“ಅಕ್ಕ ಕುಂಕುಮದಕ್” ಕುಂದನಾಡಿನ ಜಾನಪದ ಹಾಡುಗಳು, ಹಾಡ್ಗಥೆಗಳ ಸಂಗ್ರಹ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ನೀರೆರೆದು ಪೋಷಿಸಿದ ನನ್ನವರಾದ ಶ್ರೀಉಪ್ಪುಂದ ಚಂದ್ರಶೇಖರ ಹೊಳ್ಳೂರ ಪ್ರೋತ್ಸಾಹಕ್ಕೆ.

ಕುಂಕುಮದಕ್ಕನಿಗೆ ಪ್ರಿತಿಯ ಮುನ್ನುಡಿಯ ಕೈ ಬಟ್ಟಲ ಬಾಗಿನವನ್ನಿತ್ತು, ಸಂಕಲದ ಮೌಲ್ಯ ಹೆಚ್ಚಿಸಿದ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾದ ಪ್ರೊ.ಕೆ.ಚಿನ್ನಪ್ಪಗೌಡ ಇವರಿಗೆ,

ಅಂದವಾಗಿ ಮುಖಪುಟದ ಚಿತ್ರರಚನೆ ಮಾಡಿದ ಕಲಾವಿದೆ ಕು. ಭಾರತಿ ಮರವಂತೆಗೆ,
ಚಂದವಾಗಿ ರಕ್ಷಾಕವಚದ ವಿನ್ಯಾಸಗೈದ ಶ್ರೀಚಂದ ಎಸ್.ಕೋಡಿ ಇವರಿಗೆ,
ಪುಸ್ತಕ ಮುದ್ರಣ ಕೆಲಸದಲ್ಲಿ ತೊಡಗಿಸಿಕೊಂಡ ಶ್ರೀ ಗಣೇಶ ಪ್ರಸನ್ನ ಮಯ್ಯರ ಶ್ರಮಕ್ಕೆ,
ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಉಪ್ಪುಂದದ ಶ್ರೀ ಪ್ರಶಾಂತ ಮಯ್ಯ ದಾರಿಮಕ್ಕಿ, ಮತ್ತು ಶ್ರೀ ಸೀತಾರಾಮ ಪುರಾಣಿಕ ಉಪ್ಪುಂದ ಇವರ ಕಂಪ್ಯೂಟರ ಅಕ್ಷರ ಜೋಡಣೆಯ ತಾಳ್ಮೆಗೆ.
ಈ ಸಂಕಲನದ ಬಹಳಷ್ಟು ಹಾಡುಗಳನ್ನು ನೆನಪಿಸಿಕೊಂಡು ಹೇಳಿದ ಮಡೂರಜ್ಜನ ಮನೆಯ ಶ್ರೀಮತಿ ನಾರಾಯಣಿ ದೇವಾಡಿಗ ಎಂಬ ಹಾಡಿನ ಗೂಡಿಗೆ,

ನಾನು ಚಿರ ಋಣಿ.

ಅಂತೆಯೇ ಮುದ್ರಕರಾದ ವಿಶ್ವ ಪ್ರೀಂಟರ‍್ಸ, ನಾಗೂರು ಇವರಿಗೂ ನನ್ನ ಕೃತಜ್ಞತೆಗಳು.

ಯು.ವರಮಹಾಲಕ್ಷ್ಮೀ ಹೊಳ್ಳ
ಉಪ್ಪುಂದ.