ನೆನೆಕೊಂಬೆ ದೇವರೇ ನೆನಕಂಬಿ ದೆವ್ತಿಯೇ
ನೆನೆಕಂಬಿ ತಳದ ಒಡತಿಯೆ | ನಾಗಮ್ಮನೆ
ನಿಮ್ಮ ನೆನದ್ಹಾಡೇ ಬರಬೇಕೇ
ಇಲ್ಲಿಯ ತಳದಾರೆ ಮೋಮನ್ನಗಾರರೇ
ಮೋಮನ್ನ ಮುದ್ದ ಮಕದಾರೆ | ನಾಗದೇವ್ತಿಯೇ
ಸ್ವರವೆದ್ದುಬರಲಿ ಸಭಿಮುಂದೆ |
ಸ್ವರವೆದ್ದು ಬರಲಿ ಸಭಿಮುಂದೆ |
ಒಡದ ಒಪ್ಸೂವೆ ಇಡಗಾಯಿ |
ಒಡದ ಒಪ್ಸೂವೆ ಇಡಗಾಯಿ | ನಾಗದೇವ್ತಿಯೇ
ಎಳದು ಒಪ್ಸೂವೆ ಸಿರಿಗಂಧ |
ಎಳದು ಒಪ್ಸೂವೆ ಸಿರಿಗಂಧ | ನಾಗದೇವ್ತಿಯೇ
ಒಡದು ಏರಿಸುವೆ ಕೊನಿಹೂಗ |
ಒಡದು ಏರಿಸುವೆ ಕೊನಿಹೂಗ | ನಾಗದೇವ್ತಿಯೇ
ಜನ್ವಾರ್ ಒಪ್ಪಿಸುವೆ ಭುಜತುಂಬ |
ಜನ್ವಾರ್ ಒಪ್ಪಿಸುವೆ ಭುಜತುಂಬ | ನಾಗದೇವ್ತಿಯೇ
ನಾನ್ಹೇಳಿದ್ಹಾಡೇ ಸರು ತಪ್ಪು |
ನಾನ್ಹೇಳಿದ್ಹಾಡೇ ಸರು ತಪ್ಪು | ಸಾವುರಿತಪ್ಪು
ಸೋಲ್ಲು ತಪ್ಪಿದರೆ ಮುನಿದಿರು |
ಸೋಲ್ಲು ತಪ್ಪಿದರೆ ಮುನಿದಿರು | ನಾಗದೇವ್ತಿಯೇ
ಸ್ವರವೆದ್ದು ಬರಲಿ ಸಭಿ ಮುಂದೆ .