೩೦.೮.೧೯೨೩ನೆಯ ತಾರೀಖು ಹಾಕಿರುವ ‘The Ancient Bard’ (ಸನಾತನ ಕವಿ) ಎಂಬ ನಾಲ್ಕು ಪಂಕ್ತಿಯ ಏಳು ಪದ್ಯಕವನ ಭಗವಂತನನ್ನು ಕವಿಯೆಂದೂ ಜಗತ್ತನ್ನು ಅವನ ಕವನವೆಂದೂ ವರ್ಣಿಸುತ್ತದೆ. ಅದರ ಮೊದಲನೆಯ ಪದ್ಯ ಹೀಗಿದೆ:

The Lord is but a poet great
The world is but his poem;
Its birth and death none can relate,
It’s hard to read his his theme.

ಕೊನೆಯ ಪದ್ಯ:

And that reads with jealous mind
His poem word by word
Can only understand, and find
The great and Ancient Bard.

ಇನ್ನೊಂದು ಕವನ ವಸ್ತುವಿನ ದೃಷ್ಟಿಯಿಂದ ಮಾತ್ರವಲ್ಲದೆ ನಾದ, ಲಯ, ಛಂದಸ್ಸು, ಪ್ರಾಸಗಳ ದೃಷ್ಟಿಯಿಂದಲೂ ಗಮನೀಯವಾಗಿದೆ. ಶೀರ್ಷಿಕೆ “Children of Youth” a b a b c c c d e d e ಪ್ರಾಸಬದ್ಧವಾಗಿದೆ. ಹನ್ನೊಂದು ಪಂಕ್ತಿಗಳ ನಾಲ್ಕು ಪದ್ಯಗಳಿವೆ. ಎರಡನ್ನಿಲ್ಲಿ ಕೊಟ್ಟಿದೆ. ಮೂರನೆಯ ಪಂಕ್ತಿಯಲ್ಲಿ ಅಂತರ ಪ್ರಾಸವಿರುವುದನ್ನು ಗಮನಿಸಬಹುದು.

Merrily we sing, merrily we dance,
On the sliding wings of Time;
We care for no chance, we wield not a lance,
For our morn is more than sublime.
We care not for the coming morrow,
We fly like a merry sparrow,
Skipping and skimming the sea of sorrow.
Our blood is coloured crimson red
For the flower of joy is in our hearts;
We wail not for the roses dead
Nor laugh when sorrow from us parts.

* * *

Merrily we play, merrily we pray,
With the dust and on the green;
And the men on their way mock us and they say
“These are fools.” with all their spleen.
We care not for the wealth and splendour,
Nor look at other’s Pomp with wonder,
For ours is all the joy of the Sender.
We move and play with joy; we sing,
For the world of woe is far away;
And the happiness of many a king
Is scattered on our delightful way….

ನಾನು ಎಂಟ್ರೆನ್ಸ್‌ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಮನಸ್ಸಿನಲ್ಲಾಗುತ್ತಿದ್ದ ಒಂದು ಒಳತೋಟಿಗೆ ಸಾಕ್ಷಿ ಹೇಳುವಂತಿದೆ ೨೭.೧೦.೧೯೨೩ರಂದು ಬರೆದ ಈ ಕವನ. ನನ್ನ ಆಸಕ್ತಿಯೆಲ್ಲ ಸಾಹಿತ್ಯ, ಕಾವ್ಯ, ತತ್ತ್ವಗಳ ಕಡೆ ಇದ್ದರೂ ನಾನು ಐಚ್ಛಿಕ ವಿಷಯಗಳನ್ನಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಗಳನ್ನು ಆಯ್ದುಕೊಂಡಿದ್ದೆ. ಆ ಆಯ್ಕೆಯಲ್ಲಿ ಉದ್ದೇಶವಾಗಲಿ ಆಲೋಚನೆಯಾಗಲಿ ಭಾಗವಹಿಸಿರಲಿಲ್ಲವೆಂದು ತೋರುತ್ತದೆ. ಎಸ್‌.ಎಸ್‌.ಎಲ್.ಸಿ.ಯಲ್ಲಿ ಸಹಪಾಠಿಗಳಾಗಿದ್ದ ಕೆಲವು ಗೆಳೆಯರು ಆ ವಿಷಯಗಳನ್ನು ಆರಿಸಿ ಕೊಂಡಿದ್ದುದೇ ಬಹುಶಃ ನಾನೂ ಆರಿಸಿಕೊಂಡುದಕ್ಕೆ ಕಾರಣವಾಗಿರಬಹುದು. ಏಕೆಂದರೆ ನನ್ನ ಆ ಗೆಳೆಯರು ಎಂಟ್ರೆನ್ಸ್‌ ಪಾಸುಮಾಡಿದ ಮೇಲೆ ಬೆಂಗಳೂರಿಗೆ ಹೋದರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್‌.ಸಿ,ಗೆ ಸೇರಲು (ಆಗ ಮೈಸೂರಿನಲ್ಲಿ ಆರ್ಟ್ಸ್‌ ವಿಷಯಗಳು ಮಾತ್ರ ಇದ್ದುವು ಸೆಂಟ್ರಲ್‌ಕಾಲೇಜಿನಲ್ಲಿ. ಡಿಗ್ರಿಗೆ ಆರ್ಟ್ಸ್‌ ತೆಗೆದುಕೊಳ್ಳುವವರೆಲ್ಲ ಮೈಸೂರಿಗೇ ಬರಬೇಕಿತ್ತು; ಸೈನ್ಸ್‌ ತೆಗೆದುಕೊಳ್ಳುವವರೆಲ್ಲ ಬೆಂಗಳೂರಿಗೆ ಹೋಗಬೇಕಾಗಿತ್ತು.) ನಾನು, (ನನ್ನ ಸ್ಥಾವರಪ್ರಕೃತಿಗೆ ಅನುಗುಣವಾಗಿ ಸ್ಥಳ ಬದಲಾಯಿಸುವ ತೊಂದರೆತೆಗೆದುಕೊಳ್ಳಲು ಮನಸ್ಸು ಹಿಂಜರಿದುದರಿಂದಲೂ ಇರಬಹುದು!) ಆರ್ಟ್ಸ್‌ ತೆಗೆದುಕೊಂಡು ಮಹಾರಾಜಾ ಕಾಲೇಜಿಗೆ ಸೇರಿದೆ. ಸೈನ್ಸ್‌ ವಿಚಾರದಲ್ಲಿ ಆಗ ನನಗಿದ್ದ ಕೆಲವು ವಿರೋಧಭಾವಗಳು ಆಗ ನಾನು ಬರೆದ ಕೆಲವು ಇಂಗ್ಲಿಷ್ ಕವನಗಳಲ್ಲಿ ಪ್ರತಿಫಲಿತಗೊಂಡಿವೆ.

“Random Lines” ಎಂಬ ಹೆಸರಿನ ಈ ಕವನ ಹೀಗೆ ಮೊದಲಾಗುತ್ತದೆ:

Philosophy is my delight,
And poetry my heaven;
I take with these my refuge bright,
From the vast world when driven.

Solitude is my temple sweet
And contemplation priest;….

The meaning of the universe
The cuckoo sweetly tells;
And every subtle thought of verse
Disclose the butter-bells….

* * *

ಮುಂದಿನ ೫.೭.೧೯೨೩ ತಾರೀಖು ಹಾಕಿರುವ ಈ ಕವನ ಥಾಮಸ್‌ ಗ್ರೇ ಕವಿಯ ‘ಎಲಿಜೆ’ಯ ನೆನಪು ತರುತ್ತದೆ. ಆದರೆ ಅದು ಸ್ವಂತ ಅನುಭವವೊಂದರಿಂದ ಮೂಡಿದುದು ಎಂಬುದು ನನಗೆ ಚೆನ್ನಾಗಿ ನೆನಪಿದೆ. ನಾನೊಬ್ಬನೆ, ಎಷ್ಟೋ, ಸಾರಿ ಜೊತೆಯಲ್ಲಿ ಹಿಂಬಾಲಿಸಲು ಪ್ರಯತ್ನಿಸಿದ ಮಿತ್ರರನ್ನು ನಿರ್ದಾಕ್ಷಿಣ್ಯವಾಗಿ ಏನಾದರೂ ನೆವಹೇಳಿ ತೊಲಗಿಸಿ, ಕಾರಂಜಿ ಕೆರೆಯೇರಿಯ ರಸ್ತೆಯಲ್ಲಿ ನಡೆದು ಮಾವಿನ ತೋಪಗಳಿರುತ್ತಿದ್ದ ಚಾಮುಂಡಿ ಬೆಟ್ಟದ ಬುಡದ ಶ್ಮಶಾನಕ್ಷೇತ್ರಕ್ಕೆ ಹೋಗಿ ನಿರ್ಜನತಾ ನೀರವತಾ ಗಾಂಭೀರ್ಯದ ಬೈಗಿನಲ್ಲಿ ಕತ್ತಲು ದಟ್ಟಯಿಸುವವರೆಗೂ ಪದ್ಮಾಸನವಿಕ್ಕಿ ತಾತ್ತ್ವಿಕ ಧ್ಯಾನದಲ್ಲಿ ಮಗ್ನನಾಗುತ್ತಿದ್ದೆ. ಅಂತಹ ಒಂದು ಸನ್ನಿವೇಶದಲ್ಲಿ ಸುತ್ತಲೂ ಮುತ್ತುತ್ತಿದ್ದ ಮಸಣ ಮರಣಗಳ ಬಾಹುತೆಕ್ಕೆಯಲ್ಲಿ ಸಿಲುಕಿದ ನನ್ನ ಚೇತನ ಸ್ವಾಮಿ ವಿವೇಕಾನಂದರ ಕೃತಿಗಳ ಅಧ್ಯಯನದಿಂದ ಆಗ ನನ್ನನ್ನು ಆಕ್ರಮಿಸಿರುತ್ತಿದ್ದ ಅದ್ವೈತದ ‘ಅಭೀಃ’ ತತ್ತ್ವವನ್ನು ಅನುಸಂಧಾನ ಮಾಡಿ ಅಮೃತತ್ವವನ್ನು ಅನುಭಾವಿಸುತ್ತಿತ್ತು. ಅಲ್ಲಿ ಸುತ್ತಮುತ್ತಲೂ ಗೋರಿಗಳೂ ಬೃಂದಾವನದಂತಹ ಕಟ್ಟಣೆಗಳೂ ಚೆಲ್ಲಾಪಿಲ್ಲಿಯಾಗಿದ್ದು ಸತ್ತವರ ನೆನಪಿಗಾಗಿ ಬದುಕಿರುವವರು ಮಾಡುವ ಪ್ರಯತ್ನಗಳ ವಿಫಲತೆಯನ್ನು ಸಾರುತ್ತಿದ್ದುವು. ಆ ಗೋರಿಗಳಲ್ಲಿ ಬಹುಪಾಲು ಉರುಳಿಬಿದ್ದು ಮುರಿದಿರುತ್ತಿದ್ದುವು. ಕೆಲವು ಸೀಳುಬಿಟ್ಟು ಓರೆಯಾಗಿ ಒರಗಿ ತಮ್ಮ ಗತಿ ಮುಂದಿನ ಮಳೆಗಾಲಕ್ಕೆ ಮುಗಿಯುತ್ತದೆ ಎಂದು ಸಾರುವಂತಿರುತ್ತಿದ್ದುವು. ಕೆಲವುಗಳ ಹೊಟ್ಟೆಯ ಇಟ್ಟಿಗೆಗಳೆಲ್ಲ ಹೊರಚೆಲ್ಲಿ ಚೆದರಿಬಿದ್ದು ನೋಡುವುದಕ್ಕೆ ಕನಿಕರಣೀಯವಾಗಿರುತ್ತಿದ್ದುವು. ಅಂತಹ ಒಂದು ಗೋರಿಯ ಪಕ್ಕದಲ್ಲಿಯೋ ಅಥವಾ ಅದರ ಮೇಲೆಯೋ (ಸಾವನ್ನು ತಿರಸ್ಕರಿಸುವ ಅಥವಾ ಧಿಕ್ಕರಿಸುವ ಛಲದಿಂದ ಎಷ್ಟೋ ಸಾರಿ ಇಂತಹ ಬಹುಶಃ ಅನಾವಶ್ಯಕವಾದ ನಿಷಿದ್ಧ ವ್ಯಾಪಾರಗಳಲ್ಲಿ ತೊಡುಗುತ್ತಿತ್ತು ನನ್ನ ಚೇತನ!) ಕುಳಿತು ಬರೆದುದಿದ್ದಿರಬೇಕು ಈ ಕವನ: ಈ ಕವನದಲ್ಲಿ ನಾಲ್ಕು ಪಂಕ್ತಿಯ ಒಂಬತ್ತು ಪದ್ಯಗಳಿವೆ. ಪ್ರಾಸ abab ಅಯಾಂಬಿಕ್ ಪೆಂಟಾಮೀಟರ್. “Fallen tomb”

[1] ‘ಉರುಳಿದ ಗೋರಿ’ ಶೀರ್ಷಿಕೆ.

ಎಂಟ್ರೆನ್ಸ್‌ ಕ್ಲಾಸಿನಲ್ಲಿ ಓದುತ್ತಿದ್ದಾಗಲೆ ಬರೆದಿದ್ದರೂ ಮುಂದೆ ಕಾಲೇಜು ಸೇರಿದ ಮೇಲೆ ಮಹಾರಾಜಾ ಕಾಲೇಜಿನ ಯೂನಿಯನ್‌ ಇಂದ ಹೊರಡುತ್ತಿದ್ದ ‘The Union’ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು ಈ ಕೆಳಗಿನ ಚಿಕ್ಕ ಕವನ. “ತತ್ ತ್ವಮಸಿ” ಎಂಬ ಅದ್ವೈತ ತತ್ತ್ವದ ಪ್ರಭಾವ ಅದರಲ್ಲಿರುವುದನ್ನು ಕಾಣಬಹುದು. ಅದರ ಶೀರ್ಷಿಕೆ “Sparrow” (ಗುಬ್ಬಚ್ಚಿ). ಮೂರು ಗಣದ ಟ್ರೈಮೀಟರ್ ಛಂದಸ್ಸಿನಲ್ಲಿ ನಾಲ್ಕು ಪಂಕ್ತಿಗಳೂ ಎರಡು ಗಣದ ಮೀಟರಿನ ಛಂದಸ್ಸಿನಲ್ಲಿ ನಾಲ್ಕು ಪಂಕ್ತಿಗಳೂ ಉಳ್ಳ ಎರಡು ಪದ್ಯಗಳಿವೆ. ಪ್ರಾಸ a b a b aa bb.

Thou little Nature’s Child
That playest on yonder tree,
Where fragrance sweet and wild
Diffusing makest thee

Happy and gay
To sing thy lay,
Art thou not He
Who dwells in me?
Upon that Champak tree
That smiles before my door
He takes the form of thee
The Lord supreme and pure.
Thou Nature’s child,
Thou creature mild,
Art thou not He
Who dwells in me?

೧೯.೨.೧೯೨೩ನೆಯ ತಾರೀಖಿನಲ್ಲಿ ಬರೆದಿರುವ ಒಂದು ಕವನ ‘The Labourer’s Cottage’ ಎಂಬುದು ಸಾಮಾನ್ಯ ಬಡ ಜನರ ಜೀವನದಲ್ಲಿದ್ದ ಕವಿಯ ಆಸಕ್ತಿ ಕನಿಕರಗಳನ್ನೂ ಅವರ ಕಷ್ಟ ಜೀವನದ ಪರವಾಗಿದ್ದ ಗೌರವ ವಿಶ್ವಾಸಗಳನ್ನೂ ಸೂಚಿಸುತ್ತದೆ. ಮುಂದೆ ಕನ್ನಡದಲ್ಲಿ ‘ನೇಗಿಲಯೋಗಿ’ ಮೊದಲಾದ ಕವನಗಳನ್ನು ಬರೆಯಲಿದ್ದ ಚೇತನಕ್ಕೆ ಬೀಜಾವಾಪನೆಯಾದಂತಿದೆ. ಎಂಟು ಪಂಕ್ತಿಗಳ ಹತ್ತು ಪದ್ಯಗಳಿವೆ ಕವನದಲ್ಲಿ. ಪ್ರಾಸ ನಿಯಮ: aaa b ccc b ಗುಡಿಸಲಿದ್ದ ಸ್ಥಳದ ಸುತ್ತಮುತ್ತಣ ಪ್ರಕೃತಿದೃಶ್ಯದ ಸೌಂದರ್ಯದ ವರ್ಣನೆಯಿಂದ ಮೊದಲಾಗಿ ಅದರ ನೀರವ ಪ್ರಶಾಂತ ವಾತಾವರಣವನ್ನು ಚಿತ್ರಿಸಿ, ಆ ಬಡಶ್ರಮಜೀವಿಯ ಬದುಕನ್ನು ಕುರಿತ ಕವಿಯ ಸಹಾನುಭೂತಿ ಅನುಕಂಪ ಪ್ರಶಂಸೆಗಳಲ್ಲಿ ಕೊನೆಮುಟ್ಟುತ್ತದೆ. ನಿದರ್ಶನವಾಗಿ ಒಂದೆರಡು ಪದ್ಯಗಳನ್ನು ಕೊಟ್ಟಿದೆ. ಇಲ್ಲಿಯ ಭಾಷೆಯ ನಡೆ ಅಂಬೆಗಾಲಿಕ್ಕುವುದನ್ನು ದಾಟಿ ತಿಪ್ಪತಿಪ್ಪ ಹೆಜ್ಜೆಯಿಟ್ಟಿರುವುದನ್ನೂ ಗಮನಿಸಬಹುದಲ್ಲವೆ?

Remote from towns and haunts of men,
Upon the the wild sequestered glen,
Beyond the reach of envious ken
And all destructive hands,
Alone amid the regions wild
Where man is ever undefiled
There like a simple nature’s child
The Labourers cottage stands.
If on the cottage floor you stand

Your eyes survey the smiling land
Whose splendor wrought by nature’s hand
Allures each nature’s child;
Around, the green-clad mountains rise;
Beneath, the green-clad pasture lies;
Above, there spread the silent skies,
And make a heaven in the wild.

* * *

No regal wall surrounds the shed
And porticos none stand ahead,
Save flowery shrubs by nature fed
Supply both gate and wall;
No watchman strong the shed requires,
No sweeper wise the house desires;
For Poverty with all her sires
Obeys the poor-man’s call!

* * *

ಎಂಟ್ರೆನ್ಸ್‌ ಪರೀಕ್ಷೆಗೆ ನಾನು ಐಚ್ಛಿಕವಿಷಯಗಳನ್ನಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಗಳನ್ನು ತೆಗೆದುಕೊಂಡಿದ್ದೆ. ವಿಜ್ಞಾನದ ಅನ್ವೇಷಣಾ ವಿಧಾನ ಮತ್ತು ಅದರ ತಾತ್ತ್ವಿಕ ಸಿದ್ಧಾಂತಗಳ ವಿಚಾರದಲ್ಲಿ ನಾನು ಆಸಕ್ತನಾಗಿದ್ದರೂ ಅದರ ಬೇಸರ ತರುತ್ತಿದ್ದ ಪ್ರಯೋಗಶ್ರಮದ ಬಗ್ಗೆ ನನ್ನ ಮನಸ್ಸು ವಿಮುಖವಾಗಿಯೆ ಇತ್ತು. ಅಲ್ಲದೆ ಆಗಿನ ಭೌತವಿಜ್ಞಾನ ಈಗಿನಂತೆ ವೇದಾಂತದ ಅಂಚಿಗೇ ಬಂದು ನಿಲ್ಲುವಷ್ಟು ಮುಂದುವರಿದಿರಲಿಲ್ಲ. ಕೇವಲ ಸತ್ಯದ ಸಾಕ್ಷಾತ್ಕಾರ ಅಂದಿನ ವಿಜ್ಞಾನದಿಂದ ಸಾಧ್ಯವಿಲ್ಲವೆಂದೂ ಮನವರಿಕೆಯಾಗಿತ್ತು. ಕಲೆ ಸಾಹಿತ್ಯ ತತ್ತ್ವಶಾಸ್ತ್ರ ಇವುಗಳಿಂದ ಒದಗುತ್ತಿದ್ದ ಶಿವ ಸತ್ಯ ಸೌಂದರ್ಯಗಳ ರಸಾನುಭವವಂತೂ ಅಂದಿನ ವಿಜ್ಞಾನದಲ್ಲಿ ಶೂನ್ಯವೆ ಆಗಿತ್ತು. ತರಗತಿಗಳಲ್ಲಿಯೂ ನಾನು ಯಾವುದಾದರೂ ಸಾಹಿತ್ಯ ಅಥವಾ ತತ್ತ್ವಸಂಬಂಧಿಯಾದ ಗ್ರಂಥವನ್ನು ವಿಜ್ಞಾನದ ನೋಟುಪುಸ್ತಕದ ಅಡಿ ಇಟ್ಟುಕೊಂಡು ಓದುತ್ತಿದ್ದೆ. ಉಪಾಧ್ಯಾಯರು ಪ್ರಶ್ನೆ ಕೇಳಿದಾಗ ಪಾಠವನ್ನೇ ಕೇಳದಿದ್ದ ನಾನು ತಪ್ಪುತಪ್ಪಾಗಿಯೊ ಬೆಪ್ಪು ಬೆಪ್ಪಾಗಿಯೊ ಅಸಂಬದ್ಧವಾಗಿ ಉತ್ತರ ಹೇಳಿ ಅವರ ಭರ್ತ್ಸನೆಗೆ ತರಗತಿಯ ವಿದ್ಯಾರ್ಥಿಗಳ ಸಹಾನುಭೂತಿಯ ನಗೆಗೂ ಪಕ್ಕಾಗುತ್ತಿದ್ದೆ. ಒಮ್ಮೆ ಕೃಷ್ಣಸ್ವಾಮಿ ಐಯ್ಯಂಗಾರ್ ಎಂಬುವರು ಹಾಗೆ ಪ್ರಶ್ನೆ ಕೇಳಿ ನಾನು ಕೊಟ್ಟ ಉತ್ತರಕ್ಕೆ ಮುನಿದು ನನ್ನನ್ನು “ಶುದ್ಧ ಗಮಾರನಂತೆ ಕಾಣುತ್ತೀಯಾ!” ಎಂದೂ ನಿಂದಿಸಿದ್ದು ಜ್ಞಾಪಕವಿದೆ. ಅಂತಹ ಯಾವುದೊ ಒಂದು ಸಂದರ್ಭದಲ್ಲಿರಬೇಕು. ತಾರೀಖು ೩.೧೧.೧೯೨೩ರಲ್ಲಿ ಹುಟ್ಟಿರುವ ‘ಸೈನ್ಸ್‌ ರೂಂ’ ಎಂಬ ಕವನ.[2] ಅದನ್ನು ತರಗತಿಯಲ್ಲಿಯೆ ಫಿಸಿಕ್ಸ್‌ ನೋಟ್‌ಬುಕ್‌ನಲ್ಲಿಯೆ ಬರೆದಂತೆ ನೆನಪು! ಸಂದರ್ಭ; ಒಂದು ಗುಬ್ಬಚ್ಚಿ ನಮ್ಮ ಪ್ರಯೋಗಶಾಲೆಯ ಕೊಠಡಿಗೆ ಪ್ರವೇಶಿಸಿ ಚ್ಞೀ ಚ್ಞೀ ಚ್ಞೀ ಎಂದು ಕೂಗಿತು. ಬಹುಶಃ ಅಲ್ಲೆ ಎಲ್ಲಿಯೊ ಸಂಧಿಯಲ್ಲಿ ಗೂಡುಕಟ್ಟಿ ಮರಿಮಾಡಿಕೊಂಡಿದ್ದರೂ ಇರಬಹುದೇನೊ? ಆ ಹಕ್ಕಿಯನ್ನುದ್ದೇಶಿಸಿದಂತೆ ಕವನ ಪ್ರಾರಂಭವಾಗುತ್ತದೆ.

ನಾನು ಇಂಗ್ಲಿಷಿನಲ್ಲಿ ಬರೆಯುತ್ತಿದ್ದಾಗಲೆ ಅಲ್ಲಿಯ ಕಾವ್ಯಸಾಹಿತ್ಯದಲ್ಲಿದ್ದ ಛಂದೋ ವೈವಿಧ್ಯಕ್ಕೆ ಬೆರಗಾಗಿದ್ದೆ, ಮಾರುಹೋಗಿದ್ದೆ; ನಾನಾ ಛಂದೋರೂಪಗಳನ್ನು ನನ್ನ ಕವನಗಳಲ್ಲಿಯೂ ತರಲು ಪ್ರಯತ್ನಿಸಿ ರಚನೆಗೆ ಕೈ ಹಾಕಿದ್ದೆ. ಆ ರೂಪಗಳಲ್ಲಿ ಒಂದು ‘ಸಾನೆಟ್‌’ (Sonnet). ಮಿಲ್ಟನ್, ವರ್ಡ್ಸ್ ವರ್ತ್‌ ಮೊದಲಾದ ಆಂಗ್ಲೇಯ ಕವಿಗಳು ಸಾನೆಟ್‌ ರೂಪವನ್ನು ಬಳಸಿ ಅತ್ಯುತ್ತಮ ಕವನಗಳನ್ನು ರಚಿಸಿ ಜಗತ್ತಿನ ಮೆಚ್ಚುಗೆಗೆ ಪಾತ್ರರಾಗಿದ್ದುದು ನನ್ನ ಮನಸ್ಸಿನ ಮೇಲೆ ತುಂಬ ಪರಿಣಾಮ ಬೀರಿತ್ತು. ಕಿರಿದರಲ್ಲಿ ಹಿರಿದನ್ನು ಹೇಳುವ ಕಲೆಗೆ ‘ಸಾನೆಟ್‌’ ಮಾತೃಸ್ಥಾನವಾಗಿತ್ತು. ನಾನು ಅಭ್ಯಾಸಕ್ಕಾಗಿ ನೂರಾರು ಸಾನೆಟ್‌ಗಳನ್ನು ರಚಿಸಿದ್ದೆ. ಅವುಗಳಲ್ಲಿ ಬಹುಪಾಲನ್ನು ನಾಶಗೊಳಿಸಿದೆ. ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ ಮೇಲೆ ಕನ್ನಡದಲ್ಲಿ ಸಾನೆಟ್‌ ರೂಪವನ್ನು ಸಾಧಿಸಲು ನಾನು ಪ್ರಯತ್ನಗಳನ್ನು ಮಾಡಿದ ವಿಚಾರವನ್ನು ಮುಂದೆ ತಕ್ಕ ಸಂದರ್ಭದಲ್ಲಿ ಹೇಳುತ್ತೇನೆ. ಈ ಮುಂದಿನ ಸಾನೆಟ್‌ “Recollection” (ನೆನಪು) ಮಲೆನಾಡನ್ನು ಊರನ್ನು-‘ಮನೆ’ಯನ್ನು ನೆನೆದು ಬರೆದದ್ದು. ಎಷ್ಟೋ ಸಾರಿ ಇದ್ದಕ್ಕಿದ್ದಂತೆ “ಮನೆಗಿರ” ಹಿಡಿದುಬಿಡುತ್ತಿತ್ತು. ಆಗ ಓದುಗೀದು ಏನೂ ಬೇಡ, ಮನೆಗೆ ಹೋಗೋಣ ಎನಿಸಿಬಿಡುತ್ತಿತ್ತು. ಸಂಜೆ ಕಾರಂಜಿ ಕೆರೆಯ ಬಳಿ ಬರೆದದ್ದಿರಬಹುದು.

When with a vacant mind I breathe beside
The sunset mere, sweet Home, I muse on thee,
While phantom-like the visions rise: the tree
That cheered the days of innocence, and sigh’d
Sweet balm; the brook that gurgles deep and wide;
The mountain summit and its laboured bee;
The herd, and fields on which they browsed; the lea
Whose bosom heaved with my innoxious pride.
Then come the sweetest hearts: who cheered the flower
Of morn, supplied the sapling sweetest dew;
Who winnowed well the waste; who give this hour
A blooming hope, a future bliss more true
Than that I now enjoy. Sweet native bower,
Where ever I be, more loving things are few!

ತಾರೀಖು ೨೨.೧೦.೧೯೨೩ರಲ್ಲಿ ಬರೆದದ್ದು, ಪ್ರಾಸಪದ್ಧತಿ a b b a a b ba c d cd cd.

೧೩.೧೧.೧೯೨೩ರ ದೀಪಾವಳಿ ಹಬ್ಬದ ದೀಪರಾಜಿಯ ಸುಮನೋಜ್ಞ ವಿಭವವನ್ನು ನೋಡಿ ಧನ್ಯನಾಗಬೇಕೆಂದು ಗೆಳೆಯನೊಬ್ಬನಿಗೆ ಕರೆಕೊಡುತ್ತದೆ ಮತ್ತೊಂದು ಕವನ; ಶಾಲೆಗೀಲೆ, ಪಾಠಗೀಠ, ಓದುಗೀದು ಎಲ್ಲವನ್ನೂ ಮೂಲೆಗೆಸೆದು ನಾವೆಲ್ಲರೂ ‘ಮೂರ್ಖ’ರಾಗುವ ಬನ್ನಿ ಎಂದು: ನಾಲ್ಕು ಪಂಕ್ತಿಯ ಏಳು ಪದ್ಯಗಳ ಈ ಕವನ ಶೀರ್ಷಿಕೆ “A Deepavaly Night”[3] (ಒಂಚು ದೀಪಾವಳಿ ರಾತ್ರಿ).

೩೦.೧೧.೧೯೨೩ರಲ್ಲಿ ವೈಸ್‌ರಾಯ್‌ ಮೈಸೂರಿಗೆ ಬಂದಾಗ ಆತನ ಗೌರವಾರ್ಥವಾಗಿ ಗಿಡ ಮರ ಮನೆ ಸೌಧ ದೇವಸ್ಥಾನಗಳೆಲ್ಲ ವರ್ಣವರ್ಣಮಯ ವಿದ್ಯದ್ದೀಪಗಳಿಂದ ಅಲಂಕೃತವಾಗಿದ್ದಾಗ ಬರೆದ ಕವನ: The Electric Lightsr At the time of Viceroy’s visit[4]ಎಂದಿದೆ. ಲಯದ ವೇಗಚಲನೆಯನ್ನೂ ಉದ್ದಗಿಡ್ಡ ಪಂಕ್ತಿಗಳ ಮತ್ತು ಪ್ರಾಸಗಳ ನೃತ್ಯಛಂದಸ್ಸನ್ನೂ ಗಮನಿಸಬಹುದು.

ಛಂದಸ್ಸಿನಲ್ಲಿ ನಾನಾಪ್ರಯೋಗಗಳನ್ನು ನಡೆಸುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ೩.೧೨.೧೯೨೩ನೆಯ ತಾರೀಖು ಹಾಕಿರುವ Song of the Spring Time (ವಸಂತ ಗೀತೆ). ೩,೪, ೫ನೆಯ ಪಂಕ್ತಿಗಳಲ್ಲಿ ಅಂತ್ಯಪ್ರಾಸದ ಜೊತೆಗೆ ಅಂತಃಪ್ರಾಸವೂ ಇದೆ. ೯ ಪಂಕ್ತಿಗಳ ೪ ಪದ್ಯಗಳಿವೆ. ಮಾದರಿಗಾಗಿ ಒಂದನ್ನು ಮಾತ್ರ ಕೊಡುತ್ತೇನೆ.

Come away, children, come away,
The Spring-Time is awaiting us
With Champak flowers and Jasmine bowers,
With fragrant breeze and vagrant bees,
Away from home where nymphs do roam,
And where the maidens gather flowers
To wreath around their youthful lovers;
There the Spring is welcoming us
Come away, children, come away…..

* * *

೧೯.೮.೧೯೨೩ರಲ್ಲಿ ಬರೆದ ಒಂದು ‘ಸಾನೆಟ್‌’ ‘Written on an August

Evening’ ಎಂಬುದು ಪ್ರಕೃತಿ ಸೌಂದರ್ಯವನ್ನು ಸವಿಯಬಲ್ಲ ಚೇತನಕ್ಕೆ ಒದಗುವ ಅಲೌಕಿಕ ರಸಾನುಭವದ ನಿತ್ಯಮೌಲ್ಯವನ್ನು ಕುರಿತು ಹೇಳುತ್ತದೆ.

ಅದು ಹೀಗೆ ಪ್ರಾರಂಭವಾಗಿ

Sweet lulling murmurs fill the silent air,
And the lone Cuckoo’s solitary voice
Elates the pensive mind with thrilling joys,
While wearied workmen to their sheds repair.

* * *

ಹೀಗೆ ಕೊನೆಗಾಣುತ್ತದೆ:

Ill fares with him who sits awaiting doom
When eve bestrews with stars the spacious sky.

೯.೧೨೯.೧೯೨೩ರಲ್ಲಿ ಬರೆದ ಎರಡು ಸಾನೆಟ್ಟುಗಳು ಅವುಗಳ ವಸ್ತುವಿನಿಂದಲೆ ಗಮನಾರ್ಹವಾಗಿವೆ. ಒಂದು ಶೀರ್ಷಿಕೆ: University of Mysore, ಮತ್ತೊಂದರದು: India to England. (‘ಮೈಸೂರು ವಿಶ್ವವಿದ್ಯಾನಿಲಯ’ ಮತ್ತು ‘ಇಂಗ್ಲೆಂಡಿಗೆ ಇಂಡಿಯಾ’).

Thou home of quill and lyre, O fane of lore,
Who art a mighty beacon to the land,
From whom doth she foretaste a noble band,
Like those who glorified her days of yore….

* * *

‘ಇಂಡಿಯಾ ಇಂಗ್ಲೆಂಡಿಗೆ’ ಎಂಬ ಸಾನೆಟ್ಟಿನಲ್ಲಿ ಆಗ ನಮ್ಮನ್ನಾಳುತ್ತಿದ್ದು ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗುಬಡಿಯುತ್ತಿದ್ದ ರಾಜಕೀಯದ ಇಂಗ್ಲೆಂಡಿಗೂ ಕವಿ ಸಾಹಿತಿ ತತ್ತ್ವಶಾಸ್ತ್ರಜ್ಞ ವಿಜ್ಞಾನಿಗಳಿಂದ ಲೋಕಗೌರವಕ್ಕೆ ಪಾತ್ರವಾಗಿದ್ದ ಇಂಗ್ಲೆಂಡಿಗೂ ಇರುವ ಭೇದವನ್ನು ಕವಿ ಗಮನಿಸಿದ್ದಾನೆ.

England! If ever I love thy mighty name
It is not for Manchester or Lanchashire;
Not for thy pomp, nor for imperial ire,
Nor for thy splendid and colossal frame;
But for those mighty minds of noble fame
That walked thy breast and walk with quill and lyre,
Sweet names that plunge in my celestial fire,
And unaffected stand by curse or blame!

* * *

ತಾರೀಖು ೧೪.೧೨೧೯೨೩ರಲ್ಲಿ ಬರೆದ The Harvest Song (ಕೊಯ್ಲಿನ ಹಾಡು) ಏಳು ಗಣದ ದೀರ್ಘಪಂಕ್ತಿಯ ನಾಲ್ಕು ಸಾಲುಗಳುಳ್ಳ ನಾಲ್ಕು ಪದ್ಯಗಳನ್ನೊಳಗೊಂಡಿದೆ. ಛಂದೋವೈವಿಧ್ಯಸಾಧನೆಯ ಪ್ರಯತ್ನ ನಡೆದಿರುವುದು ಚೆನ್ನಾಗಿ ಕಾಣುತ್ತದೆ.

ab ab ಪ್ರಾಸಗಳಿವೆ. ಒಂದನ್ನು ನಿದರ್ಶನಕ್ಕಾಗಿ ಕೊಡುತ್ತೇನೆ.

Let’s go to the fields, to the golden fields,
Come away, brothers, come;
The sun has risen in the east and purple
Clouds are pensive still;
The wind is plundering grass and flower,
And the glimmering locusts hum,
And the song of the bul-bul blends with
The merry heath-cock’s clarion shrill.

* * *

ಕವಿಯ ಅಂದಿನ ಚಿಂತನ ಸ್ವರೂಪಕ್ಕೂ ಧ್ಯಾನಶೀಲತೆಗೂ ಗವಾಕ್ಷವಾಗಿರುವ ಒಂದು ಸಾನೆಟ್‌ A Night Piece (ರಾತ್ರಿಯಲ್ಲಿ) ತಾರೀಖು ೧೦.೧೨.೧೯೨೩ರಲ್ಲಿ ರಚಿತವಾಗಿದೆ.

Oft in the solitary glen of soul
I sit serene and sweet, to contemplate
On birth and death, on fetters strong of fate
And that Beyond where lies eternal goal.
The world is sweet! Ignorance makes it foul;….

* * *

ತಾರೀಖು ೨೬.೧೨.೧೯೨೩ರಲ್ಲಿ, ಬಹುಶಃ ಕ್ರಿಸ್‌ಮಸ್‌ ರಜಕ್ಕೆ ಮನೆಗೆ ಹೋಗಿದ್ದಾಗ (ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ಬ್ರಿಟಿಷರು ತಮ್ಮ ಹಬ್ಬಗಳಿಗೆ ದೀರ್ಘ ಕಾಲದ ರಜಾ ಕೊಡುತ್ತಿದ್ದರು, ಅದರಲ್ಲಿಯೂ ವಿದ್ಯಾಸಂಸ್ಥೆಗಳಿಗೆ). Exhortations (on revisiting the woody mountains of my native ghats) ಎಂಬ ಶೀರ್ಷಿಕೆಯಲ್ಲಿ ಒಂದು ಸುದೀರ್ಘ ಕವನ ರಚಿತವಾಗಿದೆ. ಅಂತ್ಯಪ್ರಾಸಬದ್ಧವಾಗಿದ್ದರೂ ‘ಅಸಮಛಂದಸ್‌’ (Irregular metre) ಎಂದು ಕರೆಯಿಸಿಕೊಳ್ಳುವ ದೀರ್ಘ-ಹ್ರಸ್ವ ಪಂಕ್ತಿಗಳಿಂದ ಕೂಡಿದ ಆ ರಚನೆ ಮೊತ್ತಮೊದಲ ಪ್ರಯತ್ನವಾಗಿರುವಂತೆ ತೋರುತ್ತದೆ. ಹುಟ್ಟಿದೂರಿನ ಅಕ್ಕರೆಯ ಮತ್ತು ಚೆಲುವಿನ ಮಮತೆ ಅದರಲ್ಲಿ ಎದ್ದು ಕಾಣುತ್ತದೆ; ಮತ್ತು ಆ ಸೌಂದರ್ಯವು ಕವಿಯ ಬಾಲ್ಯದ ಮುಗ್ಧತೆಯ ಮೇಲೆ ಮಾಡಿದ ಪರಿಣಾಮವನ್ನು ತರುವಾಯದ ತಾರುಣ್ಯೋತ್ತರ ಕಾಲದಲ್ಲಿ ಮೈಸೂರಿನಿಂದ ಮರಳಿ ಬಂದವನ ಮೇಲೆ ಮಾಡಿದ ಪರಿಣಾಮದೊಡನೆ ಹೋಲಿಸುವ ಪ್ರಯತ್ನವನ್ನೂ ಮಾಡುತ್ತದೆ. ಪಾಶ್ಚಾತ್ಯ ಕವಿಗಳ, ಅದರಲ್ಲಿಯೂ ಮುಖ್ಯವಾಗಿ ವರ್ಡ್ಸ್‌ವರ್ತ್‌ ಮಹಾಕವಿಯ ಕೃತಿಗಳ ಪರಿಚಯದಿಂದುಂಟಾದ ಪ್ರಕೃತಿ ಸೌಂದರ್ಯಾಸ್ವಾದನೆಯ ಪ್ರಭಾವವೂ, ಹಾಗೆಯೆ ಸ್ವಾಮಿ ವಿವೇಕಾನಂದರ ‌ಮತ್ತು ಉಪನಿಷತ್ತಿನ ಋಷಿಗಳ ದೃಷ್ಟಿಯ ಪರಿಚಯದಿಂದ ನಿಸರ್ಗವನ್ನು ದಾರ್ಶನಿಕವಾಗಿ ಅವಲೋಕಿಸುವ ಒಂದು ಅಭಿರುಚಿಯೂ ಅಲ್ಲಿ ಗೋಚರಿಸುತ್ತದೆ. ಈ ಸುದೀರ್ಘ ಕವನದಲ್ಲಿ ಸುಮಾರು ನೂರೈವತ್ತು ಪಂಕ್ತಿಗಳಿವೆ. ಚುಳಿಕಿಹಾಕಿ ತೋರಿಸುವಂತೆ ಹತ್ತಾರು ಸಾಲುಗಳನ್ನು ಕೊಡುತ್ತೇನೆ.

Once more, O ye enchanting hills, once more
Ye meadows green that thread the silvery shore,
Ye flowery lawns of saffrons glorious wild,
Ye many a nature’s child,
I come to brush the long-seen dappled green
Not with an eye less keen
Than when from mount to mead with nimble feet
I leapt;-a troublesome companion sweet….

* * *

Sweet Nature then with me communed, not I
With her, for I careless of pleasures high,
And so filled with excess disdained her claims
Like a young child inflated in his games…

* * *

Ye pleasures of my Infancy, ye rills,
Ye mountains, meadow, rivers, lakes and hills!
(An thou sweet catalogue of thrilling names!)
In whom my infancy discerned its games,….

* * *

Who pleased me then, whose thoughts now gladden me
As if I once more gain sweet Infancy…

* * *

A little dramatist of Nature’s stage,
A monarch and a page,
And in the blissful Nature’s hermitage
A true disciple and a mighty sage,…

* * *

Mirth then was scattered round, it knew no fear,
And heaven did seem so near,
So surely near, sweet scenes, it wellnigh leaned
Upon your verdant heads; the firmament,
The stars, the moon, the sun were only meant
As beautiful and wondrous things of sky
Hung by Almighty’s hidden chains so high.
O poetic days, what dire change doth me rule?
What bareen truth I learn from every school?
No more thou art a golden disc, O Moon!…

* * *

Erudite lore has made thee bareen, dull,
As naught but sordid lumps of blazing earth.
So quelled my childish mirth….

* * *

Sweet study, academic lore have given
Inspiring light to the Infancy’s heaven.

* * *

As when upon a stilly lake, a stone
By careless hands is thrown
Eddies in circles small which soon enlarge
And in the long run vanish out of sight
Becoming one, freed from individual fight,
So does the childish heart become well-trained,
And shares the mighty bliss; which when attained
Desires the worldly theatric joys no more,
Nor sharing shares the world’s ignoble roar.

ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದ ಆಗಿನ ಕವಿಪ್ರತಿಭೆ ‘ವಚನ ಕವನ’ (Prose-poem) ಪ್ರಕಾರದಲ್ಲಿಯೂ ಕೈಯಾಡಿಸಿದೆ. ತಾರೀಖು ೨೭.೧೨.೧೯೨೩ರಲ್ಲಿ ಬರೆದ ಈ ಕವನ ‘Lines written at the thought of Death’ (ಮೃತ್ಯು ಚಿಂತನೆಯಿಂದ ಉದಿಸಿದ ಪಂಕ್ತಿಗಳು) ಬಹುಕಾಲದ ಅನಂತರ ‘ಕಿಂಕಿಣಿ’ಯಲ್ಲಿ ಮೂಡಿದ ಒಂದು ವಚನಕವನದ ನೆನಪು ತರುವಂತಿದೆ.

They want tears, but I hide them in the life-boat
of my heart, and they see no signs of woe;
They want wailing loud, but silent I stand
and my heart responds to the call of love;
They bid me bow down and worship, but
I raise my head and gaze at the tranquil above;
Then some laugh at me, and rancour
rebukes, and some with reddened eyes
look stern in the face.
I neither laugh at them, nor sternly look
them in the face
But sing and dance in rhythmes of joy,
laughter and scorn.
All for thee, thou flower-seller who dost
sell flowers of joy;
All for thee, O player who playest with
the tender leaves of spring,
O Dancer in the shady brooks that flow
and flowing sing their rocky lay;
O Enjoyer of the sweet Champak flower
that toils, and in labour sees
its holiday.

ಅದೇ ಸಮಯದಲ್ಲಿ (೩೦.೧೨.೧೯೨೩) ಬರೆದ ಮತ್ತೊಂದು ಕವನ Midnight[5] (ಮಧ್ಯರಾತ್ರಿ) ಜಗತ್ತಿನಲ್ಲಿ ಜಗನ್ಮಾತೆಯನ್ನು ದರ್ಶಿಸುತ್ತದೆ. ಅದು ‘Blank Verse’ (ಅಪ್ರಾಸಛಂದಸ್ಸು)ನಲ್ಲಿದೆ. ಭಾವದೀಪ್ತವಾದ ತಾತ್ತ್ವಿಕಪ್ರಜ್ಞೆಯನ್ನು ಪ್ರದರ್ಶಿಸುತ್ತದೆ. ಅದನ್ನು ಬರೆದದ್ದು ಕುಪ್ಪಳಿಗೆ ರಜಾದಲ್ಲಿ ಹೋಗಿದ್ದಾಗ ಎಂದು ತೋರುತ್ತದೆ. ಕಗ್ಗಾಡು, ಕದ್ದಿಂಗಳು, ನಿರ್ಜನತೆ, ನೀರವತೆ, ನಟ್ಟಿರುಳಿನಲ್ಲಿ ಕವಿಯ ಮನಸ್ಸು ಧ್ಯಾನಶೀಲವಾಗಿ ವಿಶ್ವದ ಅಪಾರತೆ ಅನಂತತೆ ಅಚಿಂತ್ಯತೆಗಳನ್ನು ನೆನೆದು ಶೂನ್ಯಾನುಭವಕ್ಕೆ ಮೈ ಮರೆಯುತ್ತದೆ, ಅದ್ವೈತ ಪ್ರಜ್ಞೆಯಲ್ಲಿ!

ಆಗಸ್ಟ್‌ ೧೯೨೩ರಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗಿ ಹೈದರ್ ಮತ್ತು ಟಿಪ್ಪೂ ಅವರ ಸಮಾಧಿಸ್ಥಾನವಾದ ಗುಂಬಜ್‌ಅನ್ನು ಸಂದರ್ಶಿಸಿ ಬರೆದ ಒಂದು ದೀರ್ಘಕವನ Elegy Written at Gumbuz[6] (ಗುಂಬಜ್ ಬಳಿ ಬರೆದ ಚರಮಗೀತೆ) ನಾಲ್ಕು ಸಾಲುಗಳ ಮೂವತ್ತೆರಡು ಪದ್ಯಗಳಿವೆ. ಥಾಮಸ್‌ಗ್ರೇ ಕವಿಯ ‘ಚರ್ಚ್‌ಯಾರ್ಡಿನಲ್ಲಿ ಬರೆದ ‘ಎಲಿಜಿ’ಯ ಪ್ರಭಾವ ಕಾಣುತ್ತದೆ, ಛಂದಸ್ಸು ಪ್ರಾಸಗಳಲ್ಲಿಯೂ ಕೂಡ. ಆದರೆ ವಸ್ತು ಭಾರತೀಯವೂ ಐತಿಹಾಸಿಕವೂ ಆಗಿದೆ.

‘ಅನುಭಾವ ಭಕ್ತಿ’ಯ ಅಭಿವ್ಯಕ್ತಿಯಾಗಿರುವ ಒಂದು Prose-Poem (ವಚನ ಕವನ) ೩೧.೧೨.೧೯೨೩ರಲ್ಲಿ ರಚಿತವಾಗಿದೆ. ಶ್ರೀ ಕೃಷ್ಣಚೈತನ್ಯದೇವನ ಜೀವನ ಚರಿತ್ರೆಯ ಮತ್ತು ರವೀಂದ್ರರ ಗೀತಾಂಜಲಿಯ ಪ್ರಭಾವಗಳನ್ನು ಆ ಕವನದಲ್ಲಿ ಗುರುತಿಸಬಹುದು, ಕಾವ್ಯರಚನೆಯ ದೃಷ್ಟಿಯಿಂದ ಹೇಳುವುದಾದರೆ, ಆದರೆ ಆ ಕಾಲದಲ್ಲಿ ಕವಿಯೂ ಭಕ್ತಿಸಾಧಕನಾಗಿದ್ದನು ಎಂಬುದೂ ಸತ್ಯ. ಆ ‘ಸಾಧಕ ಭಾವ’ಕ್ಕೆ ಸಾಕ್ಷಿಯಾಗುವುದನ್ನು ಕಾಣುತ್ತೇವೆ, ಮುಂದೆ ಉದಾಹರಿಸಲಿರುವ ಕೆಲವು ಕವನಗಳು. ಕವನದ ಶೀರ್ಷಿಕೆ ‘The Lovers Embrace’ (ಪ್ರಿಯನ ಆಲಿಂಗನ) ವಿಶ್ವವ್ಯಾಪಿಯಾದ ಭಗವಂತನನ್ನು ಭಕ್ತಜೀವ ಸೃಷ್ಟಿಯ ನಾನಾ ರಸಗಳಲ್ಲಿಯೂ ವ್ಯಾಪಾರಗಳಲ್ಲಿಯೂ ‘ಅನುಭಾವಿಸುತ್ತದೆ.’

Thou comest, O my sweet lover, covering thyself
with the foliage of the Champak a tree that dances
and waves with languid breath of the gloom.

Thou comest with the melody of the sweet
music that flows from an unknown distance,
and hearing the cadence of thy feet my bosom
swells with a meaningless joy.

Thou comest silently in the dark and thy
menacingly-sweet shadow plays with my
eyes; and at the touch of thy flowery feet
my heart feels the sweetness of an unknown agony!
Thou comest descending from the Milky-way
of the blue and thy divine radiance dazzles
the darkness of my heart.

I cover my face with the veil of my
garment at the sight of thy resplendent
glory, and find thee standing by my
Side, even in my close embrace!

 


[1] Alien Harp. PP 89-90.

[2] Alien Harp. PP. 97-98.

[3] Alien Harp. 99-100

[4] Alien Harp. 101-102

[5] Alien Harp, PP.103-108

[6] Alien Harp. PP.103-108