ಓ, ಎಲ್ಲಿದೆ ಬೃಂದಾವನ ತೋರಿರೊ
ಎಲ್ಲಿ ಯಶೋದಾ ತಾಯಿ?
ಎಲ್ಲಿ ನನ್ನ ಆ ಧವಳ ಶ್ಯಾಮಲಿ
ಎಲ್ಲಿದೆ ಮೋಹನ ಮುರಲೀ ?

ಎಲ್ಲಿ ನನ್ನ ಪಿತ ನಂದಗೋಪ, ಮ-
ತ್ತೆಲ್ಲಿಹನಾ ಬಲರಾಮ?
ಎಲ್ಲಿ ನನ್ನ ಪ್ರಿಯ ಸ್ನೇಹಿತರಿಬ್ಬರು,
ಆ ಶ್ರೀಧಾಮ ಸುಧಾಮ?

ಯಮುನಾ ತಟದೆಡೆ ವಂಶೀ ವಟದೆಡೆ
ಪ್ರಿಯ ಗೋಪೀ ಜನವೆಲ್ಲಿ?
ನನ್ನ ಪ್ರಾಣಸಖಿ ರಾಧಾ ರಮಣಿಯು
ಹುದುಗಿರುವಳು ಇನ್ನೆಲ್ಲಿ?