ನೇಮದಿಂದ ಪ್ರಾಣಾಯಮ ಮಡಿದರೇನು
ಕಾಲಯಮನ ಗೆಲ್ಲಲಾರೆ ಶ್ರೀಹರಿ ಕೃಷ್ಣಾ

ಭವರೋಗದಲ್ಲಿ ಬಿದ್ದು ಬೆಂದು ಹೋದೆ ಕೃಷ್ಣಾ !
ನಿನ್ನ ನಾಮ ಒಂದೆ ನನಗೆ ಪಥ್ಯವಾಯಿತು ಕೃಷ್ಣಾ !

ಭಾವಭಂದದೋಡ್ಡಹೋಗ ಹಿಡಿದು ಕೊಂಡಿತು
ಹರಿಯ ನಾಮಚಾಟಿಯಿಂದ ಹೊಡೆದು ಎಬ್ಬಿಸು.

ನೇಮನಿಯಮ ಎನಗೆ ಇಲ್ಲ ಜಪವು, ತಪವು ಮೊದಲೆ ಇಲ್ಲಾ
ನಿನ್ನ ಸ್ಮರಣೆ ನಿತ್ಯ ನನಗೆ ಮಾರ‍್ಗವಾಯಿತು ಕೃಷ್ಣಾ !

ತೀರ‍್ಥಯಾತ್ರೆ ಮಾಡಲಿಲ್ಲ ನಿನ್ನ ಕೀರ‍್ತಿ ಹಾಡಲಿಲ್ಲ
ವ್ಯರ‍್ಥ ಮಾಡಿಕೊಂಡೆ ನಾನು ಕೊಟ್ಟಕಾಲವ ಕೃಷ್ಣಾ !

ಸದ್ದು ಅಡಗಿ ಹೋಯಿತು ನಿದ್ದೆಹಾರಿ ಹೋಯಿತು
ಬಿದ್ದು ಬಿದ್ದು ಎದ್ದೆ ನಾನು ವತ್ತೆ ಬಿದ್ದೆನು ಕೃಷ್ಣಾ !

ಒಂದೆ ಮಾತಿನಲ್ಲಿ ಹೆಳಿನಿಂದೆ ಎಲ್ಲ ದೂರಮಾಡಿ
ನಿನ್ನ ನಾಮ ಹಿಡುದುಕೊಂಡೆ ಜಯವು ನಿನಗೆ ನಾನೆಂದೆ