾಟನವ ನೂಕಿ ಕೊಡುತಿಹುದು

ಸಾಕು ಸ್ತಂಭನವೆನಲು ಅಲ್ಲಿ ನಿಲ್ಲಿಪುದು ||20||

ಇಷ್ಟು ವಶಕರದಿ ಈ ಲೋಕದೊಳು ಬಾಳು

ನಿಷ್ಠೆ ನಾ ನಿನಗಿಡುವೆ ಇಷ್ಟವಿರೆ ಕೇಳು

ದೃಷ್ಟ ಪ್ರತ್ಯಕ್ಷ ಬೇಕಾದುದನು ಹೇಳು

ಅಷ್ಟಮಹಾಸಿದ್ಧಿ ಸಾಮರ್ಥ್ಯ ತಾಳು ||21||

ಯಾಕೆ ತಪಿಸಿದೆ ಮಗನೆ ಬಂದೆ ಕೇಳು ವರವ

ಸಾಕು ಮೆಚ್ಚಿದೆ ಬಿಡದೆ ಹಿಡಿವೆ ನಾ ಕರವ

ನೀ ಕಂಡು ಕೇಳಿಕೊ ಗುರುತಿಟ್ಟು ಕುರುವ

ಬೇಕಾದರೆ ಹಿಡಿ ಪಂಚಪರುಷ ಸ್ಥಿರಕರವ ||22||

ಹರಿಹರಾದ್ಯರ ಕಾವಲಿಡುವೆ ಬೆನ್ನ ಹಿಂದೆ

ಬರುವ ಕಂಟಕಕೆ ಬಾಯ್ದೆರೆವೆ ನಾ ಮುಂದೆ

ನಿರುತ ದಿವರಾತ್ರಿ ಕಾಯ್ದಿರುವುದಕೆ ನಾ ಬಂದೆ

ಕರುಣಿ ಬಿಡು ನಿನ್ನ ಬಾಗಿಲ ಹೊಂದಿ ನಿಂದೆ ||23||

ಸಾಸಿರ ಎಸಳಿನ ಕಮಲದೋಂಕಾರ ನಿಳಯೇ

ಸೂಸುವ ರವಿಚಂದ್ರ ಮಹಾ ತೇಜ ಕಳೆಯೇ

ಏಸು ಮಾಡಲು ಖಾಲು ತಳತಳಿಸುವ ಹೊಳೆಯೇ

ಭಾಸಮಾನಾಬ್ದಮದು ಕಣ್ಮನದೊಳು ಇಳಿಯೇ ||24||

ನೀನಿರುವ ಸ್ಥಳವ ಕ್ಷೇತ್ರವದೆಂದು ನೋಡಿ

ಭಾನುಶೇಖರನ ಕರೆತಂದೆ ಮಾತಾಡಿ

ಸಾನುರಾಗದಿ ಸಕಲ ಸಂಭ್ರಮದಿ ಕೂಡಿ

ನಾನು ದಿಟದಿ ಬಂದೆ ಕೈಲಾಸ ಬಿಟ್ಟೋಡಿ ||25||

ಹಿಂದೆ ದಿವಿಜರಿಗೊಲಿದು ರಕ್ಕಸರ ಕೊಂದೆ

ನೊಂದಿರೆನ್ನಯ ಮಕ್ಕಳು ಮರಿಗಳೆಂದೆ

ಬಂದ ಶುಂಭಾದಿ ದನುಜರಗೈದೆ ಛಿಂದೆ

ಕುಂದದೆ ಅಸುರರಿಗರಸು ಮಹಿಷನನು ತಿಂದೆ ||26||

ಇಷ್ಟಾಯ್ತು ಹಿಂದಕ್ಕೆ ನಿನಗೇನು ಬೇಕು

ಕಷ್ಟಪಡಿಸದೆ ಒಲಿವೆ ನಂಬಿಗಿರಬೇಕು

ಭ್ರಷ್ಟ ದೈವದ ಭಜನೆ ಅಳಿವ ಮನ ಬೇಕು

ನಿಷ್ಠೆ ನಿನಗೇಕೆ ನಾನಿದ್ದದ್ದ ಸಾಕು ||27||

ಇಹದೊಳು ಸಂಪತ್ತನೀ ಕ್ಷಣಕೆ ಕೊಡುವೆ

ಮಹಿಯರಿಯಲಾ ಮೋಕ್ಷ ಪದಕೆ ಹೊಂದಿಸಿಡುವೆ

ಬಹು ಕಳೆಗಳ ಉನ್ಮನಿಯ ಗುಹ್ಯಕೆ ಒಯ್ದುಬಿಡುವೆ

ಮಹಿತ ಸೋಹಂನಿಳಯನ ಆಣೆಯಾಗಿ ನುಡಿವೆ ||28||

ಇಂತೆಂದು ನುಡಿದು ಪರದೇವಿ ತಾ ಬಂದು

ಅಂತರಿಸದೆ ಎದ್ದು ನಾ ಕರ ಮುಗಿದು ನಿಂದು

ಚಿಂತಿಗೆಯು ಚಿಂತಾಮಣಿಯು ನೀನೆಂದು

ಸಂತಸದಿ ಪೊಗಳ್ದೆ ನಾನಂದಳಂ ನಿಂದು ||29||

ತ್ರಾಹಿ ಸರ್ವೇಶ್ವರಿಯೆ ತ್ರಾಹಿ ನಾನೆಂದೆ

ತ್ರಾಹಿ ಸತ್ಕಲೆ ಕೀರ್ತಿ ಸಫಲವಾಯ್ತು ಎನಗೆಂದೆ

ತ್ರಾಹಿ ಸುಜನರ ಜೀವಿ ಭಕ್ತರಾನಂದೆ

ತ್ರಾಹಿಮಾಂ ಮಂತ್ರಾದಿ ಪರವಸ್ತು ದಿಟವೆಂದೆ ||30|

ಜಯತು ಜಯವೆಂಬೆ ಜಗದೇಕ ಜಗದಂಬೆ

ಜಯತೆಂದು ಪಾಡಿ ಜರೆಮರಣ ಕಳಕೊಂಬೆ

ಜಯನುತಿಗೆ ನೀನೊಲಿದು ಕಣ್ಣಾರೆ ಕಾಂಬೆ

ಜಯತು ಜಯವೆಂಬೆ ಜಗದಾದಿ ಕುಟುಂಬೆ ||31||

ಏಕ ಮೂರ್ತಿಯೆ ದೈವವೇಕ ಪ್ರತಿ ಇಲ್ಲ

ಏಕಮೇವಾದ್ವಿತೀಯ ಶೃತಿ ಸಾರಿತಲ್ಲ

ಕಾಕು ದೈವದ ಭಜನೆ ನೆನಹು ಒಂದಿಲ್ಲ

ಬೇಕು ಸದ್ಗತಿಯೆನಲು ಕೊಡುತಿರಲು ಬಲ್ಲ ||32||

ಪಂಚಭೂತಗಳ ಪಂಚಾಕೃತಿಯ ಮಾಡಿ

ಪಂಚವಿಂಶತಿ ತತ್ವಗಳೂ ಕೂಡಿ ಕುಣಿದಾಡಿ

ಹಂಚಿಸುತ ಸಂಚಿತಾಗಮವ ಸರಿ ಮಾಡಿ

ವಂಚಿಸದೊಳುಣು ಪ್ರಾರಬ್ಧದೊಳಾಡಿ ||33||

ಐದು ಭೂತಗಳೂ ಐದು ಇಂದ್ರಿಯ ಪ್ರಾಣಿಗಳು

ಐದು ಕರಣಂಗಳು ಐದು ವಾಯುಗಳು

ಐದು ಶಬ್ದ ಸೂತ್ರವೈದು ಅವಯವಗಳು

ಐದು ಕೂಡಿ ಇಪ್ಪತ್ತೈದು ತತ್ವಗಳು ||34||

ಸ್ಥೂಲ ಸೂಕ್ಷ್ಮವು ಕಾರಣತ್ರಯಗಳೆಂದು

ಮೂಲವರಿದಾಕ್ಷಣಕೆ ಹೆಸರಿಟ್ಟೆನೆಂದು

ಕಾಲಕರ್ಮವಳಿದಿದಕೆ ಸಮನಿಸಿತೆಂದು

ಲೀಲೆ ಮಾಡಿದ ಜಗದ ನಾಟಕವಿದೆಂದು ||35||

ಜಾಗರಣ ಸ್ಥೂಲ ಸೂಕ್ಷ್ಮಂಗಳೊಳು ಕನಸು

ಮೇಗಣ ಕಾರಣಕೆ ನಿದ್ರಾನಂದ ದಿನಸು

ಈಗ ಲೋಚನ ತೆಗೆದು ತಿಳಿವುದೀ ಮನಸು

ಸಾಗಿ ಸುಳಿಯುವ ಜಗವಿದೆಂದು ನೀ ನೆನೆಸು ||36||

ರುಧಿರ ರೇತಂಗಳಿಂದ ಈ ದೇಹವಾಯ್ತು

ಪುದಿದ ಭೂತಗಳೈದು ಕೂಡಲೆ ಬಂತು

ಉದಕವದರೊಳು ಬೆರೆಸಿ ತೊಳೆಯೆ ನೀರಾಯ್ತು

ಉದಯಿಸಿದ ಪ್ರಾಣಿಗಳಿಗೆ ಓತು ಸುಖವಾಯ್ತು ||37||

ಸ್ಥೂಲ ದೇಹಕ್ಕಧಿಕ ಸೂಕ್ಷ್ಮ ತನುವಿಹುದು

ಮೇಲು ಕಾರಣವದಕೆ ದೇಹ ಮಿಗಿಲಹುದು

ಆಲಿಸು ಮಹಾ ಕಾರಣದೊಳುತ್ತಮವಹುದು

ಢಾಳಿಸುತ ಮಿಗಿಲೊಂದಾಗಿರುತ್ತಿಹುದು ||38||

ತೋರ ತನು ಮೂರರ್ಧ ಮೊಳ ಮಾಡಿ ನೋಡಿ

ಸೇರಿಸಿದೆ ಲಿಂಗ ದೇಹಾಂಗುಷ್ಠಗೂಡಿ

ತೋರಿಸಿದೆ ಕಾರಣದಂಗವು ಜೋಡಿ ಮಹಾ

ಕಾರಣಕೆ ಮೊಸರು ಕೆನೆ ಮಾಡಿ ||39||

ವ್ಯಾಘ್ರ ಕಂಥೆಯ ಬಸವಲಿಂಗ ಮಹಾಯೋಗಿ

ಶೀಘ್ರದಿಂ ಹೇಳಿದ ಶ್ರೀ ದೇವಿ ತಾನಾಗಿ

ಜಾಗ್ರವಿಡದಾಲಿಸಿ ಜನ ಮೆಚ್ಚಲಾಗಿ

ವಿಗ್ರಹಿಸುತೊಲಿದು ಸುಜನರು ಶಿವದೂಗಿ ||40||

ಸಂತರಿಗೆ ತವರೆನಿಪ ಮಹಾಂತ ಗಡಿ ಸೇರಿ

ನಿಂತು ನೀರಲಕೆರೆಯೊಳು ಹೊಡೆಸಿ ಜಯಭೇರಿ

ಚಿಂತಿತಾರ್ಥವ ಕೊಟ್ಟು ಪರೆದ ನಿಜಶೌರಿ

ಅಂತರಾತ್ಮಕ ಪಂಚಾಕ್ಷರನರಸಿ ನಿಜಗೌರಿ ||41||

ಜ್ಯೋತಿ ಬೆಳಗುತದೆ ಸಖಿಯೆ

ಸತ್ಯ ರೀತಿಯ ತಿಳಿ ಚಂದ್ರಮುಖಿಯೆ

ಪಾತಾಳಾಂಬರ ಪಂಚಭೂತಂಗಳ ಒಳ ಕೊಂಡು

ಖ್ಯಾತಿಯಿಂದಲಿ ಖದ್ಯೋತನ ಪ್ರಭೆಯಂತೆ ||ಪ||

ಸಚರಾಚರವು ತಾನಾಗಿ ಮೇಲು

ಪಚರಿಸುತ ಪರವಾಗಿ

ವಚನ ಮಾನಸ ಗೋಚರವಾಗಿ ಮತ್ತೆ

ರಚನೆದೋರುವ ಸರ್ವಸಾಕ್ಷಿ ಸ್ವರೂಪದೊಳು ||1||

ಮಂಡಲತ್ರಯವ ತುಂಬಿ ಸೋಸಿಯ

ಖಂಡ ಬೆಳಗು ತೇಜೋರಾಶಿ

ಹಿಂಡಾದ ಶತ ಮಾರ್ತಾಂಡಾಗ್ನಿ ಕಳೆ ಮೀರಿ

ದಂಡನಾಳ ಕಮಲ ಕುಂಡ ಪೀಠದೊಳು ||2||

ಅರಿವು ಅಜ್ಞಾನಕ್ಕೆ ಮೀರಿ ಸಾಸಿರದಳ

ದರಮನೆ ಸೇರಿ

ಮೆರೆವ ನೀರಲಕೆರೆ ಗುರುಮೂರ್ತಿ ತಾನಾಗಿ

ಕರಮನಭಾವದೊಳು ಬೆರೆದೇಕ ರೂಪದೊಳು ||3||

ತಮ್ಮ ಕೇಳೋ ಎನ್ನ ಉದ್ಯೋಗ ತಮ್ಮ ಕೇಳೊ ಎನ್ನ ವ್ಯವಹಾರ

ಹಮ್ಮನಳಿದು ಪರಬ್ರಹ್ಮ ಚಿಂತೆಯೊಳು ಸುಮ್ಮನಿರುತ

ಎರಡೆಮ್ಮೆಯ ಕಾಯುತೀನಿ ||ಪ||

ಸಕಲರು ಅರಿಯದ ಉದ್ಯೋಗ ತುಸು ಕಕುಲತೆಯಿಲ್ಲದ ಉದ್ಯೋಗ

ಮುಕುತಿಯೆಂಬ ಸ್ತ್ರೀ ಸುಖ ಸ್ವರೂಪದಿ ಇರೆ ವಿಕಳಮತಿಗೆ

ತಾ ಸಾಕ್ಷಿಯಾಗಿಹ ||1||

ಒಂದೆರಡಾಗದ ಉದ್ಯೋಗ ಎಂದೆಂದಿಗೆ ತೀರದ ಉದ್ಯೋಗ

ಕುಂದದೆ ಹೆಚ್ಚದೆ ಸುಖ ಸ್ವರೂಪದೊಳೆಂದೆಂದಿಗೆ ತಾನಿದ್ದಂತಿರುತಿಹ ||2||

ತಟ್ಟದ ಮುಟ್ಟದ ಉದ್ಯೋಗ ತುಸು ಕಟ್ಟಳೆಯಿಲ್ಲದ ಉದ್ಯೋಗ

ಶ್ರೇಷ್ಠನೆನಿಪ ಗುರು ಪಂಚಾಕ್ಷರನು ಮುಟ್ಟಿ ಮರಳಿ ಹುಟ್ಟದಲಿರುತಿಹ ||3||

ತಿಳಿದು ನೋಡೀ ಮಾತನಾಲಿಸೋ

ಕಳವಳಿಸದೆ ನೆನೆಸೋ ||ಪ||

ನಚ್ಚದಿರೊ ಸಂಸಾರವಿದು ಕನಸು

ಎಚ್ಚರಿರಲಿ ನಿನ್ನ ಮನಸು

ನಚ್ಚಿದರೆ ಮಾಡುವುದು ಬಹು ದಿನಸು

ಸಚ್ಚರಿತನ ನೆನೆಸು ||1||

ಮುಚ್ಚಿದ ಭ್ರಮೆ ಮೋಹಿಸದೆ ಅಳಿಯೊ

ಬೆಚ್ಚದಿರು ಬೆದರಿಕೆಯ ಕಳೆಯೊ

ಎಚ್ಚರವಿಡಿ ರೀತಿ ತಿಳಿಯೊ

ನಿಶ್ಚಯದಿ ನಿಜ ಸುಖದಿ ಹೊಳಿಯೊ ||2||

ಕಣ್ಣಿನೊಳು ಕಣ್ಣಿಟ್ಟರೆ ಅಪರೂಪ

ಕಾಣುವುದು ತದ್ರೂಪ

ಕಣ್ಣಿನೊಳು ಕಂಡೆ ಚಿದ್ದೀಪ

ಚಿನ್ಮಯ ಚಿದ್ರೂಪ ||3||

ಸಣ್ಣ ಮನೆ ಸಹಸ್ರಾದ ನಾದ

ಹಣ್ಣಿಕೊಂಡಿಹುದು ಆತ್ಮಬೋಧ

ಭಿನ್ನವಿಸದೆ ಅತಿ ರೂಪನಾದ

ನಿನ್ನೊಳರಿ ನಿನ್ನ ಮನ ವಿನೋದ ||4||

ಪೊಡವಿಗತಿಶಯ ಗಡಿ ನೀರಲಕೆರೆಯ

ದೃಢ ಗುರುವಿನ ಅಡಿಯ

ಬಿಡದೆ ಭಜಿಸುವ ಭಕ್ತರನು ಮರೆಯ

ತಡ ಮಾಡದಲೆ ಕೊಡುವ ಸಿರಿಯ ||5||

ಪಡುವಣದ ದಿಕ್ಕಿಗೆ ಹೋಗೋ

ಒಡೆಯ ಪಂಚಾಕ್ಷರನ ಕೂಗೋ

ಬಿಡದೆ ಧ್ಯಾನಿಸಿ ಮುಡಿಯ ಬಾಗೊ

ಒಡನೆ ಮೋಕ್ಷಾಪೇಕ್ಷಿಯಾಗೊ ||6||

ತಿಳಿದುಕೊಳ್ಳೆಲೊ ನೀನು ತಮ್ಮ ನಿಜದರುವಿನ ಸುಮ್ಮ

ತಿಳಿದು ಭವ ಕಳೆದು ಹಮ್ಮಳಿದು ತಳತಳನೆ ಹೊಳೆದು ||ಪ||

ಮಡದಿ ನನ್ನವಳೆಂದು ಬಿಡದೆ ಅವಳ ಹೊಂದಿ

ಒಡವೆ ವಸ್ತುವನಿಟ್ಟು ಕಂದಿ

ಕಡೆಗೆ ಒಬ್ಬರನು ಪೊಂದಿ ಇದು ಕಷ್ಟ ದುಷ್ಟ

ತಿಳಿ ಭ್ರಷ್ಟ ಪಡೆದೀದಿ ಅದೃಷ್ಟ ||1||

ಚಪಲದಿಂದ ಎಲ್ಲ ಅರ್ಥವ ಗಳಿಸಿ ಗುಪಿತದೊಳಗಿರಿಸಿ

ಅಪಘಾತರಾಗಿ ಒಬ್ಬರನಳಿಸಿ

ವಿಪರೀತವ ತರಿಸಿ ಇದು ಜಾಲ ವ್ರತಶೀಲ

ಬಿಡು ಬಾಲ ತಿಳಿ ಮೂಲ ಕಳ್ಳರ ಪಾಲ ||2||

ಘಟವು ದಿಟವು ಎಂದು ಬಂದು ಕಠಿಣದಿ ನಡಕೊಂಡಿ

ಮಠವು ರಚಿಸಿ ನೋಡುಂಡಿ

ದಿಟವ ಕಳಕೊಂಡಿ ಹರಿ ಆಶಾ ತರ್ಕೇಶ

ಭವನಾಶ ಸರ್ವೇಶ ಪಂಚಾಕ್ಷರೀಶ ||3||

ದಯ ಮಾಡೊ ಸಾಂಬ ಭಜಿಸುವೆನೈ ಜಗತ್ಕುಟುಂಬ ||ಪ||

ನಯಮಯ ಗುಣಮಣಿ ವಂದ್ಯನೆ

ಭಯವ ಕಳೆದು ನೀಡೋ ವರ ಜಯವ ನಿರಂತರ ||ಅ.ಪ||

ಹೇಸಿಕಿ ಸಂಸಾರದೊಳಗೆ ನಾ ಘಾಸಿಯಾದೆ ಪೂರ

ಶ್ರೀಶ ಮುಖ್ಯ ಅಮರ ಪೂಜಿತಾಂಘ್ರಿ ಮನಕೆ ವಿಲಾಸವ

ದಯಮಾಡೊ ||1||

ನಿತ್ಯ ನಿರಂಜನೆ ನುತಿಪರಿಗಿತ್ತೆ ಸುಖವ ನೀನೆ

ಅತ್ಯತಿಶಯದಿ ಯತ್ಯದಿನಾಥರ ಭೃತ್ಯತೆಯಂ ಶುಭವೆತ್ತ ಮಹಿಮ

ಶಿವ ದಯ ಮಾಡೊ ||2||

ವರ ನೀರಲಕೆರೆಯ ಪಂಚಾಕ್ಷರ ಗುರುವೆ

ಮರೆಯದಿರುವೆನು ಮಾಯಾಹರನೆ ನಿರಾಮಯ

ಸ್ಥಿರಕರಮಾಗಿಹ ಪರತರ ಮುಕ್ತಿಯ ದಯಮಾಡೊ ||3||

ದೀನ ಮಾನವನಿಗೇನು ಹೇಳಿದರೆ

ದಾನ ಮಾಡುವುದು ಬಂದೀತೆ

ಹೀನ ಸಂಸಾರ ಹಿತವಾದ ದುರಾತ್ಮಗೆ

ಜ್ಞಾನಬೋಧ ಸರಿ ಹೊಂದೀತೆ ||ಪ||

ಕಾಗೆಗೆ ಘೃತ ಪರಮಾನ್ನವನುಣಿಸಲು

ಕೋಗಿಲೆ ಸ್ವರ ಸರಿಗಟ್ಟೀತೆ

ರಾಗದಿ ರಚಿಸುತ ರಚನೆಯೊಳಿರುವಗೆ

ಯೋಗರತಿ ಮನ ನಟ್ಟೀತೆ

ಭೋಗವಿದ್ದು ಸವಿದುಣ್ಣದೆ ಸತ್ತರೆ

ರೋಗದೊಳನ್ನವು ಉಣಗೊಟ್ಟೀತೆ ||1||

ಮರ್ಕಟನಿಗೆ ಮಾರ್ಕಂಡೇಯ ಹೆಸರಿಡೆ

ಮರವೇರದೆ ಮನೆ ಹಿಡಿದೀತೆ

ಸಕ್ಕರೆ ನಾಯಿಗೆ ಸವಿದಟ್ಟಲು ಕಾ

ಲಿರ್ಕಿಸಿ ಕೆರವ ಕಡಿಯದೆ ಬಿಟ್ಟೀತೆ

ತರ್ಕ ಮಾಡಿ ತಗಲಿಡುವಗೆ ಬೋಧಿಸೆ

ಅರ್ಕ ಕಳೆಯ ಚಿತ್ತ ಹೊಳೆದೀತೆ ||2||

ಇದ್ದಲಿ ತೊಳೆಯುತ ಹಾಲಿನೊಳದ್ದೆ ಪ್ರ

ಸಿದ್ಧ ಕಪ್ಪು ಬಿಳಿದಾದೀತೆ

ಬದ್ಧ ಲೋಭವಿದ್ದ ಮನುಜಗೆ ಹಿಂ

ದಿದ್ದ ಗಳಿಕೆ ಸಾಕಾದೀತೆ

ಬುದ್ಧಿಹೀನಗೆ ಉಪದೇಶವ ಮಾಡಲು ಮೊದ

ಲಿದ್ದ ರೀತಿ ಬದಲಾದೀತೆ ||3||

ದೇಹ ಕಾಂಬನಿಗೆ ದೇಹದ ನಂಬಿಗೆ

ದೇಹದಭಿಮಾನ ಬಿಟ್ಟೀತೆ

ಮೋಹ ಮರವೆಯೊಳು ಬೀಳ್ದ ಮಾನವಗೆ

ಭಕ್ತಿ ಮಾರ್ಗ ಅಳವಟ್ಟೀತೆ

ಊಹಿಸಿ ಶೃತಿ ಗುರುಜ್ಞಾನ ಇಲ್ಲದಗೆ

ಸೋಹಂ ಸುಖ ಮೈಗೊಟ್ಟೀತೆ ||4||

ಚಂಡ ಪ್ರಕಾಶೋದ್ದಂಡ ನೀರಲಕೆರೆ

ಗುಂಡು ಮೆಟ್ಟು ಗರ್ವಿಸಲಾದ

ಪಿಂಡ ಬ್ರಹ್ಮಾಂಡಗಳೈಕ್ಯವೆಂಬುದರಿಯದೆ

ಭಂಡ ಭ್ರಮೆಯೊಳು ಯಮಪುರಕೆ ಹೋದ

ದಿಂಡುಗೆಡದಲಿ ಇಹಪರಕೆ ಓಡಾಡುತ

ಖಂಡಿತ ಗತಿಗವ ದೂರಾದ ||5||

ದುರ್ಗಿ ಬಂದಳೀಗ ಭೋರ್ಗರೆವುತ ಭವ

ಭರ್ಗನ ಭಜಿಸಿರಿ ಮನದೊಳಗೆ

ದೀರ್ಘ ದೇಹಮನ ಘನದಡಿ ಚಾಚುತ

ಸ್ವರ್ಗ ಮಾರ್ಗದಿಂದ ಇಳೆದಿಳೆಗೆ ||ಪ||

ದುಃಖದ ಸಂಸಾರ ಅಕ್ಕರೆಯಲಿ ಮನ

ಸಿಕ್ಕಿದವರನು ಶೀಘ್ರದಲಿ

ಸೊಕ್ಕಿದ ಕುರಿಯ ಕಟಗಗಿಕ್ಕಿ ಕೊಯ್ದವೊಲು

ಮುಕ್ಕಣ್ಣಗೆ ಮಿಕ್ಕಿದ ಮಾಯಿ ||1||

ಹೇಸಿಕಿ ಹೆಚ್ಚಿಸಿ ಘಾಸಿ ಮಾಡುತಲಿ

ಮೋಸದ ಮೂರ್ತಿಯ ಮೆಚ್ಚಿಸುತ

ನಾಶ ಮಾಡಿ ನಗುತಲಾಕ್ಷಣದೊಳು

ಆಶೆಯ ಹಿಡಿದು ಆಶೆಯ ಜನರಿಗೆ ||2||

ಬಂಡು ಮಾಡಿ ಬಾಯ್ ಕುಂಡಿಲಿ ಕಿತ್ತಿಸಿ

ಖಂಡಿತವಿಲ್ಲದೆ ವಾಯ್ಕೆನಿಸಿ

ಅಂಡಳಿಸುವಳು ವೈದ್ಯರಿಲ್ಲದ ರೋಗವಿದು

ದಿಂಡುರುಳಿಸುವಳು ಧರೆಯೊಳಗೆ ||3||

ಸಕಲರಿಗೆ ಹೇಳುವೆ ವಿಕಳತೆ ಬಿಡಿರೋ

ಕಕುಲಾತಿ ಕೆಡಗಿದು ಕೆಡಬೇಡಿರೋ

ಸುಖ ರೂಪದಿ ಸದ್ಗುರುವಿನ ಧ್ಯಾನಿಸಿ

ನಿಖಿಲವ ಮರೆದು ನಿಜಾಲಯದಿ ||4||

ಕುಟಿಲ ಕಳೆದು ಕುಣಿಕುಣಿಯುತ ಘಟದಿಟ

ವಟಿಸುತ ನಿಟಿಲ ತಟವಿಡಿದು

ನಟಿಸುತ ನೀರಲಕೆರೆ ಅಘಟಿತಾತ್ಮನ

ಭಟರಾಗಿ ಭವಗಳ ಕಳೆದುಕೊಳ್ಳಿರೋ ||5||

ದೇವ ಸಿದ್ಧರಾಮ ಭಕ್ತೋದ್ಧಾರ ಭಜಕ ಪ್ರೇಮ

ಕಾವ ಜೀವ ಜಗಜ್ಜೀವರ| ಪೇಕ್ಷಿತವೀತ

ದೇವ ದುರ್ಗಾಲಯ ದೇಶಿಕ ||ಪ||

ಮಾನಸ ಅಗೋಚರನೆ ಕಾಮಿಸಲವರ ಇಚ್ಛಾಕರನೆ

ನೇಮಕರಹಿತ ನಿಸ್ಸೀಮ ನಿರಂಜನ| ಧಾಮನೆನಿಪ

ನಿರ್ನಾಮ ಪರಾತ್ಪರ ||1||

ಶರಣಗಣೋತ್ಸಂಗ ವರ ನಿರ್ಮರಣ ಪಾಂಡುರಂಗ

ಹರಿಣ ಕರಾಂಕಿತ ಭರಣ| ಪ್ರಭಾಕರ ಕಿರಣ

ಕೋಟಿಮಯ ವರ್ಣಕತೀತನೆ ||2||

ಘಟಿತ ಕರದಿ ಶೂಲ ನಟೋದ್ಘಟ ಪಟುತರ ಶಿರಮಾಲಾ

ಕುಟಿಲವಲ್ಲದು ದಿಟ ತಟಿತ್‍ಪ್ರಕಶಾದಿ| ನಿಟಿಲಾಲಯ

ದುರ್ಘಟಿಸುತ ಘಟಿಸುವ ||3||

ಕಾಲಾಂತಕ ಕಕುಭ ಪಾಲಶೀಲ ವಿಶ್ವಮೂಲ

ಜಾಲಸುರಾರ್ಚಿತ ಬಾಲಚಂದ್ರ| ಧರ

ಮೇಲು ಪದಾನ್ವಿತ ನೀಲಕಂಠ ನಿಜ ||4||

ಸಾಧು ಜನಾಪೇಕ್ಷ ಸತ್ಯ ಬೋಧಕ ನಿಟಿಲಾಕ್ಷ

ವೇದಾದಿಯ ನೀರಲಕೆರೆ| ಮಂದಿರ

ವಸ್ತು ಪಂಚಾಕ್ಷರ ಪರಶಿವ ||5||

ದೇವ ಕನಕಗಿರಿ ಜೀವ ಸಜ್ಜನನುತ ದೇವೇಶ ದಿಗಂಬರನೆ

ಕಾವ ನೀನಲ್ಲದಿನ್ನಿಲ್ಲ ನಿತ್ಯಾನಂದ ನಿಗಮಾತೀತ ನಿರ್ಮಾಯನೆ ||ಪ||

ಯೋಗಾನಂದದ ಸುಖ ಭೋಗದಿ ನಿಂದನೇ

ಭೋಗಿಭೂಷಣ ಭಕ್ತರಾಳಾದನೇ

ತಾಗು ರೋಗಗಳಿಲ್ಲದಾಗಿ ವಿಮಲಾಂಗದಿಂದಲಿ

ತೂಗುತಿರುವ ಜನವಂದ್ಯನೇ ||1||

ಅಲ್ಲಮಪ್ರಭು ಮರ್ತ್ಯದಲ್ಲಿ ನಿಜ ನೀನಯ್ಯ

ಮಲ್ಲಿಕಾರ್ಜುನ ನಾಮ ಜಾವಳನೇ

ಸೊಲ್ಲಿನೊಳು ಸೂಕ್ಷ್ಮದೊಳಲಲಿ ಚಿತ್ಕಳೆಯಂದದಲಿ

ಇಲ್ಲಿ ರಕ್ಷಿಸಬಂದನಿಹದೊಳಗೇ ||2||

ನೀರಲಕೆರೆಯೆಂಬ ನಿರಿಯೊಳು ನಿಲಿಸಿ ಮತ್ತೆ

ಸಾರಿ ಸತ್ಕೀರ್ತಿಯ ಬೀರಿಸುತ

ತೋರಿ ಬಸವಲಿಂಗನೆ ಪಂಚಾಕ್ಷರನೆಂದು

ಸಾರಿಸುತ ಜಗದೊಳಗೆ ಮೆರೆವಾ ||3||

ದೇವರಿದು ನೋಡಮ್ಮ ತಂಗಿ ದೇಹದೊಳು ಮನೆಯ ಮಾಡಿದೆ ||ಪ||

ಕಾಯವೆಂಬೊ ಜಗಲಿ ಮಧ್ಯದಿ ಮಾಯಾ ವರ್ಣದ ಜಗಲಿ ಮೇಲೆ

ಜೀವ ಭಾವರ ನೋಡುತಲಿ ಸೋಹಮೆಂದು ಒಡಗೂಡದೆ ||ಅ.ಪ||

ಮಂತ್ರ ತಂತ್ರಕೆ ಮೀರಿತಮ್ಮ ಇದು ಚಿಂತೆ ಪರಿಹಾರ ಮಾಡ್ವದೆ

ನಿಂದು ಸರ್ವವ ನೋಡ್ವದಮ್ಮ ಅಂತು ಇಂತು ಅಲ್ಲಾಡದೆ

ಕುಂತು ನಿಂತರೆ ಕೂಗುವದು ತನ್ನಂತೆ ಜಗವನು ನೋದುವದು ಸ್ವ

ತಂತ್ರ ಸುಖಮಯ ದೇವರೆ ತಾನಿಂತು ಮಾಡುವ ದೇವರೆ ||1||

ಏಳು ದೆವ್ವಗಳ ತಿಂದಿತಮ್ಮ ಈರೇಳು ಲೋಕವ ಕೊಂದಿತೇ

ಬಾಳ ಕಳೆಗಳ ಕುಂದಿತೇ ಕೇಳಾರು ಅರಿಯದೆ ಬಂದಿತೇ

ಬಾಳ ಜೀವರ ಕೊಂದು ಕೂಗಿ ಹಾಳು ಮಾಡುತ ಜನ್ಮಗೀಗಿ

ಭಾಳ ಕಾಲದಲಿರುವುದಮ್ಮ ಭಾಳ ಹೆಸರಿನ ದೇವರೆ ||2||

ಸಾಜವಾ ಸೌಭಾಗ್ಯ ಕೊಡುತಲಿ ಮೂಜಗಂಗಳ ಮುಚ್ಚಿದೆ

ಸೋಜಿಗವು ಕೇಳಮ್ಮ ತಂಗಿ ತೇಜ ಬಾಳೊಂದು ಹೆಚ್ಚಿದೆ

ಪೂಜೆ ಮಾಳ್ಪರಿಗೆ ಹೂಳಿವುದಮ್ಮ ಇದು ಪುಣ್ಯವಂತರಿಗೊಲಿವುದು

ತೇಜ ನೀರಲಕೆರೆಯ ಗುರು ತಾನಾದ ಸಾಕ್ಷಾತ್ ದೇವರೆ |3||

ದೇವ ಸಿದ್ಧನಂಜ ವರನಿಶ್ಚಿಂತ ಪ್ರಭಾಪುಂಜ ||ಪ||

ಪರಮ ಪರತರ ಪರಿಪೂರ್ನಾತ್ಮಕ

ಮರಣರಹಿತ ಷಡ್ವರ್ಣಕತೀತನೆ ||ಅ.ಪ||

ರಾಜಯೋಗಿ ತೇಜ ಈ ಜಗದಾದಿ ಕಲ್ಪಭೂಜ

ಮಾಜಲೇಕೆ ಮಹಿಭಾಜನೆನಿಸಿ ಪರಿರಾಜಿತ ಚಿನ್ಮಯ ಸೋಜಿಗೆ ಸೈ ಸೈ ||1||

ಭಕ್ತರಂತರಂಗ ಮುಕ್ತಿಸಂಗ ರಂಗದಂಗ

ಶಕ್ತಿ ಪರಾಕ್ರಮಿ ಯುಕ್ತಿ ಸ್ವರೂಪನೆ ತ್ಯಕ್ತಕಲ್ಮಷ ಸುರಾರ್ಜಿತ ಪದಯುಗ ||2||

ಶ್ರೇಷ್ಠ ಯೋಗಧಾಮ ನಿಷ್ಠಾ ಭಕ್ತವರದ ಪ್ರೇಮ

ದುಷ್ಟ ನಿಗ್ರಹ ಪರಿತುಷ್ಟ ಸುಜನ ಸಂಕಷ್ಟ ದೂರ ಮನದಿಷ್ಟವ ಕೊಡು ||3||

ಸಾಜಗುಣೋನ್ಮಣಿಯೆ ಮಂಗಲವ್ರಾಜ ಸುಖದ ಕಣಿಯೇ

ಮೂಜಗದೊಳಗಣ ರಾಜನೆನಿಸಿದ ವಿರಾಜಮಾನ ವರರಾಜಸಖ ||4||

ಧೃತ ಶಿವಾಕ್ಷಮಾಲ ಯತಿತತಿನುತಕೃಪಾಲವಾಲ

ಪತಿತಪಾಲ ಸದ್ಧಿತ ನೀರಲಕೆರೆ ಪತಿಯಪರೂಪ ಸದ್ಗತಿ ಕರುಣಿಸು ||5||

ದೇವಿಯ ನೋಡಿ ದೇವರ ಮಹಿಮೆಯ ಪಾಡಿದೆ

ಕಾಯರಹಿತ ನಿರ್ಮಾಯಗೆ ಜಾಯೆಯೆನಿಸಿ ಶಿವನಾಮದಿ ಕರೆಸಿದ ||ಪ||

ಕಡಗ ಕಂಕಣ ಕಾಲ್ಗಡಗ ಸಪ್ಪಳದ ಗೆಜ್ಜೆ

ಇಡುವಳು ಹೆಜ್ಜೆ ಅಡಿಯಬ್ಬರ ನಡು ಡಾಬು ಪದಕದ ಹೊಳಪು

ತೊಡರಿನ ಜಳಪು ಎಡಬಲ ಭಾಪುರೆ ವಜ್ರ ಕಿರೀಟವು ವಂಕಿ

ಹಣೆಯಲಿ ಬೆಂಕಿ ದೃಢದಿಂದಿರ್ಚಿಸಿ ಬೇಡಲು ಸುಖವ ಭಕ್ತರ ಪೊರೆವ ||1||

ರೌದ್ರದಿ ದೈತ್ಯರ ಛಿದ್ರಿಸಿ ಖಡ್ಗವ ಹಿಡಿದು ಅಸುರರ ತಡೆದು

ಭದ್ರಕಾಳಿ ಭೀಕರದಿಂದುಟ್ಟಿಹ ಕಾಸೆ ಮಹಿಷನಘಾಸಿಸಿ

ರುದ್ರನ ತೊಡೆ ಸಿಂಹಾಸನ ಮಾಡಿದ ಶೌರಿ ಮೇಲ್ನಿಜಗೌರಿ

ಅದ್ರಿಸದನೆ ಸೌಭದ್ರದಿ ಮೆರೆವ ಕ್ಷುದ್ರ ಶುಂಭ ನಿಶುಂಭರ ಗೆಲಿದ ||2||

ಕಂಗಳ ನಡು ಕನಕಾಲಯದೊಳು ತಮ್ಮಿಚ್ಚೆ ಕೊಡುವಳು ಮುಚ್ಚೀ

ಶೃಂಗರಿಸುತ ಸುಖ ಸುರಿಸುತ ಹೃದಯದಿ ಧ್ಯಾನ ಕಂಡೆನು ಕೂನ

ಗಂಗಾ ಯಮುನೆ ಸರಸ್ವತಿ ನಾಮದೊಳರಸಿ ಮುಕ್ತಿಯ ಬೆರೆಸೆ

ಹಿಂಗದೆ ನೀರಲಕೆರೆ ನಿಳಯನ ಪ್ರಾಣೆ ಪಟ್ಟದರಾಣಿ ||3||

ದೇವಿ ದಯದಿ ನೋಡೇ ಸುಜನರ ಜೀವಿ ಕರುಣ ಮಾತೇ

ಕಾವಿ ಭಕ್ತತತಿಗೀವೆ ಮಹಾತ್ಮರ ಭಾವದೊಳಿಹ ಮಹಾದೇವನ ರಾಣಿಯೆ ||ಪ||

ಕದಲದೆ ಅನುದಿನ ಅದಲದೆ ಚಿತ್ತದೆ ಬದಲಿಸದಿರು ಭಕ್ತಾಭಿಮಾನಿ

ನದರಿಟ್ಟ ಸುಧಾ ಕಳೆಯಂತೊಪ್ಪುವಿ ಸದಾನಂದವ ಕೊಡು ಸದಾ ಕಾಲದಿ ||1||

ಸಾಧಿಸಿದಾತನಿಗಾದಿಯ ತೋರುವಿ ವಾದಿಯ ನಾಲಗೆ ಸೇದುವಿ

ಬಾಧಿಪ ನೋವಿರಲು ಓದಿದಡೆ ಹೋದುದು ಗಾದಿ ಮಾತಲ್ಲ

ಮತ್ತಾದಿ ದೈವನೀ ||2||

ಮಂಗಲಕರ ನಿಜತುಂಗ ನೀರಲಕೆರೆ ಲಿಂಗಾನಂದದ ಸಂಗ ಸುಖವ

ಶೃಂಗರಿಸುವ ಮಹಾತಂಗಿ ಮಹೇಶ್ವರಿ ಮಗಲಾಂಗಿ

ಮಧುಕೈಟಭರಳಿಸಿದ ||3||

ದೇವಿಗಾರುತಿ ಬೆಳಗಿದೆ ಮನ ಒಲಿದು

ಧಾವತಿ ಕಳೆದು ತಿಳಿದು

ಸಾವಧಾನದಿ ಸತ್ಯ ದೇವದೇವರ ದೇವಿ

ಕಾವ ಸದ್ಬಕ್ತಜೀವಿ ಮೋಹಿ ||ಪ||

ತನುವ ತಳಿಗೆಯೆ ಮಾಡಿ ಮನವೆಂಬ ನೆ

ವನದಾರತಿಯ ಹೂಡಿ

ಘನಭಕ್ತಿ ತೈಲದೊಳು ಮಿನುಗುವಾತ್ಮನ ಮಾಡಿ

ಮಣಿ ಮಣಿದು ಕುಣಿದು ಹಾಡಿ ನೋಡಿ ||1||

ಮೂರು ಬಣ್ಣದ ಮನೆಯೊಳು ಮಲಗಿ

ಮೂರಾವಸ್ಥೆಯನು ಕಂಡು

ಆರು ಮೂರಾರು ಮುವ್ವತ್ತಾರು ಇನ್ನು ಪದಿನಾರು

ನೂರೊಂದು ಸ್ಥಲವ ಕೂಡಿ ನೋಡಿ ||2||

ನಿರಘ ನಿರ್ಲೇಪಳೆಂದು ನಿರವಯ

ನಿರ್ವಿಕಾರತ್ವಳೆಂದು

ನಿರತಿಶಯ ನಿದ್ರ್ವಂದ್ವನಾದ ನೀರಲಕೆರೆ

ಗುರುವರನ ಬೆರೆದಳೆಂದು ಬಂದು ||3||

ದೇಹಾಭಿಮಾನ ಪ್ರಾಣ ನಿನ್ನದು ಗುರುವೆ

ಆಯಾಸನ್ನೇಕೆ ಬರಿದೆ ಕಾಯೋ ಕಲ್ಪತರುವೆ ||ಪ||

ನುಡಿ ನಿಂದು ನಡೆ ನಿಂದು ಜಡವಿಡಿದ ಒಡಲೊಂದು

ತೊಡರಿಕೊಂಡವನು ಬಿಡದೆ ಹಿಡಿ ಗಡನೆ ಬಂದು ||1||

ಅರಿವು ಮರೆವು ಕುರುಹು ಬೆರೆದೆರಡಾಗದಿಹಪರ

ಪರಿಪೂರ್ಣ ಪರತರ ನರನಾಥ ಗುರುವರ ||2||

ಗಡಿ ನೀರಲಕೆರಿ ಘನವು ಮುನಿಜನ ಮನಸಿನಂತೆ

ಅನುದಿನದಿ ಇರುತಿರುವ ಅನಾದಿ ಎನ್ನ ||3||

ಧ್ಯಾನವ ಮಾಡಿದೆ ಸದ್ಗುರು ಧ್ಯಾನವ ಮಾಡಿದೆ

ಹೀನ ವಿಷಯದೊಳಗಾಚರಿಸುವ ಮನ ಶ್ರವಣ ಮನನ ನಿಧಿದ್ಯಾಸದೊಳನುದಿನ ||ಪ||

ಶರಣರ ಅಡಿಗಳ ಹರಸುತ ಸಾಧಿಸಿ ನಡೆದೆ ಗುರುಪಥ ಹಿಡಿದೆ

ಕರಣ ಚತುಷ್ಟಯ ಚಲಿಸದೆ ದೃಢಮತಿ ಬಿಡದೆ ಸುಖವನು ಪಡೆದೆ

ವರ್ಣಾತೀತ ಮೃಢನ ಎಡರರಿಯದೆ ಜಡ

ಶರೀರ ಮರೆದು ತೊಡರಿಸಿದೆ ಪದ್ಮಾಸನ ||1||

ನಾ ಸೊಂಪನು ಕೇಳುತ ನಾಸಿಕ ಗೊನಿಯೆ ಬಿಂದುಗಳ್ಹನಿಯೆ

ವೇದ ವಿಚಿತ್ರವನೋದಿಸಿ ಆತ್ಮನ ನೆನೆಯೇ ನಡೆದುನ್ಮನಿಯೆ

ಸಾಧನವಿದು ಸತ್ಪುರುಷರಿಗತಿಹಿತ

ಭೇದವೇಕೆ ಬೇರಿಲ್ಲದಿರುವನ ||2||

ಪೊಡವಿಯೊಳಗೆ ಮಿಗೆ ಗಡಿಯ ನೀರಲಕೆರೆ ಪ್ರೇಮ ನಿಶ್ಚಲಧಾಮ

ದೃಢ ಪಂಚಾಕ್ಷರನೆನಿಪ ನಿರಂಜನನಾಮ ಹುಡುಕುವ ನೇಮ

ತುಡುಗ ಗುಣಗಳ ಹರಿಗಡಿಯು ಭಕುತಿಯ

ಬಿಡುಗಡಿಸಿದೆ ನಡೆನುಡಿಗಳ ಜೋಡಿಸಿ ||3||

ನಗಾರಿ ಮೇಲೆ ಕೈ ಹಾಕೋ ನಗೆಗೇಡಿ ಸಂಸಾರ ಇನ್ನೇಕೋ

ಜಗಜಗಿಸುವ ಪ್ರಭೆ ಜಗದಗಲಾಗಿದೆ ವಿಗಡ ಮಾಯೆ ಎಲ್ಲಿರಬೇಕೊ ||ಪ||

ಎತ್ತ ನೋಡೆ ಬ್ರಹ್ಮಿತ್ತಾಗಿ ಹಿಂದಿತ್ತೇನಿದು ಸತ್ತಿತ್ತಾಗಿ

ಚಿತ್ತಿನೊಳರಿ ಎತ್ತೆತ್ತಾಗಿ ಮತ್ತುತ್ತರಿಸು ಉತ್ತರ ನೀಗಿ ||1||

ಕಲ್ಪ ಕಾಲಕಲ್ಪಿತವೆಲ್ಲ ಅಲ್ಪಬುದ್ಧಿಯವಗೆ ಸಲ್ಲ

ಬಲ್ಪದ ಜ್ಞಾನದೊಳಿದ್ದಿಲ್ಲ ಸ್ವಲ್ಪಾಲಿಸು ನಾ ಸುಳ್ಳು ಬಿದ್ದಿಲ್ಲ ||2||

ನಡೆ ನೀರಲಕೆರೆ ಗಡಿಗೆ ನಡೆ ನುಡಿ ತೊಡಕು ಬಿಡದಾಗೆ

ಒಡೆಯನೊಲಿಸಲು ಆ ಶಿವಯೋಗಿ ಅಡಗಿದನಲ್ಲೆ ಏಕಾಗಿ ||3||

ನಗೆಯು ಬರುತದೆ ಸಾಂಬ ಎನಗೆ ನಿನ್ನ

ಬಗೆಬಗೆ ಹಗರಣ ವಿಗಡದ ಸುದ್ದಿಯ ಕೇಳಿ ||ಪ||

ಜಾಣ ನೀ ಹೋಗಿ ಅಡವಿ ಬಿದ್ದಿ

ಕಾಣ ಕಾಣ ಕಾರಿದಿ ವಿಷ

ಗೋಣಿಗಿಟ್ಟಿದ್ದಿ ಶಾಣೇತನವನರಿಯದಿದ್ದಿ

ಗೇಟು ಹೊಟ್ಟೆಯಾಸೆಗೆ ಜಾಣ ಮಗನ ಕೊಯ್ಸಿದ್ದಿ ||1||

ಚನ್ನಗೊಲಿದು ಕುಲಗೆಟ್ಟಿ ಬೇಡರ

ಕನ್ನನೊದೆಯಲು ದೌಲತವನೆ ಕೊಟ್ಟಿ

ಹೊನ್ನಯಗೆ ನೀರೆರೆದು ಕೊಟ್ಟಿ

ಕನ್ನವಿಕ್ಕಿ ಮಣ್ಣನೆ ತಂದು ಹೊತ್ತೆಲ್ಲೋ ಬುಟ್ಟಿ ||2||

ಸೂಳೆಯೆಂಜಲು ನೋಡಿ ತಿಂದಿ

ಬಾಳ ಮಾಡಿ ಬಲ್ಲಾಳನ ಮಡದಿಯ ಬೇಕೆಂದಿ

ಆಳಾಗಿ ಹುಲ್ಲ ಹೊತ್ತು ಬಂದಿ

ಕೂಳ ಬೇಡಿ ನಂಬೆಕ್ಕನ ಮಗನ ಕೊಂದಿ ||3||

ತೊಗಲುಟ್ಟಿ ಮೈಯೆಲ್ಲ ಬೂದಿ ಸಧ್ಯ

ಅಗಜೆಯಿರಲು ಗಂಗೆಯ ತಗಲಿದೆ ಹೋದಿ

ನಗೆಗೇಡು ನೀನು ಏತಕೆ ಹೀಗಾದಿ

ಅಗಲದೆ ಜಾಣನ ಬಾಗಿಲವ ಕಾಯ್ದಿ ||4||

ಆಡಲಿನ್ನೇನು ನಿರ್ಭೀತ ನೋಡ ನೋಡಲು

ಸುಡುಗಾಡೊಳು ಆಡುವ ಪ್ರೀತ

ಆಡಲು ಸುಖಗೊಡುವಾತ

ನಡುನಾಡ ನೀರಲಕೆರೆಯೊಡೆಯ ಪ್ರಖ್ಯಾತ ||5||

ನಮ್ಮಪ್ಪ ಇವ ನಮ್ಮಪ್ಪ ಜಗ ತನ್ನಂತೆ ತಿಳಿದವ ನಮ್ಮಪ್ಪ ||ಪ||

ಸಾಧಿಸಿ ಬ್ರಹ್ಮದ ಭೇದವ ತಿಳಿದು ಸ್ವಾದವ ಕುಡಿದವ ನಮ್ಮಪ್ಪ ||ಅ.ಪ||

ವಾದವನಳಿದವ ನಮ್ಮಪ್ಪ ಜಗದಾದಿಯ ತಿಳಿದವ ನಮ್ಮಪ್ಪ

ಗಾದಿಯ ಮನುಜರ ಹಾದಿಯ ಬಿಟ್ಟು ವಿನೋದದಲಿದ್ದವ ನಮ್ಮಪ್ಪ ||1||

ತ್ರಿಕೂಟ ಸಂಗಮನು ನಮ್ಮಪ್ಪ ತ್ರಿಕೋಣಿಯೊಳಿದ್ದವ ನಮ್ಮಪ್ಪ

ಅಕಳಂಕ ರೂಪನು ನಮ್ಮಪ್ಪ ಶಿಖಾ ಪಶ್ಚಿಮ ಚಕ್ರವು ನಮ್ಮಪ್ಪ ||2||

ಸಂಚಲವಳಿದವ ನಮ್ಮಪ್ಪ ಗುರು ವಂಚಕರಿಗೆ ಸಿಗನು ನಮ್ಮಪ್ಪ

ಗೊಂಚಲು ಮುಕ್ತಿ ಪ್ರಭೆಯನು ಬೀರುತ ಪಂಚಾಕ್ಷರ ದೇವ ನಮ್ಮಪ್ಪ ||3||

ನಮೋ ನಾರಾಯಣನೆನ್ನಿರೊ ಶ್ರೀಹರಿ ನಿತ್ಯ

ನಮೋ ನಾರಾಯಣನೆನ್ನಿರೊ

ನಮೋ ನಾರಾಯಣನೆನ್ನುತ ಮನು ಪ್ರಹ್ಲಾದನು

ಸುಮನಸರರಿಯೆ ಮುಕ್ತಿಯ ಪೊಂದಿದನು ಸತ್ಯ ||ಅ. ಪ||

ಕ್ಷೇತ್ರಯಾತ್ರೆಗಳೇತಕೆ ಸಂಕಟ ಹತ್ತಿ

ಧಾತ್ರಿಯೊಳು ತಿರುಗಲೇಕೆ

ಸೂತ್ರಧಾರನು ನಿಮ್ಮ ನೇತ್ರ ಮಧ್ಯದಿ ದಿವಾ

ರಾತ್ರಿಯೊಳಿರುವ ಗಾಯತ್ರಿ ಮಂತ್ರ ಕೇಳಿ ||1||

ಸಂಧ್ಯಾವಂದನೆಯಿಲ್ಲದೆ ಸಂಕ್ರಮಣದ

ಬಂಧನದೊಳು ಬೀಳದೆ

ಕುಂದದೆ ಹೃದಯಾರವಿಂದದಿ ಕುಣಿಯುತಾ

ನಂದದಿಂದ ನಾದಬಿಂದು ಕಳೆಯಾತೀತ ||2||

ಬಿಡದೆ ಅಡಿ ಹಿಡಿದಿರುವೆ ನೀರಲಕೆರೆ

ಗಡಿ ಗೃಹದೊಳು ಮೆರೆವ

ಮೃಢನಾಮದೊಡೆಯ ಪಂಚಾಕ್ಷರನಿಗೆ

ನಳಿನನಾಭನ ಧ್ಯಾನದೊಳು ಮನವಡಗಿಸಿ ||3||

ನಾಮರಹಿತ ನಿಷ್ಕಾಮ ನಿರಂಜನ ನೇಮದೂರನೆ ನೀ ಕಾಯೊ

ಕಾಮಿತವ ಕಣ್ಣಾರೆ ಕೊಡುವ ನಿಸ್ಸೀಮ ಭಕ್ತಜನ ಪ್ರೇಮಿ

ಪಂಚಾಕ್ಷರ ಸ್ವಾಮಿಯೆ ಕಾಯೊ ||ಪ||

ಸೊಗಸಿನಿಂದಲಿ ಜಗವ ರಕ್ಷಿಸಲು ನಿಗಮಾತೀತನೆ ನೀ ಬಂದಿ

ಯುಗದೂರನೆ ನೀನಗಣಿತಮಹಿಮನೆ ಬಗೆಬಗೆ ರೂಪವ ನೀ ತಂದಿ

ಅಗಜೆಯರಸ ನಿನ್ನ ಬಗೆ ತಿಳಿಯದು ಮೃಗಧರ ಜೂಟನೆ

ಜಗದಧಿಪತಿಯೆ ಪಂಚಾಕ್ಷರ ಸ್ವಾಮಿಯೆ ನೀ ಕಾಯೊ ||1||

ಸಾಮಗಾನಪ್ರಿಯ ಶ್ಯಾಮಾಂಗಸಖನಾದ ಸೋಮಕಳಾನಿಧಿ

ವ್ಯೋಮಸದೃಶ ಸುಖಸ್ತೋಮ ಸುರಾರ್ಚಿತ

ನೇಮಕ್ಕೊಲಿದ ವಿನೋದ ಕಾಮದಹನ ಶುಭದಾಮಭೀಮ ಸು

ನಾಮ ಲಲಾಮ ಪಂಚಾಕ್ಷರ ಸ್ವಾಮಿಯೇ ನೀ ಕಾಯೊ ||2||

ಸಂತರಾಳುವನೆ ನಿಶ್ಚಿಂತ ಮಂತ್ರಾಧಿದೈವ ಯಂತ್ರ ಮೂರುತಿ ಮಹಿಮ

ಸ್ವಂತರಂಗ ಧೀಮಂತ ಸ್ವತಂತ್ರಿಕೆ ಚಿಂತಿಪರನುಕೂಲನೆ

ಶಾಂತ ನೀರಲಕೆರೆಯಂತಿನ ಗಡಿ ಬಿಡದಿಂತು ಕುಣಿಸುವ

ನಂತ ಜೀವಿಗಳ ಪಂಚಾಕ್ಷರ ಸ್ವಾಮಿಯೆ ನೀ ಕಾಯೊ ||3||

ನಾನೆ ಸರ್ವವು ನಾನೆ ಬ್ರಹ್ಮವು

ನಾನಾ ರೀತಿ ಜಗವಿಹುದು ದಿಟ

ನಾನಾ ಆತ್ಮವು ನಾನಾ ಕಲ್ಪನೆ

ನಾಮರೂಪು ಪುಸಿ ನಾನೆ ದಿಟ ||ಪ||

ತೋರಿ ತೋರದವ ನಾನೆ ದಿಟ

ಭೂರಿ ಚರಾಚರ ನಾನೆ ದಿಟ

ಮೀರಿದ ನಿಜಲೀಲ ಗಗನ ಧರಾಜಾಲ

ತೋರಿದವ ನಾನೆ ದಿಟ ||1||

ಸತ್ತು ಚಿತ್ತು ಅದು ನಾನೆ ದಿಟ

ಮತ್ತೆ ನಿಂದೆ ಸ್ತುತಿ ನಾನೆ ದಿನ

ಸತ್ತು ಸಾಯದವ ನಾನೆ ದಿಟ

ಸತ್ತಾಯಿಸುತ್ತಿದ್ದವ ನಾನೆ ದಿಟ ||2||

ಮನ ಬುದ್ಧಿಯಾದವ ನಾನೆ ದಿಟ

ಘನ ಪುರುಷ ಮಾನಿನಿಯು ನಾನೆ ದಿಟ

ಜನನ ದೂರ ಜಡ ನಾನೆ ದಿಟ

ಜನಜನಿತ ಜನೋತ್ತಮ ನಾನೆ ದಿಟ ||3||

ಭಕ್ತವತ್ಸಲನು ನಾನೆ ದಿಟ

ಯುಕ್ತ ಶಕ್ತನು ನಾನೆ ದಿಟ

ಮುಕ್ತಿ ದೇಹಕನು ನಾನೆ ದಿಟ

ಯುಕ್ತ ಶಾಪನು ನಾನೆ ದಿಟ ||4||

ನಾನಾರೆಂದವ ನಾನೆ ದಿಟ

ನೀನೆ ನಾನಾದವ ನಾನೆ ದಿಟ

ತಾನೆ ಪಂಚಾಕ್ಷರನು ನಾನೆ ದಿಟ

ಕೂನಗಟ್ಟಿದವ ನಾನೆ ದಿಟ ||5||

ನಾನೇ ಬ್ರಹ್ಮವು ನಾನೇ ಜಗವು ನನ್ನ ಹೊರತು ಇಲ್ಲ ನಿಜ

ನಾನಲ್ಲದೆ ಮತ್ತಿತರಾರುಂಟು ನಿದ್ರ್ವಂದ್ವ ನಾನೆ ನಿಜ ||ಪ||

ಅರುವಾದವನು ನಾನೆ ನಿಜ ಮರವೆಯಾದವನು ನಾನೆ ನಿಜ

ಅರುವು ಮರವು ಎರಡು ಮೀರಿದ ತೂರ್ಯ ಅತೀತ ನಾನೆ ನಿಜ ||1||

ಅಂಗವಾದವನು ನಾನೆ ನಿಜ ಲಿಂಗವಾಗಿದ್ದವನು ನಾನೆ ನಿಜ

ಅಂಗ ಲಿಂಗಗಳೆರಡರ ಮಧ್ಯದಿ ಸಂಗವಾದಿದ್ದವ ನಾನೆ ನಿಜ ||2||

ದೃಕ್ಕಾದವ ನಾನೆ ನಿಜ ನೆರೆ ದೃಶ್ಯವಾಗಿದ್ದವನ ನಾನೆ ನಿಜ

ದೃಕ್ಕು ದೃಶ್ಯಗಳೆರಡರ ಮಧ್ಯದಿ ದೃಷ್ಟವಾಗಿದ್ದವ ನಾನೆ ನಿಜ ||3||

ಗುರುವಾದವನು ನಾನೆ ನಿಜ ವರ ಶಿಷ್ಯನಾಗಿದ್ದವನು ನಾನೆ ನಿಜ

ಗುರು ಶಿಷ್ಯರಿಬ್ಬರ ನಡುವೆ ಗುಟ್ಟಾಗಿದ್ದನ ನಾನೆ ನಿಜ ||4||

ನಾನೆ ನಾನಾದವ ನಾನೆ ನಿಜ ನೀನೆ ನಾನಾದವ ನಾನೆ ನಿಜ

ಭಾನುಕೋಟಿ ತೇಜ ನೀರಲಕೆರೆವಾಸ ಕೂನವಿಲ್ಲದವ ನಾನೆ ನಿಜ ||5||

ನಾರಿ ನಾ ಹೇಳಲೇನೆ ಪೂರ್ಣ ಸುಖ ಕೇಳಮ್ಮ

ನಾರಿ ನಾ ಹೇಳಲೇನೆ ||ಪ||

ತೋರಿ ತೋರುವುದಲ್ಲ ಕೇಳಮ್ಮ ತೋರದಿರುವುದು ಅಲ್ಲ

ತೋರಿ ಸರ್ವರೊಳಿರ್ದು ತೋರದಾ ಸುಖವ ||1||

ಪಿಂಡಾಂಡ ಬ್ರಹ್ಮಾಂಡ ನೋಡಮ್ಮ ಮಂಡಲ ನವಖಂಡ

ಕಂಡದನು ಒಳಕೊಂಡ ಕಂಡು ಖಂಡಿತನಲ್ಲ ||2||

ಸುತ್ತ ಆಕಾಶದ ಪರಿ ಕೇಳಮ್ಮ ಎತ್ತ ನೋಡಲು

ಸತ್ತಯ ನೀರಲಕೆರೆ ಗೊತ್ತಿನೊಳೆರಡಾಗದಿತ್ತು ಸುಖಮಯವನು ||3||

ನ್ಯಾಯವೇನೈ ಶ್ರೀಗುರುನಾಥ

ಮಾಯಾರಹಿತ ಮುನಿಜನ ಪ್ರೀತ ||ಪ||

ಜನನ ಮರಣಗಳ ನೀನಟ್ಟಿ

ನೆನೆಸದಾನಂದರತಿಗೆ ಮೈಗೊಟ್ಟಿ ||1||

ಕಾಯ ಮೋಹವನು ಮರೆಸಿರುವಿ

ಆಯಾಸದಿಹವ ಪರಕೊಯ್ದು ತರುವಿ ||2||

ಮೆರೆವ ನೀರಲಕೆರೆ ಮಂದಿರನೆ

ಶರಣ ಗುಣೋನ್ಮಣೆ ಬಂಧುರನೆ ||3||

ನಿನ್ನ ನೀನೇ ತಿಳಿಯೋ ಈಗ

ನಿನ್ನ ನಿಜವ ಅತಿ ಬೇಗ ||ಪ||

ನೀನು ನಿನ್ನನರಿಯಲು ಅಜ್ಞಾನ ನಿನಗಿಲ್ಲ

ಏನು ಕಾರಣ ಮಾನವನಾದಿ ಅನುಮಾನಿಸದೆ ಹೋದಿ ||1||

ಬಾಳ ವಾಸನೆಯ ಸಂಸಾರ ಮಾಡಿ

ಖೂಳನಾದೆಲ್ಲೋ ಖೋಡಿ ಕಾಲಗೇನ್ಹೇಳ್ತಿ ನೋಡಿ ||2||

ಗಡಿ ನೀರಲಕೆರೆ ಗೊತ್ತಿನ ಒಡೆಯನಡಿ ಹೊಂದಿ

ಬಿಡದೆ ಸದ್ಗತಿಯನು ಕೇಳೋ ದೃಢವಾಗಿ ಬಾಳೋ ||3||

ನಿನ್ನ ನೀ ಕಾಣ್ಬುದಕೆ ಇನ್ನೇನು ಸಂಶಯವು

ಭಿನ್ನವಿಲ್ಲದೆ ತೋರ್ಪನು ಎಲ್ಲರೊಳು ಶಿವನು

ಕಣ್ಣಿನಾಲಯದ ಅಲ್ಪಶಿಖಿ ಮಂಡಲತ್ರಯ

ಹೆಣ್ಣು ಗಂಡುಗಳೆಲ್ಲರೊಳಗೊಂದಾಗಿಹನು ||ಪ||

ಎಲ್ಲಿ ನೀನಲ್ಲಿ ನೀನಲ್ಲದನ್ನೇನು ಇಲ್ಲ

ಅಲ್ಲ ಅಹುದು ಎಲ್ಲದಕೆ ನೀನೆ ಸಾಕ್ಷಿ

ಸೊಲ್ಲಲ್ಲ ಸೂಕ್ಷ್ಮ ಕಾರಣ ರೂಪು ಸರ್ವತ್ರ

ಅಲ್ಲಿರ್ದು ಕಾಣದೆ ಅರಸಿಕೊಳುತಿಹನು ||1||

ಸಗುಣ ನಿರ್ಗುಣನಲ್ಲ ಬಗೆಯೆ ಬಹು ಗುಣನಲ್ಲ

ಜಗಜಗಿಪ ಯುಗ ಕಲ್ಪನೆಗಳು ತಾನಲ್ಲ

ನಿಗಮಕ್ಕೆ ನಿಲುಕದ ಅಘಹರನ ಇರವಾಗಿ

ಸಿಗದೆ ಎಲ್ಲರೊಳು ನಿಂದ ನಿಲವೆ ತಾನಾಗಿ ||2||

ಪಂಚಭೂತದಿ ಪಂಚಕರಣ ಪಂಚೇಂದ್ರಿಯ

ಪಂಚ ಪಂಚಕವಾಯು ಪಂಚಾಂಗವಳಿದ

ಪಂಚವಿಂಶತಿ ತತ್ವ ಮೀರಿ ಮಿಂಚಿನ ಪ್ರಭೆಯ

ಪಂಚಾಕ್ಷರನ ಕಂಡು ಕಾಣದಂತಿರುವಿ ||3||

ನೀನೆ ನಿಜವು ನಿನ್ನ ನೋಡೋ ಅನುಮಾನಿಸಬೇಡೋ ||ಪ||

ಸ್ಥಿರವಲ್ಲ ದೇಹ ಸಿರಿಸುತ ಗೇಯ

ಮರೆದು ಅರುವಿನೊಳು ನೀ ಕೂಡೊ ಅನುಮಾನಿಸಬೇಡೊ ||1||

ಮರಳಿ ಮರಳಿ ಹುಟ್ಟಿ ಮರವೆಗೆ ಮೈಗೊಟ್ಟ

ಗರಿಗಟ್ಟಿ ಶರಣರೊಳಾಡೊ ಅನುಮಾನಿಸಬೇಡೊ ||2||

ನಡೆಯೊ ನೀರಲಕೆರೆ ಗಡಿಯೊಳಂಜದೆ ಸೇರಿ

ಒಡೆಯನ ಒಲಿಸಲು ಒಡಗೂಡೊ ಖೋಡಿ ಸಂಸಾರ ಕೇಡೊ ||3||

ನೀನೆ ಸಾಕ್ಷಾತ್ ಮತ್ತಿನ್ನಾರ ಕಾಣೆ ನಿನ್ನ ಹೊರತು ||ಪ||

ಸ್ವಾನುಭಾವ ಸುಖದೊಳಿರ್ದುದೇನು ಕಾಣ್ಬುದೆಲ್ಲ ವಸ್ತು

ತಾನೆಯಾದ ಧ್ಯಾನಮೂರ್ತಿ ನೀನೆ ಭಕ್ತಸಾರ್ಥಿ ಸಾಂಬ ||1||

ಸ್ವಸ್ತಿಕಾಸನವನು ನೋಡಿ ಪುಸ್ತಿವಾಯ್ವ ಇಂದ್ರಿಯಗಳನು ನಿಲಿಸಿ

ಮಸ್ತಕವು ಮನವು ದೃಷ್ಟ ವಸ್ತುವನನು ಕುರಿತು ನೋಳ್ಪ ||2||

ಕನಕಗಿರಿಯ ಸಿದ್ಧಲಿಂಗ ಮುನಿ ಜನಾಂತರಂಗ ಸಂಗ

ದಿನಪನುದಯ ನೀರಲಕೆರೆ ಅನಘ ಶ್ರೀಗುರು ಬಸವಲಿಂಗ ||3||

ನೀನೆ ಕಾಯೋ ದೇವ ದೇವ ನೀನೆ ಸದಯ ಭಾವ ||ಪ||

ಮಾನಿತಾತ್ಮ ನಿನ್ನಯ ಚರಣ

ಧ್ಯಾನದಲ್ಲಿ ಆದೆನು ಲೀನ

ಮೌನಿ ವರದ ಶಂಭುವೆ ಎನ್ನ ||1||

ಮಾನ ಕಳೆವರೇನೈ ಮುನ್ನ

ಮದ್ದನಿಕ್ಕಿ ಈ ಖಲಜನರು

ಸುದ್ದಿಯಾಡದೊಲು ಮಾಡಿದರು

ಶುದ್ಧಮೂತಿ ಕೇಳೈ ಇನ್ನು

ಉದ್ಧರಿಪುದ ಮರೆಯುವರೇನು ||2||

ಪರಮ ನೀರಲಕೆರೆ ನಿವಾಸ

ಗುರುವರನೆ ಪಂಚಾಕ್ಷರೇಶ

ನಿರುಪಮಾತ್ಮಕ ಭವ ವಿನಾಶ

ಶರಣ ಜನರುಲ್ಲಾಸ ಮಹೇಶ ||3||

ನೆನೆಯಿರೇ ದಿನ ದಿನ ಮನದೊಳಗೆ ತಂಗಿ

ತನುತ್ರಯದೊಳು ಘನ ಗುರುವಿನ ನೆನೆಯಿರೇ ||ಪ||

ಗುರುಬಂಧು ಬಳಗವು ಗುರು ತಂದೆ ತಾಯಿಯು

ಗುರುವಿಂದಧಿಕರಾರಿಲ್ಲ| ಜಗದೊಳು

ಗುರುವೆಂದು ಮೋಕ್ಷವ ಪಡೆಯಿರವ್ವ ||1||

ಆಧಾರ ಭೇದಿಸಿ ಆರು ಚಕ್ರದ ಮೇಲೆ

ಸಾಧಿಸಿ ನೋಡೆಂದ ಪರ್ವತ| ದೊಳಗಿರ್ಪ

ಪರಶಿವ ಮೂರುತಿ ತಾನೆಂದು ||2||

ಆರು ವರ್ಣದ ನಡುವೇರಿ ನೋಡಿದರೆ ಅಲ್ಲಿ

ನಾರಿ ನಿರಂಜನ ತತ್ವವಮ್ಮ| ತತ್ವದ ಮನೆಯೊಳು

ಭೇರಿ ನಾದವ ಕೇಳಿ ಹಾರೈಸಿ ||3||

ಸಾಧುಜನರ ಪ್ರಿಯನಾದ ಸದ್ಗುರು ರಾಯ

ಮೇದಿನಿಯೊಳು ಬಂದು| ನರರೂಪ ಧರಿಸಿಹ

ಭೇದವಿಲ್ಲದೆ ನಿಮ್ಮಂತಿರುಹನೇ ||4||

ಸಡಕಿನ ದಾರಿ ಹಿಡಿ ಕಡಕು ನೀರಲಕೆರಿ

ಗಡಿಗ್ರಾಮ ನಿಲಯದೊಡೆಯ| ಪಂಚಾಕ್ಷರನ

ಅಡಿಗೊಂಡು ಮುಕ್ತಿ ಪಡೆಯಿರವ್ವ ||5||

ನೋಡಮ್ಮ ದೇವಿಯೆ ದಯ ಮಾಡಮ್ಮ ||ಪ||

ನೋಡದೆ ನಿನ್ನೊಳು ಭಕ್ತಿ ಕೂಡಿ ಮಾಡುವ ತೃಪ್ತಿ

ನೋಡಿ ಸೈರಿಸದೆ ಮಾಡಿದ ಕಪಟವ ನೀನು ||ಅ.ಪ||

ಮಾಡದೆ ಮಾಡುವರೊಡಗೊಡದೆ

ಬೇಡಿದರೆ ತಾ ನೀಡದೆ

ಕೇಡಿನ ಗುಣದಿಂದ ಕೂಡಿ ಕುಹಕವಾಡಿ

ನೋಡಿ ನಗುತಿರ್ಪ ಕೇಡುಗಾರನಿವ ||1||

ಯೋಚಿಸಿ ದುಷ್ಟರ ಮುಂದೆ ಸೂಚಿಸಿ ಬಯಲಿಗೆ ತಂದು

ವಾಚಿಸಿ ಕೂಚು ಮಾಡುವ ಕುಂದು

ಸಾಚಿಸುತಿಹನೆಂದು ನೀಚ ರೀತಿಯ ಮಾಳ್ಪ

ವಾಚಾಳಕರನೊಮ್ಮೆ ನೋಡಮ್ಮ ||2||

ಗಡಿ ನೋಡಿ ನೀರಲಕೆರೆ ದೃಢ ಮಾಡಿ

ಹಿಡಿದ ಭಕ್ತರೊಡನಾಡಿ

ಬಡವರಾಧಾರ ನೀ ಕಡು ಸೊಕ್ಕಿದವರಿಗೆ

ತುಡುಕುವಿ ಮಾರಿ ನಿನ್ನಡಿಗರ್ಪಿಸುವೆ ತಾಯಿ ||3||

ನೋಡು ದೇವಿ ನೋಡು ದಯದಿ ಬೇಡಿಕೊಂಬೆನು

ಮಾಡು ಸುಖವ ನೀಡು ಮನವ ದಣಿಯಲುಂಬೆನು ||ಪ||

ಆಲಿಯೊಳು ನಿಜದಾಲಿ ತೆರೆದ ನೀಲ ತೋಯದಿ

ಮೂಲದ ಸುನೀಲ ಮಂಟಪ ಜ್ವಾಲೆಯೊಳು ಜಗಜಗಿಪ ಶಿಖೆಯ ||1||

ದಂಡನಾಳದ ಕುಂಡಲ ಶಿರಪುಂಡರೀಕದಿ ಕಂಡೆ

ಮಂಡಲ ಮೂರರೊಳು ಮಾರ್ತಾಂಡನಂತಿರೆ ಮರೆಯಲಾರೆ ||2||

ಗಡಿಯ ನೀರಳಕೆರೆಯೊಳಾಲಯದ ಒಡತಿಯಾದಳೆ

ಒಡೆಯ ಪಂಚಾಕ್ಷರನ ತೊಡೆಯೊಳಡರಿ ಬಿಡದೆ ಭಾಗ್ಯನಿಧಿಯ ||3||

ನೋಡು ದಯವನು ಮಾಡು ಕರುಣವ ನೀಡುವ ಭಕ್ತಾಭಿಮಾನಿಯೇ

ಕೂಡಿ ಕಣ್ಮನ ಜೋಡಿಸಿ ಅನುದಿನ ಬೇಡಿಕೊಂಬೆ ಭವಾನಿಯೇ ||ಪ||

ಅಂಬುಜೇಕ್ಷಣ ಜಂಭ ಭೇದಿಗಳ ಇಂಬನು ಸೆಳೆಕೊಳ್ಳಲಾಕ್ಷಣ

ಶಂಬಾಸುರರ ಕದಂಬವ ಘೋರಿಸಲು ಅಂಬಾ ಬಂದೆ ನೀ ತತ್‍ಕ್ಷಣ ||1||

ಶುಂಭ ನಿಶುಂಭರೆಂಬ ರಾಕ್ಷಸರು ಅಂಬರದಿ ಮನೆಯ ಕಟ್ಟಿರೆ

ಹಿಂಬಲಿಲ್ಲದೆ ಬೆಂಬಿಡದೆ ಸೌ ರಂಭ ದಿವಿಜರನಟ್ಟಿರೆ ||2||

ಹಂಬಲಿಸುತ ದಿಗಂಬರಳೆನುತ ಪರಾಂಬ ನಿನ್ನ ಸ್ತುತಿಸುತ

ಇಂಬುಗೊಡಿಸು ಪರಾಕು ಶಾಂಭವಿ ಎಂಬುತ ಅಮರರು ನುತಿಸುತ ||3||

ಸುತ್ತಿ ಹಿಮಗಿರಿ ಮುತ್ತಿ ನಿನ್ನನ್ನು ಒತ್ತಿ ಕರೆದರು ಧ್ಯಾನದಿ

ಮತ್ತೆ ಕಳವಳವೆತ್ತುತಾಗಳೆ ಒತ್ತರದೊಳು ಅನುಮಾನದಿ ||4||

ಬ್ರಹ್ಮವಿಷ್ಣುಮಹೇಶ ನಿರ್ಜರರ ಉಮ್ಮಳಿಕೆಗನುಕೂಲಿಪೆ

ಉಮ್ಮಯದ ಸುಖವಿತ್ತ ತೆರದೊಳು ಮನನಿಸವರನು ಪಾಲಿಪೆ ||5||

ಖಂಡ ದೈತ್ಯರ ಉದ್ಧಂಡತನವನು ಚಂದಮುಂಡರ ಭಂಡರ

ದಿಂಡೆಯರಾದ ನಿಶ್ಯುಂಬ ಮಹಿಷರ ಖಂಡ ತೇಜೋ ಕೋದಂಡರ ||6||

ಕೊಂದೆ ಮಹಿಷನ ತಿಂದೆ ಮೊದಲಲಿ ಬಂದ ಮುಂಬಲಕಡ್ಡಾಗಿ

ಹಿಂದುಗಳೆದ ಸುರೇಂದ್ರರ ಅಳಿಸುತ ನಿಂದೆ ಬೆಳೆದು ಮುಂದೊಡ್ಡಾಗಿ ||7||

ಹೆಟ್ಟಿ ದೈತ್ಯರನಟ್ಟಿ ಶೂಲದೊಳಿಟ್ಟಿ ಕೆಡಹುತ ಮೆಟ್ಟಿಹೆ

ಒಟ್ಟಿ ಹೆಣಗಳ ಬಿಟ್ಟು ಭೂತಗಳಟ್ಟಿ ಆಹುತಿಗೊಟ್ಟಿಹೆ ||8||

ಮಚ್ಚುತ ಅನಿಮಿಷರ ಇಚ್ಛೆ ತೀರಿಸುತ ಅಚ್ಚಸೌಖ್ಯಾ ಸುಭೋಗದಿ

ಸಚ್ಚಳಿಸು ಮನದಿಚ್ಛೆಗರಿಸದೆ ಮುಚ್ಚಿ ಮೋಹಿಸನುರಾಗದಿ ||9||

ದುಷ್ಟ ದಾನವರ ನಷ್ಟ ಮಾಡಿ ಸಂತುಷ್ಟಪಡಿಸುತ ನಿಷ್ಟರ

ಪುಷ್ಟಿಮಾಡು ಅಷ್ಟದಿಕ್ಕಿನ ಅಧಿಕಾರದಷ್ಟ ಭೋಗ ಸುರೇಷ್ಟರ ||10||

ಅವರವರಿಗೆ ಅವರಷ್ಟೆ ಪದವಿಗೆ ಅವರನು ವಿವರಿಸಿ ಆನಂದವ ಬೀರಿದಿ

ಸವನಿಸಿದೆ ಗೌರಿಯೇ ನೇವರಿಸುತ್ತ ಅವರಿಗವರಂತೆ ತೋರಿದಿ ||11||

ಮಂತ್ರಮೂರ್ತಿಯೆ ತಂತ್ರಕೀರ್ತಿ ಸ್ವತಂತ್ರ ಮತ್ರಾಧಿದೇವತೆ

ಚಿಂತೆ ಹರಿಸೇ ಯಂತ್ರೋದ್ಧಾರಿಣಿ ತಂತ್ರ ಮಂತ್ರ ಯಂತ್ರಾಹುತಿ ||12||

ನಿನ್ನನರ್ಚಿಪನವನೆ ಪುಣ್ಯನು ನಿನ್ನ ಹೊಗಳುವನೆ ಗಣ್ಯನು

ನಿನ್ನಗಲದೆ ನಿನ್ನಕೀರ್ತಿಪ ಮುನ್ನಲಧಮನೆ ಧನ್ಯನು | |13||

ಶೌರಿ ಶಂಕರಿ ಭೈರವಿ ವಾರಾಹಿ ವಾರಿಜಾಕ್ಷಿ ರುದ್ರಾಣಿಯೇ

ಮಾರಿ ದುರ್ಗಿ ಕೌಮಾರಿ ಶಾರದೆ ಕಾಳಿ ಕರುಣಿ ಕಲ್ಯಾಣಿಯೇ ||14||

ನಿನ್ನ ಬೇಡುವೆ ನಿನ್ನ ಹಾಡುವೆ ನಿನ್ನ ನುತಿಸಿ ಕೊಂಡಾಡುವೆ

ನಿನ್ನ ಬಿಟ್ಟು ಅನ್ಯ ದೈವವಿಲ್ಲೆಂದು ಉನ್ನತದ ಶೃತಿ ನುಡಿವುದು ||15||

ಶಾಂತ ನೀರಲಕೆರೆವರೇಶನ ಕಾಂತೆ ಶಾಂತೆ ಸೌಭಾಗ್ಯಳೆ

ಸಂತರಾಳುವ ಅನಂತ ಸುಖನಿಧಿಯಾಂತು ಬಿಡದಿಹ ಭೋಗ್ಯಳೆ ||16||

ನೋಡಮ್ಮ ನೋಡು ಯೋಗಿ ಸುಂದರನ

ನೋಡು ಮುದದಿ ಮಾತ

ನಾಡು ಮೌನದಲಿ ಕೂಡುತಾಡುತ

ಒಡಗೂಡಿ ಮೈದೂಗು ||ಪ||

ನೋಟದೊಳು ನೋಟ ನಟಿಸುತ ನಿಂದ

ಸಾಟಿಲ್ಲದವನಂದ ನೀಟಾದ ಬಿಂದು ನಾದಾನಂದ

ಕೋಟಿ ಸೂರ್ಯಕಿರಣ ತಾಟಿಗೆ ಮೀರಿದ

ಕೂಟ ಬ್ರಹ್ಮ ನಿಜದಾಟವನಾಡುವ ||1||

ಮನನದೊಳು ಮರೆದ ಮನದೊಳಲೋಕ

ತನಗಿಲ್ಲನೇಕ ಜನನ ಜಡರಳಿದ ಮೋಹ ಶೋಕ

ಜನಿಪ ವಿಷಯಗಳ ದಿನಸಿಗಿಲ್ಲ

ಘನಸುಖದಿ ಮುಳುಗಿ ದಿನಮಣಿಯಂತೆಸೆದಿಹ ||2||

ಖಂಡಿತ ನಿಲಯ ನೀರಲಕೆರೆ ತಕ್ತ ಭೂ

ಮಂಡಲ ಶಕ್ತ ಪಿಂಡದೊಳು ಕಂಡೆನ

ಖಂಡ ಸಂಯುಕ್ತ ಪುಂಡರೀಕಭವ

ನಂಡ ಸೂತ್ರ ದೋರ್ದಂಡ ಮುಕ್ತ ಪಂಚಾಕ್ಷರ ||3||

ನೋಡು ಸಖಿ ಬೆಳಗುತದೆ ಪರಮ ಪ್ರಕಾಶದ ಜ್ಯೋತಿ

ಈಡಾ ಪಿಂಗಳ ಮಧ್ಯದಿ ಗುರು ಕರುಣದಿ ಪ್ರಖ್ಯಾತಿ ||ಪ||

ಶತಕೋಟಿ ಜನ್ಮದ ಸುಕೃತ ಒದಗಿ ಬಂತೆನಗೆ

ಅತಿಹರ್ಷ ಚಿತ್ತದೊಳು ಮಥಿಸಿ ಬಂದ ಗುರುಮನೆಗೆ

ಗತಿಯಾಗುವ ಪಥವನು ತೋರಿಕೊಡುವೆ ಬಾ ನಿನಗೆ

ಮಿತಿಯಿಲ್ಲದ ಭವದೊಳು ಜನಿಸಿ ಬಂದಿ ನೀನೀಗ

ಹಿತದಿಂದಲಿ ಆಸನವ ಹಾಕಿ ಹಿಮ್ಮಡವನೊತ್ತಿಸಿದ

ಚೇತರಿಸಿ ಮನಪವನಗಳನು ಸರಿಗೂಡಿಸಿದ

ಶತಕಿರಣ ಕೋಟಿಗಿಮಡಿಯ ಬೆಳಗು ತೋರಿಸಿದ

ಕ್ಷಿತಿಗಧಿಕ ಸಾಂಬನೊಳು ಕೂಡಿ ಬಹಳ ಸುಖಿಯಾಗು

ವ್ರತ ನೇಮದಿ ಕೆಡಬೇಡ ಅತಿಶಯ ಭೋಗದೊಳಾಗಿ ||1||

ನಾಸಿಕಾಗ್ರ ದೃಷ್ಟಿ ಸೂಸದಲ್ಲೇ ನಿಲಿಸಿ

ಕಸಿವಿಸಿ ಹಂಬಲವೆಲ್ಲವ ಬಿಡಿಸಿ

ಮೋಸ ಮೋಹವ ಹೊರಡಿಸಿ

ವಿಷಯದ ಗುಣಗಳ ಕೆಡಿಸಿ

ಈಶನ ಧ್ಯಾನದೊಳು ಚಲಿಸದೆ ಮನಸ್ಥಿರಗೊಳಿಸಿ

ಏಸು ಪರಿಯಂತೆ ಹೇಳಲಿ ಜನನ ಝೇಂಕಾರದ ನಾದ ಸುನಾದ

ಓಸರಿಸಿ ತನಗೆ ತಾಕಿತಿನ್ನುರಿ ವಿನೋದ ವಿನೋದ

ಸಾಸಿರ ದಳದೊಳು ಸಿರಿವ ಅಮೃತದ ಸ್ವಾದ ಅದು ಸ್ವಾದ

ಲೇಸಾಗಿ ನನ್ನ ನಿಜ ನಾನೆ ತಿಳಿದು ನಲಿದಾಡಿ ಆಡಿ

ಸೋಸಿ ಬುವಿಗೆ ಬಾರಧಾಂಗೆ ಮಾಡಿ ಬ್ರಹ್ಮನೊಳು ಕೂಡಿ ||2||

ಪಂಚಭೂತಗಳೆಲ್ಲಿವೆ ಪಂಚಕ್ಲೇಶವೇನಾಯ್ತು ಪ್ರ

ಪಂಚವೆಂಬುದು ಇದ್ದು ಇಲ್ಲದಂತಾಯ್ತು

ಪಂಚಮೂರ್ತಿಗಳೆನಿಸುವ ಕಲ್ಪನೆ ತಾನೇನಾಯ್ತು

ಸಂಚರಿಸುವ ಮರ್ಕಟ ಸರಿದು ತಾನು ಸತ್ತುಹೋಯ್ತು

ಸಂಚಿತ ಪ್ರಾರಬ್ಧ ಶೃತಿ ವಾಕ್ಯವು ಸುಳ್ಳಂತೆ ಸುಳ್ಳಂತೆ

ವಂಚಿಸದೆ ವೇದಗಳ ಪಠಿಸಲು ಗತಿಯಿಲ್ಲಂತೆ ಇಲ್ಲಂತೆ

ಮುಂಚೆ ಹೇಳುವೆ ಕೇಳಿರಿ ಶಾಸ್ತ್ರವು ಬರಿ ಗಂಟಂತೆ

ಪಂಚಾನನ ಎನಿಸಿದ ಪಂಚಾಕ್ಷರನೊಳು ಹೊಂದು

ಸಂಚಲವಿಲ್ಲದ ಉನ್ಮನಿ ಪೀಠದೊಳು ಸಂದು ||3||

ಪರತತ್ವ ಸುಖಕಿನ್ನು ಪೆರತಾದ ಸುಖವಿಲ್ಲೆ

ಸರಸಜಾಕ್ಷಿ ಕೇಳೆಲೆ ||ಪ||

ಶೃತಿ ಗುರುವಾದಿ ಶೃತಿಗೊಂಡ ಬೋಧಿ

ಗತಿಯೊಳುತ್ತಮ ಜ್ಞಾನದ ಹಾದಿ ||1||

ಕಣ್ಣಿನೊಳರಿತು ಬಣ್ಣಿಸುತೋತು

ಪುಣ್ಯ ಕೈಸೋತು ಉಣ್ಣಲಾತು ||2||

ಸ್ಥಿರ ನೀರಲಕೇರಿ ವರನಧಿಕಾರಿ

ಅರಿಯದ ಸಿರಿ ಮುದವೇರಿ ||3||

ಪರವರಿದೆ ಪರಮನ ಇರವನರಿದೆ ಪ್ರಾಣ ನಾಯಕಿ

ಬೆರೆದ ಅರುವ ಮರೆಯದಿರುವ ಪೂರ್ಣಸುಖದ ಭಾವಕಿ ||ಪ||

ನಡು ಹೃದಯಕಮಲದೊಳು ಮನ ಪುದಿದು ನೇಮಿಸಿ

ಎಡರು ಸಂಸಾರದೊಳು ಮುಳುಗದ ವಸ್ತುವ ಕಾಮಿಸಿ ||1||

ಶರೀರ ನೆಪ್ಪು ತಪ್ಪಿ ತನ್ನ ಆತುರದೊಳಿರುವ ಕಾಮಿನಿ

ಸ್ಮರಣೆಯಿಹುದು ಕುರುಹು ಸೋಹಂ ಸ್ಮರಣೆಗೊಂಡು ಭಾಮಿನಿ ||2||

ಘಟಿತ ನೀರಲಕೆರೆಯೊಳುತ್ತಮ ವಿಟನ ರೂಪಿನಂತೆ ತೋರಿ

ನಟಿಸಿಹ ಸಟೆಯಿಲ್ಲ ದಿಟವಿದಿನ್ನು ಕಾಮುಕಿ ||3||

ಪಡೆವೆನು ಮೋಕ್ಷವ ಜಡರಿಲ್ಲೆನುತಲಿ

ನುಡಿವುತ ಕೈಮುಗಿದಡ್ಡ ಬಿದ್ದೆ

ನಡುವೆ ಬಂತು ಅಡ್ಡ ಗ್ರಹಚಾರ ತಮ್ಮ ನೀ

ಪಡೆದ ಅದೃಷ್ಟ ನಡಿ ದಡ್ಡ ಬುದ್ಧಿ ||ಪ||

ಬಾಯಿ ಬದಲಾದರೆ ಕಾಯುವರಾರಿಲ್ಲ

ತಾಯಗಂಡ ಮಾರಿ ಯಮ ಬಲು ಖೋಡಿ

ಗಾಯ ಮಾಯುವದು ಗಾವು ಮಾಡಿಕೋ ತಮ್ಮ

ಕಾಯ ಮೀರಿ ಹೋಗುವುದ ಬಹು ದೂರ ನೋಡಿ ||1||

ಚಿತ್ತ ನಿಲ್ಲಲಿಲ್ಲ ಅತ್ತಲ ಜ್ಞಾನದಿ

ಕತ್ತಲೆ ಕರ್ಮವ ಕಡಿಯಲಿಲ್ಲ

ಸತ್ತು ಹುತ್ತಿ ಬೇಸತ್ತರೆ ಪಾಪ ನಿಮ್ಮ

ಮುತ್ತಜ್ಜ ಅಗದು ಬಿಟ್ಟದ್ದಲ್ಲ ||2||

ಪಂಡಿತ ಗುರು ಮಾರ್ತಾಂಡ ನೀರಲಕೆರೆ

ಗಂಡುಮೆಟ್ಟು ಗಡಿ ನೋಡಿ ಹಿಡಿದಿ

ಚಂಡದೋರ್ದಂಡ ಪುಂಡ ಪಂಚಾಕ್ಷರ

ಗಂಡನನಗಲಿ ಗತಿ ಕಳಕೊಂಡಿ ||3||

ಪಡೆವೆನು ಮೋಕ್ಷವ ಜಡರಿಲ್ಲೆನುತಲಿ

ನುಡಿವುತ ಕೈಮುಗಿದಡ್ಡ ಬಿದ್ದೆ

ನಡುವೆ ಬಂತು ಅಡ್ಡ ಗ್ರಹಚಾರ ತಮ್ಮ ನೀ

ಪಡೆದ ಅದೃಷ್ಟ ನಡಿ ದಡ್ಡ ಬುದ್ಧಿ ||ಪ||

ಬಾಯಿ ಬದಲಾದರೆ ಕಾಯುವರಾರಿಲ್ಲ

ತಾಯಗಂಡ ಮಾರಿ ಯಮ ಬಲು ಖೋಡಿ

ಗಾಯ ಮಾಯುವದು ಗಾವು ಮಾಡಿಕೋ ತಮ್ಮ

ಕಾಯ ಮೀರಿ ಹೋಗುವುದ ಬಹು ದೂರ ನೋಡಿ ||1||

ಚಿತ್ತ ನಿಲ್ಲಲಿಲ್ಲ ಅತ್ತಲ ಜ್ಞಾನದಿ

ಕತ್ತಲೆ ಕರ್ಮವ ಕಡಿಯಲಿಲ್ಲ

ಸತ್ತು ಹುತ್ತಿ ಬೇಸತ್ತರೆ ಪಾಪ ನಿಮ್ಮ

ಮುತ್ತಜ್ಜ ಅಗದು ಬಿಟ್ಟದ್ದಲ್ಲ ||2||

ಪಂಡಿತ ಗುರು ಮಾರ್ತಾಂಡ ನೀರಲಕೆರೆ

ಗಂಡುಮೆಟ್ಟು ಗಡಿ ನೋಡಿ ಹಿಡಿದಿ

ಚಂಡದೋರ್ದಂಡ ಪುಂಡ ಪಂಚಾಕ್ಷರ

ಗಂಡನನಗಲಿ ಗತಿ ಕಳಕೊಂಡಿ ||3||

ಪಾಲಿಸು ಪರಮ ದಯಾಳೆ ಭವ ಜಾಲದುದ್ಧಾರೆ ||ಪ||

ಸುರವರರ ಸಿರಿಯ ಕೈಕೊಂಡ

ದುರುಳ ಮಹಿಷ ಪ್ರಚಂಡಳೆ

ಧುರಧೀರ ಶುಂಭನ ಖಂಡ

ಶಿರವರಿದಾಡಿದ ಚಂಡಳೆ

ಚಮತ್ಕೃತೆ ಪುಂಡರೀಕಾಕ್ಷ

ಕುಂಡಲಿಯ ಕೋದಂಡಳೆ ||1||

ಹರಿಮುಖ್ಯ ಸುರರ ಮೊರೆಗೇಳಿ

ಶಿರಗಳ ಸಾಸಿರವನು ತಾಳಿ

ಧರೆಗಿಳಿದಾಳು ಮಹಾಂಕಾಳಿ

ಕರದಲಿ ಧೃತವರ ಖಡ್ಗ ಕಠಾರಿ

ಪರಮ ಭಕ್ತರ ಪಾಲಿಪೆ

ಪ್ರಪೂರ್ಣೆ ಬ್ರಹ್ಮೇ ||2||

ಪರಮ ನೀರಲಕೆರೆ ವಾರ್ತೆ

ಅರುಹಿ ಗುರುವರಗೆ ಕೀರ್ತಿ

ಸ್ಫುರಣವನು ಕೊಟ್ಟೆ ಸುದಯಾಬ್ಧೆ

ಶರಣ ಜನ ಪ್ರೀತಿಕರೇ ಮಹಾನಂದಳೆ

ಪಾಲಿಸು ಪರಮ ದಯಾಳೆ ||3||

ಪಾಲಿಸೆನ್ನ ಪರಾಂಬ ಪಾರ್ವತಿ

ಮೂಲೋಕ ಮಾತೆ ಪ್ರಖ್ಯಾತೆ ||ಪ||

ಭಕ್ತಪಾಲಳೆ ಭಕ್ತರನುಕೂಲೆ ಶೌರಿ

ಭಕ್ತವತ್ಸಲೆ ಭವಾನಿ ||1||

ಚಿಂತೆಯ ದೂರಳೆ ನಿಶ್ಚಿಂತೆ ಶುಭದಯೆ

ಸಂತರ ಸುಖಿಸುವಳೆ ||2||

ಪುಂಡರೀಕಾಕ್ಷಿಯೆ ಮಂಡಲತ್ರಯ ಮಹೋ

ದ್ದಂಡೆ ನೀರಲಕೆರೆ ಶ್ರೀ ಗೌರಿ ||3||

ಪಾತ್ರವನಾಡಿದೆ ಬಲು ಸುಖ ಪಾತ್ರವನಾಡಿದೆ

ಸೂತ್ರವಿಡಿದು ನಡುನೇತ್ರದಿ ಚಿನ್ಮಾತ್ರನ ಧ್ಯಾನಿಸುತನುದಿನ ||ಪ||

ತನು ಮಧ್ಯದಿ ಮನೋ ಬುದ್ಧಿ ತಾಳಗಳು

ಘನ ದಶನಾದ ಸುವೇಣಿಯ ನುಡಿಸುತ ||1||

ಓಂಕಾರ ಮದದಂಕುರ ತಲೆಗೇರಲು

ಹೂಂಕರಿಸಿತು ಮನ ಶಂಕರ ಧ್ಯಾನದಿ ||2||

ಜನನ ಹರಣ ಪಂಚಾಕ್ಷರ ಮೆಚ್ಚಲು

ಕನಕಗಿರಿ ನಗರರಸಿನ ಸದರಲಿ ||3||

ಬಗೆ ಬಗೆ ಬಣ್ಣದ ಗಗನ ಮಹಲಿನೊಳು

ನಗೆಮುಖ ಚೆಲುವಿಕೆ ಜಗದೊಳಗಿಲ್ಲದ

ಅಗಣಿತ ರೂಪನ ನೋಡೋಣ ಬಾ ತಂಗಿ

ಸೊಗಸಿನ ಮುಂಡಾಸ ಜರತಾರಿ ನಿಲುವಂಗಿ ||ಪ||

ಕೋಟಿ ಚಂದ್ರಕಳೆ ಸಾಟಿಸದಾತಗೆ

ತಾಟಿನ ಸುರತ ನೀಟಗಾರನವ

ನಾಟ ಕಂಡು ಮನ ನಾಚಿತಾ ಕ್ಷಣ

ಬೂಟಕವಲ್ಲಿದು ಭುವನದೊಳಗೆ ಕಾಣೆ ||1||

ಆರು ವರ್ಣ ಮೂರು ಸುತ್ತಿನ ಕೋಟೆ ಏಳು

ಬಾರಿ ನೀಲಗುದುರಿ ಏರಿ ಕುಣಿಸುತಲಿ

ಸಾರಿ ಹೊರಟ ವೈಯಾರದವನೆ ಚದುರಾ

ಧೀರಾ ಮಾರ ಸುಂದರಾ ||2||

ಸಾರಿ ಹೊರಟ ಸರದಾರ ಸುಖದ ಸವಿಗಾರ

ರೂಪ ಬಂಗಾರ ಹೊದ್ದ ಜರತಾರ ಉಟ್ಟಿದ್ದ ಮಂಜೂರ

ನೀರಲಕೆರೆ ಗಡಿ ಸೇರಿ ರಾಜಿಸುವ ಧೀರ

ಮಾರ ಸಂಹಾರ ಪಂಚಾಕ್ಷರ ಶೂರ ||3||

ಬಡಿದಿತ್ತು ಎನಗೆ ದೆವ್ವ

ಬಿಡುಸುವರಾರ ಕಾಣೆನವ್ವ

ಒಡಲೊಳಗೆ ಅಡಗೇದವ್ವ

ನಡುದಲೆಯ ಹಿಡಿದೇದವ್ವ ||ಪ||

ಕಾಯ ಸೇರಿ ಕೂಡಿ ಚಿಕ್ಕ

ಪ್ರಾಯ ಮೊದಲು ಮಾಡಿ

ಛಾಯ ನೋಡಿ ಕೂಡಿ

ಆಯಾಸವಿಲ್ಲದಾಡಿ ||1||

ತನುವ ಮರೆಸಿತವ್ವ

ಮನು ಬುದ್ಧಿ ಕೆಡಿಸಿತವ್ವ

ಜನಕೆ ತೋರಿತವ್ವ

ದಿನಕರನ ಕಳೆಯ ಬೊವ್ವ ||2||

ಕುಂತರೆ ಕುಂದ್ರದವ್ವ

ನಿಂತರೆ ನಿಂದ್ರದವ್ವ

ಶಾಂತರ ಆಳಿತತ್ವ

ತನ್ನಂತೆ ಮಾಡಿತವ್ವ ||3||

ಕೈಯ ಕಾಲು ಉಸುರಿಲ್ಲೆ

ಬಾಯಿದರೆದು ಹೇಳುವುದಲ್ಲೆ

ಸೈಯ ತಕಥೈಯ ಥೈಯ ಥೈಯ

ಮೈಯ ಸ್ಮರಣೆ ತಪ್ಪಿಸಿತಲ್ಲೆ ||4||

ಗಡಿ ನೀರಲಕೆರೆ ಧಾಮ

ನಡು ನಾಡಕೆ ಪ್ರೇಮ

ಒಡೆದು ಪಂಚಾಕ್ಷನೊಳೈಕ್ಯು

ಪಡೆಯಲಾದೀತು ಬ್ರಹ್ಮ ||5||

ಬಲು ತ್ರಾಣ ಎನ್ನನಗಲದಿಹ ಗುರು ತ್ರಾಣ ||ಪ||

ಹೃದಯ ಮಂದಿರ ಸದನ ಸದರಿನೊಳು ಪಾಲಿಸಿದ

ಬೆದರಲೇತಕೆ ಸುಖಾಸ್ಪದ ನಾದ ಬಲುಮೆಯ ||1||

ಜಗಜಗಿಸುತ ಗಗನದಂತಿರುತಿಹ

ನಿಗಮಾದಿಗಳಿಗೀಗ ಸಿಗನಿವ ||2||

ಪೊಡವಿಗುತ್ತಮನರಿ ಬಿಡ ಗಡಿನೀರಲಕೆರಿ

ಗೊಡೆಯನೆನಿಪ ಕುರುಹಿಡಿದ ಎಡಬಿಡದೆ ||3||

ಬರಿ ಹರಟೆಯ ಮಾತು ಹೆರವರ ಉಸಾಬರಿ ಬಿಟ್ಟು

ಗುರು ಧ್ಯಾನದೊಳು ಮನ ಬೆರೆಯಬಾರದೆ

ಕರಕರ ಕಷ್ಟ ಕಾಮ ಭ್ರಮೆಯ ಕಳೆಯಲು

ಗುರುಭಕ್ತ ಹೊಂದಿಕೊಂಡು ಇರಬಾರದೆ ||ಪ||

ಸತ್ಯದಾಚಾರ ಸತ್ಪುರುಷರ ಕೂಡುತ

ಸತ್ಯವ ತಿಳಿದು ಸೈರಿಸಬಾರದೆ

ನಿತ್ಯ ನಿತ್ಯದಿ ವಸ್ತುವ ಅರಿದು ಚಿತ್ತದಿ ಮತ್ತೆ ಅ

ನಿತ್ಯ ಪ್ರಪಂಚ ಕಡಿಯಬಾರದೆ ||1||

ಶೃತಿ ಮುಖದೊಳು ಅತಿಹಿತ ಗೋಷ್ಠಿಯ ಮಾಡುತ

ಮತಿಗೆ ಅತ್ತಲ ಅರುವಿಗೆ ಹತ್ತಿರ ಇರಬಾರದೆ

ಕ್ಷಿತಿ ಭೋಗದ ಅತಿಶಯ ಕೃತಕಾಮಿಗಳಿಗೆ ನೀ

ನತಿ ದೂರದೊಳು ಸುತ್ತಿ ಸುಳಿಯಬಾರದೆ ||2||

ಹಾನಿ ವೃದ್ಧಿಗೆ ಸಾಕ್ಷಿಕನೆಂದು ತಿಳಿದು ನಿ

ದಾನದಿ ನಿಜದಿ ನಿಲ್ಲಬಾರದೆ

ನೀನೆ ನಿರಲಕೇರಿ ಭಾನುಕೋಟಿ ತೇಜ

ಮಾನಿತನಾಗಿ ಮೈಮರೆಯಬಾರದೆ ||3||

ಬಂದ ಕಾರಣವೇನು ಕೇಳೊ ಮನುಜನಾಗಿ

ಹಿಂದು ಮುಂದರಿಯದೆ ಬಂದೆ ಬಳಲುವದಕ್ಕಾಗಿ ||ಪ||

ಇರುವೆ ಮೊದಲು ಆನೆ ಕಡೆಯಾಗಿ ದೇಹಗಳ

ಧರಿಸುತ ನರದೇಹವ ತೊಟ್ಟು

ಮರವೆಯಿಂದ ಪರಿಪರಿಯ ದುಃಖಗಳ ಅನುಭವಿಸಿ

ಬರಿದೆ ಕಂಗೆಡುವುದಿದನು ಅರಿಯದಲೆ ನೀನು ||1||

ಬಂದರೊಳಿತಾಯ್ತು ತಡೆ ಮುಂದೆ ಸಂತರುಗಳ ಅಡಿ

ಹೊಂದಿ ಸದ್ಗುರುವಿನಿಂದ ಬಂಧನಗಳ ಹರಿಸಿ

ಚಂದದಿ ಸುಖ ಸಿಂಧುವಿನೊಳು ಮುಳುಗುತ ಆ

ನಂದವ ಪಡೆದು ಮಹದಾತ್ಮ ನೀನಾಗೊ ||2||

ಚಂಡ ನೀರಲಕೆರೆಯ ಗಂಡ ಪಂಚಾಕ್ಷರನ

ಕಂಡು ನೀ ಸಾಷ್ಟಾಂಗಗೈಯುತಲಿ

ಭಂಡ ಪ್ರಪಂಚವ ಖಂಡಿಸಿ ಲೋಕದೊಳು

ಪಂಡಿತೋತ್ತಮನಾಗುತ್ತ ಅಖಂಡನೆನಿಸೈ ||3||

ಬ್ರಹ್ಮಾನಂದ ಬ್ರಹ್ಮಾನಂದ

ಸುಮ್ಮನಾಗದು ಕೇಳೆಲೊ ಕಂದ

ಹಮ್ಮನಳಿದು ಉಮ್ಮಳಕಿ ಇಲ್ಲದಂದ

ಸುಮ್ಮನೆ ಸುಖವಾಂತಿರ್ಪ ಚಂದ ||ಪ||

ಕಾಣುವುದೀ ಜಗ ಕಾಣದ ಆನಂದ

ತ್ರಾಣಿಸುವ ಪ್ರಾಣಿ ದೀಪ್ತಿಯೊಳು ನಿಂದ

ಮಾಣದೆ ಭೃಕುಟಿ ಕೋಣೆಯೊಳು ಸಂದ

ಕಾಣಬೇಕಪ್ಪ ಗುರುರಾಯನಿಂದ ||1||

ದೇಹದೆಚ್ಚರವು ಇನಿತಿಲ್ಲದಾಗಿ

ದೇಹ ನಾನೆಂಬ ಅರಿಕೆ ಇಲ್ಲದೆ ಹೋಗಿ

ಸೋಹಂ ಇಂತೆಂಬ ಸುಖದೊಳುದ್ಯೋಗಿ

ದೇಹ ತೂಗುತಲಿರುತಿರ್ಪ ಭೋಗಿ ||2||

ಪೊಡವಿಗುತ್ತಮ ಗಡಿ ನೀರಲಕೆರೆಯ

ಒಡೆಯನೆನಿಪ ಪಂಚಾಕ್ಷರನ ಅಡಿಯ

ಹಿಡಿಯೊ ಬಿಡಬೇಡ ಮೋಕ್ಷದ ಐಸಿರಿಯ

ಕೂಡುವನು ತಿಳಿ ಮನದೊಳು ಖರೆಯ ||3||

ಬ್ರಹ್ಮಾನಂದದ ಸುಖವು ನಿನಗೆ

ಸುಮ್ಮನೆ ಹೇಗಾಗುವುದು ಮನವೆ ||ಪ||

ಅಂಗದೊಳಂಗ ನಿಸ್ಸಂಗವಾಗೋತನಕ

ರಂಗಮಂಟಪ ಮಧ್ಯ ಕೈಸೇರೋತನಕ

ಕಂಗಳೆರಡು ಮುಚ್ಚಿ ಕಡೆಗಾಗೋತನಕ

ಮಂಗಳ ಪ್ರಭೆಯೊಳು ಮುಳುಗ್ಯಾಡೋತನಕ ||1||

ನೆರೆ ದ್ವಾರಗಳೊಂಭತ್ತು ಮುಚ್ಚುವ ತನಕ

ಪರಮಾಕಾಶದ ಕದ ತೆರೆಯೋತನಕ

ಹರಿವ ನದಿತ್ರಯ ಸಂಗಮ ದಾಟುವತನಕ

ಎರಡು ಹಾದಿಯ ಬಿಟ್ಟು ನಡುವೆ ಹೋಗೋತನಕ ||2||

ಶಂಖ ಕಿನ್ನರಿ ಭೇರಿ ಸ್ವರ ಕೇಳೋತನಕ

ಕಿಂಕಿಣಿ ವಾದ್ಯದ ದರುವು ಕೇಳೋತನಕ

ಕಿಂಕರನಾಗಿ ತಾ ಚರಿಸ್ಯಾಡೋತನಕ

ಅಖಿಲ ಪಂಚಾಕ್ಷರಿ ತಾ ಒಲಿವತನಕ ||3||

ಬಾಲೆಯ ನಚ್ಚದಿರು ಕಾಲ ಮೃತ್ಯು ನುಡಿಯ

ಆಲಿಸದಿರು ಕೇಳೆಲೊ ತಮ್ಮ

ಕಾಲ ಕಾಲಕಿದು ಮೂಲವಸ್ತು

ಆಲಿ ತೆರೆದು ನೋಡೋ ಬ್ರಹ್ಮ ||ಪ||

ನೋಡಿದರೆ ಈ ಕ್ಷಣ ಜಾಡಿಸುತ ಎಳೆವಳು

ಗಾಡಿಕಾರ್ತಿ ಪ್ರಾಣವನು ಈಗ

ಜೋಡಿಸುವಳು ಕೈಕಾಡಿ ಕನಕ ರತ್ನ

ಕೂಡಿದರೆ ದೇಹ ಕೆಡುವದು ಜ್ವಾಕಿ

ಆಡಲು ಮೋಹವ ಮಾಡಿ ಮನೆಯ

ಈಡು ಮುರಿದು ಕೊಡುವಳು ಕೈಗೆ ಬೋಕಿ ||1||

ತನುವ ಕೆಡಿಸುವಳು ನಿನ್ನ ಮನವ ಕೆಡಿಸುವಳು

ಘನವ ಕೆಡಿಸುತ ನೋಡುವಳು ಮಾರಿ

ದನಕರ ಜಿಂದಿಗಿ ದಿನಸಿನ ಒಡವೆಗಳ

ಅನುವಾಗಿ ಸೆಳೆಕೊಂಬಳು ಸೂರಿ

ಶುನಕನಾಗದಿರು ಮನಕೆ ಅರಿ

ಅಣಕಿಸವಳು ಬಡಿದು ಮಹಾಮಕ್ಕಮಾರಿ ||2||

ಖತಿ ಮನದೊಳು ಮೇಲೆ ಹಿತ ಮಾತಾಡುತ

ಅತಿಶಯಕೆ ಎಳೆಯುವಳು ಖೋಡಿ

ಗತಿಗೆ ಅಡ್ಡ ನಿಲ್ಲುವಳು ಮತಿಯ ಮಸಣಿಸಿ ಸತ್

ಪಥವನಗಲಿಸಿ ಕುಣಿಸ್ಯಾಡಿ

ಪತಿ ನೀರಲಕೆರೆ ಯತಿವರನ ಅಡಿಯ ಬಿಡದೆ

ಹಿತದಿ ಈ ಪೀಡೆಯ ಕಳೆಯೊ ನೋಡಿ ||3||

ಬಾಲೆ ಕೇಳಲೆ ಮೇಲು ಮಹಲಿನೊಳಗಾಲಿ ತೆರೆದು ನೋಡವ್ವ

ನೀಲಗುದರಿ ಮೇಲೆ ನೀಲಕಂಠನಿಹ ನೀಲ ವರ್ಣದಂಗಿ ತಂಗಿ ||ಪ||

ಸಾಲುದೀಪ ಸರಮಾಲೆಗೊಳಿಸಿ ಬಹುಜಾಲ ತಾರೆಗಳ

ಜ್ವಾಲೆಗೆಗ್ಗಳ ಬಾಲಚಂದ್ರ ನಿಜಮೂಲ ಸೂರ್ಯರಂತೆ

ಖಾಲಿ ಮಾಡದಿರು ನೀಲಕುಂತಳೆ ತಿಳಿಯವ್ವ ಮತಿವಂತೆ ||1||

ಪಿಂಡವಂಡ ಬ್ರಹ್ಮಾಂಡ ತುಂಬಿದ ಖಂಡ ತೇಜದು

ದ್ದಂಡದವನು ಮಾರ್ತಾಂಡ ಕಳೆಗಳಿ

ತ್ತಂಡಲಿಸುವ ಭೂಪ ಮಂಡಲತ್ರಯನಿಳ

ಯಾಂಡದೊಳು ಆತನ ಕಂಡೆ ನಿಮ್ಮ ರೂಪ ||2||

ಕೊಟ್ಟೆ ತನುಮನ ಮುಟ್ಟಿ ಧನವನಲ್ಲಿಟ್ಟೆ

ನೆಟ್ಟ ನೋಟ ನದರಿಟ್ಟೆ ದಣಿದು ರತಿ

ಗೊಟ್ಟೆ ಕೂಡು ಸುಖಪಟ್ಟೆ ಅವನ ನೋಡಿ

ಕೆಟ್ಟ ಸಂಸಾರವ ಬಿಟ್ಟೆನಮ್ಮ ಹುಟ್ಟಿ ಬಾರದಿರುವೆ ||3||

ಉಂಡೆ ಸೌಖ್ಯೆ ಬಾಳ ಕಂಡೆ ಅರಿದು ಕೈ

ಕೊಂಡೆ ಮುಚ್ಚಿ ಮೈಗೊಂಡೆ ಸೊಕ್ಕಿ ತಿಳ

ಕೊಂಡೆ ಪ್ರಾಯದ ಮಿಂಡೆ ಬದಿಯಲಿ ಕರಕೊಂಡೆ

ಕಂಡ ಮಿಂಡರೊಡಗೂಡದವನ ಕಣ್ಗಂಡು ಮಾಡಿಕೊಂಡೆ ||4||

ಚಿತ್ತಸುತ್ತ ಅಚ್ಚೊತ್ತಿದಂತೆ ಮತ್ತಿತ್ತ ತಿರುಗ

ದತ್ತಾಗಿ ನೀರಲಕೆರೆ ಗೊತ್ತಿಗೆ ಹೋಗಿ ಗುರು

ಉತ್ತಮನ ಅಡಿ ಬಿಡದೆ ಒತ್ತಿ ಮದವು ಮೈಗೆ

ಹತ್ತಿ ಹಿಡಿಯ ಸೇರಿ ಜಗಕಿತ್ತಲೆಂದು ಹೊಡಿಯೆ ಕೈಯೆತ್ತಿ ಭೇರಿ ||5||

ಬಾರೊ ಮನೆಗೆ ಪ್ರಾಣಕಾಂತ

ಮಾರ ಸನ್ನಿಭ ಸವಿದೋರೋ ನಿನೀಗ ||ಪ||

ನಾನೇನೆಂದೆನು ಪ್ರಿಯಚಂದಿರವದನ

ನೀ ಬಾರದಿರಲು ಶೃಂಗಾರವಿಲ್ಲೊ ಸದನ ||1||

ಮುಖಮುಖವಿಟ್ಟ ಮಮತೆ ಏನಾಯ್ತು

ಕಕಲಾತಿಯಲಿ ನಿನ್ನ ಮತಿಯೆತ್ತಹೋಯ್ದು ||2||

ಘಟಿತ ನೀರಲಕೆರೆ ವಿಟಕಲ್ಪಭೂಜ

ವಿಟರಾಯ ಹಟ ಬಿಡೊ ಮಾರಾರಿ ತೇಜ ||3||

ಬಾರನೇತಕೆ ಬಾಲೆ ಕಾಂತ ಏನು ಕಾರಣ ನಿಂದ ||ಪ||

ಸದರ ಮಂಟಪದೊಳು ಸದರಿನ ಸುಖರೂಪ

ಚದುರಂಗದವನೆಂಥ ಚೆಲುವ ಪುಣ್ಯವಂತಿಗೊಲಿವ ||1||

ನಾನೇನೆಂದೆನು ತನಗೇನಿದು ಮುನಿಸಮ್ಮ

ತಾನಿಲ್ಲದಿರುಳೇ ನಿದ್ರೆ ಬರಲಿಲ್ಲ ತರುಳೇ ||2||

ಕೂಡಿದ ಕುಡಿಹುಬ್ಬು ಕುಡಿಮೀಸಿ ತಿಳಿಗಲ್ಲ

ನಾಡೊಳು ಚಂದ್ರನೇ ತಂಗಿ ನೋಡಿ ಬಾ ಲಲಿತಾಂಗಿ ||3||

ಬೆರಗುಗೊಂಡಿತು ಮನ ಅರಗಳಿಗಿ ಇರಲಾರೆ

ಕರೆದು ತಾರೆಲೇ ಹೊಂತಗಾರೆ ನಾರಿ ಬಾರೆ ||4||

ನಗಿ ಮುಖದವನಾದ ಅಗಣಿತ ಮಹಿಮನ

ಬಗೆ ತಿಳಿಯದಮ್ಮ ಜಾಣೆ ಹೋಗಿ ಬಾ ನಾಗವೇಣಿ ||5||

ಕೋಟಿ ಚಂದ್ರಮರು ಸಾಟಿಗರೆ ಅವನಿಗೆ

ನೋಟಕೆ ಒಪ್ಪಿದವನ ಜಾಣ ಬಾರನೇಕೆ ಪ್ರವೀಣ ||6||

ಎಂದಿಗಾದರವನ ಹೊಂದಿ ಇರಬೇಕಮ್ಮ

ಮುಂದೆನ್ನ ಬಿಡನವ ಖೋಡಿ ಮಂದಗಮನೆ ನೀ ನೋಡಿ ||7||

ಲೋಕದವ ಸಂಗವದು ಬಲು ಕೇಡು

ನೂಕಿ ಶೃಂಗಾರವನು ಮರೆದೆ ಅವಗೆ ಜರಿದೆ ||8||

ತಳತಳಿಸು ಮೇಲುಮಹಲಿನಂತರದೊಳು

ಹೊಳೆವಾಕಾಶ ಮಿಂಚಿನಂತೆ ಜಗಜಗಿಸುವ ಕಾಂತೆ ||9||

ಕೇಳಬಾರದ ಸುದ್ದಿ ಹೇಳಬಾರದ ಸುಖ

ಕೇಳಿ ಬಾಳುವೆ ಮಾಡೆಂದ ಹೇಳಲಾರೆ ನಾನೆಂದ ||10||

ಮರಳಿ ಕಳಿಸದೆ ಮುಂದೆ ಮರಣವಿಲ್ಲೆಂದು

ಕರುಣಿಯ ಕರೆದೊಮ್ಮೆ ನೆನೆಯೇ ಬೀಜದ ತೆನೆಯೇ ||11||

ಸಟೆಯಲ್ಲ ಕೇಳೀಗ ಕುಟಿಲವಲ್ಲೀ ಮಾತು

ವಿಟರೊಳುತ್ತಮಗೆ ಕಣ್ಣಿಟ್ಟೆ ಬಂಧು ಬಳಗವ ಬಿಟ್ಟೆ ||12||

ಗಡಿ ನೀರಲಕೆರೆ ಹೊಂದಿ ಬಿಡದಿರು ಎನ್ನೊಬ್ಬಳ

ಮಡದಿ ಮರೆಯಲಾರೆ ಸಖಿಯೇ ಕರೆದು ತಾ ಚಂದ್ರಮುಖಿಯೇ ||13||

ಬಿಡು ಕೆಡಬೇಡ ಜಡ ಸಂಸಾರ ನಿನ್ನೊಡಲೊಳು

ಒಡೆಯನ ತಿಳಿ ಪೂರ

ಬಿಡದೆ ಅಡಿವಿಡಿ ಗುರು ಸಾಕಾರ ಜಡರಳಿ

ತೊಡರದೆ ಅಘ ದೂರ ||ಪ||

ತೊಡಕಿಲ್ಲದ ಸುಖ ಹುಡುಕ್ಯಾಡೊ ಮಿಡುಕಾಡದೆ

ಹುಡುಕತಲಿ ಒಡಗೂಡೊ

ಎಡರಿಲ್ಲದೆ ಗಡಿಬಿಡಿ ಮಾಡೊ ನುಡಿ ನೋಟ ಮನದ

ಕಡೆಯಲಿ ನೋಡೋ ||1||

ಪಂಚಭೂತ ತತ್ವಕೆ ಮೇಲೆ ಪ್ರ

ಪಂಚದೊಳಿಲ್ಲದಿರೆ ಅನುಕೂಲೋ

ಸಂಚಿತ ಪ್ರಾರಬ್ಧದ ಕೀಲು

ಹಂಚಿಕೆ ಹಾಕೆಲೊ ನಿರ್ಬಯಲೊ ||2||

ತಿಳಿವುದೇನು ತಿಳಿದು ನೀನು ಉಳಿದು

ಅಳಿದು ಹೊಳೆದು ಹೊಂದುವ ನೀನು

ಹೊಳೆವ ನೀರಲಕೆರೆ ಬಳಿ ಬಯಲಾತ್ಮನ

ತಳೆದೀ ಭವಗಳ ಕಳೆ ನೀನು ||3||

ಬಿನ್ನಪವನು ದೇವಿ ಲಾಲಿಸೆ ನಿನ್ನ ಧ್ಯಾನದಿ ನಿಲಿಸೇ ||ಪ||

ನಿಗಮಾತೀತೆ ನಿರಾವರಣೆ ಗಗನಸದೃಶ ಮೂರ್ತಿ ಸದಾ

ಮಿಗೆ ದೃಕ್ ಮಧ್ಯದ ದೃಷ್ಟಿಯೊಳು ಜಗಜಗಿಸುತ ಅಗಲದಂತೆ ಎನ್ನ ||1||

ಶಮದಮಾದಿ ಶಾಂತಿ ಕ್ರಮಗಳ ಅನುವಿನಿಂದ ಮಮಕರಿಸಿ ಮತ್ತೆ

ವಿಮಲ ಮಾನಸ ಭ್ರಮರಿ ಹೃದಯ ಕಮಲರಳಿಸಮ್ಮ ||2||

ಒದಗಿ ನೀರಲಕೆರೆಯ ಸದನ ಸದರನೇರು ಸುಧೆಯ ರೂಪೆ

ನದರಿಗೆ ಹೆದರುವೆ ಮುದದೊಳಿರು ಹೆದರದಿರುವೆನಮ್ಮ ||3||

ಬೇಡಿಕೊಂಬೆನು ಕೇಳಿ ಜನರೇ

ಜೋಡಿಸಿ ಕೈ ಮುಗಿದೆ ನಿಮಗೇ

ನೋಡಿಕೊಳ್ಳಿರಿ ಖೋಡಿ ಸಂಸಾರ

ಕೇಡು ಯಮನಿಗೆ ಈಡು ಮಾಡ್ವುದು ||ಪ||

ತಾಯಿತಂದೆಯ ಮಾಯದೊಳು ರತಿ

ಜಾಯದೊಳೀ ಕಾಯವಾಯ್ತು

ಬಾಯಿದರೆದು ಹೇಳುವೆ ಮುಂದಿನ

ಆಯಾಸವನೇನೆಂಬ ತಿಳಿಯಿರಿ ||1||

ಅಳಲಿಸುವುದು ಬಳಲಿಸುವು

ಕಳೆಯಗುಂದಿಸಿ ನಷ್ಟಗೊಳಿಸುವುದು

ತೊಳಲಿಸುವುದು ಇಹಪರದೊಳು

ಎಳೆಸುತ ಅಳಿಸುತಿಹುದು ತಿಳಿಯಿರಿ ||2||

ಕಷ್ಟದೊಳು ಅಳುತಿಹರ ಕಂಡು

ಭ್ರಷ್ಟನೆಂದು ದೃಷ್ಟವ ಹೇಳುವಿರಿ

ನಿಷ್ಠೆಯಿಂದಲಿ ನೀರಲಕೆರೆಯ

ಶ್ರೇಷ್ಠ ಸದ್ಗುರು ಗೋಷ್ಠಿಯ ಒಲ್ಲಿರಿ ||3||

ಬೇಡ ಬೇಡಲೊ ಬೇಡಿಕೊಂಬೆ

ನೋಡು ನೀ ಸಂಸಾರವ

ಮಾಡಿ ಕೆಡುವ ಮೂಢ ಜನರು

ನೋಡದೆ ಯಮಗೀಡಾದರು ||ಪ||

ಮಡದಿ ಮನೆ ಮಕ್ಕಳ ಕಂಡು

ಬಿಡದೆ ತನ್ನೊಡಲ ಹೊರೆದುಕೊಂಡು

ತೊಡರಿ ಹಸಿವು ತೃಷೆಗಳಡರಿ

ಮಿಡುಕುತ ಇಹಪರದೊಳಾಡುವುದು ||1||

ಅಕ್ಕರದೊಳು ಅತಿ ದುಃಖವ ತೋರಿಸಿ

ಸುಕ್ಕಿಸುತ ಸುಯ್ಗರೆಸಿ ಕಡೆಗೆ

ತಿಕ್ಕಿ ಮುಕ್ಕಿನೆಕ್ಕುತ ಅವರ

ಸೊಕ್ಕು ಮುರಿವ ಸುಖದ ಕೇಡಿದು ||2||

ಭಾಸುರಾತ್ಮ ನೀರಲಕೆರೆವಾಸ

ಈಶ ಪಂಚಾಕ್ಷರನ ಕೂಡೊ

ನಾಶ ಜನನ ಮರಣ ದೋಷ

ದಾಸೆ ಕಳೆಯೊ ತಿಳಿಯೊ ಉಳಿಯೊ ||3||

ಭಳಿರೆ ಭಾಪುರೆ ಗುರುವೆಂಥಾತ

ಎನಗೊಲಿದ ಕರುಣ ಮಾಡಿದ ದಾತ

ತಿಳಿಸಿದರೆ ನೆಲೆ ಕಲೆ ಪ್ರಖ್ಯಾತ

ಉರುಳಿಕೊಂಡು ಎನ್ನ ಸದ್ಗುರುನಾಥ ||ಪ||

ಅಷ್ಟವಿದ್ಯಾರ್ಚನೆ ನೆಲೆಗೊಳಿಸಿ ಅಷ್ಟಿಷ್ಟು ಕಷ್ಟ ಹಿಂಸೆಯ ಬಿಡಿಸಿ

ಭ್ರಷ್ಟ ಭಜನೆ ದುರ್ಗುಣ ಕೆಡಿಸಿ ಮುಟ್ಟೊರೆಸಿಬಿಟ್ಟ ಬ್ರಹ್ಮದಿ ಬೆರೆಸಿ ||1||

ಯೋಗದಿಂದ ಫಲವಿಲ್ಲವೆಂದ ಸುಖಭೋಗದಾಶ ನೀಗೆಂದ

ರಾಗ ರಚನೆಗಳ ಕಳೆಯೆಂದ ಈಗೆನ್ನ ಹೃದಯ ಪೀಠದಿ ನಿಂದ ||2||

ಬೆಡಗಿಲಿರ್ಪ ನೀರಲಕೆರೆ ದೃಢವಿಡಿದು ನಡೆದು ಪಡುವಣ ದಾರಿ

ಒಡೆಯ ಪಂಚಾಕ್ಷರನ ಅಡಿ ಸೇರಿ ಕಡಕಿಲಿಂದ ಮೀರಿ ||3||

ಭಜನೆಯ ಮಾಡಿದೆ ಸದ್ಗುರು ಭಜನೆಯ ಮಾಡಿದೆ

ವಜನ ಹಿಡಿದು ವಾಸರಿಸದೆ ಸುಜನಲಿಂಗ ಶರೀರಂಗಣದೊಳೀಗ ||ಪ||

ಸ್ವರ್ಗ ನರಕ ತಿರುಗ್ಯಾಡುವ ಮನವನು ಅ

ನರ್ಘ ಮಾಡಿ ಗಾರು ಮಾರ್ಗ ಗುಪ್ತದೊಳು ||1||

ಅಂಹಕರಿಸದೆ ಬಹುಕಿಂಕರ ಭಾವದಿ

ಓಂಕಾರ ತುಂಬಿ ಮೃಗಾಂಕನ ಕಳೆ ಗುರು ||2||

ಪುರುಷ ಪ್ರಕೃತಿ ಸುಖವಾಂತು ಸರಸಕಳೆ

ವರುಷ ಸುರಿವ ಹರ್ಷಾತಿಶಯದರಸನ ||3||

ಭ್ರಷ್ಟಸಂಗ ಕಡು ನಿಷ್ಠುರ ಕಡಿದಿಡು

ಅಷ್ಟವರ್ಣದ ಅಷ್ಟಾಂಗದೊಳಾತ್ಮನ ||4||

ವಿಸ್ತರದಡಿ ಪ್ರಶಸ್ತ ನೀರಲಕೆರೆ

ಪುಸ್ತಿಯಾದ ಪರವಸ್ತು ಪಂಚಾಕ್ಷರ ||5||

ಭ್ರಷ್ಟಾ ಏನಿದು ನಡತೀ ಬರೆ ಕಷ್ಟದಿ ಜಗದೊಳು ಕೆಡುತೀ |ಪ||

ಹೇಸಿಕಿದಾಸೆಯು ಕೇಡೊ ನಿರಾಶೆಯನ್ನು ಬಿಡಬ್ಯಾಡೊ

ಈಶನ ನೆನಿ ನೆನಿ ಮೂಢ ಆಶೆಯು ಕೇಡು ಇಹಪರದೊಳು ಗಾಢ ||1||

ಘಟವಿದಿ ನರಕದ ಪುಂಜ ದಿಟ ಮಾಡಲು ಹತ್ತಿತು ನಂಜ

ಕುಟಿಲ ಗುಣಗಳ ಅಳಿ ಗುಂಜ ನಿಟಿಲಾಲಯದೊಳು ಹಿಡಿ ಪುಂಜ ||2||

ನಡುಗಡಿ ನೀರಲಕೇರಿ ಕಡು ತವಕದಿಂದ ಮರಡಿಯನೇರಿ

ಮೃಢ ಪಂಚಾಕ್ಷರನ ಅಡಿಯ ಸೇರಿ ಹಿಡಕೊಳ್ಳೊ ಮುಕ್ತಿಯ ಕೈಸೇರಿ ||3||

ಮರೆಯದಿರು ಮನದೊಳು ಮಹಾದೇವಿ

ಕರುಣಿ ಭಕ್ತಜನರ ಸಂಜೀವಿ

ಇರುಳು ಹಗಲು ನುತಿಪರ ವಾಂಛೆಯನು ಕೊಡುವಿ ||ಪ||

ಮೊದಲೊಳು ಆಸನ ಚಲಿಸದೆ ಬಲಿಸು

ಚದಲದೆ ಅಂತರದಾಲಿಯ ನಿಲಿಸು

ಕದಲದೆ ಮನವಾಯುಗಳ ಗೆಲಿಸು

ಸದಮಲ ಆತ್ಮಯೋಗದೊಳೆನ್ನ ಒಲಿಸು ||1||

ನಿನ್ನ ಹಾಡಿ ನಿನ್ನ ಬೇಡಿ ನಿನ್ನ ಕೊಂಡಾಡಿ

ನಿನ್ನ ಧ್ಯಾನದೊಳು ನಿನ್ನಂತೆ ಮಾಡಿ

ನನ್ನ ನಿನ್ನೊಳು ಭಿನ್ನವಿಸದೆ ನೀನಾಡಿ ||2||

ಗುರ್ತಿನ ಗಡಿ ನೀರಲಕೆರೆಯ

ಮೂರ್ತಿ ಸದ್ಗುರುವರನ ಐಸಿರಿಯೆ

ಸಾರ್ಥಳಾದೆ ಮೂಜಗ ದೊರೆಯೆ

ಕೀರ್ತಿಪೂರ್ತಿ ದಯಾ ಸ್ಫೂರ್ತಿ ಪೊರೆಯೆ ||3||

ಮತ್ತಾರ ಭಯಕೆ ಬೆದರದಿರುವ ಯೋಗಿ ಸುಂದರ

ನದರಿಯೊಳು ನದರೇರಿ ನದರಾಯ್ತು ಮಂದಿರ ||ಪ||

ಮುದದಿ ಶಬ್ದವ ಕೇಳುವ ಕರಿಯ ಬಧಿರನ ಅಂದದಿ

ವದನವೆತ್ತಿದತ್ತ ಮುಖದಿರುಹುವ ಚಂದದಿ ||1||

ದೇಹದೆಚ್ಚರವಡಗುತಿದೆ ಇಲ್ಲ ಭೀಕರ

ಊಹಿಸೇನನು ಬೇರೆ ಸೋಹಂ ಶಬ್ದ ಮಮಕರ ||2||

ಅರಿಯನೇನು ಮರೆಯನು ಗುರುವರನ ಚಿತ್ತಿನಲಿ

ಹಿರಿಯ ನೀರಲಕೆರೆಯ ಗುರಿಯ ತುರೀಯ ಗೊತ್ತಿನಲಿ ||3||

ಮರೆಯದಿರು ಮಹಾದೇವಿಯ ಮನವಳಿದು

ಮರಳಿ ಮರಳಿ ನೆನೆಯೊ ನೆನೆಯೊ

ಅರಿಯದೈಶ್ಚರ್ಯವನು ಕರುಣಿಸುವ ಕರುಣಾಳು

ಶರಣರ ಅನುಕೂಲನಿಧಿ ಸುಧೆಯ ||ಪ||

ಅಣು ರೂಪುವಾದ ಆತ್ಮಳೆಂದು ಗುಣಸಾಕ್ಷಿ

ತ್ರಿಣಯರನು ಪಡೆದಳೆಂದು ಗಣಿಸಲು ಜಗದಾದಿ

ಧಣಿಯ ಮುಕುತಿಯ ಕಣಿಯ

ಮನದೊಳು ಮೆಚ್ಚಿ ಕರಿಯೊ ಬೆರೆಯೊ ||1||

ಜೀವ ಶಿವಕಾಯ ಮಾಯೆಯೆಂಬನಿತ

ರಿವ ತೋರ್ಕೆಯೊಳು ತೋರಿ

ತೀವಿ ಪರಿಪೂರ್ಣತ್ವದಾಲಂಬನ ಹೃದಯ

ನೇವರಿಸಿ ನಿಂದು ನೋಡೊ ಕೂಡೊ ||2||

ಅರಿವು ಮರೆವುಗಳೆಂಬೆರಡನು ಕುರು ಹರಿದು

ಅರಿದರಿವಿನ ಉನ್ಮನಿಯ ಸೇರಿ

ಸರಸಿಜಾಪ್ತನ ಕಿರಣದೊಲಿಹ ನೀರಲಕೆರೆಯ

ಗುರುದೇವರೆಂದು ತಿಳಿಯೊ ಹೊಳೆಯೊ ||3||

ಮರೆಯಬೇಡೆಲೊ ಕಣ್ಣು ತೆರೆದು ನೋಡೆಲೊ ||ಪ||

ಘೋರತರ ಸಂಸಾರದಾತುರ ಬಿಡೊ ಸತ್ಪುರುಷರ

ಚರಣಗೂಡು ಚರಾಚರದೊಳಿರುವ ಒಬ್ಬನ ||1||

ಹೃದಯದಾದಿ ಸದರಮಧ್ಯದಿ ಸುಧಾಕರ ಕಳೆಯ ಬೀರುವ

ಮುದದಿ ನೋಡು ಸದಾ ಧ್ಯಾನದೊಳು ||2||

ಘಟಿತ ವರನೀರಲಕೆರೆ ಪಟೋತ್ಕರ ದಿಟ ಪಂಚಾಕ್ಷರ

ನಿಟಿಲ ಗೃಹದೊಳು ನಟಿಸುವನನುದಿನ ||3||

ಮನವೆಂಬ ಕೋಣವಿದು ಮನೆ ಹೊಂದಿ ನಿಲ್ಲದು ಇನ್ನೇನಿನ್ನೇನು

ಬಿನುಗು ವಿಷಯ ಹತ್ತಿ ಬೆದಿ ಬಂದು ಓಡಿತು ಇನ್ನೇನಿನ್ನೇನು ||ಪ||

ಕರಣೇಂದ್ರಿಯಗಳೆಂಬ ಕೈ ಹುರಿಯ ಹೊಸದು ಇಟ್ಟೆ ಇನ್ನೇನಿನ್ನೇನು

ಮರಣಾತೀತವೆಂಬ ಹುರಿಯ ಮುಗದಾಣಿಟ್ಟೆ ಇನ್ನೇನಿನ್ನೇನು ||1||

ವ್ಯಸನಗಳೇಳೆಂಬ ಹಸಿರು ಹೊಲ ಹೊಕ್ಕಿತು ಇನ್ನೇನಿನ್ನೇನು

ತೃಷೆಯೆಂಬ ಬಿಸಿಲೇರಿ ಸಸಿಲೆದ್ದು ಬಿದ್ದಿತು ಇನ್ನೇನಿನ್ನೇನು ||2||

ಎಂಟಾರು ಕೋಣೆಯೊಳು ತುಂಟಾಟ ಕಲಿತಿತ್ತು ಇನ್ನೇನಿನ್ನೇನು

ಬಂಟ ನೀರಲಕೆರೆ ಗುರು ಮಂದಿರಕೆ ಕೊಟ್ಟಿತು ಇನ್ನೇನಿನ್ನೇನು ||3||

ಮನವರಿದರೆ ಇವ ಮಹಾದೇವ

ತನು ಮನದಿಂದ್ರಿಯಂಗಳ ಬಿಡೆ ಕಾಯ್ವ ||ಪ||

ಜಗವ ಮಾಡಿ ಜಗದೀಶನಾದ

ಯುಗವು ಅಗಣಿತವಾಗಲತ್ತತ್ತ ಆದಿಯಾದ

ಸೊಗಸಿನ ಅಗಜೆಯ ಗಂಡನಾದ

ನಿಗಮಾದಿಗಳ ಆದಿ ತಾನಾದ ವಿನೋದ ||1||

ರೂಪಿನೊಳು ನಿಜ ರೂಪು ದಿಟ ಚಿದ್

ರೂಪು ಚಿತ್ಕಳೆ ಚಿತ್ತಿನಂಗವ ತೊಟ್ಟು

ಆಪು ಜ್ಯೋತಿಯನು ಮೊರೆಯಿಟ್ಟ

ಭಾಪು ವಾಯು ಮತ್ತವರಿವರಿಗೆ ಎದುರಿಟ್ಟಿಬಿಟ್ಟ ||2||

ಪೊಡವಿಯೊಳಧಿಕ ಉಲ್ಲಾಸ

ನಡುಗಡಿ ನೀರಲಕೆರೆ ಸತ್ಯ

ದೃಢಕೆ ಕೈಲಾಸ ಪಡೆ ಗತಿ ಮೋಕ್ಷನಿವಾಸ

ಮೃಡನವನೆ ಪಂಚಾಕ್ಷಾರಾಧೀಶ ಸರ್ವೇಶ ||3||

ಮಧುರ ಮಾತಿನ ಚದುರೆ ನಿನ್ನಯ ಮಾತು ತಿಳಿದಿತ್ತು

ಅದರೊಳು ಸುಲಿಪಲ್ಲಿನ ಗಾಯನ ರೀತಿ ಹೊಳೆದಿತ್ತು ||ಪ||

ಕಣ್ಣುಗಳ ಕಿಡಿಗೆಂಪಿದೇನು ಮೋರೆ ಬೆವರಿಗೆ

ಸಣ್ಣ ನುಡಿಯಿದೇನು ಬಣ್ಣಕೆ ಬೆದರೆ ||1||

ಎದೆಯ ಭುಗಿಲಿದೇನು ಉದರ ಶ್ವಾಸದುದಯದ

ಹೃದಯ ಮಧ್ಯದ ಕಸ್ತೂರಿಯೇನು ಕದಪಿನೊಳು ಕಲೆಯ ||2||

ಸಾಕು ಸಾಕು ತಿಳಿದೆ ನೀರಲಕೆರೆವರೇಶನೆ

ತೂಕ ಹಿಡಿದು ಸೈರಿಸಿದೆನು ಇನ್ನೇಕೆ ವಾಸನೆ ||3||

ಮನದ ಚಿಂತೆ ಕೇಳು ಮಾಯಿ ಮಾತಂಗಿ ನಿನ್ನ

ನೆನೆದವರಿಗೆ ಆರ ಭುಗಿಲದೇನವ್ವ

ತನುಮನದೊಳು ನಿನ್ನ ನೆನೆಸಿಕೊಂಡರೆ

ಮನದ ಬಯಕೆ ಕೈಗೂಡುವುದವ್ವ ||ಪ||

ಬೇಡಿದಿಷ್ಟವನು ಗಾಢದಿ ಕೊಡು ಕೊಡು

ರೂಢಿಯೊಳಗೆ ಬಿಡದಾಡಿಸವ್ವ

ಬೇಡಿಕೊಂಬೆ ನಾ ನೋಡಿ ಹಾಡುವೆನು

ನಾಡೆ ಸುಖದೊಳಗೂಡಿಸವ್ವ

ಕೂಡಿಸು ಧ್ಯಾನದಾನಂದ

ನೋಡಿ ಮಾತಾಡದ ಮೌನವ ಜೋಡಿಸವ್ವ

ಈಡೆ ನಿನಗೆ ಮೈಗೂಡಿಸಿ ಲಹರಿಯ

ಕಾಡದೆ ನಡೆನುಡಿಗೆ ಹಿಡಿಸವ್ವ ||1||

ನೆನೆವರ ನೆನೆವಳೆ ಮನಕ್ಕತೀತಳೆ

ಮನನಕೊಲಿದ ಮಹಾದೇವಿಯವ್ವ

ಜನಜನಿತಾದಿಗನಾದಿ ಸನಾಥಳೆ

ನೆನೆವ ಭಕ್ತರನು ಕಾಯುವಿಯವ್ವ

ಮನದ ಕೊನೆಯ ಮೇಲೆ ಮನೆ ಮಾಡಿರುವಳೆ

ಮನುಮುನಿಗಳಿಗತಿ ಜೀವಳವ್ವ

ಘನಮುಕುತಿಯ ಕಣ್ಕೊನೆಯೊಳು ನೋಡಲು

ದಿನಕರ ಕೋಟಿ ಪ್ರಭೆಯದವ್ವ ||2||

ಗಂಡುಗಳಿಯೆ ಭೂಮಂಡಲದೊಳಗಡಿ

ಚಂಡ ಪ್ರತಾಪನ ಮಡದಿಯವ್ವ

ಪಂಡಿತ ನೀರಲಕೆರೆ ಗುರುಮೂರ್ತಿಯ

ಕಂಡು ಭರದಿ ಕೈ ಹಿಡಿದೆಯವ್ವ

ಪುಂಡರೀಕಾಕ್ಷಿ ಕೋದಂಡೆ ಪಂಡಿತೋ

ದ್ದಂಡೆ ಸುಖವ ಪಡಿದಾಡಿಸವ್ವ

ಹಿಂಡು ದೈವ ಮಾರ್ತಾಂಡ ಪಂಚಾಕ್ಷರ

ಗಂಡನ ಅಗಲದೆ ಒಡಗೂಡಿದೆಯವ್ವ ||3||

ಮರೆಯುವ ಮಗಳಲ್ಲ ಮಾತಿನ ವಿಚಾರ ಬಲ್ಲಾಕಿ ||ಪ||

ಸೊಟ್ಟ ಹುಟ್ಟಲಿಲ್ಲ ಮಗಳ ದೃಷ್ಟಿಯು ಬಿಡಲಿಲ್ಲ

ಕೊಟ್ಟಂತ ಶಿವ ತಾ ಕಟ್ಟಿಕೊಂಡು ಹೋಗುವಾಗ ಹೊಟ್ಟೆಕಿಚ್ಚಿಗಳುತೀ ಮಗಳೆ ||1||

ಚಂದ್ರನಂಥ ಕೂಸೇ ಬಯಲಿಗೆ ಬಂದರೆ ಬಹು ಲೇಸೇ

ಸುಂದರ ಕಂದನ ಚಂದೇನ ಹೇಳಲಿ ಬಂದ ಬೇನೆಯು ಬಿಡಲಿಲ್ಲ ಮಗಳೆ ||2||

ಕಂಗಳೂರಿನ ಮಡದಿ ಲಿಂಗಸಂಗಯ್ಯನ ಹೊಟ್ಟೀಲಿ ಹುಟ್ಟಿದಿ

ಮಂಗಲ ನೀರಲಕೆರೆ ಬಸವೇಶ ಲಿಂಗನ ಮೋಹದ ಪಾದಕೆ ಹೊಂದಿದಿ ಮಗಳೆ ||3||

ಮಲ್ಲಿಗಿ ದುಂಡ ಮಲ್ಲಿಗಿ ||ಪ||

ಹಿತದಿಂದ ಗುರುವಿನ ನುತಿಸುತ್ತ ಮೊದಲಲ್ಲಿ

ಸ್ತುತಿಪೆ ಶಾರದೆ ಗಣಪತಿಯರನು

ಮತಿ ಪಾಲಿಸೆಂದು ಕೃತಕವಿಲ್ಲದಲೇ

ಮತಿವಂತರಾಡಿರಿ ಪ್ರತಿ ದಿನದಲ್ಲಿ ||1||

ಪೂರ್ವಜನ್ಮದ ಫಲ ಪೂರೈಸಿತುರ್ವಿಯೊ

ಳೋರ್ವನುದಿಸಿ ಬಂದ ಮತ್ರ್ಯದೊಳು ನಿಂದು

ಸಾರ್ವಭೌಮ ಭಕ್ತಿ ಧ್ಯಾನದೊಳು ಸಂದಿ

ಗೋರ್ವಿಸದೆ ಪೂರ ಅಭ್ಯಾಸದೊಳು ಸತ್ಯ

ಸೇರ್ವಿ ಮಾಡಿದ ಪೂರ್ವ ಸ್ವಾಸ್ತಿಯೊಳು

ಉರ್ವಿಯೊಳು ಸುತರೈದಾರು ಉಣಲಿಟ್ಟು ಪೋದ ||2||

ಹಮ್ಮಿಲ್ಲದಾಳೀದ ತಮ್ಮನ ಮಕ್ಕಳೆಂದು

ಉಮ್ಮಳಿಕೆ ಇಲ್ಲದೆ ಮನದೊಳಗೆ ನಿತ್ಯ

ನೆಮ್ಮಿರ್ದ ಸಮ್ಮತ ಸುಖದೊಳಗೆ

ಒಮ್ಮೆ ಸೈರಿಸಿ ಕರುಣದಿ ತನ್ನೊಳಗೆ ಸತ್ಯ

ಸುಮ್ಮನೆ ಸೊಸೆ ಸುತರಾಲಯದೊಳು ಪ್ರೇಮ

ಮೊಮ್ಮಕ್ಕಳೊಳು ಮಾಯಾ ಮರಿಯಾದ ಭೋಗಿ ||3||

ಢಾಣಕ ವಂಶದಿ ಶಾಣ್ಯಾ ನೀ ಗೂಳಪ್ಪ

ಮಾಣದಹಳ್ಳಿಯ ಗೌಡರೊಳು ತ್ರಾಣನು ಬಲು

ಜಾಣ ಜಂಗಮಕತಿಹಿತ ಪ್ರಾಣನು ಕಣ್ಣು

ಗಾಣೆನು ಕುಶಲರೊಳು ಪ್ರವೀಣನು ಸತ್ಯ

ವಾಣಿ ತಾ ಸಕಲರಳು ಎಣೆ ಇಲ್ಲದ ಶಿವ ಧ್ಯಾನದೊಳು

ಪ್ರಾಣವ ಹೊಂದಿ ಹೇಳದೆ ಬಿಟ್ಟ ||4||

ಚಲಕೆ ತಾ ಚಲಮಾರಿ ಬಲು ಹಿತರುಪಕಾರಿ

ಬಲವಂತ ಕಲಹಕ್ಕೆ ಕಲಿಪಾರ್ಥನು

ಮಲಹರ ಭಕ್ತಿ ಮತಿವಂತ ಸಮರ್ಥನು

ಬಲು ಸುಲಲಿತ ಭಲಾ ಸುಜನ ವರ್ಣಿತನು ಸತ್ಯ

ಕಲಿಯುಗದೊಳಗಿರ್ಪ ಕಳವಳ ಸಾಕೆಂದು

ಬಲಗೆಡದೆಂಭತ್ತು ವರುಷದೊಳಳಿದೆಯಾ ||5||

ಆಶೆ ಬಿಟ್ಟದರಿಂದ ಈಶ ಮೆಚ್ಚುತಲಿ ಕೈ

ಲಾಸದೊಳಿರಲೆಂದಾನಂದದಿ ಶಿವ

ದಾಸನಾಗಿರು ನಿತ್ಯ ಬಹು ಚಂದದಿ ಸತ್ಯ

ದಾಸೆಗೆ ಹಂಬಲಿಸುವರಿಗೆ

ಈ ಸುಖ ದೊರೆಯದೆಂದೇ

ಏಸು ಕಾಳಿಯ ಬೊಬ್ಬೆ ಚೀರುಸುತ್ತಿಹರು ||6||

ಸ್ವರ್ಗಾಧಿಪತಿ ಸುರವರ್ಗ ಸಂಭ್ರಮದಿಂದೆ

ಭರ್ಗದೇವನ ಕೇಳಿ ಧರೆಗಿಳಿದ

ದೀರ್ಘದಾಯುಷ್ಯದಿ ನಡೆದು ಮಾರ್ಗವ ತುಳಿದ

ವರ್ಗವಾರ ಧಟ್ಟುಳಿದನರ್ಘನ ತಿಳಿದ ಸತ್ಯ

ಭೋರ್ಗರಿಸುವ ವಾದ್ಯವೆ ದುರ್ಗೆಯೇಳಿಸುತ ಯಮ

ಮಾರ್ಗದಿಂದುಘೇ ಚಾಂಗುಭಲಾ ಎನ್ನುತ ಆಗ ||7||

ನಂದಿ ಬಾರಿಸುವ ಮದ್ದಳೆಯ ಭೃಂಗೀಶನು

ಕುಂದದೆ ನಾಟ್ಯವನಾಡಿದನು

ಮುಂದೆ ಗರುಡ ಗಂಧರ್ವರು ಓಲ್ಯಾಡಿದರು

ಅಂದದಿಂದ ನಾರಿಯರೋಲ್ಯಾಡಿದರು ಸತ್ಯ

ಸಂಧದಿ ಗುರು ನೀರಲಕೆರೆಗೆ ಹತ್ತಿ ನಡೆಯುವೆ

ನೆಂದಿರ್ದ ಬಾರೆ ಮತ್ತೆಂದಿಗೆ ಮರಳಿ ||8||

ಮಂಗಲ ಜಯ ಮಹಾದೇವಿಗೆ ಧವಳಾಂಗನಗಲದ ಅರ್ಧ ದೇಹಿಗೆ ||ಪ||

ಶಿವನ ತೊಡೆಯನೇರಿ ಶಿವನಿಗಾಸೆಯ ತೋರಿ

ಶಿವನ ರಾಣಿ ಎನಿಸುತ ಶಿರದಿ ತೋರಿ

ಶಿವ ಅಜಹರಿಗಳಿಗೆ ಅವಿರಳ ಪದವಿತ್ತು

ಅವನಿಯೊಳು ಶಿವಭಕ್ತಿನಿಲಯವ ಕಾಯುವ ||1||

ಮೋಕ್ಷದಾಯಕೆ ಜಗದ್ರಕ್ಷೆ ದುಷ್ಟರ ಶಿಕ್ಷೆ

ಈಕ್ಷಿಸುತ ಆಶ್ರೈಸಿದುಪೇಕ್ಷರ ರಕ್ಷಣೆ ಮಾಡುತು

ಪೇಕ್ಷೆ ಮಾಡದಲೆ ಕಟಾಕ್ಷಗೈದಿರುವಂತಹ

ಸಾಕ್ಷಾತ್ ಆನಂದಳೇ ||2||

ಚಂಡ ಪ್ರತಾಪದಿಂದೆಸೆವ ನೀರಲಕೆರೆ

ಖಂಡಿತ ನಿಲಯ ಮಾರ್ತಾಂಡನಿಗೆ

ಪಂಡಿತಳೆನಿಸುತ ಉದ್ದಂಡ ಸುಖವನಿತ್ತ

ಖಂಡ ತೇಜೋನ್ಮಯ ಪುಂಡರೀಕಾಕ್ಷಳೆ ||3||

ಮಾತಿದೇನು ಮಹಾದೇವ ಏತಕೆನಗೆ ಸಂಸಾರ ಜೀವ

ಭೂತನಾಥ ದಯದಿ ನೋಡಯ್ಯ ಸೋತೆ ಹಿಡಿ ಕೈಯ ||ಪ||

ಜನನ ಮರಣರಹಿತ ಮುನಿಜನ ಪ್ರೀತದಾತ

ಮನವಾನಂದದಾಲಯ ಅನಘಪಾಲಯ ||1||

ಭೀಮಭಕ್ತ ಪ್ರೇಮಧಾಮ ಸುಖಾಬ್ಧಿ ಸೋಮ

ಕಾಮಾದಿ ಮಸ್ತಕ ತೇಜ ಮಾಯೆಯ ಬೀಜ ||2||

ನರ ದೇಹದ ಮಾಂಸದ ಚೀಲ ಸ್ಥಿರಕರ ನೀ ಮಾಡಿದ ಲೀಲ

ನರಕ ಸ್ವರ್ಗಗಳ ಜಗಜಟ್ಟಿ ಯಾರಿಗಿಟ್ಟಿದೀ ತಿಟ್ಟಿ ||3||

ಸಾವು ಇದೇನೊ ಹುಟ್ಟು ಇದೇನೊ ನೋವಿದೇನೊ

ಭಾವ ಇದೇನೋ ದೇವದೇವರಗಂಡನ ಜಾತ ಬ್ರಹ್ಮಾಂಡನಾಥ ||4||

ಮತ್ತೆ ನೀರಲಕೆರೆಯ ವಾಸ ಚಿತ್ತದೊಳು ನೆನೆದವರಿಗುಲ್ಲಾಸ

ಎತ್ತ ನೋಡಲು ನೀನೆ ಸಮರ್ಥ ಸತ್ಯದಿ ನೀನೆ ಕರ್ತ ||5||

ಮಂಗಲಾರತಿ ಎತ್ತಿರಮ್ಮ ಮಂಗಲೆಯರು ಅಸಮ ದೇವಗೆ ||ಪ||

ಮರವೆಯ ದೇಹದಿ ಮತ್ತೆ ಮರೆಯಾಗಿರುವ ಸತ್ಯ

ಶಿರದರಮನೆಯ ಸಿರಿವಂತಗೆ ||1||

ಸ್ವರ್ಗಾಧಿಪತಿಗೆ ಅರಿವರ್ಗಾದಿಗಳ ಗೆದ್ದ

ಭರ್ಗೋದೇವನಿಗೆ ಏಕೋ ಭಾವದಿ ||2||

ನಿಟಿಲ ಮಧ್ಯದಿ ನೋಡೆ ಪ್ರಕಟಿಸಿ ಬೆಳಗುವ

ಕುಟಿಲವ ಕಳೆದು ನಿಟಿಲಾಂಬಕಗೆ ಅನುವಾಗಿ ||3||

ತಾಪಸಿಗಳಿಗೊಪ್ಪಿ ದೀಪದಂತಿರುತಿಹ

ರೂಪನೊಳು ದಿಟ ನಿಮ್ಮೊಳಾಪು ಜ್ಯೋತಿಯ ಕಂಡು ||4||

ಭುವನೇಶ ಗಡಿನೀರಲಕೆರೆ ವಾಸನೆನಿಸುವ

ಭವನಾಶ ಭುವನಭಕ್ತರ ಪೋಷಕಗೆ ||5||

ಮಂಗಳಾರತಿ ಎತ್ತಿರೇ ಮಂಗಲಾತ್ಮಕಗಿಂದು

ಗಂಗೆ ಯಮುನೆ ಸರಸ್ವತಿ ಸಂಗನೀತನೆಂದು ||ಪ||

ನಿಟಿಲ ಮಧ್ಯದಲ್ಲಿ ಹೊಳೆವ ಸ್ಫಟಿಕ ಜ್ಯೋತಿಯೆಂದು

ಘಟಿಸಿದ ಪರಿಪೂರ್ಣ ಪರಮದಿಟದೊಳೀತನೆಂದು ||1||

ತಿಳಿಗೊಳದೊಲು ತಳತಳಿಸುತ ಹೊಳೆವ ಕಳೆಯ ಬಿಳಿಯ ರೂಪ

ಅಳಿದುಳಿದ ಅಳವಲ್ಲದ ಸೂಕ್ಷ್ಮದ ಇಳೆಯೊಳು ಹೊಳೆವ ದೀಪಗೆ ||2||

ತೋರ್ವ ನೀರಲಕೆರೆಯ ಸಾರ್ವಭೌಮನೋರ್ವ ಗಂಡಗೆ

ಪಾರ್ವತೀಶ ಪಂಚಾಕ್ಷರನೋರ್ವ ಮಾರ್ತಾಂಡಗೆ ||3||

ಮಂಗಲಮಯ ಗುರುಮೂರ್ತಿ ಜಯ

ಜಂಗಮ ದಯ ಭಕ್ತ ಸಾರಥಿ

ಸಂಗತ ಶರಣ ಜನರಂಗಲಿಂಗಾನಂದ

ಮಂಗಲಾಂಗ ಧವಳಾಂಗ ಜಯ ಜಯ ||ಪ||

ಮಂತ್ರಾಧಿದೈವ ಮಹಮಂತ್ರತೇಜ ಸ್ವ

ತಂತ್ರನಾಟಕ ಜಗದ್ಬೀಜ

ತಂತ್ರ ಮೋಹಕ ತನುತ್ರಯದಂತ್ರ ಸೂತ್ರಿಕಾ

ಜಂತ್ರ ಜನನ ಮರಣಾಂತ್ರ ಮಂತ್ರಕೆ ಸತ್ಯ ||1||

ವರ್ಣಕತೀತ ನಿರಾವರಣ

ವರ್ಣ ಪುಣ್ಯಾನ್ವಿತ ಭರಣ ಪೂರ್ಣ

ಕರ್ಣಗಳಿಗೆ ಸಾಕ್ಷಿ ಸ್ಮರಣೆ ಚಿತ್ಕರುಣಾ

ಕೀರ್ಣೋಪಾಯಕ ನಿನ್ನ ಸ್ಮರಣೆಯೇ ಘನ ||2||

ಪಂಡಿತರೆದೆಯ ಪ್ರಚಂಡ ನೀರಲಕೆರೆಯ ಮಾರ್ತಾಂಡ

ಹಿಂಡು ದೈವ ಕಮಲಾ

ಖಂಡ ತೇಜೋ ಗೌರಿಯ ಗಂಡ ಬ್ರಹ್ಮಾಂಡ

ಮಂಡಲದೊಳು ||3||

ಮಾತನಾಡೊ ಮೌನದಿ ಮಾತನಾಡಬ್ಯಾಡೋ

ಓತು ಬ್ರಹ್ಮದಿ ಸುಖವಾತು ಸೈರಿಸುತ ಅಲ್ಲಿ ||ಪ||

ಮನವೇನು ನೆನೆಯದಂತೆ ಅನುದಿನದೊಳು ತನ್ನ

ನೆನಹಿನೊಳು ಸುಖವಿರ್ದು ಮನಕಂಜಿ ಮರಳಿ ||1||

ನೆನೆಯದೆ ವಿಷಯಾದಿಗಳ ಅನುಕರಿಸದೆ ಬಾಹ್ಯ

ತನು ಮರೆದು ಅರುವಿನ ಉನ್ಮನಿಯೊಳಾನಂದದಿ ||2||

ಚಿತ್ತವಡರಿ ಸುತ್ತ ತೆತ್ತೀಸು ನಾದವ

ನೆತ್ತಿ ನೀರಲಕೆರೆ ಒಡೆಯನ ಹೊಂದಿ ||3||

ಮಾತನಾಡಲು ಪ್ರೀತಿದೋರೇ ವಾರಿಜಮುಖಿ

ಕಾತುರ ಕಾಮಿಗಳ ರೀತಿಗೋತು ಭಾವಕೀ ||ಪ||

ಜ್ಞಾನವಿಲ್ಲದ ಹೀನ ಕೃತ್ಯದಾಸಿ ಪ್ರಾಣಿಯೇ

ಶ್ವಾನನಂತೆ ಹಲವು ವಿಟರಿಗೊಲಿವ ಜಾಣೆಯೇ ||1||

ಶೃತಿ ಗುರು ಸುವಿಚಾರ ಕಾನನದತುಳ ಜಾರಿಯೆ

ಮತಿ ಹಿಡಿದು ಹಿತಕರಿಪ ರತಿಯೆ ನಾರಿಯೇ ||2||

ಹೇಳಿ ನೀರಲಕೆರೆಯ ಗಂಡನ ಚ್ಯುತಿ ಖ್ಯಾತಿಯೆ

ಕೇಳಿ ಪಂಚಾಕ್ಷರನ ಸೇರದ ಅಖಿಳ ಜಾತಿಯೇ ||3||

ಮಾತನಾಡ ಯೋಗಿ ರೀತಿ ಕೇಳೆಲೆ ಮರೆದನು ಇಹಪರ ||ಪ||

ಭೂತ ಪಂಚಕ ದೇಹದಾಸ್ತಿ ನೇತಿಗಳೆದು ಭೀತಿಯಳಿದು

ಮಾತು ಮನಕ್ಕತೀತ ಸುಖದೊಳೊತು ಮೌನವಾತು ಬಾಹ್ಯ ||1||

ನಾದಗೇಳುತ ನದರನಿಕ್ಕಿದ ನಾದದೊಳು ಮೈಮರೆದು ತನ್ನ

ವಾದಾತೀತನೆಂದು ತಿಳಿದನಾದಿ ವಸ್ತು ಬೆರೆದ ಸತ್ಯ ||2||

ಪಿಂಡ ಬ್ರಹ್ಮಾಂಡಗಳ ಮರೆಸಿ ಮಂಡಲತ್ರಯ ಮರೆಯ ಮಾಡಿ

ಚಂಡ ನೀರಲಕೆರೆ ನಿಲಯ ಅಖಂಡ ಪಂಚಾಕ್ಷರನೊಳೈಕ್ಯ ||3||

ಮಾಜದಲ್ಲಿ ಭ್ರಾಂತಿ ಮನಸಿನೊಳಾವರಿಸಿ ಚಿಂತಿ ||ಪ||

ಸೋಜಿಗವೇನಿದು ತೇಜಃಪುಂಜನೊಳು

ಈ ಜಗದೊಳು ಸಮಗಾಣೆ ಸಿದ್ದಮ್ಮ ||ಅ.ಪ||

ಅತಿ ಚೆಲುವಿನ ಕಾಯ ಮಿತಿಯೆಂಟು ವರ್ಷ ಚಿಕ್ಕಪ್ರಾಯ

ರತಿಮತಿ ಭೋಗವ ಬಿಡಿಸಿ ತನ್ನತಿಶಯ ಪದ ಸದ್ಗತಿಗೊಯ್ದನು ಶಿವ ||1||

ಚಂದ್ರನಂತೆ ಮೋರಿ ಚಂದುಟಿ ದುರಿತ ಚಮತ್ಕಾರಿ

ಸುಂದರಾಂಗಿ ಸತ್ಕರವರಗಂಧಿ ಮಂದಾಕಿನಿಧರ ಮುಚ್ಚಿ ಒಯ್ದನು ಶಿವ ||2||

ಕಡಗ ರುಳಿಯು ಗೆಜ್ಜಿ ಘಲ್ಲೆಂದು ಇಡುತಲಿಹಳು ಹೆಜ್ಜಿ

ಹುಡುಕಲೆಲ್ಲಿ ವಡಬಾಗ್ನಿ ಸುಡುತಲದೆ ಬಡನಡು ಕುಡಿನೋಟದ ಬಾಲಕಿ ||3||

ರತುನ ಕಳೆಯಗೊಂಬಿ ಪೃಥಿವಿಗೆ ಸುರದುರ್ಗದ ರಂಬಿ

ಸತಿಪತಿ ಹಿತದಿ ಸಲಹಿದೆವು ಜತನ ಮಾಡಿ ಯತನಕೆ ಮೀರಿತು ||4||

ಗುರುನಾಮದ ಕನ್ಯೆ ನರರಾರೆತ್ತಲು ಮೋಹನೆ

ಅರಿಯದ ಪದವಿತ್ತು ಪಂಚಾಕ್ಷರ ಕರುಣದಿಂದ ಒಯ್ದ ಶಿವ ಕೈಲಾಸಕೆ ||5||

ಯಮ ಡಂಗುರ ಹೊಯ್ಸಿದ ಪುರದಿ ತನ್ನ

ಶಮನರ ಕರೆದು ಕೈ ಎತ್ತುತ ಭರದಿ ||ಪ||

ಮಂಗಲ ಭಸ್ಮ ಚಿದಂಗದೊಳು ಧರಿಸಿದ

ಸಂಗನ ಶರಣ ಸದ್ಭಕ್ತರನು

ಕಂಗಳೊಳು ಕಂಡು ಸಾಷ್ಟಾಂಗವೆರಗುತವ

ರಂಗಳದೊಳು ನಿಲ್ಲದೆ ಹಿಂಗದೆ ಬರಿರೆಂದು ||1||

ಮಾಯಾ ಸಂಸಾರದ ಮೋಹಕೆ ತಾ ಸಿಲುಕಿ

ಕಾಯದಾಸೆಗೆ ಬಾಯಿ ತೆರೆಯುತಲಿ

ಹೇಯವಿಲ್ಲದೆ ಗುರುಹಿರಿಯರಿಗೆ ಬೊಗಳ್ವರ

ನಾಯಕ ನರಕದೊಳಾಯಾಸ ಬಡಿಸಿರೆಂದು ||2||

ದಿವಸದೊಳು ಗೃಹದಿ ಸುಶ್ರವಣ ಸದ್ಭಾವದಿ

ಶಿವನಾಮ ಸ್ಮರಣೆ ಸತ್ಯಾನುಭವರ

ಅವಿರಳ ಶಿವನಕ್ಷಿ ಮಣಿಮಾಲೆ ಧರಿಸಿದ

ಶಿವಭಕ್ತರನು ಕಂಡು ಶಿರವ ಬಾಗಿರೆಂದು ||3||

ದೋಷ ಕಾರ್ಯವ ಮಾಡಿ ರೋಸದೆ ಮರ್ತ್ಯದೊಳು

ಆಶೆ ಬಹಳ ಹಿಡಿದು ಅನ್ಯರ ಹೊಗಳುತಲಿ

ಹೇಸದೆ ಸ್ತ್ರೀಹತ್ಯ ಶಿಶು ಹತ್ಯ ಮಾಡಿದ

ಮೋಸಗಾರರ ಬಾಯೊಳು ಸೀಸ ಕಾಸಿ ಹೊಯಿರೆಂದು ||4||

ತೇಜ ನೀ ಸಂಸಾರದೊಳು ವಜನ ಹಿಡಿದು ಮನ

ಸುಜರೆನಿಸಿ ನಿತ್ಯಕಾಲದಲಿ ಅಜಹರಿಗಳಿಗಿತ್ತ

ಮುಜರಿದೋರದ ವಸ್ತು ನಿಜವರಿದರ ಕಂಡು

ಭಜನಿಯ ಮಾಡಿರೆಂದು ||5||

ಜಳುಕದೆ ಗುರುದೈವದರ್ಥವ ಸೆಳಕೊಂಡು

ಅಳುಕದೆ ಪಾಪಕ್ಕೆ ಇಳೆಯೊಳಿದ್ದು

ಹಳಹಳಿಯಲಿಕೆ ಅಂತು ಕಳವಳದಿಂದಿಹ

ನೆಳತಂದು ನರಕದೊಳು ತುಳಿದು ಹಾಕಿರೆಂದು ||6||

ಪ್ರಪಂಚವ ಮಾಡುತ ಪಾರಮಾರ್ಥ ರತಿಯೊಳು

ಸುಪಥವ ಬಯಸುವ ಸುಜ್ಞಾನಿಗಳ

ಜಪತಪದೊಳು ತಮ್ಮ ಅಪುವ ಮರೆದಿರುವಂಥ

ನಿಪುಣರನ್ನು ಕಂಡು ಗುಪಿತದೊಳು ಬರಿರೆಂದು ||7||

ಹಡೆದ ತಾಯ್ತಂದೆಗಳ ಒಡಹುಟ್ಟಿದರ ಬಿಟ್ಟು

ಮಡದಿ ಮಕ್ಕಳ ಕಡು ಮೋಹ ಮಾಡಿ

ಬಡಿದಾಡಿ ಬೇರೆಯಿದ್ದು ಒಡಲ ಹೊರೆವರ ತಂದು

ಬಿಡದೆ ಯಮಗುಂಡದೊಳಿಡಿರೆಂದು ಅಬ್ಬರಿಸುತ ||8||

ತಾಳದಮ್ಮಡಿ ತಂತಿ ಮೇಳಂಗಳ ಸ್ವರಗೂಡಿ

ಭಾಳಾಕ್ಷನ ಧ್ಯಾನ ಭಜನೆಯನು

ಕೇಳುವ ಗುರುಭಕ್ತರಾಲಯದೊಲು ನಿಲ್ಲ

ದಾಳಿನಾಳಾಗಿ ಕಂಡು ಹೇಳದೆ ಬರಿರೆಂದು ||9||

ಒಬ್ಬರ ವಂಚಿಸಿ ಹಬ್ಬವ ಮಾಡುತಲಿ

ಕೊಬ್ಬಿ ಕೋಣನ ಸೊಕ್ಕಿನಂತಿರುತ

ಉಬ್ಬಿ ಸದ್ಭಾವರೊಳು ತರ್ಕ ಮಾಳ್ಪರ ಕಂಡು

ಗಬ್ಬು ನಾರುವ ಹುಳಗುಂಡದೊಳು ದಬ್ಬಿರೆಂದು ||10||

ಅಂಗ ನಿರ್ಮಲ ಅರಸು ಸಂಗದೊಳನುದಿನ

ಶೃಂಗಾರ ಬಯಸದೆ ಸುಖದಿಚ್ಛೆಯಲಿ

ಮಂಗಲಮಯ ನೀರಲಕೆರೆ ಗುರುಮೂರ್ತಿಯ

ಸಂಗ ಸತ್ಕೀರ್ತಿಸಿ ತಂಗವ ಮರೆಯಿರೆಂದು ||11||

ಯೋಗಾನಂದದ ಆನಂದವ ಸಖಿಯೆ

ಹೇಗೆ ಹೇಳಲಿ ಚಂದ್ರಮುಖಿಯೆ

ಸೋಗೆಗಂಗಳ ಭೋಗದೊಳಸುಖವ

ನೀಗಿ ನಿಶ್ಚಲನಾಗಿ ಮೆರೆವ ||ಪ||

ಕುಂತು ಪದ್ಮಾಸನದೊಳು ಏಕಾಂತ

ಚಿಂತಿಸುತ ಮನ ಮನನದೊಳು ನಿಂತ

ಭ್ರಾಂತಿಯಳಿದು ಪರಮನತ್ಯಂತ

ಚಿಂತಿಸುತಿರುತಿರ್ಪ ಘನವ ||1||

ನಾದದೆಚ್ಚರ ನಾದಲಹರಿ

ನಾದದೋಂಕಾರ ಶಂಖಭೇರಿ

ನಾದದೊಳು ಮೈಮರೆದು ಸಾಧಿಸುತ

ನಾದ ಬ್ರಹ್ಮಾನಂದ ಸುಖವ ||2||

ಶಾಂತ ನೀರಲಕೆರೆ ಗುರು ಮೂರುತಿ

ನಿಂತು ಮಾಡಿದ ಸಂತರೊಳು ಸಾರಥಿ

ಚಿಂತೆಗೆ ಅರಿದಂಥ ರತಿ ಘನದಾರತಿ

ಶಾಂತಕರ ಜಯವೆತ್ತ ಸುಕೀರುತಿ ||3||

ಯೋಗಿಯಾನಂದವಿದೇ ಕೇಳಿರಿ ಸತ್ಯ

ಯೋಗಿಯಾನಂದದಿ ಪೂರ್ಣನಾಗಿ ಮೈದೂಗುವ ||ಪ||

ಬಾಲಕ ಉನ್ಮತ್ತ ಪಿಶಾಚರಂತಿರುತಿಹ

ಕಾಲು ಮೋರೆಯನೆತ್ತಿದತ್ತ ಹೋಗುವ

ಆಲಿನಿಂದ ಅರಿವಿಲ್ಲ ಮೇಲೇನೂ ಊಹಿಸಿಲ್ಲ

ಓಲೈಸುತಲಿ ಬ್ರಹ್ಮಲೀಲೆ ಮೈಗೊಂಡಿರ್ಪ ||1||

ಏನೊಂದು ಹೇಳನು ಸೊಲ್ಲ ತಾನು ಕೇಳುವನಲ್ಲ

ಕಾನನ ಗೃಹ ಗ್ರಾಮಗಳು ಒಂದಾಗಿಹುದು

ಹೀನ ವರ್ತನವಿಲ್ಲ ಹಿತರಿನ್ನಾರು ಅವಗಿಲ್ಲ

ಮಾನಿನಿ ಪುರುಷ ಮಾಹೇಶರೆಂಬುವುದಿಲ್ಲ ||2||

ಎದ್ದರೆ ನಮಗಿಲ್ಲ ಬಿದ್ದುದ ಈಕ್ಷಿಸಲಿಲ್ಲ

ಸುದ್ದಿ ಹೇಳುವನು ಸುಮ್ಮನಿದ್ದು ತಾನು

ಬುದ್ಧಿ ಮೇಲ್ವರಿದತ್ತಲಿದ್ದ ವಸ್ತು ತಾನಾಗಿ

ಸಿದ್ಧಿಸಿ ಜಗವ ಉದ್ಧರಿಸಲೋಸುಗ ಬಂದ ||3||

ಉಣಿಸಿದರೆ ಉಣುತಿಹ ಗಣಿ ಸನಿನ್ನೊಂದನು

ದಣಿಸ ನಿನ್ನಾರನು ದಣಿದೇನೆನ್ನನು

ಝಣಝಣವೆಂಬ ಝೇಂಕಾರದಿಂಪಿಗೊಲಿಯುತ

ಮಣಿಮಯ ಮಂಚದೊಳು ಉನ್ಮನಿಯೊಳು ನಿದ್ರಿಪ ||4||

ಶರೀರದ ಎಚ್ಚರಿಕೆ ಇಲ್ಲ ಇರುಳು ಹಗಲು ಎರಡಿಲ್ಲ

ಕರಣೇಂದ್ರಿಯ ಬಹಿರಂಗಗಳ ಅಳಿದು

ಸ್ಮರಣೆ ನೀರಲಕೆರೆ ಗುರು ಪಂಚಾಕ್ಷರನೆಂಬ

ಕುರುಹು ಮರೆದು ಅರಿವಿನಾದರದಿ ತಾನಾದ ||5||

ರಕ್ಷಿಸು ತಾಯಿ ಪಾರ್ವತಿದೇವಿ

ಸಾಕ್ಷಾತ್ ಶಿವನರ್ಧಾಂಗಿ ದೇವಿ ||ಪ||

ಶಾಂಭವಿ ಶೌರಿ ಶುಂಭನ ಘಾತೆ ಗಂಭೀರೆ ಗೌರಿ ಜಗನ್ಮಾತೆ

ಲಂಬೋದರ ಮಾತೆ ಅಂಬಾ ದಿಗಂಬರಿ ||1||

ಕೌಮಾರಿ ಕಾಳಿ ಶ್ರೀ ಓಂಕಾರಿ ಭೂರಿ ವಾರಾಹಿ

ನಿಜಶಂಕರಿ ಭೈರವಿ ದುರ್ಗೆ ಬಾರೆ ಭಯಂಕರಿ ||2||

ರುದ್ರಾಣಿಯೆ ರೌದ್ರಿ ಕಲ್ಯಾಣಿಯೆ ಮಾ

ರುದ್ರನ ಅಗಲದಿರುವ ಜಾಣೆ ಅದ್ರಿಜಾತೆ ಭದ್ರಿ ಜಗತ್ರಾಣಿ ||3||

ಕಾತ್ಯಾಯಿನಿ ಸತ್ಯಗಾತ್ರಿ ಗಾಯತ್ರಿ

ಚಿತ್ತದೊಳು ನೆನೆವರಾಧಾರಸೂತ್ರೆ ನಿತ್ಯಮಂಗಲ ಮಹಿಮೆ ಸುಚರಿತ್ರೆ ||4||

ಗಜರಿಪುಗಮನೆ ಭಾವೆ ಭೋಗಾರ್ತೆ

ನಿಜಯೋಗದೊಬ್ಬಳಿಕೆಯಬ್ಬರ ಕೀರ್ತಿ ವ್ರಜೆಗಡಿ ನೀರಲಕೆರೆ ಸಾರ್ಥೆ ||5||

ರಾಜ ರಾಜ ಗುರುರಾಜ ದ್ವಿಜರಾಜ ಕೋಟಿ ಘನತೇಜ ||ಪ||

ಸೋಜಿಗವಲ್ಲಿದು ತೇಜಃಪುಂಜನೊಳು

ಮೋಜಿಲ್ಲದೆ ಸಹಜಾಂತರ ಸಾಕ್ಷಿ ತಾ ||1||

ಗಗನದಂತೆ ತಗಲಿಲ್ಲದ ತನುವಲಿ

ಮಿಗಿಲಾನಂದದ ಸೊಗಸಿನಲಿ ಮೆರೆವ ||2||

ಕಟ್ಟಳಿಲ್ಲದ ಅಟ್ಟುಳಿ ದೃಷ್ಟ್ಯಾಲಯ

ಮುಟ್ಟಿ ಮುಟ್ಟಿದೋರೆ ದೃಷ್ಟಿಗೆ ತೋರುವ ||3||

ಖಂಡಿತನಲ್ಲದ ಅಖಂಡ ಜಗದಿ ಮಾರ್ತಾಂಡ

ಪ್ರಚಂಡ ಮಹಿಮನು ಸೈ ಸೈ ||4||

ಸ್ವಸ್ಥ ನೀರಲಕೆರೆ ಬಸ್ತಿ ಭುವನದೊಳು

ಪುಸ್ತಿಯಾದ ಪರವಸ್ತು ಪಂಚಾಕ್ಷರ ||5||

ರಾಜಯೋಗಿಗಾದ ಸುಖ ರಾಜವದನೆ ನೋಡೆ

ರಾಜಿಸುವ ಮಹಾತೇಜವ ಮನದ ಗೋಜನಳಿದು ಕೂಡೇ ||ಪ||

ಪರರು ಅರಿಯದಲಿರುವ ಪರವ ಪರವಶದಿ ಕಂಡ

ಕರಿಗರಿಗಾಲಿಗಳೊಳು ಉರಿಯಮರಿಯ ಸಿರಿಯ ಗಂಡ ||1||

ಮುಕುರದಂತರಾಳದೊಳು ಮುಖವಡಗಿ ನಿಲಿಸಿದಂತೆ

ಸುಖವಡೆದು ಹಮ್ಮಡಗಿ ನಿಖಿಳವ ಮರೆದು ನಿರ್ಜರಕಾಂತೆ ||2||

ಉರಿದ ಬೀಜವಾದವೊಲು ಶರೀರ ಕರಣಗಳೆಲ್ಲ

ಭರಿತ ನೀರಲಕೆರೆ ಗುರುವರನ ಬೆರೆದುವಲ್ಲಾ ||3||

ರುದ್ರನ ನೋಡಿದೆ ಕರಿವೀರಭದ್ರನ ಪಾಡಿದೆ

ಭದ್ರಕಾಳೀವರ ಕ್ಷುದ್ರದೈತ್ಯಹರ ಅದ್ರಿಜಾತೆಯ ಗರ್ಬಾಬ್ಧಿ ಸುಧಾಕರ ||ಪ||

ನೌಂಕಿಸಿ ಭೃಕುಟಿಯ ಬೆಂಕಿಯ ನಯ

ನಾಂಕುರದೊಳು ಜನಿಸಿದ ವೀರ ಮಹಧೀರ

ಹಂಕಾರದ ದಕ್ಷನ ಶಂಕಿಪ ಶೌರ್ಯಕೆ ಘೋರ ಶಂಕರ ಪೋರ

ಲಂಕಾಪತಿಹರ ಕಿಂಕರ ಹನುಮನ ಬಿಂಕಕೆ ಮೆಚ್ಚಿದ ಪೋರ ಬಹು ಶೃಂಗಾರ ||1||

ಹೊತ್ತಿಪ ಹೋಮದ ಸುತ್ತಿದ ಸುರರನು ತರಿದ

ಕತ್ತಗಳ ಅರಿದ ಒತ್ತರದಲಿ ಮುದ

ವೆತ್ತಿ ಶಾರದೆಯ ಕರೆದ ಮೂಗನು ಕೊರೆದ

ಮತ್ತೆ ಈಡಿಲ್ಲ ಇವಗೆ ಧರೆಯೊಳುತ್ತಮ ದೇವ ದೇವಗೆ ||2||

ನಡು ಜಲ್ಲಿಗಳ ಉಡು ಚಲ್ಲಣ ಕಾಸೆಯ ಚಂದ ಭೂಷಣದಿಂದ

ಗಡಿ ನೀರಲಕೆರೆಗೊಡೆಯನ ಮೋಹದ ಕಂದ

ಪೊಡವಿಗೆ ಬಂದ ದೃಢ ನೇಮದಿ

ಬಿಡದರ್ಚಿಪ ಭಕ್ತರ ಪೊರೆವ ಹಿಡಿವನು ಕರವ ||3||

ವ್ಯರ್ಥ ಕಾಲ ಕಳೆಯಲಿಬೇಡಿರೊ ಶಿವನ

ಅರಿತು ಮನೆಯ ಬಾಳ್ವೆ ಮಾಡಿರೊ

ಗುರುತು ಇಹುದು ನಿಮ್ಮೊಳು ತಿಳಿಯಿರೊ ನಾ

ನರಿತು ಹೇಳುವೆ ಗುರುವಿನ ಪಡೆಯಿರೊ ||ಪ||

ಸತಿಸುತ ಅಹಿತರೆಂದಾಡಿದಿರಿ ದು

ರ್ಗತಿಯುತ ಪಥದಲಿ ಚರಿಸಿದಿರಿ

ವ್ರತ ನಿಯಮಗಳಿಗೆ ಸೊರಗದಿರಿ ಸ

ದ್ಗತಿ ಕಳಕೊಂಡತಿ ಮರುಗಿದಿರಿ ||1||

ಪುಣ್ಯಫಲದಿ ಸ್ವರ್ಗಕೆ ಹೋಗಿ ನಿ

ರ್ಗುಣ್ಯರಾಗಿ ನರಕಕೆ ಸಾಗಿ

ಸಣ್ಣಿಸಿ ಯಮನಿಗೆ ಶಿರ ಬಾಗಿ

ಕಣ್ಣೀರ ಕುಡಿದು ಮರ್ತ್ಯಕೆ ಪೋಗಿ ||2||

ಬೆಡಗು ಬೀರುವ ನೀರಲಕೇರಿ

ಕಡು ತವಕದಿಂದ ಮರಡಿಯ ಸೇರಿ

ಮೃಢ ಪಂಚಾಕ್ಷರನಿಗೆ ದೂರಿ

ಪಡಕೊಳ್ಳಿರಿ ಮುಕ್ತಿಯ ಕೈಸೇರಿ ||3||

ವಾರಿಜನಯನೆ ಸುಂದರನೀಗ ಕರೆದು ಬಾ ||ಪ||

ಬರುವ ಭಾವದಿರವ ತಿಳಿದು ಕರವ ಜೋಡಿಸಿ ಕರುಣದಿಂದಲಿ

ಶಿರವ ಬಾಗಿ ಹೋಗಿ ಪ್ರಾರ್ಥಿಸಿ ನೀ ಕರೆದು ಬಾ ||1||

ಮಾರಶರನ ಉಪದ್ರವವನು ನಾರಿ ಸೈರಿಸಲಾರೆನೇ

ಬಾರೆ ನೀ ಹೋಗಿ ಪ್ರಾರ್ಥಿಸಿ ನೀ ಕರೆದು ಬಾ ||2||

ಬಾಲೆ ನೀರಲಕೆರೆಯಧೀಶನ ಮೂಲವು ತಿಳಿಯದೆ ಹೋಯಿತೀಗ

ನಲ್ಲೆ ನೀ ನೀಗಬಲ್ಲ ಕೇಳೆನ್ನ ಸೊಲ್ಲೆ ನಿಲ್ಲೆನು ಬಾ ||3||

ಶರಣು ಶರಣು ಶ್ರೀ ಗುರುದೇವ ಶರಣಾರ್ಥಿ

ಶರಣು ಸಂತರ ಸ್ಮರಣೆಗೆ ಒಲವು ಘನಕೀರ್ತಿ ||ಪ||

ಪರಮಲೀಲನೆ ಶರಣಪಾಲನೆ

ಮರಣರಹಿತನೆ ಕರುಣಿ ಶರಣು ಪಾಯ ||1||

ಬೇಡಿದಿಷ್ಟವ ಕೊಡುವೆ ಭೋಗ ಸಂಪನ್ನ

ಕೂಡಿದೆ ನಿನ್ನ ಪದದಲ್ಲಿ ನಾ ಮುನ್ನ ||2||

ಶರೀರ ಸಾಕ್ಷಿಕನಾಗಿ ಇಳಿದು ಮರ್ತ್ಯಕ್ಕೆ

ಮೊರೆಯ ಹೊಕ್ಕವ ಮರಳಿ ಬಾರನು ||3||

ಧರಣಿಪತಿ ನೀರಲಕೇರಿ ಗುರೂತ್ತಮ

ದೊರೆದನಯ್ಯ ಮೋಕ್ಷಂಗನ ಪ್ರಿಯ ||4||

ಶರಣು ಶರಣು ಗುರು ಪರಮ ಪಂಚಾಕ್ಷರಿ

ಶರಣು ನಿಮ್ಮಂಘ್ರಿವಾರಿಜಗಳಿಗೆ ||ಪ||

ಗಣಸ್ತೋಮವ ಬಿಡಿಸೆನ್ನ ಕ್ಷೋಣಿಯೊಳು ಬರಿಸಿದಿ

ಅಣಕ ಮಾಡಿದಿ ಅಂತಃಕರುಣಿ ನೀನಹುದು ||ಅ.ಪ||

ದೃಢಭಕ್ತ ಬಸವಣ್ಣ ಮಡಿವಾಳನಗಲಿಸಿ

ಕೆಡಿಪ ಸಂಸಾರ ದುಃಖದಿ ಕೆಡಹಿದಿ

ಕಡು ತವಕದಿ ನಡುಹಣೆಯ ಮಧ್ಯದೊಳಿರ್ಪ

ದೃಢತರವಾದ ಚಿದ್ಘನಲಿಂಗವೇ ||1||

ಕೋಳೂರು ಕೊಡಗೂಸು ಮೇಲೆ ಮಹಾದೇವಿಯು

ಬಾಲೆ ಚೋಳಕ್ಕನ ಅಗಲಿಸಿದೆಯಾ

ಮೋಳಿಗಿ ಮಾರಯ್ಯನ ಅಗಲಿಸಿ ಇಳೆಗೆ ತಂದಿ

ಕೀಳು ವಿಷಯ ಕಳವಳಕಿಟ್ಟಿ ಸೈ ಸೈ ||2||

ಪುಣ್ಯಪಾಪ ಸುಖದುಃಖಗಳ ಉಣು ಎಂದು

ಸಣ್ಣವನಿಗೆ ಇಂಥ ಬಲೆ ಒಡ್ಡಿದೆಯಾ

ಕನ್ಯೆ ಮುಕ್ತಾಂಗನೆಯ ಸುಖವು ತಗಸಿ ತಂದಿ

ಪುಣ್ಯವೇ ನಿಮಗಿದು ಗುರುವಗ್ರಗಣ್ಯ ||3||

ಬಡಿಹೋರಿ ಬ್ರಹ್ಮಯ್ಯ ಕುಡುಗೋಲು ಶಾಂತಯ್ಯ

ಒಡೆಯ ಬಂಕಣ್ಣನ ಅಗಲಿಸಿದೆಯಾ

ಕೆಡುಗ ನಾಶನ ಮೃಢನಂದದಿ ಯುಗವೆಲ್ಲ

ಸುಡು ನಿನ್ನ ಮತಿ ಎನ್ನ ಪೊಡವಿಯೊಳು ತಂದಿ ||4||

ಇಂತು ಪರಿಯಲಿ ನೀನು ಅಗಲಿಸದಂತೆನ್ನ

ಸಂತತಿ ಶರಣರೊಳು ಹೊಂದಿಸು

ಕಂತುಮರ್ದನ ಸುಖನಿಧಿಯೆಂಬ ನಾಮ ಕೇ

ಡಾಂತು ಕೊರತೆ ಗುರು ಪಂಚಾಕ್ಷರನೇ ||5||

ಶರಣು ಸಾಕೈ ಗುರು ಕರುಣಿ ಪಂಚಾಕ್ಷರಿ

ಮರಣರಹಿತನೆ ಮೂರು ಜಗದಾಣ್ಮ ನಿಮಗೆ

ದುರುಳ ಚೋರರನಟ್ಟಿ ಕೊರಳ ಕೊರೆಸಿ ಇಂಥ

ಪರಿಯ ಮಾಡಿದೆ ದೇವ ಸರಿಬಂತೆ ನಿಮಗೆ ||ಪ||

ತುಡುಗ ರುದ್ರಣ್ಣನ ದೃಢದಿಂದ ನೆರೆ ನಂಬಿ

ಕಡುಕೋಪವೆಸಗಿ ನಿಷ್ಕರುಣಿ ನೀ ಮುನಿದೆಯಾ

ಪೊಡವಿಯೊಳು ಶರಣ ಸಂತತಿಯು ಮೆಚ್ಚದೆ

ಕೆಡಗುತನದಿ ಬಾಳುಗೆ ಮೃಢ ಗುರುನಾಥ ||1||

ಸಿದ್ಧರಾಮನ ಕಳ್ಳ ಹದ್ದಿನಂತಿರುತಿಹ

ಬುದ್ಧ ಕ್ರಿಯದೊಳಗಿರ್ದ ಮುಗ್ಧ ಸಂಗನಿಗೆ

ಬುದ್ಧಿ ಪ್ರೇರಿಸಿದ ಫಕೀರ ಮದ್ದಿಕ್ಕಿಸಿ

ನಿದ್ರೆಗವಿಸಿ ಲಿಂಗ ತೆಗೆದೆ ನಿರ್ಮಾಯಾ ||2||

ನೀರಲಕೆರೆಯೊಳಗುಂಟು ಮರುಗಲು ಜನವು

ಮಾರಿ ತಪ್ಪಿಸಿ ಅಡಗುವರೆ ಮಹನೀಯ

ಧಾರುಣಿಯೊಳು ಕೀರ್ತಿ ಗಳಿಸಿಕೊಂಡಯ್ಯಯ್ಯೊ

ಧೀರ ನೀನಹುದು ನಿನಗೆಣೆಯುಂಟೆ ಜಗದಿ ||3||

ಲಿಂಗನಗೌಡ ಸಂಗಡದಿ ಶೀನಪ್ಪನು

ಶೃಂಗಾರಶೆಟ್ಟಿ ಸಮಸ್ತ ದೈವಕರು

ಅಂಗಜನರಸಿ ತಿಮ್ಮವ್ವ ಮೊದಲಾಗಿ

ಭಂಗಿಸಿ ಬಹು ದುಃಖಪಡಲು ಸುಮ್ಮನೆ ಇದ್ದಿ ||4||

ಚಿಕ್ಕಪ್ರಾಯದ ಗೌಡ ಕುಪ್ಪಣ್ಣ ದಯಾನಿಧಿ

ದುಃಖವ ನೋಡಿ ಸಹಿಸದೆ ತಮ್ಮ ಮನದಿ

ದಿಕ್ಕಿಲ್ಲದವರಿಗೆ ದೇವರೆ ಗತಿಯೆಂದು ಕಾ

ಲಿಕ್ಕಿದ ಭರದಿ ಕಾಟಿಗರು ಕೂಡಿ ||5||

ಜಾತ್ರೆಯಂದದಿ ಜಗವು ರಾತ್ರಿ ಹಗಲು ಕೂಡಿ

ನೇತ್ರದಿಂ ನೋಡಿ ದುಃಖಿಸಿ ಬಳಲುವರು

ಸೂತ್ರಿಕ ಮುನಿದ ಸರ್ವೋತ್ತಮ ಗುರುವೆಂದು

ರಾತ್ರಿಯೊಳು ನಡೆದು ಬಂದರು ಬೇಡ ರಾಗ ||6||

ಹಬ್ಬಿತು ಕಾಟಿಗರೊಬ್ಬುಳಿ ಬಲ ಹೂಡಿ

ಆರ್ಭಟಿಸುತ ಗರ್ಭ ನಡುಗಿತು ಜನಕೆ

ಹಬ್ಬ ಮಾಡುವ ರಣದೊಳಗೆ ಭೂತಗಳಂತೆ

ಮಬ್ಬುಗವಿಸಿತಗಸಿದಿ ಬಲಗಾರ ||7||

ದಿಟ್ಟ ಜಂಗಮರಿವರಟ್ಟೆಂದು ನೂಕುತ

ರಟ್ಟೆಯ ಹಗ್ಗದಿ ಬಂಧಿಸುತ್ತ

ಶ್ರೇಷ್ಠನೆನ್ನಿಪ ದೇವ ದುಷ್ಟರೊಡಗೂಡ

ಕಟ್ಟಿ ಕಳಿಸಿಬಿಟ್ಟ ದಿಟ್ಟ ಸದ್ಗುರುವೆ ||8||

ಹೆಂಡಖಂಡಗಳಿಂದ ಬಂಡಿನಿಂದ ಬಳಲಿಸಿ

ಬಂಡಿಲಿ ಈಚಲ ಬರಿಗಳ ಪೆಂಡಿ ತರಿಸಿ

ದುಂಡಿಗರವರ ಉದ್ದಂಡ ಕೋಪದಲಿ ಪ್ರ

ಚಂಡ ದುಂಡರ ಬಾಧೆಗಳಿಗಿಕ್ಕಿ ಬಾಯ್ದೆರೆಸಿ ||9||

ಬೇಡರ ದಯದೊಳು ರೂಢಿಯೊಳಿಂದಿನ್ನು

ಕೇಡಿಗನವನಾದದ್ದೆ ಸಾಕು

ಕೂಡಿ ಸಮ್ಮೇಳವ ನೋಡುತಾಧಾತ್ಮವ

ಹಾಡಿ ಸದ್ಬಕ್ತರೊಳು ಹಿತದಿ ಸಂಜೀವಿಪೆ ||10||

ಹೆರಬೇಡೈ ಸ್ವಾಮಿ ಸದನದೊಳು ಸುಮ್ಮನಿರು

ಒದಗಿ ಬುದ್ಧಿಯ ಕೊಟ್ಟ ಶಿವ ನಮಗೆನುತ

ಮದ ಹಚ್ಚಿ ಮೈಮರೆದು ಒರಗಿ ಆರ್ಭಟಿಸುತ್ತ

ಮೊದಲೆ ಪಾಪಕಕೊಪ್ಪಿಸಿ ಒದಗಿ ರಾತ್ರಿಯೊಳು ||11||

ಮೇದಿನಿಯೊಳಗಿಂಥ ನೀಚರಿಲ್ಲೆಂದೆನುತ

ಮಾದಿಗರ ಮಗನ ಅಕ್ಕರದಿಂದ ಕರೆಸಿ

ಹಾದಿ ಮಾತಿನ್ನೇನು ಸಾಧು ಮಾತಿನವ

ಗಾದುದೇ ಸಾಕು ಕೊಯ್ಯಿ ಮೊಗೆಂದರವರು ||12||

ಗುರು ಸಿದ್ಧಲಿಂಗ ಹಾಲೇಶನ ಸ್ಮರಣೆಯೊಳು

ಕರಿಗೊಂಡು ಕರಿನೇತ್ರದೊಳಗುರಿಯೇರಿ

ಕರದಿಷ್ಟಲಿಂಗವು ಭರದಿ ಬಂದಿತು ಕಷ್ಟ

ಹರಗೆ ವಂದಿಸಿ ಹಸಿವು ತೃಷೆ ಬಾಧೆಗಳೆದೆ ||13||

ಶಂಕರಿ ದಯವನು ಮಾಡು ಸುಖಂಕರಿ

ಬಿಂಕದ ಭೈರವಿ ಬಾ ಶೌರಿ

ಓಂಕಾರ ರೂಪಿಣಿ ಭೋಗಿ ಭಯಂಕರಿ

ಶಂಕರನರ್ಧಾಂಗಿನಿ ಗೌರಿ ||ಪ||

ಭಜಕರ ಬಾಗಿಲ ಕಾಯ್ವ ಮಹಾತ್ಮಳೆ

ಸುಜನರಿಗಾನಂದದ ಸುಧೆಯೇ

ವಜನ ಹಿಡಿದು ವಾಸರಿಸುವ ದೈತ್ಯರ

ಕಜವ ಗೆಲಿದ ಬಿಲ್ಲು ಕೈಗದೆಯೆ

ರಜನಿ ಸಂಚಾರಿಯೆ ಕುಜನ ಕುಠಾರಿಯೆ

ಮಜ ಭಾಪುರೆ ಭಕ್ತರ ಕುದಿಯೆ

ಅಜ ಹರಿ ಹರರಿಗೆ ಆದಿ ಶಿಖಾಮಣಿ

ಭಜಿಸಲೊಲ್ಲದ ಭಾಗ್ಯರ ನಿಧಿಯೇ ||1||

ನೀನೊಲಿದವರಿಗೆ ಇನ್ನಾರ ಭಯವೇನಿದೆ

ಸುರಾಸುರರಿಗೆ ಒಲಿದಿತ್ತೆ

ನರರಕ್ಕಸರೇನಾದರು ನೀ

ಕಾನನ ಹೊಗಿಸಿದಿ ಮುರಿದೊತ್ತಿ

ಜ್ಞಾನ ಶೂನ್ಯರಹ ಶುಂಭ ನಿಶುಂಭರ

ದಾನವರಗಣಿತ ಬಲ ಮುತ್ತಿ

ಏನಿದೇನಿದನಾಹುತ ನೀನಾದೆಯೆ

ಘನ ಖಡ್ಗ ಕಠಾರಿಯ ಕೈಯೆತ್ತಿ ||2||

ಬಂದ ಕರ್ಬುರರ ಕೊಂದು ಕೂಗುತಲಿ

ನಿಂದು ಅಬ್ಬರಿಸುತ ಅವಡುಗಚ್ಚಿ

ಅಂದುಬ್ಬರಿಸುತ ಬಿರಿಗಣ್ಣು ತೆರೆಯುತ

ನಿಂದು ತಿವಿದಿ ಶೂಲದಿ ಚುಚ್ಚಿ

ಇಂದು ದೇವಗಣ ಹೊಂದು ಕೂಗುತಿರೆ

ಬಂದಿ ಅವರ ಭಾವಕೆ ಮೆಚ್ಚಿ

ಸುಂದರ ನೀರಲಕೆರೆಯ ಮಂದಿರಗೆ

ಹೊಂದಿ ಕೊಟ್ಟೆ ಬೇಡಿದ ಇಚ್ಛೆ ||3||

ಶಾಂಭವಿ ದಯಮಾಡೇ ಭ್ರಮರಾಂಬೆ ಶಂಕರಿ

ಹಿಂಬಲವಿಲ್ಲದೆ ಸಾಂಬ ತನುವ ನಿನಗಿಂಬ ಮಾಡಿದನಂಬುಜಮುಖಿ ||ಪ||

ಖ್ಯಾತೆ ಭಕ್ತರ ಪ್ರೀತೆ ಮೂಗ ಜಗದ ಮಾತೆ ಸುನೀತೆ ಶೌರಿ

ಭೀತೆ ದೈತ್ಯರ ಘಾತೆ ಸುರವರನಾಥೆ ಗಿರಿವರಜಾತೆ ಪಾರ್ವತಿ ನಿರ್ಮಲೆ ||1||

ಜಾಣೆ ಶಿವಗತಿಪ್ರಾಣೆ ಘನಗುರು ಶ್ರೋಣೆ ನೀಶುಕವಾಣಿ ಶ್ರೀಗೌರಿದೇವಿ

ವಾಣಿ ಲಕ್ಷ್ಮಿಯರ ತ್ರಾಣಿ ನಿಜಕಲ್ಯಾಣಿ ವರಮೃಢಾಣಿ ಕರುಣದಿ ಹಿಡಿ ಕೈನೀ ||2||

ಮಾರಿ ಲೋಕೋದ್ದಾರಿ ನೀನುಪಕಾರಿ ಮೋಕ್ಷದ ದಾರಿ ಓಂಕಾರಿ ಮೋಹಿ

ಸಾರಿ ನೀರಲಕೆರೆ ಘನ ಗುರುವರನು ಸೇರಿ ಕೀರ್ತಿಪ ಸಾರ್ಥಿ ನೀ ||3||

ಶಿವಾ ಎನುತಲಿರು ದಿವರಾತ್ರಿಯಲಿ

ಹವಾ ಮನದಿ ಭವಾ ಗೆಲಿ ಗೆಲಿ

ನೆವಾ ಬೇಕಿಲ್ಲದಿ ಕವಾಯಿ ಕೇಳಬಲ್ಲಿ

ಶಿವಾಯ ಇದು ಮುಕ್ತಿಗೆ ನೆಲಿನೆಲಿ ||ಪ||

ಎಲವು ಚರ್ಮ ನರ ಬಲಿದ ಮಾಂಸ

ಮಲ ಮೂತ್ರದ ಹಡಿಕಿ ತನುವ ಹಳಿ ಹಳಿ

ಕಲೆತು ರಕ್ತರೇತ ಸೆಲೆತು ಮಲೆತು

ಬಲಿತು ಆಯಿತು ವಯವು ತಿಳಿ ತಿಳಿ ||1||

ಅಲಕು ಮಲಕಿನಲಿ ಕೆಡುವ ಮನದ ಕೊನೆ

ನಿಲುಕಿಸಿ ಆತ್ಮನ ಸೆಳಿಸೆಳಿ

ಬಲು ಕಾಲದಿ ನೀನೋರ್ವ ಬಲಾಬಲ

ಹಲವರೊಳಗೆ ನಿನ್ನ ಕಳಿಕಳಿ ||2||

ಸುಮ್ಮನೆ ಹೊತ್ತುಗಳೆದು ಉಮ್ಮಾಯಿ ಸಂಸಾರದಿ

ಕಮಾಯಿ ಮಾಡಿದಲ್ಲಿ ಕೆಟ್ಟಿ ಕಟ್ಟಿ

ಜಮಾಸಿ ಸದ್ಗುರು ತಮಾಸಿನಲ್ಲಿ ನೀ

ಗಮ್ಮನೆ ನೋಡದೆ ಬಿಟ್ಟಿಬಿಟ್ಟಿ ||3||

ಗಮ್ಮಾತಲ್ಲ ಕೇಳು ಕಿಮ್ಮತ್ತ ನೋಡಿಕೊ

ತಮ್ಮಾ ಮರಳಿ ಸತ್ತು ಹುಟ್ಟಿಹುಟ್ಟಿ

ಜಮಾನ ಕಟ್ಟಿಕೊಂಡು ದಿಮಾಕ ಮನಸಿಟ್ಟಿ

ತಮ್ಮಾ ಎರವಿನ ಅಂಗಿ ತೊಟ್ಟಿ ತೊಟ್ಟಿ ||4||

ಪೊಡವಿಗಧಿಕ ನಡುಗಡಿಯು ನೀರಲಕೆರಿ

ಒಡೆಯನ ಕೇಳುತ ನಡಿ ನಡಿ

ದೃಢದಿ ಕೂಗಿ ಮುಡಿ ಬಾಗಿ ಎಡರ ಕಳಿ

ಒಡಲಾಸೆಯ ನೀ ಕಡಿ ಕಡಿ ||5||

ಮಿಡುಕಬೇಡ ತೊಡಕಿಲ್ಲ ಹುಡುಕಲಿಕೆ

ಸಡಕಿನ ದಾರಿಯದೆ ಹಿಡಿಹಿಡಿ

ಕೆಡಕಕು ಪಾಪವಳಿ ದುಡುಕು ಜನ್ಮಗಳ

ಕಡೆಗೆ ಮೋಕ್ಷವ ಪಡಿ ಪಡಿ ||6||

ಶಿವನ ನೆನೆಯೆ ಮತ್ತೆ ಮಹಾಶಿವನ ಪಾಡೆ ನೀ

ಶಿವನಾಮ ಬಲದಿಂದ ಭವದೂರ ತಂಗಿ

ಶಿವನಿ ಎಂಬ ಸೂಳೆಯ ನೆನಹಿನಿಂದ

ಶ್ವೇತನು ಕೈಲಾಸಪುರಕೆ ಹೋದನಮ್ಮ ||ಪ||

ತಗಲಲ್ಲವೀ ಸಾಕ್ಷಿ ಸೊಗಸು ಹೇಳುವೆ ನಾನು

ನಗೆಯಲ್ಲವೀ ಲೋಕದೊಳಾದ ಸುದ್ದಿ

ವಿಗಡಮತಿ ಕುರುಬಗೆ ಹಿಕ್ಕಿ ಲಿಂಗಮದಾಯ್ತು

ಜಗವರಿಯೆ ಗೊಲ್ಲಗೇರಿ ನಗರದೊಳು ||1||

ಹೊಲೆಯ ಪೆದ್ದಣ್ಣನು ಬಲು ಭಕ್ತಿ ನೆಲೆಗೊಂಡು

ಛಲದಿ ಲಿಂಗವ ಬೇಡಲಾಕ್ಷಣದಿ

ಮಲಹರ ಗುರುವು ಮತ್ಸರದಿ ಕೈಗಲ್ಲಿಡೆ

ಶಿವಲಿಂಗವಾಯ್ತದು ತಿಳಿಯೆ ಜಗವೆಲ್ಲ ||2||

ಮಲ್ಲನೆಂಬವ ಖುಲ್ಲ ಭಿನ್ನ ಜಾತಿಯೊಳು ಹುಟ್ಟಿ

ಮಲ್ಲಿಕಾರ್ಜುನಲಿಂಗ ಪೂಜೆಗಾಗ

ಅಲ್ಲಿ ಜೈನರುಗಳು ಅಲ್ಲಮನೆ ಇವನೆಂದು

ಬಳ್ಳವಂ ಮುಂದಿಡಲು ಅರ್ಚಿಸಲು ಶಿವನೊಲಿದ ||3||

ಸಾನಂದ ಋಷಿ ಶಿವಾನಂದೊಡನಿರ್ದು

ಈಶನಿಲಯಕೈದಿರಲೊಂದು ದಿವಸ

ಧ್ಯಾನಿಸುತ ಓಂ ನಮಃಶಿವಾಯ ಎಂದು ನುಡಿಯುತ

ಹೀನರಾಗಿಹ ನರಕಿಗಳ ಸ್ವರ್ಗಕೊಯ್ದ ||4||

ಮಾತಿದು ಇಂತಾದುದು ಅಂತಿರಲಿ ಕೇಳೀ ಸತ್ಯ

ರೀತಿ ಸಾಕ್ಷಾತ್ ಶಿವನೆಂದು ತಾ ತಿಳಿಯೆ

ಓತು ಪಂಚಾಕ್ಷರನಾಥ ಸದ್ಗುರು ದೇವ

ಈತನೆ ಸಾಕ್ಷಿ ಎಂಬುದೆ ನಿಜ ಮುಕ್ತಿ ||5||

ಶಿವ ಶಿವ ಎನುತಿರೊ ಭವವಳಿದು ಅವಿರಳ ಪದ ಸೇರೋ ||ಪ||

ಅಸ್ಥಿರ ಘಟವ ನಚ್ಚಿ ಕುಸ್ತಿಸಿ ತೊಂಡು ಕಾಮ ಹೆಚ್ಚಿ

ಮಸ್ತಿಸಿ ಮದ ಮುಚ್ಚಿ ಮೋಹಿಸಿ

ವಿಸ್ತರ ಸ್ತ್ರೀಯ ಮೆಚ್ಚಿ ನುಸ್ತಿ ಇಡಬೇಡ ಇಚ್ಚಿ

ಬಸ್ತ್ಯಾಗಿ ಹೇಳುವೆ ನಾ ಬಿಚ್ಚಿ ||1||

ನೂರು ವರ್ಷದಳತಿ ಪೂರಿಸದೆ ಹೋಗುವುದಕ್ಕಳುತಿ

ನಾರಿ ಸುತರ ಮೋಹದಿ ಕುಳಿತಿ

ಘೋರ ಸಂಸಾರದಿ ಕೊಳೆತಿ ಸೇರುವ ಗತಿ ಮಾಡಿದಿ ಜಳತಿ

ಮೀರಿ ಯಮಪುರದೊಳಗ ಏನ ಹೇಳತಿ ||2||

ಸಂತೆಯಿದು ಸಂಸಾರ ಭ್ರಾಂತಿಯಿದು ಮಾಡುವ ವ್ಯವಹಾರ

ಚಿಂತೆ ಹತ್ತಿ ಪೂರ

ಕುಂತಲ್ಲಿ ಕುದಿವದು ಭರಪೂರ ಇಂತು ಕರ್ಮಾನುಸಾರ

ಸಂತರ ನೆರೆಯೊಳಗಿರ್ದು ಕೃತಾರ್ಥರ ||3||

ತನುಮನ ಧನ ತ್ರಾಣ ಘನಗುರು ಲಿಂಗಾಚರಣಕೆ ಪ್ರಾಣ

ಅಂಜದಿರು ಜಾಣ

ಗಣಿಸಲದು ಅಳತಿ ಮುಮ್ಮೊಳಗೇಣ ಮನಿಯ ನಿರ್ತಿಪನವಕಾಣ

ಮಿನುಗುವ ಸೋಹಂ ಎನುತಿರು ನಿರ್ವಾಣ ||4||

ಅಡಿಗಡಿಗೆ ಹೋರಾಡೋ ಬಿಡದಿಹ ವಿಷಯಗಳ ಈಡಾಡೋ ಅ

ದೃಢ ಸುಖವ ನೀ ಹಿಡಿಯಬೇಡೋ

ನಡುಗಡಿ ನೀರಲಕೆರಿ ನೋಡೋ ಬಿಡದಿರುತ ಒಡೆಯನ ಕೊಂಡಾಡೋ

ಅಡರುವ ಆನಂದದ ಒಳಗೂಡೋ ||5||

ಶ್ರೀಗುರುದೇವ ಸುಖಾನಂದ ಸುಜನ ಪಾಲ ಮಹೇಶ

ವರಗೌರಿ ಪ್ರಾಣೇಶ ವರಗೌರಿ ಪ್ರಾಣೇಶ ||ಪ||

ಜನ್ಮಜನ್ಮಂಗಳ ಜಡರಿದೇನೊ ಸನ್ಮತನೆ ನಿನಗಿದೇನೊ

ಜನ್ಮದಾತನೆ ಮನ್ಮಥ ಭೀತನೆ ||1||

ಅಂದದೊಳು ಶ್ರವಣ ಮನನವ ಮನಕೆ ಹೊಂದಿಸೊ

ಸಂದೇಹವಳಿದು ಮಹಾನಂದೊಳು ನಿಲಿಸೊ ಮನ ಬಲಿಸೊ ||2||

ಪಶ್ಚಿಮಗಿರಿಯ ಪರಮ ನೀರಲಕೆರೆಯ ನೋಡುತ

ಮೆಚ್ಚಿ ಪಂಚಾಕ್ಷರನ ನಿಶ್ಚಯದಿ ಕೂಡುತ ನಿಶ್ಚಯಿಸಿ ಹಾಡುತ ||3||

ಶ್ರೀಗುರುವೆ ನಿನ್ನ ಚರಣಾರವಿಂದವನು ರಾಗದಿಂ ಬಲಗೊಂಬೆನು

ಬೇಗ ಸೈರಿಸಿ ಕರುಣಿಸಯ್ಯ ಸ್ತುತಿಪೆ ನೀಗ ಸೌಖ್ಯವ ಕಾಂಬೆನು ||ಪ||

ನಿಗಮಾತೀತ ನಿಖಿಳರಕ್ಷಕ ವಿಗಡ ಮಾಯೆಯ ಗೆಲಿದ ದೇವ

ಜಗದ ಜೀವರ ಬಗೆಗೆ ಬಾರದ ಸಿಗದ ವಿಶ್ವರೂಪ ||1||

ಕಿರಣವ್ರಾತ ವರ್ಣಶ್ವೇತ ಮರಣರಹಿತ ಶರಣು ಜನಕ

ಸ್ಮರಣೆಯಿಂದ ಕರುಣೋಪಾಯ ನಿರುತದಿ ಕರಣಾಳುದೇವ ||2||

ಭಂಗಿತಾಘ ಸಂಗರಹಿತ ಮಂಗಲ ಮಹಾದೇವ ಮಹಿಮ

ತುಂಗ ನೀರಲಕೆರೆಯ ಬಸವ ಲಿಂಗ ಸಂಗನಾದ ||3||

ಸರಿ ಗರತಿಯಳ ಇಂಥ ಪರಿ ಮಾಡಿದ

ತರುಣಿ ನೀನದಕೆ ಪೇಳೆ ||ಪ||

ಭಾಷೆಯ ಕೊಟ್ಟು ಕೈ ಮೇಲೆ ಕೈ ಹಾಕುತ

ಆಶೆಯ ಬಹಳ ಹೇಳಿದನೇ

ರೋಸದೆ ಹಗಲಿರುಳಾಶೆ ಹಚ್ಚುತಲೆನ್ನ

ಮೋಸ ಮಾಡಿದನಿನ್ನೇನೆ ||1||

ಪರಿಹಾಸ್ಯ ಮಾಡಿದ ವಿರಹ ಸೈರಿಸಲಾರೆ

ಸ್ಮರಶರ ಬಾಧೆಗರೆದು

ಕುರುಳ ನೇವರಿಸುತ್ತ ಕುಟಿಲದೋರಿದ ನೀರೆ

ಮರುಳಾದವನು ಬಾರೆ ||2||

ಬೇಸರಾಯಿತು ಎನಗೆ ಹಾಸಿಗೆಯ ಸುಖವಿಲ್ಲೆ

ಪೂಶರನ ಬಾಧೆಯೊಳು

ಆಶೆಗೈದೆನು ಜಗದೀಶ ನೀರಲಕೆರೆ

ವಾಸನ ಧ್ಯಾನದೊಳು ||3||

ಸಂಸಾರದಿ ಬಿದ್ದು ಸಂಶಯಗೊಳುತಲಿ

ಧ್ವಂಸವಾಗುವುದಿದೇನಣ್ಣ

ಹಂಸಿಕ ಸದ್ಗುರುವಿನ ಒಲಿಸುತ ನಿಮ್ಮ

ವಂಶೋದ್ಧಾರವ ಮಾಡಿರಣ್ಣ ||ಪ||

ಶುನಿಸೂಕರ ಗಾರ್ದಭಾದಿ ಗರ್ಭಂಗಳೊಳು

ಅನುವಾಗಿ ಬರುವುದೇನಣ್ಣ

ವನಜ ಭವಾಂಡದಿಂದ ಅಣುಗಣು ರೂಪಾಗಿ

ಕನಲಿಕೆ ಕಳವಳವಿದೇನಣ್ಣ

ಮನುಜರಾಗಿ ಮಂದಮತಿಯಾಗುವದು ನಿಮ್ಮ

ಮನಕರಿಯದ ಪಾಪ ಮೊದಲಿತ್ತೇನಣ್ಣ ||1||

ಸದನವ ಹಿಡಿದೆಲ್ಲ ಕರ್ಮ ತೀರಿದ ಮೇಲೆ

ಕ್ಷುಧೆಯಾತುರದೊಳು ಉಣ್ಣಿರಣ್ಣ

ಚದುರಿಕಿ ಮಾತು ಚಾರ್ವಾಕದಾಟಗಳಿಂದ

ಮದವೆತ್ತಿ ನಡೆವುದೇನಣ್ಣ

ಒದಗಿ ಸುಜ್ಞಾನ ಶಾಸ್ತ್ರದ ಸುಖ ಕೇಳಿಸದೆ

ಕುದಿ ಕಾಮಾತುರ ಕರ್ಮ ನಿಮ್ಮದಣ್ಣ ||2||

ವಾಸನೆ ಮನೆಮಕ್ಕಳೀಸುತ್ತಲಿ

ಆಸೆ ಹೇಸಿಕೆ ಯೋಗವದೇನಣ್ಣ

ರೋಸದೆ ಮುಪ್ಪಾಗಲು ಈ ಸುಪ್ರಪಂಚವಿನ್ನು

ಈ ಶರೀರಕೆ ಹತ್ತಿತಣ್ಣ

ವಾಸ ನೀರಲಕೆರೆ ಧೀರ ಪಂಚಾಕ್ಷರ

ಈಶನನೊಲಿಸಿ ಆಶೆಯ ಬಿಡಿರಣ್ಣ ||3||

ಸಂಗೀತ ಸವಿಯ ಸಂಪ್ರೀತಗೆ ಶುಭ ಮಂಗಲಂ ಜಯತು ||ಪ||

ಭೂಮಿ ಪಾತಾಳ ನಭಗಳೊಳು ಮಹ ರೂಪಾದ

ನೀಮಾಯೆಯ ತೋರ್ಕೆಗಾಧಾರನೆ ಸೋಮಧರನೆ ಶಂಕರನೆ ||1||

ಸಾಟಿಯಲ್ಲದಸಾಧ್ಯ ಭೃಕುಟಿಯೊಳಗೆ ದಿಟವಾಗಿ

ಪ್ರಕಟಿಪ ಅಂತರ್ಲಕ್ಷ್ಯದಾಲಯ ತಟತ್‍ಕಲೆಯಾ ಸುನಿಲಯಾ ||2||

ನೀರಲಕೆರೆಯ ನಿಜಾನಂದ ಪರಿಪೂರ್ಣ

ಕಾರುಣ್ಯನಿಧಿ ವರಮೂರುತಿ ಗುರುಭಕ್ತಸಾರಧಿ ||3||

ಸಾಕ್ಷಿಯ ಹೇಳುವೆ ಈ ಕ್ಷಿತಿಯೊಳು ನಾನು ಸುವ್ವಾಲೆಕ್ಕ ಸುವ್ವಾಲೆ

ಸಾಕ್ಷಾತ ಗುರುಧ್ಯಾನ ಆಪೇಕ್ಷೆಯೊಳಿರಿರೆಂದು ಸುವ್ವಾಲೆಕ್ಕ ಸುವ್ವಾಲೆ ||ಪ||

ಸುಳ್ಳಲ್ಲವೀ ಸಾಕ್ಷಿ ಎಲ್ಲಾರು ಕೇಳಿರಿ ಸುವ್ವಾಲೆಕ್ಕ ಸುವ್ವಾಲೆ

ಸುಳ್ಳೆಂದವನ ಬಾಯಿ ಮೇಲೆ ಮುಳ್ಳೂರಿದಂತೆ ಹೇಳುವೆ ಸುವ್ವಾಲೆಕ್ಕ ಸುವ್ವಾಲೆ ||1||

ಕೇಡು ಬಯಸುವನಿಗೆ ಕೇಡೆಂದು ತಪ್ಪದು ಸುವ್ವಾಲೆಕ್ಕ ಸುವ್ವಾಲೆ

ಮಾಡಿಸಿ ಕೊಡದಿರೆ ಬೇಡಿದರಿನ್ನಿಲ್ಲ ಸುವ್ವಾಲೆಕ್ಕ ಸುವ್ವಾಲೆ ||2||

ವಸನ ಉಟ್ಟವರ ಕಂಡು ಉಸುರು ಹಾಕುವನಿಗೆಲ್ಲಿ ಸುಖ ಸುವ್ವಾಲೆಕ್ಕ ಸುವ್ವಾಲೆ

ವಸನ ಹೊದೆಯಲಿಲ್ಲ ಅಶನವು ಮೊದಲಿಲ್ಲ ಸುವ್ವಾಲೆಕ್ಕ ಸುವ್ವಾಲೆ ||3||

ಹಿಂದಾಡಿಕೊಳ್ಳುವನು ಹಂದಿಯಾಗಿ ಬಾಳ್ವ ಸುವ್ವಾಲೆಕ್ಕ ಸುವ್ವಾಲೆ

ಮುಂದೆಂದು ಸುಖವಿಲ್ಲ ಹೊಂದಿ ಕಷ್ಟದೊಳಿರ್ಪ ಸುವ್ವಾಲೆಕ್ಕ ಸುವ್ವಾಲೆ ||4||

ಗುರು ಭಕ್ತರನು ಸೇರದೆ ಗೂಗಿಜನ್ಮವು ಸುವ್ವಾಲೆಕ್ಕ ಸುವ್ವಾಲೆ

ಗುರುದೋಷಕನುವಾಗಿ ಧರೆಯೊಳು ಭೂತನಾಗುವ ಸುವ್ವಾಲೆಕ್ಕ ಸುವ್ವಾಲೆ ||5||

ಕುಲದಭಿಮಾನಕ್ಕೆ ಕುಸ್ತಿಯಾಡಿ ಸತ್ತವ ಸುವ್ವಾಲೆಕ್ಕ ಸುವ್ವಾಲೆ

ಹೊಲಗೇರಿ ನಾಯಿಯಾಗಿ ಎಲುವು ಕಚ್ಚಿ ದಿನಗಳೆವ ಸುವ್ವಾಲೆಕ್ಕ ಸುವ್ವಾಲೆ ||6||

ತತ್ವಕ್ಕೆ ತರ್ಕಿಸಿ ತಾ ತಿಳಿಯದೆ ಹೋದನವ ಸುವ್ವಾಲೆಕ್ಕ ಸುವ್ವಾಲೆ

ಹೊತ್ತು ತೊಗಲನು ಮಾರಿ ಹೊಟ್ಟೆಯ ಹೊರೆವನು ಸುವ್ವಾಲೆಕ್ಕ ಸುವ್ವಾಲೆ ||7||

ಓದಿ ವಾದಿಸಿ ವಸ್ತು ಸಾಧಿಸದವನಿಗೆ ಸುವ್ವಾಲೆಕ್ಕ ಸುವ್ವಾಲೆ

ಬಾಧೆ ಹೇಳುವದೇನು ಮಹಾದೇವ ತಾ ಬಲ್ಲ ಸುವ್ವಾಲೆಕ್ಕ ಸುವ್ವಾಲೆ ||8||

ಒಡಲಾಸೆ ಬಿಡಲಿಲ್ಲ ಎಡರೆಂದು ಕಡಿಲಿಲ್ಲ ಸುವ್ವಾಲೆಕ್ಕ ಸುವ್ವಾಲೆ

ಗಡಿ ನೀರಲಕೆರೆ ಗುಪ್ತ ಗುರು ಕಯ್ಯ ಹಿಡಿಲಿಲ್ಲ ಸುವ್ವಾಲೆಕ್ಕ ಸುವ್ವಾಲೆ ||9||

ಸುಮ್ಮನೆ ದೊರೆವುದೆ ಸುಲಭವೆ ನಿಜ ಮುಕ್ತಿ

ಹಮ್ಮನಿಂದಲಿ ವ್ಯರ್ಥ ಸಾಯದಿರಣ್ಣ ||ಪ||

ಕನ್ನಡಿ ಹಿಡಿದು ತನ್ನಯ ಮುಖವದರೊಳು

ನನ್ನಿಯಲಿ ಕಂಡು ನಲಿದಾಡುವಂತೆ

ಭಿನ್ನವಿಲ್ಲದೆ ಶೃತಿ ಶ್ರವಣದಿ ತಿಳಿಯುತ

ಕಣ್ಣಿಟ್ಟು ನೋಡುತ ಉನ್ಮನಿ ಹೊಕ್ಕು ತಾ ||1||

ಸೊಗಸಿನ ಸಖಿಯರು ಒಗುಮಿಗೆ ನೋಟದಿ

ಅಗಲದೆ ವಿಟನ ಎದೆಯೊಳು ನಿಲುವಂತೆ

ನಿಗಮಾತೀತ ಗುರುವರ ಬೋಧ ಚಿದ್ಘನ

ವಗಲದೆ ತನ್ನ ಮತಿಯಿಂದ ನಿಲಿಸದೆ ||2||

ಅಡವಿಯೊಳು ಬರ್ಪಗೆ ವ್ಯಾಘ್ರವಿದಿರಾಗೆ

ಅಡಿಗಡಿಗೆ ತನ್ನ ಮರೆದಂತೆ

ದೃಢಜ್ಞಾನದಿಂದ ಪಂಚಾಕ್ಷರ ಕೃಪೆಯನು

ಪಡೆದು ಸದಾ ಆನಂದ ಸುಖದಿ ಮೈಮರೆಯದೆ ||3||

ಸುಮ್ಮನೆ ದಿನಗಳೆದು ಹಮ್ಮೀಲಿ ಕೆಡಬೇಡಿ

ಉಮ್ಮಾಯ ಸತಿಸುತರೊಡಗೂಡಿ

ಜಮಾಸಿ ಸದ್ಗುರು ತಮಾಷಿ ನೋಡಿ

ನಿಮ್ಮ ಧಿಮಾಕು ಮುರಿವನು ಯಮ ಖೋಡಿ ||ಪ||

ಸಿರಿಸಂಪತ್ತಿನಲಿ ಹಿರಿಹಿರಿ ಹಿಗ್ಗಿ ನೀವು

ಶರೀರ ಮೆಚ್ಚಿ ಮೈ ಮರೆಯಬೇಡಿ

ಹಿರಿತನವಡೆದಿಹ ಗುರುಕರಜಾತನ

ಚರಣಕೆ ಹೊಂದಿ ಕರುಣವ ಪಡೆಯಿರಿ ||1||

ಲೋಕ ನಚ್ಚುತಲಿ ನೂಕು ನುಗ್ಗಾದಿರಿ

ಈ ಕಕುಲಾತಿ ದುಃಖ ಕಡಿಯಿತಿ

ಏಕಮೇವಾದ್ವಿತೀಯ ಶೃತಿಯ ಕೇಳಿ

ಏಕಾತ್ಮನ ಧ್ಯಾನಿಸಿ ಕೂಡಿರಿ ||2||

ಹೊಗರು ಮಿಂಚಿನ ಗಗನ ಮಾಲೆಯೊಳು

ಜಗ ಜಗಿಸುವ ಸದರೇರಿ ನೋಡಿರಿ

ನಿಗಮಾತೀತ ನಿರಂಜನಮೂರ್ತಿಯ

ಬಗೆಬಗೆಯಲಿ ಸ್ಮರಿಸುತ ನಡೆಯಿರಿ ||3||

ಕೊಸರಿಕೊಂಡು ಏಳುವವು ದಶವಿಧ ನಾದಗಳು

ಉಸಿರನು ಹಿಡಿದು ಉನ್ಮನಿಗಾಡಿರಿ

ಬಿಸಜನಾಪ್ತನ ಪ್ರಭೆ ರಸನೆಯೊಳಾಲಿಸುತ

ಅಸಮತೇಜನೊಳು ಮನ ನೀಡಿರಿ ||4||

ಚಂಡ ಪ್ರಕಾಶ ಉದ್ದಂಡ ನೀರಲಕೆರೆ

ಗಂಡು ಮೆಟ್ಟಿನ ಗಡಿ ನೋಡಿರಿ

ಕಂಡು ಪಂಚಾಕ್ಷರ ಗಂಡನ ಕೂಡಿ ಯಮ

ದಂಡನೆ ಕಳೆಯುತ ಕೊಂಡಾಡಿರಿ ||5||

ಸುಮ್ಮನಾದನು ಯೋಗಿ ತಾ ಬ್ರಹ್ಮಾನಂದವ ಪೂರೈಸಿ

ಉಮ್ಮಳಿಸಿದವು ನಾದಗಳು ಧಿಮಿಕಿಟೆಂದು ಬಾರಿಸಿ ||ಪ||

ಇಂದುನಾಳದಿ ಏನು ತೋರದಿತ್ತು ಸ್ವರೂಪ

ಹೊಂದಿದಾ ಚಿದ್ಬಿಂದು ಚಿತ್ಸುಖ ಸದನದೊಳು ದೀಪ ||1||

ಕಿರಣ ಮುಚ್ಚಿ ಬಹುವರ್ಣ ಮೈದೋರಿ

ಮರವೆಯೇರಿತು ಆತ್ಮನಂತಃಕರಣ ಹಾರಿ ||2||

ಅಂಜದೆ ನೀರಲಕೆರೆಯ ಪ್ರಭಾ ಪುಂಜನೊಳು ಕೂಡಿ

ಜಂಜಡವಳಿದು ಜನ್ಮಗಳ ಗುಂಜಿಡದಲಿ ಈಡಾಡಿ ||3||

ಸುಮ್ಮನಿರು ಶಿವಯೋಗಿ ||ಪ||

ವಿನಯ ಸ್ವಸ್ಥನಾಗಿ ಮನಪುಸ್ತಿ ಸಾಗಿ

ಮನವಾನಂದದೊಳು ತೂಗಿ ಪರವಸ್ತು ತಾನಾಗಿ |1||

ತನು ನೆಪ್ಪು ಪೋಗಿ ಘನ ಸುಖಿಯಾಗಿ

ಜನನ ಮರಣ ನೀಗಿ ಪರಶಿವ ತಾನಾಗಿ ||2||

ನಡೆನುಡಿ ನೋಡಿ ಬಿಡದೆ ಕೊಂಡಾಡಿ

ಗಡಿ ನೀರಲಕೆರೆಗೋಡಿ ಪಂಚಾಕ್ಷನೊಳು ಕೂಡೀ ||3||

ಸೊಕ್ಕು ಬಿಡು ಮುಕ್ಕಣ್ಣನ ನೆನೆ ನೆನೆ

ಮುಕುಳಿ ತುಂಬಿತೇನಲೊ ಎಲೋ

ಠಕ್ಕು ಮಾಡೆ ಯಮ ಡೊಕ್ಕೆ ಮುರಿವ ನಾಳೆ

ದಿಕ್ಕಿಲ್ಲ ಯಾರ‍್ಯಾರೂ ಎಲೋ ||ಪ||

ಯೋಗಿ ಜನಕೆ ತಲೆ ಬಾಗಿ ನಡೆಯದಿರೆ

ಗೂಗಿ ಜನ್ಮ ಕೇಳೆಲೊ ಎಲೋ

ಭೋಗದಾಸೆ ಭವರೋಗ ನೀಗದಲೆ

ರಾಗಹೋದಗದೀಗೆಲೊ ಎಲೋ

ಆಗ ಈಗ ಮಾಡಿ ಸಾಗಿ ಹೋಗಬೇಡ

ಈಗಳರಿತುಕೊಳ್ಳೆಲೊ ಎಲೋ ||1||

ನರದೇಹದಿ ಬಹಳ ಅರುವಿನೊಳಾಚಾರ

ಕುರುಹಿಡಿದು ಆಚರಿಸೆಲೊ ಎಲೋ

ಗುರುವಿಗೆ ತನುವೆರಿ ಲಿಂಗಕೆ ಮನವೆರಿ

ಸಿರಿಯ ಜಂಗಮಕೇರಿಯೆಲೊ ಎಲೋ

ಮರೆಯದ ಮಾತಿದು ಶರೀರದಾಸೆ

ಬಿರುಗಾಳಿಗಿಟ್ಟ ದೀಪವೆಲೊ ಎಲೋ ||2||

ಹುಡುಕು ಸಂತರನು ಮಿಡುಕದೆ ಮನಸಿನ

ತೊಡರದೆ ಎಡರಳಿಯೆಲೊ ಎಲೋ

ಒಡಲಾಸೆಗೆ ಕೆಡದೆ ಹಿಡಿ ನಡೆನುಡಿಗಳ

ಬಿಡುಗಡೆ ಮಾಡದಿರೆಲೊ ಎಲೋ

ಗಡಿ ನೀರಲಕೆರೆಗೊಡೆಯನ ಅಡಿವಿಡಿ

ಬಿಡಬೇಡ ಪಡೆ ಮೋಕ್ಷವೆಲೊ ಎಲೋ ||3||

ಹರ ಮುನಿದರೆ ಗುರು ಕಾಯ್ವನು ಶಾಶ್ವತ

ಹರನಿಗಿಂದಧಿಕ ಸದ್ಗುರುವೆಂದಾಗಮ ಸಾರುತಿಹುದು ||ಪ||

ಗುರು ಸಾಕ್ಷಾತ್ ಪರಬ್ರಹ್ಮವೆನುತಲಿ

ಹರಿಹರರರ್ಚನೆ ಮಾಡುವರು

ಅರಿಯದೆ ಸೃಷ್ಟಿ ಸ್ಥಿತಿ ಲಯ

ಮೆರೆದೆವೆಂದು ಕೊಂಡಾಡುವರು

ಬರಿಯ ಭ್ರಮೆಯೇನಿದು ದೊರೆತನ ಸಾಕೆಂದು

ಅರೆಗಳಿಗೆ ಅಗಲದೆ ಹಾಡುವರು ||1||

ಮೃಗಧರನಿಲ್ಲದ ಮಸ್ತಕ ಮೊಗವೈದಿಲ್ಲ

ಕಣ್ಗಳೆರಡು ಒಂದೇ ಮುಖ

ಅಗಲದಂಗನೆಯ ಜಗದೋದ್ಧಾರನೆ

ನಿಗಮಾತೀತನೆ ಸುಖಲೋಕ

ಬಗೆಯುತ ಬಂದನು ಭಾವಿಸುತಿರಿರೊ

ಯುಗಗಳು ಹೋದವು ಅನೇಕಾನೇಕ ||2||

ಮಾನಸ ವಾಕ್ಕಗೋಚರ ಮನು ಮುನಿ

ಜನರ ದೃಷ್ಟಿಯ ಕಡೆ ತಾನಿರುವ

ಸ್ವಾನುಭಾವ ಸುಖದಾನಂದ ರಸಮನ

ಮನನಕೊಲಿವನು ಈಗಳೆ ಬರುವ

ಏನೂ ತಿಳಿಯದ ನಾನಾ ವಿಚಿತ್ರನು

ಭಾನುಪ್ರಕಾಶದಿ ತಾ ಮೆರೆವ ||3||

ಸುಲಭನಾದ ಬಲು ಕಲಿಯುಗದೊಳಗಿವ

ನಲಿಯುತ ನರ ರೂಪವ ತಂದ

ನೆಲೆಸಿಹ ಪುಣ್ಯದ ಬಲವಿರಲು ಅವರ

ಬಲಿ ಮನ ದೃಷ್ಟಿಗೆ ತಾ ನಿಂದ

ತಳ ತಳ ಹೊಳೆಯುವ ಹೃದಯಾಕಾಶನು

ಸೆಳೆ ಮಿಂಚೆಸೆದಿಹುದಾನಂದ ||4||

ಬ್ರಹ್ಮವೆಂದವು ವೇದಗಳೀತನ

ಬ್ರಹ್ಮ ಸ್ವರೂಪವ ಅರಿಯಲಿಲ್ಲ

ಉಮ್ಮಳಿಸುತ ಒದರಿದವು ಹೋಲಿಕಿಗೆ

ಹಮ್ಮಿಸಿ ಕೂಗಲು ತಾ ಬಲ್ಲ

ಸುಮ್ಮನೆ ಗಡಿ ನೀರಲಕೆರೆ ದೇವರ

ನೆಮ್ಮಿರೋ ಪುನರಪಿ ಜನ್ಮವಿಲ್ಲ ||5||

ಹಂಗದೇತಕೆ ಜನರ ಹಂಗದೇತಕೆ

ಮಂಗಳಾತ್ಮ ಪರಮ ಶಿವಲಿಂಗವೆ ನಾನಾದ ಬಳಿಕ ||ಪ||

ಕ್ಲೇಶಗಳನಳಿದು ವರ ನಿರಾಶೆಯಿಂದ ಚರಿಸಿ ಯಮನ

ಪಾಶವನ್ನು ತರಿದು ಜಗದಧೀಶನೆ ನಾನಾದ ಮೇಲೆ ||1||

ಹಮ್ಮನಿಲ್ಲದೆ ಮಾಯಾ ಭ್ರಮೆಯ ಸಮ್ಮನೋಡಿಸಿ ಜಗದೊಳು

ಸಮ್ಮುದದಿಂದ ಇರುತ ಪರಬ್ರಹ್ಮವೆ ನಾನಾದ ಬಳಿಕ ||2||

ವಾಸ ನೀರಲಕೆರೆಯಧೀಶ ದೇಶಿಕ ಜನತಾಭಿಲಾಷ

ಭಾಸಮಾನ ವೇಷ ಪಂಚಾಕ್ಷರೇಶನೆ ನಾನಾದ ಬಳಿಕ ||3||

ಹೃದಯ ಕಮಲದಿ ನದರಿಟ್ಟು

ಮೊದಲೆ ಗುರುವಿನ ನೆನೆದೆ| ನಾ

ಪದುಳದಿಂದ ಓಲೆಗಿಟ್ಟೆನು ||ಪ||

ಧರೆಯ ಭೋಗಕೆ ಮೆಚ್ಚಿ ನಿನ್ನ

ಸ್ಮರಣೆ ಮರೆತು ಮೈ ಮರೆದೆನು

ಕರುಣ ನಿಧಿಯೆ ಕರವ ಪಿಡಿಯೈ

ಕರೆದೆ ನಾ ಮಾತಾಡಯ್ಯ ||1||

ಕಿರಿಯತನದ ಕಿಂಕರನು ನಾ

ತರುಣನ ಬಿನ್ನಹ ಕೇಳಯ್ಯ

ಮರಣರಹಿತ ಮಾರವೈರಿ

ಧರೆಗೆ ನರನಾಗಿ ಬಂದನು ||2||

ಬಂದನಾಗ ಭಕ್ತವತ್ಸಲ

ಕಂದನ ಕೈಹಿಡಿದನು

ಕಂದನ ಕೈ ಹಿಡಿದು ಕರೆದಾ

ನಂದದಿಂದೇನಂದನು ||3||

ಬಾಲ ಕೇಳೈ ಕಾಲ ಕಳೆದು

ಬಾಳ ದಿನಗಳು ಹೋದವು

ಕೀಳು ಸಂಸಾರ ಜಾಳವೆಂಬುದು

ಹೇಳಬಾರದು ಹೇಸಿಕಿ ||4||

ಮೋಸದಿಂದೆ ಘಾಸಿಯಾದೆ

ಈಶ ಕರುಣದಿ ನೋಡಯ್ಯ

ಈಶ ಕರುಣದಿ ನೋಡಯ್ಯ

ಬೇಸರಾದೆ ಬಿಡಬೇಡ ||5||

ಹೋದ ದಿನಗಳು ಹೋಗಲಪ್ಪ

ಬಾಧೆ ಬಿಡಿಸುವೆ ಬಾರೆಲೊ

ಬಾಧೆ ಬಿಡಿಸುವೆ ಬಾರೆಲೊ ನಿಜದ

ಹಾದಿ ತೋರುವೆ ಅರಿಯೆಲೊ ||6||

ಸತಿಯ ಸುತರ ಹಿತವ ಹಿಡಿದು

ಗತಿಗೆ ದೂರಾದೆ ಕೇಳಯ್ಯ

ರತಿಯು ಸಾಕು ಕ್ಷಿತಿಯನೊಲ್ಲೆನು

ಯತುನವೆನಗೇನು ಹೇಳಯ್ಯ ||7||

ಮದವು ಇಲ್ಲದ ಗುರುವು ತಾನು

ಸದನಕೆ ಕರೆದೊಯ್ದನು

ಹದನವರಿತು ಪದ್ಮಾಸನವ

ಮಡಗಿ ಮಂತ್ರಿಸಿ ಕಿವಿಯೊಳು ||8||

ಮಂತ್ರವನ್ನು ಕಿವಿಗೆ ಮಂತ್ರಿಸಿ

ತಂತ್ರದಿ ತನು ಮರೆಸಿದ

ಮಂತ್ರಮೂರುತಿ ಗೊಲ್ಲಾಳೇಶ

ತನ್ನಂತೆ ಮಾಡೆನ್ನ ಕುಣಿಸಿದ ||9||

ಏಳು ನೆಲೆಗಳು ಏಳು ಕಲೆಗಳು

ಏಳು ಚಕ್ರವ ತೋರಿಸಿ

ಘೀಳ ಘಂಟೆ ಭೇರಿ ಡೊಳ್ಳು

ಬಳಿಕ ಪಳ್ಳಂಗಾ ಬಾರಿಸಿ ||10||

ಝೇಂಕಾರದ ವಾದ್ಯ ಧಿಮಿಧಿಮಿ

ಬಿಂಕ ಕರಣಿಯ ನುಡಿಸಿದ

ಶಂಕರನ ತೋರಿಸಿದ ತಾನೆನ್ನ

ಅಂಕಿತದಿ ಮೈಮರೆಸಿದ ||11||

ಚಂದ್ರ ಸೂರ್ಯರೊಂದು ಕೋಟಿ

ಚಂದ್ರ ಜ್ವಾಲೆಯ ಕಳೆಯುತ

ಮಂದರಾದ್ರಿ ಕೈಲಾಸವೆಂಬುದು

ಒಂದೆ ಶಿವನ ಸದನೆಲೊ ||12||

ಇಂದ್ರ ನೀಲ ಶಿಲೆಗಳಿಂದ

ಬಂಧಿಸಿದ ಗುಡಿ ತೋರಣ

ಬಂಧಿಸಿದ ಗುಡಿ ತೋರಣದ ಬಾಗಿಲಿ

ಗೊಂದು ರತ್ನದ ವರ್ಣ ಎಲೊ ||13||

ಗಗನ ಮೇಲುಗಿರಿ ತಗಲು ಇಲ್ಲದೆ

ಸೊಗಸು ಆ ವೈಕುಂಠವೆಲೊ

ಸೊಗಸು ಆ ವೈಕುಂಠದಾಚೆ

ಮಿಗಿಲು ಸತ್ಯಲೋಕವೆಲೊ ||14||

ಅದಕೆ ಮೇಲು ಗಿರಿಸದನವಯ್ಯ

ಸದನಕೆ ಸರಿಗಾಣೆನು

ಸದನಕೆ ಸರಿಗಾಣೆನು ಗುರುವೆ

ಅಧಿಕ ಘನ ಘನ ತ್ರಾಣನು ||15||

ಸತ್ಯ ನುಡಿ ಸತ್ತಿಗೆಯನೆತ್ತಿ

ಭಸಿತ ಭಂಡಾರವನಿತ್ತೆವೋ

ಹೊತ್ತಬೆತ್ತ ಬೆಳ್ಳಿಕಾವು ಝಗಜಂಪಿ

ಸುತ ನೋಡು ಹೊತ್ತೆವೋ | |16||

ಬಯಲ ಸೀಮೆಗೆ ಹೊತ್ತು ನಡೆದೆವು

ಬಯಲ ಬೀರನ ಪಾಲಕಿ

ಕಾಲ ಕಾಲಕೆ ಭಾವಶುದ್ಧ

ವೀರಗಾರನ ಹರಕೆಯೋ ||17||

ಶಾಂತರೊಳಗೆ ಡೊಳ್ಳುಕಟ್ಟಿ

ಶಾಂತಿಯಿಂದ ಕುಣಿದಾಡುತ

ಭ್ರಾಂತಿ ಬಯಕೆಯ ಕಳೆದು

ಅಂತರಾತ್ಮನ ಪಾಡುತ ||18||

ಕಡಕು ಮೇಲಗೇರಿ ತೊಡಕು ಗುಪ್ತದ

ಗಡಿಯ ನೀರಲಕೆರೆಯೆಲೊ

ನಡೆಯ ಒಂದೇ ಪಡೆದೆವಯ್ಯ

ಹಿಡಿದು ಸದ್ಗುರು ಕೃಪೆಯಲೊ ||19||

ಹುಡದಿಯನಾಡಿರೊ ತಮ್ಮ ಕಡಿದು ಭವದ ಬೇರನು ಕಿತ್ತಿ

ಜಡಿದು ಬ್ರಹ್ಮದೊಡನೆ ಬೆರೆದು ||ಪ||

ಅಡಗಿಮ್ಮಢಗ ದೃಢವ ಗೆಲಿದು ಮಡಿದು ನಾಸಿಕಾಗ್ರ ಪಿಡಿದು

ಕಡಿದು ರಕ್ತಪೀಠವರಿದು ತುಡುಗ ಯಮನ ಬಲವ ಮುರಿದು ||1||

ನಾದ ಮೂಲ ದೋಣಿಯಲ್ಲಿ ಸಾಧು ಸಂಗ ಮುದ್ರಿಯನಿಡಿಸಿ

ಕಾದ ಕರಣ ಬುದ್ಧಿಯಿಂದ ಹೋದ ಜೀವಶಿವರ ಗೆಲಿದು ||2||

ಇಂಥ ಹುಡದಿಯನ್ನು ರಚಿಸಿ ಭ್ರಾಂತಿ ವೈರಿಗಳ ಜಯಿಸಿ

ಅಂತರಂಗದಷ್ಟದಳದಿ ನಿಂತು ಪಂಚಾಕ್ಷರನ ಭಜಿಸಿ ||3||

ಹೂವ ಸೂರ‍್ಯಾಡಿದೆನೇ ಸದ್ಗುರುವಿನ ಮೇಲೆ

ಹೂವ ಚೆಲ್ಲ್ಯಾಡಿದೆನೇ ||ಪ||

ಆಹ್ವಾನಿಸಿ ನಿಜವಸ್ತುವ ತೋರಿದ

ವಾಹ್ವಾ ಸದ್ಗುರುವಿನ ಮೇಲೆ ||ಅ.ಪ||

ತನುವ ಮರೆಸಿ ಘನ ಚಿನುಮಯಾತ್ಮನ ಮೇಲೆ

ಅನುವನು ಅನುಗೊಳಿಸಿದ ಮುಕ್ತಿ ವಿನಯಳಾತ್ಮನ ಮೇಲೆ ||1||

ದೃಷ್ಟಿ ಮುಚ್ಚುತ ದೃಷ್ಟಿ ತೆರೆದು ಅಟ್ಟಿಸಿ ವಾಯು

ಮುಟ್ಟಿ ಬ್ರಹ್ಮರಂಧ್ರದಿ ನಟ್ಟ ನವಚಕ್ರವನೇರಿ ||2||

ಶಿಸ್ತು ನೀರಲಕೆರೆ ಬಸ್ತಿಮಸ್ತಿನ ಗಡಿಯ

ವಸ್ತು ಪಂಚಾಕ್ಷರನಡಿಯ ಪುಸ್ತಿ ಪುಣ್ಯಂಗಳ ಬಲದಿ ||3||

ಹೇಗೆ ಮರೆಯಲಿ ಶಿವನ ತಂಗಿ

ಈಗ ಭುವನದೊಳಗಿಲ್ಲ ಕೇಳಮ್ಮ ಲಲಿತಾಂಗಿ ||ಪ||

ಕೋಟಿಸೂಯರ್ಯರ ತೇಜೋರೂಪ ಕಣ್ಣ ನೋಟದೊಳು

ನೀಟಿ ಅಗಲಾಯ್ತು ಮನಸ್ತಾಪ

ಬೂಟಕವಲ್ಲ ಇದು ಸತ್ಯದಾಲಾಪ ಬಹು

ತಾಟಗೊಡದೂಟ ಸುಖದಾಟ ಸಲ್ಲಾಪ ||1||

ಕಂಡವರು ಕಂಡೇಳುವರಲ್ಲ ಭೂಮಂಡಲದಿ

ಪಂಡಾಂಡ ಬ್ರಹ್ಮಾಂಡವೆಲ್ಲ

ಕಂಡು ಕಾಣದಲಿ ಇರುವರೆಲ್ಲ ಕಂಡದುಂಡೆಯರ

ಖಂಡತನದರಿವರಿಯರು ಸೊಲ್ಲ ||2||

ನಡೆದು ನೀರಲಕೆರೆಗೆ ಬಂದ ಜಡದೊಡಲಾಂತು

ಜಡರಳಿದು ತೊಡರಿಡದೆ ನಿಂದ

ಬಿಡದಾಸೆ ಮಾಡದಾನಂದ ದೃಢವಿಡಿದು ಪಂಚಾಕ್ಷರ

ನೊಳಗೆ ಅಡಗಿರುವೆನೆಂದ ||3||

ಹೇಳಬಾರದ ಸವಿಯನ್ನು

ನಿನಗೆ ಹೇಳಿ ಕೊಡುವೆನು ತಿಳಿಯಿನ್ನು

ಕೇಳಿ ಸದ್ಗುರುವರನ ಆಳಾಗಿ ಯೋಗಿಯೊಳು

ಮೇಳದ ಸುಖದೇಳ್ಗೆಯಾನಂದವ ||ಪ||

ದ್ವೈತ ಕಲ್ಪಿತವೆಲ್ಲ ಪೋಗಿ ಮತ್ತೆ ಅ

ದ್ವೈತ ಭಾವದ ಹಮ್ಮು ಸಾಗಿ

ಮಾತಡಗಿಸಿ ಮೌನ ಮಾತು ಕೇಳು

ಆತುಮನಿಹೆ ನಾನೆಂದು ಓತು ಲಕ್ಷಿಸುತಿಪ್ಪ ||1||

ಚಿತ್ರ ಚಂಚಲವ ಅತಿಗಳೆದು ಮನ

ದತ್ತಲೂಹಿಪ ಸುಖವ ತಳೆದು

ಅತ್ತಿತ್ತ ನೋಡದತ್ತತ್ತ ಬ್ರಹ್ಮಾನಂದ

ವೆತ್ತಿ ಮಸ್ತಕದ ಮನೆ ಹತ್ತಿ ಹಂಬಲ ಬಿಟ್ಟು ||2||

ತನುವಿನೆಚ್ಚರ ಇಲ್ಲದೆ ಹೋಗಿ

ಮನದರಿವು ಮರವೆ ಇಲ್ಲದಾಗಿ

ಘನ ನೀರಲಕೆರೆವರನ ಅನುವಿನೊಳು

ಜನನ ಮರಣವ ಗೆದ್ದ ಸೊಬಗನು ||3||

ಹೋಗಿ ಬಾರೆ ನಮ್ಮ ಸಖಿಯೆ ನಾಗವೇಣಿಯೆ

ಬೇಗ ಸಾರು ಗಂಡನ ಮನೆಗೆ ಜಾಣೆಯೆ ||ಪ||

ಮೇಲು ದೇಶದ ಹಾಲಗೇರಿಗೆ ಇಂದು ಕಾಮಿನಿ

ಖಾಲಿ ಮಾತಿದಲ್ಲಮ್ಮ ಮಂದಗಾಮಿನಿ ||1||

ಚಿತ್ತ ಚಂಚಲವಾಗದೆ ಅತ್ತಲಿರುವ ಕಾರಣ

ಮತ್ತೆ ಹೇಳುವುದೇನು ಸುಖ ನಿತ್ಯ ಪುರಾಣ ||2||

ಮಂಜುಳಾತ್ಮ ನೀರಲಕೆರೆಯ ನಂಜುಗೊರಳನ

ಅಂಜದವನ ಮಾಡಿಕೊಂಡು ಬಂಜೆ ಹಡೆದು ನೀ ||3||

ಹೇಳೆನೇ ಹೇಳದಿದ್ದೆನೇ

ಕೇಳಿ ಬಿದ್ದು ಒದ್ದಾಡಿ ಸಾಯ್ವನಿಗೆ ಹೇಳೆನೇ ||ಪ||

ಸಿದ್ಧ ಪ್ರಸಿದ್ಧ ಗುರುವಿನ ಹೊಂದಿ ತಿಳಿವರ

ಸುದ್ದಿ ಕೇಳದ ಶುದ್ಧ ಹೊಲೆಯರನು

ಒದ್ದೊಯ್ದು ಯಮದೂತರದ್ದಿ ನರಕದೊಳು

ಇದು ಉದ್ಧಾರವಾಗದಿದ್ದಬಾಧೆಯ ಕೇಳಿ ||1||

ಸಾಧು ನಿಂದಕ ಸತ್ಯಾದಾಚಾರ ಸೈರಿಸ

ವಾದ ಮಾಡುವನು ಉತ್ತಮರ ಕೂಡದೆ

ಸಾಧಿಸಿದ ಹಂಸದಾಶ್ರಮದ ಹಳಿವರಿಗೆ

ಆದುದೇನೆಂಬೆ ನಾನಾ ದುಃಖವ ಕಂಡು ||2||

ಪಿಂಡದೊಳಿರ್ದು ಮಾರ್ತಾಂಡನಂತೆ ಎಸೆದರೆ

ಕಂಡು ಕಾಣದನೊಬ್ಬ ತಾನೇ ಇರೆ

ಖಂಡಿತನೆನಿಸಿದ ಅಖಂಡ ನೀರಲಕೆರೆ

ಗಂಡನನು ಅಗಲಿ ಇಹಪರ ತಿರುಗುವಗೆ ||3||

ಹೋಗಿ ಬರುವೆನಮ್ಮ ತವರೂರಿಗೆ ಹೇಳಿ ಬಂದೆನವರಿಗೆ

ಬಾಗಿ ಕೇಳಿಕೊಂಡೆ ಹಿರಿಕಿರಿಯರಿಗೆ ಸತ್ಯ ಶರಣರಿಗೆ ||ಪ||

ಮಾವಭಾವ ಮೈದುನರಿಗೆ ಬೇಸರಾದೆ ಅತ್ತೆಗೋಸರಾದೆ

ಜೀವದತ್ತಿಗೆ ನಾದಿನಿಯರಿಗೆ ದಾಸಿಯಾದೆ ಗಂಡಗೆ ಹಾಸಿಗೆಯಾದೆ ||1||

ಆಸರಿಲ್ಲದ ಏಳೆಂಟು ಮಕ್ಕಳ ಹಡೆದೆ ಆಯಾಸ ಕಳೆದೆ

ಹೇಸದೆ ಇಪ್ಪತ್ತೊಂದು ಸಾಸಿರದಲಿ ಉಳಿದೆ ಆಶೆ ಕಳವಳದೆ ||2||

ಉಡುಕಿ ಮಾಡಿಕೊಳ್ಳಬೇಕು ಒಬ್ಬನ ಹುಡುಕಬೇಕು

ಗಡಿಯ ನೀರಲಕೆರೆ ಒಡೆಯನ ಆದರಿಸಬೇಕು ತಡವಿನ್ನೇಕೆ ಬೇಕು ||3||

ಹೊಯ್ಯಲೊ ಡಂಗುರವ ಹೊಯ್ಯಲೊ ಡಂಗುರವ ||ಪ||

ಹೊಯ್ಯಲೋ ಡಂಗುರವ ಕೈಯೆತ್ತಿ ಲೋಕದೊಳು ಹೊಯ್ಯಲೊ ಡಂಗುರವ

ಸೈಯೆಂದು ಸತ್ಪುರುಷರ ಉಡಿಗಟ್ಟಿ ತಿಳಿಯಲೆಂದು ಹೊಯ್ಯಲೊ ಡಂಗುರವ ||1||

ಇಲ್ಲದುಂಟೆನಿಸುವ ಖುಲ್ಲನ ಬಾಯಲ ಮೇಲೆ ಹೊಯ್ಯಲೊ ಡಂಗುರವ

ಸುಳ್ಳಲ್ಲವೀ ಸಾಕ್ಷಿ ಎಲ್ಲರೂ ಕೇಳಿರೆಂದು ಹೊಯ್ಯಲೊ ಡಂಗುರವ ||2||

ಗುರು ಸಮಾನ ಇಲ್ಲೆಂದು ಗುರುತಿಟ್ಟುಕೊ ಎಂದು ಹೊಯ್ಯಲೊ ಡಂಗುರವ

ಗುರು ನಿಂದಕರಿಗೆ ನರಕ ತಪ್ಪದೆಂದು ಹೊಯ್ಯಲೊ ಡಂಗುರವ ||3||

ಲಿಂಗನೈಷ್ಠಿಕ ಭಕ್ತನಂಗಳವೆ ಕೈಲಾಸವೆಂದು ಹೊಯ್ಯಲೊ ಡಂಗುರವ

ಲಿಂಗಾಂಗವಾದರ್ಗೆ ಮಂಗಲ ಕೈವಲ್ಯವೆಂದು ಹೊಯ್ಯಲೊ ಡಂಗುರವ ||4||

ಜಂಗಮಾರ್ಚನೆಯಿಂದ ಜನ್ಮಂಗಳ ಅಳಿದರೆಂದು ಹೊಯ್ಯಲೊ ಡಂಗುರವ

ಜಂಗಮ ತೃಪ್ತಿಯೊಳು ಸಂಗನ ಬೆರೆದರೆಂದು ಹೊಯ್ಯಲೊ ಡಂಗುರವ ||5||

ಶುದ್ಧಕಬದ್ದೆಂಬ ಬುದ್ಧಿಹೀನನ ಮೇಲೆ ಹೊಯ್ಯಲೊ ಡಂಗುರವ

ಸಿದ್ಧಿಸಿ ಬಹಿಷ್ಕಾರ ಗುದ್ಯಾಡುವ ಮನುಜಗೆ ಹೊಯ್ಯಲೊ ಡಂಗುರ ||6||

ಲಿಂಗಪೂಜೆಗಿಂತ ಜಂಗಮಾರ್ಚನೆ ಘನವೆಂದು ಹೊಯ್ಯಲೊ ಡಂಗುರವ

ಲಿಂಗಜಂಗಮರು ಸಂಗಮನೆಸೈಯೆಂದು ಹೊಯ್ಯಲೊ ಡಂಗುರವ ||7||

ಜ್ಞಾನಬಲವಿಲ್ಲದೆ ಸ್ನಾನ ಮಾಡಿದರೇನೆಂದು ಹೊಯ್ಯಲೊ ಡಂಗುರವ

ಮೀನು ನೀರೊಳಗಿರ್ದು ನೀರಿನ ಒಲವರಿಯದೆಂದು ಹೊಯ್ಯಲೊ ಡಂಗುರವ ||8||

ಕಲಿಧರ್ಮವೆಂಬರು ಕಲಿತಗಾಣಗಳೆಂದು ಹೊಯ್ಯಲೊ ಡಂಗುರವ

ಬಲು ದುಡ್ಡಿನಾಶೆಗೆ ಛ;ಬೊಡರೆಂತೆಂದು ಹೊಯ್ಯಲೊ ಡಂಗುರವ ||9||

ರೊಕ್ಕದಾಶೆಗೆ ದೈವಧಿಕ್ಕಾರ ಮಾಳ್ಪರೆಂದು ಹೊಯ್ಯಲೊ ಡಂಗುರವ

ಸೊಕ್ಕಿದ ಖಳನಂತೆ ದಿಕ್ಕುಗೆಟ್ಟಿರುವರು ಎಂದು ಹೊಯ್ಯಲೊ ಡಂಗುರವ ||10||

ಸಂದ್ಯಾಗ ತಿಂದರು ಮುಂದಾಗಿ ಲಂಚವ ಎಂದು ಹೊಯ್ಯಲೊ ಡಂಗುರವ

ಬಂಧನ ಬಹಳ ಮುಂದೆ ಹಂದ್ಯಾಗಿ ಬಂದರೆಂದು ಹೊಯ್ಯಲೊ ಡಂಗುರವ ||11||

ಕಟ್ಟಿಮನಿ ಮಸ್ಕಿಯಲಿ ತಿಟ್ಟ ಹುಟ್ಟಿಸಿದನೆಂದು ಹೊಯ್ಯಲೊ ಡಂಗುರವ

ಶೆಟ್ಟಿ ಬಿಟ್ಟನು ಕ್ರಿಯಾ ಭ್ರಷ್ಟ ತಾನಾದನೆಂದು ಹೊಯ್ಯಲೊ ಡಂಗುರವ ||12||

ಎಲ್ಲ ದೈವದ ವಸ್ತಿಯಿಲ್ಲದ ಬಹಿಷ್ಕಾರ ಹೊಯ್ಯಲೊ ಡಂಗುರವ

ಬಲ್ಲಿದತನವಿಲ್ಲದೆಲ್ಲರ ಕಳಕೊಂಡು ಹೊಯ್ಯಲೊ ಡಂಗುರವ ||13||

ಗಣದ್ರವ್ಯ ಕಸಗೊಂಡು ತೃಣದಷ್ಟು ತಿನಬಾರದೆಂದು ಹೊಯ್ಯಲೊ ಡಂಗುರವ

ಶುನಿ ಜನ್ಮದೊಳು ಬಂದು ದಣಿದುಣ್ಮದೆ ಹೋದನೆಂದು ಹೊಯ್ಯಲೊ ಡಂಗುರವ

ಇದಕೆ ಸಾಕ್ಷಿಯುಂಟು :

ಮಕ್ಷಕಸ್ಯಾಂಘ್ರಿ ಮಾತ್ರೇಣ

ಗಣದ್ರವ್ಯಾಪಹಾರಕಃ

ಶ್ವಾನಯೋನಿ ಶತಂ ಗತ್ವಾ

ದುಃಖಮಾಪ್ನೋತಿ ಸಂತತಂ ||14||

ನೀತಿ ಬಿಟ್ಟವನು ಪಾತಕವ ತೊಟ್ಟನೆಂದು ಹೊಯ್ಯಲೊ ಡಂಗುರವ

ಜಾತಿ ಸೂತಕನು ಜನ್ಮರಹಿತ ಜಂಗಮವನರಿಯನೆಂದು ಹೊಯ್ಯಲೊ ಡಂಗುರವ ||15||

ದೇವ ನೀರಲಕೆರೆ ತಕ್ತನೂರ್ನೆಂಟನೆಂದು ಹೊಯ್ಯಲೊ ಡಂಗುರವ

ವರ ಜಂಗಮ ಸ್ಥಾಪಿತ ಗುರುವೆಂದು ಹೊಯ್ಯಲೊ ಸಂಗುರವ ||16||

ವಾಘ್ರಕಂಥೆ ಯೋಗಿ ಶೀಘ್ರದಲಿ ಸಾರಿದನೆಂದು ಹೊಯ್ಯಲೊ ಡಂಗುರವ

ಜಾಗ್ರದಲಾಲಿಸಿ ಜಗ ಮೆಚ್ಚಲೆಂತೆಂದು ಹೊಯ್ಯಲೊ ಡಂಗುರವ ||17||

ಸಾವಿರದಿಪ್ಪತ್ತೊಂದಕೆ ಆಶ್ರಯ ತಾನೆಂದು ಹೊಯ್ಯಲೊ ಡಂಗುರವ

ಓವಿನಿಂ ನಡೆದಪ್ಪದಾಶ್ರಯ ಕರ್ತನೆಂದು ಹೊಯ್ಯಲೊ ಡಂಗುರವ ||18||

ಅಮರಗುಂಡದ ಕರ್ತಸಾವಿರ ದೇವನೆಂದು ಹೊಯ್ಯಲೊ ಡಂಗುರವ

ಸುಮನಸರಿಂ ವಂದ್ಯ ದ್ಯುಮಣಿ ಪ್ರಕಾಶನೆಂದು ಹೊಯ್ಯಲೊ ಡಂಗುರವ ||19||

ಚಪ್ಪನ್ನ ದೇಶದೊಳು ಒಪ್ಪಿ ಸಾರಿದನೆಂದು ಹೊಯ್ಯಲೊ ಡಂಗುರವ

ತಪ್ಪದಿಪ್ಪತ್ತೊಂದು ನುಡಿ ಮೇಲೊಂದು ಹೇಳಿದ ಹೊಯ್ಯಲೊ ಡಂಗುರವ ||20||

ಎಲ್ಲರಿಗೆ ಅನುಕೂಲ ಬಲ್ಲರ್ಗೆ ಹಿತತೋರಿ ಹೊಯ್ಯಲೊ ಡಂಗುರವ

ಇಲ್ಲದುದ ಉಂಟೆನಿಸುವ ಖುಲ್ಲನ ಬಾಯ್ಮೇಲೆ ಹೊಯ್ಯಲೊ ಡಂಗುರವ ||21||

ಸುಳ್ಳಲ್ಲವೀ ಸಾಕ್ಷಿ ಎಲ್ಲರೂ ಕೇಳಿರೆಂದು ಹೊಯ್ಯಲೊ ಡಂಗುರವ

ಸುಳ್ಳೆಂದವನ ಬಾಯಿಗೆ ಮುಳ್ಳೂರಿದಂತಿದು ಹೊಯ್ಯಲೊ ಡಂಗುರವ ||22||

ಆರಿಗೆ ಮೊರೆ ಇಡುವೆನಯ್ಯ

ಮಾರಹರನೆ ಮರ್ತ್ಯಕೆ ಮಳೆಗರೆಸೊ ||ಪ||

ಬಾಡಿತು ಬೆಳೆಸೆಲ್ಲ ಬರಗಾಲ ಬಂದಿತು

ಬಡವರು ಬಳಲ್ಯಾರು ಉಸಿರು ಬೆನ್ನಿಗೆ ಹತ್ತಿ

ಮಡದಿ ಮಕ್ಕಳ ಮಾರಿಕೊಂಡು ಮರ್ತ್ಯವೆಲ್ಲ

ಕಡೆಗಾಣವೆಂದು ಕ್ರಮಗಟ್ಟು ನೀ ಜಡಿದು ಸೋನೆಗರಿಸೊ ಜಗವರಕ್ಷಿಪನೆ ||1||

ಮೇರೆದಪ್ಪಿ ಮೂರು ಮಾರ್ಗವ ಕೆಡಿಸಿತು

ಬಾರನು ಮಳೆರಾಜ ಬಾಯಿ ಬಿಟ್ಟಿತು ಲೋಕ

ದೂರ ದಿನವು ಸತ್ಯರು ಅಡಗ್ಯಾರು

ಮಾರಿ ಬಂದೈತೆ ಮರುಗ್ಯಾರು ಜನವೆಲ್ಲಾ

ನಿವಾರಿಸಿ ನೋಡಲಿ ಬ್ಯಾಡ ಒಲಿದು ಮಳೆ ಸುರಿಸೊ ||2||

ಹೊನ್ನಿಗೆಮ್ಮನ ಮಾರಿ ಹೋಯಿತೆಂದು ನಂಬಿದ್ದೆವು

ಬೆನ್ನಟ್ಟಿ ಬಿಡದಯ್ಯ ಬೆಂದ ದಿನಮಾನ

ಅನ್ನ ಕಾಣದೆ ಅಲೆದು ಕಷ್ಟಪಟ್ಟಾರು

ಮುನ್ನಿರ ಹಿರಿಯರು ಮುಂಚೆ ಗೆದ್ದರು ದೇವಾ

ಇನ್ನಾರಿಗೆ ಮೊರೆ ಇಡುವುದು ಇಳವು ಮಳೆಗಾಲ ||3||

ಗತಿಗೆಟ್ಟಿತು ಈ ಲೋಕವೆಲ್ಲಾ ಗಂಗಾನ ಕಾಣದೆ

ಹಿತವಿಲ್ಲವೆಂಬೋ ಮಣಿಹವಿಲ್ಲದ ಕಾಲಕ್ಕೆ

ಯತಿ ಮುನಿಗಳೆಲ್ಲ ಎಣಿಸ್ಯಾಡುತಿರ್ದರು

ಮತಿವಂತರು ಹೀನತ್ವರಾದಂತೆ ಮನಿಮನಿಗೆ ಯಾಚಿಸಿ

ಸುತ ನಾ ಮೊರೆಯ ಕೇಳಿ ಸುರಿಸೋ ಮಳೆಗಾಲ ||4||

ಹಿರಿಯರು ಕಿರಿಯರು ನೆರೆ ಬಂದ ಮುದುಕರು

ಬರಿದೆ ಚಿಂತೆಯ ಮಾಡಿ ಬಳಲಿದರು ಅಳಗುಂದಿ

ಇರುವೆ ಮೊದಲು ಆನೆ ಕಡೆ ಸರ್ವ ಜೀವನದ ಕರ್ತನೆ

ಪರ್ವನ ನುಡಿಗೇಳ ಪಂಚಮುಖ ದೇವಾ

ನೀ ಜರಿದು ನೋಡಲು ಬ್ಯಾಡ ಜಡಿದು ಮಳೆ ಸುರಿಸೋ ||5||

ಇರಬ್ಯಾಡಂಥವರೊಳು ಅತಿ ಸ್ನೇಹ

ಮರೆತಾದರೂ ಒಮ್ಮೆ ಮನ ಮಾಡದಿರು ಮನವೇ ||ಪ||

ನೆರೆ ನಂಬಿಗೀಲಿ ಹೀನ ನೆನಸುವರೊಳು ಬ್ಯಾಡ

ಪರಸತಿಯ ನೊಲಿಸುವನ ಪ್ರಾಂತದಲಿರಬ್ಯಾಡ

ಸಿರಿಯ ನೆಚ್ಚಿ ಶಿವನ ಮರೆತವರೊಳು ಬ್ಯಾಡ

ಹರಗುರು ನಿಂದಕರ ಹಾದಿಗೆ ಹೋಗಲಿ ಬ್ಯಾಡ ||1||

ಆಡಿ ತಪ್ಪುವಂಥವಗೆ ಆಶೆ ಮಾಡಲಿ ಬ್ಯಾಡ

ಚಾಡರ ಸ್ನೇಹಕ್ಕೆ ಕಿವಿ ಚಾಟು ಕೊಡಬ್ಯಾಡ

ನೀಡುವ ದಾನ ನಿಲ್ಲಿಸುವರೊಳು ಬ್ಯಾಡ

ಬರಿದೆ ಕೇಡೆಣಿಸುವಂಥರೊಳು ಬ್ಯಾಡ ||2||

ಕಟ್ಟಿದ ಕೆರೆಭಾವಿ ಕೆಡಿಸುವವರೊಳು ಬ್ಯಾಡ

ಖೋಟಾ ಮಾನವರ ಕೂಡಾ ಸ್ನೇಹವು ಬ್ಯಾಡ

ಪಾಠಕರ ನಡೆನುಡಿ ಪಾಠ ಮಾಡಲಿ ಬ್ಯಾಡ

ನಾಟಿಸೀಮೆಯ ಕಲ್ಲು ಕೆಡಿಸುವರೊಳು ಬ್ಯಾಡ ||3||

ನ್ಯಾಯ ಅನ್ಯಾಯವ ಮಾಡುವರೊಳು ಬ್ಯಾಡ

ಹೆಣಗಾಡಿ ದಣಿಸುವವರೊಳು ಬ್ಯಾಡ

ಬಲಿಯ ಗಾಣಕ್ಕೆ ಬಿದ್ದ ಘಾತಕರೊಳು ಬ್ಯಾಡ

ಹಾಲಿನೊಳಗೆ ವಿಷ ಬೆರೆಸುವರೊಳು ಬ್ಯಾಡ ||4||

ವೀರಶೈವರ ಕೂಡ ವಿರೋಧತನ ಬ್ಯಾಡ

ಆರು ಅಕ್ಷರದಿಂದ ಹಾದಿ ಇಲ್ಲವೆನಬ್ಯಾಡ

ಮೂರು ಕಣ್ಣಿನವನಿಂದ ಮುಕ್ತಿಯಿಲ್ಲೆನು ಬ್ಯಾಡ

ನಗರ ಪರ್ವನ ನುಡಿ ಪುಸಿಯೆನಬ್ಯಾಡ ||5||

ಅಲ್ಲದವರಿಗೆ ಮಾಡಿದುಪಕಾರ ಎಲ್ಲಾರು ಕೇಳಿರಣ್ಣ

ಕಲ್ಲು ಸಕ್ಕರೆ ಜೇನು ಕತ್ತೆಗೆ ಮೇಯಿಸಿದರೆ

ಕಾಳಗಕೆ ತೇಜ ಆದೀತೇನಯ್ಯ? ||ಪ||

ಉತ್ತಮಗ ಮಾಡಿದುಪಕಾರ

ಹೆತ್ತಪ್ಪ ಹಾಲು ಸಕ್ಕರೆಯ ಕೊಡಯೆತ್ತಿ ಕುಡಿದಂತೆ

ಏಕವಾಗಿರುವರು ಸತ್ತಲ್ಲಿ ಸಾಯ್ವರು

ಪ್ರತಿಷ್ಠೆ ಮಾಡಿದಾತನು ನರಕವು

ಬಿಡದವರ ವಂಶಕ್ಕೆ ಕಷ್ಟವಾಗ್ಯದ ಮುಂದೆ ಕೇಳಿರಣ್ಣ ||1||

ಬಲ್ಲಾತಗೆ ಮಾಡಿಬಿಟ್ಟ ಉಪಕಾರ

ಬಿಲ್ಲ ಝೇಂಕರಿಸಿದಂತೆ ಕೇಳಿರಣ್ಣ ||2||

ಅಲ್ಲಿ ರಾಮರ ಬಾಣದಂತವರ ಪಾಶಕ್ಕೆ

ಮಲ್ಲಿಕಾರ್ಜುನನು ಮೆಚ್ಚುವ ಕೇಳಿರಣ್ಣ ||3||

ಅನ್ಯ ಮನುಜಗೆ ಮಾಡಿದುಪಕಾರ ಚೆನ್ನಾಗಿ ಕೇಳಿರಣ್ಣ

ಚೆನ್ನಗಾವಿನ ಹಾಲು ಕುಜಿ ಎರೆದಾರ

ಖಿನ್ನವಾಗುವುದು ಮುಂದ ಕೇಳಿರಣ್ಣ ||4||

ಸಾಧು-ಸತ್ಪುರುಷರಿಗೆ ಮಾಡಿದುಪಕಾರವು

ಸಾಧ್ಯವಾಹುದು ಸ್ವರ್ಗವ ಕೇಳಿರಣ್ಣ

ಈ ಧರೆಯೊಳು ಪುರುವನ ವಿಸ್ಮಯ ರೂಪನ

ಶಿವಪಾದಕ ನುಡಿದುದು ಕೇಳಿರಣ್ಣ ||5||

ಎಂದೆಂದು ನಿಮ್ಮ ಅಡಿದಾವರೆಗೆ ಹೊಂದಿದೆನಯ್ಯ

ಚಂದನ ಬಯಸಿ ಚಕೋರ ಉಂಡಾಡುವಂತೆ ||ಪ||

ಗರುಡ್ಡಿ ಕುಠಾರದ ಹುಳವು ಕಚ್ಚಲಾಗಿ ಕುರುಡಿಯಾದಂತೆ

ಕರುಣೆ ನಿಮ್ಮದು ಮರೆಯದೆ ನಡೆದರೆ ಕೀರ್ತಿ ಮಸಿ ಮಾಡುವುದೆ ||1||

ಕಸ್ತೂರಿ ಪಂಕಜಾತರ ಕಣ್ಣು ನಯನ ಮೂರ್ತಿಗೆ

ವಸ್ತಾದಿ ನಿನ್ನೊಳು ದುಂಬಿ ನಾನೊಲಿದು ಬಂದುಂಡಾಡುವೆನು ||2||

ಮೋಹ ಪರುಷವ ಹೊಂದಿ ಪಾವನವಾದಂತೆ

ಕಾಹದೇವರ ದೇವ ನೀ ಸೋಂಕಿದ ಜನ್ಮ ಮುಕ್ತನಾದೆ ||3||

ಮುಳ್ಳು ಚಿಪ್ಪಿನೊಳು ಸ್ವಾತಿಹನಿ ಮುತ್ತಾದಂತೆ

ಮಳ್ಳಪರುವನ ಹೃದಯದಿ ಶಿವನು ಬೆರೆದಂತೆ ||4||

ಎನ್ನ ನೀ ಬಿಡದಿರು ತಾಯೆ

ಪ್ರಸನ್ನಳಾಗಿ ಬಂದು ಕಾಯೇ ||ಪ||

ಪಂಚ ಮುಖನೊಡಗೂಡಿ ಪ್ರಪಂಚವಿಲ್ಲದೆ

ಪಂಚ ಪರುಷದ ಕಣಿ ಪರಮಕಲ್ಯಾಣಿ

ವಶವಲ್ಲದ ಸಿಂಹವಾಹನ ಏರಿ ಖಡ್ಗದಿ

ದುಶ್ಮಾನರನೆಲ್ಲ ತರಿದಿಟ್ಟಿ ದೂಸರ ಮುಟ್ಟಿ ||1||

ಕಾಲ ಭೈರವಿ ಕಾಸೆ ಚಲ್ಲಾಣಿ ತ್ರಿ

ಶೂಲವ ಪಿಡಿದ್ಹೋರಿದಲ್ಲಾಣಿ

ಕಾಲ ಕರ್ಮಂಗಳ ಖಂಡಿಸಿ ರುಂಡ

ಮಾಲೆಯ ಧರಿಸಿ ಮಲೆತ ಮಲ್ಲರ ಮರ್ದಿಸಿ ||2||

ಭವಾನಿ ಗೌರಿ ಶಂಕರ ತ್ರಿ

ಭವನಕೆ ಅಧಿಕ ಭಯಂಕಾರಿ

ಆವಾವ ಕಾಲದಿ ಅಭಯ ಹಸ್ತವನಿಟ್ಟು

ಪವಾಡ ಗೆಲಿಸಮ್ಮ ಪ್ರತಿಪಾಲಿಸಮ್ಮ ||3||

ಛಪ್ಪರ ದೇಶದೊಳಾಡಿ ನಿನ್ನ

ಶಿಪ್ಪಾಳ ಶಿರಸಂಗಿ ನೋಡಿ ವಶ

ವಪ್ಪ ಪರುವಾಗೆ ವರವು

ಚಿಂಪಾಲು ತುಪ್ಪ ಸಕ್ಕರೆ ತುಂಬಿಕೊಡು ಜಗದಂಬೆ ||4||

ಎನ್ನಮ್ಮ ಕಲ್ಲು ಬಿಡೇ ಈ ಧೋತರ

ಚೆನ್ನಾಗಿ ತೊಳೆಯಬೇಕು ||ಪ||

ಉಟ್ಟ ಧೋತರ ಮಾಸ್ಯಾವೆ ಮನಸೀಗೆ

ಕೆಟ್ಟ ಕರ್ಮಗಳುಂಟೆ

ಮುಟ್ಟಿ ಅಪ್ಪಳಿಸಿ ಲೋಲಾಡಿ ತೊಳೆಯಲಿ ಬೇಕೇ

ನೀಲಕುಂತಳೆ ಕಲ್ಲ ಬಿಟ್ಟು ಕಡಿಗೆ ನಿಲ್ಲೇ ||1||

ವೇದವನೋಡಬೇಕೋ ಈ ಮನಸಿನ

ಕ್ರೋಧವ ಕಳೆಯಬೇಕೋ

ಕ್ರೋಧ ಮತ್ಸರವೆಂಬ ಕಪಟವಳಿದು

ಯೋಗದೊಳಗೆ ಲೋಲಾಡಿ ತೊಳೆಯಬೇಕೋ ||2||

ಅಲ್ಲಮ ಪ್ರಭು ಸ್ವಾಮಿಯ ಸೇವೆ ನಾನು

ಆಲಸ್ಯವನು ಮಾಡದೆ

ಕೋಲು ಪಿಡಿದು ದ್ವಾರಪಾಲನಾಗಿರುವೆ

ಚಂದ್ರಶೇಖರನ ಪ್ರಸಾದ ಪರುವಗೆ ಬೇಕೋ ||3||

ಎನ್ನಯ ಶ್ರೀಗುರುವೆ ಸ್ವಾಮಿ ಬನ್ನಿಕಾಯಿ

ಎನ್ನಯ ಅಪರಾಧಗಳತ್ತ ದೂರ ಕಾಯಿ ||ಪ||

ತಂದೆ ತಾಯಿ ಬಂಧು ಬಾಂಧವರನೆಲ್ಲ ಕಾಯಿ ಎನಗೆ

ಹೊಂದಿದ ದೋಷವ ಕಡೆಗೆ ಹೀರಿಕಾಯಿ

ಕುಂದು ಕೊರತೆ ಇಲ್ಲದಂಗ ಬಾಳಿಕಾಯಿ ಮನದ

ಸಂದೇಹ ಸಟೆ ಮಾಡು ಸರ್ವಚಿಂತಿ ಕಾಯಿ ||1||

ಅಂಗದ ಅವಗುಣಕ್ಕೆಲ್ಲ ಜಾಜಿಕಾಯಿ ಗುರು

ಲಿಂಗಸುಖದೊಳು ಮುಚ್ಚುವ ಹತ್ತಿಕಾಯಿ

ಕಂಗಳತ್ರಯ ಎನ್ನ ಮನದ ಕಾರಿಕಾಯಿ ಅಂತ

ರಂಗದಿ ಅಮೃಯ್ಯಗೆ ಎರೆದ ಕಾಯಿ ||2||

ಪರಧನ ಪರಸತಿ ಬಹು ದೋಷ ಕಾಯಿ ಎನ್ನ

ನೆಗೆದು ಅಪ್ಪಿಕೊಂಡಿರುವ ಪ್ರಾಣದರಸ ಕಾಯಿ

ಅರೆಮರೆ ಇಲ್ಲದ ಕಾಕ ಸಂಗಿ ಕಾಯಿ ಮುಂದೆ

ಗರಸುರ ದೇವರ್ಕಳೊಪ್ಪಿದ ಮುಕ್ತಿಕಾಯಿ ||3||

ಎಣೆಯಿಲ್ಲದ ಅಪರಾಧ ಕಡಲೆ ಕಾಯಿ ದೈವ

ಹೊಣೆಯಿಲ್ಲದ ಕೀರ್ತಿ ಬೆಳವಲ ಕಾಯಿ

ಅಣಕವಾಡುವರ ಹಲ್ಲು ಜಾನಿಕಾಯಿ ಎನ್ನ

ಹಣೆಬರೆಹ ತಿದ್ದಿಡುವಂಥ ಕರುಣಿ ಕಾಯಿ ||4||

ವಾಸ ಮಾಡಿದವನ ಸೂತ್ರದಾಟ ಲಿಂಗದಕಾಯಿ ಸುತ್ತ

ದೆಸೆಗೆಟ್ಟು ಆಡುವ ಮಹೇಂದ್ರ ಜಾಲಿಕಾಯಿ

ಬಸವಾದಿ ಪ್ರಮಥರಿಗೆಲ್ಲ ಪಿಳ್ಳಿಪಿಸಿರಿ ಕಾಯಿ ಚಲುವ

ಶಶಿಧರ ಪರುವಗೆ ಹೊಂದಿದ ಹೆಸರು ಕಾಯಿ ||5||

ಎನ್ನೊಳಗೆ ನೀನು ಲಿಂಗಯ್ಯ ನಾನು ಭಿನ್ನ ಭೇದಗಳಿಲ್ಲಾ

ವಿವರಿಸಿ ನೋಡಲು ಪನ್ನಂಗ ಭೂಷಣ ಆದವನ್ಯಾರೋ ||ಪ||

ಮಾತನಾಡುವರ‍್ಯಾರೋ ಲಿಂಗಯ್ಯ ಮಾತ ಕೇಳುವರ‍್ಯಾರು

ಭೂತ ಪಂಚಾಕ್ಷರಿ ಧಾತು ಪಂಜರದೊಳು ಜ್ಯೋತಿ ಸ್ವರೂಪ ಆದವನ್ಯಾರೋ ||1||

ಜೀವಿಯೆಂಬುವರ‍್ಯಾರೊ ಲಿಂಗಯ್ಯ ನಿರ್ಜೀವಿಯೆಂಬುವರ‍್ಯಾರು

ಜೀವಭಾವದೊಳು ಭಾವಿಸಿ ನೋಡಲು ಕೇವಲ ಮೂರುತಿ ಚೈತನ್ಯನಾದವನ್ಯಾರೋ ||2||

ಅಪ್ಪನು ನೀಯೆನಗೆ ಲಿಂಗಯ್ಯ ಒಪ್ಪಿದ ಮಗ ನಾನು

ಎಪ್ಪತ್ತೇಳು ಉಪ್ಪರಿಗೆಯ ಮೇಲೆ ಕರ್ಪೂರ ನಿಜಗಾತ್ರ ಅಪ್ಪ ನಿರಂಜನ ನೀನೋ ||3||

ಎಲ್ಲರ ಸರಿ ಎನ್ನಬಹುದೇ ಗುಡಿ

ಕಲ್ಲುಲಿಂಗಕ್ಕೆ ಬರೋಬರಿ ಅಹುದೇ ||ಪ||

ಬೆಟ್ಟವೆಲ್ಲ ಪರ್ವತಗಿರಿಯೆ ಕೆರೆ

ಕಟ್ಟೆ ತುಂಬಿ ಹರಿಯಲು ಭಾಗೀರಥಿ ಸರಿಯೇ

ಹುಟ್ಟಿದ ಜನರೆಲ್ಲ ದೊರೆಯೆ| ಪರುಷ

ಮುಟ್ಟಿದ ಲೋಹವು ಕಬ್ಬಿಣ ಸರಿಯೆ ||1||

ಮಲೆ ಎಲ್ಲ ಶ್ರೀಗಂಧಕ್ಕೆ ಈಡೆ

ಜಲ ಸಾಗರ ಸವಿ ನೀರಿಗೆ ಜೋಡೆ

ಬೆಲೆ ಹೆಣ್ಣು ಗರತಿಗೆ ತಾಡೆ ಸಿಟ್ಟು

ನಿಲಿಸಿದ ಮಹಿಮರಿಗೆ ಜನರೆಲ್ಲ ಹರುಡೆ ||2||

ಹೋಮಕ್ಕೆ ಸರಿಯೆ ಒಲೆಗಳು

ಕಾಮಧೇನುವಿಗೆ ಸರಿಯೆ ಜಗದ ಗೋವುಗಳು

ಈ ಮಹಿಮೆಯ ವಿಸ್ತರಿಸಿ ಹೇಳಿದ

ನಗರ ಪರುವ ನುಡಿಯೊಳು ||3||

ಎಷ್ಟು ಬಣ್ಣಿಪೆ ಕಷ್ಟ ಪ್ರತಾಪಕ್ಕೆ

ಸೃಷ್ಟಿಗಧಿಕ ಹಲಕರಟೆಯಾ ಶರಭ ||ಪ||

ತುಂಗ ವಿಕ್ರಮ ಕಾಶಿ ಸರ್ವಾಂಗ ಭಸಿತವ ತಾಳಿ

ಮುಂಗಯ್ಯ ಹಲಗೆಯು ರಂಗು ಮಿಂಚುವ ಖಡ್ಗ

ಹಿಂಗದ ಬಿಲ್ಲುಬಾಣವ ತೊಟ್ಟು ಝೇಂಕರಿಸಿ

ಅಂಗ ಮುಂಗೈಗೆ ರುದ್ರ ಕಂಕಣ ಕಟ್ಟಿ

ಮುಂಗಾಲು ಮೇಲುಲಿವ ಜಂಗು ಬಾವಲಿ ಪೆಂಡಿ

ಶೃಂಗಾರವಾದನು ಕಾಲ ರುದ್ರಾವತಾರ

ಕಂಗಳಲಿ ಕಿಡಿ ಸೂಸಿ ಕಾರ್ಬೊಗೆ ಎದ್ದು ಕೂಗುತ

ಜಂಗುಳಿದೇವನ ಗಂಡನೈ ಖಂಡ್ಯ

ಈಶ್ವರ ನುರಿಯಲಿ ರಂಗು ನೇತ್ರದಿ ಬಂದನು

ಆರ್ಭಟಸಿ ಜುಂಜುಗೆದರಿ ನಿಂದನು

ತ್ರಿಜಗವನು ಅಂಘ್ರಿಯಲೊರೆಸುವೆನೆಂದನು

ಕಡಲೇಳು ತಾ ನುಂಗಿ ಕಳೆವೆನೆಂದನು

ವೈರಿಗಳ ಮೇಳುಲ್ಲಂಘಿಸಿ ನಡೆ ತಂದನು

ಕಂಗಳು ಮೂರುಳ್ಳ ಹಿಂಗದ ವರವಿಟ್ಟು ||1||

ನಡೆಯಲು ಮಾರ್ತಾಂಡ ಪೊಡವಿಯು ಹೊರಳಿತು

ನಡುಗಿ ಕೂರ್ಮನು ಹೆಡೆ ಬಾಗಿ ಶೇಷನು

ಅಡಿಯಿಟ್ಟರೆ ಕರಿಘಟೆ ಶಿರದೂಗಿ ಕೂಗುತ

ಬಿಡದೆ ಸಪ್ತ ಶರಧಿ ಬಡಿದಾಡಿ ಸೂಸುತ

ತುಡಕುತ ಭಗ್ಗನವು ಪೊಡವಿಗೆ ಇಳಿದಾವು

ಖಡೆ ಖಡೆನುತಲಿ ಝಡಿದು ತ್ರಿಶೂಲದಿ

ಸಿಡಿಲಿನ ಮರಿಯಂತೆ ಅಡರಿದ ರಣದೊಳು

ಕಡಿದೊಟ್ಟಿ ತಾ ನಡೆದಾನು

ಆಹವಕ್ಕೆ ದಕ್ಷನ ಶಿರ ಹೊಡೆದು ಆಹುತಿ ಕೊಡುವ

ರಣವೆದ್ದು ಆರ್ಭಟಿಸಲು ಜಗವನು

ಚಂದ್ರನ ವಡಲನ್ನೊದ್ದು ದ್ವಿಭಾಗವ ಮಾಡಿ ||2||

ಇಂದ್ರನಲಂಘಿಸಿ ಒಂದು ಹಲ್ಲನೆ ಮುರಿದು

ಅಂಧಕಾಸುರನ ಕೊಂದು ಸರ್ರನೆ ಸೀಳಿ

ಒಂದಕ್ಕೆ ತಿರುಗುತ ಚಂದ್ರ ಬೀಗದ ಹೊಡೆದು

ನಿಂದು ಜವನನ ಹಲ್ಲು ಸಂದು ಸಂದನೆ ಮುರಿದು

ಬಮದಳು ಪಾರ್ವತಿ ತಂದೆಯ ಪ್ರಾಣವ ಪಡೆಯಲೆಂದು

ಆಂದಿಗೆ ದಕ್ಷಗೆ ಕುರಿದಲೆಯನಿಟ್ಟನು

ಅಂದು ಅಸುರರ ಶಿರಮಾಲೆಯ ಧರಿಸಿದಾ

ನಂದೀಶ ಬಂದು ಕಂದನಯೆತ್ತಿಳುಹಿದ

ವಿಘ್ನೇಶನಿಂದು ತಂದೆಯ ಪಾದಕೆ ಎರಗಿದ

ನಾಲ್ವರ ಮ್ಯಾಲೆ ತಂದು ಹೂಮಳೆಗರೆದಾ

ಅಸುರರ ಬಾಡಿಂದ ಕಟ್ಟಿಹಾಕಿದ

ಹಲಕರಟ್ಟೀಶನೆಂದು ಮೆರೆದ ಶರಭ ಇಂದು

ಪರಬ್ರಹ್ಮನ ಕಂದ ಪರವನ ಮನೆದೇವ ಶರಭ ನಿನ್ನ ||3||

ಏನು ಕೆಟ್ಟೆಲೋ ನೀಚ ಯತಿಗಳಿಗೆ ಕುಹಕತನ ಮಾಡಿ

ಮನ ಗಾಣಕ್ಕೆ ಬಿದ್ದಂತೆ ಮಿಡಕು ಅದರಂತೆ ||ಪ||

ಹಿಡಿ ಕೊಡುವೆ ಶಾಪ ಕೊಟ್ಟವ ಋಷಿ ವಿಧಿ ನೀನು

ಹೊಡತಲೆ ಮಿತ್ತಾಗಿ ಯುದ್ಧ ಬರಲಿ ಹೆರೆ ಹಿಂಗದಿರಲಿ ||1||

ಅಡವಿ ಹೊಕ್ಕರೆ ನಿನ್ನ ಅದೃಶ್ಯ ಮಾಡಲಿ ಬ್ಯಾಡ

ಬಿಡದ ನೆಲಕಿಟ್ಟು ಒರೆಸಲಿ ಬೆಂಕಿ ಬೆರೆಸಲಿ ||2||

ಶೂನ್ಯ ಮಾಡಿರಿ ಎಮಗೆ ಸರ್ವ ಶೂನ್ಯ ನಿಮಗಾಗಲಿ

ಆನೆ ನುಂಗಿದ ಬೆಳವಲ ಕಾಯಗೊಳಿಸೆನ್ನ ||3||

ಕೊಂದ ಕೊಲೆಗಳು ನಿಮಗೆ ಹಿಂದ್ಹತ್ತಿ ಬಾಹೋದು ಸಹಜ

ಕಂದರ‍್ಪ ಬೆರಿಕಾಯ ಕರುಣಿ ಪ್ರಸನ್ನಾ ||4||

ಪಟ್ಟಕ್ಕೆ ಹೂಡಿ ಪಾದರಾಕ್ಷಿಯಲಿ ಮರ್ದಿಸಿ ಅವನಾ

ಕೊಟ್ಟು ಕೂಡಿಸಿರಿ ಕುಲದಿಂದ ಹೊರಗ ||5||

ಅನ್ನ ಉಂಡವರ ಕೈಯಾ ಅನ್ಯಾಯ ಮಾಡಿದಿಯೊ

ತೊನ್ನ ಬಡಿಯಲಿ ನಿನ್ನಂಗ ತೊಲಗು ಮಾನಭಂಗಾ ||6||

ಪನ್ನಂಗಧರನಾಣೆ ದಂಗಾಗಿ ಬೀಳು ನೀನು

ಗನ್ನಘಾತಕ ನಿನಗಾಗಿ ನಿಮ್ಮ ಗರ್ಭಿಣಿ ಹೋಗಾ ||7||

ಬಂದ ದುರಿತಗಳು ಎಲ್ಲಾ ಬಯಲು ಮಾಡೊ ಪರವಾನ

ತಂದೆ ಅಲ್ಲಮನ ಹೊಂದಿ ಈ ತನುವಿನ ಬಂದೆ ||8||

ಏನೂ ತಿಳಿಯದ ಎಡ್ಡ ಮೂರ್ಖಮಾನವ ನಾನು

ಭೀಮಶೇಖರಗೆ ಬಾಯ್ದೆರೆದೆ ಮುಂದರಿಯದೆ ||ಪ||

ಅನ್ಯಾಯವನು ಹೇಳಿ ಅನಾದಿಗಳ ಬಾಯ್ಬಡಿದು

ಹೊನ್ನುಗಳಿಸಿದೆ ನನ್ನ ಹೊಟ್ಟೆ ಗುಣದೆ

ತನ್ನ ನಾಲಿಗೆ ತಪ್ಪಿ ಆಡಿ ಅರಮನೆಯೊಳು

ಬೆನ್ನು ತೊಗಲು ಕೆತ್ತಿಸಿಕೊಂಬ ಬೆಡಗು ನಾನರಿಯೆ ||1||

ಬಲ್ಲಿದನೆಂದು ಬಡವರ ಮೂಲೆಗೊತ್ತಿದೆನು ನಾನು

ಎಲ್ಲ ವಿತ್ತವ ಅಳಿದು ಮನೆಯ ಕಟ್ಟಿದೆನು

ಮಲ್ಲಿಕಾರ್ಜುನ ದೇವನೊಲಿದು ಸಂತಾನ

ವಿಲ್ಲದಂತಹ ವಿಪರೀತ ಮಾಡಿದ್ದು ನಾನರಿಯೆ ||2||

ಹೆರವರ ಹೆಂಡಿರ ಕಂಡು ಹಿರ್ರನೆ ಹಿಗ್ಗಿದೆನು

ಮರುಳಾಗಿ ಮನ ಸೋತು ಮಾತನಾಡಿಸಿದೆ ನಾ

ಸುರರ ಕೈಯಿಂದ ಧರೆಗಿಳಿದು ಪಾಪಕ್ಕೆ

ನರಕಕ್ಕೆಳಸುವ ನಡತೆಯ ನಾನರಿಯೆ ||3||

ಹೆಂಡಿರು ಮಕ್ಕಳು ಬಂಧುಗಳು ಘನವೆಂದು

ಕಂಡಾಂಗ ಆಡಿದೆ ಕಾವರ ದಿನದಲ್ಲಿ

ಅಂಡಲೆವ ದೋಷಕ್ಕೆ ಅನ್ನ ಕಾಣದೇ ಬಡ

ರಂಡಿ ಮನೆಯ ಹಿಂಡಿ ಬೋಳಿಸುವ ನಡತೆಯ ನಾನರಿಯೆ ||4||

ಇಂತಿಂಥ ತರ್ಕವನು ಕಂತುಹರ ಮಾಡಿದನು

ಪಂಥವನು ಅಳಿದು ಪಾವನನಾದೆ

ಸಂತೋಷದಿಂದೆನ್ನ ಸಲಹು ಪರುವನ ಮನದ

ಭ್ರಾಂತಿ ಬಿಡಿಸುವವನಾದ ರಾಚೋಟಿ ಶರಭ ||5||

ಏನು ಬಂದೆಲೇ ಪ್ರಾಣಿ ಯಮ ಬಾಧೆ ಪಟ್ಟಣಕ್ಕೆ

ನಾನಾ ಯೋನಿಯಲಿಂದ ತೊಳಲಿ ಬಳಲಿ ||ಪ||

ಹೊಲಗೇರಿಯೊಳಗೊಂದು

ಎಲುಬಿನ ಗುಡಿ ಕಟ್ಟಿ ನೆರವಿನ ಬೆನ್ನು ಕಟ್ಟ ಬಿಗಿಬಿಗಿದು

ತ್ರಿಮಲ ಕೀಟಕದೊಳಿರೆ ಉರಿ ರಕ್ತವನು ಸೆಳಕೊಂಡು

ಕುಲ ಅಲ್ಲದಲಿ ಬಂದು ಕೂಡಿ ಉಣ ಬಂದಿ ಪ್ರಾಣಿ ||1||

ತಂದೆ ತಾಯಿಗಳೆಂಬೊ ಬಂದೀಖಾನೆ ಹಾಕಿ

ಮಂದಿ ಮಕ್ಕಳನ್ನೆಲ್ಲ ತೆಕ್ಕೆಕೊಳ್ಳ ಹಾಕಿ

ಕಂದ ಸತಿಸುತರ ಕಾಲು ಸಂಕೋಲೆ ಹಾಕಿ

ನಿನ್ನ ಕೊಂಡೊಯ್ಯವಾಗ ಅಡ್ಡ ಬಂದು ಬಿಡಿಸುವರ‍್ಯಾರು ಪ್ರಾಣಿ ||2||

ಇಂದು ನಾಳೆಯೆಂಬೊ ಆಶೆ ಹಂಬಲವನಳಿದು

ಇಂದೀಗೆ ಮೋಕ್ಷ ತೋರಿ ತೋರಿ

ಚಂದ್ರಶೇಖರ ಅಲ್ಲಮ ಪ್ರಭುವಿನ ಪಾದಕ್ಕೆ

ಬಂದು ಬಂದಾದಾಗಲೇ ತಿಳಿಯುವದು ಪ್ರಾಣಿ ||3||

ಏನು ಬೇಡುವೆ ಕೊಡವೆ ನೀಡ್ಯಾಡಿ

ತನು ಕನಕ ಪುತ್ಥಳಿ ನಿನ್ನ ಕಾಂತನನೊಡಗೂಡಿ ||ಪ||

ಶಂಭುಗೆ ಪಡಿ ಹೊನ್ನು ಪರವಿನಾಚಿಗೆ ಕೊಟ್ಟ

ಇಂಬಿಟ್ಟು ಚನ್ನಿಗೆ ಪತಿಯ ಪ್ರಾಣವ ಕೊಟ್ಟ

ಕುಂಭಿನಿಯೊಳಗಿಳಿ ಹೊನ್ನ ಮಳೆಯ ಚೋಳಗೆ ಕೊಟ್ಟ

ನಂಬಿದ ಅರ್ಜುನಗೆ ಐರಾವತವ ಇಳಿಬಿಟ್ಟ ||1||

ಇಂದು ವಾಹನ ಹಸ್ತ ನಾರಿಮಣಿಗೆ ಕೊಟ್ಟ

ಬಂದ ಕಾಮನ ಸತಿಗೆ ಬೇಡಿದ ವರವ ಕೊಟ್ಟ

ಮಂದಾಕಿನಿಗೆ ಕಾರ್ತಿಕ ಮಗನ ತಂದಿಳಿಬಿಟ್ಟ ||2||

ಓಲಗದೊಳು ಭೃಂಗಿಗೊಲಿದು ಕಾಲನೆ ಕೊಟ್ಟ

ಲಾಲ ಹನುಮನ ಪಡೆದು ಬಲುದಾದ ಮಗನ ಕೊಟ್ಟ

ತರಿಗಳೆದ ತನುಜನಿಗೆ ಕರಿದಲೆಯನ್ನಿಟ್ಟ

ಪಾಲಿಸಿದ ಪರುವಗೆ ಪರಮ ಪದವಿಯ ಕೊಟ್ಟ ||3||

ಏನು ಮಾಡಿದರೇನು ಮಾನವಾ ನೀ ನಿಶ್ಚಯದಲಿ ಧ್ಯಾನ

ಶ್ರೀಗುರು ರಾಯ ನಿಮ್ಮ ದಯವಿರದನಕ ||ಪ||

ರಾತ್ರಿ ಇಲ್ಲದೆ ಜ್ಯೋತಿ ರಮ್ಯ ಮಾಡಿದರೇನು

ಸೂತ್ರ ಇಲ್ಲದ ಗೊಂಬೆ ಶೃಂಗರಿಸಲೇನು

ನೇತ್ರ ಇಲ್ಲದ ಜನರು ನೆರೆದು ನೋಡಿದರೇನು

ತುಸು ಮಾತ್ರ ಮೆಚ್ಚದಂತೆ ಅರಸು ಮಂಡಿಸಲೇನು ||1||

ಬರೆ ಕಣ್ಣು ಮುಚ್ಚಿ ತಪಸ್ಸು ಬಸಕ ಧ್ಯಾನ ಮಾಡಿದರೇನು

ಮಲೆತು ಮದ ಎಂಟು ಮುರಿಯದವ ಜ್ಞಾನಿಯೇನು

ಹಲವ ನೋಡದೆ ಪರರ ಲಲನೆಗೆ ಪೋಪಾತ ನೀನು

ಮನ ಮುಟ್ಟಿ ಅರಗಿಳಿಯ ಮಾತಾಡಲೇನು ||2||

ಪುರುಷನೊಲಿಯದಿದ್ದ ದಿವ್ಯ ಪುತ್ಥಳಿ ಬೊಂಬೆ ಇದ್ದರೇನು

ಪರಿಮಳವಿಲ್ಲದ ಗಂಧ ಧರಿಸಿದರೇನು

ಪರುಷ ಹೊಂದಿ ಲೋಹ ಪಾವನವಾದಂತೆ

ಪ್ರಭು ಪರ್ವಗೆ ಪ್ರಸನ್ನ ಬಂದಾ ದಯದಿಂದಾ ||3||

ಏನು ಹೇಳಲಿ ನಿಮ್ಮ ಮಹಿಮೆಯ

ಅಜ್ಞಾನಿಗೆ ಪ್ರತಿಫಲ ಸ್ವಾಮಿ ||ಪ||

ಹಲವು ಚಿಂತೆಯ ಭ್ರಾಂತ ನಾನು

ಅನುಕೂಲವಾಗಿ ನಡೆಸುವೆ ನೀನು

ಛಲದಿಂದ ಮಕ್ಕಳು ಚಂಡು ಬುಗರಿಯ ಬೇಡಿ

ನೆಲಕೆ ಬೀಳಲು ಎತ್ತಿ ನೇವರಿಸಿ ಕೊಟ್ಟೆಯಯ್ಯ ||1||

ಜಗಳವ ತರುವೆನು ನಾನು ಬಲು

ಬಗೆಬಗೆಯಲಿಂದ ಗೆಲಿಸುವೆ ನೀನು

ಮಗನೇನು ಅರಿಯದವ ಮರ್ತ್ಯಕ್ಕೆ ಬಂದನೆಂದು

ಸಲಹಿದಿ ರಾಜ್ಯದಿ ಪ್ರಭುವಿನ ಮಗನೆಂದು ||2||

ಪಾಷಂಡಿ ಪಾಮರ ನಾನು

ಸ್ವಪ್ನಸನ್ನೆದೋರುವಿ ನೀನು

ಏಸೇಸು ಜನ್ಮದಲಿ ಎಣೆಕೆಯಿಲ್ಲದಪರಾಧ

ನಾಶ ಮಾಡಿ ನೀ ನಂಬಿಕಗೆ ಕೊಟ್ಟೆಯಯ್ಯ ||3||

ಪಂಚಪಾತಕನು ಹೀನ ನಾನು

ಪ್ರಪಂಚವಿಲ್ಲದೆ ಹಿಡಿಯೋ ನೀನು

ಸಂಚರಿಸುವ ಮನದ ಸಂದೇಹ ಸಟೆಮಾಡಿ

ಪಂಚ ಪರುಷ ಪದವಿಯಲ್ಲಿ ಇಡಯ್ಯ ||4||

ಸೋಮವಾರ ಅಮವಾಸ್ಯೆ ಛಟ್ಟಿಯ ದಿನ

ನೇಮಿಸಿ ತುರಾಯಿ ನೀ ಇಟ್ಟೆ

ಕಾಮಿತ ಫಲವ ದೇವ ಕರುಣಿಸು ಸೂಗೂರಯ್ಯ

ಪ್ರೇಮದಿಂದಲಿ ಕೊಟ್ಟ ಪರುವಗೆ ಕೈಯ ||5||

ಹೇಗೆಂದು ಹೇಳಲಿ ಇನಿಯ ಬಂದನು

ಅನುಮಾನ ಆಡಿ ಅಭಯ ಹಸ್ತವಿಟ್ಟು ನೋಡಿ ||ಪ||

ಕಿಡಿಗಣ್ಣ ಕೆಂಜೆಡಿ ಕೀರ್ತಿ ಪ್ರಚಂಡಕನಯ್ಯ

ಖಡ್ಗ ಕನ್ನಡಿ ಕಾಶಿ ಕಾಲ ಕರ್ಮದ ಗಂಡ

ಒಡೆ ಮುರಿವ ಮೀಸೆ ದೋರ್ದಂಡ

ಒಡರಿಸಿ ನಿಳಯಕೆ ಬಂದನಯ್ಯ ||1||

ಬಿಲ್ಲು ಬಾಣ ಚಕ್ರ ಬಿರುದಿನವತಾರ ಎದೆ

ಝಲಕ ಅಸುರ ದಕ್ಷಸಂಹಾರ

ಕೊಲ್ಲಾಪುರದ ಮಾಯಿ ಗೆಲಿದಂಥ ಶೂರ ನಮ್ಮ

ಎಲ್ಲರ ಸಲಹಲಿ ಬಂದನುದ್ಧಾರ ||2||

ಗಂಭೀರ ನಡಿಗಡಿಗೆ ಮದಗಜ ಪುಂಡ ನಮ್ಮ

ಶಂಭು ಶಂಕರನೊಳು ಸೆಣೆಸುವರ ಗಂಡ

ಸಂಭ್ರಮ ಸಿಡುಕಿನಾ ಸುಂದರ ರೂಪಿಂದ ಬಹು

ತುಂಬಿದಾ ನದಿಯಂತೆ ತುಡುಕುತಲಂದಾ ||3||

ರವಿ ಶಶಿಯಂತೆರಡು ರಂಜಿಪ ನಯನ

ಕಿವಿಯಲಿ ಬಂಡೆ ತ್ರಿಭುವನ ಹೊತ್ತವನ

ಸವಿ ನುಡಿ ಪ್ರವೀಣಾ ಸತ್ಯ ಸಂಜೀವನಾ ಎನಗೆ

ವಿವರಿಸಲಳವೆ ಕಾಣೆನಿಂಥವನಾ ||4||

ಎಷ್ಟೆಂದು ಯವನ ಸಂಗಕೆ ಶಾಪ

ದೃಷ್ಟ ಮೂರತಿ ದುರ್ಬೀನ ಕುಲದೀಪ

ನಿಟ್ಟಂದ ನಗರ ಪರುವನ ರಕ್ಷಿಪ ನಮ್ಮ

ಕೊಟ್ಟದ ರಾಚಗೆ ಮಾಡಿದ ಬಿನ್ನಪ ||5||

ಏನೇನು ಜಾತಿ ನನಗಿಲ್ಲ

ಮಾನಾಭಿಮಾನದಾಧಾರ ನೀನೆ ಎಲ್ಲ ||ಪ||

ಸತ್ಯ ಮಾರ್ಗದಿಲಿಟ್ಟು ಸಲಹೊ ಕರ್ತನು ನೀನು

ಉತ್ತಮನೆನಿಸು ಹಿತವ ವಸ್ತಾದಿ ನೀನು ||ಅ.ಪ||

ಅತಿ ಸ್ನೇಹ ಗತಿ ಸರ್ವರೊಳು ಆಗಿರುವೆ ನೀನು

ಪಿತ ಮಾತೆಯರಿಗೆ ನೀನಯ್ಯ

ಗತಿ ತಪ್ಪಿದರೆ ಬಂದು ಧೈರ್ಯ ಪೇಳುವ ನೀನು

ಹಿತದಿಂದ ತಲೆಗಾಯುವಾತನು ನೀನು ||1||

ಯಾರು ಹೇಳಿದರೂ ಆಧಾರ ನೀನು

ದೂರು ಕೇಳುವಾತ ನೀನು

ವಾರಿಧಿಗಧಿಕ ಉದ್ಧಾರ ನೀನು

ಬೇರೆ ಸ್ವಾತಂತ್ರ್ಯ ಎನಗಿಲ್ಲ ಸರ್ವ ನೀನಯ್ಯ ||2||

ತೃಣವ ಪರ್ವತ ಮಾಡಿ ತೋರಿ ನಡೆಸುವಾತ ನೀನು

ಸೆಣೆಸುವ ನಿಂದಕರ ಶಿಕ್ಷೆ ಮಾಡುವಾತ ನೀನು

ಬಾಳಿ ದಣಿದವರ ಬೆನ್ನಿಗೆ ಬಳಲುವಾತ ನೀನು

ಪರುಷದ ಖಣಿ ಎಂದು ಕೈ ಎತ್ತಿಸಾರುವ ಬಿರುದು ನೀನಯ್ಯ ||3||

ಅಳಿವಿಲ್ಲದ ದೀಪ ಅನಂತ ರೂಪನು ನೀನೆ

ಬೆಳಗಿಗೆ ಬೆಳಗಾಗಿ ಬೆಳಗುವಂಥ ನಿಜ ರೂಪ ನೀನೆ

ತಿಳಿಗೊಳದೊಳು ಘನ ತಿಂತಿಣಿಯ ಸ್ವರೂಪ ನೀನೆ

ಅಳವಲ್ಲದ ಮಹಿಮನೆ ಪರುವನ ಒಳಹೊರಗಾಡುವ ವಸ್ತಾದಿ ನೀನಯ್ಯ ||4||

ಏನೇನು ಭೀತಿ ಎನಗಿಲ್ಲಾ

ಎನ್ನ ಮಾನದಭಿಮಾನದಾಧಾರ ನೀನೆ ಅಯ್ಯಾ ||ಪ||

ಸತ್ಯ ಮಾರ್ಗದಲಿಟ್ಟು ಸಲಹೊಕತ್ರ್ತನು ನೀನೆ

ಉತ್ತಮರು ಧ್ಯಾನಿಸೆ ಒಳಿತು ತೋರುವಾತ ನೀನೆ

ಅತಿ ಸ್ನೇಹ ಸರ್ವರೊಳು ಆಗಿರುವಾತ ನೀನೆ

ಕಾಯ ಸತ್ತರೆ ಜೀವಕ್ಕೆ ಸ್ವರ್ಗದಲಿ ನೀನೆ ||1||

ಒಪ್ಪಿ ಕಾಯ್ದ ಗುಡಿಯ ಒಳಗಿರುವಾತ ನೀನೆ

ಗೋಪ್ಯ ಸೂತ್ರವ ಪಿಡಿದ ಸರ್ವ ಗಾರುಡಿಗ ನೀನೆ

ಅತಿ ಪ್ರೀತಿಯಲಿ ಕುಣಿಸಿ ಆಡಿಸುವಾತ ನೀನೆ

ಛಪ್ಪನ್ನ ಚದುರ ನೀನೆ ಅಯ್ಯಾ

ಆಟ ತಪ್ಪಿದರೆ ಒಂದು ಕಾಯ್ವಾತ ನೀನೆ ||2||

ಯಾರು ಹೇಳಿದರೂ ದೂರು ಕೇಳ್ವಾತ ನೀನೆ

ವಾರುಗಧಿಕ ಮಮದ್ವಾರ ವಸ್ತಾದಿ ನೀನೆ

ಬ್ಯಾರೆ ಸ್ವತ್ರಂತ್ರ ನಾನಲ್ಲಯ್ಯ

ಹರಿವ ನೀರಿಗೆ ಕಾಷ್ಠ ಎದುರೇರಿಸುವಾತ ನೀನೆ ||3||

ತೃಣ ಪರ್ವತ ಮಾಡಿ ತೋರಿ ನಡೆಸುವ ನೀನೇ

ಸೆಣೆಸುವ ನಿಂದಕರ ಶಿಕ್ಷೆ ಮಾಡುವ ನೀನೆ

ದಣಿದು ಬೆನ್ನಲಿ ಬರುವಾತನೆಂದೆನಿಸುವಿ ನೀನೆ

ಎಣಿಕೆಯ ಮಹತ್ವ ನೀನಲ್ಲದೆ ಅಯ್ಯಾ

ಪರುಷ ಖಣಿಯೇ ನೀನೆಂದು ಕರವೆತ್ತಿ ಸಾರುವೆನು ||4||

ಅಳವು ಇಲ್ಲದಿಹ ಅನಂತ ರೂಪನು ನೀನೆ

ಬೆಳಗಿಗೆ ಬೆಳಗಾಗಿ ಬೆಳಗುವಂತಹ ನಿಜರೂಪ ನೀನೆ

ಘನ ತಿಂತಿಣಿಯ ಸ್ವರೂಪ ಅಳವಲ್ಲದ ಮಹಿಮ ಅಯ್ಯ

ಅಸಂಖ್ಯ ಪರ್ವನೊಳಗೆ ಆಡುವ ಆ ವಸ್ತು ನೀನೆ ||5||

ಆರಿಗಿ ಶಿವ ಸಿಕ್ಕ ಬ್ಯಾಗ|

ಪರಮ ಯೋಗದಿ ನೆಲೆಸಿದ ಕರಸ್ಥಲದಿನಾಗ ||ಪ||

ಹೆಂಡಿರು-ಮನೆಯ ಮರೆತುಬಿಟ್ಟಾ|

ಕರ್ಮ ಖಂಡಿಸಿ ಕಾಯದ ಕರಣೇಂದ್ರಿಯ ಸುಟ್ಟ

ಕೆಂಡಗಲ್ಲಿನ ರೂಪ ತೊಟ್ಟ

ಅಮೃತ ಗುಂಡಿಗೆಯೊಳು ಪರಶಿವನಳವಟ್ಟ ||1||

ಪುರವನದ ದ್ವಾರವ ಬಿಗಿದು

ಹೊಕ್ಕು ಕೇರಿ-ಕೇರಿಗಳೊಳು ದಶವಾಯು ತೆರೆದು|

ಏರಿದ ಉನ್ಮಾದವರಿದು

ಮಿಗೆ ಮೀರಿದ ಅಷ್ಟಮದಗಳ ಮುರಿದು ||2||

ಪಂಚ ಎಸಳ ಕಮಲ ತೋರಿ

ವರ ಪಂಚಾಕ್ಷರಿ ಎಂಬೋ ಮಂತ್ರ ಜಪಿಸಿರಿ

ಪಂಚ ಭೂತಗಳ ಸಂಹರಿಸಿ

ಪಾದ ಮುಂಚೆ ಇಡಲು ಶಿವನು ದಯಮಾಡಿ ||3||

ಬ್ರಹ್ಮಾಂಡಕಗ್ನಿಯ ಕೊಂಡು

ಬಂದು ಬ್ರಹ್ಮಸ್ಥಾನಕ್ಕೇರಿದ ಭವಹರನ ಕಂಡು

ಧರ್ಮ ಶ್ರೀಗುರುವೆ ಮೈಯುಂಡು

ಪರಬ್ರಹ್ಮನ ಕರದೊಳು ಬೆರೆದು ಮನಗಂಡು ||4||

ಪರಶಿವನ ಆತ್ಮಕ್ಕೆ ಬೇಡಿ

ಮುಂದೆ ಗುರುಶಾಂತನ ಕೂಡಿ ಪವಾಡ ಮಾಡಿ|

ಪರಮ ಮುಕ್ತಿಯೊಳು ಈಡಾಡಿ

ನಗರ ಪರುವನ ನುಡಿಯೊಳು ಶಿವನು ದಯೆದೋರಿ ||5||

ಕಾಯ್ವೆನೆಂಬ ಬಿರುದು ಖರೆಯಾದೆ

ಪಾವನ ಮಾಡಯ್ಯ ಎನ್ನ ಪರಮ ಶ್ರೀಗುರುವೆ ||ಪ||

ಮಳೆ ಬೆಳೆಯಿಂದ ಮರ್ತ್ಯಜೀವನ ಕಾಯ್ವೆ

ಸುಳವು ಸೂಕ್ಷ್ಮವ ತೋರಿ ಸುಜನರ ಕಾಯ್ವೆ

ಅಳವಳಲ್ಲದ ಅನಂತ ಕೋಟಿ ಜೀವನ ಕಾಯ್ವೆ ||1||

ನಂಬಿದವರ ಬೆನ್ನು ನಾನಾ ತೆರದಲಿ ಕಾಯ್ದೆ

ಸಂಭ್ರಮದಲಿ ಸತ್ಯಶರಣರ ಕಾಯ್ವೆ

ಎಂಭತ್ನಾಲ್ಕು ಲಕ್ಷ ಜೀವನ ಕಾಯ್ವೆ

ಇಂಬಿಟ್ಟು ಈರೇಳು ಭುವನವ ಕಾಯ್ವೆ ||2||

ಆಶೆಯನಳಿದು ನಿರಾಶೆಯಲಿರ್ಪರ ಕಾಯ್ವೆ

ಸಾಸಿರ ಮುಖದಲಿ ಸವಿದುಂಡು ಕಾಯ್ವೆ

ಭಾಸುರ ಶಶಿಬ್ರಹ್ಮ ಋಷಿಗಳ ಕಾಯ್ವೆ

ರಾಶಿ ದೈವಗಳೆಲ್ಲರ ರಕ್ಷಿಸಿ ಕಾಯ್ವೆ ||3||

ಅಣುರೇಣು ತೃಣಕೆ ಧಣಿ ಆಧಾರನಾಗಿ ಕಾಯ್ವೆ

ಮಣಿಸಿದ್ದ ಮಹಾಮೇರು ಪರ್ವತ ಕಾಯ್ವೆ

ಹೊಣೆಯಾಗಿ ತ್ರಿಭುವನ ಹೊತ್ತಾರೆ ಕಾಯ್ವೆ

ಗುಣಮಣಿ ಸರ್ವರಿಗೆ ಗುರುವಾಗಿ ಕಾಯ್ವೆ ||4||

ಕರ್ಮಕಂಟಕ ದುರಿತ ಖಂಡಿಸಿ ಕಾಯ್ವೆ

ಧರ್ಮದ ಮುಖದಲ್ಲಿ ಧಣಿಯಾಗಿ ಕಾಯ್ವೆ

ನಿರ್ಮಿತ ಪರುವನ ನಿಜವಾಗಿ ಕಾಯ್ವೆ

ಮರ್ಮದಿಂದ ನಿಮ್ಮಡಿಗೆ ವಂದಿಪರ ಕಾಯ್ವೆ ||5||

ಶ್ರೀಗುರುವೆ ನೀ ಕೇಳೊ ಚೆನ್ನಬಸವಣ್ಣ

ಲಿಂಗವಂತರು ನಾವು ಚೆನ್ನಾಗೊ ಕೇಳಿರೆ ||ಪ||

ಗುಂಡದೊಳಗಿನ ನಾರು ಕಂಡವರು ಕಾಲೆದ್ದಿ

ಕುಂಡಿ ಮಂಡಿಗಳೆಲ್ಲವ ಕೂಡೆ ತೊಳೆದು|

ತೊಳೆದಂಥ ಆ ನೀರು ಲಿಂಗಕ್ಕೆ ಮಜ್ಜನವು

ಲೇಸಾಯಿತೇನು ನಿಮ್ಮ ಆಚಾರ ಕುಲುವು ||1||

ಸತ್ತ ಹೋತಿನ ತೊಗಲು ಘಡಿಸಿ ಬುದ್ಧಲಿ ಮಾಡಿ

ಅದರೊಳಗೆ ಗಂಧೆಣ್ಣೆ ಕಸ್ತೂರಿ ತುಂಬಿ

ವಾಸನೆ ಒಳ್ಳೆಯದೆಂದು ಮೂಸಿ ನೋಡಿದರ

ಲೇಸಾಯಿತೆ ನಿಮ್ಮ ಆಚಾರ ಕುಲವು ||2||

ನಾಡ ಎಂಜಲ ತಂದು ಜ್ಯಾಡ ಮಗ್ಗವ ಹೂಡಿ

ಅದರೊಳಗೆ ಕೊಂಬಿsನ ಲಾಳಿ ಆಡಿ|

ಆ ಸೀರಿ ಉಟ್ಟಂತ ಸತಿಯು ಮಂಚಕ್ಕೆ ಕರಿಯೇ

ಲೇಸಾಯೀತೇನಯ್ಯ ನಮ್ಮ ಆಚಾರವು ||3||

ಸತ್ತ ಬಸವನ ತೊಗಲು ಜಡಿಗೆ ಮಿಣಿಮಾಡಿ

ಹೊತ್ತು ಕೊಂಡೊಯ್ದನು ತನ್ನ ಹೊಲಕೆ|

ಉತ್ತಾರಿ ಮಳೆಬಂದು ಸುತಿಸುತ್ತಿ ಹೊಡೆವಾಗ

ಜತ್ತಿಗಿ ಒಳಗಿನ ನೀರು ಬುತ್ತೀಯ ಒಳಗಯ್ಯ ||4||

ಬಣ್ಣದ ಗೊಂಬೆಲ್ಲ ಭೇದಗಳು ತೊಗಲಲ್ಲ

ಕಣ್ಣು ಕಾಣಿಸುವ ತನಕ ಗಿರಿಯೇ|

ಬೆಂಡೆಬೆಂಬಳಿ ಪರವ ಹೇಳಿದಾ ಈ ಮಾತು

ಗಂಡು ಹೆಣ್ಣೆಂಬ ಎರಡು ಕುಲವಯ್ಯಾ ||5||

ಗುಮ್ಮ ಬಂದಾದೇ

ಅಮ್ಮೋಜಿ ಇದ ಕಂಡು ನಾನಂಜುತೀನಿ ||ಪ||

ಕತ್ತಲ ಮನೆಯೊಳಗೆ ಹೊಕ್ಕಾದ ಗುಮ್ಮ

ಕತ್ತೀಯ ಹಿಡಕೊಂಡು ನಿಂತಾದ ಗುಮ್ಮ

ಸತ್ಯಕ್ಕನ ಮನೆಗೆ ಭಿಕ್ಷಕ್ಕೆ ಹೋಗ್ಯಾದೆ ಗುಮ್ಮ

ಹುಟ್ಟೀಲಿ ಹೊಡೆದರೆ ಒಲಿದಿತ್ತು ಗುಮ್ಮ ||1||

ಕಾಲನ್ನ ಮೂಲನ್ನ ಕಾಲಿಲ್ಲೊದ್ದಾರೆ ಗುಮ್ಮ

ಅಘೋರನಾಥನ ಗುಡಿಗೆ ಒಯ್ದಾದೆ ಗುಮ್ಮ

ಅಂಧಕಾಸುರನ ಎದೆ ಮೇಲೆ ಕುಳಿತಾದೆ ಗುಮ್ಮ

ಚಂದ ಚಂದದಲಿ ನಲಿದಾಡೋ ಗುಮ್ಮ ||2||

ಕಾವಿಯ ಲಾಂಛನ ಪೊದ್ದಾದೆ ಗುಮ್ಮ

ನೀರಾನೆ ಹೊತ್ತು ನಿಂತಾದೆ ಗುಮ್ಮ

ಬಾಣಾಸುರನ ಬಯಲು ಕಾದಾದೆ ಗುಮ್ಮ

ಕರೆದರೆ ಯಾತಕ್ಕೆ ಬಾರದೀ ಗುಮ್ಮ ||3||

ಕರ್ಣಕುಂಡಲ ಕಿವಿಗೆ ಇಟ್ಟಾದೆ ಗುಮ್ಮ

ಕೊರಳಿಗೆ ಸರ್ಪನ ಸುತ್ತ್ಯಾದೆ ಗುಮ್ಮ

ನಡು ಮಧ್ಯ ತಂತೀಯ ನುಡಿಸ್ಯಾದೆ ಗುಮ್ಮ

ಶಂಬು ಭೋರಿಟ್ಟು ಬರುತಾದೆ ಗುಮ್ಮ ||4||

ಹುಲಿಯ ಚರ್ಮವನು ಪೊದ್ದಾದೆ ಗುಮ್ಮ

ಉರಿಗಣ್ಣಿನ ಬಾಣ ಬಿಟ್ಟ್ಯಾದೆ ಗುಮ್ಮ

ತರುಳ ಬಾಲನ ಕೊರೆದು ಉಂಡಾದೆ ಗುಮ್ಮ

ಬೆಂಡೆಗಂಬಳಿ ಪರುವಾಗೆ ಒಲಿದಾದೆ ಗುಮ್ಮ ||5||

ಚೆಲ್ವ ಪುಣ್ಯ ಪುತ್ಥಳಿ ಬೊಂಬೆ ಪೂರ್ಣ ದಯಾಳೆ

ಗೆಲ್ವವರದೇವಿ ಪರಿಹರಿಸು ||ಪ||

ಹಸಿವು ತೃಷೆಗಳು ಅಡಗದೆ ಹಗಲಿರುಳು

ದೆಸೆಗೆ ಬಾಯ್ಬಿಡುವರು ದೇವಿ ಕೇಳಮ್ಮ

ಶಿಶುವಿನುಗ್ರದ ತಪ್ಪ ಶೀಘ್ರದಲಿ ಪರಿಹರಿಸು

ಎಸೆಯುವುದು ಸುಕೀರ್ತಿ ತ್ರಿಣಯ ಲೋಚನೆಯೆ ||1||

ಗ್ರಹಣ ಹಿಡಿದ ಚಂದ್ರ ಘಾಸಿಯಾದ ಹಾಗೆ

ಪ್ರಾಣಿಗಳು ಬಳಲಿದವು ಪ್ರತಿಷ್ಠೆ ಮಾಡಮ್ಮ

ಆಣೆ ನಿನ್ನದು ಕೊಟ್ಟು ಆರ್ಭಟವ ನಿಲಿಸಮ್ಮ

ಕೋಣ ಬಂದು ಮೈಲಿಗೆ ಕಳೆಯೇ ಕಾಮಾಕ್ಷಿ ||2||

ಎಲ್ಲ ದೇವರ ದೇವಿ ವಲ್ಲಭೆಯು ವರಮೂರ್ತಿ

ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಸುವರು ಬಹುಜನರು

ಬಲ್ಲ ಭಕ್ತರ ಪ್ರೇಮಿ ಬಡವರಿಗೆ ಬಾಂಧವಿ

ಬೆಂದು ಕುಸಿಯಲಿಲ್ಲದ ಬಿರುದುಂಟು ಮಾಡಮ್ಮ ||3||

ಸತ್ಯವರಗಳ ತೋರಿ ಸಾವಿರ ಮುಖದಲಿ

ನಿತ್ಯದಿ ಸವಿದುಂಟು ನಿಜ ರೂಪದಲಿ ಬಂದು

ಪುತ್ರಗ್ಹಾಕಿದ ಮೃತ್ಯುವನು ಪರಿಹರಿಸು

ಎತ್ತಿದ ಅಭಯ ಹಸ್ತ ವಿಶ್ವಕುಟುಂಬಿ ||4||

ಹುಗ್ಗಿ ಹೋಳಿಗೆ ತುಪ್ಪ ಹೂವ್ವ ಕುಂಕುಮ ನಿಮಗ

ದೀರ್ಘ ಆಯುಷ್ಯ ಕೊಟ್ಟು ದಿವ್ಯಾಂಬರ ಉಟ್ಟು

ಹೆಗ್ಗಳಿಕೆ ಇಲ್ಲದೆ ಇತ್ತು ಪರುವಗೆ ದಯವ

ದೀಘ್ರದಲಿ ಸಲಹಮ್ಮ ಸತ್ಯ ಸಮರ್ಥಿನಿ ||5||

ಜಗದೀಶ ನೀ ಎಂಥ ದೊರೆಯೇ

ಎಂದು ಪೊಗಳುವರು ಬಾ ಮನಿಗೆ ಅಷ್ಟೈಶ್ವರಿಯೇ ||ಪ||

ಸಿಂಧು ಬಲ್ಲಾಳಗೊಲಿದಿ ನೀ

ಉಂಡಾಡು ಶಿಶುವಾಗಿ ಮೊಲೆಗಳ ಸವಿದಿ

ಕೊಂದಿರಿ ಗೊಲ್ಲಾಳನಬ್ಬರದಿ ಅವರ

ತಂದೆಯ ಪ್ರಾಣವ ಕೊಟ್ಟು ನೀ ಮೆರೆದಿ ||1||

ಕಾಳಿದಾಸಗೆ ಕರುಣವಿಟ್ಟು ನೀ

ಆಳಾಗಿ ಮೂಗಳ ಕಣ್ಣವರಿಗೆ ಕೊಟ್ಟಿ

ಬಾಳ ಭಾಷೆಯ ನಂಬಿಗಿಟ್ಟು ಅವರ

ಆಳಾಗಿ ನಿತ್ಯ ಪಡಿಹೊನ್ನು ಕೊಟ್ಟಿ ||2||

ಪಿಟ್ಟವ್ವೆ-ದೋಷಿಗಳಾಗಿ ಕೆರಿಯಾ

ಕಟ್ಟೆಗೆ ಮಣ್ಣ ಹೊತ್ತಂತೆಯಾಗಿ

ತಟ್ಟನೆ ಭಿಕ್ಷಕ್ಕೆ ಹೋಗಿ ಅವರ

ಹುಟ್ಟೀಲೆ ತಿವಿದರೆ ಒಲಿದೆ ನಿಜವಾಗಿ ||3||

ನುಲಿಯಾ ಚಂದನ ಬಿಟ್ಟು ಬಿದ್ದಿ ಎದ್ದು

ಬಲು ಹಿಂದೆ ಹಿಂದ ಹೋದದ್ದು ನಿನ್ನ ಬುದ್ದಿ

ಕಾಲಿಲೆ ಒದ್ದವಗ ಒಲಿದಿದ್ದೀ

ಸಲೆನೆಚ್ಚು ಬೇಡಿದ್ದು ಕೊಡುವೆ ನೀ ಬುದ್ಧಿ ||4||

ಹೆತ್ತ ಮಕ್ಕಳು ನಿನಗವರು ಇದು

ಸತ್ಯವ ಶ್ರಮಬಡಿಸಿ ನೋಡುವರೆ ಹೀಗೆ

ಸತ್ಯವ ಸ್ಥಿರ ಮಾಡೋ ಧರೆಗೆ

ನಿತ್ಯ ಪರವನುದ್ಧಾರ ಬಾರೋ ಮನಿಗೆ ||5||

ತಡೆಯಬಹುದೆ ಎನ್ನೊಡೆಯ ಅಲ್ಲಮ ಪ್ರಭು

ತಡೆಯಬಹುದೆನ್ನ ತಪ್ಪು ನಾಟಿಸುವ ಮುನ್ನ

ಬಿಡುವಡಳಲ್ಲ ಬಿಂಕದ ಬಿರುನುಡಿಗಳು ಸಲ್ಲ

ನಡೆ ಮನೆಗೆ ನಲ್ಲಾ ||ಪ||

ನಗೆಮಾತುಗಳು ಸಲ್ಲಾನು ಸುಳಿಹೋಗುವಳಲ್ಲಾ

ರಂಭೆಯರೊಳಗೆನ್ನ ರತಿಗೆಡಿಸಿದಳು ಮುನ್ನ

ತುಂಬಿತು ದ್ವಾರ ತುಸು ಮಾತ್ರ

ಹಂಬಲದೂರ ಕುಂಭ ನೀರೆ ತುಂಬಿ ನೀರೆಯಂಬುದೋರಿತು

ಬಾರೊ ಕರೆದರೆ ಧ್ವನಿದೋರೋ ಇಳೆಯೊಳಗತಿ ಶೂರ ||1||

ಮಾತಾಪಿತರನ್ನೆಲ್ಲ ಮರೆತೇನು

ಎನ್ನಯ ಪ್ರಾಣನಾಥ ನಿನ್ನಿಂದ

ನಂಬಿದೆ ಮನ ಘಾತಕರಿಂದ ಪತಿಯಾಗಿ ನೀ ಬಂದು

ಪಂಥ ಮಾನಕೆ ತಂದೆ

ಯಾತಕ್ಕೆ ಎನ್ನೊಳು ಮುನಿದೆ ಎಳೆ ಪ್ರಾಯಕ್ಕೆ ಬಂದು ||2||

ಕುಂಜರಾರಿಯ ಮಾನ

ಕುಶಲ ಹಾರವ ತಾಕಿ

ಅಂಜಿ ಬಿದ್ದೆನೋ ಅನಿತರೊಳು ನಿರಂಜನ ಬಂದನು

ಚಂಚಲಾಗದ ಮುನ್ನಾ

ಚೆಲ್ಲವರಿಯಿತು ಮಾನ ನಂಜುಂಡ ನಗರ ಪರ್ವಗೆ ಪರಿದು ||3||

ತಂದು ತೋರೈ ಬಯಸಿದಂತಾ ಭಕ್ತ ಕೃಪಾಂಗ ಚಂದ್ರಮೌಳಿ

ಒಂದು ಚಿತ್ತವಾಗಿರಲಿ ಅಭಯ ಹಸ್ತವಿಡು ಗುರುವೆ ||ಪ||

ಉಕ್ಕಿನ ದರ್ಪಣಕ್ಕೆ ದೃಷ್ಟಿಯಿಕ್ಕಿ ನೋಡುವರೆ ಕೈಯೊಳು

ಸಿಕ್ಕಿದಂತೆ ತೋರು ಶಿವಲಿಂಗ ಪೂಜೆಯೊಳು ನಿಮ್ಮ ಮುಖವಾ ||1||

ಗಿರಿಯ ದೇಗುಲದಿ ನಿಂದು ಕರಿಯಲು ಶಬ್ದಕ್ಕೆ ನೀ

ಮರೆಯದೆ ಕೊಟ್ಟ ತೆರದಿ ಮಾತಾಡು ನನ್ನ ಕರದಲ್ಲಿ ||2||

ಹೆತ್ತವರು ತಮ್ಮ ಶಿಶುವ ಹತ್ತೆ ವಿಡಿದು ನಡೆಸೋ ತೆರದಿ

ಸತ್ಯದಲ್ಲಿ ನಡಿಸು ನೀ ಎನ್ನ ಸರ್ವಲೋಕದೊಳು ಕೈವಿಡಿದು ||3||

ಶರಧಿ ಮಥನದಲ್ಲಿ ಅಮೃತ ಸುರರಿಗೆ ಉಣ ಬಡಿಸಿದಂತೆ

ಕರುಣದಿ ಉಣಿಸಯ್ಯ ಅಮೃತ ಕರದಲ್ಲಿ ನಾ ನಿನ್ನ ಶಿಶುವೆಂದು ||4||

ಭಕ್ತವತ್ಸಲನೆಂಬೋ ಬಿರುದ ಭುವನದಿ ಸಾರುವೆ ಪಂಚವಕ್ತ್ರ

ವರಪುತ್ರ ಪರುವನ ವಾಕ್ಯಕ್ಕೆ ಒಡಗೂಡು ಒಲಿದು ||5||

ತನುವೆಂಬ ಮನಿಯೊಳಗs ನಾರಿ

ತನ್ನ ಇನಿಯsಗ ಮಂಚ ಹಾಕಿದಳೊ

ಗುರುರಾಯ ಕೇಳೊ ||ಪ||

ಒಮ್ಮನ ನಿಷ್ಟಿಲಿಂದ ನಿಶ್ಚಯಿಸಿ ನಿರ್ವಿತಳಾಗಿ

ಗಮ್ಮನೆ ಗುರುವಿನಾಂಘ್ರಿಯ ಪಿಡಿದು ಗಂಡನ ಪಡೆದು

ಹಮ್ಮು ಪಂಥಗಳ ಹರಿದೊಡೆ ಹರುಷಾಬ್ದಿ ಕೂಡಿ

ಬ್ರಹ್ಮಾನಂದದೊಳಾಡಿದಳೊ ಪರಮಾತ್ಮನೆ ಕೇಳೊ ||1||

ಭಕ್ತಿ ಹಾಸಿಗೆಯ ಹಸನ ಮಾಡಿ ಭಾವದಲಿ ಕೂಡಿ

ಮುಕ್ತಿ ತಲಿಗುಂಬು ತಂದಿಡಿಸಿ ಮುಗಿರಾಯನೊಲಿಸಿ

ಶಕ್ತಿ ವಿರಕ್ತಿ ಜರ್ನಶಕ್ತಿ ಈಶ್ವರನ ಕೃಪೆಯಿಂದಲಿ

ಯುಕ್ತಿಲಿ ಮೇಲ್ಕಟ್ಟು ಕಚ್ಚಿs ದಳೊ ಸುರರೊಪ್ಪುವಂತೆ ||2||

ಕಾಲಕರ್ಮಿಗಳು ವಿರಹಿತ ಕಾಲಂ ಜ್ಯೋತಿಯೆ

ಮೇಲು ಮಂಡಲಿಕವಪ್ಪುವಳೊ ಸುರರೊಪ್ಪುವಂತೆ

ಬಾಲಚಂದಿರs ಬೆಳೆದಂತೆ ಬಳಲಿs ಕಾಂತೆ

ಪಾಲಿಸೋ ಪರವನೊಳಾಡಿ ಪರಮಾತ್ಮನ ಕೂಡಿ ||3||

ತಾಯಿ ನಮೋ ನಮೋ ಮಾಯಿ ನಮೋ ನಮೋ

ತಾಯಿ ರತ್ನದ ಬೊಂಬೆ ಕಾಳಮ್ಮ ನಮೋ ನಮೋ ||ಪ||

ಜಗದ ವಿದ್ಯೆಗೆ ಜಾಣೆ ಜಗನ್ಮಾತೆ ಶ್ರೀ ಪಾರ್ವತಿ

ಯುಗಗಳ ಗೆಲಿದ ತಾಯಿ ಕಾಳಿಕಾ ದೇವಿ

ಆಘೆಹರ ಸಿಂಹವಾಹಿನಿ ಅಮೃತ ದಯಾನಿಧಿ

ಆಗರು ಕಸ್ತೂರಿ ಗಂಧ ಅಮ್ಮಾಜಿ ನಮೋ ನಮೋ ||1||

ಶಿರ ಪವಾಡವ ಕೊಂಬಿ ತರಿಸಿ ಪ್ರಾಣವ ತುಂಬಿ

ಅರಸಿ ಚಾಮುಂಡಿ ಹಸ್ತಿಗಮನೆ ನೀನು

ಕರಗಸ ಗಂಡು ಕತ್ತರಿ ಗಂಟಲ ಗಾಣೆಂಬೊ ಶಿರಕೆ

ಉರಿವ ಕೊಂಡೆಗಳ ಸುಟ್ಟ ಉಮೆಯೆ ನಮೋ ನಮೋ ||2||

ಅಸಹಾಯ ಶೂರಳೆ ದೈತ್ಯರ ಅಟ್ಟೆ ಶಿರವ

ಕೊಸರಿ ಚಂಡಾಡಿದಂಥ ಕೋವಿದಳೆ

ದುಸ್ಮನ್ನರಿಗೆ ಮೂಲ ದುಷ್ಕರರಿಗೆ ಎದೆಯ ಶೂಲ

ನೊಸಲು ಉರಿಗಣ್ಣಿನ ನಗಸುತೆ ನಮೋ ನಮೋ ||3||

ಕಾಲಲಂದಿಗೆ ಕಟ್ಟಿ ಸೂತ್ರ ಕಡಗ ಕಂಠಮಾಲಿ

ಬಾಲೆ ಮೂಗುತಿಗೊಪ್ಪುವ ವಜ್ರ ದಾಮಕೂಟ

ತ್ರಿಶೂಲ ಕಂಜರ ಕಾಸೆ ತ್ರಿಜಗವ ರಕ್ಷಿಪಳೆ

ಕಾಲ ಕರ್ಮವಗೆಲಿದ ಕಂಜಾಕ್ಷಿ ನಮೋ ನಮೋ ||4||

ದಿನಕರ ಕೋಟಿ ಪ್ರಭೆಯ ದಿವ್ಯ ರತ್ನದ ಮಣಿಯೆ

ಅನುವಾಗಿ ಐವರ ಜನನಿಯು ನೀನೆ

ಕರಕ ನಿರ್ಮಿತ ಕಂದ ಪರುವಗೆ ವರವ

ಮನಕೆ ಬಂದಷ್ಟು ಕೊಡುವ ಮಾಂಕಾಳಿ ನಮೋ ನಮೋ ||5||

ತಿಳಿಯಬಾರದೇನೋ ಚಿದ್ಘನ ವಿಮಲ ರೂಪನ ||ಪ||

ಕರಿದು ಬಿಳಿದು ಕೆಂಪು ತೋರುವದು ಸೊಂಪು

ಪರಮ ಪಾವನ ಪೀಠದಲ್ಲಿ ತಾನೆರಡು

ಪರಿಪರಿ ಬಂಧುವಿನ ನಿನ ಕಿರಣ ಕೋಟಿಯ ನಡುವೆ

ಪರಮ ಆನಂದದೊಳಗಿರುವ ||1||

ಅಗ್ನಸ್ತಂಭದಿ ಮಧ್ಯ ಅಲ್ಲಿರುವ ಪ್ರಜ್ವಲೆಗೆ

ಅಭೇದ್ಯ ಆಗಮಿಕ ವಿದ್ಯೆ ಆರುಚಕ್ರ ಕಮಲದಳ

ಸಂಜ್ಞೆವಿಡಿದಮೃತವ ಪ್ರಭಾಮಯ

ದಿಗ್ದೆಸೆಯೊಳು ಬೆಳುಗವ ಚಿದ್ಘನ ವಿಮಲ ರೂಪನೆ ||2||

ಸಹಸ್ರ ದಳ ಕಮಲ ಪೀಠದ ಮೇಲೆ

ಸಾವಧಾನ ಸುಶೀಲದಿ ಮೇಲೇರಿ

ಕವಿದು ಲೋಕವೆಲ್ಲ ಪ್ರಜ್ಯೋತಿ ತನ್ಮಯ ಭಾವ

ಕರದೊಳು ತೋರ್ಪ ಪರುವನ ದೇವರೆ ನೀನೆಂದು ||3||

ನಗರೇನು ಈ ಮಾತು ಮೂಜಗದವರು ಕೇಳಿ

ಖಗರಾಜನ ಅಣುಗನ ಅಣ್ಣನ ಶಿರವನು

ಉಗುರಲಿ ಚಿವುಟಿದಾ ಹಗರಣ ಕೇಳಿ ||ಪ||

ಕಡಲಳಿಯಾತನು ಜಾನು ಪೊಡವಿ ಯೋಳಲೆ ಚಲ್ವ

ಮೃಢಹರನ ಅಡಿಗೆರಗಲು ಉರಿಗಣ್ಣಿಂದಲಿ ಸುಡುವದು

ಇದೆಯೇನೋ ||1||

ಶಿರಿಯಾಳ ಚಾಂಗುಳಿಯಾ ತರುಳನೋರ್ವನು ಯೆಂದು

ಕೊರೆದು ಬಾಣಸ ಮಾಡಿ ನಿಜ ಪುರಕೊಯ್ತಂದು

ತಿರುಗಿಸಿದರುಯಂದು ಸುರರೆಲ್ಲರೂ ಕೇಳಿ ||2||

ಓರುಗಲ್ಲಿಗೆ ಹೋಗಿ ಧೀರ ಗಣಪತಿ ಮನಿಯಾ

ನಾರದ ಮುನಿ ಕೂಡ ಚೋರ ಕಾಯಕ ಮಾಡಿ

ಮಾರಹರಗರಣರು ಮೊರೆ ಹೊಕ್ಕರೆಂದು ||3||

ನಿತ್ಯ ಲಕ್ಷದ ಮೇಲೆ ತೊಂಬತ್ತಾರು ಸಾವಿರಕ್ಕೆ

ಭಕ್ಷ ಪಾಯಸ ತುಪ್ಪ ನೀಡಿದ

ಬಸವಗೆ ಕಪ್ಪಡಿ ಸಂಗಮ ನುಂಗಿದನೆಂದು ||4||

ಹೀಗೆ ಎಲ್ಲರು ನೀವು ಭಂಗಿಸಿದಾ ಭಕ್ತರನಾ

ಭಾಗೀರಥಿಯಲಿ ಬಾಗಿಲ ಸ್ಥಿರವೆಂದು

ಗೂಗಲ್ಲು ಗವಿಯೊಳು ಪ್ರಭುರಾಯನೆಂದು ||5||

ನಗೆ ಬರುತಿದೆ ಸಾಂಬ ನಿನ್ನಾಟಕೆ

ಬಹಳ ಬಗೆಯಲಿ ಬಂದು ಎನ್ನ ಭವದ ಬಟ್ಟೆಯ ಬಿಡಿಸೋ ||ಪ||

ನಂಬಿಗೆ ಕುಂಟಾಣಿತನ ಮಾಡಿ ಚನ್ನನ

ಅಂಬಲಿ ಉಣಬಹುದು ಅಲ್ಲದಲ್ಲಿ

ಕುಂಬಾರನ ಮನೆ ಮುಂದೆ ಕುಣಿದಾಡಿ ಕುಚದೊಳು

ಇಂಬಾಗಿ ಪೋ ಎಂದ ವಿಪರೀತ ಮನಕೆ ||1||

ಚಿಕ್ಕವರು ಕಲ್ಲೀಲಿಕ್ಕೆ ಒಲಿದೆ ಗೋವ

ಮಕ್ಕಳಾಗಿ ಬಂದು ಕರುವ ಕಾಯ್ದೆ

ರೊಕ್ಕವ ಕದ್ದು ಮೇಲ್ಹೊಕ್ಕು ಕೊಲ್ಲಿಸಿ ಕುರಿಯ

ಹಿಕ್ಕಿಯೊಳಗೆ ವರವ ಕೊಟ್ಟೆನೆಂಬುದಕೆ ||2||

ಕಟ್ಟಿಗೆ ಮಣ್ಣನ್ನು ಪೊತ್ತು ಭಿಕ್ಷಕ್ಕೆ ಪೋಗಿ

ಪುಟ್ಟೀಲಿ ಇಕ್ಕೀಸಿಕೊಂಬುದು ಋಷಿಯೋ

ಬಟ್ಟಲ ಹಾಲ ಸವಿದು ಪಾರ್ಥನ ಬಿಲ್ಲು

ಪೆಟ್ಟಿಗೆ ಬೆನ್ನು ಕೊಟ್ಟೆನೆಂಬುದಕೆ ||3||

ಬಾಣನ ಬಾಗಿಲು ಕಾಯ್ದ ಬಲ್ಲಾಳಗೆ

ರಾಣಿಯ ಬೇಡುತ ಬಾಣಸವ ಮಾಡಿ

ಗೇಣು ಹೊಟ್ಟೆಗೆ ಬ್ರಹ್ಮನ ಶಿರದೊಳು

ಮೂಜಗವ ತಿರಿದುಂಡೆನೆಂಬುದ ಕೇಳಿ ||4||

ಒಂದೊಂದು ಪರಿಯಲಿ ಒಲಿದು ಭಕ್ತರಿಗೆಲ್ಲ

ಮುಂದೆ ಮುಕ್ತಿಯ ನೀಡುವ ಮೃತ್ಯುಂಜಯ

ಚಂದ್ರಶೇಖರ ಪ್ರಭು ಪರುವನೊಳಗ

ಹೊಂದಿ ಹೋದಾನೆಂಬ ಸುದ್ದಿಯ ಕೇಳಿ ||5||

ನಂಬದಿರು ಸಂಸಾರ ನಮ್ಮದಲ್ಲ ಈ ಕಾಯ

ಶಿವನು ದಿನ ತುಂಬಿದ ಮೇಲೆ ಬಿಡರಣ್ಣ ||ಪ||

ಬಲು ಮೋಹವೆಂಬೋ ಪಾಶಾ| ಬಾ ಹೊಗಾಲನ ಕಟ್ಟಿ ಕೆಡವಿ

ಮೂಲಾದ್ರಿವಾತನ ಅಬ್ಜಿ| ಮುತ್ತು ಉಡಗೈಯಿ ಬಿಗಿದು ||1||

ಮ್ಯಾಲೆ ಮಾತಾ-ಪಿತರೆಂಬೋ ಮುಗದಾಣಿಗಳನಿಕ್ಕಿ

ಯಾಕಾಲಾಗಿಂದಭಿಮುಖವಾಗಿ ಕಾಡತಾರೋ ಮನವ

ನೆಂಟರು ಇಷ್ಟರು ನೆರೆದು ಕಟ್ಟು ಕಾವಲಿದಕೆ ಹೊಂಟು ||2||

ಹೋಗದಂತ ಮೋಹದಿ ಹೊರಳಿ ಕೊಲುವರು

ಎಂಬಾರು ಜನದಿ ಇತ್ತ ನಗರ ಪರುವನ ಶತಕಂಠನ

ಶೃತಿ ನುಗ್ಗಿ ಒಳಗಿಡು ಮನವೆ ||3||

ನಂಬಿದೆ ನಿನ್ನ ಪಾದವ ನಿಟಿಲಾಂಬಕ ರಕ್ಷಿಸು ದೇವರ ದೇವ ||ಪ||

ಒಂಬತ್ತು ನಾಲ್ಕು ಲಕ್ಷದಿ ಪುಟ್ಟಿ ಬರಲಿ

ಶಂಭು ಶಂಕರ ನಿನ್ನ ಸಂಕೀರ್ತಿ ಕೋಟಿ

ಕಂಭ ಸೂತ್ರದಿ ತಂದಿಟ್ಟು ನರ

ಬೊಂಬೆ ಆಡಿಸಿ ಧರೆಯೊಳು ಮನ ಮುಟ್ಟಿ ||1||

ಗುರುಪಾದ ಮನೆಯ ಮಟ್ಟಿ

ಕಿಂಕರ ಮೇಲು ಮಾಳಗಿ ಏಳು ಮುಖದಟ್ಟಿ

ಅರುಹೆಂಬ ಜ್ಯೋತಿ ಕೈಸಾರಿ

ಹರಶರಣರ ನೆರವಿಯೊಳಾಡಿಸು ದಾರಿ ||2||

ಎಲ್ಲಾ ಸೂತ್ರದಿ ಪಿಡಿದಾಡಿ

ಎಲ್ಲರ ಮನದಲಿ ಕುಳಿತು ನೀನೋಡಿ

ಅಲ್ಲಹುದೆಂಬುದ ತಿದ್ದುವ ಎದೆ

ಝಲ್ಲ ಬಿಡಿಸುವ ಗುರುರಾಯ ಕೈ ಪಿಡಿ ||3||

ಆಟದಲಿ ಆಟ ಆಡಲು ಚಂದ್ರ ಚಂದ

ಜೂಟನ ನೆನೆದರೆ ಬರುವುದೆ ಕುಂದ

ಕೆಟ್ಟಪರಾಧ ಬರದು ನಿಮ್ಮಿಂದ

ದಾಟಿಸು ಪ್ರತಿಷ್ಠೆಯ ಎಣಿಸದೆ ||4||

ತಗುಮನ ಹಿಡಿಯೊ ನಿನ್ನಂಶ

ನಿನ್ನ ನೆನೆದವರ ಬೆನ್ನೊಳಿರುವೆ ಮಹೇಶ

ಮನಸಿನಭೀಷ್ಟವಿಟ್ಟು ಈಶ

ಘನ ಮೂರ್ತಿ ಅಪರಂಪಾರ ಪರುವತೇಶ ||5||

ನಂಬಿದೆನಲ್ಲಾ ನಾ ನಾರಿಮಣಿಯ ತೊರೆ ಅಂಬುಜಾಕ್ಷಿ

ಎನ್ನ ಹಂಬಲ ಮರದಾನು ಹ್ಯಾಂಗ ಮಾಡಲೆಮ್ಮ ಅಂಬುಕಾಕ್ಷಿ ||ಪ||

ತಾಳಿ ಕಟ್ಟಿದಾತನವಳೆಂದು ನಾ| ಅಂಬುಜಾಕ್ಷಿ ನಾ ಹೇಳಲಿನ್ನಾರಿಗೆ

ಹೀಗಳಿಯೊಳ್ ಪಂಥ ಅಂಬುಜಾಕ್ಷಿ| ಆಳುವ ಪತಿ ಎನ್ನ

ಅಂಗದೊಳಗೆ ಬಾರಾ| ಅಂಬುಜಾಕ್ಷಿ ನಾ ತಾಳಲಾರೆನು

ಪ್ರಾಯ ತಾಪ ಹೆಚ್ಚಿತು ಕಾಣೆ| ಅಂಬುಜಾಕ್ಷಿ ||1||

ಬೇಕೆಂದು ಮೊದಲಾಗಿ ಸಿಕ್ಕಿದ್ದೆ ತನಗಾಗಿ ಅಂಬುಜಾಕ್ಷಿ

ಎನ್ನ ತೆಕ್ಕೆಯ ನಗಲೊದು ತೇಜವಲ್ಲವೆ ತನಗೆ ಅಂಬುಜಾಕ್ಷಿ

ನಿನ್ನ ವರವೀರನೆಂದೆಂಬ ವಸ್ತಾದಿ ಬರತಾನ ಅಂಬುಜಾಕ್ಷಿ

ಎರಗುವ ಎದುರಿದ್ದು ಏಳೆಂದು ಕೈವಿಡಿದು ಅಂಬುಜಾಕ್ಷಿ

ನಮ್ಮ ನಿರ್ಮಿತ ಪರುವಾಗ ನಿಜ ರೂಪ ತೋರಿದ ಅಂಬುಜಾಕ್ಷಿ ||2||

ನಿತ್ಯ ನಿರಂಜನ ನಿನಗೆ ನಾನೇನೆಂದೆನೊ

ನಿರುತ ತ್ರಿಜಗವರಕರ್ತನೆಂದೆ ||ಪ||

ತರವಲ್ಲಾ ಕುಂಟಣಿತನ ನಿನಗೆಂದೆ

ತಿರುವುತಾ ಹುಟ್ಟೀಲಿ ತಿವಸಿಕೊಂಡವನೆಂದೆ

ಮರಿಯಾದಿಲುಂಡ ಮಾದಿಗರೆಂದೆ

ಸೆರೆಗಾದ ಸೀರೆಯ ಶಿರಕೆ ಸುತ್ತಿದವನೆಂದೆ

ಎಳೆಗರುವ ಕಾಯ್ದವನೆಂದೆ

ಕೊಂದೊಬ್ಬರ ನೇತಿಯಾಗಿ ನಿಂತನೆಂದೆ

ಶಿಶುವಿನ ಕೊರೆದಿಟ್ಟರೆ ಉಂಡೆನೆಂದೆ

ಈ ಪರಿಪರಿಯ ನಿಮ್ಮ ಬಿರುದು ಸಾರುತಲಿದ್ದೆ ||1||

ವಾಣಿಯ ಪತಿಯ ತಲೆಯ ಡೋಗಿಯೊಳು ಉಂಡವನೆಂದೆ

ಬಾಣಾಸುರನ ಬಾಗಿಲ ಕಾಯ್ದವನೆಂದೆ

ಜಾಣೆ ದೊಂಬತಿಗೆ ಜಾತೊಡೆಯರ ಸುತನೆಂದೆ

ಜಾಣನಾ ಕೈ ಸುಟ್ಟವನೆಂದೆ

ಕಾಣುತ ಜಪಮಾಲೆ ಕಳದವನೆಂದೆ

ಹಿಕ್ಕಿಯೊಳಗಿದ್ದು ಕಾಣಿಸಿಕೊಂಡವನೆಂದೆ

ಪರಸತಿಯ ಕೈ ಬ್ಯಾಡೆಂದೆ ||2||

ಕೆಡವಿದ ಪ್ರಾರ್ಥನ ಕೆಳಗೆ ಬಿದ್ದವನೆಂದೆ

ಜಡಿಯನು ಬಿಟ್ಟು ಹೆಡಿಗೆ ಹೊತ್ತವನೆಂದೆ

ಪಡದವರಿಲ್ಲದೆ ಪರದೇಶಿಯಂದೆ

ಬಹು ಕೇಡು ಮುಪ್ಪಿನವನಂದೆ

ಕಲ್ಲಲಿ ಹೊಡೆಸಿಕೊಂಡವನೆಂದೆ

ನಂಬೆಣ್ಣಗೆ ಅಡಪ ಪೊತ್ತವನೆಂದೆ

ಈಗ ಹಿಡಿದವರ ಕಡೆ ಹಾಯಿಸುವ ಹಿತಕಾರಿಯೆಂದೆ ||3||

ಭಿಕ್ಷೆವೆಂದೆನಲು ಬಂದು ನೀಡಿದವನೆಂದೆ

ಆ ಕ್ಷಣದಲಿ ಆರು ಶಿರವ ಪಡದವನೆಂದೆ

ರಾಕ್ಷಸರಾಡುವ ರಥವ ಮುರಿದವನೆಂದೆ

ನಕ್ಷತ್ರ ನಾಮದ ಮುದ್ದಿರಿಯೆಂದೆ

ದಕ್ಷ ಸಂಹರನೆಂದೆ

ದೇಶವೆಂಬೊ ಕುಕ್ಷಿಕುಂಟಣಿ ಎಂದೆ

ಕನ್ನಯ್ಯಗೆ ಮೋಕ್ಷಯಿತ್ತವನೆಂದೆ

ಮೋಕ್ಷವಾಯಿತು ದೊಡ್ಡ ಋಷಿಗಳಿಗೆ ಇನ್ನೆಂದೆ ||4||

ಭಾವ ಮಾವಗೆ ಮೈಗೂಡಿದವನೆಂದೆ

ಸರ್ವಕಾಲಕೆ ನಿಮಗೆ ಸಾವಿಲ್ಲವೆಂದೆ

ಕೋವಿದ ನಿಮಗೊಂದು ಕುಲವಿಲ್ಲವೆಂದೆ

ಕಾಮನ ಕಣ್ಣಿಗೆ ನಿಲುಕದವನಂದೆ

ಈ ಹೂವಿಗೆ ದುಂಬಿ ಎಂದೆ

ಈ ಶರಣರ ಮುದ್ದಿನ ಶಿಶುವೆಂದೆ

ಈ ಪರ್ವನ ಭಾವಭರಿತನೆಂದೆ

ಎನ್ನ ದೇವರ ದೇವಾ ಪ್ರಭು ಶಿಖಾಮಣಿಯೆಂದೆ ||5||

ನೀತಿಯ ತಪ್ಪಿ ಅನೀತಿಯ ನಡೆದವನು ನೀಚ ಹೊಲೆಯ

ಪಂಚ ಪಾತಕವನು ಮಾಡಿ ಪಾತಕಿ ಈಡಾದವನು ನೀಚ ಹೊಲೆಯ ||ಪ||

ಸತ್ಯವ ಕೆಡಸಿ ಅಸತ್ಯವ ನಡೆಸುವ ನೀಚ ಹೊಲೆಯ

ಮತ್ತೆ ಈಡಾದಂತಹವರ ಹರಣಕ್ಕೆ ಮುನಿವನು ನೀಚ ಹೊಲೆಯ

ಕುಟಿಲವು ಉತ್ತಮರೊಳು ಉಗುಳಿಸಕೊಂಬುವ ನೀಚ ಹೊಲೆಯ ||1||

ಉಪಕಾರ ಮಾಡಿದರೆ ಅಪಕಾರ ಮಾಡುವವನು ನೀಚ ಹೊಲೆಯ

ವಿಪರೀತ ಪರಹೆಣ್ಣಿಗೆ ಕಣ್ಣಿಟ್ಟ ಪಾತಕ ನೀಚ ಹೊಲೆಯ

ಜಪತಪ ಪೂಜೆಯ ಮಂತ್ರ ಜರಿವಾತನು ಅತ್ಯಂತ ನೀಚ ಹೊಲೆಯ

ಉಪದೇಶ ತೋರಿದ ಗುರುವಾಜ್ಞೆ ಮೀರಿದಾ ನೀಚ ಹೊಲೆಯ ||2||

ಬಾಲ ಬ್ರಹ್ಮಾಚಾರಿಯ ವ್ರತಗೆಡಿಸೆ ಹೋಪ ನೀಚ ಹೊಲೆಯ

ತನ್ನ ನಾಲಗೆಯಲ್ಲಿ ತಪ್ಪ ನುಡಿದು ಹೋಗುವ ನೀಚ ಹೊಲೆಯ

ಸಾಲವ ಇಸಕೊಂಡು ಸತ್ಯವಾಗಿ ಕೊಡನೆಂಬ ನೀಚ ಹೊಲೆಯ

ಅಕುಲತನ ನಡೆಸುವ ಕೂಡಿ ತಾ ಸಲಿಸುವ ನೀಚ ಹೊಲೆಯ ||3||

ವಾದಿ ಒರಟು ಕುಲವ ಬೆರೆವನಲ್ಲಾ ನೀಚ ಹೊಲೆಯ

ಗುರುಪಾದಕೆ ತೊಟ್ಟ ಪಾಪಾತ್ಮರೊಳು ನೆಂಟಾ ನೀಚ ಹೊಲೆಯ

ವೇದವ ನಿಂದಿಸುವ ಯತಿಗಳಿಗೆ ಕುಂದಿಸುವ ನೀಚ ಹೊಲೆಯ

ಸತ್ಯಸಾಧಕರೊಳಗೆ ಮದ ಸಟೆಮಾತು ಮಾತನಾಡುವ ನೀಚ ಹೊಲೆಯ ||4||

ಚಾಡಿ ಶೂನ್ಯಗಳಿಂದ ಶಬ್ದಗಳ ಕೊಂದನು ನೀಚ ಹೊಲೆಯ

ಬಡದಾಟಕೆ ಹೇಸ ಬಾಜಿಗಾರಿಕೆ ವೇಷ ನೀಚ ಹೊಲೆಯ

ಚಾಡಿಯ ಮಾಡುವ ಛೀ ಛೀ ಎಂದರೆ ಕೇಳದಾ ನೀಚ ಹೊಲೆಯ

ಪೊಡವಿಗೆ ಬಲು ಭಾರ ಪರ್ವನೊಳಗೆ ಪರಮ ನೀಚ ಹೊಲೆಯ ||5||

ನಿನ್ನ ಮಹಿಮೆ ನಿಲುಕದೆನಗೆ ಗುರುರಾಯ

ಪ್ರಸನ್ನನಾಗಿ ಸಲಹಯ್ಯ ಸ್ವಾಮಿ ಗುರುರಾಯ ||ಪ||

ಶರಧಿ ಎಂಬ ಸಂಸಾರಕ್ಕೆ ಗುರುರಾಯ

ಕೆರೆಗಳೆಂಬೊ ಬಿರಿಯು ದಿನವು ಗುರುರಾಯ

ಎರಗುದಪ್ಪಿಸಯ್ಯ ಗುರುರಾಯ

ಧರಿಸು ಹರಕೆಯ ಸೋತೆನಯ್ಯ ಗುರುರಾಯ ||1||

ಎಡಬಲ ನೋಡಗೊಡದು ಗುರುರಾಯ

ಸಿಡಲಿ ಮಿಂಚು ಗರ್ಜನೆಗಂಜಿ ಗುರುರಾಯ

ಮಡದಿ ಮಕ್ಕಳೆಂಬೊ ಬಲೆಯು ಗುರುರಾಯ

ಬಡತನೆಂಬೊ ಸುಳಿಯ ಒಳಗಾದೆ ಗುರುರಾಯ ||2||

ಮುಳುಮುಳುಗಿ ಏಳಲಾರೆ ಗುರುರಾಯ

ಸುತ್ತ ಅಣಕವಾಡುವರ ಕಂಡು ಗುರುರಾಯ

ಹೆಣಗಿ ಹಣ್ಣಾಗಿ ಈಸಲಾರೆ ಗುರುರಾಯ

ಬಹಳ ದಣಿದೆನಯ್ಯ ದಣಿವಿಲ್ಲವೇನೋ ಗುರುರಾಯ ||3||

ಅಂತರಂಗದ ಹರಗೋಲು ಗುರುರಾಯ

ತಂತ್ರವೆಂಬೊ ಹುಟ್ಟು ಅದಕ್ಕೆ ಗುರುರಾಯ

ಪಂಥವಾಗಿ ಪಾಶ ಹಿಡಿಯೊ ಗುರುರಾಯ

ಹಂತಕಾರಿ ಜಗದ ಹೊಳೆಯ ಹಾಯಿಸೋ ಗುರುರಾಯ ||4||

ಚದುರ ಛಪ್ಪನ್ನ ದೇಶಕೆ ನೀ ಗುರುರಾಯ

ಮಧುರವೆಂಬೊ ಮನವ ಸೋಸೊ ಗುರುರಾಯ

ಬೆದರಿದವರ ಬೆನ್ನಕಾಯೊ ಗುರುರಾಯ

ಸದರ ಪರುವಗಿತ್ತು ಗುರುರಾಯ ||5||

ನೀನ್ಯಾರೊ ನಿನ್ನ ದೇಹವಿನ್ಯಾರೊ

ನಾನಾ ಪರಿಯಲಿ ಶಿವ ನೆನಿ ಕಂಡ್ಯಾ ಮನವೆ ||ಪ||

ಅಳಿಯ ಬೀಗನು ಯಾರೊ

ಗೆಳೆಯ ಬಾಂಧವನು ಯಾರೊ

ಕಳೆಯುಳ್ಳ ಜೀವವು ಕದಲಿ ಹೋಗುವಾಗ

ತಳಿಗೆ ಚಂಬು ಸೆಳೆ ಮಂಚ ತಾನ್ಯಾರೊ ||1||

ಮಡದಿ ಮಕ್ಕಳು ಯಾರೊ

ಒಡವೆ ಬಂಗಾರವೇಕೊ

ಹಿಡಿದು ಯಮನವರು ಬಂದು ಎಳಕೊಂಡು ಒಯ್ವಾಗ

ನಡೆವ ಸಂಗತಿಯಲಿ ನುಗ್ಗಾದ ಮನವೆ ||2||

ಹೆರವಿನ ಒಡವೆಗೆ ಯಾಕೆ ಬಂದೆಲೆ ಪ್ರಾಣಿ

ಮಾನವರ ಕಾಲಲಿಲ್ಲಾ ಮತ್ರ್ಯದೊಳಗೆ ಬಂದು

ಪರ್ವ ಹೇಳಿದ ಮಾತು

ಪಂಚಾಯ್ತಿಯವರು ಕೇಳಿ ||3||

ನೀನಾರೊ ನಿನ್ನ ದೇಹವಾರೊ ನಾನಾ ಪರಿಯಲಿ

ಶಿವನ ನೆನೆ ಕಂಡ್ಯಾ ಮನುಜಾ ||ಪ||

ಮಡದಿ ಮಕ್ಕಳು ಯಾರೋ ಒಡವೆ ಬಂಗಾರ ಯಾರೊ

ಪಡೆದ ತಂದೆ ತಾಯಿ ಒಡಹುಟ್ಟಿದವರ್ಯಾರೊ

ಕಡೆಯ ಕಾಲಕೆ ಯಮನು ಎಳೆದು ಒಯ್ವಾಗ

ನಡೆವಾಗ ಸಂಗಡಕೆ ಯಾರಿಲ್ಲೊ ನುಗ್ಗಾದಿ ಮನುಜಾ ||1||

ಗೆಳೆಯ ಬಂಧು ನೆಂಟ ಅಳಿಯ ಬೀಗನು ಯಾರೊ

ಬಳಗ ಭಾಗ್ಯ ಬದುಕು ಭಾವ ಮೈದುನನು ಯಾರೊ

ಒಳ ಪ್ರಾಣನಾಥ ಹೊರ ಹೊಂಟು ಹೋಗುವಾಗ

ತಳಿಗೆ ತಂಬಿಗೆ ಮೂರ್ತಿ ಸೆಳೆ ಮಂಚ ಯಾರೊ ||2||

ಎರವಿನ ಬದುಕಿಗೆ ಏನು ಬಂದೆಲೊ ಪ್ರಾಣಿ

ಮರುಳಾಗಿ ಮಲಹರನ ಮರೆಯದಿರು ಜಾಣಿ

ಪರುವನ ನುಡಿಕೇಳಿ ಪಂಚ ಐವರು ಕೂಡಿ

ಪರಶಿವನೆ ನೆರೆ ನಂಬಿ ಘನ ಪದವಿ ನಿಮಗುಂಟು ||3||

ನೀರು ಕಟೆದರೆ ಬೆಣ್ಣೆ ನಿಜವಾಹುದೆ

ಕ್ಷೀರದೊಳು ಪರಿಪರಿ ಪಂಚ ವರ್ಣಗಳುಂಟು ||ಪ||

ಅನ್ನ ಉಂಡರೆ ಹತ್ತದಲಿ ಹರುಷವಾಗೋದು

ಹೊನ್ನು ಹಸಿದುಂಡರೆ ಹೊಟ್ಟೆ ತುಂಬುವುದುಂಟೆ ||1||

ತರಣಿ ಬಂದರೆ ಪ್ರಭೆ ತಿಳಿವದು ಜಗಕೆಲ್ಲ

ತಾರೆ ಮೂಡಿದರೆಷ್ಟು ತಮವು ಓಡುವುದೆ ||2||

ಹನುಮ ಶರಧಿಯ ಹಾರಿ ಹಚ್ಚಿ ಸುಟ್ಟನು ಲಂಕೆ

ಬಿನುಗು ಕಪಿಗಳೆಲ್ಲ ಬಿಡಿಸುವರೆ ಸೀತೆಯನು ||3||

ಸ್ವಾತಿ ಮಳೆಗೆ ಶಿಂಪು ಬಾಯಿ ತೆರೆದಂತೆ

ಆ ತೆರದಲ್ಲಿ ಶಿವನ ಚರಿಸಿ ನಂಬಲಿ ಬೇಕು ||4||

ನಗರಕೆ ಬಂದೆ ವರವ ನಡೆಸೋ ಜಗದೀಶ್ವರನೆ

ಯುಗ ಹೊಂದಿದೆನಯ್ಯ ವಿಮಲ ಮತಿಗಳ ಬೇಡಿ ||5||

ನೆರೆ ನಂಬಿಕೊಂಡಿದ್ದೆ ನಿನ್ನ ನೇಮಗಾರ ದೇವ ಎನ್ನ

ಕಿರುಕುಳ ಉಪದ್ರವ ಪರಿಹರಿಸು ಕೀರ್ತಿಯೊಳಿರಿಸು ||ಪ||

ಮನದ ಮೈಲಿಗೆಯನ್ನು ಕಳೆದು ಜ್ಞಾನವ ಎನ್ನೊಳು ಬೆರೆದು

ಅನುಮಾನವಿಲ್ಲದೆ ಮಾತಾಡು ಅಂಗಕ್ಕೆ ಕೊಡು

ಚಿನ್ಮಯ ಶ್ರೀ ಗಿರಿಮಲ್ಲಾ ಚಿಕ್ಕಂದಿಲಿ ನೀ ಕೊಟ್ಟಸೊಲ್ಲ

ವನಜೂಟ ಲಿಂಗ ನಡೆಸಯ್ಯ ಒಲಿದೊಮ್ಮೆ ಅಯ್ಯ ||1||

ಮಿಂಚುವ ನಯನಕ್ಕೆ ಮೀರಿ ಮಿಂಚುವಂಥ ಮುಖವ ತೋರಿ

ಪಂಚ ಪುರುಷವಾದಂಥ ಮೂರ್ತಿ ಪಾಲಿಸಿಂದು ಅರ್ತಿಲಿ

ಹೆತ್ತು ಹೊತ್ತು ಎನ್ನ ಹೆರೆ ಹಿಂಗಬಹುದೆ

ಮೋಹನ ಮಂಚವೆನ್ನೆದೆ ಏರೋ ಮಧುರ ಬೀರೊ ||2||

ಸಕ್ಕರಿ ಚಿನಿಪಾಲು ಜೇನು ಸರಿಹೋದಂಥ ನಾಮವನು

ಇಕ್ಕಿ ಎನ್ನಯ ಪ್ರಿಯಾ ಸಲಿಸಿಂದು ಎರಗುವೆ

ಇಕ್ಕಿ ದಯಾಸಾಗರದೊಳು ಇಕ್ಕಿ ನಗರ ಪರವಗೆ

ಮುಕ್ಕಣ್ಣ ಪ್ರಭುರಾಯ ನೀನೊಲಿದು ಮುಕ್ತಿಗೆ ಬೆರೆದು ||3||

ನೋಡುವ ಬನ್ನಿರಿ ಜನರು ಈ ನಮ್ಮ ಕಾಳಬೆಳಗುಂದಿ ವೀರನನ್ನು ||ಪ||

ಮಲ್ಲಗಾಸೆ ಮಡಕೆಸರ ಜಂಗು ಬಾಯಲಿ ಬೊಬ್ಬೆ

ಝಲ್ಲ ಚಕ್ರ ದರ್ಪಣ ಚೂರಿ

ಬಿಲ್ಲುಬಾಣ ಬಿಚ್ಚುಗತ್ತಿ

ಬಿಡದೆ ವರವ ನಡೆಸುವನೆಂದು ಮತ್ತೆರಡು ಆಯುಧ ಮುಂಗೈಲಿ ||1||

ಹಲಗೆ ಕೋ ಎಂದು ಕೋಲ್ಗಳ ಪಿಡಿದಿಹನು

ಕೇವಲ ಪರಶಿವನ ಮೂರ್ತಿಯು

ಕೆಂಗಣ್ಣಿನಿಂದ ಜನಿಸಿದ ಧೀರನಿವನೆಂದು

ದಿಟ್ಟ ವೀರಭದ್ರ ಜನಿಸಿದ ದಕ್ಷನ ಶಿರವ ಕುಟ್ಟಿ ಬಿಟ್ಟ ||2||

ಕುದಿಯುವ ಹೋಮ ಮೆಟ್ಟಿ ಅಗ್ನಿ ಜಿಹ್ವೆಯ ಸೀಳಿದ

ಶ್ರೇಷ್ಠರಾಗಿ ಮೆರೆದವರ ಗಂಡ ನಾನೆಂದು

ತನ್ನ ನಂಬಿ ನೆನೆಯುವ ಭಕ್ತರ

ತಂತ್ರದಿಂದ ಬಿಡದೆ ಬೆನ್ನ ಕಾಯುತ್ತಿಹನು ||3||

ಹೊನ್ನು ಗಂಟೆಯು ಹುಲಿಚರ್ಮ ಹುತ್ತಿನೊಳು ಬೆರೆದ ಮಹಿಮ ನೀನೆಂದು

ತ್ರಿನೇತ್ರನೆಂದೆನಿಸಿದ ಬನದಯ್ಯ ತಾನು

ಒಣ ಮರವ ಚಿಗಿಸಿದ ಆನಂದದಿ

ಎಣಿಕಿಲ್ಲದಾ ವರವು ಹರುಷದಿ ಮನ ಪರುವಗೆ ನಡೆಸುವನೆಂದು ||4||

ನೋಡೆನ್ನ ಗುರುವೇ ಕಣ್ದೆರೆದು

ಎನ್ನ ಕಾಡುವ ರೋಗವ ಬಿಡಿಸು ಮೈ ಬೆರೆದು ||ಪ||

ಕಾಯವ ನಿರಾಳ ನಿಜ ಮಾಡೋ

ಚಿನ್ಮಯ ಚಿದ್ರೂಪ ಎನ್ನೊಳು ಒಡಗೂಡೋ

ಬಾಯಿಂದ ಬೆಸನಯೀಡ್ಯಾಡೋ

ಪ್ರಭುರಾಯ ಪವಾಡ ಪಾರಂಪಾರು ಮಾಡೋ ||1||

ಸಂಜೀವಿನಿ ಸರ್ವಾಂಗಕಿಟ್ಟು

ನಿರಂಜನನೇ ಹಲವು ರೋಗವ ಕಡಿದಿಟ್ಟು

ಅಂಜಿಕೆ ಬಿಡಿಸಿ ಅಭಯ ಕೊಟ್ಟು

ಧನಂಜಯ ನೇತ್ರಕ್ಕೆ ಆಹುತಿ ಕೊಟ್ಟು ||2||

ನಿಂದಕರ ನಿರ್ಧೂಮಾಧಾಮ

ಮಾಡಿ ಹಿಂದಿಟ್ಟುಕೊಂಡೆನ್ನವರ ನಿಸ್ಸೀಮ

ತಂದೆ ಅಸಂಖ್ಯಾತ ಮಹಿಮೆ

ಭರದಿಂದೆ ಕೊಡುವ ಅಪರಂಪಾರು ಅಲ್ಲಮ ||3||

ವರವೆಂಬೋ ಕ್ಷೀರಾಬ್ದಿ ಕೊಟ್ಟು

ನೀ ಸ್ಥಿರವೆಂಬೋ ಹರಗೋಲನ್ನ ಇಟ್ಟು

ಪರಿ ಪರಿ ದೃಷ್ಟವೆ ಉಟ್ಟು

ಹಾಕು ನರಾಸುರಾ ದೇವರ್ಕಳಾಶ್ಚರ್ಯ ಬಿಟ್ಟು ||4||

ಅಂಬಿಗ ನಡೆಸು ಅನುವಿಂದ

ಪೈಗಂಬರಕೊಪ್ಪುವ ಪಾರು ಮಾಡೋ ಚಂದಾ

ಕುಂಭಿನಿವರ ಕೃಪೆಯಿಂದಾ

ನಿನ್ನ ನಂಬಿದ ಪರ್ವನ ಮನದಾನಂದ ||5||

ಪಾಲಿಸಯ್ಯ ತಂದೆ ಪ್ರಭು ನಿನ್ನ

ಪಾಲಿಗೆ ಹೊಂದಿ ನಾ ಬಂದೆ ||ಪ||

ತಂದೆ ತಾಯಿಯು ನೀನೆ ಎನ್ನ

ಬಂಧು ಬಳಗವು ನೀನೆ

ಬಂದಂಥ ಅನ್ಯಾಯ ಬಯಲು ಮಾಡು

ಮಂದರ ಕೋದಂಡ ಮಲೆತ ದುಷ್ಟರ ಗಂಡ ||1||

ಅನ್ಯಾಯ ಅಪರಾಧವ ಅತಿಗಳೆದು

ಎನ್ನ ನೀ ಸಲಹಯ್ಯ ಸ್ವಾಮಿ

ಗನ್ನಘಾತಕ ಜನರ ಗರ್ವ ಮುರಿದು

ಪ್ರಸನ್ನನಾಗೋ ಸ್ವಾಮಿ ಸರ್ವ ಭಕ್ತರ ಪ್ರೇಮಿ ||2||

ಒಡೆಯ ನೀನೊಲಿದು ಬಂದು

ಕಡಲೇಳು ಸಿಂಧು ವರವಿಯೊಳು

ಆಡಲು ಆ ಸಂಗವೆ ಲೇಸು

ನಡೆ ನುಡಿಗಳ ಕರ್ತ ನಗರ ಪರವನ ಬೆರೆತ ||3||

ಏನು ಕೆಟ್ಟೆಲೋ ನೀಚ ಯತಿಗಳಿಗೆ ಕುಹಕವಾಡಿ

ಮೀನು ಗಾಣಕ್ಕೆ ಬಿದ್ದಂತೆ ಮಿಡುಕು ಅದರಂತೆ ||ಪ||

ಕಟುಕನ ಸಲವಿ ಪಾದರಕ್ಷಲಿ ಮರ್ದನ ಮಾಡಿ

ಕುಟ್ಟಿ ಕೂಡಿಸಿರಿ ಕುಲದಿಂದ ಹೊರಗೆ ||1||

ಅನ್ನ ಉಂಬುವವರಿಗೆ ಅನ್ಯಾಯ ಮಾಡಿದೊ ಹೊಲೆಯ

ತೊನ್ನು ಬಸಿಯಲಿ ನಿನ್ನಂಗ ತೊಲಗಲ ಮಾನಭಂಗ ||2||

ಶೂನ್ಯ ಮಾಡಿದವರಿಗೆ ಸರ್ವ ಶೂನ್ಯ ನಿಮಗಾಗಲಿ

ಆನೆ ನುಂಗಿತು ಬೆಳವಿನ ಕಾಯಗೊ ಶ್ವಾನಾ ||3||

ಅಡವಿ ಹೊಕ್ಕರೆ ಬಿಡದು ಅರ್ಧ ಆಯುಷ್ಯ ನಿಮಗಾಗಲಿ

ಬಿಡದೆ ನೆಲಕೆಟ್ಟು ಒರೆಸಲಿ ಬೆಂಕಿ ಬೆರಸಲಿ ||4||

ಬಂದದ್ದು ಬಯಲು ಮಾಡೋ ತಂದೆ ಅಲ್ಲಮಾ ಪ್ರಭೋ

ಕಂದ ಪರ್ವಗೆ ಹೊಂದೀದಿ ತನುವಿಗೆ ಬಂದೀದಿ ||5||

ಬರಹೇಳಮ್ಮ ಭ್ರಮರ ಕುಂತಳೆ ಭಾವಜ ಹರನ

ಆರ್ತಿಯಿಂದ ನೋಡುವರಿಗೆ ಅಮೃತ ಸವಿ ಎರಗಿದೆ ನಾ ||ಪ||

ಸಖಿ ಚಲ್ವೆ ಸ್ವರದ ಕೋಗಿಲೆ ಸರಳ ನಡಿಯೆ

ಸುಖ ಪ್ರಾಣನಾಥನ ಗಲಿದ ಸುಟ್ಟ ಸುಣ್ಣದ ಹರಳಾದೆ

ರತ್ನದ ಬೊಂಬೆ ಈಗಳಂಗಗೊಳುತಿರೆ ಈ ಕ್ಷಣ ತಂದು ತೋರೆ

ಮುಖವೈದಾತನ ಸಕಲಾಂತರಂಗನ ಸಜ್ಜನ ಲಿಂಗನ

ಭಾಳಾಕ್ಷ ಶ್ರೀ ವಿರೂಪಾಕ್ಷನ ||1||

ಹರಿಣಾಕ್ಷಿ ಏಳೆ ಹಂಸಗಾಮಿನಿ

ಹಲವಂಗದ ಚದುರೆ ನಾ ಕರಗಿ ಕುಂದೆ ನೊಂದೆ

ಕರುಣವಿಲ್ಲ ಮುಂದೆ ಪರಿಯಂದು ಬುದ್ಧಿಪಾಲಿಸೆ ಪದ್ಮಜಾತೆ

ಬಿರಿ ಬೊಟ್ಟು ಮಗ್ಗಿಮಾಲಿಯ ಬಿನ್ನವಿಸಿ ತಾ ಸವಿದ ಹಗಲೆ

ಕರಿ ಚರ್ಮನ ಕಾಶಿಯ ನಾಥನ ಪುರಮೂರು ಸುಟ್ಟನ ಶ್ರೀಪತಿ ಮಿತ್ರನ ||2||

ನಡುಸಗಣ್ಣ ನಗು ಮುಖದವಳೆ

ನಂಬಿದ್ದೆ ನಾ ಬಿಡದ ರಾಹು ನುಂಗಿ ಬಿಟ್ಟು ಚಂದ್ರಮನಾದೆ ನಾ

ಹೊಡೆದು ಮುಂದೆ ಕದನ ತೊರೆದು ಬಿಡಿದಪ್ಪಿಕೊಂಡ

ಹಿಡಿ ಮುತ್ತಿನ ಹಾರವೆಂದು ಹಾಕಿದ ಪರವಗ ಬಂದು

ಷಡುಮುಖದವನ ಸಖನ ನದಿ ಪಾಲನ

ಹೊಡೆದ ಜಿತೇಂದ್ರ ಹೊತ್ತಿಳೆ ಚಂದ್ರನ

ಒಡಿದಲೆ ಬಸವನ ಜಾಹ್ನವಿ ವಾಸನ

ಪಡೆದ ಶ್ರೀವೀರನ ಪಂಪಾಪತಿ ಧೀರನ ||3||

ಬರೆದ ಬರೆಹ ತಪ್ಪದಯ್ಯ ಬಾಳಿರುವ ತನಕ

ಬರಿದು ಚಿಂತೆಯ ಮಾಡಿ ಬಳಲದಿರು ಮನವೆ ||ಪ||

ಉಮಾಪತಿ ಗರಳಕೆ ಉರಗನ ವಿಷ ಬಿಡದು

ಕಮ್ಮಗೋಲನ ಹರನು ಉರಿಗಣ್ಣಿಂದ ಉರಿದ

ಬ್ರಹ್ಮನು ಶಿರವ ಕಳಕೊಂಡು ಭಾಗೀರಥಿ ನುಂಗಿದಳು

ನಮ್ಮ ಪಾಡೇನು ನರಗುರಿಗಳು ||1||

ಸೀತೆಯನು ಸೆರೆಯೊಯ್ದು ಶ್ರೀರಾಮ ವನವಾಸ

ಆತನ ತಮ್ಮ ಲಕ್ಷ್ಮಣ ಅನ್ನವಿಲ್ಲದುಪವಾಸ

ರಾತ್ರಿ ಪತಿ ನಡುಗಟ್ಟು ರವಿ ರಥದೊಳು ಮೊಂಡ

ಸಾತ್ವಿಕ ಬಸವಣ್ಣ ಸರ್ವರ ಕೂಲಿಯಾಳಾದ ||2||

ಹನುಮಂಗೆ ಚಪ್ಪೆಂದು ಹಸ್ತಿಮುಖ ಗಣಪಂಗೆ

ಮನಗುಂದಿ ಸುರಪತಿಗೆ ಮೈಯೆಲ್ಲ ಯೋನಿ

ಬಿನಗು ರಾವಣನ ಬಿಡಿಸಿದರು ದಶಶಿರವ

ಅನುಜರೈವರು ಆಳಿನಾಳಾದರೋ ||3||

ಹರಿಶ್ಚಂದ್ರ ಹರಿಗೆಟ್ಟು ಹೊಲೆಸೇವೆ ಮಾಡಿದ

ಪರೀಕ್ಷಿತ ರಾಯ ಮಂದಸ್ಥಾನ ಮರೆಗೊಂಡನೊ

ವರ ಶೂದ್ರಕನ ತಲೆ ಕಂಚಾಲ ಮರಕೆ ಕಟ್ಟಿಸಿತು

ಬಿರುದುಳ್ಳ ಕೀಚಕನ ಭೀಮ ಸೀಳಿದನು ||4||

ಕಂಡ ದೇವರಿಗೆರಗಿ ಕಾಮಿಸದಿರು ಮನವೆ

ಮಂಡೆ ಪಣೆಯೊಳೋದಿ ಮರಳಿ ತಿದ್ದುವರಿಲ್ಲ

ಕಂಡಿಲ್ಲ ಶಿವನಾಟ ಕಡೆಗ್ಹಾಯಿಸೋ ಲಲಾಟ

ಕೆಂಡಗಣ್ಣಿನ ವೀರ ಕೇಳೋ ಪರುವನ ನುಡಿಯ ||5||

ಏಸೇಸು ಪರಿಯಲ್ಲಿ ದುಸ್ತರ ಕೊಟ್ಟೆ ಭಾಷೆ ಹೀನರ ಸಂಗವನೊಲ್ಲೆ ಗುರುವೆ ||ಪ||

ಸತ್ಯರ ದೇಹವು ಸಕ್ಕರಿ ಚಿನಿವಾಲ ನಿತ್ಯನೆ ಜೇನು ತುಪ್ಪದ ಬೀಗನೆ

ತುತ್ತು ಮಾಡಿವುಂಡು ತೃಪ್ತನಾದೇನು ಕರ್ತು ಅಲ್ಲಮಪ್ರಭು ಕರುಣಿಸು ಎನಗೆ ||1||

ಧರ್ಮರು ಹೋಗುವ ದಾರಿಯಲಿ ಇದು ಎನ್ನ ಕರ್ಮ ಕಂಟಕ ಏನು ಕಳೆವೆನೆಂದು

ಭ್ರಮೆಯಿಂದ ಬಾಳ್ವರ ಭ್ರಮೆಯಲ್ಲಿ ಇಡದೆ ಪರಬ್ರಹ್ಮ ಪಾಲಿಸು ಎನ್ನನು ||2||

ನೀತಿಯಲಿ ನಡಿಯುವರು ನಿರ್ಮಳದಲ್ಲಿ ಪರಂಜ್ಯೋತಿಗೆ ಜೋಡೆನಿಸುವರು

ಮಾತಲಿ ನೆನೆದು ನಾ ಮನ ಮುಟ್ಟ ಮಾಡಿದ ಪಾತಕವನು ಪರಹರಿಸು ಗುರುವೆ ||3||

ಪರಧನ ಪರಸತಿ ಪಾಪಕ್ಕೆ ಸಿಲುಕದೆ ಪರಹಿತ ಮಾಡಿ ಪ್ರಳಯವ ಗೆದ್ದರು

ಪರಿಪರಿಯ ಪ್ರಾರ್ಥನೆ ಮಾಡಿ ಪರಸತ್ಯ ಲೋಕವನು ಪಡೆದರು ಗುರುವೆ ||4||

ಹರಕೆಯ ಕೊಡು ನೆರೆ ನಂಬಿದವರಿಗೆ ಸ್ಥಿರ ಪಟ್ಟವಾಗಿ ಬಾಳಲಿಯೆಂದು

ಪರಿಣಾಮ ಪರಿಪರ್ವತೇಶಮನು ತುಂಬಿದ ಶರಧಿಯು ಬಂದಂತೆ ಸ್ಥಿರವಾದ ||5||

ಮತಿಯ ಪಾಲಿಸೊ ಎನಗೆ ಶ್ರೀ ಗಣರಾಯ

ಹಿತ ಮಾಡಿ ಉಣಿಸುವೆನೋ

ಶ್ರುತಿವೇದ ಶಾಸ್ತ್ರ ಪುರಾಣಾಗಮ ಪುಣ್ಯ

ಕಥೆ ಕಾವ್ಯಗಳ ಬರೆದೋದಿ ಹೇಳುವಂಥ ||ಪ||

ಚಿಗಳಿ ಚಿನಿಪಾಲು ಭಕ್ಷ್ಯ

ಈ ಚೀಟಿ ಬ್ಯಾಳಿ ಅಗಲಾದ ಹರಿವಾಣದಿ

ಮಗಿಮಾವು ರಸದಾಳಿ ಅಂಜುರಿ ದ್ರಾಕ್ಷಿಯು

ಉಗುರೊತ್ತು ಬಟವಿ ಉಂಡಲಗಿಯು ನೊರೆಹಾಲು ||1||

ಹಣ್ಣು ಹಪ್ಪಳ ಸಂಡಿಗಿ

ಸಣ್ಣ ಶಾವಿಗಿ ಈ ಹಸನಾದ ಬಿಸುರಿ

ಎಣ್ಣೆಹೋಳಿಗಿ ಗೌಲಿ ಎಸೆವ ಗಾರಿಗಿ ಗಿಣ್ಣ

ಉಣ್ಣೊ ಪಾಯಸ ಪರಡಿ ಉದುರ ಸಕ್ಕರಿ ತುಪ್ಪ ||2||

ರಜಾನ್ನ ಕೆನಿಮೊಸರು

ರುಚಿ ಗಾರಗೆ ಭೋಜನ ಕೆಸವಿ ಮಜ್ಜಗಿ

ಹೂಜಿಯ ನೀರ ಕೈಬಾಯಿ ತೊಳೆದು

ಸಹಜನಾಗಿ ಬಂದು ಸತಿ ಮಂಚದೊಳು ಕುಳಿತು ||3||

ಗಂಥ ಕಸ್ತೂರಿ ಪುನಗು ಗೌರಮ್ಮನ

ಕಂದಗ ಧರಿಸುವೆನು

ಅಂದದ ಬಿಳಿ ಎಲಿ ಅಡಿಕೆ ಕಾಂಚು ಸುಣ್ಣ

ಮುಂದೆ ಮಡಚಿ ಕೊಡುವೆ ಮಲ್ಲಿಗಿ ಮಳೆಗರೆವೆ ||4||

ನರಾಸುರ ದೇವರ್ಕಳು ನಿಮ್ಮಡಿಯ

ಧರೆ ಮೂರು ಪೂಜಿಪರು

ಪರಿಪರಿ ಕುಸುಮದ ಪರಿಮಳ ಧರಿಸುವೆ

ಪರಿವಾರದ ಪಾಲಿಸು ಪಾರ್ವತಿ ವರಪುತ್ರ ||5||

ಮನದ ಚಿಂತೆಯ ಮಾಣಿಸಯ್ಯ ಎನ್ನ

ಅನುಮಾನ ಪರಿಹರಿಸೋ ಅಲ್ಲಮರಾಯ ||ಪ||

ಮೊರೆ ಹೊಕ್ಕವರ ಕಾಯ್ವ ಬಿರುದು

ಭರದಿಂದ ಮಾಡಯ್ಯ ಬ್ರಹ್ಮಾಂಡ ಕಟ್ಟಿರಿದು

ಪರವಾದಿಗಳ ಹಲ್ಲ ಮುರಿದು ಎನ್ನ

ಕರ ಹಿಡಿದಾಡಿಸೊ ಖಾಸಾ ನೀ ಬೆರೆದು ||1||

ಯಜಮಾನ ನೀನೆಂದು ಬಂದೆ

ಪ್ರಜಾ ಪ್ರಮಥರೊಳು ಪೂಜೆದೋರು ಮುಂದೆ

ನಿಜವಾಗಿ ಪ್ರತಿಪಾಲಿಪನೆಂದೆ ಎನ್ನ

ಸುಜನ ಸುಜ್ಞಾನಕ್ಕೆ ಸುಳಿ ಪ್ರಭು ತಂದೆ ||2||

ಅಪರಾಧ ಕ್ಷಮೆ ಮಾಡೋ ಎನ್ನ

ಕೃಪೆಯೊಳಗೆ ಇಡು ಕಸರಿಲ್ಲದೆನ್ನ

ವಿಪರೀತ ವಿಮಲ ಪ್ರಸನ್ನ

ಅಪರಾಂಪರ ಪೂಜಪೆ ಅರ್ತಿ ಮೋಹನ ||3||

ಎಂಭತ್ನಾಲ್ಕು ಲಕ್ಷ ಸಂತೆ ಮಾಡಿ

ಕೊಂಬುತ್ತ ಬರಲಾಗ ಕೋಟಿ ನರಕ

ಅಂಬು ತಾಗಿದ ಮೃಗದಂತೆ ಮನ

ಸ್ತಂಭನ ಕಿತ್ತಯ್ಯ ತನುವಿನ ಚಿಂತೆ ||4||

ಕುಂದು ಕೊರತೆ ಬರಲಿಗೊಡದೆ ಕಾಯೋ

ಸಂದೇಹವಿಲ್ಲದೆ ಸಾಯುಜ್ಯ ಪದವಿಯ ನೀಡೋ

ಕುಂದಣಕೆ ರತ್ನವ ಜಡಿದು ಅದ

ರಿಂದಾಗಿ ಪರ್ವನ ಹಿಡಿಯೊ ಕೈ ಬಿಡದೆ ||5||

ಮಂದಮತಿತನವು ಬೇಡ ಮಾಯೆಯೊಡನೆ

ಮಂದಮತಿಯನ ಕೊಂದ ಮಾಯೆ ಮೂಲೋಕ

ನುಂಗಿ ನಿಂತಳು ಜಗದೊಳು ||ಪ||

ಸೀತೆ ಮಾಯಾಮೃಗವ ರಾವಣನ

ಶತಕೋಟಿ ರಾಕ್ಷಸರ ಹತ ಮಾಡಿ ನುಂಗಿದಳು

ಶತಕಾಲ ನಿಂತುರಿಯಿತು ಹಾಳಾಯಿತು ಲಂಕಾ ||1||

ದ್ರೌಪದಿಯ ಭೂಮಿಗಾಗಿ ಕೌರವರು

ಭೂಪ ಹದಿನೆಂಟು ಅಕ್ಷೋಹಿಣಿ

ಅಪರಂಪ ನಾಯಕರು ಅಜರು ಹಾಳಾಗಿ ನಡೆದರು ||2||

ಇಂದ್ರಚಂದ್ರ ಸೂರ್ಯರು ಕಳೆಗುಂದಿ

ನೋಪತ್ತಿ ಹೋದರೆಲ್ಲಾ

ಬೆಂದು ಭಸ್ಮಾಸುರ ಬಿರುದು ನಾಯಕ ಮಾಗಿ

ಸಂಧಿಗೆ ಸೇರಿ ಹೋದರು ||3||

ಹಮ್ಮು ಪಂಥಗಳು ಬೇಡ ಮಾಯೆಗೂಡ

ಸಮ್ಮೋಹ ತಿಳಿದು ನೋಡಾ

ಬ್ರಹ್ಮವಿಷ್ಣು ರುದ್ರ ಭ್ರಾಂತರಾದರು ಮಾಯೆಗೆ

ಹಮ್ಮು ಮಾಯೆಗೆ ಇಲ್ಲವೋ ||4||

ಪರಸತಿಯ ಭ್ರಾಂತಿ ಬೇಡ

ಪರುವನ ವರನುಡಿಯ ಒಲಿದು ನೋಡಾ

ಪರಮ ಶ್ರೀಗುರು ಪಾದವ ಪಿಡಿದು

ಪೂಜಿಸಲಿಲ್ಲಾ ಕಡಿಗೆ ಸೇರಲಿಲ್ಲಾ ||5||

ಮಾಡುವೆ ಶರಣು ಮಾಡುವೆ ನಮ್ಮ

ಕೂಡಲ ಸಂಗsನ ಶರಣರಿಗೆ ||ಪ||

ಕಂಬಳಿ ಮರುಳಾರು ಕಕ್ಕಯ್ಯಗೆ

ಉಂಬೊ ಪ್ರಸಾದದಲಿ ಉದ್ಭವಿಸಿದಾತಗೆ

ಅಂಬಿಗರ ಚೌಡಯ್ಯ ಘನಗಟ್ಟಿವಾಳಯ್ಯಗೆ ||1||

ಮಲ್ಲಿsಯ ಬೊಮ್ಮಯ್ಯ ಮಧುವರಸ ಹರಳಯ್ಯ

ಭಿಲ್ಲಮ ಬಿಂಕsದ ಮಾರಯ್ಯಗೆ|

ಗೊಲ್ಲಾಟ ಬಲ್ಲಾಳ ಕಲಕ್ಯಾತ ಕನ್ನಪ್ಪ

ನುಲಿಯ ಚಂದಯ್ಯಾ ಮೋಳ್ಗಿಮಾರಯ್ಯಗೆ ||2||

ಮ್ಯಾದಾರ ಕೇತಯ್ಯಾ ಮೆರೆಮಿಂಡ ಚಿಕ್ಕಯ್ಯ

ಆಯ್ದಕ್ಕಿ ಮಾರಯ್ಯ ಅಜಗಣ್ಣಗೆ|

ಮೈದುನ ರಾಮಯ್ಯ ಮಡಿವಾಳ ಮಲುಹಣ

ಸಾಧು ಮರುಳ ಶಂಕರ ಸಿದ್ಧರಾಮಗೆ ||3||

ಸತ್ಯಕ್ಕ ವೆಟ್ಟವ್ವ ಶ್ರೀ ನೀಲಲೋಚನಿ

ಮುಕ್ತವ್ವೆ ಚಂಗುಳಿ ಗೊಗ್ಗವ್ವೆಗೆ|

ಸತ್ಯ ಗಂಡನ ಪಡೆದು ಹೆತ್ತಮಗನ ಕೊಂದು

ಬತ್ತಲೆ ಕದಳಿಯ ಪಕ್ಕಂತ ಅಕ್ಕನಿಗೆ ||4||

ಕರಿವೇನು ಯೇಳೂರದ ಎಪ್ಪತ್ತು ಗಣಂಗಳು

ಅರವತ್ತುಮೂರು ಪುರಾತನರಿಗೆ|

ಪರಿಪೂರ್ಣ ಶ್ರೀಗುರು ಪಾದವ ಭಕುತಿsಲಿ

ಪರಿಪರಿ ಪೂಜೆಯs ಪರವsನಿಗೆ ||5||

ಮಾತನಾಡೋ ಮಹಾದೇವ ಮಾಯಾಕೋಲಾಹಲ ಪ್ರಭು

ಜಾತವಿಹಿತ ಈ ರೇಳು ಜಗದ ಜೀವಾಳ ||ಪ||

ಮನ ಸೋತೆಯನಯ್ಯ ನಿನಗೆ ಮಂಗಳವಾಗಿರು ಎನಗೆ

ಘನ ಶಿಖಾಮಣಿ ಗಂಭೀರ ಗೌರೀ ಮನೋಹರ ||1||

ಮೊರೆ ಹೊಕ್ಕವರ ಕಾಯ್ವಂಥ ಮನಸಿಜಾರಿ ನಿನ್ನ ಪಂಥ

ಬಿರಿದುಳ್ಳ ಬಿಸಿಗಣ್ಣಿನ ಭೀಮಾ ಬಿಂಕದಲ್ಲಿ ನಿಸ್ಸೀಮಾ ||2||

ಅಗಣಿತ ಗುಣಮಣಿ ಅಣುರೇಣು ತೃಣಕ್ಕೆ ಧಣಿ

ಬಗೆ ಬಗೆಯಿಂದಲಿ ಬಂದು ಮಿಗೆ ಭಕ್ತರೊಳು ನಿಂದು ||3||

ದೈನ್ಯದಿ ಸೇವೆಯ ಮಾಡಿ ದಯಾಳು ನೀನೆಂದು ಬೇಡಿ

ನಯ ತೆರೆದು ನೋಡಯ್ಯ ನಗುತ ಹಿಡಿ ಎನ್ನ ಕೈಯ್ಯ ||4||

ಗೂಗಲ್ಲ ಗವಿಯೊಳಗಿದ್ದ ಗುರುರಾಯ ಅಲ್ಲಮಾ ಸಿದ್ಧ

ನಗರ ಪರವಗೆ ಮೈ ಬೆರೆತ ನಂದೀಶನ ಕರ್ತ ||5||

ಮಾತಾಡೋ ಮಹಾಂಕಾಳಿ ಮಧುರ ವಚನಗಳಿಂದ

ಶಾಂತಳಾಗಿರು ತಾಯಿ ಧೈರ್ಯದ ಲಕ್ಷ್ಮಿ ||ಪ||

ಅಂಬರಕೇಶಳೆ ನೀ ಆದಿಶಕ್ತಿಯು ಶಿಖೆ ತುಂಬಿದ ತಾರೆಯೆ

ದಂಡೆತೊಂಡಿಲು ಚಂದ್ರ ಸೂರ್ಯಂಗಳು

ಎಂಬತ್ನಾಲ್ಕು ಲಕ್ಷ ವಿಶ್ವ ಕುಟುಂಬಿ

ಇಂಬಿಟ್ಟು ಈರೇಳು ಭುವನಮಂ ಪೊರೆವಿ ||1||

ಸಿಡಿಲು ಮಿಂಚು ಘರ್ಜಿಸಿ ಸೃಷ್ಟಿಯೊಳು ನಿಮ್ಮ ಸೊಲ್ಲ

ಗಣಿಸುವನು ದೇವೇಂದ್ರ ನವಖಂಡ ಪೃಥ್ವಿಯಲಿ

ಮೃಢನ ತೊಡೆಯ ಮೇಲಿಟ್ಟು ಮಲಗಿದ ಶಕ್ತಿ

ಸಡಗರದಿ ಸಂಗ ಆದಿ ಸಹಸ್ರ ಜಿಹ್ವೆಯಂಗದಿ ||2||

ಪಂಚ ಶತಕೋಟಿಯಲಿ ಪರಿಪೂರ್ಣ ಮಹಾಂಕಾಳಿ

ಹಂಚಿಟ್ಟ ರವಿ ಶಶಿಗೆ ಹಗಲಿರುಳು ಆಗೆಂದು

ವಂಚನೆ ಇಲ್ಲದೆ ಕೈ ಮುಗಿದು ವೇದ

ಪಂಚ ಮುಖವದನೆ ಪರಮ ದಯಾಳೆಂದು ಸಾರುತಿವೆ ||3||

ಹರಗೆ ತ್ರಿಶೂಲ ಹರಿಗೆ ಚಕ್ರವ ಕೊಟ್ಟು

ಬರೆವ ಬ್ರಹ್ಮಗೆ ಕಂಠಾಭರಣವ ಕೊಟ್ಟು

ಕರಿದೆಲಿಯ ಪಡೆದೇಕ ಮಹೇಶ್ವರಿಯೆ

ಶಿರದಿ ಶಾಂತೆ ಗುಣವಂತೆ ಹಿತಚಿಂತೆ ಅತಿ ಕಾಂತೆ ||4||

ಓಂಕಾರ ವದನದೊಳು ವಾಸ ಮಾಡಿರಿ

ಸಂಸಾರ ಶಿರಶೃಂಗಿ ನಿನಗೆ ಸಾಷ್ಟಾಂಗ ವೆರಗುವೆನು

ಪರಿಕಜನ ಕೈ ಪೂಜಿಪಳೆ ಪರಿಪೂರ್ಣ ಮಹಾಂಕಾಳಿ

ಕಂಕುಳ ಶಿಶುವೆಂದು ಕೊಟ್ಟೆ ಪರುವಗೆ ವರವ ||5||

ಮುದ್ದು ಸೂಗೂರ ವೀರಾ ಮುದದೆಮ್ಮ ಕರುಣಾಬ್ಧಿಯೆಂಬೊ

ಬಿರುದು ಕೇಳಿ ಆಸೆ ಮಾಡಿ ನಾ ಬಂದೇ ||ಪ||

ಈಶ ವಿರಕ್ತ ಇಂದುಧರ ನೀನು ಬಂದು

ಭಾಷೆ ಕೊಟ್ಟು ಭಕ್ತರ ಭಾವ ಭರಿತ ಪ್ರಿಯ ನೀನು

ರಾಶಿ ದೈವದ ಗಂಡರಣ್ಣ ಶೂರ ದಕ್ಷ ಹಾಸ್ಯವಾಡೆ

ಅವನ ಹಿಡಿಕಿಲಿ ಹರಣಗಳೆದ ಹತ್ತಿಟ್ಟು ||1||

ಧೀರ ಗಂಭೀರ ಶೂರ ಭವ ದೂರಾ

ಆರು ಅಗ್ನ ಜಿಹ್ವೆ ಮಟ್ಟ ಸೀಳಿ ಅಸುರಾರಿ ಕೋಪವ ತಾಳಿ

ಮೂರು ವೈರಿಗಳ ಮರ್ದನ ಇಂತು

ವೀರಘಂಟೆ ಮಡಿವಾಳಯ್ಯನ ಯುದ್ಧ ಕೇಳಿ ವಿಪರೀತ ||2||

ಕೊಬ್ಬಿನ ದುಷ್ಟರ ಕೊಂದು ಗೊಬ್ಬೂರು ಸುಟ್ಟು

ಬಿಬ್ಬಿ ಬಾಚರಸರ ಬಿರಿದಿನಿಂದ ರಕ್ಷಿಸಿ

ಸದ್ಭಾವ ಮೂರ್ತಿ ಸರ್ವದಾಧಾರ ಕರುಣ

ಉಬ್ಬಿ ನಗರ ಪರ್ವತನೊಳಗಾಧಾರ ಬೆರೆದು ಬೆಸನಿತ್ತಾ ||3||

ಮೊರೆ ಇಡುವೆ ಕೇಳೆನ್ನ ಗುರುವೆ ಬಂದ

ದುರಿತವನ್ನು ಕಾಯನ್ನ ಯನ್ನ ಗುರುವೆ ||ಪ||

ಮುಗಿಲು ಹರಿದು ಮೇಲೆ ಬಿತ್ತು

ಜಗದ ವಲ್ಲಭ ಮೇಲಕೆತ್ತು

ತಗೆ ಬಗೆಗೊಳ್ಳಲೇನ ತಡಿಯ ಸೇರಿಸು

ಹಗರಣ ಮಾಡದ ಲೀಗಕೆಯೆಂದು ||1||

ರಾಹು ನುಂಗಿದ ಚಂದ್ರನಂತೆ

ನಿರ್ಜೀವನಾಗಿ ನಾ ನಿಂತೆ

ದೇವರ ದೇವ ಚಿರಂಜೀವಿಯನ್ನ

ನೋವು ಮಾಣಿಸಿಕಾದ ನವರುದ್ರನಂತೆ ||2||

ಮೊರೆಯ ಹೊಕ್ಕರೆ ಕಾಯೋ ಮುನ್ನ

ಬಿರಿದುಂಟು ಮಾಡೋ ಪ್ರಸನ್ನ

ಉರಿಯ ಒಳಗಿನ ಸಸಿಯ ಪರಹರಿಸಿದಂತೆ

ಬಿರುಮಳೆಗರೆದು ಬಿಗಿದಪ್ಪಿ ಕಾಯೋ ಎನ್ನ ||3||

ಚಂದ್ರಗುಪ್ತನ ಮಗಳಿಗಾಗಿ ಸತ್ಯಗೊಂದನವನು

ಬಿಡದೆ ಕಾಯ್ದೆ ಇಂತೆಂಬ

ಶೃತಿಗಳನು ಎತ್ತಿ ಸಾರುವೆ ಮುನ್ನ

ತಂದೆ ಅಲ್ಲಮಾ ಪ್ರಭು ಕಾಯೋ ||4||

ಧರ್ಮವ ಶ್ರೀಗುರವೆ ಮರೆತೇವು

ಪರಬ್ರಹ್ಮನಹುದು ನೀದಯಾಳು

ನಿರ್ಮಿತ ಪರುವನ ನಿಜಾತ್ಮ ಸತಿಯಳ

ಕರ್ಮ ಕಂಟಕ ಕಡಯೋ ಕರುಣಿ ಅಲ್ಲಮನೆ ||5||

ಮೊರೆ ಹೊಕ್ಕೆ ಕಾಯೋ ಮಲೆತ ಮಲ್ಲನ ಗೂಳಿ ಸೂಗೂರು ವೀರ

ಕರೆದರೆ ಓ ಎಂದು ಕಾಮಿತ ಫಲದಾಯ ಸೂಗೂರು ವೀರ ||ಪ||

ಮುನ್ನೂರದರವತ್ತು ವ್ಯಾಧಿ ವಿಘ್ನದ ಗಂಡ ಸೂಗೂರು ವೀರ

ಚಿನ್ಮಯ ಚಿದ್ರೂಪ ಚಿತ್ಕಳ ಮೂರುತಿ ಸೂಗೂರು ವೀರ ||1||

ವಜ್ರದ ಖಣಿ ನಿನ್ನ ವರವೆಂಬ ವಾಕ್ಯವು ಸೂಗೂರು ವೀರ

ಸಜ್ಜನರ ಮನಸ್ಸಿಗೆ ಸರಿಹೋಗಲಿರುವಂತ ಸೂಗೂರು ವೀರ ||2||

ಉಪಮಿಸಲಳವಲ್ಲ ಅಪರಾಂಪರ ಮಹಿಮ ಸೂಗೂರು ವೀರ

ಜಪಿಸಿದವರ ಕಾರ್ಯ ಜಯಿಸುವುದು ತ್ರಿಜಗದಿ ಸೂಗೂರು ವೀರ ||3||

ಸತ್ಯ ಸಮರ್ಥನು ಸರ್ವ ಸೂತ್ರಧಾರಿ ಸೂಗೂರು ವೀರ

ತೊತ್ತಿನ ತೊತ್ತೆಂದು ತೊಲಗದಿರೆಂದೆಂದು ಸೂಗೂರು ವೀರ ||4||

ಗಂಧ ಕಸ್ತೂರಿ ಭೋಗಿ ಘನ ಮಹಾತ್ಮ ನೀನಹುದು ಸೂಗೂರು ವೀರ

ಬಂದಂಥ ಕಂಟಕ ಬಯಲು ಮಾಡೋ ಸ್ವಾಮಿ ಸೂಗೂರು ವೀರ ||5||

ಅಡಿಗಡಿಗೆ ಪವಾಡವೆಬ್ಬೆಸಿ ಮೆರೆವಂಥ ಸೂಗೂರು ವೀರ

ಅಡಿಗಳಿಗೆರಗುವೆ ಅಖಂಡವಾಗಿರೊ ಸ್ವಾಮಿ ಸೂಗೂರು ವೀರ ||6||

ಬಲವಂತ ನೀನೆಂದು ಭಾಷೆಯ ಒಳಗಾದೆ ಸೂಗೂರು ವೀರ

ಛಲವೆಂಬ ಅಭಯ ಹಸ್ತ ಛತ್ರವಿಡೋ ಎನಗೆ ಸೂಗೂರು ವೀರ ||7||

ಶೂನ್ಯ ಸಿಂಹಾಸನ ಸೂರೆಗೊಂಡೇರಿದಿ ಸೂಗೂರು ವೀರ

ಆಲಿಪ ಅನುಭವ ಅಲ್ಲಮಪ್ರಭು ನೀನೆ ಸೂಗೂರು ವೀರ ||8||

ಶೂನ್ಯ ಬಾಚರಸರ ಬಿರುದಿನ ಮನೆ ದೇವ ಸೂಗೂರು ವೀರ

ಅಬ್ಬರದಿ ಪರುವಾನ ಅಭಿಮಾನ ಕಾಯ್ವಂತ ಸೂಗೂರು ವೀರ ||9||

ಯಾಕೆ ಕಾಡು ಎನ್ನ ಪ್ರಾಣವಲ್ಲಭನೆ

ಬೇಕಾಗಿ ನಿನಗಿದೇನುದ ಬಡಿದಾಟ ಶಿವನೆ ||ಪ||

ಭಿಕ್ಷೆ ಬೇಡುಂಬುವೆನು ಸಾಕ್ಷಿಯಲಿ ತಿರುಗುವೆನು

ಅಪೇಕ್ಷ ವರವಾಗಿ ಮೋಕ್ಷ ಬೇಡುವೆನು

ಅಪರೋಕ್ಷಗ್ಯಾನವನು ಅಂತರದಿ ನಡೆಸುವೆನು

ರಕ್ಷಿಸೈ ಶ್ರೀಗುರುವೆ ಎನ್ನಾ ಪಂಥವನು ||1||

ಬಂದುದನು ಭವ ಮಾಡಿ ಕಂದನಾಗಿರುತಿಹನು

ಹಿಂದು ಮುಂದ್ಯಾಡುವರಾ ಭಂಧುವಾಗುವೆನು

ತಂದೆ ಶ್ರೀಗುರುದೇವಾ ನಿನ್ನಿಂದಾದ ಧರ್ಮವನು

ಎಂದೆಂದಿಗಿ ಪಾಪ ಹೊಂದದಲೆ ನಾನು ||2||

ಉಪಾಯದಲಿ ತಿರುಗುವೆನು ಶಿವಭಕ್ತಿ ನಡೆಸುವೆನು

ಅನ್ಯಾಯ ಹೇಳುವರ ಗಂಡನಾಗುವೆ ನಾನು

ಜಯಾಜಯ ಗುರು ಶರಭಾ ಈ ಕಾಯದಾಟವನು

ಆವಾವ ಕಾಲದಲಿ ಮಹಾ ಪ್ರಭುವೆ ನೀನು ||3||

ಯಾಕೆ ದಯೆ ದೋರೆಯೋ ಎನ್ನೊಡೆಯನೇ

ನಿನ್ನ ಪುರುಷ ವಾಕ್ಯನ ಮರೆವರೇ ಎನ್ನೊಡೆಯನೇ

ಬೇಕೆಂದು ಬೆರೆದೆ ಫಲದೋರಿ ಸಂಸಾರವನು ಸಾಕೆನಲಿ ಕೀರ್ತಿಯುಂಟು ||ಪ||

ಪತಿಯು ಬಲ್ಲಿದನೆಂದು ಪಿತ-ಮಾತೆಯರು ಕೂಡಿ

ಮಥನವನು ಮಾಡಿಕೊಂಡೆ| ನಿನ್ನ ಹಿತವ ತಪ್ಪಿದ ಮೇಲೆ

ಹಿಡಿದವರೆ ಮುಂದೆ| ಸದ್ಗತಿಯ ತೋರೋ ಗುರುವೇ ||1||

ಮರಣ ವಿರಹಿತ ಮೈಭರಿತನೆಂದು

ಪರರ ಸ್ಮರಣೆಯೆನಗದಿಲ್ಲ ಉದಯದರುಣದೊಳು

ಏನೆಂದು ದರ ಪೊಗಳಲು

ನಿಮ್ಮ ಶ್ರೀ ಚರಣ ಕಮಲಾಬ್ದಿ ಬಿಡದೆ|

ಮೊದಲಿಂದ ಇದಕಂಜಿ ಬೆದರಿ ಬೇರೆ ಸಾಕಿದೆನು ||2||

ಬದಲಾಮ ಮಾಡಿಕೊಟ್ಟ ಕದನಕ್ಕೆ ಕಾದಿಸುವಾತ

ಸರಿದರೆ| ಇದು ಕೀರ್ತಿ ಅರುದೆ ನಿಮಗೆ ||3||

ಮೂಲದಲಿದ್ದ ಸೊತ್ತು ಮುಂದಕ್ಕೆ ತಂದು

ಸುತ್ತದಿಕೆ ಕಾವಲಿಯಾದಾತನು|

ಹೋಳಾಗಿ ನೋಡಿದರೆ ಹೋದನೆಂದಪಕೀರ್ತಿ

ಕೇಳಿ ಹೇಳಿದೆನು ನಿಮಗೆ ||4||

ಪಶುವು ಶಿಶುವಿನ ನೆನೆದು ಕೂಸರೋಡಿ ಬಂದಂತೆ

ಪಶುಪತಿಯು ಬಂದು ಬೆರೆತ

ಬಿಡಬೇಡೆಂದು ಪರುವಗ| ಶಶಿಧರನು ಬಂದು ಬೈಗುವಾ ||5||

ಯಾಕೆನ್ನ ಹಣೆಬರೆಹ ಕಾಕು ಮಾಡಿದೆ ಸ್ವಾಮಿ

ಅನೇಕ ಜೀವದ ಕರ್ತು ಆದಿ ಅಲ್ಲಮಪ್ರಭುವೆ ||ಪ||

ಪರರ ನಿಂದೆಯನಾಡಿ ಪಾಪಕ್ಕೊಳಗಾಗಿದ್ದೆನೇನೊ

ಹರನ ರೂಪವ ಕಂಡು ಹಳಿದಿದ್ದೆನೇನೊ

ಗುರುವಿಗೆರಗದೆ ಗರ್ವಿಸಿ ನಡೆದಿದ್ದೆನೇನೊ

ಭರದಿ ಸಿಟ್ಟಿಲಿ ಶಿವಗೆ ಬೈದಿದ್ದೆನೇನೊ ||1||

ಸತಿ ಪತಿ ಹಿತವಿರಲು ಅಹಿತವ ಮಾಡಿದ್ದೆನೇನೊ

ಹಿತವಾಗಿದ್ದವರನ್ನು ಅಗಲಿಸಿದ್ದೆನೇನೊ

ಗತಿಗೆಟ್ಟು ಬಂದವರನ್ನು ದಬ್ಬಿ ನಾ ನುಡಿದಿದ್ದೆನೇನೊ

ಪತಿವ್ರತದವರನು ಬಯಸಿ ಪಾತಾಳಕ್ಕಿಳಿದಿದ್ದೆನೇನೊ ||2||

ಸತ್ಯವ ಸಭೆಯೊಳು ಕಲಿತು ಅಸತ್ಯವ ನುಡಿದಿದ್ದೆನೇನೊ

ಉತ್ತಮರ ಮಾತ ಉಲ್ಲಂಘಿಸಿದ್ದೆನೇನೊ

ಚಿತೈಸು ಪರಬ್ರಹ್ಮ ಚಿಕ್ಕ ಪರುವನ ತಪ್ಪ

ಕರ್ತು ಶ್ರೀ ಗಿರಿಮಲ್ಲ ಕರುಣಿಸಿ ಕಾಯೋ ||3||

ಯಾತರವನಂತ ಉಸರಲಿ|

ಜಗನ್ನಾಥ ಮಾಡಿದ ನರರೂಪ ಗುರುವೆ ||ಪ||

ಒಂಬತ್ತು ತುಂಬಿದ ಹೊಲಸಿsನ ಊರೊಳು

ಎಂಬತ್ತು ಕುಲವಾಗಿ ತುಳುಕ್ಯಾಡುತಿರೆ|

ಯಿಂಬಿಟ್ಟು ಈ ದೇಹ ಪೊರಳುಗೊಂಡಮೇಲೆ

ದಿಂಬಕ್ಕ ನಮಗ ಯಾತರ ಕುಲವಯ್ಯ ||1||

ಒಂದ ಬಚ್ಚಲ ಕುಣಿಗೆ ತುಂಬ್ಯಾವು ಮಲ ಮೂತ್ರ

ತುಂಬಿ ತುಂಬಿ ಹೊಲಸು ನಾರುತsದೆ|

ಒಂಬತ್ತೂ ದ್ವಾರದಿ ನರಕ ಸೋರುತsದೆ

ಹೊಲೆಯಾಗದ ಮನ ಯಾತರ ಕುಲವಯ್ಯ ||2||

ಅಚ್ಚರ ಮೇಲೆ ಲಕ್ಷಣವಿಟ್ಟಂತ ಹಕ್ಕಿ

ಪುಚ್ಚವ ಬಿಚ್ಚಿ ಹಾರಾಡುತಿದೆ|

ನಿಶ್ಚಿಂತ ನಿಜ ರೂಪದಲ್ಲಮಪ್ರಭುವಿಗೆ

ಹುಚ್ಚು ಪರವಾಗೆ ಯಾತರ ಕುಲವಯ್ಯ ||3||

ಯಾತರ ಶೀಲವದಣ್ಣ| ಪರಮಾತ್ಮನು ಮೆಚ್ಚನು ಮೇಲಿನ ಬಣ್ಣ|

ಜೇನುತುಪ್ಪಕ ಮನವು ಬಯಸಿ| ಜನಜಾತ್ರೆಯಲಿ ಅದನು ತರಿಸಿ|

ಮನಿಯೊಳಗೆ ಮರಿ ಮಾಡಿ ಇಡಿಸಿ| ಅಟ್ಟ ಅನ್ನವ ನೊಣದಿಂದ ಸರಿಸಿ ||ಪ||

ಶೀಲ ಮಾಡುತ ಸುಮ್ಮನ್ಯಾಕ ಕೂತಿ

ಮೂಲ ಅರ್ಥ ತಿಳಿದು ನೋಡೊ ಮೂರು ದಿನದ ಸಂತಿ|

ಹಿಂಗ ಉಣ್ಣಲು ಬಹುದೇನೊ ಶೆಟ್ಟಿ| ಪರ

ಹೆಂಗಳ ಬಯಸಿ ಕಡೆಗೆ ನೀ ಕೆಟ್ಟಿ ||1||

ಭವಿ ಬಹಳ ಕೆಟ್ಟನಂತಂಬಿ ಅಷ್ಟ

ಭವಿಗಳನೊಡಗೂಡಿ ಸುಳ್ಳಲ್ಲಟ್ಟುಂಬಿ|

ವಿವರಿಸಿ ನೋಡಿಕೊ ಪರಾವಲಂಬಿ ನಿನ್ನ

ನವದ್ವಾರದೊಳು ಕೆಟ್ಟ ಹೊಲಸು ತುಂಬಿ ||2||

ಹಲವಂಗಿ ಹರಿದಾವ ನೋಡು

ಹೊಲೆಯೆಂಬ ಬಳಕೆ ನೀ ಬಿಡು|

ಛಲದಿಂದ ಉನ್ಮನಿಗೆ ಹೋಗು ಅಲ್ಲಿ

ಮಲಗಿದ್ದ ಸರ್ಪನ ಊರ್ಧ್ವಮುಖವಾಗು ||3||

ಆಗ ಬೆಳಗುತಿದೆ ಸುಜ್ಞಾನವೆಂಬ ದೀಪ

ಬೇಗ ತೋರಿಸು ಷಡ್‍ಚಕ್ರದ ಪ್ರತಾಪ|

ಸಾಗಲಿ ನಿಜಲಿಂಗದ ಕುಲದೀಪ

ಬಾಗಲಿ ಶಿವನ ನಮ್ಮ ಪರವನಪಾಲಿಪ ||4||

ಯಾರಿಗೆ ಯಾರಿಲ್ಲ ಯಲ್ಲಾರು ನಮಗಿಲ್ಲಯೇ ಮನವೆ ನಮ್ಮ

ಮಾರಹರನ ಪಾದ ಮರಿಯದೆ ನೆನಿಕಂಡ್ಯಾಯೇ ಮನವೆ ||ಪ||

ಆಸೆ ಮಾಡಲಿಬೇಡ ಹೇಸಿ ಮಾನವರೀಗೆ ಯೇ ಮನವೆ

ಮೀಸಲಳಿಯದಿರು ಮಿಕ್ಕ ದೈವಕ್ಕೆರಗಿ ಯೇ ಮನವೆ|

ಸಾಸಿರ ನಾಮವ ಬಿಡದೆ ನೀ ನೆನಿಕಂಡ್ಯಾ ಯೇ ಮನವೆ ಜಗ

ದೀಶನ ಪಾದವ ನೆರೆ ನಂಬಿನೆನಿ ಕಂಡ್ಯಾ ಯೇ ಮನವೆ ||1||

ದೈವಯಿದ್ದಮ್ಯಾಲೆ ಧರೆಯೆಲ್ಲಾ ನೆಂಟರು ಯೇ ಮನವೆ

ದೈವ ತೊಲಗಿದ ಮ್ಯಾಲೆ ಯಾರಿಗೆ ಯಾರಿಲ್ಲ ಯೇ ಮನವೆ|

ವಿವರಿಸಿ ನೋಡಿಕೊ ಅಂತರಾತ್ಮದೊಳು ಯೇ ಮನವೆ

ಶಿವನ ಪಾದವನಂಬು ಕೈವಲ್ಯ ನಿನಗುಂಟು ಯೇ ಮನವೆ ||2||

ಮಾನವ ಜನ್ಮಕ ಬಂದು ಮರೆಯಾದಿರೆಚ್ಚರಿಕೆ ಯೇ ಮನವೆ

ದಾನ ಧರ್ಮವ ಮಾಡುವದು ಯಾರಿಗೆ ನೀ ಹೇಳು ಮನವೆ|

ಹೊನ್ನು ಹೆಣ್ಣು ಮಣ್ಣು ನನ್ನದೆಂದೆನುಬ್ಯಾಡ ಯೇ ಮನವೆ ಅನು

ಪನ್ನಂಗಧರಬಲ್ಲ ಪರಿಪರಿ ಅದರಾಚ ಯೇ ಮನವೆ ||3||

ಸಿಟ್ಟಿಲಿಂದೊಬ್ಬರ ಕೆಡುಕು ನುಡಿಯಲುಬ್ಯಾಡ ಯೇ ಮನವೆ

ಕೊಟ್ಟ ಭಾಷೆಗೆ ತಪ್ಪಿ ಕೂಲಿಗಾರ ನಾಗಲಿಬ್ಯಾಡ ಯೇ ಮನವೆ|

ಬಟ್ಟಗಾರಿಯೆಂಬೊ ಬಾಳಿವಿ ಹೊರಬ್ಯಾಡ ಯೇ ಮನವೆ

ಮುಟ್ಟಿ ಭಜಿಸೊ ನೀ ಮುಕ್ಕಣ್ಣನ ಪಾದವsಯೇ ಮನವೆ ||4||

ಹಾಸ್ಯ ಮಾಡಲಿಬೇಡ ಹರಿಗೆಟ್ಟು ಪರರಿಗೆ ಯೇ ಮನವೆ

ಮೋಸ ಮಾಡಿ ಪರಸತಿಯರನು ಅಪ್ಪದಿರುಯೇ ಮನವೆ|

ಲೇಸಾಗಿ ಪರವಚನ ನೀನು ನಡೆಸಯ್ಯ ಯೇ ಮನವೆ

ಈಶ್ವರನಲ್ಲಿ ವಿಮಲ ಭಕ್ತಿಯನಿಡು ಯೇ ಮನವೆ ||5||

ರಾಜ ಮೋಹನ ರಮಣ ಬಾರನಮ್ಮ

ಬಿತ್ತೋ ಬೀಜದಂತೆ ಬಿನ್ನೈಸಿ ಕರೆತಾರಮ್ಮ ||ಪ||

ಮನಕೆ ಬಂದವರ ಮಾತು ಮೀರಿ ಬಂದು

ತನ್ನ ಅನುವಿನೊಳಗಾದರೆನ್ನ ಅಗಲಿ ಹೋಗಬಹುದೆಂದು

ತನುವು ತನ್ನ ಪಾಪದೊಳಗಾಗಿ ಬಂದು

ದಿನವು ಎಂಬುದು ನನಗೆ ದಿವ್ಯ ಸಾವಿರ ವರುಷವಾಯಿತಮ್ಮ ||1||

ಹರಣಉಳ್ಳ ವೈರಿನ ಹಸ್ತಿಗಮನೆ ಹೋಗಿ

ಅಂತಃಕರುಣದಲಿ ಬೆಂಬಲಿಯಾ ಹಾಕಿ ಕರೆದು

ತೊರೆಯ ನಿನ್ನಯ ನಾಮಸ್ಮರಣ ತಪ್ಪಿತು ಶರೀರ

ತನ್ನ ಕಿರಣ ಮನಕೆ ಸೂಸುವಂತೆ ಕಿವಿದೆರೆದು ಹೇಳಮ್ಮ ||2||

ಅಳಿವ ಜ್ಯೋತಿಗೆ ತೈಲವಿತ್ತಂತೆ ಮನಕೆ

ಕಳೆ ತುಂಬಿ ಬಂದ ಕಾಳಬೆಳಗುಂದಿ ವೀರೇಶ

ಸುಳವಿನೊಳಗೆ ಸೊರೆಗೊಂಡನಮ್ಮ

ನಗರ ಪರವನ್ನಾಳಿದ ಪರಬ್ರಹ್ಮವೀರೇಶನಮ್ಮ ||3||

ರೋಗಿ ಹಳಿಯಲು ಕ್ಷೀರ ಹೋಗಬಲ್ಲುದೆ ಸಿಹಿಯು ಯೋಗಿನಾಥ

ಗೂಗಿ ಹಳಿಯಲು ಭಾನು ತೇಜಕೆ ಕುಂದುಂಟೇ ಯೋಗಿನಾಥ ||ಪ||

ಶ್ವಾನ ಬೊಗಳಲು ಮಸ್ತಿ ಆನೆಗೆ ಕುಂದುಂಟೆ ಯೋಗಿನಾಥ

ಜನವು ಹಳಿಯಲು ಕೊಡುವ ದಾತಗೆ ಕುಂದುಂಟೆ ಯೋಗಿನಾಥ

ವಾನರ ಹಳಿಯಲಿ ವನಕೆ ಕುಂದುಂಟೆ ಯೋಗಿನಾಥ

ಮಾನಹೀನರು ಹಳಿಯಲು ಘನಜ್ಞಾನಿಗಳಿಗೆ ಕುಂದುಂಟೆ ಯೋಗಿನಾಥ ||1||

ತುಡುಗ ಹಳಿಯಲು ಉಡುಪತಿಗೆ ಕುಂದುಂಟೆ ಯೋಗಿನಾಥ

ಬಡವ ಹಳಿಯಲು ಭಾಗ್ಯಪುರುಷಗೆ ಕುಂದುಂಟೆ ಯೋಗಿನಾಥ

ಮೂಢ ಹಳಿಯಲು ಪುಣ್ಯಕ್ಕೆ ಕುಂದುಂಟೆ ಯೋಗಿನಾಥ ||2||

ಕುರಿಯು ಹಳಿಯಲು ಕಬ್ಬು ಕಹಿಯುಂಟೆ ಯೋಗಿನಾಥ

ತೂರಿದ ಮಣ್ಣು ತಾ ಸೂರ್ಯಗೆ ಮುತ್ತಲುಂಟೆ ಯೋಗಿನಾಥ

ಜರಿವಗಲ್ಲದೆ ದೋಷ ಕರುಣಿಗುಂಟೆ ಯೋಗಿನಾಥ

ತೋರುವ ಕೃತ್ಯ ದುರಿತರಿಗಲ್ಲದೆ ನಗರ ಪರುವನಿಗುಂಟೆ ಯೋಗಿನಾಥ ||3||

ಲಜ್ಜೆ ನಾಚಿಕೆ ಹೋದಮೇಲೆ

ನಿಮ್ಮದೋಯ್ತೋ ರಾಚೋಟಿ ವೀರ ||ಪ||

ಆನೆಯನೇರಿದವಗೆ ಶ್ವಾನ ಕಚ್ಚಬಲ್ಲುದೇನು

ಇನ್ನೇನು ಇನ್ನೇನು ಇನ್ನೇನು

ಜೀವರಾಶಿ ಪ್ರಾಣಫಲ ಮುನ್ನೂರದರವತ್ತು

ಪ್ರಾಣಕ್ಕೆ ಬಂದ ಭಾನುಕೋಟಿ ತೇಜೋರೂಪ ರಾಚೋಟಿ ವೀರ ||1||

ಸ್ವಾರಿಯ ಕಾಯ್ದವಗೆ ತೋರಿ ಬದುಕೇನೆಂಬಂತೆ

ಆನೆ ಕಂಗಳಿಗೆ ಇನ್ನು ಕನಿಕಷ್ಟವೋ

ಪರಮ ಪಾವನ ಮೂರ್ತಿ ನಿಮ್ಮ ಪಾದವ ನಂಬಿ

ಹರಿಹರ ಬ್ರಹ್ಮರಿಗೆ ನಾನು ಅಂಜಿಲ್ಲೋ ||2||

ಹಿಂಡು ದೇವರಿಗೆಲ್ಲ ಗಂಡನೆಂಬ ನಿನ್ನ ಬಿರುದು

ಕಂಡ ಕಂಡ ಕಲ್ಲಿಗೆ ಮಂಡೆ ನಾನು ಎರಗಲಾರೆ

ಕೊಂಡು ಒಯ್ದರೆ ಒಯ್ಯೋ ಎನ್ನ ಪ್ರಾಣ ||3||

ಎಲ್ಲಮ್ಮ ಎಕನಾತಿ ಮಾರೆಮ್ಮ ಮಸಣೆಮ್ಮ

ಜಾರಿಬಿದ್ದ ಜಾಣರು ಮೈಲಾರ ಕೇತುಕ

ನೀರ ಕೊಡ ಹೊತ್ತುಕೊಂಡು ಕೋಲಗೊಂಬೆ ಕುಣಿಸುತ

ಹುಟ್ಟಿದೂರಿಗೆ ಉಟ್ಟುಗೈಲೆ ಹೋಗಲಾರೆನೋ ||4||

ಧರೆಯೊಳು ಯಾದಗಿರಿ ಪುರದಲ್ಲಿ ನಿಂದು

ಹಿರಿಯ ಬೆಟ್ಟದ ಕಲ್ಲು ಕರಿವೀರ

ಸ್ಥಿರದಿಂದಲಿ ಬಂದು ಪರುವನ ವ್ಯಾಧಿಯ

ಪರಿಹರಿಸು ಬಾರೋ ರಾಚೋಟಿ ವೀರ ||5||

ಲಿಂಗವಂತರಿವರಲ್ಲ ಜಗಜಂಗುಳಿ ದೈವಕ್ಕೆ ಎರಗುವರಲ್ಲ ||ಪ||

ಲಿಂಗವೇ ಶಿವನೆಂದು ಪೂಜಿಸಲಿಲ್ಲಾ

ರಂಗು ಇಟ್ಟು ಎರಗಿ ಕೇಳುವನೆ ಇಲ್ಲಾ

ಜಂಗಮರ ಕಂಡರೆ ಹಿಡಿಯುವನು ಕಲ್ಲಾ

ತಂಗಿ ತಾಯಿ ಎಂದು ತಪ್ಪುವರೆಲ್ಲಾ ||1||

ವಿಭೂತಿ ರುದ್ರಾಕ್ಷಿ ಇಟ್ಟು ಗುರು

ಡಿಂಬ ಶೋಭಿಸುವ ಸ್ತ್ರೀಯಳ ಸೋಕಿ ಅಪ್ಪಿಕೊಂಬ

ಜಿಬಿ ನಾಣ್ಯವುಟ್ಟು ಜಾತೇವ ತಿಂಬ

ಕಾಬುಶ್ ಬಂದಾಗ ತಪ್ಪಿಸಿಕೊಂಬಾ ||2||

ಮಾರಹರಲಿಂಗ ಮಂಡಲೊಳಿಗಿದ್ದು

ಊರ ದೇವತೆ ಮಾಡಿ ಹಾಸ್ಯಕ್ಕೆ ಬಿದ್ದು

ಹಾರಿಸಿ ಭಂಡಾರ ಧರಿಸಲಿ ಎದ್ದು

ಇವ ಯಾರವನಲೆಂದು ಯಮರಾಯನೊದ್ದು ||3||

ಹಿಂಡಿಪಲ್ಲೆ ಕಡಬು ಹಿತವಾಗಿ ಮಾಡಿ

ಮಂಡಿಸಿ ಮನೆಯೊಳು ಮಾತಂಗೇರು ಕೂಡಿ

ಅವರು ಉಂಡ ಮೇಲೆ ಉಣ್ಣದ ಲಿಂಗಕ್ಕೆ ನೀಡಿ

ಈ ಗುಂಡಿಗೆ ಧರಿಸಿದ ಗುರುವೆಲ್ಲ ಖೋಡಿ ||4||

ಹೇಮ ಹಿತ್ತಾಳಿಗೆ ಹೆಚ್ಚು ಕುಂದಿಲ್ಲ

ಗ್ರಾಮದ ರೈತರಿಗೆ ಗೌಡ ಘನವಲ್ಲ

ಪ್ರೇಮಾದಿ ಪರ್ವಗೆ ಶಿವನೆಂಬಾಸೆ ಇಲ್ಲ

ಕಾಮವೇರಿ ಕಾಣದೆ ಕಟ್ಟುವರು ಎದೆಗಲ್ಲ ||5||

ಲಿಂಗವಿದ್ದ ಮೇಲೆ ನಿಜವಾಗಿರಬೇಕು

ಅಂಗನಲ್ಲಿ ಅವಗುಣ ಅಳಿದಿರಬೇಕು|

ಸಂಗಮ ಶರಣರ ಸಂಗದಲ್ಲಿರಬೇಕು

ಲಿಂಗದೊಳಗ ಮನ ಬೆರೆತಿರಬೇಕು ||ಪ||

ಗುರುಪಾದವ ಕಂಡು ಗುಪ್ತದಲಿರಬೇಕು

ದುರುಳರನು ಕಂಡು ದೂರಾಗಬೇಕು|

ಪರಸತಿಯರನು ತಾಯಿಯೆನ್ನಬೇಕು

ಪುರದೊಳಗಿನ್ನು ಈಶಾಡಬೇಕು ||1||

ಸಸ್ತಿ ಅಂದರೆ ಮನಸ್ವಸ್ತಿಲಿರಬೇಕು

ತುತ್ತು ತುತ್ತನ್ನು ಶಿವಗೆ ತೋರುಣಬೇಕು|

ಕತ್ತಲೆ ಮನದೊಳು ಕರಗಿರಿಬೇಕು

ಉತ್ತರ ಕೊಟ್ಟರs ಮಾತುಳಿಬೇಕು ||2||

ವೈರಿಯ ಕಂಡು ಮುರಾರಿಯಾಗಬೇಕು

ಯಾರ ಹಂಗಿಲ್ಲದೆ ಬದುಕಿರಬೇಕು|

ನರನ ಸಾಧನೆಯ ಅರಿತಿರಬೇಕು

ಹರನೆಂಬೊ ಶಬುದವ ನೆನಪಿಡಬೇಕು ||3||

ಮಂಕು ಮನುಷನೆಂಬೊ ಮಾತಿರಬೇಕು

ಕಿಂಕರ ನಿಷ್ಠೆಯಲಿರುತಿರಬೇಕು

ಬಿಂಕದ ಮಾತು ಬಿಟ್ಟಿರಬೇಕು

ಶಂಕರ ತಾನೋಡಿ ನಕ್ಕಿರಬೇಕು ||4||

ಧರ್ಮವೆಂದರೆ ದಯಾಮನ ಇರಬೇಕು

ಕರ್ಮಕ್ಕೆ ಸಿಲುಕದೆ ಕಡೆಗಾಗಬೇಕು

ನಿರ್ಮಿತ ಪರವಗ ನೀಲಕಂಠರಿರಬೇಕು

ಧರ್ಮ ಶ್ರೀಗುರುವಿನ ದಯವಿರಬೇಕು ||5||

ವರವ ಪಾಲಿಸು ಎನಗೆ ಸೂಗೂರು ವೀರ ವರವ ಪಾಲಿಸೆನಗೆ ||ಪ||

ವರವ ಪಾಲಿಸು ಎನಗೆ ಮರಣ ರಹಿತ ನಿಮ್ಮ

ಚರಣ ಕಮಲವ ನೆರೆ ನಂಬಿದೆನಯ್ಯ ||ಅನುಪಲ್ಲ||

ಮೃಢನ ಉರಿಗಣ್ಣಿನಿಂದ ಉದ್ಭವಿಸಿ ಕಿಡಿ ಕಿಡಿ ಸೂಸುತ

ಸಿಡಿಲಿನ ಪರಿಯಂತೆ ತೋರಿ ಸೂಗೂರು ಭಕ್ತರ

ತೊಡರು ಬಾರದೆ ಗಡಣದೊಳಗೆ ನಿಮ್ಮ ||1||

ಅಹಂಕಾರ ಬಂದವರ ಹಲ್ಲನೆ ಮುರಿದ ಬಿಂಕದ ದೊರೆಯೆ ಕೇಳೊ

ಟೊಂಕದಲಿ ಬಾಕು ವಂಕಿ ತೋಳು ಭಾಪುರೆ|

ಶಂಕರ ಸುತನೆ ನಿರಹಂಕಾರಯುತ ನಿಮ್ಮ ||2||

ನೀಲ ವಜ್ರದ ತುರಾಯಿ ಫಣಿಯಲಿ ಬಾಲ ಚಂದ್ರ ಮೌಳಿ

ಡಾಲು ಫಿರಂಗಿಯ ಮೇಲಾದ ವಡ್ಯಾಣ ಪಾದ ಪೆಂಡಿಯಲಿ

ಲೋಲ ಪರಪ್ಪಯ್ಯಗೆ ವರವ ಪಾಲಿಸೋ ಸೂಗೂರು ವೀರ ||3||

ಸಣ್ಣವರು ದೇವಿ ಪರಿಹರಿಸೆ ಚಲ್ವ ಪುಣ್ಯ

ಪುತ್ಥಳಿ ಬೊಂಬೆ ಪೂರ್ಣ ದಯಾಳೆ ||ಪ||

ಎಲ್ಲ ದೇವರ ದೇವಿ ವಲ್ಲಭೆಯಾವರ ಮೂರ್ತಿ

ಸೊಲ್ಲುಸೊಲ್ಲಿಗೆ ನಿನ್ನ ಸ್ತುತಿಸುವರು ಬಹುಜನರು

ಬಲ್ಲ ಭಕ್ತರ ಪ್ರೇಮಿ ಬಡವರಿಗೆ ಬಾಂಧವಿ

ಬಿಲ್ಲು ಕಸರಿಲ್ಲದೆ ಬಿರಿದುಂಟು ಮಾಡೋ ||1||

ಹಸಿವು ತೃಷೆಗಳಿಲ್ಲ ಹಡೆದವರಿಗೆ

ಹಗಲಿರುಳು ದೆಸೆಗೆ ಬಾಯಿ ಬಿಡುವರು ದೇವಿ ಮೊರೆ ಕೇಳೆಂದು

ಶಿಶುವಿಗೆ ಸೆರೆ ಬಿಡಿಸು ಶ್ರೀಘ್ರದಲಿ ಬಂದು

ಎಸೆವುದು ಕೀರ್ತಿವೇಣಿ ಲೋಚನೆಯೇ ||2||

ಗ್ರಹ ಹಿಡಿದ ಚಂದ್ರ ಘಾಸಿಯಾದ ತೆರದಿ

ಪ್ರಾಣಿಗಳು ಬಳಲುವವು ಪ್ರತಿಷ್ಠೆ ಮಾಡಮ್ಮ

ಆಣೆ ನಿನ್ನದು ಕೋಟಿ ಆರ್ಭಟ ನಿಲ್ಲಿಸು ತಾಯಿ

ಕಾಣಬಂದಾ ಮೈಲಿಗೆಯ ಕಳೆಯೇ ಕಾಮಾಕ್ಷಿ ||3||

ಸತ್ಯವರಗಳನ್ನು ತೋರಿದಿ ಸಾವಿರ ಮುಖದಲ್ಲಿ

ನಿತ್ಯನ್ನ ಸವಿದುಂಬಿ ನಿಜ ರೂಪದಲ್ಲಿ ಬಂದು

ಮುತ್ತಿಗೆಯ ಹಾಕಿದ ಮೃತ್ಯುವನು ಪರಿಹರಿಸೇ

ನೀ ಎತ್ತಿ ಹಿಡಿಯೇ ಅಭಯ ಹಸ್ತವಿಶ್ವ ಕುಟುಂಬಿ ||4||

ಹುಗ್ಗಿ ಹೋಳಿಗೆ ತುಪ್ಪ ಕುಂಕುಮ ನಿನಗೆ

ದೀರ್ಘಾಯುಷ್ಯ ಕೊಡು ಅಂಬರವನಿಟ್ಟು

ಎಗ್ಗು ಎಣಿಕಿಲ್ಲದೆ ಕೊಟ್ಟು ಪರ್ವಗೆ

ದಯ ನೀಡಿ ಶೀಘ್ರದಲಿ ಸಲಹಮ್ಮ ಸತ್ಯಸುಮಾತೆ ||5||

ಸತ್ಯರ ಸಖನ ಮಾಡೆಂದೆ ಎನ್ನ

ಚಿತ್ತದೊಳಿರು ಪ್ರಭು ತಂದೆ ||ಪ||

ಕಿನ್ನರಿಯ ಬ್ರಹ್ಮಯ್ಯ ಸತ್ಯ

ಪ್ರಸನ್ನವಾಗಿರು ಪ್ರಭು ನಿತ್ಯ

ಹನ್ನೊಂದು ಹಣ ಅಘಹರಳು ಪಡಕೊಂಡು

ಚೆನ್ನಾಗಿ ಗುರುವಿಗೆ ಉಣಿಸ್ಯಾಡುವಂತೆ ||1||

ವೇದವು ನಾಲ್ಕು ಕಲ್ಲಯ್ಯ

ಓದಿಸಿದ ಶ್ವಾನನ ಕೈಯಲಿ

ವಾದವ ಗೆಲಿದ ಉನ್ನತ ಕೀರ್ತಿ

ಆದನು ಗುರುವಿನಂಘಿಯ ಕಂಡಂತೆ ||2||

ವರಮೂರ್ತಿ ನಾಗಯ್ಯ ಶಕ್ತ ಲಿಂಗವ

ಚರಣಕೆ ಧರಿಸಿದ ಪರಮ ವಿರಕ್ತ

ಕೊರೆದರೆ ಪ್ರಾಣವು ಕೊಟ್ಟಂತೆ ಮರಳಿರೆ

ಹರಗುರು ಶಾಂತಯ್ಯನೆನುತಲಿ ಇದ್ದಂಥ ||3||

ಸತ್ತಂತ ಬಸವನ ಪ್ರಾನಮಾನ

ಅರ್ತೀಲೆ ಪಡೆದ ನಿರ್ಮಾಣ

ಸತ್ಯ ಪೈಗಂಬರನ ಸರ್ವ ಪವಾಡವು

ಎತ್ತೆತ್ತ ಅಲ್ಲಮನೊಳು ಏಕವಾಗಿದ್ದಂಥ ||4||

ಎಲ್ಲ ಶರಣರ ಬಲಗೊಂಡು

ಕರೆವೆ ಅಲ್ಲಮಪ್ರಭುವಿನ ದಂಡು

ಸೋಲಿಸಿ ಪರುವಾಗ ಸುರಿಸಿದಮೃತವನ್ನು

ಎಲ್ಲ ಗಣಂಗಳಿಗೆರಗಿ ಅರ್ಪಿಸುವಂಥ ||5||

ಸದ್ಗುರುವಿನ ಪಾದವೇ ಗತಿಯೆನಗೆ

ಮೋದದಿ ದಶವಿಧ ನಾದವ ಕೇಳಿದಾ ವೇದ ಮೂರುತಿಯಾ ||ಪ||

ಆರು ಸ್ಥಲಂಗಳೊಳು ಆರು ಲಿಂಗವ ಕೂಡಿ

ಮೀರಿದುನ್ಮನಿಯೊಳು ಸೇರಿದ ಮಹಿಮನಾ ||1||

ಗಂಗಿಯ ಮುನಿಗಳು ಸಂಗಮದೊಳು ಮಿಂದು

ಅಂಗ ಮೂರನಳಿದು ಲಿಂಗದೊಳಾದ ಮಹಿಮನಾ ||2||

ಲಕ್ಷದೊಳು ಲಕ್ಷ ಕೂಡಿ ಲಕ್ಷದೊಳು ಲಯವಾಗಿ

ಮೋಕ್ಷ ಕೊಡುವಂಥಾ ಸಾಕ್ಷಾತ್ ಮಹಿಮನಾ ||3||

ಸಂತಿಗೆ ಬಂದವರು ನಾವೆಲ್ಲಾರು

ಚಿಂತಿಯ ಮರತರಗಳಿಗೆ ನಿಲ್ಲೋರು ||ಪ||

ಎಚ್ಚರಿಕೆ ಮನದಲ್ಲಿ ಯೇನೇನು ಇದ್ದದ್ದು

ಹಚ್ಚಿ ಹೇಳುವರುಂಟೆ ಹೃದಯದಲ್ಲಿ|

ಗಿಚ್ಚ ಗಂಣನ ಶುೃತಿಗೆ ಕಿವಿಗೊಡು ನೀನೆಂದು

ಬಚ್ಚಿಟ್ಟು ಲೆಕ್ಕವನು ಬಿಡದೆ ಕೊಂಬುವರು ||1||

ಹೊಸಪೇಟೆಯೊಳ ಹೊಕ್ಕು ನಸುಕಲಿ ನಗಿ ಮಾತು

ವಿಷಯಕ್ಕೆ ಮನಸೆಲ್ಲಯಿಡುತಲಿ ಮಾತಾಡಿ|

ಶಶಿಧರನ ಸಕಲ ಸತಿಸುತರೆಂಬುವ ಮೋಹ

ಮುಸುಕಲ್ಲಿ ಮಾತಾಡಿ ಮುಂದಾಗಿ ಹೇಳ್ಯಾರು ||2||

ಹಣದ ಆಕಾಂಕ್ಷೆ ಹತ್ತಿದವರಿಗೆ

ದಣಿಯೆ ನಾನೆಂಬೊ ಧಿಮಾಕಿನಲ್ಲಿ

ಕುಣದಾಡಿ ಮನುಜರನ ಕರವರಿಯದವನೆಂದು

ಎಣಿಕೆ ಮಾಡುವಾಗ ಏನೆಂದು ಹೇಳವರು ||3||

ಕಾಲಹರನ ಕೀರ್ತಿ ಕೆಡಬಾರದೆಂದು

ಮೇಲಾಗಿ ಸ್ತುತಿಸುವರು ಮೇಲೆ ಕಂಡವರು|

ನೀಲಕಂಠನ ಭಕ್ತ ನಿರ್ಮಲ ಪರುವನಿಗೆ

ಆಲಿಸಿ ವರ ಕೊಟ್ಟ ಪರಮಾತ್ಮನೆಂಬುವರು ||4||

ಸರ್ವ ಜೀವ ದಯಾಪರನೆಂದು ಬಿರುದು ಸಾರುವೆ ಭಿನ್ನವಿಲ್ಲದೆ ನಿಂದು ||ಪ||

ವರವ ಕೊಟ್ಟು ಸಲಹು ದಯಾಸಿಂಧು ಮರಣವಿದೂರ

ಮಾರ್ಮಲೆತ ದುಸ್ಮನರ ಹರಣ ಸಂಹರನೇ ||1||

ಹರುಷಾಬ್ಧಿ ಶೂರ ಹರಿಣನಾಳ್ಬನ ಧರ ಅಜಶಿರಕಾರ ಶಶಿಧರನೆ

ಮನೋಹರ ಶಂಕರನೆ ಧೀರ ಆಶಾವಿರಹಿತ ಅಲ್ಲಮ ಅಜಾತ ರಾಶಿದೈವನೆ ||2||

ಪಿತನೆ ರಕ್ಷಿಸುವಾತ ಕಾಶಿ ವಿಶ್ವನಾಥನೆ

ಪರ್ವತಗೆ ಕೊಟ್ಟ ಭಾಷೆ ನಡಿಸುವಾತನೆ ಭಕ್ತಿಗೆ ಸೋತನೆ ||3||

ಅನಾದಿ ಬಾಂಧವನೇ ಅಮೃತ ಸಂಜೀವನೆ

ಆದರಿಸಿ ಕಾಯ್ವ ನಿಟಿಲಾಕ್ಷ ದೇವನೆ ||4||

ಕನಸಿನ ಭಾವ ಕರದೊಳು ಈವ ಮನಸಿನ ವಿಸ್ತಾರ

ನಗರ ಪರವಾನ ವರನೆ ||5||

ಸಾರಂಗ ನಯನೆ ನೀ ಸಾರೋ

ಆತ ಬಾರದಿದ್ದರೆ ಶಖಿಯದುಂಗುರವ ತೋರೊ ||ಪ||

ಕುಂಭ ಕುಚದ ನಡುವೆ ಬಂದು

ಕೋರಂಬು ತಾಕಲು ನಾರಿ ನಡುಗಿದಳೆಂದು

ಬೊಂಬೆ ಆದಳು ಬೆರಳು ನೊಂದು

ನಿನ್ನ ನಂಬಿದವಳ ಭ್ರಾಂತ ನಡೆಸಬೇಕೆಂದು ||1||

ಸೆಳೆ ಮಂಚದೊಳು ಕಂಡ ಕನಸು

ಆಕೆ ತಿಳಿದು ಹೇಳಿದಳಯ್ಯಾ ನೀ ಬಂದ ದಿನಸು

ಎಳೆದುಂಬಿ ಗುರಳಿಯ ಮನಸು

ಇಕ್ಕಿಕಳೆ ಹೇಳ ಬಾರಯ್ಯ ಇನ್ಯಾಕೆ ಮುನಿಸು ||2||

ಕಸ್ತೂರಿಯ ಮೃಗವು ಕಮಲಾಕ್ಷಿ

ಎರಡು ಹಸ್ತಗಳು ಮುಗಿದು ಹೇಳಿದಳು ಶಿವಸಾಕ್ಷಿ

ಹಸ್ತಗಮನೆಯಂದುಪೇಕ್ಷಿಸಿ

ಕೇಳು ಸ್ವಸ್ತಿಯಿಂದೆರಗಿದಳು ಈಡು ದಯಸಾಕ್ಷಿ ||3||

ಪಂಕಜ ಮುಖಿಯೇ ನಿಮ್ಮ ಅಡಿಗೆ

ಬಹಳ ಕಿಂಕರಳಾಗಿ ಕೀರ್ತಿಸುವಂತ ನುಡಿಗೆ

ಝೇಂಕರಿಸುವ ತುಂಬಿ ಮುಡಿಗೆ

ಕೇಳಿ ಶಂಕರ ನಡೆತಂದ ಅವಳಿದ್ದಯೆಡಿಗೆ ||4||

ಬಂದ ದೇವನು ಒಡಗೂಡಿ

ಪಾದಕೊಂದಿಸುವೆನುತೆ ಹಾಡುವ ಮೃದನುಡಿ

ಚಂದ್ರಶೇಖರ ಮೆಚ್ಚಿ ಬೇಡೆಂದು

ಪರ್ವಗೆ ಕೊಟ್ಟ ಭ್ರಾಂತ ಕೈಗೂಡಿ ||5||

ಸಾರುವೆ ಸಟೆಯಲ್ಲ ಸರ್ವ ಜನರ ಮುಂದೆ

ಮಾರಹರನ ಬಿರಿದು ಮನಸ್ಸಿಗೆ ಬಂದೈತೆ ||ಪ||

ಕೂಡು ಉಂಡು ಮಾದರ ಕುಲ ಛಲ ಎಣಿಸದೆ

ಬ್ಯಾಡರ ಕನ್ನನ ಭಕ್ತಿಗೆ ಬೆಸನಾದೆ

ಅಡಗೀದ ಕೈ ಕೊರುವರಾತ್ಮದೊಳಗೆ ಹೋಗಿ

ಜಡಿದು ಹೊನ್ಮಳೆ ಜಗದೊಳು ಸುರಿಸಿಸನೆಂದು ||1||

ಕರಸ್ಥಲದಯ್ಯನು ಕಟ್ಟದ ಸರವಿಗೆ

ಕುರಿ ಹಿಕ್ಕಿಯೊಳು ವರವಾ ತೋರಿಹನೆಂದು

ಬಿರಿದುಳ್ಳ ಪಾರ್ಥನ ಬಿಲ್ಲು ಪೆಟ್ಟಿಗೆ ಬಿದ್ದು

ಧೀರರ ಅರಮನೆ ದ್ರವ್ಯ ಶ್ರದ್ಧಾನೆಂದು ||2||

ಕನಸಿನಾ ರಸ ಬೇರುಂಡ ಹಕ್ಕಿಯ ತೋರಿ

ಅಡಪಿಗನಾದನೋ ಹರುಷಾದಿ ನಂಬಿಗೆ

ಜಡಿಗಳ ಮರಿ ಮಾಡಿ ಹೆಡಿಗಿಯ ಹೊತ್ತನು

ಬಡವಿಯ ಮಗನಿಗೆ ಭಾವನಾದನೆಂದು ||3||

ಸಿರಿಯಾಳ ಚಂಗುಳಿಯ ಶಿಶುವಾ ಕೊಂದುಂಡನು

ಹರವಿಯ ಹಾಲನೆ ಸವಿದು ಹಸುಳೆಯ ಕೈಯಿಂದ

ಹರುಷಾದಿ ಚನ್ನಯ್ಯ ಪರುಷವ ಪಡೆದಾನು

ಪರವೆ ನಾಬಿಯ ಕುಚದಿ ಪಡಿ ಹೊನ್ನ ಕೊಟ್ಟನೆಂದು ||4||

ಮೊದಲು ಸ್ತ್ರೀಯಳ ಬೇಡಿ ಮೊಲೆಗಳನುಂಡನು

ಮಧುಸೂದನನು ತನ್ನ ಮಾವನ ಮಂದಿರ ಕಾಯ್ದನು

ನಂದಿಧರನೊರವಿಟ್ಟು ನಗರ ಪರ್ವಗೆಯಿತ್ತು

ಪರ್ವತದೊಳು ವಾಸವಾದನು ||5||

ಸಾಕ್ಷಿ ಪೇಳುವರಾರು ಮೋಕ್ಷ ದಾಯಕನೇ

ಶಿಕ್ಷ ನಿನ್ನಿಂದ ಅಧಿಕ ಎನಲಾಗಿ ಶಿವನೇ ||ಪ||

ಆದಿಗೆ ಅನಾದಿಯ ಬಾಧೆ ಬಿಡಿಸುವನು ನೀನೆ

ಸಾಧನದ ಶಿವಮಂತ್ರ ನುಡಿಸುವಾತನು ನೀನೆ

ಸಾಧು ಸತ್ಪುರುಷರೊಳು ಕೂಡಿ ಅಗಲುವವ ನೀನೆ

ನಾದದೊಳು ಕುಣಿಕುಣಿವ ವಿಧಿಮಾಯೆ ನೀನೆ ||1||

ಜಾಣನು ಲೌಕಿಕ ಶ್ಯಾಣೇತನವು ನೀನೆ

ಅಣು ಮಾತ್ರ ಸುಖವೆಂದು ಕ್ಷಣ ಮಾತ್ರ ನೀನೆ

ಎಣಿಕೆಯಲ್ಲದ ವಸ್ತು ಪ್ರಾಣದೊಲ್ಲಭನು ನೀನೆ

ದಣಿದಣಿದು ಹಣ ಗಳಿಸಿ ಋಣಮುಕ್ತ ನೀನೆ ||2||

ಗಾತ ದಯಾಳ್ದನು ಸೂತ್ರಧಾರಿಯು ನೀನೆ

ಮಾತು ಮಾತಿಗೆ ತತ್ವ ಕೊಟ್ಟಾತ ನೀನೆ

ಜಾತ ಧರ್ಮದ ನೆಲೆಯು ಪ್ರೀತಿಯಾದವ ನೀನೆ

ಶತಿ ಕಂಠ ಗುರು ಶರಭ ಮಹಾ ಪ್ರಭುವೆ ನೀನೆ ||3||

ಶೃಂಗಾರವಾಗಿಹಳು ಶೂಲಧರನಡಿಗೆ|

ಮಂಗಳ ಭಾಗ್ಯಳು ಮನಬಂದ ವಸ್ತುವ ತೊಟ್ಟು ||ಪ||

ಮರವೆಂಬ ಮನ ತೊಟ್ಟು| ಮೈಲಿಗೆಯನೆ ಬಿಟ್ಟು|

ಇಹ-ಪರವು ಒಂದೆಂಬ ಇಂಪಿನ ಮಡಿಯುಟ್ಟು

ಅರಹು ಸುಜ್ಞಾನದ ಅಂಜನಂಗಿಯ ತೊಟ್ಟು

ಪರಸತಿಗೆ ಮೈಯೊಳ ಪಾಪಕ್ಕೆ ನಡು ಕೆಟ್ಟು ||1||

ತೆರವಾದ ಸುತ್ತ ತಿಳಿಗುಣವೆಂಬ ಮುಂಡಾಸ|

ನಿರುಪಾದ ಗುಣ ಉಳಿದು| ನಿಧಾನದ ಹಚ್ಚಡ ಹೊದ್ದು

ಕರವೆತ್ತಿ ಮಾಡೋ ಧರ್ಮವೇ ||2||

ಕನಕದಾಭರಣ ಇಂತು ವರಗುರು ಧ್ಯಾನದ

ಒಂಟಿ ಜೋಡನೆ ಉಟ್ಟು

ಆರೆರಡು ಗುಣವೆಂಬ ಅಡಿಗೆ ಆತ್ಮದಿ ಕಡಿದು

ಮೂರೆರಡು ಗುಣಗಳ ಮುರಿದು

ವೀಳ್ಯವ ಮಾಡಿ ಬಾಯಿ ಸವಿಯೆಂಬ

ಸತ್ಯರ ಒಡಗೂಡಿ ಮಾರನಂಘ್ರಿಗೆ ಎರಗದೇ

ಪರುವಾಗ ಮನದಿ ||3||

ಶರಣೆಂದು ಪಿಡಿವೆ ಶ್ರೀಗುರು ಪಾದ| ದಯ

ಕರುಣದಿಂದ ಎನ್ನ ಕಾಯ್ದ ಪಾದ ||ಪ||

ವಾದ ತರ್ಕಕ್ಕೆ ವಜ್ಜೆ ಪಾದ

ವೇದ ಶಾಸ್ತ್ರಕ್ಕೆ ನಿಲುಕದ ನಿಜಪಾ

ಆದಿ ಅನಾದಿಗಾಧಾರವಾದ ಪಾದ ಸತ್ಯ

ಸಾಧು ಸಜ್ಜನರು ಪ್ರಾರ್ಥಿಸುವ ಪಾದ ||1||

ಪಾಪವಿದೂರ ಪಾವನ ಪಾದ

ಮುಕ್ತಿ ಸೋಪಾನ ಸುರರಿಗೆ ಪಾದ

ವಿಪರೀತವಾದ ವಿಶ್ವರೂಪವಾದ

ನಿತ್ಯ ಜಪತಪ ಜನಜಾತ ಹೊರುವುದೀ ಪಾದ ||2||

ಆರೆಂಟು ಲೋಕವಾಳುವ ಪಾದ

ಭಕ್ತಿ ಸಾರ ಶರಧಿಯ ಸವಿಗೊಂಬ ಪಾದ

ಘೋರ ಪಾತಕ ಪರಿಹಾರ ಪಾದ

ಪುಣ್ಯ ವಾರಿಧಿ ಎನಿಸಿತು ವಸುಧೆಗೆ ಪಾದ ||3||

ಕಂಟಕ ದುರಿತವ ಕಳೆವುದೀ ಪಾದ

ವೈರಿ ಗಂಟಲ ಗಾಣವು ಘನ ಮಹಿಮನ ಪಾದ

ಉಂಟೆನ್ನ ಪವಾಡ ಉದ್ಧಾರ ಪಾದ

ಕೀರ್ತಿ ಎಂಟು ದಿಕ್ಕಲಿ ತುಂಬಿದ ಶಿವ ಪಾದ ||4||

ಸರ್ವ ಪುಣ್ಯಕ್ಕೆ ಅಧಿಕವಾದ ಪಾದ

ಕಾಶಿ ಪರ್ವತ ಹಂಪಿ ರಾಮೇಶ್ವರ ಪಾದ

ಪೂರ್ವದಲಿ ಪುಣ್ಯಪೂಜಿತ ಪಾದ

ನಗರ ಪರುವನಿಗೆ ಸಾಯುಜ್ಯವೀವ ಪಾದ ||5||

ಶಾಂತ ಮೂರುತಿ ತನ್ನಕರದೊಳಗಿದ್ದು ಮನದ

ಚಿಂತೆ ಬಂದರೆ ಕ್ಷುದ್ರ ದೈವಕ್ಕೆರಗುವರೆ ||ಪ||

ಹಾಲು ಸಾಗರ ತನ್ನ ಹತ್ತಿರ ಇರಲಿಕ್ಕೆ

ವಾಳಿ ಆಕಳ ಹಿಂಡ ಓಡ್ಯಾಡಬಹುದೆ

ಹೋಳಿಗೆ ಹುಗ್ಗಿ ತುಪ್ಪ ಹೊತ್ತುಕೊಂಡು ಪರರ

ಆಳಾಗಿ ಅಂಬಲಿಯ ಬೇಡಿ ಉಣ್ಣಬಹುದೆ ||1||

ತನಗೊಲಿದು ತಾಳಿಯ ಕಟ್ಟಿ ಆಳುವನಿದ್ದು

ಅನ್ಯ ಪುರುಷರಿಗೆ ಅಳವಡಬಹುದೆ

ಹನ್ನೆರಡು ಬಣ್ಣದ ಹಸ್ತಕಡಗವಿದ್ದು

ಇನ್ನು ಹಿತ್ತಾಳೆ ಬಳೆಯ ಇಡಿಸೆನ್ನಬಹುದೆ ||2||

ಮಂಚದ ಸುತ್ತಮುತ್ತ ಮಹಾಂತ ನಿಲುಗನ್ನಡಿಯಿದ್ದು

ಹಂಚಿಕೆ ಹಲ್ಲು ತೆರೆದು ಫಲವೇನು

ಪಂಚ ಬ್ರಹ್ಮರ ತರುಳ ಪರುವನ ಪಾಲಿಸುವಂಥ

ಪಂಚಮುಖ ಪ್ರಭು ಇದ್ದು ಪರದೈವಕ್ಕೆ ಎರಗುವರೆ ||3||

ಶಿವನೆ ಶ್ರೀಮನ್ಮಹಾದೇವ ಪುಷ್ಪಕೆ ಆರ್ತಿತು ಮೋಹ

ಭುವನದ ಭಕ್ತರಿಗನುಭಾವದ ಪೂಜೆಯ ಕೇಳೆಲೊ ಜೀವ ||ಪ||

ಕಸ್ತೂರಿ ಕಮ್ಮೆಣ್ಣೆ ಪುನುಗು ಕದಂಬಾ

ಮಸ್ತಕ ಬಿಚ್ಚಿ ಪುಟೆಯ ಗೊಂಬೆ

ವಿಸ್ತರದಿಂದ ಪೂಜೆಯ ಕೊಂಬಾ

ವಸ್ತು ಹುಲಿಚರ್ಮ ತಲಿಗುಂಬಾ ||1||

ವಿಭೂತಿ ಗಂಧಾಕ್ಷತೆಯಿಟ್ಟು

ನಾಭಿ ಕಮಲ ಸಾವಿರ ತೊಟ್ಟು

ಅಭವನ ತ್ರೈ ಮುಖಗಳಳವಟ್ಟು

ಲೋಬಾನ ಕರ್ಪುರಗಳ ಸುಟ್ಟು ||2||

ರುಂಡಮಾಲಿಯಾ ಹಾರವ ಹಾಕಿಕೊಂಡು

ಕೆಂಡಗಣ್ಣಿಗೆ ಕಾಮನ ನೂಕಿ

ಕೊಂಡೊಯ್ದ ಭಸ್ಮ

ಸರ್ವಾಂಗ ಪೂಸಿ ಪೂಜೆ ನೋಡಾ ||3||

ಕೇಳು ಸಾವಿರ ಶಂಖ ಘಂಟಾನಾದ

ಬಾಳ ಸಕ್ಕರೆ ಜೇನು ಹಾಲಿಲಿಂದೆ

ಬಾಳಾಕ್ಷಗೆ ಸಮರ್ಪಿತವೆಂಬೆ ||4||

ಸುರರು ಪುಷ್ಪದ ಮಳೆಗರೆವುತಲಿ

ಪರಶಿವನ ಪಾದಕ್ಕೆ ಎರಗುತಲಿ

ವರವು ನಿರ್ಮಿತ ಪರುವಗೆ

ಧರೆಯೊಳು ಮೆರೆವ ವೀರೇಶಗೆ ||5||

ಅಲ್ಲದವರಿಗೆ ಮಾಡಿದ ಉಪಕಾರವು

ಯಲ್ಲಾರು ನೀವು ಕೇಳಿರಣ್ಣ |

ಕಲ್ಲು ಸಕ್ರಿ ಜೇನು ಕತ್ತಿsಗೆ ಮೇಸಿದರೆ

ಕಾಳಗಕ್ಕೆ ತೇಜ ಆದಿತೇನಣ್ಣ ||ಪ||

ಉತ್ತಮರಿಗೆ ಮಾಡಿದ ಉಪಕಾರವು

ಹತ್ತುಪ್ಪ ಹಾಲು ಸಕ್ರಿ ಕೂಡಿದಂಗ |

ಪ್ರತಿಷ್ಠೆಯs ಮನುಜ ಬಿಟ್ಟರs ಪ್ರಾಣವ

ಅತ್ತ ನರಕಕ್ಕ ಹೋಗೋದು ಕೇಳಿರಣ್ಣ ||1||

ಬಲ್ಲವರಿಗೆ ಮಾಡಿದ ಉಪಕಾರವು

ಬಿಲ್ಲು ಝೇಂಕರಿಸಿದಂತೆ ನೋಡಿರಣ್ಣ |

ಅಧಮರಿಗೆ ಮಾಡಿದ ಉಪಕಾರವು

ಖಿನ್ನವಾಗುವುದು ಮುಂದೆ ಕೇಳಿರಣ್ಣ ||2||

ಸಾಧು ಸತ್ಪುರುಷರಿಗೆ ಮಾಡಿದುಪಕಾರವು

ಸಾಧನವಾಗುವದು ಸ್ವರ್ಗಕೆ ಕೇಳಿರಣ್ಣ |

ಈ ಧರೆಯೊಳು ಪರುವನ ವಿಸ್ಮಯ ರೂಪನ

ಪಾದಕೆರಗಿ ನೀವು ಪುಣ್ಯ ಪಡೆಯಿರಣ್ಣ ||3||

ಹಳ್ಳದ ರಾಚಯ್ಯ ಆರಿಗೂ ತಿಳಿಯದು ನಿನ್ನ ಮಾಯೆ ||ಪ||

ಹಳ್ಳದ ರಾಚಣ್ಣ ಪುಂಡ

ಮಲೆತ ದುಷ್ಟರ ಗಂಡ

ಭಕ್ತರ ಭಕ್ತಿಯ ಕೈಕೊಂಡ

ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||1||

ಹಳ್ಳದ ರಾಚಣ್ಣ ಕೀರ್ತಿ

ದೇಶಕ್ಕೆ ಹರಿದಿತ್ತು ನಿನ್ನ ವಾರ್ತೆ

ಪಂಚಪೌರುಷದ ಮೂರ್ತಿ

ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||2||

ಮೂರು ಕಣ್ಣಿನ ಕಂದ

ಭದ್ರ ಕಾಳಮ್ಮನ ಕಂದ

ಗುಡ್ಡದಾಗೆ ಮನೆ ಮಾಡಿಕೊಂಡ

ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||3||

ಹಿಂದಕ್ಕೆ ಅಸುರರ ಸೀಳಿ

ವೀರ ಅವತಾರವ ತಾಳಿ

ಉಡುಪತಿಗೆ ತಂದೆಲ್ಲೋ ದಾಳಿ

ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||4||

ದೇಶಕ್ಕಧಿಕವಾದ

ವಾಸುಳ್ಳ ಯಾದಗಿರಿ ನಗರದ

ಬಂಡೆ ಮೇಲೆ ತೋರುವ ನಿನ್ನ ಪಾದ

ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||5||

ಹೂವ್ವನಿಲ್ಲದ ದೇವಪೂಜೆ ಮಾಡಲು ಚಂದವೆ ಪರಮಹಂಸಾ

ಏಕೋ ಭಾವವಿಲ್ಲದ ಮನುಜ ಭಕ್ತನಾದರೆ ಚಂದವೆ ಪರಮಹಂಸಾ ||ಪ||

ಸತಿ ಸುತರಿಲ್ಲದ ಸಂಸಾರ ಮಾಡಲು ಚಂದವೆ ಪರಮಹಂಸಾ

ದೊಡ್ಡ ಯತಿಗಳಾದ ಮೇಲೆ ಇಂದ್ರಿಯ ಬಲಿಸದಿದ್ದರೆ ಚಂದವೆ ಪರಮಹಂಸಾ

ಮತಿ ಹೀನ ಮೂರ್ಕನು ಮಂತ್ರಿಯಾದರೆ ಚಂದವೆ ಪರಮಹಂಸಾ

ಗತಿಗೆಟ್ಟ ಮುದುಕಗೆ ಗಮಕದಾ ಸತಿ ಚಂದವೆ ಪರಮಹಂಸಾ ||1||

ಬಾಳೆಯ ಫಲ ಹಣ್ಣಾಗದೆ ಉಣಲು ಚಂದವೆ ಪರಮಹಂಸಾ

ಶಾಸ್ತ್ರ ಆಲಿಸಿ ಸವಿಯದ ಮಕ್ಕಳಿದ್ದು ಚಂದವೆ ಪರಮಹಂಸಾ

ಆಳು ಕುದುರೆಯಿಲ್ಲದ ಅರಸು ಇದ್ದು ಚಂದವೆ ಪರಮಹಂಸಾ

ಅಳುವ ಪತಿ ನುಡಿಯ ಕೇಳದ ಸತಿಯಿತದ್ದು ಚಂದವೆ ಪರಮಹಂಸಾ ||2||

ಫಲವ ಕಾಯದ ವೃಕ್ಷ ಬಲು ಬೆಳೆದರೇನು ಚಂದವೆ ಪರಮಹಂಸಾ

ನೆಲೆಗಾಣದ ನಾರಿಯ ನೆರೆ ನಂಬಿ ನಡೆದರೆ ಚಂದವೆ ಪರಮಹಂಸಾ

ಸಲುಗೆಯಿಂದ ಪರುವನು ಮಾಡಿದ ಕೃತಿಗೇಳಿ

ಸಲೆನಂಬಿ ಶಿವನ ಸತ್ಕೀರ್ತಿ ಸಡಿಲದೆ ಪಡೆ ನೀ ಪರಮಹಂಸಾ ||3||

ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ

ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||

ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ

ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||

ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ

ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||

ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ

ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||

ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ

ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||

ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ

ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||

ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು

ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ ||6||

ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ

ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||

ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ

ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||

ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ

ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||

ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ

ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||

ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ

ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||

ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ

ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||

ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ

ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||

ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ

ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||

ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ

ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||

ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು

ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||

ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ

ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||

ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ

ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||

ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ

ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||

ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ

ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||

ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ

ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||

ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ

ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||

ಹೂವ್ವನಿಲ್ಲದ ದೇವಪೂಜೆ ಮಾಡಲು ಚಂದವೆ ಪರಮಹಂಸಾ

ಏಕೋ ಭಾವವಿಲ್ಲದ ಮನುಜ ಭಕ್ತನಾದರೆ ಚಂದವೆ ಪರಮಹಂಸಾ ||ಪ||

ಸತಿ ಸುತರಿಲ್ಲದ ಸಂಸಾರ ಮಾಡಲು ಚಂದವೆ ಪರಮಹಂಸಾ

ದೊಡ್ಡ ಯತಿಗಳಾದ ಮೇಲೆ ಇಂದ್ರಿಯ ಬಲಿಸದಿದ್ದರೆ ಚಂದವೆ ಪರಮಹಂಸಾ

ಮತಿ ಹೀನ ಮೂರ್ಕನು ಮಂತ್ರಿಯಾದರೆ ಚಂದವೆ ಪರಮಹಂಸಾ

ಗತಿಗೆಟ್ಟ ಮುದುಕಗೆ ಗಮಕದಾ ಸತಿ ಚಂದವೆ ಪರಮಹಂಸಾ ||1||

ಬಾಳೆಯ ಫಲ ಹಣ್ಣಾಗದೆ ಉಣಲು ಚಂದವೆ ಪರಮಹಂಸಾ

ಶಾಸ್ತ್ರ ಆಲಿಸಿ ಸವಿಯದ ಮಕ್ಕಳಿದ್ದು ಚಂದವೆ ಪರಮಹಂಸಾ

ಆಳು ಕುದುರೆಯಿಲ್ಲದ ಅರಸು ಇದ್ದು ಚಂದವೆ ಪರಮಹಂಸಾ

ಅಳುವ ಪತಿ ನುಡಿಯ ಕೇಳದ ಸತಿಯಿತದ್ದು ಚಂದವೆ ಪರಮಹಂಸಾ ||2||

ಫಲವ ಕಾಯದ ವೃಕ್ಷ ಬಲು ಬೆಳೆದರೇನು ಚಂದವೆ ಪರಮಹಂಸಾ

ನೆಲೆಗಾಣದ ನಾರಿಯ ನೆರೆ ನಂಬಿ ನಡೆದರೆ ಚಂದವೆ ಪರಮಹಂಸಾ

ಸಲುಗೆಯಿಂದ ಪರುವನು ಮಾಡಿದ ಕೃತಿಗೇಳಿ

ಸಲೆನಂಬಿ ಶಿವನ ಸತ್ಕೀರ್ತಿ ಸಡಿಲದೆ ಪಡೆ ನೀ ಪರಮಹಂಸಾ ||3||

TAB

ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ

ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||

ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ

ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||

ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ

ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||

ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ

ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||

ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ

ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||

ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ

ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||

ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು

ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ||6||

ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ

ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||

ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ

ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||

ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ

ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||

ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ

ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||

ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ

ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||

ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ

ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||

ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ

ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||

ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ

ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||

ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ

ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||

ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು

ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||

ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ

ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||

ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ

ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||

ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ

ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||

ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ

ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||

ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ

ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||

ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ

ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||

ಅಡವಿಸ್ವಾಮಿ ನಿಮ್ಮ ಪಾದಕ್ಕಾಗಿ ಮಹ|

ಸಡಗರದಿಂದೆ ಉಬ್ಬಿ ಬಂದೆ ನೋಡು ||ಪ||

ಕರುಣದಿಂದ ಹಸ್ತವಿಟ್ಟು ಯಿತ್ತ ನೋಡು |ನಿನ್ನ|

ಚರಣ ಸೇವಕನು ನಾನರಿದು ನೋಡು

ಪರಮ ತೇಜದಲ್ಲಿ ದೃಷ್ಟಿಯಿರಿಸಿ ನೋಡು |ನಿನ್ನ|

ದರಶನಕ್ಕೆ ಪಾಪಕ್ಹಚ್ಚಿದೆ ನೋಡು ||1||

ನಿತ್ಯಾನಂದ ನಿನ್ನ ಮೂರ್ತಿಶೇವಿಪಲ್ಲೆ |ಬಾಳಿ|

ಅತ್ಯಧಿಕ ನರಕ ಮೆಚ್ಚುಗೊಳಿಪಲ್ಲೆ

ಸತ್ಯವಯ್ಯ ನಿನ್ನ ಧ್ಯಾನಾ ಅರಿವಿನಲ್ಲೇ | ಸದಾ

ಮೃತ್ಯುಂಜಯನು ನಿನ್ನ ವಚನ ಪಾಲಿಪನಲ್ಲೆ ||2||

ಅಂಕಲಗಿ ಸ್ವಾಮಿ ಮಹತ್ತು ತಿರುಗಿ ನೋಡೂ| ಈತ

ಶಂಕರನು ಯಂದು ದೇಶದೊಳಗೆ ನೋಡೂ|

ಲೆಂಕನಾಗಿ ಹೊಗಳಲಿಕ್ಕೆ ಆನೆ ನೋಡೂ

ನಿಃಶಂಕ ನಿರುಪಾಧಿ ತಾನೆ ತಾನೆ ನೋಡೂ ||3||

ಅಡವೀಶ ಸಿಗುವಂತ ಬೆಡಗು ಅದು ಬೇರೆ

ಹುಡುಗರೇನ್ ಹಿರಿಯರೇನ್ ದೃಢಗುಣವು ಬೇಕು ||ಪ||

ಕೇವಲ ಸುಜ್ಞಾನ ಪೀಠ ಹಾಕಿಸಿಕೊಂಡು

ಭಾವ ಭರಿತಾನಂದದಿಂ ಮೂರ್ತವಾಗಿ

ನಾವು ನೀವೆಂಬು ಭಯವಳಿದು ಏಕಾಂತದೊಳು

ಠಾವು ಮಾಡಿಯೆ ತಾನು ಸಾಕ್ಷಾತನಾದಾ ||1||

ವಂದು ನೂರಾರು ವಂಬತ್ತು ನೂರಾವಂದು

ಮುಂದೆ ಇನ್ನೂರು ಹದಿನಾರರೊಳಗೆ

ಚಂದ ಚಂದ ಮೂರ್ತಿ ಮಂತ್ರ ಬೀಜಾಕ್ಷರಾ

ಒಂದರೊಳು ಸರ್ವವೆಲ್ಲ ಅಡಕ ಮಾಡಿದ್ದಾ ||2||

ನಿರುಪಾಧಿ ತಾನಾದೆ ನಿಜಲಿಂಗ ಗುರುತಿನೊಳು

ಕರಿಗೊಂಡು ಪೂರ್ಣ ಬ್ರಹ್ಮದ ಬಯಲಿನೊಳಗೇ

ಬೆರೆದು ನಿಬ್ಬೆರಗಾಗಿ ಎಲ್ಲಾ ಸುಖದಿಂ ತೂಗಿ

ಅರಿತು ಅರಿಯದೆಯಿರುವಾ ಶೂನ್ಯ ತಾನಾದ ||3||

ಅಡವು ಪಾಶ್ಚ್ಯ ಹರನೆ ನಿಶ್ಚಯಾ ಘನವೆಂದು

ಮುಂಡಿಗಿಡುವೆ ವೇದಾಂತ ವಾಕ್ಯದಿ

ಪೊಡವಿಯೊಳಗೆ ಜ್ಞಾನ ವೈರಾಗ್ಯೋಪರತಿಗಳಿಂದಾ

ದೃಢದಿ ಮೆರೆವ ಕಾರಣಕೇ ಹೊಡದೆ ಡಂಗುರವಾ ಗುರುವೇ ||ಪ||

ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣಾ

ಯುಕ್ತ ಐಕ್ಯನೆಂಬೋ ವಚನದಾ

ಯುಕ್ತಿಯಲ್ಲಿ ನಿಜವ ಕಂಡೆ ವಪ್ಪುವಾರು ಆರು ಸಲವು

ಮುಕ್ತಿಗೊಡೆಯನಾಗಿ ಜಗದಿ ಭಕ್ತಿಲೀಲೆ ಆಡುವಾತಾ ||1||

ಕರ್ಮಿ ಮುಮುಕ್ಷಭ್ಯಾಸನುಭವಿ ಆರೂಢ

ನಿರ್ಮಳಾದ ಚೇತನಾತ್ಮನು

ಮರ್ಮ ತಿಳಿದರೀತ ಜಗದಿ ಗುರುವು ಆರು ಮತದ ಜನರು

ಬರುವದೈಯ್ಯಾ ಸುತ್ತದೇಶ ಕರುಣಿ ಕಲ್ಪವೃಕ್ಷನೀತ ||2||

ಮೂಢ ಮತಿಗಳೇನು ಬಲ್ಲರು ಶಿವ ಆಡುವಂತಾ

ಗೂಢ ಗುಪ್ತವಾದಾ ಲೀಲವಾ

ನೋಡಿದರೆ ನರ ಶರೀರ ತಾಳಿ ಅಂಕಲಗಿ ಸ್ಥಳಕೇ

ಆಡಬಂದ ನಿರುಪಾಧಿ ನಾಡಿನೊಳಗೆ ಶಿದ್ಧಲಿಂಗ ||3||

ಅಡವಿ ಪಾಶ್ಚನ ಪಾದ ಕಾಣುತ

ದಿಡಿಗಿನಲಿ ಓಡುವವು ಪಾತಕ

ಸಡಗರಾನೂಗುವ ಒಂದೆ ನಿಮಿಷದಲೀ ||ಪ||

ಲಂಕ ಪುರಕೆಯು ಹೋಗಿರಲ್ಲಿಹ

ಶಂಕರಿಯ ದರುಶನ ತಕ್ಕೊಳೆ

ಸಖ್ಯ ಇಲ್ಲದ ಮುಕ್ತಿ ದೊರೆಯದು ನಿಃಷ್ಪಲವು ಚರಿಸೇ

ಶಂಕರಿಯಪತಿ ಶಂಕರಿಲ್ಲಹ (ದೆ)

ಡಂಕ ಹೊಡೆಯಿತು ಮೂರು ಲೋಕದಿ

ಬಿಂಕ ಬೀರಿತು ಸಾಧು ಶಿವನೆಂದೆನುತು ಶೃತಿಸಾರೇ ||1||

ಕಂಚಿಯೆಂಬೋ ಪುರದ ವಳಗಿಹ

ಕೆಂಚೆ ಕಾಮಾಕ್ಷಿಯನ್ನು ನೋಡಲು

ಸಂಚಿತಾರಾಬ್ದಾಗಾಮಿಗಳಿವು ಮಾರರೊಳಗೊಂದು

ಹಂಚಿ ಹಾಕಲು ಹೋಗಲಿಲ್ಲವು

ಮಿಂಚಿನಾ ಪ್ರಭೆ ಬಲ್ಲ ಪುರುಷಗೆ

ಕಿಂಚಿತಿಹ ಅಣುವಾಗಿ ನಡದವ ಭವವ ಕಳಕೊಂಬಾ ||2||

ಪೃಥ್ವಿಯನು ನಾ ನೋಡ್ವೆನೆನುತಲಿ

ಶುದ್ಧದಲಿ ಸ್ರುಂಕಾಳಿ ದ್ವೀಪದಿ

ಬಿದ್ದು ಬಂದರೆ ಯೇನು ಯಿಲ್ಲವು ಬರಿದೆ ನಿಃಷ್ಪಲವು

ಸಿದ್ಧ ಪುರುಷನ ಸಂಗದಿಂದಲಿ

ಬುದ್ಧಿ ಬರುವದು ಜ್ಞಾನಿಯೆನಿಸುವ

ಬದ್ಧವೈ ಈ ಮಾತು ಶರಣನೆ ಶಂಭು ಶಿವ ಸತ್ಯ ||3||

ಚ್ಯಾಮುಂಡಿಯನು ಕಾಣ್ವೆನೆನುತಲಿ

ಕಾಮ್ಯದಲಿ ನಾ ಕ್ರೌಂಚ ಪಟ್ಟಣ

ಭೂಮಿ ತಿರುಗಿದರಲ್ಲೇನಿಲ್ಲೆಲೆ ಬರಿದೆ ಬರಿ ಗಂಟೆ

ನೇಮದಿಂದಲಿ ಸಾಧು ದುರುಶನ

ಸ್ವಾಮಿಯಿವನೆಂತೆಂದು ಆಗಲು

ಭೂಮಿಕೆಯ ಮೆಟ್ಟುವನು ತೂರ್ಯಾತೀತ ದೊರಕುವದು ||4||

ಅಡವಿ ಪಾಶ್ಚನ ಮಹಿಮೆ ಆಡಲಿಕ್ಕದರಿದು

ಬೆಡಗು ಆಗದೆ ಲೋಕಕೇ ಮಗುವೇ

ಇಡಬೇಕು ಭಕ್ತಿ ತಾ ಪರಿಪೂರ್ಣ ಮನದಿಂದ

ವಡಿಯ ಸಿಗುವನು ಸೂಕ್ಷ್ಮದಿ ಮಗುವೇ ||ಪ||

ಗೂಢದೊಳಗಿಹ ಗುಪ್ತವಾದಂತ ವಸ್ತುವಾ

ನೋಡುವ ದೃಷ್ಟಿ ಬೇರೆ ಮಗುವೆ

ಕಾಡ ಸಿದ್ಧನ ಮಹಿಮೆ ಕಾಪಟ್ಯಗೇನರಿಕೇ

ಆಡವನು ತಾನೇ ತಾನೇ ಮಗುವೇ

ಮಾಡಬಾರದ ಕೆಲಸ ಮಾಡಿದರೆ ಮಗನೆಂದು

ನೋಡುವನು ಕರಣದಿಂದ ಮಗುವೇ

ಕೂಡಿಕೋ ಬಿಡದಲೆ ಇದೇ ವ್ಯಾಳ್ಳೆ ಮೊಂದಿಲ್ಲ

ಕೇಡು ತಪ್ಪಿಸುವ ದೇವಾ ಮಗುವೇ ||1||

ಮೂರೊಂದು ಹಿಡಕೊಂಡ ನಾಲ್ಕಕು ಮೊದಲರಿವದು

ಆರು ಹತ್ತನ್ನೆರಡು ಮಗುವೇ

ಮೀರಿದ ಹದಿನಾರು ಎರಡು ತಿಳಕೊಂಡಲ್ಲಿ

ಭೋರೆಂಬ ನಾಡವುಂಟು ಮಗುವೇ

ಸೇರಿಕೊಂಡುನ್ಮನಿಯ ಬಿಂದುಕಳದೊಳು ಮೊಳಗೆ

ತೋರುವನು ಬ್ರಹ್ಮವಾಗಿ ಮಗುವೇ

ಧೀರ ಶ್ರೀಗುರುನಾಥ ವಲಿದರೇ ತನ್ನರಿವಾ

ಜ್ಞಾನದ ಕಣ್ಣು ಕೊಡುವಾ ಮಗುವೇ ||2||

ಕಾಲಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ

ತೋಲ ಮೂರ್ತಿಯ ಪದದಲೀ ಮಗುವೇ

ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ

ಜಾಲ ಹರಿವದು ಉತ್ತಮಾ ಮಗುವೇ

ಮೂಲವಾಗಿಹ ಕರ್ಮ ಹರಿಯಲಿಕೆ ಈ ನುಡಿಯು

ಮೇಲು ಮಂತ್ರವಾಗದೆ ಮಗುವೇ

ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲ

ಮೂಲ ಮೂರುತಿ ನಿಶ್ಚಯ ಮಗುವೇ ||3||

ಕಾಲ ಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ

ಲೋಲ ಮೂರ್ತಿಯ ಪದದಲೀ ಮಗುವೇ

ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ

ಜಾಲ ಹರಿವದು ವುತ್ತಮಾ ಮಗುವೇ

ಮೂಲವೇಗಿಹ ಕರ್ಮ ಹರಿಯಲಿಕೆ ಈ ನುಡಿಯ

ಮೇಲು ಮಂತ್ರವಾಗsದೆ ಮಗುವೇ

ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲಾ

ಮೂಲ ಮಾರುತಿ ನಿಶ್ಚಯ ಮಗುವೇ ||4||

ಅಂಗ ವಾಚಮನ ತೀನೋ ತೇರಾ ಪರು ಭಜಿಸೈ

ಅಂಗ್ವಾಚಮನ ತೀನೋ ತೇರಾ ಪರು ಭಜಿಸೈ ||ಪ||

ಜಾಹ ದೇಖೆ ಹೋ ಹೈ ತುಮೆ ಕೋಹಿನಹಿ ದುಸರಾ

ಸಾಹೆಬ್ಮೆಹರಬಾನಿ ತೇರಾ ಗುರುಜಿಸೈ ||1||

ಸೋಬ್ತುಮೆ ಹುಯಬಾದು ಅಬುಕಬುಕಾಹೈ

ಚಾಮನೈ ಬೋಲೆ ಕು ಮೇರಾ ಗುರುಜಿಸೈ ||2||

ನಿರುಪಾಧಿ ಗುರುಹೋನಾ ಸಾರದಿನ್ನು ಸಖನಿ

ಪೂರಣಬ್ರಹ್ಮಮೋ ಮಿತಿ ಗುರುಜಿಸೈ ||3||

ಉದಯವಾದಿತೇಕೊ ತೀವ್ರ ಹೊತ್ತು ನಿಲ್ಲದೇ ||ಪ||

ಪರಮ ನಿದ್ರಾ ಯೋಗದಲ್ಲಿ ಹರುಷದಿಂದ ಪಾರ್ವತಿಯೊಳು

ಸರಸದಿಂದ ಸಮರಸದೊಳಿರುವ ವ್ಯಾಳ್ಳೆದೀ ||1||

ಹಾಡಿ ನೋಡಿ ಮಾಡಿ ಕೂಡಿ ಕಾಡ ಸಿದ್ಧನರ್ಧಾಂಗಿಯನು

ನಾಡೊಳರಿಯದಂಥ ವಸ್ತು ಬೇಡವಾಗಲೀ ||2||

ನಿರುಪಾಧಿಯ ತಾನೆ ಎಂದು ಶಿರದಿ ಕರವನಿಟ್ಟು ತನ್ನ

ಅರಿತು ನಿದ್ರಿ ಜಾಗ್ರ ಸ್ವಪ್ನ ಸ್ಮರಣ ವ್ಯಾಳ್ಳೆದಿ ||3||

ಏನು ಹೇಳಲೈಯ್ಯಾ ನಿನ್ನಗೇ| ಗುರು ಜಂಗ್ಮ ಖೂನಾ

ಮೂರುತಿಯು ತಾನಾಗೇ|

ಕಾನನದಿ ಮಠವು ಮಾಡಿ| ಸ್ವಾನುಭವ ಶ್ರೇಷ್ಠನೆನಿಸಿ|

ಧೇನುವಾಗಿ ಭಕ್ತರನ್ನು| ಭಾವದಂತೆ ನಡೆಸುವಧಿಕಾ ||ಪ||

ಅರಿತು ಅರಿಯದಂತೆ ಜಗದೊಳು ನರವೇಷ ಹಾಕಿ

ಗುರುತು ತಿಳಿಯಗೊಡದೆ ಮೆರೆವುತಾ

ಪರಮ ಪಾವನ್ನ ನೀನೂ ಪಾಪ ಕ್ಷಯವ ಮಾಡಲಿಕ್ಕೆ

ಧರೆಗೆ ಬಂದು ಲೀಲವಾಡಿ| ಶರಣರಿರವು ನೀನೇದೇವಾ ||1||

ಅನ್ನದಾನಿ ಆದಿ ಶರಣನು| ಆಗಾದನು|

ವುನ್ನತಾದ ವಸ್ತು ರೂಪನು|

ಕುನ್ನಿ ನಾನು ಕಾಲ ಕಾಲ| ಮನ್ನಿಸುವ ವಡಿಯ ನೀನು ||2||

ತಂದೆ ನಿರುಪಾಧಿ ನೀನೆಲೋ| ಅಂಕಲಗಿವಾಸ|

ಬಂದು ಅಡವಿ ಸಿದ್ಧನಾಗಿಯೇ| ಕುಂದು ಕೊರತೆ ಬಾರದಂತೆ|

ಹಿಂದು ಮುಂದು ಕಾಯ್ವ ನೀನೇ| ಎಂದು ಬಂದೆ ಕಟಾಕ್ಷವನ್ನು|

ಚಂದವಾಗಿ ತೆರೆದು ನೋಡೋ ||3||

ಏನು ಕಾರಣ ಸುಮ್ಮನಿರುವೆ ಅಡವೀಶ್ಯಾ

ಖೂನದೊಳಗಿಡು ನಿನ್ನಾ ಶಾಖದ ಅಣುವು ||ಪ||

ನಿತ್ಯ ನಿರ್ಗುಣ ಮೂರ್ತಿ ನಿಜರೂಪ ನೀನೂ

ತೊತ್ತಿನ ಮ್ಯಾಲೆ ಕರಣವ ಮಾಡೊ ದೇವಾ

ಅತ್ಯಧಿಕ ಆನಂದದಿಂದ ಮೆರೆವವನೇ

ಚಿತ್ತ ನಿಲುಕಡೆ ಮಾಡು ಶೇವಕನು ನಾನು ||1||

ನೋಡೋ ದಯದೃಷ್ಠಿಯಲ್ಲಿ ಅಂತರಂಗದೊಳು

ನೀಡೊ ಕರುಣಾಮೃತವ ನಿಜ ರೂಪ ನೀನೇ

ಆಡಲೇನಯ್ಯ ಸರ್ವೆಲ್ಲ ನಿನಗರುವು

ಬೇಡಿದ ಪದವಿಯಾ ನಡೆಸುವಧಿಕಾರೀ ||2||

ಬಂಧು ಬಳಗದಿಯನ್ನಾ ಕೊರತೆ ಆಲಿಸದೆ

ತಂದೆ ತಾಯಿ ನೀನಾಗಿ ಪೊರೆಯ ಬೇಕೆಂಬೆ

ಕಂದ ನನ್ನಾ ಬಿರದು ಪೊಗಳುವನೆಂದು ತಿಳಿದು

ಸಂದೇಹ ಕಳದು ಸಾಕ್ಷಾತನ ಮಾಡೊ ||3||

ಶರೀರಯಿರುವನ್ಕ ನಿಜ ಸುಖದ ಬೇಡುವೆನು

ಗುರುವೇ ಕಡಿಯಲ್ಲಿ ನಿನ್ನೊಳಗೇ ರೂಪಾ

ಯಿರಿಸೆಂಬೊ ಬಯಕೆ ವಂದಲ್ಲಾದೆ ಮತ್ತೆ

ನಿರುತದಿಂ ನಿಮ್ಮ ನೆನೆವಂತ ಸುಖವಿರಲಿ ||4||

ಅಂಕಲಗಿ ವಾಸನೇ ಅಡವಿ ಸಿದ್ದೇಶ್ಯಾ

ಕಿಂಕರ ಪ್ರೀತಿಯ ಗುಣ ಪಾಲಿಸೆಂಬೇ

ಶಂಕರಾ ಶಿವ ಶಂಭೋ ಹರ ಗುರು ಲಿಂಗ

ಸೋಂಕೋ ನೀ ನಿರುಪಾದಿ ಜಂಗಮದೇವಾ ||5||

ಏನು ಹೇಳಬೇಕು ಜೀವಗೆ| ಅಡವೀಶ ಕೊಡುವಾ ಕೂನವನರಿಯೆದೆಲೆ ಬಳಲುವಾ||

ಧ್ಯಾನದೊಳಗೆ ಐಕ್ಯವಾಗೆ| ಬೋನ ಬಟ್ಟೆ ದುಡ್ಡು ರುಚಿಯೂ|

ತಾನೆ ನಡೆಸುವಂತ ದೇವಾ| ಮೌನ ಮೂರುತಿಯು ಸಿದ್ಧಾ ||ಪ||

ಕೊಡುವದರಿಯದೆ ಚಿಂತಿಯ| ಮನದೊಳಗೆ ತಾನು

ಹಿಡಿದು ಹೊಯ್ಯದಾಡಿ ವರುಲುವಾ| ವಡೆಯನಾಗ್ನೆ ಅರಿಯ ಮಂತ್ರ

ಪಡೆದು ವಳಗೆ ಜಪಿಸಿದಾಗಲೆ ವಡಲ ಆಶೆಗಳಲುವಾನು|

ದೃಢವು ಇಲ್ಲಾ ಬಯಕೆ ಬಿಡದು ||1||

ನಾಥನಾಟ ಅರಿಯದಲೆಯೂ| ಸಂಶಯದಿ ತಾನೆ

ಕೋತಿಯಂತೆ ಕುಣಿದು ಕೆಡುವನು| ನೀತಿ ಭೀತಿಯರಡು ಮರೆತು|

ಕಾತುರದಿ ಕಂಡ ಕಡೆಗೆ| ಪ್ರೀತಿ ಇಡುವದಯ್ಯಾ ಇದರ

ಜ್ಯಾತಿ ಸುಡಲಿ ತಿಳಿಯದೆನಗೆ ||2||

ಹಿತವ ಬಯಸುವದು ನಿತ್ಯದಿ| ಅರಿಯದೆ ಬಹ

ಕೃತಕವೇನು ಬೇಡಿಕೊಂಡರೇ ಪತಿತ ಪಾವನ ನಾನು ಪುಣ್ಯ

ಗತಿಯು ಇದ್ದಾ ಪರಿಯು ಮೂಡ್ವ ಪಥವನರಿತು ಪಾದದಲ್ಲಿ|

ರತಿಯನಿಡರು ನಿಶ್ಚಯಿಲ್ಲಾ ||3||

ನಾನು ನನ್ನನೆಂದು ಕೆಡುವದು| ನಿನ್ನಾಜ್ಞೆ ಮರದು|

ಸ್ವಾನನಂತೆ ಸೊಟ್ಟ ಚರಿಪದು| ಧೇನುವಾದ ಗುರುವಿನಂಘ್ರಿಯ|

ಮೌನದಿಂದ ಭಜಿಪದಗಲೀ| ತಾನೇ ಶ್ರೇಷ್ಟನಾಗಿ ಮನದಿ|

ಹೀನ ಕಂಜದಾತಿ ಇಹುದು ||4||

ಮೂರರಂತೆ ನಡೆಸುವಾತನು ಅಂಕಲಗಿ ಮಠದಿ

ಸಾರ ಸೌಖ್ಯ ಸಿದ್ಧಲಿಂಗನು| ಪೂರಣನಂದೈಕ್ಯ ಕಾರ್ಯ|

ಕಾರಣಡವಿಯ ಪಾಶ್ಚಾ| ಧೀರ ಗುರು ನಿರುಪಾಧಿಯಾದ|

ಸೇರುವಿಯೊಳು ಸಮ್ಮತಿಲ್ಲ ||5||

ಏನು ಹೇಳಲಮ್ಮಾ| ಅಡವಿಸಿದ್ದಂತಾ| ಮಹಾ ಪ್ರಚಂಡಾ

ಸ್ವಾನುಭಾವದ ಸುಖ ತಾನೆ ವುಂಡಾ| ನಿಜ ಮುಕ್ತಿ ಕಂಡಾ ||ಪ||

ಹಮ್ಮು ಅಹಂಕಾರವಾ ಬಿಟ್ಟನಮ್ಮಾ| ಸುಖ ಕೊಟ್ಟನಮ್ಮಾ|

ವಮ್ಮಾನ ಇರುಯೆಂದು ಇಟ್ಟನಮ್ಮಾ| ಭವಗೆಟ್ಟನಮ್ಮಾ|

ಅಮ್ಮಮ್ಮಾ ಈತನ ಮ್ಯಾಲೆನಮ್ಮಾ| ಮಮತೆ ಹತ್ತಿತಮ್ಮಾ

ನಮ್ಮ ನಿಮ್ಮ ವರೆಂಬೊದ್ಹೊಯಿತಮ್ಮಾ| ಸುಮ್ಮನಾಯಿತಮ್ಮಾ ||1||

ಕಂಡ ಕಡಿಗಿ ಚಿತ್ತಯಿಡಲಿ ಬ್ಯಾಯೆಂದಾ| ಯನ್ನ ನೋಡುಯಂದಾ|

ಹಿಂಡು ದೋಷಾದಿಗಳ ಕಳಿವೆಯೆಂದಾ| ಬಹು ಪ್ರೀತಿಯಿಂದಾ|

ಚಂಡಿತನ ಮನದೊಳು ಬ್ಯಾಡಯಂದಾ| ತಿಳಿದು ನೋಡುಯಂದಾ|

ಭಂಡಾಟ ಲೌಕಿಕ ಪಾಡಲ್ಲಂದಾ| ಯನ್ನ ಕೂಡುಯಂದಾ ||2||

ನಿರುಪಾಧಿ ತಾನೆ ಅಡವೀಶನೆಂದು| ಸ್ವಪ್ನಾದಿ ಬಂದಾ|

ಗುರುಲಿಂಗ ಜಂಗಮ ತಾನೆಯಂದಾ| ಸಂಶಯಯಿಲ್ಲಂದಾ|

ಪರಕೆ ಪರತರ ವಸ್ತು ಇದೆಯೆಂದಾ| ಗುಪ್ತಯಿರುಯಂದಾ|

ಧರೆಯೊಳು ನರರಂತೆ ಮೆರೆಯಂದಾ| ಮುಕ್ತಿ ಅರಿಯಂದಾ ||3||

ಏನು ಬರಿಯಲಿಬೇಕು ಬ್ರಹ್ಮ ತಾನಾದಂಥ

ಖೂನ ಬಲ್ಲ ಗ್ನಾನಿ ಆನಂದಗೊಂಡಾ ||ಪ||

ಮುಕುತಿ ಮಾರ್ಗವ ಲಿಖಿಸೊ| ವಿಧ ಮೂರವಸ್ತೆಯೊಳು

ಯುಕುತಿ ಆನಂದಾಗಿ ತೂಗುತಿಹುದು

ವಿಕಳ ಪ್ರಪಂಚದಲಿ ತೋರುವದು ಬಹು ಪರಿಯು

ನಕಲು ಆಗ್ವದು ಇದ್ದ ವಚನವನು(ದು) ಖರಿಯೆ ||1||

ಬಲ್ಲಗಾರನು ಬಲ್ಲ ಮಾರು ಪ್ರಾರಬ್ಧಗಳ

ನಿಲ್ಲೋಣಾಗದೆ ಮಾರು ಮಾರ್ಗದವನಲ್ಲಿ

ಎಲ್ಲಾಗೇನರಕಿ ಶಿವನು ಶರಣನು ಎಂಬೊ

ಸೊಲ್ಲು ತಿಳಿದವಗೆ ಸುಕೃತವು ಬೇಕು ಜ್ಯಾಣಾ ||2||

ಜೀವ ಭಾವಿಗೆ ಏನು ನಿರುಪಾಧಿ ಸುಖವರಿಕೀ

ಕೇವಲ ಸ್ವರ್ಗ ಕೈಲಾಸ ಕೈವಲ್ಲ್ಯೆ

ಭಾವ ಭರಿತನು ಅಡವಿಶಿದ್ಧ ಯೋಗೀಶ್ವರನಾ

ಸೇವೆಯೊಳಗಿದ್ದವಾ ಭವವನು ಕಳಕೊಂಬಾ ||3||

ಓಂ ನಮೊ ಅಡವಿಸಿದ್ದಾ ಬಂದೇನಯ್ಯ|

ಕೃಪೆ ಮಾಡು ತಂದೆ ಹಿಡಿಯನ್ನಯ ಕೈಯ್ಯ

ತೊತ್ತು ನಾನು ದಯದಿಂದ| ||1|

ಅತ್ಯಧಿಕ ಸುಖವ ಕೊಡು ಎನಗೆ ನೀನು ||2||

ಕರುಣ ಮಾಡೋ ಮಗುವಿನಾ|

ಹರಣದಾನಂದೊಳು ನೀನೆ ಕೂಡೊ ||3||

ಶಿರವ ಬಾಗಿ ಮನವನು ಚರಣದಲ್ಲಿಡುವೆ|

ಸಾಕ್ಷಾತ್ ಯೋಗಿ ||4||

ನಿನ್ನ ಮಾಯಾ ತಿಳಿಯದು| ವುನ್ನತಾ ಮೂರ್ತಿ ಛಾಯಾ|

ನಿನ್ನ ವಳಗೆ ನಾನಿರುವ| ಸನ್ನುತವ ಪಾಲಿಸೆನಗೆ ||5||

ನಾಥ ನೀನು ನೀ ವಲಿಯೆ|

ಪ್ರೀತಿ ಮಾಡಂಬೋದೇನು ||6||

ದೇವನಾಗಿ ನಿಜ ಸುಖ|

ಭಾವ ಒಂದರಲಿ ತಾನಾಗಿ ತೂಗಿ ||7||

ಎಲ್ಲಾ ಜಗದಿ ನೀನಿದ್ದು|

ಉಲ್ಲಾಸ ನಾಡ್ವೆ ಮುದದಿ ||8||

ದಯದಿ ನೋಡು ಕೇವಲ|

ಭಯ ಭಕ್ತಿ ಇರುವ ಆನಂದ ನೀಡು ||9||

ನೀನೇ ದೇವಾ ತತ್ವದಾ|

ಕೂನದೊಳು ಏಕವಾದಂಥ ಭಾವ ||10||

ಮಾರರೊಳಗೆ ಮನವಿರುವ|

ಸಾರಾಂಶ ತನ್ನ ಒಳಗೆ ||11||

ಕರುಣಿಸಿ ಕಾಯೋ ಯನ್ನ| ಅಂಕಲಿನಾಥ|

ಕರುಣಿಸಿ ಕಾಯೋ ಯನ್ನ ||ಪ||

ಕರುಣಿಸಿ ಕಾಯೋ ಯನ್ನ| ಗುರುಲಿಂಗ ಜಂಗಮನೆ

ಮರೆಯ ಹೊಕ್ಕೆನು ನಿನ್ನಾ ಬಿರದಿಗಾಗಿಯೆ ಬಿಡದೆ ||ಅ.ಪ||

ನಂಬಿ ಬಂದೆನು ಇಲ್ಲಿಗೆ ನೀನೇ ಮಹಾ

ಸಾಂಬಶಿವನು ಯನ್ನುತಾ|

ಹಂಬಲಿಸುತ ಬಂದ| ಕಂದನ ಯತ್ತಿಕೊಂಡು|

ಯಿಂಬು ಮಾಡಿದು ಮುಕ್ತಿ ತಕ್ತಮಾಲಿಯ ಹಾಕಿ ||1||

ನಿತ್ಯ ನಿರ್ಗುಣ ಮಾರುತಿ| ಅರವಿರಳ ಜ್ಯೋತಿ|

ಅತ್ಯಧಿಕಾರಿ ಪ್ರಭುವೇ|

ಸತ್ಯ ಸದಾಚ್ಯಾರಿ ಸಾಕ್ಷಿರೂಪನೇ|

ತೊತ್ತೆನ್ನ ಮಾಡಿಡು ಬೃತ್ಯನಾನಯ್ಯ ||2||

ನಿರುಪಾಧಿ ನೀನೆಂದೆನೋ| ಕರ್ತೃವು ಪರನೇ|

ಪರತರ ಗುರುವೆಂದೆನೋ| ಸ್ಮರಣಿ ಮಾತ್ರದಿ ನಿನ್ನಾ|

ಕುರುಹು ಕಾಣಿಸುವಂತಾ ಇರವು ತೋರಿಸಿ ಭವವಾ|

ಹರಿಯೋ ಶ್ರೀ ಅಡವೀಶಾ ||3||

ಕರುಣ ಮಾಡೊ ದೇವಾ| ಶ್ರೀಗುರು| ಕರುಣ ಮಾಡೊ ದೇವಾ||

ಕರುಣ ಮಾಡೊ ನೀ ಧೊರಿ ಅಡವೀಶನೇ|

ಚರಣ ಧೂಳಿನಾ| ಪರಿಪರಿ ನುತಿಸುವೇ ||ಪ||

ಹಿಂದೆ ಮುಂದೆ ನೀನು ಕಾದಿರು

ಬಂಧು ಬಳಗ ತಾನೂ ಮಗುವಿನ

ಅಂದ ಚಂದವನು ನೋಡಲಿ

ಕಂದುಗೊರಳನೆ ಕಾಲ ಕಾಲದಲೀ| ಸಂದೇಹ ಬಿಟ್ಟಾನಂದವಾಗುವಾ ||1||

ನೀತಿ ಪುರುಷನೆಂದು ಲೋಕದಿ

ಧಾತ ನೀನೆ ಎಂದು ಅರಿವುತ ಭೀತಿಯಿಂದ ಬಿಂದೂ

ಮಾತು ಮನ್ನಿಸು ಅನಾಥ ನೀನೆ ತಿಳಿ

ಯಾತರೊಳಗೆ ಬಹು ನೂತನವಾಗುವಾ ||2||

ನಿರುಪಾಧಿಯು ನೀನೇ ಎನ್ನುತಾ

ಮರಿಯ ಹೊಕ್ಕೆ ನಾನೆ ಅಂಕಲಗಿ ಪುರದ ಸಿದ್ಧ ತಾನೆ ನಿಶ್ಚಯಾ

ಅರಮರಿಲ್ಲದೆ ಹಾಡಿ ಹರಸುವಾ

ಗುರುತಿನೊಳಗೆ ಮೈ ಮರೆವ ಮಹ ಸುಖಾ ||3||

ಕಳೆದ ವಸ್ತುವ ನಿನ್ನ ಬಳಿಯಲ್ಲಿ ಕೇಳಲಿಕೆ

ಯಿಳೆಯಲ್ಲ ಬಂದು ಕೂಡಿತೊ ಅಡವಿಸಿದ್ಧಾ ||ಪ||

ಮಗನು ಹೋದನೆ ಎಂದು ತಾಯ್ ಜಗವೆಲ್ಲಾ ತಿರುಗುತಾ

ನಿಗಮಗೋಚರ ನಿನ್ನಲ್ಲಿ ಹುಡುಕುತ ಬಂದು

ಅಘಹರ ನಿನ್ನಪಾದ ಮಗನ ಮೋಹದಿ ಕಂಡೆ

ಸುಗುಣ ಕೊಟ್ಟಿಡು ಸುಖದೀ ಎನ್ನುವರೈಯ್ಯಾ ||1||

ಗಂಡ ಬಿಟ್ಟೋದನೆಂದು ಹೆಂಡತಿ ಹುಡುಕುತಾ

ಕಂಡಾಳು ನಿನ್ನ ಪಾದದೀ ಆನಂದವಾಗಿ

ಮಂಡಲದೊಳು ಭಕ್ತಿ ಪುಂಡ ದೇವರ ದೇವಾ

ಗಂಡನಾಳ್ವಂತೆ ಮಾಡೋ ಯನ್ನುವರೈಯ್ಯಾ ||2||

ತಂದೆ ಹೋಗಲು ಮಗನು ಬಂದು ಹುಡುಕುತಾ

ತಂದೆ ಕಂದುಗೊರಳ ನಿನ್ನಲ್ಲಿ ಕಂಡು

ಸಂತೋಷದಿಂದ ಕಳುಹಿಯನ್ನ ಮಂದಿರ ಸುಖದುಃಖ

ನಿಂದೆ ನಿಜವು ಸರ್ವೇಶ್ಯಾ ಯನ್ನುವರೈಯ್ಯಾ ||3||

ತಮ್ಮ ಹೋದನು ಯಂದು ಸುಮ್ಮನೆ ತಿರುಗಿ

ಅಂಣಾ ನಿಮ್ಮ ಚರಣದಿ ಕಂಡನು ಅರ್ಥೀ ಅಹಲ್ಹಾದ

ವಮ್ಮನ ಕೊಟ್ಟೆನ್ನ ತಮ್ಮನ ಕಳುಹಿಸಿ

ನಿಮ್ಮ ಧರ್ಮವು ಮಹಾದೇವಾ ಯನ್ನುವರೈಯ್ಯಾ ||4||

ಮುಕುತಿ ಕಾಣದೆ ಹೋಗಿ ಭಕ್ತಿ ಪುರುಷರೆಲ್ಲಾ

ಸುಕೃತಾದಿ ಬಂದು ಕಂಡು ನಿರುಪಾಧಿಯಂದ

ಅಕಲಂಕ ಮಹಿಮಾ ನೀನು ಸುಖರೂಪ ಅಡವಿಸಿದ್ಧಾ

ಮುಕುತಿ ಕೊಡಿಸೂ ಯನ್ನಗೆ ಯನ್ನುವರೈಯ್ಯಾ ||5||

ಕನಸು ಕಂಡೆನು ಕಾಮಿನೀ| ನಿಮಿಷದೊಳು

ಚಿನುಮಯನು ಕಂಡು ಬಯಲು ಆದಾ|| ||ಪ||

ನಾಲ್ಕು ಮನಗಳಿಂದ| ವಪ್ಪುವನು|

ಮೂಲೋಕದೊಡೆಯನಾಗೀ ತಾನೇ||

ಕಾಲ ಕರ್ಮವ ಹರಿವನು| ಯಿಂತವನ

ಕೀಲರಿದ ಯೋಗ ನಿದ್ರೆಯೊಳಗೇ|| ||1||

ಹತ್ತು ದಿನಸಿಲಿ ಕೂಗಿತು| ಅದು ತಾನು|

ಚಿತ್ರ ವಿಚಿತ್ರದಿ ತೂಗುತ್ತಾ

ಮುತ್ತು ಮಾಣಿಕ ಉಗುಳಿತು| ಪ್ರಭೆ ತಾನು|

ಮೊತ್ತ ಮೊತ್ತಾಗಡಗಿತೂ ಸುಖದಿ|| ||2||

ಬೆಳಗೂತನ ಭಯಗೊಂಡೆನು| ಎಚ್ಚತ್ತು|

ಕಳೆವರನ ಕೊಂಡಾಡಿದೆ ಯನ್ನಾ

ವುಳುಹಿ ಚಿನ್ಮಾತ್ರ ಮಾಡೀ| ನಿರುಪಾಧಿ

ಭಳಿರೆ ಭಳಿರೆ ಅಡಿವಿಸಿದ್ಧಾ|| ||3||

ಕಥೆ ಕಾವ್ಯದೊಳು ನೀನೇ ಪ್ರಥಮ ಮೂರುತಿಯಂದು

ನುತಿಸಬಲ್ಲವ ಪುಣ್ಯನೂ ಪತಿತ ಪಾವನ

ಚೇತನಾತ್ಮನು ಅಶಿತ ಆನಂದೈಕ್ಯ ತಾನೇ

ಕೃತಕವಲ್ಲವು ತಾನೆ ಆಧಾರಾ ಹಿತದಿ ತಿಳಿಯಬಲ್ಲ ಶಾಂತಗೆ ||ಪ||

ನವಚಕ್ರ ನವಲಿಂಗ ನವಶಕ್ತಿ ನವಭಕ್ತಿ

ನವವಿಧವನು ತಿಳಿಯೋ ಕವಲುಯಿಲ್ಲದೆ ಏಕ ಬ್ರಹ್ಮದ

ವಿವರದೊಳು ತಾ ತುಂಬಿ ತುಳಕುವ

ಭವವುಯಿಲ್ಲದ ಪೂರ್ಣ ಸುಖಮಯ ಸುವಿವೇಕಗಳಿಗೇ ಸೂಕ್ಷ್ಮದರ್ಥವು ||1||

ಜಗಮಯಾ ಶಿವನಂಬೋ ಬಗಿಯನರಿದು ಬ್ರಹ್ಮಾ

ನಗರಾದಿಚರಿಸುವಗೇ ನಗಿಯು ಕಾಣ್ವದು ನಾನಾ ಅರ್ಥವು

ನಿಗಮಗೋಚರ ಒಬ್ಬ ತಾನಿರೇ ಸುಗುಣ ತನದಲಿ ತಿಳಿದು ತನ್ನದು

ಅಗಲದಲೆಯಿರಬಲ್ಲ ವೀರಗೇ ||2||

ನಿರುಪಾಧಿ ಅಡವಿಪಾಶ್ಚಾ ತಾನೇ ತಾನೇ ಎಂದು

ವರಲಿ ವರಲಿ ವೇದವು ಚರಣ ಕಾಣದೆ ಮೌನಗೊಂಡವು

ಖರಿಯ ಖರಿಯ ಖರಿಯ ನಿಜ ನಿಜ

ವುಸುರಲೇತಕೆ ಗುಪ್ತವಸ್ತುವಾ ಕರದಿ ಕಂಡೂ ಅಣುರೂಪಾದಗೇ ||3||

ಕಾಯಯ್ಯ ಕಾಯಯ್ಯ ಕರುಣಾ ನಿಧಿಯೇ ನೀನು| ಅಡವಿಶಿದ್ಧಾ|

ನೋಯಲಾರೆನು ಭಯ ಸಂಕಟ ಹರಿಸಯ್ಯ| ಅಡವಿಶಿದ್ಧಾ|| ||ಪ||

ನಿತ್ಯಾನಂದಾ ನಿನ್ನ ತೊತ್ತೆಂದು ಅನಿಸೈಯ್ಯ ಅಡವಿಶಿದ್ಧಾ| ನೀನು

ಸತ್ಯ-ಸದಾಚಾರಿ ಸಾಕ್ಷಾತ್‍ನೆನ್ನುವಾ ಅಡವಿಶಿದ್ಧಾ

ಮೃತ್ಯುಂಜಯನು ನೀನು ಮಹಾದಾದಿ ವಡಿಯನು ಅಡವಿಶಿದ್ಧಾ| ನಾನು

ಯತ್ತ ಹೋದರೆ ನಿನ್ನಾ ಚಿತ್ತದೊಳಿರಿಸೈಯ್ಯ ಅಡವಿಶಿದ್ಧಾ ||1||

ಸ್ವರ್ಗ ಕೈಲಾಸ ಕೈವಲ್ಯ ನೀನಿರುವದೂ| ಅಡವಿಶಿದ್ಧಾ

ನರ್ಮ ಮಾಡುಯನ್ನ ಸಂಶಯ ಚಿಂತೆಯಾ| ಅಡವಿಶಿದ್ಧಾ

ಆರ್ಗಳ ವಡಿದಂಥ ಅನಾದಿ ಶಂಭುವೇ ಅಡವಿಶಿದ್ಧಾ

ಭರ್ಗೋದೇವೀಶ್ವರ ರುದ್ರ ವಿಷ್ಣು ಬ್ರಹ್ಮ| ಅಡವಿಶಿದ್ಧಾ ||2||

ನಿರುಪಾಧಿ ನೀನೆಂದು ಪರಿಪರಿ ಹೊಗಳಿದೆ| ಅಡವಿಶಿದ್ಧಾ

ಗುರುಲಿಂಗ ಜಂಗಮ ಪರತರ ವಸ್ತುವೆ| ಅಡವಿಶಿದ್ಧಾ

ವರದ ಅಂಕಲಿನಾಥ ಸ್ಮರಹರ ವುರುತರ| ಅಡವಿಶಿದ್ಧಾ

ಮರೆಯನು ಹೊಕ್ಕೆನು ಬಿರದಿಗೆ ಕಾದುಕೊಂಡಿರು| ಅಡವಿಶಿದ್ಧಾ ||3||

ಕಾಡಿ ಬೇಡದ ಗುರುಗಳಿಲ್ಲಾ ಭಿಕ್ಷೆ ಬೇಡುವರು

ಭಕ್ತರನು ನಾಡಿನೊಳಗೆಲ್ಲಾ ||ಪ||

ವಂದೆ ಜಾಗದಿ ಕುಳಿತುಕೊಂಡು ದೇವಾ ಭಕ್ತ

ಬಂದು ಬೇಡಿದ ಭಕ್ತಿ ತೀರಿಸಲಿ ಸದ್ಗುರುವು

ಯಂದು ಕಂಡು ಕೇಳಿ ತಿಳಿದೇ ಗುರು ನಿಜವೆಂದು

ಸಂದೇಹ ಇಲ್ಲದಲೆ ಹಾಡಿ ಹರಸಿದೆ ನಿತ್ಯ

ಬಂದು ಸಾರೂ ಜೋಗಿ ಬೈರಾಗಿ ಗಣವೆಲ್ಲಾ

ಹಿಂದಿನಾ ಶರಣೀತ ಲೀಲವಾಡಲಿಕ್ಕೆ

ಬಂದ ಯನ್ನವರೂ ಐನೂರು ಗಾವುದದವರು

ಕಂದಗಳು ಮುದುಕರೂ ಕೊಂಡಾಡುವದು ನೋಡಿ

ವಂದು ಜಾಗದಿ ಮನೆ ವರುಷಾಸನಗಳಿಲ್ಲಾ

ದುಂದು ಕಾಣ್ವದು ನಿತ್ಯ ಖರ್ಚು ಕಂಡಾಬಟ್ಟಿ

ಬಂದ ಭಕ್ತರ ತಂದದೊರುಷ ದಿನ ಕಲಶಿದರೆ

ವಂದೇ ದಿನಕೆ ಸಾಲದೈಯ್ಯಾ ವಿಚಾರಿಸಲು

ಕಂದು ಗೊರಳನ ಆಟ ಅರಿಯಲಸಾಧ್ಯ ||1||

ಆನೆ ಒಂಟಿ ಕುದುರೆ ಎತ್ತು ಕಂಟಲಿ ಹಾಕಿ

ನಾನು ಸಿಂಹಾಸನ ಪತಿಯೆಂದು ಜಗದ್ಗುರುವೆಂದು

ಮಾನ ನಮ್ಮದು ಬಹಳ ಬಿರುದು ಬಟ್ಟಂಗಿಯಾ

ಶ್ಯಾನೆ ನೂರಾರು ಕಾಲ್ಮಂದಿ ಚತ್ರ ಚಾಮರ

ಯೇನು ಕೊಡುವಿರಿ ಭಕ್ತ ಜನರು ಕರ್ತು

ಪೈಣ ಪಟ್ಟಣಕೆ ಪಂಚರಾತ್ರಿ ಹಳ್ಳಿಗೆಯೇಕ ರಾತ್ರಿ

ಜಾಣರಲ್ಲದ ದಡ್ಡ ಮತಿಗಳು ಬಡಿದ್ಹೊಡಿದು

ಯೇನು ಕೊಟ್ಟರೆ ಕೊಡಲು ಮಾನ ಕೊಡುವರು

ಅವರ ಮನೆಯೊಳಗೆ ಉಣ್ಣುವರು

ಗ್ನಾನಿಯಾಗಿರುಯೆಂದು ಹೇಳಿ ಘಳಿಸಿದ ದ್ರವ್ಯ

ಖೂನವರಿತರೆ ನಿನ್ನಾ ಅಂಬುಲಿಗೆ ಸಾಲದೂ

ಮೌನಿ ನಿನ್ನಾ ಮಹತ್ತು ತಿಳಿಯದರಿದರಿದೂ ||2||

ಪೊಡಯೊಳು ವೇದ ಆಗಮ ಪುರಾಣಗಳಲ್ಲಿ

ನಡೆ ನುಡಿಯಂತೆ ವಪ್ಪುವದು ಆರೂ ಸ್ಥಲವೂ

ಯಡಬಿಡದೆ ಶ್ರವಣ ಮನನ ನಿಧಿ ಧ್ಯಾಸವನೂ

ಬಿಡದೆ ಆನಂದಾಗಿ ಸವಾಕಾರ್ಯವು ತೂಗಿ

ಯಿಡಿಕಿರಿ ಬ್ರಹ್ಮವನು ತಿಳಿದು ಸುಮ್ಮನೆ ಕುಳಿತು

ವಡಲ ಆಶಯ ಬಿಟ್ಟು ವಸ್ತು ರೂಪನು ಆಗಿ

ಕೊಡುವ ಭುಕ್ತಿ ಮುಕ್ತಿ ಸಕಲ ಸಂಪದಗಳನು

ಬೆಡಗೇನು ಅಲ್ಲ ಕೇಳಿ ಕಂಡು ತಿಳದವಗೆ

ಸಡಗರೈಶ್ವರ್ಯ ಕಾಣ್ವದು ಮಠದ ಶೃಂಗಾರಾ

ವಡಿಯ ನೀನಲ್ಲದಲೆಯಿಲ್ಲ ಮೂಲೋಕದೊಳು

ಕೊಡುವರುಗಳಿಲ್ಲ ಬೇಡುವರು ಬಹಳುಂಟು

ಅಡವಿಪಾಶ್ಚನೆ ನಿರುಪಾಧಿ ಗುರು ಘನವೆಂದು

ಯಿಡುವೆ ಮಂಡಿಗೆಯನ್ನು ಯಿಲ್ಲನಿನ್ಹೊರತು ||3||

ಕಿವಿಯು ಹೋದವು ನಿನ್ನಗೇ| ಶ್ರೀಗುರು ಶಿದ್ಧ

ಸುವಿವೇಕ ಜನ ಬಲ್ಲಾರೂ ವಿವರ ತಿಳಿಯಲು ಗಂಗೆ ಜಡಿಯಲಿ

ಸವನಿಸಿ ಹಳಿದು ಒಂದು ಚಂದ್ರನ ನಯನ ಎರಡರ ಸೀತ ಮುಚ್ಚಲು

ಭುವನದವರಾಡುವದು ಕೇಳದೇ ||ಪ||

ಯಾಗ ದಾನಗಳಿಂದಲೀ ಜಪ ನೀತಿಯು

ಯೋಗ ಪೂಜೆಗಳಿಂದಲೀ ಆಗಮ ಪುರಾಣಗಳು

ತಿಳಿದು ಸುಖಾ ಭೋಗವ ಬೇಡುವರೂ

ಯೋಗ ಹಾಗೆಂತೆಂದು ಕರ್ಮದಿ

ಸಾಗಿದವು ಬಹುದಿವಸ ಕೇಳದೆ

ತೂಗುವಿಯು ಆನಂದ ಸಂಬ್ರಮಾ

ರಾಗ ರಹಿತ ನಿಃಶಬ್ದ ಬ್ರಹ್ಮವೇ ||1||

ಆರು ಮತದ ವಳಗೆ ಹದಿನೆಂಟು ಜ್ಯೋತಿ

ನೂರೆಂದು ಕುಲವೆಲ್ಲವೂ ಸೇರಿವೆಯಲಿ ನಿನ್ನನೂ

ಹೊಗಳ್ವದು ಅವರಾ ಆರೈಕೆ ತೀರಿಸಲೂ

ಭಾರಿ ಭಾರಿಗೆ ನಿನ್ನ ನೆನಿವರು

ಭೂರಿ ಪಾಪದಿ ಆಗದಿದ್ದರೆ

ತೋರಿ ಹೇಳಲಿ ಕರೆದು ಬೈವದು

ತಾರದಲೆ ನೀ ಮನಕೆ ಸುಮ್ಮಿರೆ ||2||

ಬಾಲವುನ್ಮದ ಪಿಶ್ಯಾಚೀ ಮೂಕ್ಬದಿರಂಥಾ

ಲೀಲಾವು ಶಿವಯೋಗಿಗೇ ಹೇಳುವ ಮಾತು ನಿಜವು

ಸುಳ್ಳಲ್ಲವೋ ಕೇಳಿ ಕಂಡ ತಿಳಿದೇ

ನಾಲ್ಕುವೇದಾರು ಶ್ಯಾಸ್ತ್ರವು ಕಾಲ ಕಾಲದಿಂದ ನುಡಿವವು

ಕೀಲು ತಿಳಿದರೆ ನೀನೆ ಶಿವ ನಿನ್ನ

ಮೂಲ ಅರಿಗು ಅರಿಯದು ಮೌನಿಯೇ ||3||

ಸುಖವಿರೇ ಹೊಗಳುವರೂ ಅವರ ಕರ್ಮ

ದುಃಖವಿರೇ ಬೊಗಳುವರೂ ಅಕಲಂಕ ಮಹಿಮಾ ನೀನೂ

ಪುಣ್ಯ ಪಾಪ ನಿಕರಕ್ಕೆ ನೀರಾವರಣಾ

ವಿಕಳ ಮತಿಯಲಿ ನಿನ್ನ ಬೈದರೆ

ಸಕಲ ನಿನ್ನ ಚೇತನೆನುತಲಿ

ಪಕಪಕನೆ ನಗುವಂತ ದೇವನೆ

ಲಕಲಕ ಹತನಾದ ಮಯದಲಿ ||4||

ನಿರುಪಾಧಿಯಾದವನೆ ವಂದ್ಯನೆ ನಿಂದೆ

ಗುರುತೀಗತ್ತತ್ತ ತಾನೇ ಯಿರುವನೆಂತೆಂದು ಶೃತಿ

ಕೂಗಲೂ ನೋಡಿ ವರದೆ ನೀ ಮುಡಿಸಿದಂತೇ

ಪರಮ ಮುಕ್ತಿ ಪತಿಯೆ ನಿನ್ನಯಾ

ಬಿರದು ಸ್ತುತಿಪನ ದೂರಯಿಡುವದು

ತರವೆ ನಿನ್ನಯ ಶ್ಯಾಖ ತಿಳಿದರೆ

ಕರಸಿಕೋ ಏಕಾಂತದಲಿ ಪ್ರಭು ||5||

ಕೇಳಿರಣಾ ಲೋಲಮೂರ್ತಿ ಕೀಲು ತಿಳಿಸಲಿಕ್ಕೆ ಯೀತಾ

ಕಾಲ ಕರ್ಮ ಹರಿದು ನಿಂತಿಹಾ ಕೇಳಿ ಜನಾ ||ಪ||

ನರ ಶರೀರವನ್ನು ಧರಿಸಿ ಹರಹಿ ಲೋಕದಲಿ ಪ್ರಭುವು

ಗರುಲಿಂಗ ಜಂಗಮ ನೆನಸಿದಾ ಕೇಳಿಜನಾ|

ಪರಮ ಸದಾ ಶಿವನು ಯೀತಾ ಪಾಪಕ್ಷಯವ ಮಾಡಲಿಕ್ಕೆ

ಧರೆಗೆ ಬಂದು ಲೀಲಾ ಆಡುವಾ ಕೇಳಿ ಜನಾ ||1||

ನಾದ ಬಿಂದು ಕಳಾಯೀತ ಭೇದ ಭೇದಕ್ಕೆ ಹೊರಗು

ಶೋಧಿಸಿರಿ ಶಂಭುಯೀತನು ಕೇಳಿ ಜನಾ|

ಸಾಧು ಇವನು ಸಾಕ್ಷಿರೂಪ ವೇದ ನಾಲ್ಕು ಹೊಗಳುತಿಹನು

ವಾದಿ ಮಾಡದಾಲೆ ಭಕ್ತಿಲೀ ಕೇಳಿ ಜನ ||2||

ಬೋಧ್ಯ ಬೋಧಕನು ತಾ ಆದ್ಯ ಸಾಧ್ಯ ವೇದ್ಯ ಪೂರ್ಣ

ಚೋದ್ಯವಾದ ಮಹತ್ತುಮೆ ಶಿವನೂ ಕೇಳಿ ಜನಾ|

ಶಿದ್ಧ ಶುದ್ಧ ಮಹಾಪ್ರಸಿದ್ಧ ಯಿದ್ದು ಯಿಲ್ಲದಂತಮೂರ್ತಿ

ಸಾಧ್ಯ ನೋಡಿಯಿದರು ಕಾಣ್ವದೂ ಕೇಳಿ ಜನಾ ||3||

ಮುಕುತಿಗೊಡೆಯ ಮಹಾರಾಜ ಭಕ್ತಿ ಜ್ಞಾನ ವೈರಾಗ್ಯ

ಯುಕ್ತಿಯಲ್ಲಿ ನಿಂತು ಮೆರೆವನೂ ಕೇಳಿ ಜನಾ|

ಸುಖದ ರೂಪು ಶೂನ್ಯ ಕಾಯಾ ನಿಖಿಳವೆಲ್ಲ ತನ್ನ ಬೆಳಗು

ಪ್ರಕಟವಾಗದಲೆ ಅಡಗಿಹಾ ಕೇಳಿ ಜನಾ ||4||

ತಾನೆ ತಾನೆ ನಿಂತು ನಿಜದ ಖೂನದಲಿ ಮುಳುಗುತಲಿ

ಯೇನೂ ತಿಳಿಯಗೊಡದೆ ಮೆರೆವನು ಕೇಳಿ ಜನಾ|

ಸ್ವಾನು ಭಾವ ಶ್ರೇಷ್ಠ ಈತ ಮೌನಿ ಮಹಾದಾದಿ ವಡಿಯ

ಧ್ಯಾನ ಮಾಡಿ ತ್ರಿಕಾಲದೀ ಕೇಳಿ ಜನಾ ||5||

ಆಧಾರಾದಿ ಪಶ್ಚಮಂತ್ಯ ಶೋಧ ಮಾಡಿ ತಾನು ಮಹಾ

ವಿನೋದದಲ್ಲಿ ತಿರುಗುತಿಹನೂ ಕೇಳಿ ಜನಾ|

ಪಾದ ಮರಿಯದಲೆ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ

ಸಾಧಿಸಿರಿ ಸರ್ವಯೀತನು ಕೇಳಿ ಜನಾ| ||6||

ಕಾಲಜ್ಞಾನ ಪುರುಷನೀತ ಕಾಲ ಕಾಲದಲ್ಲಿ ಇರುವ

ಮೂಲವರಿತು ಮುಕ್ತಿ ಪಡೆಯಿರೀ ಕೇಳಿ ಜನಾ|

ಜ್ಯಾಲ ಮಾಯವಗದು ಭಕ್ತಿ ಕೀಲು ಅಡಗಿಸಿಹ್ಯಾ ಅರಿದು

ಆಲಯದಿ ಧ್ಯಾನ ಮಾಡಿ ಕೇಳಿ ಜನಾ ||7||

ಬ್ರಹ್ಮ ವಿಷ್ಣು ರುದ್ರ ಈಶ್ವರುಂ ಯೆಂಬೊ ಸದಾಶಿವನು

ಬೊಮ್ಮ ಪಂಚಾಕ್ಷರೀತನೂ ಕೇಳಿ ಜನಾ|

ನಿಮ್ಮವಳಗೆ ನಮ್ಮವಳಗೆ ನೆಮ್ಮಿಕೊಂಡು ಯಿರುವನೀತ

ಹಮ್ಮು ಬಿಟ್ಟರೊಲಿಯುತಿಹನೂ ಕೇಳಿ ಜನಾ ||8||

ಅಂಕಲಗಿ ಮಠದ ವಾಸ ಶಂಕರನು ಅಡವಿಸಿದ್ಧಾ

ಲೆಂಕರಾದವರಿಗೊಲಿವನು ಕೇಳಿ ಜನಾ|

ಮೊಂಕು ನಾನು ತೊದಲ ನುಡಿ ಸೊಂಕು ನಿರುಪಾಧಿಯಂದು

ಕಿಂಕರಾದಿ ಹಾಡಿ ಹರಿಸಿರೀ ಕೇಳಿ ಜನಾ ||9||

ಕೇಳಿ ಕಂಡು ತಿಳಿದು ನುಡಿದೆ ಹರುಷದಿಂದಲೀ

ಬಾಳ ಲೋಚನನಹುದು ನಿಶ್ಚಯವು ನಿಜವೂ ||ಪ||

ವೇದ ಆಗಮ ಪುರಾಣಗಳ ನಡೆ ನುಡಿಯಂತೆ

ಸಾಧು ಶಿವನೆಂದೆ ಸಾಕ್ಷಾತನಹುದೆಂದೆ

ವಾದಿ ಮಾಡಲಿಕಿಲ್ಲಾ ವಸ್ತು ರೂಪನು ಪೂರ್ಣ

ವಾದ ಆರೂಢ ಆರೂಕ್ಷೈಕ್ಯನೆಂದೇ ||1||

ಗುರುಲಿಂಗ ಜಂಗಮನು ಹರಹರಿ ಬ್ರಹ್ಮನು

ವುರುತರಕೆ ವುರುತರನು ವುತ್ತಮೋತ್ತಮನೆಂದೇ

ಪರಕೆ ಪರತರನೀತ ನರಕಾಯಧರನೆಂದೆ

ಶರಿರಿರುವ ಪರಿಯ ನಿನ್ನಾ ಸ್ಮರಣೆಯಿರಿಸೆಂದೇ ||2||

ಬಹಳ ಆನಂದಾಗಿ ಬಹು ನಾಮದವನೆಂದೇ

ವಿಹಿತ ಬಸವಾದಿ ಪ್ರಮಥರ ಸೂತ್ರನೆಂದೇ

ದಹಿಶಿದವ ಆರು ಗುಣ ಅಷ್ಟಮದಗಳನೆಂದೇ

ವಹಿಸಿಹುದು ಗುರು ಲೀಲಾ ಪೂರ್ಣಕಳೆಯೆಂದೇ ||3||

ಗೂಢಾರ್ಥ ಗುಪ್ತನು ಗಾಡಿಕಾರನುಯೆಂದೇ

ಕಾಡಶಿದ್ಧನೆ ಶಂಭು ಶರಣನಹುದೆಂದೂ

ನಾಡಿನೊಳಗೆ ತುಂಬಿಕೊಂಡಿಹ ಪ್ರಭುವು ನೀನೆಂದೆ

ನೀಡು ಭಕ್ತಿಯ ಕೀಲು ನಿನ್ನವನೂಯೆಂದೇ ||4||

ನಾಲಿಗೆಯು ವಂದೆ ನಗೆಯೆಷ್ಟು ಹೊಗಳಿದರು ಅಲ್ಪೇ

ಶೂಲಿಯ ಶೃತಿಯಂತೆ ಸಹಜವನು ಕಂಡೇ

ಆಲೋಚನಿಯ ಹರಿಸು ಅತಿತ ಅಡವಿ ಪಾಶ್ಚ

ಲೋಲ ವಿರಾಟೂರ್ತಿ ನೀನೆ ನಿರುಪಾಧಿ ||5||

ಕೇಳು ಯನ್ನ ಬಿನ್ನಪವನೆ ಅಳಿದಾನೆ ಅಡವಿ ಪಾಶ್ಚಾ

ಬಹಳ ಬಲ್ಲವನು ಅಲ್ಲಾ ಚರಣ ಧೂಳಿಯು ||ಪ||

ನೀನೆ ಬಲ್ಲೆ ನಿನ್ನ ಶ್ಯಾಖಾ ಯೇನು ಹೇಳಲೈಯ್ಯಾ ನಾನು

ಖೂನದೊಳಗೆ ಯಿಡುವ ಭಾರ ನಿನ್ನದೆಂದೆನೊ

ಸ್ವಾನುಭಾವ ಶ್ರೇಷ್ಠ ನೀನೇ ಕಾನನದೊಳು ಮಠವ ಮಾಡಿ

ದೇನುವಾಗಿ ಭಕ್ತಭಿಷ್ಠ ನಡೆಸುವಧಿಕಾರೀ ||1||

ಕರ್ತು ನೀನೆಯಂದು ಮನದಿ ಬೃತ್ಯ ಭಾವದಿಂದ ಹಾಡೋ

ಅರ್ಥಿಯಿಡು ಎನ್ನುವಂಥ ಬಯಕೆ ಯನ್ನದೂ|

ತುರ್ತಿನಿಂದ ಕರುಣವಾಗೋ ವಾರ್ತಿ ಕೊಡು ದೇಶ ಚರಿಸಿ

ನಿರ್ತದಿಂದ ನಿನ್ನ ನಿಜದ ವಳಗೆ ಯಿರಿಸೈಯ್ಯಾ ||2||

ಎತ್ತ ಹೋದರೆಯು ನಿನ್ನ ಚಿತ್ತದೊಳಗೆ ನೆನೆವಾ ಮನವ

ಯಿತ್ತು ರಕ್ಷಿಸಯ್ಯಾ ಯಂಬೊ ಹರಕೆ ಯನ್ನದೂ|

ಸತ್ಯ ಸದಾಚಾರಿ ನೀನೂ ಅತ್ಯಧಿಕ ಮಹತ್ತು ಮೆರೆವೆ

ಉತ್ತಮರ ಸಂಗವಿರಿಸೂ ಘಟವು ಇಹಪರೀ ||3||

ನಾನು ನೀನು ಎಂಬೊ ಭಾವ ಖೂನಬಲ್ಲ ಭಕ್ತಗರಿಕೀ

ಹೀನ ನರರೇ ಬಲ್ಲರೇನು ನಿಮ್ಮ ಮಹಿಮೆಯ

ಮೌನಿ ಮಹದಾದಿ ವಡಿಯಾ ಭಾನು ಕೋಟಿ ಪ್ರಭೆಯು ನೀನೇ

ಮಾನ ಅಭಿಮಾನ ನಿನ್ನದಾಗಿ ರಕ್ಷಿಸು ||4||

ಅಡಿವಿಪಾಶ್ಚಾ ಅಂಕಲಗಿಯೊಳ್ ಸಡಗರಾನಂದಾ ನಿರುಪಾಧಿ|

ಅಡಿಯ ಬಿಡದೆ ಭಜಿಸುವಂಥಾ ಮನವಯಿರಿಸೈಯ್ಯಾ|

ದೃಢದಿ ಕಾಲ ಕಾಲದಲ್ಲಿ ವಡಿಯನೆಂದು ಸ್ತುತಿಪ ಹಾಗೆ

ಕೊಡು ನಿರೂಪ ಸಕಲ ಭಾರ ನಿನ್ನದೆಂದೆನೋ ||5||

ಕೊಹಿ ನಹಿ ತುಮೆ ಏಕ ಮಹಸಿದ್ಧ ರಾಜ್ಯ ಜೀ

ಕಾಹ ದೇಖೇತೊಜಾಹೈ ಪರಬೂಜಿ

ಸೋಹಂ ಸೋಹಂ ನಾದ ಬ್ರಹ್ಮ ತೂಹೀ

ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||1||

ಜಂಗ್ಮ ಧೆಡಮೊ ಸಂಗ ತುಮಾರಾ

ಸಂಗರಾಗ ನಹಿ ಪೂರ್ಣಾ

ಸಂಗ ಅಡವಿ ಪಾಶ್ವಪೀರಾ ಸಿದ್ಧರಾಜಾ ಜೀ ||2||

ನಿರೂಪಾಧಿಕಾ ಗುರು ಮಝರಿಕೊ

ಕರಾರು ಹುಯೆ ಬಾದತುಮೆ

ಪರ ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||3||

ಕೋಲು ಕೋಲಿನ ಕೋಲು| ಕೋಲು ಕೋಲಿನ ಕೋಲು

ಶಿದ್ಧೇಶನ ಬಲಗೊಂಬೆ ಕೋಲು ||ಪ||

ಮಹದಾದಿ ವಡಿಯನು ಸಹಜಾನಂದದಿಂದಾ

ಮಹಿಯೊಳು ಬಂದ ಲೀಲವ ಕೇಳಿ || ಕೋಲು||

ದಹಿಸುವ ಸಕಲ ದೋಷ ಭಕ್ತ ಜನಂಗಳ

ವಹಿಸಿ ಸಂತೋಷವ ಕೊಡವನು ಕೋಲು ||1||

ಮುಕ್ತನಾಗುವೆನೆಂದು ಭಕ್ತಿಯಿಂದಲಿ ಬಂದು ತಾ

ಮುಕ್ತನಾದರೆ ಕೊಡುವಾತ ಕೋಲು

ಶಕ್ತನಾದರೆ ತನ್ನ ತಕ್ತನೇರುವಂಥಾ

ಫೊಕ್ತ ಮಾರ್ಗವ ತೋರಿಸುವನೀತಾ ||ಕೋಲು|| ||2||

ಕಂದ ಬಾರೆಂದು ಆನಂದದಿಂದಲಿ ತನ್ನ

ಮುಂದೆ ಕರೆದು ಸ್ಥಲವ ತೋರುವಾ ||ಕೋಲು||

ಸಂದೇಹ ಬ್ಯಾಡನೀ ಸಾಕ್ಷಿ ಬ್ರಂಹ್ಮನೆಂಬ

ಹೊಂದಿಕೆಯ ತಿಳಿಸುವ ಗುರು ||ಕೋಲು|| ||3||

ಆಧಾರದೊಳಗೀಹಾ ಭೇದ ನಾಲ್ಕಕ್ಷರ

ಶೋಧಿಸಿ ತಿಳಿಸುವ ಗುರುರಾಯ ||ಕೋಲು||

ಸ್ವಾಧಿಷ್ಠನೊಳು ಇರುವ ಭೇದಕ್ಷರ

ವಿನೋದದಿಂದಲಿ ತೋರ್ವ ಗುರುರಾಯಾ ||ಕೋಲು|| ||4||

ಪಣಿಪೂರಕದೊಳಿಹ ಅನುವು ಹತ್ತಕ್ಷರಾ

ವಿನಯಾದಿಂದಲಿ ತೋರ್ವ ಗುರುರಾಯಾ ||ಕೋಲು||

ಅನಹತದಲ್ಲಿ ಹನ್ನೆರಡು ಅಕ್ಷರಾ

ಸಂತೋಷದಿದೋರಿದ ಗುರುರಾಯಾ ||ಕೋಲು|| ||5||

ವಿಶುದ್ಧಿ ಸ್ಥಲದಲ್ಲಿ ಹದಿನಾರು ಅಕ್ಷರಾ

ಸೋಸಿ ತೋರಿದಾ ತಾನು ಗುರುರಾಯಾ ||ಕೋಲು||

ಈಶ ಇರು ಆಗ್ನೇಯ ಎರಡಾಕ್ಷರದ ನೆಲೆ

ಬ್ಯಾಸರಿಲ್ಲದೆ ತೋರ್ವ ಗುರುರಾಯಾ ||ಕೋಲು|| ||6||

ಸಾಸಿರದಳ ಪೀಠ ಬ್ರಹ್ಮ ಸ್ಥಾನವು ಯಂದು

ಆಶರಹಿತನಾದ ಗುರುರಾಯಾ ||ಕೋಲು||

ಕೂಶೆ ನೀನರಿ ಶಿಖಾದಲಿ ಮೂರಕ್ಷರಾ

ಪಾಶ ರಹಿತನೆಂದು ಗುರುರಾಯಾ ||ಕೋಲು|| ||7||

ಪಶ್ಚಿಮದೊಳು ಒಂದೇ ಅಕ್ಷರ ಇರುವಂತಾ

ಸ್ವಚ್ಛವ ತಿಳಿಸಿದ ಗುರುರಾಯಾ ||ಕೋಲು||

ಮುಚ್ಚು ಮರೆಯೊಳು ತನ್ನಂಗದಿ ಒಂಬತ್ತು

ನಿಚ್ಚಳ ಸ್ಥಳ ತೋರ್ವ ಗುರುರಾಯಾ ||ಕೋಲು|| ||8||

ನವ ಚಕ್ರದೊಳು ನವಲಿಂಗವ ಹೇಳಿದಾ

ಮೂರುತಿ ಗುರುರಾಯಾ ||ಕೋಲು||

ವಿವರಿಸಿ ತನ್ನ ಶರೀರದೊಳಿಹವೆಂದು

ಸುವಿವೇಕ ತೋರ್ವಂತ ಗುರುರಾಯಾ ||ಕೋಲು|| ||9||

ಪಂಚ ತತ್ವದ ಮಿಶ್ರ ಹಂಚಿಗಿಯಿದುಯಂದು

ಸಂಚೀತ ಕಳಿದಾತ ಗುರುರಾಯಾ ||ಕೋಲು||

ಗೊಂಚಲನೇಕ ಒಂದೆ ವೃಕ್ಷದೊಳಗೆಂದು

ಮಿಂಚಿನ ಪ್ರಭೆ ತೋರ್ವ ಗುರುರಾಯಾ ||ಕೋಲು|| ||10||

ಸುಖದ ಯಿಚ್ಛೆಯೊಳಿರೆ ಸುಖರೂಪದ ದೊರಕುವಾ

ನಿಖಳ ಎಲ್ಲವು ಆದ ಗುರುರಾಯಾ ||ಕೋಲು||

ಆಕಳಂಕ ಆತ್ಮ ವಿಚಾರದಿ ನಡೆದರೆ

ರಕಮು ತೀರಿಸುವಂಥಾ ಗುರುರಾಯಾ ||ಕೋಲು|| ||11||

ನಿಸ್ಸಂಗದೊಳಗಾಡಿ ನೀತಿದೋರುವದೆಂದು

ಪುಸಿ ಪ್ರಪಂಚೆಂದನು ಗುರುರಾಯಾ ||ಕೋಲು||

ದುಸ್ಸಂಗ ಹರಿವಾ ವಾಸನಗಳು ಕ್ಷಯವಾಗೆ

ಸುಸೀಲನಾದಂಥ ಗುರುರಾಯಾ ||ಕೋಲು|| ||12||

ಸ್ವಾನುಭಾವದಿಂದ ಆನಂದವಾಗಲು

ಮೌನೀತನೆನಿಸುವಾ ಗುರುರಾಯಾ ||ಕೋಲು||

ಏನು ಹೇಳಲಿ ತೂರ್ಯದೊಳಗೆ ನಿರ್ಭಯವೆಂದಾ

ಮೌನ ಮೂರುತಿಯಾದ ಗುರುರಾಯಾ ||ಕೋಲು|| ||13||

ತೂರ್ಯಾತೀತದಲ್ಲಿ ಸುಷುಪ್ತಿ ಸುಖಪರಿ

ಕಾರ್ಯಕಾರಣ ಮೀರ್ದ ಗುರುರಾಯಾ ||ಕೋಲು||

ಪ್ರೇರ್ಯ್ಯ ಪ್ರೇರಕತ್ವ

ಎರಡಕ್ಕೆ ನಿಲ್ಕದಾ ಗುರುರಾಯಾ ||ಕೋಲು|| ||14||

ಈ ಪರಿ ಸಪ್ತ ಭೂಮಿಕೆಗಳ ತೋರುವಾ

ಭೂಪ ಅಡವೀಶನೇ ಗುರುರಾಯಾ ||ಕೋಲು||

ಕಾಪಟ್ಯ ಕಳದು ನಿರುಪಾಧಿಯೆನಿಸುವಾ

ಇಹ ಪರದೊಳು ಬ್ರಹ್ಮನಾಗುವ ಗುರುರಾಯಾ ||ಕೋಲು|| ||15||

ಕೋಪ ಮಾಡಿದರೆ ನಾನೇನಂಬೆ| ನಿನ್ನೊಳು ತಿಳಿಯಂಬೆ||

ಕೋಪ ಸಲ್ಲದು ಸಾಧು ಸಂಗದೊಳು|

ಅಪರ ಮೋಕ್ಷವ ಕೂಡಿದ ಪುರಷಗೆ ||ಪ||

ತಾನೇ ತನ್ನೊಳು ತನ್ನನು ತಿಳಿದು|

ಹಂಕಾರ ಅಳಿದು ಹೀನ ದುರ್ಗುಣವೆಲ್ಲ ಬಳಿದೂ|

ಮಾನ ನಿಧಿಯೆ ನಿಜ ಧ್ಯಾನದೊಳಿರುತಿಯ|

ಸ್ವಾನುಭವಿಯ ಖೂನಕೆ ತರದಲೆ ||1||

ತನುವಿನ ಗುಣಗಳೆಲ್ಲಾ ನೀಗಿ|

ಆನಂದದಲ್ಲಿ ತೂಗಿ ಘನ ಪರಬ್ರಹ್ಮದಲ್ಲಿ ಭೋಗಿ|

ನಿನಗೆ ನನಗೆ ಎಂಬೊ ಭೇದ ವಿಲ್ಲದ|

ಚಿನುಮಯ ಮೂರುತಿ ಅನುವಿನೊಳಾಡ್ವಗೇ ||2||

ನಿರುಪಾಧಿ ಎಂದು ಗುರುವಿನ ತಿಳಿದು| ಸಂಶಯವನು ಅಳಿದು

ಹರುಷದಿ ಪುಣ್ಯ ಪಾಪವ ಕಳಿದು

ಅರವು ಮರವು ವುಭಯದ ಸಂಕಟಗಳ

ಹರಿದು ತೂರ್ಯಾತೀತದ ಸುಖಯಿರುವಗೆ ||3||

ಗುರು ಶಿದ್ಧಲಿಂಗಾ| ನಿಂದೇ| ಪ್ರಾಣಿಗಳರಿಯರೈಯ್ಯ

ಮಹಾ ಪುರುಷರ ನಡೆ ನುಡಿ ನಿಂದೇ ಪ್ರಾಣಿಗಳರಿಯರೈಯ್ಯ

ನಿಂದೆ ಪ್ರಾಣಿಗಳು ಬಲ್ಲರೆಯಾಗಿಯಾ

ಕಂದುಗೊರಳ ಶಿವ ಅಡವೀಶನ ನಿಜಾ ||ಪ||

ನಾಯಿ ಬಲ್ಲದೇ ನಾನಾ ರುಚಿಯಾ

ಅದರಂತೇ ಮೂರ್ಖಗೆ ನ್ಯಾಯವೆ

ನರ ಹಿರಿ ಕಿರಿದೆಂಬೋ ಸೋವೆ ಅರಿಯದೆ ಬೊಗಳುವ

ಮಾಯಾ ಪಾಶದೊಳಗೆ ಬಿದ್ದುರುಳಿ ಮುಳಿಗ್ಯಾಡುವಾ ||1|

ಗುರುಲಿಂಗ ಜಂಗಮವೇನು ಭಲ್ಲಾ ತಿಳಿಯದ

ಗುಣ ಹೀನರಿಗೇನು ನರಕ ಸ್ವರ್ಗದ ಹಾದಿ

ಪರ ತರದೊಲು ಮನ ಯರಕವಾಗದೆ

ಗರಿವಿನಿಂದ ಶರಣರ ಜರಿವಂತಾ ||2||

ನಿರುಪಾಧಿ ಅಡವಿಸಿದ್ಧನ ಗುರುತೂ| ಮೈ ಮರತು

ಭವ ಭವ ತಿರುಗುವ ಜನ್ಮ ಅನಂತಗಳ

ಗುರು ಕರುಣದಿ ತಾ ತಿರುಗಿ ಭಾರದಾ

ಅರವು ತಿಳಿದು ಆನಂದವಾಗದಾ ||3||

ಗುರು ನಾಮ ಏಕ ಮೂಲ ಸಂತಕೊ

ಸಬ್ ತಾಡೇಕಾ ಬಾಲಾ ||ಪ||

ನಿತ್ಯ ನಿರಂಜಾನಂದ ತಃಕ್ತಮೊಬೈಟಿ

ಸತ್ಯ ಚಿತ್ತಾನಂದ ಭರಗೌಯೆಬಾದ ||1||

ಗಗನ ಮಹಲಮೋ ಜೋತಿಲಗಾಕರ

ಜಗ ಸರ್ವಮೋ ಆಪು ಹೆ ಬಾದ ||2||

ಅಡವಿ ಸಿದ್ದಜೀ ಚರಣ ಮಿಮತ್ಯಾ

ಖಡೆಗುರು ನಿರುಪಾದಿ ಬ್ರಹ್ಮ ||3||

ಗುರುವಿನ ವಚನವ ಸರಿ ನೋಡು ಮಗುವೇ ||ಪ||

ಭವಗೆಡಿಸುವ ಸುವಿವೇಕ ಕಲಿಸುವಾ

ವಿವರಿಸಿದರೆ ನಿಜ ಮುಕ್ತಿ ತೋರಿಸುವಾ ||1||

ದುರ್ಗುಣ ಕಳಿವನ ನಿರ್ಗುಣತಿಳುಹಿ

ಭಾರ್ಗೋ ದೇವ ವೈರ ವರ್ಗವ ಕಳೆವಾ ||2||

ನಿರುಪಾಧಿಯೊಳು ಮನ ಯರಕವಾಗುತಲಿ

ತಿರುಗಿಬಾರದ ಗುರು ರೂಪಾ ಅಡವೀಶ್ಯಾ ||3||

ಚಿತ್ತ ನಿಲುಕಡಿ ಮಾಡೊ ಚಿತ್ತ ಸ್ವರೂಪನೆ

ಹೆತ್ತ ತಾಯಿ ತಂದೆ ಬಂಧು ಬಳಗ ನೀನೇ|| ||ಪ||

ವಳಗದೋ ಹೊರಗದೋ ಹಿಂದು ಮುಂದೆಡಬಲವೋ

ತಿಳಿಯದೈ ನಿನ್ನಾಟ ತಿರುಗುತಿಹುದೋ

ಕಳವಳಿಸುವದು ಮತ್ತೆ ಮರಳಿ ಧೈರ್ಯವ ಮಾಡಿ

ಸುಳಿ ನೀರಿನಂತೆ ಮರಳಿ ಜಾಗ್ರದಿ ಹೊರಳುತಿಹುದೊ|| ||1||

ನೀನಾರೋ ಅದು ನೀನೋ ಯರಡು ತಿಳಿಯದು ಯನಗೇ|

ಮಾನಿತರ ವಾಕ್ಯ ಮಹದಾದಿ ಮನವೆಂದೂ

ಕೂನ ವರಿತರೆ ಸರ್ವ ನಿನ್ನ ಚೇತನವಂತೆ

ಯೇನು ಹೇಳಲಿ ಅಹುದೊ ಅಲ್ಲವೆಂಬಂತಾ|| ||2||

ನಿರುಪಾಧಿ ನೀನಂತೆ ಸಕಲ ಜಾಗ್ರದಿ ಚರಿಪಾ

ಗುರುತು ತಿಳಿದರೆ ಅಡವಿಸಿದ್ಧ ನಿಜವಂತೇ

ವರಲಿ ಓಡಾಡುವದು ಅರಿದು ಸುದ್ದಾಗುವದು

ಗುರುಲಿಂಗ ಜಂಗಮಾ ತಾನೆಯಾದಂತಾ|| ||3||

ಚಿಂತಿಸಲೇತಕೆ ಚಿನ್ಮಯ ಮೂರುತಿ

ಹಂತೆಲಿ ಇರುತಿರೆ ಕಲ್ಪನೆ ಮಾಡುವ

ಭ್ರಾಂತಿಯ ಕಳದನು ಅಡವೀಶನೀ ನಿಶ್ಚಿಂತ ಪದವ ನೋಡಿ ||ಪ||

ಬೇಡಿದ ಪದವಿಯ ನಡೆಸುವನಿರುತಿರೆ

ಆಡಲಿಯೇಂ ಯಾತಕೆ ಹಾಗ್ಹೀಗೆನ್ನತಾ

ನೋಡಿದೆ ಮುಕ್ತಿಯ ಕೂಡಿದೆ ವಸ್ತುವ ಕಾಡಶಿದ್ಧನಲ್ಲೀ ||1||

ದೇಶದ ಜನಗಳ ಆಸೆಯ ಸಲಿಸುವ

ಈಶನ ಇದಿರಲಿ ಕಾಣಿತ ಸಂಶಯ

ಪಾಶವು ಹರಿದವು ದೋಷವು ಹುರಿದಾವು

ಸೋಸಿ ನೋಡಿದೆ ನನ್ನೊಳಗೆ ||2||

ಸೇವಕನಾಗುತಾ ಕಾವವ ನೀನಿಹೆ

ನಾವರಲಿದರೇನಹುದು ಶಂಕರಾ

ಕೇವಲ ಕತ್ರ್ರುವು ಕಲ್ಪವೃಕ್ಷವಿರೆ

ನೋವು ಸಂಕಟಳಿದೇ ||3||

ಹಿಡಿದೆನು ಸ್ತುತಿಯನು ಬಿಡೆ ಘಟವಿಹರಪರಿ

ಇಡು ಕರುಣವು ನಿನ್ನಂಶದ ಅಣುಗಾ

ಸಡಗರರ್ಥಿಯು ಗುಡಿಗಟ್ಟಿತು

ನಿನ್ನಡಿಯ ಸ್ಮರಣೆಯೊಳಗೆ ||4||

ನಿರುಪಾಧಿಯು ನಿಜ ಗುರುತಿನ ಬೈಲೊಳು

ಪರ ಬ್ರಹ್ಮಾನಂದದಿ ಹೊಯಿದಾಡುತಾ

ವುರುತರ ಸಿದ್ಧನ ಮರೆ ಹೊಕ್ಕೆನು ನಾ

ಬಿರದು ನಿನ್ನದೆಂದೂ ||5||

ಜಾತ್ರಿ ನೋಡುವನು ಬನ್ನಿ ನಿತ್ಯ ನಿತ್ಯ ಜಾತ್ರಿ ನೋಡುವನು ಬನ್ನಿ|

ಜಾತ್ರಿ ನೋಡುವನು ಬನ್ನಿ ಧಾತ್ರಿಯೊಳಧಿಕಾದ ಕರ್ತೃ ಅಂಕಲಗಿಯಾ

ಅಡವಿ ಪಾಶ್ಚಾಯೋಗಿ ||ಪ||

ದಿಕ್ಕು ಎಂಟರಿಂದ ಹೊರಟು ಬರುವ ಜನಾ|

ಲೆಖ್ಖ ಮಾಡುವರಿಗೆ ತೀರದು ಶಿದ್ಧಾಟ|

ಅಕ್ಕರದಿಂದಲಿ ಮೇಣೆ ಪಾಲಕಿ ಬಂಡಿಯೂ|

ಚಕ್ಕಡಿ ಕುದುರೆ ಎತ್ತು ಕತ್ತೆ ಕೋಣಗಳು|

ಕುಕ್ಕ ಕುರಿಕೋಳಿ ಗಿಳಿ ಜಕ್ಕವಕ್ಕಿ ಕೌಜುಗಾ|

ಅಕ್ಕರತಿಯಿಂದ ಸಕಿ ಹಿಡಿದು ಬರುವಂತ|

ಮೂಕರಾಪಾಟ ಜಂಗಮ ಜೋಗಿ ಭೈರಾಗಿ|

ಲಕ್ಕಿನಲಿ ಸಾಧು ಫಕೀರ ಹುಚ್ಚಾ ಶಾಣ್ಯಾ|

ಮಕ್ಕಳಾ ಫಲ ಮೊದಲು ಸರ್ವ ಭೋಗವ ಬೇಡ್ವ|

ಅಕ್ಕವ್ವಗಳು ಬಂದು ಬಯಕೆ ತೀರಿಸುವಂತಾ|

ಮುಕ್ಕಂಣ ಹರಸಿದ್ದ ಮಹಾತ್ಮಕ್ಕೆ ವಡಿಯನೂ|

ಅಕ್ಕಿ ಗೋಧಿಯು ಬೇಳೆ ಅಲ್ಲ ಜೀರಿಗೆ ಮೆಂತೆ|

ಮೆಕ್ಕೆ ಜೋಳವು ರಾಗಿ ನವಣಿ ಶ್ಯಾವಿಯು ಚಣಗಿ|

ಚೊಕ್ಕಟಾ ತೊಗರಿ ಕಡಲಿ ವುದ್ದು ಅಲಸಂದಿ|

ಸಕ್ಕರೆ ಬೆಲ್ಲ ಹೆಸರೂ ಸಜ್ಜಿ ಮಡಿಕೆಯೂ

ರೊಕ್ಕ ಮೊದಲು ಹುರುಳಿ ರೂಪಾಯಾವರ ಹೊನ್ನು|

ಇಕ್ಕಬೇಕು ಮುಂದೆ ಬಾಳೆ ತೆಂಗು ಹಲಸೂ|

ಮುಕ್ಕರಿಸುವಾ ಅಷ್ಠಗಂಧ ಊದಿನ ಕಡ್ಡಿ|

ಯಿಕ್ಕಿ ಕಾರಿಯ ಕಾಯಲಿ ಅಡಕಿ ನಸಿಪುಡಿ ಸಹಾ|

ಚೋಕ್ಕ ಸಿದ್ದೇಶನಮ್ಹರಕಿ ನಡೆಸೆನುತಲಿ|

ಚಿಕ್ಕವರು ಮುದಕರು ನಡು ಜನವೂ ಎಲ್ಲಾ ||1||

ಯಂಟು ದಿನಕೊಮ್ಮೆ ಸೋಮವಾರ ಪಾಲಕಿ ಸೇವೆ|

ಕಂಟಣಿ ಗೋಣಿ ಹಸಬಿ ಕಂಬಳಿ ಕಲೂತಿ|

ಸೊಂಟ ಹೆಗಲ ಮೇಲೆ ಹೊತ್ತು ಬರುವಾ ಜನಾ|

ಕುಂಟೆತ್ತು ಕುರುಡೆತ್ತು ಚಿಂಚ ಹಂಡಾ ಗುದಗ|

ಒಂಟೆತ್ತು ಮಾಸ ಬೂದ ಚಿಲ್ಲಗಿವಿಯತ್ತು|

ಸೊಂಟ ಎಳೆವಾಯತ್ತು ಮಲಗಿ ಏಳುವ ಎತ್ತು|

ಸೊಂಟ ಕೋಡು ಮುರಕ ಕಿವಿ ಹರಕ ಮೊಂಡ ಬಾಲ|

ಸುಂಟರಗಾಳಿಯಂತೆ ಓಡಿಯಾಡುವ ಎತ್ತು|

ವುಂಟು ಆಕಳ ಕರಾ ಕೋಣ ಎಮ್ಮಿ ಹೆಳಗಾ|

ಕಂಟಕಾಕಳಿ ಅಡವಿ ಪಾಶ್ಚಾ ಸಿದ್ದೇಶ್ಯಾ|

ವುಂಟು ಮಾಡಯ್ಯ ಫಾಲಾಕ್ಷ ಪರಮ ಶಿವಯೆಂದ್ಹೊಂಟಿತು ಪರುಷಿ|

ಕಾಳಿಕೊಂಬೂ ಕರಡಿಯಾ ಟೆಂಟೆಣೌ ಹೊಡೆವುತಾಡೊಳು|

ಸಮಾಳ ತಪ್ಪಡಿಗುಂಟ ಕುರುಡಾ ಹೇಳುವಾ ರೋಗಿ ಸ್ವಶ್ಚಾಕಿಲ್ಲ|

ಗಂಟೆ ಜಂಗೂ ಧೂಳ್ತ ವಿಭೂತಿ ಕೊಡಗಡಿಗಿ|

ಟೆಂಕಲು ಬಡಗಲು ಪಡುವಲು ಮೂಡಲು|

ಹೊಂಟು ಸೊಪ್ಪೆ ಬಿದರು ತೊಲಿ ಕಲ್ಲು ಮೊದಲಾಗಿ|

ನೆಲ್ಲವರಳಿಯರು ಮಾವ ಅತ್ತೆ ಮಕ್ಕಳು ನಾರಿ|

ವುಂಟ ವರವಿಲ್ಲಿ ಹರಹರಾ ಹರನು ನಿಜ ನಿಜವೂ|

ಮಂಟಪದ ಶೃಂಗಾರ ಮಹಾದಾದಿ ಕೈವಲ್ಯ|

ತೊಂಟರು ಪ್ರಾಜ್ಞರು ನಡುತರದ ಪ್ರಾಜ್ಞರೂ ||2||

ಬಂದ ತಡಾಕಿಲೆ ಕಜ್ಜ ಅಂಬಲಿ ಖಾರಾ|

ಆನಂದದಿಂದಲೇ ಸಲಿಸು ವಿಸ್ತಾರ ಬಲ್ಲೋಹುಜು|

ದುಂದು ಕೊಡಗಡಿಗಿ ಬಿಂದಿಗಿ ಸ್ವಾರಿ ಮಗಿ|

ಮನಿಯಿಂದ ತಂಬಿಕೆ ದೊನ್ನೆ ಹಂದು ಹರಿವಾಣದಲೀ|

ಚಂದ ಕಡಿಯುವರು ಋಪ್ತಿ ಕೈಯ ನೆಲದಾ ಮ್ಯಾಲೆ|

ಮಂದಿ ಕುಲ ನೂರೊಂದು ಎಲ್ಲ ಜಿನಸಿನ ದೈವ|

ತಂದೆ ಅಡವೀಸಿದ್ಧ ಅನ್ನದಾನಿಯು ಎಂದು|

ಸಂದೇಹ ಅಡಗುವದು ಪಾದ ಕಂಡಾಕ್ಷಣಕೆ|

ಒಂದೆರಡು ಮೂರು ಲಕ್ಷ ದಿನವೇಕೆ|

ಯೆಂದು ತಮ್ಮೊಳು ತಾವು ಯಳದಂಥ ಸ್ಥಳದಲ್ಲಿ|

ಕುಂದು ಕೊರತೆಯ ಕಳೆವಾ ಸಾಕ್ಷತ್ ಪರದೇವಾ|

ಬಂದ ಅವತಾರ ತಾಳೀ ಜನವ ರಕ್ಷಿಸಲಿ|

ಹಿಂದು ಮುಂದಿನ ಕರ್ಮಾ ಹರಿವಾ ಶ್ರೀ ಗುರುಸಿದ್ಧಾ|

ಬಂದು ತೋರಿಸು ಪಾದಾ ಪಾತಕರು ನಾವೆನುತ|

ನಿಂದು ಕುಂತು ಮಲಗಿ ತಿಗಾಡಿ ಧ್ಯಾನಿಸುತ|

ಬಂದ ಜಂಗಮ ಜೋಗಿ ಹಕೀರ್ರು ಪಕೀರ್ರು|

ನಿಂದು ಸಕ್ಷಾತ್ ದರುಶನ ರುದ್ರ ಹರಿ ಬ್ರಹ್ಮ|

ವೆಂದು ಕೈ ಜೋಡಿಸಿ ಬರುವ ದಾರಿ ನೋಡ್ವು|

ಅಂದವೇನೆಂಬೆ ಮಾರು ಹಾದಿ ಪರುಷಿಬಾಹ|

ಛಂಡ ಕಲ್ಯಾಣವು ಯಿದೇಯಿದೇ ನಿಶ್ಚವೂ|

ಹೊಂದುವಾ ಮುಕ್ತಿಯ ವಡಿಯ ಸದ್ಗುರುವೂ ||3||

ದೂರಲ ದೇಶದ ಪರುಷಿಯ ಬರುವಂತಾ|

ತಾರಿಪ ಕಂಚಿ ಕಾಳಾಶ್ರೀ ವಾಲೋಜಿ ಕಪ್ಪಲಿ|

ಶಹರ ಕಾಶಿ ವುಜ್ಜನಿಯೂ ಬಳಿಹಳ್ಳಿ ಗಡಾ|

ತೇರ್ದಾಳು ಕೊಪ್ಪ ಬಾರದ ಬಂಡಿ ಗದ್ವಾಲಿ|

ತಾರೀಪ ಸುರುಪುರ ಗಟ್ಟು ಗುಣ (ರ) ಮಟಕಲ್ಲು|

ನಾರಾಯಣ ಪೇಟೆ ಕೋಶ್ಗಿ ಕೋಡಂಗಲ್ಲು|

ಧೀರ ಹುಬ್ಬಳ್ಳಿ ಧಾರ್ವಾಡ ಮೈಸೂರ ಮಿರ್ಜಿ|

ಪುರಾಣಾ (ಪುಣಾ) ವುಳವಿ ಗೋಕರ್ಣ ಪುಣ ಪುನೇ ಸಾತಾರಿ|

ದ್ವಾರಕ ಮಥುರ ರಾಮೇಶ್ವರಾ ನಗರ ಹಂಪಿ|

ಧೀರ ಮೊಂಮಾಯಿ (ಬೊಂಬಾಯಿ) ಚನ್ನಪಟ್ಟಣ ಗುತ್ತಿಯೂ|

ಧಾರವಾಢವು ಕದಡಿ ಮಸಗಿ ಬಳಗಾನೂರ|

ಸೂರೆ ಜಮಖಂಡಿ ನರಗುಂದ ಆನೆಗುಂದಿ|

ಪುರಾಣ ಕಲ್ಯಾಣ ಕಲಬುರಗಿ ಬಿದ್ರಕೋಟೆ|

ಮಾರಹರಿನಾನಾ ನಾಮಪೇಟೆ ಶ್ಯಾಪೂರ ಸಗರ|

ಪೂರ ಬಿಜಾಪುರ ಸವನೂರ ಬಂಕಾಪೂರ|

ಕಾರಿಗನೂರು ಸೊಲ್ಲಾಪೂರ ಸುಲೆಗಾಂವಿ|

ಭಾರಿವುಕ್ಕೇರಿ ನಿಡಗುಂದ ಸಾಲಗುಂದ ಹರತಿ|

ತೀರದೈ ಶಿವನಾಟ| ಐವತ್ತಾರು ದೇಶ ಸಾರಿ

ಬರುವದುವೂರ ಹೇಳಲಿಕೆ ಅರಿದರಿದೂ|

ಮಾರಹರಬಲ್ಲ ಸುತ್ತಲಿರುವ ಗ್ರಾಮಗಳು|

ತೋರಿ ಹೇಳುವ ತೊತ್ತು ತಾಕಂಡು ಕೇಳ್ದಷು|

ಭೋರನೊದಗುವದು ಹೋಗುವದುಯಿರುವದಷ್ಟೆ ||4||

ಅರಿದೆನೆಂದರೆ ಮಹಿಮೆ ಗುರುಲಿಂಗ ಮನೆರಹದಿಹದು|

ಪಂಚ ಸಮಯವು ಏಕ ರೂಪದಲೀ|

ನರಗುರಿಗಳರಿಯರಿದು ವರಸಾಧು ಸಾಕ್ಷಾತ್|

ಪರಮ ಪಾವನನೀತಾ ಪಾಪಕ್ಷಯ ಮಾಡ್ವ ತಾಧರೆಗೆ ನರರೂಪ|

ತಾಳಿದ ಕುರುಹು ಕಾಣಿಸನು ಹರಶಬ್ದ ಜ್ಞಾನವೆಲ್ಲಾ ಕೂಗುವದು ಸರ್ವಮನೇ|

ಇರುವರು ಅಲ್ಲಲ್ಲೆ ಲಿಂಗಾರ್ಚನೆಯ ಮಾಡಿ|

ಇರುಳು ಹಗಲೆನ್ನಲೆ ವೂಟ ಅರವತ್ತುಗಳಿಗೆ|

ಚರಣ ತೋರಿಸುವ ನಾಲ್ಕೈದು ತಾಸಿನ ಒಳಗೆ|

ಪರಮ ಆನಂದ ಕಾಣ್ವದು ಮಠದ ಶೃಂಗಾರ|

ಗುರುಲಿಂಗ ಜಂಗಮಾ ಭಕ್ತ ಸರ್ವರೂ ಕೂಡಿ|

ಹರಹರ ಶಂಭೂ ಮಹಾದೇವಾ ಶಿವಶಿವೆನುತಾ|

ಬಿರದಿನಾ ಭಜನೆ ಸರ್ವ ಮಾರ್ತಿವಳ ಮಾಡಿ|

ತಿರಿಗ್ಯಾಗಾಡಿಯೇ ಕಾಂತವನದಲ್ಲಿ ವಾಸಾಗೀ|

ಭರದಿಂದ ಜನಕ್ಕೆಲ್ಲಾ ಸಾಹಗಿತ್ಯವನೂ|

ಹೊರಿಸಿ ಸಿದ್ದೇಶಾ ಬಲಭಾಗ ಚಿನ್ಮಯ ಮೂರ್ತಿ|

ಬರಲಿಕ್ಕೆ ಸಕಲಜನ ಸಾಷ್ಟಾಂಗದಿಂ ನಮಿಸಿ|

ಹರಣದು ಶುಭವನು ಕೇಳುವರು|

ಮನಬಿಷ್ಟ ಹರುಷ ಮಾಡುವದೇ ಜಂಗಮಕೆ ಅತೀಪ್ರೇಮಾ|

ಬರುವನು ತಾ ಶಿರಲಿ ಹೊರಹೊಂಟು ಗವಿ ಹೋಗುವಾ|

ಬರುವದೈ ಸಕಲ ಸಾಹಿತ್ಯ ಪಾರಾಳ ಜಿನಸು|

ನೆರಸಿ ಮಂದಿಯನೆಲ್ಲಾ ಪಂಗ್ತಿ ಲಿಂಗಾರ್ಚನೆಯಾ|

ಹರಿಹರಾಯೆಂದು ಮೃಷ್ಟಾನ್ನ ಭೋಜನ ಬಡಿಸಿ|

ಹೊರವಳಗೆ ಎಲ್ಲಾ ಉಂಡು ತೇಗಿ ತೃಪ್ತ್ಯಾಗಿ|

ನೆರೆಹಳ್ಳಿಯವರು ವಳಗಿರುವರೂ ಬೀಸುವರೂ|

ವುರುವೈ ಜ್ಯೋತಿ ಹಗಲಿರುಳು ಎನ್ನದಂತೆ ನಿಂತು|

ಗುರು ಅಂಕಲಗಿ ಅಡವಿಪಾಶ್ಚಾ ನಿರುಪಾಧಿ ||5||

ಜೋ ಜೋ ಯನ್ನಿ ಅಡವಿಸಿದ್ದನಿಗೇ

ಜೋ ಜೋ ಯನ್ನಿ ಕಾಲಕಾಲನಿಗೇ

ಜೋ ಜೋ ಯನ್ನಿ ಕರುಣಾ ಸಾಗರಗೇ| ನಿತ್ಯ|

ಜೋಯಂದು ಹಾಡಿರೆ ಸಾಕ್ಷಾತ್ ಶಿವನಿಗೇ ||ಜೋ|| ||1||

ಗುರುಲಿಂಗ ಜಂಗಮ ರೂಪ ಧರಿಸಿದಗೆ

ಪರಕೆ ಪರತರವಾದ ಲೀಲಾ ಹಾಡುವಗೆ

ಇರುವೆ ಮೊದಲಾನೆ ಕಡೆ ಸರ್ವ ಆದವಗೆ| ನಿತ್ಯ|

ಹರುಷ ಆನಂದದಿ ನಲಿನಲಿದಿಹಗೆ ||ಜೋ|| ||2||

ನಿತ್ಯ ನಿರ್ಗುಣ ಮೂರ್ತಿ ನಿಜರೂಪ ಧರಗೆ

ಕರ್ತು ಆಗಿಯೆ ಭಕ್ತಿ ಕಾರ್ಯ ಮೆರೆವನಿಗೆ

ಸತ್ತು ಚಿತ್ತಾನಂದ ಸಕಲ ಸಕಲ ಸೂತ್ರನಿಗೆ| ನಿತ್ಯ

ಅತ್ಯಧಿಕವಾದಂಥ ಗುಪ್ತ ರೂಪನಿಗೇ ||ಜೋ|| ||3||

ಒಂದು ಮೂರಾರು ಒಂಬತ್ತರವಳಗೆ

ಚಂದದಿಂದಲಿ ನಾದ ಬಿಂದು ಕಳೆಬೆಳೆಗೆ

ಸಂದೇಹವಿಲ್ಲ ಶಿವ ಬಂದನು ಇಳೆಗೆ| ನಿತ್ಯ

ಕುಂದು ಕೊರತೆಯ ಹೊಂದದಂಥ ಪ್ರಭುವಿಗೆ ||ಜೋ|| ||4||

ಕಾಡಿನೋಳ್ ಮಠ ಮಾಡ್ದ ಕಾಡಸಿದ್ಧನಿಗೆ

ನೋಡಲಿಕೆ ಆಶ್ಚರ್ಯ ಮಹತ್ತು ಮೆರೆವನಿವಗೇ

ಕೂಡಿ ಕೂಡದ ಮೂರು ಲೋಕದೊಳಿಹಗೇ |ನಿತ್ಯ

ಗಾಡಿಕಾರ ಶಿಸುವು ಗಂಗಾಧರ ಹರಗೆ ||ಜೋ|| ||5||

ನಾನಾ ದಿನಸಿನ ರೂಪತನಾದ ಶಿವಗೇ

ಖೂನವರಿತರೆ ಎಲ್ಲಾರೊಳಗೆ ಹುದಗಿಹಗೇ

ತಾನೇ ತಾನಾದವನು ಬಾರ ಈ ಇಳೆಗೆ | ನಿತ್ಯ

ಸ್ವಾನುಭಾವದ ಲೀಲಾದಿಂದ ಮೆರೆವನಿಗೆ ||ಜೋ|| ||6||

ಶಿವನೆನಿಸಿ ಭಕ್ತ ಜನ ಭವರೋಗ ಹರಗೆ

ವಿವರ ತಿಳಿಯಲು ಐದು ಮೂರ್ತಿಯಾದವಗೇ

ಭುವನದಿ ಬಹು ನಾಮದಿಂದ ಮೆರೆವನಿಗೇ| ನಿತ್ಯ

ಸುವಿವೇಕ ನಿರುಪಾಧಿ ಬೈಲ ರೂಪನಿಗೆ ||ಜೋ|| ||7||

ತಡದ ಕಾರಣವೇನು ಶ್ರೀಗುರು ಅಡವಿ ಪಾಶ್ಚನೆ ತಿಳಿಯದು ||ಪ||

ಕೊಡು ದರುಶನವ ಮೃಢನೆ ನಿನ್ನಯ|

ಅಡಿಯ ಕಾಣದೇ ನೊಂದೆನೊ|

ಇಡು ಕರುಣ ಇನ್ನಾರುಯನ್ನಗೆ|

ಒಡೆಯ ನೀನೇ ಎಂದೆನೊ ||1||

ಕರ್ತೃ ನಿನ್ನಯ ಚರಣ ಕಾಣದೇ|

ಅರ್ಥಿ ಆಗದ್ವುರ್ಲಭಾ|

ತುರ್ತುನಿಂದಲಿ ನಿತ್ಯ ನಿರ್ಗುಣ

ಗುರ್ತು ತೋರಿಸು ಬೇಗನೆ ||2||

ನಾದ ಬಿಂದು ಕಳಾದ ಮೂರುತಿ|

ಪಾದ ತೋರಿಸು ದೇವನೇ|

ಆದಿ ಶರಣನೆ ಭೇದ ಹರಿತನೆ|

ವಾದಾತೀತ ವಸ್ತುವೇ ||3||

ಶಾಂತರೂಪನೇ ಶ್ರೇಷ್ಠ ಸಾಧುವೆ|

ಪ್ರಾಂತದೊಳು ಸುಕೀರ್ತಿಯೇ|

ಅಂತ್ಯ ಮಧ್ಯಾ ಆದಿ ರಹಿತನೇ|

ಚಿಂತಿ ದೂರ ಏಕಾಂತನೇ ||4||

ಗುರುವರನೆ ಪರತರನೆ ಅಂಕಲಿ|

ಸ್ಥಿರ ಮಠವು ಬೆಳ್ಳಾರಿಲಿ|

ನಿರುಪಾಧಿ ನೀನಾಗಿ ಮೆರೆಯುತ|

ಕರುಣಾ ಮಾಡ್ವೆ ಭಕ್ತರಾ ||5||

ತಟ್ಟಿನ ಶೃಂಗಾರ ಕೇಳೀ ಲೋಕದ ಜನರು

ಬಿಟ್ಟರೆ ಸರ್ವ ಕಾರ್ಯವು ನಿಂತೀತಣ್ಣ ||ಪ||

ತಟ್ಟು ಮೈಲಿಗೆಯಲ್ಲಾ ನಾರ ಮಡಿಯೆನಿಸುವದು

ಯೆಷ್ಟು ದಿನವಿದ್ದರೆ ಮುಡಚಟ್ಟು ಇಲ್ಲ

ಮುಟ್ಟುವರು ಹೊಲಿ ಬ್ಯಾಡರೆಲ್ಲ ಜೋಳದ ಗೋಣಿ

ಯಿಟ್ಟಿಹರು ನಡು ಗ್ರಹದಿ ತೊಳಿಯಲಿಲ್ಲದನೂ ||1||

ಗೋಣಿ ಕಂಟಲಿಯಾಗಿ ಬಟಾರ ಸೊಬರಾಗಿ

ಕಾಣ ಬಂದರಮನಿಗೆ ಪದರಿ ಹಾಸಲಿಕ್ಕೆ

ಜಾಣನಾದವ ಬಲ್ಲ ಇದರ ಮೊದಲು ಕಡೆಯಾ

ಮಾಣದು ದೂರದಲಿ ಶ್ರವಣವಾಗುವದು ||2||

ಜನಿಸಿದಾ ಮೊದಲಿಂದಾ ಪೆಟ್ಟುಧಕ್ಕಿಯ ತಿಂದು

ಮನುಜರಿಗೆ ಉಪಕಾರ ಮಾಡುತಿಹುದು

ಘನ ಮನುಜರಿಗೆ ಬೇಕು ಬಡವರಾದರೆ ಬೇಕು

ಎನಿತು ಎಲ್ಲವು ಇದೆ ಸರ್ವ ಕಾರ್ಯಕ್ಕೆ ||3||

ಹರಿದು ಚಿನ್ನಾಟ್ಯಾಗೆ ಮತ್ತೆ ಕುಟ್ಟಿ ತಿಕ್ಕಿ

ಅರದರದು ನೀರ್ಮಾಡೆ ಕಾಗದಾಗುವದು

ಬರಿಯಲಿಕೆ ಬಹುಪ್ರಿಯ ವಚನ ಶಾಸ್ತ್ರಾದಿಗಳು

ಸರಿ ನೋಡಿದರೆ ಸರ್ವ ಪೂಜಿಗಧಿಕಾ ||4||

ಗುರು ಅಂಕಲಗಿ ಅಡವಿ ಪಾಶ್ಚಾ ನಿರುಪಾಧಿಯಾ

ಸ್ಮರಣೆ ಸ್ತೋತ್ರವ ಬರಿಯೆ ಮೂಲ ವಿವಸ್ತು

ಜರಿದು ನುಡಿದರೆ ತೊತ್ತು ಯೇನನಗಲಿದಿ ಗಣಾ

ಪರಮ ಷಠಸ್ಥಲ ಬ್ರಹ್ಮ ಹರಹರಗಂಗಾಧರನೇ ||5||

ತಿಳಿಯದೈ ಮಹಿಮಾ ಅಡವಿಸಿದ್ಧಾ ಜನದೊಳು ಪ್ರಸಿದ್ಧ

ತಿಳಿಯದೈ ಮಹಿಮಾ ಅಡವಿಸಿದ್ಧಾ ||ಪ||

ಇಳಿಯೊಳೀ ಮಹಾತ್ತಿನ ಸುಳವು ತಿಳಿಯಲಿಕೆ

ಕೆಳೆವರ ನಿನ್ನೌಂಶಲ್ಲದೆ ಬೇರೆ

ತಿಳಿಯದೈ ಮಹಿಮಾ ಅಡವಿಸಿದ್ಧಾ ||1||

ದೇವ ದೇವರಿಗೆ ಒಡೆಯ ನೀನೂ ತಿಳಿದರೆ ಸುರಧೇನು

ಕಾಯ್ವಾತ ನೀನು ಹೇಳಲೇನೂ

ಜೀವ ಶಿವನು ನೀನೊಲಿಯ ಅರಿದರೆ

ಆವಕಾಲದಲಿ ಕೇವಲ ಮೂರ್ತಿ ||2||

ಬಾವನ್ನ ಅಕ್ಷರಕ್ಕೆ ಮೂಲ ಆದಿ ಮಾರುತಿಯೇ

ಅ ಉ ಮಾ ಮೂರು ಅಕ್ಷರ ಮೊದಲು

ನೋವೆ ತಿಳಿದರೆ ಸಾಕ್ಷಿ ರೂಪನು

ಕಾವ ಭಾರ ನಿನ್ನದು ಮಹದೇವಾ ||3||

ನಿರುಪಾದಿ ನೀನು ನಿಜ ನಿಜವೆಂದು ಹೊಡದೆ ಡಂಗುರವಾ

ಗುರುಲಿಂಗ ಜಂಗ್ಮಾ ಅಹುದಹುದೆಂದು

ವರದೆ ವಾಕ್ಯ ನೀ ನುಡಿಸಿದಂತೆ ಪ್ರಭೂ

ಚರಣ ಧೂಳಿ ಮಹಾ ಕರುಣವಿರಲಿ ಸಖಾ ||4||

ತೂಹಿ ಗುರುಕೆಕೊ ಮೈ ಜಾಹೀರ ಕರೇಗಿ ತುಮೆ ||ಪ||

ಗ್ನಾನ ತುಮಾರಾ ಮಾನ ತುಮಾರಾ

ಕೋನು ಆಪು ಪಹಚನಾರೇ ಧ್ಯಾನವೆ ತೂ ಸಹ ಹುಯೇ ||1||

ಮರ್ಜಿ ಸಾಹೇಬಕಾ ಅರ್ಜಿ ಸೇವಕಾ ದರ್ಜಿ ಅಂಗಕರೆ ಹಮ್ಮ

ಸರ್ಜಿ ಬಹದ್ದೂರ ಪಾಶ್ಚಾ ಜಾಹಿಕರೇಗೀ ತುಮೆ ||2||

ನಿರುಪಾಧಿ ತೂ ನಿರಂಜನಾ ತೂ

ಕರಾರು ಪ್ರಿಯಾ ಅಡವಿಸಿದ್ಧಾ ವಿರುಪಾಕ್ಷ ಚರಣರೇಣೂ ||3||

ತೊಗಲಿನಾಟವು ತಿಳಿಯದಣ್ಣೌ| ನಿತ್ಯ ಅಘಹರನ ಮುಂದೆ ತಾ|

ಪೂಜೆಗೊಂಬುವದು ತೊಗಲಿನಾಟು ತಿಳಿಯದಣ್ಣ ||ಪ||

ಸಿದ್ಧನ ಮುಂದೆ ಬಾರಿಸುವ ಸಮಾಳ ತೊಗಲು

ಮದ್ದಲಿ ದಮ್ಮಡಿ ಹೊಳೆದಾಟೋ ಹರಗೋಲೂ ತೊಗಲು

ಬುದ್ದಲಿ ನಗಾರಿ ಡೋಲು ತಪ್ಪಡಿ ತೊಗಲು

ಜತ್ತಿಗೆ ಮಿಣಿ ಕಣ್ಣ ಪಾದರಕ್ಷೆಯು ತೊಗಲು

ಉತ್ತಮರು ಕೆಟ್ಟವರು ಹುಟ್ಟೋದ್ಹಶೆ ತೊಗಲು ||1||

ಕರಡಿ ಜೇರು ಬಂದು ಪಟದಾಳಿ ಬಾರು

ಹರಿಯದ್ಹುಡುಗರು ಹಾಡೋ ಹಲಗಿ ಚಿಮ್ಮು ತೊಗಲು

ಕುರುಬರ ಬೀರನದು ವಂದೇ ಡೊಳ್ಳು ತೊಗಲು

ಪರಶಿವನ ಹೊದಿಕೆ ಗಜ ವ್ಯಾಘ್ರ ಯರಡರ ತೊಗಲು

ಪರಿಯ ತಿಳಿಯಲು ನಿನ್ನ ಶರೀರವೆ ತೊಗಲು ||2||

ತೊಗಲು ನಾ ತೊಗಲು ಹುಟ್ಟೋದು ಹುಟ್ಸೋದೊಂದು ತೊಗಲು

ಪ್ರೀತಿಯಿಂದಲೇ ಎತ್ತಿ ಮುದ್ದಾಡೊ ಶಿಶು ತೊಗಲು

ನೂತನ ಧಾನ್ಯ ಪದಾರ್ಥ ಬೆಳೆವದು ತೊಗಲು

ಯಾತರ ಶೀಲ ಹಾಲು ಬರುವ ಮಲಿ ತೊಗಲು

ಜ್ಯೋತಿ ರೂಪಗೆ ಸಂಗವೇನೋ ನಿರುಪಾಧಿ ತೊಗಲಿನಾಟವು ತಿಳಿಯದಣ್ಣ ||3||

ದಯವೇಕೆ ಬಾರದೈಯ್ಯಾ| ದಾರಿ ನೋಡುವೆವೈಯ್ಯಾ|

ಪ್ರೀತಿಯಿಂದ ಪಾದ ತೋರಿಸೂ| ಸಂಶಯ ಬಿಡಿಸು|

ಪ್ರೀತಿಯಿಂದ ಪಾದ ತೋರಿಸೂ ||ಪ||

ತಾಯ ಅಗಲಿದ ತರುಳಾ| ತಾವ ಬಿಟ್ಟಂತೆ ಇಹುದು|

ನ್ಯಾಯವೇನೈಯ್ಯಾ ಸದ್ಗುರುವೇ| ಮಾಯ ಜನ ಮರವೆ|

ನ್ಯಾಯವೇನಯ್ಯಾ ಸದ್ಗುರುವೇ|

ರಾಯರಾಯರಿಗೆ ರಾಯ| ರಾಜಶಿವಯೋಗಿ ಎಂದು ಸಾಹಸದಿ

ಪ್ರಜೆಯು ಬಂದಿಹರು|

ಆಯಾಸವಾಗುವದು ಸಾಹಸದಿ ಪ್ರಜೆರು ಬಂದಿಹರು ||1||

ಕಂದಿ ಕುಂದವ ಜೀವರನು ಕರುಣಿಸಿ ಕಾಯ್ವದಕೆ ನೀನೇ ತಂದೆ ತಾಯಿ

ಬಂಧು ಬಳಗವು ನಿಂದೆ ಎಲ್ಲವೂ ತಂದೆ ತಾಯಿ ಬಂಧು ಬಳಗವೂ|

ನಂದಿ ಸೂತ್ರಕನೆ ನಿನ್ನ ನಾಂಟ್ಯಿದ ಸ್ವಲೀಲಾ ಅಂದ ಆರಿಗೆ ತಿಳಿಯದೊ|

ಸಂದೇಹ ಹೋಗದು ಅಂದ ಆರಿಗೆ ತಿಳಿಯದು ||2||

ನಾಮ ರಹಿತ ದೇವನಾದ ಬಿಂದು ಕಾಳಾದ ಸೋಮ ಕೋಟಿಗಳ ತೇಜವನು|

ಪ್ರೇಮದಿ ನೋಡುವೆನು ಸೋಮಕೋಟಿಗಳ ತೇಜವನು|

ಕೋಮಲಡವಿಯ ಸಿದ್ಧೇಶ ಕೋಪರಹಿತ ಸ್ವಾಮಿ ನೀ|

ಸರ್ವಾಂತರ‍್ಯಾಮಿ ಭಕ್ತರಿಗತಿ ಪ್ರೇಮಿ| ಸರ್ವಾಂತರ‍್ಯಾಮಿ ||3||

ದುಡ್ಡೇ ಶ್ರೀಗುರು ಮಾರುತಿ| ಈ ಜಗದೊಳು| ದೊಡ್ಡವ ಸಣ್ಣವಗೆ||

ದುಡ್ಡಿನಾ ಸೂತ್ರದೊಳು ಕುಣಿವದು| ದುಡ್ಡೇ ಲೋಕಾಧಾರವಾಗಿದೆ|

ದುಡ್ಡೇ ಸರ್ವ ಪೂಜೆಗಧಿಕವು| ದುಡ್ಡು ಇರುತಿರೆ

ನೇಮ ನಡೆ ನುಡಿ ||ಪ||

ದುಡ್ಡು ಲಿಂಗಕೆ ಮೂಲವು| ವಿಭೂತಿಯು ದುಡ್ಡಿರೆ ಬರುತಿಹದು|

ದುಡ್ಡಿರೆ ಜಂಗಮವು ತಿಳಿದು ನೋಡೀ| ದುಡ್ಡಿನೋಳ್ ಸುಖ ದುಃಖವು|

ದುಡ್ಡಿನಿಂದಲಿ ಸಕಲ ದೇವರು| ದುಡ್ಡಿನಿಂದಲಿ ಮನ ಮನ್ನಣೆ|

ದುಡ್ಡು ಇಲ್ಲದಿರಲು ಛೀ ಛೀ| ದುಡ್ಡೇ ಶ್ರೇಷ್ಠವಾದ ದೈವತಾ ||1||

ದುಡ್ಡಿನಿಂದಲಿ ಜನಿವಾರ| ಅಕ್ಷತಿ ಗಂಧಾ| ದುಡ್ಡಿರೆ ಸಾಲಿಗ್ರಾಮ|

ದುಡ್ಡಿರೆ ಬ್ರಾಹ್ಮಣನೂ ವಿದ್ಯೆವೇದಾ| ದುಡ್ಡಿರೆ ಸಾಧನವು|

ದುಡ್ಡೆ ಬಂಗಾರ ಬೆಳ್ಳಿ ಮೂರ್ತಿಯು| ದುಡ್ಡೇ ಪರಡಿ ಪಾಯಸನ್ನವು|

ದುಡ್ಡೇ ಕಂಠ ಕಡಗ ಉಂಗರ| ದುಡ್ಡು ಬಿಟ್ಟರೆ ಪಾಪಿಯನಿಸುವು ||2||

ದುಡ್ಡೇ ನಾಮವು ಗೋಪಾಳ ದೀಪದ ಕಂಭ| ದುಡ್ಡಿರೆ ದಾಸರಾಟ

ದುಡ್ಡಿರೆ ಅಪು ಗಾಂಜಿಯು| ಆರೂಢಗೆ ದುಡ್ಡಿರೆ ಪೂರ್ಣ ಸುಖಾ|

ದುಡ್ಡು ಚಿನ್ಮಯ ಹಾದಿ ತೋರ್ಪುದು| ದುಡ್ಡು ಚೇತನವ ಮಾಡ್ವದು

ದಡ್ಡೆ ಶ್ರಂಗಾರ ನಾನಾ ವಸ್ತ್ರವು| ದುಡ್ಡಿಗಿಂತ ಅಧಿಕವಿಲ್ಲವು ||3||

ದುಡ್ಡಿರೆ ಕವಡಿ ಸರವು| ಬಂಡಾರ ಚವಡ್ಕಿ| ದುಡ್ಡಿರೆ ಜಾಂಗಟಿ ಹಡ್ಲಿಗಿಯು

ದುಡ್ಡಿರೆ ಜೋಗ್ರಿ ವಗ್ಗಯ್ಯಾ ಬೈರಾಗಿ ಜೋಗಿ| ದುಡ್ಡು ಬಿಟ್ಟವರಿಲ್ಲವು

ದುಡ್ಡೆ ದೊರೆ ದೇಸಾಯಿ ನಾಡಿಗ| ದುಡ್ಡೆ ಸರ್ವಕುಲ ಛಲವು

ಮಠ ದುಡ್ಡು ಜೀವನವೆಲ್ಲ ಚರಿಪದು| ದುಡ್ಡಿನಾಟವ ತಿಲಿವನಧಿಕನೂ ||4||

ದುಡ್ಡೇ ಕರ್ಮವ ಕಳಿವದೂ| ಮೋಕ್ಷಕೆ ಹಾದಿ | ದುಡ್ಡೆ ನರಕಕೆ ಯಳೆವದು|

ದುಡ್ಡಿರೆ ಅಡವೀಶನ ಸುತ್ತಾಮುತ್ತಾ| ದುಡ್ಡಿರೆ ಬಹು ಜನವೂ

ದುಡ್ಡೆ ಕಲಿಯುಗ ಕರ್ತೃವಾಗಿದೆ| ದುಡ್ಡೇ ತಾ ನಿರೂಪಾದಿ ಲಕ್ಷಣ

ದುಡ್ಡಿನಂತವ ತಿಳಿದ ಪುರುಷನು| ದುಡ್ಡು ಗುರುವಾದಂತೆ ಸಕಲದಿ ||5||

ದುಷ್ಟರ ಗೆಳೆತನವು ಭ್ರಷ್ಟಯನಿಸುವದು

ಶ್ರೇಷ್ಟ ದೇವರಯಡಿಯ ಶ್ವಾನವುಂಡಂತೆ

ತನ್ನ ತಾ ತಿಳಿದಿಲ್ಲ ತಾನಾದ ಸುಖವಿಲ್ಲ ||ಪ||

ವುನ್ನತವಾದಂಥ ಸ್ಥಳವು ನಿಲಿಕಿ|

ಅನ್ಯಾಯ ನ್ಯಾಯ ಎರಡು ಗೊತ್ತು ತನಗಿಲ್ಲ

ಚಿನ್ನ ಲೋಹವೆಂಬ ಗುರುತರಿಯದಂಥ ||1||

ಜ್ಞಾನ ಮಾರ್ಗಕ್ಕೆ ಹೋಗದೆ ನೀತಿಯೆಂದಿಗೂ ಸಿಗದು

ಯೇನೇನೊ ಯೆತ್ತೆತ್ತೊ ಮನ ಬಂದ ತೆರ ಕುಣಿದು

ಕಾನನಕೆ ಬಿದ್ದು ಕೂನವ ಮರೆತು ಇರುವಾ ||2||

ನಿರುಪಾಧಿ ಅಡವೀಶ್ಯಾ ನಿಃಶ್ಚಯ ಯನ್ನದಲೇ

ಬರೆ ಬಾಯ ಬ್ರಹ್ಮವನು ನುಡಿದು ಕೆಡುವಂಥಾ

ಕುರುವರಿಯದಲೆ ಗುರುವು ಹಿರಿಯರೆಂದೆನ್ನದೆ

ಗರಿವಿನಿಂದಲಿ ಜರಿದು ನುಡಿವಂತಾ ಕೆಟ್ಟಾ ||3||

ದೇವದೇವ ದೇವ ನೀನೆ ಭಾವಭರಿತ ಅಡವಿಸಿದ್ಧಾ

ಕಾವುದೆನ್ನ ಕರುಣನಿಧಿಯೆ ಕೇವಲದ ಅಡವಿಸಿದ್ಧಾ ||ಪ||

ನಿತ್ಯ ನಿನ್ನ ಧ್ಯಾನವನ್ನು ಚಿತ್ತವಿಟ್ಟು ಅಡವಿಸಿದ್ಧಾ

ಗೊತ್ತು ತೋರು ದಿವ್ಯವಾದ ತೊತ್ತು ನಾನು ಅಡವಿಸಿದ್ಧಾ

ಕರ್ತು ನೀನೆ ಒಬ್ಬ ಪ್ರಭುವು ಮಿಥ್ಯ ತೋರ್ಕೆ ಅಡವಿಸಿದ್ಧಾ ||1||

ಕಂದನಾಗಿ ಬೇಡಿಕೊಂಬೆ ಕರುಣವಿರಲಿ ಅಡವಿಸಿದ್ಧಾ

ಹಿಂದು ಮುಂದು ನೀನೆ ಯನ್ನ ತಂದೆ ತಾಯಿ ಅಡವಿಸಿದ್ಧಾ

ಹೊಂದಿಯಿದ್ದವರ ಭಾರ ನಿನ್ನದೆಂದೆ ಅಡವಿಸಿದ್ಧಾ

ಕಂದುಗೊರಳನೆಂದು ನಿನ್ನ ಬೇಡಿಕೊಂಬೆ ಅಡವಿಸಿದ್ಧಾ ||2||

ಪಾತಕನು ಯನ್ನ ಗುಣವ ನೋಡಬೇಡ ಅಡವಿಸಿದ್ಧಾ

ನೀತಿ ಮಾರ್ಗವನು ತೋರಿ ನೀಟು ಮಾಡು ಅಡವಿಸಿದ್ಧಾ

ಯಾತರೊಳಗೆಯಿಲ್ಲದಂತಾ ಶ್ರೇಷ್ಠ ನೀನು ಅಡವಿಸಿದ್ಧಾ

ನೂತನದ ವಸ್ತು ರೂಪು ಜ್ಯೋತಿ ನೀನು ಅಡವಿಸಿದ್ಧಾ ||3||

ಕರ್ಮಿ ನಾನು ಬಹಳ ಜನ್ಮ ತಿರಿಗಿ ಕಂಡೆ ಅಡವಿಸಿದ್ಧಾ

ಧರ್ಮ ಮಾರ್ಗವ ತೋರಿ ಭವವಾ ದಾಂಟಿಸೈಯ್ಯಾ ಅಡವಿಸಿದ್ಧಾ

ಮರ್ಮ ನಿನದೈಯ್ಯ ಮೂಢ ಮತಿಗೆ ಸಿಲುಕಿ ಅಡವಿಸಿದ್ಧಾ

ನಿರ್ಮಳದ ನಿಜದಿ ಗುಣವು ಲೀಯ್ಯಮಾಡು ಅಡವಿಸಿದ್ಧಾ ||4||

ಪಾಮರನು ನಾನು ಗುಣವ ನೋಡೋದೇಕೋ ಅಡವಿಸಿದ್ಧಾ

ಸ್ವಾಮಿ ನೀನು ಕಾರ್ಯ ನಿನ್ನದಲ್ಲೆ ಅಡವಿಸಿದ್ಧಾ

ಧಮ ಸೀಮೆ ರಹಿತ ನಿನ್ನಾ ನೇಮವರಿದು ಅಡವಿಸಿದ್ಧಾ

ಕೋಮಲದ ಮುಕ್ತಿ ಪತಿಯು ಸದಾಶಿವನು ಅಡವಿಸಿದ್ಧಾ ||5||

ದೇವ ಬಂದಾನು| ಭಾವ ಭರಿತನು ಕೇವಲ ಸಾಂಬಾ ಮೂರುತೀ|

ಆವ ಕಾಲದಿಂದವಗತಿಯ| ಮಹದೇವ ಈತ ನಿಜ ನಿಶ್ಚಯಯನ್ನುತಾ

ಜಾವ ಜಾವಕೆ ನೆನದರೆ ಮುಕ್ತಿಯೇ| ಸೋವೆ ತೋರ್ವ ಹರ ಶಿವಡಿವೀಸನೂ ||ಪ||

ದಶದ ನಾದದ ಸಂಭ್ರಮದೊಳು ಬೈಲಿಗೆ ಬಂದಾನೋ| ಮಹಾ

ಕುಶಿಯಿಂದಲಿ ಆನಂದದಿ ನಾನು ನಿಂದೆನೊ

ಪಶುಪತಿ ಯೀತನೆ ಪಾವ್ತಿ ರಮಣನೆಂದೆನೊ ನಾನು

ಅಸಮಾಕ್ಷನ ಕಂಡರುಷದಿ ಮನಕೆ ತಂದೆನೊ

ಶಿಶುವಿನ ಭಾರವು ನಿನ್ನದುಯೆನುತಲಿ

ಯೆಸೆವಾನಂದದಿ ಹೊಗಳಿದೆ ಬಹು ಪರಿ

ರಶಿಕನಲ್ಲ ನೀನು ಸುರಿದರ್ಹಾಡುವೆ|

ಹಸಿತ ಮುಖವ ನೋಡಲೆ ಯತಿಯಾದೇನು ||1||

ಬಿಂದು ಕಳಾ ಸ್ವರೂಪನೆ ನಿನ್ನನು ನೋಡಿದೆ|

ಯನ್ನಯ ತಂದಿಯು ತಾಯಿ ಬಂಧು ಗುರುವೆಂದ್ಹಾಡಿದೆ|

ಕುಂದಿದ ಮನ ಖುಷಿಯಾಯಿತು ಮುಕ್ತಿಯ ಬೇಡಿದೆ|

ಮಹಾಪರವೆಂದೆನ್ನುತಾ ನಿನ್ನೊಳು ನಾನು ಕೂಡಿದೆ|

ಹೊಂದಿದವನು ನಾ ನಿಂದೆ ಭಾರವು|

ಮುಂದು ಮಾಡು ಘಟ ಇರುವ ಪರಿಯ ಸುಖವೆಂದು ಬಯಸುವೆನು|

ಸುಂದರ ಶ್ರೀಗುರು ತಂದೆಯನ್ನಯ ಮಂದಿರ ನಿನ್ನದು ||2||

ನಿರೂಪಾಧಿಯು ನೀನೆಂದೆನು ಅಂಕಲಿನಾಥನೆ|

ನಾನಾ ತರದ ಲೀಲವ ಆಡುವ ಮಹ ಪ್ರಖ್ಯಾತನೆ|

ಗುರುವರ ಅಡವೀಶನೆ ಸಂಭ್ರಮದಾತನೆ|

ಪೂರ್ಣ ಅರುವೈ ನೀ ನಿಸ್ಸಂಶಯಾ ನೀ ನಿರ್ಭೀತನೆ|

ಪರತರ ಗುರುವರ ಸ್ಥಿರಕರ ಉರುತರ ಮರಸು ಮನ ಮಹಾ ಆನಂದವಾಯಿತು|

ಮರವು ಮಾಡದಾವಾವಕಾಲದಲಿ ಕರುಣ

ಮಾಡು ನೀ ಗುರುಲಿಂಗ ಜಂಗಮಾ ||3||

ದೇವಾ ದಯವು ಬಾರದೇ| ಎನ್ನಯ ಮೇಲೆ|

ದೇವಾ ದಯವು ಬಾರದೇ ದೇವಾ ನಂಬಿದ ಭಕ್ತರ ಕಾವ

ಕೇವಲ ಸುಖದ ಭಾವಾ

ತಿಳಿದರೆ ಶಿವಾ ಜೀವಾ| ನಿಜ ಮುಕ್ತಿ ಈವಾ ||ಪ||

ಬಾರಿ ಬಾರಿಗೆ ಕೇಳಲಾರೇ ಪರಬ್ರಹ್ಮ ನೀನೂ

ಧಾರುಣಿ ವಾಕ್ಯ ಹಾರಲಾರೇ

ತೋರು ಸುಖ ಸಾಮ್ರಾಜ್ಯ ಬೀರು

ನೀನಲ್ಲದೆ ಇನ್ನಾರೂ| ಸಂತೋಷ ತಾ ಸಾರೂ|

ಯನ್ನಲ್ಲೆಯಿರೋ ||1||

ಶಾಂತಿ ಮಾರುತಿ ಕಳೆಯಾ ಚಿಂತೆ|

ನಿನ್ನಗೆ ನಾನು ಯಂತು ಹೇಳಲಿ ಯನ್ನ ಭ್ರಾಂತೆ|

ಹಂತೇಲೆ ನೀನೇ ಇರುವಂತೆ| ಪ್ರೀತಿಯ ಮಾಡಂತೆ

ಹೊಗಳಿದೆ ನಿನ್ನಾಕಾಂತೆ| ಮಾಡೋ ನಿಶ್ಚಿಂತೆ ||2||

ಕಾಡೊಳು ಮನೆ ಮಾಡಿದವನೇ ಅಡವಿಯಾ ಪಾಶ್ಚಾ|

ನಾಡೊಳು ನಿರುಪಾಧಿ ತಾನೇ|

ನೋಡೋ ಕಟಾಕ್ಷವ ಮಾಡೊ ದೃಷ್ಟಿಯನ್ನಲ್ಲೀಯಿಡೋ|

ಭವದಲ್ಲಿ ತರಲಿ ಬ್ಯಾಡೋ| ಸಂತೋಷ ಕೊಡೋ ||3||

ಧಿನ್ ಧಿನ್ ಧಿನ್ ಧಿನ್ ಕ್ಯಾ ಹುಶೇನ್ನು| ಬಾ ಹುಶೇನ್ನು ಧಿನ್ ಧಿನ್ ||ಪ||

ತತ್ವ ತಾತ್ವಿಕ ತಾನೆ ನಿತ್ಯ ನಿರ್ಗುಣ ತಾನೇ

ಯತ್ತ ಯತ್ತ ನೋಡಿದರೆ ಕರ್ತೃ ಒಬ್ಬನಾಟವಿಹುದು ||1||

ಪೀರನಾದವ ತಾನೆ ಫಕೀರ ನಾದವ ತಾನೆ

ಭಾರಿ ಖೂನವಳಗೆ ಪದ್ಯ ಸಾರಿ ಹೇಳುವ ಮೂಲ ತಾನೆ ||2||

ನಿರುಪಾಧಿ ತಾನೇ ಪರಕೆ ಪರತರನೇ

ಗುರುವು ಅಂಕಲಗಿ ಅಡವಿಪಾಶ್ಚಾ ಪೀರ ಪೈಂಗಬಾರಿ ||3||

ಧಂ ಛಡಾವು ಧಂ ಛಡಾವು ಸಿದ್ದಪ್ಪ ಗೆಲಲೆಲಾಗುವು ||ಪ||

ಕಹಾ ಸಿಲ್ಹಾಯೋ ಕಹಾ ಛಲೆಗಾ ದೇಖೋ ತುಮಾರ ದಿಂಮ್ಮೊ

ಸಹಾಸಕರೋ ಸಾಧುಕಾ ಮಹಿಲ್ಜತಿ ಮುನ್ನಾ ||1||

ನೀತಿ ವಾಕ್ಕುಯಿನುವಲೇ ಜೋತಿ ರೂಪುದೇಲುವಲೆ

ನಾಥನಾಂಘ್ರಿ ಕಮಲ ಗಂಧ ಇತೆರಾಯ್ತೆ ದೊರಕುತುಂದಿ ||2||

ನಿರುಪಾದಿಯಾಗುವಿ ಪರಿಭವಗಳ ನೀಗುವಿ

ಗುರು ಅಡವಿಸಿದ್ಧಲಿಂಗ ನಾಮಾಮೃತನುಂಡು ಸೋಕ್ಕು ||3||

ನಗೀ ಬರುತದೆ ನಕ್ಕರೆ ಬೈದಿರಿ ಜಗದ ಹಗರಣ ನೋಡಿ

ನಗೀ ಬರುತಿದೆ ನಕ್ಕರೆ ಬೈದೀರಿ

ಪಕ ಪಕ ನಗಲೇನೋ ತಮ್ಮಾ ನಗಬ್ಯಾಡೋ ಅಣ್ಣ ||ಪ||

ಕಾಯ ನಾನು ಯಂದೆಂಬೊ ಹಮ್ಮಿಲಿರುತಾ

ಸಂಶಯದೊಳು ಮುಳುಗಿ ಬಾಯ ಬ್ರಹ್ಮವ

ನುಡಿದನು ಭಯವಿಲ್ಲದಲೇ

ನ್ಯಾಯ ಅನ್ಯಾಯವ ತಿಳಿಯದೆ ಮರಗುತಿರುವಾ ಮತಿಹೀನರ ಕಂಡು ||1||

ಒಬ್ಬ ಶಿವನೆಂದು ಹಾಡಿ ಹರಸಿ ನೋಡಿ ಘನಶಾಸ್ತ್ರವ ಓದಿ

ಮಬ್ಬಿನಿಂದ ತಿರತಿರಗಿ ಬರುವ ಹಾದಿ

ದೊಬ್ಬಿ ಕಲ್ಪನೆಯ ಸಂತರ ಸಂಗದೊಳಗೆ ಇರದವರನು ಕಂಡು ||2||

ನಿರುಪಾಧಿಯು ಅಡವೀಶ ಎಂದು ಅನ್ನದೇ ನಾ ನನ್ನದು ಎಂದು

ಗರವು ಮಾಡಿ ಬಹು ನಿಂದೆಯೊಳಗೆ ಬಿದ್ದು

ಮರ ಮರಳಿ ಹುಟ್ಟುವ ಮಾತುಗಳನು ಕೇಳಿ ಮನದೊಳಗೆ ಮರುಗಿ ||3||

ನಂಬಿರಯ್ಯ ಜನರು ನಂಬಿರಯ್ಯ

ಸಾಂಬನ ಅವತಾರಿದೂ ಸಟೆಯಲ್ಲ ನಿಜ ನಿಜವೆಂದು ||ಪ||

ಕಿಂಕರ ನುಡಿಯಿಂದೆ ಶಂಕರ ಬಂದಾನೆ

ಡಂಕಾ ಹೊಡೆಯಿತು ವೇದದಂಕೆಯೊಳಿಹನೆ ಶಿವನೂ ||1||

ಮೂರು ಮಲಗಳಗೆದ್ದು ಸೇರಿ ಉನ್ಮನೀ ಸ್ಥಳದೀ

ಭೋರೆಂಬೊ ವಾದ್ಯ ವಸ್ತುವಾ ಸಾರಾ ಬಲ್ಲವನೇ ಹರನು ||2||

ತಾನೇ ತಾನಾದ ಗುರುತೂ ಸ್ವಾನುಭಾವದಿ ತಿಳಿದು

ಮಾನಿ ತಾ ನಿರುಪಾಧಿ ಖೂನಾ ಅಡವೀಶ ಗುರುತೂ ||3||

ನಾಥ ನಾಥನಮ್ಮ| ಲೋಕದಿ ಮಹಾ ಖ್ಯಾತ ಈತನಮ್ಮ|

ಭೀತಿ ರಹಿತ ಬಹು ನೂತನ ವಸ್ತುವಾ

ಜ್ಯೋತಿ ರೂಪು ನಿಜ ಆತ್ಮನು ಅಡವೀಶ್ಯಾ ||ಪ||

ಎಲ್ಲಾ ದೇಶದಲ್ಲಿಯೂ| ನಾಮದ ಮಹಾತ್ತಲ್ಲಲ್ಲೆ ಪ್ರಭೆಯಿಹುದು|

ಬಲ್ಲಿದ ನಿನ್ನ ಕರುಣ ಕಟಾಕ್ಷದ|

ಪಲ್ಲವೆನ್ನಯ ಶಿರದಲ್ಲಿ ಇಡು ದೇವಾ ||1||

ಜೀವ ಶಿವನು ಜಗವು ಮೂರು ನಿನ್ನ ಭಾವದಿ ಆಗಿಹುದು|

ಕೇವಲ ಸುಖದಿಂದ ಗುರುಲಿಂಗ ಜಂಗ್ಮದಾ|

ಸೋವಿ ತಿಳಿದು ಭಕ್ತಿ ಧರಿಸಿ ಮರ್ತ್ಯಕ್ಕೆ ಬಂದಾ ||2||

ನಾಮ ಹಾಲೇ ನಿಶ್ಚಯಾ ಸೋಮಶೇಖರ ನೀನು

ಭೂಮಿಯೊಳೆಲ್ಲ ಕಾಣೆ ಈ ಮಹಾತ್ಮೆಯಾ ||ಪ||

ಮೊದಲೆ ಪ್ರಮಾಣವೆ ಹಾಲು ಚದುರ ದ್ವಿತೀಯ ದಧಿ

ವಿಧ ಮೂರರಲ್ಲಿ ಮಜ್ಜಿಗೆ ಬೆಣ್ಣೆ ವೇದಕ್ಕೆ ಸದಮಲ ಜ್ಞಾನಿ ಬಲ್ಲ

ಮದನ ಬಾಣವೆ ತುಪ್ಪಾ ಇದನರಿತವನು ತಿಳಿವನು ಐದು ನೀಡನೇ

ಮಿಂಚಿನ ಮೂಲದಿ ಸಂಚರಿಸುವ ಬಲ್ಲಾ

ಸಂಚಿತಾರಾಬ್ದಾಗಾಮಿ ಕಳದಂತ ಮಹಿಹಾ ||1||

ಹೆಸರಿಗೆ ಹಾಲಪ್ಪ ಹಸುವಿಗೆ ಮಜ್ಜಿಗಿಲ್ಲೆಂದು

ವುಸುರುವೆ ನಿನ್ನ ವಾಕ್ಯದಿ ನಿಜ ನಿಜವೈಯ್ಯ

ಶಿಶುವಿಗೆ ಹಾಲು ಬೆಣ್ಣೆ ತೃಪ್ತಿಗೆ ಮಜ್ಜಿಗೆ ಮೊಸರು

ಪಶುಪತಿ ಸರ್ವಕ್ಕೆ ತುಪ್ಪಾ ನೀಡುವೆವೈಯ್ಯಾ ||2||

ಹಾಲು ಮೊಸರು ಐದು ಕೀಲು ತಿಳಿದರೆ ಕರ್ತು

ಮೂಲ ಮಾರುತಿ ನಿನ್ನದೇ ಏನುಂಟೇನಿಲ್ಲಾ

ಜಾಲ ಮಾಯವ ತುಂಬಿ ಲೀಲ ತಿಳಿಯಗೊಡದೇ

ಕಾಲ ಕಾಲದಿ ಮೆರೆವಂಥ ಮಹಾತ್ಮ ನೀನೈಯ್ಯ ||3||

ನಿರುಪಾಧಿ ಅಡವೀಶನ ಗುರುತು ಬಲ್ಲವನೆ ಬಲ್ಲಾ

ನರಗುರಿಗೆಳೆಲ್ಲಾ ನಿನ್ನನು ಅರಿವರೇನೈಯ್ಯಾ

ಪರಮಾ ಯೋಗಿಯೆ ನಿನ್ನ ಪರಿಪೂರ್ಣವಾದಂತಾ

ಕುರುಹು ಕಾಣಿಸುವನೈಯ್ಯ ಸಾಕ್ಷಾತನೆಂದು ||4||

ನಿಜರೂಪ ಅಡವೀಶ ನಿಶ್ಚಯ ಶರಣನು ನಂಬಿ ಜೋಕೆ|

ಗಜಿಬಿಜಿಯಾದಿರಿ ಭಕ್ತಿಯ ಮರೆತರೆ ನಂಬಿ ಜೋಕೆ ||ಪ||

ಪ್ರಭುವಿನ ಅಪ್ಪಣೆ ಹಿಡಿದು ತಾ ಬಂದಾನೆ ನಂಬಿ ಜೋಕೆ|

ಮಹಾ ವಿಭವಗಳನು ಕೊಟ್ಟು ಸಂರಕ್ಷಿಸುತಾನೇ ನಂಬಿ ಜೋಕೆ|

ಕಬಲಾಗಬೇಕೆನ್ನು ಭಕ್ತಿಯ ಮಾರ್ಗಕೇ ನಂಬಿ ಜೋಕೆ|

ಮಹಾ ಶುಭ ಬೇಕಾದರೆ ಸೂಕ್ಷ್ಮವ ತಿಳಿಕೊಂಡು ನಂಬಿ ಜೋಕೆ ||1||

ಕಾಡೊಳು ಮನಿ ಮಾಡಿ ಕಾಡು ಬೇಡನು ನಂಬಿ ಜೋಕೆ|

ಲೀಲಾ ಆಡಲು ಬಂದಾನೆ ಸಲೆಯಂದು ತಿಳಕೊಂಡು ನಂಬಿ ಜೋಕೆ|

ಪಾಡದೆ ಯೀ ಕಾಯ ಮುಕ್ತಿಯ ಪಡಿಲಿಕ್ಕೆ ನಂಬಿ ಜೋಕೆ|

ನೀವು ಕೇಡಾಗಬೇಡಿರಿ ದಿನ ಮುಂದೆ ಕೆಟ್ಟಾವು ನಂಬಿ ಜೋಕೆ ||2||

ವರದ ಅಂಕಲಿನಾಥ ನಿರುಪಾಧಿ ಅಡವೀಶಾ ನಂಬಿ ಜೋಕೆ|

ಕಾಯವು ಸ್ಥಿರವಲ್ಲ ಈಗಲೋ ಆಗಲೋ ನಂಬಿ ಜೋಕೆ|

ಗುರು ಶಿದ್ಧಾ ದಯವಾಗೊ ಕಾವ್ಯವ ಕೇಳುತಾ ನಂಬಿ ಜೋಕೆ|

ಇದು ಖರಿಯ ನಿಶ್ಚಯವೆಂದು ಧರ್ಮದಿಂದಿರುವದು ನಂಬಿ ಜೋಕೆ| ||3||

ನೀನೇ ಶಿವಾ ನೀನೇ ಶಿವಾ

ನಿನ್ನ ಖೂನವರಿತು ನಿಜ ಧ್ಯಾನದೊಳಿದ್ದರೆ ನೀನೆ ಶಿವಾ ||ಪ||

ವೇದಾಂತದೊಳು ಗೋಪ್ಯವಾದ ಅರ್ಥದೊಳು

ಸಾಧು ಶಿವನು ಎಂದು ಓದುವದರಿದರೆ ನೀನೆ ಶಿವ ||1||

ಗುರು ರೂಪವಾಗಿ ತಾ ಮರಳಿ ಬಾರದಂಥ

ಕುರುಹು ತಿಳಿದೂ ನಿಬ್ಬೆರಗಾಗಬಲ್ಲರೆ ನೀನೆ ಶಿವಾ ||2||

ಯೋಳು ಸೋಪಾನದ ಕೀಲನರಿದ ಮ್ಯಾಲೆ

ಮೂಲ ಮೂರತಿ ತಾನೆ ಲೀಲವಾಡುವ ವಸ್ತು ನೀನೆ ಶಿವಾ ||3||

ದೋಷವ ಕಳಕೊಂಡು ಆಶರಹಿತನಾಗಿ

ಪಾಶವ ಹರಿದು ತಾ ಈಶನಾಗಿರುತಿರೆ ನೀನೆ ಶಿವಾ ||4||

ತ್ರಿಪುಟಿಗಳಿರುವನು ಗುಪ್ತ ಭಾವದಿಂದ

ನಿಪುಣ ತನವ ಬಿಟ್ಟು ಸುಪಥದೊಳಾಡಲು ನೀನೆ ಶಿವಾ ||5||

ನಡೆ ನುಡಿಯೇಕಾದ ಗಡಣದೊಳಗೆ ತಾನೇ

ಮೃಢನೆಂದು ಶೃತಿ ಸಾರೆ ಪೊಡವಿಗೊಬ್ಬನೆ ದೇವಾ ನೀನೆ ಶಿವಾ ||6||

ನಿರುಪಾಧಿ ಅಡವೀಶ ಗುರುಲಿಂಗ ಜಂಗಮ

ಖರಿಯವೆಂದು ಯನ್ನ ಕರವನೆತ್ತಿದೆ ನಿಜ ನೀನೆ ಶಿವಾ ||7||

ನೀ ತವರ ಮನಿಯಂದು ಬಂದೇ ನಾನು ಬಾಳ ಸಂತೋಷಾ

ಯಾತಕ್ಕ ಅಂಟದಂತ ಅರವೀ ಕೊಡು ನೀನು ಬಾಳ ಸಂತೋಷಾ ||ಪ||

ಭಕ್ತಿಯಂಬೋ ಅಂಗಿಯ ಕೇಳುವೆನು ಬಾಳ ಸಂತೋಷಾ

ಯುಕ್ತಿಯು ಈ ಜಾಕೀಟಾ ದಾನ ಕೊಡರೀ ಬಾಳ ಸಂತೋಷಾ

ವ್ಯಕ್ತೆಂಬ ಸುಗುಣದ ಧೋತ್ರ ಬೇಗ ನೀಡಿ ಬಾಳ ಸಂತೋಷಾ

ವ್ಯಕ್ತೆಂಬೋ ಟೋಪಿ ಇಟ್ಟೆನ್ನ ಹರುಷ ನೋಡಿ ಬಾಳ ಸಂತೋಷಾ ||1||

ಧ್ಯಾನೆಂಬೊ ದೇಶದೊಳು ನಾನು ಹೊಗಳಿವೆನೂ ಬಾಳ ಸಂತೋಷಾ

ನೀನ್ಹಿಂದೆ ತೊಟ್ಟುಬಿಟ್ಟಂತ ಮೈಲಿಗೆಯನು ಬಾಳ ಸಂತೋಷಾ

ತಾನಾದ ಗುರುತು ಕೊಡುಯೆಂದು ತನ್ನ ಬೇಡಿ ಬಾಳ ಸಂತೋಷಾ

ಖೂನಾಗಬೇಕು ಗ್ನಾನೆಂಬ ಪ್ರಭೆಯು ನೋಡಿ ಬಾಳ ಸಂತೋಷಾ ||2||

ದೂರಿಂದ ಸುದ್ದ ಕೇಳುತ ಬಂದೆನೈಯ್ಯಾ ಬಾಳ ಸಂತೋಷಾ

ತೂರ್ಯಾತೀತ ಕೊಟ್ಟೆನ್ನ ರಕ್ಷಿಸೈಯ್ಯಾ ಬಾಳ ಸಂತೋಷಾ

ತಾರಕ ಸಾಂಖ್ಯ ಅಮನಸ್ಕ ಅಡವೀಸಿದ್ಧಾ ಬಾಳ ಸಂತೋಷಾ

ಪೂರ್ಣದ ಬ್ರಹ್ಮ ನಿರುಪಾಧಿ ಮೂರು ಗೆದ್ದ ಬಾಳ ಸಂತೋಷಾ ||3||

ನೀನೆ ತಿಳಿಯೋ ನಿನ್ನೊಳು

ತಿಳಿಯೋ ನಿನ್ನೊಳು ತಿಳಿಯೋ ||ಪ||

ಜಗದ ಆಟದೊಳಗೆ ಸೂಕ್ಷ್ಮ

ಬಗೆಯನರಿದು ನುತಿಸೆ ಮಗುವಾ

ಸುಗುಣರೆನಿಸಿ ಜೀವರೊಳಗೆ

ನಗೆಗೀಡಾಗದಿರುವ ಭಾವ ||1||

ಸುಖದ ಸಕಲ ಜೀವ ಪುತ್ರನಿಂದು

ಸಕಲ ಜೀವ ಪುತ್ರನಿಂದು

ವಿಕಳ ಮತಿಗಳೆಲ್ಲ ಕೂಡಿ

ನಕಲಿ ಆಡ್ಯಾರೆಂಬೊ ಭಾವ ||2||

ಗುರುವು ನಿರುಪಾಧಿ ನೀನು

ಪರಮ ಸಾಧು ಅಡವಿಸಿದ್ಧಾ

ಪೊರೆಯಬೇಕು ಕಾಲ ಕಾಲ

ಬಿರದು ಸ್ತುತಿಪ ತೊತ್ತುಯಂದು ||3||

ನೀನೆ ದೇವಾ ನಿನ್ನಾಟದ ಲೀಲವಾ

ತಾನೇ ತಾನಾದ ಪುರುಷಗೇ ಬೇಗೇ ತೂಗೇ

ಆನಂದವಾಗೇ ಹಾ ಆನಂದವಾಗೆ

ಮಾನನಿಧಿ ನೀ ಮೌನ ಯೋಗದಿ

ಖೂನವಡಗಿಸಿ ಲೋಕದವರಿಗೆ

ಸ್ವಾನುಭಾವಿಯಾದ ಪರಿತಾ

ಯೇನು ಬಲ್ಲರು ಮೂಢಮತಿಗಳು ||ಪ||

ಹಿಂದೆ ಮಾಡಿದ ಪುಣ್ಯದ ಫಲದಿಂದೇ ಬಂದೇ ನಿಂದೇ ಪಾದದ ಮುಂದೆ

ಚಂದವಾದಾ ವಸ್ತು ನಿನ್ನ ನೋಡಿ ಹಾಡೀ ಕೂಡಿ ಮುಕ್ತಿಯ ಬೇಡೀ

ಕುಂದು ಕೊರತೆ ಗುಣಗಳನ್ನು ನೀಗಿ ಯೋಗೀ ಭೋಗೀ

ಆನಂದವಾಗೀ ಹಾ ಆನಂದವಾಗೀ

ದುಂದು ನುತಿಸಿದೆ ಅ,ಕ,ಚ,ಟ,ತ,ಪ,ಯ,ಸ ವಂದು ಅರಿಯದೆ ಬಾಲ ಲೀಲದಿ

ಬಂಧು ಬಳಗಾ ಸಾಧು ಯನುತಲಿ ಯಂದ ವಚನ ಬಲ್ಲಗಾರಗೆ ||1||

ಸಾಧು ನಿಂತ ಜಾಗ ಕೈಲಾಸಾ ವಾಸಾ ಯೀಶ್ಯಾ ಭಕ್ತರ ಪೋಷಾ

ಭೇಧ ಭೇಧಗಳೆಲ್ಲ ಹೋದಂತಾ ಶಾಂತಾ ಕಾಂತಾ ನೀನೇ ಕಾಂತಾ

ವಾದ ವರ್ಜಿತವಾದ ಗುರುಮೂರ್ತಿ ಕೀರ್ತಿ ಪೂರ್ತಿ

ಜಗವೆಲ್ಲವಾರ್ತಿ ಹೌ ಜಗವೆಲ್ಲವಾರ್ತೀ

ಖೇದ ಮೋದಗಳಿಲ್ಲದ ಚಲಿತ ನಾದಬಿಂದು ಕಳಾ ಸ್ವರೂಪನೆ

ಆದಿ ಮಾರುತಿ ಬ್ರಹ್ಮನಾದನು ಶೋಧ ಮಾಡಲು ಸಾಕ್ಷಿ ರೂಪನೂ ||2||

ಯೇಕ ದ್ವಂದ್ವ ಮೂರು ನಾಲ್ಕೈದು ತಿಳಿದೂ ಆರನ್ನು ಅಳಿದು

ಜೋಕೆಯಿಂದಲಿ ಯೊಳರೊಡಗಾಡೀ ನೋಡಿ ಕೂಡೀ ಅದರಂತೆ ಆಡೀ

ನಾಕ್ಲೋಕ ಮೀರಿ ಬೈಲಾಟ ನೀಟಾ ಸೋಟಾ ಯಂಟರೊಳು ಕೂಟಾ

ಹಾಯೆ ಎಂಟರೊಳು ಕೂಟ

ಯಾಕೆ ಹೇಳಲಿ ವಂಭತ್ತಾಗಲೂ ಯೇಕ ಸೂನ್ಯದಿ

ಮಾಡ್ವ ಗಣನೀಯಾ ಜೋಕು ಅರಿದರೆ

ವಬ್ಬ ತಾನಿರೆ ಲೋಕ ರಂಜನೆ ತೋರಿತೆಂಬಗೇ ||3||

ಆರು ಕರ್ಮಾ ಮೀರಿದ ಜ್ಞಾನಾ ಖೂನಾ ಧ್ಯಾನಾ ಕೇವಲ ಮೌನಾ

ಶೇರಿ ವುನ್ಮನಿ ಚಿನ್ಮಾತ್ರದಿರವೂ ಅರವು ಮರವೂ

ಯರಡಳಿದ ಪರವೂ ಕಾರ್ಯ ಕಾರಣ

ಮೀರಿದಾನಂದಾ ಚಂದಾ ದುಂದಾ ತೋರಿಕೆ ಸುಳ್ಳೆಂದಾ

ಹಾ ತೋರಿಕೆ ಸುಳ್ಳೆಂದಾ

ಪಾರ ಮಹಿಮಾ ಹೇಕಬ್ರಹ್ಮದ ಸಾರವರಿದು ಸಾಕ್ಷಿಯಾದ

ಧೀರ ಗುರುವಿನ ಹೊಂದಿ ತಾನೇ ಪೂರ್ಣನಾಗಿ ನಿಂದ್ರಬಲ್ಲ ||4||

ಕಾಲ ಕರ್ಮಾತೀತ ತಾನೆಂದೂ ಅಂದೂ ಯಿಂದೂ ಯೆಂದೆಂದು ಅಂದು

ನಾಲ್ಕವೇದಾರು ಶಾಸ್ತ್ರದಿ ಓದೀ ಬೆದಿಸಿದವನಾದಿ

ಕೀಲು ಸರ್ವ ಬ್ರಹ್ಮನದಾಟ ತಾಟಾ ನೀಟಾ ಅರಿಯದೆ

ಭವದಾಟಾ ಹಾ ಅರಿಯದೆ ಭವದಾಟಾ

ಮೂಲ ತಾ ನೆಲೆ ಮೂರುಲಾಗಿಹ ಲೋಲ ಅಡವಿಯ ಸಿದ್ದಲಿಂಗನೆ

ಜ್ಯಾಲ ನಿರುಪಾಧಿ ತನ್ನದು ಆಲಯವ ನಾನೇನು ವರ್ಣಿಪೇ ||5||

ನೋಡಿದೆನು ನಾ ನಿನ್ನ ಗುರು ಬಂಧು ಯಂದು

ಹಾಡಿದೆನು ಸಂಪನ್ನಾ ಸಲಹೈಯ್ಯಾ ಯನ್ನಾ

ಪೀಡಿ ಸಂಸಾರ ಬಹಳ ಬಗಿಯಲಿ

ಕಾಡುವದು ಯಿದಕೇನು ಗತಿಯಿಂದ್ಹೇಡಿಗೊಂಡಾ

ಮನ ಮನಕೆ ಧೈರ್ಯವ ನೀಡಿ ನಿಜ ಸುಖವ ಮಾಡು ಸಿದ್ದನೇ ||ಪ||

ವಡಿಯ ನಿನ್ನಯ ಮೂರ್ತಿ ದೇಶದೊಳು ನಾಮದ

ಸಡಗರವು ಸಂಪೂರ್ತಿ ತುಂಬಿಹುದು ವಾರ್ತಿ

ಮೃಢನು ಈತನು ಶ್ರೇಷ್ಠ ಶಿವನೆಂದಡಿಗಡಿಗೆ ನುತಿಸುವುದು ಕೇಳತಾ

ಅಡಿಯ ಧ್ಯಾನದಿ ಬಂದು ಕಂಡೆನು

ಇಡು ಕರುಣ ಕಾಯ ಇರುವ ಪರಿಯಲಿ ||1||

ಕಾಲ ಕಾಲ ದೇವಾ ಶಿವ ಶರಣನೆಂದು

ಹೇಳುವತಿ ನುಡಿ ಭಾವ ಸರ್ವರನು ಕಾವಾ

ಕೀಲುಯಿಲ್ಲದೆಯಂದು ಶೃತಿ ನಿಜ ಲೀಲವರಿತೆನು ದರುಶನಾಗಲು

ಮೂಲಯಿವನೆಂತೆಂದು ಕಂಡಾ

ಆಲಯವ ನಾನೇನು ವರ್ಣಿಪೇ ||2||

ಪರಮ ಗುರುವರ ನೀನೂ ಅಂಕಲಗಿ ಮಠದೊಳು

ಹರುಷವತಿ ಸುರಧೇನು ನಾನಾಡಲೇನೂ

ಅರವು ಮರವಿಯ ನೋಡದಲೇ ಯನ್ನಾ

ಶರೀರ ಸುಖ ದುಃಖ ನೋಡಿ ರಕ್ಷಿಸು

ಚರಣ ಧೂಳಿಯು ಬೇರೆ ಅಲ್ಲವು ನಿರುಪಾಧಿಯೇ ನೀ ಅಡವೀಪಾಶ್ಚನೆ ||3||

ಗುರುಬ್ರಹ್ಮಾ| ಸರ್ವರಿಗೂ ಶ್ರೀ| ಗುರು ಪರಬ್ರಹ್ಮಾ ||ಪ||

ಗುರುವೇ ಸಾಕ್ಷಾತ್ ಬ್ರಹ್ಮನಲ್ಲದೆ ಬೇರಿಲ್ಲ|

ಪರತತ್ವವೆಲ್ಲ ಪ್ರಕಾಶ ಮಾಡವನಾಗಿ ಗುರು ಪರಬ್ರಹ್ಮಾ ||ಅ.ಪ||

ಭವ ಬೀಜವ ಸುಡುವ| ಇಷ್ಟಾರ್ಥವ| ಜವದಿ ಪಾಲಿಸುವ|

ಶಿವ ಪಂಚಾಕ್ಷರಿ ಮಂತ್ರಗೌಪ್ಯದಿಂದರುಹುತೆ

ನವವಿಧ ಭಕ್ತಿಯ ರಸದಿ ಮುಳುಗೆಂಬುವ| ಗುರು ||1||

ನರಲೋಕ ಸುಖವು| ಭೋಗ ರೋಗ| ದುರಿತ ಭಯವು|

ದುರುತ ಭಯವು| ವರಯಿಂದ್ರ ಪದವಿಯು| ಪರಶತ್ರುಗಳ ಭಯ|

ಪರಶತ್ರುಗಳ ಭಯ|

ವುರು ವೈರಾಗ್ಯೊಂದೇ ನಿರ್ಭಯವೆಂದು ಭೋದಿಪ| ಗುರು ||2||

ಆಲೆಯ ನಿಲಿಸೀ| ಅಜ್ಞಾನದ ಮೂಲವ ಕೆಡಿಸಿ|

ನಿಲ ತೋಯದ ಮದ್ದ್ಯ ಆಪೊ ಜೋತಿಯನು|

ಲೀಲೆಯಿಂ ತಾರಕ ತ್ರಯದಿ ಸೂಚಿಸುವಂತ| ಗುರು ||3||

ಧರೆ ಮೊದಲಾದ ಭೂತಗಳಿಂದ

ವಿರಚಿತಮಾದ ನೆರೆ ಪಂಚವಿಂಶತಿ| ತತ್ವಸಂಕುಳವೆಲ್ಲಾ

ವರಸಾಂಖ್ಯ ಯೋಗದಿ ವಿವರಿಸಿ ಹೇಳುವ| ಗುರು ||4||

ಮರವೆಯ ತೇಗಿಸೀ| ಬ್ರಹ್ಮಜ್ಞಾನ| ದರುವಿನೊಳಿರಿಸೀ|

ಗುರು ಮಹಾ ಅಡವೀಶಿದ್ದನೆ ನೀನೆಂದರುವಿತ್ತು|

ವುರುತರದ ಮನಸ್ಕ ಮುದ್ರೆ ಸೂಚಿಸುವಂತ| ಗುರು ||5||

ಪರಿಪರಿಯ ಹೊಗಳಲಾರೆನು ಅಡವೀಶನಾಟ

ಗುರುತು ಬಲ್ಲವರು ತಿಳಿವರು ಸಾಕ್ಷತನ ಲೀಲಾ ||ಪ||

ಕುಂದರ ನಾಡಿನೊಳಗಿಹ ಕೋಮಲ ಮೂರ್ತಿ

ಚಂದ ಕಾಣುವದು ನೋಡಲಿಕೆ ಸಾಕ್ಷಾತನ ಲೀಲಾ

ಸಂದೇಹ ಬೇಡಿ ಪ್ರಭುಯೀತಾ ಬಂದಂತ ಕುರುಹು

ನಿಂದ್ಯ ಪ್ರಾಣಿಗಳರಿಯರೂ ಸಾಕ್ಷಾತನ ಲೀಲಾ ||1||

ವಸ್ತು ರೂಪನೆ ಓಂಕಾರ ಬೀಜಾಕ್ಷರಾ

ಮಸ್ತಲಿದ್ದವರ ಸಂಹಾರ ಸಾಕ್ಷಾತನ ಲೀಲಾ

ವಿಸ್ತಾರ ಪೂರ ಶೃಂಗಾರ ನೀ ಪಾರಾವಾರ

ಅಸ್ಥಿಯಂದವರ ವುದರ ಸಾಕ್ಷತನ ಲೀಲಾ ||2||

ಕೋಮಲ ಮೂರ್ತಿ ಶಂಕರನೂ ತಾನೆ ಕಿಂಕರನೂ

ಸೋಮ ಸೂರ್ಯಾನ್ನೇತ್ರನೇ ಸಾಕ್ಷಾತನ ಲೀಲಾ

ನಾಮರಹಿತನೇ ನಿಜ ಗುರುವೆ ನಾನಾ ಚಮತ್ಕಾರ

ಸೀಮೆರಹಿತನೆ ನಿಶ್ಯೀಮಾ ಸಾಕ್ಷಾತನ ಲೀಲಾ ||3||

ದೇವ ದೇವೇಶ ಸರ್ವೇಶ್ಯಾ ಜಗದೊಳಗೆ ಬಂದು

ಭಾವ ವಂದಕ್ಕೆ ವಲಿವನು ಸಾಕ್ಷಾತನ ಲೀಲಾ

ಕೇವಲ ಕೀರ್ತಿ ಪ್ರಖ್ಯಾತಾ ನಾ ತೊತ್ತು ನಿನಗೇ

ಆವ ಕಾಲದಲಿ ಕಾಯುವದು ಸಾಕ್ಷಾತನ ಲೀಲಾ ||4||

ಪರದೇವಾ ಪರುಷದ ಖಣಿಯೇ ರಾಜ್ಯಕ್ಕೆ ಧೊರಿಯೇ

ಚರಣ ಕಿಂಕರನು ನಾನೈಯ್ಯ ಸಾಕ್ಷಾತನ ಲೀಲಾ

ಗುರುಲಿಂದ ಜಂಗಮಾದವನೇ ಗತಿಮತಿಗೆ ನೀನೇ

ಹರಣ ಭಾರವು ನಿನ್ನದು ಸಾಕ್ಷಾತನ ಲೀಲಾ ||5||

ಅಕಲಂಕ ಮಹಿಮಾ ಆನಂದಾ ಆದಿ ಮಾರುತಿಯೆ

ಸುಖದುಃಖ ನಿನ್ನ ಚೇತನವು ಸಾಕ್ಷಾತನ ಲೀಲಾ

ಮುಕುತಿಗೊಡೆಯನೆ ಮಹಾದೇವಾ ಯೇನನೂ ಅರಿಯೆ

ಯುಕತೀ ನಿನ್ನನು ತಿಳಿಯಲಿಕೆ ಸಾಕ್ಷಾತನ ಲೀಲಾ ||6||

ಜಯ ಮಹಾದೇವ ಸಾಂಬಶಿವ ಸಗುಣ ನಿರ್ಗುಣನೆ

ಭಯಹರ ಭಕ್ತ ಪೋಷಣ ಸಾಕ್ಷಾತನ ಲೀಲಾ

ಪ್ರಿಯವಾದ ರೂಪು ನಿರೂಪು ನೀನೇ ಸರ್ವೆಲ್ಲಾ

ನಯನ ಮಾನಸಕೆ ನಿಲ್ಕದವನೇ ಸಾಕ್ಷಾತನ ಲೀಲಾ ||7||

ನಮೋಯೆಂಬೆ ಆದಿ ಅನಾದಿ ನೀನೇ ಮಹದಾದಿ

ನಮೋಯೆಂಬೆ ನಾನಾ ರೂಪಕನೆ ಸಾಕ್ಷಾತನ ಲೀಲಾ

ನಮೋಯೆಂಬೆ ನಾನು ಅನಾಥ ನೀ ಅಂತಃಕರುಣಿ

ನಮೋಯೆಂಬೆ ನಿತ್ಯ ನಿತ್ಯದಲೀ ಸಾಕ್ಷಾತನ ಲೀಲಾ ||8||

ತ್ರಾಹಿ ನಾ ನಿನ್ನ ಸೇವಕನು ಯೆನ್ನೊಡೆಯ ನೀನೇ

ತ್ರಾಹಿ ಸರ್ವೇಣಾ ಮಾಂ ಪಾಹಿ ಸಾಕ್ಷಾತನ ಲೀಲಾ

ತ್ರಾಹಿ ನಿರುಪಾಧಿ ಅಡವೀಶಾ ಅಂಗಲಗಿ ವಾಸಾ

ತ್ರಾಹಿ ಅಪರಾಧವ ಕ್ಷಮಿಸುವದು ಸಾಕ್ಷಾತನ ಲೀಲಾ ||9||

ಪರಮ ಶ್ರೀಗುರು ಮಾರುತೀ| ನಿನ್ನಯ ಮಹಾ

ಬಿರದೀನ ಮಗನು ನಾನು

ಕರುಣವಿರಲೈ ಘಟವು ಯಿಹಪರಿ

ಹರನ ನಾಮದಿ ಮೆರೆಯಂದ್ಹಾಡಿದಾ

ಕುರುಹಿಗೆಯು ಕೊರತಿರದೇ

ಕಡಿಯಲಿ ಚರಣದೊಳು ಐಕ್ಯವನು ಮಾಡಿಕೋ ||ಪ||

ಕಾಲ ಕಾಲದಿಂದಲೀ| ನಿನ್ನಗೆ ನಾನು

ಬಾಲನಾಗಿಹ ಕಾರಣಾ| ಲೀಲವ ಹೊಗಳುವೆನು

ತಿಳಿದು ನೋಡೋ| ಬಾಲ ಚಂದ್ರಾಧರನೇ

ಮೂಲ ನೀನೆಲೆ ಮೂರು ಲೋಕಕೆ|

ಜ್ಯಾಲಮಾಯವ ತುಂಬಿ ನಿಜ ಸುಖ

ಆಲಯದಿ ನೀನಿರುತಿ ಅರಿತೆನು ಕಾಲ ಕರ್ಮಾ ಹರಿಯೋ ಪತಿತನೇ ||1||

ಕೊಡು ಸುಖಮಯ ಸಾಧನಾ| ತನುವಿಹಪರಿ ಯಿಡು ನಿನ್ನ ಸ್ಮರಣೆಯೊಳು

ಬಡವನ ಭಾಗ್ಯದಲೇ ಸಾಧುರ ಸಂಗ ಬಿಡುಗಡಿಲ್ಲದೆ ನಡೆಸೂ

ಪೊಡವಿ ಜನಗಳ ಬೇಡಲಾರೆನು| ಅಡಿಯ ಧ್ಯಾನವು ಅರ್ಥಿ ಕಾಣ್ವದು ವಡಿಯ ನೀನೈ

ನಾನು ಸೇವಕ ಬಿಡದೆ ರಕ್ಷಿಸೋ ಭಾರ ನಿನ್ನದು ||2||

ಜನರರಿಯರು ನಿನ್ನಯಾ ಗುಪ್ತ ಲೀಲಾ| ಘನವರಿತಾಡುವರೂ

ಘನ ಗುಣಗಳು ಬಲ್ಲರೂ| ನೀ ಬಂದಂಥಾ ಚಿನುಮಯ ಚಿದ್ವಿಲಾಸಾ ಘನಕೆ ಘನಕೆ

ಘನವಾದ ಮಹತ್ಮೆಯ| ಸುನಯಾಸದಿ ನೀ ನುಡಿಸಿದಂದದಿ ತನು ಮನವು ನಿನದೆಂದು

ಸರ್ವಧಾ| ವಿನಯದಿಂ ಕೊಂಡಾಡಿದೆನು ಹರಾ ||3||

ನರಕ ಸ್ವರ್ಗವನು ವಲ್ಲೇ| ಈ ಜಗದೊಳು ಧೊರಿತನ ಕಿರಿತನವು

ಬರೆ ಕಷ್ಟವಲ್ಲದಲೆ ನಿನ್ನ ದಿವ್ಯ| ಚರಣ ಸ್ಮರಣೆ ಸಮವೇ

ಬರಿದೆ ಆರು ಕರ್ಮ ಫಲವದು ತರುವದೈ| ಮರಳಿ ಮರಳಿ ಜನನಕೆ ಹರುಷ ನಿನ್ನಯ

ತೇಜ ಜ್ಞಾನದ| ಗುರುತಿನೊಳು ಮೈಮರವದುತ್ತಮಾ ||4||

ದೇವಾ ಅಂಕಲಗಿ ವಾಸ ಅಡವಿಸಿದ್ಧಾ| ಜೀವ ಶಿವನು ನೀನಾದಾ

ಓವಿ ಅರಿದವನೆ ಮುಕ್ತಾ| ಜನ್ಮವು ನಾಸ್ತಿ ಸಾಹು ಹುಟ್ಟುಗಳಿಲ್ಲವೂ ನೋವು ಸಂಕಟ

ಹೋಗಿ| ಆನಂದಾವ ಕಾಲದಿ ಮೆರೆವ ನಿಜ ನಿಜ ನೀವು ಹೇಳಿದ ಪೂರ್ಣ ಬೆಳಕಿನ|

ಭಾವದೊಳು ನಿರುಪಾಧಿ ಯೆನಿಸುವಾ ||5||

ಪೊರೆಯೊ ಯನ್ನ ಕರುಣಾಕರನೇ ಚರಣ ಧೂಳಿಯೋ

ನಾನು ಮರೆಯ ಹೊಕ್ಕೆ ಪೂರ್ಣಬ್ರಹ್ಮ ನಿತ್ಯ ಮುಕ್ತಿಯಲೀ ||ಪ||

ಆನೆ ಕಡೆಯು ಇರುವೆ ಮೊದಲು ನೀನೆ ನೋಡಿದರೇ ಇಹುದು

ನೀನೇ ಇಲ್ಲದಿರಲೂ ಇಲ್ಲಾ ತಾನೆ ಶಿವ ನಿಜವೂ

ಮೌನಿ ನಿನ್ನ ಲೀಲದಾಟಾ ಸ್ವಾನ ಬಲ್ಲದೇ ಮರವೆ

ಜ್ಞಾನ ಹೀನ ಜನಗಳೆಲ್ಲಾ ತನ್ನ ಬಲ್ಲಾರೇ ||1||

ಘಟಕೆ ನೇತ್ರ ಸಾಕ್ಷಿ ಹ್ಯಾಗೊ ಕುಟಿಲ ಕಾಣಲಿಕೇ ತಾನೇ

ಕುಟಿಲ ದರ್ಪಣವು ತಿಳಿಯೆ ಸ್ಫಟಿಕ ಮಣಿಯಂತೆ

ಘಟವ ನೋಡುತಲಿ ತಮ್ಮಾ ಹಟದ ಪರಿಯಂತೆ ಗುರುತು

ನಿಟಿಲಾಕ್ಷಿವನೂ ಶಿವಯೋಗೀಶಾ ಸಟೆಯಲ್ಲೆ ದೇವಾ ||2||

ತನ್ನಾಭಜಿಸಿ ತನ್ನ ತಿಳಿದು ತಮ್ಮ ಬಲ್ಲವಾಗಿ ನಿನ್ನಾ

ಯನ್ನುತಿಹನು ಶಿವನು ಈತಾ ಸರ್ವರಾಧಾರಾ

ಭಿನ್ನ ಭಾವಿ ಕರ್ಮಿ ಜನರೂ ನಿನ್ನ ಕಾಣುತಲೀ ಯಾರೋ

ಯನ್ನ ಮನಕೆ ತೋಚದೆಂದು ಅನುವಾ ನುಡೀ ||3||

ನೀನೆ ಮನಕೆ ತಂದು ಯನ್ನ ಮಾನ ಅಭಿಮಾನಾ

ಆನೇನು ಹೇಳಲಯ್ಯ ಭಕ್ತಿಕಾಯ ತಾಳೀದೀ

ಸ್ವಾನುಭಾವಿ ಅಡವಿಸಿದ್ಧಾ ತಾನೆ ನಿರುಪಾಧಿವೇದ

ಖೂನವಾದ ಗೌಪ್ಯ ನುಡಿಯಾ ನುಡಿದೇ ನುಡಿದಂತೆ ||4||

ಮರ್ತ್ಯದೊಂದು ಮುಂದೆ ತಿಳಿದೂ ಗುರ್ತು ಕಾಣಿಸಿತೂ ಪೂರ್ವಾ

ಕರ್ತಲೋಚನಾದಂತೆ ಅಣುವ ಮರ್ತು ಹಾಡಿದರೂ

ಅರತು ಅರಿದ್ಹಾಡಿದಂಥಾ ಗುರ್ತು ನೀನಯ್ಯಾ ದೇವಾ

ಕರ್ತು ನೀನು ಅಡವಿಸಿದ್ಧಾ ಕರ್ತು ನಿರುಪಾಧಿ ||5||

ಬಂತು ಬಾರೊ ಬಸವಂತನ ಹಬ್ಬಾ ದುಂದುಮೆ ||ಪ||

ಅಡವೀಶ ಆಡುವ ಲೀಲವ ಕೇಳಿ

ಸಡಗರ ಸೌಖ್ಯದಿಂದಲಿ ಬಾಳಿ

ತಡವಿಲ್ಲ ದಿನಗಳು ಅರುವು ತಿಳಿಯಬೇಕು

ವಯಡಿನ ಬಿಟ್ಟರೆ ಗತಿಯಿಲ್ಲವಣ್ಣ| ದುಂದುಮೆ ||1||

ಭಕ್ತಿ ಮಾರ್ಗದ ಮುಕ್ತಿಯ ತಿಳಕೊಂಡು

ಶಕ್ತರಾಗಬೇಕು ಗುರುಪಾದಕೇ

ಫೋಕ್ತು ನಿಲ್ಲುವಂತ ಹಾದಿ ತಿಳಿಯಬೇಕು

ಮುಕ್ತಿ ಮಮಾರ್ಗ ತೋರಲಿ ಬಂದನಣ್ಣ| ದುಂದುಮೆ ||2||

ಸೌಮ್ಯ ಮೊದಲು ಸಾಧಾರಣ ದಿನ ಬಂತು

ಕಮ್ಮೈದ ಗುಣಗಳ ಕಡಿಯಬೇಕು

ಹಮ್ಮು ಕ್ರೋಧ ಲೋಭ ನಾಶವಾಗಿ ಮುಂದೆ

ವಮ್ಮನವಾದರೆ ವಳಿತಾದಿರಣ್ಣ| ದುಂದುಮೆ ||3||

ಗರ್ವ ಬಿಡಲೀ ಬೇಕು ಕರ್ತನಾಟ ಬಂತು

ಇರಲಿಕ್ಕೆ ದಿನವಿಲ್ಲ ಅಸ್ಥಿರವೂ

ಅರುವಿಲೆ ಆನಂದ ಗುರುತಿಗೆ ಮುಟ್ಟಿರಿ

ಧರೆಯಾಟ ಸಮೀಪ ಮರಿಬೇಡಿರಣ್ಣ| ದುಂದುಮೆ ||4||

ಸುಖದ ಇಚ್ಛೆಗೆ ನೀವು ಮನವಿಡಬೇಕು|

ಅಕಲಂಕ ಆತ್ಮದೋರುವ ಸತ್ಯವು

ಲಕಲಕ ಗುರುವರ ನಿಸ್ಸಂಗ ತಿಳಿಸುವ

ಶಕುಲಾತಿ ವಾಸನ ಹೋಗೋದಂಣ| ದುಂದುಮೆ ||5||

ಆನಂದನಾಗಿ ಆಮೇಲೆ ತೂರ್ಯದಿಂದ

ಸ್ವಾನುಭಾವದ ಮದವೇರುವದು

ಯೇನು ಹೇಳಲಿ ತೂರ್ಯತೀತದ ಸುಖವನ್ನು

ಜ್ಞಾನಿಯೆನಿಪ ಮುಕ್ತಿಪರ ಕೇಳಿರಣ್ಣ| ದುಂದುಮೆ ||6||

ಶ್ರವಣವೆ ಬೀಜ ಮೂರು ಜ್ಞಾನ ತಿಳಿಯಲಿ

ಸುವಿವೇಕವಾಗೋದು ಸೂಕ್ಷ್ಮದಿಂದ

ವಿವರಿಸೆ ಮೂಲ ಮೇಲು ಕಾಲಜ್ಞಾನವು

ಸವನಿಶಿ ತನ್ನ ಕಾಂಬುವದಣ್ಣಾ| ದುಂದುಮೆ ||7||

ಈ ಕಾರ್ಯಕ್ಕಾಗಿ ಬಂದನು ಅಡವೀಶನು

ಜೋಕೆಯಿಂದಲಿ ತಿಳಿದರೆ ಸುಖವೂ

ಯೇಕಮೇವಾತ್ಮೆಂಬ ಬಿರದು ಧರಿಸಿ ಬಂದು

ಲೋಕೇಶ ಈತನು ನಂಬ ಬೇಕಣ್ಣ| ದುಂದುಮೆ ||8||

ಆದಿ ಶರಣನು ಬಂದಾ ಅನ್ನದಾನಿಯು ಬಂದಾ

ಶೋಧನ ಮಾಡಿರಿ ಮರತು ನೀವು

ಘಾಸಿಯಾಗುವದೇಕೆ ಘಟ ಸ್ವಲ್ಪು ಆಯುಷ್ಯ

ಭೇದಿಸಿ ನೋಡಿರಿ ಸುಖವಾದಿತಣ್ಣ| ದುಂದುಮೆ 9||

ಮೂರು ಅಕ್ಷರದಾತಾ ನಾಲ್ಕಕ್ಷರಕೆ ಬಂದಾ

ಸಾರಜ್ಞರರಿವರು ಸಂಜ್ಞೆಯನ್ನು|

ಧೀರತನ ಗರ್ವ ಮಾಡಲು ಕೆಟ್ಟೀರಿ

ಮಾರಹರನು ಅಡವೀಶ ಕೇಳಿರಣ್ಣ ದುಂದುಮೆ ||10||

ಕುಂದರ ನಾಡೊಳು ಬಂದವುತ್ತುಂಬಿ

ಹೋದಾನು ತಾನೇಕ ಜನರ ಸಂಗಾ

ತಂದೆ ಈತನೆಂಬೋ ಗುರುತಿನ ಭಕ್ತರು

ತಂದಾರು ಬೈಲಿಗೆ ಸಾಕ್ಷಾತನಣ್ಣ| ದುಂದುಮೆ ||11||

ಕಾರ್ಯ ಕಾರಣವನ್ನು ತಿಳಿಯಗೊಡದಲೆ

ತೂರ್ಯಾತೀತಾವಸ್ಥೆಯೊಳು ನಿಂತಿಹ

ಪ್ರೇರ್ಯ ಪ್ರೇರಕತ್ವ ಎರಡಾಗಿ ಹೊರಗಾಗಿ

ಸೂರ್ಯ ಕೋಟಿ ಪ್ರಭೆ ಶಿವಯೀತನಣ್ಣ| ದುಂದುಮೆ ||12||

ಶಿವಶಿರಿಯಲ್ಲಿ ವೈರಾ ವರ್ಗ ಇಲ್ಲೆಂದು

ಸುವಿವೇಕ ವೇದ ಆಗಮದೊಳಗೆ

ವಿವರಿಸೆ ಅಡವೀಶಾ ಇರುವಂಥ ಸ್ಥಳದಲ್ಲಿ

ಕವಲಿಲ್ಲ ಯೇಕದಿಂ ಸಾಗುವದಣ್ಣ| ದುಂದುಮೆ ||13||

ಇದರಂತೆ ತಿಳಕೊಂಡು ನಂಬಲಿಬೇಕು

ಚದುರಾದ ಜ್ಞಾನ ಪುರುಷರೆಲ್ಲ ಮರವು

ಹೋದರ ಮಹಾಗುರುವು ವಲಿವನೆಂದು

ವಿಧವಿಧವಾದ ವೇದ ವಾಕ್ಯವಣ್ಣ| ದುಂದುಮೆ ||14||

ಚ್ಯಾಟಕತನಗಳು ಬಿಡಬೇಕು ಮುಂದೆ

ನೀಟಾಗಬೇಕು ಭಕ್ತಿಯ ಮಾರ್ಗಕೆ

ಕೋಟಲೆ ಕಳೆವಾನು ಭವ ಭವ ತಿರುಗುವ

ಪಾಟ ಕೆಡಿಸಲಿಕ್ಕೆ ಅಡಿವೇಶನಣ್ಣ| ದುಂದುಮೆ ||15||

ಈತನ ಆಟದ ರೀತಿಯು ತಿಳಿಯದು ಜನಕೆ ಕೋತಿ

ಮನುಜರರಿವರು ಸಾಂಬನ

ಪ್ರೀತಿ ಇಟ್ಟರೆ ಮೋಕ್ಷ ಸಾಧನ ತೋರುವಾ

ನಾಥ ಅಡವೀಶನೆ ಶವ ನಂಬಿರಣ್ಣ| ದುಂದುಮೆ ||16||

ನಾಮ ರಹಿತ ನಿಶೀಮ ಬಂದ ಗುರುತು

ಕಾಮ್ಯ ಕರ್ಮಗಳು ಎಂದೆಂಬುವಾ

ಭೂ ಮಯ ಜನರಿಗೆ ಮಾರ್ಗ ತೋರಲಿ ಬಂದ

ಕಾಮ ಸಂಹರ ಸಾಧು ಬಿಡ ಬೇಡಿರಣ್ಣಾ| ದುಂದುಮೆ ||17||

ಜಗದಿ ಅಡವಿ ಬಂದ ತಾನು ತಾನಾಗಿಯೆ

ಅಘಹರ ಅಡವೀಶ ಯನಿಸುತಲೀ

ನಿಗಮ ವೇದ್ಯನೀತ ನಿರುತದಿಂದಲಿ ಬಂದಾ

ಸುಗುಣತನದಿ ತಿಳಿದರೆ ಸುಖವಣ್ಣ| ದುಂದುಮೆ ||18||

ಛಪ್ಪನ್ನ ದೇಶಕ್ಕೆ ನಾಮಾದ ಪ್ರಭುವು

ಅಪ್ಪ ಅಡವೀಶ ಆದಿಯ ಸಿದ್ಧನ ಎಂದು

ಮೋದದಿ ನುಡಿವರು ಕೇಳಿ ಕಂಡು ತಿಳಿದೂ

ವಪ್ಪವಿಟ್ಟೆನು ಕೇಳಿ ಬಿಡಬೇಡಿರಣ್ಣ| ದುಂದುಮೆ ||19||

ಸ್ಥಿರವಿಲ್ಲ ಕಾಯವು ನೀತಿಯ ತಿಳಿಯಲಿಬೇಕು

ಖಾತರಿ ಇದು ಎಂದು ತಿಳಿದಿಲ್ಲವೊ

ಮರತು ಕೆಡಲಿಬ್ಯಾಡ ಬಹುಜನ್ಮ ಬರಬೇಡಾ

ತರಗಬ್ಯಾಡರಿ ಕ್ಷೇತ್ರ ಇದೆ ನಂಬಿರಣ್ಣ| ದುಂದುಮೆ ||20||

ಬೇಡಿದ ವರಗಳ ನಡೆಸುವನೀತಾ

ಕಾಡನು ಬೇಡನು ತಾ ಕೊಡುತಿಹನು

ನಾಡ ಜನರ ನುಡಿ ಗುರು ಕೊಡುವನು ಎಂದು

ಆಡುವ ವಚನವ ಸರಿ ನೋಡಿರಣ್ಣ| ದುಂದುಮೆ ||21||

ಶ್ರೇಷ್ಠ ಲೋಕದೊಳು ಈತನೇ ನಿಶ್ಚಯಾ

ಭ್ರಷ್ಟಾಗಬೇಡಿರಿ ಮರತು ನೀವು

ನಿಷ್ಠೆಯಿಂದಲಿ ಅಡವೀಶನ ಧ್ಯಾನವ

ಬಿಟ್ಟರೆ ಕೆಟ್ಟೀರಿ ಬಿಡಬೇಡಿರಣ್ಣ| ದುಂದುಮೆ ||22||

ಧರ್ಮ ತಿಳಿಯಬೇಕು ದಾರಿದ್ರ್ಯ ದಿನಮಾನ

ಕರ್ಮಿಗಳಿಗೆ ಕೇಡು ಬಂದಿತೆಂದು

ನಿರ್ಮಳ ಗುರುವರ ಅಡವೀಶ ಬಂದಂಥ

ಮರ್ಮವ ತಿಳಿದರೆ ವಳಿತಾದಿರಣ್ಣ| ದುಂದುಮೆ ||23||

ಅರವು ಮರಿಯಬ್ಯಾಡ್ರಿ ಅಂಕಲಿನಾಥನು

ಗುರುವರ ಪರತರ ಶಂಕರನೂ

ವರದ ವಾಕ್ಯವ ನಂಬಿ ಗಾಡಿಕಾರ ಪ್ರಭು

ಪರಿಪರಿ ಮಹತ್ವ ಗುರುತ್ಹಿಡಿರಣ್ಣ| ದುಂದುಮೆ ||24||

ಬರೆ ಮಾತು ಅಲ್ಲ ಗುರುಹಿರಿಯರ ವಾಕ್ಕು

ಅರಿತು ನಿರುಪಾಧಿಯ ಪೂರ್ಣವನ್ನು

ಪರಮ ಸಂತೋಷದಿ ಗುರುತಿಗೆ ತಂದರೆ

ಕರಕರೆ ನಷ್ಠವು ಬಹು ಸುಖವಣ್ಣ| ದುಂದುಮೆ ||25||

ಬಸವಿಯಾದರೆ ಮೋಕ್ಷ ವಸುಧೆಯೊಳಗೇ

ಬಸವ ನಾಮದ ಮಾದ್ರಿ (ಮದಿರ) ಬಟ್ಟಲನು ಹೊತ್ತು ||ಪ||

ಬಟ್ಟಲನು ಹೊರುವದಕೆ| ಬಹು ತರದ ಗುಣ ಬೇಕು|

ನಿಷ್ಠೆಯಿರಬೇಕು ವಿವೇಕ ಮಿಂಡರೊಳು

ಪೊಟ್ಟುಗುಡುಪ ಮೋಹಕದ ವರಶ್ಯಾರದಿರಬೇಕು

ಗಟ್ಯಾಗಿ ದೈವದ ವಚನದಂತೀರೂ ||1||

ತಂದೆ ತಾಯಿ ಬಂಧು ಬಳಗ ಮರತು

ಪರ ಪುರುಷರನ್ಹೊಂದಿ ಅನ್ಯರು ಇಲ್ಲ ಯೀತನೇ ಘನವೆಂದು

ಸಂದೇಹ ಗುಣವಳಿದು ಸಾಕ್ಷಿ ಬಾಜರದೊಳು

ವಂದರನು ಮಾನವಿಲ್ಲದೇ ತಿರುಗುವಂತಾ ||2||

ನಿರುಪಾಧಿ ಅಡವೀಶ್ಯಾ ನಿಜಲಿಂಗದೊಳು ಕೂಟ

ಬೆರಿಸಿ ಬೇರಿಲ್ಲದಂತೇಕವಾಗಿ

ಪರಿಪರಿಯ ಕಲ್ಪನೆ ಪರ ಪುರುಷನೊಳು ಮನವಿರದೇ

ನೆರೆ ನಂಬಿದಂತವನ ಬಿಡದೇಕ ನಿಷ್ಠೆ ||3||

ಭ್ರಷ್ಟರಾ ಸಂಗದಿಂದ ಕೆಟ್ಟು ಹೋಗೋದಕ್ಕಿಂತ

ಶ್ರೇಷ್ಟ ನಿನ್ನಯ ಪಾದ ನಂಬುವದೇ ಸುಖ ||ಪ||

ಮೂಢಮತಿ ಕೂಡ ಮಾತಾಡಿ ಮೆರೆವದಕಿಂತಾ

ಆಡಲುತ್ತಮ ಜಗಳ ಸುಖನರಾದರೇ

ನೋಡಿ ನಂಬಲು ನಿನ್ನಾ ನಾಡಿನೋಳಗುತ್ತಾಮಾ

ಕೇಡು ಪ್ರಪಂಚ ನಂಬಿ ಕೆಟ್ಟವರುಂಟೊ ||1||

ತಿಂದರೇ ಸಾಯ್ವದು ಹಿಂದಾಗೆ ನೇತ್ರ ನಾಸ್ತಿ

ಮುಂದೆ ನಿನ್ನಗೆ ಕೊಟ್ಟರೆ ದೋಷವೇ ಪ್ರಾಪ್ತಿ

ಯಂದ ವಚನವ ಸೂಕ್ಷ್ಮದಿಂದ ನಡೆದರೆ ಮೊಕ್ಷ

ಕುಂದುಕೊರತೇ ಮನವಿ ನರಕವೇ ಸಿದ್ದಾ ||2||

ತನ್ನ ನುಡಿ ನಂಬಲು ತನ್ನ ಪದ ಸೇರುವಾ

ವುನ್ನತೋನ್ನತವಾಗುವಾ ನಿಜದೊಳಗಾಗಿ

ಚನ್ನ ಶ್ರೀ ನಿರುಪಾಧಿ ಮನ್ನಿಸೊ ಅಡವಿಯ ಸಿದ್ಧಾ

ಕುನ್ನಿ ನಾನೈಯ್ಯ ಸೇವಕಾ ತೊತ್ತಿನಾ ತೊತ್ತು ||3||

ಬುದ್ಧಿಯ ಬಾರದು ಮನಕೆ ಬುದ್ಧಿ ಬಾರದು|

ಸಾಧು ಮಾಡಿ ಶಿದ್ಧ ನಡೆಯೆಯೊಳ್‍ಯಿದ್ದ ಬ್ರಹ್ಮ ನಾಗುವಂತಾ ||ಪ||

ಗುರುವಿನೊಚನ ಕೇಳಿ ತನ್ನ|

ಅರವು ಗುರುತು ಹಿಡಿದು ನಿತ್ಯ|

ಮರಿಯದಲೆ ತನ್ನ ನಿಜದೀ|

ಬೆರೆತು ವಸ್ತುವಾಗುವಂತಾ ||1||

ಯಿದರ ನುಡಿಯ ಗುರುವಿಗ್ಹಾಡೋ|

ಚೆದುರಗಾರಕೀಯ ಬಿಟ್ಟು

ಸದಮಲಾನಂದವಾಗೋ|

ಮಧುರ ಮುಕ್ತಿಯಾಗುವಂಥಾ ||2||

ಕಠಿಣ ವಾಕ್ಯಗಳನು ಬಿಟ್ಟು|

ಕುಟಿಲತನಗಳನ್ನು ಸುಟ್ಟು

ಹಟವು ಕಳದು ಶಾಂಥ ಗುಣದೀ|

ಘಟವೆ ಲಿಂಗವಾಗುವಂತಾ ||3||

ಸುಳ್ಳು ಮಾತಿನಿಂದ ಕಷ್ಟ|

ಕಳ್ಳ ವಚನ ಮಹಾ ಕನಿಷ್ಟ

ಎಳ್ಳಿನಷ್ಟು ಸುಖವಿಲ್ಲಂತಾ|

ವಳ್ಳೇಬೈಲು ಆಗುವಂತಾ ||4||

ಅಡವಿಸ್ವಾಮಿ ನಿರುಪಾಧೀ|

ಬೆಡಗು ಅಲ್ಲವೆಂದು ತಿಳಿದು

ದೃಢದಿ ನಂಬಿ ಶುದ್ಧವಾಗಿ| ಮೃಢನು ತಾನೇಯಾಗುವಂತಾ ||5||

ಬೇಡುವನಲ್ಲಿನ ರೂಢಿಯೊಳಧಿಕನು

ನೀಡುವ ಬೇಡುವ ಪದವಿಗಳಾ

ಕಾಡದೆ ಬೇಡದೆ ಕಾಡೊಳು ಮನೆ ಮಾಡಿ

ಗಾಡಿಕಾರ ಪ್ರಭು ಈತನಮ್ಮಾ ||ಪ||

ಅಷ್ಟ ಭೋಗವೀವಾ ಶ್ರೇಷ್ಠಯೀತನೆಂದು

ಯಿಟ್ಟ ಮುಂಡಿಗಿ ಯತ್ತುವರ ಕಾಣೆನು

ನಿಷ್ಠೆಯಿಂದಲಿ ತನ್ನಾ ಮುಟ್ಟಿ ಭಜಿಸುವಗೆ

ಕೊಟ್ಟು ನಡೆಸುವ ತಾ ಬೇಡಿದುದಾ ||1||

ಗುರು ಲಿಂಗ ಜಂಗಮ ಪರ ಮಂತ್ರ ವಿಭೂತಿ

ವರ ರುದ್ರಾಕ್ಷಿ ತೀರ್ಥ ಪ್ರಸಾದವು

ಅರಿಯರು ಅಷ್ಟಾವರಣವೇ ಅಂಗವಾದಂಥಾ

ಗುರು ಸಾಕ್ಷಾತ್ಕಾರ ಸಾಕ್ಷೀ ರೂಪಾ ||2||

ಹೊನ್ನು ಮೊದಲು ಹೆಣ್ಣು ಕಡಿಯಾಗಿ ಸಕಲವು

ಚನ್ನಾಗಿ ಕೊಡುತಿಹ ಹೊಂದಿದರೇ

ಪನ್ನಗಭೂಷಣ ಪರಮಾತ್ಮಯಿವನೆಂದು

ಎನ್ನುತ ಡಂಗುರ ಸಾರಿದೆನೆ ||3||

ಕುಲ ಹದಿನೆಂಟು ಜಾತಿಯು ಬರುವದು

ಮಲಹರ ಮಹದೇವ ಮಹದಾದಿಯಾ

ಲಲಿತ ಲೀಲೆಯನ್ನು ಹಾಡುವ ಕಲಿಯುಗ

ಭಲರೆ ಭಲರೆಯಂದು ಕೊಂಡಾಡ್ವರೂ ||4||

ಛಪ್ಪನ್ನ ದೇಶದಿ ಈತನ ಪ್ರಭೆ ತಾನು

ತಪ್ಪದೆ ನುಡಿವರು ಕಂಡು ಕೇಳೀ

ವಪ್ಪವಿಚ್ಚೆನು ತೊತ್ತು ನಿರುಪಾಧಿ ಅಡವೀಶ

ಅಪ್ಪ ಜೀವಿಗಳನು ರಕ್ಷಿಸುವಾ ||5||

ಬೇಗ ಬನ್ನಿ ಕಾಯಿಯಂದು ಬೇಡುವ ಬಯಕೇ

ಯೋಗಿ ಯನ್ನಯ ದೋಷ ಹೀರಿಕಾಯಿ ||ಪ||

ನಿತ್ಯ ನಿರ್ಗುಣ ನೀನೆ ಮೌಕ್ತಿ ಕಡಲೆಕಾಯಿ

ಸತ್ಯ ಸದ್ಗುಣದಾ ಕಾರೆಕಾಯೀ

ಯತ್ತ ಹೋದರೆ ಬೀಡದೇ ಯನ್ನ ಹೆಸರಕಾಯಿ

ತೊತ್ತು ಯನುತಿಹನು ನಾ ನಿಂಬೆಕಾಯಿ ||1||

ಭೂ ಲೋಕದೊಳು ಇಲ್ಲ ನಿನ್ನ ಸವತೆಕಾಯಿ

ಕಾಲ ಕಾಲದಿ ಬಿಂದು ಪಡುವಲಕಾಯಿ

ಲೀಲದಾಟವ ತೋರಿ ಯನ್ನ ಹತ್ತಿಕಾಯಿ

ಕೀಲ ನಿನ್ನದು ಸಕಲ ಬಾಳೆಕಾಯಿ ||2||

ನಿನ್ನ ನಂಬಲು ಕರ್ಮವಡದು ವಿಸರಿಕಾಯಿ

ಮನ್ನಿಸೋ ಅಡವೀಶ್ಯಾ ತಾ ಪೋಸ್ತಕಾಯಿ

ಚನ್ನ ನಿರುಪಾಧಿ ಯನ್ನಲ್ಲಿ ನೀರಲಕಾಯಿ

ಕುನ್ನಿ ನಾನೈಯ್ಯಾ ಸದಾ ನೇಮಿಕಾಯಿ ||3||

ಭವರೋಗ ವೈದನೀ ಮಂತ್ರ ತಂತ್ರಕೆ ಆದಿ

ವಿವರಿಸಲು ತನುಭಾರ ತನ್ನದಲ್ಲೇ ||ಪ||

ಏನಾದಡೇನೆನಗೆ ಹೀನ ಜಡ ದೇಹವು

ಮೌನ ಅಭಿಮಾನವು ಕೂಡಿತೆಂಬೇ

ಜ್ಞಾನಿಯಾದ ಮೇಲೆ ಶರೀರದಾಸೆ ಯಾಕೆ

ಖೂನ ತಿಳಿದಾ ಬಳಿಕ ಹೇಗಾದರೇನು ||1||

ಬಂದದ್ದುಣ್ಣುವನು ಸುಖದಿ ಬಾರದ್ದು ಬಯಸದೇ

ಒಂದೆಯಾದ ನಿಜದಿ ತೂಗ್ಯಾಡುತಿಹನು

ತಂದೆ ತಾಯಿ ಬಂಧು ಬಳಗ ಇಂದ್ರೀಹಂಗು

ಒಂದು ಇಲ್ಲವು ಅವಗೆ ತನುವ ಮರೆತಿಹನೂ ||2||

ನಗುವು ಬಂದರೆ ನಗುವ ದುಃಖ ಬಂದರೆ ಅಳುವ

ಬಗೆಯೊಳಗೆ ತಾಬೆರಿತಾ ಚೈತನ್ಯ ರೂಪಾ

ನಿಗಮ ವೇದ್ಯನು ನಿರುಪಾಧಿ ಅಡವಿಯ ಸಿದ್ಧಾ

ಬಗಿ ಬಗಿಯ ಕಲ್ಪನೆಯು ನೀನೆ ಆಗಿದ್ದೀ ||3||

ಮಹದೇವ ಲಿಂಗ ಅಡವೀಶ್ಯಾ| ಪಾದವನು ತೋರೋ ಕೃಪದಿ

ಸಹಜ್ಯಾನಂದ ಸರ್ವೇಶ್ಯಾ ಭಕ್ತರನು ರಕ್ಷಿಸೂ ||ಪ||

ನಿನ್ನಾಟ ತಿಳಯದೈ ದೇವಾ| ನಾನೇನು ಬಲ್ಲೆ ಲೀಲಾ|

ಅನ್ಯಾಯವಲ್ಲೆ ಈ ಮಾತು ದರುಶನವ ಕೊಡದ ಮೂಲಾ

ಮನ್ನಿಸಲಿಬೇಕ ಶ್ರೀಸಾಂಬಾ ನೀ ನೋಡಿ ಕಾಲ ಕಾಲಾ|

ಯನ್ನಾತ್ಮದೊಡೆಯ ನೀ ಬೇಗ ಬಾರಯ್ಯ ಸದ್ಗುರೂ ||1||

ಜನ ನಿನ್ನ ಧ್ಯಾನದಲ್ಲಿಹರು ಶಂಕರನೆ ಶಂಭುಶಿವನೇ|

ನಗಿ ಮುಖವ ತೋರು ಸಂತೋಷಾ| ಯೆನೇನು ಬೇಡೋ ಹರನೇ|

ಭುಗಿಲಾಗಿ ಕಾಯ ವಾಚ್ಯ ಮನಸು ನಡುಗುವದು| ಥರಥರನೇ|

ಮಿಗಿಲಾದ ಮಹತ್ತು ಇದುಯೇನು| ಸಾಕ್ಷಾತ್ ಶ್ರೀಗುರೂ ||2||

ಹದಿಮೂರು ದಿನಕೆ ಹದಿಮೂರು ಯುಗವಾಗಿ ಕಾಂಬುದೈಯ್ಯ|

ನದಿ ಮೇರೆದಪ್ಪಿ ಬಂದಂತೆ ಮೈಮರೆದು ನಿಂತೆನಯ್ಯಾ|

ಮುದದಿಂದ ಬಂದು ನಿನ್ನಾ ರೂಪ ನೀ ತೋರಬೇಕು ಜೀಯ್ಯ|

ಯದೆ ವಡೆದು ತಾಯ ಅಗಲೀದ ಕರುವಿನ ಪರಿಯಲಾ ||3||

ನಿರುಪಾಧಿ ನೀನೆ ಗುರುದೇವಾ| ಧೈರ್ಯವನು ಕೊಟ್ಟು ನೋಡು|

ವರಶ್ರೇಷ್ಠವಾದ ಆನಂದಾ ಕರುಣದಲಿ ದೃಷ್ಟಿಯಿಡು|

ಪರತರನೇ ಅಂಕಲಗಿನಾಥ ದಯಮಾಡಿ ಬಂದು ಕೊಡು

ಗುರು ಸಿದ್ಧಲಿಂಗ ಅಡವೀಶ್ಯಾ ನಾನೇನು ಬೇಡಲಿ| ಮಹದೇವಲಿಂಗ

ಅಡವೇಶಾ ಪಾದವನು ತೋರು ಕೃಪದಿ ||4||

ಆರಾರು ಅರಿಯದ ಮೂರ್ತಿ ನಾನೇನು ಬಲ್ಲೇ ನಿನ್ನಾ|

ಪರಾಕು ಸೂಕ್ಷ್ಮದ ಸೌಜ್ಞೆ ತಿಳಿಸೈಯ್ಯಾ ಆರ್ಥಿಚಿನ್ನಾ|

ಕಾರಣ ಕಾರ್ಯಕೆ ನೀನೆ| ನಿಜವಾದ ಗುಣದಿರಂನ್ನಾ

ತೋರೈಯ್ಯಾ ಬೇಗಾ ನಮ್ಮಲ್ಲಿ ದುರ್ಗುಣವ ನೋಡದೆ ||5||

ಮರಿಯಬೇಡೋ ಮಹಾ ಕರುಣಾದಿ ನೋಡೋ|

ಪರಿಪರಿ ತಿರುಗುವ ಮನವ ಯೇಕ ಮಾಡೋ ||ಪ||

ಬಂಧು ಬಳಗದೊಳು ಬಹು ಸುಖವ ನಡಿಸೋ|

ಹಿಂದೆ ಮುಂದೆ ಕಾದು ಸಂಶಯ ಬಿಡಿಸೋ ||1||

ತನುವ ಯಿಹಪರಿ ನಿನ್ನ ನಾಮವ ನೆನಸಿ

ಚಿನುಮಯನಾಗುವ ಗುಣವನು ಸರಿಸೀ ||2||

ನಿರುಪಾಧಿ ಅಡವೀಶ್ಯಾನೆಂದಂತವರಿಗೇ

ತರುಬ್ಯಾಡಾ ಯಂದೆಂದು ಈ ಕೆಟ್ಟ ಗಳಿಗೇ ||3||

ಮಂದಮತಿಯು ಅರಿಯನಯ್ಯಾ ಕಂದುಗೊರಳನ ಭಕ್ತ ಮಹಿಮಾ

ನಿಂದೈ ಪ್ರಾಣಿಗೆ ನಿಜವು ನಿಲ್ಲುವದೇ ಹೋ ಅಡವಿಯಾ ಸಿದ್ಧಾ

ವಂದೆ ಭಾವದಲ್ಲಿ ವಲಿವನು ||ಪ||

ನೀತಿ ಗುಣವ ಹೋಗದೆ ನಿನ್ನ ಮಾತು ಅರಿಯಲಿಕ್ಕೆ ಅರಿದು

ಕೋತಿ ಮನುಜರರಿವರೈ ನಿಮ್ಮಾ ಹೋ ಅಡವಿಯ ಸಿದ್ಧಾ

ಜೋತಿ ರೂಪಾ ನೀನೆ ಮತ್ತೆಲ್ಲಾ ||1||

ಜ್ಞಾನದೊಳಗೆ ಮನ ನಿಲ್ಲಲಾಗಿ ಮೌನಿ ನಿನ್ನ ಮಹತ್ಮೆಯನ್ನು

ತಾನೆ ತನ್ನ ತಿಳಿದವ ಬಲ್ಲ ಹೋ ಅಡವಿಯ ಸಿದ್ಧಾ

ಹೀನ ನರರೆ(ರ) ವಸ್ತು ತಿಳಿವನೆ ||2||

ಗುರುವು ಲಿಂಗ ಜಂಗಮದಾ ನಿರುತ ಭಕ್ತಿ ಬೆಳಗಿನೊಳಗೆ

ಬೆಳೆದು ಬ್ರಹ್ಮವಾಗಿ ನಿಂತಿಹಾ ಹೋ ಅಡವಿಯಾ ಸಿದ್ಧಾ

ಅರಿತ ದೂರನಾದಿ ಬ್ರಹ್ಮನು ||3||

ಕಾನ ರಹಿತ ಕರುಣೌ ಕರನು ಸೀಮೆ ರಹಿತ ಶ್ರೇಷ್ಠ ಗುರುವು

ಸೋಮ ಸೂರ್ಯಕೋಟಿ ತೇಜನು ಹೋ ಅಡವಿಯಾ ಸಿದ್ಧಾ

ನೇಮ ದೂರನಾದಿ ಬ್ರಹ್ಮನು ||4||

ವೇದ ನಿರುಪಾಧಿಯು ಯೆನಿಸಿ ಅವಕಾಲದಲ್ಲಿ ಮೆರೆವ

ಸೋವೆ ಅರಿದರವನೆ ಶ್ರೇಷ್ಠನು ಹೋ ಅಡವಿಯಾ ಸಿದ್ಧಾ

ಭಾವನೆಗೆ ನಿಲ್ಕದಸದಳ ||5||

ಮಾತಿನೊಳು ಮಂತ್ರವು| ಸುಖದುಃಖ| ಮಾತೆ ಮಂಗಳಕಾರವು

ಮಾತಿನಿಂದಲಿ ಯೋಗಿ ಎನಿಪನು| ಮಾತಿನಿಂದಲಿ ಭೋಗಿಯೆನಿಸುವಾ|

ಮಾತುಗಳು ಮಾಣಿಕವು ತಿಳಿದರೆ| ಮಾತೆ ಶ್ರೀ ಗುರು

ಬೋಧ ಹೇಳ್ವದು ||ಪ||

ಮಾತೆ ಆರೈದಕ್ಷರಾ ಬಾವನ್ನ ಸಹಾ| ಮಾತಿನಿಂದಲಿ ಅರಿವರು

ಮಾತೆ ಅಘೋರಾದಿ ಮಂತ್ರಗಳೆಲ್ಲ| ಮಾತಿನೊಳಗೆ ಜನನಾ

ಮಾತು ಐದು ಮೂರಕ್ಕೆ ಐದವು| ಮಾತು ಎಪ್ಪತೈದು ಆದವು

ಮಾತು ಮೂರು ಆರು ಎಂಬೋದು| ಮಾತು ಇನ್ನ ಹದಿನಾರಾದುದು ||1||

ಮಾತು ಪ್ರೀತೀಲೆ ಹುಟ್ಟೋದು| ವಿವಾಹ ಲಗ್ನ ಮಾತಿನಿಂದಲಿ ಶೋಭನ|

ಮಾತಿನಿಂದಲಿ ಶಿಪಾಯಿ ಸುಭೆದಾರ| ಮಾತಿನಿಂದಲಿ ಸರದಾರ|

ಮಾತಿನಿಂದಲಿ ಜಗಳ ಬೀಳ್ವದು| ಮಾತಿನಿಂದಲಿ ಪೆಟ್ಟು ದಕ್ಕೆಯು|

ಮಾತಿನಿಂದಲಿ ಸತ್ತು ಹುಟ್ಟುವ| ಮಾತೆ ಬಹುತರವಿಹುದು ಜಗದಲೀ ||2||

ಮಾತೆ ಖೇತರಿ ಭೂಚರಿ| ಸಾಚರಿ ಷಣ್ಮುಖಿ| ಮಾತೆ ಶಾಂಭವಿ ಮೌನಿಯು

ಮಾತೆ ಧ್ಯಾನ ಧಾರಣೌ| ಸಮಾಧಿಯು| ಮಾತಿನಿಂದಲಿ ತಿಳಿವು|

ಮಾತು ಚಕ್ರ ದೈವ ಶಕ್ತಿಯು| ಮಾತು ನವವಿಧ ಭಕ್ತಿ ಹೇಳ್ವುದು|

ಮಾತು ಶ್ಯಾಂತಿ ಶಮದಮಿರುತಿದೆ| ಮಾತು ಕೇಳುತ ಯೋಗಿಯೆನಿಪರು ||3||

ಮಾತಿನಿಂದಲೆ ವುದ್ಯೋಗ| ಜಾಣ ಧಡ್ಡ| ಮಾತಿನಿಂದಲೆ ಲಾಭ ನಷ್ಟ

ಮಾತಿನಿಂದಲಿ ಮನೆ ಬಂಧು ಹಿರಿ ಕಿರಿಯರೊಳು| ಮಾತಿನಿಂದಲೆ ಮಾನ ಅಭಿಮಾನ

ಮಾತು ನಯ ನುಡಿಯಾಗಿ ನುಡಿದರೆ| ಮಾತು ಅನ್ನುವರು ಭೋಗಿ ವಳ್ಳೆವ| ಮಾತಿ ನೋಳು

ಸುಗುಣವು ಸೂಕ್ಷ್ಮವು| ಮಾತು ನಾಜೂಕಣ್ಣಾ ಲೋಕದಿ ||4||

ಮಾತಿನಿಂದಲಿ ಅಡಿವೀಶ್ಯಾ| ಸುತ್ತದೇಶ್ಯಾ| ಮಾತಿನಿಂದಲಿ ಪ್ರಭುವು

ಮಾತು ನಿರುಪಾಧಿ ತಾನೇಯಲ್ಲಾ ದಿನಸು| ಮಾತೆ ಪದ ದಂಡಕ ಮಂಗಳಾರ್ತಿ

ಮಾತು ಕನ್ನಡ ಅರೆ ಪಾರಶಿ| ಮಾತು ಇಂಗ್ರೇಜಿ ತೆಲುಗು ದ್ರಾವಿಡ ಮಾತು ಪ್ರಥ್ವಿಯ

ನರರೊಳಗೆ| ಬಹು ಮಾತಿನೊಳು ಗುರುಶಬ್ದವಂದೇ ||5||

ಮಾತು ಕೇಳೆ ಮಮತೆಯುಳ್ಳ ನಾರೀ ಶೃಂಗಾರೀ

ಮಾತು ಕೇಳೆ ಮಮತೆಯುಳ್ಳ ನಾರೀ

ನೀತಿವಂತಳಾಗಿ ನಿಜದ ಭೀತಿಯಿದ್ದರೊಳ್ಳೆದೆಂಬ ||ಪ||

ಪರ ಪುರುಷನ ಕೂಟದೊಳಗೇ ಬೆರೆದು ಬೇರೆ ಆಗದೆ

ದುರುಳ ಗುಣಗಳೆಲ್ಲ ಹೋಗಿ ಧರೆದೊಳಹುದು ಯನ್ನವಂತಾ ||1||

ಅಸ್ತಿರವು ಯವ್ವನ ಪ್ರಾಣ ಆಸ್ತಿರವು ಪುತ್ರದ್ರವ್ಯ

ಅಸ್ತಿರೆಂದು ದುರ್ಗುಣಗಳ ಶಿಸ್ತು ಹರಿದು ಬಿಡುವ ರೀತಿ ||2||

ಸಿದ್ಧ ನಿರುಪಾಧಿ ಹೊಂದಿ ಬುದ್ಧಿವಂತೆಯಾಗು ಕಾಂತೆ

ನಿದ್ದೆ ಸ್ವಪ್ನ ಜಾಗ್ರದಲ್ಲಿ ಮುದ್ದು ಅಡವಿ ಈಶೆನ್ನೊ ||3||

ಮುತ್ತು ವಡದ ಲಿಂಗಾ ಮತ್ತು ಅಡವೀಶನ

ತೊತ್ತು ಯನ್ನಲಿ ಬಹುದು ಆನಂದದಿಂದಾ ||ಪ||

ಯೇಕ ನಿಷ್ಠೆಯಲಿಂದಾ ಜೋಕೆಲಿ ಪಾದ ಸೇವೆ

ಸಕಾರವಾಗಿ ಮಾಡುವ ಕೇವಲ ಭಕ್ತಿ

ಪಾಕವಾದಂತ ನಿಜದೀ ಸಾಕು ಯನದೇ

ಕಾಯ ವಾಕ್ಕು ಮನ ಶುದ್ಧವಾಗಿ ಆನಂದದಿಂದಾ ||1||

ಅಲ್ಲಮಪ್ರಭು ಯಂದ ಬಲ್ಲ ಬಸವಣ್ಣನಂತೆ

ಉಲ್ಲಾಸದಿಂದ ಮೆರೆವನೂ

ಕೇವಲ ಭಕ್ತಿಯಲ್ಲಿ ಎಲ್ಲ ದೇಶದಿ ಬಂದಾರೆಲ್ಲ ದೇವ ಭಕ್ತರಾ

ಸೊಲ್ಲಿನೊಳು ಸುಖಿಯೆನಿಪಾ ಆನಂದದಿಂದಾ ||2||

ಒಬ್ಬನೆ ಕುಲದೀಪಾ ಮೊಬ್ಬು ಗುಣವ ಸುಟ್ಟು

ಕಬ್ಬಿನ ಸ್ವಾದದಂದದೀ ಕೇವಲ ಭಕ್ತಿ

ಹಬ್ಬಿದಾ ಮೋಹದಿ ದೊಬ್ಬಿ ಸಂಶಯವನ್ನು

ತಬ್ಬಿ ಪಾದವ ಬಿಡದೇ ಆನಂದದಿಂದಾ ||3||

ಹೆಂಡತಿಯನ್ನು ಕಾಂಬಾ ಯರವಿನ ಆಭರಣದಂತೆ

ದಂಡನಾಯಕ ನೆನಬಹುದು ಕೇವಲ ಭಕ್ತಿ

ಉಂಡು ಉಪವಾಸಿಯು ಬಳಸಿ ಬ್ರಹ್ಮಚಾರಿ

ಹಿಂಡು ಗುಣ ಬಂದು ಮಾಡೀ ಆನಂದಿಂದಾ ||4||

ಅಂಕಲಗಿ ಕಲ್ಯಾಣ ಶಂಕರನು ಅಡವಿ ಸಿದ್ಧಾ

ಕಿಂಕರನು ನಂದಿ ಈತನೂ ಕೇವಲ ಭಕ್ತಿ

ಮೊಂಕಾಗಿ ನಿರುಪಾಧಿ ಮೋಕ್ಷದೊಳಾಡುವಾ|

ಡಂಕಾ ಹೊಡೆದಂತೆ ತಾನು ಆನಂದಿಂದಾ ||5||

ಮುಕ್ತಿ ಕಾಂತಿಯ ಹಿಡಿದು ಮುಕ್ತ ಅಡವಿಯಸಿದ್ಧಾ

ತಃಕ್ತೇರ ಬಂದಾ ಸಾಕ್ಷಾತಾಃ ಶೋಭಾನವೆ

ತಃಕ್ತೇರ ಬಂದಾ ಸಾಕ್ಷಾತನ ಸಂಮುಖಕೆ

ಭಕ್ತಿ ನಾರಿಯರು ಕೂಡಿದರೂ ||ಶೋ|| ||ಪ||

ಗುರು ಸದಾಶಿವ ಬಂದ ಚರಣ ಪಿಡಿಯಿರೆ

ಹರುಷ ಆನಂದ ತುಳಕುತ ||ಶೋ||

ಹರುಷ ಆನಂದ ತುಳಕುತ ಸಾಂಬನ ಮುಂದೆ

ಪೊರಿಯೆಂದು ಸ್ತೋತ್ರ ಹಾಡಿರೇ ||ಶೋ|| ||1||

ಈಶ್ವರ ಮಾರುತಿ ಈತಾ

ಶಾಶ್ವತಯನ್ನಿರಿ ಜನರು ||ಶೋ||

ಆಶರಹಿತ ಪರಬ್ರಹ್ಮನ ಮುಂದೆ

ದೋಷ ಕಳಿಯೆಂದು ಹಾಡಿರೇ ||ಶೋ|| ||2||

ರುದ್ರಮಾರುತಿ ತಾನು ಕ್ಷುದ್ರದೈವದ ಗಂಡಾ

ನಿರ್ಧಾರವೆಂದು ನಂಬೂತಾ ||ಶೋ||

ನಿರ್ಧಾರವೆಂದು ನಂಬೂತಾ ದೇವರ ಮುಂದೆ

ಅದೇ ನೀನೆಂದು ಹಾಡೀರೇ ||ಶೋ|| ||3||

ವಿಷ್ಣು ಸ್ವರೂಪವನ ಶ್ರೇಷ್ಠ ಸಂರಕ್ಷಣಕೆ

ಅಷ್ಠ ದಿಕ್ಕಿನ ಅಧಿಪತಿ ||ಶೋ||

ಅಷ್ಠ ದಿಕ್ಕಿನ ಅಧಿಪತಿ ಯಾದಂಥವನ

ಕಷ್ಠ ಕಳಿಯಂದು ಹಾಡಿರೇ||ಶೋ|| ||4||

ಬ್ರಹ್ಮ ಸ್ವರೂಪನು ನಮ್ಮ ಹುಟ್ಟಿಶಿದಾತಾ

ಅಮ್ಮ ಅನಾದಿ ಪ್ರಭು ಈತಾ ||ಶೋ||

ಅಮ್ಮ ಅನಾದಿ ಪ್ರಭು ಈತ ಯೆಂತೆಂದು

ವಮ್ಮನದಿಂದ ಹಾಡಿರೇ ||ಶೋ|| ||5||

ನಾದ ಸ್ವರೂಪನು ವಾದ ತೀತಾನಂದ

ಶೋಧಿಸಿ ನೋಡೀ ಸಖಿಯರು ||ಶೋ||

ಶೋಧಿಸಿ ನೋಡೀ ಸಖಿಯರು ಸಂತೋಷಾ

ಮೋದ ನೀಡೆಂದು ಹಾಡಿರೇ ||ಶೋ|| ||6||

ಬಿಂದು ಲೋಕೇಶನ ಚಂದಾದಿ ಕಾಣಿರೀ

ಕಂದುಗೊರಳ ಶಿವ ಈತಾ ||ಶೋ||

ಕಂದುಗೊರಳ ಶಿವ ಈತನ ಮುಂದೆ

ತಂದೆ ನೀನೆಂದು ಹಾಡಿರೇ ||ಶೋ|| ||7||

ಶಿವಕಳೆ ಮೂರುತಿಯು ಭವ ರೋಗಹರನೆಂದು

ವಿವರಿಸಿ ನೋಡಿ ಸುಖದಿಂದಾ ||ಶೋ||

ವಿವರಿಸಿ ನೋಡಿ ಸುಖದಿಂದ ಶಂಕರನ

ಸುವಿವೇಕದಿಂದ ಹಾಡಿರೇ ||ಶೋ|| ||8||

ಗುರುವಾದ ಮಹಿಮನೀತಾ ಶರಣರರಿತುಕೊಳ್ಳಿ

ನರಕಾಯ ಧರಿಸಿ ಮರ್ತ್ಯುಕೆ ||ಶೋ||

ನರಕಾಯ ಧರಿಸಿ ಮತ್ಯುಕೆ ಬಂದಂತಾ

ಕರುಹಿನ ಮೂರ್ತಿ ಹಾಡಿರೇ ||ಶೋ|| ||9||

ಲಿಂಗ ಯೀತನುಯಂದುಅಂಗನೆಯೆರರಿವುತ

ಸಂಗಮ ಬಂದಾ ಸಭೆಯಲ್ಲಿ ||ಶೋ||

ಸಂಗಮ ಬಂದಾ ಸಭೆಯಲ್ಲಿಯೆಂತೆಂದು

ಮಂಗಳ ಕೀರ್ತಿ ಹೊಗಳಿರೇ ||ಶೋ|| ||10||

ಜಂಗಮನಾಗಿ ಸರ್ವಾಂಗ ರಕ್ಷಿಸ ಬಂದಾ

ಶೃಂಗಾರವಾದ ಶುಭ ಕೀರ್ತಿ ||ಶೋ||

ಶೃಂಗಾರವಾದ ಶುಭಕೀರ್ತಿ ಸುಖದಿಂದಾ

ಸಂಗವಾಗೆಂದು ಹಾಡೀರೆ ||ಶೋ|| ||11||

ಮಂತ್ರ ದೈವತ ನಾನು ಕಂತು ಮರ್ದನದೇವ

ಶಾಂತಾ ಮಹದೇವ ದಯವಾಗೋ ||ಶೋ||

ಶಾಂತಾ ಮಹಾದೇವ ದಯವಾಗೋ ಆಗೆಂದು

ಚಿಂತೆ ಕಳಿಯಂದು ಹಾಡಿರೇ ||ಶೋ|| ||12||

ವಿಭೂತಿ ಸ್ವರೂಪಾ ವಿಭವ ನಡಿಸಲಿ ಬಂದಾ

ಕೋಪ ರಹಿತ ಕಲಿಯಲ್ಲಿ ||ಶೋ||

ಕೋಪಾರಹಿತಾ ಕಲಿಯಲ್ಲಿ ಬಂದಂತಾ

ವ್ಯಾಪಾರ ಅರಿತೂ ನಡಿಯಿರೇ ||ಶೋ|| ||13||

ತಾನೇ ರುದ್ರಾಕ್ಷಿಯೂ ಯೇನು ಅನುಮಾನಿಲ್ಲಾ

ತಾನಾದ ನಿಜದೀ ನಲಿವುತಾ ||ಶೋ||

ತಾನಾದ ನಿಜದೀ ನಲಿವುತ ಬಂದಂತಾ

ವ್ಯಾಪಾರ ಅರಿತು ಹಾಡಿರೇ ||ಶೋ|| ||14||

ತೀರ್ಥ ಈತನುಯೆಂದು ಅರ್ಥಿಯಿಂದಿರುತಾ

ಸಾರ್ಥ ಮಾಡೆನ್ನ ತನುವನು ||ಶೋ||

ಸಾರ್ಥ ಮಾಡೆನ್ನ ತನುವನು ಯೆಂತೆಂದು

ಕೀರ್ತಿ ಪ್ರಬಲನ ಹಾಡಿರೇ ||ಶೋ|| ||15||

ಮಹ ಪ್ರಸಾದವು ತಾನೇ ಸಹಜ ಸದ್ಗುರು ಹರಾ

ವಹಿಸಿಹುದಿಲ್ಲಿ ಗುರುಲೀಲ ||ಶೋ||

ವಹಿಸಿಹುದಿಲ್ಲಿ ಗುರುಲೀಲ ಯೆಂತೆಂದು

ಮಹದೇವನಿದಿರು ಹಾಡಿರೇ ||ಶೋ|| ||16||

ಆಧಾರ ಸ್ವಾಧಿಷ್ಟಾ ಮಣಿಪೂರಕನಾಹತಾ

ಭೇದದ ಮೂರ್ತಿ ದಯವಾಗೋ ||ಶೋ||

ಭೇದದ ಮೂರ್ತಿ ದಯವಾಗುಯನ್ನುತಾ

ವಿನೋದದಿಂದ್ಹಾಡಿ ಹರಿಸಿದೇ ||ಶೋ|| ||17||

ವಿಶುದ್ಧಿ ಆಗ್ನೇಯಲೀ ಸಾಸಿರದಳ ಪಶ್ಚಿಮದಿ

ಸೋಸಿದರೀತಾನಿಹನೆಂದು ||ಶೋ||

ಸೋಸಿದರೀತಾನಿಹನೆಂದು ತಿಳಕೊಂಡು

ಕೂಸಾಗಿ ನಿತ್ಯ ಹಾಡಿರೇ ||ಶೋ|| ||18||

ನಾಲ್ಕಾರ್ಹತ್ತು ಹನ್ನೆರಡು ಹದಿನಾರೆರಡುಗುಪ್ತ

ನಿಲ್ಕದವೆರಡು ಕೂಡಲ್ಕೆ ||ಶೋ||

ನಿಲ್ಕದವೆರಡು ಕೂಡಲ್ಕಭವನಾ

ಮಾಲ್ಕೀನಕ್ಷರ ಕೂಡಿರೇ ||ಶೋ|| ||19||

ಕರ್ಮಿ ಮುಮುಕ್ಷನು ನಿರ್ಮಳಭ್ಯಾಸಿಯು

ಅನುಭವಾರುಷ ಆರೂಢ ||ಶೋ||

ಅನುಭವಾರುಷ ಆರೂಢನಾದಂಥ

ಮರ್ಮ ನಿನ್ನದೂ ಹಾಡಿರೇ ||ಶೋ|| ||20||

ನಿರುಪಾದಿ ಅಡವೀಶ ಗುರು ಅಂಕಲಗಿವಾಸ

ಹರುಷ ಆನಂದ ಕೊಡುಯಂದು ||ಶೋ||

ಹರುಷ ಆನಂದ ಕೊಡುಯಂದು ತ್ರಿಕರಣ

ಪರಿಶುದ್ಧವಾಗಿ ಹಾಡಿರೇ ||ಶೋ|| ||21||

ಮೂರ್ತಿ ಪ್ರದಕ್ಷಣವು ಚಂದಾ

ತೂರ್ಯಾತೀತ ಆನಂದ ಮಂಗಳವಾರ ||ಪ||

ಮಹದೇವನ ಬಲ ಮಾಡಿ

ಹಿಂದು ಮುಂದು ಜಂಗಮ ಭಕ್ತ ಸರ್ವರು ಕೂಡೀ

ಸಹಜ್ಯಾನಂದದಿ ನೋಡಿ

ಹರ ಹರ ಶಂಭು ಶಂಕರ ಭಜನೀ ಮಾಡೀ ||1||

ನಾನಾ ದಿನಸಿನ ವಾದ್ಯಯೀತ

ಆರಿಗೆ ನಿಲುಕನು ವೇದಕೆ ವೇದ್ಯ

ಕೂನದ ಶಿಶುವಿಗೆ ಸಾಧ್ಯಾ

ನಿಜವಾದ ಗುರುಲಿಂಗ ಜಂಗಮನೀತಾ ಆರಾಧ್ಯ ||2||

ನಿರುಪಾಧಿ ಅಂಕಲಗಿವಾಸ

ಐವತ್ತಾರು ದೇಶದೊಳು ಯೀತನೆ ಯೀಶ್ಯಾ

ಪರತರ ಅಡವೀಸಿದ್ಧೇಶ್ಯಾ

ಪೃಥ್ವಿಯೊಳಗೆ ನೋಡಲಿಕೆಯಿದೇ ಕೈಲಾಸ ||3||

ಮೊಲೆಯೊಳಿಹ ವಸ್ತು ಮೂಲವೋ ಮೋಕ್ಷಕೆ

ಕೀಲುಯಿಹುದು ತನ್ನೊಳು

ಕಾಲ ಕಾಲದ ದೇವನೆನುತಲಿ

ಬಾಲ ಹೊಗಳಿದೆ ವೇದ ವಚನದೀ

ಶೂಲಿ ಶಾಖವು ಸಾಧುಯನುತಲಿ

ಅಲಿಯದಿ ನಾ ಹಾಡಿ ಹರಶಿದೇ ||ಪ||

ಭಕ್ತಿ ಜ್ಞಾನ ವೈರಾಗ್ಯ ಯುಕ್ತಿಯ ಕಾಣುತಾ

ಮುಕ್ತಿಗೊಡೆಯನೆಂದೆನೋ ||ಅ.ಪ||

ಸುಖದ ರೂಪನು ಸೂಕ್ಷ್ಮ ಅವತಾರ

ವಿಕಳ ಮತಿಗಳು ತಿಳಿಯಲರಿಯರು

ಅಖಿಳ ವಸ್ತು ತನ್ನ ಕಾರಣ

ಅಕಳಂಕಾತ್ಮ ವಿಚಾರ ಬಲ್ಲಗೆ ||1||

ಮೂರಾರು ನವ ಮುವತ್ತಾರು

ಬಾವನ್ನ ಯಿನ್ನೂರ್ಹದಿನಾರಾದುದೂ

ಕಾರಣವು ತಾನೆಂದು ಶೃತಿಯಿರೆ

ಪೂರಣಾನಂದಾಗಿ ನುತಿಶಿರೆ

ಸೇರುವೆಯ ಅರಿದಂತ

ಬಲ್ಲಗಾರಗೀನುಡಿ ಅಮೃತ ಹನಿಯಾ ||2||

ಅಮನಸ್ಕತೂರ್ಯದ ಮನೆಯೊಳು ಮಾಲಿಯು

ಸುಮನಿಸಲು ಈ ದೇಹ ಗೃಹದೊಳು

ವುಮಾಪತಿಯು ತ್ರಿಕೋಣ ತಾರಕಾ

ಅಮಮ ಸಾಂಖ್ಯದಿ ಲೋಕವರಿಯಲು

ರಮಣ ನಿರುಪಾಧಿ ಅಡವೀಶಿರುವದು ||3||

ಯಚ್ಚರ ಹೇಳಿ ವಿಭಕ್ತಿಯ ತಾಳಿದಾ ಎಚ್ಚರಿಕೆಚ್ಚರಿಕೆ|

ನಿಶ್ಚಯ ಈ ಮಾತು ನಿಜ ನಿಜವೆನ್ನಿರಿ ಎಚ್ಚರಿಕೆಚ್ಚರಿಕೆ ||ಪ||

ನಂಬಿದ ಭಕ್ತರಿಗೆ ಭಯವು ನಡಿಸ್ಯಾನು ಎಚ್ಚರಿಕೆಚ್ಚರಿಕೆ|

ನಂಬಿದ ಜನಗಳ ನಷ್ಟ ಮಾಡಲೇ ಬಂದ ಎಚ್ಚರಿಕೆಚ್ಚರಿಕೆ|

ಯಿಂಬು ಮಾಡಲಿಕ್ಕೆ ಇದೇ ಸಮಯವು ತಿಳಿಯದೆಚ್ಚರಿಕೆಚ್ಚರಿಕೆ|

ಶ್ರೀಸಾಂಬನ ಮರೆತರೆ ನರಕವ ಶೃತಿ ಶಿದ್ಧಾ ಎಚ್ಚರಿಕೆಚ್ಚರಿಕೆ ||1||

ಗುರು ಲಿಂಗ ಜಂಗಮ ಅರಿವಿಲಿ ತಿಳಕೊಳ್ಳಿ ಎಚ್ಚರಿಕೆಚ್ಚರಿಕೆ|

ಸ್ಥಿರವಲ್ಲ ಈ ಕಾಯಾ ಈಗಲೋ ಆಗಲೋ ಎಚ್ಚರಿಕೆಚ್ಚರಿಕೆ|

ನರ ಜನ್ಮವೇ ಮುಕ್ತಿ ಅಧಿಕಾರಿಯಾಗ್ವದು ಎಚ್ಚರಿಕೆಚ್ಚರಿಕೆ ||2||

ಶ್ರೀ ನಿರುಪಾಧಿಯು ಅಂಕಲಿನಾಥನು ಎಚ್ಚರಿಕೆಚ್ಚರಿಕೆ|

ಕಾನನದೊಳು ಮೂಡಿದ ಅಡವೀಶನು ಎಚ್ಚರಿಕೆಚ್ಚರಿಕೆ|

ಸ್ವಾನುಭಾವದ ಸುಖ ನೀಡಲಿ ಬಂದಾನೆ ಎಚ್ಚರಿಕೆಚ್ಚರಿಕೆ|

ಯೇನೇನು ಸಂಶಯವಿಲ್ಲ ಶ್ರೀಗುರು ಸಿದ್ಧಾ ಎಚ್ಚರಿಕೆಚ್ಚರಿಕೆ ||3||

ಯಂತಾ ಕರುಣಿ ನೋಡೇ ಅಡವಿಸಿದ್ಧಾ

ಯಂತಾ ಕರುಣಿ ನೋಡೇ

ಯಂತಾ ಕರುಣಿಯು ಚಿಂತೆ ದೂರ ಮಾಡಿ

ಪ್ರಾಂತಿನ ಪ್ರಭೆಮೂರ್ತಿ ಹಂತೇಲೇ ಯಳಕೊಂಡಾ ||ಪ||

ಐವತ್ತಾರು ದೇಶದೀ ನಾಮದ ಕೀರ್ತಿ

ಸ್ವಯಮೂರ್ತಿ ಯನಿಸುವದೂ

ಕೈವಲ್ಯ ಕೈಲಾಸ ಸ್ವರ್ಗ ಮೂರು ತನ್ನ

ವಿವರಿಸಿದರೆ ಕೆಟ್ಟ ಭವದ ಕಳಿಯಲಿಕ್ಕೆ ||1||

ಬಂದ ಜಂಗಮ ಭಕ್ತರಾ

ಊಟ ಉಡಗಿ ಚಂದ ನೋಡುತಲಿ

ಕಂದಗೆ ಹಾಲ್ತುಪ್ಪ ಹಣ್ಣು ಕೊಟ್ಟಂತೆ

ಬಂದವರ ಇದ್ದವರ ಒಂದೆಂದು ಕಾಣುವಾ ||2||

ನಿರುಪಾಧಿ ನಿಶ್ಚಯವೂ

ಮೂರು ಸಲ ಅರುವಿಲಿ ಜೈಸಿದನೂ

ಗುರುಲಿಂಗ ಜಂಗಮ ಅನುಭವಿಯೀತಾ

ಪರಿ ಪರಿ ವಿಧದಿಂದ ಪೊರೆವ ಜೀವಿಗಳಾ ||3||

ಯಾಕೆ ಧೈರ್ಯವ ಬಿಡುವೆ ಜೀವನೇ

ಲೋಕ ವಂದ್ಯನು ಅಡವಿ ವಿಪಾಶ್ಚನು

ಬೇಕೆನುಸುತಿಹ ಸುಖವ ನಡಸುವಾ

ಯೇಕೊ ದೇವನೆ ನಂಬಲಾರದೇ ||ಪ||

ನಿನ್ನ ಪುಣ್ಯದ ಪರಿಯು ನಡವದೂ

ಯೆನ್ನುತಿಹ ವಾಕ್ಯ ಬಿಡದಲೆ

ನಿನ್ನ ವಳಗೆಯೂ ನೀನೆ ಅರಿದರೆ

ಮನ್ನಿಸುವ ತನ್ನ ಮನಸಿನಂತೆಯು ||1||

ಮೂರ್ತಿ ಧ್ಯಾನವ ಬಿಡದಿ ನಿತ್ಯದಲೀ

ಕೀರ್ತಿ ಹೊಗಳ್ಳೆ ಮೂರು ಕಾಲದಿ

ಅರ್ಥಿ ಮಾಡುವ ಹರುಷ ಮಾಡುವ

ಕರ್ತು ಈತನೆ ಕಲ್ಪವೃಕ್ಷನೇ ||2||

ನಿರುಪಾಧಿಯ ಮೊದಲು ತಿಳಿದರೇ

ಗುರುವು ಲಿಂಗ ಜಂಗಮಾದುದೂ

ಅರಿಯ ನೀನಾಧಾರ ಅದೇನೀ

ಗುರುತಿನೊಳು ಮೈ ಮರತು ಮತ್ತೆ ||3||

ಯಾಕೆ ಅಪ್ಪಣೆಯಿಲ್ಲ ಎಲೆ ದೇವನೇ

ನೀ ಕರುಣಿ ಕೃಪೆ ಮಾಡು ಸೇವಕನು ನಾನು ||ಪ||

ಜಾತಿಗಾರನು ಒಬ್ಬ ಬಗೆಬಗೆಯ ವೇಷದಲಿ

ಆತುರದಿ ತಿರುಗುವನು ನಿತ್ಯನಿತ್ಯ

ಪ್ರೀತಿಯಿಂದಲಿ ಅವಗೆ ಮಾನ ಮನ್ನಣೆ ಕೊಟ್ಟು

ಪ್ರೀತಿವಂತರು ನೋಡಿ ರಕ್ಷಿಸುವರಯ್ಯಾ ||1||

ಗಿಡ ಮರಾ ಕ್ರಿಮಿ ಕೀಟ ಪತಂಗಾ ಪಕ್ಷಿ ಕುಲ

ಬೆಡಗಿನ ಮೃಗ ಪಶುವು ನರದೇಹ ತಾಳೀ

ವಡಿಯ ನಿನ್ನ ಧ್ಯಾನ ಮರತು ತಿರತಿರಿಗ್ಹುಟ್ಟಿ

ಕಡಿಗೆ ನಿನ್ನನು ಸುಖವ ಬೇಡ ಬಂದೇ ||2||

ವೇಷಧಾರಿಗೆ ತ್ಯಾಗಿ ಹರುಷ ಮಾಡಿದ ಹಾಂಗೆ

ಯೀಶ ನೀಯನ್ನ ಆನಂದ ಮಾಡಿದರೇ

ಏಸು ಕಾಲದ ಸಂಶಯ ಹರಿದು ನಿರುಪಾದ್ಯಾಗಿ

ದೋಷ ಹೋಯಿತೆಂಬೆ ಅಡವೀಶ ದಯನಿಧಿಯೇ ||3||

ಯೇನೆ ಪಾರ್ವತಿ ನಿನ್ನಾ| ಹೀನ ಭಾವನೆ ನಿನಗೆ

ಮಾನವೇನೆಲೆ ಶಾಂಭವಿಯೇ| ಗ್ನಾನಿಗಳ ನೋವು ||ಪ||

ಸಾಧು ಸಂಗಳೆ ನೀನು ಸಕಲ ಆಧಾರಿಯು

ಭೇದವೇತಕೆ ನಿನಗೆ ಯನ್ನೊಳು ತಿಳಿಸೌ

ಭೇದವಾಗದೆ ಮಹಾ ಕೇವಲ ಮುದವಾಗು

ಹಾದಿಯೊಳರ್ಥಿ ಮಾಡು ಹರಣವೇ ನೀನು ||1||

ಮುಕುತಿ ಕಾಂತಿಯೆ ನೀನು ಮೂಢೆಯಾದರೆ ನಿನ್ನಾ

ಶಕುತಿ ನಾಮಕೆ ಒಟ್ಟಾವೇ ನಿಂನೊಳು ತಿಳಿ

ಭಕುತಿ ಜ್ಞಾನ ವೈರಾಗ್ಯ ಭಾಪುರೆ ವೀರರ

ಸುಖ ದುಃಖ ನಿನ್ನದಲ್ಲವೇ ಹರಣವೇ ನೀನೂ ||2||

ನಿರುಪಾಧಿ ಅಡವೀಶಾ ನಿಜರೂಪನಹುದೆಂದು

ಮರೆಯ ಹೊಕ್ಕೆನು ಮೋಕ್ಷಕೆ ನಿನ್ನೊಳು ತಿಳಿ

ಚರಣ ಬಿಡು ಬಿಡು ನಿನ್ನಾ ಚೇಷ್ಟಿಗಂಜದ ಸಿದ್ಧಾ

ಕರುಣೆಯಾಗುವದೊಳ್ಳಿತೆ ಹರಣವೆ ನೀನು ||3||

ಯೋಗಿ ನಿನ್ನ ದಿವ್ಯ ಪಾದವ ರಾಗದಿಂದಲಿ ಭಜಿಪಗೇ

ಭೋಗ ವೀಯ್ಯಲಿ ಕರುಣ ಸಾಗರ ಶ್ರೀಗುರುವೆ ಲಿಂಗ ಜಂಗಮಾ ||ಪ||

ಸ್ಥೂಲ ಸೂಕ್ಷ್ಮವು ಕಾರಣಾಂಗದ ಮೂಲವರಿದಂತೆ ಮಾರುತೀ

ಆಲಯದಿ ಶಿಶು ನಿತ್ಯ ಲೀಲ ಹೊಗಳಿದೆ ಕರ್ತುವೇ

ಜ್ಯಾಲ ನಿನ್ನದು ಲೋಕ ಮುಚ್ಚದೆ ಕೀಲು ಅರಿದಂತೆ ಕುಶಲಿಗೇ

ಪಾಲಿಸೆನ್ನನು ಪಾವನಾತ್ಮನೆ ಕಾಲಕಾಲದ ಮಹಿಮನೇ ||1||

ಶಕ್ತನಾಗಲು ನಿನ್ನ ವಚನಕೆ ಭಕ್ತ ವಸ್ತ್ರಲಂಕಾರವೂ

ಮುಕ್ತಿ ಮಾರ್ಗಕೆ ಹೋಗುವಂಥಾ ಯುಕ್ತಿಗಲಿಸುವೆ ನೀನೆಲ್ಲಾ

ವ್ಯಕ್ತ ಮಾರುತಿ ವಿರತಿ ವಜ್ರದ ತಕ್ತಿನಲ್ಲಿ ಸೆಳೆದುಕೋ

ಯುಕ್ತಿ ಕಳವುತ ವೀರಶೈವದ ಶಕ್ತಿ ಧೈರ್ಯವ ನೀಡುವೇ ||2||

ನಂಬಿ ಭಜಿಸಲು ತಿಳಿದ ಪುರುಷಗೆ ಶಂಭು ನೀನೇ ಶಂಕರಾ

ಅಂಬಪತಿ ಅರಣ್ಯವಾಸದಿ ಯಿಂಬು ಮಾಡಿಹ ಲೀಲವೂ

ಕುಂಬಿನಿಯರ ಸಲಹಲೋಸುಗ ಅಂಬರದಿ ಧರೆಗಿಳಿದು ತಾ

ಶುಂಭು ಮನುಜರು ಕೆಟ್ಟು ಹೋದರು ಯಂಬುತಲಿ ಬಂದ ಮಹಿಮನೇ ||3||

ನಿನ್ನ ಆಟದ ಗುರುತು ತಿಳಿಯಲು ನಿನ್ನ ವಂಶಕ್ಕದೇ

ಭಿನ್ನ ಭಾವಿಯು ಯೇನು ಬಲ್ಲನು ಚನ್ನ ಶ್ರೀಗುರುವಾದನಾ

ತನ್ನ ತಾನೇ ನೋಡಿ ಚಿನ್ಮಯದೇ

ಘನ ಪರಂಜ್ಯೋತಿಯು ಯೆನ್ನುತಿಹ ತ್ರಿಕಾಲದೀ ||4||

ಜ್ಯೋತಿ ರೂಪನು ನೀನು ಆಡುವ ಮಾತುಗಳು ಮಾಣಿಕವು

ಕೋತಿ ಬಲ್ಲದೆ ರತ್ನದ್ಹಾರವಾ ಪ್ರೀತಿಯಿಂದಲಿ ಹಾಕಲಿ

ಆ ತೆರದಿ ನಿನ್ನ ನಿಜವರಿಯಲೀ ಆತುರವೆ ಕೆಟ್ಟ ಭವಿಗೇ

ಸೋತೆ ನಿನ್ನಯ ವಾಕ್ಕು ಹಸನ್ಮುಖ ನೂತನದ ನುಡಿ ನಂಬಿದೇ ||5||

ಕರುಣಿ ನಿನ್ನಯ ಅಂತರಾತ್ಮನ ಬಿರಿದು ಸ್ತುತಿಪ ಜ್ಯಾಣನು

ಬರನು ಯಂದಿಗೆ ನರಕ ದರುಶನ ಮರಿಯಾ ಕೈವಲ್ಲಾಹುದು

ಸ್ಥಿರವು ಸ್ಥಿರವು ಸ್ಥಿರವುಯಂದು ವರಲುವವು ವೇದಾಗಮ

ಪೊರಿಯೆ ಯೆನ್ನನು ಶರಣ ಸಾಧುವಾ ಮೊರೆ ಹೊಕ್ಕೆನು ಸೇವಕಾ ||6||

ಒಡಿಯ ನಿನ್ನಯ ದಿವ್ಯ ಪಾದದ ಸಡಗರೆಲ್ಲಿಯೂ ಕಾಣೆನು

ಯಿಡು ಕರುಣ ಆನಂದ ದೃಷ್ಟಿಯ ಮೃಢನು ನೀನೇ ಎಂದೆನು

ಪೊಡವಿಯೊಳಗೆಯು ದೇಹ ವಿಹಪರಿ ಬಿಡನು ನಿನ್ನಯ ಸ್ಮರಣೆಯು

ಖಡಕು ಬೇಡುವೆ ಬಂಧು ಬಳಗದಿ ಕಡಿಗೆ ನಿನ್ನೊಳು ಐಕ್ಯವಾ ||7||

ಪಿಡಿ ಸಂಸಾರ ಶರಧಿ ದಾಂಚಲಿ ಬೇಡಿದಾ ಶ್ರೀಪಾದ ಕಾಯನು

ನೋಡಿ ಕಟ್ಟದೆ ಅಂಜಿ ಅಳುಕದೆ ಆಡುತಲಿ ನಾ ದಾಟುವೇ

ಕೂಡಿ ಕೂಡದ ಹಾಂಗೆ ಸರ್ವದಿ ಮಾಡಿ ಮಾಡಿದ ರೀತಿಯೂ

ಕಾಡಿದೆನು ನಾ ನಿನ್ನ ಸ್ತೋತ್ರದಿ ಗಾಡಿಕಾರ ಶಂಭುವೇ ||8||

ಈಶ ಅಂಕಲಗಿ ಬೆಳ್ಳಾರಿಯ ಮಠವಾಸ ಅಡವಿಯ ಸಿದ್ಧನೇ

ಆಸೆ ಇಲ್ಲದಾನಂದ ಮಾರುತಿ ದೇಶದೋಳ್ ನೀ ನಿರುಪಾಧಿಯು

ದೋಷ ಹರಿಯಂದು ನಿನ್ನ ಹೊಗಳಿದೇ ಯೇಸು ಕಾಲದ ತೊತ್ತುನಾ

ವಾಸವಾಗೆನ್ನ ಮನದ ಕೊನೆಯೊಳು ರಾಶಿದೈವವ ವಲ್ಲೆನೂ ||9||

ರಾಜ ಗುರೂ ರಾಜ ಗುರೂ

ಶರಣ ಪಕಡೊ ತುಂ ಪೂರ್ಣ ಗುರೂ ||ಪ||

ರಾಜ ಗುರು ಹುಷಾರ ಹೋಕೋ ಧ್ಯಾನ ಕರೋ ಘನ

ಖುಷಿ ಅಮಲ್ಮೇ ಬೈಠೇ ತು ಮಹಾ ||1||

ಅಂಗ ವಾಚ ಮನ ತಿನೋ ವುನ್ಕಾ

ಲಿಂಗ ಏಕ ತುಂ ಸಂಗ ಹರಾಮಹಾ ||2||

ನಿರುಪಾಧಿ ಅಡವಿ ಪಾಶ್ಚಕು ಕರಾರು ಹೋಕೋ

ಧ್ಯಾನ ಕರೋ ಮಹಾರಾಜ ಗುರು ||3||

ಶ್ರೀಗುರು ಅಡವೀಶ ಯೋಗಿ ಸಾಕ್ಷಾತನು ಹೊಯ್ಯೊಲೊ ಡಂಗುರವ|

ರಾಗ ರಹಿತ ನಿಸ್ಸೀಮ ಈತನೆಂದು ಹೊಯ್ಯೊಲೊ ಡಂಗುರವ ||ಪ||

ಕಾಮ ಸಂಹರ ಕರುಣಿ ಕಲ್ಪವೃಕ್ಷನು ಹೊಯ್ಯೊಲೊ ಡಂಗುರವ|

ಸೋಮಕೋಟೆ ಪ್ರಭೆ ಪರಬ್ರಹ್ಮನೀತನು ಹೊಯ್ಯೊಲೊ ಡಂಗುರವ ||1||

ನೀತಿ ಪುರುಷನೀತಾ ನಿಜವಾದ ಸಾಧುವಾ ಹೊಯ್ಯೊಲೊ ಡಂಗುರವ|

ನಾಥ ನಿಶ್ಚಯ ನರಗೆ ಮುಕ್ತಿಯ ತಿಳಿಸುವ ಹೊಯ್ಯೊಲೊ ಡಂಗುರವ ||2||

ಪಾತಕರರಿಯರು ಪರಮ ಯೋಗೀಶನ ಹೊಯ್ಯೊಲೊ ಡಂಗುರವ|

ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||3||

ಶಂಕರನಾಗಿ ಕಿಂಕರ ನುಡಿಯಿಂದಿಹ ಹೊಯ್ಯೊಲೊ ಡಂಗುರವ|

ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||4||

ಗುರುವಿನ ಬಿಟ್ಟರೆ ಗತಿಯಿಲ್ಲ ನಂಬೋ ಹೊಯ್ಯೊಲೊ ಡಂಗುರವ|

ಅರುವಿಲೆ ತಿಳಿದರೆ ಆನಂದವಾಗ್ವದು ಹೊಯ್ಯೊಲೊ ಡಂಗುರವ ||5||

ಶಿವಯೋಗಿ ಈತನು ಭವರೋಗ ವೈದ್ಯನು ಹೊಯ್ಯೊಲೊ ಡಂಗುರವ|

ಸುವಿವೇಕದಿಂದಲಿ ಸಾಕ್ಷಾತ ಬಂದಾನೆ ಹೊಯ್ಯೊಲೊ ಡಂಗುರವ ||6||

ನಿರುಪಾಧಿ ಗುರು ಈತನು ಪರಿಪರಿ ಲೀಲನು ಹೊಯ್ಯೊಲೊ ಡಂಗುರವ|

ವರ ಅಂಕಲಿನಾಥ ಅಡವೀಶ್ಯಾಯೆನಿಸಿದ ಹೊಯ್ಯೊಲೊ ಡಂಗುರವ ||7||

ಶಿವನೆ ನೀನೋ ನೀನೋ ಶಿವನೇ ವಿವರ ತಿಳಿದವಗೆ ಗುರುವೇ

ಭವವ ಕಳಿಯೆ ನರ ಶರೀರ ತಾಳಿ ಬಂದಿಹೇ ||ಪ||

ನಡೆಯು ನುಡಿಯು ವಂದೆಯಾದ ಸಡಗರೆಲ್ಲಿಯೂ ಕಾಣೆ

ವಡಿಯ ಇಲ್ಲಿ ಕಂಡು ಸುಖದಿ ಹಾಡಿ ಹರಸಿದೇ

ಬಿಡದೇ ನಿನ್ನ ಸ್ತೋತ್ರ ಘಟವು ಪೋಡವಿಲೀಹ ಪರಿಯಾಯೇಕ

ದೃಢವಾ ಕೊಟ್ಟು ನಡಿಸು ಯೆಂಬೊ ಬಯಕೆ ಯನ್ನದೂ ||1||

ಯೇಸು ದೇಶ ತಿರುಗಿದವರ ಸೋಸಿ ನೋಡುತಲೀತ

ಯೋಗೀಶ್ಯಾನೆಂದು ಪ್ರಥಮರೆಲ್ಲ ನುಡಿವ ನುಡಿಗೇಳಿ

ಪೋಷಿಸೆಂದು ಬೇಡಿಕೊಂಬೆ ಕೂಸು ನಿನ್ನವ ನಾನು

ಯೇಸು ಕಾಲದಿಂದ ತೊತ್ತು ನುತಿಸ ಬಂದಿಹನೇ ||2||

ಪಿಡಿ ಸಂಸಾರದೊಳು ಯೆನ್ನ ಕೂಡಿ ಕೂಡದ ಹಾಗೆ

ನೋಡಿ ರಕ್ಷಿಸೈಯ್ಯಾ ನಿನ್ನ ಸೇವಕನು ನಾನು

ಆಡಲೇಕೆ ಬಾಯಿ ತೆರೆದು ನಾಡೊಳಧಿಕನೇ ನಿನಗೆ

ಬೇಡಿದಂತಾ ವರವ ನಡಸಲಿಕ್ಕೆ ಅಧಿಕಾರೀ ||3||

ಬಾಳ ಬಲ್ಲವರ ತೊತ್ತು ಆಳಿನಾಳಯ್ಯಾ ಅಣುವೂ

ಕೇಳುಯೆನ್ನಾ ಬಿನ್ನಪವನು ಹೇಳಲಾರಿಗೇ

ಆಳಿದನೆ ಆರ್ಥಿಮಾಡು ಬಾಳ ಲೋಚನಾ ತಾನೇ

ಹೇಳಲೇನ ತಿಳಿದು ನೀನು ರಕ್ಷಿಸೈದೇವಾ ||4||

ವಂದೆ ಕಾಂಕ್ಷೆಯಿಹದು ಜಗದಿ ಬಂದೆ ಅರುವೆಂದೂ ಯಿಲ್ಲೀ

ಚಂದದಿಂದ ನೋಡಿ ಹೊಗಳೇ ಮುಕ್ತನಾದೆನೋ

ತಂದೆ ತಾಯಿ ಬಂಧು ಬಳಗಾಯಂದು ಮರೆ ಹೊಕ್ಕೆದಯದಾ

ಸಿಂಧು ಅಡವಿಸಿದ್ಧ ತಾನೆ ನಿರುಪಾಧಿ ||5||

ಶಿವಲಿಂಗಾ ಸ್ತ್ರೀಲಿಂಗಾ ಮೂರು ಮಾಲಾ ಗುರುಲಿಂಗ ಜಂಗ್ಮಾದನೇ

ಭವ ರೋಗಹರ ತಂದಿ ತಾಯಿ ತಾನೂ ಸ್ತ್ರೀಯಾಗಿ ಪುತ್ರಾದನು

ವಿವರ ತಿಳಿಯಲಿ ಪುತ್ರಿ ಅಜ್ಜ ಆಯಿ ನಿರುಪಾಧಿ ಅಡವೀಶ್ವರ ||1||

ಪರಮ ಗುರುವರ ನಂದಿ ನಾಥ ಪ್ರಭುವೇ ಮೋಕ್ಷಕ್ಕೆ ಅಧಿಕಾರನೇ

ವರಣ ತಿಳಿಯಲು ಮೂರು ಮೂರ್ತಿಗರಿದೂ ಜಂಗಮಕೆ ಭಕ್ತಾಗಿಯೇ

ಯಿರವು ತಿಳಿಯಲ್ಕರಿದು ರೂಪ ಧರನೇ ನಿರುಪಾದಿ ಅಡವೀಶ್ವರ ||2||

ಕಾಂತಾ ಕಾಂತಿಯು ಕಾಂತಿಯಲ್ಲಿಯಿಡಲೂ ಸದ್ಗುರುವು ತಾನಾದನೇ

ಶಾಂತಾ ಶಾಂತಿಯೇ ಶಾಂತದಿಂದ ಬೋಧ ನಿನಾದ ನಿಜವಾದನೇ

ಅಂತ್ಯ ಆದಿ ಮದ್ಯ ರಹಿತ ಗುರುವೇ ನಿರುಪಾಧಿ ಅಡವೀಶ್ವರ ||3||

ಅತೀತ ಆನಂದೈಕ್ಯ ಪದದ ನೆರವೇ ಕರ್ಮಿ ಮುಮುಕ್ಷಾದನೇ

ಹಿತದಿ ಅರಿಯಲು ಸಾಧಕನು ಭವಿಯಾಗಿ ಆರೂಢ ಮಹಿಮಾದನೇ

ಗತಿಯಿಂ ನೋಡಲು ಎಂಟು ಮೂರ್ತಿ ಕೀರ್ತಿ ನಿರುಪಾಧಿ ಅಡವೀಶ್ವರ ||4||

ನಾಥನಾಥರ ಸಲಹಲಿಕ್ಕೆ ಖ್ಯಾತಾ ಅರವು ಅಹಲ್ಲಾದನೇ

ನೀತಾ ನೀತದಿ ಹೋಗದ ಜ್ಯಾತಿ ರಹಿತಾ ಅಹುದಲ್ಲದೊಳು ಭೇದ್ಯನೇ

ಮಾತು ಮಾತ್ರದಿ ಜಗದ ರಚನೆ ಮಾಡೀ ನಿರುಪಾಧಿ ಅಡವೀಶ್ವರ ||5||

ವಾ ಆದಿ ಸಾ ಅಂತ್ಯ ಪ್ರಣಮದೊಳಗೇ ಆಚಾರ ಲಿಂಗಾದನೇ

ಬಾ ಆದಿ ಲಾ ಅಂತ್ಯ ಮನುಗಳಲ್ಲಿ ಗುರುಲಿಂಗ ತಾನಾದನೇ

ಡಾ ಆದಿ ಪಾ ಅಂತ್ಯ ದಳದ ಶಿವಲಿಂಗ ನಿರುಪಾಧಿ ಅಡವೀಶ್ವರ ||6||

ಕಾ ಆದಿ ಟಾ ಅಂತ್ಯ ಬೀಜದೊಳಗೇ ಜಂಗಮ ಲಿಂಗಾದನೇ

ಆ ಆದಿ ಅಃಕಡೆಯು ಮೂಲದೊಳಗೇ ಪ್ರಸಾದ ಲಿಂಗಾದನೇ

ಹಂ ಆದಿ ಕ್ಷಂ ಕಡೆಯು ಎರಡರಲ್ಲಿ ಮಹ ಲಿಂಗ ನಿರುಪಾಧಿ ಅಡವೀಶ್ವರ ||7||

ಸಕಲ ತಾಪತ್ರಯದ ಭಾರ ನಿನ್ನಗ್ಹತ್ತಿದೆ

ಸುಖದಿ ನಿನ್ನ ಧ್ಯಾನ ಮಾಡೋದೆನಗೆ ಹತ್ತಿದೆ ||ಪ||

ಮಡದಿ ಮನೆಯು ಪಶುವು ಚಿಂತೆ ನಿನಗೆ ಹತ್ತಿದೆ

ಷಡು ಚಕ್ರಂಗಳ ಸುಳುವು ಕಾಣೋದೆನಗೆ ಹತ್ತಿದೆ

ಸಡಗರಾನಂದ ಚಿಂತೆ ನಿನಗೆ ಹತ್ತಿದೆ

ಅಡಿಯ ಧ್ಯಾನ ಮಾಡ ಲಹರಿ ಯನಗೆ ಹತ್ತಿದೆ ||1||

ಪುತ್ರ ಪೌತ್ರನ ಮದುವೆ ಚಿಂತೆ ನಿನ್ನಗ್ಹತ್ತಿದೆ

ನಿತ್ಯ ನಿನ್ನ ನಾಮ ಸ್ತುತಿಪದು ಯನಗೆ ಹತ್ತಿದೆ

ಅತ್ಯೆ ಮಾವ ಅಳಿಯನೆಂಬೊದು ನಿನಗೆ ಹತ್ತಿದೆ

ಚಿತ್ತ ನಿನ್ನೊಳಗಾಗಿ ನಿಲ್ಲೊದೆನಗೆ ಹತ್ತಿದೆ ||2||

ಮುತ್ತು ಭಂಗಾರ ಬೆಳ್ಳಿ ಅರವಿ ನಿನ್ನಗ್ಹತ್ತೆದೆ

ಕರ್ತು ಮುಕ್ತಿ ಪಾಲಿಶಂಬುದೆನಗೆ ಹತ್ತಿದೆ

ಮಿಥ್ಯದಾಟ ಮಾಡಿ ತೋರೊದು ನಿನಗೆ ಹತ್ತಿದೆ

ಸತ್ಯವಾದ ವಸ್ತು ಬೆರೆವದು ಯನಗೆ ಹತ್ತೆದೆ ||3||

ಕಾಲ ಕಾಲದಲ್ಲಿ ಕಾವದು ನಿನಗೆ ಹತ್ತಿದೆ

ಲೋಲ ಮೂರ್ತಿಯಾಗಿ ಚರಿಪೊದೆನೆಗೆ ಹತ್ತಿದೆ

ಮಾಲಿ ಹಾಕಿ ಮೆರೆಸುವದು ನಿನಗೆ ಹತ್ತಿದೆ

ಕೀಲನರಿದು ಕೊಂಡಾಡೋದು ಯನಗೆ ಹತ್ತಿದೆ ||4||

ಚರಣ ಧೂಳೀ ನನ್ನವೆಂಬೊದು ನಿನಗೆ ಹತ್ತಿದೆ

ಗುರುವು ಅಂಕಲಗೀಶನೆಂಬೊದು ಯನಗೆ ಹತ್ತಿದೆ

ಪರಿ ಪರಿಯು ಕಾಯ್ದು ಬರುವದು ನಿನಗೆ ಹತ್ತಿದೆ

ಅರಮರಿಲ್ಲಾ ನಿರುಪಾಧಿ ಯನಗೆ ಹತ್ತಿದೆ ||5||

ಸ್ವರ್ಗ ಕೈಲಾಸ ಕೈವಲ್ಯಯಿದೆ ನಿಶ್ಚಯವೂ

ಭಾರ್ಗೋದೇವೀಶ್ವರಿ ಸದಾ ಶಿವ ಅಡವೀಶ್ಯಾ ||ಪ||

ಮೇಲೆಂಬ ಬಗೆ ನಾನು ಕಂಡಿಲ್ಲಾ ಕೇಳಿದುದೂ

ಲೋಲ ಮಾರುತಿ ನೋಡಿ ಸಾಕ್ಷಾತನೆಂದೇ|

ಕೀಲಿಹುದು ಯಿಲ್ಲಿ ಶೃತಿಯೊಳಗೆ ಪೇಳಿದ ಹಾಂಗೇ

ಮೂಲ ಪ್ರಮಥರ ವಾಕ್ಯದಂತೆ ಅಹುದಹುದು ||1||

ನಿಂತುದೇ ಕ್ಷೇತ್ರ ನುಡಿದುದೇ ಮಂತ್ರವೆಂತೆಂದೂ

ಸಂತೋಷದಿಂದ ಗುರುಭಕ್ತರ‍್ಹಾಡಿಹರ

ಕಾಂತಿ ತ್ರೈಲೋಕದೊಳು ಬೆಳಗಿಹುದು ಅದು ಕಂಡು

ಅಂತ್ಯ ಮಧ್ಯ ಆದಿ ರಹಿತನಃ ಪ್ರತಿಮಾ ||2||

ನಿರುಪಾಧಿ ಗುರು ಬ್ರಹ್ಮದೊಳು ನಾದಬಿಂದು ಕಳೆ

ಗುರುಲಿಂಗ ಜಂಗಮ ಹರಿಹರ ವೇದ ಮುಖನೂ

ಪರಿಪರಿಯ ತ್ರಿಪುಟಿಗಳು ಪರಮ ಸೂತ್ರಗಳೆಂದು

ವರದ ವಚನವ ನೋಡಿ ನಿಜ ನಿಜವುಯೆಂದೇ ||3||

ಸದ್ಗುರುವು ಆದಂತ ವಿಧ ಮೂಢ ಮತಿ ಅರಿಯಾ

ಸದಮಲಾನಂದ ಸಾಕ್ಷಾತ ಅಡವೀಶ್ಯಾ ||ಪ||

ಭವಿ ಭಕ್ತರೇಕಾದ ಸುದ್ದಿಯನು ಕೇಳುತಲಿ

ಸುವಿವೇಕದಿಂ ಪತ್ರಿ ವೃಕ್ಷದಡಿಯಿರುವಾ

ಭುವಿಯ ಮೃತ್ತಿಕೆ ಲಿಂಗ ಮಾಡಿ ಕರದೊಳಗಿರಿಸಿ

ವಿರಿಸಲು ಸಕಲ ಅದ್ವೈತ ವೀರಶೈವಾ ||1||

ಕಾಲಜ್ಞಾನದ ಸೂಚನೆಯ ನೋಡಲಿಕೆ ಇಲ್ಲಿ

ಕೀಲು ಕಾಣುವದು ಸುಜ್ಞಾನ ಪುರುಷರಿಗೇ

ಕಾಲಕಾಲದ ವಸ್ತು ಲೀಲವಾಡಲಿ ಬಂದು

ಮೇಲು ಮಹತ್ತಿಲಿ ಮೆರೆವ ಮಹದಾದಿ ವಡಿಯಾ ||2||

ನಿರುಪಾಧಿ ತಾನಾದ ಗುರುತಿನೊಳು ಮೈಮರೆದು

ಶರೀರ ಸುಖ ದುಃಖಕೆ ನೀ ಸಾಕ್ಷಾತನಾಗೀ

ಪರಮ ಯತಿ ಕುಲ ಚಂದ್ರ ಅಂಕಲಗಿವಾಸ

ಹರುಷ ಆನಂದರುವು ತಾನೆ ತಾನಾಗೀ ||3||

ಸಿದ್ಧ ಶ್ರೀಗುರು ಪ್ರಸಿದ್ಧ ಮಹಿಮ ತಾನೇಯಲ್ಲಾ ||ಪ||

ಜಗದವಳಗೆ ನಾಮ ಶ್ರೇಷ್ಠ

ನಿಗಮ ಕೂಗುತಿಹದು ಅರಿದು

ಅಗಲದಾಲೆ ಬ್ರಹ್ಮವನ್ನು

ಸೊಗಸು ಮಾಡಿ ಅರಿದ ಪುರುಷಾ ||1||

ತಾನೆ ತಾನೆಯಾದ ಸುಖವ

ಮೌನ ಮುದ್ರೆಯಿಂದ ಅರಿದು

ಖೂನದೊಳಗೆ ಆಡುವಂಥಾ

ಜ್ಞಾನಿಗರಿಕಿ ನಿನ್ನ ಗುರುತು ||2||

ಅರ್ಥದ್ಹಮ್ಮಿನೊಳಗೆ ನನ್ನ

ಗುರುತು ಅರಿಯಲಿಕ್ಕೆ ಅರಿದು

ಕರ್ತು ನಿನ್ನ ಕರುಣವಲ್ಲದೇ

ಮತ್ರ್ಯ ವಸ್ತು ಸಿಗುವದುಂಟೇ ||3||

ಗೂಢ ಗುಪ್ತ ಲೀಲದಾಟವ

ಮೂಢ ಮತಿಗಳೇನು ಬಲ್ಲರು

ಮಾಡಿದಂಥಾ ಕರ್ಮವೇಕೆ

ಆಡುವದು (ನು) ಸದಾನಂದಾ ||4||

ನಿರುಪಾಧಿ ಅಡವಿಪಾಶ್ಚನು

ಸ್ಮರಣೆ ಮಾತ್ರ ಮುಕ್ತಿಯಾಗ್ವ

ಕುರುಹು ತಿಳಿಯಬಲ್ಲಡವನೇ

ಗುರು ಲಿಂಗ ಜಂಗಮದಾ ||5||

ಸುಮ್ಮನಾಗದು ಕರುಣಾ ಕರ್ಮವರಿಯದನಕಾ|

ವಮ್ಮನವಾದರೆ ಬೇಗ ವಲಿವ ಅಡವೀಶ್ಯಾ ||ಪ||

ಬಾಯಿ ಬಿಟ್ಟರೆ ಇಲ್ಲ. ಬಳಲಿ ಅತ್ತರೆ ಇಲ್ಲ|

ಸಾಹಸದಿ ಯೇನೇನು ಮಾಡಿದರೆ ಇಲ್ಲ|

ಕಾಯಾ ವಾಚಾ ಮನ ಮೂರು ಸುದ್ದಾದರೆ|

ಆಯಾಸ ಕಳೆದು ಆನಂದದಲಿಡುವಾ ||1||

ಯಾಗ ಮಾಡಿದರಿಲ್ಲ ದಾನ ಮಾಡಿದರಿಲ್ಲ|

ಸೋಗೀಲಿ ಜಪ ನೀತಿ ಹಿಡಿದಿರಿಲ್ಲ|

ಯೋಗ ಪೂಜಿಗಳಿಂದ ಮುಕ್ತಿವಡೆಯನು ಶಿಗನು|

ಆಗ ಬೇಗದಿ ವಲಿವ ಪುಣ್ಯ ವದಗಲಿಕ್ಕೆ ||2||

ನಿರುಪಾಧಿ ತಿಳಿದಾತನೀತ ಅಂಕಲಿವಾಸ|

ಪರಮ ಗುರುಲಿಂಗ ಸದಾಶಿವನು|

ಪರತರಾನಂದೈಕ್ಯ ಪದಕೆ ಸಂಶಯ ನಾಸ್ತಿ|

ಇರಬೇಕು ಸುಕೃತ ತಾನೆ ತಾನೆ ಆಗ್ವ ||3||

ಸುಮ್ಮನಿರಬೇಕು ಶಿವನಾದ ಮ್ಯಾಲೆ ಸುಮ್ಮನಿರಬೇಕು

ನಿಮ್ಮ ನಿಜಾನಂದ ವಮ್ಮನದಿಂದಲಿ ||ಪ||

ಕಂಮ್ಮು (ಕಮ್ಮು) ಹೆಚ್ಚು ಯೆಂಬೊ

ಹಮ್ಮಳಿದ್ಹರುಷದಿ ಸುಮ್ಮನಿರಬೇಕು ||1||

ನೂತನ ವಸ್ತುವಾ ಪ್ರೀತಿಯಿಂದಲೇ ತಿಳಿ

ದಾತುಮ ಸುಖದೊಳು ಅತೀತ ಎನ್ನದೆ ಸುಮ್ಮನಿರಬೇಕು ||2||

ಸ್ಥೂಲದೊಳಗೆ ಸೂಕ್ಷ್ಮ ಕೀಲು ದೋರಿದ ಮೇಲೆ

ಕಾಲ ಕರ್ಮ ಹರಿದಾಲಯವಾದವಾ ಸುಮ್ಮನಿರಬೇಕು ||3||

ಗೂಢದ ಭಕ್ತಿಯ ಗೂಡು ಸೇರಿದ ಮೇಲೆ

ಕೂಡಿ ಕೂಡದಂತೆ ಇರ್ದು ನಿರ್ಲಿಪ್ತದಿ ಸುಮ್ಮನಿರಬೇಕು ||4||

ನಿರುಪಾಧಿಯಾದವ ಕರಕರೆ ಹೋಗದಲೆ

ವರ ಬೈಲಾಟವು ಗುರುಲೀಲಯೆಂದವಾ ಸುಮ್ಮನಿರಬೇಕು ||5||

ಸುವ್ವಿ ಸುವ್ವೆಯ್ಯ ಜ್ಯಾಣೇ| ಸುವ್ವಿ ಸುವ್ವೆಯ್ಯ ಜ್ಯಾಣೇ

ಸುವ್ವಿ ಸುಕ್ಷೇಮವೆ ಪ್ರವೀಣೇ| ಸುವೈಯ್ಯ ಜ್ಯಾಣೇ ||ಪ||

ಸುಖದ ಯಿಚ್ಛೆಯೆಂಬೊ ವಳ್ಳೊಳು

ಅಖಿಳ ವಿರತಿಯಂಬವ ಜೋಳ

ಅಕ್ಕರದಿ ಒಬ್ಬೋಳೇ ಕುಟ್ಟುವೇನೇ ||ಸುವ್ವಿ|| ||1||

ಆತ್ಮವಿಚಾರ ವಿಚಾರ ಯಂಬೊ ನೀರು

ಸ್ವಾತ್ಮೆ ತಿಳಿಯದು ವ್ಯಾಳ್ಯವ್ಯಾಳ್ಯಕೆ

ಪ್ರೀತಿಯಿಂದ ಒಬ್ಬಳೇ ಮಾಡುವೆನು ||ಸುವ್ವಿ|| ||2||

ನಿಸ್ಸಂಗೆಂಬೊ ವಬ್ಬೆಯ ದೊಬ್ಬಿ

ಪಸು ಸರ್ವ ಪ್ರಪಂಚೆಂಬೊ

ಯಶಸ್ಸೀನ ಗುರುವಿನ ಹಾಡುವೇನು ||ಸುವ್ವಿ|| ||3||

ವಾಸನ ಕ್ಷಯವೆಂಬೊ ವನಿಕೆ

ದೋಷ ರಹಿತನಂದ ಕರದಿ

ಈಶ ತನೆಂದ್ಹಾಡಿ ಕುಟ್ಟುವೆನೇ ||ಸುವ್ವಿ|| ||4||

ತೂರ್ಯದಿಂದೆ ಹೊಟ್ಟು ಹಾರಿಸಿದೇ

ತೂರ್ಯಾತೀತದ ಅಕ್ಕಿಯ ಮಾಡಿ

ಕಾರ್ಯ ಕಾರಣ ಮೀರಿ ಕುಳಿತನೇ ||ಸುವ್ವಿ|| ||5||

ಶಿದ್ಧ ಹಸಿದನೆಂದು ಮನದಿ

ಬುದ್ಧಿ ಹುಟ್ಟಲಿಕ್ಕೆ ಯದ್ದು

ಶುದ್ಧ ಪುರುಷರ ಸಂಗ ಹುಡುಕಿದೆನೆ ||ಸುವ್ವಿ|| ||6||

ಶ್ರವಣವೆಂಬೊ ಗಡಗಿಯ ಒಳಗೆ

ವಿವರ ನೀರು ಮನನ ಅಕ್ಕಿ

ಜವದಿ ನಿಧಿ ಧ್ಯಾಸವೆಂಬೊ ಅಗ್ನಿಯ ಹಚ್ಚಿದೆನು ||ಸುವ್ವಿ|| ||7||

ಧೈರ್ಯಯೆಂಬೊ ಕುದಿಯ ಬರಲು

ಸೈರಣಿಯಂಬೊ ಕಿಚ್ಚಿಗೆ ಯಿಳುಹಿ

ಕಾರ್ಯ ಕಾರಣ ಮೀರರ್ದಾ ಮುಖ ತೊಳಿದೇ ||ಸುವ್ವಿ|| ||8||

ನಿರುಪಾಧಿ ಅಡವೀಶನಿಗೆ

ಪರಿಪೂರ್ಣ ನವವಿಧ ಭಕ್ತಿಯಲಿ

ವರಣ ಮೀರಿದವನಿಗುಣಿಸಿದೆನೇ ||ಸುವ್ವಿ|| ||9||

ಸೇವಕನು ನಾ ನಿನಗೆ ಕರುಣ ಮಾಡೊ

ಕೇವಲಾನಂದಾಗೊ ಹರುಷದಿಂ ನೋಡು ||ಪ||

ಆದಿಯಲಿ ಪ್ರಭು ನೀನು| ಅನಾದಿ ಭಕ್ತನು ನಾನು

ಶೋಧಿಶಿದರದ ಕಾರಣವೆ ನಿನ್ನ ಧ್ಯಾನ

ಮೋದದಿಂದಲಿ ಮಾಳ್ವೆ| ನಿಜದಲ್ಲಿ ನೋಡಿ ವಿನೋದವಾಗಿಹ

ಮುಕ್ತಿ ಮಹವುಖವ ಮಾಡು ||1||

ಬಹು ಜನ್ಮ ಬರಲಾರದಲೆ ನಿನ್ನ ಮರೆ ಹೊಕ್ಕೆ

ವಹಿತ ಕೃಪದಿಂ ನೋಡು ನಿನ್ನ ಶ್ಯಾಕಾ

ವಹಿಸಿಕೊಡು ನಿಜ ನುಡಿಯ ವಸ್ತುವಿಹಪರಿಯಂತ

ಸಹಿಸಲಾರೆನು ತಾಪ ಸಾಕ್ಷಾತನೇ ||2||

ಶರಿರಿರುವ ಪರಿಯಂತ ನಿನ್ನ ಧ್ಯಾನವ ನುಡಿಸಿ

ಪರಮ ಕಡಿಯಲಿ ನಿನ್ನ ಚರಣದೊಳಗೈಕ್ಯ

ನಿರುಪಾಧಿ ಅಡವೀಶ ನೀನಲ್ಲದಿನ್ನುಂಟೆ

ಬಿರದಿಗಾಗಿಯೆ ಬಿಡದೆ ಕರುಣಾಕರ ತನ್ನ ||3||

ಹರ ಹರ ಹರ ಹರ| ಸಾಂಬ ಸದಾಶಿವ

ಶಿವ ಶಿವ ಶಿವ ಶಿವ ಶಂಭು ಶಿವಾ ||ಪ||

ಅಡವೀಶನ ಲೀಲಾಮೃತ ನಿತ್ಯದಿ

ನುಡಿವದು ಮಹಘನ| ಸಾಂಭಶಿವಾ

ನುಡಿಯಲು ಕರ್ಮವು ಹರಿವದು ನಿಶ್ಚಯಾ

ಸಡಗರ ಸುಖಮಯ ಸಾಂಭಶಿವಾ ||1||

ಪರಮನು ಗುರುವರ ವುರತರ ಸ್ಥಿರಕರ

ಹರುಷಾನಂದದಿ ಸಾಂಭಶಿವಾ

ಮರಿಯದೆ ನೆನೆದರೆ ಚರನ ತೋರಿಸುವ

ಖರಿಯ ನಂಬಿ ನಿಜ ಸಾಂಭಶಿವಾ ||2||

ಪಾಪವು ಹರಿವದು ಭೂಪನ ಕರುಣದಿ

ಕಾಪಟ್ಯವು ಕಳಿ ಸಾಂಭಶಿವಾ

ಯೀ ಪರಿಯಲಿ ತ್ರಿಕಾಲದಿ ನೆನೆದರೆ

ಮಾಫ ಅಪರಾಧವು ಸಾಂಭಶಿವ ||3||

ಕರ್ಮವು ಹರಿವದು ನಿರ್ಮಳವಾಗೋದು

ಧರ್ಮವು ತಿಳಿದರೆ ಸಾಂಭಶಿವ

ಮರ್ಮವು ತಿಳಿವದು ವಸ್ತು ತಾನಾಗುವ

ನರ್ಮ ದೋಷಗಳು ಸಾಂಭಶಿವ ||4||

ನಿರುತಿದಿ ಧ್ಯಾನಿಸು ಬರಿಯಾ ಬಯಲಾಗುವೆ

ಖರಿ ಖರಿಯ ನಿಜ ಸಾಂಭಶಿವ

ಗುರು ನಿರುಪಾಧಿ ಅಂಕಲಿನಾಥನ

ಚರಣ ಬಿಡಲಿರು ಸಾಂಭಶಿವ ||5||

ಹಣ್ಣು ಸಿಕ್ಕರೆ ಹಬ್ಬೊ ನಮ್ಮಣ್ಣ| ಹಣ್ಣು ಸಿಕ್ಕರೆ ||ಪ||

ಬಯಲ ವೃಕ್ಷದೊಳಗೆ ಹುಟ್ಟಿತೇ ಹಣ್ಣು

ನಯನ ಮಾನಸಕೆ ಗೋಚರವು ಈ ಹಣ್ಣು

ಸ್ವಯ ಪರ ಎರಡಕ್ಕೆ ನಿಲ್ಕದ ಹಣ್ಣು

ಕೈಲಾಸ ಸ್ವರ್ಗಕ್ಕೆ ಮೀರಿದ ಹಣ್ಣು ||1||

ಮೂರು ಮೂರ್ತಿಗಳಿಗೇ ಸೂತ್ರ ಈ ಹಣ್ಣು

ಆರು ಮುದ್ರಿಗಳಿಗತ್ತತ್ತ ಹಣ್ಣು

ತೋರೋದು ತೋರದ್ದಕ್ಕಾಗಿ ಈ ಹಣ್ಣು

ಪೂರಣ ವಸ್ತುತಾ ಪರಿಪೂರ್ಣ ಹಣ್ಣು ||2||

ನಿರುಪಾದಿ ನಾಮದ ಗುರುತಿನ ಹಣ್ಣು

ಗುರುಲಿಂಗ ಜಂಗಮ ನಾದಂಥ ಹಣ್ಣು

ವರದ ಅಂಕಲಿನಾಥ ಅಡವಿಸಿದ್ದನೆಂದು

ಪರಮ ಸಂತೋಷದಿ ಕೂಗುವ ಹಣ್ಣು ||3||

ಹೇಳಬೇಕೀ ನಾರಿಗೆ ತಾನೆ ತಾ ಬಾಳ ಲೋಚನವಾದವಾ| ನೋವು ||ಪ||

ಸಂಚಿತದಿಂದ ಪ್ರಾರಬ್ಧಾ ಮಿಂಚುವದು ಮೂರು ದಿವಸ ಎಂದೂ

ಹಂಚಿಕೆಯನರಿತ ಮಹಿಮಾ ನಿಜ ಸುಖವು ಕಿಂಚಿತಿಲ್ಲ ದುಃಖವೂ| ನೋವು ||1||

ತನ್ನ ತನು ಸುಳ್ಳುಯಂದು ಅರಿದಂತ ಅನುವಿನೊಳು ಬಾಧೆಯುಂಟೇ ಅವಗೆ

ಮುಂದೆ ದೇಹ ದೋಷವಿಲ್ಲಾ ಘಟಕಾಗೋ

ಘಟಕಾಗೋ ಘನತೆ ಅಭಿಮಾನವಿಲ್ಲಾ| ನೋವು ||2||

ನಿರುಪಾಧಿಯಾದ ಮೇಲೆ ಅಡವೀಶ ಅರುಹು ಕುರುಹುಗಳಿಲ್ಲವೋ

ಅಲ್ಲಿ ಶರೀರ ತಾನೆಂಬೊದಿಲ್ಲಾ ತಿಳಿದವಗೆ

ಬರೆ ಬೈಲ ರೂಪವಾದವರಿಗೆ ನೋವು ಶ್ರೀಕ್ಷೇತ್ರ ||3||

ಹೊಕ್ಕನಯ್ಯ ಗವಿಯ ಹೊಕ್ಕನಯ್ಯ|

ಮುಕ್ಕಣ್ಣ ಮುಕ್ಕಣ್ಣ ಹರಿನೀತ ಮಹಾದೇವ ಅಡವಿಯ ಶಿದ್ಧಾ ಹೊಕ್ಕನಯ್ಯ ||ಪ||

ತನ್ನಶ್ಯಾಕದ ಮೂರ್ತಿ ಚನ್ನಾಗಿ ದರುಶನಕೆ

ವುನ್ನತೋನ್ನತವೆಂಬೋ ವಾದ್ಯ ಭಜನಿಗಳಿಂದಾ ||1||

ನಾನಾ ದೇಶದ ರೂಪ| ಕೂನದೊಳಿರುತಲೀ

ಕಾನನದೊಳು ಬೈಯಲು| ಸ್ವಾನುಭಾವದ ಸುಖ|| ||2||

ನಿರುಪಾಧಿ ಗುರು ಈತಾ| ಪರಿ ಪರಿ ಲೀಲದಿಂದಾ|

ಗುರುಲಿಂಗ ಜಂಗಮದ ಪರಿಯನರಿದ ಪೂರ್ಣ|| ||3||

ಹೋಗತೀನಿ ನಾನು ಹೋಗತೀನಿ

ನಾನು ಹೋಗತೀನಿ ಯೋಗಿ ಅಡವೀಶನಾ ಕಂಡು ಮುಕ್ತಿಗೆ ||ಪ||

ಹಿಂದೇಳು ಜನ್ಮದ ಪಾಪ ಹರಿದು ಸಂಶಯ ಹುರಿದು

ಸಂದೇಹ ಗುಣಗಳೆಲ್ಲ ಮರದು ನಿಜದೊಳು ಬೆರದು

ಕುಂದು ಕೊರತಿ ಎಲ್ಲಾ ನೀಗಿ ತೂಗಿ ಬ್ರಹ್ಮ ತಾನಾಗಿ

ಅಂದು ಇಂದು ಯೇನು ಇಲ್ಲ ನೀನಾಗಿ ಸುಗುಣದ ಭೋಗಿ ||1||

ಯೇನು ಹೇಳಿ ಅಲ್ಲಿ ಇರುವಂತ ಸೂಯೇಕಾಂತ

ಸ್ವಾನು ಭಾವದ ಸುಖ ನಿಶ್ಚಂತ ಹೋಯಿತು ಪಂಥಾ

ಕೂನದೊಳಗೆ ಚಿಂತೆಯೇನು ಇಲ್ಲ ಶಿವ ಜಗವೆಲ್ಲಾ

ತಾನಾದ ಬ್ರಹ್ಮವು ಸೀಬೆಲ್ಲಾ ಹೇಳುದಕಿಲ್ಲಾ ||2||

ಅಲ್ಲಿ ಬೀರು ಸುಖ ನಿರುಪಾಧಿ ಎಲ್ಲವುಪಾಧಿ

ಬಲ್ಲಿದ ಭವ ಜೈಸುವ ಹಾದೀ ಯೇನಿಲ್ಲವಾದೀ

ಸೊಲ್ಲು ಸೊಲ್ಲಿಗೆ ಗುರುನಾಮ ವಳಗೆ ನುಡಿಯುತ ಬೆಳಗೇ

ಯಳ್ಳಷ್ಟು ಬಾರ ಇಳಿಗೆ ಆನಂದ ವಳಗೆ ||3||

ಬ್ಯಾಡೆಲೋ ಆಡಬ್ಯಾಡೆಲೋ| ನಿಂದ್ಯಗಳಾಡಬ್ಯಾಡೆಲೋ

ಆಡಬ್ಯಾಡಲೋ ಆಡಬ್ಯಾಡೆಲೋ ನಿಂದ್ಯ

ನೋಡು ತಿಳಿಯದು ಯಮತಾಡಗೀಡಾಗುವಿ ಕೇಡು ತಪ್ಪದು ||ಪ||

ಜೀವನಿಲ್ಲದ ತಾವೊದಲಾಗಳು|

ಲೋಹ ಪಂಚಕಗಳು ಕರಗುವವು ಕೇಳು|

ಜೀವರಾದರೆ ಸಾಜೀವರ ವರುಸಿರಿಡೆ|

ಸಾವೊ ಸಂಕಟವೊ ಇನ್ನಾರು ತಪ್ಪಿಸುವರು ||1||

ಸಂಗತಿ ಸಂಗ ದೋಷವು ಎಂದು ಶಾಸ್ತ್ರವು

ಹಿಂಗದೆ ಹೇಳ್ವದರಿಂಗಿತವರಿ ನೀನು|

ಸಂಗ ನಮ್ಮದು ಸನ್ಯಾಸಿಯು ಭಂಗಿ ವ್ಯಾಪಾರ

ಭಂಗ ಬಡುವಿ ಹುಚ್ಚ ಮಂಗನಾಗುವಿ ||2||

ಗೋಪುರವಾಸನ ಗೋಕರ್ಣ ಭೂಷನ

ಗೋಪಂಚನಾಶನ ಗೋಪ ವಾಹನನ|

ತಾಪಸ ಜನಮನದ್ಯಾಪಕ ಘನ ವೃಷಭಚಿ

ದ್ದೀಪಕರ ತನುಜಾತನೀ ಪರಿಯಲಿ ||3||

ಎಂಥದ್ಹಿಡಿದಿತೆನಗೆ ದೆವ್ವ ಇದು| ಎಂಥವರಿಗೆ ಬಿಡದವ್ವ

ಅಂತರ ಸಾಕ್ಷಿ ಚಿದ್ಘನ ಪರಂಜಯ ಕಂತು ವಿಯನಾಡುವಂದದಿ ||ಪ||

ಲೀಲೆಯಿಂದಲಿನ್ನು ಅಸಿಯಂಬಾಲಯದೊಳಗಾನು

ಕಾಲಿಡಲಿಕೆ ತಾನು ಹಿಡಿದಿತು ಮೂಲ ಪ್ರಕೃತಿಯದನು|

ಕೇಳೆಲೆ ನಾನಾ ವಿಕಾರದವಳೆ ಇದನು

ಮ್ಯಾಲೆ ಮಹತ್ತಿನಲಿ ಸಂಜಿಸಿ ತಿರುಗುವಂದದಿ ||1||

ಸುಗುಣ ಬುದ್ಧಿಲಿಹುದೆ ತಿಳಿ ದುರ್ಗುಣದಲಿ ಸಾವಿದೆ

ಬಗೆದೋ ಚುತಲಾದೆ ಆಹುದಲ್ಲ ಮಿಗಿಲೆರಡೆನಿಸುವುದು|

ಬಗೆಯಲು ಬಳಿಕಿಲ್ಲೆನಿಸುವದಿಷ್ಟು

ಬಗೆ ಮೂರಾಗಿ ಬಲು ಬಗೆಲಂಜಿಸುವಂದದಿ ||2||

ಹಿಂದಲ ಮನೆಯೊಳಗೆ ಒಂದಾನೊಂದಾನಂದಿಹುದೆ

ಮುಂದಲ ಮನೆ ಹೋಗಲು ಒಂದೇ ಸಂದಾಗಿರುತಿಹುದೆ|

ಹಿಂದೆ ಮಂದಳಿದಿನ್ನು ನಿಂದು ನೋಡಿದರೆ

ಸಂದೇಹಿಲ್ಲದ ತನ್ನಿಂದ ಬಾರೆನುವಂದದಿ ||3||

ಮೊದಲೆ ಮಾನಸಗಲ್ಲೆ ಹೋಗಲು

ಅದರಿಂದ ಗೂಗಲ್ಲೆ ಬದಿಯಲಿ ಜೋಗರಕಲ್ಲೆ|

ಇದು ಬಿಡಿಸಲು ವಿಧಿ ವಿಷ್ಣುವಿಗರಿಯದು

ಮದಮುಖಿ ಮನುಜರಿಗಿನ್ನದು ಸಾಧ್ಯವೆ ||4||

ಬಸವನಂತಾಗುವದೆ ಮೇಲ್ ಚನ್ನಬಸವನಂತಾಗುವದೆ

ಅಸಮ ಪ್ರಭುವಿನಂತೆ ಎಸೆವದು ಎನ್ನ ಮುಂದೆ ನಿಂತು|

ವಸುಧಿಯೋಳ್ಮಣಿಪುರವರ ಘನ ವೃಷಭನ

ವಶದೊಳಿರುವ ಅದ್ಯಾರಗೊಶವಲ್ಲವದು ||5||

ಸತ್ತ ಚೇಳೇಯವ್ವ ಬೆನ್ನತ್ತಿ ಕಚ್ಚಿತೆ ಕೇಳವ್ವ

ಮತ್ತೆ ಬ್ಯಾನೆ ಎದೆ ಕುತ್ತಿಗಿ ಕಂಣೊಳು|

ಚಿತ್ತ ಚಂಚಲದಲಿ ಎತ್ತೆತ್ತಲಾಗುತಿದೆ ||ಪ||

ಏಳು ಗೇಣು ಇತ್ತು ಮಣಿಗಳು ಏಳು ಅದಕೆ ಮುತ್ತು

ಕೇಳೆ ಬದುಕಿದದು ಬಹಳ ಆಶ್ಚರ್ಯವದೆ|

ಭಾಳನಯನ ಗುರು ಬಂದನಾ ವ್ಯಾಳ್ಯಾದಿ ||1||

ಎದ್ದರೆ ಮತ್ತಷ್ಟೆ ಕುಂತಡ್ಡ ಬಿದ್ದರದರಷ್ಟೆ

ಉದ್ದ ಬಿದ್ದರಿನ್ನು ಸುದ್ದಿಗಿಲ್ಲ ಬ್ಯಾನೆ|

ಎದ್ದರೆ ಮೊದಲಿದ್ದಂತಿರುವ ಮಹಾಕಾಂತೆ ||2||

ಮಣಿಪುರವರ ತಾ ಮಂತ್ರಿಸಿದ ಮೂರು ಪದಗಳನು

ಅಣಗಿತು ಬಾಧೆ ಅರೆಕ್ಷಣದೊಳು ತಾನೆ|

ನಾ ನಿನ್ನನುಪಮ ಸುಖದಲಿರುವೆನು ಕಾಂತೆ ||3||

ತಿಳಿ ನೋಡೋ ತಿಳಿ ನೋಡೊ

ತಿಳಿಯದೆ ನೀ ಕೆಡಬ್ಯಾಡೊ ||ಪ||

ನಾನೆಂತೆಂಬಭಿಮಾನವದಲ್ಲ

ತಾನದನರಿವುದೆ ಬರಿಯಲು ಬಲ್ಲ|

ನಾನೆಂತೆಂಬುದು ಸ್ವಾನುಭವವೊ

ಜ್ಞಾನದಿ ನಾನತ್ವನದು ಪುಸಿದೊ ||1||

ನಾನು ಜೀವನಂತೆಂಬುವದನು

ಏನು ಹಿಡಿದು ತಿಳಿದಿರುವೆಲೆ ನೀನು|

ತಾನದು ವಿಜ್ಞಾನ ಪರೋಕ್ಷವನು

ನಾನೆನುತಲಿ ಧ್ಯಾನಿಸುತಿರು ನೀನು ||2||

ಕನ್ನಡಿ ಎದುರಿನಲಿ ನಿಂದ ಕುನ್ನಿಯು

ಇನ್ನೊಂದೊದಗಿತೆಂದು ಸನ್ನರಿಯದೆ ಕೂಗಿ|

ತನ್ನ ಮರದಂಬಲು ಬನ್ನ ಬಡುವ

ಕುನ್ನಿಯಂತೆ ಕೆಡದಿರು ನೀನು ||3||

ಶರಧಿಯಲ್ಲಿ ತೆರೆಗಳನು ತೋರುವ

ತೆರದಲಿ ತೋರ್ಕಿದು ತಾನು|

ಅರಿವಂಬುಧಿಯಲಿ ಧರೆ ಸ್ವರ್ಗಗಳಂತೆ

ಪರಿಕಲ್ಪಿತ ರೂಪ ನಾಮಗಳನು ತೋರ್ಕಿದ ತಾನು ||4||

ಘಟ ಮಠವಳಿಯಲಿ ಬಂದೆ ಬಯಲದ

ದಿಟವಾಗಿರುವುದು ಎಂದೇ|

ಘಟಿಸಿರುವ ಘಟಭಾವವನಳಿಯೆ ನೀ

ನಟಿಸುವ ಮಣಿಪುರವರನಿಲಾಕ್ಷನು ||5||

ನಂಬಬ್ಯಾಡಲೊ ನೀನು| ನಂಬದಿರು ದೇಹವನು

ನಂಬಿದರೆ ಹುರುಳಿಲ್ಲ| ಎಲೆ ಮರುಳು ಮನುಜ ||ಪ||

ಯಲು ಚರ್ಮ ನರಮಾಂಸ| ಮಲಮೂತ್ರಯುಕ್ತಾದ

ಹೊಲಿ ದೇಹವನು ನೆಚ್ಚಿ| ಹೊತ್ತುಗಳೆಯದಲೆ

ಬಲು ಶೀಲ ವ್ರತನೇಮ| ಕುಲಮದದಿ ಶಿಲ್ಕಿದೆ

ಮಲಹರನ ಚರಣ| ಸ್ಮರಣಿಯ ಮಾಡು ಮನುಜ ||1||

ಕಂಣಿನೊಳಗಿನ ಕಳೆಯು| ಸಂಣದೆಂದೆನ ಬ್ಯಾಡ

ಬಂಣಿಸಿ ಕಾಂಬುವದು| ಮೂಜಗವನು

ರನ್ನ ರವಿ ಶಶಿಕೋಟಿ| ಉನ್ನತದ ಪ್ರಜ್ವಲೆಯು

ನಿನ್ನೊಳಗಿರುತಿಹದು| ನಿನ್ನ ನೀ ತಿಳಿಯು ||2||

ಧರೆಯೊಳು ಮೆರೆವ| ಮಣಿಪುರ ವನದರೊಳಗಿರುವ

ಗುರು ರಾಯನಾದ| ಘನ ವೃಷಭೇಂದ್ರನ

ಚರಣ ಕಮಲವ ನೀನು| ನಿರುತದಿಂದಲಿ ಸ್ಮರಿಸಿ

ಪರಮುಕ್ತಿಯನು ಪಡೆದು| ಪರಶೆ ಪರನಾಗು ||3||

ನಿನ್ನ ನೀ ತಿಳಿಯಲೊ ಮೂಢ

ನಿನ್ನ ತಿಳಿಯದೆ ಕುನ್ನಿ ಮನುಜ ಕೆಡಬ್ಯಾಡ ||ಪ||

ಮೂರು ದಿನದ ಸಿರಿಯಿದನು ದೇಹ

ನೀರ ಗುಳ್ಳೆಯ ತೆರ ತಿಳಿಯದೆ ನೀನು|

ಚೋರತನದಿ ಒಡಲನ್ನು ಹೊರೆದು

ನರಕಕೀಡಾಗಿ ನಡೆದೆಲ್ಲೋ ನೀನು ||1||

ಪಾಪದಿಂದಲಿ ಗಿಡಮರ ಕ್ರಿಮಿ

ರೂಪಾಗಿ ಜನಿಸಿ ಬರುವದಿದು ಘೋರ|

ಯೀಪರಿಯಲತ್ತ ಸಂಸಾರ ನಿರಯ

ಕೂಪದೊಳಗೆ ಮುಳುಗಿ ಹೋದೆಲೊ ನೀ ಪೂರಾ ||2||

ಪರಧನ ಪರಸತಿಗೂಡಿ ನೀನು

ಪರದೇಶಿಯಾಗಿ ಸಂಚರಿಪೆಲ್ಲೋ ಖೋಡಿ|

ದುರಿತ ದುರ್ಗುಣಗಳೀಡ್ಯಾಡಿ ಮಣಿ

ಪುರವರನಡಿಜಡಜವನು ಕೊಂಡಾಡಿ ||3||

ಬ್ರಹ್ಮವು ತಿಳಿವುದೆ ಸುಮ್ಮನೆ ಬ್ರಹ್ಮವು ತಿಳಿವುದೆ

ಬ್ರಹ್ಮವ ತಿಳಿವುದು ಸುಮ್ಮನಲ್ಲ ಕೋತಿ

ತಿಮ್ಮನಂತೆ ತಿರುಗ್ಯಾಡುವ ಮನುಜರಿಗೆ ||ಪ||

ಅಂಗದ ಗುಣಗಳನಳಿಯದೆಲೆ ನಿಜ|

ಲಿಂಗದ ಕಳೆಯನು ತಿಳಿಯದಲೆ|

ಅಂಗನಿಯರ ಕಂಡಳುಕಿ ಕಾಮಕೇಳಿ|

ಸಂಗದಲ್ಲಿರುವ ಮಂಗ ಮನುಜರಿಗೆ ||1||

ಕಾಮ ಕ್ರೋಧಗಳ ಕಳಿಯದಲೆ|

ತಾಮಸ ಮದಗಳಳಿಯದಲೆ|

ಕಾಮಿನಿಯರ ಕೂಡ ಕಾಲ ಕಳಿಮಯಮ|

ಸೀಮೆ ಸೇರುವವಂಥ ಪಾಮರ ಮನುಜರಿಗೆ ||2||

ಕುಲಛಲ ಮಲತ್ರಯವ ತಿಳಿಯದಲೆ| ತನ್ನ

ನೆಲೆಯ ಗುರುವಿನಿಂದ ಅರಿಯದೆಲೆ|

ಜಲಜ ಮುಖಿಯರನು ಕಂಡಳು ಕಿಭವ

ಬಲೆಗೆ ಬೀಳುವಂತ ಹುಲು ಮನುಜರಿಗೆ ||3||

ನೇತ್ರದ ಭಾವವ ಮರಿಯದಲೆ ಪರಂ|

ಜೋತಿ ಯೆಂಬುದನರಿಯದಲೆ|

ಪಾತಕ ಸ್ತ್ರೀಯರ ನಚ್ಚಿ ತಾವು ಭವ|

ಪಾತಕೆ ಬೀಳುವ ಕೋತಿ ಮನುಜರಿಗೆ ||4||

ತನು ಮನ ಧನವನು ನೀಡದಲೇ ಮತ್ತೆ

ಮಣಿಪುರದೊಡೆಯನ ಪಾಡದಲೆ

ಜನನ ಮರಣಗಳ ಜಾಲದಿ ಬಳಲುತ

ಅನರ್ಘ್ಯರಲ್ಲದ ಮಂದ ಮನುಜರಿಗೆ ||5||

ದೇವರುಹಾನ ಅಕರಾಮ ಸಾಹೇಬ ದೊಡ್ಡಪೀರ

ಭವದಲಿ ಭಜಿಸೋಣ ನಾವು ಪೂರಾ ||ಪ||

ಆಧಾರದಿಂದ ಆರು ಚಕ್ರವನ ಕರಿದನು| ಭ್ರೂಧ್ಯಕೆ ತೊಡರಿದನಾಕಿ

ಮೊದಲಲಿ ದಶವಿಧನಾದವ ಕೇಳಿದನು| ಸಾಧಿಸಿದ ಸಹಸ್ರದರಗವನು

ಶೋಧಿಸಿ ಒಂದು ಗೋರಿಯನು| ಆಧಾರ ಮಾಡಿ ಅಲ್ಲಿಹನು ಅವತಾನು ||1||

ನಾನು ನೀನು ಎಂಬ ಕೂನು ಗುರುತು ಇಲ್ಲದವನು

ಹಾನಿ ವೃದ್ಧಿಗಳಳಿದಿಹನು ಭಾನು ಕೋಟಿ ಪ್ರಕಾಶ ಮೀರಿ ಬೆಳಗಿಹನು

ಧ್ಯಾನ ಧಾರಣ ಸಮಾಧಿ ಮಾನವನು| ಏನೇನು ಇಲ್ಲ ದ್ವಂದ್ವ ಸಚ್ಚಿದಾನಂದ

ಮನ್ಮಥನ ಮೀರಿದದರಿಂದ ಏನು ತೋರಿಸಬಾರದದರಿಂದ ||2||

ಅನುಪಮನದ್ವಯನು ಜನನ ಮರಣ ರಹಿತ

ಘನ ಮೂರುತಿ ತಾ ಮಣಿಪುರನಾಥ ಅಕರಾಮ ಸಾಹೇಬ ಪ್ರಖ್ಯಾತ

ಮನದ ವರವ ಕೊಡುವಂಥ ದಾತ| ಆತನನು ಘನ ವೃಷಭ ತಾನೆ

ತಾನುಳುಹಿದನು ಅನುದಿನದಿ ಸ್ಮರಿಸು ಆತನನು ಘನ ಮುಕ್ತಿ ಪದವಿ ಕೊಡುವಾನು||3||

ಶರೀರದೊಳಗೊಬ್ಬಳು ನಾರಿ ಬಣ್ಣಗೆಟ್ಟವಳು

ಸರ್ವ ಗೆಳೆಯರ ಕೂಡಿದಳು ಕೇಳು ||ಪ||

ಭವ ಕಂಡು ಬೆರಗುಗೊಂಡು ಮರುಗತಲಿರುತಿಹನು

ಆವುದರಿಯಿದ ಗಂಡನು ತಾನು|

ಲಾವಕ ಮೈದುನ ಕೇಳಿ ಮನದೊಳಳುತಿಹುನು ||1||

ಮಾವ ಅತ್ತೆ ನೆಗೆವೆಂಣೆರಿಗಿನ್ನು

ಸಾವು ಬಾರದ್ಯಾಕೆ ಅಗರಿಗೆ| ದೇವರು ತರುವನೆಂದೀಗೆ

ಜೀವದೊಳಗೆ ಕುದಿವಳವಳ್ಹೀಗೆ| ಈ

ಭವದಿ ಬಂದುದು ಹ್ಯಾಗೆ ||2||

ನೋಟದಿಂದ ಬಲು ಬ್ಯಾಟಿವ ಮಾಡುವಳು| ಭುವ

ಸಾಟಿಗಳೂಡುವಳಾಕಿ| ಕೂಟ ಸುಪ್ತಿಯಲಿ

ಭೂಟಕಳಾಗುವಳು| ಮತ್ತು ನಾಟಿಸುತಿರುವಳು ಕೇಳು

ನೀಟಿಲ್ಲ ಇವಳ ಸಂಗವದು| ಕೋಟಿಗೊಬ್ಬ ಶರಣ ಪಿಂಗಿಹನು

ಸಾಟಿಲ್ಲದ ಶಿವಲಿಂಗವನು ಅವಳಾಟಕೆ ಇಡಿಸಿರುವನು ||3||

ಮೂರು ಊರು ಕೇರಿಕೇರಿಯ ತಿರುಗುವಳು|

ಆರು ತೆರದಲಿ ತೋರುವಳಾಕಿ| ಮತ್ತು

ಮೂರು ತಾಪ ಮಲ ಮೂರಕೆ ಗುರಿಯಿವಳು

ದೂರ ಮಾಡಬೇಕಿವಳನ್ನು ಊರೊಳಗೆ ಥರವಲ್ಲಿನ್ನು

ಚಾರುಮಣಿಪುರಪತಿ ಮೆಚ್ಚ್ಯಾನು ಜಾರಿ ಚೋರಿ ಛೀಮಾರಿವಳನ್ನು ||4||

ಜೀವನಲ್ಲ ಮನುಜ ನೀನೇ ಶಿವ ಸಹಜ

ಜೀವನೆಂದು ಭಾವಿಸಿದ ಕಾರಣದಿ|

ಸಾವು ಜನನಗಳ ಬಾಧೆಗೆ ಶಿಲುಕಿದಿ ನೀ|| ||ಪ||

ಕಾಯದ ಕರ್ಮ ಧರ್ಮಗಳು ನಿನಗಿಲ್ಲ|

ಮಾಯನು ನೀನೆ ನಿನ್ನುಪಿಮಿಸಲಳವಲ್ಲ|

ಭಾವಿಸು ಭೋನಿಗಮಾಖ್ಯವು ಇದು ಪುಸಿಯಲ್ಲ

ಮಾಯ ಭ್ರಮೆಯು ಮೃಗ ಜಲದಂತೆ ನೀ ಸುಳ್ಳೆ

ಛಾಯೆ ತೋರುವದು ಕಾಯದಂತೆ ನೀ ||1||

ಗುರು ಮುಖದಿಂದಲಿ ಶ್ರವಣ ಮನನ ನಿಧಿ ಧ್ಯಾನ

ಪರಿ ಪರಿ ವಿಧದಲಿ ಮಾಡುತ ಬಾರ ಅಭ್ಯಾಸ|

ಪರಮ ಜೀವೈಕ್ಯರನು ತಿಳಿ ವಿಶೇಷ

ನರನೆಂಬುದು ತಾ ಮರಸುತ ಬರುವದು

ಹರನೆಂಬರುಹಿನ ಕುರುಹು ತೋರುವದು ನೀ ||2||

ಧರೆಯೊಳು ಮಣಿಪು ಪತಿಹರ ಘನ ವೃಷಭೇಂದ್ರ

ನಿರುತದಲಿ ಭಜಿಸಾತನ ಚರಣ ಅರವಂದ|

ಪರಮಾತ್ಮನು ನೀನೆಂಬುದನು ತಿಳಿ ಮುದದಿಂದ

ಗುರುಕರ ಕಮಲದಲಿ ಬಂದ ಬಳಿಕ ನರನಲ್ಲವೊ ಹರನೆಂದ ||3||

ಪೋಷಿಸಯ್ಯಾ| ಈಶಾಂಘ್ರಿಶಯ್ಯಾ|

ಭಾಷೆಪಾಲಕ ಜೀಯಾ ಬಸವರಾಜಯ್ಯಾ||

ದೋಷರಹಿತ ಪರಮೇಶ ನಿರುಪಮ ಪ್ರ

ಕಾಶ ಭಕ್ತ ಪರಿತೋಷ ಈಶನೆ ||ಪಲ್ಲವಿ||

ಧೀರ ಸಂಸಾರವೆಂಬ| ಘೋರಾರಣ್ಯ

ಮಧ್ಯದೋಳ್| ದಾರಿ ಕಾಣೆನು ಪ್ರಭುವೆ ವಿಭುವೇ||

ತೋರಿ ಕೆಡುವ ದುರ್ವಿಕಾರ ವಿಷಯಂಗಳ|

ಹಾರಿ ಕೆಟ್ಟೆನು ಗುರುವೆ| ಸುರ ತರುವೆ||

ಭೂರಿ ಕರಣ ಸಂಚಾರದಿಂದೆ ಬಲುಗಾರಾದೆನು|

ಕರುಣರಸಾಭ್ದೇ ಭವದೂರನೆನುಸುತೀ|

ಕ್ರೂರ ಕರ್ಮವ ನಿವಾರಿಸಿ ಪರಮ ವಿಚಾರವ ತೋರಿ ||1||

ಮೂರು ಮಲಗಳಿಂದೆ ಮೂರು ತಾಪಗಳಿಂದೆ|

ಮೂರು ಗುಣಗಳಿಂದೆ ನಾನೊಂದೆ|

ಮೂರು ಕರ್ಮಗಳಿಂದೆ ಮೂರು ದೇಹಗಳಿಂದೆ|

ಮೂರು ಭಕುತಿಗಳನರಿಯನು ದೊರೆಯೆ||

ಮೂರು ದೀಕ್ಷೆಯೊಳೆರಳ್ಮೂರು ಬಿಡಿಸಿ ಮೂರು|

ಮೂರು ಚಕ್ರ ವರ್ಣಾಕ್ಷರ ದಳಗಳ|

ಮೂರು ಲಿಂಗದನುಭಾವದಿ ಭೇದಿಸಿ|

ಮೂರು ತತ್ವಗಳ ಮೂಲವ ತೋರಿ ||2||

ಆಶೆ ಪಾಶಗಳಿಂದೆ ದೋಷದ್ವೇಶಗಳಿಂದ|

ಕ್ಲೇಶ ಪಂಚಕದಿಂದೆ ನಾ ಬೆಂದೆ||

ದೋಷ ದುರ್ಗಣದಿಂದೆ ಈಷಣ ತ್ರಯದಿಂದೆ|

ಕೋಶವಿವೈದದರಿಂದೆ ಗುರು ತಂದೆ|

ಘಾಸಿಯಾದೆ ಜಗದೀಶ ನಿಮ್ಮ ಪದ|

ಧ್ಯಾಸವಿತ್ತು ಭವರಾಶಿ ಹರಿಸಿ ಪರಿ|

ತೋಷನೆನಿಸಿ ಚಿದ್ಫೂಷ ಘನಮಠನಿ|

ವಾಸ ಭಕ್ತಕುಲಧೀಶ ಗಣೇಶ ||3||

ಹೆಡ್ಡನಾರೊ ಜಗದೊಳು ಹೆಡ್ಡನಾರೊ|

ಗುಡ್ಡದಳಿಯನ ಭಕ್ತನೆನಿಸಿ ವಡ್ಡಿಗಲ್ಲಿಗೆರುಗುವನೆ ಹೆಡ್ಡ ||ಪ||

ಗುರುವೆ ಪರಿಶಿವನೆಂಬೊ ವಾಕ್ಯವಿರುತಿರಲು ಮತ್ತೊಬ್ಬ ನರನಂ

ಕರೆದು ತಂದವನಿಂದ ಮುಕ್ತಿ ಭರದಿ ಪಡೆಯೆನೆಂಬುವನೆ ಹೆಡ್ಡ ||1||

ಅಷ್ಟ ವಿಧಾರ್ಚನೆಗೆ ಸಲ್ಲದ ಸೃಷ್ಟಿಯ ಪಾಷಾಣಕರದೊಳ

ಗಿಟ್ಟು ಕುಣಿಕುಣಿದಾಡುತೆ ಭಕ್ತ ಶ್ರೇಷ್ಠನಾದೆನೆಂಬುವನೆ ಹೆಡ್ಡ ||2||

ಈಶ ಲಾಂಛನವನ್ನು ತಾಳಿ ಆಶೆರಹಿತನಾಗಿ ಮುಕ್ತಿ|

ಲೇಸಿನಿಂ ಪಡೆಯ ಹಗರಣದಾಸನಂತೆಡೆಯಾಡುವನೆ ಹೆಡ್ಡ ||3||

ನರ ಜನ್ಮವ ದೊರೆತಾಗ ಸದ್ಗುರು ಕರುಣವಡೆದಾಪರಮನೊಳು ತಾ|

ಬೆರೆದು ಸುಖಿಸಲರಿಯದೆ ಮೈ ಮರೆದು ಭವಕೈದುನೆ ಹೆಡ್ಡ ||4||

ಮಿಥ್ಯವಾದೀ ತನುಮನಧನ ಶಿವಂಗಿತ್ತು ನಿತ್ಯವಾದ ತ್ರಿವಿಧ|

ಭಕ್ತಿಮುದದಿ ಪಿಡಿಯದೆ ತಾಂ ವ್ಯರ್ಥವಾಗಿ ಸಾಯುವನೆ ಹೆಡ್ಡ|| ||5||

ಯೋಗ್ಯವಾದ ಬಸವಾದಿ ಪ್ರಮಥಾಗ್ರ ಗಣ್ಯರಮಳ ವಚನ |

ಸಂಜ್ಞೆಯಿಂದರಿಯದೆ ಬರೆ ವೈರಾಗ್ಯದಿಂದೆಡೆಯಾಡುವನೆ ಹೆಡ್ಡ ||6||

ಬಳಸಬಾರದಂತ ದ್ರವ್ಯ ನಿಲಯದೊಳಿರೆ ಬಿಟ್ಟು|

ಜಲಗದೊಳೆವನಂತೆ ಪ್ರಾಣಲಿಂಗವುಳಿದು ಜಾನಿಸುವವನೆ ಹೆಡ್ಡ ||7||

ಕ್ಷೀರಾಂಭುಧಿ ಸನ್ನಿಧಿಯೊಳಿರ್ದು ಹಾರಿಯನಾಂತಗಳಿವುಪ್ಪ

ನೀರನೀಂಟುವನಂತೆ ಶಿವನ ಸಾರದನ್ಯರ ಹಾಡುವನೆ ಹೆಡ್ಡ ||8||

ಮನೆಯೋಳ್ ಸಾಧನಗೈದು ಮತ್ತಾರಣರಂಗದಿ ಸುಮ್ಮನೆ ನಿಂತಿರ್ಪ|

ಮನುಜನಂತೆ ಲಿಂಗವನೆಜಿಸುತ್ತನ ಘಜಂಗಮವಗಲುವನೆ ಹೆಡ್ಡ ||9||

ಏಕೋ ದೇವ ರುದ್ರನೆಂದು ಲೋಕದೊಳು ಶ್ರುತಿಸಾರುತ್ತಿರಲು|

ಕಾಕು ದೈವಗಳನ್ನು ಭಜಿಸಿ ಶೋಕ ವಾರ್ಧಿಯೊಳಾಳುವನೆ ಹೆಡ್ಡ ||10||

ಆ ಶಿವಶರಣರಿದ್ದುದೇ ಕೈಲಾಸವೆಂದರಿಯದೆ ಫಲಪದ|

ದಾಸೆಯಿಂ ಗಿರಿಮುಖ್ಯ ಕ್ಷೇತ್ರವಾಸಂಗಳಿಗೆಡೆಯಾರುವನೆ ಹೆಡ್ಡ ||11||

ಬಾಳೆಗಿಡವ ಕಡಿದು ಕಳ್ಳಿಗೆ ಬೇಲಿಯಿಕ್ಕುವನಂತೆ ಪ್ರಮಥರ|

ಮೇಲೆ ಭಕ್ತಿಯುಕ್ತಿ ಕ್ಷೇತ್ರವಾಸಂಗಳಿಗೆಡೆಯಾರುವನೆ ಹೆಡ್ಡ ||12||

ಹತ್ತು ಮಾನಿಸರೊಳು ತನ್ನುಲಿದೆಣಿಸುತ್ತೊಂಬತ್ತೆಂದಳು ವನೋಲ್ಪ

ರಮಾರ್ಥದಿಂ ತನ್ನಂತಾನರಿಯದೆ ಮರ್ತ್ಯದೊಳಗಳಲುವನೆ ಹೆಡ್ಡ ||13||

ಚರಗುರು ಲಿಂಗಭಕ್ತಿ ಮೋಕ್ಷದಿರುವೆಂದಾ ಶ್ರುತಿ ಶಾಸ್ತ್ರಾಗಮತತಿ|

ಒರಲುತ್ತಿರಲದನಹುದಲ್ಲೋ ಯೆಂದಿರದೊಬ್ಬರ ಕೇಳುವನೆ ಹೆಡ್ಡ ||14||

ಕುರಿಯ ಬಗಲೊಳಿಟ್ಟು ಜಗದೋಳ್ ಕುರುಬ ಹುಡುಕುವಂತೆ ಶಿವತ

ನ್ನುರುವ ಭಾವದೊಲಿಹುದರಿಯದೆ ಪರಿಪರಿಯೋಳ್

ಧರೆಯೊಳಗರಸುವನೆ ಹೆಡ್ಡ ||15||

ಮುಂಗೈಯ ಕಂಕಣಕೆ ಕನ್ನಡಿ ಪೊಂಗಿ ತೋರುವಂತೆ ತನ್ನ|

ಅಂಗೈಯೋಳ್ ನಿಜಲಿಂಗವಿರೆ ಕರ್ಮಂಗಳೊಳು ಬಳಲುವನೆ ಹೆಡ್ಡ |16||

ಆದ್ಯರ ಮರಣ ವಚನವನ್ನು ಚೋದ್ಯದಿಂದ ಲೋದಿ ಕೇಳಿ|

ಸಧ್ಯ ಮುಕ್ತಿ ಪಡೆಯದೆ ಬಹು ವಿದ್ಯೆಯೊಳು ಬಳಲುವನೆ ಹೆಡ್ಡ ||17||

ಸತ್ತವರ ಕುಣಿಗೈದಿ ಸುತ್ತಿಸುತ್ತಿ ನಮಗಾಯುಷ್ಯ ಭಾಗ್ಯ|

ವಿತ್ತು ಪೊರೆವುದೆಂದು ಜಗದೊಳರ್ಥಿಯಲಿ ಬೇಡುವನೆ ಹೆಡ್ಡ ||18||

ಹಿತದಿ ಮನೆಗೆ ಬಂದ ಜಂಗಮವನತಿಗಳೆsದು ಮತ್ತೊಮ್ಮೆ ನಮಗೆ|

ವೃತನೇಮವಿದೆಂದು ಸಹಸ್ರ ಶತಕ ನೆರಹಿ ಮಾಡುವನೆ ಹೆಡ್ಡ ||19||

ಹಿಡಿದು ಭಕ್ತನಾಗದೆ ಮತ್ತೊಡೆಯ ಜಂಗಮನಾಗದೆ ಈ|

ಪೊಡವಿಯೋಳೊಡಲ್ಹರಕನಾಗಿ ಕಡೆಯೊಳ್ ದುರ್ಗತಿಗೈದವನೆ ಹೆಡ್ಡ ||20||

ಕಳದುಳಿದಾ ಪ್ರಮಥರ ಸುವಾಕ್ಯದ್ಹೊಲಬನರಿಯದೆ ಮತ್ತೆ|

ಮಲಪ್ರಬದ್ಧನಾಗಿ ಜಗದೋಳ್ ಗೆಲಸೋಲಕ್ಹೋರಾಡುವನೆ ಹೆಡ್ಡ ||21||

ತರಳಗೆ ನೆರೆ ಕುದುರೆಯದೊಂದು ಕರಿಕಿಯ ಕೊಡು ವಂದದೊಳಿತ್ತ|

ಕುರುಹನೆ ಪಿಡಿದಡೆಯಾಡುತ್ತ ಮೇಲರಿಯದೆ ಭವಕೈದುವನೆ ಹೆಡ್ಡ ||22||

ಪಿರಿಯರನ್ನು ಮರೆತು ತಾನೆ ಗುರುಚರರೇಶನೆಂದು ತನ್ನ|

ಚರಣವನೆ ತೊಳೆ ತೊಳಿಸಿಕೊಂಡು ಸುರಿದು ನಲಿದಾಡುವನೆ ಹೆಡ್ಡ ||23||

ಶ್ರೇಷ್ಠವಾದ ಶಿವನು ತಾನೆ ಎಷ್ಟು ವರ್ಣವಾದ ಪರಿಯ|

ನೈಷ್ಠೆಯಿಂದೆ ತಿಳಿಯದೆ ಕ್ರಯವ ಕೊಟ್ಟಿದಿರಿಟ್ಟಾಚರಿಸುವನೆ ಹೆಡ್ಡ ||24||

ಅರಸರಿಯದ ಬಿಟ್ಟಯಂತಿರ್ಪ ನರಲೋಕಾಚಾರವನೆ ಪಿಡಿದು|

ಶರಣರ ಸನ್ಮಾರ್ಗವನು ಜರಿದು ಚರಿಸಿ ನರಕಕ್ಕೆದುವನೆ ಹೆಡ್ಡ ||25||

ಬಾಳುತ್ತಲೆ ಲಿಂಗೈಕ್ಯನಾಗಿ ಕಾಲರಹಿತನಾಗದಂತೆ|

ಕಾಲಕೈಕ್ಯನಾದೆನೆಂಬ ಕಾಳುಮನುಜನವನೆ ಹೆಡ್ಡ ||26||

ಇಷ್ಟಪ್ರಾಣ ಭಾವವೇಕೊ ನೈಷ್ಟಿಯಿಂದರಿಯದೆ ಭಿನ್ನ

ವಿಟ್ಟಿಜಿಸುತ್ತೀ ಜಗದೊಳಗೆ ತಾಂ ಹೊಟ್ಟೆಹೊರಕೊಂಬುವನೆ ಹೆಡ್ಡ ||27||

ಲಿಂಗಕ್ಕೆ ಮುಖಜಂಗಮವಾದ ಇಂಗಿತವನರಿ ದರ್ಪಿಸದೆ ಜಡ

ಲಿಂಗಕ್ಕೆ ತೋರುಂಡು ಪ್ರಸಾದಂಗವಾಯಿತೆಂಬುವನೆ ಹೆಡ್ಡ ||28||

ನೀನೆ ಶಿವನೆಲೆಮಗನೆ ಎಂದು ಜ್ಞಾನನಿಧಿ ಶ್ರೀಘನಮಠವಾಸ|

ತಾನರುಹಿಸ ನಿಜವಗಲಿ ಜ್ಞಾನಧ್ಯಾನಪೂಜೆಯೊಳಾಳುವನೆ ಹೆಡ್ಡ ||29||

ಇತರರಿಯದಿರ್ದರೇನೆಲಾ ನಿನ್ನಂತರಂಗ|

ಸ್ಥಿತಿಯು ಮೇಶನರಿಯನೇನೆಲಾ|| ||ಪ||

ಇತರರಿಯದಿರ್ದರೇನು ಶತಶತಾಪರಾಧಗಳನು|

ಕೃತಕತನದಿ ಮಾಡಿ ಧರ್ಮಯುತನು ಮೆನಿಸಿ ಕೊಂಬಭಾವ ||ಅ.ಪ||

ದೇಹ ವಾಸನಾಹಮಾದಿ ಕೂಹಕತ್ವದಂತರಂಗ|

ದ್ರೋಹಿಯಾಗಿ ಪೊರಗೆ ಪುಣ್ಯದೇಹಿಯೆನಿಸಿ ಕೊಂಬಭಾವ ||1||

ಕಾಮ ಕ್ರೋಧ ಲೋಭ ಮೋಹ ತಾಮಸಾದಿಗಳೊಳು ಸಿಲ್ಕಿ|

ಭೂಮಿ ಜನರ ಕೂಡ ಮಹಾಸ್ವಾಮಿಯೆನಿಸಿ ಕೊಂಬಭಾವ ||2||

ವಂಚಕತ್ವ ಕಿಂಚಗುಣ ಪ್ರಪಂಚ ವಾಂಛದಿಂದ ಚಿತ್ತ|

ಸಂಚಲಾತ್ಮನಾಗಿ ನಿಷ್ ಪ್ರಪಂಚಿಯೆನಿಸಿ ಕೊಂಬ ಭಾವ ||3||

ಹೊನ್ನು ಹೆಣ್ಣು ಮಣ್ಣಿನಾಶೆಯನ್ನು ಮನದೊಳಿಟ್ಟು ಜನರ|

ಕಣ್ಣು ಕಟ್ಟಿ ಸುಳಿಯುತೆ ಬಹು ಮಾನ್ಯನೆನಿಸಿ ಕೊಂಬ ಭಾವ ||4||

ಆಶೆರೋಷ ದ್ವೇಷ ವಸ್ತು ದೂಷಕತ್ವದಿಂದೆ ಮಹಾ|

ದೋಷಿಯಾಗಿ ಪೊರಗೆ ಶಿವನ ವೇಷ ಹೊತ್ತು ಚರಿಪ ಭಾವ ||5||

ತನುವೊಳೊಂದು ಮತ್ತೆ ನಿನ್ನ ಮನದೊಳೊಂದು ಬಾಹ್ಯದೊಳ್ವ|

ಚನದೊಳೊಂದ ನಿಟ್ಟು ಗುಣಗುಣೆನುತ ಬೆರಳನೆಣಿಸೊ ಭಾವ ||6||

ಪ್ರಾಣದೊಳಗೆ ಮರಗುತಿಂತು ನೀನು ಕೀರ್ತಿ ವಾರ್ತೆಗಾಗಿ|

ಏನ ಬೇಡಲಿತ್ತು ಮಹಾ ದಾನಿಯನಿಸಿ ಕೊಂಬ ಭಾವ ||7||

ರಾಗ ದ್ವೇಷ ಮೋಹ ಲಜ್ಜೆ ಭೋಗಭಾಗ್ಯಗಳೊಳು ಪ್ರೀತಿ

ನಾಗಿ ಮರ್ತ್ಯದೊಳಗೆ ಬಹುವಿರಾಗಿಯೆನಿಸಿ ಕೊಂಬಭಾವ ||8||

ಘಾತಕಗುಣ ಸೂತಕತ್ವ ಜಾತಿ ಭ್ರಾಂತಿಯಿಂದ ನೇಕ|

ಪಾತಕೇಷ್ಟನಾಗಿ ಸ್ವಯಂಜ್ಯೋತಿಯೆನಿಸಿ ಕೊಂಬ ಭಾವ ||9||

ವಿೂನ ದೊರೆವ ತನಕ ಬಕವ ದೇನುವೆನ್ನದಿರ್ಪ ತೆರದಿ|

ನೀನು ಕಪಟ ವೇಷದಿಂದ ಮೌನಿಯನಿಸಿಕೊಂಬ ಭಾವ ||10||

ಆರು ಕಾಣದಂತೆ ಮನದಿ ಘೋರ ಪಾತಕೇಷ್ಟನಾಗಿ|

ಭೂರಿ ಜನರ ಮುಂದೆ ನೀತಿಸಾರಿ ಪೇಳುವಂತ ಭಾವ ||11||

ದರ್ಪಕಾರಿ ಭಕ್ತಿಯುಕ್ತಿದಪ್ಪಿಯುಭಯ ಭ್ರಷ್ಟನಾಗಿ|

ತಿಪ್ಪಿಸಾರ್ಸಿದಂತೆ ವೇಷದೊಪ್ಪಿನಿಂದ ಚರಿಪಭಾವ ||12||

ಕಳವು ಹಾದರವನು ಲೋಕದೊಳುನುಗೈದು ನೀನು ಮತ್ತೆ|

ಬಲು ವೀವೇಕಿಯೆನಿಸಿ ಮರ್ತ್ಯದೊಳಗೆ ಸುಳಿಯುತಿರ್ಪಭಾವ ||13||

ಮನಸಿನೊಳಗೆಗೈದ ದೋಷ ಜನರಿಗರಿಯ ಬಾರದಿನ್ನು|

ಮನಕೆ ಮನವೆ ಸಾಕ್ಷಿಯಾದ ಘನಮಠೇಶ ತಾನೆ ಬಲ್ಲ ||14||

ಕಾಯೊದೈ ಗುರುರಾಯ ಬಸವನೆ|

ಕಾಯೋ ಮೋಕ್ಷಸದುಪಾಯ ಪ್ರಮಥ ಸಮು|

ದಾಯ ವರ್ಯ ನಿರ್ಮಾಯ ನಿರಘನೆ ||ಪ||

ಯೋಗ್ಯಜ್ಞಾನ ವೈರಾಗ್ಯ ಭಕ್ತಿಸೌ

ಭಾಗ್ಯ ಪೂರ್ಣ ಸರ್ವಜ್ಞ ಚಿತ್ತನೆ ||1||

ಕಂದನೆಂದು ದಯದಿಂದ ಹೆದರಬೇ

ಡೆಂದ ಭಯವ ಕೊಟ್ಟಿಂದು ಬಂದು ನೀ ||2||

ಅಕ್ಷಯಕರ ಸಂರ್ತ್ಯಕ್ಷರ ಪಾಠಕ

ಪಕ್ಷ ಭಕ್ತಸುರವೃಕ್ಷ ದಯಾನಿಧೆ ||3||

ಅದ್ಭುತ ಚರಿತ ಜಗದ್ಭರಿತೋಜ್ವಲ

ಚದ್ಭಸಿತಾಂಗ ಸಮುದ್ಭೂಷಣನೆ ||4||

ಸ್ಥೈರ್ಯ ಭಕ್ತಿ ಸೌಂದರ್ಯ ಸತ್ಪಥಾ

ಚಾರ್ಯನಪಮದೌದಾರ್ಯ ಶೌರ್ಯನೆ ||5||

ಅಪ್ರಮೇಯ ಭಕ್ತಿ ಪ್ರಿಯ ಗಾನರ

ಸಪ್ರವೀಣ ಪರಮ ಪ್ರಸನ್ನನೆ ||6||

ಈಶ ಘನ ಮಠನಿವಾಸ ದೀನಜನ

ಪೋಷ ಘೋರ ಭವನಾಶ ನಿತ್ಯನೆ ||7||

ಶರಣನಾಗ ಬಾರ ದಾರಿಗೆ ಈ ಜಗದಿ ಸತ್ಯ ಶರಣನಾಗ ಬಾರ ದಾರಿಗೆ|

ಶರಣನಾಗ ಬಾರದಾರಿಗರುಹಿ ನಿಂದೆ ಶರೀರಕರಣ|

ವುರುತರಾತ್ಮ ಲಿಂಗದಲ್ಲಿ ಬೆರೆದು ಪೂರ್ಣವಾದ ಸತ್ಯ ||ಪ||

ಊರ ತೊರೆದು ಹಾರಿ ಕಾಡಸೇರಿ ನಿತ್ಯ ಜಲ ಫಲಾಪ|

ಹಾರಿಯಾಗಿ ಘೋರ ತಪಸಿ ಸಾರಿಯೆನಿಸಬಹುದು ಸತ್ಯ ||1||

ಈಶನಾಮ ವಾಸುಭೂತಿ ಮೋಸದಿಂದ ಹೂಸಿ ನೆನೆದೆ|

ವಾಸಿಯಿಂ ಗಿರೀಶ ಪುರನಿವಾಸಿಯಾಗಬಹುದು ಸತ್ಯ ||2||

ವಿೂಸೆ ಗಡ್ಡ ಮುಂದೆ ಬೆಳಿಸಿ ಗೋಸಿ ಹಂಗಹರಿದ ಡಂಭ|

ವೇಷದಿಂದ ತ್ರಿವಿಧ ಸನ್ಯಾಸಿಯಾಗಬಹುದು ಸತ್ಯ ||3||

ಸಿದ್ಧರಸವ ಬದ್ಧಗೊಳಿಸಿ ಶುದ್ಧಿಯಿಂದ ಮುದ್ದೆ ಮಾಡಿ|

ಬುದ್ಧಿಯಿಂದಲಷ್ಟಮಂತ್ರ ಸಿದ್ಧಿನಾಗಬಹುದು ಸತ್ಯ ||4||

ಹಲವು ಜಪ ಸಮಾಧಿ ಕ್ರಿಯೆಗಳೊಲಿದು ಮಾಡಿ ತಾನು ಭಿನ್ನ|

ಫಲಪದಂಗಳನ್ನು ಪಡೆದು ಛಲಿಗನಾಗಬಹುದು ಸತ್ಯ ||5||

ಭೋಗಭಾಗ್ಯಗಳೊಳು ವಾಂಛೆ ನೀಗಿ ಸಕಲ ಜನರಿಗಿಷ್ಟ|

ವಾಗಿ ದಾನವಿತ್ತು ಜಗದಿ ತ್ಯಾಗಿಯಾಗಬಹುದು ಸತ್ಯ ||6||

ವೇದಸು ವೇದಾಂತ ನ್ಯಾಯವಾದ ತರ್ಕ ಮರ್ತ್ತದೊಳಗೆ|

ಓದಿ ಪ್ರೌಢಿಯಿಂದೆ ಶಾಸ್ತ್ರವೇದಿಯಾಗಬಹುದು ಸತ್ಯ ||7||

ತೋರ ಸಜ್ಜೆಯಲ್ಲಿಯೊಂದು ತೋರಲಿಂಗವಿಕ್ಕಿ ಮತದ|

ಮೇರೆಯಿಂದ ಕಪಟ ವೇಷಧಾರಿಯಾಗಬಹುದು ಸತ್ಯ ||8||

ಮೂಗು ಮುಚ್ಚಿಕೊಂಡು ತಲೆಯವಾಗದಾಶುಗವನು ಬಲಿದು|

ಯಾಗ ಶ್ಲೇಷ್ಮೆವುಂಬ ಕರ್ಮಯೋಗಿಯಾಗಬಹುದು ಸತ್ಯ ||9||

ಆಗಮಾರ್ಥದರಿವ ನೈಜವಾಗಿ ತನ್ನೊಳರಿಯದೊಂದು|

ಸೋಗು ಹಾಕಿಕೊಂಡು ಒಣವಿರಾಗಿಯಾಗಬಹುದ ಸತ್ಯ ||10||

ಘನಮಠೇಶನೊಳಗೆ ತ್ರಿವಿಧ ತನುವನಿತ್ತು ಮತ್ತೆ ಮರಣ|

ಜನನವಳಿದು ನಿರ್ಗುಣತ್ವವನು ಕರಿಸುತಲಾ ಸತ್ಯ ||11||

ಕರುಣಸಾಗರ ದೇವ ಕಾಯೋ ನಿತ್ಯ|

ಪರತತ್ವಮತಿ ಎನ್ನ ದೊರೆ ದಾನವೀಯೋ|| ||ಪ||

ಮಾಯಮರ್ದನ ಮೋಕಷೋಪಾಯ ಸದ್ಭಕ್ತನಿ|

ಕಾಯ ಹೃತ್ಸರ ಸಿಜಾಗಾರ ನಿರಸೂಯ ದುರ್ಗುಣ

ಸಮುದಾಯಾವಹಾರ ||1||

ಎನಗೇನು ಬೇಡ ನಿಮ್ಮನುಭಾವಿಗಳ ಪದವನಜರೇಣು

ಶಿರದೊಳು ಧರಿಸಿ ನೈಜ|

ವನು ತೋರಿ ಕರ್ಮವೆಲ್ಲವನು ಪರಿಹರಿಸಿ ||2||

ಶಾಶ್ವತ ಘನಮಠದೀಶ್ವರ ನಿನ್ನ ಚಿದೈಶ್ವರ್ಯದೆನ್ನ ಭಾವದಲಿ ಸಕ|

ಲೇಶ್ವರ ನೀ ನೆಲಸಿಹುದದನೆ ಬೇಗದಲಿ ||3||

ಓದಿ ಓದಿ ಯೇನಾದಿ ಮರುಳೆ ಯದರಾಗಿ ತಿಳಿಯಲಿಲ್ಲ|

ಓದಿದ ಫಲ ಸದ್ಭಕ್ತಜನರಿಗಹುದೀ ಧರೆಯೊಳು ಖುಲ್ಲ ||ಪ||

ಹಲವು ಶಾಸ್ತ್ರ ತಂತ್ರಗಳೋದಿ ತ್ರೈಮಲವನು ಬಿಡಲಿಲ್ಲ|

ಫಲವೇನೈ ಗಿಳಿಯೋದಿ ಮಲವ ತಿಂದೊಲದಾಯ್ತು ಚದುಲ್ಲ||ಅಪ||

ಮಲವಿರಹಿತ ಶರಣರ ನಡೆನುಡಿಗಳ ತಿಳಿದು ಚರಿಸಬಲ್ಲ|

ಬಲವಂತನೆ ಪಂಡಿತನವಗೀ ಜಗದೊಳಗಾರ್ ಸರಿಯಲ್ಲ|| ||1||

ವೇದಶಾಸ್ತ್ರು ಪೌರಾಣಾದಿಗಳು ಹಾದರದೋದಲ್ಲ|

ಶ್ರೀದಸಖನ ನಿಜವರಿಯದೆ ಕೂಗುತೆ ಗಾದಿಯಾದವಲ್ಲ||

ವೇದಶಾಸ್ತ್ರ ಪುರಣಾಗಳೋದಿದ ವೇದಾದಿಗಳೆಲ್ಲ|

ಭೇದವನರಿಯದೆ ಭಂಗಬಟ್ಟವರು ಪೋದವು ನಿಜವಲ್ಲ|| ||2||

ಕುಂದದಾಸೆಯಿಂದೋದಿ ಜನರನೊಲಿಸಿಂದು ಬಾಳ್ವುದೆಲ್ಲ|

ಹಂದಿತಪವ ಮಾಡುತೆ ಪಾಳ್ಮನೆಯನ್ನೊಂದೆ ಪಡಿವೊಲಲ್ಲ||

ಛಂದಸಾದಿ ಷಟ್ ಶಾಸ್ತ್ರಗಳವು ಶಿವನಂದವರಿಯಲಿಲ್ಲ|

ಮಂದಮನುಜ ಯವನನುಕರಿಸುತೆ ಗರ್ವಾಂಧನಾದಿಯಲ್ಲ|| ||3||

ಕಪ್ಪುಗೊರಳನುಸುರಿಪ್ಪಾಗಮತತಿಯೊಪ್ಪಿ ಪಠಿಸಲಿಲ್ಲ|

ಅಲ್ಪ ಕಥೆಗಳನು ಪೇಳಿಯೊಳಡಲು ಹೊರುತಿಪ್ಪಿಹುದದನೆಲ್ಲ||

ತುಪ್ಪದಾಸೆಗಾಶುನಕನ ಶುದ್ಧ ವದಪ್ಪಿತಿಂಬೊಲಲ್ಲ|

ತಿಪ್ಪಿಯ ಬಾಳುವೆಯಪ್ಪವನಿನಗೆ ಗಣಪ್ರಸಾದವಿಲ್ಲ|| ||4||

ಆಯತವರಿಯದ ಜನರು ಮೆಚ್ಚಿ ಬಹುಮಾಯದ ನುಡಿಹೊಲ್ಲ

ಬಾಯಿ ತೆರದು ಪೇಳಲ್ ದಾರಿದ್ರಘಹೋಯಿತೆ ನಿನಗೆಲ್ಲ||

ಧೀಯುತರದನಲ್ಲಾ ಯೆಂದುಸುರಲುಪಾಯದಿ ತಿಳಿಲಿಲ್ಲ|

ಛೀಯೆನಲದನೆ ಬಲಿಯನಿಕೊಳುವವನ್ಯಾಯವಾಯಿತಲ್ಲ|| ||5||

ಆಚೆಯ ಮಾತದನೀಚೆಯೊಳೂಹಿಸಿ ಚಾಚಲದೇನಿಲ್ಲ|

ಈಚಲದಿಂದ ನರಿಯು ವೈಕಾರದಿಯಾಚರಿಸುವೋಲಲ್ಲ||

ಯಾಚಕ ವೃತ್ತಿಗೆ ಭೂಚಕ್ರದಿ ಯತಿವಾಚಕನಾದೆಲ್ಲ|

ನೀಚ ಮನುಜ ಜ್ಞಾನಾರ್ಥಕೋದಿ ಭವಮೋಚನಾಗಲಿಲ್ಲ|| ||6||

ಶ್ರೀಯುತ ಶಾಸ್ತ್ರವನೊರೆದು ನೀನು ಮೋಕ್ಷಾಯತವರಿಲಿಲ್ಲ|

ಕಾಯಮೋಹ ಮಮಕಾರ ವಾಸನವದೇ ಉಳಿದಿಹುದಲ್ಲ||

ನ್ಯಾಯಶಾಸ್ತ್ರ ನೀತಿಯ ಪೇಳುತಲನ್ಯಾಯದೋಳಿಹುದೆಲ್ಲ|

ನೇಯಪಾಲ್ ಪರರಿಗೆ ಕೊಟ್ಟು ಮಹಿಷಿ ಪಶುವೊಲಾಯಿತಲ್ಲ|| ||7||

ಶುಂಭಕವಿಗಳಾಶಯವರಿಯದೆ ನೀ ಹುಂಬತನದಿ ಸುಳ್ಳಾ|

ಕೊಂಬಕಿತ್ತದಾಡಿನಪರಿಯೊದರುತೆ ಶುಂಭನಾದಿಯಲ್ಲ||

ನಂಬಿ ಪ್ರಮಥರಾಡಂಬರ ವಚನವ ಸಂಭ್ರಮದರಿಲಿಲ್ಲ|

ತೊಂಬುಲಗಳ್ಳನೆನಿಸುತನ್ಯರ ನುಡಿಗಿಂಬುಗೊಟ್ಟೆಯಲ್ಲ|| ||8||

ಸ್ವರ್ಣವ ತೂಗಿದ ಕಟ್ಟಳೆಯದು ತಾಂ ಸ್ವರ್ಣವಾಗಲಿಲ್ಲ|

ವರ್ಣಕ ವಸ್ತುಕ ಟೀಕೆಯ ಪೇಳಿನೀಂ ಪೂರ್ಣನಾಗಲಿಲ್ಲ||

ದುರ್ನರನೇ ಶರಣರ ವಾಕ್ಕವನಾಕರ್ಣಿಸಿ ತಿಳಿಲಿಲ್ಲ|

ನಿರ್ಣಯವರಿಯದೆ ಒದರಿಯೊದರಿ ನರಕಾರ್ಣವಾಳಿದಲ್ಲ|| ||9||

ಕುರಿಯಾಳ್ದನ ಕುರುಹರಿದು ಬೆಂಬಿಡದೆ ತಿರುಗಿತಿರ್ಪುದಲ್ಲ|

ನರನಾಗುತ್ತಕ್ಷರಿತನಾಗಿ ಕರ್ತರನು ತಿಳಿಯಲಿಲ್ಲ||

ಕುರಿಗಿಂದತ್ತಲು ನಿನ್ನ ಬಾಳು ಈ ಧರೆಯೊಳಗಿಹುದಲ್ಲ|

ಗರುವದಿಂದ ಶರಣರನು ಜರೆದು ಬಹು ದುರಿತವಡದೆಯಲ್ಲ|| ||10||

ನಿಶ್ಚಲವಸ್ತುವನರುಪುವ ಹಿರಿಯರ ನಚ್ಚಿ ಭಜಿಸಲಿಲ್ಲ|

ಹುಚ್ಚುನಾಯಿ ಬೇಟೆಗೆ ಬಿಡಲೊಡೆಯನ ಕಚ್ಚುವೋಲಾಯ್ತಲ್ಲ||

ಅಚ್ಚಶರಣರನುವರಿಯದೆ ನೀಂಬಹು ತುಚ್ಛವಾಡಿದಲ್ಲ|

ಮೊಚ್ಚಿಲಿ ಬಾಯೊಳಗುಚ್ಚಿ ಹೊಯಿಸುತೆ ಮನೆಚ್ಚರಿಸುವನಲ್ಲ|| ||11||

ವೇದಾಂತದೊಳುದ್ಭವಿಸಿದ ಜ್ಞಾನವದಾದಿ ವಿದ್ಯೆಯಲ್ಲ|

ಸಾಧಿಸಿ ಸುಜ್ಞಾನದಿ ಚರಿಸುವನವನೇ ದೊರೆ ಜಗಕೆಲ್ಲ||

ಭೇದವಾದಿ ಚರನೋದಿ ಪೇಳ್ವ ಮಹದಾದಿ ತತ್ವದೆಲ್ಲ|

ಮಾದಿಗರೊಳು ಶ್ರುತಿ ಸರಸದೋದಿದಂತಾದುದು ನಿಜವಲ್ಲ|| ||12||

ಖಂಡಪರಶುವಿನ ಶರಣರನುಭವವನುಂಡು ದಣಿಯಲಿಲ್ಲ|

ಕೆಂಡವ ತುಳಿದಿಹ ಮಂಗನಂತೆ ಗರಿಕೊಂಡು ಬಿದ್ದಿಯಲ್ಲ||

ಭಂಡ ನೀನುಸುರ್ಧ ವೀರಶೈವದ ಪ್ರಚಂಡ ವಿದ್ಯೆಯಲ್ಲ|

ಚಾಂಡಾಲರ ಭಾಂಡದೊಳಿಹ ತೀರ್ಥವ ಕಂಡೊಲಾಯಿತಲ್ಲ|| ||13||

ಜಲಧಿ ಬಾಯ್ದೆರೆಯೆ ಹಲವು ರತ್ನಗಳು ಹೊಳೆದು ದೊರೆವವಲ್ಲ|

ಕಲಕು ನೀರು ತುಂಬಿದ ಮಡುವದು ಬತ್ತಲು ಹೊಲಸುಗಳಲ್ಲ||

ಬಲವತ್ ಶರಣರು ಬಾಯ್‍ದೆರೆಯಲು ಮುಕ್ತಿಲಲನೊಲಿವಳಲ್ಲ|

ಕಲಹನರರು ಬಾಯ್ದೆರೆಯೆ ನರಕದೋಕುಳಿಯಾಗಿಹುದಲ್ಲ|| ||14||

ಸಾಧಿಸಿ ನಿತ್ಯಾನಿತ್ಯವಿವೇಕವ ಭೇದಿಸಿ ತಿಳಿಲಿಲ್ಲ|

ಗಾದಿಮಾತುಗಳ ಕಲಿತು ನೀನು ಪಶುವಾದಿಯೆನಿಸಿದೆಲ್ಲ||

ಮೇದಿನಿಯೋಳ್ ಪರಮಾರ್ಥವರಿಯದನ ವೇದವಿದ್ಯೆಯೆಲ್ಲ|

ಓದಿ ಕೆಟ್ಟ ಬರೆ ಕೂಚಭಟ್ಟನಂತಾದುದು ನಿಜವಲ್ಲ|| ||15||

ಆನೆಯ ಕಂಡಾಶುನಕ ಬೊಗಳಲದಕೇನು ಕೊರತೆಯಲ್ಲ|

ಹೀನಮಾನವರು ಜರಿಯಲದಕೆ ಸುಜ್ಞಾನಿಯಳುಕಲಿಲ್ಲ||

ಕಾಣದೊಂದು ಕಂಡೊಂದಾಡಲ್ಕನುಮಾನವಗೊಳಲಿಲ್ಲ|

ಭಾನುವಿಂಗೆ ಮಣ್ ತೊರಲು ಕಣ್ಣೋಳ್ ತಾನೆ ಬೀಳ್ವುದಲ್ಲ|| ||16||

ಜಾತಿಹೀನರಿಗೆ ಜಾರ ಜನರಿಗೀ ನೀತಿ ಸೊಗಸದಲ್ಲ|

ನೀತಿವಂತರಿಗೆ ನಿಜ ಮಹೇಶ್ವರರ್ಗೀತೆರ ಪಾಲ್ವಳ್ಳಾ||

ಮಾತುಗಳ್ಳರಿಗೆ ಪಾತಕೇಷ್ಟರಿಗಿದೇ ತೊರೆಯದೆಸಲ್ಲ|

ಪ್ರೀತಿಲಿ ಘನಮಠನಾಥಕೃಪೆವಡೆದಾತನಿದನು ಬಲ್ಲ|| ||17||

ಕುಲವೇ ಶಿವಕುಲವೈ ಭಕ್ತನ|

ಕುಲವೇ ಶಿವಕುಲವೈ||

ಕುಲವೇ ಶಿವಕುಲ ವಿಲಸದ್ ಗುರುಕರ|

ಸ್ಥಲದೊಳು ಜನಿಸಿದಮಲ ಹರಭಕ್ತನ|| ||ಪ||

ಕೆಸರೋಳ್ ಕುಂಜವದು ಜನಿಸೆ|

ಕೆಸರೆನಿಸದ ತೆರನು|

ಅಸಮ ಪುಣ್ಯದಿಂ ಪಶುಪತಿ ಭಕ್ತನೆ|

ನಿಸಿ ತಾನೆಲ್ಲುದಯಿಸಲಾತನ ಸತ್| ||1||

ಮುತ್ತುದಯಿಸಿ ಜಲದೊಳ್ ಜಲವದು|

ಮುತ್ತಾಗಿರದದರೋಲ್||

ಮರ್ತ್ಯದೊಳಗೆ ತನುವೆತ್ತು ಪೂರ್ವವಳಿ|

ದುತ್ತಮ ಗುರು ಸತ್ ಪುತ್ರನಾದವನ|| ||2||

ಹಸರು ಪುಳನ ಭ್ರಮರ ಪಿಡಿದೊಯ್|

ದ್ಹಸಿಯ ಗೂಡೊಳದರ||

ಹಸನಾಗಿಡೆ ಪರವಶದಿ ಭೃಂಗನಾ|

ಗೆ ಸದಾ ಪರಿಗುರು ಶಿಶುವಾದಾತನ|| ||3||

ಧರೆಯ ಮೇಲಿನ ಜಲವ ಧರೆಯೊಳ್|

ಶರಧಿಯಳೊಡವೆರೆವಾ||

ಪರಿಯಿಂದೀ ತನುಕರಣ ಪ್ರಾಣಗುರು|

ವರಗರ್ಪಿಸಿ ತಾಂ ಗುರುವಾದಾತನ|| ||4||

ಜನನೀಪಿತರ ಸಂಗದಿ

ತಾ ಜನಿಸಿದ ಶರೀರ|

ಮಾಜದೆ ಖಂಡಿಸಿ ಯಾ ಜಗದ್ಗುರು ನಿ

ರ್ ಬೀಜದೀಕ್ಷೆವಡೆದೀಜಿತಪಾಶನ|| ||5||

ತಂದೆ-ತಾಯ್ಗಳವಗೆ ಹಿಮಗಿರಿ|

ನಂದನೇಶರೆಮಗೆ||

ಬಂಧು ವರ್ಗಮವರ್ಗಿಂದು ಭಕ್ತಜನ

ವೆಂದು ಹೊಗಳುವದರಿಂದ ಮಹಿಮನ|| ||6||

ನಾದಾಂಶದಿ ಜನಿಸಿ ಮತ್ತಾ|

ನಾದಾಂಶದಿ ನಟಿಸಿ||

ನಾದತ್ಮಕ ತಾನೆಂದು ತಿಳಿದು ಪರ

ನಾದ ಲಿಂಗಗುರು ಬೋಧದಿ ಪಡೆದನ|| ||7||

ವೇಧೆ ಸುಮಂತ್ರ ಕ್ರಿಯಾ ದೀಕ್ಷೆಯ|

ಮೋದದಿ ಪಡೆದನಯ್ಯಾ||

ಈ ಧರೆಯೊಳು ತನ್ನಾಧಿಮಧ್ಯ ತುದಿ|

ಸಾದರದಿಂ ತಿಳಿದಾ ಶಿವಾತ್ಮಕನ ||8||

ಮಲ ಸಂಭೂತರಿಗೆ ಜಗದೊಳ್|

ಕುಲದ ಹಂಗವರಿಗೆ||

ಸುಲಭ ಘನಮಠ ಸ್ಥಲದೊಳು ನೆಲೆಸಿದ|

ಲಲಿತ ಶ್ರೀ ಗುರುವಿನೊಳು ಬೆರೆದಾತನ|| ||9||

ಕೊಡು ಕೊಡು ಕೊಡು ಕೊಡು ಬೇಗ|

ಹಡೆದೊಡವೆ ಶರಣ ಸಂಗತಿಗೀಗ||

ಕಡು ಲೋಭದಿ ಘಳಿಸಳಿವಾಗ ನಿ

ನ್ನೊಡನೆ ಬಾರದದರೊಳು ಹಾಗ ||ಪ||

ಸತಿ ಸುತ ಹಿತರಿಗೆ ಬೇಕೆಂದು ಧನ|

ವ್ಯಥೆಯೊಳು ಗಳಿಸಿ ಮಡಿಯೆ ಮುಂದು|

ಸತಿಪರಪತಿಗಡಕುವಳಂದು ಅರಿ|

ಸುತನಾಹಿತರ ಹಿತರುಮೆಂದು ||1||

ಧನವ ಭೂಮಿಯ ಗಿದಿಡಬೇಡ ಉರು|

ಫಣಿಭೂತಂಗಳು ನೆಲಸಿ ಗಡ|

ನಿನಗೆ ಸಾಧ್ಯವಾಗದೊ ಮೂಢ ಸು|

ಮ್ಮನೆ ಕೆಡುವದು ನೀನೋಡ ನೋಡ ||2||

ಉಣದೆಯುಡದೆ ಕೃಪಣ ತನದೊಳು ಬಲು|

ಹಣವ ಘಳಿಸಲೇಂ ಮೋದದೊಳು||

ಕುಣಿಯೊಳಗಿಡುವಾವೇಳೆಯೊಳು ಮ|

ಣ್ಣನೆ ತುಂಬುವರವಯವದೊಳು ||3||

ಧರ್ಮಕಗ್ನಿನೃಪತಸ್ಕರರು ಬಲು|

ಮರ್ಮದಿ ತಾಂ ಭಾಗಾದಿಯರು||

ಧರ್ಮಹೀನನಾಗಿರಲವರು ತನು|

ಚರ್ಮವೆತ್ತಿಯ ಪಹರಿಸುವರು ||4||

ನಿತ್ತಯವಲ್ಲಿವಿ ಸಂಪತ್ತು ಹಿಂದೆ|

ಕರ್ತರಾಗಿ ಹೋದರು ಸತ್ತು|

ಮೃತ್ಯುವಿಗಾಗುವಿ ನೀ ತುತ್ತುಸತ್|

ಪಾತ್ರದಾನವರಿತೀ ಹೊತ್ತು ||5||

ಶಿವನ ಸೊಮ್ಮು ಶಿವಶರಣರಿಗೆ ನೀ|

ನವಿವೇಕದಿ ವಂಚಿಸಲು ಮಿಗೆ||

ಜವನ ಭಟರು ತಮ್ಮೂರೊಳಗೆ ಕಾ|

ಡುವರು ಹಂಗಿ ಹಂಗಿಸಿ ಕಡೆಗೆ ||6||

ಧರಣಿಯೊಳಗೆ ಘನಮಠಧೀಶ ತನ್ನ|

ಮರೆಯಲೆಂದು ದ್ರವ್ಯದೊಳಾಸೆ||

ಪರಿಕಲ್ಪಿಸಿ ಮಾಡುವ ಮೋಸ ಇದ|

ನರಿತು ಸುಜನರಿಗೆ ಮಾನೀಸ ||7||

ಗುರುವೇ ನೀ ಕರುಣಿಸೋ ಬೇಗ ||ಪ||

ಪರಮಪಾವನ ನಿಮ್ಮ ಉರುಭಕ್ತಿ ಜ್ಞಾನಸ|

ದ್ವಿರತಿ ಸಂಪದವೆನ್ನ ದೊರೆಯೇ ನೀ ಕರುಣಿಸೊ ||1||

ಅನುಮಾನವಳಿದೆನ್ನ ತನುಮನಧನವ ನಿಮ್ಮ|

ದೆನಿಸಿ ಪರಮಸುಖವನಧಿಯೊಳಿಹುದನೆ ||2||

ಘನಮಠವಾಸನೆನ್ನನು ಪರಿಕಿಸದೆ ಸ|

ಜ್ಜನಶರಣರ ಸಂಗವನುದಿನ ದಯದಿ ನೀ ಕರುಣಿಸೊ ||3||

ಪರಮೇಶ ಪಾಹಿ ಜೀಯಾ ಸುಖಕರ ಶಿವ ಮಹನೀಯ ||ಪ||

ವರದ ತ್ರಿಜಗದ್ ರಕ್ಷ ಗತಮಣ ದಕ್ಷ ಶಿಕ|

ಪುರಹರ ಮುನಿಗಣ ಪಕ್ಷ ಶಿವಶರಣ ಕಲ್ಪವೃಕ್ಷ ||1||

ಸಾಮಗಾನ ಲೋಲ ಭಮ ಭೀವ ವಿಜಿತ ಕಾಲ|

ಶುಭನಾಮ ವರದಯಾಲ ಧೃತ ಸೋಮ ಮುಕ್ತಿ ಮೂಲ ||2||

ಭಾವ ಭವ ವಿನಾಶ ಸದ್ಭಾವ ನಿಜ ನಿವಾಸ ಹೈ|

ಮಾವತಿ ಸುಪ್ರಾಣೇಶ ಮದ್ದೇವ ಘನಮಠೇಶ ||3||

ಗಿರಿಜಾ ರಮಣ ಮಹೇಶ ಚಿರಮಾಮವ ಜಗದೀಶ|

ಶರಭವ ವರ ಜನಕ ಚಿದಾಭರಣ ಭವ ವಿನಾಶ ||ಪ||

ದುರಿತಗಹನದಹನ ಶಿವಶಂಕರ ಮರಣರಹಿತ ಸುಧಾ

ಕರ ಸರಸಿಜಸಖ ಶಿಖಿದೃಗ ಮುರಹರಪ್ರಿಯ ಭೋ

ಶಿವ ವ್ಯೋಮಕೇಶ ||1||

ನಂದಿವಾಹ ನಾಮಳಯತಿವೃಂದ ನಮಿತ ಚರಣ ಶ್ರೀ|

ನಂದನ ಮದ ಸಿಂಧೂರ ಪ್ರಮೃಗೇಂದ್ರ ಶಾಶ್ವತಾದ್ವಯ

ಸುಗಿರೀಶ ||2||

ವರದ ಶ್ರೀ ಘನಮಠ ನಿವಾಸ ಶರಣಕುಲಚಕೋರ ಗೌರೀ|

ದ್ವಿರದ ಚರ್ಮಾಂಬರ ಕೃಪಾರಸ ಶರಧೆ

ಪಾಂಡುರಗಾತ್ರ ಸುಪರಮೇಶ ||3||

ಶ್ರೀ ಮತಿಯುತ ಗುರುರಾಯ ಬಸವಂಗೆಣ್ಣೆ

ಶ್ರೇಯರ್‍ಚ್ಚುವ ಬನ್ನಿರೆ ||ಪ||

ಸನ್ನುತಾಂಗಿಯರು ಸ್ವರ್ಣದ ಬಟ್ಟಲೊಳು ಸಂಪಿ

ಗೆಣ್ಣೆಯ ತುಂಬುತಲಿ|

ಮನ್ನಣೆಯಿಂ ಸುಪ್ರಸನ್ನ ಬಸವಣ್ಣಗೆ

ಳ್ಳಣ್ಣೆ ಹಚ್ಚುವ ಬನ್ನಿರೆ ||1||

ಸಾರ ಕಸ್ತೂರಿ ಘನಸಾರ ಶ್ರೀಗಂಧದ

ಸಾರವಗಡಣಿಸುತೆ|

ಮೂರು ಲೋಕಂಗಳ ಮುದದಿ ಪೊರೆವ ಘನ

ಧೀರಗ್ಹಚ್ಚುವ ಬನ್ನಿರೆ ||2||

ಚಿನ್ನದೋಲೆಯ ಬಳೆ ರನ್ನದ ಮೂಗುತಿ

ಯನ್ನುಳಿದಾ ತೊಡಿಗೆಗಳ|

ಚೆನ್ನಾಗಿ ಧರಿಸುತಲಣ್ಣ ಬಸವಣ್ಣಗೆ

ಳ್ಳಣ್ಣೆ ಹಚ್ಚುವ ಬನ್ನಿರೆ ||3||

ಶರಣ ಸತಿಯರು ಪರಮ ಮುತ್ತೈದೇರು

ಹರುಷದಿಂದಲಿ ಪಾಡುತೆ|

ಸಿರಿಗಂಧದೆಣ್ಣೆಯ ಸ್ಥಿರಮುಕ್ತಿಯರಸೆಗೆ

ಭರದಿ ಹಚ್ಚುವ ಬನ್ನಿರೆ ||4||

ಅಗಣಿತ ಮಹಿಮಗೆ ಜಗದೇಕವೀರಗೆ

ನಿಗಮ ಗೋಚರನಿಗೆ|

ಸೊಗಸಿಂದಲೆಳ್ಳೆಣ್ಣೆಯಘಹರ ಬಸವಗೆ

ಸುಗುಣೇರ್ ಹಚ್ಚುವ ಬನ್ನಿರೆ ||5||

ಎಲ್ಲ ಜನರೋಳೋರ್ವನಲ್ಲ ವೀತನೆ ಶಿವ

ಹುಲ್ಲೆಗಂಗಳೆಯರೆ|

ಉಲ್ಲಾಸಂದಿದೆಣ್ಣೆ ಕಲ್ಯಾಣ ಬಸವಂಗೆ

ಚೆಲ್ವೇರ್ ಹಚ್ಚುವ ಬನ್ನಿರೆ ||6||

ಗಂಗಾಂಬೆಯರ ಪ್ರಾಣ ಸಂಗವಾಗೊಪ್ಪುವ

ಸಂಗನ ಬಸವನಿಗೆ|

ಶೃಂಗಾರದಲಿ ಪಾಡುತಂಗನೆಯರು ತೈಲ

ವಿಂಗೆದ್ಹಚ್ಚುವ ಬನ್ನಿರೆ ||7||

ಇದೆ ಮುಕ್ತಿ ಮಾರ್ಗಮಿಂತಿದೆ ಭಕ್ತಿ ಮಾರ್ಗಮಿಂ

ತಿದೆ ಧರ್ಮ ಮಾರ್ಗಮಿದೆ|

ಮದನಾರಿ ಭಕ್ತಿಯರ್ ಸದಯ ಬಸವಂಗೆಣ್ಣೆ

ಮುದದಿ ಹಚ್ಚುವ ಬನ್ನಿರೆ ||8||

ಬಸವನ ನೋಡುತೆ ಬಸವ ಪಾಡುತೆ

ಬಸವನೊಳ್ ಕೊಡುತೆ|

ವಶವಾಗಿ ಘನಮಠವಾಸಗೆ ಕಮ್ಮೆಣ್ಣೆ

ಕುಶಲೇರ್ ಹಚ್ಚುವ ಬನ್ನಿರೆ ||9||

ಗುರುವರ ಪಾಹಿ ಸದಾ ಮಾಂ ಭೋ|

ಭೋ ಭೋ ಭೋ ಭೋ ||ಪ||

ಭಾವ ಭವಾಹಿತ ಭವಭಯ ಕುಲಹತ|

ಅಗಣಿತಾಘಾಪಹಾರ ಭೋ| ಗುರುವರ ಅಗಣಿತಾ ಭೋ ||1||

ಘನಮಠ ವಾಸ| ಮುನಿಗಣ ಪೋಷ|

ಜನನ ಮರಣ ನಾಶ| ಗುರುವರ ಜನನ ಮರಣ ನಾಶ ||3||

ಪಾವನ ನಾಮ ಭೋ ದೇವ ಪಾಹಿಮಾಂ|

ದೇವ ದೇವ ಪಾಹಿ ಮಾಂ ||ಪ||

ಮೃಢ ಕರಣಾರಸ ಜಡಧೆ ಗಿರೀಶ|

ಉಡುಪತಿಭೂಷ ಭೋ ದೇವ ಪಾಹಿ ಮಾಂ ||1||

ನಿಗಮ ಹಯಾದ್ವಯ ತ್ರಿಗುಣ ವಿದೂರ|

ನಗವರ ಚಾಪ ಭೋ ದೇವ ಪಾಹಿ ಮಾಂ ||2||

ಘನಮಠ ವಾಸ ಮುನಿಜನ ಪೋಷ|

ಪ್ರಾಣವ ಸ್ವರೂಪ ಭೋ ದೇವ ಪಾಹಿಮಾಂ ||3||

ಸಿದ್ಧರಾಮಘ ವಿರುದ್ಧ ಜಯತು ಜಗ|

ದುದ್ಧಾರ ಪರಿಶಿವಾಕಾರರೆ ||ಪ||

ಜನನ ಮರಣ ಭಯ ಘನಮಾರುತ ಶುಭ|

ಗುಣ ತ್ರಿನಯನ ಸುವಿಚಾರರೆ ||1||

ಅವಿನಾಶನ ಶಾಂಭವ ದೀಕ್ಷಾಯತ|

ಪ್ರವಿಮಲಮನಸಾಂಭೋಜರೇ ||2||

ಚಿರಸೊನ್ನಲಪುರ ವರನಾಥಾಮಯ|

ಹರ ಘನಮಠ ನಿಜವಾಸರೆ ||3||

ಚೆನ್ನಬಸವೇಶ ಚಿದಮೃತಸಾಗರ|

ಗಣಕುಶಲ ಶೇಖರ ||ಪ||

ಪರಮ ಪ್ರಸಾದ ಸುಶರೀರವೆನಿಸಿದುರು

ತರ ಷಟ್‍ಸ್ಥಲ ಗುರುವರ ನಿರುಪಮ ಶಿವ ||1||

ಪ್ರಣವದ ರಹಸ್ಯಾರ್ಥವ ಸಿದ್ಧರಾಮಗೆ|

ಅನುವಿಂದಲರುಹಿಸಿದನಘ ಕೃಪಾಕರ ||2||

ಗುರು ಬಸವೇಶನ ಕರುಣ ಸ್ವತಂತ್ರದಿ|

ಭರದಿ ಪಡೆದ ಸುರುಚಿರ ಘನಮಠಪತೆ ||3||

ಲೋಭಿಗಿಂದಿತರವಾಗಿ|

ದುರ್ಗುಣಗಳೀ ಭುವಿಯೊಳುಂಟೆ ನೋಡೆ| ಮತ್ತೆ ||ಪ||

ಗುರುಲಿಂಗ ಚರವರ್ಯರೂ|

ಸದ್ಭಕ್ತರುರೆ ಮಹೇಶ್ವರರೆಲೆಗಳು|

ಬಂದು ಭರದಿ ಭಿಕ್ಷಾಯನಲ್ಕೆ|

ವೈರಿಗಳ ಪರಿಗಂಡು ಪರಿವಜ ಶಿವಾ ಮತ್ತೆ ||1||

ಮನಿಯೊಳಗೆ ಹೆಣನು ಪೋಗೆ ಅಲ್ಲಿರುವ|

ಜನರ ಮುಂದಳಲ್ಪ ಬಿಳಲ್ವನೆದಕೆ||

ಹಣ ವೆಚ್ಚವಾದುದಕ್ಕೆ|

ಅಳುವನಾ ಹೆಣಕಳನು ಬಿಕ್ಕಿ ಬಿಕ್ಕಿ ಮತ್ತೆ ||2||

ಬೇಡ ಬಂದ ವರ್ಗಳೊಡನೆ|

ಒಂದು ಮಾತಾಡಗರ ಸೋಂಕಿದನೊಲೂ|

ಜನರೂ ಹಾಡಿ ಹರಸಲು ಹೆಣನದಲ್

ತಾನು ಮುಖ ಬಾಡಿತ್ತಲತ್ತ ನೋಡಾ ಮತ್ತೆ ||3||

ಹೆಣನಾಶ್ರಯಿಸಿದ್ದವರಿಗೆ|

ಅಷ್ಟಷ್ಟು ಹಣವು ದೊರಿವದು ಜಗದೊಳು ನೋಡೆ

ಹೆಣಕಿಂದ ಕಷ್ಟವಾದ|

ಈ ಜೀವದಾ ಹೆಣನಾಶ್ರಯಿಸಿ ನಿಷ್ಫಲಾ ||4||

ಶುದ್ಧ ಲುಬ್ಧನ ಕೊಲ್ಲಲು|

ಜಗದೊಳಗೆ ಮದ್ದೊಂದಿಲ್ಲ ನೋಡೆ|

ಅವನ ಬದಿಲಿದ್ದ ದ್ರವ್ಯವ ಕೇಳಲು|

ಸಾಯ್ವ ಪ್ರಸಿದ್ಧ ಘನಮಠ ವಾಸನಗಲಿ|| ||5||

ಜಯ ತೇ ಸದಾಶಿವ ಜಯ ಜಯ ಶಿವಾಧವ ||ಪ||

ಶ್ರೀಶ ಸಕಲ ಸಮಸ್ತ ಭುವನ ಪೋಷ ಶ್ರುತಿಹಯ|

ಸರ್ವೇಶ ಗಗನಕೇಶ ಪಾರ್ವತೀಶ ಗತ ಭಯ ||1||

ಕಾಲ ಕಾಲ ವರಮಹ ಭಕ್ತಲೋಲ ಶ್ರೀಕರ|

ಕರುಣಾಲವಾಲ ವ್ಯಾಲಮಾಲ ಬಾಲ ಶಶಿಧರ ||2||

ಅನರ್ಘ ಘನಮಠೇಶ ಶರಣ ಜನಸುರದ್ರುಮಪಾ|

ವನ ಶರೀರ ಕಲುಷನಿಚಯ ಘನತ ಮಾರ್ಯಮಾ ||3||

ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ| ಈ ಸೂಳೆ ಮಕ್ಕಳಿ|

ಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ||

ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯೊ ಕಳ್ಳಹಾದರಗಿತ್ತಿಯಾ ಪರಿ|

ಖುಲ್ಲತನದಲಿ ಚರಿಸಿ ಶಿವಪದವೆಲ್ಲಿ ಕಾಣದೆ ಸಾವು ತಿಹರಿಗೆ ||ಪ||

ಒಳ್ಳೆ ನಾಗರ ಹಾವು ಹಿಡಿತಂದು| ಗಾರುಡಿಗನಂಗಳ|

ದಲ್ಲಿ ಭಲರೇ ಭಲರೆ ಭಲರೆಂದು| ಆಡಿಸುತಮಿದಕಿ|

ಷ್ಟಿಲ್ಲಿ ಹಾಲೆರಿರವ್ವಯಯೆಂದು| ಬೇಡಿಡರೆ ನಮ್ಮ|

ಲ್ಲಿಲ್ಲ ಇಲ್ಲಿಂದಾಚಿಗಾಗೆಂದು| ಪಳಿಯುತ್ತ ಭ್ರಷ್ಟರು|

ಬೆಲ್ಲವಾಕಳ ಹಾಲು ನಾರಿಯರೆಲ್ಲ ಸಂಭ್ರಮದಲ್ಲಿ ಪಿಡಿಯುತ|

ಕಲ್ಲನಾಗರ ಮೇಲೆ ವ್ಯರ್ಥದಿ ಚೆಲ್ಲುತಿಹ ಪಾಪಾತ್ಮರಿಗೆ ಮತ್ತೆಲ್ಲಿ|| ||1||

ಉಣುವ ಜಂಗಮದೇವರೈ ತಂದು| ಹಸಿವೆನಲು ಮುಂದಿನ|

ಮೆಗೆ ಹೋಗಿಲ್ಲೇಕೆ ನಿಂತೆಂದು| ಪಳಿಯುತ್ತ ಸಕ್ಕರಿ|

ಕಣನ ಮುಂತಾದವನು ಬಲಿತಂದು| ತೀರ್ಥಾರ್ಥಿಯೊಳು ಧಾ|

ರುಣಿಯ ತಿರುಗುತ ಬಳಲಿ ತಾವಂದು| ಪರಿಭ್ರಮಿತರಾಗುತೆ|

ಕುಣಿ ತೆವರ್ ಮಣ್ಣುಳ್ಳ ಗರಿಕನನಗುಹಂಗಳನರಸಿ ಕಷ್ಟದಿ|

ಉಣದ ಕಲ್ಲಿಗೆ ಅಟ್ಟುನೀಡುವ ಬಣಗಮಾನವ ಪಶುಗಳಿಗೆ ||ಮ|| ||2||

ಇಂದು ವೊಂದ್ಹೊತ್ತೆಂದು ಕಲ್ಪೆಸುತೆ| ನೈರರ್ಥ ಪ್ರಾಣನ|

ಕೊಂದು ಮಹಾತ್ಮದ್ರೋಹವಾರ್ಜಿಸುತೆ| ಆ ವೇಳೆಯೊಳು ಹಿರಿ|

ಹಂದಿಯಾಪರಿ ಮಲವ ಭುಂಜಿಸುತೆ| ಎಮ್ಮೊಳಗೆ ಹಸು ಹೋ|

ಯ್ತೆಂದು ದುರ್ಮೋಹದಲಿ ಹರ್ಷಿಸುತೆ ಅಕಟೀಭವಿಗಳು|

ಕಂದುಗೊರಳನ ಭಕ್ತಿ ಜ್ಞನಾನಂದರಸ ಸ್ಥಿರವಾಗಿಯುಂ ಮುದ|

ದಿಂದೆ ಕಾಣದೆ ಸಂಶಯಯದಿ ಬಹುದಂದುಗಕ್ಕೊಳಗಾದ

ಹೊಲೆಯಿರಿ ಗೆಲ್ಲಿ ||3||

ಮತ್ತೆ ನಾಗರ ಪಂಚಮಿಯಲ್ಲಿ| ಜನರೆಲ್ಲ ಹಾಳ|

ಹುತ್ತ ಹುಡುಕುತ ಪೋಗಿ ತಾವಲ್ಲಿ| ನಾಗಪ್ಪಯೆಂದೊದ|

ರುತ್ತ ಗಲ್ಲವ ಬಡಿದುಕೊಂಡಲ್ಲಿ| ಇಷ್ಟಾರ್ಥಗಳ ಬೇ||

ಡುತ್ತಲರಿಷಿಣ ದಾರ ಕೈಯಲ್ಲಿ| ಕಟ್ಟಿರುವವರುಗಳ|

ಚಿತ್ತ ವೃತ್ತಿಯ ಪರೀಕ್ಷೆಗಾ ಹೆಡೆಯೆತ್ತಿಯಾಡಲ್ಕೆವ್ವನಾನಿ|

ನ್ನೆತ್ತವೋಡಲಿಯೆಂದು ಕಲ್ಮರನೆತ್ತಿ ಹಾಕೆಂದೆಂಬ ಹೊಲೆಯಿರಿ ಗೆಲ್ಲಿ| ||4||

ಉಪಮವರಿದುಪವಾಸಿಯಾಗದೆ| ಅತಿಯಾಸೆ ಬಡುತಿಹ|

ಚಪಲಗುಣವದು ಕೆಟ್ಟು ಪೋಗದೆ| ಕ್ಷುತ್‍ತೃಷೆಯು ನಿದ್ರೆಯೆ|

ನಿಪ ನಿರೋಧವನೆಲ್ಲ ನೀಗದೆ| ಕರ್ಮಂಗಳೆಲಲವ||

ನಪಹರಿಸಿ ನಿಶ್ಚಿಂತರಾಗದೆ| ಈ ಪಾಪಿಗಳ್ಳರು|

ಅಪರಿಮಿತ ಶ್ರೀ ಘನಮಠೇಶನನುಪಮವರಯದೆ ಕಂಡಕಂಡದ|

ಉಪವಾಸಂಗಳ ಮಾಡುತಿಹ ಯೀತಪನಜಾತನ ಕುರಿಯಮರಿಗಳಿಗೆಲ್ಲಿ ||5||

ದೂಷಣೆ ಮಾಡಲದೊಂದೆ ಜನರತಿ ಭೂಷಣೆ ಮಾಡಲದೊಂದೆ|

ಈ ಷಣತ್ರಯದ ದೋಷವಳಿದು ನಿರ್ದೇಷಿಯಾದ

ಪರದೇನಗೆ ಜಗದೊಳು ||ಪ||

ಪ್ರೀತಿಲಿ ಕರೆದೊಯ್ದೀ ತನನಗೆ ಶಿವನೆಂದೋತು ವಂದಿಸಲದೊಂದೆ|

ಜಾತಿಹೀನನೆಂದಾತುರದಿಂದಲಿ ಮಾತುಗಳಾಡಲದೊಂದೆ ||1||

ಹೋಳಿಗಿ ತುಪ್ಪೊಳ ಮನೆಯೊಳು ನೀಡುತ ವೀಳ್ಯವನೀಯಲದೊಂದೆ|

ಸೂಳೆ ಮಗನೆಯೆಂದೊದರುತ ಹಳಸಿದ ಕೊಳ

ಹಾಕಲದೊಂದೆ ||2||

ಅಯ್ಯಪ್ಪಾಯೆಂದೊಯ್ಯನೆ ಘನತರ ಶಯ್ಯದೊಳುತತಿಳಿಸಲದೊಂದ|

ಕೈಯವಿಡಿದು ಯೆಳದೆಳದು ನೂಕುತಲಿ ಹೊಯ್ಯಲು

ಬಯ್ಯಲದೊಂದೆ ||3||

ಬಲ್ಲವರೆಂದುಲ್ಲಾಸಿಸಿ ಪಾಡುತ ಪಲ್ಲಕ್ಕಿ ಮೆರೆಯಲದೊಂದೆ|

ಸಲ್ಲದಿವನು ಬಲು ಕಳ್ಳನೆಂದು ಪುರದಲ್ಲಿದ್ಹೊರಡಿಸಲೊಂದೆ ||4||

ತನು ಕರಣಂಗಳು ಪುಸಿಯೆಂದವರಿಗೆ ವಿನಯಾ ವಿನಯಗಳೊಂದೆ|

ಘನಮಠೇಶನೊಳನುದಿನ ಬೆರೆದಿರುವನಿಗೆ

ಶುಭಾಶುಭವೊಂದೆ ||5||

ಧಿಯಾನಿ ದಯಾನಿಧಿ ದಯಾನಿಧಿ ಶಿವ

ಸ್ವಯಾನುಭವ ಸುಖ ಪ್ರದಾಯವಯವ ಆರ್ಯಾಧವ ||ಪ||

ಮುರಸುರಾರಿ ಕಮಲಜಾದ್ಯ ಮರಾರ್ಚಿತ ಪದ|

ಪುರಾರಿ ಗಗನಕೇಶ ಮಹೇಶ್ವರ ರಹಿತಮದ ||1||

ಝಷ ಪತಾಕದಹನ ಗಿರಿನಿವಾಸಾಮಯಹತ|

ವೃಷೇಂದ್ರಗಮನ ಪರಮ ಪಾವನ ಸೋಮಧೃತ ||2||

ಹುತಾಶನೇಂದ್ರಿಯಾಘು ಕುಲರಹಿತಾ ಭಯಕರ

ಯತೀಶ ಹೃದಯ ಸರಸಿಜಾವಿರತ ಭಾಸ್ಕರ ||3||

ಗಜಾಸುರಾರೆ ಭಕ್ತದೇವ ಕುಜಾಧ್ವರಹರ|

ದ್ವಿಜೇಶಭೂಷ ಭೋ ಭವಭಯ ವ್ರಜಾಪಹರ ||4||

ಸದಾಶಿವಾಖಿಳೇಶ ವರ ಧನದಾಮಳ ಸಖ|

ಚಿದಾಬ್ಧೆ ಘನ ಮಠೇಶ ಭೋ ವರದಾಮಿತ ಸುಖ ||5||

ದೇವ ದೇವ ಪಾಲಿಸಯ್ಯ ಪಾವನಾಕಾರ|

ಪಾವನಾಕಾರ ಪಾವನಾಕಾರ ||ಪ||

ತಾರ ಹಾರಹೀರ ಘನಸಾರ ಸಶರೀರ ಸುಖ|

ಸಾರ ವೀರಭಕ್ತ ಪರಿಪೂರ ಮಾರಹರ ಧೀರ ||1||

ಕಾಲಕಾಲ ವ್ಯಾಲಮಾಲಶೀಲ ಗಾನಲೋಲ ಮುನಿ|

ಜಾಲಪಾಲ ಮಾಯಕೋಲಾಹಲ ಬಾಲ ಶಶಿಧರ ||2||

ಶೇಷಭೂಷ ದೋಷನಾಶ ಶ್ರೀಶಧೀಶತೋಷ ಮುಕ್ತಿ|

ಕೋಶ ಪರಮೇಶ ವ್ಯೋಮಕೇಶ ಘನಮಠೇಶ ಈಶ ||3||

ಧ್ಯಾನವ ಮಾಡೋ ನಿಜಗುರು ಧ್ಯಾನವ ಮಾಡೋ|

ಮಾನವ ನೀನತಿಮತಿಯುತನೆನಿಸುತೆ ||ಪ||

ಜನಗದೊಳಗನುದಿನ ನಗುರೋರಧಿಕಮೆಂದು|

ಪೊಗಳುವ ಶ್ರುತಿಮತವಗಲದೆ ಮುದದೊಳು ||1||

ವರಕರುಣದೊಳಡಿಗೆರಗಿದವರ ಸ್ಮರ|

ಹರನೆನಿಸುವ ಶರಣರ ಸುರಭೂಜನ ||2||

ಮನುಮುನಿಜನ ಸುರಗಣರಿಗೆ ಮೊದಲಿಗ|

ನೆನಸಿದನಘ ಶ್ರೀಘನ ಮಠೇಶನ ||3||

ನರರಿಗೆಂತಹುದಯ್ಯಾ ಹರಭಕ್ತಿ| ಬಸವಾಂಶಗಲ್ಲದೆ|

ನರರಿಗೆಂತಹುದಯ್ಯಾ ಹರಭಕ್ತಿ

ನರರಿಗೆಂತಹುದಯ್ಯಾ ಹರಭಕುತಿರದೆ ಗುಡಿ ಹೋಗುತೀಶ್ವರೇಶನ|

ಮರೆದು ಕೆರಹಿನ ಚಿಂತಿಹಲನೋಲ್ ತರುಣಿ ಧನವನು

ಕರಿಸಿರುವದುರ್ ||ಪ||

ಕರವಿಡಿದ ಸತ್ ಸತಿಯಳಂ ಪಡಿದು| ಕಣ್ ಮುಂದೆ ಸಲೆಚರ|

ವರರು ನೆರೆಯುತಲಿರಲಿ| ಬಲವರಿದು| ಗರ್ಭದೊಳು ಜನಿಸಿದ|

ವರ ಕುಮಾರನನಾಯುಧದಿ ಕಡಿದು ದಿಗ್ಬಲಿಯ ಮಾಡು||

ತ್ತಿರದೆ ಬಿರಿನುಡಿಯಿಂದೆ ಜರೆದೊದೆದು| ಮತ್ತಂತುಮಲ್ಲದೆ|

ಸೆರಗುಗೊಂಡೆಳದಾಡಿ ಶೂಲದಲಿರಿಯಲದ ತರಹರಿಸುತಂ ಶಾಂ|

ತರಸಭರಿತನುಮಾಗಿ ಶರಣೆನುತ್ತಿರುವದದು ಬಸವಾಂಶಗಲ್ಲದೆ ||1||

ಶೂಲಿಲಾಂಛನರೈದೆ ಜಗದೊಳಗೆ| ಪರಿಪರಿಯೊಳುಂದುಶ್|

ಶೀಲದಲಿ ನಡೆತರಲ್ ಕವರಡಿಗೆ| ಎರಗುತ್ತೆ ಭಯದಿಂ|

ಮೇಲು ಮಾರ್ಗವಿದೆನ್ನು ತಡಿಗಡಿಗೆ ತಚ್ಛರಣರಾಚರ||

ಣಾಳಿಮನದೋಳ್ ಬಿಡದೆ ನೆನೆದು ಮಿಗೆ| ಹರ್ಷಿತನುಮಾಗುತೆ|

ಫಾಲದೋಳ್ ಶ್ರೀಭೂತಿಯಕ್ಷಸುಮಾ|

ಲೆಕೊರಳೋಳ್ ಧರಿಸಿದರನೆ|

ಕಾಲಹರನೆಂದೆಂಬ ಭಾವದಿ ಪಾಲಿಪುದು ಬಸವಾಂಶಗಲ್ಲದೆ ||2||

ಅಂಗದಲಿ ಶಿವಲಿಂಗವುಳ್ಳವರ ಕಾಣುತ್ತ ಕೂಡಲ|

ಸಂಗನೆಂದೆಜಿಸುತ್ತಲವರವರ| ಪರಮ ಪ್ರಸಾದವ|

ಪಿಂಗದೆ ಭೋಗಿಸುತೆ ಸೌಖ್ಯಕರ| ನಾಗುತ್ತೆ ಸಂಕ|

ಲ್ಪಂಗಳಂ ಪರಿಹರಿಸಿ ಚರವರರ| ವಚನಾನುಸಾರದಿ|

ಸಾಂಗವಾಗಿಯೆ ನಡೆಯುತಂಗಗುಣಂಗಳೆಲ್ಲವ ದಹಿಸಿ ವೀರ ವ್ರ|

ತಂಗಳಂ ಪಿಡಿದಾಚರಿಪ ಭಕ್ತ್ಯಂಗವದು ಬಸವಾಂಶಗಲ್ಲದೆ ||3||

ಬೇಡಿದರ್ಥವನಿಲ್ಲೆನದೆ ಕೊಟ್ಟು| ಮನದೊಳೆ ಇದನಾ|

ಮಾಡಿದೇನೆಂಬುದನು ನೆರೆಬಿಟ್ಟು ನಿರಹಂಕೃತಿಯೊಳೋ|

ಲಾಡಿ ತೂಳದ ಮ್ಯಾಳದವನುಟ್ಟು| ಇಹಪರ ಭ್ರಾಂತೀ||

ತಾಡಿ ಕರ್ಮಂಗಳನು ಸೆಲೆ ಸುಟ್ಟು| ಸದ್ಭಾವಿಯಾಗುತೆ|

ನಾಡೆ ತ್ರಿಕರಣ ತ್ರಿವಿಧ ಲಿಂಗಕೆ ನೋಡಿಯರ್ಪಿಸಿ ತತ್ ಪ್ರಸಾದವ

ಪ್ರಾಢಿಯಿಂ ಪಡಿಯುತ್ತ ನಿಜದೋಳ್ ಕೂಡಿ ಹುದು ಬಸವಾಂಶಗಲ್ಲದೆ ||4||

ಪಂಚವಿಂಶತಿ ತತ್ವಗಳನಳಿದು| ಪರಮಾರ್ಥದಿಂ ಶಿವ|

ಪಂಚಮುಖ ಪಂಚಾಕ್ಷರದಿ ತಿಳಿದು| ಚಾತುರ್ಯದಿಂದಾ|

ಪಂಚ ಲಿಂಗಾಂಗಗಳ ಕಳೆಯರಿದು| ತನುಮನದೊಳಿಹ ಪ್ರ|

ಪಂಚವಾಸನೆ ಗುಣಗಳಂ ಜರಿದು| ನಿಶ್ಯಂಕನಾಗುತೆ|

ಪಂಚ ಸಾದಾಖ್ಯವನು ಇಂದ್ರಿಯ ಪಂಚಕವ ಪರತರದ ಸಂಜ್ಞಾ|

ಪಂಚಕವ ಶ್ರೀ ಘನಮಠೇಶನೊಳ್ ಹಂಚಿಹುದು ಬಸವಾಂಶಗಲ್ಲದೆ ||5||