೧೯೨೨ರಲ್ಲಿ ಅಚ್ಚಾಗಿರುವ “Beginner’s Muse” (ಬಿಗಿನರ್ಸ್‌ ಮ್ಯೂಸ್‌)ನಲ್ಲಿರುವ ಕವನಗಳೆಲ್ಲ ಅನುಕರಣಶೀಲವಾದ ಬಾಲಪ್ರಯತ್ನಗಳಾಗಿವೆ. ಆದರೆ ೧೯೨೩ರಿಂದ ೧೯೨೬ರ ವರೆಗೆ ಬರೆದಿರುವ ಇಂಗ್ಲಿಷ್ ಕವನಗಳಲ್ಲಿ ‘ಸ್ವಂತಿಕೆ’ ಹೆಚ್ಚು ಹೆಚ್ಚಾಗಿ ಗೋಚರವಾಗುತ್ತಾ ಹೋಗುತ್ತದೆ. ಅಂದರೆ S.S.L.C. ಇಂದ ಮೂರನೆಯ ವರ್ಷದ ಬಿ.ಎ. ವರೆಗೂ ಇಂಗ್ಲಿಷಿನಲ್ಲಿ ಪದ್ಯ ಬರೆಯುವುದನ್ನು ಸಂಪೂರ್ಣವಾಗಿ ಬಿಟ್ಟಿರಲಿಲ್ಲ. ೧೯೨೪ನೆಯ ಜುಲೈ ೩ನೆಯ ತಾರೀಖು ಬುಧುವಾರದಂದು (ಆಗತಾನೆ ಬೇಸಗೆ ರಜಾ ಮುಗಿಸಿ ಬಂದು ಮಹಾರಾಜಾ ಕಾಲೇಜಿಗೆ ಸೇರಿದ್ದೆ.) ಎಂ.ಎಚ್‌.ಕೃಷ್ಣಐಯಂಗಾರರ ಸಲಹೆಯಂತೆ ನಾನು ಜೀಮ್ಸ್ ಎಚ್‌.ಕಸಿನ್ಸ್‌ ಅವರಿಗೆ ನನ್ನ ಇಂಗ್ಲಿಷ್‌ ಕವನಗಳನ್ನು ತೋರಿಸಿ, ಅವರಿಂದ ಕನ್ನಡದಲ್ಲಿಯೆ ಕವನ ಕಟ್ಟುವ ಸೂಚನೆ ಪಡೆದು, ಹಾಗೆಯೆ ಮಾಡತೊಡಗಿದ ಮೇಲೆಯೂ ನಾನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಕವನರಚನೆ ಮಾಡುವ ಉದ್ದೇಶದಿಂದ ಮುಂದೆ ಸಾಗಿದ್ದೆ. (ಆ ಘಟನೆಯನ್ನು ಮುಂದೆ ಚಿತ್ರಿಸುತ್ತೇನೆ.) ಆ ಇಂಗ್ಲಿಷ್ ಕವನಗಳಲ್ಲಿ ಕೆಲವನ್ನು ಪೂರ್ಣವಾಗಿಯೂ ಮತ್ತೆ ಕೆಲವನ್ನು ಭಾಗಶಃವಾಗಿಯೂ ಇಲ್ಲಿ ಕೊಡುವ ಉದ್ದೇಶ ಕನ್ನಡದಲ್ಲಿ ಬರೆಯುವ ಮುನ್ನ ಆ ‘ಕಾಲದಲ್ಲಿದ್ದ ಕವಿಯ ಮನೋಧರ್ಮ, ಅವನ ಆಶೆ ಆಕಾಂಕ್ಷೆ, ಆಲೋಚನೆ, ಭಾವ, ವಸ್ತು, ಛಂದಸ್ಸು ಇತ್ಯಾದಿಗಳ ಪರಿಚಯವಾಗಬಹುದೆಂದೇ ಹೊರತು ಅವು ಭಾಷೆಯಲ್ಲಾಗಲಿ ಭಾವದಲ್ಲಾಗಲಿ ಸಾಹಿತ್ಯದ ಮಟ್ಟಕ್ಕೆ ಏರುತ್ತವೆ ಎಂದಲ್ಲ. ಅವು ಬರಿಯ ತಿಪ್ಪತಿಪ್ಪ ಹೆಜ್ಜೆಯ ಬಾಲಕ ಪ್ರಯತ್ನಗಳು!

೧೯.೯.೧೯೨೩ನೆಯ ತಾರೀಖಿನಲ್ಲಿ ಬರೆದಿರುವ ‘The Cowherd’ (ದನಗಾಹಿ) ಎಂಬ ಕವನದಲ್ಲಿ ನಾಲ್ಕು ನಾಲ್ಕು ಪಂಕ್ತಿಯ ಏಳು ಪದ್ಯಗಳಿವೆ! ಅವುಗಳಲ್ಲಿ ಮೊದಲನೆಯ ನಾಲ್ಕು ಇಂತಿವೆ:

He smiles and he sings all alone
Beneath the banyan tree;
The cadence of his bamboo tone
Swells sweetly O’er the lea.

The withered leaves do whirl and dance
In the hot summer noon;
And the wild hilly sweet expanse
Doth quiver to his tune.

The birds seek shelter in the shade,
The land lies in a swoon;
The blithest foliage pants, to fade
And waste its spring-time boon.

Full wearied lie the peaceful kine;
The hear the cadence sweet,
While in the blazing hot sunshine
The summer gales do greet…

ಅದೇ ದಿನ ಬರೆದ ಮತ್ತೊಂದು ಕವನ “The Cowherd’s Flute” (ದನಗಾಹಿಯ ಕೊಳಲು)

Traveller, a moment pause,
Pass not this dale with haste;
Or listen as you slowly pass,
The flute of this jovial waste.

Sweetly does the cadence creep
Into the weary ears;
See, how does the forest sleep
The rustic flute as it hears!

Is it the song of the soul
Or the great song of heaven
That flows from every hole
As if by instinct driven?

Behold how his fingers roll
By power of music driven!
Traveller, does it not console
A heart to misery given?…

ಆ ಸಮಯದಲ್ಲಿ ನನ್ನ ಚೇತನ ಸ್ವಾಮಿ ವಿವೇಕಾನಂದರ ಭಾಷಣಗಳನ್ನೋದಿ ತನ್ನ ಅಗ್ನಿಪಕ್ಷಗಳನ್ನು ಬಿದಿರ್ಚಿ ಆಕಾಶಗಾಮಿಯಾಗುತ್ತಿತ್ತು. ಉಪನಿಷತ್ತುಗಳು, ಭಗವದ್ಗೀತೆ, ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶ್ರೀಕೃಷ್ಣಚೈತನ್ಯ ಮೊದಲಾದ ಆಧ್ಯಾತ್ಮಿಕ ವಿಭೂತಿಗಳ ಜೀವನ ಚರಿತ್ರೆಗಳ ಅಧ್ಯಯನದಿಂದ, ನನ್ನಾತ್ಮದಲ್ಲಿ ಒಂದು ಅದ್ವೈತಭಾವ ಓಲಾಡುತ್ತಿತ್ತು. ಈ ಮುಂದಿನ (To My Soul) (ನನ್ನ ಆತ್ಮಕ್ಕೆ) ಕವನದಲ್ಲಿ ಅದರ ಪ್ರಭಾವವನ್ನು ಕಾಣಬಹುದು. ನಾಲ್ಕು ಪಂಕ್ತಿಯ ಒಂಬತ್ತು ಪದ್ಯಗಳಿವೆ. ಕೆಲವನ್ನಿಲ್ಲಿ ಕೊಟ್ಟಿದೆ.

Deem not, O Soul, that thou art bound,
For thou art perfect, firm and pure;
Know that thou art the King uncrowned,
Unsoiled, immutable and sure.

Think not, O Soul, that thou do’st live,
And neither ponder thou shalt die;
For Life and Death shall never strive
To rule the Absolute and High…

Thank that thou art the Holy-one,
Pervading all the universe;
Tho’Omnipotent yet unknown,
Unseen thou dost each bosom nurse.

Nor Life, nor Death commands thee Free,
Nor flame, nor wind destroys thee High;
For opposites are false to thee.
Thou art the pure, the perfect EYE,

*  *  *

Nor Time, nor space can change thee free,

*  *  *

Created creature art thou not.
For things begun must also end;
And never dost thou hold a spot,
For forced things must take an end.
Thou art He, O pretending soul,
Whom mortals all desire to reach;
Thou art He who pervades the whole,
The sky, the mount, the silent beach.

ಮುಂದಿನದು ಒಂದು ದೀರ್ಘ ಕಥನ ಕವನ, ಲಾವಣಿ (Ballad) ಜಾತಿಯದು. ಆರಾರು ಗಣಗಳಿರುವ ದೀರ್ಘಪಂಕ್ತಿಯ ‘ಹೆಕ್ಸಾಮೀಟರ್’ನ ೮೫ಸಾಲುಗಳಿವೆ. ಕಥೆ: ಒಂದು ಪ್ರವಾಹದಲ್ಲಿ ನೀರು ಸುತ್ತುವರಿದ ಗುಡಿಸಲೊಂದರಲ್ಲಿದ್ದ ತಾಯಿ ಮಗು ಕೊಚ್ಚಿ ಹೋದದ್ದು. ಅದರ ಪ್ರಾರಂಭದ ಮತ್ತು ಅಂತ್ಯದ ಕೆಲವು ಪಂಕ್ತಿಗಳನ್ನು ಇಲ್ಲಿ ಕೊಟ್ಟಿದೆ;

ಕವನದ ಹೆಸರು “The Flood: An Incident” (ಪ್ರವಾಹ: ಒಂದು ಘಟನೆ)

The rain is falling fast and loud the west wind roars;
The ranging floods increase, they splash the feeble shores.
It is the dead of night; a dismal scene to see
The lonely cottage standing by the banyan tree.
Five days are past and still the feeble house doth stand
Immersed by floods beyond the aid of human hand.
In scarlet lines the lightnings flash across the sky,
And thunder rumbles loud; it quells the moaning sigh.
A female form appears upon the scene; aghast
She stand with misty light and still wild roars the blast.

*  *  *

The wind moans, and the storm blows loud, the billows cry,
And Death’s Eternal Chariot rumbles in the sky.

*  *  *

The roaring floods rush on, the cottage crashing falls;
They spread a havoc wild, they break the sod-built walls;
And the sweet place where the kind mother and the child
Lived, turns to be a spot full desolate and wild.

ಕವಿಗಳಲ್ಲಿ ‘Calf Love’ (ಕೈಶೋರ ಪ್ರಣಯ) ಎಂದು ಕರೆಯಲ್ಪಡುವ ಪ್ರೇಮಕವನವೊಂದು ಸಾಲು ಕವನಗಳುಳ್ಳ ಇಪ್ಪತ್ತು ಪಂಕ್ತಿಯಲ್ಲಿ ಮೂಡಿದೆ-೧೭.೮.೧೯೨೩ರಲ್ಲಿ. ಅದರ ಕೊನೆಯ ಪದ್ಯ ಹೀಗಿದೆ: ಬಹುಶಃ ವರ್ಡ್ಸ್ ವರ್ತನ ‘ಲೂಸಿ’ (Lucy) ಕವನಗಳಿಂದ ಪ್ರೇರಿತವಾಗಿ!

I love thee not for earthly pleasures
But for the joy of heaven;
And in thy heart live holy treasures
But to few maidens given.

ಮುಂದಿನ  ಈ ಕವನದಲ್ಲಿ ತರುಣಕವಿಯ ಚಿಂತನ ಪ್ರಪಂಚದಲ್ಲಿ ಆಗ ನಡೆಯುತ್ತಿದ್ದ ಆಲೋಚನೆಗಳ ಮತ್ತು ಭಾವನೆಗಳ ಮಂಥನ ಸ್ವರೂಪ ಪ್ರದರ್ಶನವಾಗುತ್ತದೆ. ಎಂಟು ಸಾಲುಗಳ ಐದು ಪದ್ಯಗಳಿವೆ. ಆದರೆ ಪ್ರತಿಯೊಂದು ಪದ್ಯದ ಕೊನೆಯ ನಾಲ್ಕು ಸಾಲುಗಳು ಪಲ್ಲವಿಯಂತೆ ಪುನರಾವೃತ್ತವಾಗುತ್ತವೆ. ಅಂದರೆ ಇಪ್ಪತ್ತು ಸಾಲುಗಳು ಪದ್ಯ, ನಾಲ್ಕು ಸಾಲುಗಳು ಪಲ್ಲವಿ ಎಂದು ಹೇಳಬಹುದು. ಅದರ ಶೀರ್ಷಿಕೆ “All Things Begin Where They Shall End” ಎಂದಿದೆ. (ಎಲ್ಲ ಕೊನೆಗಾಣುವಲ್ಲಿ ಎಲ್ಲ ಮೊದಲಾಗುತ್ತವೆ.)

The Sun soars high up in the east
Across the blue he sails;
And in the West he sinks again,
Not even a day he fails.
All things begin where they shall end;
Destruction only helps to mend:
And why not I when I shall die
Be born again to swim this main?

ಇಲ್ಲಿಯ ಪ್ರಾಸಗಳನ್ನು ಗಮನಿಸಬಹುದು. ಎರಡನೆಯ ಪಂಕ್ತಿ ನಾಲ್ಕನೆಯ ಪಂಕ್ತಿಗಳಿಗೂ ಐದು ಆರನೆಯ ಪಂಕ್ತಿಗಳಿಗೂ ಅಂತ್ಯಪ್ರಾಸವಿದೆ. ಏಳು ಎಂಟನೆಯ ಪಂಕ್ತಿಗಳಲ್ಲಿ ಮಧ್ಯಪ್ರಾಸಗಳಿವೆ. ಅವನ್ನು ಹೀಗೆ ಬರೆದರೆ ಗೊತ್ತಾಗುತ್ತದೆ:

And why not I
When I shall die
Be born again
To swim the main?

ಮುಂದೆ ಕನ್ನಡದಲ್ಲಿ ನಾನು ಬರೆಯಲು ತೊಡಗಿದಾಗ ಈ ಇಂಗ್ಲಿಷ್‌ನ ಛಂದೋ ವೈವಿಧ್ಯಗಳಿಂದಲೇ ಸ್ಫೂರ್ತಿ ಪಡೆದದ್ದು.

The plant projects out of a seed
And soon becomes a tree;
But when it fades it leaves behind
A mother-seed to me….All things etc.

The mountains crumble into dust
And settle in the main;
But when these hills turn beds of seas
Like mounts they rise again…. All things etc.

Out of the main the vapours rise,
They reach the earth like rain;
Thro’streams and broom the water flows
At last to join the main….All things etc.

The Fortune’s wheel whirls round and round,
Beginningless it rolls;
When things do end they start again
Ere loud the death knell tolls… All things etc.

ಮುಂದಿನ ಕವನದಲ್ಲಿ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ಯ ಅನುಭಾವ ಗೀತೆಗಳ ಪ್ರಭಾವವನ್ನೂ, ಅದರ ಛಂದೋವಿಲಾಸದಲ್ಲಿ ಶರ್ಲಿ ಕವಿಯ “Death the Leveller” ಮತ್ತು ಥಾಮಸ್‌ ಹುಡ್‌ ಕವಿಯ “The Light of Other Days” ಅಂತಹ ಕವನಗಳ ಪ್ರಭಾವವನ್ನೂ ಕಾಣಬಹುದು. “Death The Leveller” ಎಂಬುದು “ಸಾವಿನ ಸಮತೆ” ಎಂದು ‘ನವಿಲು’ ಕವನ ಸಂಗ್ರಹದಲ್ಲಿ ಭಾಷಾಂತರಗೊಂಡಿದೆ. “The Light of Other Days” ಎಂಬುದು “ಹೋದ ಬಾಳ ಬೆಳಕು” ಎಂದು ‘ಪ್ರೇಮ ಕಾಶ್ಮೀರ’ ಕವನ ಸಂಗ್ರಹದಲ್ಲಿ ಅನುವಾದಗೊಂಡಿದೆ.

“In the Silent Night” (ನಿಃಶಬ್ದ ರಾತ್ರಿಯಲ್ಲಿ) ಎಂಬ ಶೀರ್ಷಿಕೆಯ ಈ ಕವನದಲ್ಲಿ ಹದಿನಾಲ್ಕು ಪಂಕ್ತಿಗಳ ಐದು ಪದ್ಯಗಳಿವೆ.

Methinks, I hear a voice
That whistles in the wind;
It’s not the cry of boys
Nor voices of Fancy’s mind.
What may it be?
What sings to me?
A silent beauty lulls
The pond, the lake and hills;
The wind is calm
With heavenly balm;
A visionary song
Silently flows along:
It is the voice of skies
The tune of heavenly sighs.
Methinks, I hear a sound
From distant mountain head;
It’s not the cry of hound
Nor voices of the dead…

* * *

A visionary cry
Prevailing makes me sigh
It is the voice of heaven
The songs from planets given.

Methinks, I hear him sing,
That whispers in the breeze.
It’s not a flap of wing
Nor murmur of the trees
Who may it be
That follows me?
No phantom treads the green;
A stillness numbs the scene.
His steps I hear
In front and rear;
A visionary man
Comes when I am alone;
He is the King of Skies
Who visits waking eyes!…

* * *

ಅಲೆಕ್ಸಾಂಡರ್ ಪೋಪ್‌ ಕವಿಯ ‘ಸುಖೀ ಮಾನವ’ (The Happy Man) ಎಂಬ ಕವಿತೆಯಿಂದ ಪ್ರೇರಿತವಾದ ಒಂದು ಕವನ ‘Blessedness’ (ಧನ್ಯತೆ) ಎಂದು ಹೀಗೆ ಪ್ರಾರಂಭವಾಗುತ್ತದೆ. ಅದೇ ಛಂದಸ್ಸಿನಲ್ಲಿರುವ ಈ ಕವನದಲ್ಲಿ ಎಂಟು ಪದ್ಯಗಳಿವೆ.

Blessed is he who loveth all
Regarding neither caste or state,
Who at the tune of honour’s call
Remains as great;

Who sheds his tears for other’s woe,
Who purely smiles at other’s joy;
Whose heart is same when high and low
Pure as a boy;…

* * *

‘ಉಪನಿಷತ್ತುಗಳನ್ನು ಓದಿದ ಮೇಲೆ’ (Lines written after reading the Upanishads) ಎಂಬ ಒಂದು ಕವನ ಹೀಗೆ ಪ್ರಾರಂಭವಾಗುತ್ತದೆ:

We are the children of all ages;
Our morn has just begun,
And we see our glorious sun
Rising in the horizon,
We shall begin again
To end in vain
The work of all the sages….

* * *

‘Music’ (ಸಂಗೀತ) ಎನ್ನುವ ಕವನದಲ್ಲಿ ಆರು ಪದ್ಯಗಳಿವೆ. ಅವುಗಳಲ್ಲಿ ಮೊದಲನೆಯ ಮತ್ತು ಕೊನೆಯ ಪದ್ಯಗಳು ಹೀಗಿವೆ.

Sweet charmer, when I hear thy voice
My heart becomes a child;
The woes of life depart and joys
Abounding make me wild,
This world of dust melts to a heaven
And pleasures greet by Fancy given.

* * *

If thou wert He, O charmer sweet,
The musician great
I fain would fall upon thy feet
And ever be thy mate,
Thou charmeth all; thou mayst be He,
The singer great and Ever Free!

“ಮಲೆನಾಡಿನ ಹಳ್ಳಿಯ ಅಂಚೆಯವನು” (The village Postman of Malnaud) ಎಂಬ ಕವನ ಕವಿಯ ಸ್ವಂತ ಅನುಭವದಿಂದ ಮೂಡಿರುವ ಕವನ. ಆ ದಟ್ಟಕಾಡಿನಲ್ಲಿ ಅಂಚೆಯವನು ಕುಕ್ಕೋಟದಿಂದಲೆ ಮೆಲ್ಲಗೆ ಓಡುತ್ತಾ ಊರಿಂದ ಊರಿಗೆ ಅಂಚೆ ಸಾಗಿಸುತ್ತಿದ್ದನು. ಅವನ ಕೈಯಲ್ಲಿ ಈಟಿಯಂತಹ ಒಂದು ಕಬ್ಬಿಣದ ತುದಿಯ ಕೋಲಿದ್ದು, ಅದರ ತುದಿಗೆ ಏಳೆಂಟು ಸಣ್ಣ ತಗಡಿನ ತುಂಡುಗಳ ಗೊಂಚಲು ಸಿಕ್ಕಿಸಿರುತ್ತಿತ್ತು. ಅದು ಅವನು ಕುಕ್ಕೋಡಿದಂತೆಲ್ಲ ಗಣಗಣಗಣ ಸದ್ದು ಮಾಡುತ್ತಾ ಕಾಡಿನ ಹುಲಿ ಮೊದಲಾದ ಕ್ರೂರ ಪ್ರಾಣಿಗಳನ್ನು ಹೆದರಿಸಿ ಓಡಿಸುತ್ತಿತ್ತು. ಅವನು ಕತ್ತಕತ್ತಲೆಯಾಗುವ ಬೈಗು ಹೊತ್ತಿನಲ್ಲಿ ಊರು ಸಮೀಪಿಸಿದಾಗ ತುಸು ಜೋರಾಗಿಯೆ ಕುಕ್ಕೋಡಿ ಬರುತ್ತಿದ್ದುದರಿಂದ ತಗಡಿನ ಗೊಂಚಲಿನ ಸದ್ದು ಮಕ್ಕಳಿಗೆ ಮನಮೋದಕವಾಗಿಯೂ ಅನ್ಯಲೋಕ ಸಂಚಾರಕವಾಗಿಯೂ ತೋರಿ ಅದನ್ನು ಬೆರಗಾಗಿ ಆಲಿಸುತ್ತಿದ್ದರು: ಆರಾರು ಪಂಕ್ತಿಗಳ ಹದಿನಾಲ್ಕು ಪದ್ಯಗಳಿವೆ. a b a b c c ಪ್ರಾಸವಿನ್ಯಾಸವಿದೆ. ಅವುಗಳಲ್ಲಿ ಐದು ಪದ್ಯಗಳನ್ನು ಇಲ್ಲಿ ಕೊಡುತ್ತೇನೆ. ಈ ಕವನಗಳಲ್ಲೆಲ್ಲ, ಹಿಂದೆ ಕೊಟ್ಟವಗಾಲಿ ಮುಂದೆ ಕೊಡುವುವಾಗಲಿ ಇರಬಹುದಾದ ಅಕ್ಷರ ವ್ಯಾಕರಣ ಛಂದಸ್ಸು ವಿರಾಮ ಚಿಹ್ನೆ ಮೊದಲಾದ ದೋಷಗಳನ್ನು ತಿದ್ದುವ ಗೋಜಿಗೆ ಹೋಗಿಲ್ಲ. ಏಕೆಂದರೆ ಇದರ ಉದ್ದೇಶ ಆಗಿನ ತರುಣ ಕವಿಯ ಭಾವ ಆಲೋಚನೆ ಕಲ್ಪನೆ ಭಾಷಾಜ್ಞಾನಗಳನ್ನು ನಿದರ್ಶಿಸುವುದೆಷ್ಟೊ ಅಷ್ಟೆ: ಈ ಕವನ ರಚನೆಯ ತಾರೀಖ ೨೩.೭.೧೯೨೩ಎಂದಿದೆ ಅಂದರೆ ಕವಿಯ ಎಂಟ್ರೆನ್ಸ್‌ ಕ್ಲಾಸಿಗೆ ಸೇರಿದ ಪ್ರಾರಂಭಕ್ಕೆ:

The night rolls slow from east to west
And the dew of eve descends;
The roving beasts are gone to rest,
And the song of night-bird blends
With nature’s clamour that begins
Ere stilly night her scepter wins.

* * *

Now some sounds break the stillness deep
And a jingling clamour swells;
It echoes from yon frowning steep
And it rings from yonder dells.
While in the distant haze is seen
A cantour moving on the green.

* * *

Behold, with jingling spear he runs
With a mighty heart and mind,
As if a warrior bold he stuns
The shades of evening blind;
And chases swift with spear in hand
The demon of the still land.

* * *

How hastily hither he hes
With a bag upon his back!
Is it an armour that he ties?
Or a ringlet of his sack?

* * *

Welcome to thee, Messenger sweet,
………………………………….
Thy wearied heart of eve I greet,
O thou village Mercury!
They news be they of joy or woe
I blindly greet them, let me know.

* * *

Come, Mercury of Seven days,
The world’s account before me place.

( ಈ ಅಂಚೆಯವನು ವಾರಕ್ಕೊಮ್ಮೆ ಹಳ್ಳಿಗೆ ಬಂದು ಟಪ್ಪಾಲು ಹಂಚುತ್ತಿದ್ದನು!)

Like the Messenger great that he’s
At the eve of every life
To free the soul from worldly ties,
Thou comest when the birds go to sleep
And give reflections high and deep.

ಕೈಶೋರ ಕವಿಪ್ರಣಯಕ್ಕೆ ಸಂಬಂಧಿಸಿದ ಮೂರು ಕವನಗಳು, ೨೮.೮.೧೯೨೩, ೨೩.೯.೧೯೨೩ ಮತ್ತು ೨೫.೧೦.೧೯೨೩ ರಚಿತವಾಗಿವೆ. ಅವುಗಳಲ್ಲಿ ಕೊನೆಯ ಕವನದ ಹೆಸರು ‘The Flying Dove’ (ಹಾರುವ ಪಾರಿವಾಳ). ಹಾರುತ್ತಿರುವ ಒಂದು ಪಾರಿವಾಳವನ್ನು ಸಂದೇಶವಾಹಕನನ್ನಾಗಿ ಮಾಡಿ ತನ್ನ ಪ್ರಣಯಿನಿಯೆಡೆಗೆ ಕಳುಹಿಸುವಂತಿದೆ:

O whither dost thou fly, sweet Bird?
Wherefore such hurried flight?
A moment pause, I have a word.
O chuck thy plumage bright.

If to my native home you go,
Sweet Bird, messenger sweet,
Stop, there I have a lovely brow,
A maiden sweet to greet.

O let her know how oft my cheeks
With tears are well bedewed;
And let her know the heart now speaks
Leaps up with gratitude.

Tell her sweet Bird: my heart is there
Where she the flowers culls;
My bosom doth her lyrics share,
And me her sweet song lults.

Carry this news, adieu, sweet Bird,
Peaceful be thy airy way;
Carry, sweet Bird, my lovely word
And bring me back her lay.

ಶ್ರೀರಂಗಪಟ್ಟಣಕ್ಕೆ ಭೇಟಿ ಕೊಟ್ಟುದರ ಫಲವಾಗಿ ಎಂಬಂತೆ ತೋರುತ್ತದೆ, The Death of Tippu ಎಂಬ ಲಾವಣಿ ೯.೯.೧೯೨೩ರಲ್ಲಿ ರಚಿತವಾಗಿದೆ. ನಾಲ್ಕು ಪಂಕ್ತಿಯ ಹದಿನೆಂಟು ಪದ್ಯಗಳಿವೆ. “ಹಗಲು ಹನ್ನೆರಡು ಗಂಟೆಯಲ್ಲಿ ರಾಜ್ಯ ಕಳಕೊಂಡವರು” ಎಂದು ಮುಸಲ್ಮಾನರನ್ನು ಹಂಗಿಸುವುದನ್ನು ನಾನು ಹುಡುಗನಾಗಿದ್ದಾಗ ಕೇಳಿದ್ದೆ.

ಟಿಪ್ಪೂಸುಲ್ತಾನ್ ಊಟಕ್ಕೆ ಕೂತಿದ್ದವನು ಹಾಗೆಯೆ ಬಿಟ್ಟಿದ್ದು ಮುತ್ತಿಗೆ ಹಾಕಿದ್ದ ಇಂಗ್ಲಿಷ್‌ ಮತ್ತಿತರ ಸೇನೆಗಳೊಡನೆ ಕಾದಾಡಿ ಮಡಿದನಂತೆ:

It was a day full bright and clear;
The soldiers all were merry;
Each sword was laid aside, each spear;
There was no rush nor hurry.

But soon they heard the cannon’s boom,
The sign of the English army;
The startling sounds proclaimed the doom
And every mind was stormy.

* * *

Three armies marched onward and fast,
All firm and like an Ocean;
While Tippu heard the rifle blast
And saw them all in motion.

“Let me be once out of the wall
And cross the mother river;
I ll make the English banner fall
And all their allies shiver.”

With this he grasped his mighty sword
And put on his warlike armour,
And leaving his half-finished board
Rushed forth into the clamour.

* * *

A bullet brought the Sultan down;
Earth did him all her homage.
His mighty scepter sword and crown
Passed to a tale of old age….

“The Patriot” (ದೇಶಭಕ್ತ) ಎಂಬ ಇನ್ನೊಂದು ಕವನ ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಮತ್ತು ಗಾಂಧೀಜಿಯ ಅಹಿಂಸಾ ಸತ್ಯಾಗ್ರಹದ ಪ್ರಭಾವದಿಂದ ಮೂಡಿದೆ. a b a b c c ಪ್ರಾಸದ ಆರು ಪಂಕ್ತಿಗಳ ಎಂಟು ಪದ್ಯಗಳಿವೆ.

I love three, O my native land,
Thou art my hope and pride;
Thy sorrows all I understand,
And follies all deride.
I strive to free thee from the chain
Of abject bondage and of pain.

I do not seek the aid of sword,
Or vain conflict of war;
But I should call the blessed Lord
To aid my country’s star.
Not blood but peace shall be my aim,
And joy my hope, not sword and flame.

* * *

My end is not ambitious dream
Of getting wealth and fame.
I fight for freedom’s pennon fair,
For man’s born as Liberty’s heir.

* * *

I speak not ill of other race
Nor barter love with royal grace.

* * *

My country’s love shall never lead
Me look with evil eyes
A foreign land or foreign creed
Save all their glozing lies.

* * *

Thou blessed Mother, I give thee
All that I own to make thee free.

* * *

My life and all sacrifice
To raise thy banner to the skies.

ಮಹಾರಾಜಾ ಕಾಲೇಜಿನ ಆಟದ ಮೈದಾನದಲ್ಲಿ ಆಗಾಗ ಚೆಂಡಾಟದ ಸ್ಪರ್ಧೆ ನಡೆಯುತ್ತಿತ್ತು. ಆಗ ನಾವೆಲ್ಲ ಗುಂಪುಗುಂಪಾಗಿ ನೋಡಲು ಸೇರುತ್ತಿದ್ದೆವು. ನಾಲ್ಕು ಪಂಕ್ತಿಗಳ ಹನ್ನೊಂದು ಪದ್ಯಗಳ ಈ ‘Foot-Ball’ (ಫುಟ್‌ ಬಾಲ್‌) ಕವನದಲ್ಲಿ ಮೊದಲನೆಯ ಪದ್ಯ ಹೀಗಿದೆ:

It’time, it’time, the game shall begin, boys,
And the play-ground heaves like the harvest field;
Move on, or else it will be too late, boys,
And you shall lose the gift that the play may yield.

* * *