THE CHAMPAK TREE

It was here we culled the champak flowers
In the morning of our life;
It was here we played with the sweet hours
And sang sweet songs on the fife.

It was here we mocked cuckoo’s cry
While laughter pelted the breath;
Here it was beneath the same blue sky
We played the play of death!

It was here we built sweet homes of heaven
From the sad soil of this earth;
Oh! here from the flowers to mortals given
We sucked the honey of mirth.

It was here the beloved faces met,
The faces that are no more;
Ah! Here the mimic dinner was set
In the sweetest days of yore.

Under the shade of this champak tree,
Under the same blue sky,
The faces that are dead come to me;
Those tears still flow from their eye!

Oh the flowers are dead and mirth is fled
And our sweet fife is broken;
The faces that are loved, all, all are dead;
But now live the words then spoken.

Under the shade of this Champak tree
Where we spent the childish years
The faces that are gone come to me
Still bearing those childish tears!
೧೫-೧೦-೧೯೨೪

ಸುಮಾರು ಈ ಸಮಯದಲ್ಲಿ ಬರೆದ ಕೆಲವು ಕನ್ನಡ ಗೀತೆಗಳು ಭಗವಂತನ ಆಗಮನಕ್ಕಾಗಿ ಹಂಬಲಿಸುವ ಭಕ್ತಜೀವದ ಕಾತರತೆಯನ್ನು ಸೂಚಿಸುತ್ತವೆ. ಅವುಗಳಲ್ಲಿ ಮೂರನ್ನು ಇಲ್ಲಿ ಕೊಡಬಯಸುತ್ತೇನೆ: ಹಸ್ತಪ್ರತಿಯಲ್ಲಿ ಅವುಗಳಿಗೆ ಹೆಸರು ಕೊಟ್ಟಿಲ್ಲವಾದರೂ ಗೀತೆಗಳಲ್ಲಿಯೆ ಇರುವ ಪದಗಳನ್ನು ಆಶ್ರಯಿಸಿ ಹೀಗೆ ಹೆಸರು ಕೊಡಬಹುದು: (೧) ಏಕಿನ್ನು ಬರಲಿಲ್ಲ? (೨) ಆವ ದಾರಿಯೊಳು ನೀ ಬರುವೆ? (೩) ಯಾರೊ ಕರೆದರು!

ಏಕಿನ್ನು ಬರಲಿಲ್ಲ?

ಪರಿಶುದ್ಧವಾದ ತಿಳಿನೀರಿನೊಳು ಮಿಂದು
ಕೆರೆಯ ತಡಿಯೊಳು ಕುಳಿತೆ ನೀ ಬರುವೆ ಎಂದು;
ಮರೆಯಾಗುತಿಹನುರಿವ ಖದ್ಯೋತನಿಂದು:
ಬರಲಿಲ್ಲವೇಕಿನ್ನು, ಹೇ ದೀನಬಂಧು?

ಜಲಪಕ್ಷಿಗಳು ತಮ್ಮ ಗೂಡುಗಳಿಗಾಗಿ
ಮೇಲುದನಿಯ ಗಾನದಿಂ ಮರಿಗಳನು ಕೂಗಿ
ನಲಿದು ಹಾರುತಿಹವೈ ತಿಳಿಜಲವ ನೀಗಿ:
ಒಲಿದು ಮಾಡುವುದೇನು ನಾನಲ್ಲಿ ಹೋಗಿ?

ತಳಿರೊಳಗೆ ನಲಿನಲಿವ ಮಾರುತನು ಇಲ್ಲ,
ಒಲುಮೆಯಿಂ ಬಹ ಕೋಕಿಲೆಯ ದನಿಯುಮಿಲ್ಲ;
ತಳಿತಳಿಪ ಸಂಜೆಗೆಂಪಿನ ಗಗನವೆಲ್ಲ
ಕಳೆಗುಂದುತಿಹುದು: ನೀನಿನ್ನು ಬರಲಿಲ್ಲ!

ಮೆಲುನಡೆಯೊಳಿಳಿದಿಳಿದು ಬರುತಿಹುದು ರಾತ್ರಿ,
ತಲೆದೂಗಿ ಕರೆಯುತಿಹುದಿರುಳನೀ ಧಾತ್ರಿ;
ಕುಳಿತು ನಾ ಕಾದೆನೈ, ಬರಲಿಲ್ಲ ನೀನು,
ಬಳಲಿ ಹೊಕ್ಕನು ಪಶ್ಚಿಮಾಂಬುಧಿಯ ಭಾನು!
ಪರಿಶುದ್ಧವಾದ ತಿಳಿನೀರಿನೊಳು ಮಿಂದು….
……………………………………
ಬರಲಿಲ್ಲವೇಕಿನ್ನು, ಹೇ ಧೀನ ಬಂಧು?

ಆವ ದಾರಿಯೊಳು ನೀ ಬರುವೆ?

ಆವ ದಾರಿಯೊಳು ನೀ ಬರುವ, ಹರಿಯೆ?
ಆವ ರೂಪವ ತಳೆದು ಬಹೆಯೊ ಅರಿಯೆ!

ಸಂಜೆಯೊಳು ರಂಜಿಸುವ ಕಂಜಸಖನು
ಪಿಂಜರಿತ ರಾಗದಿಂ ತೊಳಗುತಿರಲು
ಗಗನದೊಳು ಮರೆಯುತಿಹ ಧೂಮ್ರ ಪಥದಿ
ಮುಗಿಲ ರೂಪವ ಹೊಂದಿ ನಲಿದು ನಗುತ
ಒಲುಮೆಯಿಂ ಧಾರಿಣಿಯನಾದರಿಸಲು
ಕೊಳಲನೂದುತ ಬಹೆಯ, ಹೇ ಪರೇಶ?

ದನವ ಕಾಯುವ ಹುಡುಗ ಬಹಳ ದಣಿದು
ವನದ ನೆಳಲನು ಸೇರಿ ಕೊಳಲನೂದೆ
ದನಕರುಗಳೆಲ್ಲ ಕಿವಿಗೊಟ್ಟು ಕೇಳಿ
ಮನದ ತಾಪವ ಬಿಸುಟು ಹುರುಷದಿಂದ
ಮೆಲುಕು ಹಾಕುತಲಿರಲು ಬನದ ಪಥದಿ
ಅಲರ ಮಾಲೆಯ ಧರಿಸಿ ಬಹೆಯೊ, ಹರಿಯೆ?

ತಾಯನಣುಗನು ಕರೆಯೆ ಹೊಲದ ನಡುವೆ
ತಾಯಿ ಆಲಿಸದೆ ಬರದಿಹುದು ಕಂಡು
ಹುಡುಗನಳುತಿರೆ ‘ಅಮ್ಮ ಅಮ್ಮಾ’ ಎಂದು
ಬಡ ಹುಡುಗನಾಗಿ ನೀನಲ್ಲಿ ಬಂದು
“ಗೆಳೆಯ ಬಾ ಆಡೋಣ” ಎಂದು ಉಲಿವ
ಕೊಳಲನೂದುತ ಬರುವೆಯಾ, ಪರೇಶ?

ಯಾರೊ ಕರೆದರು!

ಯಾರೊ ಕರೆದರು! ದನಿಯ ಕೇಳಿ ಬಂದೆ:
ಯಾರು ಕರೆದರೊ ನಾನರಿಯೆ ಅರಿಯೆ!

ನಡುರಾತ್ರಿಯೊಳು ಬಂದು ಕರೆದರಾರೊ:
ಸಡಿಲದುಡುಗೆಯನು ಸರಿಮಾಡಿಕೊಳ್ಳದೆಯೆ
ಸಡಗರದಿ ರಮಣ ತಾನೈತಂದನೆಂದು
ಒಡವೆಗಳ ತೆಗೆದಿಟ್ಟು, ಲಜ್ಜೆಯಿಂದ
ಅಡಿಯ ಮೇಲಡಿಯಿಡುತ ಸುತ್ತ ನೋಡಿ
ನಡುನಡುಗಿ ನಾ ಬಂದು ಬಾಗಿಲನು ತೆರೆದೆ!

ಒಂದು ವ್ಯಕ್ತಿಯ ಸುಳಿವು ಕಾಣಲಿಲ್ಲ,
ಒಂದು ಕಂಠದ ದನಿಯು ಕೇಳಲಿಲ್ಲ,
ಒಂದು ಕಣ್ಣಿನ ಹೊಳಪು ಹೊಳೆಯಲಿಲ್ಲ,
ಒಂದು ಹೆಜ್ಜೆಯ ರವವು ಕೇಳಲಿಲ್ಲ
ಎಂದು ಕವಿಯದ ಮಸುಗು ಮುಸುಗುತ್ತಿತ್ತು;
ಎಂದು ಬೀಳದ ಮಂಜು ಬೀಳುತಿತ್ತು!

ಕಂಗಾಣದಾ ನಿಶೆಯ ನಡುವೆ ನಲಿನಲಿದು
ತಂಗಾಳಿ ತರುಗಳಿಂ ಬೀಸುತಿತ್ತು.
ಬಂಗಾರದೊಡವೆಗಳ ಕಾಂತಿಯೊಂದು
ಶೃಂಗಾರ ರಸವೆಂಬ ತೆರದಿ ಬಂದು
ಬೆಂಗಾಡಿನಂಥೆನ್ನ ಹೃದಯದೊಳಗೆ
ಅಂಗಾಂಗ ಸೊಬಗನ್ನು ತೋರುತ್ತಿತ್ತು.

ನಿಶೆಯ ಭೀಕರವಾಗಿ ನಗುತಲಿತ್ತು;
ಮಸಿಮಯದ ಗಗನದಲಿ ಕಡಿಗಳಂತೆ
ಮಿಸುಗುತಿದ್ದುವು ತಾರೆ ಮೌನದಿಂದ;
ನಿರಾಶೆಯ ನೀರವವಾಗಿ ವಿಶ್ವದಂತ
ಪೊಸ ಜೌವನದಿ ತುಂಬಿ ತುಳುಕುತಿತ್ತು.
ನಿಶೆ ನಭಕೆ ಕೈಬೀಸಿ ಕರೆಯುತಿತ್ತು!

ಹಾ! ರಮಣ, ನಿನಗಾಗಿ ಕಾದೆ! ಕಾದೆ!
ಬಾರದಿಹುದನು ಕಂಡು ಚಿಂತೆಯಿಂದ
ದಾರಿನೋಡುತ್ತ ನಾನಿಲ್ಲಿ ನಿಂತೆ! ನಿಂತೆ!
ಹಾರ ಕೈಯೊಳೆ ಬಾಡಿ ಹೂಗಳೆಲ್ಲ
ಬಾರಿ ಬಾರಿಗೂ ಧೂಳಿಗುದುರಿತಿಹವೋ!
ದೂರದಿಂ ಬಂದೆನ್ನನಪ್ಪಿಕೊಳ್ಳಯ್‌! ಕೊಳ್ಳಯ್‌!

೨೩-೨-೧೯೨೫ರಲ್ಲಿ ರಚಿತವಾದ ಎರಡು ಇಂಗ್ಲಿಷ್ ಕವನಗಳು ಪರಸ್ಪರ ವಿರುದ್ಧ ಭಾವಗಳಿಂದ ಪ್ರೇರಿತವಾದಂತೆ ತೋರುತ್ತದೆ. ಒಂದು ಎಷ್ಟು ಭೀಕರವೋ ಮತ್ತೊಂದು ಅಷ್ಟೇ ಶಂಕರ! ಒಂದು ಹೆಸರು: ‘Vigil over the Dead’ (ಹೆಣದೆಡೆ ಜಾಗರಣೆ!) ಮತ್ತೊಂದರ ಹೆಸರು: ‘The Little Lovely Dream’ (ಪುಟ್ಟ ಮುದ್ದಿನ ಕನಸು.)

VIGIL OVER THE DEAD

Hushed is the night, still is the breath,
The lamentation’s done;
He’s gone for ever’ the cause of death
Is inevitably won!

A fire flickers before the door[1] To scare the evil spirits
Lest they should enter and allure
The dead out of his merits!

The corpse is wrapped with blankets black
Besides the cold threshold;
A pale brown screen of unsewn sack
Flutters in the wintry cold.[2]

The matron old, almost a hag,
Crouches vigilantly by;
She yawns and draws her ancient rag
And wipes her slothful eye.

The living, the dead, the stilly night,
The flickering fire and the screen.
The yawning hag and the very sight
All seem like a painted scene!
೨೩-೨-೧೯೨೪

THE LITTLE LOVELY DREAM

When I was but a child
A little lovely dream
From the blue far off skies
Came and entered my eyes:
Ah lovely little dream,
To cheat such a silly child!

You said you owned all toys
Of lovely paradise;
All glories of heaven
To fair angels given
Where are those promised joys,
Fond Dream, you stole from my eyes?

You said you would take me
To flowery mountains high,
Bring me songs of the trees
And flowers of the breeze;
You said you make me free,
Fond slave of my blue EYE!

You said you would take me
Upon a cloud and show
All the glories of heaven
To little children given;
You said you would crown me
Where heavenly streamlets flow!

You said you would twine around
My fair and annoying hair
A bakul wreath of heaven
To mortals never given.
To cheat me, scounderel dream,
Such a spirit lovely and fair!

Where are those promises now,
Fond little dream, where are they?
Like a flirt now and then
You flit before my ken
And vanish into my love
Far and far and far away!

An silly little dream,
You stole away to the skies!
Silently you stole away
Far, far, far away!
And now I wish, fond dream,
You were ever in my eyes!

I love you, little dream,
For all thy childish lies!
Thy sweet paradise
Was with you in my eyes!
Now you are gone, fond dream;
With you all Paradise!
೨೩-೨-೧೯೨೫

ಮೇಲಿನ ಕವನ ‘The Little Lovely Dream’ ಚಿಕ್ಕಂದಿನಂದು ಕಟ್ಟಿಕೊಂಡ ಆದರ್ಶಗಳ ಹೊಂಗನಸುಗಳು ಬರಬರುತ್ತಾ ದೂರವಾಗುವುದಕ್ಕೂ, ಕಡೆಗೆ ಮನಸ್ಸಿನಿಂದಲೆ ತೊಲಗಿ ಹೋಗುವುದಕ್ಕೂ ಪ್ರತಿಮೆಯಾಗಿದ್ದರೆ, ಕೆಳಗೆ ಕೊಡುವ ಈ ಕವನ ‘The Pilgrimage’ (ಯಾತ್ರೆ) ದೇವತ್ವದಲ್ಲಿದ್ದ ಜೀವ ಲೋಕಸಂಸಾರಕ್ಕಿಳಿದು ಮತ್ತೆ ತನ್ನ ಮೊದಲಿನ ಸ್ಥಾನವನ್ನು ನೆನೆದು ಅದನ್ನು ಸೇರಲು ತವಕಿಸುವುದಕ್ಕೆ ಪ್ರತಿಮೆಯಾಗಿದೆ.

THE PILGRIMAGE

A little drop of rain
Flew from its home,
For it had longed in vain
For years to roam
Thro’ countries far away
Where every month was May!

It fluttered in the breeze
And spoke with rain-bows;
It flew o’er lands and seas
Kissing the billows,
And settled on the bosom
Of a young lotus blossom!

The bees came there to suck
The honey hidden;
And maidens come to pluck
The flowers unhidden;
Both sang a melody
Of mellowed harmony!

The tiny rain-drop glistened
Upon the flower,
And as it lay there listened
To many a lover!
The rain-drop, lost in glory,
Smiled at her own self’s story!

It looked up and saw a cloud
Sailing in the sky;
T was once its home beloved,
But now it’s high;
Lovelier than it was then
Seemed the cloud to its ken.

Oh how it longed again
To go to its home!
The little drop of rain
Never wished to roam!
Its cherished pilgrimage
Was but a zest of age!
೨೫-೨-೧೯೨೫

ಮೇಲಿನ ಇಂಗ್ಲಿಷ್ ಕವನದಲ್ಲಿ ಒಂದು ಮಳೆಹನಿಯ ಪ್ರತಿಮೆಯಿರುವಂತೆ ಈ ಕೆಳಗಿನ ‘‘ಕಮಲ’’ ಎಂಬ ಕನ್ನಡ ಕವನದಲ್ಲಿ ಲೋಕದ ಸುಖ ಸೌಂದರ್ಯಗಳ ಆಸ್ವಾದನೆಗೆ ಸಿಲುಕಿದ ಜೀವ ಪರಮಾತ್ಮನನ್ನು ಮರೆತು ವಿನಾಶವಾಗುತ್ತದೆ ಎಂಬ ಭಾವ ಪ್ರತಿಮೆಗೊಂಡಿದೆ. ನಾಲ್ಕು ತಿಂಗಳ ಹಿಂದೆ ೧೭-೧೦-೧೯೨೪ರಲ್ಲಿ ರಚಿತವಾಗಿದೆ. ದ್ವಿತೀಯಾಕ್ಷರ ಪ್ರಾಸದಿಂದ ಬಿಡುಗಡೆ ಹೊಂದಿಲ್ಲ!

ಅರಳಲಾಂ ಮುಂಜಾನೆ
ಮರಮರ ನಿನಾದದಿಂ
ಮರುತ ಬಂದೆನ್ನ ಕಾಲವನು ಕಳೆದು;
ಮರಿದುಂಬಿ ಗಾನವನು
ಹರುಷದಿಂದಲಿ ಕೇಳಿ

ಮರೆತು ನಿನ್ನಂ, ದೇವ, ಪಾಪಿಯಾದೆ.
ಆಮೇಲೆ ರವಿ ಬಂದು
ಭೂಮಿಯೆಲ್ಲವ ಬೆಳಗೆ
ನಾ ಮರೆದೆ ಕೆಳೆಯ ತಾ ಬಂದನೆಂದು;
ಭೂಮಿಯಾನಂದವಂ
ವ್ಯಾಮೋಹದಿಂ ಸವಿದು
ಕಾಮಪಿತನಂ ಮರೆತು ಪಾಪಿಯಾದೆ.

ಮೇಲಲ್ಲಿಗೈತಂದ
ಬಾಲ ಪಡೆಯೊಡನೆ ನಾಂ
ಲೀಲೆಯಿಂದಾಡಿ ಕಾಲವನು ಕಳೆದೆ;
ಕಾಲನನು ಲೆಕ್ಕಿಸದೆ
ಬಾಳಿನಾ ಸಡಗರದಿ
ಕಾಲಾಂತಕನ ಮರೆತು ಪಾಪಿಯಾದೆ.

ಸ್ವಲ್ಪ ಹೊತ್ತಿನ ಮೇಲೆ,
ಕಲ್ಪಾಂತಕನೆ, ನೀನು
ಅಲ್ಪರೂಪವ ಧರಿಸಿ ಬಂದು ನಿಂದೆ;
ಅಲ್ಪನಿವನಾರೆಂದು
ಅಲ್ಪ ಬುದ್ಧಿಯ ಮಾಡಿ
ಕಲ್ಪಾಂತಕನ ಮರೆತು ಪಾಪಿಯಾದೆ.

ತಡಿಯೊಳಿಹೆ ತರುಗಳಲಿ
ಸಡಗರದ ಕೋಕಿಲೆಯು
ನುಡಿವುದನು ಕೇಳಿ ಸಂತಸವ ಪಡೆದು,
ಅಡಿಗಡಿಗೆ ಸಂತಸವ
ಪಡೆದು ನಾಂ ಬ್ರಹ್ಮಾಂಡ
ದೊಡೆಯನಂ ಹಾ! ಮರೆತು ಪಾಪಿಯಾದೆ.

ಅನ್ನೆಗಂ ಬಂದರೈ
ಪೊನ್ನ ಕೊಡಗಳ ಹೊತ್ತು
ಚಿನ್ನೆಯರು ನೀರಾಟವಾಡಲೆಂದು;
ಪೊನ್ನ ಕಾಂತಿಯ ನಗುವ
ಕೆನ್ನೆಗಳ ನಾ ನೋಡಿ
ಚೆನ್ನ ಕೃಷ್ಣನ ಮರೆತು ಪಾಪಿಯಾದೆ.

ರವಿಯಡರೆ ನಡು ನಭವ
ಸವಿಯಾದ ರಾಗದಿಂ
ಕವಿಯೊರ್ವನೈತಂದು ಮಾತಾಡಿದ;
ಕವಿಮಾಯೆಯಲಿ ಸಿಲುಕಿ
ಕವಿಯಂತೆ ಮೈಮರೆತು
ಕವಿಕವಿಯ ನಾ ಮರೆತು ಪಾಪಿಯಾದೆ.

ಮೇಲೆಯಾದುದು ಸಂಜೆ;
ಲೀಲೆಯಿಂ ಸೊಗದ ತಂ
ಗಾಳಿ ಬೀಸಿತತ್ಪಲ ತಾನು ಮೆರೆಯೆ;
ಕಾಲ ಕಳೆದೆನು ನಾನು
ಬಾಲತನದೊಳಗೆಂದು
ಕಾಲ ಪಾಶಕೆ ಸಿಲುಕಿ ಪಾಪಿಯಾದೆ.

ಇನನನ್ನೆಗಂ ಮುಳುಗೆ,
ದಿನ ಹರಿಯೆ, ಕಳ್ತಲೆಯು
ಮನೆಮಾಡಲೀ ಧಾರಿಣಿಯುದರದಲಿ,
ಕನಕ ಕಿಡಿಗಳ್ ಸೂಸೆ
ಮನದಿ ಚಿಂತೆಯ ತಾಳ್ದು
ವನಜ ಮಡಿದುದು ನಿನ್ನನರಿಯದಯ್ಯಾ!
೧೭-೧೦-೧೯೨೪

೨೫-೧೦-೧೯೨೪ರಲ್ಲಿ ಬರೆದ ‘‘ಪೈಶಾಚಪೂಜೆ’’ಯಲ್ಲಿ ಕವಿಮನಸ್ಸಿನಲ್ಲಿ ಜಾಗ್ರತವಾಗುತ್ತಿದ್ದ ಮತಾಚಾರ ಸುಧಾರನಾಕಾಂಕ್ಷೆ ಪ್ರತಿಬಿಂತಿತವಾಗಿದೆ.

ಪೈಶಾಚಪೂಜೆ

ಆತ್ಮನಿರ್ಮಲತ್ವವಿರಲು
ಆತ್ಮಸಿದ್ಧಿಯಾಗದಿಹುದೆ?
ಆತ್ಮ ಕೊಳೆಯ ತೊಳೆದು ನೀನು
ಆತ್ಮಹರಿಯ ಭಜಿಸೊ, ಜೀವ!         ||ಪಲ್ಲವಿ||

ಇಷ್ಟಪೂರ್ತಿಯಾಗಲೆಂದು
ಎಷ್ಟು ಜೀವಜಂತುಗಳನು
ಕಷ್ಟಪಡಿಸಿ ಕೊಂದೊಡೇನು
ಸೃಷ್ಟಿಕರ್ತ ಕುರುಡನೇನೊ?

ಪೊರೆವ ಹರಿಯು ಇರಲು ನೀನು
ಮರದ ಬುಡದ ಭೂತಗಳಿಗೆ
ಧರೆಯ ಜೀವಗಳನು ಕಡಿದು
ಹರಕೆಯನ್ನು ಕೊಡುವುದೇಕೊ?

ನೀಚ ಭೂತ ದೆವ್ವ ರಣ ಪಿ-
ಶಾಚಿಗಳಿಗೆ ಪೂಜೆಗೈದು
ನೀಚನಾಗಿ ಧರೆಯ ರಣಪಿ-
ಶಾಚಿಯಾಗಬೇಡೊ, ಜೀವ!

ಪರಮ ಪುರುಷನಾದ ಹರಿಗೆ
ಹರಕೆಯೇಕೊ, ಮೂರ್ಖರೊಡೆಯ?
‘ಹರಿಯೆ ಕಾಯೊ!’ ಎಂದು ಭಜಿಸೆ
ಪರಮಪುರುಷ ಕಾಯನೇನೊ?

ಭಕ್ತಿಯಲ್ಲಿ ಮುಕ್ತಿಯಿರದೆ
ರಕ್ತದಲ್ಲಿ ಮುಕ್ತಿಯಿಹುದೆ?
ಯುಕ್ತಿಯಿಂದಲಿದನು ತಿಳಿದು
ಮುಕ್ತಿಯನ್ನು ಪಡೆಯೊ, ಜೀವ!

ಹರಿಯು ನರಿಯ ಸೇವಿಪಂತೆ
ನರನೆ, ಭೂತಗಳು ಭಜಿಸಿ
ನರಕ ಕೂಪಕೇಕೆ ಇಳಿವೆ?
ಹರಿಯ ಭಜಿಸೊ! ಹರಿಯ ಭಜಿಸೊ!

ಹರಿಯ ನಾದವನ್ನು ಕೇಳಿ
ಕರಿಯ ಹಿಂಡು ಓಡುವಂತೆ
ಹರಿಯ ನಾಮವನ್ನು ಕೇಳಿ
ಸರಿಯದಿಹವೆ ಭೂತಪಡೆಯು?

ಅಪ್ಪ ನೆಟ್ಟ ಆಲವೆಂದು,
ಬೆಪ್ಪ, ನೇಣು ಹಾಕಿಕೊಂಬೆ?
ಅಪ್ಪ ಗೈದ ಕಾರ್ಯಗಳಲಿ
ತಪ್ಪು ಇರದೆ, ಮೂರ್ಖ ನರನೆ?

ಹಿರಿಯ ಜನರು ದೆವ್ವಗಳಿಗೆ
ಹರಕೆಗಳನು ಕೊಟ್ಟರೆಂದು
ಬರಿದೆ ನೀನು ಪೇಳ್ದೊಡೇನು
ಹರಿಯರೆಲ್ಲ ತಿಳಿದು ಜನರೆ?

ಮಜ್ಜೆ ಮಾಂಸ ಮದ್ಯಗಳನು
ಬಜ್ಜ ಎಂದು ಪೂಜೆಗೈದು
ಸಜ್ಜನತ್ವವನ್ನು ತ್ಯಜಿಸೆ
ಅಜ್ಜ ಮುಕ್ತಿ ಪಡೆವನೇನೊ?

ಆಲರುಗಳನು ಕರದಿ ಪಿಡಿದು
ಮಲದ ಕಂಪನಿಚ್ಛಿಪಂತೆ,
ಇಳೆಯನಾಳ್ವನಿರಲು, ನರನೆ,
ಹೊಲೆಯ ಭೂತಗಣಗಳೇಕೊ?

ದೇವರೆಂದು ದೆವ್ವಗಳನು
ಭಾವಿಸುತ್ತ, ಮೂಢ ನರನೆ,
ಸಾವು ಬಂದ ಮೇಲೆ ನೀನು
ದೇವರನ್ನು ಎಂತು ಪಡೆವೆ?

ಭೂತಗಳನು ಏಕೆ ಭಜಿಸಿ
ಭೂತ ಜನ್ಮವನ್ನು ಪಡೆವೆ?
ನೀತಿಯರಿತು ಅಂತರಾತ್ಮ
ಪ್ರೀತಿಯನ್ನು ಹೊಂದೊ, ನರನೆ!
೨೫-೧೦-೧೯೨೪

೧೯೨೪ನೆಯ ಜೂನ್ ತಿಂಗಳಲ್ಲಿ ಕಾಲೇಜಿಗೆ ಸೇರಿದ ಮೇಲೆ ಕ್ರಿಸ್‌ಮಸ್ ರಜಾಕ್ಕೆ ಊರಿಗೆ ಹೋದಾಗ ಒಂದು ಕಾಡಿನ ನಡುವಣ ತೊರೆಯ ದಡದಲ್ಲಿ ಕುಳಿತಾಗ ಕವಿಗೆ ಆದ ಅನುಭವವನ್ನು ಪ್ರತಿಮಿಸುತ್ತದೆ ‘Beside the Brook’ ಎಂಬ ಇಂಗ್ಲಿಷ್ ಕವನ.

 


[1] ಯಾವುದೋ ಒಂದು ವಾಸ್ತವ ಸಂದರ್ಭವನ್ನು ಸಂದರ್ಶಿಸಿದ ಅನುಭವದಿಂದ ಹೊಮ್ಮಿದಂತಿದೆ ಈ ಮೇಲಿನ ಕವನ. ಆದರೆ ನೆನಪಿಗೆ ಬರುತ್ತಿಲ್ಲ.

[2] ಯಾವುದೋ ಒಂದು ವಾಸ್ತವ ಸಂದರ್ಭವನ್ನು ಸಂದರ್ಶಿಸಿದ ಅನುಭವದಿಂದ ಹೊಮ್ಮಿದಂತಿದೆ ಈ ಮೇಲಿನ ಕವನ. ಆದರೆ ನೆನಪಿಗೆ ಬರುತ್ತಿಲ್ಲ.