ವಿಲ್ಲ ಮಾನ್ ರೇಪಸ್ ಅನ್ ಕಾರ್ಲ
ಲವಾರ್ (ಟೌರ್ನ) ೫-೫-೧೯೪೫

ಪ್ರಿಯ ಪುಟ್ಟಪ್ಪ,

ನಿಮ್ಮ ಪ್ರೀತಿಯ ಪತ್ರ ತಲುಪಿದಾಗ ನನಗಾದ ಆನಂದವನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಪ್ರೀತಿಯ ಕಸ್ತೂರಿಯವರಿಗೆ ನಾನು ಸವಿವರವಾದ ಪತ್ರವೊಂದನ್ನು ಕಳಿಸಿದ್ದೇನೆ. ಇಂಡಿಯಾದಲ್ಲಿ ವಿಮಾನವಿಳಿದ ಕೂಡಲೇ ಅಂಚೆಪೆಟ್ಟಿಗೆಗೆ ಹಾಕುವ ಸಲುವಾಗಿ ಫ್ರೆಂಚ್ ಸೈನ್ಯಾಧಿಕಾರಿಯೊಬ್ಬ ಅದನ್ನು ಒಯ್ದಿದ್ದಾನೆ. ನಾನು ಅನೇಕ ಭಾವಚಿತ್ರಗಳನ್ನು ಕಳಿಸಿದ್ದೆ. ಅದರಲ್ಲೊಂದನ್ನು ನಿಮಗಾಗಿಯೇ ಇರಿಸಿದ್ದೆ. ಕಳೆದ ಐದು ವರ್ಷಗಳ ಸುದ್ದಿಯನ್ನು ನನ್ನ ಪತ್ರದಲ್ಲಿ ತಿಳಿಸಿದ್ದೆ. ಯುದ್ಧದ ಸನ್ನಿವೇಶದಲ್ಲಿಯೂ, ಜೀವನದ ಕಠಿನ ಪರಿಸ್ಥಿತಿಯಲ್ಲಿಯೂ, ಊರಿಂದೂರಿಗೆ ಕ್ರೂರ ಜರ್ಮನರು ನಮ್ಮನ್ನು ಸತತವಾಗಿ ಬೇಟೆಯಾಡುತ್ತಿದ್ದರೂ, ಅಧ್ಯಾತ್ಮಿಕ ಕಾರ್ಯವನ್ನು ಅವಿಚ್ಛಿನ್ನವಾಗಿ ಮುಂದುವರಿಸುವ ಮೂಲಕ ನನ್ನ ಸೇವೆ ತಮಗೆ ಸಲ್ಲುವಂತೆ ಶ್ರೀ ಗುರುಮಹಾರಾಜರು ನನ್ನನ್ನು ಆರ್ಶಿರ್ವದಿಸಿದ್ದಾರೆ. ಅವರು ನನ್ನಲ್ಲಿಗೆ ಕರೆತಂದದ್ದೂ ಇದಕ್ಕಾಗಿಯೇ ತಾನೆ. ೧೯೪೧ರಲ್ಲಿ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಯಾದಾಗ, ೧೯೪೨ರಲ್ಲಿ ಸಂಭಿವಿಸಿದ ಅಪಘಾತದಿಂದಾಗಿ ಮುಂಗೈ ಮುರಿದಾಗ ಶ್ರೀಮತಿ ಮತ್ತು ಶ್ರೀಮಾನ್ ಸಂತಾನ್ ಮತ್ತು ಇತರ ಶಿಷ್ಯರು ನಿನ್ನನ್ನು ಅತ್ಯಂತ ಪ್ರೀತಿಯಿಂದ ಎಚ್ಚರಿಕೆ ವಹಿಸಿ ನೋಡಿಕೊಂಡರು. ಅದು ಹೊರತು ನನ್ನ ಆರೋಗ್ಯ ಚೆನ್ನಾಗಿದೆ.

ಐದು ವರ್ಷಗಳ ಅಗಲಿಕೆಯ ನಂತರ ಈ ತಿಂಗಳ ಮಧ್ಯಭಾಗದಲ್ಲಿ ನಾನು ಪ್ಯಾರಿಸ್ಸಿನ ನಮ್ಮ ಕೇಂದ್ರಕ್ಕೆ ಹೋಗಬೇಕಾಗಿತ್ತು. ನನ್ನ ಕೆಲಸದಲ್ಲಿ ಮುಖ್ಯ ಸಹಾಯಕರಾಗಿರುವ ಶ್ರೀಮಾನ್ ಸಂತಾನ್ ಅವರ ಅನರೋಗ್ಯದಿಂದಾಗಿ, ದಕ್ಷಿಣ ಫ್ರಾನ್ಸಿನಲ್ಲಿ ಇನ್ನೂ ಕೆಲವು ತಿಂಗಳು ಉಳಿಯಬೇಕಾಗಿದೆ. ಭಾರತೀಯ ಅಧ್ಯಾತ್ಮಿಕ ಅಲೋಚನೆ ಮತ್ತು ಜೀವನಗಳ ಬಗ್ಗೆ ಇಡೀ ಫ್ರಾನ್ಸಿನಲ್ಲೆಲ್ಲ ಅದ್ಭುತವಾದ ಉತ್ಸಾಹವಿದೆ. ರೋಮಾ ರೊಲಾ ಅವರ ಗ್ರಂಥಗಳಿಂದಾಗಿ, ಶ್ರೀಗುರು ಮಹಾರಾಜರ ಅಮೃತವಾಣಿ ಉಪದೇಶಗಳ ಹಾಗೂ ಸ್ವಾಮಿಜೀಯವರ ಕೃತಿಗಳ ಭಾಷಾಂತರದಿಂದಾಗಿ, ನೂರಾರಲ್ಲ, ಸಾವಿರಾರು ಜನರು ಶ್ರೀಗುರುಮಹಾರಾಜರನ್ನು ತಮ್ಮ ಹೃನ್ಮಂದಿರಗಳಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದಾರೆ. ೧೯೪೨ ಮತ್ತು ೧೯೪೩ನೆಯ ಸಾಲುಗಳಲ್ಲಿ ಸುಪ್ರಸಿದ್ಧ ಟೂಲೌ ವಿಶ್ವವಿದ್ಯಾಲಯದಲ್ಲಿ ಕೆಲವು ಉಪನ್ಯಾಸಗಳನ್ನು ನೀಡಿದ್ದ ಸಂಗತಿ ನಿಮಗೆ ಗೊತ್ತಿರಬಹುದು. ಅಚ್ಚುಕೂಟದಿಂದ ಹೊರಬಂದ ಕೂಡಲೇ ಉಪನ್ಯಾಸ ಮಾಲೆಯ ಪ್ರತಿಯನ್ನು ‘ಧ್ಯಾನ’ವನ್ನು ಕುರಿತ ನನ್ನ ಮತ್ತೊಂದು ಗ್ರಂಥದ ಪ್ರತಿಯನ್ನೂ ನಿಮಗೆ ಕಳಿಸಿಕೊಡುತ್ತೇನೆ. ಉಪನ್ಯಾಸ ಸಂಗ್ರಹ ಪ್ರಕಟವಾದ ಮೂರುವಾರಗಳಲ್ಲಿಯೇ ಅದರ ಪ್ರತಿಗಳೆಲ್ಲ ಮಾರಾಟವಾಗಿವೆ. ಕಾಗದದ ಅಭಾವದಿಂದಾಗಿ ವಾಚಕರ ಬೇಡಿಕೆಯನ್ನು ಪೂರೈಸುವುದು ಕಷ್ಟವಾಗಿದೆ. ಇಂಗ್ಲಿಷ್ ಭಾಷೆಯಲ್ಲೆಷ್ಟರ ಮಟ್ಟಿಗೆ ನಿರರ್ಗಳವಾಗಿ ಮಾತಾಡುತ್ತಿದ್ದೆನೋ ಅಷ್ಟೇ ನಿರರ್ಗಳವಾಗಿ ಫ್ರೆಂಚ್ ಭಾಷೆಯಲ್ಲಿಯೂ ಈಗ ಮಾತಾಡಬಲ್ಲೆನೆಂಬುದು  ನಿಮಗೆ ಸಂತೋಷವುಂಟುಮಾಡುತ್ತದೆಂಬುದನ್ನು ಬಲ್ಲೆ. ಯುದ್ಧದ ಪರಿಣಾಮವಾಗಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಬಂಧನದಲ್ಲಿಯೋ ದೇಶಾಂತರವಾಸಿಗಳಾಗಿಯೋ ಇದ್ದದ್ದರಿಂದ ವಿಶ್ವವಿದ್ಯಾಲಯ ನಿರ್ಜನವಾಗಿತ್ತು. ಆದ್ದರಿಂದ ನಾನು ೧೯೪೪ರಲ್ಲಿ ವಾಡಿಕೆಯಂತೆ ಉಪನ್ಯಾಸ ನೀಡಲಾಗಲಿಲ್ಲ. ಆದರೂ ನನಗೆ ಒಂದು ದಿನವಾದರೂ ವಿಶ್ರಾಂತಿ ದೊರೆಯಲಿಲ್ಲವೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ನಮ್ಮ ಗ್ರಾಮಾಂತರ ಸಭೆ (ರಿಟ್ಟೇಟ್)ಗಳ ಕಾರ್ಯಕ್ರಮಕ್ಕೆ ಫ್ರಾನ್ಸಿನ ಎಲ್ಲ ಭಾಗಗಳಿಂದ ಜ್ಞಾನಭಿಕ್ಷುಗಳು ಬಂದು ನೆಲೆಯುತ್ತಿದ್ದರು. ಭಾರತೀಯ ಅಧ್ಯಾತ್ಮ ಜ್ಯೋತಿಯ ಬಗ್ಗೆ ಈ ಜನ ಎಷ್ಟು ಕಾತರರಾಗಿದ್ದಾರೆಂಬುದಕ್ಕೆ ಇದು ಅದ್ಭುತ ನಿದರ್ಶನವಾಗಿದೆ. ಬಾಂಬುಗಳ ಸುರಿಮಳೆಯಿಂದಾಗಿ ರೈಲ್ವೆ ಪ್ರಯಾಣ ಕಠಿನವಾಗಿತ್ತು. ಟೂಲೌ ವಿಶ್ವವಿದ್ಯಾಲಯದಲ್ಲಿ ನಾವು  ಮಾಡಿರುವ ಕೆಲಸ ಎಲ್ಲ ವಿಶ್ವವಿದ್ಯಾಲಯಗಳ ಗಮನವನ್ನು ಸೆಳೆದಿದೆ. ಪ್ಯಾರಿಸ್ ವಿಶ್ವವಿದ್ಯಾಲಯದ ಭಾರತೀಯ ವಿಭಾಗದ ಮುಖ್ಯಸ್ಥರು ಕೆಲವು ಉಪನ್ಯಾಸ ನೀಡುವಂತೆ ನನ್ನನ್ನು ಆಹ್ವಾನಿಸಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ಫ್ರಾನ್ಸಿನ ಕೆಲವು ಶ್ರೇಷ್ಠ ಆಲೋಚಕರ ನಿಕಟ ಸಂಪರ್ಕ ನನಗೆ ದೊರೆಯಿತು. ತಮ್ಮ ವಾರ್ಷಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕೆಂದು ಡಾಮಿನಿಕನ್ ಪಂಥದ ಪಾದ್ರಿಗಳು ನನಗೆ ಆಹ್ವಾನವಿತ್ತಿದ್ದರು. ತಮ್ಮ ಮತೀಯ ಸಭೆಯಲ್ಲಿ ಮಾತಾಡಲು ಕ್ರಿಸ್ತೇತರನೊಬ್ಬನನ್ನು ಕರೆದದ್ದು ಚರ್ಚಿನ ಇತಿಹಾಸದಲ್ಲಿ ಪ್ರಾಯಶಃ ಇದೇ ಮೊದಲೆಂದು ತೋರುತ್ತದೆ. ಎಂಟುನೂರಕ್ಕೂ ಹೆಚ್ಚು ಮಂದಿ ಕಲೆತಿದ್ದ ಆ ನೆರವಿಯಲ್ಲಿ ನಾನು ಧ್ವನಿವರ್ಧಕಯಂತ್ರದ ಮುಂದೆ ನಿಂತು ಮಾತಾಡಬೇಕಿತ್ತು. ಟೂಲೌ ನಗರದ ಆರ್ಕಿಬಿಷಪ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನ ಸಾಮಾನ್ಯರಲ್ಲದೆ ವಿವಿಧ ಪಂಥಗಳ ಸನ್ಯಾಸಿ ಸನ್ಯಾಸಿನಿಯರು ಬಹುಸಂಖ್ಯೆಯಲ್ಲಿ ನೆರೆದಿದ್ದರು. ಭಾರತೀಯ ದೃಷ್ಟಿಯಲ್ಲಿ ಕ್ರಿಸ್ತ ಎಂಬ ವಿಷಯವನ್ನು ಕುರಿತು ನಾನು ಒಂದು ಗಂಟೆಕಾಲ ಆಶುಭಾಷಣ ಮಾಡಿದೆ. ಉಪನ್ಯಾಸದ ಮುಕ್ಕಾಲುಭಾಗ ಕ್ರಿಶ್ಚಿಯನ್ ವಿಧಾನದ ಪ್ರಚಾರವನ್ನು ಕುರಿತು ನೇರವಾದ ಟೀಕೆಗೆ ಮೀಸಲಾಗಿತ್ತು. ಭಾಷೆ ಮಾತ್ರ ಮೃದುವಾಗಿತ್ತು (ಮಂದಹಾಸದಿಂದ ಕೂಡಿತ್ತು). ಮತಾಂತರ ಕಾರ್ಯ ಮಾನವತ್ವದ ಘನತೆಯ ಮುಖಕ್ಕೆಸೆದ ಅವಮಾನವೆಂದು ನಾನು ಸ್ಪಷ್ಟಪಡಿಸಿದೆ. ಕೊನೆಯ ಕಾಲುಗಂಟೆಯ ಅವಧಿಯಲ್ಲಿ  ಶ್ರೀಗುರುಮಹಾರಾಜರ ಆಧ್ಯಾತ್ಮಿಕ ಅನುಭವಗಳನ್ನು ವಿವರಿಸಿದೆ; ಮತೀಯ ತತ್ವಗಳ ಅಂಗೀಕಾರವಿಲ್ಲದೆಯೆ ಹಿಂದೂ ಯೇಸುವನ್ನೆಂತು ಅವತಾರ ಪುರುಷನ ಮಟ್ಟಕ್ಕೇರಿಸುತ್ತಾರೆಂಬುದನ್ನು ವಿಶದಪಡಿಸಿದೆ. ನಾವು ಕ್ರಿಸ್‌ಮಸ್‌ಆಚರಿಸುವ ವಿಧಾನವನ್ನು ತಿಳಿಸಿದೆ. ಉಪನ್ಯಾಸ ಮುಗಿಸುತ್ತಿದ್ದಂತೆ ಶ್ರೀಗುರುಮಹಾರಾಜರೂ ಮಹಾತ್ಮಾ ಯೇಸುವೂ ಪ್ರತ್ಯಕ್ಷವಾದಂತೆ ಭಾಸವಾಯಿತು. ಕೆಲವು ನಿಮಿಷಗಳ ಕಾಲ ನಿರಂತರವಾದ ಹರ್ಷೋದ್ಗಾರ ಕರತಾಡನಗಳಿಂದ ಸಭಾಂಗಣ ಪ್ರತಿಧ್ವನಿಸುತ್ತಿತ್ತು. ನನ್ನ ಉಪನ್ಯಾಸಕ್ಕಾಗಿ ಅಷ್ಟೊಂದು ಆನಂದ ಅಭಿವ್ಯಕ್ತಗೊಂಡಿತೆಂದು ಹೇಳಲಾರೆ. ಆ ಮಹಾತ್ಮರ ಆತ್ಮಶಕ್ತಿ ನನ್ನ ಭಾಷಣದಲ್ಲಿ ಸಮಾವೇಶಗೊಂಡಿತ್ತೆಂದೇ ಹೇಳಬೇಕು. ಇಡೀ ಜಗತ್ತೇ ಕ್ಯಾಥೊಲಿಕ್ ಅಗಬೇಕೆಂದು ನನ್ನ ಸಭೆಗೆ ಪರಿಚಯಿಸಿಕೊಟ್ಟಿದ್ದ ಡಾಮಿನಿಕನರ ಪಾದ್ರಿ ನುಡಿದಿದ್ದರಷ್ಟೆ. ‘ಕ್ಯಾಥೊಲಿಕ್ ಅಲ್ಲದ ಈ ಸಾಧುವಿಗೆ ನಮ್ಮ ಯೇಸು ಸ್ವಾಮಿಯಲ್ಲಿ ತೀವ್ರವಾದ ಭಕ್ತಿಯಿದೆ. ಇವರಿಂದ ಕಲಿಯಬೇಕಾಗಿರುವ ಈ ಪಾಠಕ್ಕಾಗಿ ಕ್ಯಾಥೊಲಿಕ್‌ನಾದವನು ತಲೆ ತಗ್ಗಿಸಬೇಕಾಗಿದೆ.’ ಎಂದವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಕ್ಯಾಥೊಲಿಕ್ ಮತಾಂಧತೆ ಕುಗ್ಗುತ್ತಿದೆಯೆಂದು ನೀವು ಭಾವಿಸಬೇಡಿ. ಭಾರತೀಯ ವಿಚಾರಧಾರೆಯಲ್ಲಿ ಫ್ರಾನ್ಸ್ ಮುಳುಗಿದೆಯೆಂಬ ಸಂಗತಿ ಅವರಿಗೆ ಗೊತ್ತು. ಈ ಅಲೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಈ ಕ್ರಿಶ್ಚಿಯನ್ನರು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದಲೇ ಅವರು ನನ್ನಬಗ್ಗೆ ಸಹಾನುಭೂತಿ ತೋರಿದರೆಂದು ನನಗನಿಸುತ್ತದೆ.

ಐದು ವರ್ಷಗಳ ನಂತರ ನಾನು ಉಪನ್ಯಾಸ ಪ್ರವಾಸಕ್ಕಾಗಿ ಕಳೆದ ತಿಂಗಳು ಹೊರಗೆ ಹೋಗಿದ್ದೆ. ಮಾರ್ಸೆಲೀಸ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಸಂಘ ನನ್ನನ್ನು ಆಹ್ವಾನಿಸಿತ್ತು. ನಾನು ವೇದಾಂತ ವಿಧಾನದ ಬಗ್ಗೆ ಮಾತಾಡಿದೆ. ವಿದ್ವಾಂಸರ ಮತ್ತು ಪ್ರಾಧ್ಯಾಪಕರ ಗೋಷ್ಠಿಯಲ್ಲಿ ಖಾಸಗಿ ಸಂಭಾಷಣೆ ನಡೆಸಿದೆ. ಅನಂತರ ಆ ಊರಿನ ಬುದ್ಧಿಜೀವಿಗಳ ಸಂಘದಲ್ಲಿ ಭಾರತೀಯ ಮತೀಯ ತಾತ್ತ್ವಿಕ ಸಂಸ್ಕೃತಿಯಲ್ಲಿ ಸಹನೆ ಎಂಬ ವಿಷಯವಾಗಿ ಭಾಷಣ ನೀಡಿದೆ. ಡಾಮಿನಿಕನ್ ಪಾದ್ರಿಯೊಬ್ಬ ವೇದಿಕೆಯ ಮೇಲೆ ಬಂದು, ಕ್ಯಾಥೊಲಿಕ್ ಮತದ ಸಾಹಿತ್ಯದಲ್ಲಿ ದೊರೆಯುವ ಎಲ್ಲ ಸಂಗತಿಗಳ ಬಗ್ಗೆಯೂ ಅಸಹನೆ ಸಹಜವೆಂದು ನುಡಿದಾಗ ಸಭೆಗೆ ಸಭೆಯೇ ಗೊಳ್ಳೆಂದು ನಕ್ಕಿತು. ಮುಂದೆ ನಾನು ಆಂಗ್ಲ ಮತ್ತು ಅಮೆರಿಕೆಯ ಯೋಧರರ ಸಭೆಯಲ್ಲಿ ಮಾತಾಡಿದೆ. ನೀಗ್ರೋ ಸೈನಿಕರು ಅನೇಕ ಪ್ರಶ್ನೆಗಳನ್ನು ಕೇಳಿದರು. ಬಿಳಿಯರು ಕೇಳಿದ ಪ್ರಶ್ನೆಗಳಿಗಿಂತ ಅವರು ಕೇಳಿದ ಪ್ರಶ್ನೆಗಳಲ್ಲಿ ಹೆಚ್ಚು ವಿವೇಕ ಕಾಣುತ್ತಿತ್ತು. ಏಪ್ರಿಲ್ ೫ರಿಂದ ೨೦ರ ತನಕ ಎರಡು ವಾರ ಮಾರ್ಸೆಲೀಸ್‌ನಲ್ಲಿ ಭಾಷಣ ಸಂದರ್ಶನಗಳಿಂದಾಗಿ ಒಂದು ಕ್ಷಣವೂ ಬಿಡುವಿರುತ್ತಿರಲಿಲ್ಲ. ಮಫಿಲಿಯರನ ನೈಮೆಯಲ್ಲಿ ಅದೇ ಭಾಷಣ ಮತ್ತು ಸಂದರ್ಶನಗಳು ಪುನರಾವೃತ್ತಿಗೊಂಡುವು.

ಈ ಸಾರಿ ಮಫಿಯರ್‌ನಲ್ಲಿ ವಿಶ್ವವಿದ್ಯಾಲಯದ ಸಂಪರ್ಕವನ್ನು ವಿಶೇಷವಾಗಿ ಬೆಳೆಸಿದೆ. ನಾಲ್ಕು ವರ್ಷಗಳ ಹಿಂದೆ ನಾನಿಲ್ಲಿ ಒಂದು ವರ್ಷವಿದ್ದಾಗ ನನ್ನ ಕಾರ್ಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ವೃತ್ತಕ್ಕೆ ಮಾತ್ರ ಸೀಮಿತಗೊಂಡಿತ್ತು. ಈ ಸಾರಿ ಕಳೆದವಾರ ನನ್ನ ಭಾಷಣ ಕೇಳಲು ಬಂದ ಪ್ರಾಧ್ಯಾಪಕರು ಸಾಹಿತ್ಯಾಧ್ಯಯನ ಮಂಡಲಿಯಲ್ಲಿ ಉಪನ್ಯಾಸಮಾಲೆಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಬೇಸಗೆ ರಜೆಯ ನಂತರ ಇಲಾಖೆಗಳು ಬಾಗಿಲುತೆರೆದಾಗ, ಅಂದರೆ ಮುಂದಿನ ನವೆಂಬರ್ ತಿಂಗಳಲ್ಲಿ ಆ ಆಹ್ವಾನವನ್ನು ಈಡೇರಿಸಬಹುದೆಂದುಕೊಂಡಿದ್ದೇನೆ. ಅಂತೆಯೆ ವಿಯೋನ್ ವಿಶ್ವವಿದ್ಯಾಲಯದಿಂದಲೂ ಆಹ್ವಾನ ಬಂದಿದೆ. ಈ ಸರಸ್ವತೀ ಮಂದಿರಗಳಲ್ಲಿ ಸಂಧಿಸುವ ವಿದ್ವಾಂಸರ ಆಧ್ಯಾತ್ಮಿಕ ಮೌಲ್ಯದ ಬಗೆಗಿನ ನನ್ನ ಮೆಚ್ಚುಗೆಯಿಂದಾಗಿ ವಿಶ್ವವಿದ್ಯಾಲಯಗಳೊಡನೆ ಸಂಪರ್ಕ ಬೆಳೆಸುತ್ತಿದ್ದೇನೆಂಬ ಭಾವನೆ ನನಗಿಲ್ಲ. ಆ ವಿಷಯದಲ್ಲಿ ನನಗೆ ಸ್ವಲ್ಪವೂ ಭ್ರಮೆಯಿಲ್ಲ. ತಮ್ಮ ತಲೆಳಲ್ಲೆಲ್ಲ ತರ್ಕವಾದಗಳನ್ನೆ ತುಂಬಿಕೊಂಡು, ಬುದ್ಧಿಯೊಂದೇ ಸರ್ವಸ್ವವೆಂದು ತಿಳಿದುಕೊಂಡಿರುವ ಈ ಜನ ದೇವರು ಮತ್ತು ಸತ್ಯಗಳಿಂದ ಬಹುದೂರವಿದ್ದಾರೆ. ವೇದಾಂತಿಕ ವಿಚಾರಧಾರೆಗೆ ಯೋಗ್ಯವಾದ ಘನತೆಯನ್ನು ಒದಗಿಸುವಲ್ಲಿ ಇದೊಂದೇ ಮಾರ್ಗವೆಂದು ಹೊಳೆದದ್ದರಿಂದ ಅವರೊಡನೆ ಆತ್ಮೀಯವಾದ ಸಂಪರ್ಕವಿಟ್ಟುಕೊಳ್ಳಲು ಉದ್ದೇಶಿಸಿದ್ದೇನೆ. ಅಮೆರಿಕೆಯಲ್ಲಾದರೋ ಸ್ವಾಮೀಜಿಯ ಕೀರ್ತಿ ಪ್ರತಿಷ್ಠೆ ಜೀವಂತವಾಗಿದೆ; ಜತೆಗೆ ಐವತ್ತು ವರ್ಷಗಳಿಂದ ಕೆಲಸ ನಡೆಯುತ್ತಿದೆ. ಇಲ್ಲಾದರೋ ಸ್ವಾಮಿಯನ್ನು ಪವಾಡಗಳನ್ನು ಪ್ರದರ್ಶಿಸುವ ಹಸ್ತಸಾಮುದ್ರಿಕೆಯನ್ನೋದುವ ಫಕೀರನೆಂಬುದಾಗಿ ತಿಳಿಯುವ ಸಂಭವವಿದೆ. ವಿದೇಶೀಯವಾದದ್ದೆಲ್ಲವೂ ಜನ ಸಾಮಾನ್ಯವನ್ನು ಆಕರ್ಷಿಸುತ್ತದೆ. ವಿಶ್ವವಿದ್ಯಾಲಯ ಹಾಗೂ ಅಲ್ಲಿಯ ವಿದ್ವಾಂಸರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸುವುದೊಂದೇ ಈ ಕಳಂಕದಿಂದ ಪಾರಾಗಲಿರುವ ಉತ್ತಮ ಮಾರ್ಗ. ವಿಶ್ವವಿದ್ಯಾಲಯಗಳ ಮೂಲಕ ನಾನು ಗಂಭೀರ ಮನಸ್ಕರೂ ಧೀಮಂತರೂ ಆದ ಸಾರ್ವಜನಿಕರೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಯಿತು. ಗುರುಮಹಾರಾಜರ ಅನುಗ್ರಹದಿಂದ ಆ ಕಾರ್ಯಕ್ರಮ ಈಗ ಬಹು ವೇಗವಾಗಿ ಸಾಗುತ್ತಿದೆ.

ನನ್ನ ಹಾಗೆಯೇ ನೀವೂ ದೀರ್ಘಪತ್ರ ಬರೆಯುವಂತೆ ಪ್ರಚೋದಿಸುವ ಸಲುವಾಗಿ ತೊಂದರೆ ಇದ್ದಾಗ್ಯೂ ನಿಮಗೆ ಉದ್ದ ಪತ್ರ ಬರೆದಿದ್ದೇನೆ. ನೀವೆಲ್ಲರೂ ಕ್ಷೇಮವೆ? ತೇಜಸ್ವಿ ಹೇಗಿದ್ದಾನೆ? ಈಚೆಗೆ ಎಷ್ಟು ಮಕ್ಕಳಾಗಿದ್ದಾರೆ? ದೊಡ್ಡಣ್ಣಯ್ಯ, ಮಾನಪ್ಪ, ಮಂಜಪ್ಪಗೌಡ, ಮತ್ತು ರಾಮಣ್ಣಗೌಡ ಎಲ್ಲ ಹೇಗಿದ್ದಾರೆ? ವಿಜಯದೇವ, ಕೃಷ್ಣಪ್ಪ, ಚಂದ್ರ ಮತ್ತು ಶ್ರೀಕಂಠ ಚೆನ್ನಾಗಿದ್ದಾರೆಯೆ? ಚಂದ್ರ ಅಜ್ಜಿಯನ್ನನುಕರಿಸುತ್ತಿದ್ದ ಭಂಗಿಯನ್ನು ನೆನೆದಾಗಲೆಲ್ಲ ಉಳಿದೆಲ್ಲರ ಚಿತ್ರ ಮನಸ್ಸಿನಲ್ಲಿ ಹಾದುಹೋಗುತ್ತದೆಂದು ಅವನಿಗೆ ತಿಳಿಸಿ. ಆಶ್ರಮವಾಸಿಗಳಿಗೆಲ್ಲ ನನ್ನನ್ನು ನೆನಪು ಮಾಡಿಕೊಡಿ. ಈಗ ಅಲ್ಲಿಯ ಅಧ್ಯಕ್ಷರು ಯಾರು? ಪ್ರೀತಿಪಾತ್ರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ತೋಟಾದ್ರಿ ಶರ್ಮ ಮತ್ತು ಅವರ ಮಡದಿ, ಡಾ. ಚಿಕ್ಕಣ್ಣ, ನ್ಯಾಷನಲ್ ಕಾಲೇಜಿನ ಸಂಪದ್ಗಿರಿರಾವ್ ಮತ್ತು ಅವರ ಮಿತ್ರ ಮಂಡಲಿ, ಕೃಷ್ಣ ಅಯ್ಯರ್, ವಿ. ಸೀತಾರಾಮಯ್ಯ, ಚನ್ನೇಗೌಡ, ದಾಸಪ್ಪ, ಅನಂತಕೃಷ್ಣ ಶರ್ಮ ಮತ್ತು ಚಾರ್ಲು ಈ ಎಲ್ಲರಿಗೂ ನನ್ನ ವಂದನೆ ತಿಳಿಸಿ. ಬಿ.ಎಂ. ಶ್ರೀಕಂಠಯ್ಯನವರು ಕರ್ನಾಟಕ ಸಂಘವನ್ನು ಚೆನ್ನಾಗಿ ನಡೆಸುತ್ತಿರಬೇಕೆಂದು ನಂಬಿದ್ದೇನೆ. ವೇದಾಂತದ ಕಾರ್ಯಕ್ರಮದಿಂದ ತುಸು ವಿರಾಮ ಪಡೆಯಲೆಂದು ಟೂಲ್‌ಹೌಸ್‌ನ ಸಾಹಿತ್ಯಾಧ್ಯಯನ ಮಂಡಲಿಯ ಮುಖ್ಯಸ್ಥರು ಇಬ್ಬರು ಸಂಶೋಧಕ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನನ್ನ ಮಾರ್ಗದರ್ಶನಕ್ಕಾಗಿ ಒಪ್ಪಿಸಿದ್ದಾರೆ. ಅವರು ತಮ್ಮ ಡಿಪ್ಲೊಮಾಗಳಿಗಾಗಿ ಟಾಗೂರ್ ಮತ್ತು ಥಾಮಸ್ ಹಾರ್ಡಿಯರನ್ನು ಕುರಿತು ನಿಬಂಧ ಸಿದ್ಧಪಡಿಸುತ್ತಿರುವ ವಿದ್ಯಾರ್ಥಿನಿಯೊಡನೆ ಕಳೆದ ವರ್ಷ ವಾರಕ್ಕೊಮ್ಮೆ ಚರ್ಚೆ ನಡೆಸುತ್ತಿದ್ದೆ. ಅವಳು ತೀವ್ರ ಸಮತಾನುರಕ್ತಿಯ ಕ್ಯಾಥೊಲಿಕ್. ಹಾರ್ಡಿಯ ಅಧ್ಯಯನವನ್ನು ಮುಗಿಸುವ ಹೊತ್ತಿಗೆ ಅವಳ ಭಾವನೆ ಎಷ್ಟರಮಟ್ಟಿಗೆ ವೈಶಾಲ್ಯದ ಕಡೆಗೆ ಪರಿವರ್ತಿತವಾಯಿತೆಂಬುದನ್ನು ನೀವೇ ಊಹಿಸಿಕೊಳ್ಳಬಹುದು.

ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ಈ ಅದೀರ್ಘಪತ್ರದಲ್ಲಿ ತಿಳಿಸಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದಿರಬೇಕು. ಹಾಗಿಲ್ಲವಾದರೆ ನಮ್ಮ ಮತ್ತು ಅಲ್ಲಿಯ ಎಲ್ಲರ, ಅದರಲ್ಲಿಯೂ ಪುಟ್ಟಪ್ಪ, ನಿಮ್ಮ ಅನುರಾಗದ ಬಂಧನಕ್ಕೆ ಕಲ್ಪಿಸಬಹುದಾದ ಕಾರಣ ಯಾವುದು? ವಾಮನ ಅಯ್ಯರ್ ಹೋಟಲಿಂದ ಶ್ರೀರಾಮಕೃಷ್ಣಾಶ್ರಮಕ್ಕೆ, ಅಂತೆಯೇ ಕನ್ನಡ ಸಾಹಿತ್ಯಕ್ಕೆ ನೀವು ಕೈಕೊಂಡ ಯಾತ್ರೆಯನ್ನು ನಾನು ಹಲವು ಸಲ ನೆನೆಯುತ್ತೇನೆ. ನಿಮ್ಮ ಕಡೆ ನನಗೆ ಆತ್ಮೀಯರೂ ನಿಕಟಸ್ಥರೂ ಆದ ಎಲ್ಲರಿಗೂ ನನ್ನನ್ನು ನೆನಪುಮಾಡಿಕೊಡಿ. ಅವರ ಹೆಸರು ಮಾತ್ರವಲ್ಲ. ಅವರ ಸೂಕ್ಷ್ಮ ವಿವರಗಳನ್ನೆಲ್ಲ ನಾನು ಅದೆಷ್ಟು ಸಾರಿ ನೆನೆಸಿಕೊಳ್ಳುತ್ತೇನೆ, ಗೊತ್ತೇ? ಸ್ಥಳ ಹಾಗೂ ಸಮಯದ ಅಭಾವದಿಂದಾಗಿ ಅವರ ಬಗ್ಗೆ ನನಗೆ ಅನಿಸಿದ್ದನ್ನೆಲ್ಲ ಬರೆಯಲು ಸಾಧ್ಯವಾಗಿಲ್ಲ. ನನ್ನ ಹೃದಯದಲ್ಲೆಲ್ಲ ಅವರೇ ತುಂಬಿಕೊಂಡಿದ್ದಾರೆ. ವಿವರವಾದ ಪತ್ರ ಬರೆದು ಗಗನ ಟಪಾಲಿನಲ್ಲಿ ಕಳಿಸಿ. ನಾವು ಬಲ್ಲ ಗೆಳೆಯರ ವಿಷಯ ಬರೆಯಿರಿ. ಕನ್ನಡ ಸಾಹಿತ್ಯಕ್ಕೆ ನೀವು ಹೊಸದಾಗಿ ಜೋಡಿಸಿರುವ ಕೀರ್ತಿ ಗೌರವವನ್ನು ತಿಳಿಸಿ. ಹತ್ತು ದಿನಗಳ ಹಿಂದೆ ಕೋಕ್ ಡಿ. ಅಜೂರ್ ಬಳಿಯ ರಮ್ಯಾರಣ್ಯದ ನಡುವಣ ವಿವಿಕ್ತ ಪ್ರದೇಶದಲ್ಲಿದ್ದೆ. ಅಲ್ಲಿ ನನ್ನ ಶಿಷ್ಯರೊಬ್ಬರ ಸುಂದರವಾದ ಬಂಗಲೆಯಿದೆ. ನಾನಲ್ಲಿ ೨೨ ದಿನಗಳ ತನಕ ಇದ್ದೆ. ಅಲ್ಲಿಯ ಬೆಟ್ಟಗಳನ್ನೇರಿ, ಮೆಡಿಟರೇನಿಯನ್ ಸಮುದ್ರವನ್ನು ನೋಡುವಾಗ, ನಾನೂ ನೀವೂ ಕೂಡಿ ಆಗುಂಬೆಗೆ ಹೋಗಿದ್ದ ಅನುಭವದ ನೆನಪಾಯಿತು. ನಾನು ಯುರೋಪಿನಲ್ಲಿದ್ದೇನೆನ್ನುವುದನ್ನು ಮರೆತು ‘ಪುಟ್ಟಪ್ಪ’ ಎಂದು ಕೂಗಿದೆ. ನಿಜ, ಹೃದಯ ಹೃದಯದೊಡನೆ ಮಾತಾಡುವಾಗ, ಹೃದಯಗಳು ಗುರುಮಹಾರಾಜರ ಸಾಕ್ಷಾತ್ಕಾರವನ್ನನುಭವಿಸುವಾಗ ಕಾಲದೇಶಗಳು ಲಯವಾಗುತ್ತವೆ. ಮಾನವ ಜನ್ಮವನ್ನು ಪಡೆದದ್ದಕ್ಕಾಗಿ ಈ ದೈವಾನುಗ್ರಹಕ್ಕಿಂತ ಬೇರೇನು ಬೇಕು? ಶ್ರೀಗುರು ಮಹಾರಾಜರು ನಿಮ್ಮನ್ನು ಸದಾ ಆಶೀರ್ವದಿಸುತ್ತಿರಲಿ!

ಇಂತು ನಿಮ್ಮ ಅತ್ಯಂತ ಪ್ರೀತಿಪಾತ್ರರಾದ
ಸಿದ್ಧೇಶ್ವರಾನಂದ

Reply to my old address.

5-7-1946

My dear Puttappa,

Thanks for  your loving letter. From my long letter to Veereshanandji you will get all recent news. As I spoke to the huge xian audience of over 2,000 people at Lions, the Story of “pidile Kozzeri(?)” Of the Shimoga missionary(?) was in my mind in little groups that came to meet me amidst other stories, I have given a graphic story of that & such funny & ridiculous ways of missionaries that made these groups burst into laughter.

Just heard from a friend in Bangalore that B.M.S. is no more. Thus one by one leave us. What a great man he was. I offer mentally my homage to him.

Thank you for all news of your family. I am writing one of these days to Manappa in detail. Meanwhile I sent him a slip like this.

With all love

Yours affectionately
Sd. Siddeshwarananda

Do not forget to remember to Librarian Krishna Rao, & to Sethu Rao, to Anantha K. Sarma, Chandru & all

೫-೭-೧೯೪೬

ನನ್ನೊಲವಿನ ಪುಟ್ಟಪ್ಪನವರೆ,

ನಿಮ್ಮ ವಾತ್ಸಲ್ಯದ ಪತ್ರಕ್ಕಾಗಿ ವಂದನೆಗಳು. ನಾನು ವೀರೇಶಾನಂದಜೀಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಇತ್ತೀಚಿನ ಎಲ್ಲ ವರ್ತಮಾನ ನಿಮಗೆ ಸಿಗುತ್ತದೆ. ಲಯನ್ಸ್‌ನಲ್ಲಿ ಎರಡು ಸಾವಿರಕ್ಕೂ ಮಿಗಿಲಾದ ಕ್ರಿಶ್ಚಿಯನ್ನರ ದೊಡ್ಡಸಭೆಯಲ್ಲಿ ಮಾತಾಡುವಾಗ ಶಿವಮೊಗ್ಗೆಯ ಉಪದೇಶಿ ಪಿಡಿಲೆ ಕೊಯ್ಯಿರಿಯ ಕತೆ ನನ್ನ ಮನಸ್ಸಿನಲ್ಲಿತ್ತು. ನನ್ನನ್ನು ಭೇಟಿಮಾಡಲು ಬಂದ ಸಣ್ಣ ಗುಂಪುಗಳಲ್ಲಿ ಇತರ ಕತೆಗಳ ನಡುವೆ ಆ ಕತೆಯನ್ನು ಸುಸ್ಪಷ್ಟವಾಗಿ ವಿವರಿಸಿದೆ. ಉಪದೇಶಿಗಳ ಹಾಸ್ಯಾಸ್ಪದವೂ ವಿಚಿತ್ರವೂ ಆದ ರೀತಿನೀತಿಗಳನ್ನು ಕೇಳಿದಾಗ ಅವರೆಲ್ಲರೂ ಹೊಟ್ಟೆಬಿರಿಯುವ ತನಕ ನಕ್ಕರು.

ಬಿ.ಎಂ.ಎಸ್. ತೀರಿಕೊಂಡರೆಂದು ಬೆಂಗಳೂರಿನ ಸ್ನೇಹಿತರೊಬ್ಬರಿಂದ ಇದೆ ತಾನೆ ಸುದ್ದಿ ಬಂದಿದೆ. ಒಬ್ಬರಾದ ಮೇಲೊಬ್ಬರು ಹೀಗೆ ನಮ್ಮನ್ನಗಲಿ ಹೋಗುತ್ತಿದ್ದಾರೆ. ಅವರೆಂಥ ಮಹಾವ್ಯಕ್ತಿ! ಮಾನಸಿಕವಾಗಿಯೇ ಅವರಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ನಿಮ್ಮ ಕುಟುಂಬದ ಬಗೆಗಿನ ಸುದ್ದಿಗಾಗಿ ಧನ್ಯವಾದಗಳು. ಇಷ್ಟರಲ್ಲೇ ಮಾನಪ್ಪನವರಿಗೆ ಸವಿವರವಾಗಿ ಬರೆಯುತ್ತೇನೆ. ಸದ್ಯದಲ್ಲಿ ಅವರಿಗೂ ಇಂಥದೇ ತುಣುಕು ಪತ್ರ ಕಳಿಸಿದ್ದೇನೆ.

ವಾತ್ಸಲ್ಯದೊಡನೆ, ತಮ್ಮ ಪ್ರೀತಿಯ
ಸಹಿ ಸಿದ್ದೇಶ್ವರಾನಂದ

ಮ.ಮಾ: ಗ್ರಂಥಪಾಲಕ ಕೃಷ್ಣರಾವ, ಸೇತುರಾವ್, ಅನಂತಕೃಷ್ಣ ಶರ್ಮ, ಚಂದ್ರು ಮೊದಲಾದ ಎಲ್ಲರಿಗೂ ನನ್ನ ನೆನಪು ಕೊಡುವುದನ್ನು ಮರೆಯಬೇಡಿ.

Centre Vedanique Ramakrishna
CRETZ (et.M) 28-3-1951

Beloved Puttappa,

So often I have sent you many unwritten letters and you are so often in my mind. Whenever I see or hear some thing ‘great’, noble and beautiful, either in the three dimensional world or in the multidimensional MIND, be sure that you too participated, without yourself knowing about it! The SAKSHI the Personal Impersonal or the Impersonal-Personal is in the Gita’s words the KAVI. For he alone knows the art of “processing” a spiritual truth. (Hope you have read my article in Vedanta for the west that I had asked Los Angeles Ashram to be sent to you) I cannot hide from you the profundity of a Revelation in which the mystery of the Personal-Impersonal was revealed to me–and this had come to me in blessed Mysore in 1939. I had spoken not a word about it except to an elderly swami in Belur. The significance of that is now reappearing so often. Crossing  the frontier of a pleasant memory this is now integrating into my conscious ness and I bless the day I got “I.T” tat revelation I name as “I.T” That was the moment when the blessed training got from Revered V.S. had almost made explosion  of all ‘matas’ and the majesty of Advaita had come to me through the gateways of Intelligence-The “negation is via negative  classical Adwaita mean-book-Adwaita, is only a half-truth. The experience of 1933,-of I.T.-gave the intution of the Indivisible Truth. My indebtedness  to “V.S.” grows; but deeper still my LOVE to Him who opened my eyes spiritually-Sri Mahapurushji–I do not use the plural form in designating them. The “I.T.” did not come in a dream. I.T. came while looking at that tree whose tortured  branches were making contorting gestures of despair to the sky-(you may still remember that  “my tree” behind the post office) and the tree standing in the silhouette of rising moon, represented to me the whole agony of the soul-Whose ‘Sound-Form’ reach me in Europe in the music of Beethoven’ Ouverture of Egmont (–Do hear this from a gramaphone record. It lasts just 7 minutes). I reveal to you only now why that tree in contortion was a great symbol to me. (I told once in humour to Swami Desikanandji “I shall no more come to Mysore! you have allowed “my tree” to be felled down.) The study of Kumbhakarna Darsana had profound effect. This directly precipitated I.T. The Ajatavada of Gaudapada, with V.S.’s way of injecting it into our brains, was very salutary. The limits of intellect were touched  and the experience of I.T. shortcircuited intellectualism. You must be getting  impatient and say why I do not give you the story of I.T. With no more prefacing I narrate it. The power of negation came in the form of a spectacle Myself as a baby lying on the lap of Sri Guru Maharaj–our Lord’s form was envelopped in incandescent LIGHT. Tears were trickling from his eyes, tears of joy, of Ananda. One drop trailing in a pathyway of light dropped on the baby’s head–that cunning envelope of confusion! Instantaneously the head dissolved becoming one with light. Another drop fell on the lower part of the body and the whole of the legs and lower part became a vaccum of light. The third drop was falling but had not reached the target. The drops were falling as in dive-bombing! This third drop was directed against the Heart–The baby’s tongue that had already dissolved in the Great Void, could still be heard, as it shouted a cry “Oh! Please do not punish me to that extent. Do not take away the only thing I possess”–The Merciful One who had installed Thakur there in the Heart, when he blessed the baby in 1917, had kept his word–the eternal promise of Guru to come to the rescue of the disciple in his depth of misery. As the piercing cry went forth out came from the Luminous VOID, the hand of the Merciful ONE, dear Maharaj, just only the hand like a cricketer playing his century. The palm of the Merciful one struck that glistening tear drop, which reflected the brilliance of a thousand suns and that before the Dive Bomb touched the target the Merciful One played His Game: and there, that glistening tear drop falling with the rythm of a Shiva’s Dance of destruction, to break a heart, was shrivelled into millions of light points. These scintillating points of light became the Cosmos, forming the multiple constellations–the Lactic way, the gallactic and extra-gallactic constellations–In short tear drop revealed itself as the Cosmos–the Virat. Your words of the poet, “yella ide, yella ide Nityateya Gabbadali” was echoing in my brain. This was at night about 11 O’clock.The moon was just rising giving additional splendour to the tortured tree near the post office–and in the The Virat all that was restwhile in the way of negation came back to LIFE. The word coming back has no chronological significance. It was an experience of Eternal IS where the words ‘going’ and ‘coming’ lose all verbal value and where these words are just “verbiage.” The opposition between Nitya and Leela stopped!–just stopped! Stopped for ever! In the star bespangled universe Sri Guru Maharaj is the PENDANT as in our ornament “padaka” universely in Sri Guru Maharaj the whole of Cosmos, form necklace of stars. The brain gets short circuted by its internal heat. The heart regenerates it for the significance  of IT was already buried there, planted there, when the Merciful One had blessed the baby, breathing His secret in to the HEART. The Vedic Mantra ‘Pornamadhah Poorornamidam” gets married  to ‘Avataravarishtaya Ramakrishnaya tenamah’ in the  nuptial chamber of –the eternal, financialle of ‘Turiya Jnana–Vedanta’ into ‘Tulsi–Archana–devotion’–IT came to me that night in a fleeting spectacle I was neither dosing in my chair in the verandha nor fully awake. Now I know that it iwas not hallucination–for the memory of IT has begun to “awaken” me in France–in many many moments in a day! and that makes Smarana and Smarana and manana, work with same tangible reality, in an experience, to stand in. I did not mention the experience of  “IT” to any one then except to Sitapathi Maharj in Belur who paid no attention to it or dismissed it as one of the effusions of sentinmental brother. Now that IT has become woven in the texture of my consciousness. Thus, grace of is the greatest gift of “Maharaj–Mahapurushiji” to me. it comes, the–comes intermittently and you get mixed up in my “IT”. After 18 years I communicated to you with the seal “confidential” and ‘personal’ affixed to this narration,–“yella ide, yella ide nityateya gabbadali”.

Karma–burning (American translation of the word Karmakshaya) is going on with full speed–working at the rate of 12 to 14 hours per day. So many university lectures–with very large attendance–so many visitors everyday. In this house we arrange retreats for devotees for short periods. There is a constant flow of the changing numbers. In the Ashram we have  three nice Brahmacharees and 3 Brahmacharinis–lot of work for every one. The shrine that already possessed the HAIR RELICS of Guru Maharaj, Swamiji, Mother and Maharaj now possesses the bone RELICS. The bell ringing Vedanta-the daily Pooja, I do exactly in the way it is done in Indian centres with this addition to the classical ‘jay-ings’ associated with-Tahkur, Mother (Maha Mayi) Swamy and Gangamayi, I have recently added. ‘Jai-s’ to Maharaj Mahapurush Maharaj and Sasi Maharaj. I do exactly the evening archanas. Excepting intimate devotees the public are not allowed in the shrine. For I do not want to make it a gazing centre for the curious! For each iniversity lecture, I have to work…..preparing 30 to 40 hours of preparation. One series of weekly classes for students and another series of public lectures for the general public. This year I am specialising in Mahayana Buddhism and Vedanta for the public and after 3 years of expounding Taittriya I have now begun Mandukya Upanishad for students. V.S. must be happy in seeing me doing this as I do it in a very non-compromising way–making “Tulsi-aradhana devotion” dress up in pure Jnana form a funny Veshadhari and playing his game of uncompromising Jnana–for the last 3 months as a introduction I am only dealing with one subject. Vedanthic illustration–taking 10 illustrations–(1) serpent-rope, (2) naere-red flower, (3) mirage, (4) rope trick of magician, (5) lost pearl, (6) the tenth man, (7) painting (8) mirror, (9) clay, (10) dream. The whole question of problem of “Relations” in all its philosophical, psychological and logical aspects is dealt. I have done sufficient research work-sufficient-writing a thesis for Doctorate! as I myself have no mind and time to do it I am inducing some student to take it up for a doctorate–“The problem of Relations studied through Vedantic illustrations”

Ammaji–Dasappa’s sister is arriving her nest Sunday. I shall one of these days write a long letter to Manappa and Manjappa. Then he will understand, how much more inimately you are woven in my life and memories than what you think.

I wrote a long letter to Masti Venkatesha Iyengar after by return from Switzerland last year. I had requested him to pluck by his own hands some Tulsi leaves, dry it; by pressing if within a book and send it to me. I would have preferred it washed in Kaveri water. I am getting such tulsi leaves from Belur washed in Ganges water and also from my sister in Trichur–I am asking the Godavari Ashram swami to do the same and send Tulsi leaves washed with Godavari River– when one repeats–“Ganga cha Yamune chai va……” I still have a tangible symbol of offering tulsi leaves dipped in those sacred rivers to the copper pot containing water. This is just a symbolic way of feeling in distant Gretz the whole of mighty India–not the political India for which all enthusiasm is cooling not seeing the cari-cature of nationalism not in vogue. The cultural India is immortal. The cultural India is not that where the seven rivers flow in concrete form–I have no idolatory of Geography–It is Cosmic. It is my Give all my news to beloved Seshu Mama and all in the Ashram-particularly to Viresh Maharaj and Shamanna–Please send some of your poems–I shall purchase a set–Complete set–just send it to me with the bill and amount will be paid to you–we have a good Kannada group–Mahesh who reads Hatha Yoga a very fine boy from Gadag and Vasudevayya from Bangalore. Mahesh is lingayat, comes regularly here for sunday for pooja and prasad. He knows perfectly your novel “Subbamma”. As I do not read Kannada, I shall make him read and repeat many a poem, I have heard you repeat and thus relive old days.

I am sending you a coloured album, of scenes from Switzerland. The spring season is just on. The glory of spring is coming on–you should see. If you cannot come to Switzerland, go to the Himalayas. Out of Death of winter, resurrection of Spring. That glory is unimaginable. Every moment, every minute nature changes from Static Winter from Static dying as if dead comes Maya dancing. Rememberance to your wife and children and to Manjappa Gowda.