ಮತ್ತಮಿನಿಸಱಿಂ –

ನಿಜಕಿರಣಧಾತುನಿರ್ಝರ
ರಜೋನ್ವಿತಂ
ನೀಲಲೋಹಿತಶ್ರೀನಿಳಯಂ
ರಜನಿಕರರಜತಗಿರಿನಿಜ

ರಜಮೊಗೆದುದು
ಕಾಲದಶಮುಖೇಭೋತ್ಕ್ಷಿಪ್ತಂ          ೯೧

ರವಿರುಚಿ ನೂಂಕೆ ಬಿೞ್ದಪರವಾರ್ಧಿಯೊಳಾೞದೆ ಮೂಡಿ ಮೂಡಣ
ರ್ಣವತಟದಲ್ಲಿ
ತೇಂಕುತಿರೆ ತಾರಗೆಗಳ್ ಕವಿತಂದು ತೞ್ಕೆಗೊಂ
ಡವಿರಳರಶ್ಮಿ
ರಜ್ಜುಗಳೊಳಾೞಿಸೆ ಮತ್ತೆ ನಭಕ್ಕೆ ಸಂಧಿಗೊ
ಳ್ವವೊಲೊಗೆತಂದನುದ್ಗತವಿಕೀರ್ಣಕರಪ್ರಕರಂ
ಸುಧಾಕರಂ      ೯೨

ಅಂತು ವಿರಹಿಜನಕ್ಕೆ ವಿಳಯಾನಳನಂತಿರೊಗೆತಂದ ಮೃಗಧರಮಯೂಖಮಾಲೆಯಂ ಮದನಾಗ್ನಿಲೆಗೆತ್ತು ನೋಡಲಂಜಿ ಕಣ್ ಕೋರೈಸಿದಂತೆ ಕಾಂತಾಚಿಂತಾಬ್ಧಿ ಮಗ್ನ ಚಿತ್ತನರಸಂ ನಿದ್ರಾನಿಮೀಲಿತನಯನನಪ್ಪುದುಂ ಮಕರಂದಂ ನೆಲಕಿೞಿಪಿದ ಮಕರಂದದಂತೆ ಕೆಲದ ಪಲ್ಲವಪ್ರಸರದೊಳ್ ಪಟ್ಟಿರ್ಪುದುಮಾಗಳಾ ಬಾಳಚೂತದ ಸೆಳೆಗೊಂಬಿನ ತೊಳಪ ತಳಿರ ತೂಗುಂದೊಟ್ಟಿಲೊಳ್ ವಿನೋದವಶದಿಂ ವಸಿಯಿಸಿರ್ಪ ವಸಂತದೋಹಳೆಯೆಂಬ ಶಾರಿಕೆ ನಿಜಚಿತ್ತಪ್ರಿಯನಪ್ಪ ಚೂತಪ್ರಿಯನೆಂಬ ಶುಕಂ ಪೊೞ್ತು ಪೋಗೆಯುಂ ಬಾರದಿರೆ –

ಗಿಡುಗಂ ಕೊಂದುದೊ ಬೇಡರಿಟ್ಟ ಬಲೆಯೊಳ್ ಮೇಣ್ ಬಿೞ್ದನೋ ಪಕ್ಕವೇ
ನುಡಿದತ್ತೋ
ಪಿಡಿದನ್ಯಶಾರಿಕೆ ರತವ್ಯಾಪಾರದೊಳ್ ಪೊಯ್ದಳೋ
ತಡೆದಂ
ಮತ್ಪ್ರಿಯನೆಂದು ನೊಂದು ತಳಿರ್ಗಳ್ ನಾಂಬನ್ನೆಗಂ ದುಃಖದಿಂ
ಗಡ
ಕೀರಪ್ರಿಯಕಾಂತೆ ಸುಯ್ದು ಸುರಿದಳ್ ಭೋರೆಂದು ಬಾಷ್ಪಾಂಬುವಂ  ೯೩

ಗೂಡಿನ ಸುತ್ತಲುಂ ಸುೞಿಗುಮಾಲಿಸುಗುಂ ಸಲೆ ಬರ್ಪ ಬಟ್ಟೆಯಂ
ನೋಡುಗುಮೞ್ಗುಮೇೞ್ಗುಮೊಳಗಂ
ಪುಗುಗುಂ ತಳಿರೊಳ್ ಪೊರಳ್ಗುಮಿ
ರ್ಪೋಡಿರೆ
ಬಿಟ್ಟ ಚಂಚು ಬಿಸುಸುಯ್ದೆಳಮಾವಿನ ಪಲ್ಲವಂಗಳಂ
ಬಾಡಿಸುಗುಂ
ಮನಂಮಱುಗಿ ಶಾರಿಕೆ ಬಾರದೊಡಾತ್ಮವಲ್ಲಭಂ  ೯೪

ಅಂತು ಮಮ್ಮಲ ಮಱುಗುತಿರ್ಪನ್ನೆಗಂ –

ಕೊರಲೊಳ್ ಕಲ್ಹಾರಮಿಂಬಾಗಿರೆ ಕುಸುಮರಜೋರಂಜಿತಂ ಚಂಚು ಚೆಲ್ವಾ
ಗಿರೆ
ಬೇಗಂ ಕೊಂಡು ದಾಳಿಂಬದ ಪೊಸಗುಟುಕಂ ಶಾರಿಕಾಕಾಂತೆಗಾಗಳ್
ಹರಣಂ
ಬರ್ಪಂತೆ ಬಂದತ್ತಪಗತಸಹಜಾಕಾರಮಾ ರಾಜಕೀರಂ ೯೫

ಪಿರಿದುಂ ಪಚ್ಚೆಲೆದೊಂಗಲಂ ಪುಡುಕಿ ಸುಯ್ಯುತ್ತಿರ್ಕುಮೋ ಮುಗ್ಧೆ ಮೈ
ಗರೆದಾನಿರ್ದೆನೆಗೆತ್ತನಂಗಶಿಖಿಯಿಂ
ಪಕ್ಷಾಳಿಗಳ್ ಪೊತ್ತೆ ಸೀ
ಕರಿವೋರ್ಗಿರ್ಕುಮೊ
ಗೂಡಿನಿನ್ನೆಲಕೆ ಮೇಣ್ಬಿೞ್ದಿರ್ಕುಮೋ ಬಟ್ಟೆಯಂ
ಭರದಿಂ
ನೋಡುತುಮಿರ್ಕುಮೋ ಮಱುಗಿ ಮತ್ಪ್ರಾಣೇಶೆ ಮಿಕ್ಕಾಸೆಯಿಂ   ೯೬

ಎನುತುಂ ಬಂದಾ ಶುಕಂ ಸೋಂಕಲೊಡನೆ –

ಶಾರಿಕೆ ಕನಲ್ದು ನೋಡಿ
ಕೋರಂಗೆತ್ತಗಿದು
ಚಂಚುವಿಂ ನೂಂಕುವುದುಂ
ಕೀರಂ
ಕಾಲ್ವಿಡಿದೊಯ್ಕನೆ
ಸಾರಿ
ಸರಂದೋಱಿ ಚಲ್ಲವಾಡಿತ್ತಾಗಳ್       ೯೭

ಅಱಿದು ಶುಕಪ್ರಿಯಕಾಮಿನಿ
ಗಱಿ
ಗದಗದ ನಡುಗೆ ಪಿಡಿಗೆ ಪೊಣ್ಮಿದ ಮುನಿಸಿಂ
ಪೆಱಗುಗುಡೆ
ಕೀರಕಾಮುಕ
ನೆಱಗಿದನಿನಿಯಳ
ಪದಕ್ಕೆ ಸಂಭ್ರಮದಿಂದಂ   ೯೮

ಎಱಗಲೊಡನೆ –

ತನು ತನಿಗೆತ್ತೆ ಚಂಚು ಮಿಡುಕುತ್ತಿರೆ ಪೊತ್ತೆಳಗೊಂಬನುಳ್ಳುಗುರ್
ಸೊನೆವಿಡೆ
ತಾಗಿ ಸೂಗುರಿಸೆ ಕಂಠದ ತುಪ್ಪುೞಪಾಂಗಕಾಂತಿ ಕೆಂ
ಪಿನ
ಪಸರಕ್ಕೆ ಪಕ್ಕುಗುಡೆ ಪಕ್ಕದಿನೊತ್ತುತೆ ಮೀಱಿ ಪಾಯ್ವ
ಣ್ಬನಿಗಳೆ
ನಾಗಕೇಸರಿಗೆ ಸಾರಿಗೆ ಸಾರಿಗೆಯಾಯ್ತು ಕೋಪದಿಂ   ೯೯

ಪದಪಿನ್ನೇತರ್ಕೆ ಕಾಲ್ನೊಂದಪುದು ತೊಲಗಿದೇಂ ಬಲ್ಮೆಯೇ ಬಂದು ಸೌಭಾ
ಗ್ಯದ
ಕಂಪಂ ಬೀಱಲೇಕಾವಱಿಯವೆ ಪೊಸತೇ ನಿನ್ನ ನಾಯಾಟವಿಂ ಸಾ
ಲ್ವುದು
ಸಾಲ್ಗಂತಿರ್ದುದಕ್ಕುಂ ಶುಕಸತಿ ಪೞಿಗುಂ ಪೋಗು ನಿನ್ನಾಕೆ ಪೇೞ್ ನಿ
ನ್ನದು
ತಪ್ಪೇಂ ಸೂರುಳುಂಟಾಂ ಮುಳಿದೊಡೆ ಬಿಡು ನೀಂ ಬೇಡ ಮಿಥ್ಯಾಪ್ರಮಾಣಂ          ೧೦೦

ಎಂದಿವು ಮೊದಲಾಗಿ ನೊಂದು ನುಡಿದ ಶಾರಿಕೆಯ ಈರ್ಷ್ಯಾಳಾಪಂಗಳನರಸನಾಲಿಸಿ ಮಕರಂದನಂ ಮೆಲ್ಲನೆತ್ತಿ ಕಿವಿಯಿತ್ತು ಕೇಳುತ್ತುಮಿರ್ಪುದುಂ ಶುಕನಿಂತೆಂದಂ –

ಕಾರಣಮಿಂ ಪೆಱತುಳ್ಳೊಡೆ
ಶಾರಿಕೆ
ನಿನ್ನಾಣೆಯೆನ್ನನಾಳ್ದತಿಲಲಿತಾ
ಕಾರೆಗೆ
ವಾಸವದತ್ತೆಗೆ
ಮಾನಿನೞಲಾಗೆ
ತಳರಲಱಿಯದೆ ತಡೆದೆಂ   ೧೦೧

ಶಿಶಿರೋಪಚಾರಮಾದೊಡೆ
ಕುಶೇಶಯಾಶಯದೊಳಾಯ್ದು
ಕೊಯ್ದುಂ ಕೊರಲೊಳ್
ಶಶಿಮುಖಿಯರ್
ಸುತ್ತಿದೊಡಾಂ
ವಿಶದಸರೋರುಹದ
ಪೂವನಡಕುತ್ತಿರ್ದೆಂ     ೧೦೨

ತರುಣಿ ಪರಿಪರಿದು ಕುಸುಮಾಂ
ಕುರಂಗಳಂ
ತಿಱಿದು ಮುಱಿದು ತರುತಿರ್ದೆಂ
ಣ್ಣೆರಲಱಸಿಲ್ಗಱಿಯಂ
ನಾಂ
ಹರಿಚಂದನರಸಬೊಳರ್ದಿ
ಬೀಸುತ್ತಿರ್ದೆಂ     ೧೦೩

ಎಂದು ಕಾಲ ಮೇಳೆ ಕವಿದು ಕೆಡೆದಂದದೊಳ್ ಕಡುಮುಳಿಸೆಂಬ ಕೆಸಱಂ ಮೆಲ್ನುಡಿಗಳೆಂಬ ತಿಳಿನೀರ್ಗಳಿಂ ತೊಳೆದು ಕಳೆದ ಕಾದಲನ ಪಡೆದಲೆಯ ತುಪ್ಪುೞಂ ವಸಂತದೋಹಳೆ ಚಂಚುಪುಟದಿಂ ಪಿಡಿದು ನೆಗಪುವುದುಮನಂತರಂ –

ಗಱಿಯೆಲ್ಲಂ ಪುಳಕಂಗಳಾಗೆ ಕಡುಪಿಂ ಪಾಯ್ದಪ್ಪಿ ನುಣ್ದುಪ್ಪುೞಂ
ಪಱಿದೀಡಾಡಿ
ಬಹುಪ್ರಕಾರದಳಸಂ ತೋಱುತ್ತೆ ತುಂಡಾಗ್ರದಿಂ
ದಿಱಿದೊಂದೊಂದಱ
ಗಲ್ಲಮಂ ಪದಕೆ ಪತ್ತುತ್ತಿರ್ಪ ಬಾಯಿತ್ತು ಮೈ
ಮಱೆದೇಂ
ಕಾಯ್ದು ಕಡಂಗಿ ಕೀರಮಿಥುನಂ ಕೂಡಿತ್ತೊ ಕಾದಲ್ಮೆಯಿಂ      ೧೦೪

ಅಂತು ಕೂಡಿದಿಂಬೞಿಯಮಾ ಕೊಳದ ಕುಮುದದ ಕೋೞ್ಗಂಪಿನೊಳೞ್ದು ತೋರದೆಱೆಯ ತುಱುಂಗಲೊಳ್ ತೆಱಂದಿಱಿದು ಪೊಱಮಟ್ಟು ತಳಾಱನಂತೆ ತೊೞಲ್ದು ತಳಿರ ಬಿಜ್ಜಣಿಗೆಯೊಳ್ ತಂದ ತುಂತುರ್ವನಿಗಳಂ ತಳಿದು ಬೀಸುವೆಲರಿಂ ಸುರತಪರಿಶ್ರಮಂ ಪೋಗೆ ತದನಂತರಂ ವಸಂತದೋಹಳೆಯಿಂದತೆಂದಳ್ –

ವಾಸವದತ್ತೆಯಾರ ಮಗಳೇಂ ಕಡುಚೆಲ್ವೆಯೆ ಚಲ್ಲಕಾರ್ತಿಯೇ
ಲೇಸಱಿದಾಕೆ
ಮೆಚ್ಚುವಳೆ ಮೆಚ್ಚಿದಳೀಗಳದಾವನಂ ಮನ
ಕ್ಕಾಸಱನಂಗಪಾತಕನಿನಾಯ್ತು
ಗಡಾದರದಿಂ ವಿದಗ್ಧವಾ
ಣೀಸಖಿ
ಕೇಳಲೞ್ತಿಯೆನಗಾದುದು ನಲ್ಲನೆ ಪೇೞಿದೆಲ್ಲಮಂ        ೧೦೫

ಎಂದಾ ಮಹಾಭ್ಯಾಗತನ ಭಾಗ್ಯದೇವತೆಯಂತಾಗ್ರಹಮಂ ಬಿಸುಡದೆ ಬೆಸಗೊಂಡ ತನ್ನ ಮನಃಪ್ರಿಯೆಗೆ ಚೂತಪ್ರಿಯನೆಂಬ ಚತುರ ಶುಕಂ ಪೇೞಲ್ ತೊಡಗಿತ್ತದೆಂತೆನೆ –

ಕುಸುಮಾಕರದಾಕರಮೆನೆ
ಕುಸುಮಾಯುಧನೆಂದುಮಿರ್ಪ
ನೆಲೆಯೆನೆ ಜಗದೊಳ್
ಕುಸುಮಸುಕುಮಾರಿಯರ
ಸೌ
ಖ್ಯಸದನಮೆನೆ
ಮಿಸುಪುದಸದಳಂ ಕುಸುಮಪುರಂ     ೧೦೬

ಅದು ನಿಚ್ಚಂ ಮೈಮೆಯಿಂ ಮಚ್ಚರಿಸಿ ಮಣಿಮಹೀಪಾದದಿಂದಿಕ್ಕಿ ಮೆಟ್ಟಿ
ರ್ದುದು
ತಾನೆಂಬಂದದಿಂ ಭೋಗವತಿಯೆಸಕಮಂ ನೀಳಗೇಹ ಪ್ರಭಾ ಪುಂ
ಜದಪರ್ವಿಂ
ಕೊಯ್ದು ದೆಂಬಂತಳಕೆಯಳಕಮಂ ಸೌಧಕೇತೂರ್ಧ್ವಹಸ್ತಾ
ಗ್ರದಿನಾಕಾಶಕ್ಕೆ
ಕಿೞ್ತೆತ್ತಿದುದಮರಪುರಶ್ರೀಯನೆಂಬಂತೆ ತೋರ್ಕುಂ       ೧೦೭

ಸಿರಿಯಿಂ ಸೌಖ್ಯಂಗಳಿಂದುರ್ಕುವ ಸುರಪುರಮಂ ಲೀಲೆಯಿಂ ಗೆಲ್ದು ಮಿಕ್ಕಾ
ಪುರರಾಜಂ
ಬೀರಮಂ ಪಾಡಿಸುವವೊಲೆಸೆಗುಂ ರಮ್ಯಗಾಣಿ‌‌ಕ್ಯಗೇಹಾಂ
ತರದೊಳ್
ಸಂಗೀತನಾದಂ ಪ್ರಮದವನದೊಳುದ್ಭ್ರಂಗನಾದಂ ಗೃಹಾಬ್ಜಾ
ಕರದೊಳ್
ಭೃಂಗೀನಿನಾದಂ ನೃಪತಿನಿಲಯದೊಳ್ ವಲ್ಲಕೀಸ್ನಿಗ್ಧನಾದಂ   ೧೦೮

ಯುವಭೃಂಗೋನ್ಮದಕಾರಿ ಕೈರವವನಂ ಲಕ್ಷ್ಮೀಮನೋರಂಜಿ ಕಂ
ಜವನಂ
ಕುಟ್ಮಳಕಂಪಿ ಚಂಪಕವನಂ ಸ್ನಿಗ್ಧದ್ರವಶ್ಚ್ಯೋತಿ ಚೂ
ತವನಂ
ಗಂಧನಿಕೇತಕೇತಕಿವನಂ ಮಲ್ಲೀಲತಾಶಾಲಿ ಶಾ
ಲಿವನಂ
ತಳ್ತಿಱಿದೊಪ್ಪೆ ತನ್ನಗರಮಾಯ್ತುರ್ವೀವಧೂಯೌವನಂ  ೧೦೯

ಸುರಯಿಯ ಸೋನೆ ಸಂಪಗೆಯ ಸೊೞ್ವೞೆ ಮಲ್ಲಿಗೆವೂವಿನಚ್ಚಬೆ
ಳ್ಸರಿ
ಸುರಹೊನ್ನೆಯೊಂದೆವನಿ ಮೊಲ್ಲೆಯ ಬಲ್ಮುಗುಳಾಲಿ ಕೊಳ್ವ ಪಾ
ದರಿಯರಲೇಱು
ಕೇಸರದ ತಂದಲಗುಂದಲೆಯಾಗೆ ಸುತ್ತಲುಂ
ಸರಿಯೆ
ಸಡಿಲ್ಚಿ ಬೀಸುವುದು ತೆಂಕಣ ಗಾಳಿವನಾಭ್ರಲೇಖೆಯಂ   ೧೧೦

ಸುರಯಿಯ ಕೇಸರಂಬೊರೆದು ಕಾಂಚನಕಂಜಪರಾಗಪುಂದೊಳ್
ಬೆರಸಿ
ತೆರಳ್ಚಿ ಸಂಪಗೆಯ ಪೂವುಡಿಯಂ ಪೊಸಪೊನ್ನಬಣ್ಣಮಾ
ಗಿರಿ
ಪರಿದಲ್ಲಿ ಕಲ್ಲ ಮರದರ್ಬಿಯ ಬಣ್ಣವನೆತ್ತಿ ಸುತ್ತಿಸಿ
ದ್ಧರಸದ
ಪೂರದಂತೆ ಪರಿಗುಂ ಪೆರಿಕಾಲ್ವೊನಲೆಲ್ಲಿ ನೋೞ್ಪೊಡಂ         ೧೧೧

ತುಱುಗಿರೆ ಪೊತ್ತು ಬಂದು ನನೆಯಂ ಬೆಮರ್ವಂತೆ ಬೞಲ್ದು ತುಂತುಱಂ
ಕಱೆವೆಳಮಾವುಗಳ್
ಫಲಭರಕ್ಕೆ ಬೞಲ್ದಪುವೆಂಬಿನಂ ನೆಲ
ಕ್ಕೊಱಗಿದೆ
ತೆಂಗುಗಳ್ ಬಿರಯಿಯೆಂಬೆಣೆವಕ್ಕಿಗಳಂ ನಿರಂತರಂ
ಮಱುಗಿಸುವಂತು
ಕೞ್ತಲೆಯನೀವೆಲೆವಳ್ಳಿಗಳೆತ್ತ ನೋೞ್ಪೊಡಂ  ೧೧೨

ಬಿರಯಿಯ ಪಾಪದೃಷ್ಟಿಗಳ ತಾಗಿದುವೆಂದಗಿದಂತೆ ಚೂತವ
ಲ್ಲರಿ
ಸೊನೆಯಿಂದೆ ತೂಪಿಱಿದು ಪಾಯ್ದಳಿಯಿಂ ಸೊಡರ್ವಕ್ಕನಿಟ್ಟುಮೆ
ಯ್ದಿರದೆಳಗೊಂಬುದೋಳ
ತಳಿರ್ದೀವಿಗೆಯಿಂದೆ ನಿವಾಳಿಸುತ್ತದೇಂ
ಪೊರೆವುದೊ
ಸೋರ್ವ ಪಣ್ಣ ರಸದಿಂ ಸಹಕಾರ ಕುಮಾರಕರ್ಕಳಂ         ೧೧೩

ಅವಧರಿಸಂಗಜನ್ಮ ತನಿಗರ್ಬಿನ ಸೋರ್ವರಸಪ್ರವಾಹದಿಂ
ದವೆ
ನನೆವೊಯ್ದು ಕಾಯ್ತುಱುಗಿ ಪಣ್ತುದು ಮಾಮರನೆಂದು ಬಂದು ಬಿ
ನ್ನವಿಸೆ
ವಸಂತಕಂ ಪದೆದು ಬಾಪುಪಕಾರಿಯೆನುತ್ತೆ ಚಿತ್ತಸಂ
ಭವನಲರ್ವಿಲ್ಲನಂತಿರಿಸಿ
ಕರ್ಬಿನ ಬಿಲ್ವಿಡಿವಂ ಬನಂಗಳೊಳ್     ೧೧೪

ಅಲ್ಲಿ ಲತೆವನೆಯಲ್ಲಿ ಮಲ್ಲಿಕಾವನದಲ್ಲಿ
ತಳಿರ
ಕಾವಣದಲ್ಲಿ ಕುಳಿರ್ವ ತಿಳಿಗೊಳದಲ್ಲಿ
ಸಂಪಗೆಯ
ಜೊಂಪದೊಳ್ ಕಂಪಿಸುವ ಜಂಪದೊಳ್
ನನೆಗೊಂಚಲಂ
ಮುಱಿದು ವನದಲರ್ಗಳಂ ತಿಱಿದು
ಮಧುವಿಂಗೆ
ಬೊಬ್ಬಿಟ್ಟು ಮಧುರತೆಗೆ ಮುಂಬಿಟ್ಟು
ತನಿಗಂಪನಣ್ಪಿಕ್ಕಿ
ವನಜದರಲಂ ಸೆಕ್ಕಿ
ಕುಸುಮರಜಮಂ
ತಳಿದು ಮುಸುರ್ವ ತುಂಬಿಗೆ ಮುಳಿದು
ಕೆಂದಳಿರ್ಗೆ
ಕಣ್ಣಿಟ್ಟು ಕರ್ಣಪೂರಮನಿಟ್ಟು
ಕುಂದಕುಟ್ಮಳಮೌಕ್ತಿಕಾಭರಣಮಂ
ತೊಟ್ಟು
ಮಾಮಿಡಿಗಳಂ
ತೆಗೆದು ಪಚ್ಚೆಸಾರಮನಿಕ್ಕಿ
ಪೂಮುಡಿಗಳೊಳ್
ತಳಿರ ಲಂಬಣಮನೆೞಲಿಕ್ಕಿ
ತೋರಮಲ್ಲಿಗೆ
ಮುಗುಳ ಮೂಕುತಿಯನೊಸೆದಿಕ್ಕಿ
ಹಾರಮಂ
ಸುರಯಿಯರಲಿಂ ಸಮೆದು ಮುಱಿದಿಕ್ಕಿ
ಸಿರಿಸದಲರ್ಗೇಸರಮನಲೆವ
ಕುರುಳೊಳ್ಸೂಸಿ
ಸುರಿವ
ಮಕರಂದಮಂ ಮುದ್ದುಮೊಗದೊಳ್ಪೂಸಿ
ಕೇದಗೆಯ
ಕರ್ಣಪತ್ರಂ ಪೊಳೆಯೆ ಪಾಲೆಯೊಳ್
ಪಾದರಿಯ
ಪಿಂಡುಗಂಕಣಮಮರೆ ಲೀಲೆಯೊಳ್
ಬಗೆಗೊಳಿಸೆ
ಸಂಪಗೆಯ ನೂಪುರಂ ಚರಣಮಂ
ನಗುವಂತೆ
ನನೆದೊಡವು ಮುತ್ತಿನಾಭರಣಮಂ
ನಸು
ಬಿರಿಯೆ ಬಾಯ ಕಂಪಿಂ ಬೆರಸಿದೆಲರಿಂದೆ
ಪಸದನಂಗೊಂಡೆಸೆಯೆ
ಮನಮೆಚ್ಚಿದಲರಿಂದೆ
ಕೈಯ
ಕೆಂಪಂ ತಳಿರ್ಗೆ ಮೈಯ ಪಸುರಂ ಬಿದಿರ್ಗೆ
ಲಪನಗಂಧಮನಳಿಗೆ
ಚಪಲತೆಯನರಗಿಳಿಗೆ
ಸೋಗೆಗಾಟಮನಿತ್ತು
ಕೋಗಿಲೆಗೆ ಸರವಿತ್ತು
ರತಿಯ
ಸೊಬಗಂ ಗೆಲ್ದು ಲತೆಯನಂದದೆ ನೇಲ್ದು
ಕಾಣ್ಬ
ಜಸಮೆನೆ ಮಿಸುಗೆ ಕಣ್ಬೆಳಗು ದೆಸೆದೆಸೆಗೆ
ನಗೆಮೊಗದ
ಪದಗೊರಲ ನಸುನಗೆಯ ಪೊಸಬಗೆಯ
ಗುರುಕಟಿಯ
ಸವಿದುಟಿಯ ಬಿಡುಮುಡಿಯ ಪೊಳೆವಡಿಯ
ಸುಳಿಗುರುಳ
ನಳಿತೋಳ ಚಳತರಳಲೋಚನದ
ಮೃಗಮದದ
ಮಗಮಗಿಪ ನಸುಸುಯ್ಯ ಮೇಲ್ಮಯ್ಯ
ಛವಿಮಗುಳ್ವ
ಪದಪುಗುಳ್ವ ನುಣ್ಬೊಗರ ಸೆಳ್ಳುಗುರ
ಕಳರವದ
ಸಲೆತವದ ಮುದಮೊಸೆವ ಮದಮೆಸೆವ
ನಡುನಲಿವ
ನಡೆಸೆಳೆವ ಕುಱುನಡೆಯ ಕಣ್ಗಡೆಯ
ನಳಿತೋಳ
ಕಡುಮೇಳಮೌವಳಿಪ ಸಂಚಳಿಪ
ಪುರವರದ
ಕಾಂತೆಯರ್ ತರಳಾಳಕಾಂತೆಯರ್
ಲಲಿತಸುಖಮೂರ್ತಿಯರ್
ಪೊತಿದೇಸೆಕಾರ್ತಿಯರ್
ಸೊಬಗಿನಿಂ
ಮದನಂಗೆ ಪೂಜೆಯಂ ಮಾಡುವರ್
ವಿಬುಧವಿದ್ಯಾಧರನ
ಗೀತಮಂ ಪಾಡುವರ್   ೧೧೫

ಅಂತು ಮಧುಕರಪಕ್ಷಪಾತ ದರದಳಿತಮಧುರಮಾಧವೀಮಂಜುಮಂಜರಿಯಿಂ ದಿವಿಜೋದ್ಯಾನಮಂ ನಸುನಗುವಂತಿರ್ದ ರಮ್ಯೋದ್ಯಾನದೊಳಗೆ –

ಎಱಗುವ ಕೈಗರಗಂಗಳೊ
ಳೆಱೆಯುತ್ತೆಳನೀರ್ಗಳಂ
ಕುಜಾಳಿಗೆ ಜಗಮಂ
ಮಱುಗಿಸಿ
ಮನೋಜನಱಕಿ
ಟ್ಟಱವಟ್ಟಿಗೆವಾರ್ವರಂತೆ
ತೆಂಗಿನ ಮರಗಳ್  ೧೧೬

ತೊಳಗುವ ವನಲಕ್ಷ್ಮಿಯ ಪೊಂ
ಗಳ
ಮಂಗಳಕಳಶಮೆನಿಪ ರಸಮಾದುಫಲಂ
ಗಳ
ಮಗಮಗಿಸುವ ಕಂಪಿಂ
ಗೆಳಮಾವಿನ
ಬಾಯ್ಗಳೊಱೆತವೊಲ್ ಸೊನೆ ಸುರಿಗುಂ ೧೧೭

ಬಳೆಯೆ ರಸಮೊಳಗೆ ಪೊನ್ನಾ
ಯ್ತೆಳವಚ್ಚೆಯೆನಲ್ಕೆ
ಕೊರ್ಬಿ ಪೊಳೆವಮರ್ದಿನ ಪೊಂ
ಗಳಸಂಗಳಂತೆ
ತೊಳತೊಳ
ತೊಳಗಿದುವತಿಮಧುರಮಾದುಫಲದ
ಫಲಂಗಳ್      ೧೧೮

ನೀಂ ಬಯಸಿ ಬೇಡೆ ಪವಳಂ
ಕೆಂಬರಲಂ
ಕಾಱುವಂತಿರಾಂ ಬಾಯ್ಪಾಯೊಳ್
ಚುಂಬಿಸುತಿರ್ಕುಂ
ರಸದಾ
ಳಿಂಬದ
ಬಿೞ್ತುಗಳಿವಲ್ಲಿಯವು ತರಳಾಕ್ಷೀ       ೧೧೯

ಎನಿತಲರ್ಗಳನಿತೆ ಫಲಮಂ
ಜನಿಯಿಸುವೊಡೆ
ಪೊಱಗೆ ಬಱಿದ ಪೂವಿನ ಪೊಱೆಯೇ
ಕೆನುತನ್ಯಕುಜಮನಳಿರವ

ದೆ
ನಗುವವೊಲ್ ಪಣ್ತ ಬಕ್ಕೆವಲಸುಗಳಸೆಗುಂ ೧೨೦

ಪೇಱೆ ಬೞಲ್ದಿರ್ಪಿರವಿಂ
ಪೇಱಿದ
ಪಣ್ಗೊನೆಯನಿೞಿಪಲೊಡನೆ ನಿಮಿತ್ತಂ
ಬೇಱುಂಟೆ
ಫಲಕೆ ಮೈವರ
ಲಾಱದ
ಕಡುಸೋಂಬತನಕೆ ಪೊಂಬಾೞೆಗಳೊಳ್     ೧೨೧

ಆಳವಾಳ ಜಳಬಿಂಬಿತಂಗಳಿಂ
ಬಾೞೆ
ಬೀೞ್ಗೊನೆಗಳಿಂ ವಿರಾಜಿಕುಂ
ಲೀಳೆಯಿಂ
ಪನಸ ಜಾತಮತ್ಸಖಂ
ಕೇಳ
ಬೇರ್ವಿಡಿದು ಪಣ್ತುದೆಂಬಿನಿಂ   ೧೨೨

ಬೀಗಿ ಬಿಗಿಯಪ್ಪ ರತಿಯಂ
ರಾಗದಿನಾ
ಬನದೊಳತನು ಬಲಮೞಿದು ಕರಂ
ಬಾಗಿಟ್ಟ
ಬಿಲ್ಗಳೆನೆ ನಸು
ಬಾಗಿರ್ದುವು
ರಸದ ಭರದಿನಸಿತೇಕ್ಷುವನಂ   ೧೨೩

ಪಿರಿದಾಗಿ ಪತ್ತೆ ಕೆಂದಳ
ದರಿಸಿನವಿರಿಸಿದಳೊ
ಪರಿದು ಪೊದೆಯಂ ರತಿ
ನ್ನರಸನಲಗುಗಳನೆಂಬಂ

ತಿರೆ
ಮಗಮಗಿಸುವುವು ಪೊಂಗಿ ಪೊಂಗೇದಗೆಗಳ್      ೧೨೪

ಎಲೆವಳ್ಳಿ ಪಸುರ್ಪಿಂ
ೞ್ತಲಿಸುವುದೇಂ
ಪಿರಿದೆ ಬನದೊಳಾಪುರದೊಳ್ ಬೆ
ಳ್ಳೆಲೆ
ಮೆಲ್ವರ ಬಾಯಂ
ೞ್ತಲಿಸುವುದೆನೆ
ಪೊಳೆವ ಪಲ್ಲ ಕಡುಗರ್ಪಿಂದಂ ೧೨೫

ಅಳಿದಳಿತ ಕಮಳಮೃದುಕು
ಟ್ಮಳಮಧು
ಮದಕೀರ ಕಳಭ ಖಂಡಿತಫಳಕೋ
ಕಿಳ
ಕಬಳಿತಕಳಿಕಾರಸ
ಕಳುಷಿತ
ಶತಪತ್ರಷಂಡಮಂಡಿತಮಹಿಮಂ   ೧೨೬

ಮದಮಧುಪವಿರುತಿಗೀತಂ
ಮದಕೋಕಿಲನಿನದವಾದಿತಂ
ಮದಶಿಖಿಸಂ
ಮದಲಲಿತಲಾಸ್ಯಮೆಸೆದುದು

ಮದನನ
ಸಂಗೀತಭವನಮೆನೆ ಪುರದ ವನಂ ೧೨೭

ಗಿಳಿಯ ಮದಶಿಖಿಯ ಕೊಂಚೆಯ
ಕೊಳರ್ವಕ್ಕಿಯ
ಕುಕಿಲ್ವ ಬಕದ ಕಳಹಂಸೆಯ
ಳ್ತಳಿಯ
ಪರಭೃತದ ಪುರುಳಿಯ
ಕಳಕಳಮಂಗಜನ
ಬಳದ ಕಳಕಳಮೆನಿಕುಂ  ೧೨೮

ಆ ಬನಕ್ಕೆ ಪೋಪ ಬರ್ಪ ಬಟ್ಟೆಯೊಳ್ –

ಪುಲಕಂ ಕೈಮಿಗೆ ಮಾಣ್ಗುಮೆಂಬ ಬಗೆಯಿಂ ರೂಪಂ ಕರಂ ಮೆಚ್ಚಿಯುಂ
ತಲೆಯಂ
ತೂಗದೆ ಪಾಂಥರೀಂಟೆ ವಿಕಸತ್ತೃಷ್ಣಾತುರರ್ ಚಿತ್ತ ಭೂ
ತಲದೊಳ್
ನಾಂಟಿದ ಬೇಂಟಮೇಂ ಬಗೆಗೆ ನೀರ್ವೊಯ್ವಂತೆ ಭೃಂಗಾರ ಶೀ
ತಲತೋಯಂಗಳನಾಂತು
ಪಾಣಿತಳದೊಳ್ ಪೊಯ್ವರ್ ಪ್ರಪಾಕಾಂತೆಯರ್       ೧೨೯

ಮತ್ತಮಾ ಬನಮಂ ಬಳಸಿ ಬೆಳೆದು –

ಅರಗಿಳಿವಿಂಡು ಪಚ್ಚೆಲೆಯ ಪಂದರವೋಲೊಗೆದೊಪ್ಪೆ ತಟ್ಟಿಯಂ
ತಿರೆ
ತನಿಗರ್ಬುಗಳ್ ರತಿಯ ಕಾಮನ ರಮ್ಯವಿವಾಹಗೇಹದೊಳ್
ವಿರಚಿಸಿ
ಪಚ್ಚೆಯೊಳ್ಜಗಲಿಯಂ ಮಧುಶೋಭೆಗೆ ಪೊನ್ನ ನೀರ್ಗಳಂ
ಪರಿಚಯಿಸಿದಂತೆ
ಕೆಂಪುವಡೆದೇಂ ಪಸುರ್ಗೊಂಡವೊ ಗಂಧಶಾಲಿಗಳ್   ೧೩೦

ಬಾಸಣಿಸೆಕೆಂಪು ದೆಸೆಯಂ
ಬೀಸುವ
ಬನದೆಲರಿನೊಲೆವ ಶಾಲಿವನಂಗಳ್
ಸೂಸುವ
ಮಣಲಿಂ ಮಾಣಿಕ
ವಾಸಱೆಗಳುಮಲ್ಲಿ
ಬಳೆವುವೆನೆ ಕರಮೆಸೆಗುಂ ೧೩೧

ಇಡಿದಾಂತು ಫಲದಿನೊಱಗುವ
ಕಡುಗೆಂಪಂ
ತಳೆದು ತೊಳಗಿ ನೀಳದ ತೆನೆಯಂ
ಪಿಡಿದೆಸೆವುವು
ಬೋದಿಗೆಯಂ
ಗಡಿಗೆಯ
ನಾಂತಾಂತ ಕಂಭಮೆನೆ ಕುಮುದಂಗಳ್     ೧೩೨

ಸುರಕುಜದ ಪಣ್ಣನಿತ್ತಾ
ದರಿಸೆ
ಸುರರ್ ತಮ್ಮ ನೆರೆಯ ಶಾಲಿಯ ತೆನೆಯಂ
ಸುರಲೋಕಕ್ಕಡಕುವವೋ

ಲರಗಿಳಿಗಳ್
ಕರ್ಚಿ ನಭಕೆ ನೆಗೆವುವು ನಿಚ್ಚಂ   ೧೩೩

ಅಂತು ಸೊಗಯಿಸೆ –

ವನತತಿ ವೇಳೆಯೊಳ್ ನೆಗೆದ ನಂದನಮಂ ನಿಡುತೞ್ಪಲಲ್ಲಿ ಮೆ
ಲ್ಲನೆ
ನಡೆಗೊಳ್ವ ತಾರಗೆಗಳುಜ್ಜ್ವಲಮಪ್ಪ ಮಣಿಪ್ರತಾನಮಂ
ತೆನೆಗಳ
ಪಂತಿ ತೋರದೆರೆಯಂ ಮುಗಿಲಟ್ಟಳೆಯೋಳಿ ತುಂಗಕೇ
ತನತತಿ
ಚೈತ್ರಮಂ ಪುದಿದು ಪೊತ್ತಿರೆ ತಾಂ ಕವಿರಾಜಮಲ್ಲನಾ  ೧೩೪

ಇದು ವಿದಿತವಿವಿಧಪ್ರಬಂಧವನವಿಹಾರಪರಿಣತಪರಮಜಿನಚರಣರಮ್ಯಹೈಮಾಚಲೋಚ್ಚಲಿತ ನಖಮಯೂಖಮಂದಾಕಿನೀಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತ ಬುಧಮಧುಕರಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತಿಯೊಳ್ ವನವಿಹಾರ ವರ್ಣನಂ

ಷಷ್ಠಾಶ್ವಾಸಂ