೨೯.೧೨.೧೯೬೫ನೆಯ ಎಂದರೆ ವಿಶ್ವಾವಸು ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಬುಧವಾರದಲ್ಲಿ ಪೂಜೆಯ ಅನಂತರ ದೇವರ ಮನೆಯಲ್ಲಿ ಶ್ರೀಗುರು ಶ್ರೀಮಾತೆಯರನ್ನು ನೆನೆಯುತ್ತಾ ಈ ನೆನಪಿನ ದೋಣಿಯನ್ನೇರುತ್ತಿದ್ದೇನೆ. ಇಂದಿಗೆ ಅರುವತ್ತೊಂದು ವರ್ಷಗಳ ಹಿಂದೆ ೨೯.೧೨.೧೯೦೪ನೆಯ ಎಂದರೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ ಬಹುಳ

[1] ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ ನಾನು ಈ ಲೋಕಕ್ಕೆ ಕಣ್ದೆರೆದೆನೆಂದು ಹಿರಿಯರು ಹೇಳಿದ್ದಾರೆ. ನನಗೆ ಅದರ ನೆನಪಿಲ್ಲ. ಆದರೆ ಆಪ್ತವಾಕ್ಯದಲ್ಲಿ ಶ್ರದ್ಧೆಯಿಟ್ಟು ತಾನೆ, ನಾವು ಹಿಂದೆ ನಡೆದ ಇತಿಹಾಸವನ್ನು ನಂಬುತ್ತೇವೆ? ದೇವರಿದ್ದಾನೆ ಎಂಬುದೂ, ಅವನ ಪ್ರತ್ಯಕ್ಷ ಸಾಕ್ಷಾತ್ಕಾರ ದೊರೆಯುವ ತನಕ, ಸಿದ್ಧಗುರುವಿನ ಶ್ರುತಿಸದೃಶ ಆಪ್ತವಾಕ್ಯದ ಶ್ರದ್ಧೆಯ ಮೇಲೆ ತಾನೆ ನಿಂತಿರುತ್ತದೆ? ಆದ್ದರಿಂದ ನಮ್ಮ ನೆನಪಿಗೆ ಆಪ್ತವಾಕ್ಯದ ಬೆಂಬಲವು ದೋಣಿಗೆ ಹೊಳೆಯಲ್ಲಿ ನಮ್ಮ ನೆನಪಿನ ದೋಣಿ!

ಇಲ್ಲದೆ ಚುಕ್ಕಾಣಿ
ನೆನಪಿನ ದೋಣಿ
ತೇಲಿ ತೇಲಿ ತೇಲಿ
ಅಲೆ ಅಲೆ ಅಲೆ ಕೇಲಿ
ಅಲೆಯುತ್ತಿದೆ ಪೋಲಿ!

 


[1] ಶ್ರೀ ಮಹಾಮತೆ ಶಾರದಾದೇವಿಯವರ ಜನ್ಮ ತಿಥಿಯೂ ನನ್ನ ಜನ್ಮ ತಿಥಿಯೂ ಒಂದೇ ಆಗಿರುವುದು ನನಗೆ ಆನಂದದ ಮತ್ತು ಹೆಮ್ಮೆಯ ವಿಷಯವಾಗಿದೆ.