ಏಪ್ರಿಲ್ ೨೩ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಏನೂ ಕೆಲಸ ಮಾಡಲಿಲ್ಲ. ಸುಮ್ಮನೆ ಹರಟೆ ಹೊಡೆಯುತ್ತಾ ಸುಖವಾಗಿ ಕಾಲ ಕಳೆದೆವಷ್ಟೆ. ಮಧ್ಯಾಹ್ನ ನನ್ನ ಕವನ ‘Kisses’ ಪೂರೈಸಿದೆ. ಖಾದಿ ಭಂಡಾರಕ್ಕೆ ಹೋಗಿ ಒಂದು ಪಂಚೆ ಒಂದು ಟವಲು ಕೊಂಡೆ. ಅಲ್ಲಿಂದ ವಾಯುವಿಹಾರಕ್ಕಾಗಿ ಪಾರ್ಕಿಗೆ ಹೋದೆವು. ಮಕಮಲ್ಲಿನಂತೆ ಹಸುರಾಗಿದ್ದ ಶಾದ್ವಲದಮೇಲೆ ಅಂಗಾತನೆ ಮಲಗಿ ಹರಟೆ ಹೊಡೆದೆವು. ರಾತ್ರಿ ನಾನು ಪ್ರೇಮಸ್ವರೂಪವನ್ನು ಕುರಿತು ಮಾತಾಡುತ್ತಿದ್ದಾಗ ಕೆ.ಮಲ್ಲಪ್ಪ ಇದ್ದಕ್ಕಿದ್ದ ಹಾಗೆ ‘ಹಾಗಾದರೆ ನೀವು ಯಾವಳೊ ಒಬ್ಬ ಕನ್ಯೆಯನ್ನು ಪ್ರೀತಿಸುತ್ತಿರಬೇಕು!’ ಎಂದುಬಿಟ್ಟರು. ನಾನು ‘ಹೌದು’ ಎಂದೆ. ನಾನು ಬರೆದ ಪ್ರಣಯಗೀತೆಗಳನ್ನೆಲ್ಲ ಅವರಿಗೆ ತೋರಿಸಿದೆ. ಮತ್ತೆ ಹೇಳಿದೆ ‘ಪ್ರೇಮ ಎಂದರೆ ಸ್ವಾಮಿ ವಿವೇಕಾನಂದರು ಹೇಳುವಂತೆ, ಗೋಪಿಯರಿಗೂ ಶ್ರೀಕೃಷ್ಣನಿಗೂ ಇದ್ದ ಸಂಬಂಧದಂತಿರಬೇಕು’ ಎಂದು. ಸ್ವಾರಸ್ಯವಾಗಿತ್ತು ನಮ್ಮ ಸಂಭಾಷಣೆ. ತಾಯಿ ನಿನ್ನನ್ನು ಎಲ್ಲೆಲ್ಲಿಯೂ, ಎಲ್ಲದರಲ್ಲಿಯೂ ಒಳ್ಳೆಯದು ಮತ್ತು ಕೆಟ್ಟದ್ದರಲ್ಲಿಯೂ ಸಂದರ್ಶಿಸುವ ಬಲ್ಮೆಯನ್ನು ನನಗೆ ನೀಡು. ಓಂ!”

ಮೇಲೆ ಉಕ್ತವಾಗಿರುವ ಕವನ ‘Kisses’ ಇಲ್ಲಿ ಕೊಟ್ಟಿದೆ.

An Kisses! Sweet flowery kisses!
What powers in your charms abide?
The sweetest of heavens he misses
Who wanders far from your side.

You come as a sweet relief
When we are gloomy and sad;
You add a bliss to the grief
When we are merry and glad.

When we go from bush and bower
Where our beloved ones abide
To a distant town or tower
Where unfamiliar faces reside,

Sweet rememberance brings your flower
Our hapless hearts to console;
And the bliss of long past hours
Inspires the pensive soul.

You give life to lifeless bosoms;
From you all sorrows retire;
Kisses, you are as the blossoms
That bloom never to expire.

Your sweet embrace is the surest
To display the power of love;
Your tender touch is the purest
From beneath or from above.

When the victim struggles coldly
In the icy jaws of death
You come to his side boldly
To cheer his farewell breath.

A Mother’s sorrows are lulled
By your touch of love and bliss;
A lover’s woes are annulled
By his lovings maiden’s kiss.

But on, to a poet you bring
News unheared and forms unseen!
And you inspire him to sing
Of many a vanished scene!
೨೫-೪-೧೯೨೪

ಏಪ್ರಿಲ್ ೨೪ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ಎದ್ದವನೆ ಶೌಚಾದಿಕ್ರಿಯೆಗಳನ್ನು ಮುಗಿಸಿ ಬಂದು ಗೀತೆ ಓದುವುದಕ್ಕೆ ಕುಳಿತೆ. ನನಗೆ ಪರಿಚಿತನಾದ ಒಬ್ಬ ಮಾಧ್ವ ಬ್ರಾಹ್ಮಣ ನನ್ನಲ್ಲಿದ್ದ ಬೃಹತ್ ಸ್ತೋತ್ರ ರತ್ನಾಕರವನ್ನು ಓದಲು ಬಂದನು. ಗೀತೆಯ ೯ನೆಯ ಅಧ್ಯಾಯವನ್ನು, ಅದರಲ್ಲಿಯೂ ಮುಖ್ಯವಾಗಿ ಅದ್ಭುತವೂ ಭವ್ಯವೂ ಆಗಿರುವ ವಿರೋಧಾಭಾಸಗಳನ್ನೊಳಗೊಂಡಿರುವ ‘All beings have root in me and not I in them’ ಮತ್ತು

[1]Nor all beings have root in me ಭಾಗವನ್ನು ಓದುತ್ತಿದ್ದೆ. ಅದಕ್ಕೇನು ವಿವರಣೆ ಕೊಡುತ್ತಾರೆ ಎಂದು ಅವನನ್ನು ಕೇಳಿದೆ. ಅದಕ್ಕವನು ‘ಅನೇಕ ಪರಸ್ಪರ ವಿರೋಧಗಳ ತತ್ತ್ವಾಭಾಸನಾಗಿದ್ದಾನೆ ದೇವರು’ ಎಂದನು. ‘ಹಾಗೆ ಹೇಳುವುದರ ಅರ್ಥ….. ದೇವರು ಅನಿರ್ವಚನೀಯ, ವಿವರಣೆಗೆ ನಿಲುಕುವವನಲ್ಲ, ವಿರೋಧಾಭಾಸಗಳಿಂದಲೇ ಅವನನ್ನು ವರ್ಣಿಸಬೇಕಾಗುತ್ತದೆ.-ಎಂದು ನಾನು ತಿಳಿಯುತ್ತೇನೆ’ ಎಂದೆ. ಆಗ ವಾಗ್ವಾದ ಪ್ರಾರಂಭವಾಯಿತು. ನಾನು ಅದ್ವೈತದ ಪರವಾಗಿ ವಾದಿಸಿದೆ. ಆದರೆ ದ್ವೈತವನ್ನು ಅಲ್ಲಗಳೆಯಲಿಲ್ಲ. ಏಕೆಂದರೆ ನಾನು ಯಾವ ದರ್ಶನವನ್ನೂ ಕೀಳೆಂದು ಭಾವಿಸುವುದಿಲ್ಲ. ಯಾರಿಗೆ ಅದ್ವೈತ ಅಗ್ರಾಹ್ಯವಾಗುತ್ತದೆಯೊ ಅವರು ದ್ವೈತಕ್ಕೆ ಹೋಗಬಹುದು. ಒಂದಲ್ಲ ಒಂದು ಸಮಯ ಬಂದೇ ಬರುತ್ತದೆ, ಎಲ್ಲ ಜೀವರೂ ಭಗವಂತನಲ್ಲಿ ಐಕ್ಯರಾಗಿ, ತಾಯಿಯಲ್ಲಿ ಒಂದಾಗಿರುತ್ತಾರೆ. ಅದಕ್ಕೆ ಅವನೆಂದ: ‘ಹಾಗೆನ್ನುವುದು ಪಾಷಂಡಿತನ, ದೇವರೊಡನೆ ಸರಿಸಮಾನತ್ವವನ್ನು ನಟಿಸುವುದು; ನಿಮ್ಮ ಕರ್ತವ್ಯ ಪ್ರಾರ್ಥಿಸುವುದು, ಅವನಿಗೆ ಅಡಿಯಾಳುಗಳಾಗಿರುವುದು.’ ನಾನೆಂದೆ: ‘ಎಲ್ಲಿ ಎರಡು ಇರುತ್ತದೆಯೊ ಅಲ್ಲಿ ಸರಿಸಮಾನತೆಯ ಕೇಳುವವರು?’ ಅವನೆಂದ: ‘ನೀವು ಸೋsಹಂ ನಾನೆ ಅವನು ಎಂದರೆ, ನಾನು ನಿಮಗೆ ಒಂದು ಪ್ರಹಾರ ಕೊಟ್ಟರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಲ್ಲಿರೋ? ಅದಕ್ಕೆ’ ನಾನೆಂದೆ: ‘ನಾನೀಗ ನಿಮ್ಮ ಕುತ್ತಿಗೆ ಹಿಸುಕಿದರೆ ನಿಮ್ಮ ಶ್ರೀಮನ್ನಾರಾಯಣ ಬಂದು ನಿಮ್ಮನ್ನು ರಕ್ಷಿಸುತ್ತಾನೆಯೋ? ನಾನಾದರೋ ದೇವರನ್ನು ಬೇಡಲು ಹೋಗುವುದಿಲ್ಲ. ಏಕೆಂದರೆ, ನನಗೆ ಗೊತ್ತು, ಎಲ್ಲವೂ ಅವನಲ್ಲಿಯೆ ಇರುವುದು ಎಂದು. ಎರಡೂ ಬೇರೆಬೇರೆ, ದ್ವೈತವೇ ನಿತ್ಯ ಎಂದು ಅವನೂ, ನಾನು ಎರಡಿಲ್ಲ, ಏಕ ಅಥವಾ ಅದ್ವೈತವೇ ನಿತ್ಯ ಎಂದು ವಾದಿಸಿದೆವು. ಹೀಗೆ ಹತ್ತೂವರೆ ಗಂಟೆಯವರೆಗೂ ಚರ್ಚೆ ಮುಂದುವರಿಯಿತು, ನಾನು ಅವನ ದ್ವೈತವನ್ನೇನೂ ಅಲ್ಲಗಳೆಯಲಿಲ್ಲ, ಏಕೆಂದರೆ ನಮ್ಮ ಪಯಣದ ಮಾರ್ಗದಲ್ಲಿ ಅದೂ ಒಂದು ಮೆಟ್ಟಿಲು ಎಂದು ನನಗೆ ಗೊತ್ತು. ಆದರೆ ಅವನು ಮಾತ್ರ ನನ್ನದನ್ನು ಮತ್ತೆಮತ್ತೆ ಅಲ್ಲಗಳೆದನು. ಠಾಕೂರರ ‘Realisation of the Infinite’ ಓದಿದೆ. ನನ್ನ ಉಪನ್ಯಾಸದ ಸ್ವಲ್ಪಭಾಗ ಬರೆದೆ. ಕತ್ತಲಾದ ಮೇಲೆ ವಾಕ್‌ಹೋಗಿದ್ದೆವು. ಸೊಗಸಾಗಿತ್ತು. ರಾತ್ರಿ Golden Treasuryಯ ಪ್ರೇಮಗೀತೆಗಳನ್ನು ಓದಿದೆವು.”

ಏಪ್ರಿಲ್‌ ೨೫ನೆಯ ಶುಕ್ರವಾರದ ದಿನಚರಿ:

“ಇವೊತ್ತಿನ ದಿನಚರಿ ಎರಡು ದಿನಗಳ ಮೇಲೆ ಬರೆದದ್ದು. ಆದ್ದರಿಂದ ಭಾವಗಳು ಮಾಸಲು ಮಾಸಲು. ನಿನ್ನೆ ಮಾಧ್ವ ಬ್ರಾಹ್ಮಣನೊಡನೆ ಮಾಡಿದ ಚರ್ಚೆಯ ಪರಿಣಾಮವಾಗಿ ನನ್ನ ಉಪನ್ಯಾಸದಲ್ಲಿ ನಾವು ತಾಯಿಯೊಡನೆ ಐಕ್ಯವಾಗುತ್ತೇವೆ ಎಂದು ಭಾವಿಸುವುದು ಪಾಷಂಡಿತನವೇನಲ್ಲ ಎಂಬ ವಿಚಾರ ಪ್ರತಿಪಾದನೆ ಮಾಡಿ ಸುಮಾರು ನಾಲ್ಕು ಪುಟದಷ್ಟು ಹೆಚ್ಚಿಗೆ ಸೇರಿಸಿದೆ. ಬೃಹತ್ ಸ್ತೋತ್ರ ರತ್ನಾಕರದಲ್ಲಿ ಕೆಲವು ಶ್ಲೋಕಗಳನ್ನು ಪಠಿಸಿದೆ. ಕೆ.ಮರಿಯಪ್ಪ ನನ್ನ ರೂಮಿಗೆ ಬಂದವರು ಅಲ್ಲಿಯೆ ರಾತ್ರಿಯೂ ಉಳಿದರು.

ತಾಯಿ, ಕಾಡಿನ ಹೂವಿನಂತೆ ಅಲಕ್ಷಿತನಾಗಿ ನಾನು ಜನರ ನಡುವೆ ಇರುತ್ತಿದ್ದೇನೆ. ಆದರೆ ನಿನ್ನ ಹೃದಯದಲ್ಲಿ ನಾನು ಒಂದು ವಿಶ್ವದಂತೆ ಸಂಚರಿಸುತ್ತೇನೆ, ಏಕೆಂದರೆ ನನ್ನಲ್ಲಿ ನಾನು ಕಲ್ಪಿಸುವಷ್ಟು ದೊಡ್ಡದಾದ ವಿಶ್ವವೆ ಮಲಗಿದೆ. ಜನರು ತಿರಸ್ಕರಿಸಿದರೆ ನೀನು ನನ್ನನ್ನು ನಿನ್ನೆದೆಗಪ್ಪಿಕೋ, ನಿನ್ನ ಸುಕೋಮಲ ಸ್ಪರ್ಶದಲ್ಲಿ ದಯೆಯನ್ನೂ ಕರುಣೆಯನ್ನೂ ನಾನು ಅನುಭವಿಸುವಂತೆ! ವಂದೇ ಸ್ವಾಮಿ ವಿವೇಕಾನಂದಮ್‌.! ಪೂರ್ವದ ಮಹಾಪುರಷರೇ, ನಿಮಗೆಲ್ಲರಿಗೂ ಜಯವಾಗಲಿ! ಓಂ! ಓಂ! ಓಂ!

ಏಪ್ರಿಲ್ ೨೬ನೆಯ ಶನಿವಾರದ ದಿನಚರಿ:

“ಇವತ್ತು ನಮ್ಮ ಪರೀಕ್ಷೆ ಇತ್ತು. ಪ್ರಶ್ನೆಪತ್ರಿಕೆ ಅಷ್ಟೇನೂ ಬುದ್ಧವಂತಿಕೆಯದ್ದಾಗಿರಲಿಲ್ಲ. ಸಂಜೆ ನಾನೊಬ್ಬನೆ ವಾಕ್ ಹೋಗಿದ್ದೆ. ದಾರಿಯಲ್ಲಿ…. ಅಯ್ಯಂಗಾರ್ ಸಂಧಿಸಿದರು. ಅವರು ನನ್ನ ಕೆಲವು ಕವನಗಳನ್ನು ಕೇಳಿದರು. ಅವರ ಸಂಗಡ ರೂಮಿಗೆ ಬಂದು ಹಸ್ತಪ್ರತಿಯನ್ನು ಕೊಟ್ಟೆ, ಸೋಮವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಹಿಂತಿರುಗಿಸಬೇಕೆಂಬ ಕರಾರಿನ ಮೇಲೆ. ಕೆ.ಮರಿಯಪ್ಪ ಮತ್ತು ಚೆಲ್ವಿರಾಯಗೌಡ ಬೀಳುಕೊಟ್ಟರು. ಶೆಟ್ಟಿ ಹಾಸ್ಟೆಲಿಗೆ ಹೋಗಿದ್ದೆ. ಅಲ್ಲೊಂದು ಮುದ್ದು ಬಾಲಕೃಷ್ಣನ ಪಟ ನೋಡಿದೆ; ಅದು ಎಷ್ಟು ಸುಂದರ ಮನೋಹರವಾಗಿತ್ತು ಎಂದರೆ ಅದನ್ನು ನೋಡುತ್ತಾ ನೋಡುತ್ತಾ ನಾನೂ ಒಬ್ಬ ಬಾಲಕೃಷ್ಣನಾದೆನೊ ಎನ್ನುವಷ್ಟರಮಟ್ಟಿಗೆ. ಆ ಬೈಗಿನ ಹಿನ್ನೆಲೆಯ ದೃಶ್ಯ ನನ್ನನ್ನು ನಿಜವಾದ ಅಂತಹ ಸ್ಥಳಕ್ಕೆ ಕೊಂಡೊಯ್ದಂತಾಯ್ತು. ಒಂದು ಕವನ ರಚಿಸಿದೆ ‘She is fair like a jasmine flower’ ಎಂದು ರಾತ್ರಿ ಒಬ್ಬನೆ ಒಂಟಿಯಾಗಿ ಮಲಗಿದೆ, ತಾಯಿಯೊಡನೆ ಐಕ್ಯತೆಯನ್ನು ಅನುಭವಿಸುತ್ತಾ!”

ಮೇಲಿನ ದಿನಚರಿಯಲ್ಲಿ ಉಕ್ತವಾದ ಕವನದ ಶೀರ್ಷಿಕೆ ಹಸ್ತಪ್ರತಿಯಲ್ಲಿ ‘The Wood-land Maid (ವನಕನ್ಯೆ) ಎಂದಿದೆ.

She is fair like a jasmine flower,
She is sweet like a sacred thought;
And to me who is her dear lover
She is pure without a spot.

She walks like the midnight moon
Whit a splendour and glory unseen;
Sweet it is with her to commune
For her face beside fair is serene.

Her face is a rose of the morn
And she is like a bird on the lawn;
With her songs all hours doth she adorn
And she smiles like the blushing dawn.

Like a cloud with its unshed showers
Doth she mock the awaiting flowers;
Like a bower with its unplucked flowers
Doth she cheer the weary hours.

The bees take her face for a flower
But they dare not approach her form:
They see in her eyes a kindered power
And they hover around her to charm.

Like a lotus flowers of the lake
Lonely with its liquid splendour,
Like the blue sky when morn’s awake
She is serene and tender.

She is fair like a malati flower
And sweet like a champak blossom;
And to me who is her dear lover
She is white in bosom.
೨೬.೪.೧೯೨೪

ಏಪ್ರಿಲ್ ೨೭ನೆಯ ಭಾನುವಾರದ ದಿನಚರಿ:

“ಇವೊತ್ತು ನನ್ನ ಜೀವಮಾನದ ಒಂದು ಪ್ರಮುಖ ಘಟನೆ ಸಂಭವಿಸಿತು. ನಾನು ಎಂ.ಎಚ್‌.ಕೃಷ್ಣಯಂಗಾರ್ ಅವರಲ್ಲಿಗೆ ಹೋಗಿದ್ದೆ. ನನ್ನ ಸ್ನೇಹಿತವರ್ಗದಲ್ಲಿ ಒಂದು ಹಿರಿಯ ಜೀವವನ್ನು ಸಂಧಿಸಿದಂತಾಯಿತು ನಾನು ಅವರನ್ನು ಭೇಟಿಯಾದಾಗ. ನನ್ನ ಜೀವನ ಮತ್ತು ಕಾವ್ಯಜೀವನಗಳ ವಿಚಾರವನ್ನೆಲ್ಲ ಕೇಳಿ ತಿಳಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಮಾತಾಡುತ್ತಿದ್ದೆವು, ನಡುವೆ ಅವರು ಹೇಳಿದರು: ‘ಪುಟ್ಟಪ್ಪ, ನನಗೇನೊ ನಂಬಿಕೆ ಇದೆ, ನಮ್ಮ ನಾಡಿಗೆ ಮಹತ್ತಾದ ಭವಿಷ್ಯತ್ತೊಂದು ಕಾಯುತ್ತಿದೆ. ರವೀಂದ್ರನಾಥ ಠಾಕೂರರಿಗಿಂತಲೂ ದೊಡ್ಡ ಕವಿಗಳು ತಮ್ಮ ಉಜ್ವಲ ಪ್ರತಿಭೆಯಿಂದ ಲೋಕವನ್ನೆ ಬೆರಗುಗೊಳಿಸುತ್ತಾರೆ; ಪ್ರಫುಲ್ಲ ಚಂದ್ರರಾಯ್‌ಜಗದೀಶ ಚಂದ್ರಬೋಸರಿಗಿಂತಲೂ ಸಮರ್ಥರಾದ ವಿಜ್ಞಾನಿಗಳು ಬೆಳಕಿಗೆ ಬರುತ್ತಾರೆ.’ ಮತ್ತೂ ಭಾವವಶರಾದಂತೆ ಮುಂದುವರಿಸಿದರು: ‘ಪುಟ್ಟಪ್ಪನವರೆ, ನನ್ನ ಶ್ರದ್ಧೆ ಹೇಳುತ್ತದೆ, ಆ ಮಹಚ್ಛೇತನಗಳಲ್ಲಿ ಪುಟ್ಟಪ್ಪನವರೂ ಒಬ್ಬರಾಗಿದ್ದಾರೆ ಎಂದು!’ ನಿಜ, ಹೌದು, ಪುಟ್ಟಪ್ಪ, ಭವಿಷ್ಯತ್ತು ನಮ್ಮ ಕೈಲಿದೆ. ನಮ್ಮ ನಾಡನ್ನು ಮೇಲೆತ್ತಬೇಕು! ಠಾಕೂರರು ಬ್ಯಾಪ್ಟಿಸ್ಟ್‌ಮಾತ್ರರು ಜಾನನಂತೆ; ಕ್ರಿಸ್ತನಿನ್ನೂ ಬರಬೇಕಾಗಿದೆ! (Tagore is only a Baptist like John, but a Christ is yet to come! The future will be ours!) ಭವಿಷ್ಯತ್ತು ನಮ್ಮದಾಗುತ್ತದೆ…. ನನ್ನ ಕವನಗಳ ಹಸ್ತಪ್ರತಿಯನ್ನು ಅವರು ತೆಗೆದೆಕೊಂಡರು…. ಕನಸು ಕಾಣು, ಕನಸು ಕಾಣು, ಓ ಹೃದಯ, ಅತ್ಯಂತ ಭವ್ಯವಾದ ಕನಸುಗಳನ್ನೇ ಕಾಣು! (Dream, Dream O Heart, the most sublime of dreams!) ಓ ಮಧುರ ಹೂವೇ, ಮತ್ತೆ ಮತ್ತೆ ನಾನು ನಿನಗೆ ಮುತ್ತಿಡುವಂತೆ ಮಾಡುತ್ತಿದೆಯಲ್ಲಾ ಅದೇನು? (What makes me kiss you often, O Sweet Flower?).”

ಏಪ್ರಿಲ್ ೨೮ನೆಯ ಸೋಮವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಆರು ಗಂಟೆಗೆ ಎದ್ದುಬಿಟ್ಟೆ. ಈ ದಿನ ನನಗೊಂದು ಸಂಭ್ರಮದ ಸುದಿನ: ಏಕೆಂದರೆ ಇಂದು ನಾನು ನನ್ನ ಹುಟ್ಟೂರು ಮನೆಗೆ ಹೊರಡುತ್ತೇನೆ. ನನ್ನ ಸಾಮಾನನ್ನೆಲ್ಲ ತಮ್ಮಯ್ಯನವರ ವಶಕ್ಕೆ ಇಡಲು ಒಪ್ಪಿಸಿದೆ. ಎಂ.ಎಚ್‌.ಕೃಷ್ಣಯ್ಯಂಗಾರ್ ಅವರ ಮನೆಗೆ ಹೋಗಿ ಹಸ್ತಪ್ರತಿ ತೆಗೆದುಕೊಂಡೆ. ಅವರು ನನ್ನನ್ನು ಬೇಸಗೆರಜದಿಂದ ಹಿಂದಿರುಗಿ ಬಂದಮೇಲೆ ಶ್ರೀಯುತ ಬ್ರಜೇಂದ್ರನಾಥ್ ಶೀಲ್ (ಆಗ ವೈಸ್‌ಛಾನ್ಸಲರ್ ಅಗಿದ್ದರು) ಅವರಿಗೆ ಪರಿಚಯಮಾಡಿಸಿಕೊಡುವುದಾಗಿ ಹೇಳಿದರು. ಅಲ್ಲದೆ ನನ್ನ ಕವನಗಳನ್ನು ಓದಿ ನೋಡಿದುದರ ಬಗ್ಗೆ ನನ್ನನ್ನು ಕುರಿತು ‘ಪುಟ್ಟಪ್ಪ ನಿಮ್ಮಲ್ಲಿ ಕವಿಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ವಸ್ತು inspiration (ಸ್ಫೂರ್ತಿ) ಇದೆ. ಅದನ್ನು ಬೆಳೆಸಿಕೊಳ್ಳಿ!’ (Develop it) ಎಂದರು. ನಾನೆಂದುಕೊಂಡೆ: ‘ನನ್ನ ಎಂ.ಎಚ್‌.ಕೃಷ್ಣಯಂಗಾರರು ಇತರರಂತಲ್ಲ!’ ಬೇಗ ಬೇಗ ರೈಲು ಹತ್ತಿ ‘ಮನೆಗೆ’ ಹೊರಟೆ. ರೈಲಿನ ಪಯಣ ಆನಂದಕರವೂ ಆಲೋಚನಾ ಪೂರ್ಣವೂ ಆಗಿತ್ತು. ಆ ಅನುಭವವನ್ನು ಒಂದೆರಡು ಮಾತು ಗದ್ಯದಲ್ಲಿ ಹೇಳುವಂಥಾದ್ದಲ್ಲ: ಕಣ್ಣಿಟ್ಟಿದ ಕಡೆ ನನ್ನ ತಾಯಿ ಕಂಡಳೆನೆಗೆ. ತಾಯಿಯಲ್ಲಿ ಸರ್ವರೊಡನೆ ನಾನು ಚಲಿಸುತ್ತಿದ್ದೆ!”

ಏಪ್ರಿಲ್ ೨೯ನೆಯ ಮಂಗಳವಾರದ ದಿನಚರಿ:

“ಆಗತಾನೆ ಉಷಃಕಾಂತಿ ಪೂರ್ವದಿಕ್ಕಿನಲ್ಲಿ ಮಂದಹಾಸ ಬೀರುತ್ತಿತ್ತು. ನಮ್ಮ ರೈಲಿನ ಲೌಹರವ ಪ್ರಯಾಣದ ಪ್ರಶಾಂತಿಗೆ ಅಷ್ಟೇನೂ ಭಂಗಕಾರಿಯಾಗಿರಲಿಲ್ಲ. ನನ್ನ ಹುಟ್ಟುನಾಡನ್ನು ಸಮೀಪಸಿದಂತೆಲ್ಲಾ ನನ್ನ ಹೃದಯ ಒಂದು ರಸಸುಖದಿಂದ ಪುಲಕಿತವಾಯ್ತು. ಮಲೆನಾಡಿನ ಪರ್ವತಶ್ರೇಣಿಗಳನ್ನು ಹಿಂದೆಂದೂ ನೋಡದ ರೀತಿಯಲ್ಲಿ ನೋಡಿದೆ. ಅವುಗಳೆಲ್ಲ ಜೀವ ತುಂಬಿ ತುಳುಕುತ್ತಿದ್ದುವು. ಒಂದೊಂದು ಮರದಲ್ಲಿಯೂ ನನ್ನ ದಿವ್ಯಮಾತೆ ಅಡಗಿ ನಿಂತು ನನ್ನ ಕಡೆ ಮುಗುಳುನಗೆ ಬೀರುತ್ತಿದ್ದಳು. ಆ ಸಂವೇದನೆಯನ್ನು ಎಂತು ವರ್ಣಿಸಲಿ? ಅದು ಅನಿರ್ವಚನೀಯವಾಗಿತ್ತು. ನನ್ನ ಸ್ನೇಹಿತ ಡಿ.ಆರ್.ವೆಂಕಟಯ್ಯನೂ ನಾನೂ ಎರಡು ಹೊಳೆಗಳು ಸೇರುವಂತೆ ಸಂಧಿಸಿದೆವು. ವಿವೇಕಾನಂದರ ‘ರಾಜಯೋಗ’ ಓದಿದೆ, ಡಿ.ಆರ್.ವಿಗೆ ದೇವರ ವಿಚಾರವಾಗಿಯೂ ನಮ್ಮ ಆತ್ಮದ ಸ್ವರೂಪದ ವಿಚಾರವಾಗಿಯೂ ಇನ್ನೂ ಅನೇಕ ವಿಷಯಗಳನ್ನು ಕುರಿತು ಮಾತಾಡಿದೆ. ನನ್ನ ನಾಡೇ. ಓ ನನ್ನ ನಾಡೇ, ಓ ನನ್ನ ಸುಖದ ನಾಡೇ, ನಿನಗಿಂತ ಸಂತಸದ ನಾಡು ಇನ್ನಿಲ್ಲ! ಮಧುರ, ಮಧುರ, ಮಹಾ ಮಧುರ!”

ಏಪ್ರಿಲ್ ೩೦ನೆಯ ಬುಧವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಸುಬ್ಬಾಪಂಡಿತರಿಗೂ ನನಗೂ ದೊಡ್ಡ ವಾಗ್ವಾದ ನಡೆಯಿತು. (ಶಿವಮೊಗ್ಗದಲ್ಲಿ ನಾನು ಯಾವಾಗಲೂ ದೇವಂಗಿ ರಾಮಣ್ಣಗೌಡರ ಅಡಕೆ ಮಂಡಿಯ ಮನೆಯಲ್ಲಿ ಹೊಸಮನೆ ಮಂಜಪ್ಪ ಗೌಡರಲ್ಲಿ ಇಳಿದುಕೊಳ್ಳುತ್ತಿದ್ದೆ. ಸುಬ್ಬಾಪಂಡಿತರು ದೇವಂಗಿ ರಾಮಣ್ಣಗೌಡರಿಗೆ ಬೇಕಾದವರಾದ್ದರಿಂದಲೂ ಆಯುರ್ವೇದ ಔಷಧಗಳ ವಿಷಯದಲ್ಲಿ ಇಬ್ಬರೂ ಆಸಕ್ತರಾಗಿದ್ದರಿಂದಲೂ ಅಲ್ಲಿ ಅವರನ್ನು ಅನೇಕಸಲ ಸಂಧಿಸುವ ಅವಕಾಶ ಒದಗುತ್ತಿತ್ತು.) ಸಂಪ್ರದಾಯ ಬ್ರಾಹ್ಮಣರಾಗಿದ್ದ ಅವರಿಗೆ ಅಸ್ಪೃಶ್ಯತೆಯ ವಿಚಾರವಾದ ನನ್ನ ಅಭಿಪ್ರಾಯಗಳು ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಾಗ್ವಾದ ಹತ್ತುವರೆ ಗಂಟೆಯ ತನಕ ನಡೆಯಿತು. ಅಲ್ಲಿಗೆ ಇತ್ಯರ್ಥವಾಗದೆ ಕೈಬಿಟ್ಟೆವು. ಸ್ವಾಮಿ ವಿವೇಕಾನಂದರನ್ನು ಓದಿದೆ. ಜಮಖಾನೆಯ ಮೇಲೆ ಕುಳಿತು ನೆನೆಯತೊಡಗಿದ ನನಗೆ ತಾಯಿಯ ಸರ್ವವ್ಯಾಪಕ ಸಾನ್ನಿಧ್ಯದ ಅನುಭವವಾಗಿ ಪುಲಕಿತನಾದೆ. ‘ಏಳು, ಎಚ್ಚರಗೊಳ್ಳು, ಮಹಾಚೇತನವೆ, ಮುಂದುವರಿ!’ (Arise and proceed. Giant soul!) ಎಂದು ನನಗೆ ನಾನೇ ಹೇಳಿಕೊಂಡೆ. ಲೈಂಗಿಕ ಸಂಭೋಗಾದಿ ವಿಷಯಗಳನ್ನೊಳಗೊಂಡ ಟಾಲ್‌ಸ್ಟಾಯ್ ಅವರ ಕೃತಿಯನ್ನು ಓದಿದೆ. ಸಂಜೆ ತಿರುಗಾಡಲು ಹೋದೆವು. (ಭೂಪಾಳಂ ಚಂದ್ರಶೇಖರಯ್ಯ, ಕೂಡಲಿ ಚಿದಂಬರಂ, ಎಸ್‌.ವಿ.ಕೃಷ್ಣಮೂರ್ತಿರಾವ್, ಡಿ.ಆರ್.ವೆಂಕಟಯ್ಯ, ಡಿ.ಆರ್.ಮಾನಪ್ಪ ಮೊದಲಾದವರೆಲ್ಲ ಸಾಧಾರಣವಾಗಿ ಒಟ್ಟಾಗುತ್ತಿದ್ದೆವು.) ದೃಶ್ಯ ಸೌಂದರ್ಯ ಅತೀವ ಮನೋಹರವಾಗಿತ್ತು. ತಾಯಿ ಸಂಸಾರಬಂಧನದಿಂದ ನನ್ನನ್ನು ಬಿಡುಗಡೆ ಮಾಡು. (Mother. Free me from the bonds of samsara.)

ಮೇ ೧ರಿಂದ ೭ನೆಯ ತಾರೀಖಿನವರೆಗೆ ದಿನಚರಿ ಖಾಲಿಯಾಗಿದೆ. ವಾಡಿಕೆಯಂತೆ ಶಿವಮೊಗ್ಗದಲ್ಲಿ ನಾಲ್ಕಾರು ದಿನಗಳಿದ್ದು, ಅಲ್ಲಿಂದ ಇಂಗ್ಲಾದಿಖಿಖಿ ದೇವಂಗಿಗೆ ಹೋಗಿ ಅಲ್ಲಿಯೂ ಒಂದೆರಡು ದಿನ ಇದ್ದು, ಅಲ್ಲಿಂದ ಕುಪ್ಪಳ್ಳಿಗೆ ಹೋಗುತ್ತಿದ್ದುದು ರೂಢಿ. ಆ ದಿನಗಳಲ್ಲಿ ದಿನಚರಿ ಬರೆಯುವಂತಹ ನೀರಸ ವ್ಯಾಪಾರಿಗಳಿಗೆ ಬಿಡುವೂ ಇರುತ್ತಿರಲಿಲ್ಲ. ಮನಸ್ಸೂ ಅತ್ತಕಡೆ ಹೋಗುತ್ತಿರಲಿಲ್ಲ. ಪುನಃ ದಿನಚರಿ ಮೇ ೮ನೆಯ ತಾರೀಖಿನಿಂದ ಪ್ರಾರಂಭವಾಗುತ್ತದೆ.

ಮೇ ೮ನೆಯ ತಾರೀಖಿನ ದಿನಚರಿ:

“ಈಗ ನಾನು ಇಂಗ್ಲಾದಿಯಲ್ಲಿದ್ದೇನೆ. ಬೆಳಿಗ್ಗೆ ಏಳುತ್ತಿದ್ದ ಹಾಗೆ ನನ್ನ ದಿವ್ಯ ಪವಿತ್ರ ಮಾತೆಯ ಸ್ಮರಣೆಮಾಡುತ್ತಾ ಎದ್ದೆ. ಇವೊತ್ತು ಅಷ್ಟೊಂದು ಸೊಗಸಾದ ಕವಿತೆ ಬರೆಯುತ್ತೇನೆಂದು ನಾನು ಎಣಿಸಿರಲಿಲ್ಲ. ಸ್ನೇಹಿತರಿಗೆ ಕಾಗದ ಬರೆಯಲು ನಾಲ್ಕು ಕಾರ್ಡುಗಳನ್ನು ತೆಗೆದುಕೊಂಡು ಬರೆಯಲು ತೊಡಗಿದೆ. ಮೊದಲನೆಯ ಕಾಗದ ಕಾವ್ಯಮಯವಾಗಿತ್ತು. ಆದರೆ ಕಾವ್ಯವೇ ಆಗಿರಲಿಲ್ಲ. ಉಳಿದೆಲ್ಲವೂ ಅದ್ಭುತ ಕವಿತೆಗಳಾಗಿದ್ದುವು. ಭಾವ ಸುಮ್ಮನೆ ಪದಗಳಲ್ಲಿ ಅಭಿವ್ಯಕ್ತವಾಗುತ್ತಿತ್ತು, ಪ್ರವಾಹದೋಪಾದಿಯಲ್ಲಿ, ಕಾಗದಗಳನ್ನೆಲ್ಲ ಬರೆದ ಮೇಲೆ ಅವುಗಳನ್ನು ಪ್ರತಿಮಾಡಿಕೊಂಡೆ. ತುಂಬಿದ ಆನಂದಾನುಭವವಾಗಿತ್ತು. ಇಂಗ್ಲೀಷ್ ಕವನಗಳು ಕೆಲವು ಕನ್ನಡದಲ್ಲಿ ಭಾಷಾಂತರಗೊಂಡುದನ್ನು ಕಂಡೆ. ಭಾಷಾಂತರ ತುಂಬ ಸೊಗಸಾಗಿತ್ತು. ಅದರಲ್ಲಿಯೂ ಚಾರಲ್ಸ್‌ಲ್ಯಾಂಬ್‌ನ ‘The Old Familiar Faces’ ಎನ್ನಬಹುದಾದ ಸಂವೇದನೆಯಿಂದಲೂ ಅತ್ಯುತ್ತಮವಾಗಿತ್ತು”.

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವ ಸ್ನೇಹಿತರಿಗೆ ಬರೆದ ಕಾಗದಗಳು ಅದೃಷ್ಟವಶಾತ್ ಒಂದು ಹಸ್ತಪ್ರತಿಯಲ್ಲಿ ದೊರೆತಿವೆ. ಅವು ವಾಸ್ತವವಾಗಿ ಕಾಗದಗಳೇ ಅಲ್ಲ ಎಂಬಂತಿವೆ. ಅವುಗಳನ್ನೋದಿದ ಆ ಮಿತ್ರರು ಎಷ್ಟು ನಕ್ಕರೋ ತಿಳಿಯದು. ಅರೆಹುಚ್ಚನೆಂದು ಭಾವಿಸಿದ್ದರೂ ತಪ್ಪಲ್ಲ. ಆ ಕಾಗದಗಳೆಲ್ಲ ಭಾವಾತಿಶಯದ ಪ್ರಕೃತಿ ಸೌಂದರ್ಯಾನುಭವದ ನಿರೂಪಣೆಗಳಾಗಿವೆ. ಅವುಗಳಿಂದ ಬೇರೆ ಏನೂ ಪ್ರಯೋಜನವಿಲ್ಲದಿದ್ದರೂ ಅಂದಿನ ಕವಿಯ ಮನಸ್ಸು ಮತ್ತು ಹೃದಯ ಎಂತಹ ಭಾವೋಜ್ವಲವಾದ ಕಲ್ಪನಾವಿಲಾಸಕ್ಕೂ ಆಲೋಚನೆಗಳಿಗೂ ವಶವಾಗಿದ್ದುವು ಎಂಬುದಕ್ಕೆ ನಿದರ್ಶನಗಳನ್ನು ಒದಗಿಸುತ್ತದೆ. ಆ ಕಾಗದಗಳಲ್ಲಿ ಯೋಗಕ್ಷೇಮದ ವಿಚಾರವಾಗಲಿ, ಪರೀಕ್ಷೆ ತೇರ್ಗಡೆಗಳ ವಿಚಾರವಾಗಲಿ ಮತ್ತಾವ ಸರ್ವಸಾಧಾರಣವಾದ ಲೌಕಿಕ ವಿಷಯಗಳಾಗಲಿ ಇಲ್ಲ. ಯಾರಿಗೆ ಅವುಗಳನ್ನು ಬರೆದಿದ್ದೆನೊ ಅವರು ಅವುಗಳನ್ನು ಓದಿ ನಕ್ಕು ಕಸದ ಬುಟ್ಟಿಗೆ ಎಸೆದಿರಬಹುದು. ಆದರೆ ಅವುಗಳನ್ನು ಬರೆದ ನಾನು, ನನಗೆ ಅವು ಅಮೂಲ್ಯ ಎಂದು ಭಾವಿಸಿ, ಪ್ರತಿಯೆತ್ತಿ ಇಟ್ಟುಕೊಂಡಿದ್ದು ಆಶ್ಚರ್ಯಕರ! ಆಗಿನ ನನ್ನ ವಿಚಾರವಾಗಿದ್ದ ನನ್ನ ಆತ್ಮಪ್ರತ್ಯಯ ಅತ್ಯಂತ ವಿಸ್ಮಯಕರವಾಗಿ ತೋರುತ್ತಿದೆ ಈಗ ನನಗೆ! ಅದು ಅಹಂಕಾರಮೂಲವಾದದ್ದೇ? ಅಥವಾ ಆತ್ಮಶ್ರದ್ಧೆಯಿಂದ ಉದ್ಭವವಾದದ್ದೇ? ಮಿತ್ರರು ಹೀಗೆನ್ನಬಹುದು; ಉಳಿದವರು ಹಾಗೆನ್ನಬಹುದು!

ಇದು ಕೆ.ಮಲ್ಲಪ್ಪಗೆ ಬರೆದ ಕಾಗದ: ಅವರು ತರುವಾಯ ಜೀವನದಲ್ಲಿ ಕೊಡಗಿನಲ್ಲಿ ವಕೀಲಿವೃತ್ತಿಯನ್ನು ಕೈಕೊಂಡು, ಆಮೇಲೆ ಕೊಡಗು ರಾಜ್ಯದಲ್ಲಿ ಮಂತ್ರಿಮಂಡಲ ಸ್ಥಾಪನೆಯಾದಮೇಲೆ ಒಬ್ಬ ಮಂತ್ರಿಯಾಗಿ ಸೇವೆ ಸಲ್ಲಿಸಿ, ಹೊಸ ಮೈಸೂರು ರಾಜ್ಯ ಸ್ಥಾಪನೆಯಾಗಿ ಕೊಡಗು ಅದರಲ್ಲಿ ವಿಲೀನಗೊಂಡು ಒಂದು ಜಿಲ್ಲೆಯಾದ ಮೇಲೆ ಮೈಸೂರು ರಾಜ್ಯದ ಮಂತ್ರಿಮಂಡಲದಲ್ಲಿ ಒಬ್ಬ ಸಚಿವರಾಗಿ ಸೇವೆಗೈದು, ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ದೈವಾಧೀನರಾದರು.

LETTERS WRITTEN TO MY FRIENDS

To                                                                                Nature’s Cot
MALLAPPA

Beloved Friend,

It was a bright and inspiring morn, and I sat on my bed with a poet’s eye and heart! A dawn-lit gloom veiled the reality and a dreamy cloud-like land smiled before me.

A mountain, verdant with tress, stood like a spiritual thought infront with its vapour-veiled crest. And the sweet song of birds lulled my heart like the tunes from a violin!

In front of me a brook glittering and gurgling and embroidered with a blanket of grass and speckled here and there by mountain weeds flowed; and was lost in the thickets. I gazed and sweetness trembling passed through my frame! And I felt the brooke entered my heart.

I stood and muttered half within and half without ‘The work of my Mother is wondrous, Friends! And an agony made me droop again, for when I turned around to gaze at the my friends, I found I was alone! And yet it was sweet.

And I sighed and the breast heaved and fell: Ay, Ay, it heaved and fell like a maiden’n breast when she embraces for the first time her beloved lover!

Ay, Ay, it heaved and fell like the breast of a poet when he returns from the land of poesy.

Ay, Ay, it heaved and fell like the heart of a devotee when the vision of his beloved Lord of Love stands before him with His flute.

Oh it mingled like the rivers and it danced like the waves!

ಇದು ತಮ್ಮಯ್ಯಗೆ ಬರೆದ ಕಾಗದ: ಇವರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅಗಿ ನಿವೃತ್ತರಾದರು. ನಾಗಮಂಗಲದವರು ನನಗೆ ಸನ್ಮಾನ ಮಾಡಿ ನಾಟ್ಯಸರಸ್ವತಿಯನ್ನು ನೀಡಿದ ಸಂದರ್ಭದಲ್ಲಿ ಅವರನ್ನು ಅಲ್ಲಿ ಸಂಧಿಸಿದ್ದೆ.

To                                                                                Nature’s Cot
THAMAIAH

Beloved Friend,

It was an evening sweet and mild and climbed up a hill and I sat on its top. And I beheld a wondrous scene.

The mountains, range after range, stretched hazily far away and near, and their dream-like tops projected from my heart. Amidst the haze I beheld a figure smiling and phantom-like. I muttered low ‘It is my beloved friend.’

The sun-lit clouds stood stationary and they seemed like vapours of gold. And a vermillion colour painted the sky and it seemed like a sea of blood. And I saw a ship, dreamy and phantom-like, with stretched sails, and sailing, and I muttered slow ‘Does it earry my beloved friend?.

I sat there mute and pensive, and the dusk of eve began to spread slowly and the sweet songs of birds died out like last notes from a flute.

And I beheld a bird coming from far away. It slowly approached me and flew away. And I muttered slow ‘It came from eternity and flew to eternity!’ And I stood and cried again ‘Is it my friend’s soul?’

‘And again I sat, and the evening sun went down, and a dismaltwilight spread and increased the silence of the solitude. And the land was asleep.

Then an unknown humming sound entered my ears. and It filled the earth and heaven, and I muttered ‘It is the Eternal Word!’ I stood up and slowly as I paced toward my Home I said slow ‘Is it my friends’ distant symphony?’

ಇದು ಸಿ.ಟಿ.ಶೆಟ್ಟಿಗೆ ಬರೆದ ಕಾಗದ. ತುಂಬ ವಿನೋದಶೀಲದ ವ್ಯಕ್ತಿ. ತರುವಾಯ ಜೀವನದಲ್ಲಿ ಆತನನ್ನು ಸಂಧಿಸಿಯೆ ಇಲ್ಲ.

To                                                                                Nature’s Cot
C.T.SETTY

It was not yet dawn and I arose and went to the mountain and a sweet and shocking solitude prevailed. And a single Madivaala poured its revelry.

The phantom-like trees and bushes stood before me like an unwrit poem. And a beauty thrilled the morn.

The dew drops pattered in the death-like silence serene and sweet. And the breeze whispered some secrecy to the leaves and flowers. And I listened and they said ‘The Poet comes! I felt a secret shame and yet I smiled.

And I moved and a silvery sheet of water glimmered before me in the dark, dappled with weeds and lotus flowers. And its border waw dark with trees!

Two or three fire-flies connived among the trees and the clouds passing above also passed below. And in the sky beneath on the clouds sailing I saw a play ful boy singing ‘Happy, happy, happy heart!’

I stood mute listening to the poetry of the universe and I thought and felt I was on a cloud and was about to become a cloud. I smiled and murmured slow and low” I am a cloud even in flesh and blood.”

“I have a lake within me, I have a sky within me and I have a cloud within me which never dies and ever showers and which can soar to heavens!”

A universe dwells within each heart, dear friend!

೧೯೨೪ನೆಯ ಮೇ ೮ನೆಯ ಗುರುವಾರ ಮತ್ತೂ ಒಂದು ಕಾರಣಕ್ಕಾಗಿ ವಿಶೇಷ ಗಮನಾರ್ಹವಾಗಿದೆ. ದಿನಚರಿಯಲ್ಲಿ ಉಕ್ತವಾಗಿರುವಂತೆ ಅಂದು ಇಂಗ್ಲಾದಿಯಲ್ಲಿ ಒಂದು ಹಳೆಯ ‘ಅರ್ಥಸಾಧಕ ಪತ್ರಿಕೆ’ಯಲ್ಲಿ ಮೊತ್ತಮೊದಲು ನಾನು ಕನ್ನಡಕ್ಕೆ ಭಾಷಾಂತರವಾಗಿದ್ದ ಇಂಗ್ಲಿಷ್ ಕವನವನ್ನು ಸಂದರ್ಶಿಸಿದೆ. ದಿನಚರಿಯಲ್ಲಿ ಹೇಳಿರುವಂತೆ ಅದು ಚಾರಲ್ಸ್‌ಲ್ಯಾಂಬ್‌ನ ‘The Old Familiar Faces’. ಅಂದು ನನಗೆ ಆ ಪತ್ರಿಕೆಯ ವಿಚಾರವಾಗಲಿ, ಅದರ ಸಂಪಾದಕರು ಯಾರು ಏನು ಎಂಬುದಾಗಲಿ, ಆ ಭಾವಗೀತೆಯ ಭಾಷಾಂತರಕಾರರು ಯಾರು ಎಂಬುದಾಗಲಿ ಸ್ವಲ್ಪವೂ ಗೊತ್ತಿರಲಿಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಏನೇನು ಚಳುವಳಿ ಪ್ರಯತ್ನಗಳು ನಡೆಯುತ್ತಿದ್ದುವು ಎಂಬುದಕ್ಕೂ ನನಗೂ ಸಂಬಂಧವೇ ಇರಲಿಲ್ಲ. ಯಾವ ಕನ್ನಡ ಸಾಹಿತಿಯ ಪರಿಚಯವೂ ಇರಲಿಲ್ಲ. ಅವರ ಹೆಸರುಗಳನ್ನು ಕೂಡ ಕೇಳುವ ಗೋಜಿಗೆ ಹೋಗಿರಲಿಲ್ಲ. ನನ್ನ ಬದುಕಿನ ಹೊಳೆ ಕನ್ನಡ ಸಾಹಿತ್ಯದ ನವೋದಯದ ನದಿಗೆ ಬಹಳ ದೂರದಲ್ಲಿಯೆ ಹರಿಯುತ್ತಿತ್ತು. ಅದನ್ನು ಸಮೀಪಿಸಿಯೂ ಇರಲಿಲ್ಲ. ಒಂದು ಅರ್ಥದಲ್ಲಿ ನಾನು ಸಾಹಿತ್ಯದ ದಿಕ್ಕಿನಿಂದ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಪ್ರವೇಶಿಸಲಿಲ್ಲ. ಕಾಲೇಜಿಗೆ ಸೇರಿದ ಮೇಲೆಯೆ ಕನ್ನಡದ ಕಡೆಗೆ ನನ್ನ ಗಮನ ಮತ್ತು ಅಭಿಮಾನ ತಿರುಗಿದ್ದು. (ಆದರೆ ಅಂದು ಕನ್ನಡಕ್ಕೆ ಅಷ್ಟು ಸೊಗಸಾಗಿ ಅನುವಾದಗೊಂಡ ಆ ಇಂಗ್ಲಿಷ್ ಭಾವಗೀತೆಯನ್ನು ಓದಿ ನಾನು ಬಹುವಾಗಿ ಹಿಗ್ಗಿರಬೇಕು. ಬಹುಶಃ ಅದರಿಂದಲೇ ಪ್ರಚೋದಿತನಾಗಿ, ಮರುದಿನದ ಮೇ ೯ನೆಯ ತಾರೀಖಿನ ದಿನಚರಿಯಲ್ಲಿ ಬರೆದಿರುವಂತೆ, ಕನ್ನಡದಲ್ಲಿ ‘ಕವಿಗಳು’ ಎಂಬ ಕವನರಚನೆ ಮಾಡಿದೆನೆಂದು ತೋರುತ್ತದೆ. ಆ ಪದ್ಯ ಎಲ್ಲಿ ಹೋಯಿತೊ ಏನೊ. ಹುಡುಕುತ್ತೇನೆ. ಪತ್ತೆಯಾದರೆ ಕೊಡುತ್ತೇನೆ.) ಅದನ್ನು ಅನುವಾದಿಸಿದವರು ಮುಂದೆ ಕಾಲೇಜಿನಲ್ಲಿ ನನಗೆ ಪ್ರೊಫೆಸರ್, ಅದರಲ್ಲಿಯೂ ಇಂಗ್ಲಿಷ್ ಭಾಷಾ ಪ್ರೊಫೆಸರ್, ಆಗಲಿರುವ ಬಿ.ಎಂ.ಶ್ರೀಕಂಠಯ್ಯನವರು ಎಂಬುದೂ, ಆ ಅರ್ಥಸಾಧಕ ಪತ್ರಿಕೆಯನ್ನು ಹೊರಡಿಸುತ್ತಿದ್ದ ಅದರ ಸಂಪಾದಕರು ಡಿ.ವಿ.ಗುಂಡಪ್ಪನವರು ಎಂಬುದೂ ಎಷ್ಟೋ ಕಾಲದ ಮೇಲೆ ತಿಳಿಯಿತು. ‘ಹಳೆಯ ಪಳಕೆಯ ಮುಖಗಳು’-ಶೀರ್ಷಿಕೆಯ ಅನುವಾದವೂ ಎಷ್ಟು ಸರಳ ಸುಂದರ:

ಕಂದ ಬಿದ್ದೆಯ ಎಂದು ಮುದ್ದಿಸಿ ನನಗೆ ಮರುಗುವರಿದ್ದರು
ಅಂದಿನೋದಿನ ಸುಖದ ದಿನದಲಿ ಜತೆಗೆ ಕುಣಿಯುವರಿದ್ದರು
ಎಲ್ಲ, ಎಲ್ಲಾ ಮಾಯವಾದುವು ಹಳೆಯ ಪಳಕೆಯ ಮುಖಗಳು..

ಈ ಅರ್ಥದಲ್ಲಿ ನನ್ನನ್ನು ಕನ್ನಡದ ಕಡೆಗೆ ತಿರುಗುವಂತೆ ಪರೋಕ್ಷವಾಗಿ ಪ್ರೇರಿಸಿದವರು ಬಿ.ಎಂ.ಶ್ರೀಯವರೆಂದು ಹೇಳಬಹುದು, ಮುಂದೆ ಪ್ರತ್ಯಕ್ಷವಾಗಿ ಆ ಕೆಲಸ ಮಾಡಿದವರು ಜೇಮ್ಸ್‌ಎಚ್.ಕಸಿನ್ಸ್‌ಮಹಾಶಯರಾದರೂ!

 


[1] ನಾನು ಓದುತ್ತಿದ್ದ ಭಗವದ್ಗೀತೆ ಅನಿಬೆಸಂಟ್ ಅವರ ಭಾಷಾಂತರ. ಪಾಕೆಟ್ ಗಾತ್ರದ ಪುಸ್ತಕ ನಾಲ್ಕೇ ಆಣೆಗೆ ದೊರೆಯುತ್ತಿತ್ತು. ಮೂಲವನ್ನು ದೇವನಾಗರಿ ಲಿಪಿಯಲ್ಲಿ ಕೊಟ್ಟು ಅದಕ್ಕೆ ಇಂಗ್ಲಿಷ್ ಭಾಷಾಂತರ ಕೊಟ್ಟದ್ದರು.

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ!

ಮತ್‌ಸ್ಟಾನಿ ಸರ್ವಭೂತಾನಿ ನ ಚಾಹಂ ತೇಷ್ಟವಸ್ಥಿತ:!!

By Me all this world is pervaded in My unmanifested aspect: all beings have root in Me. I am not rooted in them.

ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ಯಶ್ವರಮ್‌

ಭೂತಭನ್ ನ ಚ ಭೂತಸ್ಪೋ ಮಮಾತ್ಮಾ ಭೂತಭಾವನಃ!!

Nor have beings root in Me: behold My
Sovereigh Yoga! The support of beings.
Yet not rooted in beings. MYSELF their
Efficient cause.