ಸ್ಥಿತಿಗತಿ

ವಿಜ್ಞಾನ ಬೆಳೆದು ಉದ್ದುದ್ದ ತೋಳುಗಳಿಂದ ಜಗತ್ತನ್ನು ಬಾಚಿ ಬಳಸಿದಾಗ ಕೈಗಾರಿಕೀಕರಣಗೊಂಡ ಭೂಮಿಯ ಮೇಲೆ, ಕಂಡಕಂಡಲ್ಲೆಲ್ಲಾ ದೊಡ್ಡ ದೊಡ್ಡ ಕೈಗಾರಿಕಾ ಘಟಕ(ಫ್ಯಾಕ್ಟರಿ)ಗಳು ಎದ್ದೆದ್ದು ನಿಂತು ದೈತ್ಯ ಕೆಲಸದಲ್ಲಿ ತೊಡಗಿಕೊಂಡಿವೆ. ಇದರಿಂದಾಗಿ ಗುಡಿ-ಕೈಗಾರಿಕೆಗಳು ಮೂಲೆಗೊತ್ತಲ್ಪಟ್ಟು ಮುರುಟಿ ಸುರುಟಿ ಹೋಗಿವೆ. ಹೇಳಲು ಹೆಸರಿಲ್ಲವಾಗಿವೆ. ಅಂತೆಯೇ, ಅವುಗಳಲ್ಲಿ ಹಾಸುಹೊಕ್ಕಾಗಿದ್ದ ಒಗ್ಗಟ್ಟು-ಹೊಂದಾಣಿಕೆ, ಪರಸ್ಪರ ಆದರ-ಗೌರವ, ಸಹಬಾಳ್ವೆ-ಸೌಹಾರ್ದತೆ, ಶಾಂತಿ-ಸಹನೆ, ಸಮಾಧಾನಗಳು ತುಂಬಿದ ಕುಟುಂಬ ಸಂಸ್ಕೃತಿ ಸುಟ್ಟು ಸುಡುಗಾಡು ಸೇರಿವೆ. ಭಾರತದ ಬೆನ್ನೆಲುಬಾಗಿದ್ದ ಹಳ್ಳಿಗಳು ಇನ್ನಿಲ್ಲವಾಗಿವೆ. ಸಸ್ಯ ಸಂಪತ್ತು ಸರ್ವನಾಶಗೊಂಡಿತು. ಜಲತಾಣಗಳು ಒಣಗಿ ಹೋದುವು. ಇರುವುವೂ ಸಹ ಬಡವಾಗಿ ಕೆಟ್ಟುಹೋಗಿವೆ. ಎಲ್ಲೆಲ್ಲಿಯೂ ಎಲ್ಲದರಲ್ಲಿಯೂ ಆಸೆ-ಆಮಿಷ ಅತಿಯಾಗಿ ದುರಾಸೆಯಲ್ಲಿ ಮುಳುಗಿದೆ. ಹಣ-ಅಧಿಕಾರಗಳ ಬೆನ್ನಹತ್ತಿ, ದಾನವ ದಾನವನಾಗಿ ಸುಡುತ್ತಿದೆ.

ಸುಲಲಿತ ವ್ಯವಹಾರ ಜೀವನಕ್ಕಾಗಿ ನಿರ್ಮಾಣವಾದ ಹಣ ಇಂದು ಇಡೀ ಜೀವನವನ್ನೇ ಆಕ್ರಮಿಸಿಕೊಂಡು ಆಮಿಷಗಳ ಆಗರವಾಗಿ ‘‘ಸರ್ವೇಗುಣಾಃ ಕಾಂಚನಮಾಶ್ರಯಂತಿ’’ ಎಂದು ತನ್ನ ದುರಾಡಳಿತದಿಂದ ಲೋಕವನ್ನು ಬಾಧಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅದರ ಭರಾಟೆ ಮಿತಿಮೀರಿ, ಅರ್ಭಟಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಆರ್ಥಿಕವಾಗಿ ಹಿಂದುಳಿದು, ದಿನನಿತ್ಯದ ಅನ್ನಕ್ಕಾಗಿ ಅಲೆದಾಡುತ್ತಿರುವ ನೇಕಾರ ಶಾಲೆಗೆ ಹೋಗಿ ವಿದ್ಯೆ ಕಲಿಯುವುದಾದರೂ ಹೇಗೆ? ಹಸಿದ ಹೊಟ್ಟೆಯನ್ನು ಮುಂದಿಟ್ಟುಕೊಂಡು ಓದುವುದಾದರೂ ಏನನ್ನು?

ಶಿಕ್ಷಣ

ಈ ಕುರಿತು ಶ್ರೀ ಸ್ವಾಮಿ ವಿವೇಕಾನಂದರು-

‘‘Education is the manifastation of perfaction which is already in man’’

‘‘ಮಾನವನಲ್ಲಿ ನೆಲೆಸಿರುವ ಪರಿಪೂರ್ಣತೆಯನ್ನು ಪ್ರಕಟಗೊಳಿಸುವುದೇ ಶಿಕ್ಷಣ ಎಂದಿದ್ದಾರೆ’’

ಶಾಸ್ತ್ರಗಳಲ್ಲಿ : ಪರಮಾತ್ಮನ ಪರಮಾಣುವಾದ ಪ್ರತಿಯೊಂದು ಜೀವಿಯೂ ಪರಿಪೂರ್ಣತೆಯ ಆಗರವಾಗಿರುವುದು. ಆ ಪರಿಪೂರ್ಣತೆಯು ಮೊದಲಿಗೆ ಗುಪ್ತವಾಗಿ, ಸುಪ್ತವಾಗಿ ಇರುತ್ತದೆ. ಅದನ್ನು ತಿಳಿದುಕೊಳ್ಳಬೇಕು, ತಿಳಿದುಕೊಂಡು ಬೆಳೆಸಿಕೊಳ್ಳಬೇಕು, ಬೆಳೆಸಿ-ಅರಳಿಸಿಕೊಳ್ಳಬೇಕು. ಅರಳಿಸಿಕೊಂಡು ಹಣ್ಣಾಗಿಸಿಕೊಳ್ಳಬೇಕು. ಇದು ಜೀವಿಯ ಜೀವನದ ಗುರಿ.

ಜನ್ಮನಾ ಜಾಯತೇ ಶೂದ್ರಃ ಆಚಾರೇಣ ದ್ವಿಜಃ |
ವೇದಪಾರಾಯಣೇ ವಿಪ್ರಃ ಬ್ರಹ್ಮಜ್ಞಾನೇನ ಬ್ರಾಹ್ಮಣಃ ||

ಮಾನವನಲ್ಲಿ ಪರಿಪೂರ್ಣತೆಯು ಮೊದಲಿಗೆ ನಿದ್ರೆಯಲ್ಲಿರುತ್ತದೆ. ಅದನ್ನು ಗುರುತಿಸಿಕೊಂಡವನಿಗೆ ದ್ವಿಜತ್ವ (ಎರಡನೆಯ ಹುಟ್ಟು) ಉಂಟಾಗುತ್ತದೆ. ಮಲಗಿರುವುದನ್ನು ಎಚ್ಚರಗೊಳಿಸುವ ಕೆಲಸಕ್ಕೆ ಕೈಹಚ್ಚಿದವನಿಗೆ ವಿಪ್ರತ್ವವೊದಗುತ್ತದೆ. ಪೂರ್ಣ ಎಚ್ಚರಗೊಳಿಸಿ ಬಳಸಿಕೊಂಡವನು ಬ್ರಾಹ್ಮಣನಾಗುತ್ತಾನೆ. ಕಲಿಕೆಯ ಅಥವಾ ವಿಕಾಸದ ಮಾರ್ಗವನ್ನು ಕನ್ನಡದ ಕವಿಗಳು ಹೀಗೆ ವಿವರಿಸಿದ್ದಾರೆ-

‘‘ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರುವು’’

‘‘ತಂದೆ ಬಾಲ್ಯದೊಳಕ್ಕರ ವಿದ್ಯಗಳನರಿಪದಿರ್ದೊಡೆ ಕೊಂದಮ್ |
ಲಕ್ಕ ಧನಮಿರಲು ಕೆಡುಗುಂ ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನ ||’’

“ವಿದ್ಯೆ ಕೊಡದಾ ತಂದೆ. ಬುದ್ದಿ ಹೇಳದ ಗುರುವು|
ಬಿದ್ದಿರಲು ಬಂದೆತ್ತದಾ ತಾಯಿ ಧರೆಯೊಳಗೆ |
ಶುದ್ಧ ವೈರಿಗಳು ಸರ್ವಜ್ಞ ||’’

‘‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಲ್ಪವರಿಂದ ಕಂಡು |
ಕೆಲವಂ ಶಾಸ್ತ್ರಂಗಳಿಂ ಓದುತಂ, ಕೆಲವಂ ಸುಜ್ಞಾನದಿಂದ ನೋಡುತಂ ||
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||’’

ವಿದ್ಯಾ ಸಂಸ್ಥೆಗಳು (ಮಠಗಳು ಸೇರಿದಂತೆ) ೧೨

ಅವುಗಳಲ್ಲಿಯೇ ಶಿಶು ವಿಹಾರಗಳು – ೧೧

ಪೂರ್ವ ಪ್ರಾಥಮಿಕ ಶಾಲೆಗಳು – ೧೧

ಕಿರಿಯ ಪ್ರಾಥಮಿಕ ಶಾಲೆಗಳು – ೧೧,

ಹಿರಿಯ ಪ್ರಾಥಮಿಕ ಶಾಲೆಗಳು – ೬

ಪ್ರೌಢಶಾಲೆಗಳು – ೨

ಸೌಲಭ್ಯಗಳು

ವಿದ್ಯಾರ್ಥಿ ನಿಲಯಗಳು ೮

ಪುರುಷರಿಗೆ ೬, ಮಹಿಳೆಯರಿಗೆ ೨

ಅಕ್ಷರಸ್ಥರು (೧.೫೨) ಅಂದರೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತು ತೇರ್ಗಡೆಯಾದವರು ಪರೀಕ್ಷೆಗೆ ಕುಳಿತವರು ೫,೪೪೫ ಪರೀಕ್ಷೆ ತೇರ್ಗಡೆಯಾದವರು ೨,೯೮೫

ಔದ್ಯೋಗಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯಕೀಯ – ೨೫ ವ್ಯವಸಾಯ – ೧

ರಾಜ್ಯದಲ್ಲಿನ ವಿದ್ಯಾವಂತರ ಅಂಕಿ ಅಂಶಗಳು

ಎಲ್ಲ ಜನಾಂಗ

ಗಂಡಸರು

ಹೆಂಗಸರು

ಒಟ್ಟು

ಒಟ್ಟು ಜನಸಂಖ್ಯೆ ೩೭,೬೩,೩೧೮ ೩೫,೬೫,೮೨೨ ೭೩,೨೯,೧೪೦
ಓದುಬರಹ ಬಲ್ಲವರು ೭,೬೬,೭೬೭ ೧,೮೮,೩೦೭ ೯,೫೫,೯೭೪
ಇಂಗ್ಲೀಷ್ ಬಲ್ಲವರು ೧,೪೨,೮೪೩ ೨೯,೬೪೧ ೧,೭೨,೪೯೪

 

ರಾಜ್ಯದಲ್ಲಿನ ನೇಕಾರ ವಿದ್ಯಾವಂತರ ಅಂಕಿ ಅಂಶಗಳು

ನೇಕಾರರು

ಗಂಡಸರು

ಹೆಂಗಸರು

ಒಟ್ಟು

ಒಟ್ಟು ಜನಸಂಖ್ಯೆ ೬೫,೨೨೪ ೬೨,೯೨೭ ೧,೨೭,೯೫೧
ಓದು ಬರಹ ಬಲ್ಲವರು ೨೧,೪೦೭ ೧,೯೯೦ ೨೪,೩೮೬
ಇಂಗ್ಲೀಷ್ ಬಲ್ಲವರು ೨,೧೯೮ ೧೯೫ ೨,೩೯೩

ಈ ಅಂಕಿ ಅಂಶಗಳಿಂದ ನೇಕಾರನ ಸ್ಥಿತಿಗತಿಗಳನ್ನು ಅರಿತುಕೊಂಡ ಘನ ಸರ್ಕಾರಗಳು, ಬಹಳಷ್ಟು ರೀತಿಯಲ್ಲಿ ಅವನ ನೆರವಿಗೆ ಧಾವಿಸುತ್ತಿವೆ. ಅವುಗಳಲ್ಲಿ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆಗಳು ಹೀಗಿವೆ.

ಶೈಕ್ಷಣಿಕ ಯೋಜನೆಗಳು

ಕೈಮಗ್ಗ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಅವನ ವ್ಯಾಸಂಗ ಹಾಗೂ ಉತ್ತೀರ್ಣತೆ ಶೇಕಡ ಅಂಕದ ಆಧಾರದ ಮೇಲೆ ಈ ಕೆಳಗಿನಂತೆ ವಿದ್ಯಾಥಿರ ವೇತನ ಮಂಜೂರು ಮಾಡುವುದು ಹಾಗೂ ಪುಸ್ತಕ ಖರೀದಿಗೂ ಅನುದಾನ ನೀಡುವುದು.              

                                              

ಕ್ರ. ಸಂ.

ವ್ಯಾಸಂಗ

ಫೀ ಸಂಬಂಧಿ ವಿದ್ಯಾರ್ಥಿ ವೇತನ

ಪುಸ್ತಕ ಖರೀದಿಗೆ ಅನುದಾನ

ಹೆಚ್ಚುವರಿ ವಿದ್ಯಾರ್ಥಿ ಶೇ. ಅಂಕ

೧. ಪಿ.ಯು.ಸಿ ಮತ್ತು ಡಿಪ್ಲೊಮಾ ೫೦೦ ೨೫೦ ೫೦೦
೨. ಐ.ಟಿ.ಐ ೨೫೦
೩. ವಿಜ್ಞಾನ ಪದವಿ ೭೫೦ ೭೫೦ ೧೦೦೦
೪. ಇತರೆ ಪದವಿ ೫೦೦ ೫೦೦ ೪೦೦
೫. ಬಿ.ಇ, ಮೆಡಿಕಲ್ ಮತ್ತು ಇತರೆ ವೃತ್ತಿನಿರತ ಪದವಿ ೨೦೦೦ ೧೫೦೦ ೧೫೦೦

ಜೊತೆ ಜೊತೆಯಲ್ಲಿ ನೇಕಾರನನ್ನು ಆರ್ಥಿಕವಾಗಿ ಸಬಲವನ್ನಾಗಿ ಮಾಡಲು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳೆಂದರೆ-

ಕೈಮಗ್ಗ ಮತ್ತು ಜವಳಿ ಇಲಾಕೆಯ ಯೋಜನೆಗಳು

ಕೈಮಗ್ಗ, ವಿದ್ಯುತ್ ಮಗ್ಗ ಹಾಗೂ ಸಿದ್ಧ ಉಡುಪು ವಲಯದ ನೇಕಾರರು : ಕೆಲಸಗಾರರ ಅಭಿವೃದ್ದಿಗಾಗಿ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

ರಾಜ್ಯ ವಲಯ ಯೋಜನೆಗಳು

೧. ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮ ಯೋಜನೆ

೨. ನಬಾರ್ಡ್ ಯೋಜನೆಯಲ್ಲಿ ದುಡಿಯುವ ಬಂಡವಾಳ ಸಾಲ ಯೋಜನೆ

೩. ಹೊಸ ವಿನ್ಯಾಸ ಮತ್ತು ಪ್ರವೃತ್ತಿ ಯೋಜನೆ

೪. ನೇಕಾರರ ಕಲ್ಯಾಣ ಯೋಜನೆ

ಅ. ಆರೋಗ್ಯ ಯೋಜನೆಗಳು

೧. ಕ್ಯಾನ್ಸರ್ ರೋಗ ಚಿಕಿತ್ಸೆ

೨. ಹೃದ್ರೋಗ ಮತ್ತು ಮೂತ್ರಪಿಂಡ ಜೋಡಣೆ

೩. ಕುಷ್ಠ ರೋಗ ಮತ್ತು ಮಾನಸಿಕ ವಿಕಲತೆ ಅಸಮತೋಲನ

ಆ. ನೇಕಾರರ ಅಂತ್ಯ ಸಂಸ್ಕಾರದ ಖರ್ಚು

ಜಿಲ್ಲಾ ವಲಯ ಯೋಜನೆಯಲ್ಲಿ

೧. ಕೈಮಗ್ಗ ಉದ್ದಿಮೆಗಳಿಗೆ ಸಹಾಯ

೨. ಕೈಮಗ್ಗ ನೇಕಾರಿಕೆ ತರಬೇತಿ

೩. ಸಾಮೂಹಿಕ ನೇಯ್ಗೆ ಕೇಂದ್ರ, ಬಣ್ಣದ ಮನೆ, ವಸತಿ ಕಾಲೋನಿಗಳ ಸ್ಥಾಪನೆ.

೪. ಸುಧಾರಿತ ಮಗ್ಗಗಳು ಮತ್ತು ಉಪಕರಣಗಳ ಪೂರೈಕೆ ಇತ್ಯಾದಿ ಇತ್ಯಾದಿ.

3 ಕೇಂದ್ರ ಪುರಸ್ಕೃತ ದೀನ್ ದಯಾಳ್ ಹತಕರಣಾ ಪ್ರೋಯೋಜನೆ

3 ಕೈಮಗ್ಗ ತರಬೇತಿ ಸಂಸ್ಥೆಗಳು

3 ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ

3 ಕರ್ನಾಟಕ ನೇಕಾರರ ಮುಂದುವರಿದ ಕೈಮಗ್ಗ ತರಬೇತಿ ಸಂಸ್ಥೆ

3 ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು

ಇತರೆ ಕೈಮಗ್ಗ ನೇಕಾರರ ಯೋಜನೆಗಳು

3 ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಯೋಜನೆ

3 ನೇಕಾರರು ತಮ್ಮ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕಾಗಿ ವಿವಿಧ ಮೇಳಗಳಲ್ಲಿ ಭಾಗವಹಿಸುವುದು.

3 ಕೈಮಗ್ಗ ನೇಕಾರರಿಗೆ ಗುರುತಿನ ಚೀಟಿ ವಿತರಣೆ

3 ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ನಿಗಮದ ಮೂಲಕ ಖರೀದಿ ಸೌಲಭ್ಯ.

3 ಕೈಮಗ್ಗ ನೇಕಾರರಿಗೆ ಸಮಗ್ರ ತರಬೇತಿ.

ಕೈಮಗ್ಗ ನೇಕಾರನಿಗೆ ಹೊಸ ಯೋಜನೆಗಳು

3 ಕೈಮಗ್ಗ ನೇಕಾರರ ಆರೋಗ್ಯ ವಿಮಾ ಯೋಜನೆ

3 ಮಹಾತ್ಮಾ ಗಾಂಧಿ ಬುಣಕರ್ ಬಿಮಾ ಯೋಜನೆ

ವಿದ್ಯುತ್ ಮಗ್ಗ ವಲಯದ ಯೋಜನೆಗಳು

3 ವಿದ್ಯುತ್ ಮಗ್ಗ ಘಟಕಗಳು ಹಾಗೂ ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ಯೋಜನೆ.

3 ಸ್ವಯಂ ಚಾಲಿತ ಹಾಗೂ ಅರೆ ಸ್ವಯಂ ಚಾಲಿತ ಮಗ್ಗಗಳಿಗೆ ಬಂಡವಾಳ ಹೂಡಿಕೆ

3 ವಿದ್ಯುತ್ ಮಗ್ಗಗಳ ಆಧುನೀಕರಣ ಯೋಜನೆ

3 ವಿದ್ಯುತ್ ಮಗ್ಗ ನೇಕಾರರಿಗೆ ಗುಂಪು ವಿಮಾ ಯೋಜನೆ

ಇನ್ನು ಇತ್ತೀಚಿನ ದಿನಪತ್ರಿಕೆಗಳಲ್ಲಿನ ವಾರ್ತೆಗಳಂತೆ ಸನ್ಮಾನ್ಯ ನಂಜುಂಡಪ್ಪ ವರದಿ ಜಾರಿಯಾಗಿ ಹೊಸ ಬಜೆಟ್ ನಲ್ಲಿ ರೈತರು ಮೀನುಗಾರರ ಜೊತೆ ನೇಕಾರನಿಗೂ ರೂ.೨೫.೦೦೦ದವರೆಗೆ ಸಾಲ ಮನ್ನಾ, ರೂ. ೨೫.೦೦೦ಕ್ಕೆ ಮೀರಿದ ಸಾಲಕ್ಕೆ ಬಡ್ಡಿ ಮನ್ನಾ ಮಾಡಲಾಗಿದೆ. ಅಲ್ಲದೇ, ಮುಂದೆ ಶೇ.೪ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿದೆ.

ಉಪಸಂಹಾರ

ಒಟ್ಟಿನಲ್ಲಿ ಸರ್ಕಾರಗಳು ನೇಕಾರನಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ ಅವೆಲ್ಲವೂ ರಾವಣನ ಹೊಟ್ಟೆಗೆ ಕಾಸು ಮಜ್ಜಿಗೆಯಂತಾಗಿ ಹೋಗಿದೆ.

ಆಧಾರಗಳು

೧. ಕಾಲೇಲ್ಕರ್ ವರದಿ

೨. ಹಾವನೂರ್ ವರದಿ

೩. ಕೈಮಗ್ಗ ಮತ್ತು ಜವಳಿ ಇಲಾಖೆ ಮಾಹಿತಿಗಳು, ಕರ್ನಾಟಕ ಸರ್ಕಾರ

೪. ಹಿಂದುಳಿದ ವರ್ಗಗಳ ಇಲಾಖೆಯ ಮಾಹಿತಿಗಳು

೫. ಸಂಬಂಧಿಸಿದ ವಿವಿಧ ಸಂಘ-ಸಂಸ್ಥೆಗಳಿಂದ ದೊರೆತ ಮಾಹಿತಿಗಳು

೬. ವಾಣಿಜ್ಯ ಸಂಸ್ಥೆಗಳು – ೩

೭. ಸೇವಾ ಸಂಸ್ಥೆಗಳು – ೧೫೧

* * *