ನಿಲ್ಲದ ತಣ್ಣೆಲರ್ ಗಳಿಗೆಯೊಳ್ಕಳಿವಾ ಫಲಮೊಂದು ಮೂರ್ತಮುಂ
ಸಲ್ಲದ ಬೇಂಟಮುಲ್ಲಟಿಸಿ ಮಿಂಚುವ ಮಿಂಚಿರುಳಾಗಿ ಪೊತ್ತಱಿಂ
ಗಿಲ್ಲದ ಚಂದ್ರಕಾಂತಿ ನೆಲೆಗೊಂಡುದುಗಂಡುಮದೇಕೆ ಕಾವ್ಯದೊಳ್
ಬಲ್ಲ ಮಹಾತ್ಮರುಂ ನಿಲಿಸಲೊಲ್ಲರೊ ಭಂಗಚಲದ್ಗುಣಂಗಳಂ     ೬೧

ನಿಟ್ಟೆಗೆವಂದು ಕೋಮಲಗುಣಂ ಗೆಡೆಗೊಂಡಿರೆ ಪೂವಿನಂತಿರಾ
ಯ್ದಿಟ್ಟ
ಪದಂ ಬೆಡಂಗೆನಿಸೆ ಬಣ್ಣಸರಂ ಪೊಸತಾಗೆ ನುಣ್ಪೊಡಂ
ಬಟ್ಟಿರೆ
ಬಂದಮೊಂದೆ ಚತುರಾಳಿ ಕರಂ ಬಸದಾಗೆ ಬಾಸಿಗಂ
ಗಟ್ಟುವನಂತು
ಕಟ್ಟುವುದು ಕಬ್ಬಮನುಬ್ಬಿನಮಾಗೆ ಕಬ್ಬಿಗಂ       ೬೨

ಅಕ್ಕರಿಗರ ಬಗೆಗಂ ಬೆ
ಳ್ಳಕ್ಕರಿಗರ
ಬುದ್ಧಿಗಂ ಪ್ರಭಾವಾರ್ಥತೆಯಿಂ
ಸಕ್ಕದಮುಂ
ಕನ್ನಡಮುಂ
ಸಕ್ಕಸಮಂ
ಕೇಳ್ಪೊಡೆನಿಸಿ ಪೇೞ್ವುದು ಕೃತಿಯಂ        ೬೩

ರಸಿಕರ ಪೊಸಬಗೆಗಿಂಪಂ
ಪೊಸತಂ
ಪೊಸಯಿಸುತುಮೊಂದೆ ಪೊರೆಯೆತ್ತಲೊಡಂ
ರಸಮೊಸರದೊಡೇಂ
ಬಸನವೆ
ಬಿಸುಡುವುದಾಪುೞಿತ
ಕಬ್ಬುಮಂ ಕಬ್ಬಮುಮಂ         ೬೪

ಓದಲೊಡಮಿಂಪಿನಿಂದೆಲ
ರೂದಲೊಡಂ
ಸುರಭಿಶೀತದಾಮೋದದಿನೇಂ
ಮೋದದೊಡೆ
ಕವಿತಗಂ ಕಡು
ವಾದೇಂ
ಪೂವಿಂಗಮೊಗ್ಗ ಮುಡಿಗಿಕ್ಕುವುದೇ  ೬೫

ಲಲಿತಂ ಪ್ರತೀಯಮಾನೋ
ಪಲಕ್ಷಿತಂ
ವಾಚ್ಯಮಾದೊಡೊಪ್ಪದು ಕೃತಿ ಪೆ
ರ್ಮೊಲೆಯಂ
ಮೆಱೆದೊಡೆ ಸಲೆ
ಣ್ಮಲರಂ
ಮೆಱೆಯದೊಡೆ ಯುವತಿಯೇನೊಪ್ಪುವಳೆ    ೬೬

ಅಕ್ಷರದರಿದ್ರರಳಿಕವಿ
ಚಕ್ಷಣರೋದಿದೊಡಮಪ್ಪುದೇಂ
ಕಾವ್ಯಕಳಾ
ಶಿಕ್ಷಕರೊಸೆದು
ಪರೀಕ್ಷಕ
ರೀಕ್ಷಿಸೆ
ಕೃತಿಯಂ ಕೃತಾರ್ಥರಲ್ಲರೆ ಕವಿಗಳ್   ೬೭

ದುರ್ಜನರ ದೋಷಮಂ ಕಳೆ
ದಾರ್ಜಿಸುಗೆ
ಗುಣಾತಿಶಯಮನೆಮ್ಮಯ ಕೃತಿ ಸಂ
ಮಾರ್ಜನಿಗವಕರನಿಕರವಿ

ಸರ್ಜನದೊಳ್
ಮುಖ್ಯವೃತ್ತಿಯೇನಿಲ್ಲದುದೇ   ೬೮

ಪಾಷಾಣಹೃದಯರಪ್ಪೊಡೆ
ದೂಷಿಸಿ
ಮತ್ಕಾವ್ಯಮಂ ಪರೀಕ್ಷಿಸುಗೆ ಗುಣಾ
ನ್ವೇಷಿಗಳಪ್ಪೊಡೆ
ಕನಕನಿ
ಕಾಶದೊಳೇಂ
ನಿಕಷದೃಷದಮಱಸದರೊಳರೇ         ೬೯

ಸ್ಮರಶರಪಾತದಿಂ ಬಿರಿವ ಮೂರ್ಖಮನುಜದ್ರವಿಸುತ್ತಿರಲ್ ಸುಧಾ
ಕರಕಿರಣಂಗಳಿಂದೊಸರ್ವ
ಶೀತಕರೋಪಲದಂದಿಂ ಮನೋ
ಹರಸರಸತ್ವವೆಂಬ
ಗುಣಮಾಳಿಸಿ ಮೇಳಿಸುವೆನ್ನ ಕಾವ್ಯಮಂ
ಪೊರೆದು
ಮೃದುತ್ವದೊಳ್ ಖಳನುಮೇಂ ಗಳ ಕೇಳದೆ ಪೋಗಲಾರ್ಕುಮೇ ೭೦

ಮತಿಮಂಥಾದ್ರೀಂದ್ರದಿಂದಂ ಜಿನಪತಿಮತವಾರಾಶಿಯೊಳ್ ನೂತ್ನರತ್ನ
ತ್ರಿತಯಂ
ಮುಂತಾಗಿ ಧರ್ಮಾಮೃತಮನಯಸುರೋರ್ವೀಜಮಂ ಸಾರಸಾರ
ಸ್ವತಲಕ್ಷ್ಮೀದೇವಿಯಂ
ನಿರ್ಮಲಗುಣನಿಧಿಯಂ ಪೆತ್ತೆನೊತ್ತಿರ್ದ ಧೂರ್ತೋ
ಕ್ತಿತರಂಗಕ್ಷ್ವೇಡಮಂ
ನುಂಗುವಿನಮಮಳಮತ್ಕೀರ್ತಿಚಂದ್ರಾವತಂಸಂ    ೭೧

ರಸಭಾವಂ ಪೊಣ್ಮೆ ವಕ್ತ್ರಂ ತೊಳಗೆ ವಿಕಸಿತಂ ಜಾತ್ಯಲಂಕಾರಮಾಳೋ
ಕಿಸೆ
ಕೊಂಕುಂ ರೇಖೆಯುಂ ರಂಜಿಸೆ ಮಿಸುಗೆ ಪದನ್ಯಾಸಮಿಂಬಾಗೆ ವೃತ್ತಿ
ಪ್ರಸರಂ
ದೃಷ್ಟಿಪ್ರಸಾದಂ ಪಸರಿಸೆ ಸತತಂ ಭಾರತೀದೇವಿಯೆನ್ನೀ
ರಸನಾರಂಗಾಗ್ರದೊಳ್
ನರ್ತಿಸುಗೆ ಬುಧಜನಸ್ತೋತ್ರತೂರ್ಯಂಗಳಿಂದಂ         ೭೨

ಜತಿಗಳವಟ್ಟಬಣ್ಣದಿನಮರ್ಚಿ ತೊಡರ್ಚಿದ ಚಂದದಿಂದಳಂ
ಕೃತಿಗಳವಟ್ಟ
ಮಾರ್ಗದಿನಿದಿರ್ಚಿದ ರೀತಿಯಿನಾಳ್ದ ಧಾತುವಿಂ
ಸ್ತುತಿಗೊಳಗಾದ
ಮಾತಿನ ತೆರಳ್ಕೆಗಳಿಂ ರಸಗೇಯದಂತಿರೀ
ಕೃತಿ
ಪೊಸದೇಸೆಯಿಂದೆಸೆದು ಸೋಲಿಪುದಚ್ಚರಿಯೇ ರಸಜ್ಞರಂ  ೭೩

ಏಣಗಣಕ್ಕೆ ಸೂಸದೆ ಸುಖೋದಯಮಂ ಶ್ರುತಿಮೂರ್ಛಿತಂ ರಣ
ದ್ವೀಣೆಯ
ನುಣ್ಚರಂ ಫಣಿಗಮೀವುದು ಲೋಚನಗೋಚರಂಗಳಂ
ಪ್ರೀಣಿತಸರ್ವಶೂನ್ಯಹೃದಯಂ
ರಸವತ್ಕೃತಿಬಂಧಬಂಧುರಂ
ವಾಣಿ
ಬುಧಾಳಿಗೇರಿ ಕುಡದೆ ಸಮ್ಮದಮಂ ಕವಿರಾಜಮಲ್ಲನಾ    ೭೪

ಅಲರಂಬಿಕ್ಷುಧನುಸ್ಸಹಾಯಮಮೃತಾಂಶುದ್ಯೋತನಂ ಯಾಮಿನೀ
ಲಲಿತಂ
ಸೋಲಿಸುಗಂ ವಸಂತಸಮಯಪ್ರಾದೇಶಿಕಂ ದಕ್ಷಿಣಾ
ನಿಲನಂತಲ್ಲಿದು
ನಿಸ್ಸಹಾಯಸುಭಗಂ ನಿಷ್ಕಾಮಿ ನಿಶ್ಯೇಷಕೋ
ಮಲಮೆಂದುಂ
ಮಧುರಸ್ವಭಾವಸುಖದಂ ಕಾವ್ಯಂ ಕಲಾಕಾಂತನಾ        ೭೫

ಸರಸಮಹಾಕವೀಶ್ವರಮಹೀತಳದೊಳ್ ಪುಳಕಾಂಕುರಂಗಳು
ಬ್ಬರಿಸೆ
ಮೃದೂಕ್ತಿಬಿಂದುಚಯಮಂ ಸವಿದಾಱೆ ವಿದಗ್ಧಚಾತಕಂ
ನರಪಸಭಾನಭಸ್ಸ್ಥಳದೊಳುನ್ನತಿವೆತ್ತು
ರಸಪ್ರವಾಹಮಂ
ಸುರಿವುದನಾರತಂ
ಸುಕರಕಾವ್ಯಘನಂ ಕವಿರಾಜಮಲ್ಲನಾ       ೭೬

ಪಿರಿದನುರಾಗದೋದುವರ ನಾಲಗೆಗಳ್ಗ ಮರ್ದಾದುದೊಲ್ದು ಕೇ
ಳ್ವರ
ಕಿವಿಗಳ್ಗೆ ಮಾಣಿಕದ ಮಂಜರಿಯಾದುದು ಭಾವಿಸುತ್ತುಮಿ
ರ್ಪರ
ಬಗೆಗಳ್ಗೆ ಪೊಚ್ಚ ಪೊಸವೇಟದ ಪೆಣ್ಣವೊಲಾದುದಿಂಪಿನಿಂ
ಸುರುಚಿರಕಾಂತಿಯಿಂ
ಸೊಬಗಿನಿಂದೆಸೆವೀ ಕೃತಿ ನೇಮಿಚಂದ್ರನಾ         ೭೭

ಸಾತಿಶಯಾರ್ಥಮುಮಂ
ಲ್ವಾತುಮನೊಪ್ಪಿಸಿದರೊಸೆದು
ತಮಗಿಲ್ಲದುದಂ
ಖ್ಯಾತಂಗೆ
ಸುಕವಿನೇಮಿಗೆ
ಭೂತಭವದ್ಭಾವಿಕವಿಗಳೇನೊಳ್ಳಿದರೋ
       ೭೮

ಯುವತಿ ಸರಸತಿ ಪುರಾತನ
ಕವಿರಮಣನನಱಿದಳಿಲ್ಲ
ನಿರ್ಮಳದಶನ
ಚ್ಛವಿಕುಸುಮಿತರಸನಾಪ

ಲ್ಲವತಲ್ಪದೊಳಿರ್ದು
ಸುಕರಕವಿಶೇಖರನಾ    ೭೯

ಚತುರರೆರ್ದೆಯಿಂದಮಿೞೆಯಳ್
ಸ್ತುತಿಯಿಂ
ನಾಲಗೆಯಿನಗಳೆಂದುಂ ತನ್ನೀ
ಕೃತಿಕಾಂತೆ
ನಿಜಕಳಾಕುಶ
ಲತೆಯಿಂ
ಮತ್ತೆಂತು ಮೆಱೆವನೋ ಕವಿಧವಳಂ         ೮೦

ಅನುಭಾವವ್ಯವಸಾಯಸುಪ್ರಕಟಿತಂ ನಾನಾವಿಭಾವಪ್ರಧಾ
ನನಿಮಿತ್ತಂ
ವ್ಯಭಿಚಾರಿಭಾವಪರಿಪುಪಷ್ಟಂ ಸ್ಥಾಯಿಭಾವಾತ್ಮಕಂ
ತನು
ಶೃಂಗಾರರಸಕ್ಕೆ ಸಂದಣಿಸಿದಾಶೃಂಗಾರಮಂ ಕಾವ್ಯಬಂ
ಧನದೊಳ್
ತಾಂ ಸೆಱೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ   ೮೧

ಓತರ ಗೆಯ್ತದಂತೆ ರಸಭಾವಮೊಡಂಬಡೆ ನಲ್ಲರಟ್ಟಿದೊ
ಳ್ಮಾತುಗಳಂತೆ
ಮಾತುಗಳೊಳಿಂಪೊಸಱುತ್ತಿರೆ ಕಾವ್ಯಭೂಷಣಾ
ರ್ಥಾತಿಶಯಂ
ಪ್ರಿಯರ್ ತುಡಿಸಿದರ್ಥವಿಭೂಷಣದಂತಿರೊಪ್ಪೆ ಪೇ
ಱ್ದಾತನದಾರೊ
ನಾನಱೆಯೆನೆಂತಿನಿಯಂ ರತಿರಾಗದೋಹಳಂ ೮೨

ಇನ್ನು ಕವಿವ್ರಜಂ ಪಡೆಯಲೀ ಪೊಸದೇಸೆಯನೀಸದರ್ಥಮಂ
ಮುನ್ನಿನ
ಸತ್ಕವೀಶ್ವರರ್ಗಮೇಂ ದೊರೆಕೊಂಡುದೆ ಕೂಡೆ ಬಿನ್ನಣಂ
ಸನ್ನಿದಮಾದುದಕ್ಕರದಮರ್ಕೆಯಿನೀಕೃತಿಯಂ
ಕೃತಾರ್ಥನೊ
ಲ್ದೆನ್ನರೊ
ಪೇೞ್ದನೇನಱೆಯ ನಮ್ಮರಸಂ ಕವಿರಾಜಕುಂಜರಂ     ೮೩

ಈಯಂದದಿನತಿಚತುರ
ಸ್ತ್ರೀಯರುಮತಿಚತುರಕವಿಗಳುಂ
ಕೇಳ್ದೊಲವಿಂ
ಬಾಯಂ
ಬಿಡುತಿರೆ ಕರ್ಣರ
ಸಾಯನಮೆನೆ
ಪೇೞ್ವೆನೆಸೆಯೆ ಲೀಲಾವತಿಯಂ         ೮೪

ಪೂಸುವ ಬೂದಿಗಂಗಭವನಂ ಭವಸಾರನನಾರ್ದು ಸುಟ್ಟ ಭೂ
ತೇಶನ
ಬುದ್ಧಿಗುದ್ದವಱಿದಾಂ ಪೊಗೞೆಂ ಪೊಗೞೆಂ ಮನೋಜನಂ
ಕೇಸುರಿಯಂತೆ
ಪರ್ಬಿಪಟುವಾಗಿ ಪೊದೞ್ದಳುರ್ದಂತರಂಗಮಂ
ಕಾಸಿ
ಕಪಾಲಿಯಂ ಪಿಡಿದೊಱಲ್ದರೆವೆಣ್ಣನೆ ಮಾಡಿಬಿಟ್ಟನಂ        ೮೫

ಅದೆಂತೆನೆ –
ಫಣಿರಾಜಸ್ಪರ್ಧಿದೀರ್ಘಂ ಪ್ರಚಲದಸಿಲತಾಲೋಲಜಿಹ್ವಾಂಕುರಂ ಜ್ಯಾ
ಕಿಣರೇಖಾಂಕಪ್ರಕೋಷ್ಠಂ
ತಳೆಯೆ ಧರಣಿಯಂ ತನ್ನ ದೋರ್ದಂಡಶೇಷಂ
ಪ್ರಣತಕ್ಷೋಣೀಶಚೂಡಾಮಣಿಗಣರುಚಿನೀರಾಜಿತೋಚ್ಚಾಂಘ್ರಿಚೂಡಾ

ಮಣಿಯೆಂಬಂ
ಚಂದ್ರಚೂಡಾಮಣಿನಿಭನದಟಿಂದೊರ್ವನುರ್ವೀಶನಾದಂ  ೮೬

ಅಹಿರಾಜಂ ಪೆಡೆತಟ್ಟುವೀಱೆ ದಿಗಿಭವ್ರಾತಂ ಕೊರಲ್ಕುರ್ಗೆ ದು
ರ್ವಹಧಾತ್ರೀಭರಮಂ
ಪುರಾಣಕಮಠಂ ಬೆಂಬತ್ತೆ ಪೊತ್ತಿರ್ದೊಡಾ
ವಹಿತಂ
ಪೇೞ್ ಪ್ರಜೆಗೆಂದು ಪೊತ್ತನತುಲಾಜ್ಞಾರೂಪದಿಂ ದುಷ್ಟನಿ
ಗ್ರಹಶಿಷ್ಟಪ್ರತಿಪಾಲನಪ್ರಥಿತನಂದಾ
ಪಾರ್ಥಿವಂ ಪೃಥ್ವಿಯಂ      ೮೭

ಪಲಮಾಲಾಪಲ್ಲವೋಲ್ಲಾಸಿತೆ ಮಲಮಲಿನಾಚ್ಛಾಯೆ ಭಿನ್ನೇಭರಕ್ತಾ
ವಿಲಮುಕ್ತಾಪುಂಜಗುಂಜಾಭರಣೆ
ಧೃತದಳತ್ಖಂಡಪಾಲಾಶಪುಷ್ಪೋ
ಜ್ವ್ವಲೆ
ತದ್ಬೂಪಾಲಶಸ್ತ್ರೀಶಬರಿ ಸುಭಟಸೇನಾಟವೀಶೀರ್ಷತಾಳೀ
ಫಲಮಂ
ಪ್ರತ್ಯರ್ಥಿ ಭೂಭೃತ್ಕಟಕದೊಳದಟಿಂದಾಯ್ದು ಕೊಯ್ಯುತ್ತುಮಿರ್ಪಳ್       ೮೮

ತಳಿರುಡೆ ಮೆಯ್ಗೆ ಬಾಯ್ಗೆ ತನಿವಣ್ ನಡುನೆತ್ತಿಗೆ ತಣ್ಣೆೞಲ್ಗಳಂ
ದಳವಡೆ
ಮೆಚ್ಚಿ ನಿರ್ಭಯದೆ ಕಾನನದೊಳ್ ತದರಾತಿಜಾತಮೀ
ಗಳುಮದೆ
ಲೋಕಮಂತದನೆ ಕಂಡು ವನೇಚರರೆಂಗುಮಾಗಳುಂ
ತಳರದಿರಲ್ಕೆ
ಮಾನಸರ್ಗಮುಗ್ರವನಕ್ಕಮದಾವ ಸಮ್ಮದಂ      ೮೯

ಮತ್ತಮಾನರೇಂದ್ರನಮರೇಂದ್ರನಂತದಿಕವಿಲೋಚನನುಂ, ಜಾತವೇದನಂತತುಲಪ್ರಭಾವ ಸುತಮೋಹನನುಂ, ಅಂತಕನಂತೆ ಮಹಿಷಾಸನಾಧಿಷ್ಟಿತನುಂ, ನಿಋತಿಯಂತೆ ಸದ್ವಿಲಕ್ಷಸತ್ತ್ವ ಸಮೇತನುಂ, ವರುಣನಂತಿರಪ್ರತ್ಯಕ್ತಕರಣನುಂ, ಪವನನಂತೆ ಪದ್ಮಾಮೋದಮಂದಿರನುಂ, ಧನದನಂತೆ ಪುಣ್ಯಜನೇಶ್ವರನುಂ, ಭೂತೇಶನಂತೆ ವಿಭೂತಿ ನಿಮಿತ್ತಕೃತಕಾಮದಾಹನುಂ, ಸರೋಜಸಂಭವ ನಂತೆ ಸಕಲಸಾರಸ್ವತಾಮರಸಭಾನುಭೂತಿಯುಂ, ಶತಾನಂದಭೂತಿಯಂತೆ ಸಮರಕ್ಷಣಾ ನಂದಿತದರ್ಶನುಂ, ಭದ್ರಗುಣನಾಗಿ ಯುಮನಾಗನುಂ, ವಿಬುಧಪತಿಯಾಗಿಯುಂ ಕುಲೀನನುಂ, ಅತಮನಾಗಿಯುಂ ವಿಬುಧ ವಿದ್ವೇಷಿಯುಂ, ತಾರ್ಕ್ಷ್ಯಪ್ರಿಯ ನಾಗಿಯುಂ ಸಮಗ್ರಾಹಿಯುಂ, ಸುವರ್ಣಧರ ನಾಗಿಯುಮನಾದಿತ್ಯಾಗನುಮೆನಿಸಿದನಂತು ಮಲ್ಲದೆಯುಂ –

ಅಮೃತಮಯೋಜ್ಜ್ವಲಾಶಯಮನಾಶ್ರಿತಗೋತ್ರಸಮೇತಮಂ ಮಹಾ
ಹಿಮಕರಸತ್ತ್ವಮಂ
ಸುಜನಸಾಗರಮಂ ಸೆಲೆ ಪೆರ್ಚನೆಯ್ದಿಪಂ
ಕುಮುದವನಪ್ರಿಯಂ
ಸಕಲಮಂಡಲಭಾಸಿ ಸದಾನಭೋಗನು
ದ್ಗಮರುಚಿ
ಶರ್ವರೀ ವಿರಹಸಂಪದನಾ ನರಲೋಕಚಂದ್ರಮಂ   ೯೦

ಸಕಲಕಲಾಧಿದೇವತೆಗೆ ದೇಗುಲಮಾದುದು ಲಕ್ಷ್ಮಿ ಸಾಲಭಂ
ಜಿಕೆಯೆನೆ
ತೋಳ್ಗಳೆಂಬ ಮಣಿಗಂಭದೊಳೊಂದಿರೆ ಸಂದ ಸಿಂಹಶೂ
ದ್ರಿಕನೆನೆ
ಶೂರವೀರಮಣಿವೃತ್ತಿ ಸುವರ್ಣಮಯಂ ಮುಖಂ ಪ್ರದೀ
ಪಕಕಲಶೋಪಮಾನಮೆನೆ
ತನ್ನೃಪಮೂರ್ತಿ ಯಶಸ್ಸುಧಾತ್ಮಕಂ          ೯೧

ಆವಿಭುವಿಂಗೆ ರಾಗರಸರಾಶಿ ಮನೋಹರಿಯಾಗಿ ಮಿಕ್ಕ ಮಾ
ದೇವಿಯೆನಿಪ್ಪ
ದೊಡ್ಡವೆಸರ್ಗಂ ನೆಲೆಯಾದಳಪೂರ್ವರೂಪಶೋ
ಭಾವತಿ
ಪುಣ್ಯಶೀಲವತಿ ಕೇಳಿಕಳಾವತಿ ಪೆಂಪುವೆತ್ತ
ದ್ಮಾವತಿಯೆಂಬ
ರಾಜಸುತೆ ದಾಶರಥಂಗವನೀಜೆಯಂದದಿಂ    ೯೨

ಹರಿಯಂ ಸಾಮರ್ಥ್ಯದಿಂ ಸಾಹಸರಸಿಕತೆಯಿಂ ಪೋಲ್ವ ತತ್ಪಾರ್ಥಿವಂಗಂ
ಸಿರಿಯಂ
ಸೌಂದರ್ಯದಿಂ ಪೆಂಪಿನೊಳಸಕಳಿವಾಕಾಂತೆಗಂ ಲೋಕಚೇತೋ
ಹರಬಾಣಂ
ಪುಟ್ಟಿದಂ ರಾಜಿತರತಿಮಣಂ ದೃಪ್ತಭುಮಿನಕೇತು
ಸ್ಫುರಿತಂ
ಶೃಂಗಾರಕಾರಾಗೃಹನತಿಸುಭಗಂ ರೂಪಕಂದರ್ಪದೇವಂ       ೯೩

ವದನಂ ಚಂದ್ರಪ್ರಭಂ ವಿ‌ಕ್ರಮಭುಜಮಜಿತಂ ಪಾಣಿ ಪದ್ಮಪ್ರಭಂ ಸಂ
ಪದಮೆಂದುಂ
ವರ್ಧಮಾನಂ ಗಣಪತಿ ವಿಮಳಂ ತನ್ನ ಪೆಂಪೊಂದನಂತಂ
ಹೃದಯಂ
ಸ್ವಾಧೀನಧರ್ಮಂ ಮತಿ ಪುರುಚರಿತಂ ಶೀತಲಂ ಸುವ್ರತಂ ತಾ
ನದಱೆಂ
ಪ್ರತ್ಯಕ್ಷತೀರ್ಥೇಶ್ವರನೆನೆ ನೆಗೞ್ದಂ ವಿಶ್ವವಿದ್ಯಾವಿನೋದಂ        ೯೪

ನಿಡುಗಣ್ ಪದ್ಮದಳೋಪಮಂ ಸ್ಮಿತಮುಖಂ ಚಂದ್ರೋಪಮಂ ತೋಳ್ಗಳ
ಪ್ಪೊಡೆ
ದಿಙ್ನಾಗಕರೋಪಮಂಗಳುರಮುಂ ಶ್ರೀರತ್ನಪೀಠೋಪಮಂ
ತೊಡೆ
ರಂಭಾಲಲಿತೋಪಮಂ ಪದಯುಗಂ ಕೂರ್ಮೋಪಮಂ ತಾನದಾ
ದೊಡಮೇಂ
ರೂಪು ವಿಚಾರಿಪಂದನುಪಮಂ ಶ್ರೀರೂಪಕಂದರ್ಪನಾ       ೯೫

ಲಳನೆರಾತನಂ ಬಯಸಿ ನೋಡಲೊಡಂ ಮದನಾಗ್ನಿದಾಹಮ
ಗ್ಗಳಿಸದೆ
ಮಾಣದೆಂದು ಕೃಪೆಯಿಂ ಪಡೆದಂ ಬಿದಿ ಚಂದ್ರಬಿಂಬಮಂ
ಮಳಯಜಮಂ
ಮೃಣಾಳಕುಳಮಂ ಕೊಳನಂ ಲತಿಕಾಗೃಹಂಗಳಂ
ತಳಿರ್ಗಳನೆಂದೊಡಂದಮನದೇವೊಗೞ್ವೆಂ
ಕವಿತಾವಿಲಾಸನಾ  ೯೬

ನಡೆದಡಿಗಳ್ ಪುಗುೞ್ನೆಗೆದುವುಗ್ಗಡಮಾಯ್ತು ನಿದಾಘಮೆಲ್ಲಿ ನೋ
ೞ್ಪೊಡೆ
ತಳಿರಿಲ್ಲ ಕಾನನದೊಳೆಂದೊಡೆ ದೈನ್ಯದೆ ನೊಂದು ನೊಂದ ಕೇ
ಸಡಿಗಳನೂದಿ
ತಮ್ಮಿನಿಯರುಣ್ಮಿಪಶೋಕೆಯ ಪಲ್ಲವಂಗಳಂ
ಪಡೆದುಡುಗುಂ
ವಿರೋಧಿವನಿತಾಜನಮಾರಣರಂಗಮಲ್ಲನಾ    ೯೭

ಮಸಕಂಗುಂದದರಾತಿಪಾರ್ಥಿವರ ಕಾಂತಾನೇತ್ರನೀರೇಜದೊಳ್
ಬಿಸುನೀರಂ
ಸುಕುಮಾರಹೃತ್ಕುಸುಮದೊಳ್ ಶೋಕಾಗ್ನಿಯಂ ನೀಳ್ದ ಸು
ಯ್ವಿಸಿಲಂ
ತಮ್ಮಖಚಂದ್ರಬಿಂಬಚಯದೊಳ್ ವಿಕ್ರಾಂತದಿಂ ನೋಡಿ ಪು
ಟ್ಟಿಸುವಂ
ತನ್ನೃಪನಂದನಂ ಪ್ರಭುಗಳೇನಂ ಮಾೞ್ಪೊಡಂ ತೀರದೇ       ೯೮

ಜನತಾನಂದೈಕನೇತ್ರಂ ಪ್ರಿಯಮಧುಸಮಯಂ ರೂಪಕಂದರ್ಪದೇವಂ
ಮುನಿಸಿಂ
ಚಾಪಕ್ಕೆ ಕೈನೀಡಿದೊಡೆ ನಡುಗುವರ್ ಪೊಕ್ಕುನೀರೊಳ್ ಪೊರೞ್ವರ್
ವನಮಂ
ಸಾರ್ದಿರ್ಪರೆಂದುಂ ತಳಿರನುಡುವರಂಭೋಜಮಂ ಪಾಸುವರ್ ಬೆ
ಚ್ಚನೆ
ಸುಯ್ವರ್ ಪ್ರಾಜ್ಯರಾಜ್ಯಾಂಗನೆಯ ವಿರಹದಿಂ ವೈರಿವೀರಾವನೀಶರ್          ೯೯

ಓದಿಸದೆಮ್ಮನೇಕುಸಿರದಿರ್ದಪೆಯೋ ಕುಡುಕಿಕ್ಕಲೊಲ್ಲದಂ
ತಾದುದೆ
ರಾಜಪುತ್ರಿಯೆನೆ ಕಾಂಚನಪುತ್ರಿಕೆಯಂ ಶುಕಾಳಿ ಕೇ
ಳ್ದಾದಮೆ
ವಾನರಂ ತೆಱೆದ ಪಂಜರದಿಂದೆ ಬಿಡಾಲಭೀತಿಯಿಂ
ಪೋದುದು
ಪಾಱಿ ಕೀರತತಿ ತದ್ದ್ವಿಷದುದ್ದ್ವಿಷಮಂದಿರಂಗಳೊಳ್ ೧೦೦

ಭೂರಿಭುಜವೀರರಾಕ್ಷಸಿ
ವೈರಿಗಳಂ
ನುಂಗಲೆಂದು ನೀಡಿದ ಜಿಹ್ವಾ
ಕಾರಮೆನಿಸಿದುದು
ರಿಪುರುಧಿ
ರಾರುಣಕರವಾಳವಾ
ನೃಪಾಲಕಸುತನಾ     ೧೦೧

ಕ್ಷಾರತರಂ ಮದಕಲರಣ
ವಾರಣಮಸ್ತಕವಿಮುಕ್ತ
ಮಣಿದಂತುರಮಿ
ಧಾರಿಣಿಯಂ
ಕಾದುದು ಮು
ನ್ನೀರಂತಿರೆ
ತೋಳ ಬಾಳದೀನೃಪಸುತನಾ   ೧೦೨

ಮೃಗಧರನಾ ನೃಪತನಯನ
ಪಗೆವರ
ಪಾೞ್ಸುರಿವ ಸೌಧಶಿಖರದಿನಸಿತೋ
ರಗನೆಳಸೆ
ತನ್ನ ಪುತ್ತಿಂ
ಗಗಿದವೊಲತ್ತಿತ್ತ
ತೊಲಗುತಿರ್ದಪನಿನ್ನುಂ     ೧೦೩

ಬಿರಿದು ವಿಷಮಾಸ್ತ್ರಹತಿಯಿಂ
ಪೊರೞ್ದುಂ
ಮೈಮಱೆದರಾತಿನೃಪರಂ ನೆಲದೊಳ್
ನೆರಪಿಯೆ
ನಾಣ್ಚದೆ ನೆಲವೆ
ಣ್ಗರಸಂ
ತಾನಾದನಭಿನವಂ ಪ್ರಭುಚರಿತಂ    ೧೦೪

ಬಿಡುಮುತ್ತಂ ಗುಣದೊಳ್ ಚೆ
ಲ್ವಿಡಿದಿರೆ
ಕೋದಂತೆ ಸುಕವಿಜನದ ಕೊರಲ್ಗಂ
ತೊಡವಾದುದು
ಪೊಸಗಬ್ಬದೊ
ಳಿಡೆ
ಬಿಡುವೆಸರೋಳಿ ಸುಕರಕವಿಶೇಖರನಾ  ೧೦೫

ಮದನವ್ಯಾಪ್ತಂ ದಕ್ಷಿಣ
ಸದಾಗತಿಸ್ನಿಗ್ಧನಾ
ಕುಮಾರಂ ಮೆಯ್ವೆ
ರ್ಚಿದ
ಸುರಭಿಮಾಸದಂತಿರೆ
ಪುದಿದಬಳಾಲತೆಗಳಲರ್ವುದೊಂದಚ್ಚರಿಯೇ
  ೧೦೬

ಆ ಕುಮಾರಂ ವ್ಯಾಕರಣಕುಶಲನುಂ, ನಯಚೇತೋವಯನುಂ, ಕವಿತಾ ಕೋವಿದನುಂ, ವಾತ್ಸ್ಯಾಯನಧವಳನುಂ, ಸರಸಕಾವ್ಯಸರಸೀಸುಭಗಸಾರಸನುಂ, ಕಥಾಕರ್ಣನಕೃತಕೌತುಕಾದರನುಂ, ನಾಟಕಾವಲೋಕನವಿಕಸಿತವಿಲೋಚನನುಂ, ಭಾಣಪ್ರವೀಣನುಂ, ಪ್ರಹಸನಪ್ರಗಲ್ಬನುಂ, ಪ್ರವಚನವಿಚಕ್ಷಣನುಂ, ಗೀತಗೋಷ್ಠೀವಿಶಾರದನುಂ, ಲಿಪಿಲಕ್ಷ್ಮೀಪನದರ್ಪಣನುಂ, ಸಕಲ ಕಲಾಕೋಶಗೃಹನುಂ, ಸುಭಾಷಿತಬಿಂದುಗ್ರಹಣಚತುರಚಾತಕನುಂ, ವಿನೋದ ನದಿ ಸಮುದ್ರನುಂ, ಬುಧಸಂಗ್ರಹವ್ಯಸನಿಯುಂ, ಸೌಜನ್ಯಜನಕನುಂ, ಪರಿಹಾಸ ಪರಿಣತನುಂ, ಪುರುಷಾರ್ಥಪರಮಪಂಡಿತನುಂ, ಪರಾರ್ಥತೀರ್ಥತಾಪಸನುಂ, ಲಾವಣ್ಯಲಂಪಟನುಂ, ಜಲ ಕೇಳೀವೊಲೋಲನುಂ, ವನಕೇಳೀವಸಂತನುಂ, ಸುಖಾಮೃತಕೇಳೀಕಲಹಂಸನುಂ, ಯೌವನವನಕೇಳೀಕಾಮಕುಂಜರನುಂ, ಆಮೋದಮಧುಕರನುಂ, ಮಧುಸಮಯಪುಷ್ಪಧನ್ವನುಂ, ಸ್ಮರಸೌಭಾಗ್ಯಸಬ್ರಹ್ಮಚಾರಿಯುಂ, ಚೈತ್ರಕೌಮುದೀಕಾಮುಕನುಂ, ಕಾಮಿನೀಕುಚಕ ಪೋಲಪತ್ರಭಂಗವಿಚಿತ್ರಚಿತ್ರಕರ್ಮವಿಚಿತ್ರಕನುಂ, ಪ್ರೇಯಸೀಸಾಧನವಿಧಿಸಾಧಿತಹಸ್ತ ವಿನಿರ್ಮೋಚಕ ಚಮತ್ಕಾರಿಯುಂ ಸುಂದರೀದರಸ್ಮಿ ತಕುಸುಮವನಪಾಲನುಂ, ವನಿತಾವನಘಸ್ಮರ ವಿರಹದವನಿಕ್ಷೇಪಣನಿಪುಣಪುಳಿಂದನುಂ, ಸ್ಮರಶರಪ್ರಹಾರಪಾರವಶ್ಯಪರಿಭೂತಭಾಮಿನೀರೋಮ ಭೇದಭಲ್ಲೂಕ ಮುಖವಿಲಿಖಿತಸುಕುಮಾರಶರೀರನುಂ, ವಿಟವಿದೂಷಕಶುಕ ಪಿಕ ಪ್ರಕರಮಧುರಮಾಕಂದನುಂ, ಶೃಂಗಾರಸಾರಸರ್ವಜ್ಞನುಂ, ನಾಗರಿಕ ನಾಗಯೂಧಪ್ರಿಯ ಪ್ರಸಾದಸಲ್ಲಕೀಪಲ್ಲವನುಮೆನಿಸಿ ಮನಸಿಜರಾಜನೞ್ತಿಯಿನಿತ್ತಂಗಜರಾಜಲಕ್ಷ್ಮಿಗಂ ನಿಜ ಜನಕನಪ್ಪ ಚೂಡಾಮಣಿಮಹಾರಾಜನೊಸೆದಿತ್ತಂಗಜರಾಜಲಕ್ಷ್ಮಿಗಂ ಸಮುಚಿತಮಾದ ಮದವತೀ ದೀರ್ಘಧವಲಾಪಾಂಗಮರೀಚಿ ಮಂಜರೀಚಾಮರಮುಂ ಇಕ್ಕುವ ವಿಮಳಚಾಮರ ಮೆಂಬುಭ ಯಚಾಮರಮುಂ ಪೂದುಱುಂಬಿಗೆ ಮೇಗೆ ನೆಗೆದ ತುಂಬಿಗೊಡೆಯುಮೆತ್ತಿದ ಬೊಳ್ಗೊಡೆಯುಮೆಂಬ ಸವಡಿಗೊಡೆಯುಮೆಸೆಯೆ ಸಂಸಾರ ಸುಖಮನನವರತಮನು ಭವಿಸುತ್ತುಮಿರೆ –

ಅಕಲಂಕಾಗಮವೇದಿ ನೀತಿನಿಪುಣಂ ಕಾಲಕ್ರಿಯಾಲೋಕಲೌ
ಕಿಕವಿಜ್ಞಾನವಿಚಕ್ಷಣಂ
ಸಕಲಶಾಸ್ತ್ರರ್ಥಪ್ರವೀಣಂ ಗುಣಾ
ಧಿಕನಾ
ರಾಜಕುಮಾರಕಂಗೆ ಗುಣಗಂಧಾಖ್ಯಪ್ರಧಾನಾತ್ಮಜಂ
ಮಕರಂದಂ
ಪ್ರಿಯಮಿತ್ರನಾದನುಪದಾಶುದ್ಧಂ ವಿಶುದ್ಧಾನ್ವಯಂ ೧೦೭

ಮಳಯೋತ್ಸಂಗಾಗ್ರದಿಂ ತೆಂಬೆರಲರ್ವೆಲರಿಂ ಸೌರಭಂ ಸೌರಭಶ್ರೀ
ಕಳಿತಂ
ಪುಷ್ಪಾಳಿ ಪುಷ್ಪಾವಳಿಯ ಪುದಿದ ಚೆಲ್ವಿಂ ವಸಂತಂ ವಸಂತೋ
ಚ್ಚಳಿತಂ
ಕಂದರ್ಪನೊಪ್ಪಂಬಡೆವೆ ತೆಱದಿನಾ ಮಂತ್ರಿಮಾಣಿಕ್ಯನಿಂ ಭೂ
ತಳದೊಳ್
ಸಂಸೇವ್ಯನಾದಂ ಸರಸಕೃತಿಕಲಾನರ್ತಕೀನೃತ್ಯರಂಗಂ      ೧೦೮

ಇದು ವಿದಿತಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯಹೈಮಾಚಲೋಚ್ಚಲಿತ
ನಖಮಯೂಖಮಂದಾಕಿನೀಮಜ್ಜನಾಸಕ್ತ
ಸಂತತೋತ್ಸಿಕ್ತದಾನಾಮೋದ
ಮುದಿತಬುಧಮಧುಕರಪ್ರಕರ
ಕವಿರಾಜಕುಂಜರ ನೇಮಿಚಂದ್ರ ವಿರಚಿತ
ಮಪ್ಪ
ಲೀಲಾವತಿಯೊಳ್ ನಾಯಕಾಭ್ಯುದಯವರ್ಣನಂ

ಪ್ರಥಮಾಶ್ವಾಸಂ