ಜೆಜ್ ಎಂ. ಮಾರ್ಸೆ ಸಾಟೋ
೨, ರೂ ಆಗಸ್ಟ್ ಮಾಕೆ
೨೫-೧೧-೧೯೩೭

ಪ್ರೀತಿಯ ಪುಟ್ಟಪ್ಪ,

ಸ್ವಲ್ಪ ಸಮಯದ ಹಿಂದೆ ನಾನು ಕಳುಹಿಸಿದ ಕಾರ್ಡು ತಲುಪಿರಬೇಕು. ನೀವು ಉತ್ತರವನ್ನೇ ಬರೆದಿಲ್ಲ. ಗ್ರಹಸ್ಥಾಶ್ರಮವನ್ನು ಪ್ರವೇಶಿಸಿದ ಮೇಲೆ ಸ್ಥಿತಿಗತಿಗಳೆಲ್ಲ ಸಮರ್ಪಕವಾಗಿದೆ ಎಂದು ಭಾವಿಸಿದ್ದೇನೆ. ಮಾನಪ್ಪ ಹೇಗಿದ್ದಾರೆ? ಅವರ ಶ್ರೀಮತಿಯ ಆರೋಗ್ಯ ಉತ್ತಮಗೊಳ್ಳುತ್ತಿದೆ ಎಂದು ನಂಬಿದ್ದೇನೆ. ಕಳೆವಾರ ಶಿವಮೊಗ್ಗೆಯ ಶ್ರೀಕಂಠನ್ ಪ್ರೀತಿ ತುಂಬಿ ತುಳುಕುವ ಒಂದು ಕಾಗದ ಬರೆದಿದ್ದಾನೆ. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಮ್ಮೆಲ್ಲರ ವಿಷಯಕ್ಕೆ ಆ ಹುಡುಗನ ವಿಶ್ವಾಸ ಇನ್ನೂ ಹಾಗೇ ಇದೆ. ಅವನ ಬರವಣಿಗೆಯ ಶೈಲಿ ಉತ್ತಮಗೊಂಡಿರುವಂತೆ ಕಾಣುತ್ತಿದೆ. ಅವನಿಗೆ ಬೇಗ ಉತ್ತರ ಬರೆಯುತ್ತೇನೆ.

ಚಳಿಗಾಲ ಹತ್ತಿರವಾಗಿದೆ. ಉಷ್ಣಮಾನ ಅನೇಕ ವೇಳೆ ಸೊನ್ನೆ ಡಿಗ್ರಿಗಿಂತ ಕೆಳಕ್ಕೆ ಹೋಗಿಬಿಡುತ್ತದೆ. ಪ್ರಪ್ರಾತಃಕಾಲದಲ್ಲಿ ಹೊಳೆಹೊಳೆಯುವ ಹಿಮದ ಹಲ್ಲೆಗಳು ಮನೆಯ ಛಾವಣಿಯ ಮೇಲೆ ಉದುರುತ್ತಿರುವ ದೃಶ್ಯ ರಮಣೀಯವಾಗಿರುತ್ತದೆ. ಈ ನಗರ ಕಲಾತ್ಮಕವಾಗಿದೆ. ನಗರದ ಮಧ್ಯೆ ನದಿ ಅಂಕುಡೊಂಕಾಗಿ ಹರಿಯುತ್ತಿದೆ. ಸುತ್ತ ಕಾಡು. ನಾನಿರುವ ಮನೆ ಕಾಡಿನ ಅಂಚಿನಲ್ಲೇ ಇದೆ. ನಾನು ಅನೇಕ ಸಲ ಕಾಡಿನಲ್ಲಿ ವಾಯುಸಂಚಾರಕ್ಕೆ ಹೋಗುತ್ತಿರುತ್ತೇನೆ. ಹುಚ್ಚುಹಿಡಿಸುವ ಸದ್ದುಗದ್ದಲಗಳ ನಗರ ಮಧ್ಯೆ ವಾಸಿಸುವುದು ಎಂದರೇನು ಎಂಬುದನ್ನು ನೀವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಿರುವಾಗ ಈ ಕಾಡು ಎಂಥ ಸಂತೋಷ ನೀಡುತ್ತದೆ ಬಲ್ಲೆಯಾ? ಕಾಡಿನಲ್ಲಿ ದೇವಂಗಿ ಪ್ರದೇಶವನ್ನು ನೆನಪಿಗೆ ತರುವ ಕೆಲವು ಪ್ರದೇಶಗಳಿವೆ. ಆದರೆ ಈಗ ಈ ಕಾಡುಗಳು ವಿಷಾದದ ದೃಶ್ಯಗಳಾಗಿವೆ.

ಕೇವಲ ಎರಡೇ ತಿಂಗಳ ಹಿಂದೆ ದಟ್ಟವಾದ ಅರಣ್ಯವಾಗಿದ್ದದ್ದು ಈಗ ಮರಗಳ ಅಸ್ಥಿಪಂಜರಗಳ ದೃಶ್ಯವನ್ನು ಒದಗಿಸುತ್ತಿದೆ. ಎಲೆಗಳೆಲ್ಲಾ ಉದುರಹೋಗಿವೆ. ಹಕ್ಕೆಗಳೆಲ್ಲಾ ಹಾರಿಹೋಗಿವೆ. ಮನೆಯ ಬಾಲ್ಕನಿಗಳಲ್ಲಿ ಮಕ್ಕಳು ಉದುರಿಸುವ ಬ್ರೆಡ್ಡಿನ ಚೂರುಪಾರುಗಳನ್ನು ತಿಂದುಕೊಂಡಿರುವ ಪಾರಿವಾಳ, ಗುಬ್ಬಿಗಳು ಮಾತ್ರ ಉಳಿದಿವೆ. “ನನ್ನದೇ ಹವಾ” ಎನ್ನುವ ವಿಲಕ್ಷಣ ಹವದ ಹಿನ್ನಲೆಯಲ್ಲಿ ಗುಬ್ಬಿಗಳ ಮಧುರವಾದ ಚಿಲಿಪಿಲಿ ಸುಪ್ರಭಾತ ಹಾಡುತ್ತದೆ. ಸೂರ್ಯ ಇನ್ನೂ ಮೂರುತಿಂಗಳು ಕಾಲ ಒಂದು ರಹಸ್ಯವಾಗಿಯೇ ಉಳಿದಿರುತ್ತಾನೆ. ಅವನ ಶಾಖರಹಿತ ಕಿರಣಗಳು ಒಮ್ಮೊಮ್ಮೆ ತೀರ ಅನಿರೀಕ್ಷಿತವಾಗಿ ಸಂತೋಷರಹಿತವಾದ ಆವರಣವನ್ನು ಬೆಳಗುತ್ತವೆ. ಹಾಗಾದಾಗ ವಿಷಣ್ಣವಾದ ಈ ಆವರಣ ಇನ್ನೂ ವಿಕಾರವಾಗುತ್ತದೆ. ಬೇಸಗೆ ಬೇರೆಯದೇ ಥರಾ ಇತ್ತು. ಸೂರ್ಯನ ಬೆಳಕು ಉಜ್ವಲವಾಗಿತ್ತು. ಸೂರ್ಯಾಸ್ತವಾಗುತ್ತಿದ್ದದ್ದು ೮-೩೦ಕ್ಕೆ. ಪ್ರಕೃತಿ ತದ್ವತ್ ಮೈಸೂರಿನಂತೆಯೇ ಇತ್ತು. ಈಗ ಸೂರ್ಯಾಸ್ತ ೪-೩೦ಕ್ಕೆ ಆಗಿಹೋಗುತ್ತದೆ! ನನ್ನ ನಿತ್ಯನಿಯಮದ ವಾಯಸಂಚಾರ ಮಧ್ಯಾಹ್ನ ಊಟದ ನಂತರ ನಡೆಯುತ್ತದೆ. ಕೆಲವು ದಿನಗಳ ಹಿಂದೆ ನಾನು ಇಲ್ಲಿನ ಅತಿಥೇಯರ ಹಳ್ಳಿಮನೆಗೆ ಹೋಗಿದ್ದೆ. ಅಲ್ಲಿ ಹೊಲ ಗದ್ದೆ ಕಾಡುಗಳಲ್ಲಿ ಸುತ್ತಿದೆ. ಅಲ್ಲಿನ ‘ಗೌಡ’ರು ನಮ್ಮೂರಿನ ಗೌಡರನ್ನು ನೆನಪಿಗೆ ತಂದರು. ಹೆ‌ಚ್ಚಿನ ವ್ಯತ್ಯಾಸವಿಲ್ಲ. ಹೊರಗಿನ ವೇಷಭೂಷಣಗಳನ್ನು ಬಿಟ್ಟರೆ ನಮ್ಮಲ್ಲಿ ಸಾಮಾನ್ಯ ಮನುಷ್ಯ ಹೆಚ್ಚು ಸುಸಂಸ್ಕೃತನಾಗಿರುತ್ತಾನೆ. ಅಂಕಿಅಂಶಗಳ ಪ್ರಕಾರ ನಮ್ಮ ಜನ ಶೇಕಡಾವಾರು ಇಲ್ಲಿನ ಜನರಷ್ಟು ಅಕ್ಷರಸ್ಥರಲ್ಲ. ಇಲ್ಲಿ ಅಕ್ಷರಸ್ಥರು ಎಂದರೆ ವೃತ್ತಪತ್ರಿಕೆ ಓದಿ ಅದು ದೊರಕಿಸುವ ಉದ್ರೇಕಕ್ಕೆ ದಾಸರಾಗಿರುವವರು ಎಂದು. ವೀವರ್ಸ್‌ಲೈನಿನ (ಈಗಿನ ಕೃಷ್ಣಮೂರ್ತಿಪುರಂ) ನಂಜೇಗೌಡರಂಥವರು ಇಲ್ಲಿ ಯಾರೂ ಸಿಕ್ಕುವುದಿಲ್ಲ.

ಹಳ್ಳಿಗಾಡಿಗೆ ಹೋಗಿದ್ದಾಗ ನಮ್ಮ “ಕಾಗೆ”ಯನ್ನು ನೋಡಿದೆ. ನಮ್ಮ ಅತಿಥೇಯರು ಹೇಳಿದರು: ಛಳಿಗಾಲದ ಕೊರೆಯುವ ಛಳಿ ಇತರ ಎಲ್ಲಾ ಹಕ್ಕಿಗಳನ್ನೂ ಓಡಿಸಿಬಿಟ್ಟಾಗ ಈ “ಮಹಾಶಯರು” ಯೂರೋಪಿಗೆ ತಮ್ಮ ವಾರ್ಷಿಕ ಭೇಟಿ ನೀಡುತ್ತಾರಂತೆ. ಯಾವುದೇ ಹವೆಯನ್ನಾದರೂ ಇದು ತಡೆಯಬಲ್ಲದು. ಕಾಗೆ ಅತ್ಯಂತ ದೀರ್ಘಕಾಲ ಬಾಳುತ್ತದೆ ಎಂದು ಭಾರತೀಯರು ಹೇಳುವ ಕಥೆ ನಿಜವಾಗಿದ್ದರೂ ಇರಬಹುದು!

ಅರವತ್ತು ಲಕ್ಷ ಜನ ವಾಸಿಸುತ್ತಿರುವ ಪ್ಯಾರಿಸ್ಸಿನಂಥ ರಾಜಧಾನಿಯಲ್ಲಿ ಇದರ ಅದ್ಭುತವಾದ ಉದ್ಯಾನವನಗಳು, ಕಲಾಕೃತಿಗಳು ಇವುಗಳ ನಡುವೆ ಹೊರತು ಬೇರೆಲ್ಲಿಯೂ ನಾವು ಸ್ವಸ್ಥವಾಗಿರುವುದು ಸಾಧ್ಯವಿಲ್ಲ. ಬೊಂಬಾಯಿ ಅಥವಾ ಕಲ್ಕತ್ತದ ವಿಸ್ತೃತರೂಪ ಇದು. ಸಾಮಾನ್ಯ ಯೂರೋಪಿಯನ್ನರಿಗಿಂತ ಫ್ರೆಂಚರು ಸ್ವಲ್ಪಮಟ್ಟಿಗೆ ಭಿನ್ನ. ವರ್ಣಭೇದ ಸ್ವಲ್ಪವೂ ಇಲ್ಲ. ಮಸಿ ಕಪ್ಪಿನ ನೀಗ್ರೋ ಶ್ವೇತವರ್ಣದ ತನ್ನ ಪ್ರಿಯೆಯೊಡನೆ ಕೈಯಲ್ಲಿ ಕೈಯಿಟ್ಟು ನಡೆಯುವುದು ಇಲ್ಲಿ ಸಾಮಾನ್ಯ ದೃಶ್ಯ. ಸುತ್ತ ಜನಜೀವನ ತನ್ನಷ್ಟಕ್ಕೆ ತಾನು ಹರಿಯುತ್ತಿರುತ್ತದೆ. ಯಾರೂ ಅವರನ್ನು ಗಮನಿಸಲೂ ಹೋಗುವುದಿಲ್ಲ. ಆದರೆ ಬೇರೆ ರಾಷ್ಟ್ರದ ಜನಗಳಲ್ಲಿರುವ ಮೊಹಲ್ಲಾಗಳಲ್ಲಿ ಪರಿಸ್ಥಿತಿ ಬೇರೆ. ಸ್ವಲ್ಪ ಸಮಯದ ಹಿಂದೆ ನಾನು ಅಮೆರಿಕನ್ ಬ್ಯಾಂಕೊಂದರಲ್ಲಿ ಖಾತೆ ತೆರೆಯಲು ಹೋಗಿದ್ದೆ. ಅವರು ಉಪಾಯವಾಗಿ ನನ್ನನ್ನು ಸಾಗಹಾಕಿದರು. ಇದನ್ನು ಕೇಳಿದ ಮಿತ್ರರು ಹೇಳಿದ್ದು-ನಾನು ವರ್ಣೀಯನಾದ್ದರಿಂದ ತಮ್ಮ ಇತರ ಖಾತೆದಾರರು ಎಲ್ಲಿ ಕಳಚಿಕೊಳ್ಳುತ್ತಾರೋ ಎಂಬ ಭಯದಿಂದಲೇ ಬ್ಯಾಂಕಿನವರು ಹಾಗೆ ಮಾಡಿದ್ದು ಅಂತ ವರ್ಣದ ದೃಷ್ಟಿಯಿಂದ ಅಂತಹ ಭೇದ ಭಾವ ಇಲ್ಲ ಸರಿ, ವಸಾಹತುಗಳಿಗಾದರೂ ಏನಾದರೂ ಪ್ರಯೋಜನವುಂಟೋ ಎಂದು ತಿಳಿದುಕೊಳ್ಳುವ ಅಪೇಕ್ಷೆ ಉಂಟಾಯಿತು. ಇಡೀ ಪಶ್ಚಿಮದ್ದೆಲ್ಲಾ ಒಂದೇ ಕಥೆ. ಫ್ರೆಂಚರ ವಸಾಹತುಗಳಾಗಲೀ ಯಾರದ್ದೇ ಆಗಲಿ-ಅವು ಇರುವುದೇ ಈ ಜನರಿಂದ ಶೋಷಣೆಗೊಳ್ಳುವುದಕ್ಕೆ. ನಾವು ನಾಗರೀಕತೆಯನ್ನು ಪ್ರಚಾರಗೊಳಿಸಲು ಬಂದವರು ಎಂದು ಇವರೆಲ್ಲ ಹೇಳಿಕೊಳ್ಳುವುದು ಸುಮ್ಮನೆ ಕಣ್ಣೊರಸುವುದಕ್ಕೆ ಅಷ್ಟೆ. ಐರೋಪ್ಯ ಸಾಮ್ರಾಜ್ಯಷಾಹಿತ್ವ ಕೆಲಸಮಾಡುವುದು ಒಂದೇ ಥರ. ದುರಾಸೆ, ಸಾಮ್ರಾಜ್ಯವನ್ನು ವಿಸ್ತರಿಸುವ ಆಕಾಂಕ್ಷೆ ಇವೇ ವಿಶ್ವಪ್ರಮಾದ ಗಂಡಾಂತರವನ್ನು ಸೃಷ್ಟಿಸುವುದು, ಅಲ್ಲದೆ ಶಾಂತಿಯೆಂಬುದನ್ನು ಈ ಭೂಮಂಡಲದಿಂದಲೇ ಅಳಿಸಿಹಾಕುವ ಮಾನಸಿಕ ಅಸ್ವಸ್ಥತೆಯನ್ನು ಸೃಷ್ಟಿಸುವುದೂ ಅದೇ. ಆದರೆ ಹೋಲಿಕೆಯ ದೃಷ್ಟಿಯಿಂದ ಹೇಳುವುದಾದರೆ ಯುರೋಪಿನ ಉದಾತ್ತತರ ಮನಸ್ಸಿನ ಅಭಿವ್ಯಕ್ತಿ ಹೆಚ್ಚಾಗಿ ಕಾಣುವುದು ಫ್ರಾನ್ಸಿನಲ್ಲೇ. ಇಲ್ಲಿನ ಫ್ರೆಂಚ್ ಅಕಾಡೆಮಿಯ ಬಳಿ ವಾಲ್ಟೈರಿನ ಪ್ರತಿಮೆ ಇದೆ. ಫ್ರೆಂಚ್ ಅಕಾಡೆಮಿ ಎಂದರೆ ನಿಮ್ಮ ಕರ್ನಾಟಕ ಸಾಹಿತ್ಯ ಪರಿಷತ್ ಇದ್ದಹಾಗೆ. ಆದರೆ ಅದರ ಇತಿಹಾಸ ದೀರ್ಘವಾದದ್ದು, ಅಲ್ಲದೆ ಫ್ರೆಂಚ್ ಸಾಹಿತ್ಯದ ಅತ್ಯುತ್ತಮ ಪರಂಪರೆಯ ಸಂರಕ್ಷಕ ಸಂಸ್ಥೆ ಅದು. ನಾನು ಆಗಾಗ ವಾಲ್ಟೈರನ ಪ್ರತಿಮೆಯ ಬಳಿ ಇಂತು ಕೆಲವು ಕ್ಷಣ ಚಿಂತಾಮಗ್ನನಾಗುತ್ತೇನೆ. ಜಗತ್ತಿನ ರೋಗಗಳಿಗೆ ಚಿಕಿತ್ಸೆ ಎಂದು ವಾಲ್ಟೈರ್ ಕಂಡುಹಿಡಿದದ್ದು ಎಂದು ನೀವು ಆಗಾಗ ಹೇಳುತ್ತಿರುತ್ತೀರಲ್ಲ, ಅವನ್ನು ನಾನು ಆಗನ ಪ್ರತಿಮೆಯ ಪಾದದ ಬಳಿ ನಿಂತು ಪ್ರಜ್ಞಾಪೂರ್ವಕವಾಗಿ ನೆನಪುಮಾಡಿಕೊಳ್ಳುತ್ತೇನೆ. ಪ್ರತಿಮೆ ಜೀವಂತವಾದಂತೆ ಭಾವಿಸುತ್ತೇನೆ. ಕಲಾವಿದ ಅತ್ಯಂತ ದಕ್ಷ ರೀತಿಯಲ್ಲಿ ವಾಲ್ಟೈರನ ಪ್ರತಿಮೆಯ ಮುಖದಲ್ಲಿ ವ್ಯಂಗ್ಯ ವ್ಯಕ್ತವಾಗುವಂತೆ ಮಾಡಿದ್ದಾನೆ. ಅದಕ್ಕಿಂತ ಹೆಚ್ಚು ವ್ಯಂಗ್ಯವನ್ನು ಮುಖ ಪ್ರತಿಫಲಿಸುತ್ತಿರುವಂತೆ ನನಗೆ ಭಾಸವಾಗುತ್ತದೆ. ಸ್ಪೆಯಿನ್‌ನಲ್ಲಿ ರೋಮನ್ ಕ್ಯಾಥಲಿಕರು ತಾವು ಫ್ರಾಂಕೋ ಪಕ್ಷದಲ್ಲಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸ್ಪೆಯಿನ ಮತ್ತು ಫ್ರಾನ್ಸಿನ ಕಾರ್ಡಿನಲ್ಲುಗಳೂ ಬಿಷಪ್ಪರೂ ಕ್ಯಾಂಟರ್ಬರಿಯ ಆರ್ಚ್‌ಬಿಷಪ್ಪರೊಡನೆ ನಡೆಸಿದ ಪತ್ರವ್ಯವಹಾರ ನಡೆಸಿದರಷ್ಟೆ. ಅದು ಈಗ ಪ್ರಕಟವಾಗಿದೆ. ಸೋವಿಯಟ್ ರಷ್ಯಾದ ಭಾವನೆಗಳನ್ನು ನಿರೀಶ್ವರವಾದವನ್ನು ಎದುರಿಸಲು ಅಗತ್ಯವಾದ ಬಲವಾದ ಪ್ರತಿಭಟನೆಯನ್ನು ಚರ್ಚು ವ್ಯವಸ್ಥೆಗೊಳಿಸುತ್ತಿದೆ. ಎಂಬುದು ಆ ಪತ್ರವ್ಯವಹಾರದಿಂದ ಗೊತ್ತಾಗಿದೆ. ಆಧುನಿಕ ಸಮಾಜವಾದದ ಭಾವನೆಗಳ ಪರ ಮತ್ತು ವಿರುದ್ಧವಾಗಿ ಎರಡು ಪ್ರಬಲ ಶಸ್ತ್ರಸಜ್ಜಿತ ಗುಂಪುಗಳಾಗಿ ಯೂರೋಪು ಒಡೆಯುತ್ತಿದೆ. ಸರ್ವಾಧಿಕಾರಿಗಳು ಸಾಧ್ಯವಾದಲ್ಲೆಲ್ಲ ಚರ್ಚಿನ ಸಹಾಯ ಪಡೆಯುತ್ತಿದ್ದಾರೆ. “ವಿ.ಎಸ್.” ಅವರಿಗೆ ಪ್ರಕೃತವಾದ ಒಂದು ವೃತ್ತಪತ್ರಿಕಾ ಭಾಗವನ್ನು ಕಳಿಸುತ್ತಿದ್ದೇನೆ. ಅವರು ಅದನ್ನು ಇಲ್ಲಿ ನೋಡಿದರು. ಪ್ರತಿಗಳು ಬೇಕು ಎಂದರು. ಅದನ್ನು ಫ್ರೆಂಚಿನಿಂದ ಇಂಗ್ಲಿಷಿಗೆ ಅನುವಾದ ಮಾಡಿ ಕಳಿಸುತ್ತಿದ್ದೇನೆ. ಆದಿಕಾಲದ ಕಿರಾತತ್ವವು ಹೇಗೆ ಶಕ್ತಿಯುತವಾದ ರೂಪಗಳಲ್ಲಿ ಈ ಆಧುನಿಕ ಕಾಲದಲ್ಲೂ ಮತ್ತೆ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಅದು ತೋರಿಸುತ್ತದೆ. ಈಗ ನಾನು ರೈಟ್ ಆನರಬರ್ಲ ಶ್ರೀನಿವಾಸ ಶಾಸ್ತ್ರಿಯವರ ಅನುಯಾಯಿಯಾಗುತ್ತಿದ್ದೇನೆ-ಏನು ಹೇಳುತ್ತೀಯ!!! ದ್ವೇಷವನ್ನು ಯಾವ ಸುಧಾರಣೆಯೂ ನಯಗೊಳಿಸಲಾರದು. ಜನ ಹೇಳುತ್ತಾರೆ ರಿಪಬ್ಲಿಕನ್ ಸರ್ಕಾರ ಚರ್ಚನ್ನು ಅವಮಾನಗೊಳಿಸಿ ಉದ್ರೇಕೆಸಿದೆ, ಆದ್ದರಿಂದ ಇಡೀ ರೋಮನ್ ಕ್ಯಾಥೋಲಿಕ್ ಗುಂಪು ರಾಜಕೀಯದ‌ಲ್ಲಿ “ಬಲ” ಫಂಥದ ಪಕ್ಷ ಸೇರಿ “ವಾಮ” ಪಂಥವನ್ನು ಎದುರಿಸುತ್ತಿದೆ. ಎಂದು. ಅಮಾನುಲ್ಲಾ ಪಾತ್ರವಹಿಸುವುದು ದುರಂತವಾದ ಆಟ. ಆದ್ದರಿಂದ ಬಚ್ಚಾ ಸಕ್ಕೋಗಳು ಬರುವುದು ಅನಿವಾರ್ಯ. ಭಾರತದಲ್ಲಿನ ಕಥೆಯೇ ಬೇರೆ. ಗಾಂಧೀಜಿ ಕೂಡ ಚರ್ಚಿನ (ಎಂದರೆ ಹಿಂದೂ ಧರ್ಮದ) ಭಾವನೆಗಳಿಗೆ ಆಘಾತವುಂಟು ಮಾಡಿದರೂ ಅವರನ್ನು ಗೌರವಿಸಿ ಪೂಜಿಸುತ್ತಾರೆ. “ಹರಿಜನರೊ ಕುರಿಜನರೋ ಗೊತ್ತಿಲ್ಲ (ನನ್ನ ಮೈಸೂರು-ನಂಜನಗೂಡು ರೈಲು ಅನುಭವಗಳ ಮಾತುಗಳು)” ಎಂದು ಮೂಗು ಮುರಿಯುತ್ತಿದ್ದ ಸಂಪ್ರದಾಯವಾದಿ ಪಂಡಿತ ಕೂಡ ತನ್ನ ಹೃದಯಾಂತರಾಳದಲ್ಲಿ ಸುಧಾರಣೆಯ ಶಕ್ತಿಯು ಪರಮ ಅಧ್ಯಾತ್ಮಿಕ ಮೂಲದಿಂದ ಹೊರಟದ್ದು ಎಂಬುದನ್ನು ಒಪ್ಪಿಕೊಳ್ಳದೇ ಹೋಗುವುದಿಲ್ಲ. ಅದೇ ಪ್ರಜಾಪ್ರಭುತ್ವದ ನಿಜವಾದ ಚಳುವಳಿ. ಏಕೆಂದರೆ ಚೇತನವು ತನ್ನ ಮಟ್ಟ ಏನು ಎಂಬುದನ್ನು ತಿಳಿದುಕೊಳ್ಳಲು ನಡೆಸಿದ ಚಳುವಳಿ ಅದು. ಈ ಸಹಜ ಪ್ರಕ್ರಿಯೆ ಪ್ರಜ್ಞಾಪೂರ್ವಕವಾಗಿ ನಡೆಯುವಂತೆ ಈ ಸಹಜ ಪ್ರವೃತ್ತಿ ಪ್ರಜ್ಞಾಪೂರ್ವಕವಾಗಿ ಹರಿಯುವಂತೆ ಮಾಡಿದರು ನಮ್ಮ ಋಷಿಗಳು. ಅವರು ನಿಜವಾಗಿಯೂ ಮಾನವಪ್ರಜ್ಞೆಯನ್ನು ಉನ್ನತ ಸ್ತರಕ್ಕೆ ಏರಿಸುವ “ವಿದ್ಯುತ್ ವಿಕರಣ ಕೇಂದ್ರಗಳು.” ಅವರದು ರಚನಾತ್ಮಕ ಸುಧಾರಣೆ. ಅಂಥ ಜೀವನ ಶಸ್ತ್ರವೈದ್ಯರು ನಡೆಸುವ ಯಾತನಾಪೂರ್ಣವಾದ ಶಸ್ತ್ರಕ್ರಿಯೆಯೂ ಯಾವುದೇ ಪ್ರತಿಕ್ರಿಯೆಯನ್ನು ಉತ್ಪಾದಿಸುವುದಿಲ್ಲ. ಏಕೆಂದರೆ ಅದು ನಿಜವಾದ ಆರೋಗ್ಯವನ್ನು ನೀಡುವ ಸಂಜೀವಿನಿ. ಪಶ್ಚಿಮದಲ್ಲಿ ಸುಧಾರಕರು ತಾತ್ಕಾಲಿಕವಾದ ವ್ಯವಸ್ಥೆಗಳನ್ನು ಮಾಡುತ್ತಾರೆ. ಮೇಲು-ಕೀಳುಗಳನ್ನು ತೊಡೆಯಲು ಅಗತ್ಯವಾದ ಸಹಜವಾದ ಪ್ರವೃತ್ತಿಗೆ ಸಮಾಜದ ನೇತಾರರಿಂದ ನಿರ್ಲಿಪ್ತವಾದ ಮಾರ್ಗದರ್ಶನ ದೊರೆಯುವುದಿಲ್ಲ. ವ್ಯಕ್ತಿಯ ಹಕ್ಕುಗಳನ್ನು ಕುರಿತಂತೆ ಪೂರ್ವದೇಶದ ಜನರ ಪ್ರಜ್ಞೆಯಲ್ಲೇ ಒಂದು ಬದಲಾವಣೆಯನ್ನು ಉಂಟುಮಾಡುವಷ್ಟರ ಮಟ್ಟಿಗೆ ಪೂರ್ವದ ಮೇಲೆ ಪಶ್ಚಿಮವು ಪ್ರಭಾವ ಬೀರಿದೆ. ಅದು ಒಳ್ಳೆಯ ಪ್ರಭಾವವೂ ಹೌದು. ಅದರ ಜೊತೆಗೆ ಅದಕ್ಕೆ ಮಾರ್ಗದರ್ಶಕವಾಗಿ ನಮ್ಮ ಜನರಲ್ಲಿರುವ ಮತ್ತೊಂದು ಸಹಜ ಮನೋಧರ್ಮದ ಅವಶ್ಯಕತೆಯೂ ಇದೆ. ಎಲ್ಲ ಕರ್ಮಗಳ ನಿಜವಾದ ತತ್ವವನ್ನು ಒಂದು ಜನಾಂಗದ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಕಂಡುಕೊಳ್ಳುವದೇ ಅದು. ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಒಂದು ಹೊಸ ವ್ಯವಸ್ಥೆಯನ್ನೇ ಸ್ಥಾಪಿಸಲು ಫ್ರಾನ್ಸಿನ ಮಹಾಕ್ರಾಂತಿ ಕಾರಣವಾಯಿತಷ್ಟೆ. ಆ ಕ್ರಾಂತಿಯ ತತ್ವಗಳನ್ನೆಲ್ಲ ನಿರ್ನಾಮ ಮಾಡುತ್ತೇನೆ ಎಂದು ಘೋಷಿಸಿದ್ದಾನೆ ಒಬ್ಬ ಸರ್ವಾಧಿಕಾರಿ. ಸೋವಿಯಟ್ ಭಾವನೆಗಳು, ಬದುಕನ್ನು ಕುರಿತಂತೆ ರಿಪಬ್ಲಿಕನ್ನರು ನಿರೂಪಿಸಿದ ತತ್ವಗಳ ಸಂತತಿಯಲ್ಲದೆ ಇನ್ನೇನು? ಅದನ್ನು ಸಾಧಿಸಲು ರಷ್ಯಾದೇಶವು ಹಿಂಸೆ, ದ್ವೇಷಗಳ ಮಾರ್ಗವನ್ನು ಅನುಸರಿಸಿತು. ಹಿಂಸೆಯನ್ನು ಅವಲಂಬಿಸಿದ ಯಾವುದೇ ತತ್ವವೂ ಶಾಶ್ವತವಾದ ಕ್ಷೇಮವನ್ನು ಸಾಧಿಸಲಾರದು. ಶಸ್ತ್ರವೈದ್ಯನೊಬ್ಬನು ರೋಗಾಣುಗಳಿರುವ ಕೈಯನ್ನು ತೊಳೆದುಕೊಳ್ಳದೆ ಹಾಗೇ ಶಸ್ತ್ರಕ್ರಿಯೆಗೆ ತೊಡಗಿದಂತಾಗುತ್ತದೆ. ಇಂದಿನ ಜಗತ್ತಿನ ಸ್ಥಿತಿ-ಮಾಸ್ಕೋ ನಿಲುವಿಗೆ ಪ್ರತಿಕ್ರಿಯೆಯಾಗಿ ಉದ್ಬವಿಸಿರುವಂಥದು-ಕ್ರೈಸ್ತವೇದವೇ ಪ್ರಮಾಣವೆಂದು ನಂಬಿರುವವರೂ, ಯಾವುದೇ ಬದಲಾವಣೆಯೂ ಕೂಡದು ಎಂದು ವಾದಿಸುವವರೂ ಸನಾತನಿಗಳೂ ಆರಂಭಿಸಿರುವ ಪ್ರತಿ-ಕ್ರಾಂತಿ ಇದು. ಸ್ವಾಮಿ ವಿವೇಕಾನಂದರೂ ಗಾಂಧೀಜಿಯೂ ನೀಡಿದ ಪರಿಹಾರವು ನಿಜವಾದ ಸಂಸ್ಕೃತಿಯ ಆಧಾರದ ಮೇಲೆ ರೂಪಿತವಾದದ್ದು. ಸಮಾಜೀಕರಣವಾಗಬೇಕು ಎಂಬುದು ನಿಸರ್ಗದ ಸಹಜವೂ ನ್ಯಾಯಬದ್ಧವೂ ಆದ ಪ್ರಕ್ರಿಯೆ. ಸಂಸ್ಕೃತಿಯ ಹಿನ್ನಲೆಯಲ್ಲಿ ಅದು ನಡೆದಾಗ ಅದು ಪ್ರವೃತ್ತಿಯನ್ನೂ ಭಾವಗಳನ್ನೂ ಶುದ್ಧಗೊಳಿಸುತ್ತದೆ. ಅದೇ ನಿಜವಾದ ಶಿಕ್ಷಣ. ಮಾನವನ ‘ಬುದ್ಧಿಯ’ ಮೂಲ ಅವನ ಚೇತನಕ್ಕೆ ಅದು ಇಳಿದಾಗಲೇ ಅಂಥ ಶುದ್ಧೀಕರಣ ನಡೆಯುವುದು. ಮಾನವನ ಹೃದಯದಿಂದ ಮಾರ್ಗದರ್ಶನ ದೊರೆತಾಗಲೇ ಎಲ್ಲರ ಒಳಿತಿಗಾಗಿ ನಡೆಯಬೇಕಾದ ಕಾರ್ಯ ಕೈಗೂಡುವುದು. ಈ ಸತ್ಯವು ಬುದ್ಧಿಯನ್ನು ಬೆಳಗದೆ ಭಾವವನ್ನು ಮಾತ್ರ ಉದ್ರೇಕಗೋಳಿಸಿದರೆ ಆಧುನಿಕ ಯೂರೋಪಿನ ನಾಗರಿಕತೆಯ ದುರಂತ ಅನಿವಾರ್ಯವಾಗುತ್ತದೆ. “ರಾಸಾಯನಿಕಗಳನ್ನು ಒಟ್ಟಿಗೆ ಇಡು, ಹರಳುಗೊಳ್ಳುವಿಕೆ ತನಗೆ ತಾನೇ ನಡೆಯುತ್ತದೆ” ಎಂಬ, ಸ್ವಾಮಿ ವಿವೇಕಾನಂದರ ಪ್ರಖ್ಯಾತ ಸೂತ್ರ ನೆನಪಿಗೆ ಬರುತ್ತಿದೆ. ನಾಣ್ಯದ ಇನ್ನೊಂದು ಮುಖ ಕುರಿಜನರು ಸೃಷ್ಟಿಸಿರುವ ಸರ್ವಾಧಿಕಾರಿಗಳಿಗಾಗಿ ಆದದ್ದು. ಬುದ್ಧನ ವಿವೇಕದ ಮಾತುಗಳು: “ದ್ವೇಷವನ್ನು ದ್ವೇಷದಿಂದ ಗೆಲ್ಲುವುದು ಸಾಧ್ಯವಿಲ್ಲ, ಪ್ರೀತಿಯಿಂದ ಮಾತ್ರವೇ ಗೆಲ್ಲಬಹುದು” ಎಂಬುದು ದುರ್ಬಲರಿಗೆ ಹೇಳಿದ್ದಲ್ಲ. ನಿಜವಾದ “ಶಕ್ತಿ” ಮೂಡುವುದು ಪರಹಿತಾಸಕ್ತಿಯಿಂದಲೇ. ಹಾಗಲ್ಲದೇ ಹೋದರೆ ಉದ್ಧಾರಕಾರಕನಾದ ನಿಮ್ಮ ಕಲ್ಕಿಯಿಲ್ಲದೆ “ರಕ್ತ, ರಕ್ತ, ಅಯ್ಯೋ ರಕ್ತ” ಎಂಬಷ್ಟೇ ದೊರಕುತ್ತದೆ. ಯೂರೋಪಿನಲ್ಲಿ, ದೂರಪ್ರಾಚ್ಯದಲ್ಲಿ ಇರುವ ಪರಿಸ್ಥಿತಿಯನ್ನು ಗಮನಿಸಿದರೆ ಪಶ್ಚಿಮದ ನಾಗರಿಕತೆಯ ಸೈನ್ಯಷಾಹೀ ಮನೋಭಾವವು ಹೇಗೆ ವಿಫಲವಾಗಿದೆ ಎಂಬುದು ಗೊತ್ತಾಗುತ್ತದೆ. ಇಂಥದೊಂದು ಸಂದಿಗ್ಧ ಸಮಯದಲ್ಲಿ ಭಾರತದ ಸಂಯೋಜನಶೀಲ ಪ್ರವೃತ್ತಿಯು, ಚಾರಿತ್ರ‍್ಯವೇ ಮೂರ್ತಿವೆತ್ತಿರುವ ಮಹಾಪುರುಷನೊಬ್ಬನ ಮಾರ್ಗದರ್ಶನದಲ್ಲಿ ಸಾಮಾಜಿಕ ಮತ್ತು ರಾಜಕೀಯ ಸಮರಸತೆಯ ನಿಜವಾದ ಪ್ರತೀಕಗಳನ್ನು ಕಂಡುಕೊಳ್ಳುತ್ತಿದೆ. ಸೂಯೆಜ್‌ನ ಈ ಕಡೆಯಿಂದ ಬರುತ್ತಿರುವ, ಸರಿಯಾಗಿ ಅರಗಿಸಿಕೊಂಡಿಲ್ಲದ ಭಾವನೆಗಳು ನಮ್ಮ ಜನರನ್ನು ನಮ್ಮ ಜನರನ್ನು ಕುರುಡುಗೊಳಿಸದಿರಲಿ, ನಾವು ನಮ್ಮದೇ ತಂತ್ರವನ್ನು ಬಳಸಬೇಕು. ನೀವು, ಸಾಹಿತಿಗಳು ಜಗತ್ತಿನ ಸಿಂಹಾಸನರಹಿತ ಶಾಸಕರು, ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿ ಇದೆ ಎಂಬುದನ್ನು ನೆನಪಿನಲ್ಲಿಡಿ. ನನಗೆ ದುಃಖವುಂಟುಮಾಡಿರುವ ಸಂಗತಿ ಎಂದರೆ ಭಾರತದಲ್ಲಿ ನಮ್ಮ ಮಿತ್ರರ ಹೃದಯದಲ್ಲಿ ರೊಮೈ ರೊಲಾ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆಯೋ ಆ ಸ್ಥಾನ ಅವರಿಗೆ ಇಲ್ಲಿನ ಜನರ ಹೃದಯದಲ್ಲಿ ಇಲ್ಲ. ಸಾಹಿತಿಯಾಗಿ ಅವರಿಗೆ ಇನ್ನೂ ಇಲ್ಲಿ ತುಂಬ ಗೌರವ ಇದೆ. ಆದರೆ ಇಲ್ಲಿ ಹಿನ್ನಲೆಗೆ ನೂಕಿದೆ. ಫ್ರೆಂಚರ ಚೇತನದಲ್ಲೇ ರಾಷ್ಟ್ರೀಯತೆ, ಪ್ರಬಲವಾಗಿ, ಬಹಳ ಪ್ರಬಲವಾಗಿ ಬೇರೂರಿದೆ. ಹೊಸ ಸಂಸಾರವೊಂದು ಈ ವೃದ್ಧಾಪ್ಯದಲ್ಲಿ ಹೊಸ ಸಂಸ್ಕಾರವನ್ನು ಅವರಿಗೆ ನೀಡಿದ್ದನ್ನು ಈ ಜನ ಸಹಿಸಲಾರದೇ ಹೋದರು. ಈ ಸಂಸ್ಕಾರ ರಷ್ಯದ್ದು. ಮಹಾ ಶಾಂತಿದೂತನಾದ ಈತ ಇದ್ದಕ್ಕಿದ್ದಂತೆ ರಷ್ಯನ್ ಸಿದ್ಧಾಂತಗಳ ಪ್ರತಿಪಾದನೆಗಾದರೆ ಯುದ್ಧ ನಡೆಯಬಹುದು ಎಂದುಬಿಟ್ಟರು. ಯುದ್ಧ ಮತ್ತೆ ಪಶ್ಚಿಮಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತಿದ್ದ ಕಾರಣಕ್ಕಾಗಿ ಇವರನ್ನು ಆರಾಧಿಸುತ್ತಿದ್ದ ಜನರಿಗೆ ಇದೊಂದು ಆಘಾತವಾಯಿತು. ನಾವಂತೂ ಅವರಿಗೆ ಎಂದೆಂದಿಗೂ ಋಣಿಗಳು. ಏಕೆಂದರೆ ಪಶ್ಚಿಮಕ್ಕೆ ಶ್ರೀರಾಮಕೃಷ್ಣರನ್ನು ಪರಿಚಯಿಸಿದವರೇ ಅವರು. ನನ್ನ ಆತಿಥೇಯರು ಹೇಳುತ್ತಾರೆ, ಆ ಕೃತಿ ಪ್ರಕಟವಾದ ಕೂಡಲೇ ಸುಮಾರು ಇಪ್ಪತ್ತು ಸಾವಿರ ಓದುಗರು ರೊಲ ಅವರಿಗೆ ಕಾಗದ ಬರೆದು ತಮ್ಮ ಮೆಚ್ಚುಗೆಯನ್ನು ತಿಳಿಸಿದರಂತೆ! ನನ್ನ ತಲೆಗೆ ಮಾತ್ರ ಕಟ್ಟಿರುವ ಉತ್ಪ್ರೇಕ್ಷೆಯ ಪಟ್ಟದಂತೆಯೇ ಇದು ತೋರುತ್ತದೆ ಅಲ್ಲವೆ? ಇದರಲ್ಲಿ ಪರೇಶ ಮಹಾರಾಜರೂ ಪ್ರಿಯನಾಥ ಮಹಾರಾಜರೂ ಶೇ.೫೦ನ್ನು ಕಳೆದುಬಿಡುತ್ತಾರೆ! ಆದರೆ ನಾನು ಮೇಲೆ ಹೇಳಿದ ಸಂಖ್ಯೆ ಮಾತ್ರ ಸರಿಯಾಗಿರಬಹುದು. ಪ್ರೊ.ಲೆವಿ ಅವರ ಅನಂತರ ಪ್ರಾಧ್ಯಪಕರಾಗಿರುವ, (ಪ್ಯಾರಿಸ್ ವಿಶವಿದ್ಯಾನಿಲಯದ ಪ್ರೊ. ಹಿರಿಯಣ್ಣನವರು ಎನ್ನಬಹುದಾದ ಪ್ರೊ. ಮ್ಯಾಸನ್‌ಪಾಸಲ್ ಕಳೆದವಾರ ಬುದ್ಧನನ್ನು ಕುರಿತು ಉಪನ್ಯಾಸ ಮಾಡಿದರು. ರೊಮೈರೊಲಾ ಅವರ ಪುಸ್ತಕ ಎಷ್ಟು ಜನರಲ್ಲಿ ಬಳಕೆಯಾಗಿದೆ ಎಂಬುದು ಆಗ ನನಗೆ ಗೊತ್ತಾಯಿತು. ಉಪನ್ಯಾಸದ ಅನಂತರ ಪ್ರಶ್ನೆಗಳಿಗೆ ಅವಕಾಶ ಕೊಟ್ಟರು. ಹೆ‌ಚ್ಚು ಪ್ರಶ್ನೆಗಳು ಬಂದದ್ದು ಬುದ್ಧನನ್ನು ಕುರಿತಲ್ಲ, ಶ್ರೀರಾಮಕೃಷ್ಣರನ್ನು ಕುರಿತು! ಕೊನೆಯಲ್ಲಿ ಸೃಷ್ಟೀಕರಣದ ಕೆಲಸ ನನ್ನ ಪಾಲಿಗೆ ಬಂತು. ಪರಮಹಂಸರಿಗೆ ಬುದ್ಧನನ್ನು ಕುರಿತಂತೆ ಯಾವ ಅನುಭವಗಳೂ ಆಗಲಿಲ್ಲ ಏಕೆ ಎಂಬುದಕ್ಕೆ ನಾನು ವಿವರಣೆ ನೀಡಬೇಕಾಯಿತು. ನಾನು ಸಂಕ್ಷೇಪವಾಗಿ ಹೇಳಿದೆ: ಬೌದ್ಧ ಧರ್ಮವು ವೇದಾಂತ ಧರ್ಮಕ್ಕಿಂತ ಬೇರೆ ಎಂದು ಪರಮಹಂಸರು ಭಾವಿಸಲಿಲ್ಲ. ಆದ್ದರಿಂದಲೇ ಇತರ ಧರ್ಮಗಳನ್ನು ಅನುಷ್ಠಾನ ಮಾಡಿದಂತೆ ಅವರು ಬೌದ್ಧ ಧರ್ಮವನ್ನು ಮಾಡಲಿಲ್ಲ. ರಾಮಕೃಷ್ಣರ ನಿರ್ವಿಕಲ್ಪ ಸಮಾಧಿಯ ಅನುಭವವೂ ಬುದ್ಧನ ‘ನಿರ್ವಾಣಾನುಭವವೂ’ ಒಂದೇ ಎಂದು ತೋರಿಸಬಹುದು. ಪರಮಹಂಸರಿಗೆ ಬುದ್ಧನಲ್ಲಿ ತುಂಬ ಗೌರವವಿತ್ತು ಎಂಬುದು ಅವರ ಮಾತುಕತೆಗಳಿಂದ ತಿಳಿಯುತ್ತದೆ. ಈ ಅಂಶವನ್ನು ರೊಲಾ ತಮ್ಮ ಪುಸ್ತಕದಲ್ಲಿ ಚರ್ಚಿಸಿಲ್ಲ. ಜನರಿಗೆ ಈ ವಿಷಯದಲ್ಲಿ ಇರುವ ತಿಳುವಳಿಕೆಯಲ್ಲಿ ರೊಲಾ ಅವರ ಪುಸ್ತಕದಿಂದ ಬಂದದ್ದು. ಪ್ರೊ. ಮೇಸನ್ ಪಾಸಲ್ ಉನ್ನತ ಚಾರಿತ್ರಯದ ವ್ಯಕ್ತಿ. ಪ್ರೊ. ಹಿರಿಯಣ್ಣನವರಿಗೆ ಅಲ್ಲಿರುವ ಗೌರವ ಇಲ್ಲಿ ಇವರಿಗಿದೆ. ತುಂಬ ಮೃದು ಸ್ವಭಾವದ ವ್ಯಕ್ತಿ. ತೋರಿಕೆಯ ಸ್ವಭಾವದವರಲ್ಲ. ಪಶ್ಚಿಮದಲ್ಲಿರುವ ಪ್ರಾಚ್ಯವಿದ್ಯಾ ತಜ್ಞರಲ್ಲಿ ಇವರಿಗೆ ಉನ್ನತವಾದ ಸ್ಥಾನವಿದೆ. ಮೇಲೆ ಹೇಳಿದ ಅಂಶವನ್ನು ಕುರಿತು ದೀರ್ಘವಾಗಿ ಚರ್ಚಿಸಲು ಒಂದುದಿನ ಅವರನ್ನು ನೋಡುತ್ತೇನೆ. ಆ ಮಧ್ಯರಾತ್ರಿಯಲ್ಲಿ ವಿವರವಾಗಿ ಅವರೊಡನೆ ಚರ್ಚಿಸಲು ಸಾಧ್ಯವಾಗಲಿಲ್ಲ. ಅವರ ಭಾವನೆಯೂ ರಾಮಕೃಷ್ಣರಿಗೆ ಬುದ್ಧನನ್ನು ಕುರಿತಂತೆ ಯಾವ ಅನುಭವವೂ ಆಗಲಿಲ್ಲ. ಎಂಬುದೇ. ‘ಜ್ಞಾನ’ ಎಂಬುದು ಬೌದ್ಧಧರ್ಮದ ಮುಖ್ಯವಾದ ಅಡಿಗಲ್ಲು. ಅದರ ಅನುಭವವನ್ನು ಪಡೆದುಕೊಳ್ಳುವುದು ಕಷ್ಟ. ಅದಕ್ಕೆ ಹೋಲಿಸಿದರೆ ಗೌರಾಂಗ ಕ್ರಿಸ್ತ ಅಥವಾ ಮಹಮ್ಮದ್ ಇವರೆಲ್ಲ ಸರಳವಾಗಿ ತೋರುತ್ತಾರೆ ಎಂಬುದು ನನ್ನ ಅಭಿಪ್ರಾಯ.

ಫ್ರೆಂಚ್ ಲೇಖಕ ರೋಜೆ ಚು.ಗೋರೆ ಎಂಬುವರಿಗೆ ಈ ಸಲದ ನೊಬೆಲ್ ಬಹುಮಾನ ದೊರೆತಿದೆ. ಅವರ ಪ್ರಸಿದ್ಧ ಕಾದಂಬರಿ-ಲೆಥಿಬಾಲ್ ಎಂಬುದಕ್ಕೆ ಪ್ರಶಸ್ತಿ ಕೊಟ್ಟಿದ್ದಾರೆ. ಹತ್ತು ಸಂಪುಟಗಳ ಆ ಕಾದಂಬರಿಯ ಕೊನೆಯ ಸಂಪುಟ ಕಳೆದ ವರ್ಷ ಪ್ರಕಟವಾಯಿತು. ನಿಮ್ಮ “ಚೆನ್ನಮ್ಮ ಹೆಗ್ಗಡಿತಿ”ಯ (ಏನು ಅದರ ಹೆಸರು?-ಬಾಯಿತುಂಬ ಉಚ್ಚರಿಸಬೇಕಾದ ಆ ಹೆಸರು ಮರೆತುಹೋಗಿದೆ!) ರೀತಿಯದು ಅದು. ಇನ್ನು ಒಂದು ವರ್ಷದಲ್ಲಿ ಅವನ್ನೆಲ್ಲ ಓದಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಎಂದುಕೊಂಡಿದ್ದೇನೆ. ಈ ಪ್ರಕಟಣೆಯನ್ನು ನೋಡುತ್ತಿದ್ದಂತೆ ಒಂದು ದಿನ ನೀವೂ ಯೂರೋಪಿಗೆ ಈ ಗೌರವವನ್ನು ಸ್ವೀಕರಿಸಲು ಬರುವುದನ್ನು ಕಾಣುತ್ತೇನೆ ಎಂದು ಕಲ್ಪಿಸಿಕೊಂಡೆ. ಇಂದಿನ ಕನಸೇ ನಾಳಿನ ನನಸು ತಾನೆ!

ನನ್ನ ಫ್ರೆಂಚ್ ಅಧ್ಯಯನದಲ್ಲಿ ಸಾಕಷ್ಟು ಪ್ರಗತಿ ಆಗುತ್ತಿದೆ. ಒಂದು ವರ್ಷಕಾಲ ಯಾರಿಗೂ ತಿಳಿಯದಂತೆ ಇರುವುದೇ ನನ್ನ ಅಪೇಕ್ಷೆ. ಅದರಿಂದ ತುಂಬ ಸಮಯ ಸಿಕ್ಕುತ್ತದೆ. ನಾನು ಬಂದಿರುವುದು ಬಹಿರಂಗಗೊಂಡಿಲ್ಲ. ಆದರೂ ಹೇಗೋ ಸುದ್ದಿ ಹರಡಿ ಜನ ಬರುತ್ತಿದ್ದಾರೆ. ಕೆಲವರೊಂದಿಗೆ ನಾನು ಮಾತನಾಡಲೇ ಬೇಕಾಗಿ ಬಂದಿದೆ. ಕೆಲವರಿಗೆ ವೇದಾಂತ ಮತ್ತು ಧ್ಯಾನದ ವಿಷಯದಲ್ಲಿ ಬೋಧನೆಯನ್ನೂ ನೀಡಬೇಕಾಗಿದೆ. ಮುಂದಿನ ವಾರದಿಂದ ಧ್ಯಾನವನ್ನು ಕುರಿತು ತರಗತಿಗಳನ್ನು ನಡೆಸುವಂತೆ “ಬೌದ್ಧ ಧರ್ಮದ ಮಿತ್ರರು” ಎಂಬ ಬಳಗದವರು ಕೇಳಿದ್ದಾರೆ. ಮಾನ್ಯತೆ ಪಡೆದಿರುವ ಸಂಸ್ಥೆ ಅದು. ಮಾತನಾಡುವಷ್ಟು ಭಾಷೆ ನನಗೆ ಬರುವ ವೇಳೆಗೆ ವೇದಾಂತವನ್ನು ಸ್ವೀಕರಿಸುವುದಕ್ಕೆ ಸಿದ್ಧವಾದ ಒಂದು ಗುಂಪೂ ಇದ್ದಂತಾಗುತ್ತದೆ. “ಕೇಂದ್ರ”ವನ್ನು ಅವಸರದಲ್ಲಿ ಸ್ಥಾಪಿಸುವುದು ನನಗೆ ಇಷ್ಟವಿಲ್ಲ. ನಾನಿನ್ನೂ ಅಜ್ಞಾತವಾಗಿ “ವಿದ್ಯಾರ್ಥಿ”ಯಾಗಿದ್ದರೂ ಮೂರು ಜನ ಕ್ರಮವಾಗಿ ನನ್ನಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದಾರೆ. ‘ಈ ಸಂಖ್ಯೆ ಐವತ್ತಕ್ಕೇರಿದಾಗ ಕೊನೆಗೆ ನಾನು ವ್ಯವಸ್ಥೆಗೊಳಿಸುವ ಕೆಲಸಕ್ಕೆ ಅವರು ಬೆಂಬಲವಾಗಿ ನಿಲ್ಲುತ್ತಾರೆ’ ಎಂಬ ಭರವಸೆ ನನಗೆ ಬಂದಿದೆ. ಸ್ವಾಮಿಜಿಯ ನಾಲ್ಕು ಯೋಗಗಳು, ರೊಲಾ ಬರೆದ ಶ್ರೀರಾಮಕೃಷ್ಣರ ಜೀವನ ಚರಿತ್ರೆ ಇವು ಬಹುಬೇಗ ಪ್ರಚಾರವಾಗಿ ಈ ಭಾವನೆಗಳನ್ನು ಸ್ವೀಕರಿಸಲು ಅಗತ್ಯವಾದ ಜನರನ್ನು ಸಿದ್ಧಗೊಳಿಸಿವೆ. ನನ್ನ ಆಗಮನದೊಂದಿಗೆ ಕೂಡಿಕೊಂಡ ಒಂದು ಶುಭ ಸಂಗತಿಯೂ ಇದೆ. ಸ್ಯಾನ್ ಫ್ರಾನ್ಸಿಸ್ಕೋದ  ಸ್ವಾಮಿ ಅಶೋಕಾನಂದರ ಶಿಷ್ಯರೊಬ್ಬರು ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳನ್ನು ೧೮ ಪುಟ್ಟ ಅಗ್ಗದ  ಬೆಲೆಯ ಸಂಪುಟಗಳಲ್ಲಿ ಫ್ರೆಂಚಿಗೆ ಅನುವಾದಿಸಿ ಪ್ರಕಟಿಸಲು ಹೆಚ್ಚೇ ಎನ್ನುವಷ್ಟು ಹಣ ಕೊಟ್ಟಿದ್ದಾರೆ. ಕೆಲಸ ಆಗಲೇ ಪ್ರಾರಂಭವಾಗಿದೆ. ಸಂಪುಟಗಳು ೧೪೦ರಲ್ಲಿ ಜನರ ಕೈಯಲ್ಲಿರುತ್ತವೆ. ಈ ಭಾವನೆಗಳಿಂದ ಆಕರ್ಷಿತರಾದವರು, ರೊಲಾ ಅವರ ಪುಸ್ತಕದಿಂದ ಪ್ರಭಾವಿತರಾದವರು ಫ್ರಾನ್ಸಿನ ಬೇರೆಬೇರೆ ಭಾಗಗಳಲ್ಲಿ ಹರಡಿದ್ದಾರೆ. ಈಗ ಅವರಿಗೆ ಬೇಕಾಗಿರುವುದು ಮಾರ್ಗದರ್ಶನ. ನಾನು ಫ್ರೆಂಚ್‌ನ್ನು ಮತಾಡುವಷ್ಟು ಕಲಿತಾಗ ನನಗೆ ಭೇಟಿಮಾಡಿಸಬೇಕಾದವರ “ಕಾಯುವವರ ಪಟ್ಟಿ”ಯನ್ನೇ ತಯಾರಿಸಿದ್ದಾರೆ ಹರ್ಬರ್ಟ್.

“ಗ್ರಾಮೀಣ ಭಕ್ತಿ”ಯ ಎರಡು ನಿದರ್ಶನಗಳು ಈಗಾಗಲೇ ನನ್ನ ಅನುಭವಕ್ಕೆ ಬಂದಿವೆ. ಪೈರೆನೆ-ದ ರೌನೆಟ್ ಎಂಬುದರ ಹತ್ತಿರ ಇರುವ ಫಾಯಿರ್ ಎನ್ನುವ ಊರಿನಿಂದ ಒಂದು ಕುಟುಂಬ ನನ್ನನ್ನು ನೋಡುವ ಒಂದೇ ಉದ್ದೇಶದಿಂದ ೧೮ ಗಂಟೆಗಳ ಕಾಲ ಪ್ರಯಾಣ ಮಾಡಿ ಬಂದಿದ್ದರು. ಸುಮಾರು ಹಣ ಖರ್ಚು ಮಾಡಿಕೊಂಡು ಬಂದು ಎರಡು ದಿನ ಇದ್ದು ಹಿಂದಕ್ಕೆ ಹೋದರು. ಬೇಲೂರು ಮಠದಲ್ಲಿರುವ ಶ್ರೀಸ್ವಾಮಿಶಂಬುದ್ಧಾನಂದರನ್ನು ಅವರು ಬಲ್ಲರು. ಎಂ. ರೌನ್ ಸಾಹಿತಿ. ‘ಡಿ. ಪೇಷೆ’ ಎಂಬುದು ಪ್ರಾವೆನ್ಸ್‌ನ ಅಧಿಕ ಪ್ರಸಾರವುಳ್ಳ ಪತ್ರಿಕೆ. ಅದರ ಪ್ರತಿನಿಧಿ ಅವರು. ಸ್ಟೆಯಿನ್ ಎಲ್ಲೆಯ ಬಳಿ ಇರುವ ತಮ್ಮ ಮನೆಗೆ ಅವರು ನನ್ನನ್ನು ಅಹ್ವಾನಿಸಿದ್ದಾರೆ. ನನಗೆಂದೇ ಒಂದು ಕೊಠಡಿಯನ್ನು ಕಾದಿರಿಸಿದ್ದಾರಂತೆ! ಕ್ಯಾಥೋಲಿಕ್ ಧರ್ಮದಿಂದ ಬುದ್ಧನ ಬಳಿಗೆ, ಅಲ್ಲಿಂದ ರಾಮಕೃಷ್ಣರಲ್ಲಿಗೆ ಅವರು ಬಂದಿದ್ದಾರೆ. ಬುದ್ಧನನ್ನು ಕುರಿತು ಅದ್ಭುತವಾದ ಭಕ್ತಿ ಅವರದ್ದು. ರಾಮಕೃಷ್ಣರ ಬಗ್ಗೆಯೂ ಅವರ ಭಕ್ತಿ ಅಷ್ಟೇ ಇದೆ.

ಈ ವಾರದಿಂದ ಫ್ರೆಂಚ್ ಮಾರ್ಗ ಕೃತಿಯೊಂದರ ಅಧ್ಯಯನದಲ್ಲಿ ತೊಡಗಿದ್ದೇನೆ. ಅದು ರೆನಾ ಬರೆದ ಯೇಸುವಿನ ಜೀವನಚರಿತ್ರೆ. ನೀವು ನಂಬುತ್ತೀರೋ ಹೇಗೋ-ನನ್ನ ವ್ಯಾಸಂಗ ಮುಂದುವರಿಯುತ್ತಿದೆ. ಅಧ್ಯಯನದಲ್ಲಿ ಎಲ್ಲ ಮಧುರವಾಗಿದೆ-ಒಂದರ ಹೊರತು, ಹರಳೆಣ್ಣೆ ರುಚಿಯ ವ್ಯಾಕರಣ! ಇಂಗ್ಲಿಷ್ ವ್ಯಾಕರಣಕ್ಕೆ ನಾಮ ಹಾಕಿದ್ದೆ. ಈಗ ನನ್ನ ಪ್ರಾರಬ್ಧ ಈ ವಯಸ್ಸಿನಲ್ಲಿ ಅದನ್ನು ಬಡ್ಡಿಸಹಿತ ವಸೂಲು ಮಾಡುತ್ತಿದೆ. ವ್ಯಾಕರಣ ಇಲ್ಲದೆ ಫ್ರೆಂಚ್ ಅಧ್ಯಯನದಲ್ಲಿ ಪ್ರಗತಿ ಸಾಧ್ಯವೇ ಇಲ್ಲ. ಸಂಭಾಷಣೆಯ ವಿಷಯಕ್ಕಾದರೆ ಇಂಗ್ಲಿಷ್ ತಿಳಿಯದ ನನ್ನ ಅತಿಥೇಯರಿಂದ ತುಂಬ ಅನುಕೂಲವಾಗಿದೆ. ಸೋಮಾರಿಯಾಗಲು ಸಾಧ್ಯವೇ ಇಲ್ಲ. ಪರಿಣಾಮ-ಇಂಗ್ಲಿಷ್ ಬಾರದ ಇಬ್ಬರ ಜೊತೆ ಮಾತುಕತೆಯಾಡಲು ಸಾಧ್ಯವಾಯಿತು. ಆ ಫ್ರೆಂಚೋ ನಾನು ಕುಪ್ಪಳ್ಳಿಯಲ್ಲಿ ನಿಮ್ಮ ಬಂಧುಗಳೊಂದಿಗೆ ಮಾತನಾಡಿದ ಕನ್ನಡದಂತೆ ನನ್ನದೇ ಆಗಿತ್ತು! ಆದರೆ ನಿಮ್ಮ ಜನ, ಫ್ರೆಂಚರು ತಮ್ಮ ಭಾಷೆಯನ್ನು ಕಲಿಯಲೇಬೇಕು ಎಂದು ಒತ್ತಾಯ ಮಾಡುವಷ್ಟು ನಿಷ್ಠುರರಾಗಿದ್ದರೆ ನಾನು ಹೆಚ್ಚಿನ ಶ್ರದ್ಧೆಯಿಂದ ಯವಾಗಲೋ ಕನ್ನಡವನ್ನು ಕಲಿತುಬಿಡುತ್ತಿದ್ದೆ. ಹೋಗಲಿ, ನಾನು ಮೈಸೂರು ಬಿಡುವ ವೇಳೆಗೆ ಮಾತುಕತೆ, ಒಳ್ಳೆಯ ಸಾಹಿತ್ಯ ಭಾಗಗಳು, ಅಷ್ಟನ್ನು ಅರ್ಥಮಾಡಿಕೊಳ್ಳುವಷ್ಟು ಕನ್ನಡವನ್ನಾದರೂ ಕಲಿತುಕೊಂಡೆ. ಮೈಸೂರಿಗೆ ಬರುವ ಎಲ್ಲ ಸ್ವಾಮಿಗಳೂ ಕನ್ನಡ ಕಲಿಯುವುದನ್ನು ಕಡ್ಡಾಯ ಮಾಡಬೇಕು….ಆಗಲೀಗ ನಮ್ಮ ಆಶ್ರಮದ ಕೆಲಸ ವ್ಯಾಪ್ತವಾಗಿ ಬೆಳೆಯುತ್ತದೆ. ಬರಿಯ ಇಂಗ್ಲಿಷಿಗೇ ಅಂಟಿಕೊಂಡರೆ ಇಂಗ್ಲಿಷ್ ಬಲ್ಲ ವಿದ್ಯಾವಂತ ಜಂಬಗಾರರೊಂದಿಗಷ್ಟೇ ನಮ್ಮ ವ್ಯವಹಾರ. ಜನಸಮುದಾಯದ ಜೊತೆ ಸಂಪರ್ಕ ಬೆಳೆಯುವುದಿಲ್ಲ. ದೇಶಿಕಾನಂದರು ಮೈಸೂರಿನಿಂದ ಹೋಗಲು ಬಿಡಬೇಡಿ. ನಾವು ಜನಸಾಮಾನ್ಯರ ಮನಸ್ಸನ್ನು ಪ್ರವೇಶಿಸಬಹುದು.  ಅವರು ಹಾಗೆ ಮಾಡುವಂತೆ ಮಾಡಿ. ನಾನು ಮೈಸೂರಿಗೆ ಹಿಂದಿರುಗಿದಾಗ ಇಂಗ್ಲಿಷ್ ತಿಳಿಯದ, ಕನ್ನಡವೇ ಕಿವಿಗೆ ಬೀಳುವ ಜಾಗಕ್ಕೆ ಹೋಗುತ್ತೇನೆ. ಆಗಲೀಗ ತಿಳಿಯದ ಭಾಷೆಯನ್ನು ಮಾತನಾಡುವ ಜಂಬ ಹೋಗುತ್ತದೆ. ಹೌದು, ಯಾವಾಗ ಬರುತ್ತೇನೋ! ನಿಟ್ಟುಸಿರು ಬಿಡುತ್ತಿದ್ದೇನೆ. ‘ಭಾರತದಲ್ಲಿ ನೀನು ನಿಜವಾಗಿ ಕೆಲಸ ಮಾಡಬೇಕಾದರೆ ಇಂಗ್ಲೆಂಡನ್ನು ಮರೆತುಬಿಡು’ ಎಂದು ನಿವೇದಿತಾಳಿಗೆ ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಮ್ಯಾಕ್ಲಿಯಟ್ ನನಗೆ ನೆನಪು ಮಾಡಿದರು. ಭಾರತದ ಉಸಿರನ್ನೇ ನಾವಿಲ್ಲಿಗೆ ತಂದಿರುವುದು. ಹೀಗಿರುವಾಗ ನಾವು ಹೇಗೆ ಭಾರತವನ್ನು ಮರೆಯುವುದು? ಈ ಅಶಾಂತ ಜಗತ್ತಿಗೆ ಅದನ್ನು ತಂದಿದ್ದೇನೆ ಎಂಬುದೊಂದೇ ಸಮಾಧಾನ. ಗ್ರೇ ಕವಿಯ “ಹುಚ್ಚು ಹಿಡಿಸುವ ಜಗತ್ತಿನ ಅನುದಾತ್ತ ಹೋರಾಟ” ಎಂಬುದರ ಪೂರ್ಣಾರ್ಥವನ್ನು ಇಲ್ಲಿ ಮಾತ್ರವೇ ನಾವು ಅನುಭವಕ್ಕೆ ತಂದುಕೊಳ್ಳಬಹುದು.

ಬೆಂಗಳೂರಿನ ಜನ ನನ್ನ ಕಾಗದವನ್ನು‘ತಾಯಿನಾಡು’ ಪತ್ರಿಕೆಗೆ ಕಳಿಸಿದ್ದು ತುಂಬ ತಪ್ಪು. ಕಸ್ತೂರಿಯೂ ನಿಮ್ಮ ಹಾಗೇ ಬರೆದಿದ್ದಾರೆ. ನಿಮಗೆಲ್ಲ  ನನ್ನನ್ನು ಕಂಡರೆ ಅಷ್ಟು ವಿಶ್ವಾಸ. ಆದ್ದರಿಂದಲೇ ನಿಮಗೆ ಅಷ್ಟು ಬೇಸರ ಆಗಿದೆ.”ಚಿಂತೆಗೆ ಕಾರಣವಿಲ್ಲ” ರೈಲು ಜಾರಿಬೀಳುತ್ತಿದೆ ಎಂದು ತರೀಕೆರೆ ಸ್ಟೇಷನ್ ಮೇಷ್ಟ್ರು ಹೇಳಿದಾಗ ಅವರಿಗೆ ಫೋನಿನಲ್ಲಿ ಕೇಳಿ ಬಂದ ಶಬ್ದಗಳು ಎಂಬರ್ಥದಲ್ಲಿ ಬರೆದಿದ್ದೇನೆ. ಖಾಸಗೀ ಪತ್ರಗಳಲ್ಲಿ ನಾವು ಚಿತ್ರಿಸುವುದು ನಮ್ಮ ಜಗತ್ತನ್ನು. ತಮಗೆ ಪ್ರವೇಶಿಸಲು ಹಕ್ಕಿಲ್ಲದ ಜಗತ್ತಿಗೆ ಪ್ರಾಪಂಚಿಕರು ಪ್ರವೇಶಿಸಕೂಡದು.

ಸದ್ಯದಲ್ಲೇ ನಾನು ಪ್ಯಾರಿಸ್ ವಿಶ್ವವಿದ್ಯಾನಿಲಯಕ್ಕೆ ಒಂದು ರೀತಿಯಲ್ಲಿ ಸೇರಿದವನಾಗುತ್ತೇನೆ. ಅಲ್ಲಿ ಪ್ರತಿವಾರವೂ ನಡೆಯುವ ಅನೇಕ ಪ್ರಚಾರೋಪನ್ಯಾಸಗಳನ್ನು ಕೇಳಲು ಹೋಗುತ್ತೇನೆ. ಅದೊಂದು ಅದ್ಭುತವಾದ ವಿಶ್ವವಿದ್ಯಾನಿಲಯ. ಪ್ರಾಧ್ಯಾಪಕರಿಗೆ ವಾರಕ್ಕೆ ಒಂದೋ ಎರಡೋ ಗಂಟೆ ಪಾಠ ಇರುತ್ತೆ ಅಷ್ಟೆ. ಅವರಿಗೆ ಸಂಬಳ ಕೊಡುವುದು ಅದಕ್ಕಾಗಿ ಅಲ್ಲ, ತಮ್ಮ ವಿಶೇಷ ವಿಷಯಗಳ ಅಧ್ಯಯನದಲ್ಲಿ ಆದಷ್ಟು ಆಳವಾಗಿ ತೊಡಗಲಿ ಎಂದು. ಅದನ್ನು ಅವರು ಸಂತೋಷವಾಗಿ ಮಾಡುತ್ತಾರೆ. ಅವರ ಸಂಶೋಧನೆಯ ಫಲ ಜನಸಾಮಾನ್ಯರಿಗೂ ಲಭ್ಯವಾಗುತ್ತದೆ. ಈಗ ಅಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ವಿದ್ಯಾಕ್ಷೇತ್ರದಲ್ಲಿ ಇಂಥದನ್ನೇನಾದರೂ ಮಾಡಲಿ ಎಂದು ಆಶಿಸುತ್ತೇನೆ.

ಶೇಷುಮಾಮ ಮತ್ತು ಮರಿಯರ ಕಾಗದಗಳು ಬಂದು ನನಗೆ ತುಂಬ ಸಂತೋಷವಾಗಿದೆ ಎಂದು ಅವರಿಗೆ ಹೇಳಿ. ವೆಂಕಣ್ಣನವರಿಗೆ ನನ್ನ ನೆನಪನ್ನು ತಿಳಿಸಿ. ಅವರನ್ನು ನಾನು ಇಲ್ಲಿ ನೆನೆಯುತ್ತಲೆ ಇದ್ದೇನೆ. ನಿಮ್ಮ ಸಹೋದ್ಯೋಗಿ ಶ್ರೀ ಟಿ.ಎನ್. ಶ್ರೀಕಂಠಯ್ಯನವರಿಗೆ ಹೇಳಿ-ಹುಚ್ಚಿಗೆ ಬೊಂಬಾಯಿಯಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ಇದೆ ಎಂದು ಹೇಳಿದ್ದೆ. ಡಾ|| ಕಾಮತ್ ಅವರು ಬೊಂಬಾಯಿಯಲ್ಲಿ ಚಿಕಿತ್ಸಾಲಯ ತೆರೆದಿದ್ದಾರೆ. ವಿಮಲ್ ಮಹಾರಾಜರ ಮಿತ್ರರು ಮದರಾಸಿನ ರಿಸರ್ಚ್ ಲ್ಯಾಬೊರೆಟರಿಯ ಶ್ರೀ ಅನಂತ ಪೈ ಅವರು ಔಷಧಗಳನ್ನೆಲ್ಲ ಹೇಗೆ ಬಳಸಬೇಕು ಎಂಬುದನ್ನು ತಿಳಿಸುತ್ತಾರೆ. ಖಾಯಿಲೆಯಿರುವ ತಮ್ಮ ಸೋದರಿಗೆ ಶ್ರೀಕಂಠಯ್ಯನವರು ಚಿಕಿತ್ಸೆಯ ಈ ವಿಧಾನವನ್ನೂ ಪ್ರಯತ್ನಿಸಿ ನೋಡಬಹುದು. ಬಹಳ ಹಳೇ ಖಾಯಿಲೆಗಳೂ ವಾಸಿಯಾಗಿವೆಯಂತೆ. ಅದಕ್ಕೆ ಔಷಧಗಳನ್ನು ಒದಗಿಸಿದವರು ಒಬ್ಬರು ಸಾಧು ಎಂದು ಕಥೆ. ಆದರೆ ಈಗ ಅದಕ್ಕೆ ಒಂದು ಇಂಗ್ಲಿಷ್ ಹೆಸರಿದೆ. ಎಲ್ಲಾ ಔಷಧದ ಅಂಗಡಿಗಳಲ್ಲೂ ಅದನ್ನು ಮಾರುತ್ತಾರೆ. ಕಸ್ತೂರಿ ಮತ್ತು ಮೂರ್ತಿಗೆ ನನ್ನ ಕಾಗದಗಳು ತಲುಪಿವೆ ಎಂದು ನಂಬಿದ್ದೇನೆ. ಕೆಲವು ಫೋಟೋಗಳನ್ನು ಕಳಿಸಿದ್ದೆ. ಅದರಲ್ಲಿ ನನ್ನದೂ ಒಂದಿತ್ತು.

ಪೂಜ್ಯ ಶ್ರೀ ಸುರೇಶ್ ಮಹಾರಾಜರು ‘ವಿ.ಎಸ್’ ಅವರ ಜೊತೆ ಮೂರು ಹಿತ್ತಾಳೆ ವಿಗ್ರಹಗಳನ್ನು ಕಳಿಸಿದ್ದರು ಎಂದು ಶ್ರೀ ದೇಶಿಕಾನಂದರಿಗೆ ಹೇಳಿ. ಅವು ಮೂರು ಕೋತಿಗಳ ವಿಗ್ರಹ. ಒಂದು ಕಿವಿ ಮುಚ್ಚಿಕೊಂಡಿದೆ, ಒಂದು ಕಣ್ಣು ಮುಚ್ಚಿಕೊಂಡಿದೆ, ಇನ್ನೊಂದು ಬಾಯಿ ಮುಚ್ಚಿಕೊಂಡಿದೆ. ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ ಎಂಬುದು ಅದರ ಅರ್ಥ. ಇದರಂತೆಯೇ ಗಂಧದ ಮರದಲ್ಲಿ ಮಾಡಿಸಬೇಕು ಎಂಬುದು ಶ್ರೀ ಸುರೇಶ ಮಹಾರಾಜರ ಅಪೇಕ್ಷೆ. ಅಂಥವು ಎಷ್ಟು ಬೇಕು ಎಂಬುದನ್ನು ಅವರೇ ಬರೆಯುತ್ತಾರೆ.

ಪ್ರೀತಿಯ ತಾತಗಾರೂ ಅವರಿಗೆ ನನ್ನ  ಸಮಾಚಾರವನ್ನೆಲ್ಲ ತಿಳಿಸಲು ಮರೆಯಬೇಡಿ. ಇದೊಂದು ಹುಚ್ಚು ಹಿಡಿಸುವ ಜಗತ್ತು. ಶಾಂತನಾದ ವ್ಯಕ್ತಿಯೊಬ್ಬನನ್ನು ನಾನು ಇನ್ನೂ ನೋಡಬೇಕಾಗಿದೆ. ಅನೇಕರು ನನಗೆ ಹೇಳಿದ್ದಾರೆ. “ಭಾರತೀಯರ ಮುಖದಮೇಲೆ ಅಷ್ಟೊಂದು ಶಾಂತಿ ನೆಲೆಸಿದೆ.” ಈ ಆವರಣವನ್ನು ತಡೆದುಕೊಳ್ಳಲು ಪ್ರಜ್ಞಾಪೂರ್ವಕವಾಗಿ ಮನಸ್ಸನ್ನು ಗಟ್ಟಿಮಾಡಿಕೊಳ್ಳಬೇಕು. ರಸ್ತೆಯಲ್ಲಿ ಹೋಗುವಾಗ ನೋಡುತ್ತೇನೆ-ಪುಟ್‌ಪಾತ್ ಮೇಲೆ ಪ್ರತಿಯೊಬ್ಬನೂ ಓಡುತ್ತಿರುವ ರೀತಿ ಹೇಗೆ ಗೊತ್ತೆ?-ಪಕ್ಕದ ಮನೆಗೆ ಬೆಂಕಿ ಬಿದ್ದುಬಿಟ್ಟಿದೆ-ಇವನು ಬಕೆಟ್ಟಿನಲ್ಲಿ ನೀರು ಹೊತ್ತುಕೊಂಡು ಹೋಗದೇ ಇದ್ದರೆ ಅದನ್ನು ಆರಿಸುವವರೇ ಇಲ್ಲ ಅಂತ. ನನಗೂ ಈಗ ‘ಓಡಾಡುವಾಗ, ನನಗೇ ಗೊತ್ತಿಲ್ಲದಂತೆ ಅದೇಗತಿ ಬಂದುಬಿಟ್ಟಿದೆ! ಆಗ ನಾನು ನಿಂತು ಯೋಚಿಸುತ್ತೇನೆ: ನಾನು ಭಾರತದಿಂದ, ಶಾಂತಿಯ ನಾಡಿನಿಂದ ಬಂದವನು. ಉದ್ವೇಗದಿಂದ ನಡೆದು ಕಾಲುಗಳಿಗೇಕೆ ಹಿಂಸೆ ಕೊಡಬೇಕು?’ ಆಮೇಲೆ ನಿಧಾನವಾಗಿ ನಡೆಯುತ್ತೇನೆ. ಪಶ್ಚಿಮದವರಿಗೆ ಕಾಲ ಅಮೂಲ್ಯವಾದದ್ದು, ಪ್ರತಿಯೊಂದು ಕ್ಷಣವನ್ನೂ ಏನಾದರೂ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬುದೆಲ್ಲ ತಪ್ಪು ಕಲ್ಪನೆ. ಶುದ್ಧ ಹುಚ್ಚು. ಅವರು ಕಾಲದ ಗುಲಾಮರು, ಶಾಂತಿಯನ್ನು ಕಂಡರೆ ಭಯ. ಅದಕ್ಕೆ ಉದ್ವೇಗವನ್ನು ಸೃಷ್ಟಿಮಾಡಿಕೊಂಡಿದ್ದಾರೆ, ಚಡಪಡಿಕೆಯನ್ನು ಸ್ವಭಾವವಾಗಿ ಮಾಡಿಕೊಂಡಿದ್ದಾರೆ. ಬದುಕಿನ ಸುಂಟರ ಗಾಳಿ ಹೀಗಿರುವುದು ಅನುಕೂಲವೇ-ಪ್ರಜ್ಞಾಪೂರ್ವಕವಾಗಿ ಇದಕ್ಕೆ ಪ್ರತಿಯಾಗಿ ವರ್ತಿಸಿ ಅವು ಆತ್ಮದ ಶಾಂತಿಯನ್ನು ಅನುಭವಿಸಬಹುದು. ಸಾಮಾನ್ಯವಾಗಿ ಕ್ಷುಬ್ದವಾಗಿರುವ ನಮ್ಮ ಅಂತರಂಗದ ಪ್ರವೃತ್ತಿಯನ್ನು ಸರಿಯಾಗಿ ರೂಪಿಸಿ ಹೊರ ಜಗತ್ತಿನಲ್ಲಿ ಅದು ಪ್ರತಿಬಿಂಬಿಸುವಂತೆ ಮಾಡಿದರೆ ಆ ಸತ್ಯದ ಅರಿವೇ ಆ ಆವರಣವನ್ನು ದಾಟುವ ಶಕ್ತಿಯನ್ನು ನಿನಗೆ ನೀಡುತ್ತದೆ. ಯೂಂಗ್ ಪ್ರತಿಪಾದಿಸುವ “ಪರಿಹಾರ”ದ ತತ್ವ ಈ ಆಧಾರದ ಮೇಲೆ ನಿಂತಿದೆ.

ಎಲ್ಲ ಹುಡುಗರಿಗೂ ನನ್ನ ನೆನಪು ಕೊಡಿ. ವಿಜಯದೇವ, ಶ್ರೀನಿವಾಸ, ಗೋಪಾಲ, ಚಂದ್ರು, ವೆಂಕಟಪ್ಪ, ಕೃಷ್ಣಪ್ಪ (ಅವರೆಲ್ಲಾ ಎಲ್ಲಿ?). ನಿಮ್ಮ ಸೋದರ ವೆಂಕಟಪ್ಪ ಅವರನ್ನು ಕೇಳಿದೆ ಎಂದು ಹೇಳಿ. ದೇವಂಗಿ ಮತ್ತು ಕುಪ್ಪಳ್ಳಿಯಲ್ಲೂ ಅಷ್ಟೇ. ಎ.ಸಿ. ನರಸಿಂಹಮೂರ್ತಿ ಅವರಿಗೂ ಹೇಳಿ.

ತುಂಬ ಪ್ರೀತಿಯಿಂದ ಮತ್ತು ಮರು ಟಪಾಲಿನಲ್ಲೇ ನಿಮ್ಮ ಉತ್ತರ ನಿರೀಕ್ಷಿಸುತ್ತಾ,

ನಿಮ್ಮ ಪ್ರೀತಿಯ
ಸಹಿ ಸಿದ್ಧೇಶ್ವರಾನಂದ

ಮ.ಮಾ.: ಬಹಳ ಹಿಂದೆ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ನೋಡಿದ ಸೊಗಸಾದ ಒಂದು ಪದ್ಯವನ್ನು ಕಳಿಸುತ್ತಿದ್ದೇನೆ. ಕಾರಣ ಯೂಂಗ್‌ನ ‘ಶೈಲಿ’ ಸಿದ್ಧಾಂತವನ್ನು ಅದು ಪುಷ್ಟೀಕರಿಸುತ್ತದೆ. ಅಂಥ ಸೊಗಸಾದ ಕೃತಿ-ಅದೂ ಒಬ್ಬ ಖೈದಿಯಿಂದ. ಕೆಲವು ಪಂಕ್ತಿಗಳು ಅದ್ಭುತವಾಗಿವೆ.

೨೬-೧೧-೧೯೩೭: ಈ ದೀರ್ಘ ಪತ್ರ ಮುಗಿಸುತ್ತಿದ್ದಂತೆಯೇ ನಿಮ್ಮ ತುಂಬು ಪ್ರೀತಿಯ ಪತ್ರ ಬಂತು-ತಮಾಷೆ ಅಲ್ಲ? ನಿಮ್ಮ ಸಮಾಚಾರ ಎಲ್ಲ ತಿಳಿದು ಸಂತೋಷವಾಯಿತು. ನಿಮ್ಮ ಹೊಸ ಮನೆಯ ಫೋಟೋ ಕಳಿಸಿ-ಆಶ್ರಮದವರಿಗೆ ಎಲ್ಲ ವರ್ತಮಾನ ತಿಳಿಸಿ. ದೇಶಿಕಾನಂದರಿಗೂ ಇತರರಿಗೂ ನಾನು ಆಗಲೇ ಶುಭಾಶಯಗಳನ್ನು ತಿಳಿಸಿದ್ದೇನೆ.

Villa Mon Repas an Carla
Lavaur (Tarn)
5-5-1945

Dear Puttappa,

Can you imagine my joy in receiving your affection date letter! I have sent dear Kasturi a detailed letter which was taken by a French Military Officer to be posted from the first landing station in India. I has sent a number of photos, and one was addressed to you. Perhaps by this time you have received it. I my letter I had given news of the last five years–how in spite of war conditions, difficulties of living, constantly hunted out by the cruel Germans, from one destination to another. Sri Guru Maharaj permitted me to serve him and continue the spiritual work (for which He brought me here) uninterruptedly! But for an operation for appendicitis in 1941 and an accident in 1942 which broke my wrist–(now I am all right from that )the state  of my health was all right-thanks to the loving care of Madame & Monsieur Santan and other devotees.

After five years of absence from Paris, I was to have gone back to our center there by the middle of this month; but owing to the condition of health of Monsieur Santan, my principal collaborator in the work, I have to stay a few more months in the South of France. There is a tremendous enthusiasm for Indian spiritual thought and living in the whole of France. The books of Romain Rolland and the translations of Sri Guru Maharaj’s sayings and teachings, together with Swamiji’s works have brought hundreds, nay thousands to look upon our lord as the idol of their hearts. Perhaps you know that  I gave in 1942, 43 series of lectures within the well known Toulouse University. As soon as the lectures come out from the Press, I shall send you a copy together with my book on Meditation. In less than 3 weeks of its publication, it is sold out and the crisis for paper makes it difficult to satisfy the readers. You will be glad to learn that I speak now French as well as I was speaking English. Altho’ owing to the was  situation, arrestations(?) deportations of students and the general pulblic. I did not give my usual lectures at the University in 1944 as it was then practically empty. you will be surprised to learn that I did not have one single day’s rest! To our village retreat, there came a flow of visitors from all parts of France. I consider that as a marvellous sign of the need the people feel for the light Indian spirituality. For voyages were so very difficult to undertake with constant interruption of railway lines by the shower of bombs. The work done in Toulouse University has attracted the attention of all University centers. The Head of the Indian section of Paris University has requested me to give a series of lectures there. I came in intimate contact with some of the leading thinkers of France last january. I was invited by the Dominicans to take part in their annual celebrations. This is the first  time, perhaps in the History of church, a non-christian was asked to talk to their congregation. There were more than 800 persons and I had to speak before the microphone. The Archbishop of Toulouse presided and besides the general public there was  a large number of monks different orders & Nuns. I spoke extempore for an hour on the Hindu view of Christ. 3/4 of the lecture was a direct criticisj of missionary methosds, couched in smiling language, particularly when I said that proselytism & conversion are direct insults to human dignity. “The last 1/4 hour I explained the experience of  our Lord and how without accepting a word of the dogmas, the Hindu can consider Jesus as an incarnation. I explained our celebration of xmas. As I finished I felt palpably the presence of Sri Guru Maharaj and Lord Jesus, and there was an hectic ovation & applaudisement & I know that it was not because of the lecture. For the great ones. In whose name I spoke they were virtually there. The dominican Father who introduced me saying that the whole of the world must become catholique ended by saying that the catholiques should be ashamed to see, and learn a lesson from this non-Catholic who has such a fervent devotion to our Lord–” do not be under the impression that the  Catholic are  becoming less dogmatic. My impression of all this sympathy is that seeing France inundated by Indian Thought, the Christains are trying  to make use a little of this tide to their benefit.

After 5 years, I moved out last month on a lecturing tour. The Philosophical Society of Marseilles University invited me & I spoke on Vedantic Method and gave parlour talks to Doctors and Professors. Then before the “Association of intellectuals of Marseilles on tolerance in the religio-philosophical culture of India and a Dominican Father made the  audience laugh when he came to the platform and said that “Intolerence of all points other than what is held by the catholic church’s thereby”(?) I was next invited to speak to the English and American Soldiers. The negro soldiers asked me a number of questions and their questions and their questions seemed more intelligent that the ones asked by the “white” 2 weeks at Marseilles  from 5 to 20 April. I had no seconds rest continued interviews. The same lectures and interviews were repeated at Nimes of Muffelier.

In Muffelier this time I made more excellent University contacts. 4 years back when I spent a year there my work was confined to a circle which contained mostly University students. This time the Professors who came to my lecture of last week, have invited me to give a series of lectures within the Faculty of letters. I may do it next November when the Faculty reopens after summer Vacation. I am also invited to do the same at Lyon University. My idea in attaching myself to Universities is not because I have great admiration for the spiritual value of the persons we meet within these temples of learning ! I do not harbour any illusion on that point. These people with their brains packed with dialectics and reasoning who think that intellect is everything are far from God and Truth.–My idea in associating with them so intimately is because that’s the only way to give Vedantic thought the dignity it deserves. In U.S.A. they have th prestige of Swamiji and 50 years of work. Here a Swami has more often a chance to be considered as a fakir worker of miracles, Palm reading etc.!! & everything exotic attract the crowd. The best way to avoid all that stigma is not closely associate with the University & University minds and thro’ these Universities I came into contact with the general serious minded people. By the grace of Sri Maharaj that  programmed is now in full swing.

I write to you a long letter in spite of the great difficulty….to do it to incite you to imitate me and write to me a very long letter. How are you all. How is your Tejasvi? have you new kids. How is Doddannayya, Manappa, Mr. Rangappa Gowda & Mr. Ramanna Gowda & all? How is Vijayadev, Krishnappa, Chandra & Srikanta. Tell Chandra that one of the ways I link myself in thought with you all is by remembering his imitation of Ajji. remember me to all at the Ashram. Who is the head there now. And thanks(?) to our dear Masti Venkatesha Iyengar, Thotadri Sharma & his wife Dr. Chikkanna V. Sampathgiri Rao & Co., of National High School. Krishna Iyer, V, Seetharamaiah, Channe Gowda, Dasappa & Anantha Krishna Sharma and Charloo. I hope that B.M….is doing well with the work of Karnataka sangha. As a digression from Vedantic work the dean of faculty of letters of Toulouse placed under my charge two graduates who preeparing thesis for their diplomas–one on Tagore and the other on Thomas Hardy. With the student who worked on Hardy, I discussed every week last year a theme in Hardy. She was a bigoted Catholic and as she finished Hardy you can imagine how her ideas got enlarged.

This Short letter is too small to tell you all that I heard to talk to you. Surely I must have been a Kannadiga in my past life. How else can I explain my deep attachment to you all, & to you particularly Puttappa! I often think of your career from Vamana Iyer’s hotel to R.K.Ashram & to Kannada Literature. Remember me to all who are dear & near to me in your country where names & their minute details I remember so often. And if I do not write all about them, you know it is lack of paper & time. My herart is full of you all. Do write to me by air mail a detailed letter. Tell me of our common friends and the new and fresh glory you have brought to Kannada Literature. Ten days back I was at Coke d’Azur for 22days in a charming forest retreat where a devotee possesses a beautiful house, climbing the hills and seeing the Medeteranian Sea. I remembered our visit to Agumbe and I called out “Puttappa” forgetting that I was in Europe–Yes, time & distance have no place when heart speaks to heart and when these hearts contain the presence of Sri Guru Maharaj. What more we need we seek as a Benediction for  having got human birth. May He bless you.

Your most affectionately
Sd. Siddeshwarananda