ಹಿಂದೆಯೆ ತಿಳಿಸಿದಂತೆ ನನ್ನ ೧೯೨೪ನೆಯ ದಿನಚರಿ ಆ ವರ್ಷದ ಅಗಸ್ಟ ತಿಂಗಳ ೧೦ನೆಯ ತಾರೀಖು ಮುಕ್ತಾಯಗೊಂಡಿದೆ. ಮತ್ತೇ ದಿನಚರಿ ಪ್ರಾರಂಭವಾಗಿರುವುದು ಸರಿಯಾಗಿ ಒಂದು ವರ್ಷದ ಅನಂತರ ೧೯೨೫ನೆಯ ಅಗಸ್ಟ ೧೦ನೆಯ ತಾರೀಖಿನಂದು. ಈಸಾರಿ ದಿನಚರಿಯನ್ನು ಡೈರಿಯಲ್ಲಿ ಬರೆದಿಲ್ಲ: ಒಂದು ಸಣ್ಣ ನೋಟು ಬುಕ್ಕಿನಲ್ಲಿ ಪ್ರಾರಂಭಿಸಿದ್ದೇನೆ.  ಅಲ್ಲದೇ ದಿನಚರಿಯನ್ನು ದಿನವೂ ಬರೆದೂ ಇಲ್ಲ. ಮನಸ್ಸು ಬಂದಾಗ ತಾರೀಖು ಹಾಕಿ ಬರೆದಿದ್ದೇನೆ. ಅದು ೮-೧೨-೧೯೨೫ಕ್ಕೆ ನಾಲ್ಕು ತಿಂಗಳ ಅನಂತರ ನಿಂತಿಬಿಟ್ಟಿದೆ. ಬಹುಶಃ ನನ್ನ ಹೊಟ್ಟೆಯಲ್ಲಿ ಹೊಕ್ಕುಳದ ಬಳಿ ಒಂದು ಬಾವು ಎದ್ದು, ನನ್ನ ಚಿಕ್ಕಪ್ಪನವರು ಮತ್ತು ಮಂಜಪ್ಪಗೌಡರು ಬಂದು ನನ್ನನ್ನು ಶಿವಮೊಗ್ಗಕ್ಕೆ , ಕರೆದೊಯ್ದು ಶಸ್ತ್ರಚಕಿತ್ಸೆ  ಮಾಡಿಸಿದ ಕಾಲಕ್ಕೆ ಸೇರಿರಬಹುದು. (ಅದರ ವಿವರ ಆಮೇಲೆ ಬರೆಯುತ್ತೇನೆ).  ಈ ೧೯೨೫ನೆಯ ವರ್ಷದಲ್ಲಿ ನೋಟುಬುಕ್ಕಿನಲ್ಲಿ ಹದಿಮೂರುದಿನಗಳಲ್ಲಿ ಮಾತ್ರ. ಅನುಕ್ರಮವಾಗಿ ಅಲ್ಲ, ಡೈರಿ ಬರೆದಿದ್ದೇನೆ. ೧೦-೮-೧೯೨೫ ೧೧-೮-೧೯೨೫,  ೧೨-೮-೧೯೨೫, ೨೨-೮-೧೯೨೫, ೨೦-೯-೧೯೨೫,  ೩-೧೦-೧೯೨೫, ೮-೧೦-೧೯೨೫, ೯-೧೦-೧೯೨೫, ೨೨-೧೦-೧೯೨೫, ೧೦-೧೧-೧೯೨೫, ೩-೧೨-೨೦೨೫,  ೫-೧೨-೧೯೨೫,  ೬-೧೨-೧೯೨೫,  ೮-೧೨-೧೯೨೫;

೧೯೨೫ನೆಯ ಆಗಸ್ಟ್ ೧೦ನೆಯ ದಿನಚರಿ:

It was on the August 10 of 1924 that I left off writing in my dairy. Mysteriously enough it came to my mind while I was reading Tolstoy’s most phychological novel Resurrection’, That I should again keep my dairy because it aids us to introspect. I searched for my old dairy which was lying in some waste paper box and looked into it. There I found that just a year before, on the very same day, I left off. Writing, that gave a kind of mysterious pleasure to think that chance should be so symmetrical and,… The novel of Tolstoy impressed me deeply.  I am studying Tolstoy for the past 15 days. His greatness, not merely intellectual greatness, has stirred in me feelings of deepest reverence towards him. In his  In his ‘confusion’, his feeling are all most akin to my own feelings though I feel that I felt the meaning of life sooner and easier than he hid…

Y.M asked me: What is your pocket?

I replied that there is Brahmaanda (Universe)

He asked “Have you brought anything to eat ?” “ Yes”, I said” I
have brought you flowers of songs”, He laughed.
I often thought to write a criticism of
Tolstoy and his philosophy, Om Peace peace.
Mother, light my heart”.

(೧೯೨೫ನೆಯ ಅರ್ಗ್ಟ ೧೦ ರಂದು ನಾನು ದಿನಚರಿ ಬರೆಯುವುದನ್ನು ನಿಲ್ಲಿಸಿದ್ದೆ.  ಆಶ್ಚರ್ಯ ಎನ್ನುವಷ್ಟರ ಮಟ್ಟಿಗೆ, ಅದು ಮತ್ತೇ ನನ್ನ ಮನಸ್ಸಿಗೆ ಬಂದದ್ದು, ನಾನು ಟಾಲಸ್ಟಾಯಿ ಅವರ ಅತ್ಯಂತ ಮನೋವೈಜ್ಞಾನಿಕವಾದ ಕಾದಂಬರಿ, “ರಿಸೆಕ್ಷನ್” ಅನ್ನು ಓದುತ್ತಿದ್ದಾಗ, ನಾನು ಪುನಃ ದಿನಚರಿ ಬರೆದಿಡಬೇಕೆಂದು, ಏಕೆಂದರೆ ಹಾಗೆ ಬರೆದಿಡುವುದರಿಂದ ನಮ್ಮ ಅಂತರವಲೋಕನಕ್ಕೆ ತುಂಬ ಸಹಾಯ ಒದಗುತ್ತದೆ. ನಾನು ನನ್ನ ಹಳೆಯ ಡೈರಿ ಹುಡುಕಿದೆ. ಅದು ಒಂದು ರಟ್ಟಿನ ಕಸದ ಪೆಟ್ಟಿಗೆಯಲ್ಲಿ ಬಿದ್ದಿತ್ತು. ಅದನ್ನು ಎತ್ತಿಕೊಂಡು ಅವಲೋಕಿಸಿದೆ. ನೋಡುತ್ತೇನೆ: ಒಂದು ವರ್ಷದ ಹಿಂದೆ, ಅದೇ ತಾರೀಖಿನಲ್ಲಿ, ದಿನಚರಿ ಬರೆಯುವುದನ್ನು ನಿಲ್ಲಿಸಿದ್ದೆ. ನನಗೆ ಏನೋ ಒಂದು ಪವಾಡಾನುಭವದ ರಹಸ್ಯಾನಂದವಾಯಿತು. ಕಾಕತಾಳಿಯವಾದ ಆಕಸ್ಮಿಕವೂ ಕೂಡ ಇಷ್ಟೊಂದು ಸಮಸೂತ್ರವಾಗಿ ಉದ್ದೇಶಪೂರ್ವಕವಾಗಿರುವಂತಿದೆಯಲ್ಲಾ ಎಂದು…! ಟಾಲ ಸ್ಟಾಯ್ ನ ಕಾದಂಬರಿ ನನ್ನ ಲೆ ಗಂಭೀರ ಪರಿಣಾಮ ಉಂಟು ಮಾಡಿತು. ಕಳೆದ ೧೫ ದಿನಗಳಿಂದಲೂ ನಾನು ಟಾಲ ಸ್ಟಾಯಿನ ಕೃತಿಗಳನ್ನು ಅಧ್ಯಯನ ಮಾಡುತ್ತಿದ್ದೇನೆ. ಆತನ ಮಹತ್ತು, ಬರಿಯ ಬೌದ್ಧಿಕ ಹಿರಿಮೆ ಮಾತ್ರವಲ್ಲ! ನನ್ನ ಹೃದಯದಲ್ಲಿ ಆತನ ಪರವಾಗಿ ಅತೀವ ಗೌರವಭಾವನೆಯನ್ನು ಮೂಡಿಸಿದೆ. ಆತನ ‘ತಪ್ಪೊಪ್ಪಿಗೆ’ಯಲ್ಲಿ (Confussions) ವ್ಯಕ್ತವಾಗಿರುವ ಸಂವೇದನೆಗಳು ಸ್ವಲ್ಪ ಹೆಚ್ಚು ಕಡಮೆ ನನ್ನ ಸಂವೇದನೆಗಳಿಗೆ ಅತ್ಯಂತ ನಿಕಟವಾಗಿವೆ. ನಾನು ಆತನಿಗಿಂತಲೂ ಬಹುಬೇಗನೆ ಸುಲಭವಾಗಿಯೇ ಜೀವನದ ಅರ್ಥವನ್ನು ಗ್ರಹಿಸಿದೆನೆಂದು ಭಾವಿಸುತ್ತೇನೆಯಾದರೂ…! ವೈ.ಎಂ. ಕೇಳಿದರು:  “ಏನು ನಿಮ್ಮ ಜೇಬಿನಲ್ಲಿರೋದು….  ನಾನೆಂದೆ ; “ಬ್ರಹ್ಮಾಂಡ”! ಅವರು ಕೇಳೀದರು ; “ಏನಾದರೂ ತಿನ್ನಲು ತಂದಿದ್ದೀರಾ”. ಹೌದು” ನಾನೆಂದೆ”, ನಿಮಗಾಗಿ ತಂದಿದ್ದೇನೆ ಕೆಲವು “ಗೀತ ಕುಸುಮಗಳನ್ನು!” ಅವರು ನಕ್ಕರು.[1]

ಅನೇಕ ಸಾರಿ ಯೋಚಿಸಿದ್ದೇನೆ. ಟಾಲ್ ಸ್ಟಾಯಿ ಮತ್ತು ಆತನ ತತ್ವ ದೃಷ್ಟಿಯನ್ನು ಕುರಿತು ವಿಮರ್ಶೆ ಬರೆಯಬೇಕೆಂದು. ಓಂ ಶಾಂತಿಃ ಶಾಂತಿಃ ಶಾಂತಿ ತಾಯಿ, ಬೆಳಗಮ್ಮಾ ನನ್ನ ಒಳಗನ್ನು!”)

ಆಗಸ್ಟ್ ೧೧, ೧೯೨೫ರ ದಿನಚರಿ:   

“ಕಾಲೇಜಿನ ಕರ್ಣಾಟಕ ಸಂಘದ ಸಭೆಗೆ ಯೋಗಿದ್ದೆ. ‘ಪ್ರಕೃತಿ ಸೌಂದರ್ಯ’ ಎಂಬ ವಿಷಯದ ಮೇಲೆ ಮಾತನಾಡಲು ಒಪ್ಪಿಕೊಂಡಿದ್ದೇನೆ. ಶ್ರೀಮಾನ್ ಬಿ.ಕೃಷ್ಣಪ್ಪ, ಎಂ.ಎ. (B.Krishnappa Esq. M.A.!) ನಮ್ಮ ಕನ್ನಡ ಪ್ರೋಫೇಸರ ಅವರು ನನ್ನನ್ನು ಸಲುಗೆಯಿಂದ ವಿನೋದಕ್ಕಾಗಿ, ‘The budding poet Rabindranath Tagore” (ಅರಳೂವ ಮೊಗ್ಗೆ ಕವಿ ರವೀಂದ್ರನಾಥ ಠಾಕೂರ‍್) ಎಂದು ಕರೆದರು. ಇಡೀ ತರಗತಿ ಚಪ್ಪಾಳೆ ತಟ್ಟಿತು; ನನಗೆ ಒಂದು ತಹದ ತುಂಬಾ ನಾಚಿಕೆಯಾಯಿತು, ಕುಗ್ಗಿ ನೆಲಕ್ಕೆ ಸೇರಿಬಿಟ್ಟಂತಾದೆ. ನಿಜ, ಆ ಮಹಾಕವಿಯ ಚೈತನ್ಯ ನನ್ನಲ್ಲಿಯೂ ಜ್ವಲಿಸುತ್ತಿದೆ; ಆದರೆ ಹಾಗೆ ಕರೆಸಿಕೊಳ್ಳುವುದು ಅಪಾಯಕರ. ಆದರೂ ಮನದಲ್ಲಿಯೇ ನಾನು ವಿನಯಪೂರ್ವಕವಾಗಿ ತಾಯಿ ಜಗನ್ಮಾತೆಗೂ ಮತ್ತು ಆ ಕವಿಗೂ ನಮಸ್ಕರಿಸಿ ಅಂತಹ ಹೆಸರಿಗೆ ನನ್ನನ್ನು ಅರ್ಹನನ್ನಾಗಿ ಮಾಡಲು ಬೇಡಿಕೊಂಡೆ: (The whole class clapped, and I felt a kind humiliation, I was almost abashed. True it is, the spirit of that great Poet burns also in me, but it is dangerous to be called like that. Yet I bowed subjectively to the Mother and to the Poet and asked them to make me worthy of such name!) ಸಂಜೆ ನಾನು ಮಾವಿನ ತೋಪಿಗೆ (ಚಾಮುಂಡಿ ಬೆಟ್ಟದ ಬುಡದಲ್ಲಿರುವ) ಹೋಗಲಿಲ್ಲ.[2] ಬದಲಾಗಿ ಎಚ.ಬಿ.ನಂಜಯ್ಯನೊಡನೆ ಇಸ್ಪೀಟು ಆಡಿದೆ.  ಅವರು ನನ್ನ ಮೂರು ಫೋಟೋ ತೆಗೆದುಕೊಂಡರು. ಓಂ! ವಿವೇಕಾನಂದ – ರಾಮಕೃಷ್ಣ ! ಓಂ ಮಾತೆ! ದಿವ್ಯ ಮಾತೆ!:”

೧೯೨೫ನೆಯ ಅಗಸ್ಟ್ ೧೨ನೆಯ ದಿನಚರಿ:   

“ಇವೊತ್ತು ‘ಜಯಕರ್ನಾಟಕ’ ಮಾಸಪತ್ರಿಕೆಗೆ ನನ್ನ ಎರಡು ಕವನಗಳನ್ನೂ- ‘ಗೀತ’ ಮತ್ತು ‘ತವರೂರು’ – ಮತ್ತು ಒಂದು ಸಣ್ಣ ಕಥೆ ‘ಮಾತಾಪಿತೃ ಭಕ್ತಿ’ ಎಂಬುವುದನ್ನು ಕಳಿಸಿದೆ. ನನ್ನ ಅನೇಕ ಇಂಗ್ಲೀಷ ಕವನಗಳನ್ನು ಕರಡು ಪುಸ್ತಕದಿಂದ ಉತ್ತಮ ಹಸ್ತಪ್ರತಿಗೆ ಎತ್ತಿ ಬರೆದೆ”.

೧೯೨೫ನೆಯ ಆಗಸ್ಟ ೨೨ನೆಯ ದಿನಚರಿ:

“ಇವೊತ್ತು ನಾನೊಂದು ಕನ್ನಡ ಭಾವಗೀತೆ ರಚಿಸಿದೆ,‘ ಇನೋದಯ’ ಎಂಬ ಹೆಸರಿನಲ್ಲಿ. ನಮ್ಮ ಲೋಟಸ್ ಲೀಫ್ ಯೂನಿಯನ್ನಿನ ಮೀಟಿಂಗಿಗೆ ಹೋದೆ.  ತರುವಾಯ ಸ್ನೇಹಿತರ ಜೊತೆ ಸಂಚಾರ ಹೋದೆ. ರೂಮಿಗೆ ಬಂದು, ಊಟ ಮುಗಿಸಿ ಶ್ರೀರಾಮಕೃಷ್ಣ ಪರಮಹಂಸ ದೇವನ ಜೀವನ ಚರಿತ್ರೆ ಓದಲು ತೆಗೆದುಕೊಂಡೆ. ಆ ಪುಸ್ತಕ ತೆಗೆದುಕೊಂಡವನು, ಹಾಗೆಯೆ ಸುಮ್ಮನೆ ತೆರೆದರೆ, ೪೨೫ನೆಯ ಪುಟದಲ್ಲಿರುವ ನನ್ನ ಗುರುದೇವನ ಭಾವಚಿತ್ರ ನನ್ನತ್ತ ನಗೆಬೀರಿತು! ಆ ಪಟವನ್ನು ನಿರ್ನಿಮೇಷನಾಗಿ ಈಕ್ಷಿಸುತ್ತಿರಲು ಏನೋ ಒಂದು ನನ್ನ ಶರೀರ ಪ್ರವೇಶ ಮಾಡಿದಂತಾಗಿ, ನನ್ನನ್ನು ನಡುಗುವಂತೆ ಮಾಡಿತು. ದಿನವೂ ಆತನು ಮಲಗುವ ಸಮಯದಲ್ಲಿ ನನ್ನ ಗುರುದೇವನ ಮನಸ್ಸಿನಲ್ಲಿ ಸಂಚರಿಸುತ್ತಿದ್ದ. ಚಿಂತನಗಳತ್ತ ನನ್ನ ದೃಷ್ಟಿ ಬಿದ್ದಿತು: (Every night, as I went to bed, two visions floated before my mind’s eye. ಇತ್ಯಾದಿ) ಪ್ರತಿ ರಾತ್ರಿಯೂ ನಾನು ಹಾಸಗೆ ಮೇಲೆ ಮಲಗಿದೊಡನೆ ಎರಡು ಜೀವನ ಚಿತ್ರಗಳು ನನ್ನ ಒಳಗಣ್ಣಿಗೆ ಕಾಣಿಸಿಕೊಳ್ಳುತ್ತಿದ್ದುವು. ಅವುಗಳಲ್ಲಿ , ಒಂದರಲ್ಲಿ ನಾನು ಲೌಕಿಕ ಜೀವನದ ಅತ್ಯಂತ ವಿಜಯಾ ವ್ಯಕ್ತಿಯಾಗಿ ಸಮಾಜದ ಅತ್ಯುನ್ನತ ಅಗ್ರಸ್ಥಾನದಲ್ಲಿ ಇರುವಂತೆ ಚಿತ್ರಿತವಾಗುಗುತ್ತಿತ್ತು.  ಆಗ ನನಗನಿಸುತ್ತಿತ್ತು, ಅಂತಹ ಸ್ಥಾನ ಸಂಪಾದನೆಗೆ ಬೇಕಾದ ಎಲ್ಲಾ ಸಾಮರ್ಥ್ಯವೂ ನನಗಿದ್ದೇ ಇದೆ ಎಂದು. ಆದರೆ ಮರು ಕ್ಷಣದಲ್ಲಿಯೆ ನನ್ನ ಅಂತಶ್ಚಕ್ಷುವಿಗೆ ಬೇರೊಂದು ಚಿತ್ರ ಹೊಳೆದು ನಿಲ್ಲುತ್ತಿತ್ತು.  ಅದರಲ್ಲಿ ನಾನು ಕೌಪೀನವುಟ್ಟು, ಕಾಷಾಯವಸ್ತ್ರಧರಿಯಾಗಿ, ಪರಿವ್ರಾಜಕ , ಸಂನ್ಯಾಸಿಯಾಗಿ ಮಾಧುಕರೀ ಭಿಕ್ಷೆಯಿಂದ ಬದುಕುತ್ತಾ, ತರುತಲಗಳಲ್ಲಿ ರಾತ್ರಿಗಳನ್ನು ಕಳೆಯುತ್ತಾ, ಭಗವತ್ ಕೃಪೆಯೊಂದನ್ನೇ ಏಕಮಾತ್ರ ಆಶ್ರಯವನ್ನಾಗಿ ನೆಮ್ಮಿದವನಾಗಿರುತ್ತಿದ್ದೆ. ಆ ಬದುಕನ್ನೂ ನಾನು ಬಾಳಬಲ್ಲೆನೆಂಬ ದೃಢ ವಿಶ್ವಾಸ ನನಗಿರುತ್ತಿತ್ತು. .. ಓದುತ್ತಿದ್ದಂತೆಯೇ ಮತ್ತೇ ನನ್ನ ಮೈನವಿರೆದ್ದು ಪ್ರಕಂಪಿಸಿತ್ತು! (I said to myself I may probably be born to become a Sanyasi) ನನಗೆ ನಾನೇ ಹೇಳಿಕೊಂಡೆ, ಬಹುಶಃ ನಾನೂ ಸಂನ್ಯಾಸಿಯಾಗಲು ಹುಟ್ಟುತ್ತೇನೆಯೋ ಏನೋ?”

ದಿನಚರಿಯನ್ನು ಇಂಗ್ಲೀಷಿನಲ್ಲಿ ಬರೆಯುತ್ತಿದ್ದುದರಿಂದಲೋ ಏನೋ ವಾಕ್ಯ ರಚನೆ ಮುಂದಿನ ಜನ್ಮಕ್ಕೆ ಅನ್ವಯವಾಗುವಂತಾಗಿಬಿಟ್ಟಿದೆ. ಬಹುಶಃ ಕನ್ನಡದಲ್ಲಿಯೇ ಬರೆದಿದ್ದರೆ “ನನಗೆ ನಾನೇ ಹೇಳಿಕೊಂಡೆ, ಬಹುಶಃ ನಾನೂ ಸಂನ್ಯಾಸಿಯಾಗಲೆಂದೇ ಹುಟ್ಟಿದ್ದೇನೆಯೋ ಏನೋ?” ಎಂದು ಅರ್ಥವಾಗುವಂತೆ ಬರೆಯುತ್ತಿದ್ದನೆಂದು ಅನುಮಾನಿಸುತ್ತೇನೆ.

೧೯೨೫ನೆಯ ಸೆಪ್ಟೆಂಬರ ೯ನೆಯ ದಿನಚರಿ:  

“ಬೆಳಿಗ್ಗೆ ನನ್ನ ತಮ್ಮನನ್ನು ಊರಿಗೆ ಕಳಿಸಿದೆ. (ರೈಲು ನಿಲ್ದಾಣದಿಂದ) ರೂಮಿಗೆ ಹಿಂದಿರುಗಿದಾಗ ‘ಅಯ್ಯಾ ಸ್ವಾಮಿ, ಕೊಡಗಿನಿಂದ ನಿಮ್ಮ ಸ್ನೇಹಿತರು ಬಂದಿದ್ದಾರೆ’ ಎಂದು ಹೇಳೀದರು. ಬಂದವರು ಉತ್ಸಾಹಿಜೀವಿ ಎಚ್.ಜಿ.ರುದ್ರಪ್ಪ ಅವರಾಗಿದ್ದರು. ‘ಟಾಲ್ ಸ್ಟಾಯ್ ಮತ್ತು ‘ಯಂಗ್ ಇಂಡಿಯಾ’ ಓದಿದೆ.  ಅಭ್ಯಾಸವಿಲ್ಲದ ಒಂಟಿತನ ಹೃದಯದ ಮೇಲೆ ಭಾರವಾಗಿತ್ತು (ತಮ್ಮ ತಿಮ್ಮಯ್ಯನನ್ನು ಕಳಿಸಿ ಕೊಠಡಿಯಲ್ಲಿ ಒಬ್ಬನೇ ಇರಬೇಕಾದುದನ್ನು ಕುರಿತು ಈ ಟೀಕೆ. The burden of unwanted loneliness weighed heavy upon me) ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯನ್ನು ಓದಲೆಂದು ತೆರೆಯುತ್ತಿದ್ದಂತೆಯೇ ಎಚ್.ಜಿ.ರುದ್ರಪ್ಪನವರು ಬಾಗಿಲು ತಟ್ಟಿದರು.  ತೆರೆದು ಸ್ವಾಗತಿಸಿದೆ.  ನನ್ನ ಕೆಲವು ಕನ್ನಡ ಭಾವಗೀತೆಗಳನ್ನು ಅವರಿಗಾಗಿ ಹಾಡಿದೆ. ಅಲ್ಲದೆ ನನ್ನ ಕೆಲವು ಗದ್ಯದ ಬರವಣಿಗೆಗಳನ್ನೂ ತೋರಿಸಿದೆ.  ಉತ್ತಮತರ ಸೇವಾಕಾರ್ಯಕ್ಕಾಗಿ ನನ್ನಿಂದ ಬೀಳುಕೊಂಡರು. ಬೆಂಗಳೂರಿನಿಂದ ಒಬ್ಬರು ಕುರುಡರನ್ನು ಜೊತೆಗೆ ಕರೆತಂದಿದ್ದರು.  ಅವರು ಅವರ ಮನೆಯವನ್ನು ನೋಡುವ ಆಸೆಯಿಂದ ಅವರ ಹುಟ್ಟೂರಿಗೆ ಹೋಗುತ್ತಿದ್ದರು.  ಅವರನ್ನು ಅಲ್ಲಿಗೆ ಕಳಿಸುವ ಏರ್ಪಾಡು ಮಾಢಬೇಕಾಗಿದ್ದತಂತೆ. ನಾನು ನಮ್ಮ ಕನ್ನಡ ಫ್ರೊಫೆಸರ‍್ ಬಿ.ಕೃಷ್ಣಪ್ಪನವರನ್ನು ಕಾಣಲು ಹೋಗಬೇಕಿತ್ತು.  ಆದರೆ ರುದ್ರಪ್ಪ ನನ್ನನ್ನು ತಮ್ಮ ಜೊತೆ ಲಲಿತಾದ್ರಿಗೆ ಬರುವಂತೆ ಕರೆದರು.  ನಾನು ಒಪ್ಪಿದೆ.  ಒಂದು ಸುಂದರ ದೃಶ್ಯವನ್ನು ಕಾಣುವ ಅವಕಾಶ ಒದಗಿತೆಂದು. ಊಟ ಮಾಡಿ ಚೆನ್ನಾಗಿ ನಿದ್ದೆ ಹೊಡೆದೆ. ಬಹಳ ಹೊತ್ತಿನ ಮೇಲೆ ರುದ್ರಪ್ಪನವರು ಬಂದರು.   ಅವರಿಗೆ ಟಾಲಸ್ಟಾಯಿ ಅವರ ಪರಿಚಯ ಹೇಳಿ, ಆ ಮಹಾ ರಷ್ಯನ್ ಸಾಹಿತಿಯ ಕೃತಿಗಳಿಂದ ಓದಿ, ಆತನ ಮಹತ್ತನ್ನು ಹೊಗಳಿದೆ. ಆತನನ್ನು ಸ್ವಲ್ಪಮಟ್ಟಿಗೆ ಮೋ.ಕ.ಗಾಂಧಿಯವರಿಗೆ ಹೋಲಿಸಿದೆ, ಆ ಮೇಲೆ ಲಲಿತಾದ್ರಿಗೆ ಹೋಗಲು ಹೊರಟು ಕೊಠಡಿಗೆ ಬೀಗ ಹಾಕಿದೆ. ಹೋಟೇಲಿಗೆ ಹೋಗಿ ಕಾಫಿ ತಿಂಡಿ ತೆಗೆದುಕೊಂಡೆವು. ಮತ್ತೇ ಮಾರ್ಕೆಟಿಗೆ ಹೋಗಿ ಹಣ್ಣು ಕೊಂಡೆವು. ಆಮೇಲೆ ನಮ್ಮ ಮಧುರ ಪ್ರಯಾಣವನ್ನು ಮುಂದುವರೆಸಿದೆವು. ಗಂಭೀರ ವಿಷಯಗಳನ್ನೂ ತಾತ್ವಿಕ ವಿಚಾರಗಳನ್ನೂ ಕುರಿತು ಮಾತನಾಡುತ್ತಾ, ಈಶ್ವರ ಸಾಕ್ಷಾತ್ಕಾರದ ಸ್ವರೂಪದ ಚರ್ಚೆಯು ನಡೆಯಿತು. ಸುತ್ತಲಣ ಪ್ರಕೃತಿ ಸೌಂಧರ್ಯವೂ ನಮ್ಮ ಮನಸ್ಸನ್ನು ಆಕರ್ಷಿಸಿತ್ತು,. ಮೈಸೂರಿನ ಈ ನಂದನದಲ್ಲಿ ನಾನು ಅನುಭವಿಸಿದ ಆನಂದದ ಸಂಪತ್ತನ್ನು ವರ್ಣಿಸಲು ಒಂದು ಪ್ರತ್ಯೇಕ ಪ್ರಬಂಧವೇ ಬೇಕಾಗುತ್ತದೆ.  ಇಲ್ಲಿ (ಲಲಿತಾದ್ರಿಯಲ್ಲಿ) ಪ್ರಕೃತಿ, ಕಲೆ, ಮತ್ತು ವಿಜ್ಞಾನ ಮೂರು  ಒಂದರೊಡನೊಂದು ಹಸ್ತಲಾಘವ ಕೊಡುತ್ತಿರುವಂತಿದೆ.  ಕೊಂಡು ಹೋಗಿದ್ದ ಹಣ್ಣುಗಳನ್ನು ತಿಂದೆವು- ನಮ್ಮ ಅತಿಥಿಯಾಗಿದ್ದ ಕಾವಲು ಹುಡುಗನನ್ನೂ ಆಹ್ವಾನಿಸಿ, ಆನಂತೂ ಆ ನಂದನದ ಏಕ ಮಾತ್ರ ಯಜಮಾನನಾಗಿದ್ದ. ಸೈತಾನನ ಸಕಲ ಪ್ರಲೋಭಗಳಿಂದ ದೂರವಾಗಿದ್ದಂತೆ ತೋರಿ ತುಂಬ ಸಂತೋಷಪ್ರದವಾಗಿತ್ತು. ನನ್ನ ಕೆಲವು  ರಚನೆಗಳನ್ನು ನಾವಿಬ್ಬರೂ ಹಾಡಿದೆವು.  ಆ ಮೇಲೆ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹಿಂತಿರುಗಿ ಹೊರಟೇವು. ಆಗಲೆ ಕತ್ತಲಾಗಿತ್ತು. ನಾವು ಬೂಲಿವಾರ್ಡಿನ ಬಳಿಗೆ ಬರುವಷ್ಟರಲ್ಲಿ ದೀಪಗಳೆಲ್ಲ ಹೊತ್ತಿಕೊಂಡಿದ್ದವು.  ಅರಮನೆಯಂತೂ ‘ಬೆಂಕಿ ಹೊತ್ತಿದಂತ್ತಿತ್ತು’  ರುದ್ರಪ್ಪಗೆ ಹೇಳತೀರದ ಸಂತೋಷ ಅದನ್ನು ಕಂಡು. ಅರಮನೆಯ ಗೇಟಿನೊಳಗೆ ಹೋಗುವ ಆಶೆ ತೋರಿದರು, ಆದರೆ ನಾನು ಒಪ್ಪಲಿಲ್ಲ. ಪ್ರಕೃತಿಯ ನಿಭೃತ ಸ್ಥಾನಗಳ ಪ್ರಶಾಂತಿಯನ್ನು ದಸರಾದಂತಹ ಪ್ರದರ್ಶನಶೀಲವಾದ ವೈಭವದ ಗಲಭೆಗೆ ಹೋಲಿಸಿ ಅವಲಕ್ಕಿರುವ ವೈದೃಶ್ಯವನ್ನು ಕುರಿತು ಆಡಿದೇವು.[3] ನಮ್ಮ ನಮ್ಮಲ್ಲಿಯೆ ವಾಗ್ವಾದ ಪ್ರಾರಂಭವಾಯಿತು.  ರಾಜತ್ವವನ್ನೇ ನಾನು ಖಂಡಿಸಿದೆ.  ಏಕೆಂದರೆ ಅದು ನಮ್ಮನ್ನು ಅಡಿಯಾಳು ಮಾಡಿ ಕಿಳುಗೊಳಿಸುತ್ತದೆ ಎಂದು ನಾವು ಯಾವ ಇತ್ಯರ್ಥಕ್ಕೂ ಬರಲು ಸಾಧ್ಯವಾಗದೆ ಚರ್ಚೆ, ಭಿನ್ನಾಭಿಪ್ರಾಯದಲ್ಲಿಯೆ ಮುಕ್ತಾಯವಾಯಿತು; ಅಂತೂ ಕಡೆಗೆ ನನ್ನ ಸ್ನೇಹಿತರ ಸಂತೋಷಕ್ಕಾಗಿ ನಾನು ಶರಣಾಗಬೇಕಾಯಿತು; ಅರಮನೆಯ ಗೇಟನ್ನು ಪ್ರವೇಶಿಸಿದೇವು. ಉದ್ದಕ್ಕೂ ಇಬ್ಬರು ಚರ್ಚೆ ಮಾಡುತ್ತಲೇ ಇದ್ದೇವು. ನಾನೆಂದೆ; ಇಂತಹ ತೋರಿಕೆಯ ವೈಭವದ ಮಧ್ಯೆ ಆತ್ಮಕ್ಕೆ ಆತ್ಮಸ್ಪರ್ಶವಾಗುವುದಿಲ್ಲ. ಈ ತರಹದ ಬೋಗ ಐಶ್ವರ್ಯದ ಬೆಡಗಿಗೆ ಮರಳಾಗುವುದು ಮನುಷ್ಯರಲ್ಲಿರುವ ಪಶುತ್ವವೆ ಹೊರತು ಮತ್ತೇನಲ್ಲ.[4] ಆಮೇಲೆ ಕೊಠಡಿಗೆ ಹಿಂಗಿರುಗಿದ್ದೇವು. ಮತ್ತೇ ನಾನೆ ಚರ್ಚೆ ಮರುಕೋಳೀಸಿದೆ.  ನಾನಂತೂ ಘಟಿಕೋತ್ಸವಾದಿಗಳೀಗೆ ಹೋಗಿ ಮಹಾರಜರ ಮುಂದೆ ತಲೆಬಾಗಿ ಸೊಂಟ ಬಗ್ಗಿಸುವುದಿಲ ಎಂದೆ. ನಾವು ರಾಜರೆ ರಾಜನೊಬ್ಬ ನನ್ನನ್ನು ಆಮಂತ್ರಿಸಿದರೆ ನಾನು ಅದನ್ನು ತಿರಸ್ಕರಿಸುತ್ತೇನೆ ಎಂದೂ ಅಂದುಬಿಟ್ಟೆ, ಅದರೆ ವ್ಯಕ್ತಿಯಾಗಿ ಯಾವ ರಾಜನ ಮೇಲೆಯೂ ನನಗೆ ದ್ವೇಷವಿಲ್ಲ. ತರುವಾಯ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯಿಂದ ಕೆಲವು ಭಾಗಗಳನ್ನು ಓದಿದೆ. ಅಲ್ಲಿರುವ ಬ್ರಜೇಂದ್ರನಾಥಶೀಲರ ಬರಹದಿಂದ ಉದ್ ಧೃತವಾದ ಭಾಗವನ್ನೂ ಓದಿದೆ. ಮನಸ್ಸಿಲ್ಲದ ಮನಸ್ಸಿನಿಂದ ನಮಸ್ಕಾರ ಮಾಡಿ ಕೈಕುಲುಕಿ ಒಬ್ಬರನೊಬ್ಬರೂ ಬಿಳ್ಕೊಂಡೆವು.

ಈ ಸ್ಮರಣೀಯ ಸಂಜೆಯನ್ನು ನಾನು ಮರೆಯುವುದಿಲ್ಲ. ಏಕೆಂದರೆ ನಾನು ಅದುವರೆಗೂ ಇತರರಿಗೆ ಹೇಳದಿದ್ದದನ್ನು  ಇಂದು ಬಿಚ್ಚು ಮನಸ್ಸಿನಿಂದ ಆಡಿಬಿಟ್ಟಿದ್ದೆ.

ಓಂ ಶಾಂತಿಃ ಶಾಂತಿಃ ಶಾಂತಿಃ

೧೯೨೫ನೆಯ ಅಕ್ಟೋಬರ ೭ನೆಯ ದಿನಚರಿ:

“ಬೆಳಿಗ್ಗೆ ಶ್ರೀ ರಾಮಚಂದ್ರ ಶೆಟ್ಟಿ ಅವರೆಡೆಗೆ ಹೋಗಿದ್ದೆ. ಅವರು ‘Confidential talks to young men’ (ತರುಣರಿಗೆ ಗೋಪ್ಯ ಹಿತವಚನ) ಓದುತ್ತಿದ್ದರು. ನಾನು ಕೆಲವು ಪುಟಗಳನ್ನು ಓದಿ, ಆ ವಿಚಾರವಾಗಿ ಚರ್ಚಿಸಿದೆ. ಗ್ರಂಥಕರ್ತರ ಮೃದುವಾದ ಹಾಸಗೆ, ಮೋಹಕ ಸ್ಪರ್ಶ, ಮೆತ್ತನೆಯ ಸೊಗವೀವ ಯಾನಗಳು ಮತ್ತು ಸಿಹಿ ಪದಾರ್ಥಗಳು ಇತ್ಯಾದಿಗಳನ್ನು ನಿಷೇದಿಸುತ್ತಾರೆ ಬ್ರಹ್ಮಚಾರಿಯಾದವನಿಗೆ, ನಾನೂ ಮೆತ್ತನೆಯ ಹಾಸಗೆ ಬಳಸಬಾರದೆಂದು ದೃಢನಿಶ್ಚಯ ಮಾಡಿದ್ದೇನೆ.

ತಾಯೀ, ನೀನು ನಿತ್ಯವೂ ನನಗೆ ಬೆಳಕು ನೀಡುತ್ತಿದ್ದೀಯೆ. ಆದರೆ ನಾನು ಎಷ್ಟೋ ಸಾರಿ ಕಣ್ಣು ಮುಚ್ಚಿಕೊಂಡು ಕತ್ತಲೆಯಾಗಿದೆ ಎಂದು ಭಾವಿಸುತ್ತೇನೆ! ಬಾರಮ್ಮಾ ನನಗೆ ನೆರವಾಗು; ಬಂದೆನ್ನ ಸಲಹು, ಬದುಕಿನ ಅಶ್ಲೀಲಕ್ರಿಯೆಗಳಿಂದ ನನ್ನನ್ನು ಪಾರುಮಾಡಿ!”

೧೯೨೫ನೆಯ ಅಕ್ಟೋಬರ ೮ನೆಯ ದಿನಚರಿ:

“ಇವೊತ್ತು ನಾನು ಎರಡು ಕನ್ನಡ ಭಾವಗೀತೆಗಳನ್ನು ಬರೆದೆ, ಒಂದು ‘ಮನಸ್ಸು ಮತ್ತು ಹೃದಯ’ ಮತ್ತೊಂದು ‘ಎಳೆಬಿಸಿಲು’. ಮೊದಲನೆಯದನ್ನು ‘ಸಂಪದಭ್ಯುದಯ’ ಕ್ಕೆ ಕಳಿಸಿದ್ದೇನೆ. ನಾನು ಮತ್ತು ಶ್ರೀ ಅಬ್ದುಲ್ ಖುದ್ದೂಸ್ ಇಬ್ಬರೂ ಅನೇಕ ವಿಚಾರ ಮಾತಾಡುತ್ತಾ ಕುಕ್ಕನಳ್ಳಿ ಕೆರೆಯೇರಿಯ ಮೇಲೆ ವಾಕಿಂಗ್ ಹೋದೆವು”.

೧೯೨೫ನೆಯ ಅಕ್ಟೋಬರ ೯ನೆಯ ದಿನಚರಿ :

ನೆನಪಿಟ್ಟುಕೊ! (Remember) ಮೆಲುಗಾಳಿ ಸಿಳ್ಳಿಡುತ್ತಿದೆ. ಆಃ ವಿಶ್ವವೇ! ಅಃ ರಹಸ್ಯವೆ! ಅಃ ಕಾಲದೇಶಗಳ ಭವ್ಯ ಲೀಲೆಯೆ! (Ah play sublime of space and time!) ದನಗಾಹಿಗಳು ಮನೆಯ ಕಡೆಗೆ ಮುಖ ಹಾಕಿದ್ದಾರೆ. ಅಮ್ಮಾ ನಿನ್ನ ತೋಳುಗಳಲ್ಲಿ ನನ್ನೆತ್ತಿಕೊಂಡು ಮುದ್ದಿಸಮ್ಮಾ, ನಿನ್ನ ಈ ಭಯಂಕರ ಶಕ್ತಿಯ ಅಭಿವ್ಯಕ್ತಿಯನ್ನು ಕಂಡು ನಾನೆಲ್ಲಿಯಾದರೂ ಕಂಗೆಟ್ಟು ಮೂರ್ಛೆಬಿದ್ದೆನು! (Mother, caress me in they arms lest I should be baffled at the might)…

ಒಂದು ಸಣ್ಣ ಓತಿಕ್ಯಾತ ನನ್ನ ಕಣ್ಣಿಗೆ ಬಿತ್ತು. ಅದನ್ನು ನೋಡುತ್ತಾ ನಿಂತುಬಿಟ್ಟೆ ಎವೆಯಿಕ್ಕದೆ. ಈ ವಿಶ್ವ ಬ್ರಹ್ಮದಲ್ಲಿ ಅದರ ಸ್ಥಾನ ಏನು? ‘ಸೋ~ಹಂ’ ಎಂದು ಅದು ಹೇಳಿಕೊಳ್ಳುತ್ತದೆಯೆ? ಖ್ಯಾತಿದು ಬಯಸುತ್ತದೆಯೆ? ಪ್ರೀತಿಯಲ್ಲು ಬದುಕುತ್ತದೆ., ಪ್ರೀತಿಯಲ್ಲಿಯೆ ಸಾಯುತ್ತದೆ.  ನಾನೇನು ಅದಕ್ಕಿಂತಲೂ ಹೆಚ್ಚೆ? ಆಗಿದ್ದರೆ ಹೇಗೆ? ಅದ್ಭುತವಾಗಿದೆ ಅದರ ತೃಪ್ತಿ. ಅದನ್ನು ಕುರಿತು ನಾನೊಂದು ಕವನ ರಚನೆ ಮಾಡಬಹುದು.

I Met a tiny little Chameleon! I stood gazing at it. What is its position in the universe? Does it say ‘AM HE’? Does it aspire for fame? It lives in love and dies in love. Am I any greater than it is? If so how? Marvellous is its contention! I may write a poem upon it…”

೧೯೨೫ನೆಯ ಅಕ್ಟೋಬರ ೨೨ನೆಯ ದಿನಚರಿ:

“ಬೆಟ್ಟದ ಕಡೆಗೆ ಸಂಚಾರ ಹೋಗಿದ್ದೆ. ಕೆಲವು ದಿನಗಳಿಂದ ನಾನು ಒಂದು ಆತ್ಮಕಥಾತ್ಮಕವಾದ ನಾಟಕವನ್ನಾಗಲಿ, ಕಾದಂಬರಿಯನ್ನಾಗಲಿ ಬರೆಯಬೇಕೆಂದು ಯೋಚಿಸುತ್ತಿದ್ದೆನೆ.  ಬೆಟ್ಟದ ಬುಡಕ್ಕೆ ಹೋಗಿ ಒಂದು ಮರದ ಬಳಿ ಅದರ ಅಡಿ ಕುಳಿತೆ. ಬದುಕಿನ ಮತ್ತು ಸೃಷ್ಟಿಯ ನಿಗೂಢತೆ ಹೃದಯವನ್ನೆಲ್ಲ ಆಕ್ರಮಿಸಿತು. ನನಗೆ ನನ್ನ ವಿದ್ಯೆನೀಡಿರುವ ಸತ್ಯಕ್ಕಿಂತಲೂ ಅತಿಶಯತರವಾದ ಸತ್ಯವನ್ನು ನನ್ನೆದುರಿಗಿದ್ದ ಆ ಮರ ಪಡೆದಿರುವಂತೆ ತೋರತೊಡಗಿತು.  ನಾನು ಯಾವ ಸತ್ಯ ಮತ್ತು ರಹಸ್ಯಗಳಿಗಾಗಿ ಹಾತೊರೆಯುತ್ತಿದ್ದೇನೆಯೋ ಅವನ್ನೇ ಆ ಮರ ಸಾಕ್ಷಾತ್ಕಾರಿಸಿಕೊಂಡು ಅನುಭವಿಸುತ್ತಿರುವಂತೆ ಭಾಸವಾಯಿತು. ಆಗ ಈ ಕೆಳಗಿನ ಮೂರು ಪಂಕ್ತಿಗಳನ್ನು ಒಂದು ಕಾಗದದ ಚೂರಿನಲ್ಲಿ ಬರೆದೆ:

ವಿಶ್ವದ ರಹಸ್ಯವನು ತಿಳುಹು,ಹೇ ತರುವೆ,
ಮೌನದೊಳು ನಿತ್ಯತೆಯ ನನುಭವಿಪ ಗುರುವೆ:
ಜ್ಞಾನದೊಳು ಶುಷ್ಕತೆಯ ಕಂಡು ಬಂದಿರುವೆ!

ಈ ಪಂಕ್ತಿಗಳಿಗೊಂದು ಪರಿಪೂರ್ಣತೆ ಒದಗುವಂತೆ ಮಾಡಬೇಕೆಂದು ಮನಸ್ಸು ಮಾಡಿದ್ದೇನೆ, ತಾಯಿ!

ಏನಿದೇನಿದೌ, ತಾಯೆ?
ಏನಿದೇನಿದೀ ಮಾಯೆ?

೧೯೨೫ನೆಯ ನವೆಂಬರ ೧೦ನೆಯ ದಿನಚರಿ:

“I read the deeds of greatmen, reformers, poets, warriors and many more; and I often envy their greatness. In the heart of my heart I feel I too can do such things. Their lives inspire me, fill my heart with hope. I see in them the highest idea. I almost think that, that is the end as if were All. But Oh Mother, When at another time I sit contemplate about the vastness of the universe and the mystery that covers our life,  the greatmen with  all their greatness and poor philanthrophy wither and kiss the dust like so many falling flowers. They become not more great or useful than the little blade of green grass that waves its head, that fulfils its purpose in the most insignificant spot of the world. Then all ambition flies away. A sweet humiliation quakes my frame. I become calm, tranquil and peaceful. And everything has the same utility and greatness of a dream, I become humble. Oh mighty Lord, O Mother of the Universe, thou art perfect silence, and no amount of arguing can satisfy the need for thee; yes , do your duty, Soul, and silently ship into the unknown Om!

(ಮಹಾಪುರುಷರು, ಸುಧಾರಕರು, ಕವಿಗಳು ಸೇನಾಧಿಪತಿಗಳು ಮತ್ತು ಇನ್ನೂ ಅನೇಕರು ತಮ್ಮ ಜೀವಮಾನದಲ್ಲಿ ಸಾಧಿಸಿದ ಮಹತ್ಕಾರ್ಯಗಳನ್ನು ಕುರಿತು ನಾನು ಓದುತ್ತೇನೆ. ಎಷ್ಟೋ ಸಾರಿ ಅವರ ಮಹತ್ತಿಗೆ ನಾನು ಕರಬುತ್ತೇನೆ. ನನ್ನ ಹೃದಯಾಂತರಾಳದಲ್ಲಿ ನಾನೂ ಅವರು ಸಾಧಿಸಿದ ಮಹಾತ್ಕಾರ್ಯಗಳನ್ನು ಸಾಧಿಸಬಲ್ಲೆ ಎಂಬ ಭಾವೋದಯವಾಗುತ್ತದೆ.  ಅವರ ಜೀವನ ನನನಗೆ ಸ್ಪೂರ್ತಿ ನೀಡುತ್ತದೆ; ನನ್ನ ಹೃದಯವನ್ನು ಗುರುತಿಸುತ್ತೇನೆ. ಅದೇ ಜೀವಿತದ ಸಾರಸರ್ವಸ್ವ ಮತ್ತು ಪರಮ ಪರಿಪೂರ್ಣತೆ ಎಂದೂ ಭಾವಿಸುತ್ತೇನೆ. ಆದರೆ, ಓ ತಾಯೀ, ಇನ್ನೊಮ್ಮೆ ನಾನು ಪ್ರಶಾಂತವಾಗಿ ಕುಳಿತು ವಿಶ್ವದ ಅನಂತ ವಿಸ್ತಾರವನ್ನೂ ನಮ್ಮ ಬದುಕನ್ನು ಆವರಿಸಿರುವ ಮಹಾ ರಸಹ್ಯವನ್ನೂ ಕುರಿತು ಧ್ಯಾನಿಸತೊಡಗಿದಾಗ, ಆ ಸುಪ್ರಸಿದ್ಧ ಮಹಪುರುಷರೂ ಅವರ ಮಹಾತ್ಕಾರ್ಯಗಳೂ ಅವರ ಯಃಕಶ್ಚಿತ ಲೋಕಸೇವಾ ಕ್ರಿಯೆಗಳೂ ಎಲ್ಲವು, ಬಾಡಿದ ಹೂವು ಉದುರಿಹೋಗುವಂತೆ, ಹುಡಿಯಲ್ಲಿ ಹುಡಿಯಾಗಿ ಧೂಳಿಗತವಾಗುತ್ತದೆ. ಅವರೆಲ್ಲರೂ ಜಗತ್ತಿನ ಒಂದು ಯಃಕಶ್ಚಿತ ಆಜ್ಞಾತ ಮೂಲೆಯಲ್ಲಿ ತಲೆಯೆತಿ ನಿಂತು ತನ್ನ ಜೀವಿತೊದ್ದೇಶವನ್ನು ಸಾರ್ಥಕಗೊಳಿಸಿಕೊಳ್ಳುತ್ತಿರುವ ಒಂದು ಹಸುರಾದ ತೃಂಣಕ್ಕಿಂತಲೂ ಹೆಚ್ಚೇನೂ ಮಹಿಮರಾಗಿ ತೋರುವುದಿಲ್ಲ. ಆಗ ನನ್ನೆಲ್ಲ ಕೀರ್ತಿಲೋಭ ಸ್ವರೂಪದ ಮಹಾತ್ವಕಾಂಕ್ಷೆಯೂ ನಾಚಿ ಕುಗ್ಗಿ ದಿಕ್ಕಾಪಾಲಾಗಿ ತಲೆಮರೆಸಿಕೊಳ್ಳುತ್ತದೆ.  ಆಗ ಒಂದು ಅತ್ಯಂತ ಸಂತೋಷ ಸ್ವರೂಪದ ದೈನ್ಯತಾ ಅನುಭವ ಸಂಚಾರದಿಂದ ನನ್ನ ಶರೀರ ಸಮಸ್ತವೂ ಪುಲಕ ಕಂಪಿತವಾಗುತ್ತದೆ. ಆಗ ನನಗೆ ಒಂದು ಶಮಸ್ಥಿತಿಯೊದಗುತ್ತದೆ; ಹೃದಯಕ್ಕೆ ಸಂತೃಪ್ತಿ ಉಂಟಾಗುತ್ತದೆ; ಚೇತನವನ್ನೆಲ್ಲ ತುಂಬುತ್ತದೆ ಒಂದು ಅಲೌಕಿಕ ಶಾಂತಿ, ಮತ್ತು ಸರ್ವವೂ, ಒಂದು ಮಹಿಮಾಮಯ ಸ್ವಪ್ನದಲ್ಲೆಂತೋ ಅಂತೆ, ಸಮಪ್ರಯೋಜಕಗಳಾಗುತ್ತವೆ, ಒಂದು ಸಮದರ್ಶನ ಪ್ರಜ್ಞೆಯಲ್ಲಿ, ಆಗ ನಾನು ದೀನಾತದೀನನಾಗುತ್ತೇನೆ. ಹೇ ಸರ್ವಶಕ್ತಿ ಜಗದೀಶ್ವರಾ, ಹೇ ಜಗನ್ಮಾತೆ, ನೀನು ಪರಿಪೂರ್ಣ ಮೌನ; ಯಾವ ವಾದ ವಿವಾದಗಳೂ ಯಾವ ತರ್ಕ ವಿತರ್ಕಗಳೂ ನೀಣೇ ಬೇಕೆಂಬ ತೃಷ್ಣೆಯನ್ನು ಹಿಂಗಿಸಲಾರವು. ಹೌದು, ನಿನ್ನ ಕರ್ತವ್ಯ ನೀನು ಮಾಡು, ಓ ನನ್ನಾತ್ಮಾ, ಮಾತಿಲ್ಲದೆ, ನಿಶ್ಯಬ್ದವಾಗಿ ಮುಳುಗಿ ಲಯವಾಗು ಅಚಿಂತ್ಯ ಅಪ್ರಮೆಯ ಅನಂತ ಓಂಕಾರದಲ್ಲಿ!

೧೯೨೫ನೆಯ ಡಿಸೆಂಬರ‍್ ೩ನೆಯ ದಿನಚರಿ:

“When I am strong I am one with thee!” I say:
When I am weak, oh I begin to pray!”
(ನೀನು ನಾನೊಂದೆನುವೆ ಸಬಲನಾಗಿರುವಂದು;
ಕೈಮುಗಿದು ಪ್ರಾರ್ಥಿಸುವೆ ಬಲ ಮುರಿದು ಬಿದ್ದಂದು!)

೧೯೨೫ನೆಯ ಡಿಸೆಂಬರ್ ೫ನೆಯ ದಿನಚರಿ

“ಬೆಳಿಗ್ಗೆ ಮನ್ನಾರ ಕೃಷ್ಣಶೆಟ್ಟಿ ಹಾ‌ಸ್ಟೆಲಿಗೆ (M.K. Hostel)ಗೆ ಹೋದೆ ಭೂಪಾಲಂ ಚಂದ್ರಶೇಖರ ಶೆಟ್ಟಿ ಸಂಧಿಸಿದರು. ಸ್ವಲ್ಪ ಹರಟೆ ಹೊಡೆದು ವಿನೋದವಾಡಿ ಮತ್ತೇ ರೂಮಿಗೆ ಹಿಂತಿರುಗಿದೆ. (ಕ್ರಿಸಮಸ್ ರಜಾದಲ್ಲಿ ಅವರು ಬೆಂಗಳೂರಿನಿಂದ ಮೈಸೂರಿಗೆ ದಸರಕ್ಕಗಿ ಬಂದಿದ್ದರೆಂದು ತೋರುತ್ತದೆ). ತರುವಾಯ ಭೂಪಾಲಂ ಅವರೂ ನನ್ನ ರೂಮಿಗೆ ಬಂದರು. (ಸಂತೆಪೇಟೆಯ ಅದೇ ಉಪ್ಪರಿಗೆಯ ಕೊಟಡಿಯಲ್ಲಿ ೧೯೨೬ನೆಯ ಅಕ್ಟೋಬರ‍್ ತಿಂಗಳಲ್ಲಿ ಸ್ವಾಮಿ ಸಿದ್ದೇಶ್ವರಾನಂದರು ಆಗ ದಿವಾನ ರೋಡಿನಲ್ಲಿ ಪ್ರಾರಂಭವಾಗಿದ್ದ ಶ್ರೀರಾಮಕೃಷ್ಣಾಶ್ರಮಕ್ಕೆ ಕೊಂಡೊಯ್ಯುವ ತನಕ ಇದ್ದೆ). ನನ್ನ ಕವನಗಳನ್ನೂ ಮತ್ತು ಭಾಯಿ ಪರಮಾನಂದರ ಪುಸ್ತಕವನ್ನೂ ತೆಗೆದುಕೊಂಡು ಹೋದರು. ಸಂಜೆ ನಾವು ಕುಕ್ಕನಹಳ್ಳಿ ಕೆರೆಯೇರಿಯ ದಂಡೆಯ ಮೇಲೆ ತಿರುಗಾಟಕ್ಕೆ ಹೋದೆವು.  ನನ್ನ ಕೆಲವು ಕನ್ನಡ ಭಾವಗೀತೆಗಳನ್ನು ಹಾಡಿದೆ ಮತ್ತು ವಾಚಿಸಿದೆ.  ಏನೇನೋ ಅನೇಕ ವಿಚಾರ ಮಾತಾಡಿದೆವು. ಬರುತ್ತಾ ಕಾಲೇಜು ಹಾಸ್ಟೇಲಿಗೆ ಹೋಗಿ ವೈ.ಎಂ.ಶ್ರೀಕಂಠಯ್ಯನನ್ನು ಕಂಡೆವು. ಅವರು ನಾನು ಇತ್ತೀಚೆಗೆ ಸ್ವಲ್ಪ ಮಿಸ್ಟಿಕ್ (MYstic)ಆಗುತ್ತಿದ್ದೇನೆಂದು ಆಪಾದಿಸಿದರು.  ಬಹಳ ರಾತ್ರಿಯಾದ ಮೇಲೆ ಭೂ.ಚಂ. ಮತ್ತು ನಾನು ಎಂ.ಕೆ. ಹಾ‌ಸ್ಟೇಲಿಗೆ ಬಂದೆವು. ರಾತ್ರಿ ನಾನು ಅಲ್ಲಿಯೇ ಮಲಗಿದೆ. (ಅಂದರೆ ರಾತ್ರಿಯಲ್ಲಿ ಬಹಳ ಹೊತ್ತು ನಾವು ಹಾಡುವುದರಲ್ಲಿಯೊ ಕವನ ಓದುವುದರಲ್ಲಿಯೊ ತತ್ವ ವಿಚಾರದಲ್ಲಿಯೊ ರಾಜಕೀಯ ಸಂಗತಿಗಳಲ್ಲಿಯೊ ಮಗ್ನರಾಗಿದ್ದೇವೆಂದು ಭಾವಿಸುತ್ತೇನೆ).

೧೯೨೫ನೆಯ ಡಿಸೆಂಬರ ೭ನೆಯ ದಿನಚರಿ:

“ನಾನು ಬೆಳಗ್ಗೆ ಜಾವ ೪.೪೫ರ ಹೊತ್ತಿಗೆ ಎದ್ದೆ. ಕನಕಶೆಟ್ಟಿ ಆವರ ಜೊತೆ ಹೊರಟು ನನ್ನ ರೂಮಿಗೆ ಬಂದೆ. ಅವರು ಚಾಮುಂಡಿ ಬೆಟ್ಟಕ್ಕೆ (ದೇವಾಲಯಕ್ಕಿರಬೇಕು) ಹೋದರು. ಉಪನಿಷತ್ತುಗಳನ್ನು ಕುರಿತು ತತ್ವಶಾಸ್ತ್ರ ಗ್ರಂಥ(Philosophy of the Upanishads) ದ ಕೆಲವು ಭಾಗ ಓದಿದೆ. ಎಂಟು ಗಂಟೆ ಸಮಯಕ್ಕೆ ಭೂಪಾಳಂ ಚಂದ್ರಶೇಖರ ಶೆಟ್ಟಿ ಬಂದರು. ವಾಲಿಬಾಲ್ ಸ್ಪರ್ಧೆಯಾಟ ನೋಡಲು ಹೋಗಿ, ತರುವಾಯ ಹಾಸ್ಟೇಲಿಗೆ ಹೋದೇವು. ಅಲ್ಲಿ ಚಿದಂಬರಂ ಸಿಕ್ಕಿದರು. ಫ್ರೆಸರ‍್ ನ Indian Thought, Past and Present (ಭಾರತೀ ಚಿಂತನ, ಹಿಂದೆ ಮತ್ತು ಇಂದು.) ಎಂಬ ಗ್ರಂಥದಲ್ಲಿದ್ದ ಚಿತ್ರಗಳನ್ನು ನೋಡಿದೆವು. ‘ ಪ್ರಬುದ್ಧ ಕರ್ಣಾಟಕ’ದ ಕೆಲವು ಭಾಗಗಳನ್ನು ಓದಿದೇವು. ಯೂನಿಯನ್ನಿನಲ್ಲಿ ಪಟ್ಟಾಭಿರಾಮನ್ ಇದ್ದರು. ಅವರು ನನ್ನನ್ನು ಕುರಿತು, ಸ್ನೇಹಪರತೆಯಿಂದಷ್ಟೇ, ನಾನು ಹುಟ್ಟಿನಿಂದಲೇ ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲಿಯೂ ಕವಿಯೆಂದೂ ದಾರ್ಶನಿಕನೆಂದೂ ಮತ್ತು ಲೇಖಕನೆಂದು ಪ್ರಶಂಸಿಸಿದರು. ‘ಜಯ ಕರ್ನಾಟಕ’ದಲ್ಲಿ ನನ್ನ ಕನ್ನಡ ಕವನ ‘ತವರೂರು’ ಅಚ್ಚಾಗಿದ್ದುದನ್ನು ಕಂಡೆ. ಹಿಂತಿರುಗಿ ಬಂದೆವು; ಭೂಪಾಳಂ ಅವರ ಸಂಬಂಧದ ಮದುವೆ ಮನೆಗೆ ಹೋದರು. ಮತ್ತೆ ಅಪರಾಹ್ನ ೨-೩೦ಕ್ಕೆ ಭೂ.ಚಂ. ಬಂದರು. ಅವರ ಜೊತೆಗೆ ರೇಲ್ವೆ ಸ್ಟೇಷನ್ನಿಗೆ ಹೋದೆ. (ಅವರನ್ನು ಬೆಂಗಳೂರಿಗೆ ಕಳಿಸಲು).

ಅಲ್ಲಿ ಭೂ ಚಂ.ಅವರ ಒಬ್ಬ ಮಿತ್ರರು ಸಂಧಿಸಿದರು. ಅವರು ಥಯಾಸೊಫಿ ಮತ್ತು ಸ್ಪಿರಿಚುಯಲಿಸಂ ಪ್ರಚಾರದಲ್ಲಿ ಅತಿರೇಕ ಆಸಕ್ತಿಯುಳ್ಳವರಾಗಿ ಕಂಡು ಬಂದರು. ಅವರು ಆರ್ಯ ಸಮಾಜವನ್ನು ಲೇವರಿ ಮಾಡುವಂತೆ ವ್ಯಂಗವಾಗಿ ಮಾತನಾಡುತ್ತಿದ್ದರು. ನನಗೆ ಇಸ್ಸಿ, ಎನಿಸಿ, ಅವರ ಅತಿರೇಕ ಉತ್ಸಾಹದ ಆ ಅವಿವೇಕವನ್ನು ಭಾವಿಸಿ ಮುಗಳನಕ್ಕೆನಷ್ಟೆ!”

೧೯೨೫ನೆ ಡಿಸೆಂಬರ ೮ನೆಯ ದಿನಚರಿ:       
“There is one-consolation and that is the crudest, yet the best and the final. I crave for relisation and philosophy and infinite knowledge and all that. But the vastness and the seeming impossibility stare me in the face. And I ask the question whether it is ever possible to know the Absolute as a whole. I become excited. Some thing troubles my mind. And then comes a consolation that, afterall, even though I lack the complete relisation, yet I live in sweet expectation which is sweeter than relisation itself.  I may not know intellectually the whole, yet there is something that blooms in my  bosom which gives me great deal light. Ah, I live in this sweet expectation! May not know the truth, yet my joy is in living the truth, Om Peace! Om Peace!

This is the last consolation”.

(ಇದೇ ಏಕಮಾತ್ರ ಸಂತ್ಯೆಕೆ, ಅದೂ ಅತೀವ ಸ್ಥೂಲ; ಆದರೂ ಅತ್ಯುತ್ತಮ ಮತ್ತು ಅತ್ಯಂತ. ಸಾಕ್ಷತ್ಕಾರಕ್ಕಾಗಿ, ತತ್ವ ದರ್ಶನಕ್ಕಾಗಿ, ಅನಂತ ಜ್ಞಾನಕ್ಕಾಗಿ ಇನ್ನೂ ಏನೇನನಕ್ಕೂ ಆಗಿ ಹಂಬಲಿಸುತ್ತೇನೆ ನಾನು. ಆದರೆ ಅದೆಲ್ಲದರ ಮಹತೋ ಮಹೀತೆಯೂ ಮತ್ತು ಹಾಗೆ ತೋರುವ ಸಾರ್ಧಯಾತೀತತೆಯು ನನ್ನೆದುರು ನಿಂತು ಮೂದಲಿಸುತ್ತದೆ. ಆಗ ನನಗೆ ನಾನೆ ಪ್ರಶ್ನೆ ಹಾಕಿಕೊಳ್ಳುತ್ತೇನೆ, ಎಂದಾದರೂ ಸಾಧ್ಯವಾಧೀತೆ ಆ ಪರಾತ್ಪರವನ್ನು ಪೂರ್ಣವಾಗಿ ಅರಿಯಲಿಕ್ಕೆ ಎಂದು. ಒಡನೆಯ ಭಾವವಶನಾಗುತ್ತೇನೆ. ಏನೋ ಒಂದು ನನ್ನ ಚೇತನವನ್ನೆಲ್ಲ ಕದಡಿದಂತಾಗುತ್ತದೆ. ಆಗಲೇ ಒಂದು ಸಂತೈಕೆ ಮೂಡುತ್ತದೆ: ಎನೇ ಆಗಲಿ, ಪೂರ್ಣ ಸಾಕ್ಷಾತ್ಕಾರ ನನಗೆ ಲಭಿಸದಿದ್ದರೂ ಸಾಕ್ಷಾತ್ಕಾರಕ್ಕಿಂತಲೂ ಮಧುರತಮವಾದ ಅದರ ಸುಮಧುರ ನಿರಂತರ ಪ್ರತೀಕ್ಷೆಯಲ್ಲಿಯೆ ನಾನು ಬದುಕುತ್ತಿರುವೆನಲ್ಲಾ ಎಂದು! ಬೌದ್ಧಿಕವಾಗಿ ನಾನು ಆ ಪೂರ್ಣವನ್ನು ಅರಿಯಲಾರದಿರಬಹುದು, ಆದರೂ ನನ್ನ ಅಂತರಂಗಶ್ವೇತನದಲ್ಲಿ ನನಗೆ ಒಂದು ಅನಿರ್ವಚನೀಯ ಮಹಾ ಆನಂದವನ್ನು ನೀಡುತ್ತಿರುತ್ತದೆ ಅಚಿಂತ್ಯ ಸ್ವರೂಪದ ಆ ಏನೋ ಒಂದು… ಆಹಾ, ನಾನು ಅಂತಹ ಮಧು ಮಧುರ ಮಧುರವಾದ ಪ್ರತೀಕ್ಷೆಯಲ್ಲಿಯೆ ಬದುಕುತ್ತಿರುತ್ತೇನೆ. ಆ ಬ್ರಾಹ್ಮಿ ಸತ್ಯ ನನ್ನ ಜ್ಞಾನಕ್ಕೆ ವಸ್ತುವಾಗದಿರಬಹುದು, ಆದರೆ ನನ್ನ ಆನಂದವೆಲ್ಲ ಆ ಸತ್ಯವನ್ನು ಬಾಳುತ್ತಿರುವುದಾಗಿರುತ್ತದೆ.  ಓಂ ಶಾಂತಿ ಓಂ ಶಾಂತಿಃ!

ಇದುವೆ ಕೊಟ್ಟ ಕೊನೆಯ ಶಾಂತಿಃ!

ಇಲ್ಲಿಗೆ ೧೯೨೫ನೆಯ ದಿಚರಿ ನಿಂತು ಬಿಟ್ಟಿದೆ, ನೋಟು ಪುಸ್ತಕದಲ್ಲಿ ತಾರೀಖು ಹಾಕಿ ಆಗಾಗ ಬರೆದದ್ದು. ಮತ್ತೆ ಅದು ಸರಿಯಾದ ಒಂದು ಸಣ್ಣ ೧೯೨೬ನೆಯ ವರ್ಷದ ಡೈರಿಯಲ್ಲಿ ಜನವರಿ ೧ ರಿಂದ ಪ್ರಾರಂಭವಾಗುತ್ತದೆ. ನಡುವೆ ೨೨ ದಿನಗಳು ಖಾಲಿಯಾಗಿವೆ. ಬಹುಶಃ ಆ ಸಮಯದಲ್ಲಿಯೆ ಇರಬಹುದು, ಸರಿಯಾಗಿ ಕಾಲಾನುಕ್ರಮ ನೆನಪಿಗೆ ಬಾರದು, ನನಗೆ ಹೊಟ್ಟೆಯ ಮೆಲೆ ಹೊಕ್ಕಳದ ಬಳಿ ಒಂದು ಬಾವು ಎದ್ದದ್ದು.

ಸಂತೆ ಪೇಟೆಯ ಗಲಿಬಿಲಿಯ ಕೊಳಕು ವಾತಾವರಣದಲ್ಲಿ, ಹೋಟಲೂಟದ ಅಪೌಷ್ಟಿಕ ಆಹಾರದ ದೆಸೆಯಿಂದಲೂ ಕೆಲವು ದುರಾಭ್ಯಾಸ ಪ್ರಭಾವದಿಂದಲೂ ನನ್ನ ಆರೋಗ್ಯ ವರ್ಷವರ್ಷಕ್ಕೂ ಹೆಚ್ಚು ಹೆಚ್ಚು ಅಧೋಗತಿಗೆ ಹೋಗುತ್ತಿದ್ದುದನ್ನು ಆಧ್ಯತ್ಮದ ಮತ್ತು ಕಾವ್ಯದ ಅಮಲಿನಲ್ಲಿದ್ದ ನಾನು ಅಷ್ಟೇನು ಲೆಕ್ಕಿಸುತ್ತಿರಲಿಲ್ಲ. ಪ್ರತಿ ಸಾರಿ ಮಲೆನಾಡಿಗೆ ಹೋದಾಗಲೂ ಮಲೇರಿಯಾ ಅಂಟಿಕೊಳ್ಳುತ್ತಿತ್ತು. ಬಯಲುಸೀಮೆಗೆ ಬಂದೊಡನೆ  ಅದು ಆಗಾಗ ಜ್ವರವಾಗಿ ಕಾಡುತ್ತಿತ್ತು.  ಜ್ರಗಡ್ಡೆಯಂತೂ ಹೊಟ್ಟೆಯಲ್ಲಿ ನಿತ್ಯ ನಿವಾಸಿಯಾಗಿಬಿಟ್ಟಿತು. ಕ್ವಿನೀನ ಆಸ್ಪತ್ರೆ ಔಷಧಿ ಕುಡಿದು ಸ್ವಲ್ಪ ಶಮನವಾಗುತ್ತಿತ್ತು. ಮತ್ತೇ ಉಲ್ಬಣಿಸುತ್ತಿತ್ತು.  ಕ್ರಮೇಣ ಕ್ರಾನಿಕ್ ಮಲೇರಿಯಾ ರೋಗಿಯಾಗಿ ಬಿಟ್ಟಿದೆ.  ರಕ್ತ ಹೀನತೆಯ ದೆಸೆಯಿಂದ ದೇಹ ಸುಲಭವಾಗಿ ಸಾಂಕ್ರಾಮಿಕ ಚರ್ಮ ರೋಗಿಯಾಗಿಬಿಟ್ಟಿದೆ. ರಕ್ತಹೀನತೆಯ ದೆಸೆಯಿಂದ ದೇಹ ಸುಲಭವಾಗಿ ಸಾಂಕ್ರಾಮಿಕ  ಚರ್ಮ ರೋಗಗಳಿಗೆ ತುತ್ತಾಗುತ್ತಿತ್ತು. ಪರಿಣಾಮವಾಗಿ ಕಜ್ಜಿ ಕುರು ಒಂದಲ್ಲ ಒಂದು ತೊಂದರೆ ಇದ್ದೆ ಇರುತ್ತಿತ್ತು. ಇಂದು, ೧೯೭೨ರಲ್ಲಿ ಪೂರ್ಣ ದೃಷ್ಟಿಯ ಪ್ರಕಾಶದಲ್ಲಿ ನಿಂತು ನೋಡಿದಾಗ ಆ ಕ್ಲೇಶವೂ ಭಗವತ್ ಕೃಪಾಹಸ್ತದ ಒಂದು ಪ್ರಕಾರವೇ ಆಗಿತ್ತು ಎಂಬುವುದು ಚಿದ್ಗೋಚ್ಚರವಾಗುತ್ತದೆ. ಏಕೆಂದರೆ ಆ ನನ್ನ ಅವಿವೇಕ ಅನಾಚಾರ ಅಸಡ್ಡೆ ಅಲಸ್ಯಗಳಿಂದ ದೇಹಾರೋಗ್ಯ ಕೆಟ್ಟು, ಇನ್ನೊಂದು ವರ್ಷದೊಳಗಾಗಿ, ಎಂದರೆ ೧೯೨೬ನೆಯ ಉತ್ತರಾರ್ಧದಲ್ಲಿ, ನಾನು ಕಾಯಿಲೆಬಿದ್ದು, ಹಾಸಗೆ ಹಿಡಿಯದಿದ್ದರೆ, ನನಗೆ ಶ್ರೀರಾಮಕೃಷ್ಣ ಗುರುದೇವನ ಕೃಪಾಶ್ರಯರೂಪವಾದ ಆಶ್ರಮವಾಸ ಲಭಿಸುತ್ತಿರಲಿಲ್ಲ!

ನನ್ನ ಹೊಕ್ಕುಳದ ಬಳಿ ನೋವು ತೋರಿ, ತುಸು ಊದಿಕೊಂಡಾಗ ನಾನು ಅದನ್ನೊಂದು ಕುರು ಎಂದು ಭಾವಿಸಿದ್ದೇ.  ಕಜ್ಜಿ ಕುರುಗಳು ನನಗೆ ಸುಪರಿತರಾದ್ದರಿಂದ ಅದನ್ನೇನು ಮನಸ್ಸಿಗೆ ಹಾಕಿಕೊಳ್ಳಲಿಲ್ಲ. ಸ್ವಲ್ಪ ದಿನಗಳಾದ ಮೇಲೆ ಅದು ಚನ್ನಾಗಿ ಕೀತು ತನಗೆ ತಾನೇ ಎಂದಿನಂತೆ ಒಡೆದು ಹೋಗುತ್ತದೆ ಎಂದುಕೊಂಡೆ. ಆದರೆ ಅದು ದಿನ ದಿನಕ್ಕೂ ದಪ್ಪವಾಗುತ್ತಿದ್ದರೂ ನೋವು ಹೆಚ್ಚು ಹೆಚಾಗುತ್ತಿದ್ದರೂ ಅದಕ್ಕೊಂದು ಒಡೆಯುವ ತಾಣದ ಮೊನೆಯ ಗುರುತೇ ಕಾಣುತ್ತಿರಲಿಲ್ಲ.  ಕ್ರಮೇಣ ಅದು ಒಂದು ಕಂಚಿಕಾಯಿಗಿಂತಲೂ ದೊಡ್ಡದಾಗಿ, ನಡೆದಾಡುವುದು ಕಠಿಣವಾಗಿ, ನಾನು ಬಿಚ್ಚಿದ ಹಾಸಗೆ ಸುತ್ತದಂತೆ ಮಲಗಿಬಿಟ್ಟೆ. ಹಾಸಗೆಯ ಪಕ್ಕದಲ್ಲಿ ಸ್ವಾ ವಿವೇಕಾನಂದರ ಕೃತಿಗಳನ್ನಿಟ್ಟುಕೊಂಡು ಆಗಾಗ ಓದುತ್ತಾ ಧ್ಯಾನಿಸುತ್ತಾ ಪ್ರಾರ್ಥಿಸುತ್ತ ಮನಸ್ಸಿಗೆ ಧೈರ್ಯ ಸಮಾಧಾನ  ತಂದುಕೊಳ್ಳುತ್ತಿದ್ದೆ. ಶೌಚ ಮತ್ತು ಊಟಗಳಿಗೆ ಮಾತ್ರ ತುಂಬು ಕಷ್ಟಪಟ್ಟು ನೋವನ್ನು ಸಹಿಸಿಕೊಂಡು ಉಪ್ಪರಿಗೆಯಿಂದ ಕೆಳಗಿಳಿದು ಹೋಗಿ ಬರುತ್ತಿದ್ದೆ. ಸಹನಿವಾಸಿ ಸ್ನೇಹಿತರಿಗೆ ಗೊತ್ತಾಗದಂತೆ ಆಗಾಗ ಕಣ್ಣೀರು  ಸುರಿಸುತ್ತಲೂ ಇದ್ದೆ! ಆದರೂ ಆ ವಿಚಾರವಾಗಿ ಮನೆಗೆ ಕಾಗದ ಬರೆಯಲಿಲ್ಲ.

ಒಂದು ದಿನ ಬೆಳಿಗ್ಗೆ ವಿಧಿ ಕಳಿಸಿದಂತೆ ನನ್ನ ಆಪ್ತಾಪ್ತ ಸ್ನೇಹಿತ ದೇವಂಗಿ ಡಿ.ಆರ‍್. ವೆಂಕಟಯ್ಯ ಬಂದರು. ಅವರಿಗೆ ಕುತ್ತಿಗೆ ಭಾಗದಲ್ಲಿ ‘ಲೂಕೋಡರ‍್ಮಾ’ (ತೊನ್ನಿನಂತಹ ಬಿಳಿಯ ಕಲೆಗಳಾಗುವುದು.) ಆಗಿ ಏನೇನೋ ಔಷಧಿ ಮಾಡಿದರೂ ಗುಣವಾಗದೆ ಮದರಾಸಿನಲ್ಲಿ ಯಾರೋ ಆರ್ಯುವೇದ ವೈದ್ಯರಿದ್ದಾರೆಂದು ಕೇಳೀ ಅಲ್ಲಿಗೆ ಹೋಗಿದ್ದವರು, ಹಿಂತಿರುಗುವಾಗ ಬೆಂಗೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ಹೋಗುವ ಬದಲು, ಸ್ನೇಹಿತರನೂ ಬಂದುವೂ ಆಗಿದ್ದ ನನ್ನೊಡನೆ ಎರಡು ದಿನವಿದ್ದು ಹೋಗಲೆಂದು ಮೈಸೂರಿಗೆ ಬಂದಿದ್ದರು. ಆದರೆ ನಾನು ಹಾಸಗೆ ಹಿಡಿದುಬಿಟ್ಟಿದ್ದೆ. ನನಗೆ ಅಷ್ಟೇನೂ ಗಾಬರಿ ಪಡುವಂತಹ ವಿಷಮಸ್ಥಿತಿಯದಾಗಿ ತೋರದಿದ್ದರೂ ನನ್ನ ಹೊಟ್ಟೆಯ ಮೇಲಣ ಬಾವು ಅವರಿಗೆ ತುಂಬ ಅಪಾಯಕಾರಿಯಾಗಿ ತೋರಿತು. ಎರಡು ದಿ ಇದ್ದು ಹೋಗಲು ಬಂದವರು ಮರುದಿನ ಬೆಳಿಗ್ಗೆ ರೈಲಿಗೆ ಹೊರಟರು. ಆದರೆ ಒಂದು ಗಂಟೆಯಾದ ಮೇಲೆ ಮತ್ತೇ ರೂಮಿಗೆ ಬಂದರು, ನನಗೆ ಅಚ್ಚರಿಯಾಗುವಂತೆ, “ಯಾಕೆ? ರೈಲು ತಪ್ಪಿತೇ?” ಎಂದು ವಿಚಾರಿಸಿದೆ. ಅವರು ಹೇಳಿದ್ದನ್ನು ಕೇಳಿ ನಾನು ಬೆಚ್ಚಿಬಿದ್ದೆ. ರೈಲಿನಲ್ಲಿ ಟಿಕೆಟ್ಟು ಪಡೆಯುವ ತಾನದ ನೂಕುನುಗ್ಗಲಿನಲ್ಲಿ ಯಾರೋ ನನ್ನ ಪಾಕೆಟ್ಟನ್ನೇ ಹಾರಿಸಿ ಬಿಟ್ಟಿದ್ದರು. ಆ ಪಾಕೇಟಿನಲ್ಲಿ ಹಣವಲ್ಲದೆ ಮದರಾಸಿನಿಂದ ಕೊಂಡು ತಂದ ಅದೆಷ್ಟೋ ಸಂಖ್ಯೆಯ (ನನಗೆ ನೆನಪಿಲ್ಲ) ಚಿನ್ನದ ನಾಣ್ಯ ಸವರನ್ನುಗಳೂ ಇದ್ದುವಂತೆ!  ರೂಮಿನಲ್ಲೇ ಅಕಸ್ಮಾತ್ತಾಗಿ ಬಿಟ್ಟಿರಬಹುದೇ ಎಂದು ನೋಡಿದರು. ಕಾಣಲಿಲ್ಲ.  ಅಂತೂ ಆ ಪಾಕೆಟ್ಟು ವಾಸ್ತವವಾಗಿ ಎಲ್ಲಿ ಕಳುವಾಯಿತೋ ಗೊತ್ತಾಗಲಿಲ್ಲ. ರೂಮಿನಲ್ಲಿಯೆ ಕೋಟು ಸಿಕ್ಕಿಹಾಕಿದ್ದಾಗ ಯಾರಾದರೂ ಹೊಡೆದುಬಿಟ್ಟರೋ? ಅಥವಾ ರೈಲಿನ ಜೇಬುಗಳ್ಳರ ಕೈವಾಡವೋ? ಅಂತೂ ನನ್ನಿಂದಲೆ ಟಿಕೆಟ್ಟಿಗೆ ಬೇಕಾಗುವ ಹಣವನ್ನು ಪಡೆದು ಮಧ್ಯಾಹ್ನದ ರೈಲಿಗೆ ಹಿಂತಿರುಗಿದರು.

ಊರಿಗೆ ಹೋದವರು ಎಲ್ಲರೂ ಗಾಬರಿಗೊಳ್ಳುವಂತೆ ನನ್ನ ರೋಗದ ವಿಷಮತೆಯನ್ನು ಬಣ್ಣಿಸಿದರೆಂದು ತೋರುತ್ತದೆ. ಎರಡು ಮೂರು ದಿನಗಳೊಳಗಾಗಿ ದೊಡ್ಡ ಚಿಕ್ಕಪ್ಪಯ್ಯ (ಕುಪ್ಪಳಿ ರಾಮಣ್ಣಗೌಡರು) ಹೊಸಮನೆಯ ಮಂಜಪ್ಪಗೌಡರೊಡನೆ ಬಂದಿಳಿದರು. ನನ್ನ ಬಾವನ್ನು ಕಂಡು ಅವರಿಗೂ ಗಾಬರಿಯಾಯಿತು. ವಿಳಂಭ ಮಾಡದೆ ನನ್ನನ್ನು ರೈಲಿನಲ್ಲಿ ಶಿವಮೊಗ್ಗಕ್ಕೆ ಕರೆದೊಯ್ದರು. ಮರುದಿನವೇ ಅಲ್ಲಿಯ ಆಸ್ಪತ್ರೆಯಲ್ಲಿ ಶಸ್ತ್ರಚಕಿತ್ಸೆಯಾಯಿತು. ಕೊಕೇನ ಪ್ರಯೋಗಿಸಿ ಬಾವನ್ನು ಸೀಳಿದ್ದರಿಂದ ನನಗೆ ಅಪರೇಷನ್ ಆದದ್ದು ಗೊತ್ತಾದದ್ದು ಬಿಸಿಯಾಗಿದ್ದ ಕೀವು ರಸಿಗೆ ಎಲ್ಲ ಕೊಕೇನ ವಲಯ ದಾಟಿ ಹೊಟ್ಟೆಯ ಮೇಲೆ ಹರಿದಾಗಲೇ! ಎಷ್ಟು ಹಗುರ ಮತ್ತು ನೆಮ್ಮದಿ ಆಯಿತೆಂದರೆ, ಅಪರೇಷನ್ ಮುಗಿದು ಬ್ಯಾಂಡೇಜ್ ಹಾಕಿಸಿಕೊಂಡು ಎದ್ದಾಗ, ಬಾವು ಎದ್ದದ್ದೆ ಸುಳ್ಳಾಗಿ ಮರೆತುಹೋಗುವಷ್ಟು! ಮತ್ತೆ ಒಂದು ವಾರದೊಳಗಾಗಿ ಸಂತೆಪೇಟೆಯ ಆನಂದಮಂದಿರಕ್ಕೆ ಹಿಂತಿರುಗಿದೆ.

 


[1] ಈ ಸಂವಾದದ ಚುಟಿಕೆ ನನಗೂ ನನ್ನ ಸಹಪಾಠಿಯಾಗಿದ್ದವೆ ಎಂ ಶ್ರೀಕಂಠಯ್ಯಗೂ ನಡೆದದ್ದು. ನಾನು ಅವರಿರುತ್ತಿದ್ದ ಮಹಾರಾಜಾ ಕಾಲೇಜು ಹಾಸ್ಟೆಲಿಗೆ ಅವರೊಡನೆ ಅಧ್ಯಯನ ಮಾಡಲು ಹರಟೆಲೂ ಹೋಗುತ್ತಿದ್ದೆ. ಅವರೂ ನನ್ನಂತೆಯ ತತ್ವಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು.

[2] ಆ ಕಾಲದಲ್ಲಿ ತಪಸ್ಸಾಧನೆಗಾಗಿ ಚಾಮುಂಡಿಬೆಟ್ಟ ಶ್ಮಶಾನದ ಬೃಂದಾವನಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದುಂಟು! ಸಂಜೆ ಚೆನ್ನಾಗಿ ಕತ್ತಲಾದ ಮೇಲೆಯೂ! ಮೃತ್ಯುಭಯ. ಪಿಶಾಚಿಭಯ ಇತ್ಯಾದಿ ಭಯಗಳನ್ನು ಧಿಕ್ಕರಸಿ ಅವುಗಳಿಂದ ಪಾರಾಗುವ ಸಂಕಲ್ಪದಿಂದ

[3] We contrasted the unconcerned serenity of the solitudes with the ostentanious grander and bustle of Dasara.

[4] I said that in such ostentation spirit does not touch spirit. But it is the brute in man that hails the glimmer of outward appearance