ಗುರುವನೆ ಕೂಡಿದೆನೇ ನಾನೊಂದು ಅರುವಿನ
ಲಾಯದಲ್ಲಿ ಇಂತ ನೂರೆಂಟು ನಾಯಿಗಳು
ಬೊಗಳಿದರೇನು ಗೆಳತಿ
ಗುರುವನು ಕೂಡಿದನೇ     || ಗುರುವನೆ ||

ನಿಂದನೆ ಮಾಡಿದರೆ ನಾನು ಹಿಂದಕ್ಕೆ ಹೋಗುವಳಲ್ಲ
ಅಂದಿನ ಜನ್ಮ ಅವರಿಗೆ ಗೆಳತಿ
ಗುರುವನು ಕೂಡಿದೆನೇ    || ಸದ್ಗುರು ||

ಗಟ್ಟೀ ಬೀಜವ ಮಾಡಿ ನೆಟ್ಟನು ಸದ್ಗುರುವು
ಇಷ್ಟಾರ್ಥಗಳನ್ನಿತ್ತು ಪೊರೆಯುವ
ವನಸಿತ ಗುರುವಾನು ಕೂಡಿದನೇ   || ಸದ್ಗುರು ||

ಉತ್ತಿದ ಹೊಲದಲ್ಲಿ ನಾನೊಂದು ಮುತ್ತನ್ನು
ಕಳಕೊಂಡೆ ಕಳಕೊಂಡ ಮುತ್ತು ಹುಡುಕುತ್ತ
ಗೆಳತಿ ಗುರುವನು ಕೂಡಿದನೆ        || ಸದ್ಗುರು ||

ಒಂಭತ್ತು ತೂತಿನ ಕುಂಬಾರ ಗಡಿಗವ್ವ
ಅದರಂಬಲಿ ಕಾಯಿಸಿ ಹದ ಮಾಡಿ ಶರಣರಿಗೆ
ಗುರುವನು ಕೂಡಿದನೆ      || ಸದ್ಗುರು ||

ಅಂಟುಂಡ ಮಡಕೆಯ ಕೊಳೆದಿಟ್ಟ ಗೆಳತಿಯೆ
ನೀ ಇನ್ಯಾರಿಗಂಜಿ ಅಳುತಿಯ ಗೆಳತಿ
ಗುರುವನೆ ಕೊಡಿದನೆ       || ಸದ್ಗುರು ||

ಬಂದ ಪುಣ್ಯದ ರಾಶಿ ಎಂದಿಗೆ ದೊರಿಕಿತೋ
ಅದು ಇಂದಿಗೆ ದೊರೆಯಿತು ಕೇಳೆನ್ನ ಗೆಳತಿ ||
ಗುರುವನು ಕೂಡಿದನೆ      || ಸದ್ಗುರು ||