ನೀ ಮಥುರೆಯೊಳು ರಾಜ್ಯ ವೈಭವದಿ ಮುಳುಗಿರಲು
ನಾವು ನಿನ್ನನು ಈಗ ನೆನೆವುದೆಂತು ?
ಅರಸಿನುಡುಗೆಯನುಟ್ಟು ಆನೆಯಂಬಾರಿಯಲಿ ಕುಳಿತು
ನಡೆವ ನಿನಗೆಲ್ಲಿಯದೊ ನಮ್ಮ ನೆನಪು !
ಹಿಂದೆ ಬೃಂದಾವನದಿ ಎಂತು ಗೋವನು ಕಾದು
ನಲಿದೆ ನೀನೆಂಬುದನು ಮರೆತೆಯೇನೊ !
ವ್ರಜಗೋಪಿಯರ ಮನೆಯೊಳಂದು ಹಾಲ್‌ಬೆಣ್ಣೆಗಳ
ಕದ್ದು ಮೆದ್ದಾ ಸೊಗವು ನೆನಪಿಲ್ಲವೇನೊ !