ಕರ್ನಾಟಕದಲ್ಲಿ ಸು. ೧೦೫ ರಷ್ಟು ಪ್ರಾಕೃತ ಶಾಸನಗಳು ಪತ್ತೆಯಾಗಿವೆ. ಸನ್ನತಿ, ಬೆಳ್ವಾಡಗಿ, ಚಿಕ್ಕಸಿಂದಗಿ, ನಿಟ್ಟೂರು, ಉದೊಗೋಳ, ಮಸ್ಕಿ, ಕೊಪ್ಪಳ, ಹುರುಸುಗಂದಿ, ಹಂಪಿ, ಬೆಳಗಾವಿ (ಮಾಧವಪುರ-ವಡಗಾವಿ) ಬನವಾಸಿ, ವಾಸನ (ಧಾರವಾಡ ಜಿ.) ಚಂದ್ರವಳ್ಳಿ, ಮಳವಳ್ಳಿ ಸಿದ್ಧಾಪುರ, ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಹಿರೇಮಗಳೂರು ಈ ಮೊದಲಾದ ಊರುಗಳಲ್ಲಿ ಇವು ದೊರೆತಿದ್ದು, ಸನ್ನತಿ ಪರಿಸರದಲ್ಲಿ ಇನ್ನೂ ಇಂಥ ಬರಹಗಳು ಪತ್ತೆಯಾಗುತ್ತಿವೆ. ಈಗಿನ ಮಹಾರಾಷ್ಟ್ರದ ಕೊಲ್ಲಾಪುರ, ಕಾಣ್ಹೇರಿ, ಕಾರ್ಲೆ ಮೊದಲಾದ ಪ್ರದೇಶಗಳು ಮುಂಚೆ ಕರ್ನಾಟಕದ ಭಾಗಗಳಾಗಿರುವ ಸಾಧ್ಯತೆ – ವಿಶೇಷವಾಗಿದೆ. ಕಾಣ್ಹೇರಿ ಊರ ಹೆಸರಿನಲ್ಲಿರುವ ವಾರ್ಗಿಕರೂಪ – ಏರಿ ಅಚ್ಚಕನ್ನಡದ್ದು. ಆದರೆ ಸದ್ಯ ಹೊರ ನಾಡೆನಿಸುವ ಈ ಪ್ರದೇಶದ ಶಾಸನಗಳನ್ನು ಈ ಅಧ್ಯಯನದಿಂದ ಹೊರಗಿಡಲಾಗಿದೆ. ಆದರೆ ಕಾರ್ಲೆಯ ಚೈತ್ಯಾಲಯದ ಶಾಸನದಲ್ಲಿ ಕಂಡುಬರುವ ಬನವಾಸಿಯ ವ್ಯಾಪಾರಿ ‘ಭೂತಪಾಲ’ ನ ಹೆಸರನ್ನು ಮಾತ್ರ ಇಲ್ಲಿ ಸೇರಿಸಿದೆ.

ಸನ್ನತಿ ಮತ್ತು ಅದರ ಪರಿಸರದಲ್ಲಿ ಮತ್ತು ಅಲ್ಲಿನ ಸ್ತೂಪಾವಶೇಷಗಳಲ್ಲಿ ಈವರೆಗೆ ಸು. ೭೭ ರಷ್ಟು ಚಿಕ್ಕ-ದೊಡ್ಡ ಪ್ರಾಕೃತ ಶಾಸನಗಳು ಲಭ್ಯವಾಗಿದ್ದು ಅವುಗಳ ಪೈಕಿ ಮೌರ್ಯ ಚಕ್ರವರ್ತಿ ಅಶೋಕನವು ನಾಲ್ಕು ಮತ್ತು ಸಾತವಾಹನ ದೊರೆ ಸಿರಿಸಾತಕಣಿ (ಶ್ರೀ ಶಾತಕರ್ಣಿ) ಯ ಒಂದು ಶಾಸನಗಳು ದೊಡ್ಡವು, ಉಳಿದವು ಬಿಡಿ ಬರಹಗಳಾಗಿದ್ದು ಅಲ್ಲಿನ ಬೌದ್ಧವಿಹಾರಗಳಿಗೆ ಒಂದಿಲ್ಲೊಂದು ರೀತಿಯ ಸ್ಮಾರಕ ರಚನೆ ಅಥವಾ ಸೇವಾಕಾರ್ಯ ಸಲ್ಲಿಸಿದವರ ಹೆಸರುಗಳಾಗಿವೆ.

ಸನ್ನತಿಯಲ್ಲಿ ಇತ್ತೀಚೆಗೆ (೧೯೮೯) ಪತ್ತೆಯಾಗಿರುವ ಅಶೋಕನ ನಾಲ್ಕು ಶಾಸನಗಳಿಂದಾಗಿ ಪ್ರಾಚೀನ ಕರ್ನಾಟಕದ ಚರಿತ್ರೆಯ ಮೇಲೆ ಹೊಚ್ಚಹೊಸಬೆಳಕು ಬಿದ್ದಿದೆ. ಆ ನಾಲ್ಕರ ಪೈಕಿ ಎರಡು ಶಾಸನ ಪಾಠಗಳು ಓಡಿಸಾದ ಧೌಲಿ ಮತ್ತು ಜೌಗಡಾಗಳಲ್ಲಿ ಮಾತ್ರ ದೊರೆಯುತ್ತಿದ್ದು ಇತರತ್ರ ಕಂಡು ಬಂದಿಲ್ಲ. ಈ ಅಧಿಕ ಶಾಸನ ಗಳನ್ನು ಸನ್ನತಿಯಲ್ಲಿ ಕೆತ್ತಿಸಲು ಏನು ಕಾರಣವೊ ? ಮಹತ್ವದ ಘಟನೆಯೊಂದು ಕಾರಣವಾಗಿರಬಹುದಾದ ಶಕ್ಯತೆಯನ್ನು ಊಹಿಸಬೇಕಾಗುತ್ತದೆ. ಇತರತ್ರ ನೈಸರ್ಗಿಕ ಬಂಡೆಗಳ ಮೇಲೆ ಅಶೋಕ ತನ್ನ ಶಾಸನಗಳನ್ನು ಕೆತ್ತಿಸಿದ್ದು ವಿಶೇಷವಾದರೆ ಇಲ್ಲಿ ಬಿಡಿಗೊಂಡ ಶಿಲಾಫಲಕಗಳ ಮೇಲೆ ಕೆತ್ತಿಸಿದ್ದಾನೆ. ಶಾತಕರ್ಣಿಯ ಶಾಸನದಲ್ಲಿ ಅಂದಿನ ಕಾಲದ ಒಟ್ಟು ೧೨ ಅಥವಾ ೧೩ ರಾಜಮನೆತನ / ಪ್ರದೇಶಗಳು ಉಲ್ಲೇಖಗೊಂಡು ಚರಿತ್ರೆಯ ಮೇಲೆ ಹೊಸಬೆಳಕು ಬೀರುತ್ತಿವೆ. ಕ್ರಿ.ಶ. ಒಂದನೆಯ ಶತಮಾನದಲ್ಲಿಯೇ ಈ ಭಾಗದಲ್ಲೊಂದು ರಟ್ಟ ರಾಜ್ಯವಿದ್ದ ಬಗ್ಗೆ ಈ ಶಾಸನ ಸಾಕ್ಷಿ ನುಡಿಯುತ್ತಿದೆ. ಮೌರ್ಯರ ತರುವಾಯ ಕ್ರಿ.ಶ. ಪೂ.ಒಂದನೆಯ ಶತಮಾನದಿಂದ ಎರಡನೆಯ ಶತಮಾನದ ವರೆಗೆ ಶಾತವಾಹನರು, ಜತೆಗೆ, (ಮೂಳ (ಡ) ಕ) ಜಯವಿ, ಚಕೋರ, ವಲ (ವಲ್ಲಭ ?) ರಠ (ರಟ್ಟ) ಮತ್ತು ಇತರ ದಕ್ಷಿಣ ಭಾಗದ ಇನ್ನೂ ಕೆಲವು ಬೇರೆ ರಾಜಮನೆತನಗಳವರು ಮಾಂಡಲಿಕರೊ ಸ್ವತಂತ್ರರೋ ಆಗಿ ರಾಜ್ಯ ವಾಳುತ್ತ ಕರ್ನಾಟಕದ ಬಹುಭಾಗವನ್ನು ವ್ಯಾಪಿಸಿದ್ದರೆಂದು ಸನ್ನತಿಯ ಈ ಸಾತವಾಹನ ಶಾಸನ ಖಚಿತವಾಗಿ ಹೇಳುತ್ತಿದೆ. ಬೌದ್ಧಧರ್ಮದ ಜತೆಗೆ ಆಗಲೇ ಇಲ್ಲಿ ವೈದಿಕರು ಮತ್ತು ಶಿವ (ಲಿಂಗ) ಕಾರ್ತಿಕೇಯ, ನಾಗರ, ಹಾರೀತಿ ಎಂಬು ಮಾತೃ ದೇವತೆ – ಮೊದಲಾದ ಧಾರ್ಮಿಕ ಪರಂಪರೆಯವರು ನೆಲೆಯೂರಿದ್ದ ಬಗ್ಗೆಯೂ ಈ ಶಾಸನಳಿಂದ ಮಾಹಿತಿ ತಿಳಿದು ಬರುತ್ತಿದೆ. ಸನ್ನತಿ, ಮಸ್ಕಿ, ಕೊಪ್ಪಳ, ನಿಟ್ಟೂರು, ಉದೋಗೋಳ, ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗರಾಮೇಶ್ವರ, ಬನವಾಸಿ, ಮೊದಲಾದೆಡಗಳಲ್ಲಿ ಬೌದ್ಧಕೇಂದ್ರಗಳಿದ್ದವು ; ಮಳವಳ್ಳಿ ಮತ್ತು ವಾಶನ ಶೈವಕೇಂದ್ರವಾಗಿದ್ದವು ; ಬೆಳಗಾವಿ, ಹಿರೇಮಗಳೂರು, ಹಿರೇಹಡಗಲಿ ಪ್ರದೇಶಗಳಲ್ಲಿ ವೈದಿಕರು ನೆಲೆಯೂರಿದ್ದರು. ನಾಗಾರಾಧನೆ ಕರ್ನಟಕದ ಮೂಲೆಮೂಲೆಗಳಲ್ಲಿ ಪಸರಿಸಿದ್ದಷ್ಟೇ ಅಲ್ಲ ರಾಜ ಮನೆತನದವರೂ ಅದನ್ನು ಅನುಸರಿಸುತ್ತಿದ್ದರು.

ಉತ್ತರದ ಗುಪ್ತರು ಮಧ್ಯದ ವಾಕಾಟಕರಂತೆ – ಕರ್ನಾಟಕದ ಕದಂಬರೂ ಪ್ರಾಕೃತವನ್ನು ನಿರಾಕರಿಸಿದರು. ಅವರು ಸಂಸ್ಕೃತವನ್ನು ಎತ್ತಿ ಹಿಡಿದದ್ದಲ್ಲದೆ ಕನ್ನಡಕ್ಕೂ ತಮ್ಮ ಆಡಳಿತದಲ್ಲಿ ದ್ವಿತೀಯ ರಾಜಭಾಷೆಯ ಸ್ಥಾನವಿತ್ತರು. ಹಲ್ಮಿಡಿ ಶಾಸನ ಪೂರ್ವದ ಶಾಸನಗಳೆಂದರೆ ಬಹುತೇಕ ಪ್ರಾಕೃತ ಶಾಸನಗಳು ಮಾತ್ರ. ಇವುಗಳಲ್ಲಿ ಕೆಲವು ಚೂರು-ಪಾರು ಕನ್ನಡ ಅವಶೇಷಗಳು ಕಂಡುಬಂದಿದೆ. ಇಂಥ ಕನ್ನಡ ಅಂಶಗಳನ್ನು ಕುರಿತು ಬೇರೆಡೆ ಈಗಾಗಲೇ ಚರ್ಚಿಸಿದ್ದೇನೆ. ಡಿ.ಎಲ್.ಎನ್ ಹೇಳಿರುವ ಇಸಿಲ, ನಾನು ಹೇಳಿರುವ ‘ನಾಟಪತಿ’ ಕೋಟ್ಟ, ಕೋಟ್ಟಿ, ಆಪಿಟ್ಟಿ, ಸಂಕಪ, ಮೂಡಾಣ, ವೆಟ್ಟಕ್ಕಿ, ವೇಗೂರ, ಮಟ್ಟ ಪಟ್ಟಿ ಮರಿಯಸೆ, ಕೊಂಗಿ, ಕುಂದ, ಆಪಕುಟಿ ನಗಿಪ, ಮುನಾಳ, ಸೇನನ್ಹ, ಬಲಿವದಾರ ಮೊದಲಾದವುಗಳಲ್ಲಿ ಅಂಥ ಅಂಶಗಳಿವೆಯಾದರೂ ಇಂಡೋ-ಆರ್ಯನ್ ಮೂಲದ ಸಾಮಗ್ರಿಯೇ ಇಲ್ಲಿ ಮುಖ್ಯವಾಗಿದೆ. ಇದರಲ್ಲಿ ಪಶ್ಚಿಮ ಕ್ಷತ್ರಪರನ್ನು ಕುರಿತಂತೆ ಖಖರತ (ಖಹರಾತ), ತುವೇರ ಎಂಬಂಥ ಶಬ್ದ ಸಾಮಗ್ರಿ ಕೂಡ ಸಮಾವಿಷ್ಟವಾಗಿದೆ. ಕ್ಷತ್ರಪರು ಆರ್ಯ ಮೂಲದವರೇ ಆದರೂ ಇನ್ನಿತರ ಭಾರತೀಯ ಆರ್ಯ ಭಾಷೆಗಳಿಗಿಂತ ಕೊಂಚ ಭಿನ್ನವಾದ ಭಾಷೆಯನ್ನಾಡುವವರಾಗಿದ್ದರು. ಅಂತು ಈ ಶಾಸನಗಳಲ್ಲಿ ಸು.೧೭೫ ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಮತ್ತು ಅವುಗಳ ವಿಶೇಷಣ ರೂಪಗಳು ಕಂಡು ಬಂದಿವೆ. ಅವನ್ನು ಇಲ್ಲಿ ಪಟ್ಟಿ ಮಾಡಿದೆ :

ಅಶೋಕನ ಶಾಸನಗಳು
ರಾಜಾ ಅಸೋಕೋ
ಅಸೋಕ
ದೇವಾನಂ ಪಿಯೆ | ಪಿಯ
ದೇವಾನಾಂ ಪಿಯೆ | ಪಿಯ
ಆಯ ಪುತ
ಮಹಾಮಾತಾಣಂ
ಚಪಡೇನ
ಮಾಧವಪುರವಡಗಾವಿ
ಧಸ
ನಾಟಪತಿ
ಸನ್ನತಿ

ಸಮುದಿತಬಲವಾನ
ಅಭಗವಾಹನಸ,ಸಿರಿ ಸಾತಕಣಿ
ಖಖರತಕುಲ ಘಾತಕ ತುವೇರನಿಯಾತಕ
ರಾಣೋ ವಾಸಿಠಿ ಪುತ ಸ,ಮಹಾಸಾತವಾಹನ
ಅಂತೇವಾಸಿನೀಯ ಭಿಕುನೀಯಾ, ಯಖಿಯಾ
ಸಿವಸಿರಿ ಪುಳು (ಮಾವಿ)
ತೇಲಸ, ಭಾರದಾಯ ಸ,ಮಹಾತರಕ, ಅಗ್ನಿಸಮ
ಅಮಾಚಪುತಸ,ಪ್ರಿಯದತಸ, ರಾಜಾಮಾಚ ಗಗನಕ
ರಾಜಾ ಮಾಚಿಯ ರಾಮಸಿರೀ
ಮಹಾಸೇನಾ
ಬಲಿವದಾರ ವಾಸಿನೋ ಆಪಕುಟಿ ಸ ವಣಿಯಾ
ಅನೇಕ ಕತುಯಾಜಿಸ… ಡುನೆ ದಾಸ
ಮೂಡಾಣ ಮಹಾಗಾಮಿ ಕುಮಾರ ದೇತಿಕ
ಭಟಿ ಬಾಲಿಕಾಯ,ಅಹಮರಿಕಾಯ,ಪುರಿಸದತಾ
ಅಮಾಚಿ ಯಖನಿಕಾ ;ಅಮಾಚಿ ಸಂಘನಿಕಾ
ಮಹಾರಠಿ ಪುತಸ ; ಚೇಜಿಕಸ, ಮುಗುರಕೊಣ್ಹ
ಭೋಜಕಿನಿಯ ಕಾಮಾಯ ; ಲೇಖಕ ಪುತಸ ನಣ್ಹಕೋಟವಸ
ಭೋಜುಜನ ಅಗಿಠೋಮ ರವಿ (ನಕ), ಅಸಭಡ?
………ಮಾಚಸ ಸಿಹಧರ
ನಗಿಪ; ಸಿರಿ ಖಿರಯ ; ಕಪಡರಸ ?
ನಾಗಬೋಧನಿಕಾ;……ಗಾಮಿ ಕುಮಾರಿಯ ಪದಮಸಿರಿಕಾ
ಸಿರಿಮಕಸ ; ಏಣೀಯಸ ಖಹ;

[] ರಮಹ
ಸಿಯಪಾಲಾ; ಸೇಲನಿಕಾ; ಮಿತಭೂತಿನೋ,
………ಭಾಗಿನಿಯಾ ಸಮಾ ಉಪಾಸಿಕಾ ; [] ನ್ಹ ;[ತು] ಲಭೂತ; ಸೋಮಘಸ ನಿಕಾ [ಯ], ಸೇನನ್ಹ,
ಅಖಟಿನಿಬಿಯಾ ? ; ಭೋಡ; ನಾನ; ಯಾರಾಯ,
ಅಹಮರಿಕಾ; ನಾಗನಿಕಾ; ಅರಿಕಾ ಭಾತುಮೋ ;
ಗಿರಿಜನಕ ;ಘರಿನೀಯ ಸಿಹಡೀ; [ಹೇ]ಮನನ್ದಾಯ,
ಘರಿನೀಯ ಅಹಮರಿಕಾಯ ; ಗಹಪತಿ ಸೂಲ
ಘರಿನೀಯ ಸಮಾ; ಸಿರಿ……ಮಿಪುತ
ಹಥಿಲಸ ; ನಾಟಿಕಾಯ ಪಾಕಾರಯತಿಯಾಯ ಗೋವಿದಾಸಿ
ನಡಿಯ ಗುಡ ;ನಡಿಯ ಗುಡಪುತಿ ಆಯದಾಸಿ
ಯಖ ಘರಿನೀಯ ; ಪೇಮನುಸ ; ಗೋಮುಡ
ಏಣಿ ವೀರ; ಅಣಿಯ, ಮಿತಾ
ಸೇರಾಮ; ಸಂಕಪಸ ; ಮೂಡಾಣಿ;
ಕದನಾಗದೇವ ; ಅಮನಿಕಾಯ ; ರೂಡಪ [] ಅರಕ ಘಟಕೇ ; ಸಮಲೋಕಿಕ; ಸಮಣಕ.
ರಖಿತ ; ಸದಾಸಿರಿಯ ಮಹಿಸೇಲಕ; ಸಂಖ,
ಸಮದಾಸ; ಅಸವ [ಠಿ]ಕಿಸಿಯ ಧನ ; ಸಿವತನಕಸ ಕಣಕಸ
ಬಛನಿಕಾಯ…..ಸ ಅಗ್ನಿಹೋತಿಕಸ ; ಅಮಾಚಸಲಮಸ.
ಪಠ ಇನಿಕಾ; ವಾಸಿಠೀಪುತ

ಬನವಾಸಿ

ವಾಸಿಠೀಪುತರ : ಸ ; ಸಿವಸಿರಿ ಪುಳುಮಾವಿಸ
ಬನವಾಸಿ
ಞೋಹಾರೀತಿ ಪುರ ;ವಿಣ್ಹುಕಡ ಚುಟುಕುಲಾನ್ದ ; ಸಾತಕಣ್ಣಿ
ಸಿವಖದ ; ನಾಗಸಿರಿ; ಸಜಯತಕ;ಅಚಾರಿಯಸ,
[] ದಮೋಕಸ ನಾಟಕೇನ.

ಮಳವಳ್ಳಿ

ಭಗವಾನ್ ಮಟ್ಟಪಟ್ಟಿದೇವೋ ; ಹಾರೀತಿಪುತ್ತೋ.
ವಿಣ್ಹುಕಡ್ಡ ;ಚುಟುಕುಲಾನನ್ದ ; ಸಾತಕಣ್ಣೀ
ಮಹಾವಲ್ಲಭಮ್ ; ರಜ್ಜುಕಮ್ ; ಮಟ್ಟಪಟ್ಟಿದೇವಭೋಗಂ
ತಕಿಞ್ಚಪುತ್ತಾ; ಕೊಣ್ದಮಾಣಾಯ

ಮಳವಳ್ಳಿ

ಮಟ್ಟಪಟ್ಟಿದೇವೋ ; ವೈಜಾಯನ್ತೀಧಮ್ಮಮಹಾರಾಜಾಧಿರಾಜೇ
ಕದಮ್ಬಾಣಂ ; ರಾಜಾಶಿವ….ವಮ್ಮನಾ ; ಮಾನವ್ಯಸಗೋತ್ತೇನ.
ಹಾರೀತಿ ಪುತ್ತೇ; ಸಿಸಮಾತುಲಾಯ; ಕೊಣ್ಡಿಣ್ಯಸಗೋತ್ತಾ
ಕೋಸಿಕೀ ಪುತ್ತಾ;ಕೊಣ್ಡಮಾಣಕುಲತಿಲಕಾಯ
ಸಿರಿನಾಗದತ್ತಾ;ಖಣ್ಡೊ ವಿಶ್ವಕಮ್ಮಾ ; ನಾಗದತ್ತೇ;
ಜಯತಿ ಲೋಕನಾಥೋ ; ಪಡಮ ನಕ್ಖತ್ತಂ ರೋಹಿಣಿಯಂ

ಹಿರೇಹಡಗಲಿ

ಕಾಂಚಿಪುರಾ ಅಗ್ಗಿಟೋ.ಮ ವಾಪೇಯಸ್ಸಮೇಧಯಾಜಿ ಆರಖಾ (ಣ್ಣಾ) ಧಿಕತ,ಗಾಮಾಗಾಮ ಭೋಜಕ ; ಮಡಬಿಕ, ರಾಜಕುಮಾರ ; ಸಂಚರಂತಕ ; ಸೇನಾಪತಿ ಅಮಚ್ಚ ; ತೂಥಿಕ ; ನೇಯಿಕ ; ಭಟಿಮನುಸ ; ಭಾರದಾಯ ; ಪಲ್ಲವಾ; ಸಿವಖಂಡವಮೋ ; ಬಪ್ಪಸಾಮಿ, ಗೋಲಸಮಜ; ಆತ್ತೇಯ; ಅಗಿಸಮಜ; ಮಾಡರ ಅಗಿಲ್ಲ; ಹಾರೀತ; ಕಾಲಸಮ; ಕುಮಾರಸಮ; ಕೋಸಿಕ ಕುಮಾರನನ್ದಿ; ಕೋಟ್ಟಿಸಮಸತ್ತಿ; ಕಸ್ಸವ; ಖಂದಕೋಂಡಿ; ಖಂದಡ; ದತ್ತಜ; ನನ್ದಿಜ; ವತ್ಸಗೋತ್ತ; ರುದಸಮ ಬಹ್ಮಾಣ ; ದಾಮಜ ; ಪರಿಮಿತ; ನಾನನನ್ದಿ; ಗೋಲಿ

ಖಂದಸಮ; ಭಟ್ಟಿಸಮ ಸಾಮಿಜ ; ಅಗಿಸಮಜ ; ಅಠ್ಠಾರ (ದ) ಸಜಾತಿ ಪರಿವಾರ ;ಕೋಲಿಕ ; ಪಲ್ಲವಕುಲ ; ಕೋಲಿವಾಸಭೋಜಕ ;ಭಟ್ಟಿಸಮ ; ವಲ್ಲಭ ; ಗೋವಲ್ಲವ ; ರಠ್ಠಿಕ; ಮಾಡಬಿಕ ; ದೇಸಾಧಿಕತ, ರಹಸಾಧಿಕತ

ಕಾರ್ಲೆ
ಭೂತಕಾಲ

ಚಿಕ್ಕಸಿಂದಗಿ
ಚಂತ
ಬೆಳ್ವಾಡಗಿ
ಕಲಕ
ವಜ್ಜಲ

ಮುಕುಲಿಯಾನ ರಠಿನೀಯ ಸೇಬನಿಕಾ
ಅಣಬಿ
ಚಂಡಶಿವ


ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿಯ ವ್ಯಕ್ತಿನಾಮಗಳು

 

ಈ ಹಿಂದೆ ನೋಡಿರುವಂತೆ ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿ ದೊರೆಯುವ ವ್ಯಕ್ತಿನಾಮಸಾಮಗ್ರಿಯನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು :

04

ಮೇಲೆ ಸೂಚಿಸಿದಂತೆ ಕ್ರಿ.ಶ. ಪೂರ್ವ ೩ನೆಯ ಶತಮಾನದಿಂದ ಕ್ರಿ.ಶ. ೪ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ತೋರುವ ಈ ಶಾಸನಗಳಲ್ಲಿ ವ್ಯಕ್ತಿನಾಮಗಳ ಹಲವು ವಿಧಗಳು ಕಂಡು ಬರುತ್ತವೆ. ಈ ಅವಧಿ ರಾಜಸತ್ತೆಯ ಕಾಲವಾದುದರಿಂದ ಚಕ್ರವರ್ತಿ, ಮಹಾಮಾತ್ರ, ಮಹಾರಠಿ, ರಠಿಕ, ಅಮಾತ್ಯ, ರಜ್ಜುಕ, ವಲ್ಲಭ, ವಲ್ಲವ, ಗೋವಲ್ಲವ, ಮಹಾಗಾಮಿ, ಗಾಮಿಕ (=ಗೌಡ), ಭೋಜಕ, ಮೊದಲಾದ ಆಡಳಿತ ವರ್ಗದವರೂ, ಬ್ರಾಹ್ಮಣ, ಲೇಖಕ, ನೇಕಾರ ಮೊದಲಾದ ವೃತ್ತಿ-ಜಾತಿಗಳವರೂ ಇಲ್ಲಿ ತೋರಿ ಬಂದಿದ್ದಾರೆ. ಇವರಿಗೆ ಪ್ರತ್ಯೇಕ ಹೆಸರುಗಳು ಕೆಲವೊಮ್ಮೆ ಇರಬಹುದು. ಇನ್ನು ಕೆಲವೊಮ್ಮೆ ಕೇವಲ ಇವರ ಸ್ಥಾನಸೂಚನೆ ಮಾತ್ರದಿಂದ ಉಲ್ಲೇಖಿಸಿದ್ದು ಕಂಡು ಬರುತ್ತದೆ.

ಪೂರ್ವ :

ವಿಶೇಷಣರೂಪ : ಪ್ರದೇಶಸೂಚಿ-
೧.         ಊರು   ಮಟ್ಟಪಟ್ಟಿದೇವ                       ಮಳವಳ್ಳಿ
ವೈಜಯಂತಿ ಪತಿ             ”
ಬಲಿವದಾರವಾಸಿನೋ ಆಪಕುಟಿ      ಸನ್ನತಿ
ಮುಗುರ ಕೋಣ್ಹ                                    ”

ಮೂಡಾಣ ಮಹಾಗಾಮಿ ಕಮಾರ ದೇತಿಕ       ”

ಮುನಾಳಿಯ ನಾಟಿಕಾ                               ”

೨.         ನಾಡು : ….. ಉಪರಿಗಿರಿಅಪರಾಂತ ಅಸಕ. ಮೂಳಕಸ         ”

೩.         ರಾಜ್ಯ :  ಜಯವಿ,
ಚಕೋರ
ರಠ (ರಟ್ಟ)
                   ಖಖರತ ಕುಲಘಾತಕಸ
ಮಹಾಸಾತವಾಹನಸ

ಆ.        ಸಂಬಂಧ ಸೂಚಿ :

೪. ದೇವತಾ : ದೇವತೆಯ ಹೆಸರಿನಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಪರಂಪರೆ ನಮ್ಮಲ್ಲಿ ತುಂಬ ಹಳೆಯದು. ನಮ್ಮ ಪರಿಶೀಲನೆಯ ಅವಧಿಯಲ್ಲಿ ಇಂಥ ಉದಾಹರಣೆಗಳು ಅಧಿಕವಾಗಿಲ್ಲ.

ಹಾರೀತಿ ಪುತ, ಹಾರೀತಿ ಪುತ್ರ ಎಂದಿರುವ ಈ ಉದಾಹರಣೆಗಳಲ್ಲಿ ‘ಹಾರೀತಿ’ ಒಬ್ಬ ದೇವತೆ ಎಂದು ಗುರುತಿಸಲಾಗಿದೆ. ಈ ದೇವತೆಯ ಹೆಸರನ್ನು ಕದಂಬರ ನಾಮ ವಿಶೇಷವಾಗಿ ಮಳವಳ್ಳಿಯ ಶಾಸನ ಹೇಳುತ್ತದೆ. (ಅದೇ ಶಾಸನದ) ವಿಣ್ಹುಕಡ/ಕಡ್ಡ ಎಂಬ ಹೆಸರು ವಿಷ್ಣುಕೃತ ಎಂಬುದರ ಸಂಸ್ಕೃತ ಸ್ವೀಕರಣವಾಗಿದ್ದು ದೇವತಾವಾಚಿಯ ಇನ್ನೊಂದು ಉದಾಹರಣೆ.

೫.         ಗೋತ್ರ :
ಆತ್ತೇಯ ಅಗಿಸಮಜ                    ಹಿರೇಹಡಗಲಿ
ವತ್ಸಗೋತ್ತಸ ರುದಸಮ             ”
ಮಾಡರ ಅಗಿಲ್ಲ
ಕೋಸಿಕೀ ಪುತ್ತಸಿರಿನಾಗದತ್ತ     ಮಳವಳ್ಳಿ
ಮಾನವ್ಯ ಸಗೋತ್ತ                      ”

೬. ಕುಲ :
ಪಲ್ಲವಕುಲ (ಶಿವಖದವಮ)           ಹಿರೇಹಡಗಲಿ
ಖಖರತ ಕುಲ ಘಾತಕಸ                   ಸನ್ನತಿ
ಚುಟುಕುಲಾನನ್ದ ಸಾತಕಣ್ಣಿ                       ಮಳವಳ್ಳಿ
ಕದಮ್ಬ ಶಿವ…..ಮಮ್ಮ                 ”
ಕೊಣ್ಡಮಾಣ ಕುಲತಿಲಕ                ”

೭.         ಕುಟುಂಬ :          ವಾಸಿಠೀ ಪುತ                   ಸನ್ನತಿ
(ಗೋತ) ಮೀ ಪುತ            ”
ಕೋಸಿಕೀ ಪುತ್ರ                ಮಳವಳ್ಳಿ
ವೃತ್ತಿ-ಜಾತಿ ಸೂಚಿ :

೮.         ರಾಜ್ಯಾಧಿಕಾರ :
ದೇವಾಣಂಪಿಯೆ                           ಸಿದ್ದಾಪೂರ, ಮಸ್ಕಿ
ದೇವಾನಂ ಪಿಯ   (ಅಶೋಕ)                       ”
ಅನೇಕರಾಜ ಮಥಕ ಪತಿಗಹಿತಸ                    ಸನ್ನತಿ
(ಸಿರಿಸಾತಕಣ್ಣಿ)
ಏಕಕುಸಸ                                                ”
ರಾಞೋ ವಾಸಿಠಿ ಪುತಸ                            ”
ಸಮುದಿತ ಬಲವಾಹನಸ                             ”

೯.         ಆಡಳಿತ :
ಮಹಾಮಾತ                   ಬ್ರಹ್ಮಗಿರಿ
ರಾಜಾಮಾಚ ಗಗನಕಸ       ಸನ್ನತಿ
ಮಹಾರಠಿ ಪುತಸ  ”
ರಠಿನಿ ಸೇಬನಿಕಾಯ            ವಜ್ಜಲ
ಭೋಜಕಿನಿಯ ಕಾಮಾ        ಸನ್ನತಿ
ಅಮಾಚಿ ಸಂಘನಿಕಾ           ”
ಕೋಲಿವಾಸ ಭೋಜಕ        ಹಿರೇಹಡಗಲಿ
ಮಹಾವಲ್ಲಭಮ್                        ಮಳವಳ್ಳಿ
ರಜ್ಜುಕ                          ”
ಮಹಾಗಾಮಿ ಕುಮಾರ ದೇತಿಕ          ಸನ್ನತಿ

೧೦.       ಇತರ ವೃತ್ತಿ-ಜಾತಿ ಸೂಚಕಗಳು :
ಬಮ್ಹಾಣ                                              ಹಿರೇಹಡಗಲಿ
ಅಠ್ಠಾರ (ದ) ಸ ಜಾತಿ ಪರಿವಾರ        ”
ಗೋವಲ್ಲವ                               ”
ಕೋಲಿಕ (=ನೇಕಾರ)                      ”
ಬಛನಿಕಾಯ……ಸ ಅಗ್ನಿಹೋತಿಕಸ               ಸನ್ನತಿ
ಸಿವತನಕ ಸ ಗಣಕಸ                       ”
ಏಣೀಯಸ ಖಹ ಸ                        ”
ಏಣಿಕ ಸ ವೀರ ಸ               ”
ನಾಟಿಕಾಯ ಬುಧಸೇನಿ                   ”
ಆಖಪಟಲಿಕ                                ”
ಘರಿನೀಯ ಅಹಮರಿಕಾ – ಸಮಾ       ”
(ಮೊದಲಾದವರು)
ಗಹಪತಿ ಸೂಲಸ                           ”
ಮಳವಳ್ಳಿ – ೨
ವಿಶ್ವಕಮ್ಮಾ

ಉತ್ತರ :
ನಿಜರೂಪನಾಮಗಳು :

೧.ನಿಜರೂಪಿ ನಾಮಗಳಲ್ಲಿ ಸ್ಥಳನಾಮಗಳಂತೆ ವಿಶಿಷ್ಟ ಮತ್ತು ವಾರ್ಗಿಕಗಳನ್ನು ಗುರುತಿಸಬಹುದು. ಆದರೆ ಕೆಲವೆಡೆ ಇಂಥ ವಿಗ್ರಹ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಇಂಥ ನಾಮಗಳ ಭಾಷಿಕ ಮೂಲವೇ ಅಸ್ಪಷ್ಟವಾಗಿರುವುದು.

ಉದಾ :  ಚಪಡ (ಗಂ)        (ಬ್ರಹ್ಮಗಿರಿ-ಸಿದ್ಧಾಪುರ)
ತಕಿಞ್ಚಿ (ಗಂ)      ಮಳವಳ್ಳಿ
ಹಾರೀತಿ             ”
ತುವೇರ (ಗಂ)      ಸನ್ನತಿ
ಪುಳುಮಾವಿ (ಗಂ)ಬನವಾಸಿ
ಮಾಢರಿ             ಹೀರೇಹಡಗಲಿ

ಕರ್ನಾಟಕದ ನಾಣ್ಯ (ಮತ್ತು ಟಾಲೆಮಿಯಲ್ಲಿ ದೊರೆಯುವ) ವಿಳಿವಾಯಕುರ (ಬಲೆ ಒಕುರ) ಹಿಪ್ಪೋಕುರ ಮೊದಲಾದವೂ ಈ ವರ್ಗಕ್ಕೆ ಸೇರುತ್ತವೆ.

೨.ಈ ಮುಂದೆ ತೋರಿಸಿದ ಉದಾಹರಣೆಗಳು ಏಕಘಟಕಗಳಾಗಿವೆ. ಇವುಗಳಿಗೆ ವಾರ್ಗಿಕಗಳು ಅಂಟಿಕೊಂಡಿಲ್ಲ :
ಅಸೋಕಮಸ್ಕಿ
ಚಪಡ ?             ಸಿದ್ಧಾಪುರ
ಧಸ                   ಬೆಳಗಾವಿ (ಮಾಧವಪುರ)
ಅಣಿ                  ಸನ್ನತಿ
ಕನ್ಹ                  ”
ಕೋಣ್ಹ             ”
ಖಹ                  ”
ಖಿರಯ              ”
ಗುಡ ?              ”
ತೇಲ                  ”
ನಾಗ                  ”
ನಾನ                  ”
ಭೋಡ              ”
(ಸಿರಿ) ಮಕ          ”
ಮಿತ                  ”
ಯಖ                 ”
ಸಂಖ                 ”
ಸೂಲ                ”
ಯಾರ                ”
ಲಮ                 ”
ಕಾಮಾ (ಹೆಂ)       ”
ಯಖಿ (ಹೆಂ)        ”
ವೀರ                  ”
ಬಪ್ಪ                 ಹಿರೇಹಡಗಲಿ
ಚಂತ                 ಚಿಕ್ಕ ಸಿಂದಗಿ

ಮೇಲಿನ ಉದಾಹರಣೆಗಳು ಬಹುತೇಕ ಇಂಡೋ-ಆರ್ಯನ್ ಮೂಲದವು, ‘ಅ-ಸೋಕ’ ದಲ್ಲಿನ ಅಕಾರ ಪೂರ್ವ ಪ್ರತ್ಯಯ ಹೊಂದಿದ ರೂಪ. ಕೃಷ್+ನಕ್ ಎಂದು ವಿಗ್ರಹಿಸಲಾಗುವ ಕೃಷ್ಣ ಮಿದ್-ತ್ರ ಅಥವಾ ಮಿ-ತ್ರ ಎಂದು ವಿಗ್ರಹಿಸಲಾಗುವ ಮಿತ್ರ ಎಂಬವುಗಳಿಂದ ಕ್ರಮವಾಗಿ ಕನ್ಹ | ಕಣ್ಹ ‘ಮಿತ’ ಗಳು ಬಂದಿವೆಯೆಂದು ವಾದಿಸಲು ಶಕ್ಯವಿರುವುದಾದರೂ ಇಂಥ ರೂಪಗಳಲ್ಲಿ ವಿಶಿಷ್ಟ ಮತ್ತು ವಾರ್ಗಿಕಗಳನ್ನು ಪ್ರತ್ಯೇಕಿಸಿ ತೋರಿಸುವುದು ಒಟ್ಟಾರೆಯಾಗಿ ಸಾಧ್ಯವೆನಿಸದು.

೩.ಇನ್ನಿತರ ವ್ಯಕ್ತಿನಾಮಗಳನ್ನು ವಿಶಿಷ್ಟ ಮತ್ತು ವಾರ್ಗಿಕಗಳನ್ನಾಗಿ ಈ ಮುಂದೆ ವಿಭಜಿಸಿದೆ :
ವಿಶಿಷ್ಟ              ವಾರ್ಗಿಕ
ಸೇನ-                 -ಅನ್ಹ
ಚುಟುಕುಲ –       -ಆನನ್ದ
ಸೇರ್ –               -ಆಮ ?
ಪುಳುಮ –           -ಆಯಿ(ವಿ)
ಮೂಡಾಣ –        -ಇ
ಸಮಲೋಕ –       -ಇಕ
ಕಿನಾದ –ಇಕ?
ಭೋಜಕ –          -ಇನಿ (ಹೆಂ)
ಹಥಿ | ಹಥ್ –      -ಇಲ
ಅಸವಠಕ್ (ಕ) – ? ಅಠ –    -ಕ
ಇದಮೋರ, -ಕುಲ-                       ”
ಗಿರಿಜನ-, ಚೇಜಿ-, ಕಿನಾದ-   ”
ಕೋಲಿ-, ಗಗನ-, ದೇತಿ-                  ”
ಮಹಾತರ-, ಸಮಣ-,                    ”
ಸಿವತನ-, ‘ಮಹಿಸೇಲನ’-                 ”
ವಿಣ್ಹು-                                     -ಕಡ/ಕಡ್ಡ
ಸಾತ-                                         -ಕಣಿ/ಕಣ್ಣಿ
ಅರಿ-      -(ಇ) ಕಾ. (ಹೆಂ)
ಅಹಮರಿ-,          ”
ಪದಮಸಿರಿ-, ಭಟಿಬಾಲಿ-                 ”
ಆಪ-                                         -ಕುಟಿ
ಖಂದ-                                       -ಕೋಂಡಿ (ಕೋಟ್ಟಿ)
ಸೋಮ-                                    -ಘ
ಖಂದ-                                       -ಡ (ಸಂ.<ಆಢ್ಯ)
ಸಿಹ-                                          -ಡಿ (ಹೆಂ)
ದತ್ತ-, ನನ್ದಿ-, ಸಾಮಿ-                    -ಜ(ಸಂ.<ಆರ್ಯ)
ರಖಿ                                           -ತ
(ಸಿರಿ-) ನಾಗ-, ಪಿಯ-, ಪುರಿಸ-          -ದತ/ದತ್ತ
..ಠಕ                                          -ದ
ಸಮ…….ಡುನೆ-                           -ದಾಸ
ಆಯ, ಗೋವಿ-                            -ದಾಸಿ
ಮಟ್ಟಪಟ್ಟಿ-, ನಾಗ-                     -ದೇವ
ಸಿಯ-                                        -ಧರ
ರವಿ-                                          -ನಕ
ಹೇಮ-                                      -ನನ್ದ
ಕುಮಾರ-, ನಾಗ-              -ನನ್ದಿ
ಲೋಕ-                                      -ನಾಥ
ಅಮ-, ನಾಗ-, ನಾಗಬೋಧಿ-           -ನಿಕಾ (ಹೆಂ)
ಪಠಇ-, ಬ ಛ-, ಯಖ-, ಸಂಘ-ಸೇಬ-”
ಸೇಲ-, ಭಿಕು-, ರಠಿ-                       -ನೀ
ಪೇಮ-                                       -ನು
ನಗಿ, ಸಂಕ-                                   -ಪ
ವೈಜಯಂತಿ-                               -ಪತಿ
ಯಶೋ-, ರೂಡ-             -ಪಾಲ
ದೇವಾಣಂ/ದೇವಾನಂ-                    -ಪಿಯೆ/ಪಿಯ
ಅಮಾಚ-, ಆಯ-, ಕೋಸಿಕಿ-            -ಪುತ/-ಪುತ್ತ/-ಪುತ್ರ
ಲೇಖಕ- ವಾಸಿಠೀ-ಹಾರೀತಿ-”
ನಾಗ-                                         -ಬುಧಿ
ತುಲ-, ಮಿತ-                               -ಭೂತಿ
ಕೊಂಡ-                                      -ಮಾಣ
ಪರಿ-                                          -ಮಿತ
ಗೋ-                                        -ಮುಡ
ಕದ-                                          -ಮೂಲ
ಖಖ-                                         -ರತ/-ರಾತ
ಸೇ-                                           -ರಾಮ ?
ಶಿವಖದ-                                    -ವಮ/ವಮ್ಮ
ಕೋಲಿ-                                      -ವಾಸ
ಅಭಗ-, (ಮಹಾ)ಸಾತ-                  -ವಾಹನ
ಅಗಿ-, ಅಗ್ನಿ-, ಕಾಲ-, ಕುಮಾರ-        -ಸಮ(ಸಂ. ಶರ್ಮ)
ಖಂದ-, ಭಟ್ಟಿ-, ರುದ                    ”
ಅಗಿ-, ಗೋಲ-, ರುದ                     -ಸಮಜ (ಶರ್ಮಾರ್ಯ)
ಕೋಟ್ಟ-                                                -ಸಮಸತ್ತಿ (ಸಂ. ಶರ್ಮಶಕ್ತಿ)
ಬಪ್ಪ-                                       -ಸಾಮಿ
ನಾಗ-, ರಾಮ-, ಸದಾ-                   -ಸಿರಿ (ಹೆಂ)
ವಿಶಿಷ್ಟ–                                      –ವಾರ್ಗಿಕ
ಮಹಾ-                                      -ಸೇನ
ಪದಮ-                                     -ಸಿರಿಕಾ (ಹೆಂ)
ಬುಧ-                                        -ಸೇನಿ (ಹೆಂ)
ಧರಮ-                                      -ಹ

-ಇನಿ, -ಸಮಜ, -ಸಮಸತ್ತಿ, – ಸಿರಿಕಾ ಈ ವಾರ್ಗಿಕಗಳಲ್ಲಿದ್ವಿರುಕ್ತಿ ಕಂಡು ಬಂದಿದೆ.ದ ವಿಶಿಷ್ಟಗಳಲ್ಲಿಯೂ ದ್ವಿರುಕ್ತಿಯಿರುವುದು ಸಾಮಾನ್ಯ ಸಂಗತಿ. ಕೋಂಡಿ ಎಂದಿರುವ ರೂಪ ಕೋಟಿ/ಕೋಟ್ಟಿಯಿಂದ ಬಂದುದೆಂದು ಭಾವಿಸಲಾಗಿದೆ. ಇದು ದ್ರಾವಿಡ ಮೂಲದ್ದು. ಅದೇ ರೀತಿ ಕೊಂಡ-ಮಾಣ ಎಂದಿರುವಲ್ಲಿನ-ಮಾಣ ಎಂಬುದು-ಅಮ್ಮಾನ್ ಎಂಬ ದ್ರಾವಿಡ ಮೂಲದಿಂದಲೇ ಸಿದ್ಧಿಸಿದ್ದು. ಕೊಂಡ ಎಂಬುದು ಗುಡ್ಡ-ಬೆಟ್ಟ ಎಂಬರ್ಥದ ದ್ರಾವಿಡ ಪದವೇ. ಬೆಟ್ಟದ ದೇವರು ಎಂಬುದು ಇದರ ಮೂಲಾರ್ಥ, ನಗಿಪ ಸಂಕಪ ಎಂಬೆರಡು ಉದಾಹರಣೆಗಳಲ್ಲಿರುವ -‘ಪ’ ಸಂಪಾದಕರು ಊಹಿಸಿದಂತೆ ಕನ್ನಡ ಮೊದಲಾದ ದ್ರಾವಿಡ ಭಾಷೆಯ ಅಪ್ಪನ್ ಎಂಬುದರ ಸ್ವೀಕೃತರೂಪ. ಆಪ-ಕುಟಿ ಎಂಬ ಹೆಸರಿನಲ್ಲಿರುವ ವಿಶಿಷ್ಟ-ಅಪ, ವಾರ್ಗಿಕ ಕುಟಿ (<ಕುಟ್ಟಿ) ಎಂಬೆರಡೂ ಕನ್ನಡ/ದ್ರಾವಿಡ ಮೂಲದವು. ಸಮ, ಪುತ, ಸತ್ತಿ, ಆಯ, ಮೊದಲಾದ ಪ್ರಾಕೃತ ರೂಪಗಳು ತರುವಾಯ ಸಂಸ್ಕೃತಕ್ಕೆ ತಿರುಗಿದವು. ದಾಸ/ದಾಸಿ, -ದೇವ, -ಧರ, -ನಂದ, -ನಂದಿ, – ನಾಥ, -ಭೂತಿ ಮೊದಲಾದುವು ಮುಂಚಿನಿಂದಲೂ ಸಂಸ್ಕೃತಿ- ಪ್ರಾಕೃತಗಳಿಗೆ ಸಮಾನವಾಗಿದ್ದುದು ಗಮನಾರ್ಹ. ಸನ್ನತಿ ಶಾಸನ (ನಂ. ೧) ದ ಖಖರತ ಎಂಬ ಪ್ರಯೋಗದಲ್ಲಿ ಕಂಡು ಬಂದಿರುವ -ರತ ಎಂಬುದು -ರಾತ ಎನ್ನುವ ಇನ್ನೊಂದು ರೂಪ. ಈಗಿನ ಗುಜರಾತ ಎಂಬ ಪ್ರದೇಶವಾಚಕದಲ್ಲಿ ಅದು ಈಗಲೂ ಉಳಿದು ಬಂದಿದೆ. ಬಹುಶಃ ಇದು ಇಂಡೋ – ಆರ್ಯನ್ ಪದವಲ್ಲ; ಕ್ಷತ್ರಪರ ಭಾಷೆಯದು. (ತುವೇರ’ ಎಂಬುದೂ ಅಂಥದೇ ಇನ್ನೊಂದು ರೂಪ.) ಸಿದ್ಧಾಪುರ- ಬ್ರಹ್ಮಗಿರಿ ಶಾಸನಗಳಲ್ಲಿ ಕಂಡುಬಂದಿರುವ ಲೇಖಕ ‘ಚಪಡ’ನ ಹೆಸರಿನ ಮೂಲ ನಿಗೂಢವಾಗಿದೆ.