೧೭-೫-೧೯೨೪

ಕಾಯಿಲೆಯಾಗಿ ಮಲಗಿದ್ದ ಸಮಯದಲ್ಲಿ ರಚಿಸಿದ್ದರಿಂದಲೊ ಏನೊ ‘The Bamboo Bell’ ನಲ್ಲಿ ಭಾಷೆ ಭಾವಗಳೆರಡೂ ಸಿಕ್ಕುಸಿಕ್ಕಾಗಿ ಗೊಂದಲಮಯವಾಗಿ ತೋರುತ್ತದೆ. ಅಲ್ಲದೆ ಅವನ್ನು ಮತ್ತೆ ಓದಿ ತಿದ್ದಿ ಉತ್ತಮಗೊಳಿಸಿ ಹಸ್ತಪ್ರತಿಗೆ ಬರೆದಿಲ್ಲ; ಮೊದಲು ಬರೆದ ಕರಡು ಹಾಳೆಯಲ್ಲಿಯೆ ಇದೆ. ಆರಾರು ಪಂಕ್ತಿಗಳ ನಾಲ್ಕು ಪದ್ಯಗಳಿವೆ ಆ ಕವನದಲ್ಲಿ. ಗಮನಿಸಬೇಕಾದ್ದೆಂದರೆ, ಒಂದು ಲಘು ಒಂದು ಗುರು (u-) ಗಣಗಳ ಜೊತೆಗೆ ಎರಡು ಲಘು ಒಂದು ಗುರು (uu-) ಗಣದ ಪ್ರಯೋಗ ನಡೆದಿರುವುದನ್ನು. ಒಂದು ಹಸು ತನ್ನ ಪುಟ್ಟ ಕರುವಿನೊಡನೆ ಕಣಿವೆಯಲ್ಲಿ ಮೇಯುತ್ತಿರುತ್ತದೆ. ಅದು ದಚಲಿಸಿದಂತೆಲ್ಲ ಅದರ ಕೊರಳ ‘ದೊಂಟೆ’ ಮರದ ಜಲತರಂಗ ಹೊಡೆದಂತೆ ಲಯಬದ್ಧವಾಗಿ ಇನಿಸರಗೈಯುತ್ತಿರುತ್ತದೆ. ಕವಿ ಮಲೆಯ ಎತ್ತರದ ಬಂಡೆಯೊಂದರ ಮೇಲಿಂದ ಆ ಸದ್ದನ್ನು ಆಲಿಸಿ ನೋಡುತ್ತಾನೆ. ಆ ಬೃಹದಾರಣ್ಯ ಪರ್ವತಗಳ ವಿಶಾಲ ಭವ್ಯ ಭಿತ್ತಿಯಲ್ಲಿ ಆ ಚುಕ್ಕಿಗಳಂತಿದ್ದ ಹಸು-ಕರುವನ್ನು ದರ್ಶಿಸುತ್ತಾನೆ.

THE BEMBOO BILL

When I sat among flowers of the eve
Like a flowers with the pride of the dew
I admired the life that I live
Like a singer known but to a few
In a land far-away from the fame
Of a patriot’s aim or a poetic name.

The green trees around me were ringing
When a lonely sound came to my ears;
And I listened; the bushes ‘round me were singing
And the grass waved like so many spears.
From a distance half-hidden, not far from me,
To my ears came a wooden symphony.

I forgot the sweet place I sat and amused,
I erased the thoughts that were high;
Like a child when possessed by beauties unused
I made haste to a spot that was nigh.
From that place I O’er-looked the distant lea
Whence I heared the wooden symphony.

And a cow with its calf browsed upon the lea;
They were tied by the bonds of love;
And the sweet and wooden symphony
Prolonged from the neck of the Cow!
I stood silently gazing at the specks on the lea
And I heared the wooden harmony.
And the sun went down behind the crest
And a stillness prevailed on the earth
And a dusk spread upon the mountain’s breast.
But still in my breast there is mirth:
For oft fancy takes me to that pleasant lea,
And I listen to the wooden harmony!
೧೮-೫-೧೯೨೪

ಮೇ ೨೦ರಿಂದ ೨೪ರವರೆಗೆ ದಿನಚರಿ ಖಾಲಿಯಿದೆ. ಡಿ.ಆರ್.ವೆಂಕಟಯ್ಯನ ಜೊತೆ ಮರಿತೊಟ್ಲಿಗೆ ಹೋಗಿ, ಅಲ್ಲಿ ಒಂದು ದಿನ ಇದ್ದು, ಮತ್ತೆ ಅವನ ಜೊತೆ ಇಂಗ್ಲಾದಿಗೆ ಹೋಗಿರಬೇಕು. ಏಕೆಂದರೆ ಮೇ ೧೬ನೆಯ ಸೋಮವಾರದ ದಿನಚರಿಯಲ್ಲಿ ನಾನು ಮತ್ತು ಕುಪ್ಪಳಿ ವೆಂಕಟಯ್ಯ ಇಬ್ಬರೂ ಇಂಗ್ಲಾದಿಯಿಂದ ಕುಪ್ಪಳಿಗೆ ನಡೆದುಕೊಂಡು ಬಂದುದರ ವಿಷಯವಿದೆ. ಮರಿತೊಟ್ಲಿಯಲ್ಲಿದ್ದಾಗ ಒಂದು ಬೆಳಿಗ್ಗೆ ‘ಚನ್ನಪ್ಪಣ್ಣಯ್ಯ’ನ ಮಾರ್ಗದರ್ಶನದಲ್ಲಿ ನಾವು ಒಂದು ಗಿರಿನೆತ್ತಿಯ ದೇವಾಲಯದ ಬಳಿ ಇದ್ದ ಒಂದು ಸಣ್ಣ ಸರೋವರದೆಡೆಗೆ ಹೋಗಿದ್ದ ಜ್ಞಾಪಕವಿದೆ. ಬಹುಶಃ ಅದಕ್ಕೆ ಸಂಬಂಧಪಟ್ಟಂತೆಯೆ ಇರಬೇಕು ಒಂದು ಕವನ ರಚಿತವಾಗಿದೆ. ಅದನ್ನು ಹಸ್ತಪ್ರತಿಗೂ ಬರೆಯದೆ ನಿರ್ಲಕ್ಷಿತವಾಗಿ ಕರಡಿನಲ್ಲಿಯೆ ಉಳಿದಿದೆ. ಬರೆದುದನ್ನು ಮತ್ತೆ ಓದಿ ತಿದ್ದಿದಂತೆಯೂ ಕಾಣುವುದಿಲ್ಲ. ಆದರೆ ಆ ಕವನದಲ್ಲಿ ತರುಣ ಕವಿಯ ನಿಜವಾದ ಸ್ಫೂರ್ತಿ ಪ್ರಕಾಶಿತವಾಗಿದೆ. ಅಲ್ಲಲ್ಲಿ ಕೆಲವು ಪದಗಳು ಗೊತ್ತಾಗಲಾರದಷ್ಟು ಚಿತ್ತಾಗಿಬಿಟ್ಟಿವೆ. ಅಂತಹ ಸ್ಥಳಗಳಲ್ಲಿ ಬರಿಯ ಗೀಟು ಹಾಕಿ ಬಿಟ್ಟಿದೆ. ಅದರ ಶೀರ್ಷಿಕೆ:

LINES WRITTEN ON A MORN NEAR
A LAKE OF WESTERN GHATS

(ಪಶ್ಚಿಮಘಟ್ಟಗಳ ಮೇಲಣ ಒಂದು ಸರೋವರದ ಬಳಿ ಪ್ರಾತಃಕಾಲದಲ್ಲಿ)
Life scatters here its richest heaven,
And pleasure floats by madness driven!
And here I linger to admire
This heavenly scene that doth inspire
A heart that least responds to beauty.
Behold! Here joy and sternest duty
Together play, but ne’er oppose;
Duty and joy in bliss repose!
This lake, this mountain and this plain,
And air, the sweet endearing chain,
All, all are beautiful and fair:
What more a poet does require?

This shrub-embroidered lake is still
Like a maid asleep! A hill
With trees and shrubs and flowery crest
Is trembling on her watery breast;
The world beneath, the world above
Meet when they kiss the Lake-Nymph’s brow
How sweetly shine the dew drops bright
On yonder bamboo leaves! The green
That mingles glory to the scene
Derides beauty with dewdrops drest
And smiles like a maid restly blest
With a sweet lover young and fair
…………………… and debonair

Here many roam. But do they stand
Ever to admire this glorious land?
Darkly they come. Darkly they pass;
Glory is naught to them Alas!
This lake that glimmers. And this hill
That heaves so high its head the rill
That murmurs its sweet melody
To the blue sky and to the lea
Thro’which it winds its watery way
Chattering its ancestral lay.
The rosy sun that opes its eye
In yon high heaven’s vermilion sky
The fleecy clouds that sail so swift
As sailing ships on seas adrift
To greet the raising orb, the songs
Of humming warblers that prolongs
And mingles with confusion dear
Begging the tribute of a tear…..
These touch them not! This sweetest heaven
Is bleak to their dark eye that crave
For gold and shudder at the grave!
They know not the poetic pleasure
Bottomless and beyond all measure
Lofty, devine, serene, supreme
Great as the heaven’s sweet as a dream,
That comes to those who linger oft
On some forsaken bank aloft
To feal and to admire some scene
Of nature-flowers or sprinkled green,
Of sun or evening or of morn
Or clouds embroidered that adorn
Like vapours of gold the red-haired sun
Of east or west; or some sweet lake
Like this, on whose green bank I quake
Like a young blade of grass, inspired
By the sweet breath of morn. Desired
Or not the joy haunts the sad hours
And makes the bosom dance like flowers
Of April morn! If we once stand
To praise some work or Nature’s hand.
Once drink such nector sweet of love,
Once hear the sweet news from above
Thro’dew-wasted flowers or moon-lit green
Or Thro’ some such inspiring scene,
Then feel we God did not confine
Our souls but they are free and divine!
Then blooms our flower divinity
And merges into Infinity!

ಮೇ ೨೫ನೆಯ ಭಾನುವಾರದ ದಿನಚರಿ:

“ಈ ಮಹೋನ್ನತವೂ ಸುರಸುಂದರವೂ ಚಿರಶ್ಯಾಮಲವೂ ಆಗಿರುವ ನನ್ನ ನಾಡಿನ ಪರ್ವತಶ್ರೇಣಿಗಳು ನನಗೂ ಹುಟ್ಟಿದಂದಿನಿಂದ ದಿನನಿತ್ಯವೂ ನೋಡುತ್ತಿರುವ ನನಗೂ, ವಿಸ್ಮಯಕಾರವಾಗಿವೆ. ಹೆಸರು ಮುದ್ದೆ ಮುದ್ದೆಯಾಗಿ ಎದ್ದಿರುವ ಈ ಮಲೆಗಳು ಎಷ್ಟು ಮಧುರವಾದುವೆಂದರೆ, ಮತ್ತೆಮತ್ತೆ ನನಗೆ ಅನುಭವವಾಗಿದೆ-ಯಾವುದೋ ಒಂದು ಫನೀಭೂತವಾದ ಸಾಕಾರ ಆನಂದವೆ ನನ್ನ ಹೃದಯಪ್ರವೇಶ ಮಾಡುವಂತೆ (Often I have felt a materialised joy entering into my breast). ಎಷ್ಟೋ ಸಾರಿ ನಾನು ಅವುಗಳನ್ನು ಕವಿಯ ರಸಚಕ್ಷುವಿನಿಂದ ಹಠಾತ್ತನೆ ಈಕ್ಷಿಸಿದಾಗ ಇಡೀ ಜಗತ್ತೇ ಬದಲಾಯಿಸಿದಂತೆ ಭಾಸವಾಗುತ್ತದೆ; ಆಗ ನನಗೆ ಆ ಎಲ್ಲ ಪರ್ವತಗಳೂ ಅಲ್ಲಿರುವ ಮಹಾವೃಕ್ಷ ಸಮೂಹ ಸಮೇತವಾಗಿ, ಅಲ್ಲಿರುವ ಶಿಲಾಖಂಡ ಮತ್ತು ಮೃತ್ತಿಕಾ ಸಮೇತವಾಗಿ ಸನಾತನವೂ ಸರ್ವಗ್ರಾಸಿಯೂ ಆಗಿರುವ ನನ್ನ ಹೃದಯಪ್ರವೇಶ ಮಾಡುವಂತೆ ಅನುಭವವಾಗುತ್ತದೆ. (Often when I suddenly look at them with a poetic eye the whole world changes to me and I feel as though all the mountains with their abundant trees and stones and earth, enter my heart, all-absorbing and eternal.) ಗಾಳಿ ಅವುಗಳ ಮೇಲೆ ಬೀಸಿದಾಗ ನನ್ನ ಪ್ರೇಮಮಯಿ ದಿವ್ಯಮಾತೆ ನನ್ನನ್ನು ಕರೆದಂತೆಯಾಗಿ ಕಿವಿ ನವಿರುತ್ತದೆ. ಎಷ್ಟೊ ಸಾರಿ ಹುಚ್ಚಾಗಿಬಿಡುತ್ತೇನೆ; ಆನಂದೋನ್ಮತ್ತ! (Often I go mad, mad with joy!) ಎಷ್ಟೋ ಸಾರಿ ನನ್ನ ಸ್ಥಿತಿ ಮೂದಲಿಕೆಗೊಳಗಾದ ಶಿಶುವಿನಂತಾಗಿ (a tantalized child) ವ್ಯಾಕುಲಗ್ರಸ್ತವಾಗುತ್ತದೆ. ಆಗ ನನ್ನ ತಾಯಿಯನ್ನೂ ಬೈಯುತ್ತೇನೆ!…. ಸ್ವಾಮಿ ವಿವೇಕಾನಂದರೆ, ತರುಮರ್ಮರದ ಮೂಲಕ ನನ್ನೊಡನೆ ಸಂಭಾಷಿಸಿ! ಎರಡು ಕವನಗಳನ್ನು ರಚಿಸಿದೆ (1)Great Men Around Me. (೨) To a Distant Friend”.

ಮೇಲೆ ಹೇಳಿರುವ ಎರಡು ಕವನಗಳಲ್ಲಿ ಮೊದಲನೆಯದು ಎಲ್ಲಿ ಹೋಯಿತೊ ಸಿಕ್ಕಿಲ್ಲ. ಎರಡನೆಯದು ಒಂದು ಸಾನೆಟ್. ಅದನ್ನು ಕೊಡುತ್ತೇನೆ:

TO A DISTANT FRIEND

Why should I grieve that thou art far away.
Heart Blest! While on one Mother’s lap we lie,
And while we roam beneath the same sweet sky?
When the morn sings the prelude of the day
And the grey mist begins its slow decay,
When the bright lakes gleam like a baby’s eye
Aroused from a sound sleep, on mountains high
And vales below I feel thy smiles, Heart gay!

O then my solitary spirit haunts
The hours of our delightful past and smiles
Like a mad man! It roams without an aim
And speaking with each tree and bird that chants
Beholds thy form wherever joy prevails
And mutters slow thy sweet beloved name!

ಮೇ ೨೬ನೆಯ ಸೋಮವಾರದ ದಿನಚರಿ:

“ಅತ್ತು, ಅಳುತ್ತಾ ನನ್ನ ಹೃದಯವನ್ನು ಬೆಳಗುತ್ತಿರುವ ಎಲ್ಲ ಬೆಳಕುಗಳ ಕ್ಷಮೆಯನ್ನೂ ಬೇಡಿದೆ. ನನಗೀಗ ಅರ್ಥವಾಗುತ್ತದೆ, ಮನಸ್ಸು ಗಾಳಿಗಿಂತಲೂ ಚಂಚಲ ಅದನ್ನು ನಿಗ್ರಹಿಸುವುದು ಬಹಳ ಕಷ್ಟ ಎಂದು ಭಗದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು. ನನ್ನ ಪಶ್ಚಾತ್ತಾಪದ ತೀವ್ರತೆಯನ್ನು ಯಾವ ಮಾತುಗಳೂ ಬಣ್ಣಿಸಲಾರವು. ಬೆಳಿಗ್ಗೆ ನಾನೂ ಕೆ.ಆರ್. ವೆಂಕಟಯ್ಯನೂ ಇಂಗ್ಲಾದಿಯಿಂದ ನಮ್ಮ ಮನೆಗೆ ಬಂದೆವು. ದಾರಿಯಲ್ಲಿ ನಡೆಯುತ್ತ ಅವನಿಗೆ ಸಾಧ್ಯವಾದಮಟ್ಟಿಗೆ ಬದುಕಿನ ಗುರಿ ಏನು ಎಂಬುದನ್ನು ಕುರಿತು ವಿವರಿಸಿದೆ, ಶೀಲ ಮತ್ತು ಇತರ ವಿಚಾರವಾಗಿ…. ಇದ್ದ ಮತ್ತು ಇರುವ ಮಹಾವಿಭೂತಿಗಳಿಂದ ನಾನು ಪಡೆದಿರುವ ಚಿಂತನೆ ಮತ್ತು ಭಾವನೆಗಳನ್ನು ನಾನು ಅಕೃಪಣವಾಗಿ ಇತರರಿಗೆ ಹಂಚುತ್ತೇನೆ. ಇಂದು ಯಾವುದೋ ಒಂದು ಅಜ್ಞಾತ ಮಧುರಯಾತನೆ ನಿಸರ್ಗ ಪ್ರಪಂಚದಿಂದ ನನ್ನ ಹೃದಯಕ್ಕೆ ಮುಟ್ಟಿದಂತಿದೆ. ಉಪನಿಷತ್ತುಗಳನ್ನೂ ‘ಗೋಲ್ಡನ್ ಟ್ರೆಜರಿ’ಯನ್ನೂ ‘ಗೀತಾರ್ಥಸಾರ ವಿಚಾರ’ ಎಂಬ ಋಷಿಪ್ರವಾದಿ ಶ್ರೀಭಾಗವತರ ಕೃತಿಯನ್ನೂ ಓದಿದೆ. ಬೋಧಿಸು, ನಡಸು, ಓ ನನ್ನ ಗುರು ವಿವೇಕಾನಂದ! ನೀನು, ಓ ನನ್ನ ದಿವ್ಯ ಜನನೀ, ಪಾಪ ದೌರ್ಬಲ್ಯಗಳಿಂದ ನನ್ನನ್ನು ರಕ್ಷಿಸು! ಓಂ!”

ಮೇ ೨೭ರಿಂದ ಜೂನ್ ೭ರವರೆಗೆ ದಿನಚರಿ ಖಾಲಿಯಾಗಿದೆ. ನನಗೆ ಮೈ ಸ್ವಸ್ಥವಿರಲಿಲ್ಲವೆಂದು ನನ್ನ ಹಸ್ತಪ್ರತಿಯಲ್ಲಿ ೧೦-೬-೧೯೨೪ನೆಯ ತಾರೀಕು ಹಾಕಿರುವ ಒಂದು ಕವನ Lines written on the sick-bed (ಕಾಯಿಲೆ ಮಲಗಿರುವಾಗ ಬರೆದ ಪಂಕ್ತಿಗಳು) ಸೂಚಿಸುತ್ತದೆ. ಜೂನ್ ೮ನೆಯ ಭಾನುವಾರ ಮಾತ್ರ ದಿನಚರಿ ಬರೆದಿದೆ. ಮತ್ತೆ ಜೂನ್ ೯ರಿಂದ ಜೂನ್ ೧೭ರವರೆಗೆ ಖಾಲಿ ಹಾಳೆಗಳಿವೆ. ಜೂನ್ ೧೮ರ ದಿನಚರಿ ಬರೆದಿದೆ. ಜೂನ್ ೧೫, ೨೦, ೨೧, ೨೨ ಮತ್ತೆ ಖಾಲಿ. ಜೂನ್ ೨೩ನೆಯ ಸೋಮವಾರದ ದಿನಚರಿ ನಾನು ಮೈಸೂರಿಗೆ ಬಂದುದನ್ನು ಹೇಳುತ್ತದೆ. ಆಗ ಕಾಲೇಜುಗಳು ತೆರೆಯುತ್ತಿದ್ದುದು ಜೂನ್ ೨೪ರಂದು.

ಜೂನ್ ೮ನೆಯ ಭಾನುವಾರದ ದಿನಚರಿ:

“ಇಂದು ಮನೆಯಲ್ಲಿ ನಾನು ಒಂಟಿಯಾಗಿದ್ದೆ. ಮನೆಯಲ್ಲಿ ಅನೇಕರು ಮದುವೆಗೆ ಹೋಗಿದ್ದರು. ನನ್ನ ದೀರ್ಘಕವನಗಳ ಕೆಲವು ಪಂಕ್ತಿಗಳನ್ನು ಬರೆದೆ. ಭಗವದ್ಗೀತೆ, ಉಪನಿಷತ್ತು, ಗೋಲ್ಡನ್ ಟ್ರೆಜರಿ, ಠಾಕೂರರ ಕವನಗಳು ಇತ್ಯಾದಿ ಓದಿದೆ. ನಾನೊಬ್ಬನೆ ಇದ್ದು, ಒಂಟಿತನ ಸವಿಯಾಗಿತ್ತು. ಸಾಯಂಕಾಲ ಸುಮಾರು ಐದು ಗಂಟೆ ಹೊತ್ತಿಗೆ ಗಾಡಿ ಬಂದಿತು. ನಾನು ಹೊರಗೆ ಹೋದೆ. ಗಾಡಿಯಾಳು ನನಗೆ ಬಂದಿದ್ದ ಎರಡು ಕಾಗದಗಳನ್ನು ನಗೆಬೀರುತ್ತಾ ಕೊಟ್ಟ. ಆಗ ನನ್ನ ಪರೀಕ್ಷೆಯ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದ ಸಮಯ. ಮೊದಲ ನೋಟದಲ್ಲಿಯೆ ನನಗೆ ಗೊತ್ತಾಯಿತು. ಅವು ನನ್ನ ಮಿತ್ರ ಗೋಪಾಲಕೃಷ್ಣಶೆಟ್ಟರವೆಂದು. ನಾನು ಮೊದಲು ಓದಿದ ಕಾಗದ ಜೂನ್ ೪ನೆಯ ತಾರೀಖಿನದ್ದಾಗಿದ್ದು, ಅದರಲ್ಲಿ ತೇರ್ಗಡೆ ಹೊಂದಿದ ಮತ್ತು ಹೊಂದುವ ನನ್ನ ಸ್ನೇಹಿತರ ಹೆಸರುಗಳಿದ್ದವು. ಅದರೆ ನನ್ನ ಹೆಸರಾಗಲಿ ಮತ್ತು ಗೋ.ಕೃ.ಶೆಟ್ಟಿ ಹೆಸರಾಗಲಿ ಕಾಣಲಿಲ್ಲ. ತುಂಬ ಆತಂಕದ ಮನೋಭಾವದಿಂದ ಉದ್ವಿಗ್ನನಾಗಿ ಎರಡನೆಯ ಕಾಗದ ಓದಿದೆ. ನಾನು ತೇರ್ಗಡೆಯಾದ ವಿಷಯ ಅದರಲ್ಲಿತ್ತು, ನನ್ನ ಹರ್ಷಕ್ಕೆ ಪಾರವಿರದಾಯ್ತು. ಗಾಡಿಯಾಳನ್ನು ಕರೆದು, ಸಂತೋಷ ವಾರ್ತೆಯನ್ನು ತಂದುದಕ್ಕೆ ನಾನು ಮೈಸೂರಿಗೆ ಹೊರಡುವ ಮುನ್ನ ಅವನಿಗೆ ಒಂದು ಉಪಾಯನ ಕೊಡುತ್ತೇನೆಂದು ಮಾತುಕೊಟ್ಟೆ. ತಾಯಿ, ನಿನ್ನ ಕೃಪೆ ನನ್ನನ್ನು ತೇರ್ಗಡೆ ಮಾಡಿದೆ, ನೀನೆ ನನ್ನನ್ನು ಕೈಹಿಡಿದು ನಡೆಸುತ್ತಿದ್ದೀಯ. ನಾನು ನಿನ್ನ ಮುಗ್ಧ ಶಿಶು! ಪ್ರಾಚೀನ ಮಹಾವಿಭೂತಿಗಳಿಗೆಲ್ಲ ನನ್ನ ಪ್ರಣಾಮಗಳು! ಓಂ!”

ಜೂನ್ ೯ರಿಂದ ೧೭ರವರೆಗೆ ನಾನು ಮಲೇರಿಯಾ ಜ್ವರತಪ್ತನಾಗಿ ಹಾಸಿಗೆ ಹಿಡಿದಿದ್ದ ಕಾಲದಲ್ಲಿ ಗೀಚಿರುವ ಒಂದೆರಡು ಕವನಗಳು ಸಿಕ್ಕಿವೆ. ಅವನ್ನಿಲ್ಲಿ ಕೊಟ್ಟು ಮುಂದುವರಿಯುತ್ತೇನೆ. ಮುಂಗಾರು ಮಳೆ ಹಿಡಿದಿರುವ ಸಂಗತಿ. ಕಾಯಿಲೆಯಾಗಿ ಮಲಗಿರುವವನ ಮನಕ್ಕೆ ಅದು ತರುವ ಅನುಭವ ಈ ಅಪೂರ್ವ ಕವನದಲ್ಲಿದೆ. ಹೆಂಚಿನ ಮೇಲೆ, ಜಿಂಕ್ಸೀಟಿನ ಮೇಲೆ, ಬಾಳೆ ಅಡಕೆ ತೋಟದ ಮೇಲೆ ಭೋರೆಂದು ಬೀಸುವ ಬಿರುಗಾಳಿಯ ಜೊತೆ ಸುರಿಯುವ ಮಳೆಯ ಹನಿಗಳು ರೇಜಿಗೆಯ ಸದ್ದು!

THE RAINY DAY

The rain fell and fell and fell
It pattered and pattered and pattered,
O’er house and hill and dell,
It chattered chattered and chattered.

The sky had lost its glory
To gain the signet of duty;
The earth had become hoary
Even for the sake of beauty!

Loudly the winds were howling
Over the deepening gloom;
The sullen heaven was scowing
From its confusive dome.

Oh! Oh!’ the forests roared
And they swayed to and fro;
And the rain madly poured
On the earth’s sullen brow…

೧೦-೬-೧೯೨೪ ಹಾಕಿರುವ ಇನ್ನೊಂದು ಕವನ. ಬಹುಶಃ ಕಾಯಿಲೆಯಾಗಿ ಮಲಗಿ ಮನಸ್ಸು ಬದುಕನ್ನೂ ಸಾವನ್ನೂ ಚಿಂತಿಸಿ, ಜೀವನದ ಧ್ಯೇಯ ಸಾಧನೆಯತ್ತ ಹೊರಳಿರುವಂತೆ ತೋರುತ್ತದೆ.

LINES WRITTEN ON THE SICK-BED

Darkly and brightly the days and months pass on
And the years come and the years go;
Sadly and sweetly before life’s flowery lawn
Our chariot struggles to and fro.
Many a cloudy day we left behind
And days of sun-shine and of showers;
We met and we do meet-we are destined-
The lands of honey, milk and flowers!
Despair and hope have stirred the sea of strife;
The mud-stained bubbles rise and break;
Pleasure and pain are borders hemmed of life,
They enter when excess doth quake.
Some gather flowers of light; some gather gold;
Some write the page of destiny;
Some clamour for merit to behold
The love-light on the dew-lit lea!

Lo! In the secret streets of darksome life
The sad train flies with its sad luggage,
Hark! To their rout of woeful drum and fife,
Behold them pass with bag and baggage!
Oh! They whose tears have watered grass and flowers,
Whose smiles have lit the azure heaven,
Whose kisses brought the sunshine and the showers
Coldly and sadly now are driven!
Can we not change the world’s red battle field
To a sweet sward of dew-decked green?
Oh! can we not convert the flutes that yield
Sad notes, to give forth notes serene?
Great souls are we, and we are born to kindle
Fires that consume both heaven and earth;
High aim is ours; we are not born to dwindle
And mar the heavenly aim of birth!
೧೦-೬-೧೯೨೪

೧೨-೬-೧೯೨೪ನೆಯ ತಾರೀಖಿನಲ್ಲಿ ಕರಡು ಕಾಗದದಲ್ಲಿ ಗೀಚಿ ಗೀಚಿ ಬರೆದಿರುವ ಈ ಕವನಕ್ಕೆ ಶೀರ್ಷಿಕೆಯನ್ನೂ ಹಾಕಿಲ್ಲ. ಕವನದ ತುದಿಯಲ್ಲಿ ‘Oh the sick-bed. The rain was falling monotonously’ಎಂದು ಸೋತ ಕೈ ಬರೆದಂತಿದೆ. ಕುಗ್ಗಿದ ದೇಹಸ್ಥಿತಿಯನ್ನು ಗೆಲ್ಲುವ ಪ್ರಯತ್ನದಲ್ಲಿ ಮನಸ್ಸು ಒಂದು ಹಿಗ್ಗಿನ ಪ್ರತಿಮೆಯನ್ನು ರಚಿಸಿಕೊಳ್ಳುವ ಪ್ರತೀಕವಾಗಿರುವಂತಿದೆ ಈ ಕವನಪ್ರತಿಮೆ.

I

Sweetly and dearly
A sweet girl sang in the shade!
And she sang. Oh! to whom?
Like a flower of the morn was the maid
In her full flowery bloom!
And from her lips, endowed
With music of heavens, out flowed
The touching harmony
Of some sweet agony!
And heared it clearly!
And I felt it dearly!

II

Sweetly and sadly
The rustic girl was singing:
And she sang, oh! to whom?
I saw before her swinging
A wild rose in its bloom!
And from her lips like showers
Enchanting the wild flowers
Out-flowed heaven’s harmony
Of some sweet agony!
And I heared it gladly!
And I felt it madly!

III

Gladly and madly
Sang the solitary maid:
Oh! to whom did she sing?
It was to a flower in the shade
That before her did swing!
She was sweet like Purity;
She was dear like Charity
Sadly from her crystal heart
Out flowed the sweetest art!
And I heared it gladly;
And I felt madly!

 

ಜೂನ್ ೧೮ನೆಯ ಬುಧವಾರದ ದಿನಚರಿ:

“ಬರೆಯುವ ಹಾಳೆಗಳ ಅನೇಕ ದಿನಗಳ ತರುವಾಯ ಮತ್ತೆ ದಿನಚರಿ ಬರೆಯುವ ಕರ್ತವ್ಯದಲ್ಲಿ ತೊಡಗಿದ್ದೇನೆ. ರಾತ್ರಿ ನಾಲ್ಕು ಗಂಟೆಯ ಹೊತ್ತಿನಲ್ಲಿ (ಬೆಳಗಿನ ಜಾವ) ಎಚ್ಚರವಾಗಿ ಹೊರಗಡೆಗೆ ಇಣುಕಿ ನೋಡಿದೆ. ಆಗ ನನ್ನ ಮನಸ್ಸಿನಲ್ಲಿಯ ಪ್ರಾಸರಹಿತ ಛಂದಸ್ಸಿನಲ್ಲಿ (Blank verse) “In the Dead of the Night”(ಕಗ್ಗತ್ತಲ ರಾತ್ರಿಯಲ್ಲಿ) ಎಂಬ ಶೀರ್ಷಿಕೆಯ ಕವನ ರಚನೆಮಾಡಿದೆ. ಮನದಲ್ಲಿಯೆ ಎಂಟು ಪದ್ಯಗಳನ್ನು ರಚಿಸಿದ ಮೇಲೆ ಅವುಗಳನ್ನು ಮತ್ತೆ ಮತ್ತೆ ಹೇಳಿಕೊಂಡೆ, ಅವುಗಳನ್ನು ಮರೆತು ಬಿಡಬಾರದು ಎಂದು. ಬೆಳಿಗ್ಗೆ ಎದ್ದವನೆ ಅವುಗಳನ್ನೆಲ್ಲ ಪ್ರತಿಯೆತ್ತಿಕೊಂಡೆ. ಇದು ಮಳೆಗಾಲವಾಗಿದ್ದರೂ ಆಗ ಹೊಳೆವಾಗಿತ್ತು, ಮಳೆ ಬೀಳುತ್ತಿರಲಿಲ್ಲ. ಉಬ್ಬಿ ಹಿಗ್ಗುತ್ತಿರುವ ಮೋಡಗಳಲ್ಲಿ ಚಂದ್ರನೂ ಕೂಡ ಮಬ್ಬುಮಬ್ಬಾಗಿ ಹೊಳೆಯುತ್ತಿದ್ದನು. ಬೇಸರದ ಮಧುರ ರಾತ್ರಿಯಾಗಿತ್ತು, ಕವಿಗೆ ಮಧುರ, ಮನುಷ್ಯಗೆ ಬೇಸರ. (It was a sweet and monotonous night, sweet for the poet, monotonous for the man) ನಾಲ್ಕು ದಿನಗಳಿಂದ ನನಗೆ ಮೈಸರಿಯಿಲ್ಲ. ತಾಯಿ, ನಿನ್ನ ದಾರಿಯಲ್ಲಿಯೆ ನಡೆಯಲು ನನಗೆ ಕಲಿಸು. ವಂದೇ ಸ್ವಾಮಿ ವಿವೇಕಾನಂದಮ್‌! ಓಂ ಶಾಂತಿ!”

IN THE DEAD OF THE NIGHT

In the dead of the night
When all were asleep
Silently I awoke
And peered outside my roof.

Not a star was in the sky
But solitarily
The sweet and pale moon rolled
Upon heaven’s cloudy floor.

Heaven seemed to repose
Upon the earth’s green lap;
Like lovers heaven and earth
Were in one close embrace.

Not a leaf rustled soft,
The breath of heaven was still;
Not a ripple rose and fell
Upon the musing lake.

The insects’ harmony
Monotonously swelled;
It rose from the dark earth
To the dim cloudy heavens.

A lonely fire-fly gleamed
Among the ‘areca’ tress;
And beauty dwelt with it,
And with it beauty fled!

The beast slept in its lair
And the bird in its nest.
But I alone was awake
In the dead of the night.
Vainly we say that earth
Gains the kiss of heaven,
For heaven sleeps on earth’s lap
In the dead of the night!