ಪಾದಪೂಜೆಯ ಮಾಡಬೇಕಮ್ಮ | ಗುರುರಾಯನ
ಪಾದಪೂಜೆ ಮಾಡಬೇಕಮ್ಮ ||
ಪಾದಪೂಜೆ ಮಾಡಬೇಕು | ವೇದಗಳನೆ
ತಿಳಿಯಬೇಕು | ವಾದಿಸದೆ ತತ್ವ ಜ್ಞಾನದ ಹಾದಿಯನ್ನೆ
ತಿಳಿಯರಮ್ಮ || ಪ ||

ತನುವಿನಾಶೆಯ ಬಲ್ಲವರೆ ಕೇಳಿ ನಿಮಗೆ
ನೀವೇ ತಿಳಿಯಬೇಕಮ್ಮ ಜನನ ಮರಣ ಹರಣ
ಗಳನು ತನಗೆ ತಾನೆ ದೂರ ಮಾಡಿ
ವಿನಯದಿಂದ ಕೂಡಿರಮ್ಮ || ಪ ||

ರತ್ನ ಮಂಟಪ ನಿಲಿಸಬೇಕಮ್ಮ
ಅಜ್ಞಾನದಲ್ಲಿ ಸತ್ಯವಸ್ತು ಕಾಣದಲ್ಲಮ್ಮ
ಮುಕ್ತಿ ಪಾವನ ಮಾರ್ಗದಲ್ಲಿ ವಿರಕ್ತಿಯಮ್ಮ
ಚಲನೆಗಳನೆ ಕೃತ ಬಸವಲಿಂಗ ದೇವನ ಗೊತ್ತು
ನೀವು ಕಾಣಿರಮ್ಮ || ಪಾದಪೂಜೆ ||

ಇಂಥ ಜನ್ಮವ ಕಳೆದುಕೊಂಡರಿನ್ನೆಂಥ ಜನ್ಮವು
ಬರುವುದೋ ಅಂತರಂಗದಿ ಚಿಂತಿಸಿ ನೋಡಿನ್ನೆಂಥ
ಜನ್ಮವು ಬರವುದೋ ಎಂತೋ ಬಂತೋ ಕಾಕಕಾಳ
ನ್ಯಾಯದಂತೀ ಜನ್ಮವು ಇಂಥ ವೇಳೆಯ ಬಿಟ್ಟರೆ
ಇನ್ನೆಂಥ ಜನ್ಮವು ಬರುವುದೋ ನೀನು ಜ್ಞಾನಿಯಾದರೆ
ಎಷ್ಟೋ ಸಾರ್ಥಕವಾದುದು ನೀನೀ ಜನ್ಮ ಅಜ್ಞಾನಿಯಾದರೆ
ನಷ್ಟ ವ್ಯರ್ಥವಾದುದು ಭಕ್ತಿಯೇ ಕಾರಣ
ವಿರಕ್ತಿಗೆ ಯುಕ್ತಿಯೇ ಕರ್ಮವು ಭುಕ್ತಿ ವಿಷಯಾನಂದವು
ನಾರಿಮಕ್ಕಳ ಕಟ್ಟಿಕೊಂಡು ಬಾರಿಮನೆ ಕಟ್ಟಿದರು
ಪಾರಚಾಕಿಕಾರರಿಂದ ಮಂಚವೇರಿ ಇದ್ದರು
ತೀರಿದರೆ ಋಣ ತೀರಿ ಬೀರಿ ಪಾಶ್ಲಾಮನಾಳುಗಳು
ಬಂದೆಳೆವರೊ ನಾರಿ ಮಕ್ಕಳು ಸೇರಿಕೊಂಡು
ತೊರುಗಂಟೆಂದು ಕೆಳ್ಪರು ಸೇರಿದಾತನು ಬಾರದೋದುದು

ನಾರಿಮಕ್ಕಳು ಯಾರಿಗಾರ್
ಸೇರಿದೇಹದಿ ಮೃತ್ಯವಲೀಯುವ ಧೀರಸ್ಯಾರವ
ತೋರು ತೋರ್ ಇಂಥ ಸಂಸಾರ ನಂಬಿಕೊಂಡು
ಅನಂತ ಜನ್ಮಗಳೆತ್ತಿದೆ ಶಾಂತಸದ್ಗುರು
ವರದ ಶ್ರೀಕಂಠನಂತನೋಳು ಬೆರೆಯದೇ || ಪ ||