ನೆನೆಹುದು ಅನುದಿನವು ಉದಯ
ಕಾಲದೊಳು ಎಚ್ಚರದೊಳೆದ್ದು ವಿನುತ
ಗುರು ಮೂರ್ತಿಯನು ಉಮೇಶನಂಗ್ರಿಯನು
ಮತ್ತೆ ನಿನ್ನನು ಸುವಿಚಾರದಲಿ ನೇಮಕವಾಗಿ ತಿಳಿವುದು ನಿನಗೆ ಮುಕ್ತಿ ||

ಅನುದಿನವು ಈತನುವ ದಂಡಿಸಿ ನಿನಗರ್ಪಿಸುವ
ಶ್ರೀಗುರು ಪುಂಗವಾಹನ ಕೆಚ್ಚ ವೈಗುರು
ರೇಣುಕಾಚಾರ್ಯ ಮುಕ್ತಿ ಮಂದಿರ ವರಪ್ರದಾಯಕ
ಶ್ರೀಗುರುದೇನಂತು ||

ಎಂತ ಮಾನವ ಜನ್ಮ ಇದಕೆ ಬುದ್ಧಿನೇ ಇಲ್ಲೋ
ಗುರುವಿನ ಶುದ್ಧಭೋಧೆ ಅಮೃತವನು ಸವಿಯದೆ ಇಲ್ಲ || ಎಂತ ||

ಹದ್ದಿನಷ್ಟು ಆಯಸ್ಸು ಇದು ಪಡೆವ ಇಲ್ಲಿ |
ಒಂದಿನ ಹೋಗದು ಇದು ಗಟ್ಟಿಯೆಂದು ನೆನಪೆ ಇಲ್ಲ || ಎಂತ ||

ಹಿಂದೆ ಹಲವು ಜನ್ಮ ತಿರುಗಿ ಬಂದೈತಲ್ಲೋ
ಇದಕ್ಕೆ ಮುಂದಕ್ಕೆ ಹೋಗುವಂಥ ಮಾರ್ಗ ಗೊತ್ತೇ ಇಲ್ಲವಲ್ಲೋ || ಎಂತ ||

ತಂದೆ-ತಾಯಿ ಬಂಧು ಬಳಗ | ಬಳಗವೆಲ್ಲಾ
ನಿನ್ನ ಅಪ್ಪಿಕೊಂಡು ಬಂದವರೆಲ್ಲಾ ಉಳಿಸಲೇ || ಎಂತ ||

ಎಷ್ಟೇ ಇದ್ದರೂ ಸಾವು ನಿನಗೆ ತಪ್ಪಿದ್ದಲ್ಲ
ಒಂದಿನ ಸತ್ತು ಹೋಗದು ಗಟ್ಟಿ ದೇಹ
ಎಂದು ನೆನೆಪೇ ಇಲ್ಲ || ಎಂತು ||

ಸಂದು ನಿಂದು ಎಂಬೊ ಭ್ರಾಂತಿ ಬಡಿತವೆಲ್ಲಾ
ಒಂದಿನನೊಂದು ಎಲ್ಲ ಬಿಟ್ಟು ನಡೆದಿತ್ತಾ || ಎಂತ ||

ಎಲ್ಲಾ ಸುಳ್ಳು ಒಂದೇ ನಿಜ ತಿಳಿಯೊ ಬೈಲಾಯಿದರ
ಮೂಲ ತಿಳಿಸುವಂತ ಗುರುವು ಹೊಂದಲೇ ಇಲ್ಲ || ಎಂತ ||

ಗುರುಭೀಮ ತಿಳಿಸುವನೆ ಭವದ ತೇಲು ತಿರುಳ
ರಾಚಯ್ಯನ ನೋಡಿದರೆ ಸಕ್ಕರೆ ಹಾಲು || ಎಂತ ||