ಕೇಳಿದಿರಾ
ಮಹಾಜನರೇ
ಕೇಳಿದಿರಾ?
ದೇವಸ್ಥಾನಗಳನ್ನು ಕಟ್ಟಿಸುತ್ತಾರಂತೆ
ಇವರು,
ಇನ್ನು, ದೇವರುಗಳಿಗೆ ಭಯವಿಲ್ಲ,
ಹಾಲಿನ ಮಳೆ ಸುರಿಯುತ್ತದೆ
ಜೇನಿನ ಹೊಳೆ ಹರಿಯುತ್ತದೆ
ರಾಮರಾಜ್ಯವಾಗುತ್ತದೆ ಇಡೀ ದೇಶ
ಇನ್ನು ತಡವಿಲ್ಲ.

ಆದರೆ, ಮಹಾಜನರೇ ಹೇಳಿ,
ಈಗಾಗಲೇ ಹೊಟ್ಟೆಗಿಲ್ಲದೆ ತತ್ತರಿಸುವ
ದೇವಸ್ಥಾನಗಳನ್ನೇನುಮಾಡೊಣ ?
ಕಣ್ಣಲ್ಲೇ ಬೆಳಕಿಲ್ಲದ
ದೇವಸ್ಥಾನಗಳನ್ನೇನುಮಾಡೋಣ ?
ಬಾಯಿಲ್ಲದೆ ಬತ್ತಲಾಗಿ ಬಿದ್ದ
ದೇವಸ್ಥಾನಗಳನ್ನೇನುಮಾಡೋಣ?
ನೀವೇ ಹೇಳಿ.