ನೆನೆ ಮನವೆ ನೀ ನೆನೆ ಮನವೇ | ಘನಗುರು ಪಾದವ
ಮರೆತಿರುವೇ ನೆನೆ ಮನವೇ |
ಹುಟ್ಟಿಸಿದನ ತಾ ಹೊಣೆಗಾರ | ಸೃಷ್ಟಿಯ | ಪೊರೆವನು
ಘನ ದೀರ || ನಿಷ್ಠೆಯೊಳಿರೆ ನಿನಗಿಷ್ಟದ |
ವಸ್ತುವ ಕಟ್ಟಿ ತಂದು ಕೂಡುವನು | ಗುರುಧಿರ ||
ನೆನೆಮನವೆ ಭವರೋಗಕೆ ಇವ | ಇವಾ ವೈದ್ಯಾ |
ಭುವನಗದಿಕ ರೇಣುಕಾರಾಧ್ಯ | ತವ ಪಾದವೆ |
ಗತಿಯೆಂದು | ನಂಬಿದವರಿಗೆ | ಭುವಿಯೊಳು
ಮುಕುತಿಯ | ರಾಜ್ಯವೆ ಸಾಧ್ಯಾ | ನೆನೆಮನ ||
ಅರಿವೆಂದಿಗೆ | ಘನ ಸಿರಿನಿನಗೇ ಮರೆಯ
ದುಃಖ | ಇಹಪರದೊಳುಗೆ || ಗುರು ರೇಣುಕ ನಡಿ
ಕೃಪೆ | ನಿನಗೊದುಗಲು || ಅರಿಯೇ ನಿದಕೆ ಸಮ
ಧರೆಯೊಳು || ನೆನೆ ಮನವೆ ನೀ ನೆನೆ ಮನವೆ
ಘನಗುರು ಪಾದವ ಮರೆತೀಯ ನೆನೆ ಮನವೆ ||