ಜಲದೊಳೊಲೆದಲೆವ ತಾವರೆ
ಯೆಲೆಯೊಳ್
ತೆಗೆದಿಕ್ಕಿ ನಾಲ್ಕು ದೆಸೆಗಂ ನೀರ್ಗಂ
ಬಲಿಗೆದಱಿ
ಬೞಿಕೆ ಜಲರುಹ
ದಲರ್ಗಳುಮಂ
ಬಿಟ್ಟು ಕವಿಯೆ ಕಂಪಿಂಗಳಿಗಳ್         ೬೧

ಬಗಿದಗುೞೊಂದದಂತೆ ತೆಗೆದಾಱಿಸಿದೋಗರದೋಳ್ ಪೊದೞ್ದು
ಮ್ಮಗೆ
ಕೆನೆಗೊಂಡ ಗೆಡ್ಡೆಮೊಸರಂ ಸುರಿದೇಲೆಯ ಚೂರ್ಣವಿಕ್ಕಿ ಪೊ
ಯ್ದೊಗುಮಿಗೆ
ಬೇಳೆಗೆಯ್ದ ಮೆಳಸಂ ತಳಿದಲ್ಲದ ಚಲ್ಲಿಯಂ ಫವ
ಣ್ಬುಗೆ
ಕಲಸಿರ್ದ ತಣ್ಗಸುಗೂೞನಿಳಾಪತಿಗಿತ್ತನೞ್ತಿಯಿಂ ೬೨

ಪಿಪ್ಪಲಿ ಚಲ್ಲಗಾಯ್ ಮೆೞಸು ಮಾಗುಳಿವೇರ್ಮೊಳೆಯಲ್ಲವೇಲೆ
ಮ್ಮಿಪ್ಪ
ಸುಭದ್ರೆ ಮಾಮಿಡಿ ಕರಂಜಿಕೆ ಯಂಬಟೆ ನಿಂಬೆ ನೆಲ್ಲಿಗಾಯ್
ಕಪ್ಪುರಗಂಪನೊಪ್ಪಿಸುತುಮಿರ್ಪರೆಮಾದುಫಲಂಗಳಾದಿಯಾ

ದುಪ್ಪಿನ
ಕಾಯ್ಗಳಂ ಮಗಮಗಿಪ್ಪುವನಿಕ್ಕಿದನಬ್ಜಪತ್ರದೊಳ್       ೬೩

ಅಂತಿಕ್ಕುವುದುಂ –

ಆರೊಗಿಸಿ ನೃಪಸುತಂ
ರ್ಪೂರದ
ವೀಳೆಯಮನೊಸೆದುಕೊಂಡಸವಸದಿಂ
ಸಾರಮೃದುಪಲ್ಲವಪ್ರ

ಸ್ತಾರದೊಳಾ
ಲತೆಯ ಮನೆಯೊಳೊಱಗಿದನಾಗಳ್    ೬೪

ಭುಕ್ತಾಭ್ಯವಹಾರಂ ಪತಿ
ಭಕ್ತಂ
ಬಂದಾರ್ಯತನಯನವನಿಪಚರಣಾ
ರಕ್ತಾಂಬುಜಸಂವಾಹನ

ಸಕ್ತಂ
ಸುಖದಿಂದಮಿರ್ದನಿರ್ಪನ್ನೆವರಂ        ೬೫

ಮೂಡ ನೆೞಲ್ ಮಿಗೆ ಕವಿದುದು
ಕೋಡುವ
ಮೆಳ್ಗಾಳಿ ತೀಡಿದುದು ಕಡುವಿಸಿಲಿಂ
ಪಾಡೞಿದ
ಸಸಿಮೊಗಂಗಳ್
ಕೂಡೆ
ನಯಂಬಡೆದುವಲರ್ದುವಡವಿಯ ಪೂಗಳ್      ೬೬

ಆಗಳಾ ಸಮಯಮನವಲೋಕಿಸಿ –

ತಣ್ಬೋೞ್ತಾದುದು ತಳರ್ದುದು
ನುಣ್ಬಸಲೆಗೆ
ಹಂಸಮಿಥನಮತನುವ ಸರಲಿಂ
ಪುಣ್ಬೇಱುವ
ಪಾಮರಿಯರ
ಕಣ್ಬೆಳಗಿನ
ಮಜ್ಜನಕ್ಕೆ ನಡೆ ನೃಪತಿಳಕಾ       ೬೭

ಎಂದು ನುಡಿದಮಾತ್ಯಸುತನ ಮಾತಿಂಗಲ್ಲಿಂದಮೆೞ್ದು ಸಮುದ್ದಳಿತ ಸನಾಳ ನೀಲೋತ್ಪಲನಳಿನನಿಳಯೀಕೃತಕರಕಮಲನತಿಲಲಿತಲೀಲಾಲಸಗಮನನಾಗಿ ಕಂದರ್ಪದೇವಂ ಬರೆ ಕಿಱಿದಂತರದೊಳ್ –

ಆವಲಲರಾಯ್ವ ಕೞಮೆಯ
ಪೂವೊಡೆಯಂ
ಮುಡಿಯೆ ಬಿಗಿದು ಬಿರಿಯಿಸಿ ನೆಯ್ದಿ
ಲ್ವೂವುಡಿಯನೆತ್ತಿ
ಬೈತಲೆ
ಡೀವುದ
ಪಾಮರಿಯರಂ ಮಹೀಪತಿ ಕಂಡಂ  ೬೮

ಅಂತು ಕಂಡಿದು ಬಿನದಮಂ ಕಾವಂದಮಲ್ಲದೆ ಗಿಳಿಯಂ ಸೋವಂದಮಲ್ಲೆನುತುಂ ಪೋತರ್ಪಂಗೆ ಬಲಗೆಲದೊಳ್ ಬೆಳೆದೊಱಗಿದ ಕಳಮಕಾನನದ ಮುಂದೆ ಮುಂದೈಸಿದ ಜಾದಿಯ ಮೆಳೆಗಳ ಬಳಸಿನಿಂ ಪೊಳೆವ ಪಾಳಿಯಂ ಮೆಟ್ಟಿ ನಿಂದು –

ನಲವಿಂದಂ ಸೂಡಿ ಪೊಂಜಾದಿಯ ನಿಡುನನೆಯಂ ವೇಣಿಯೊಳ್ ಸೆಕ್ಕಿ ಕೊಯ್ದಾವಲ
ಪೂವಂ
ಗಂಧವಿಟ್ಟುತ್ಪಲದಸಿಯೆಸಳಿಂ ಕಂಜಕಿಂಜಲ್ಕಮಂ ಬೈ
ತಲೆಯೊಳ್ಪೊಯ್ದೊಟ್ಟಿಯೊಳ್ಬಂದುಗೆಯ
ದಳಮುಮಂ ತೊಟ್ಟು ಕೈಗೆಯ್ದು ಕರ್ಣೋ
ತ್ಪಲಮಂ
ಕೈಗೆಯ್ವಿನಂ ಕಣ್ಮಲರಿನರಸನಂ ನೋಡಿದಳ್ ಗೋಪಿಯೊರ್ವಳ್         ೬೯

ಬಳೆಗಳ್ ಘಲ್ಕೆನೆ ತೋಳ್ಗಳಂ ನೆಗಪಿ ಕಾಲಂ ಸ್ವಸ್ತಿಕಂಗೊಟ್ಟು ಕೆಂ
ದಳಮಂ
ಮೆಲ್ಲನೆ ಪೊಯ್ದು ಪಾಯ್ವ ಗಿಳಿಯಂ ಸೋವಾಕೆ ತುಂಗಸ್ತನಂ
ಗಳುಮಾಲೋಕಿಪವೋಲ್
ಮರಲ್ದೊಗೆಯೆ ತಳ್ತೊಂದೊಂದುಱೊಳ್ ಪಾಯ್ದು
ಣ್ಣೆಳಮಿಂಚಂ
ಮುರಿದಿಂತಿರೊಪ್ಪೆ ಮುರಿದಾ ಭೂಪಾಲನಂ ನೋಡಿದಳ್    ೭೦

ಮತ್ತಮೊರ್ವಳ್ –

ಎಡಗಯ್ಯೊಳೊತ್ತಿ ಮುಡಿಯಂ
ಪಿಡಿ
ತೆಕ್ಕನೆ ತೀವೆ ಕೊಯ್ದು ಜಾದಿಯ ನನೆಯಂ
ಮುಡಿಯುತ್ತೆ
ನಿರೀಕ್ಷಿಸಿದಳ್

ಕಡೆಗಣ್ಣಿಂ ಕಳಮಗೋಪಿ ಭೂಪಾಲಕನಂ      ೭೧

ಆಗಳ್ ಮುನ್ನಂ ತನ್ನ ಮನಮಂ ನಟ್ಟ ಕನ್ನೆಯ ಕಣ್ಗಳ ಕೆಳೆಗಳೆಂಬ ಮುಳಿಸಂ ಮುಱಿವಂತೆ ಬಿಳಿಯ ಕಣ್ಣ ಬೆಳೆಗಯ್ಯಂತಿರ್ದ ಬೆಳ್ನೆಯ್ದಿಲ ಬೆಂಚೆಯಂ ಪೊಕ್ಕು ಪೂವಂ ಮುಱಿದು –

ಎಯ್ದವೆ ಪಾಸಲುಂ ಪೊದೆಯಲುಂ ನಿಮಗೆಮ್ಮ ಪೊದೞ್ದು ನೀಳ್ದ
ರ್ನೆಯ್ದಿಲ
ಪೂಗಳೇಕೆಲವೊ ಕೊಯ್ದಪೆ ನೆಯ್ದಿಲನೆಂದು ಪೂೞ್ವಿವೋಲ್
ನೆಯ್ದಿಲ
ಮಾಲೆಯಿಂ ಕಳಮಗೋಪಿಯರೀಕ್ಷಿಸೆ ಮಾಣ್ದನಂತೆ ಚೆ
ನ್ನೆಯ್ದಿಲನಾಯ್ವುದಂ
ಮಱೆದವಂದಿರನೀಕ್ಷಿಸಿದಂ ಕುಮಾರಕಂ   ೭೨

ಅಂತೊಂದೆಡೆಗೆ ಬಂದು ನೆರೆದು ನೋಡುವ ಕಾಮನ ಕಾಪಿನವರಂತಿರ್ದ ಗೋಪಿಯರಂ ನೋಡಿ ಮನದೊಳ್ ಮೆಚ್ಚುತ್ತುಂ ಪೋಗೆವೋಗೆ ಪೂವೆಂಚೆಯಿಂ ಪೊಱಮಟ್ಟಿಂಚರಮನುಡುಗದೆ ಪರಿದು ಮುತ್ತುವ ಮತ್ತಮರಾಳಂಗಳುಮ್ಯಂ, ಸುೞಿದು ಸುತ್ತಿ ತಮ್ಮೊಳಗೆ ಮಮ್ಮೞಿಗೊಂಡು ಲವಲವಿಸಿ ಕರೆವ ಲಾವುಗೆಗಳುಮಂ, ಕುಟುನುಗುೞ್ದು ಕಂಠಮಂ ತೂಗಿ ತೊನೆಯ ನಡೆದು ನಲಿನಲಿದು ನೆರೆದು ಕೂಜಿಸುವ ಕಪೋತಂಗಳುಮಂ, ಪಾಯ್ದು ತೆನೆಯಂ ತುಡುಂಕದೆ ತಲೆಯನೊಱಗಿಕೊಂಡಾಲಿಸುವರಗಿಳಿಗಳುಮಂ, ಎಳಸಿ ಬಳಸಿ ಬಲವಂದು ನಲಿದುಱುವಾಱೆ ಮೆಲ್ಲಳಸಂ ಪರಪುವ ಪುರುಳಿಗಳುಮಂ, ಮಸಗಿ ಮುಸುಱಿ ಕುಣಿಕುಣಿದು ಕುಕಿಲ್ವ ಕುಕಿಲ್ಗಳಮಂ, ಬಟ್ಟೆಯಂ ಬಿಟ್ಟು ಬೞಲ್ದ ನೆವದಿಂ ನವಶಾಡ್ವಲಪ್ರದೇಶದೊಳ್ ಕುಳ್ಳಿರ್ದು ಕೇಳ್ದು ಕೇಳ್ದು ಪರವಶರಪ್ಪ ಪಥಿಕರುಮಂ, ಕಂಡಿದೇನೆಂದು ಮಾನವಮದನಂ ಮಕರಂದನುಮನುಮಾನಿಸುತ್ತುಂ ಬರೆ ಮುಂದೆ ಮುಂದೈಸಿ ತಲೆಯುದ್ಧಮಾಗಿ ತುಱುಗಿ ಬೆಳೆದೊಱಗಿ ರಾಜಿಸುವ ರಾಜಾನ್ನದ ಕುಸುಂಕುಱೊಳಗೆ –

ಕುಮುದದ ಕೇಸರರಜಮಂ
ತೆಮಳ್ದಿ
ತಳ್ಕೈಸಿ ನೆಗೆವ ಸುಟ್ಟುರೆಯಿಂದಂ
ಸಮತಳಹತಿಯಿಂ
ಕುಚಕಂ
ಕುಮರಜಮಡರ್ದಂಗದಲ್ಲಿ
ಪಲ್ಲವಿಸುವಿನಂ    ೭೩

ಒಱಗಿದ ಕೞಮೆಯ ಕಂಪಿಂ
ಗೆೞಗಿದ
ಮಱಿದುಂಬಿ ಸಮರತೋತ್ಕಟರಸದಿಂ
ಪೆಱೆನೊಸಲೊಳಲೆವ
ಕುರುಳಂ
ಪಱಿವಱಿದೀಡಾಡುವಂದಮಂ
ನೀಡುವಿನಂ   ೭೪

ಅನಿಲಹತಿಯಿಂದೆ ತುಂತು
ರ್ವನಿಗಳ್
ಪರಿನೀರ್ಗಳಿಂದಮೊಗೆದುದ್ಧತಮೋ
ಹನಹತಿಯಿಂ
ಝಲ್ಲೆನೆ ಮೇ
ಗೆ
ನೆಗೆದ ತೆಳ್ವದದ ಸೀವರಮನಿೞಿಸುವಿನಂ  ೭೫

ಕೃತಕೂಜತ್ಕಂಠ ನಾನಾವಿಧಕಲಮಣಿತಂ ಫುಲ್ಲಗಲ್ಲಪ್ರಹಾರೋ
ದಿತನಾದಂ
ಗ್ರಂಥಿಸಂಘಟ್ಟನಪಟುರಣಿತಂ ಪ್ರೋತ್ಫಣಾಹಸ್ತಸಂತಾ
ಡಿತಮಸ್ತೋನ್ಮುಕ್ತಘೋಷಂ
ಸಮತಳಹತನಯತಂಬಬಿಂಬಾರವಂ ದಿ
ಕ್ತತಿಯಂ
ತಳ್ಕೈಸೆ ವೇಗೋದ್ಧತರತಿ ಮೆಱೆದಳ್ಗೋಪನೊಳ್ಗೋಪಿಯೊರ್ವಳ್         ೭೬

ಅದಂ ಕೆಳಗಿವಿಗೇಳುತ್ತುಂ ಮಕರಂದನ ಮೊಗಮಂ ಮುಗುಳ್ನಗೆನಗುತ್ತಾ ಮೀಕ್ಷಿಸಿ ವಿಕಿರ ನಿಕರಮಂ ನೆರಪುವಂದಮಲ್ಲದಿದು ನೆರೆವಂದಮಲ್ಲದೆಂದು ನುಡಿಯುತ್ತುಂ ನಡೆಯೆನಡೆಯೆ

ಪಾವಸೆ ಪರ್ಬುಗೊಂಡ ಪುಳಿನಂ ಜಘನಂ ಗಿಳಿ ತಿಂದ ತೊಂಡೆ ಕೆಂ
ಪಾವರಿಸಿರ್ದ
ಪುಣ್ದುಟಿ ವಯಃಪದಪದ್ಧತಿಗಳ್ ನಖಕ್ಷತಂ
ಪೂವಿಡಿದಿರ್ದ
ತೀರಕುಜಜಾಲ ಮಲರ್ಮುಡಿಯಾಗೆ ಸೂಳೆವೋಲ್
ಶೈವಲಿನೀವಿಲಾಸಿನಿ
ಕರಂ ಮೆಱೆದಳ್ ಶಫರೇಕ್ಷಣಗಂಗಳಂ     ೭೭

ಆ ತೊಱೆಯ ತಡಿಯೊಳ್ –

ಬೇಲಿಯನೇಂ ಕಿತ್ತನೊ ಬಾ
ೞ್ವೇಲಿಯೊಳಲರಂಬನಂಬಿನಾಗರಕೆನೆ
ಬೆ
ಳ್ಪೋಲಗಿಸೆ
ನನೆಯ ಜಾದಿಯ
ಸಾಲೇಂ
ಸುತ್ತಿದುವೊ ಪುಷ್ಪವಾಟಾವಳಿಯಂ  ೭೮

ಅಲ್ಲಿ ಪೊಕ್ಕಿರ್ವರು ಬಿರಿಮುಗುಳ್ಗಳಂ ನನೆಗಳುಮಂ ತಿಱಿದು ತುಱುಂಬಿ –

ತಡಿ ಕಣಕಾಲುದ್ದಂ ಕಱು
ದೊಡೆಯುದ್ದಂ
ಪೋಗೆವೋಗೆ ಪೆರ್ದೊಡೆಯುದ್ದಂ
ನಡುನೀರೆನೆ
ಪಾಯ್ದರ್ ಕಾ
ಲಡಿಗಳ
ನುಣ್ಮಣಲನಱಿದು ಪರಿವಾ ನದಿಯಂ          ೭೯

ಪಾಕಕುಜಶಕಾಶವಿಶದಂ
ಕಾಕಾಂದೋಳಾತ್ಮಗುಪ್ತ್ಯಲಾಬೂ
ನಿರ್ಗುಂ
ಡೀ
ಕೃಷ್ಣಲಾಮರೀ ಬಿಂ
ಬಾಕೀರ್ಣಂ
ತನ್ನದೀ ತಟಂ ಕಡುರಯ್ಯಂ      ೮೦

ನದಿಯ ತೀರದೊಳ್ ಸುರ
ಧೇನೂಪಮಧೇನು
ತಳ್ತ ತೋಷಂ ವಿಹಿತಾ
ನೂನಮದವೃಷಭ
ಘೋಷಂ
ತಾನಿರ್ಪುದು
ವತ್ಸವಿಪುಳಘೋಷಂ ಘೋಷಂ ೮೧

ಕಱುವಂ ದೂರಿಸಿ ಮೆಲ್ಕನೊಕ್ಕು ತುಱುವಂ ತಾಯ್ಗಾಡಿನೊಳ್ಬಿಟ್ಟು ಮುಂ
ದುಱುವಾಯ್ತರ್ಪೆಳಗಂದಿಗಳ್
ತೊಱೆದು ತೋರಂಬೆತ್ತ ಬಲ್ಗೆಚ್ಚಲೊ
ಳ್ಪೊಱೆಯಂ
ಪೆರ್ದೊಡೆಯಿಂದಿಱುಂಕಿ ಮೊಲೆಯಂ ಪಾಯ್ತರ್ಪ ಪಾಲಿಂದೆ ಪಾ
ಲ್ದೊಱೆಯಂತಾ
ತೊಱೆಯಪ್ಪುದೆಂದೊಡದನಿನ್ನೇನೆಂದು ಬಣ್ಣಿಪ್ಪುದೋ     ೮೨

ತುಱು ನೀರ್ಗ ಕವಿವೊಡಂತಾ
ತೊಱೆ
ಪರಿಯುಡುಗಿರ್ಪುದಿನಿಸುಬೇಗಮದೆನಲಾ
ತುಱುಪಟ್ಟಿಯ
ತುಱುಗಳನೇ
ತೆಱದೊಳಮಾಂತೆಱೆಯೆ
ನೆಱೆಯೆ ಪೊಗೞಲ್ ನೆಱೆಯೆಂ        ೮೩

ಪಂಕಿಲಮಾಗಿ ಗೋಕುಲದ ಗೋಮಯದಿಂ ನಡೆಗೊಳ್ವ ಘಾತದಿಂ
ದಂ
ಕದಡಾಗಿ ಮೆಲ್ಕಿಱಿವ ಮೆಲ್ನೆರೆಯಿಂ ನೊರೆಯೇೞಿ ಮೂತ್ರದಿಂ
ದಂ
ಕಡು ಪೂರಮೇಱಿ ಬಿಡೆ ಬಂದವೊಲಾ ತೊಱೆಯಂದಕಾಲಕೂ
ಲಂಕಷಮಪ್ಪುದುಂ
ಕೆಳಗ ಪಾಯ್ವ ಪಶುವ್ರಜಮಿಸಿ ಬರ್ಪದುಂ    ೮೪

ಕಂಡು ಗೆಡೆಗೊಂಡು ಗೋವರ
ತಂಡಂ
ಬೊಬ್ಬಿಱಿಯೆ ಮೆಗುೞ್ದು ನೋಡಿ ಮಹೀಭೃ
ನ್ಮಂಡನನುಂ
ಮಂತ್ರಿಯುಮಾ
ಪಿಂಡನೆ
ಕಡೆಗಾಣದಂತು ಕೌತುಕಮುತ್ತರ್   ೮೫

ಅಂತಾ ವಿರಾಟನ ತುಱುವಿಂಗಂ ನಂದಗೋಪನ ಗೋವೃಂದಕ್ಕಂ ಪಾಲೊಳಂ ಶೀಲ ದೊಳಮಳವಿಯೊಳಂ ಬಳವಿಯೊಳು ಅಗ್ಗಳಮೆನಿಸಿ ಕಾೞ್ತುಱುಗಳಿಂ ಸಮಱಿದಡವಿಯಡಿಯೆತ್ತಿ ದಂತೆಯುಂ ಸಯ್ಗೋಡುಗಳಿಂ ಲೋಯಿಸರದ ಕಾಡಂ ಕಾಲೆತ್ತಿದಂತೆಯುಂ ಕವಿದ ಕಿವಿಗಳಿಂ ಬಾವಲಿ ಪಿಂಡು ಪಕ್ಕಮಂ ಬಡಿವಂತೆಯುಂ ಬೀಸುವ ಬಾಲಂಗಳಿಂ ಮಿಸುವ ಕಚ್ಚೆಯ ಕೆಚ್ಚಲುಣ್ಣೆಗೆ ಪಕ್ಕಿಯ ಪಿಂಡು ಪಾಯ್ವಂತೆಯುಂ ಬಣ್ಣವಣ್ಣಿಗೆಯ ಬಣ್ಣದಿಂ ಮುಗಿಲ ವರ್ಣಮಾಗಿ ಬರ್ಪ ಗೋಕುಲಮಂ ಮನಂಗೊಂಡು ಮಾನವಮದನನುಂ ಮಕರಂದನುಮಾ ತುಱುಪಟ್ಟಿಯ ತುಱುನೆಲೆಯೊಳ್ ನಿಂದು ನೋಡುತ್ತುಮಿರೆ –

ತ್ವರಿತಂ ಗೋಪಂ ಸಕೋಪಂ ಪೆಱಗೆ ಪರಿಯೆ ಹೂಂಕಾರದಿಂದಳ್ಳೆ ಬೀಗು
ತ್ತಿರೆ
ಬಾಯಿಂ ಬಟ್ಟೆಯೊಳ್ ಸಾಲಿಡೆ ಪಸುನೊರೆಯಿಂ ನಾಂದ ಪುಲ್ ಮಿಳ್ಳೆಗೊಂಡ
ಬ್ಬರಿಸುತ್ತುಂ
ತನ್ನ ಕಣ್ಗಳ್ಕರೆಯೆ ನಿಕಟದೊಳ್ ಕೇಳ್ದು ಗಾಳ್ಮೇಳೆನುತ್ತುಂ
ಪರಿತಂದತ್ತೂರ್ಧ್ವದಿಂದಂಬಿರಿವಿಡೆ
ಮೊಲೆವಾಲಂದು ಧೇನುಪ್ರತಾನಂ     ೮೬

ಅಡೆಯಂ ಕೋದೆತ್ತುತುಂ ಮಾರ್ದನಿಗೆ ಮಸಗುತುಂ ದರ್ಪದಿಂ ಛಾಯೆಯೊಳ್ಕೋ
ಡಿಡುತುಂ
ಮುಂ ಕಾದಿ ಪುಣ್ದಿಂತಿಣಿಗೆಱಗೆ ನೊೞಂ ಶೀರ್ಣ ಶೃಂಗಾಗ್ರದಿಂ ಮಾ
ರ್ದೊಡೆಯುತ್ತುಂ
ಪಾಯ್ದು ಪಿಂಡಂ ಕಲಕಿ ಕೆಲೆಯುತುಂ ಬೆರ್ಚಿ ಬಲ್ಗೂಳಿಗಳ್
ಬೆಂಗುಡೆ
ಗಂಡಂ ಸೂಸುತಂ ಬಂದುದು ಮದವಿದಳತ್ಪಿಂಗಳಾಕ್ಷಂ ಮಹೋಕ್ಷಂ     ೮೭

ಎಡಪಿ ಪರಲ್ಗಳಂ ದೆಸೆಗ ಬೆರ್ಚುತೆ ಗೋವನ ಗಾಳಿಗೆಯ್ದೆ ಪಿಂ
ಡಡಸುತೆ
ಕಂದಮಂ ನೆಗಪಿ ನೋಡುತೆ ಪಕ್ಕಮನಗ್ರವಾಲದಿಂ
ತೊಡೆಯುತೆ
ಕರ್ಣಮಂ ತೆಱೆದು ತಿತ್ತಿರಿಗಾಳೆಯನಾಲಿಸುತ್ತೆ ಪಿಂ
ಡೊಡೆಯದೆ
ಕೂಡಿ ಬರ್ಪ ಪಲವಾಕಳನೀಕ್ಷಿಸಿದಂ ನರಾಧಿಪಂ    ೮೮

ಬರಲಾಱದೆ ಪೆರ್ಗೆಚ್ಚಲ
ಭರದಿಂದಂ
ಪೆಱಗು ಕುಸಿಯೆ ಪೊಱೆಯಂ ಕಳೆವಂ
ತಿರೆ
ತೊಱೆದ ತೋರಮೊಲೆಗಳಿ
ನಿರಿವಿಡುತುಂ
ಬಂದುವಂದು ಪಯಗಳ್ ಪಲವುಂ      ೮೯

ಕಱು ಪೆಱಗುೞಿದಿದೆ ಹೂಂಗುಡು
ತಱುಚುತ್ತುಂ
ಮಗುೞ್ದು ಮೂಸುತುಂ ಪೊಲಸಂ ಮಾ
ಸೊಱೆಯುತಿರೆ
ಪಿಂತೆ ಕೆಚ್ಚಲ
ನಿಱುಂಕಿ
ನಡೆತಂದುವೀಂದ ಪಯಗಳ್ ಪಲವುಂ       ೯೦

ಪರವತ್ಸಂಗಳ ಬೞಿಯಂ
ಪಿರಗೊಳುತುಂ
ತೊಱೆದ ಗೊಂತಮಂ ಬಿಡುತುಂ ಹೂಂ
ಕರಿಸುತ್ತುಂ
ಪೋಪಗ್ಗದ
ಪುರುಳಿಗಳಂ
ಮಿಗೆ ಮರಲ್ದು ನೋಡಿದನರಸಂ         ೯೧

ಕಡುಗೊಬ್ಬಿದ ಕಡಸುಗಳಿಂ
ಕಡೆಯೊಳ್
ಬರುತಿರ್ಪ ಧೇನು ಬಡವಾಗಿರ್ದುಂ
ಬಿಡೆ
ಕರಮೆಸೆದುದು ಚಾಗಿಯ
ಬಡತನಮುಂ
ಖಳನ ಸಿರಿಯಿನಗ್ಗಳಮಲ್ತೇ    ೯೨

ಪೊಸನಸೆಯ ಸೊವಡನಾಘ್ರಾ
ಣಿಸಿ
ಮಣಿಕದ ಮಿಡುಕುಗಚ್ಚೆಯೊಳ್ ಮೊಗವೆತ್ತು
ತ್ತೆಸೆದುದು
ವೃಷಮಮರರನೇ
ಡಿಸುವಮೋಲೇನುಂಟೆ
ನಿಮಗಮೀ ಸುಖಮೆನುತಂ    ೯೩

ಪಿರಿದುಂ ಬಾಯ್ವಣ್ಣೆಗಿಣ್ಣೊಳ್ ತಳರಡಿ ವನದೊಳ್ ಮುದ್ದು ಗೋವೃಂದದೊಳ್ ಬಂ
ಧುರಪಾಂಸುಕ್ರೀಡೆ
ವತ್ಸಂಗಳೊಳನವರತಸ್ತನ್ಯಪಾನಂ ಸುಧೇನೂ
ತ್ಕರದೊಳ್
ತಾನಾಗೆ ಗೋವ್ಯೂಹದ ಬೞಿವೞಿಯಂ ಮೆಚ್ಚಿ ಬರ್ಪಂದದಿಂದಂ
ಬರುತಿರ್ದರ್
ಮೊತ್ತದಿಂ ವಲ್ಲವರಳಿಕ ಲಲತ್ಪಲ್ಲವರ್ ಲೀಲೆಯಿಂದಂ       ೯೪

ಅಂತು ಗೊಂದಣಿಸಿ ಬಂದು ಪಟ್ಟಿಗಳಂ ಪುಗುವ ಪುಷ್ಟಾಂಗಂಗಳಪ್ಪ ಗೋವೃಂದಂಗಳ ನಾನಂದದಿಂ ನಿಂದು ನೋಡುತ್ತಮಿರ್ದು –

ಕೞ್ತಲೆ ಕವಿಯದ ಮುನ್ನಂ
ಮಾರ್ತಂಡನುಮಸ್ತಗಿರಿಗೆ
ಸಾರದ ಮುನ್ನಂ
ಸಾರ್ತಂದರ್
ಗೋಧೂಳಿಯ
ಪೊೞ್ತಱೊಳಾ
ಪಟ್ಟಿಗಾಗಿ ನೃಪಸಚಿವರ್ಕಳ್    ೯೫

ಯುದ್ದರಸಲಂಪಟಪ್ರಪ
ಟೂದ್ಧತಿವಶವೃಷವಿಷಾಣವಿಷಮಿತಕಷಣೋ

ದ್ಯುದ್ಧತವಹದಗ್ಧಂ
ಕಲು
ಷೋದ್ಧೂಮಂ
ತದ್ಬಹಿಃಪ್ರದೇಶದೊಳೆಸೆಗುಂ  ೯೬

ವಿದ್ರುತಪಶುಪದಹತಿಪತಿ
ತಾದ್ರಿ
ಪ್ರಭಗೊಮಯೋಚ್ಚಯಂ ಸಮದವೃಷೋ
ಪದ್ರವದರಿದ್ರಬಾಲವ

ಟದ್ರುಮಮೆಸೆದಿರ್ದುದದಱ
ಬಾಹಿರದೇಶಂ    ೯೭

ನಿರ್ಮಿಸಿದ ಗೋಕುಲಕ್ಕೆ
ತುರ್ಮುಖನೀಕ್ಷಿಸಲೆ
ಬಂದನೆಂಬೀ ಭ್ರಮೆಯಂ
ನೂರ್ಮಡಿಸಿದಾಘೋಷಬ

ಹಿರ್ಮಹಿಯೊಳ್
ನಟ್ಟ ಗೊಲ್ಲ ದೇವತೆ ಸತತಂ          ೯೮

ನಱುನೆಯ್ಮಾಱಿದ ಸಿರಿಯಂ
ಮೆಱೆಯಲೆ
ಪೊಂಗಳನೆ ಗೋಪಿಯರ್ ಕೆದಱಿದವೋಲ್
ತುಱುವೆಯ
ನೆಗ್ಗಿಲ ಪೂಗಳ್
ತುಱುಪಟ್ಟಿಯ
ಪೊಱಗೆ ತುಱುಗಿ ಕರಮೆಸೆದಿರ್ಕುಂ      ೯೯

ಕೆಲಕೊಱಗಿರ್ದ ಬಲ್ವರವಿಯಂ ಬಲಗೈ ಜಡಿದೊಪ್ಪಿ ತೂಗೆ ನೀ
ಳ್ದಲೆದೆಡೆಗೈಯೊಳಾವರೆಯ
ಪಂದಳಿರ್ಗಳ್ನಡೆಗೇಡುಮಾಡೆ ಸೋಂ
ಕಿಲ
ಕೊಱೆ ತೀವಿ ಕಟ್ಟಿ ಕೊರಲೊಳ್ ಮನೆದೈವದ ಪೊನ್ನೊಳೊಪ್ಪಿದರ್
ಕೆಲಬಲದೂರ್ಗೆ
ಪೋಗಿಯಳೆ ಮಾಱಿ ಮಗುೞ್ತರುತಿರ್ಪ ಗೋಪಿಯರ್     ೧೦೦

ಒಲೆದು ತಳಂಗಳಿಂ ಘೞಿಲೆನಲ್ಮುಡುಪಿಂ ಪೊಡೆದೆತ್ತಿ ಮೇಲುದಂ
ಮೊಲೆಮುಗುಳ್ಗಳ್ತೆಱಂಬೊಳೆಯೆ
ಬಾಯ್ದೆಱೆಯೊಳ್ ರಸನಾಗ್ರಪಲ್ಲವಂ
ಮಲೆದು
ಮರಲ್ದು ಸುತ್ತಿ ಸುಱುಕಲ್ದನಿ ಪೆರ್ಚಿರೆ ಬೆಚ್ಚದಾಗಿ ಸೂ
ೞುಲಿಗೆಲೆಯುತ್ತುಮಿರ್ಪ
ತರುಣೀಜನಮಂ ನೃಪನೊಲ್ದು ನೋಡಿದಂ       ೧೦೧

ಅಂತು ನೋಡಿ –

ಆಕಳ್ಗಳಿಲ್ಲದೆಯುಮೆಸೆ
ವಾಕಳ್ಗಳ
ಸೊರ್ಕು ಸಿಲ್ಕಿ ನಿಂದುದನಿಂದಾ
ನೇಕಗಲ್ವೆನೆನುತೆ
ಮತ್ತಾ
ನೇಕಗವಾಶ್ರಯಮನುರ್ವಿಗಾಶ್ರಯನಾಗಳ್
  ೧೦೨

ಅಂತು ಪೊಕ್ಕಂ; ಅದು ರಾಜಮಂದಿರದಂತೆ ಮಹಿಷೀಪದಾಧಿಷ್ಠಿತಮುಂ ಸುಭಟಭುಜದಂತೆ ವಿಭಾಸಿಧೇನುಸ್ಥಾನಮುಂ, ಸ್ಮರನ ಸಿರಿಯಂತೆ ಸುರಭಿಶೋಭಿತಮುಂ ದರಿದ್ರಕಾಮುಕನಿಕರದಂತೆ ಸುಪ್ರಕಟಿತಾರ್ಣಕೋಪಚಯಮುಂ, ಕತಕಫಲದಂ, ವಿವಿಕ್ತಮಹಾವ್ರಜಮುಂ, ಚಂದ್ರೋದಯದಂತೆ ಹಿಮಧವಲಮಹೋದಧಿಸಮೃದ್ಧಿಯುಂ, ನಾಥವಂಶದಂತೆ ಸುಧಾಮೋದಿತಕ್ರಮಹಿತಮುಂ, ಚೈತ್ರೋತ್ತರಮಾಸದಂತೆ ವೈಶಾಖಶಬ್ದಸಮಭಿಧೇಯಮುಂ, ದಶರಥಪ್ರಸೂತಿಯಂತೆ ಸದಾನವನೀತ ಕಾಂತಮುಂ, ವಿಟವೃತ್ತದಂತೆ ಸರಾಗೋಪನತನಿತಂಬಿನೀಜನಮುಂ, ಸುಪ್ರಯುಕ್ತ ಪ್ರಮಾಣದಂತೆ ವಿಗಳಿತಾನವಸ್ಥಿತಿಯುಂ, ವನವರೂಥದ್ವಿತಯದಂತೆ ಕರಿಪಾಕೀರ್ಣಮುಂ, ಕಾಲಕೃಷ್ಣನಾ ಭಿಕುಲತ್ರಿತಯದಂತೆ ವತ್ಸರಾಜವೃಷಭವಿಭೂಷಿತಮುಂ, ಮಾರ್ತಂಡಮಹಿಪಮುನಿ ತನುಮಹೇಂದ್ರಚತುಷ್ಟಯದಂತೆ ಸುರಭಿರಾಜ್ಯ ಪರಿಮಳ ಪವಿತ್ರಮುಮೆನಿಸಿದುದಂತು ಮಲ್ಲದೆಯುಂ –

ಮದಮಾತಂಗದವೋಲ್ ವಶಾವಿಳಾಸಿತಂ ಸತ್ಕ್ಷತ್ರಿಯಪ್ರಾಜ್ಯರಾ
ಜ್ಯದವೋಲ್
ಸಂಗತಸಂಧಿನೀತಿ ನಿರತಂ ನೀಹಾರರುಕ್ಚಿತ್ತವೃ
ತ್ತದವೊಲ್
ರಾಜಿತರೋಹಿಣೀಪರಿಗತಂ ಶ್ರೀಮದ್ದಯಾಮೂಲಧ
ರ್ಮದವೊಲ್
ವಿಶ್ರುತಸುವ್ರತಾಚರಿತಮೇಂ ಚೆಲ್ವಾಯ್ತೊ ಗವ್ಯಾಶ್ರಯಂ    ೧೦೩

ಆ ಪ್ರಸ್ತಾವದೊಳ್ –

ಕಱುವಂ ಬಿಡು ಕಱೆ ತೊಳೆ ನೀ
ರೆಱೆ
ಕಂದಲನೊಱಸಿ ತೊಳೆ ತಗುಳ್ದೊದೆವಾದಂ
ತುಱಿಸು
ತಳೆಯಿಕ್ಕು ತಡೆಯದೆ
ಮುಱುವಂ
ಸುರಿಯೆಂಬ ಸರಮೆ ತುಱುಗಾರ್ತಿಯರಾ   ೧೦೪

ಆಗಳ್

ಅಡರ್ದು ಮೊಲೆಗೊಡಗಳಡಸಿರೆ
ಮಡಗಳ್
ಪೊಱವಾಱ ಪೊಱೆಗೆ ಕೆಡೆದಿರೆ ಕಱೆಯಲ್
ಪಡೆಯದೆ
ಗಡಿಗೆಯನೊರ್ವಳ್
ಬೆಡಂಗಿ
ತುಱುಗಾರ್ತಿ ಪತಿಯ ಕೈಯೊಳ್ ಕೊಟ್ಟಳ್    ೧೦೫

ಪಿಡಿಗೆ ಕಡುದೊಱೆದ ಮೊಲೆಯಳ
ವಡದೊಡೆ
ಮೊನೆವಿಡಿದು ಪಾಲನೇಱಿಸಿ ನೊರೆಯಂ
ತೊಡೆದು
ತುಱುಗಾರ್ತಿ ಕಱೆದಳ್
ಗಡಿಗೆಯ
ಪಾಲುರ್ವಿ ಘಮುಘಮೆನುತಿರೆ ಪಯಮಂ    ೧೦೬

ಇರಿದೊಂದೆರಡಿರಿಯಿಂ ತೀ
ವಿರೆ
ಕಂದಲ್ ತನ್ನ ಬಿಳಿಯ ಕಣ್ಗಳ ಬೆಳಗಿಂ
ನೊರೆವಾಲಿಂ
ತೀವಿತೆಗೆ
ತ್ತಿರದೆೞ್ದವಳಾತ್ಮಪತಿಯನೇಂ
ನಗಿಸಿದಳೋ  ೧೦೭

ಮಡದಿ ನಿತಂಬಮಂ ಮಡದಿನಾಂತು ಕೆಲಕ್ಕೊಱಗಿರ್ದು ಕಂದಲಂ
ತೊಡೆಯೊಳಿಱುಂಕಿ
ಬಳ್ಕೆ ನಡು ಬೆನ್ನುಡಿ ಪೆರ್ದೊಡೆ ದುಗ್ಧಧಾರೆಯೊ
ಳ್ಗಡಣದಿನಾಡೆ
ಕಣ್ಬೆಳಗು ಬಲ್ಗಡಗಂ ಬಿಗಿದೊತ್ತೆ ಕೈಗಳಿಂ
ಸಿಡಿದು
ಕುಚಾಗ್ರದೊಳ್ ತುಱುಗೆ ಪಾಲ್ವನಿಗಳ್ ಕರೆದಳ್ ಘಟೋಧ್ನಿಯಂ

ಓಹೋ ಹೊಗೞದಿರೆನಿಸಿದು
ವಾ
ಹರದೊಳ್ ಜಲಧಿಘೋಷಮಂ ಧೇನುಪ್ರ
ಷ್ಠೌಹಿದ್ರೋಣದುಘಾಧೃತ

ದೋಹನಘನಧೀರದುಗ್ಧಧಾರಾಧ್ವನಿಗಳ್
      ೧೦೮

ಅಂತು ಶೋಭೆಗೆಱೆವಟ್ಟಾದ ತುಱುವಟ್ಟಿಯಂ ವಿಸ್ಮಯಂಬಟ್ಟು ನೋಡುತ್ತುಂ ನಡು ವಿರುಳಾಗೆ ಮನೋನಯನನೀಯಮಾನಮನೋಹರರೂಪಕನಪ್ಪ ಮಾನವಮದನನಾತ್ಮ ಮಿತ್ರಂ ಬೆರಸು ಸಮುಚಿತಪ್ರದೇಶದೊಳ್ ವಿಶ್ರಮಿಸಿ ಬೆಳಗಪ್ಪ ಜಾವದೊಳ್ –

ಇನಿಸುಂ ಪೊಕ್ಕೂರು ಮಿಕ್ಕೋಸರಿಸಿದ ಚರಣಂ ಶೋಭೆಯಂ ಬೀಱೆ ಕುಂಭ
ಕ್ಕೆ
ನಿತಂಬಂ ಸುತ್ತಿ ನೇಣಂ ತೆಗೆವ ಪುಗುವ ಕೈಗಳ್ ಬೆಡಂಗಾಗೆ ತುಂಗ
ಸ್ತನಯುಗ್ಮಂ
ತೂಗೆ ಸೂತ್ಕಾರದಿನುಸಿರ್ವಿಡುತುಂ ಲೋಳೆವಾಯುರ್ಚೆಯೊರ್ವಳ್
ತೊನೆಯುತ್ತುಂ
ಪಾಡಿ ಪಾಲಂ ಪೊಸೆದಳಸದಳಂ ಪೊಣ್ಮೆ ಘರ್ಮಾಂಬುಜಾಲಂ    ೧೦೯

ಕಡೆಗೋಲ ಪೊಯ್ಲಿನಿಂದಂ
ಸಿಡಿದು
ಶರೀರದೊಳೆ ತುಱುಗೆ ತಕ್ರಕಣಂಗಳ್
ಕಡೆದೇೞ್ವಳೆಸೆದಳಾ
ಪಾ
ಲ್ಗಡಲಿಂ
ಪೊಱಮಟ್ಟ ಪೊಚ್ಚಪೊಸಸಿರಿಯಿರವಿಂ         ೧೧೦

ಕಡೆವಾಕೆಯೆ ಮುತ್ತಿನ
ನ್ನಡಿಯಂತಿರೆ
ತೊಳಗೆ ಘರ್ಮಜಲಬಿಂದುಗಳಂ
ಬಿಡುವ
ಮೊಗಮೆಸೆದುದಾ ಪಾ
ಲ್ಗಡಲೊಳ್
ತಾಂ ಪುಟ್ಟಿದಮೃತಕರಬಿಂಬದವೋಲ್    ೧೧೧

ಅತಿಘನತಕ್ರಾಟಪರಾ
ಹತಿಗಂ
ಮೊಸರೊಡೆಯದೆಂದು ಬೇಸತ್ತವೊಲು
ನ್ನತಕುಂಚೆ
ಬೞಲ್ದು ಸುಯ್ಯು
ತ್ತತಿರಭಸದಿನೊರ್ವಳೊಲೆದು
ಮೊಸರಂ ಪೊಸೆದಳ್   ೧೧೨

ಅನಿಮಿಷತೆ ಪೊರ್ದಿ ದಾನವ
ವಿನಿಯೋಗದೆ
ಕಡೆದು ಪಲವು ಸಿರಿವಡೆದಾ ಸ್ತ್ರೀ
ಜನಮಲೆದುದು
ಸಿರಿಗೆಂದಂ
ದನಿತಾಯಾಸಕ್ಕೆ
ಸಂದ ಸುರದಾನವರಂ     ೧೧೩

ಆ ಪ್ರಸ್ತಾವದೊಳ್ –

ಕಾಯ್ಸತ್ತೆಂ ಕೆಟ್ಟೆನೋವೋ ಬೊಬೊಬೊಬೊಬೊಬೊಬೋ ಕೂಗು ಕೂಕೂಗು ಕೂಸಾಯ್
ಸಾಯ್ಸಾಯೆತ್ತೆತ್ತ
ಪತ್ತೊತ್ತೊರಸಿ ಬೆರಸು ಬಾಯ್ಮಾಡಿದೇನೆಂದು ನಿಂದಾ
ರಯ್ಸುತ್ತೊತ್ತೆತ್ತು
ಬಿಲ್ಲಂ ನಡೆದಿಡು ದಡಿಯಂ ಕೊಳ್ಕೊಳೆಯ್ದೆಯ್ದು ಬೈಯ್ಪೊ
ಯ್ಕೊಯ್ಸೀಳ್ಕೊಳ್ಕುತ್ತು
ಕೊಲ್ಕೊ‌ಲ್ಕೆಡೆ ಕೆಡೆಕೆಡೆಯೆಂಬಬ್ಬರಂ ಪರ್ಬಿತೆತ್ತಂ ೧೧೪

ಅದಂ ಕೇಳ್ದು ಕಾಳೆಯಂ ಸೂಳೈಸುವ ತಿತ್ತಿರಿಯನೊತ್ತುವ ಕೊಳಲನೂದುವ ಕೊಂಬಂ ಪಿಡಿವ ಗೋವರ ಕಳಕಳಕ್ಕೆ ಕೆಳರ್ದು ಬಿಲ್ಲನೇಱಿಸಿ ಪರಿವ ಬಿಲ್ಲಾಳ್ಗಳುಮಂ, ಸುರಗಿಗಿತ್ತು ಪರಿವಸಿರಗಲಿಗಳುಮಂ, ಬಡಿಕೋಲಂ ಪಿಡಿದು ಪರಿವ ಬದಗರುಮಂ, ಬಿಟ್ಟರನಾಂತು ಪರಿವೊಟ್ಟಜೆಕಾಱರುಮಂ, ಇಟ್ಟಿಯನೆತ್ತಿ ಪರಿವ ಜಟ್ಟಿಗರುಮಂ, ಕೀಲ್ಗೊಂಡ ಬಾಳಂ ಬೀಸುತ್ತುಂ ಪರಿವ ಗೋಸುಗಲಿಗಳುಮಂ, ಕಣ್ದೋಱೆ ಮೊಗಮಂ ಸುತ್ತಿ ಕುಂಬಿಕ್ಕುತುಂ ಪರಿವ ಕಡುಗಂದಿಗಲಿಗಳುಮಂ, ಬಿಟ್ಟ ಕಣ್ಣುಂ ಬಿಗಿದ ಮೊಗಮುಂ ಕರ್ಚಿದವುಂಡುಂ ಕಡಿತಲೆಯುಂ ಬೆರಸು ಮೊರೆಯುತ್ತುಂ ಪರಿವಪೆಂಕುಳಿಗಲಿಗಳುಮಂ, ನೆಣಗೊರ್ಬಿ ನಿಂದುರ್ಬಿನಿಂ ಪರಿದಳ್ಳೊವೊಯ್ಯೆ ಪೆಱಗಾಲಪ್ಪ ಪೆರ್ಬಾಗಿಲ್ಗಲಿಗಳುಮಂ, ನಟ್ಟಲಗಂ ಪಿಡಿದುಬಿಟ್ಟ ತಲೆವೆರಸು ತೂಳಂ ಬಂದಂತೆ ಬೊಬ್ಬಿಱೆದು ಪರಿವಬ್ಬರಗಲಿಗಳುಮಂ, ನೆರವಿಯನುರುಳೆವಾಯ್ದಗುರ್ವಿಸಿ ಪರಿವ ಕರ್ಬಸುಗಲಿಗಳುಮಂ, ಡಂಗೆಯಂಗೊಂಡು ಕೆಂಗಲ್ಮಸಗಿ ಪರಿವ ಮರುಳ್ಗಲಿಗಳು ಮನೆತ್ತೆತ್ತವೆಂದೆತ್ತಲುಂ ತಳರದೆ ತಾಳುಗೆ ಪತ್ತಿ ಬತ್ತಿ ಬಾಯ್ಮಾಡಿ ನಾಲಗೆಗಿತ್ತು ಕೊಳ್ವ ನಾಲಗೆಗಲಿಗಳುಮಂ, ತಾಱುಂ ತಟ್ಟುಂ ಪರಿದು ತಾಗಿ ಮೂಗೊಡೆಯೆ ಬಾಗಿವಾಗಿ ಪರಿವ ಬೆಗಡುಗಲಿಗಳುಮಂ, ತೂಂಕಡಿಂ ತಡದಡಿಸುತ್ತೆರ್ದು ತಡವರಿಸಿ ಕಡೆಗೋಲಂ ನೆಗಪಿ ಬತ್ತಲೆ ಪರಿವ ತಲೆವಿಡಿಗಲಿಗಳುಮಂ, ಸಂಭ್ರಮದಿಂ ಸಱ್ಱನುರ್ಚಿ ಸುರಿಗೆಯಂ ಬಿಸುಟ್ಟು ಬಱಿಯೊಱೆಯಂ ಕೀೞತ್ತುಂ ಪರಿವ ಕಿಱುಕುಳರುಮಂ, ಸಡಿಲ್ದ ಪಾಲಿಗೆವಂದಱಂ ಕರ್ಚಿ ಕೈಯಡ್ಡಾಯುಧಮನೀಡಾಡಿ ದಡಿಯಂ ಕೊಂಡು ಪರಿವ ದಡಿಗವೀರರುಮಂ, ಪಚ್ಚಡಮಂ ದುಂಡನಾಗಿ ದಂಡೆಯಂ ಸುತ್ತಿ ಸೂನಗೆಯನೆತ್ತಿ ಪರಿವ ತೆತ್ತಿಗವೀರರುಮಂ, ಬಂಕಿಯಂ ತೂಗಿ ತೇಂಕುತ್ತುಂ ಪರಿವ ವೈರಿವೀರರುಮಂ, ಮುದ್ಗರಮಂ ತಿರಿಪ ಪರಿವ ಮುದ್ಗರಿಗಲಿಗಳುಮಂ, ಒಂದೆಸೆಯೊಳಬ್ಬರಮಾದೊಡೊಂದೆಸೆಗೆ ಪರಿವ ಒಂದವಂದಿಗರುಮಂ, ಅಬ್ಬರಕ್ಕೆ ಬಸಿಱುಬ್ಬರಿಸೆ ಬಿಱೆಯಂ ಕೊಂಡು ಬಿಱುವರಿದ ಬೀಱುಗರುಮಂ, ವಟ್ಟಿಱಿದು ನಾಂದು ಪೊಟ್ಟಯಿಸಿದಡ್ಡಳಮುಂ ದಂಡೆಯೊಳ್ಕೋದು ಕೈದುದಂ ಕಾಣದೊನಕೆಯನೆತ್ತಿ ಪರಿವರಿಗಳುಮಂ, ಪೊಱಮಡುವ ಸಡಗರದಿಂ ಸೂರ್ತಾಗೆ ಸುಲಿದ ನೊಸೆಲೊಳ್ ನೆಲಸೆಕಮನಿಕ್ಕಿ ಪೆಂಡಿರ್ ಪಿಡಿಯೆ ಪಿಡಿಯೆ ಪರಿವೊಱಂಟರುಮಂ, ಕೈಯಕೈದುವನೆಱೆದು ಕಳೆದುಕೊಂಡ ಪೆಂಡತಿಗೆ ಕನಲ್ದು ಕೊರಡನೆತ್ತಿ ಪರಿವ ಕೊರಡಿಗರುಮಂ, ಪಾಱಿಕ್ಕಿ ಪರಿವಲ್ಲಿ ಬಾಲಗಚ್ಚೆ ಕಾಲಂ ತೊಡರೆ ಕೆಡೆದೊಡೆದ ಮೊಣಕಾಲೊಳುಪ್ಪಂ ಪತ್ತಿಸಿ ಪರಿವ ಪಾಱಿಗಳುಮಂ, ನಿದ್ದೆಗಣ್ಣೊಳೆರ್ದು ಗೂಗೆದಲೆಯನುದ್ದಂ ನೆಗಪಿ ಪರಿವ ಕದ್ದಲಿಗಳುಮಂ, ಎಡಪಿಯೊಡೆದುಂಗುಟದೊಳಂಚೆಯಂ ಕಟ್ಟಿಕೂಂಟುತ್ತಂ ಪರಿವ ಕಿಱುವಂಟರುಮಂ, ತಲೆಕೆಳಗಾಗಿ ಕಟ್ಟಿದಲಗೊಱೆಯನುರ್ಚಿಬೀೞೆ ಪಿಂಮಡಿಯುಂ ಪಱೆಯೆ ಪೆಱಗಂ ನೋಡುತ್ತುಂ ಪರಿವ ಪೆರ್ಬಂಟುಮಂ, ಬಱುಗಯ್ಯಿಂ ಪರಿವ ಪತಿಗೆ ಕೈದುವಂ ಕೊಂಡುಯ್ದು ಕುಡುವಯ್ದೆಯರುಮಂ, ಪಾದರಿಗಂಗಿದಿರ್ವರಿದು ಘಳಿಲನೆ ಪಾಯ್ದು ಪೆರ್ಮೊಲೆಯಿಂ ಪೊಯ್ದು ಬೆರಸಿ ಬಿೞ್ದು ಪೊರಳುತ್ತಿರ್ಪ ಪಾಣ್ಬೆಯರುಮಂ, ಪತಿಗಪಾಯಮುಮುಪಪತಿಗೆ ಶುಭೋದಯಮುಮಕ್ಕೆಂದು ಮನದೊಳೆ ಮನೆದೈವಕ್ಕೆ ಪರಸಿಕೊಳ್ವ ಪುಂಶ್ಚಲಿಯರುಮಂ, ಪಸುಗೂಸನಮರ್ಚಿಕೊಂಡೊಳಗಣ್ಗಂ ಪೊರಗಣ್ಗಂ ಬರ್ಪ ಬಾಳಕಿಯರುಮುಂ, ಗುಬ್ಬಿಯಂತೆ ಬಾಯಂ ಬಿಡುವ ಗರ್ಭಿಣಿಯರುಮಂ, ಬಱುಗಣ್ಣ ನೀರನಿಕ್ಕುವ ಬಂಜೆಯರುಮಂ, ಬಸಿಱಂ ಪೊಸೆದುಕೊಳ್ವ ಬದ್ದೆಯರುಮಂ, ಮುಡುಡಂ ಮೋದಿಕೊಳ್ವ ಮುದುಗಣ್ಗಳುಮಂ, ಸೊಸೆಗೆ ಪಲ್ಲಂ ತಿನುತ್ತೆ ನೆತ್ತಿಯಂ ಪೊಯ್ದುಕೊಳ್ವತ್ತೆಯರುಮಂ, ಮಮ್ಮೞಿಗೊಳ್ವ ಪೆರ್ಮಕ್ಕಳುಮಂ, ಗೋೞುಂಡೆಗೊಳ್ವ ಗೋವರ್ಕಳುಮಂ, ಚೀಱಿಕೊಳ್ವ ಕೊಡಗೂಸು ಗಳುಮಂ, ಬೆಗಡುಗೊಳ್ವ ಬಾಳಕರುಮಂ, ಭಯಂಗೊಳ್ವ ಬೆಳ್ಳರುಮಂ, ಉಬ್ಬರಿಸುವ ಕುರುಡರುಮಂ, ಪೆಳವಳಿಸುವ ಕಿವುಡರುಮಂ ಕಂಡು ಪೊಲಗೆಱೆಯನಾನೆ ಪೊಕ್ಕಂತೆಯುಂ, ಡೊಂಬರ ಬೀಡಿನೊಳಬ್ಬರಮಾದಂತೆಯುಂ, ಬೆಳ್ಳಿಲಿಯ ಬಿಲದೊಳ್ ನೀರ್ ಪೊಕ್ಕಂತೆಯುಂ, ತುಱುಪಟ್ಟಿಯೆಲ್ಲಂ ಕಿೞ್ತಲೆಯುಂ ಕಿೞಂದಲೆಮುಂ ಕಲ್ಲಿಯುಂ ಕವಿಯುಮಾದಪುದಿದೇನೆಂದು ಸಂಭ್ರಮಿಸಿ –

ಪವಿಘೋಷಕ್ಕುಜ್ಜುಗಂ ಸೆಜ್ಜರದಿನಮರನಾಗೇಂದ್ರನೆೞ್ವಂತೆವೋಲ
ರ್ಣವಕಲ್ಲೋಲಾರವಕ್ಕುತ್ಫಣಿತಫಣಿಪತಿಸ್ಥೂಳತಳ್ಪಾಗ್ರದಿಂ
ಕೇ
ಶವನೇೞ್ವಂತಭ್ರನಾದಕ್ಕಚಳಮಣಿಶಿಳಾಪಟ್ಟದಿಂ
ಸಿಂಹಮೇೞ್ವಂ
ತೆವೊಲೆೞ್ದಂ
ಗೋಪಕೋಳಾಹಳಕಲರ್ವಸೆಯಿಂ ಭಾರತೀಚಿತ್ತಚೋರಂ   ೧೧೫

ತಾಱವಱಾದ ಕೇಶಮನಗುರ್ಗೊನೆಯಿಂ ತೆಗೆದೊತ್ತಿ ಪಾಲೆಯಂ
ಮಿಱಿದ
ಸುತ್ತಿನೋಲೆಗಳನೋವುತುಮಾಯತಮಾಗೆ ತೊಟ್ಟು ಮು
ಯ್ವೇಱಿರೆ
ಕಟ್ಟಿ ಕೈಪೊಡೆಯನಾಗಡೆ ಜೀವಿಗೆ ಜೀವಮಿವವೋ
ಲೇಱಿಸಿ
ಬಿಲ್ಲನಾಜಿವಿಯಂ ಜಯವೊಯ್ದನುದಾತ್ತರಾಘವಂ       ೧೧೬

ಇದು ವಿದಿತವಿವಿಧಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಲೋಚ್ಚಲಿತನಖಮಯೂಖಮಂದಾಕಿನೀಮಜ್ಜ ನಾಸಕ್ತ ಸಂತತೋತ್ಸಿಕ್ತ ದಾನಾಮೋದಮುದಿತಬುಧಮಧುಕರಪ್ರಕರ ಲೀಲಾವತಿಯೊಳ್ ಶರದ್ವರ್ಣನಂ

ಪಂಚಮಾಶ್ವಾಸಂ