THE LIGHT ON chamundi hill

Behold! The lights on the hill
Like a garland of stars
On the Mother infinite
Gleam and Twinkle and thrill.

Like the glimmer of wisdom white
That illumes our dark path
And guides when we are lost
In the labyrinth of Life.
Unaffected by the bustle
And rush of those streets,
Smiling with a peace of their own
They stand high and aloof!
Like the spark divine that in us
Doth linger tho unseen
While we walk the beaten track.
The lights on the hill do stand

ಬಹುಶಃ ಮೇಲೆ ಹೇಳಿರುವ ಸಂದರ್ಭಕ್ಕೆ ಸಂಬಂಧಪಟ್ಟಿರುವ ಮತ್ತೊಂದು ಕವನ ೧೯-೦೭-೧೯೨೫ರಲ್ಲಿ ರಚಿತವಾಗಿದೆ. ಶೀರ್ಷಿಕೆ ‘On the way to Chamundi Hills’ ಹಿಂದಿನ ಕವನ ರಾತ್ರಿಯ ಕಾಲದಲ್ಲಿ ಉರಿಯುವ ಬೆಟ್ಟದ ಮೇಲಣ ವಿದ್ಯುತದೀಪ ಪಂಕ್ತಿಯನ್ನು ಕುರಿತ್ತಾಗಿದೆ. ಈ ಕವನ ಹಗಲು ಬೆಟ್ಟವೇರುವ ಸೋಪಾನ ಪಂಕ್ತಿಯನ್ನು, ಜೀವ ದೇವನೆಡಗೇರುವ ಸಾಹಸಕ್ಕೆ ಪ್ರತಿಮೆಯನ್ನಾಗಿ ಭಾವಿಸಿ, ಕುರಿತದ್ದಾಗಿದೆ.  ದಾರಿಯಲ್ಲ ಗುರಿ ಮುಖ್ಯ: ಸಾಕ್ಷಾತ ತಾಯಿಯೇ ಹೊರತು ನಡೆದ ದಾರಿಯಾ ಸಿರಿಸೊಬಗುಗಳಲ್ಲಿ ನಮ್ಮ ಗಮ್ಯ.

On the Way to chuamundi Hills

Climb, climb, beloved friends;
The means is not the end:
Yet, and yet a few steps more
And in Her Abode we are!
Not that, not this, note e’en Her Kiss.,
But Mother is all our bliss !

Cool breezes softly blow,
And cooler still they turn.
What is great and noble sow,
What is mean and sinful burn.
Steep is the stony road
To our Mother’s abode.

Blue heaven doth nearer come
While earth doth farther go.
Climb, climb, beloved friend,
The means is not the end.
Distinctions all shall fly
As we go near the sky.

Green grass and fruits and flowers,
Gay birds on leafy bowers
Beside the way allure.
But yet proceed and be pure
All these are but her joy,

Up ! Up, beloved brother.
See ! the clouds of glory gather !
Climb till the oneness is seen
For mother’s bliss serene!
And climbing Chant “OM Peace!
Mother’s All and Nothing is !”

ಮಲೆನಾಡಿನ ಪರ್ವತ ಶೃಂಗಗಳಲ್ಲಿ ನಿಂತು ಅರುಣೋದಯ ಸೂರ್ಯೋದಯಗಳ ಸಮಯದಲ್ಲಿ ಆದ ಒಂದು ರಸಾನುಭವವನ್ನು ಪ್ರತಿಮಿಸುತ್ತದೆ ” The May Dawn” ಎಂಬ ಕವನ.

THE MAY DAWN

The dawn was clear and sheen!
The very stillness chanted “Om Peace Peace!”
And the blue heaven was /serene.
Nor speak nor fleecy cloud
The rosy down did shroud;
Flower, tree, bush, and bower and grassy height
Were gaily trimm’d with perl-like dew- drops bright.
The splendid dawn was sheen!

How beautiful was the scene!
The bright mist had forsaken the blue sky
To kiss the valleys low and hill – tops high :
And the peaks of mountains green
Rose some great sunken island!
So splendid and delightful to my eyes
Were they  that I exclaimed “A pardise!”
Sweet was the  dawn- lit scene!

The dawn was clear, sweet and sheen!
My eyes bloomed and with joy my bosom thrilled.
With bliss and beauty my whole being was filled.
Wafting me to lands unseen!
The earth, the hills, the skies,
Melted before my eyes.

And I in ecstasy  upon the green
Rolled merged in thought sublime, divine and serene!
So beautiful was the scene!
13 – 7-1925.

೧೮-೩-೧೯೨೫ರ ತಾರೀಖು ಹಾಕಿರುವ ಒಂದು ದೀರ್ಘ ಕವನ ಒಂದು ಅದ್ಭುತ ಕೃತಿ ಎಂದೇ ಹೇಳಬೇಕಾಗಿದೆ. ಅದರ ಶೀರ್ಷಿಕೆಯು ಹೊಡೆದೆಬ್ಬಿಸುವಂತಿದೆ. The Lunatic’s Ode[1] ಉನ್ಮತ್ತನ ಪ್ರಗಾಥ. ಕವನದ  ವಸ್ತು ಅತ್ಯಂತ ಗಹನವೂ ಗಂಭೀರವೂ ಆಗಿರುವ ತಾತ್ವಿಕ ಸಾಮಗ್ರಿ. ತ್ರಿಗುಣಾತೀತ ಸಿದ್ಧ ಪುರುಷನ ಉನ್ಮಾದದಂತೆ ತೋರುವ ತಾಂಡವ ಶಿವಾವಸ್ಥೆಗೆ ಸದೃಶವಾಗಿದೆ. ಮುಂದೆ ಕನ್ನಡದಲ್ಲಿ ನಾನು ರಚಿಸಿದ ‘ವಿಪ್ಲವ ಮೂರ್ತಿ’ ಮೊದಲಾದ ಕವನಗಳ ಛಾಯೆ ಇದರಲ್ಲಿ ಸುಳಿದಿದೆ.  ಬುದ್ಧಿಯ ತಾರ್ಕಿಕತೆಯ ಅಚ್ಚುಕಟ್ಟನ್ನು ಮೀರಿ ಸಿದ್ಧಿಯ ನಿಯತ್ತಿಗೆ ಅತೀತವಾದ ವ್ಯವಸ್ಥಾತೀತ ಸ್ಥಿತಿಗೆ ಹುಚ್ಚನ್ನು ಪ್ರತಿಮೆಯಾಗಿ ಒಡ್ಡಿದಂತಿದೆ. ನಾಲ್ವತ್ತೇಳು ವರ್ಷಗಳ ಹಿಂದೆ ಬರೆದು ಎಲ್ಲಿಯೋ ಮೂಲೆಗೆ ಬಿದ್ದು ಹೋಗಿದ್ದ ಈ ಕವನವನ್ನು ಈಗ ಓದುತ್ತಾ ಓದುತ್ತಾ ನನಗೇ ದಿಗಿಲಾಯಿತು. ೧೯೨೮ರಲ್ಲಿ ನನಗೆ ಮೈಲಿಯಾಗಿ ಗುಣವಾದ ಮೇಲೆ ಕೆಲ ಕಾಲ ನನಗೆ ಒದಗಿದ್ದ ಹುಚ್ಚಿನಂತಹ ಅಧ್ಯಾತ್ಮಿಕಸದೃಶ್ಯದ ವಿಲಕ್ಷಣಾನುಭವಕ್ಕೆ ಈ ಕವನ ಪೂರ್ವ ಸೂಚನೆಯೇ ಎಂಬಂತಿದೆ! ಒಂದು ಪದ ಏನು ಗೊತ್ತಾಗುತ್ತಿಲ್ಲ ವಾದ್ದರಿಂದ ಚುಕ್ಕಿ ಹಾಕಿದೆ.

೨೪-೦೩-೧೯೨೫ರಲ್ಲಿ ಕಡಲೆಕಾಯಿ ಮಾರುವ ಮುದಿಯಜ್ಜಿಯೋಬ್ಬಳನ್ನು ಕುರಿತು ಬರೆದ ಕವನ The Ground-nut Sellerr[2] ಒಂದು ಕರುಣರಸ ಉಕ್ಕುವ ಮುದ್ದಾದ ರಚನೆ. ಬಿರುಬೇಸಗೆಯ ಸುಡುಬಿಸಿಲಿನಲ್ಲಿ, ದಿನಸಿಯ ಧೂಳಿಡಿದು ಉಸಿರಾಡಲೂ ಕಷ್ಟವಾಗುವಂತಹ ಸಂತೆಪೇಟೆಯ ವಾಯು ಮಂಡಲದಲ್ಲಿ, ಬೀದಿಯ ಪಕ್ಕದಲ್ಲಿ ಹಾಕಿಕೊಂಡು ಹರಕು ಗೋಣಿ ತಟ್ಟಿನ ಮೇಲೆ ಹುರಿದ ನೆಲಗಡಲೆಕಾಯಿಗಳನ್ನು ಕಾಸಿಗೆ ಒಂದರಂತೆ ಗುಪ್ಪೆಹಾಕಿಕೊಂಡು, ಬೇಯುತ್ತಾ ಬೆವರುತ್ತಾ, ಅರೆಮೂರ್ಛೆಗೊಂಡಂತೆ ಪಕ್ಕದಲ್ಲಿ ಆಡುವಂತ ಮಲಗಿದ್ದ ತನ್ನದೊಂದು ಕೃಶ ಶರೀರಿಯಾದ ಮಗುವಿಗೂ ತನ್ನ ನೆರಳಿನ ಆಶ್ರಯವೀಯುತ್ತಿರುವ ಚಿತ್ರ ಅತ್ಯಂತ ಕನಿಕರಣೀಯ. ಕವನದಲ್ಲಿರುವ ಅಂತ್ಯಪ್ರಾಸ ಮತ್ತು ಅಂತಪ್ರಾಸಗಳ ವಿನ್ಯಾಸವು ರಸಪೋಷಕವಾಗಿರುವುದನ್ನೂ ಸಹೃದಯರು ಗುರುತಿಸಬಹುದು.

೧೯೨೫ನೆಯ ಏಪ್ರೀಲ ತಿಂಗಳಲ್ಲಿ ಊರಿಗೆ ಹೋಗಿದ್ದು, ಅಲ್ಲಿ ರಚಿಸಿದ ಒಂದು ಕವನ Timma or The Daying Cowherd[3] (ತಿಮ್ಮ ಅಥವಾ ಮರಣೋನ್ಮುಖ ದನಗಾಯಿ) ಎಂಬ ಶೀರ್ಷಿಕೆಯದು, ಬಹುಶಃ ಒಂದು ವಾಸ್ತವ ಘಟನೆಗೆ ಸಂಬಂಧಿಸಿದ್ದು, ನಮ್ಮ ಮನೆಯ ದನಕಾಯುತ್ತಿದ್ದ ತಿಮ್ಮನ ಹೆಸರು ನನ್ನ ಕೆಲವು ಬರಹಗಳಲ್ಲಿ ಬರುತ್ತದೆ, ‘ಹಾಳೂರು’ ನಿಡುಗವನದಲ್ಲಿ, ‘ಮಲೆನಾಡಿನ ಗೋಪಾಲಕರು’ ಎಂಬ ಪ್ರಬಂಧದಲ್ಲಿ ಇತ್ಯಾದಿ.

ಊರಿನಲ್ಲಿದ್ದಾಗಲೇ ೧೦-೦೭-೧೯೨೫ರಲ್ಲಿ ಬರೆದಿರುವ ಒಂದು ಅಪೂರ್ಣವಾಗಿರುವ ಕವನವಿದೆ. ಅದಕ್ಕೆ My Native Place ಎಂಬ ಶೀರ್ಷಿಕೆಯಿದೆ. ಅದು Blank Verse ನಲ್ಲಿದೆ. ಬಹುಶಃ ಸ್ವಲ್ಪ ದೀರ್ಘ ಕವನವಾಗಿಯೇ ಉದ್ದೇಶಿತವಾಗಿತ್ತೆಂದು ತೋರುತ್ತದೆ.  ಆದರೆ ೧೨ ಪಂಕ್ತಿಗಳಲ್ಲಿಯೆ ನಿಂತು ಬಿಟ್ಟಿದೆ. ನಿಸರ್ಗದ ವಿವಿಧ ಮುಖಗಳಲ್ಲಿ ಸೌಂಧರ್ಯಸ್ವಾಧನೆ ಮಾಡುವ ಕವಿಚೇತನಕ್ಕೆ ಒದಗುವ ಬ್ರಹ್ಮಸಂಸ್ಪರ್ಶವನ್ನು ಕುರಿತು ಪ್ರಾರಂಭವಾಗಿದೆ ಆ ಕವನ.

MY NATIVE LAND

Dear regions sweet, again I come to you
After a lapse of many a month, to find
The same enchanting love and liberty
The decked your foreheads then. Blue lakes,
And mountains green, and still and tranquil woods,
Wide fields of rice and spreading gardens dear.
And speckled skies, not blue, now dark, now grim,
Gay flowers, sweet fruits and tender grass that smiles,
All these and many more are angles bright
And holy of my love. I gaily sing
To all these angles and they in return
Bring messages from the infinite…..
೧೦-೦೭-೧೯೨೫

ಮೇಲಿನ ಕವನದಂತೆಯೆ, ಪ್ರಾರಂಭವಾಗಿ ಅರೇ ಪಂಕ್ತಿಗಳಲ್ಲಿ ನಿಂತಿರುವ  ಮತ್ತೊಂದು ಕವನ ಭಾಗ To the River Tunga ಹೆಕ್ಟಾಮೀಟರ‍್ ನಲ್ಲಿರುವಂತಿದೆ.

Arise, Tunga arise from thy bed of sweet flowers
And put on the bright blanket of green!
Sweet River- Nympt of dishevelled locks trailing from bowers

On the hills where the shade is serene.
With the foot light and flowery, glide down to the glade
And playfully embrace the delicate green blade…

ಸೃಷ್ಟಿ ಒಂದು ಲೀಲೆ, ಜಗತ್ತು ಆ ಆಟಕ್ಕೆ ಸಮೆದ ರಂಗ. ಜೀವರುಗಳೆಲ್ಲ ಆ ಲೀಲಾನಾಟಕದಲ್ಲಿ ಪಾತ್ರದಾರಿಗಳು- ಎಂಬ ತತ್ವಧ್ವನಿಯನ್ನೊಳಗೊಂಡಿದೆ. The play Divine[4] ಎಂಬ ಕವನ, ವಾಚ್ಯವಾಗಿ ಮಕ್ಕಳನ್ನು ನಿರ್ದೇಶಿಸಿದೆ. ನಾವು ಈ ಭೂಮಿಗೆ ಆಡುವುದಕ್ಕೆ ಬಂದಿದ್ದೇವೆ. ನಮ್ಮ ಮನೆ ದೂರದಲ್ಲಿದೆ. ಆದ್ದರಿಂದ “ಆಡಿ, ಮಕ್ಕಳೇ ಆಡಿ!” ಎಂದು ಹುರಿದುಂಬಿಸುತ್ತದೆ, “ಸ್ವರ್ಗ ನರಕ, ಪಾಪ -ಪುಂಣ್ಯ ಎಂದೆಲ್ಲ ಕಲ್ಪಿಸಿಕೊಂಡು ಆಟಗೇಡಿಗಳಾಗಬೇಡಿ!”

ತರುಣ ಕವಿಯ ಮನಸ್ಸು ದೇವರು, ಜೀವರು, ಜಗತ್ತು, ಸೃಷ್ಟಿ, ಲಯ, ಪಾಪ, ಪುಣ್ಯ, ಸ್ವರ್ಗ, ನರಕ , ಕರ್ಮ, ಮೋಕ್ಷ ಇತ್ಯಾದಿ ನಾನಾ ವಿಚಾರಗಳಲ್ಲಿ ತೊಡಗಿದ್ದ ಕಾಲದಲ್ಲಿ ಆ ಜಿಜ್ಞಾಸೆಯ, ಆ ಸಂದೇಹದ, ಆ ಶ್ರದ್ದೇಯ, ಆ ಪ್ರಶ್ನೆ ಸಂಕುಲದ ಜಂಜಾಟದಲ್ಲಿ ಸಿಕ್ಕಿ, ಕೊನೆಗೆ ತಾನೊಂದು ಶಿಶುವಾಗಿ ಮೊರೆಯಿಡುತ್ತದೆ. ಆದನ್ನು ಪ್ರತಿಮಿಸುತ್ತದೆ “ಶಿಶುಗೀತೆ”.

ಶಿಶುಗೀತೆ          

ಏನಿದೌ, ಹೇ ಜನನಿ? ಏನಿದೇನಿದು ಜನನಿ?
ಏನಿದೀ ಧರೆ? ಏನಿದೀ ನಭ?
ಏನಿದೀ ಗಿರಿತೊರೆಗಳು?
ಆರಿಯೆ ನಾನಿದನು, ಜನನಿ, ಇದನರಿಯೆನರಿಯೆ!

ನಿನ್ನ ಈ ಸೃಷ್ಟಿ ವೈಚಿತ್ರಮಂ ನೋಡಿ ನೋಡಿ
ನಿನ್ನ ಮಹಿಮೆಯ ದಿನದಿನವೂ ಹೊಗಳಿದೆನು, ಜನನಿ,
ಬರಿಯ ಮಾಯೆಗಳಿವುಗಳೆಂದೆನಗೆ
ಪರಮ ಪುರುಷರು ಪರಿಪರಿಯಲು ಸುರುತಿಹರು.
ಮನವು ನಂಬಿದರೂ ಹೃದಯದವೊಪ್ಪದು, ತಾಯಿ.
ಏನಿದೌ, ಹೇ ಜನನಿ, ಏನಿದೇನಿದು, ಜನನಿ ?

ಕವಿಗಳೊಂದು ತೆರನಾಗುಸುರುವರು,
ವಿಜ್ಞಾನ ಶಾಸ್ತ್ರಜ್ಞರೊಂದು ತೆರದಿ;
ತತ್ವಗಳ ತಿಳಿದವರು ಬೋಧಿಸುವರಿನ್ನೊಂದು ತೆರದಿ!
ಪ್ರಾಚೀನರೊಂದು ತೆರನಾಗಿ ವರ್ಣಿಸುವರು,
ನವೀನರಿನ್ನೊಂದು ತೆರದಿ ನೈಜಮಂದು!
ಏನಿದೌ, ಹೇ ಜನನಿ, ಏನಿದೇನಿದು ಜನನಿ ?

ಭಾವಗಳು ಬದಲಾಯಿಸುವುವೋ ಮೇಣ್ ನೀನೆ
ಬದಲಾಗುವೆಯೋ? ತಿಳಿವರಾರು?
ನಿತ್ಯಳಾಗಿಹೆ ನೀನು
ಎಂದುಸುರುವರು ಸಕಲ ಜನರು?
ಏನಿದೌ, ಹೇ ಜನನಿ, ಏನಿದೇನಿದು ಜನನಿ ?

ಶಬ್ದವಾಗಿಹೆ ನೀನು ಕರ್ಣಗಳಿಗೆ,
ಬಣ್ಣವಾಗಿಹೆ ನೀನು ಕಣ್ಣುಗಳಿಗೆ;
ಕರಗಳಿಗೆ ನೀಂ ಸ್ಪರ್ಶವಾಗಿಹೆ, ಜನನಿ,
ವಾಸನೆಯ ತೆರದಿ ನಾಸಿಕಕೆ ತೋರುತಿಹೆ,
ರುಚಿಯಂತೆ ಜಿಹ್ವೆಗಳಿಗೆ !
ಎಂತಿರುವೆ ನೀನೆಂದು ಅರಿವರಾರು?
ಏನಿದೌ, ಹೇ ಜನನಿ, ಏನಿದೇನಿದು, ಜನನಿ ?

ನೀನಿರುವೆ ಎಂದುಸುರುವರು ಕೆಲರು;
ನೀನಿಲ್ಲವೇ ಇಲ್ಲೆಂದು ಕೆಲರು!
ನಿನ್ನ ನುಂಗುವೆನೆಂದು ವಿಜ್ಞಾನ ಶಾಸ್ತ್ರ ತಾಂ
ತೊಡಗಿಹುದು ತನ್ನ ದಿಗ್ವಿಜಯಕೆ!
ಇದನೆಲ್ಲವನು ನೋಡಿ ನಾಂ ಮುಗ್ಧನಂತೆ
ಬೆರಗಾಗಿ ಕುಳಿತಿಹೆನು ನಿನ್ನಿಷ್ಟದಂತಾಗಲೆಂದು,
ಏನಿದೌ, ಹೇ ಜನನಿ, ಏನಿದೇನಿದು, ಜನನಿ ?

ನಿನ್ನ ನೆಲೆಯರಿಯದೆಯೆ ವೇದಗಳು ಶಾಸ್ತ್ರಗಳು
ತಡವುತಿವೆ ಅಜ್ಞಾನ ತಿಮಿರದಲ್ಲಿ.
ಅತ್ಯಂತ ಝಗಝಗಿಪ ಕವಿಕಿರಣವೂ
ಕತ್ತಲೋಳು ಕರಿದಾಗುತಿಹುದು, ಜನನಿ!
‘ಅದು ನಾನೆ! ‘ಶಿವ ನಾನೆ!’ ‘ಬ್ರಹ್ಮ ನಾನೆ!’
ಎಂಬುವನು ನುಡಿಯುವರು ಗಿಳಿಗಳಂತೆ.
ಏನಿದೌ, ಹೇ ಜನನಿ, ಏನಿದೇನಿದು, ಜನನಿ?

ನಿನ್ನ ತಿಮಿರದ ಮುಂದೆನ್ನ ಕಿರಣಗಳೂ ನಿಲಲಾರವು!
ಕಾಳಿಯಾಗಿಹ ನಿನ್ನನುಜ್ವಲಿಪ
ಕಿರಣಗಳಿಗೀಯುತಿಹೆ ಕಾಳತ್ವನು!
ಕತ್ತಲೋಳು ಸೇರೆ ಬೆಳಕು,
ದಿವದೊಳಗೆ ರಾತ್ರಿ ಸೇರೆ,
ವ್ಯಕ್ತಮ ವ್ಯಕ್ತದೊಳಗೈಕ್ಯಮಾಗೆ
ಸತ್ವಾಸತ್ವಂಗಳೊಂದಾಗೆ ಪ್ರೀತಿಯಿಂದೆ
ನೀನಾಗ ನಿನ್ನಿಂದೆ ನಿನ್ನನರಿವೆ, ಜನನಿ!
ಏನಿದೌ, ಹೇ ಜನನಿ, ಏನಿದೇನಿದು, ಜನನಿ?

ತರ್ಕಗಿರ್ಕಗಳಲ್ಲಿ ಸೆರದಲೆ
ಕರ್ಕಶದ ತತ್ವಗಳ ಚರ್ಚಿಸದೆ
ಸಪ್ಪೆಯಾಗಿಹ ಜ್ಞಾನವನು ತೊರೆದು
ಮನವ ಸೆರೆಗೈದು ಹೃದಯದಿಂದೆ
ಆವೇಶದಿಂದ ನಿನ್ನ ನಿಜವರಿತ
ಸರ್ವಜ್ಞನಿಗೆ ಶ್ರೀಮೌನಮೆಯೆ ಲೇಸಲ್ಲವೇ, ಜನನಿ?

ಮೇಲಿನ ಕವನ ಅದರ ಚಿಂತನಾಂಶ ಭಾವಾಂಶಗಳಿಗಾಗಿ ಮಾತ್ರವಲ್ಲದೆ, ಅವುಗಳಿಗಿಂತಲೂ ಅತಿಶಯವಾಗಿ ಅದರ ರೂಪಾಂಶಕ್ಕಾಗಿ ವಿಶೇಷ ಗಮನಾರ್ಹವಾಗಿ ಅಧ್ಯಯನ ಯೋಗ್ಯವಾಗಿದೆ. ೧೯೨೪-೨೫ರಲ್ಲಿಯೆ ಈ ಕವಿ ಬ್ಲಾಂಕ್ ವರ‍್ಸ್ (Blank verse) ಜೊತೆಗೆ ಇರೆಗ್ಯುಲೆರ‍್ ಮೀಟರ‍್ ಅನ್ನೂ ಕನ್ನಡದಲ್ಲಿ ಬಳಸಿರುವುದಕ್ಕೆ ಇದು ನಿದರ್ಶನವಾಗುತ್ತದೆ. ಇಲ್ಲಿ ದ್ವೀತಿಯಾಕ್ಷರ ಪ್ರಾಸದ ಗೋಜಿಲ್ಲ. ಮಾತ್ರಾನಿಯಮ ದಲ್ಲಾಗಲಿ, ಗಣ ನಿಯಮದಲ್ಲಾಗಲಿ ಸಮತ್ವವನ್ನು ನಿರಾಕರಿಸಿದೆ. ಅಸಮ ಪಂಕ್ತಿಗಳ ವಿನ್ಯಾಸದಲ್ಲಿ ಮತ್ತು ಸ್ವಚ್ಚಂಧದ ಛಂದಸ್ಸಿನಲ್ಲಿ ನವ್ಯನಾಮಕ ಕವಿತೆಯನ್ನೂ ನಾಚಿಸುವಷ್ಟು ಮುಂದುವರಿದಿದಿದೆ.  ಕವಿಯಲ್ಲಿ ಆಗ ನಡೆಯುತ್ತಿದ್ದ ಒಂದು ಪರಿವರ್ತನೆಗೆ ಪ್ರತಿಮೆಯಾಗಿ ನಿಲ್ಲುವಂತಿದೆ ಈ ಕವನದ ಗೆಲ್ಗಂಬ ಸಾಕ್ಷಿ!

ಇದರಂತೆಯೇ ಮತ್ತೊಂದು ಕವನ ‘ಸೂರ್ಯೋದಯ’ವೂ ಗಮನಾರ್ಹವಾಗಿದೆ,  ಅದರ ರೂಪಾಂಶಕ್ಕಾಗಿ, ಛಂದಸ್ಸಿನ ದೃಷ್ಟಿಯಿಂದ ನೋಡಿದರೆ ಭಾಮಿನೀ ಷಟ್ಪದಿಯಾದರೂ ದ್ವೀತಿಯಾಕ್ಷರ ಪ್ರಾಸದಿಂದ  ವಿಮುಕ್ತವಾಗಿರುವುದರಿಂದಲೇ, ಪ್ರಾಸಕ್ಕಾಗಿ ಕಾವ್ಯ ಪ್ರಯೋಜನಕ್ಕೆ ಅಷ್ಟೇನೂ ಹತ್ತಿರವಲ್ಲದ ಪದಗಳನ್ನು ತಂದು ತುರುಕುವ ಕೃತಕತೆಯಿಂದ ಪಾರಾಗಿ, ಸ್ವಾತಂತ್ಯ್ರ ಸುಂದರವಾಗಿದೆ.

ಸೂರ್ಯೋದಯ

ತಿಮಿರ ಬೆದರಿತು ; ಮಬ್ಬು ಮಸುಳಿತು;
ಮಂಜು ಮೇಲಿಂದಿಳೀದು ಕವಿಯಿತು.
ಧರೆಯು ವಿಶ್ವದ ಕಂಡು ಕಾಣದ ಮಾಯೆಯಂತಾಯ್ತು
ತಾರೆಗಳು ಕೆಲಸಾರಿದುವುಲ ಮೆಲು
ಮೆಲನೆ ಬೀಸಿದನುದಯ ಮಾರುತ
ನರಳಿ ಮೆರೆಯುನ ನಳನಳಿಪ ಪೋಸ ತರು ಸಮೂಹದಲಿ.

ಬಿದಿರ ಮಳೆಯೊಳು ಸುಳಿದು, ಚುಂಬಿಸಿ
ಸಿರಿ ಗುಲಾಬಿಯ ಹೃದಯ ಕಮಲವ,
ಮಲ್ಲಿಗೆಯನಾದರಿಸಿ, ಬಕುಳದ ಕೋಮಲಕಾಕೃತಿಯ
ಮೆಲ್ಲನಾಲಿಂಗಿಸುತ ಮುದ್ದಿಸಿ,
ನೀರಜಂಗಳಿಗಿತ್ತು ಧೈರ್ಯವ
ಕುಮುದಗಳ ಸಂತೈಸಿ ಬೀಸಿದನುದಯ ಮಾರುತನು.

ಹಸುರು ಹುಲ್ಲೊಳು ಸುಳಿದನಾಡಿದ
ನರಳಿ ತಳಿರೊಳು; ಮಾಮರಂಗಳ
ಪೊಳೆವ ತೇರೊಳು ವೇದಘೋಷವ ಮಾಡಿ ಪೂಜಿಸಿದ;
ಹೊಲಗಳೊಳು ತಲೆದೂಗಿ, ಹರುಷದಿ
ಗಿರಿಶಿಖರಗಳ ನಡರಿಯೊಲುಮೆಯ
ನಿಳೆಗೆ ತಂದನು ದೇವಲೋಕದ ಮಂದ ಮಾರುತನು.

ಕೆಂದುಟಿಯ ಎಳನಗೆಯ ಬೀರುತ,
ವರ ವಿಲಾಸವ ಧರೆಗೆ ತೋರುತ,
ಮೂಡಣಾಕಾಶವನು ಕುಂಕುಮ ಮಿಸುನಿ ಲೇಪದಲಿ
ಬಳಿದು ನೀರದಗಳನು ರಂಜಿಸಿ,
ನಲಿಯುತೈತಹ ಬಿಸಜಮಿತ್ರನ
ನೆದುರುಗೊಳ್ಳಲು ಓಡುತಿರ್ದನು ಪವನವಸರದಿ.

ನೂತನ ಪ್ರಿಯನೊಲಿದು ಚುಂಬಿಸೆ
ಮನದಿ ಹರುಷವನಾಂತು ಲಜ್ಜೆಯ
ಮೇಲೆ ತೋರುತಲೋರೆ ನೋಟದಿ ಪತಿಯ ನೀಕ್ಷಿಸುವ,
ಮರಳಿ ಚುಂಬಿಸಿ ಪ್ರಿಯನನಪ್ಪುವ
ಮನದ ದುಗುಡವ ಹೊರಗೆ ತೋರದೆ
ನಿಲುವ ಕೋಮಲೆಯಂತೆ ಮರೆದುದು ಸೊಬಗಿನಿನನುದಯ!

ಕಮಲವರಳಿತು; ಹಿಮವ ನಭದಿಂ
ದಿಳೀದು ಧಾರಿಣಿಗೊಲಿದು, ಪ್ರಕೃತಿಯ
ಪಚ್ಚೆ ಪೀತಾಂಬರದಿ ನೆಲಿಸಿತು ಹರಳುಗಳ ತೆರದಿ;
ಪುರುಷ ರೂಪುನ ಚುಂಬಿಸಲು ಬಹ
ಪ್ರಕೃತಿ ದೆವಿಯ ಸೆರಗಿನಂದದಿ
ಹಿಂದು ಮುಂದುಕೆ ತೂಗಿ ನಲಿದುವು ಮಲೆಯ ಕಾಡುಗಳೂ.

ಥಳಿಸಿದುವು ಹಿಮವನಿಗಳೆಲ್ಲಿಯು
ಗಗನದಿಂದಿವನಿ ತಳಕಿಳಿದಿಹ
ರತುನ ಕೋಟಿಗಳೆನಲು ಕೋಮಲ ರವಿಯ ಕಾಂತಿಯಲಿ.
ಕೇಳಲಮೃತನಾನಂದವೀಯುವ
ಸರಳ ಭಾವದ ಕವಿತೆಯಂದದಿ
ಮಂಜು ಹನಿಗಳು ಹಸುರು ಎಲೆಗಳ ಮೇಲೆ ತೊಳಗಿದುವು.

ಕೆಲವು ಹವಳಗಳಂತೆ ಹೊಳೆದುವು;
ಕೆಲವು ಮರೆದುವು ವಜ್ರರಾಗದಿ;
ಕೆಲವು ತೋರುತ ರತುನ ಕಾಂತಿಯನಿರದೆ ಬೆಳಗಿದುವು;
ಕೆಲವು ನೀಲಿಗಳಾಗಿ ನಲಿದುವು;
ಕೆಲವು ಮುತ್ತುಗಳಾಗಿ ಕಂಗಳ
ನೊಲಿದು ಕರೆದುವು ವಿವಿಧ ವರ್ಣದ ಪರ್ಣಜಾಳದಲಿ!

ಚಂಪಕಂಗಳನೇರಿ, ಸುರಗಿಯ
ಸೇರಿ, ಕುಸುಮವ ಹಾರಿ ವಿಹಗಗಳುಲಿಯ ಬೀರಿದುವು.
ಜರೆದು ಜಡರನ್ನು, ಕರೆದು ಕವಿಗಳ,
ಮೊರೆದು ಹೂಗಳಲಿರದೆ ಮಧುವನು
ಸವಿದು, ಹಲ್ಲೆಯ ತೊರೆದು ಝೇಂಕರಿಸಿದುವು ತುಂಬಿಗಳು.

ಗಿಳಿಯು, ಪಿಕ್, ಗೊರವಂಕ, ಟಿಟ್ಟಿಭ,
ಬುರುಲೆ, ಬುಲುಬುಲು, ಸೋರೆ, ಪಕೃತಿಯ
ಬಡಗಿ, ಗೌಜಿಗ, ಪರಮ ವೈಣಿಕರೊಡೆಯ ಕಾಜಾಣ;
ಗರಗ, ಕಬ್ಬಿನ ಗರಗ, ಕಿಣಕಿಣ,
ಹಳದಿ ಹಕ್ಕಿಯು, ಹೂವಿನಿನಿಯನು,
ಹೆಸರ ಕಾಣದ ವಿಹಗ ಕೋಟಿಗಳೊಲಿದು ಪಾಡಿದುವು!

ನೂತನಾಂಭರವುಟ್ಟ ಬೆಡಗಿನ
ರಮಣಿಯಂದದಿ ಪ್ರಕೃತಿ ನಲಿಯಿತು,
ಕಂಡವರ ಕೈಬೀಸಿ ಕರೆಯುತ ಸೊಬಗಿನುದಯದಲಿ:
“ಬನ್ನಿ, ಧಾರಿಣಿಗಿಳಿದ ದಿವಿಜರೆ,
“ಬನ್ನಿ ಮಾಯೆಯ ಗಜನೊಡೆಯವರೆ
ಬನ್ನಿ, ಕವಿಗಳೆ!” ಎಂದು ಕರೆದುದು ಪ್ರಕೃತಿ ವೈಯಾರ!

“ಆಟವಾಡಲು ಬಂದ ಬಾಲರು
ನಾವು; ಧಾರಿಣಿಯಟರಂಗಂ;
ನಮ್ಮ ತವರೂರಿಹುದು ವಿಶ್ವದ ವಿಶ್ವತೋಟದಲಿ!
ಬಾಲರೇ, ನೀವಾಡಿ ಬನ್ನಿರಿ;
ಹರುಷ ಸಾಗರವಿಹುದು ನಿಮ್ಮಯ
ಹೃದಯ ಮಧ್ಯದಿ!” ಎಂದು ಕೂಗಿತು ಒಂದು ಕೋಗಿಲೆಯು!

“ಕರುಣಾಸಾಗರೆಯಾದ ಮಾತೆಯು
ಧರೆಯ  ಸಂರಕ್ಷಿಸುತ, ಮರೆಯಲಿ
ನಿಂತು ನೋಡುವಳೊಲಿದು ಬಾರ ಮುಗ್ದಲೀಲೆಗಳ!
ಶಾಲೆಗಳ ಬಿಡಿ, ಬನ್ನಿ , ಬಾಲರೆ,
ವೇದವಿಹುದೀ ಸೊಬಗಿನುದಯಾ
ನಂದ ಕಡಲೋಳು!” ಎಂದು ಘೊಷಿಸಿತೊಂದು ಕಾಜಾಣ.

ಅತ್ತ ನೋಡಿರಿ, ಮೂಡವಿನ ಚೆ-
ಲ್ಲುತ್ತ ಕುಂಕುಮ ರಾಗ ಬೋಗವ
ಸುತ್ತುತೈತಹ ಮೋಡ ನಿಕರದಿ ತೊಳಗಿ, ಧಾರಿಣಿಯ
ಎತ್ತರದ ಗಿರಿ ಶಿಖರಗಳ ಬೆಳ-
ಗುತ್ತ, ರಜತೋದಕವ ಥಳ ಥಳಿ
ಸುತ್ತ ರಂಜಿಪನೆಂದು ಬುಲುಬುಲು ಪಾಡಿತುದಯದಲಿ.


ನಮಿಪೆ, ಹೇ ಪರಬೊಮ್ಮ, ನಿನ್ನಯ
ಪಾದಪದ್ಮಂಗಳೀಗೆ ! ವಿಶ್ವವ-
ನಾರರಿವರವ್ಯಕ್ತ ದೆಶೆಯಲಿ ? ವ್ಯಕ್ತನಾಗಿಳಿದು
ಜಗದ ಸಂತೆಯ ನಡುವೆ ಸಿಡಿಲಿನ
ಕಂಠನಾದದಿ ಎಚ್ಚರಿಸು ಈ
ಮದ ಹೃದಯರ” ನೆಂದುದೈ ಕಾಮಳ್ಳಿ ತೋಟದಲಿ!

ಎಲ್ಲಿಯುಂ ಸಂತೋಷ ತುಂಬಿತು:
ಎಲ್ಲಿಯುಂ ಆನಂದ ಸಾಗರ=
ದಲೆಗಳೆದ್ದುವು: ಹಳ್ಳಿ ನಿರ್ಜರ ಲೋಕವಾಯ್ತು!
ವಿಹಗಮ ಮೃಗಗಳು ಗಿರಿಯು ತೊರೆಗಳು
ಹಸುರು ಹೂ ಗಿಡ ಬಳ್ಳಿ ಮರಗಳು
ನಲಿದವನಾನಂದದಲಿ ಸೊಬಗಿನ ಮಿತ್ರನುದಯಿಸಲು!
೧೯೨೪-೧೯೨೫

ಈ ಕಾಲದಲ್ಲಿ ರಚಿತವಾಗಿರುವ ಅನೇಕ ಸಣ್ಣ ಪುಟ್ಟ ಭಾವಗೀತೆಗಳಲ್ಲಿ ಕವಿಯ ಚಿಂತನಶೀಲತೆ- ಸೃಷ್ಟಿ, ದೇವರು, ಬದುಕಿನ ಗುರಿ, ಮಾಯೆ, ಲೀಲೆ, ಕಮೃ ತತ್ವ- ಅಭಿವ್ಯಕ್ತಗೊಂಡಿದೆ. ಮಾದರಿಗಾಗಿ ಅವುಗಳಲ್ಲಿ ಒಂದೆರಡು ಪಂಕ್ಷಿಗಳನ್ನು ಅಲ್ಲಲ್ಲಿ ನಿದರ್ಶಿಸುತ್ತೇನೆ.

“ಧರೆಯೊಳಾಡಲು ಬಂದ ಕುಸುಮಾಗಿಹೆ ನೀನು;
ಧರೆಯ ಸೊಬಗಿದೆ ನಿನ್ನ ಹೃದಯದೊಳಗೆ,
ಮರೆತದನು ನೀನೇಕೆ ಹಂಬಲಿಸುತಿಹೆ, ಮನವೆ?
ಧರೆಯ ದುಃಖಗಳು ಕನಸೆಂದು ತಿಳಿಯ್ಯೆ!”

“ಇಲ್ಲದ ಮಾಯೆಯ ತೋರ್ಪ ವಿರಾಟ,
ಎಲ್ಲವೂ , ಪರಮಾತ್ಮನೆ, ನಿನ್ನಾಟ!
ಇಂಗ್ಲೀಷಿನಲ್ಲೆಂತೊ ಅಂತೆ ಕನ್ನಡದಲ್ಲಿಯೂ ಅಲ್ಲಲ್ಲಿ ಕೆಲವು ಪ್ರೇಮಗೀತೆಗಳಿವೆ.

“ಲಲಿತೆ, ನಿನ್ನ ಚೆಲುವ ನೋಡಿ
ಮುಗುದನಾದೆನಾಂ!
ನಳಿನ ಮುಖಿಯ, ನಳಿನ ನಯನೆ,
ಬಿದಿಯ ಕವಿತೆ ನೀಂ!”…

 


[1] Alien Harp. P. 26

[2] Alien Harp P.32

[3] Alien Harp. P. 31

[4] Alien Harp. P. 34

[/fusion_builder_column][/fusion_builder_row][/fusion_builder_container]