ನಾನು ಕನ್ನಡದಲ್ಲಿ ಕವನ ರಚನೆ ಮಾಡಲು ಪ್ರಾರಂಭಿಸಿದಾಗ ನನ್ನ ಇಂಗ್ಲಿಷ್ ಕವನರಚನಾಶಕ್ತಿ ತನ್ನ ಬಾಲ್ಯವನ್ನು ದಾಟಿ ತಾರುಣ್ಯಕ್ಕೆ ಕಾಲಿಟ್ಟಿತ್ತು. ಈಗ ರಾಷ್ಟ್ರದಲ್ಲೆಲ್ಲ ಪ್ರಚಲಿತವಾಗಿದ್ದ ದೇಶಭಕ್ತಿಯ ಪರಿಣಾಮವಾಗಿ ಮೂಡಿದ್ದ ಸ್ವದೇಶೀ ಚಳವಳಿಯ ಅಂಗವಾಗಿ ಸ್ವಭಾಷಾ ಪ್ರೇಮವೂ ತರುಣರ ಹೃದಯಗಳನ್ನು ಆಕ್ರಮಿಸಿತ್ತು. ಅದರ ದುರ್ದಮ್ಯ ಸುಳಿಗೆ ಸಿಕ್ಕಿ ನಾನು ಮಾತೃಭಾಷೆಯ ಕಡೆಗೆ ತಿರುಗಿದೆ. ಆದರೆ ನನಗೆ ಇಂಗ್ಲಿಷಿನಲ್ಲಿದ್ದ ಗೌರವ, ಮೋಹ, ಭಕ್ತಿಗಳು ತಿರೋಹಿತವಾಗಲು ಒಪ್ಪಲಿಲ್ಲ. ಆದ್ದರಿಂದ ನಾನು ಎರಡೂ ಭಾಷೆಗಳಲ್ಲಿ ಕವನರಚನೆ ಮಾಡುತ್ತಾ ಹೋದೆ. ೧೯-೨೪-೧೯೨೫-೧೯೨೬ ಅಂದರೆ ಎಂಟ್ರೆನ್ಸ್, ಮೊದಲನೆ ವರ್ಷದ ಬಿ.ಎ., ಎರಡನೆಯ ವರ್ಷದ ಬಿ.ಎ.ತರಗತಿಗಳಲ್ಲಿ ಓದುತ್ತಿದ್ದಾಗ ರಚಿಸಿದ ಅನೇಕ ಇಂಗ್ಲಿಷ್ ಮತ್ತು ಕನ್ನಡ ಕವನಗಳು ನೂರಾರು ಎಂದರೂ ತಪ್ಪಾಗದು-ಹಸ್ತಪ್ರತಿಗಳಲ್ಲಿ ಇವೆ. ಇಂಗ್ಲಿಷ್ ಕವನಗಳಲ್ಲಿ ಲೋಕವಸ್ತು ಪ್ರಾಧಾನ್ಯ ಕಾಣುತ್ತದೆ; ಕನ್ನಡ ಕವನಗಳಲ್ಲಿ ವಿಶೇಷವಾಗಿ ಭಕ್ತಿಯ, ಆಧ್ಯಾತ್ಮಿಕದ ಮತ್ತು ಭಗವತ್ ಪರವಾದ ಭಾವಗಳೆ ತೋರುತ್ತಿವೆ. ಸಾಹಿತ್ಯ ದೃಷ್ಟಿಯಿಂದ ನೋಡಿದರೆ ಇಂಗ್ಲಿಷ್ ಕವನಗಳು ಸಬಲವಾಗಿ ನಿಲ್ಲುತ್ತವೆ; ಕನ್ನಡದವು ಭಾವಭಾರಕ್ಕೆ ಭಾಷೆಯ ಕಾಲು ತರಹರಿಸಲಾರದೆ ಕುಂಟುವಂತೆ, ತತ್ತರಿಸುವಂತೆ, ತಪ್ಪು ಹೆಜ್ಜೆಯಿಡುವ ದುರ್ಬಲತೆಯಿಂದ ಓಲಾಡುವಂತೆ ಭಾಸವಾಗುತ್ತದೆ. ಅವುಗಳಲ್ಲಿ ಎಲ್ಲವೂ ವಿಸ್ಕೃತಿಯ ವೈತರಣಿಯಲ್ಲಿ ಮುಳುಗಿ ಹೋಗಲು ಅರ್ಹವಾಗುವಷ್ಟು ಕೀಳಾಗಿಲ್ಲ; ಕೆಲವನ್ನಾದರೂ, ಕೆಲವು ಭಾಗಗಳನ್ನಾದರೂ, ‘‘ನೆನಪಿನ ದೋಣಿ’’ಗೆ ಕೈ ಹಿಡಿದೆತ್ತಿ ಎಳೆದು ಹತ್ತಿಸಿಕೊಂಡು ರಕ್ಷಿಸುವ ಉದ್ದೇಶವಿದೆ. ಹಿಂದೆ ಹೇಳಿದುದನ್ನೆ ಮತ್ತೊಮ್ಮೆ ಹೇಳಿ ನೆನಪು ಕೊಡುವುದಾದರೆ: ‘‘ಕವಿಯ ಜೀವನಚರಿತ್ರೆ ಎಂದರೆ ಅವನ ಕವನಗಳೆ; ಉಳಿದುದೆಲ್ಲವೂ ಬರಿಯ ಅಡಿ ಟಿಪ್ಪಣಿ!’’

ಸುಮಾರು ಹೆಚ್ಚು ಕಡಿಮೆ ಏಕ ಕಲಾವಧಿಯಲ್ಲಿ ಬರೆದಿರುವ ಇಂಗ್ಲಿಷ್ ಕವನಗಳ ಪಕ್ಕದಲ್ಲಿಯೆ ಕನ್ನಡ ಕವನಗಳನ್ನೂ ಕೊಡುತ್ತಾ ಹೋಗುತ್ತೇನೆ. ಅವುಗಳ ಗುಣಾವಗುಣ ಮತ್ತು ಬಲಾಬಲಗಳನ್ನು ಗುರುತಿಸಿ, ಕವಿಯ ಮಾತೃಭಾಷೆ ಅಭಿವ್ಯಕ್ತಿಯ ಸುಷ್ಠುತೆಗಾಗಿ ಒದ್ದಾಡುತ್ತಿರುವುದನ್ನು ಅರಿಯಬಹುದು. ನವೀನ ಭಾವಗಳನ್ನು ಪ್ರಕಟಿಸುವ ಪ್ರಯತ್ನದಲ್ಲಿ ನವೋದಯದ ಆರಂಭದ ಕನ್ನಡ ಭಾಷೆ ಅಡಿಗಲ್ಲಿನ ಮೇಲೆ ಬಡಿಗೊಳ್ಳುತ್ತಿರುವ ಸಕರುಣ ದೃಶ್ಯವನ್ನು ಎದುರುಗೊಳ್ಳುತ್ತೇವೆ.

DAY AND NIGHT

When all the world is olud,
When Nature is awake,
And every sun-lit cloud
Wings o’er the dawn-lit take:
When the sweet flowers of morn
Bedeck’d with dewdrops sheen
Wave soft their hands of thorn
Upon the villege green;
When myriad warblers chant
From every bush and tree!
And every sportive plant
Recieves the tinkling glee;
When life smiles o’er the land
And joy breathes thro’ the air,
When every-thing is grand
And beautiful and fair,
Then poet arise! And wander
O’er hills and bristling mountains!
There, midst them, pause to squander
Inspiration’s richest fountains!

When all the world is still,
When nature is asleep;
And by the gurgling rill
The fire-flies spring and peep;
When lotus locks the door
And bees return to rest,
And when heaven’s crystal floor
With diamonds bright is drest;
When the vale is profound
And the air is serene;
When no one treads the ground
Save those of heaven unseen;
When the world’s mighty singers
With their ever-lasting song
Inspiring him that lingers
March silently along,
Then Poet awake! Let fly
Thy sweetest symphony;
Let it reach the dark sky
Of sweetest agony!
೨೦-೬-೧೯೨೪

ಉದಯಗೀತೆ

ಗಳಗಳ ಹರಿಯುವ ತೊರೆಗಳ ಬೆಳಗುತ
ಬಳಬಳ ಬೀಳುವ ಹೂಗಳ ತೊಳಗುತ
ಚೆಲ್ಲುತ ಕುಂಕುಮದುದಕವ ಬಾನೆಡೆ
ಎಲ್ಲಿಯು ನಗೆಯಂ ಬೀರುತ, ತೋರುತ
ಕವಿಗೊಂದಾನಂದದ ಸವಿ ಕಡಲಂ,
ರವಿಯುದಯಿಸುವನು ನಲಿ ನಲಿ ಹೃದಯವೆ!

ಚಂದಳಿರೊಡಗೂಡಾಟವನಾಡುತ
ಮಂದಸ್ಮಿತದಿಂ ಪಸುರೊಳ್ ನಲಿಯುತ
ಮುತ್ತನು ಹೋಲುವ ಮಂಜು ಹನಿಗಳಂ
ಮುತ್ತಿಟ್ಟಾನಂದದಿ ಸಲೆ ಥಳಿಸುವ
ಛವಿಯಿಂ ಕವಿಯಂ ಮೋಹದಿ ಗೆಲ್ಲುತ
ರವಿಯುದಯಿಸುವನು ನಲಿ ನಲಿ ಹೃದಯವೆ!

ಗಾನದ ಸರಿಯಂ ಸುರಿಯುವ ಖಗಗಳಿ
ಗಾನಂದವ ಕೊಡುವಂದದಿ ಕಿರಣ
ಜ್ವಾಲಾ ಮಾಲಾ ಜ್ಯೋತಿಯ ಬೀರುತ
ಲೀಲಾಜಾಲದಿಯೊಲಿಯುತ ನಲಿಯುತ
ಕವಿಯನ್ನಾವೇಶದಿ ಸೆಲೆ ತುಂಬುತ
ರವಿಯುದಯಿಸುವನು ನಲಿ ನಲಿ ಹೃದಯವೆ!

ನೀರದ ಮಾಲೆಯ ಚುಂಬಿಸಿ, ರಾಗದ
ವಾರಿಧಿಯಂ ಹೊಂಬಣ್ಣದಿ ತುಂಬಿಸಿ
ಧಾರಿಣಿ ಸುರಲೋಕಗಳಂ ಬಂಧಿಸಿ
ತಾರಾ ರಾಜ ಜ್ಯೋತಿಯ ಕುಂದಿಸಿ
ಕವಿಯಂ ಗೆಲ್ಲುವ ಮೋಹವ ಚೆಲ್ಲುತ
ರವಿಯುದಯಿಸುವನು ನಲಿ ನಲಿ ಹೃದಯವೆ!

LINES WRITTEN BESIDE THE KARNJILAKE

The shadows of eve did slowly descend
On the stilly lake and the plain;
The bell at the distant temple did send
Its ding-dongs again and again:
All went home; but the poet in ecstasy
Stood there embracing Infinity!

The cattle went home, the shepherd went home,
The coach rattled back to the town,
And the youth who as usual here did roam
Hurried back to agin their laureate crown;[1] But the poet inspired, beneath the dark sky,
Stood still and tears flowed from his eye!

The sweet breeze blew soft and whispered among
The rustling leaves of the trees;
And silence stilled the cuckoo’s sweet song
And the lotus ensnared the bees.
The poet stood embracing the bosom of night
And he danced on the lap of the Infinite!

The electric lights in the town were lit
And on yonder Chamundi hill;
And the owl on the trees cried tu-woo-twit,
And the stillness deepened still!
The poet danced on the lap of the Infinite
And the Infinite in him shone bright!
೩-೨-೧೯೨೫

ಕಂದ ಪದ್ಯಗಳನ್ನೂ ಬರೆಯುವ ಪ್ರಯತ್ನ ಒಂದೆರಡು ನಡೆದಿದೆ. ‘‘ಬೆಟ್ಟಗಳ ಮೇಲೆ ಸೂರ್ಯೋದಯ’’ ಎಂಬ ಈ ಕವನ ಒಂದು ನಿದರ್ಶನ: ಕವಿ** ಎಂಬ ಪದದ ಅನೇಕಾರ್ಥಗಳನ್ನು ಗಮನಿಸಬಹುದು. ನಗೆಗೂಡಿ! ಛಂದೋ ಭಂಗಗಳನ್ನೂ! ಬೆಟ್ಟಗಳ ಮೇಲೆ ಸೂರ್ಯೋದಯ

ದಿನಮಣಿ ಪೂರ್ವಾಂಬರಮಂ
ಕನದೋದಕದಿ ಬಳಿದು ಧರಿಸಿ ಮೇಘಸರಮಂ
ಬನಗಳ ತಳಿರಂ ಚುಂಬಿಸು
ತಿನಿಯ ಪ್ರೇಮದಿ ರಂಜಿಸಿ ಧರೆಯಂ ಮೆರೆವಂ!

ಕವಿಯಂ ಮೋಹಿಸಿ, ಗಗನದ
ಕವಿಯಂ ಕುಂದಿಸಿ ರಜತೋದಕದೊಳ್ ನಲಿಯುವ
**ಕವಿಯಂ ಸೊಬಗಿಂ ತುಂಬಿಸಿ
ಕವಿಯುವ ಮಂಜನ್ನಟ್ಟುತ ದಿನಮಣಿ ಮೆರೆವಂ!

ಮಣಿಯಂತೆಸೆಯುವ ಕಿರು ಹಿಮ
ಕಣ ಸಂಕುಲದಿಂ ಮರೆಯುತಿದೆ ಪಸಲೆ ಸೊಬಗಿಂ
ದಣಿವಿಲ್ಲದ ಸೌಂದರ್ಯಂ
ಕುಣಿಪುದು ಕವಿಯಂ ಸೊಬಗಿಂದುದಯಿಸೆ ಸೂರ್ಯಂ!

ಕಿರು ನೀರದಗಳ್ ಗಗನದಿ
ಪರಡುತ್ತುರೆ ಪೊಳೆಯುತ್ತಿವೆ ಕುಂಕುಮ ಸೊಬಗಿಂ;
ಕಿರಣವ್ರಾತಂ ಬೆಳಗಿದೆ
ಧರೆಯಂ ಸುರಲೋಕಗಳಂ ಕಾಂಚನ ರುಚಿಯಿಂ!

ಶೀತಂ, ಕೋಕಿಲದಿಂಪಿನ
ಗೀತಂ, ತಿಳಿರೊಳ್ ಮೆರೆಯುವ ಸೊಗಯಿಪ ಧುಮ್ರಂ,
ಪೀತಂ, ಸೊಬಗಿನ ಭಗವ
ದ್ಗೀತಂ ಸಂತಸ ಜಲದೊಳ್ ತುಂಬಿವೆ ಮನಮಂ!

ಧರಣೀ, ನೀನೀ ಸೊಬಗಿಂ
ಮೆರೆಯೌ! ಮೆರೆಯೌ! ನಿನ್ನಿಂ ಪಡೆವೆಂ, ತಾಯೇ,
ಹರುಷವ, ಕವಿತಾನಂದವ,
ಪರಮ ಸುಗತಿಯಂ, ಧರಣೀ! ಧರಣೀ! ಧರಣೀ!

 

೮-೨-೧೯೨೫ರಲ್ಲಿ ಬರೆದ ‘The Orphan’s Dream’ ಎಂಬ ಕವನ ಮೈಸೂರಿನ ಸಂತೆಪೇಟೆಯ ಬೀದಿಯಲ್ಲಿ ಬೇಡುತ್ತಾ ಹಾಗೆಯೆ ಮಲಗಿ ನಿದ್ರಿಸುತ್ತಿದ್ದ ಅನಾಥ ಭಿಕ್ಷುಕ ಬಾಲಕನೊಬ್ಬನಿಂದ ಪ್ರೇರಿತವಾದದ್ದು.

THE ORPHAN’S DREAM

Reclining on his bony arm
Sits the orphan boy half dead;
Pale is his face and every charm
From his very souls is fled.
His eyes gleam but not a spark of gladness
From them flits, save those acute sadness!

Coaches and cars before him dash
And men with wealthy attire,
Delicious dishes before him pass
But oh! They come to retire!
Tears fall from his eyes and kiss the ground
And a look of despair he casts around!

The stormy traffic never lags
And the red dust rises high;
It settles on the orphan’s rags
And upon his streaming eye
And he wipes his tears with his skinny hand
And he eyes the heartless men of the land!

But soon sad hunger’s storm doth rage
And the traffic of his soul;
Oblivious sleep descends to assuage
The wild storm of his sad soul:
And oh! Soon he lays him down and sees
In his dream the Paradise of Peace!

A moon-like sun peaceful and calm
Sheds his rays upon the green;
A sweet breeze full of heavenly balm
Blew upon the blissful scene.
He roamed amidst the garden of flowers
And upon him fell the heavenly showers!

His father and his mother came,
Sweet pair of the Paradise!
Caressed and called him by his name
And Kissed and wiped his eyes.
Kind words were spoken and fruits were given
And he shared the bliss of many a heaven!

He sate upon his mother’s lap
And hug’d her breast like a child;
Blissful did he lisp and clasp
Upon a bed of flowers wild.
As the prince of Paradise and Powers
Did he road amidst lofty domes and towers.

Kamala, his sister youn and fair,
And Krishna, his brother dear,
Singing and playing both came there
And kissed with many a tear
Of bliss; and called him to come and play
With them to spend a Paradise-day!

Roses and lotus flowers and blossoms
Of young jasmine sweet and fragrant,
And vakula blossoms in whose bosoms
Lurks the honey, fearing the vagrant
Bees of Paradise,– all these jostled there
And lulled the orphan’s tumultuous care!

The cuckoos shouted sweetly there
And mynas songs were divine;
There bulbuls chanted sweet and fair;
There parrots spoke very fine.
And oh there with birds of Paradise
Had golden feathers and jewel eyes!

Woe to the policeman that shook
The orphan out of his dreams!
He wakes and casts a hungry look
And with fear and pain he screams.
Unable to bear hunger’s acute pain
He hugs the eternal dream-land again!

‘The Song of the Earth-flower’ ಎಂಬ ಇಂಗ್ಲಿಷ್ ಕವನವೂ ಮತ್ತು ಅದರ ಅನುವಾದದಂತಿರುವ ‘‘ಪುಷ್ಪಗೀತೆ’’ ಎಂಬ ಕನ್ನಡ ಕವನವೂ ಸುಮಾರು ಈ ಸಮಯದಲ್ಲಿಯೆ ಬರೆದವಾಗಿ ಒಂದೇ ವಸ್ತು ಎರಡು ಭಾಷೆಗಳಲ್ಲಿ ಪ್ರಕಟವಾಗಿರುವುದರಿಂದ ಹೋಲಿಸಬಹುದಾಗಿವೆ:

THE SONG OF THE EARTH FLOWER

Move gently, maiden sweet,
Lest you should trample my bosom;
Tho’ flowery be your feet
Flowerier still’s the blossom!

Tho’ your sweet lotus-eyes
The wandering bees allure,
Tho’ the wealt of paradise
Be yours, O maiden pure!

I am sweeter than you, maid,
For I descend from heaven
To deck the spring-time glade
For the giver and the given!

I am heaven’s pure spirit,
My wings are beauty-ridden
And Oh I do inherit
The heavenly graces flower-hidden!

I’m more alive than you,
Love-intoxicated maiden;
And my wings of rain bow hue
Frisk here and there bliss-laden!

I have seen your lover’s kisses
Playing upon your cheeks;
I have heard your secret wishes
For days together and weeks!

Sweet maid, I can even listen
To the inaudible lays
Of you dew drops that glisten
In the dawn’s rosy rays!

Move, maiden, softly by,
Lest I should betray your heart;
I am a heaven’s sweet spy
Hidden in earth’s sweet art!

I am a nymph of the skies,
With lovely flower-hem’d wings;
A beauty of Paradise
And guest of lovely springs!

ಪುಷ್ಪಗೀತೆ

ಮೆಲುನಡೆಯಲಿ ನಡೆ, ರಮಣಿಯೆ,
ತುಳಿಯದೆನ್ನ ಹೃದಯವ,
ಚೆಲುವಾದರು ನಿನ್ನಡಿಗಳು
ಅಲರ ಚೆಲುವು ಮೀರವು.

ಕಮಲನಯನೆ, ಕಂಗಳೆರಡು
ಭ್ರಮರಗಳನು ಕರೆದರೂ,
ಕಮಲನಾಭ ಲೋಕವೆಲ್ಲ
ಕಮಲಮುಖಿಯರಾದರೂ,

ಅಮರಲೋಕದವಳು ನಾನು;
ರಮಣಿ, ನಿನ್ನ ಮಿರಿಹೆ.
ವಿಮಲ ಮಧುವ ಸಿಂಗರಿಸಲು
ಅಮರರಿಗಾಗಿಳಿದಿಹೆ.

ಅಮರಲೋಕವೆನ್ನ ಹೃದಯ
ಕಮಲದಲ್ಲಿದೆ;
ಕಮಲನಾಭನೆನ್ನ ಪತಿಯು,
ಅಮಲ ರಮಣಿಯೆ!

ಸುರರ ಲೋಕದವಳು ನಾನು,
ನಳಿನವದನೆಯೆ;
ವರ ವಸಂತನಥಿಯಾಗಿ
ಧರೆಗೆ ಬಂದಿಹೆ!

೬-೧೦-೧೯೨೪ರಲ್ಲಿ ರಚಿತವಾದ ‘Recollections’ ಎಂಬ ಕವನ ಬದುಕಿನ ಬೇಸರವನ್ನು ಕಳೆಯಲು ಬಾಲ್ಯದ ನೆನಹುಗಳನ್ನು ಆಹ್ವಾನಿಸುತ್ತದೆ.

RECOLLECTIONS

Come, lovely scenes of childhood, come
And cheer these weary hours;
Come like the morning dew and bloom
Life’s withered wasted flowers.
When life’s sweet sports are fled
And all its flowers are dead,
When smiles are rare and years
Increase the flow of tears,
When colours that once shone
On life’s sweet sky are gone,
When beauty, mirth and love
No more soar hight above
The trifles of the day
But move towards decay

Then come, sweet scenes of childhood, come
And cheer the weary hours;
Come like the morning dew and bloom
Life’s withered wasted flowers!
Sweet scenes of childhood come and crown
The sunny hours of life:
Like the sweet showers of heaven come down
And cool life’s fiery strife.
When on life’s mighty river
The barge of life doth quiver,
And when the mightly gale
Tears down the fluttering sail
While the darkening sky
Looks grim and grave and high,
And the barge doth neither sink
Nor gain the hopeful brink
But leaps from waves to wave
To escape the watery grave,
Then come, sweet scenes of childhood, come
And cheer the weary hours;
Come like the morning dew-and bloom
Life’s withered wasted flowers!
೬-೧೦-೧೯೨೪

‘‘ಹಾಡು ಹಾಡು ಗೆಳೆಯನೆ’’ ಎಂದು ಮೊದಲಾಗುವ ಕವನವು ಬದುಕಿನ ಕ್ಲೇಶ ಕಷ್ಟಗಳಲ್ಲಿ ಜೀವ ದಿಕ್ಕುಗೆಡುವಂತಾಗಲು ಕವಿಯ ಗಾನವೆ ಕೆಚ್ಚನಿತ್ತು ರಕ್ಷಿಸುವ ಶಕ್ತಿ ಎಂಬ ಭಾವವನ್ನೊಳಗೊಂಡಿದೆ.

ಹಾಡು ಹಾಡು ಗೆಳೆಯನೆ
ಕಾಡುದಾರಿ ಸಾಗಲಿ          ||ಪಲ್ಲವಿ||

ಮೋಡ ಮೇಲೆ ಕವಿಯಿತು
ನಾಡನಿರುಳು ಮುಸುಕಿತು
ಊರು ದೂರವಾಗಿದೆ….    ಹಾಡು…

ತರುಗಳಡಿ ಮಿಣುಕುತಿವೆ
ಕೋಟಿ ಮಿಂಚುಹುಳುಗಳು
ತಾರೆಗಳನು ಮೀರುತ….   ಹಾಡು

ಕೂಗುತಿವೆ ಜಿರಲೆಗಳು
ಬೇಸರಾಗುವಂದದಿ
ಧೈರ್ಯ ಭಯದೊಳಡಗಿದೆ…         ಹಾಡು…

ಒಂದು ದನಿಯು ಕೇಳದು
ಒಂದು ರೂಪ ಕಾಣದು
ಮೌನಮಾರ್ಭಟಿಸುತಿದೆ….            ಹಾಡು….

ಮೌನಗಡಲ ಘೋಷವು
ಭೋರಿಡುತಿಹುದಾಲಿಸು!
ಗಾನವದನು ಮೀರಲಿ…     ಹಾಡು…

ಭೋರೆನ್ನುತ್ತ ಮಾರುತ
ಘೋರ ಶೇಷನಂದದಿ
ತೋರುತಿಹುದು ಭೀತಿಯ…           ಹಾಡು…

ಗೆಳೆಯ ಮೈ ನಡುಗುತಿದೆ
ಬಲವೆ ಕುಂದುತಿರುವುದು
ಮನವು ಬರಿದೆ ಬೆದರಿತು…            ಹಾಡು…

ಚಂಡಗಾಳಿ ಬೀಸಲಿ
ರುಂಡ ಬಿಡಲಿ ಮುಂಡವ:
ಗಂಡುಗಲಿಯೆ ಹಾಡೆಲೊ!…           ಹಾಡು

ಭೂಮಿಯೆಲ್ಲ ನಡುಗಲಿ
ತಾರೆಯುರುಳಿ ಬೀಳಲಿ
ಬರಲಿ ಪ್ರಳಯವೀಗಲೆ…    ಹಾಡು…

ಧರೆ ತಲೆಕೆಳಗಾಗಲಿ
ನಭ ಉರುಳುತ ಬೀಳಲಿ
ವಿಶ್ವವೆ ಬರಿದಾಗಲಿ…        ಹಾಡು…

ಹಾಡೆ ನಮ್ಮ ಜೀವವು
ಹಾಡೆ ನಮ್ಮ ಸತ್ವವು
ನಾವೆ ಹಾಡಿನಾತ್ಮವು!…   ಹಾಡು…

 


[1] ಪರೀಕ್ಷೆ ಬಳಿಸಾರುತ್ತಿರುವ ಫೆಬ್ರುವರಿ ಆದ್ದರಿಂದ