ಒಕ್ಕಲಿಗರ ಹಾಡು

“ಒಕ್ಕಲಿಗರ ಹೊತ್ತಾಯಿತೆ ಏಳಿ
ಕುಕ್ಕುಟಗಳು ಕೂಗುವುದನ್ನು ಕೇಳಿ
ಮೋಡ ನಿಕರವನು ಕೆಂಪಗೆ ಮಾಡಿ
ಮೂಡಣ ರವಿಯುದಯಿಸುವನು ನೋಡಿ!…
ಮೇದಿನಿಯಮ್ಮನು ಕರೆವಳು ಕೂಗಿ
ಅದರದಿಂ ತಾಯಿಗೆ ತಲೆಬಾಗಿ….

ಅದ್ವೈತಿ

“ಈಶನಾಮ ಜಗದೀಶನಾಂ ಪರಮೇಶನಾಂ
ವಾಸುದೇವ ನಿವಾಸನಾಂ! ಓಂ ! ಓಂ! ಓಂ!

ಪುಣ್ಯ ಮೆನ್ನನೆತತ್ತಲಿಲ್ಲ;
ಪಾಪವಮೆನ್ನನಿಳುಹಲಿಲ್ಲ.
ಪುಣ್ಯಪಾಪವೆರಡು ಎನ್ನ
ಮಾಯೆಯೊಳಗೆ ಐಕ್ಯವಾಗಿ
ಬಲೆಗೆ ಬಿದ್ದ ಮೀನಿನಂತೆ
ಪಥವ ಕಾಣದಳಲುತಿಹವು!… ಈಶನಾಂ!

ಮರಣಮೆನ್ನ ಸೆಳೆಯಲಿಲ್ಲ
ಜನನಮೆನ್ನ ಕಳುಹಲಿಲ್ಲ
ಬ್ರಹ್ಮ ಧಮೃರೀರ್ವರೆನ್ನ
ಮಹಾವ್ಯಕ್ತಿಯೆದುರು ನಿಲದೆ
ಅಂಜಿ ಬೆದರಿ ಶಿರವ ಬಾಗಿ
ಓಡುತಿಹರು ಕುರಿಗಳಂತೆ!… ಈಶನಾಂ!

ಅದ್ವಿತೀಯನಾದ ಎನಗೆ
ಸೃಷ್ಟಿ ಲಯಗಳೊಂದುಮಿಲ್ಲ;
ಆದಿ ಇಲ್ಲ, ಅಂತ್ಯವಿಲ್ಲ,
ದುಃಖ ಸುಖಗಳೊಂದು ಇಲ್ಲ;
ಹಿಂದೆ ನಾನು ಬಾರಲಿಲ್ಲ
ಇಂದು ನಾನು ತೋರಲಿಲ್ಲ… ಈಶನಾಂ!

“ನಿನ್ನನಗಲಿರದಾರದೆನ್ನ ಮನವು;
ನಿನ್ನ ಮೈ ಮುಟ್ಟದಿರದೆನ್ನ ತನುವು!…”
“ಶರಣು ಶರಣು ತಾಯೆ
ಹೇ ತ್ರಿಭುವನ ಮಾಯೆ.
ಶರಣು ತಾಯೆ, ಭವನ ಮಾಯೆ, ನಾಂತಗೇಹೆ!”…

“ಕೈಬೀಸಿ ಕರೆವರು ಮಹಾತ್ಮರೆನ್ನನು;
ಹೋಗುವೆನಲ್ಲಿಗೆ ನೀವೆನ್ನ ಕೈಬಿಡಿ!…

ನಮ್ಮೂರು ವಿಶ್ವವು ನಮ್ಮಾಟರಂಗವು
ಈ ಭೂಮಿ ಎಂಬುವದ ನಾನೆಂತು ಮರೆಯಲಿ ?
ನಮ್ಮೂರ ಸೇರುವೆನು : ನಿಮ್ಮಾಟ ಬೇಡವು;
ವಿಶ್ವಾತ್ಮನನು ನೀವೇಕಾಗಿ ತಡೆವಿರಿ?…

ಹೂದೋಟದಾಟವು  ಇಂದಿಗೆ ಮುಗಿಯಿತು;
ಎಲ್ಲಿಂದ ಬಂದೆನೋ ಆ ಊರ ಸೇರುವೆನು.
ನೀವೇಕೆ ಕರೆವಿರಿ? ಗೋಳಾಟವನು ಬಿಡಿ!…”

ಈ ಕೆಳಗಿನದು ರವಿಂದ್ರರ ಒಂದು ಗೀತೆಯ ಭಾಷಾಂತರ, ಇಂಗ್ಲೀಷಿನ ಭಾಷಾಂತರದಿಂದ, ಇಲ್ಲೆಲ್ಲ ದ್ವೀತಿಯಾಕ್ಷರ ಪ್ರಸಾದಿಗಳು ದೂರವಾಗುತ್ತಿರುವುದನ್ನು ಗಮನಿಸಬಹುದು.

ತುಂಬಿ ತುಳುಕುವ ಜೀವ ಬಟ್ಟಲ
ದಿವ್ಯ ಪಾನವು ನಿನಗೆ ಬೇಕೇ
ಎನ್ನ ಜೀವದ ಜೀವನೆ ?

ನಿನ್ನ ಸೃಟಿಯನೆನ್ನ ಕಣ್ಣಗ
ಳಿಂದ ನೋಳ್ಪುದು ನಿನ್ನ ಲೀಲೆಯೆ,
ಎನ್ನ ಪ್ರೇಮದ ಕವಿವರ?

ನಿನ್ನ ವಿಶ್ವಾನಂದ ಗೀತವ
ನನ್ನ ಕಿವಿಗಳ ಬಾಗಿಲೆಡೆಯಲಿ
ಮೆಲು ನಡೆಗಳಲಿ ನಿಂತು ಕೇಳ್ವುದು

ನಿನ್ನ ಹರುಷವೆ, ಕವಿವರ!
ನಿನ್ನ ಲೋಕವು ಎನ್ನ ಮನದಲಿ
ನಾದ ಕೋಟಿಯ ನೇಯುತಿರುವುದು;

ನಿನ್ನ ಸಂತಸವೇ ಅವುಗಳಿಗೆ
ಗಾನಶೀಲವನೀವುದು!
ನೀನು ನಿನ್ನನೆ ದಾನ ಮಾಡಿಹೆ

ಪ್ರೇಮದಿಂದಲಿ ಎನಗೆ, ದೇವನೆ!
ನೀನೆ ಸವಿಯುವೆ ನಿನ್ನ ಮಧುವನು
ಎನ್ನ ಪೊವೋಳು, ದೇವನೇ!

“ನಿನ್ನ ದಿವ್ಯ ಗಾನ ಧಾರೆ
ಪ್ರೇಮ ಮೋಡದಿಂದ ಸೋರೆ
ಜೀವ ಪುಷ್ಪವದನು ಹೀರಿ
ನಲಿಯುತಿಹುದು, ದೇವದೇವ!”

ನಾಲ್ಕು ಪಂಕ್ತಿಯ ಎಂಟು ಪದ್ಧತಿಗಳೂ ಎರಡು ಪಂಕ್ತಿಯ ಪಲ್ಲವಿಯೂ ಇರುವ ‘ಕವಿಗಳು’ ಎಂಬ ಕವನದಿಂದ ನಾಲ್ಕು ಪದ್ಯಗಳನ್ನು ಇಲ್ಲಿ ಕೊಟ್ಟಿದೆ. ಪ್ರಾಸಕ್ಕೆ ಬದ್ಧವಾಗಿರುವುದನ್ನು ಗಮನಿಸಬಹುದು.

ಮರಳುರಯ್ಯಾನಾವು
ಮರುಳುತನವೇ ನಮ್ಮ ಲೀಲೆ || ಪಲ್ಲವಿ||

ಅರೆಯರಳಿದ ವರ ಕುಸುಮವು
ಹರಿಯುದಯದಿ ನಲಿಯುತಲಿರೆ,
ಮರೆತು ಮೈಯ ನೀಡಿ ಕೈಯ
ಹರಿಯೆ ಬಾರೊ ಎಂದು ಕರೆವ…

ಜನನ ಮರಣಗಳನು ನಗುತ,
ವಿನುತ ವಿಶ್ವಸುತರು  ನಾವು,
ಜನನಿ ಎಮ್ಮೆ ವಿಶ್ವಮಾತೆ,
ಎನುತ ನಲಿವ ಸಮಹೃದಯರು…

ಆನಂದದಿ ವಿಶ್ವೇಶನ
ಸ್ವಾನುಭವದಿ ನಿರದೆ ಪಡೆದು
ಆನಂದವೇ ವಿಶ್ವೇಶನು
ಎನುತ ಕಾಲನೊಡನೆ ನಲಿವ…

ಕಾಲನೆಮಗೆ ಪರಮಗೆಳೆಯ:
ಲೀಲೆ ಎಮ್ಮ ಜೀವದೆಲರು.
ಬಾಲತನವೆ ಮೋಕ್ಷವೆಂದು
ಕಾಲರಹಣಗೈದ ನಲಿವಖಿಮರಳುರಯ್ಯಾ…

ಇಂಗ್ಲೀಷಿನ ಬ್ಯಾಲೆಡ (Ballad) ಛಂದಸ್ಸಿನಲ್ಲಿ ಕನ್ನಡದಲ್ಲಿಯೂ ‘ವೀರಗೀತೆ’ ಅಥವಾ ‘ಲಾವಣಿ’ ಗಳೆಂಬ ಕಥನ ಕವನಗಳನ್ನು ಬರೆಯಬೇಕೆಂದು ನಾನು ಶಿವಾಜಿಯ ಜೀವನ ಚರಿತ್ರೆಯಲ್ಲಿ ಬರುವ , ತಾನಾಜಿ ಸಿಂಹಗಡವನ್ನು ಹಿಡಿದು ಸಾಹಸದ ಸಂಗತಿಯನ್ನು ಆರಿಸಿಕೊಂಡೆ. ಮೊದಲು ಅದನ್ನು ಬರೆದುದು ಇಂಗ್ಲಿಷಿನಲ್ಲಿಯೆ. ತರುವಾಯ ಕನ್ನಡದಲ್ಲಿಯೂ ಬರೆದೆ, ಆದರೆ ಕನ್ನಡದ್ದು ಇಂಗ್ಲೀಷಿನ ಭಾಷಾಂತರ ಎನ್ನಲಾಗದಿದ್ದರೂ ಅನುವಾದವೇ ಎನ್ನುವುದರಲ್ಲಿ ಸಂದೇಹವಿಲ್ಲ. ಈಗ ನನ್ನ ‘ಕಥನ, ಕವನಗಳು’ ಎಂಬ ಸಂಗ್ರಹದಲ್ಲಿ ಪ್ರಕಟವಾಗಿರುವ ‘ತಾನಾಜಿ’ ಎಂಬ ದೀರ್ಘ ಕವಿತೆ ಅನೇಕ ವರ್ಷಗಳ ತರುವಾಯ ರಚಿತವಾದದ್ದು. ಹಿಂದೆ ಬರೆದಿದ್ದ ಇಂಗ್ಲೀಷ್ ಬ್ಯಾಲೆಡ್ ಆಗಲಿ ಅದರ ಅನುವಾದವೇ ಎಂಬಂತಿರುವ ಕನ್ನಡ ಲಾವಣಿಯಾಗಲಿ ಎಲ್ಲಿಯೂ ಅಚ್ಚಾಗಲಿಲ್ಲ. ಕವಿಯ ಪ್ರಾಯೋಗಿಕ ರಚನಾ ಕಾಲದ ಸ್ವರೂಪದ ಪರಿಚಯ ಮಾಡಿಕೊಡುವ ಉದ್ದೇಶದಿಂದ ಎರಡನ್ನೂ ಇಲ್ಲಿ ಕೊಡಲಾಗಿದೆ.  ಹೋಲಿಕೆಗೂ ಅನುಕೂಲವಾಗುವಂತೆ ಹಸ್ತಪ್ರತಿಯಲ್ಲಿ ಇಂಗ್ಲೀಷಿನದಕ್ಕೆ ಯಾವ  ಹೆಸರನ್ನೂ ಕೊಟ್ಟಿಲ್ಲ. ಕನ್ನಡದಕ್ಕೆ ‘ಸಿಂಹಗಡ ಎಂಬ ಶಿರ್ಷಿಕೆ ಇದೆ ತಾರಿಖೂ ಹಾಕಿಲ್ಲ.;ಆದರೆ ಅವು ೧೯೨೫ನೆಯ ಇಸವಿಯ ರಚನೆಗಳೂ:

The broad bright moon up – rose in the east;
From the land and darkness field.

The milky white of the moon- lit night

Over mountain and forest spread.

Deep stillness brooded over the land
And softly below  the breeze;

Not even a sound from the castle came.

All was steeped in perfect peace.

Five hundred mighty mavlees neared,
Led by Taannaajji brave,
The famous Lion’s Fort and stood
And cast their glances grave.

Not a word they spoke, not a sound they made;

Te very weapons held peace!
They were like actors in a dream
Where muster deep mysteries!

The signal waved Taanaaji Bod:
Three Hundred neared the wall.

Suryaaji with his two hundred men.
Remained to climb at their call.

II

The winter nights was shivering chill,
The walls were cold as ice;

And mute was nature ; every gust
Sent forth its  wintry sighs.

Taanaaji took a ladder of twine.
And began his escaped;
Deep and dangerous was its steep.
But on his, way he made.

Each warrior bold shuddered with cold.

But not a face was sad;
In every heart Taanaaji burned,
So each was courage- Clad!
of death they did not think, but thought
of fame and victory:

Each vied to carry the welcomes news of success to Shivaaji.

With nimble hands and agile feet

High up Taanaaji sped.
At last the gained the top most point.

Behold him toe the thread !

A smile of joy enlit the face
Of each mighty Mavalee;

Inspired they stood in act to see
the signal of Taanaaji.

III

But hark! a sentinel has spied
The secret escalade ;
Forward the moves! An arrow’s Wizz!
Taanaaji shot him  down!

A clank from the fallen watch- man’s word
Did ripple thro the air.

The others heared that fatal sound!
Taanaaji heared their treads.

As one by one the Mavlees climbed,
The watch – men reeled and fell.
The arrow wizzed with lightning’s speed;
The scabbards rang the death- knell.

The Rajput soldiers caught the sounds
And out to the field of battle
They rushed with weapons bright and sheen
Like brave yet frightened cattle.
Bravely the Mavlees fell on them.

Full fierce the battle grew;
Many a man they slew!

Many A Rajput faught and died,
Many were hurled from the fort;
Like Death Taanaaji killed and rushed,
To him it was but a sport!
Tho’ little was the Mavlee band
Full bravely did they fight:
The defenders of the famous fort
Retreated before their might.

Suryaaji with his two hundred men
Did hear the route of the fight;
His spirit burned, he could not control,
He yearned to behold the fight.
”UP! Up, brave men!” he said and soared
”Up ere the feast be ‘o’er!”
The warriors rushed to the swinging thread
And yelled a jovial roar!

IV

“Fight on, brave souls, Shivaaji’s men
Fight, on ye mountaineers brave,
Shiva is with ye, Men, take heart,
And cry “Hara Mahaadev!”
Thus crying Taanaaji onward sped,
His sword like lightning flashed :
The dying groaned, the wounded fell:
The angry weapons clashed!

UP and down the warriors rushed
And to and fro they leapt:
Chaotic grew the clanking din
Of many a sword adept.
Taanaaji was the battle’s soul,

Both might and inspiration:
In him lived every mavalee,
He was their aspiration !

Out of the thickening field emerged
Like the dazzling rising sun
Udayabanu, the Rajput brave,
Who many a battle had won.
Full stalwart, stout and brave was he
And in skill unsurpassed;
Him did Taanaaji brave confront
As claim and unabashed!

Behold! they fight, the might men;
See, how their scimeters flash!
See how they leap and how they sweep!
And hark; their targets clash!
That fatal thurst! That nimble bound!
Alas! That streaming wound!
Udaya strikes; Taanaajis shield!
Burst with splintering sound !

Back Taanaji leapt; his sinew arm
Supplied his mightier shield !
Uday’s thurst ! Taanaaji’s lunge!
Both captains kiss the field!
Back! Back did Mavaleers recoil:
But heared Suryaaji’s cry;
It echoed loudly from every heart
And filled the moon-lit sky!

“Wore to the coward who for his life
Betrays the captain dead:
Ye shall ot run! Yet must not run:
Behold I burn the thread:
Fight and live or leap and die:
Ye shall have fame or shame!”
So saying brave Suryaaji seared
The swinging thread with a fmale!

The Mavlees heard their captains’ Call,
Their failing hearts rurned brave!
Forword they rushed with clank and cry
“ Hara! Hara! Mahadev!”
The distant mountains caught the sound
And yelled “Hara Mahadev!”
The silent night was reverberant
With “ Hara Mahadev!”

“Hara Mahaadev ! Hara Mahaadev!”
Struck terror to the foe;
Mad and inspired the Mavlees fought.
The Rajput retreated slow.
A fatal tremor passed thro’ their veins,
They shuddered, turned and flew!
Some from the ramparts slipped and died,
And some were chained ere they knew!

“Set fire to the huts! “Suryaaji said:
The mighty flames out- blazed!
ON rayaghar fort shivaaji stood
And at these flames he gazed.
He did not hear “Hara Mahaadev!”
And knew not Taanaaji’s death:
Nor heared the din, but saw the light
And gasped a hopeful breath!

Al morn messengers came and said
Less with joy, more with woe
“Lord, we have won, but Taanaaji died”
Shiva bent his kingly brow,
He mighty heart gave way to tears:
Said he in mournful tone:
“ The Lion’s Fort is captured, true!
But oh the lion is gone !”