ಕೆಮ್ಮಣ್ಣುಗುಂಡಿಯ ಗಿರಿಧಾಮದಿಂದ ನನಗೂ ಮಾನಪ್ಪಗೂ ಒಟ್ಟಿಗೆ ಒಂದು ಆತ್ಮೀಯವಾದ ಆಶೀರ್ವಾದದ ಕಾಗದ ಬರೆದು ನಮ್ಮಿಬ್ಬರ ವೈವಾಹಿಕ ಜೀವನವು ಶ್ರೀಮಹಾಪುರುಷಜಿಯ ಕೃಪೆಯಿಂದ ಸುಖಮಯವೂ ಸಂತೋಷಪೂರ್ಣವೂ ಆಗಲಿ ಎಂದು ಹರಸಿ, ಅಲ್ಲಿಂದ ಒಂದೆರಡು ದಿನಗಳಲ್ಲಿಯೆ ಬೆಂಗಳೂರಿಗೆ ಹಿಂತಿರುಗಿ, ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷತೆಯ ಪವಿತ್ರ ಸೇವಾಭಾಗವನ್ನು ಹೊತ್ತರು, ಶ್ರೀ ಸ್ವಾಮಿ ಸಿದ್ಧೇಶ್ವರಾನಂದರು. ಅವರು ತಮ್ಮ ಆಶೀರ್ವಾದದ ಕಾಗದದಲ್ಲಿ ತಿಳಿಸಿದ್ದಂತೆ, ಅವರಿಗೊಂದು ಕಾಗದ ಬರೆದು, ನಮ್ಮ ಮದುವೆಯ ಮಂಗಳ ಕಾರ್ಯಗಳೆಲ್ಲ ಮುಗಿದಮೇಲೆ ನಾನು ಮೈಸೂರಿಗೆ, ರಜ ಇನ್ನೂ ಮುಗಿಯುವ ಮೊದಲೆ, ‘ಉದಯರವಿ’ ಮನೆಯ ಕಟ್ಟಡವನ್ನು ತ್ವರಿತಗೊಳಿಸುವ ಉದ್ದೇಶದಿಂದ ಹೋಗಿ, ಕಟ್ಟಡ ಇನ್ನೂ ಪೂರ್ತಿಯಾಗಿ ಮುಗಿಯುವ ಮೊದಲೇ, ಯಾವ ವಿಧವಾದ ಪೌರೋಹಿತ್ಯಾಡಂಬರವೂ ಇಲ್ಲದೆ ‘ಗೃಹಪ್ರವೇಶ’ ಮಾಡಿದೆ. ಸ್ವಲ್ಪದಿನಗಳಲ್ಲಿಯೆ ಹೇಮಾವತಿ ಮಾನಪ್ಪನ ಹೆಂಡತಿ ಲಕ್ಷ್ಮೀದೇವಿಯೊಡನೆ ಬಂದು ‘ಉದಯರವಿ’ಯ ಗೃಹಿಣಿಯಾದಳು, ಬದುಕಿನ ಮಧುಯಾತ್ರೆಯಲ್ಲಿ ನನಗೆ ಸಂಗಾತಿಯಾಗಿ.

[1]

ಈ ಮಧ್ಯೆ ಸ್ವಾಮಿಜಿ ಪಶ್ಚಿಮದ ದೇಶಗಳಿಗೆ ಹೋಗುವ ಸನ್ನಾಹ ನಡೆಯುತ್ತಲೆ ಇತ್ತು.

ನನ್ನ ಕಾಗದಕ್ಕೆ ಅವರು ಉತ್ತರವಾಗಿ, ಬೆಂಗಳೂರು ಆಶ್ರಮದಿಂದ ಬರೆದ ಕೊನೆಯ ಕಾಗದ, ೧೩೮ನೆಯ ಡಿಸೆಂಬರ್ ೧೨ರಂದು ತಲುಪಿತು. ಏಕೆಂದರೆ ಅವರು ಬರೆದ ತರುವಾಯದ ಕಾಗದಗಳೆಲ್ಲ ವಿದೇಶಗಳಿಂದ ಬಂದವಾಗಿವೆ:

Sri Ramakrishna Ashrama
Bull Temple Road,
Basavanagudi.
Bangalore City,
Dated: 13-12-1938

To K.V.Puttappa,

My dear Puttappa,

I am so happy to receive your affectionate letter. The sweater is being sent thro’Shankar. Thank you for encouraging me in my poor attempt at Kannada expressions.

One interesting fact I forgot to mention all these days to you-Mr.Ramanna Gowda when he was here, was a constant visitor to the Ashrama, and one day I was surprised to find him in a religious mood as he was-narrating certain touching incidents in

Sri Ramanuja’s life. He was so moved that his eyes reddened and tears trickled down. Mr.Manjappa Gowda also was  surprised as his father-in-law is not an emotional type. Mr.Ramanna Gowda also told me a touching story of how a depressed class man-Holaya showed tremendous devotion to your house and looked after the interest of the household when there were no elderly male members, i.e. 3 generations backwards during the time of Obayya of Kuply.

Obayya Goudra maga Manjappa Gaudaru,
Manjappa Gaudara maga Venkatappa Gauda,
Venkatappa Gaudara maga Puttappa Gaudrige
namma preeti poorvakavada namaskaragalu tilisi
ee kagadavannu mugisuthene.
Yours affectionately
Siddheswarananda

(ಮೇಲಿನ ಕಾಗದದ ಕೆಳಗಿನ ಅನುವಾದ ದೇ.ಜ.ಗೌ. ಅವರದು)

ಶ್ರೀ ರಾಮಕೃಷ್ಣ ಆಶ್ರಮ
ಬಸವಗುಡಿ ಬೀದಿ
ಬಸವನಗುಡಿ
ಬೆಂಗಳೂರು ನಗರ
೧೩-೧೨-೧೩೮

ಕೆ.ವಿ. ಪುಟ್ಟಪ್ಪನವರಿಗೆ

ಪ್ರಿಯ ಪುಟ್ಟಪ್ಪ,

ನಿಮ್ಮ ಪ್ರೀತಿಯ ಓಲೆ ತಲುಪಿ ಸಂತೋಷವಾಯಿತು. ಶಂಕರ್ ಮೂಲಕ ಸ್ವೆಟರ್ ಕಳಿಸಿದೆ. ಕನ್ನಡ ಬಳಕೆಯ ಬಗ್ಗೆ ನಾನು ಮಾಡುತ್ತಿರುವ ಅಲ್ಪ ಪ್ರಯತ್ನವನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ನಿಮಗೆ ವಂದನೆಗಳು.

ಸ್ವಾರಸ್ಯಕರವಾದ ಸಂಗತಿಯೊಂದನ್ನು ನಿಮಗೆ ತಿಳಿಸಬೇಕೆಂದಿದ್ದು, ಈ ತನಕ ಮರೆತಿದ್ದೆ. ಶ್ರೀ ರಾಮಣ್ಣಗೌಡರು ಇಲ್ಲಿದ್ದಾಗ ಆಶ್ರಮಕ್ಕೆ ಮೇಲಿಂದ ಮೇಲೆ ಬರುತ್ತಿದ್ದರು. ಒಂದು ದಿನ ಶ್ರೀ ರಾಮಾನುಜರ ಜೀವನದ ಕೆಲವು ಹೃದಯಸ್ಪರ್ಶಿ ಘಟನೆಗಳನ್ನವರು ವಿವರಿಸುವಾಗ ಭಾವಪರವಶರಾದುದನ್ನು ಕಂಡು ನಾನು ವಿಸ್ಮಿತನಾದೆ. ಆಗವರ ಕಣ್ಣು ಕೆಂಪಾದುವು, ಕಣ್ಣೀರು ತೊಟ್ಟಿಕ್ಕುತ್ತಿತ್ತು. ತಮ್ಮ ಮಾವನವರು ಸಾಮಾನ್ಯವಾಗಿ ಭಾವುಕರಲ್ಲದ್ದರಿಂದ ಶ್ರೀ ಮಂಜಪ್ಪಗೌಡರು ಸಹ ಆಶ್ಚರ್ಯಚಕಿತರಾದರು. ಮೂರು ತಲೆಮಾರುಗಳ ಹಿಂದೆ, ಕುಪ್ಳಿ ಓಬಯ್ಯನವರ ಕಾಲದಲ್ಲಿ, ಅಸ್ಪೃಶ್ಯ ಎಂದರೆ ಹೊಲೆಯನೊಬ್ಬ ನಿಮ್ಮ ಮನೆಯ ಬಗ್ಗೆ ಎಷ್ಟು ಶ್ರದ್ಧಾಗೌರವಗಳನ್ನಿಟ್ಟುಕೊಂಡಿದ್ದನೆಂಬ ಮತ್ತು ಹೇಗೆ ಮನೆತನದ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಬಂದಿದ್ದನೆಂಬ ಕತೆಯನ್ನು ರಾಮಣ್ಣಗೌಡರು ಹೃದಯ ಮುಟ್ಟುವಂತೆ ವರ್ಣಿಸಿದರು:

ಓಬಯ್ಯ ಗೌಡ್ರ ಮಗ ಮಂಜಪ್ಪಗೌಡರು;

ಮಂಜಪ್ಪಗೌಡರ ಮಗ ವೆಂಕಟಪ್ಪಗೌಡ;
ವೆಂಕಟಪ್ಪ ಗೌಡರ ಮಗ ಪುಟ್ಟಪ್ಪ ಗೌಡ್ರಿಗೆ
ನಮ್ಮ ಪ್ರೀತಿಪೂರ್ವಕವಾದ ನಮಸ್ಕಾರಗಳು ತಿಳಿಸಿ
ಈ ಕಾಗದವನ್ನು ಮುಗಿಸುತ್ತೇನೆ.
ನಿಮ್ಮ ಪ್ರೀತಿಯ
ಸಿದ್ಧೇಶ್ವರಾನಂದ

೧೩-೧೨-೧೯೩೮ರಲ್ಲಿ ಬೆಂಗಳೂರಿಂದ ಬರೆದ, ಮೇಲೆ ಕೊಟ್ಟಿರುವ ಆ ಕಾಗದವೆ ಕೊನೆಯ ಕಾಗದ, ಸ್ವಾಮಿ ಸಿದ್ಧೇಶ್ವರಾನಂದರು ಭಾರತದಿಂದ ಬರೆದದ್ದು. ಮುಂದಿನ ಕಾಗದಗಳೆಲ್ಲ ಫ್ರಾನ್ಸನಿಂದ ಬರೆದುವು. ಅವರನ್ನು ಪ್ಯಾರಿಸ್ಸಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರನ್ನಾಗಿ ವರ್ಗಾಯಿಸಲಾಯಿತು. ಅಂದರೆ ಎರಡನೆಯ ಮಹಾಯುದ್ಧ ಪ್ರಾರಂಭವಾಗುವುದಕ್ಕೆ ಸ್ವಲ್ಪ ಕಾಲಕ್ಕೆ ಮುಂಚೆ ಅವರು ಪ್ಯಾರಿಸ್ಸಿಗೆ ಹೋಗಿ ನೆಲೆಸಿದ್ದರು.

ಅವರು ಅಲ್ಲಿಂದ ಬರೆದ ಎರಡು ಕಾರ್ಡುಗಳೂ ಬಣ್ಣದ ಚಿತ್ರದವು. (ಸಾಧ್ಯವಾದರೆ ಅವುಗಳನ್ನು “ನೆನಪಿನ ದೋಣಿಯಲ್ಲಿ” ಹಾಕಿಸುವ ಆಲೋಚನೆಯಿದೆ.) ಅದರಲ್ಲಿಯೂ ಮೊದಲನೆಯ ಕಾರ್ಡು ವಿಶೇಷ ರೀತಿಯದು. ಅದರ ಒಕ್ಕಣೆಯೆಲ್ಲ ಕನ್ನಡ ಭಾಷೆಯಲ್ಲಿದೆ, ಆದರೆ ಲಿಪಿ ಇಂಗ್ಲೀಷಿನದು. ಅದರಲ್ಲಿ, ಮೌಢ್ಯಾಚಾರದಲ್ಲಿಯೂ ಯೂರೋಪು ಇಂಡಿಯಾಕ್ಕೇನೂ ಬಿಟ್ಟು ಕೊಡುವುದಿಲ್ಲ ಎಂಬ ವ್ಯಂಗ್ಯವಿದೆ. ಆ ಕಾರ್ಡಿನ ಹಿಂಬದಿಯಲ್ಲಿರುವ ಚಿತ್ರ-ರೋಮನ್ ಕ್ಯಾಥೋಲಿಯ್ ಪುರೋಹಿತ ಪಾದ್ರಿಗಳು ಬೇಟೆಗೆ ಹೊರಡಲಿರುವ ನಾಯಿಗಳನ್ನು ಮಂತ್ರಸಹಿತವಾಗಿ ಆಶೀರ್ವದಿಸುವ ಚಿತ್ರವಿದೆ. ಇಂಗ್ಲಿಷ್ ಲಿಪಿಯ ಕನ್ನಡ ಕಾಗದ ಹೀಗಿದೆ. ಆದರೆ ಸ್ವಾಮಿಜಿಯ ಕನ್ನಡ, ಹೊಸದಾಗಿ ಕನ್ನಡ ಕಲಿಯುತ್ತಿರುವ ಮಲೆಯಾಳಿಯ ಕನ್ನಡ:

“ಪುಟ್ಟಪ್ಪನವರೆ,

ಈ ಬೊಮ್ಮೆ ನೋಡಿ, ಸ್ವಾಮಿ! ಏನನ್ಯಾಯ! ನಮ್ಮ ಬಣ ಪಾದ್ರಿಗಳ ಕತೆ! ಒಂದು ಅರಣ್ಯಕಾಂಡ! ಬೇಟೆ ಹೋಗುವುದಕ್ಕೆ ಮುಂಚೆ ನಾಯಿಗಳನ್ನೆಲ್ಲ ಜಮಾಯಿಸಿ ಮಂತ್ರಪುಷ್ಪ ಹಾಕಿ ಅನುಗ್ರಹ ಮಾಡುತ್ತಾರೆ! ಸುಲಭಾನುಗ್ರಹ! ಯೇಸುವಿನ ಶಕ್ತಿ ಏನೆಲ್ಲಾ ವಿಧದಲ್ಲಿ ಕಾಣಿಸುತ್ತಾರೆ:

ಎರಡನೆಯ ಬೊಮ್ಮೆ, ಅನುಗ್ರಹದ ಫಲ ಪ್ರಕಟಸುವುದು. ನಿಮ್ಮ ಕರಿಸಿದ್ದ ಬೇಟೆಗೆ ಹೋಗುವಾಗ ಕಾಡುದೇವತೆಗಳನ್ನು ಪೂಜಿಸುವನು. ಅದೆಲ್ಲ ನಮ್ಮ ದೇಶದಲ್ಲಿ ಕುಣಿಯುವ ಪಾದ್ರಿಗಳಿಗೆ `SUPERSTITION’ ನಮ್ಮೂರಲ್ಲಿಯೂ ಯಾಗ ಮಾಡಿದ ಸೋಮಯಾಜಿಗಳೂ ಇದೇ ತರ ಮಂತ್ರ ಎಲ್ಲ ಹೇಳಿ ಕುರಿಗಳಿಗೆ ಮುಕ್ತಿ ಕೊಟ್ಟ ಸಂವಾದ ನಿಮಗೆ ಗೊತ್ತಿಲ್ಲವೇ?”

ಇಲ್ಲಿಗೆ ಟೈಪ್‌ಮಾಡಿದ ಇಂಗ್ಲಿಷ್ ಲಿಪಿಯ ಕಾಗದ ಭರ್ತಿಯಾಗಿ, ಆ ಕಾರ್ಡಿನ ನೆತ್ತಿಯ ಖಾಲಿ ಜಾಗದಲ್ಲಿ ಪೆನ್ಸಿಲ್ಲಿನಿಂದ ಗೀಚಿದ್ದಾರೆ: I made Madame Sauton read this Kannada script-and she did well. Some one must start a movement in India to popularise Roman script. Your Hindi is making so much noise in Madras, picketting before prime minister’s house. What is all this galata? (ಈ ಕಾಗದವನ್ನು ಮೇಡಂ ಸೌಟನ್ ಅವರ ಕೈಯಲ್ಲಿ ಓದಿಸಿದೆ-ಅವರು ಚೆನ್ನಾಗಿಯೆ ಓದಿದರು. ಯಾರಾದರೂ ಇಂಡಿಯಾದಲ್ಲಿ ರೋಮನ್ ಲಿಪಿ ಜನಪ್ರಿಯಗೊಳಿಸುವ ಪ್ರಚಾರದ ಚಳವಳಿ ಶುರುಮಾಡಬೇಕು. ನಿಮ್ಮ ಹಿಂದ ಮದರಾಸಿನಲ್ಲ ಬಹಳ ಗಲಾಟೆಮಡುತ್ತಿದೆ. ಮುಖ್ಯಮಂತ್ರಿ ಮನೆ ಮುಂದೆ ಪಿಕೆಟಿಂಗ ಮಾಡಿ: ಇದೆಲ್ಲ ಏನು ಗಲಾಟೆ?)

ಅದೇ ಕಾಲಕ್ಕೆ ತುಸು ತರುವಾಯ ಮತ್ತೊಂದು ಚಿತ್ರದ ಕಾರ್ಡಿನಲ್ಲಿ-ಮಂತ್ರಪುಷ್ಪ ಹಾಕಿಸಿಕೊಂಡು ಬೇಟೆಗೆ ಹೋದ ನಾಯಿಗಳು ಒಂದು ದೊಡ್ಡ ಕಲುಗೊಂಬಿನ ಕಡವೆಯನ್ನು ಅಟ್ಟಿ ಅಟ್ಟಿ ಸೋಲಿಸಿ, ಅದು ನಿಂತಾಗ ಸುತ್ತಲೂ ನಿಂತಿಎ,-ರೋಮನ್ ಲಿಪಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಿಶ್ರಮಾಡಿ ಕಾಗದ ಬರೆದಿದ್ದಾರೆ:

PERSONAL

Why are you so silent? Hope you had a very pleasant vacation. I am now just entering the stage of reading and understanding French by myself. I shall write to you when I know more about the current tendencies in French literature which you wanted me to tell you. This is very beautiful place. Thick forests and a river. I am working hard. ಒಳ್ಳೆ ಪ್ರಾಯಶ್ಚಿತ್ತ, ಸ್ವಾಮಿ! ಚಿಕ್ಕಮಕ್ಕಳ ಹಾಗೆ ಪರಿಶ್ರಮ ಮಾಡಬೇಕು. ತಲೆ ಕೂದಲೆಲ್ಲ ಬೇಗ ಬೆಳ್ಳಿತಂತಿಗಳಾಗುವುದು ಅಧ್ಬುತವೇನು? Send me a photo snap of your house. And ask Vijayadeva to send a loud shout of laughter! Love to all. How is Manappa? Hope he got my card.

Yours
Siddeshwarananda

p.s.: please send a copy of panchajanya by return of post. Kasturi will tell you about the reason. Where is A.C.Narasimha murthy? Give him my love.

ಮೇಲಣ ಕಾಗದದಲ್ಲಿ ಸ್ವಾಮಿಜಿ ತಾವು ಫ್ರೆಂಚ್‌ಭಾಷೆ ಕಲಿಯುವುದರಲ್ಲಿ ಮಗ್ನರಾಗಿರುವ ವಿಚಾರ ಬರೆದಿದ್ದಾರೆ. ಭಾಷೆ ಕಲಿಯುವ ವಿಚಾರದಲ್ಲಿ ಅವರಿಗೆ ಎಂತಹ ಶಕ್ತಿ ಮತ್ತು ಪ್ರತಿಭೆ ಇದ್ದುವೆಂದರೆ ಒಂದು ವರ್ಷದೊಳಗಾಗಿ ಆ ಭಾಷೆಯಲ್ಲಿ ಓದುವ, ಮತಾಡುವ ಮತ್ತು ಬರೆಯುವ ಸಾಮರ್ಥ್ಯ ಪಡೆದು ಫ್ರೆಂಚ್ ಜನತೆಯೊಡನೆ ತಾವೂ ಹುಟ್ಟು ಫ್ರೆಂಚರೊ ಎಂಬಂತೆ ವರ್ತಿಸಿ ಅವರ ಗೌರವ, ಸ್ನೇಹ ಮೈತ್ರಿಗಳನ್ನು ಸಂಪಾದಿಸಿದರು. ಫ್ರೆಂಚಿನಲ್ಲಿಯೆ ವೇದಂತದ ವಿಚಾರವಾಗಿ ಪ್ರವಚನಗಳನ್ನು ಕೊಟ್ಟರು! ಅಲ್ಲದೆ, ಸೋರಬೋನ್ (Sorbonne) ಟೌಲೌಸ್ (Toulouse)   ಮತ್ತು ಮಾಂಟ್ ಪೆಲ್ಲಿಯರ್’ (Montpellier) ಮಹಾ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ಉಪನ್ಯಾಸಗಳನ್ನೂ ಕೊಟ್ಟು ತರುವಾಯ ಅವುಗಳನ್ನು ಪ್ರಕಟಿಸಿದರು:

ಸ್ವಾಮಿಜಿ ಬರೆದ ಮುಂದಿನ ಕಾಗದ ಸ್ವಿಟ್ಜರ್ಲೆಂಡಿನಿಂದ ಬಂದಿದೆ. ೫-೬-೧೯೩೮ನೆಯ ತಾರೀಖಿನದು. GASTAAD ಎಂಬ ಸ್ಥಳದಿಂದ. ಆ ಚಿತ್ರದ ಕಾರ್ಡಿನಲ್ಲಿ ಒಂದು ಮಗ್ಗುಲಲ್ಲಿ ಸ್ವಿಟ್ಜರ್ಲೆಂಡಿನ ಹಿಮಾವೃತವಾದ ಉನ್ನತ ಶಿಖರಪಂಕ್ತಿಯ ಪರ್ವತಶ್ರೇಣಿಗಳಿವೆ. ಬುಡದಲ್ಲಿ ಅದ್ಭುತ ಅರಣ್ಯಶ್ರೇಣಿ. ಸ್ವಾಮಿ ಆ ಅರಣ್ಯದ ಮತ್ತು ಶ್ವೇತ ತುಹಿನಾವೃತ ಗಗನ ಚುಂಬಿಶೃಂಗಗಳ ಸೌಂದರ್ಯದಲ್ಲಿ ಮಗ್ನರಾಗಿ ತಮ್ಮ ಅನುಭವವನ್ನು ಚಿತ್ರಿಸಿ ಕಾಗದ ಬರೆದಿದ್ದಾರೆ. ಅದಕ್ಕಾಗಿಯೇ, ನನ್ನ ಪ್ರಕೃತಿ ಪ್ರೇಮವನ್ನು ಚೆನ್ನಾಗಿ ಅರಿತಿದ್ದ ಅವರು, ಕಾಗದವನ್ನು ಪ್ರಾರಂಬಿಸುವಾಗಲೇ ನನ್ನನ್ನು “ನನ್ನ ಪ್ರಿಯ ಪ್ರಕೃತಿ ಉಪಾಸಕನೇ” ಎಂದು ಸಂಬೋಧಿಸಿದ್ದಾರೆ:

Gastaad, Switzerland
5-6-1938

Beloved Upasaka of Nature, I am again in the heart of nature rapt in its wild ecstasies. This beautiful house of the devotee of Gurumaharaj is surrounded by snow mountains, pine forests, water falls, and mountain brooks, chirp to birds, fleeting deer. Frontier of hemisphere is forgotten and I feel I am in Kuply. Spirit is drinking in the spectacle “and sensations, sail and form all melting into me and “thought its nought.” I feel i have become part of every thing and that residue in personality that makes you feel that you are feeling gives at times an agonisng sensation for that residue is again separation. I do not know whether I should close or open my eyes. I feel meditative in this sublimity and eyelids fall. But some thing shouts in me “Don`t insult nature. Open your eyes” Is that your voice. Dear Puttappa!-your beloved Swami.

P.S. Yesterday I was at the front of the Hill you see in the picture. and walked on snow, I counted 9 (nine) water falls, almost as big as Gersoppa

(ಇದು ಮತ್ತು ಮುಂದಿನ ಕಾಗದಗಳ ಭಾಷಾಂತರಗಳು ಶ್ರೀ ದೇಜಗೌ ಅವರವು)

ಗಸ್ತಾದ್, ಸ್ವಿಟ್ಜರ್ಲೆಂಡ್
೫-೬-೧೯೩೮

ಪ್ರಿಯ ನಿಸರ್ಗೋಪಾಸಕರೆ,

ನಾನು ಮತ್ತೊಮ್ಮೆ ನಿಸರ್ಗದ ಮಡಿಲಿನಲ್ಲಿ ಆನಂದೋನ್ಮಾದವನ್ನನುಭವಿಸುತ್ತಿದ್ದೇನೆ. ಗುರುಮಹಾರಾಜರ ಭಕ್ತರಲ್ಲೊಬ್ಬರ ಈ ಸುಂದರ ಸೌಧದ ಸುತ್ತ ಹಿಮಾವೃತ ಪರ್ವತಗಳೂ ದೇವದಾರು ವೃಕ್ಷಗಳ ಅರಣ್ಯಗಳೂ ಹಬ್ಬಿವೆ. ಜಲಪಾತಗಳಿಂದ, ನಿರ್ಝರಿಣಿಗಳಿಂದ, ಪಕ್ಷಿಗಳ ಕಲಕಲರವದಿಂದ ಮತ್ತು ಶೀಘ್ರಗಾಮಿ ಹರಿಣಗಳಿಂದ ಪರಿಸರ ಉಲ್ಲಾಸಕರವಾಗಿದೆ. ಭೌಗೋಳಿಕ ಗಡಿಗಳೆಲ್ಲ ಮರೆತುಹೋಗಿ, ನಾನು ಕುಪ್ಪಳಿಯಲ್ಲಿದ್ದಂತೆ ಭಾಸವಾಗುತ್ತಿದೆ. ಇಡೀ ಚೈತನ್ಯವೇ ಆ ದೃಶ್ಯವನ್ನು ಹೀರುತ್ತಿರುವಂತೆ ತೋರುತ್ತದೆ. ಸಂವೇದನೆ, ಆತ್ಮ, ಗಾತ್ರ ಎಲ್ಲವೂ ಕರಗಿಹೋದಂತೆ, ಅಲೋಚನೆಯೇ ಶೂನ್ಯವಾದಂತೆ ನನಗೆ ಅನುಭವವಾಗುತ್ತಿದೆ. ನಾನು ಪ್ರತಿಯೊಂದು ವಸ್ತುವಿನ ಅಂಶವಾದಂತೆ ನನಗಿಸುತ್ತಿದೆ. ಭಾವಸಂವೇದನೆಯನ್ನನುಭವಿಸಲು ಕರಣವಾದ ಅವಶೇಷಾಂಶವೊಂದು ವ್ಯಕ್ತಿತ್ವದಲ್ಲುಂಟಷ್ಟೆ. ಅದು ಪೃಥಕ್ ಸ್ಥಿತಿಗೆ ಕಾರಣವಾದ್ದರಿಂದ, ಒಮ್ಮೊಮ್ಮೆ ತೀವ್ರ ವೇದನೆಯುಂಟುಮಾಡುತ್ತದೆ. ನನ್ನ ಕಣ್ಣುಗಳನ್ನು ಮುಚಚಬೇಕೋ ತೆರೆಯಬೇಕೋ ತಿಳಿಯದು. ಈ ಭವ್ಯತೆಯ ತೆಕ್ಕೆಯಲ್ಲಿ ನಾನು ಧ್ಯಾನಮಗ್ನನಾಗುತ್ತೇನೆ. ಕಣ್ಣು ರೆಪ್ಪೆಗಳು ಮುಚ್ಚುತ್ತವೆ. ‘ನಿಸರ್ಗವನ್ನು ನಿಂದಿಸದಿರು! ಕಣ್ಣುತೆರೆ’ ಎಂದು ಅಂತರಾತ್ಮ ಕೂಗಿಕೊಳ್ಳುತ್ತಿದೆ. ಪ್ರಿಯ ಪುಟ್ಟಪ್ಪ, ಅದು ನಿಮ್ಮ ಧ್ವನಿ ಇರಬಹುದೆ?

ನಿಮ್ಮ ಪ್ರೀತಿಯ
ಸ್ವಾಮಿ

ಮ: ಮಾ: ನಿನ್ನೆ ನೀವು ಚಿತ್ರದಲ್ಲಿ ನೋಡುತ್ತಿರುವ ಪರ್ವತದ ಅಗ್ರಭಾಗದಲ್ಲ್ಲಿದ್ದೆ. ಹಿಮದ ಮೇಲೆ ಅಡ್ಡಾಡುತ್ತಿದ್ದೆ. ಸರಿಸುಮಾರು ಗೇರುಸೊಪ್ಪದಷ್ಟೇ ದೊಡ್ಡದಾದ ಒಂಬತ್ತು ಜಲಪಾತಗಳನ್ನು ಎಣಿಸಿದೆ.

Paris

To K.V.Puttappa

Hope you received my air mail card from Gastaad. The stay was a spiritual experience. Have you ever felt sitting in Kavisaila and gazing beyond, a mysterious presence in the slanting rays of the setting sun? To me this looked like one and `Srutikethu’ produced was sweeter than music of the spheres. I heard bivine melodies. I forgot the difference of hemispheres. I know I was not singing; for I was dumb. I know that I was hearing for I had ears! What a glowing picture! The ranges looked like the divine Harp of  Saraswathi-the setting sun reflected the glory of Her face and the snowy mountains was Her silk-sareed Form, of purity of so inner and the numerous waterfalls that stretched the cantour line did give the impression of golden festoons-I felt in the atmosphere. I must make ‘Parayanam’ of Wordsworth. We got one copy by air mail from London and read all my favourite pieces. In that atmosphere” littleness was not.”The least of things seemed great. Lots of love.

Yours attectionately
Sd. Siddheswarananda

ಪ್ಯಾರಿಸ್

ಕೆ.ವಿ. ಪುಟ್ಟಪ್ಪನವರಿಗೆ,

ನಾನು ಗಸ್ತಾದನಿಂದ ಗಾಳಿಯಂಚೆ (ಹವಾಯ್ ಪತ್ರ)ಯಲ್ಲಿ ಕಳಿಸಿದ ಪತ್ರ ನಿಮಗೆ ತಲುಪಿರಬೇಕೆಂದು ನಂಬಿದ್ದೇನೆ. ಅಲ್ಲಿಯ ತಂಗಣೆ ನನಗೊಂಡು ಅಧ್ಯಾತ್ಮಿಕ ಅನುಭವವಾಗಿತ್ತು. ಕವಿಶೈಲದಲ್ಲಿ ಕುಳಿತು ದಿಗಂತದಾಚೆಗೆ ನಿಟ್ಟಿಸುತ್ತಿರುವಾಗ, ಮುಳುಗುವ ಸೂರ್ಯನ ಓರೆಕಿರಣಗಳಲ್ಲಿ ಅವ್ಯಕ್ತಶಕ್ತಿಯ ಸಾನಿಧ್ಯವನ್ನೆಂದಾದರೂ ನೀವು ಅನುಭವಿಸಿರಬೇಕಲ್ಲವೆ? ಪರ್ವತಾಗ್ರದಲ್ಲಿ ಯವುದೋ ಸಮ್ಮೋಹಕಂಗುಲಿಯ ಮೃದುಸಂಸ್ಪರ್ಶದಂತೆ ಅಪೂರ್ವ ವೀಣೆಯ ತಂತಿಗಳ ಮೃದುಮಿಡಿತದಂತೆ ನನಗೆ ತೋರುತ್ತಿತ್ತು. ಪರ್ವತ ಶ್ರೇಣಿಗಳೆಲ್ಲ ಒಂದೆ ಎಂಬಂತೆ ಗೋಚರಿಸುತ್ತಿದ್ದು, ಅವುಗಳಿಂದ ಮೂಡುತ್ತಿದ್ದ ಶ್ರುತಿ ವಿಶ್ವಗಾನಕ್ಕಿಂತ ಮನೋಹರವಾಗಿ ತೋರುತ್ತಿತ್ತು. ನಾನಲ್ಲಿ ದಿವ್ಯಸಂಗೀತದ ಮಧುರಲಹರಿಗಳನ್ನು ಕೇಳಿಸಿಕೊಂಡೆ. ಭೌಗೋಲಿಕ ಭೇದಗಳನ್ನು ಮರೆತೆ. ನಉ ಹಾಡುತ್ತಿರಲಿಲ್ಲವೆಂಬುದನ್ನು ಬಲ್ಲೆ. ನಾನು ಮೂಕನಾಗಿದ್ದೆ. ನನಗೆ ಕಿವಿಗಳಿದ್ದುದರಿಂದ ಕೇಳಿಸಿಕೊಳ್ಳುತ್ತಿದ್ದೆನೆಂಬುದೂ ಗೊತ್ತು. ಎಂಥ ದೇದೀಪ್ಯಮಾನವಾದ ಚಿತ್ರ! ಪರ್ವತಶ್ರೇಣಿಗಳು ಸರಸ್ವತಿಯ ದಿವ್ಯವೀಣೆಯಂತೆ ಕಂಡುವು. ಅಸ್ತಮಾನ ಸೂರ್ಯ ಅವಳ ಮುಖದ ತೇಜೋವೈಭವವನ್ನು ಪ್ರತಿಬಿಂಬಿಸುವಂತಿತ್ತು. ಹಿಮಾವೃತ ಗಿರಿಗಳು ಅವಳ ಧೌತ ಖೌಶೇಯವನ್ನೂ ಅವಳ ಅಂತರಂಗದ ಪರಿಶುದ್ಧತೆಯನ್ನೂ ನೆನಪಿಗೆ ತರುವಂತಿದ್ದುವು. ರೇಖಾಕೃತಿಯ ಹಲವು ಜಲಪಾತಗಳು ಸುವರ್ಣತೋರಣದ ಭಾವವನ್ನು ಮೂಡಿಸುತ್ತಿದ್ದುವು. ಅಂಥ ಸನ್ನಿವೇಶದಲ್ಲಿ ವರ್ಡ್ಸ್‌ವರ್ತನ ಕೃತಿಗಳ ಪಾರಾಯಣ ನಡಸಬೇಕೆಂದು ಆಸೆಯಾಗುತ್ತಿತ್ತು. ಲಂಡನ್ನಿನಿಂದ ಗಾಳಿಯಂಚೆಯ ಮೂಲಕ ನಾನೊಂದು ಪ್ರತಿಯನ್ನು ತರಿಸಿಕೊಂಡೆ. ನನಗಿಷ್ಟವಾದ ಕವಿತೆಗಳನ್ನೆಲ್ಲ ಓದಿದೆ. ಅಂಥ ವಾತಾವರಣದಲ್ಲಿ ‘ಅಲ್ಪತೆಗೆ ಅವಕಾಶವಿಲ್ಲ!’ ಕ್ಷುದ್ರವಸ್ತುವೂ ಭೂಮವಾಗಿ ಕಾಣುತ್ತಿತ್ತು.

ಒಲ್ಮೆಯ ನೆನಕೆಗಳು.
ಇಂತು ನಿಮ್ಮ ಪ್ರೀತಿಯ
ಸಿದ್ಧೇಶ್ವರಾನಂದ

ಮಹಾಯುದ್ಧ ಹೊತ್ತಿಕೊಳ್ಳುವುದಕ್ಕೆ ಮೊದಲು ೧೯೩೮ರ  ಜನವರಿಯಲ್ಲಿ ಪ್ಯಾರಿಸ್ಸಿನಿಂದ ಬರೆದ ಮತ್ತೊಂದು ಓಲೆ: ಚಿತ್ರ ಕಾರ್ಡು.

Rue Augusta Maquat, Paris XVIe
14 Foret Givree
8-1-1938

My dear Puttappa.

Trust you received the long letter i wrote to you on December 2,1937, The long expected event happened-my initiation in seeing snow. We had good snow fall and the next day I had to go to Geneva. The nature of the country through which the railway journeyed you can see from the picture. This aspect of nature was inspiring. In seeing the eyes only were mine-The”vision” was yours! In Geneva I experienced a day with bright morn playing in snow, and the following day, so clear the mount Blond, the Gaurishankar of Europe, was all visibility. At Geneva I had heavy work speaking to groups of people interested in our Vedanta and Guru Maharaj. One Prof.Boudon dined with me and such a fine gentlemen. Remember me to Swamis, Kasturi and SHeshagiri Rao.

Yours
Siddheswaranand
ರೂ ಅಗುಸ್ತ ಮಾಕೆತ್, ಪ್ಯಾರಿಸ್
೧೪ ಫಾರೆಟ್ ಗಿವರೀ
೮-೧-೧೯೩೮

ಪ್ರಿಯ ಪುಟ್ಟಪ್ಪನವರೆ,

ಡಿಸೆಂಬರ್ ೨ರಂದು ನಾನು ನಿಮಗೆ ಬರೆದ ದೀರ್ಘಪತ್ರ ತಲುಪಿದೆ ಎಂದು ನಂಬಿದ್ದೇನೆ. ಬಹು ಹಿಂದಿನಿಂದ ನಿರೀಕ್ಷಿಸಿದ್ದ ಘಟನೆ ಸಂಭವಿಸಿತು. ನಾನು ಮಂಜು ನೋಡಿದ್ದು ಇದೇ ಮೊದಲು. ಅದು ಸಾಕಷ್ಟು ದಟ್ಟವಾಗಿತ್ತು. ಮಾರನೆ ದಿನ ನಾನು ಜಿನೀವಕ್ಕೆ ಹೋಗಬೇಕಿತ್ತು. ರೈಲು ಸಾಗುತ್ತಿದ್ದ ಪ್ರದೇಶದ ನಿಸರ್ಗಸೌಂದರ್ಯವನ್ನು ಚಿತ್ರದಿಂದ ಊಹಿಸಿಕೊಳ್ಳಬಹುದು. ಅದು ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಅದ್ನು ನೋಡುವಲ್ಲಿ ಕಣ್ಣು ಮಾತ್ರ ನನ್ನವು-‘ದರ್ಶನ’ವೆಲ್ಲ ನಿಮ್ಮದೆ! ಜಿನೀವದಲ್ಲಿದ್ದಾಗ ಒಂದು ದಿನ ತಿಳಿಬೆಳಗಿನಲ್ಲಿ ಮಂಜುಕ್ರೀಡೆಯ ಆನಂದವನ್ನನುಭವಿಸಿದೆ. ಮಾರನೆಯ ದಿನ ಯೂರೋಪಿನ ಗೌರೀಶಂಕರವಾದ ಬ್ಲಾಂಕ್ ಪರ್ವತಶ್ರೇಣಿಯ ಮನೋಹರ ದೃಶ್ಯವನ್ನು ಕಂಡು ಸುಖಿಸಿದೆ. ಜಿನೀವದಲ್ಲಿ ನಗೆ ಕೈತುಂಬ ಕೆಲಸವಿತ್ತು. ವೇದಾಂತ ಮತ್ತು ಗುರುಮಹಾರಾಜರಲ್ಲಿ ಆಸಕ್ತಿ ಇದ್ದ ಜನಸಮುದಾಯದಲ್ಲಿ ಉಪನ್ಯಾಸ ನೀಡಿದೆ. ಅವರಲ್ಲೊಬ್ಬ ಪ್ರೋ. ಬಡೋನಿ ನನ್ನೊಡೆ ಊಟಮಡಿದ. ಅವನೊಬ್ಬ ಸುಸಂಸ್ಕೃತ ಸಜ್ಜನ.

ಸ್ವಾಮಿಗಳಿಗೆ ಕಸ್ತೂರಿಗಳಿಗೆ ಶೇಷಗಿರಿರಾಯರಿಗೆ ನನ್ನ ನೆನಪು ಕೊಡಿ.

ಇಂತು ನಿಮ್ಮವ
ಸಿದ್ಧೇಶ್ವರಾನಂದ

ಮದುವೆಯದ ಪ್ರಾರಂಭದ ಕಾಲದ ಹೊಸ ರಸಜೀವನದ ಮಗ್ನತೆಯಲ್ಲಿದ್ದ ನಾನು, ಅದರಲ್ಲಿಯೂ ಮೈಸೂರಿನ ಮಹರಾ ಕಾಲೇಜಿ ಲೆಕ್ಚರರ ಕೆಲಸದಿಂದ ಬೆಂಗಳೂರಿನ ಸೆಂಟರಲ್ ಕಾಲೇಜಿಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ವರ್ಗವಾಗಿ ಅಲ್ಲಿ ನೆಲೆಸುವ ಹೊಸ ಬದುಕಿನಲ್ಲಿ ಮೈಮರೆತಿದ್ದ ನಾನು ಸುಮಾರು ಒಂದು ವರ್ಷಕಾಲ ಸ್ವಾಮಿಜಿಗೆ ಕಾಗದ ಬರೆಯುವ ವಿಚಾರದಲ್ಲಿ ಉದಾಸೀನನಾಗಿದ್ದೆ. ಅದಕ್ಕಾಗಿ ಅವರು ನೊಂದುಕೊಂಡಿದ್ದೂ ಉಂಟು. ೧೯೩೬ನೆಯ ಜನವರಿ ೧೬ರಂದು ಅವರು ಬರೆದ ಕಾಗದದಲ್ಲಿ ಅವರ ಅಸಮಾಧಾನ ಸೌಮ್ಯವಾಗಿ ಪ್ರಕಟಾಗಿದೆ:

51-Avenue Alphana,
Sanit Mande, (Seine)
France
16-1-1939

My Dear Puttappa,

Your loving letter, and the one from Manappa and Manjappa gowda duly to hand. I am glad I have provoked  a reacrion and you have begun to write to me, So continue to write. you cannot imagine how you all have become a part of my very being. Even after years of leaving of Mysore. I am only dreaming of the days spent there, which alone seems to me real. Every month I am sending a long news letter to Trichur Ashram where from copies will be sent to those whom I have indicated. You will soon get a copy which you will show to Kasturi, Seshu mama, Mr.N. Narasimha murthy (Retired librarian) and friends. I had just been to Holland. You see here the photo of the famous orginal prajnaparimita kept inLeyden. If you see it you are sure to write a poem as the one dedicated to Gommata. The photo is a poor reproduction. Last Sunday I spoke in one of the recognised halls of paris in French. I read a paper. My accent, tone, they said were very good, For taking lesson in pronunciation I am paying Rs. 10. per hour for a professor. This sunday I go to Florence for ten days visit to Assissi and Siena.

Love to all
Yours affectionately
Siddeshwarananda
೫೧ ಅವೆನ್ಯೂ ಆಲ್ಫಾನ,
ಸನಿತ್ ಮಂಡೆ,
(ಸಿಯೆನಾ) ಫ್ರಾನ್ಸ್

ಪ್ರಿಯ ಪುಟ್ಟಪ್ಪನವರೆ,

ನಿಮ್ಮ ಪ್ರೀತಿಯ ಪತ್ರ ಕೈಸೇರಿದೆ. ಮಾನಪ್ಪ ಮತ್ತು ಮಂಜಪ್ಪಗೌಡರು ಬರೆದ ಪತ್ರಗಳೂ ತಲುಪಿವೆ. ನಿಮ್ಮನ್ನು ಕೆರಳಿಸಿದುದರಿಂದ ಬರೆಯಲು ಪ್ರಾರಂಭಿಸಿದ್ದೀರಿ. ಸಂತೋಷ. ಹೀಗೆಯೇ ಪತ್ರ ಲೇಖನ ಮುಂದುವರಿಸಿ. ನೀವೆಲ್ಲರೂ ಹೇಗೆ ನನ್ನ ಇರುವಿಕೆಯ (ಅಸ್ತಿತ್ವದ) ಒಂದು ಭಾಗವಾಗಿದ್ದೀರೆಂಬುದನ್ನು ಊಹಿಸಿಕೊಳ್ಳಲಾರಿರಿ. ಮೈಸೂರು ಬಿಟ್ಟು ಹಲವು ವರ್ಷಗಳಾದರೂ, ನಾನಲ್ಲಿ ಕಳೆದ ದಿನಗಳ ಕನಸು ಕಾಣುತ್ತಿದ್ದೇನೆ. ಅವು ಮಾತ್ರ ವಾಸ್ತವವೆಂದು ನನಗನಿಸುತ್ತಿದೆ. ಪ್ರತಿ ತಿಂಗಳೂ ತ್ರಿಚೂರಿನ ಆಶ್ರಮಕ್ಕೆ ದೀರ್ಘ ಸಮಾಚಾರ ಪತ್ರ ಕಳಿಸುತ್ತಿದ್ದೇನೆ. ಅಲ್ಲಿಂದ ಅದರ ಪ್ರತಿಗಳನ್ನು ನಾನು ಸೂಚಿಸಿರುವ ಮಿತ್ರರಿಗೆ ರವಾನಿಸಲಾಗುತ್ತದೆ. ನಿಮಗೂ ಒಂದು ಪ್ರತಿ ಬರುತ್ತದೆ. ಅದನ್ನು ಕಸ್ತೂರಿ, ಶೇಷುಮಾಮ, ಎನ್. ನರಸಿಂಹಮೂರ್ತಿ ನಿವೃತ್ತ ಗ್ರಂಥಪಾಲರು) ಮತ್ತು ಇತರ ಮಿತ್ರರಿಗೆ ತೋರಿಸಿ, ನಾನು ಇದೆ ತಾನೆ ಹಾಲೆಂಡಿಗೆ ಹೋಗಿಬಂದೆ. ಲೀಡನ್‌ನಲ್ಲಿಟ್ಟಿರುವ ಪ್ರಸಿದ್ಧ ಪ್ರಜ್ಞಾಪಾರಿಮಿತನ ಮೂಲವಿಗ್ರಹದ ಭಾವಚಿತ್ರ ಈ ಕಾಗದದ ಹಿಂದಿದೆ, ನೋಡಿ. ನೀವದನ್ನು ನೋಡಿದರೆ, ಗೊಮ್ಮಟನನ್ನು ಕುರಿತು ಬರೆದಂತೆ, ನೀವೊಂದು ಕವಿತೆ ರಚಿಸುತ್ತೀರೆಂಬ ಭರವಸೆ ನನಗಿದೆ. ಈ ಭಾವಚಿತ್ರ ವಿಗ್ರಹದ ದುರ್ಬಲ ಪ್ರತಿಬಿಂಬವಾಗಿದೆ.

ಕಳೆದ ಭಾನುವಾರ ಪ್ಯಾರಿಸ್ಸಿನ ಸುಪ್ರಸಿದ್ಧ ಸಭಾಂಗಣವೊಂದರಲ್ಲಿ ಫ್ರೆಂಚ್ ಭಾಷೆಯಲ್ಲಿ ಭಾಷಣ ಮಾಡಿದೆ. ನಾನೊಂದು ಪ್ರಬಂಧ ಓದಿದೆ. ನನ್ನ ಉಚ್ಚಾರಣೆ ಹಾಗೂ ಧ್ವನಿಯ ಏರಿಳಿತಗಳು ಸೊಗಸಾಗಿದ್ದುವೆಂದು ಸಭಿಕರು ಪ್ರಶಂಸಿಸಿದರು. ಉಚ್ಚಾರಣೆಯ ಪಾಠಕ್ಕಾಗಿ ಪ್ರಾಧ್ಯಾಪಕರೊಬ್ಬರಿಗೆ ಗಂಟೆಗೆ ಹತ್ತು ರೂಪಾಯಿ ಸಂಭಾವನೆ ಸಲ್ಲಿಸುತ್ತಿದ್ದೇನೆ. ಬರುವ ಭಾನುವಾರ ಫ್ಲಾರೆನ್ಸ್‌ನಲ್ಲಿ ಹತ್ತು ದಿನ ಪ್ರವಾಸ ಮಾಡಿ, ಅಸ್ಸಿಸಿ ಮತ್ತು ಸಿಯನ ನೋಡಿಕೊಂಡು ಬರುತ್ತೇನೆ.

ಎಲ್ಲರಿಗೂ ನನ್ನ ಒಲುವುಗಳು.
ನಿಮ್ಮ ಪ್ರೀತಿಗೆ ಪಾತ್ರನಾದ
ಸಿದ್ಧೇಶ್ವರಾನಂದ

Casa di Santa Catherina 45 pasta San Girgie
Florence, 29th May 1939

My dear Puttappa,

You must have received my last card and then copy of the long letter, re: my tour in Holland. After three weeks of very strenuous work again in Paris. I am now in Italy, in Florence amidst the picturesque setting of Tuscany Hills. To whom else but to Kasturi. Seshu mama, and  you can I communicate the rapturous joy in moving in this centre of Italian renaissance that has made modern European culture. In the famous square you find on the opposite are seen some of the master works of arts of Michael Angelo and Raphael. I saw the house of Dante where he wrote the Divine Comedy and the hill whee Galileo saw stars through the telescope and the famous chapel of Medicis and the masterpieces of Michael Angelo.

I am sending you large size photos…, After seeing them if your generosity is sufficiently awakened you can pass them to Sampath for National School. Here, close by Boccacio wrote his Decameron. Assissi is the real Melkote of Italy and Europe. The presence of St. Francis is felt there and one feels blessed that in Europe there is  one spot which is India thro and thro and just saw another museum and the monastery of Savanarola and the University. You will soon get a very long letter giving details of the trip. Remember me to all and particularly to Mr. N. Narasimha Murthy. I go next Thursday to Paris. If I stay long here I may become and admirer of  Mussolini! I do not want that. Italy is Mussolini and he has made her great!

Yours affectionately
Siddeshwarananda

ಕಾಸ ಡಿ ಸಾಂತ ಕ್ಯಾಥರೀನ ೪೫
ಪೋಸ್ಟ್ ಸಾನ್ ಜಾರ್ಜಿಯೋ
ಫ್ಲಾರೆನ್ಸ್ ೨೯-೫-೧೯೩೯

 


[1] ‘ನೆನಪಿನ ದೋಣಿಯಲ್ಲಿ’ಈ ವಿಭಾಗ ನನ್ನ ಸಹಧರ್ಮಿಣಿ ೧೯೮೨ನೆಯ ಸೆಪ್ಟೆಂಬರ್ ೧೫ರಲ್ಲಿ ದೇಹತ್ಯಾಗ ಮಾಡುವುದಕ್ಕೆ ಮೊದಲೆ ಒಂದೆರಡು ವರ್ಷಗಳ ಹಿಂದೆಯೆ ಬರೆದದ್ದು.’ ೨೧-೧೧-೧೯೮೫)