ಪದವಿಡುವಂಚೆಗಂಡ ಫಲದಿಂದೆ ಮರಾಳ ಮರಾಳಯಾನೆಯಂ
ಮದಕಳಕಂಠನಿಂ
ಶ್ರವಣಸೌಖ್ಯ ಕಳಾಪರಮ್ಯೆಯಂ
ಮದನನ
ಚಾಪದಿಂ ಮಧುರವಕ್ರಿಮದಾನಮದಾನತಾಂಗಿಯಂ
ಪದೆಯದುದಲ್ಲದಂಗಜಜಗಜ್ಜಯಶೋಭಿಯಶೋಭಿರಾಮೆಯಂ
  ೬೧

ನನೆಯಿಂ ನೀಱೆಯನಿಂದುಕಾಂತಿಯೊದವಿಂ ಕಾಂತಾಸ್ಯೆಯಂ ಬಂದ ಮಾ
ವನೆ
ತಳ್ತಪ್ಪಿದ ಮಲ್ಲಿಕಾಲತಿಕೆಯಿಂ ರಾಗಸ್ವಯಂಗ್ರಾಹನಾ
ಥನಿಷಕ್ತಾಂಗಿಯನೊರ್ಬಳೆಂದು
ಪೊಸತಂ ಪೂಮಾಲೆಯಂ ತೊಟ್ಟದ
ರ್ಶನದಿಂ
ದೇವತೆಯಿತ್ತಪಳ್ ನಿನಗೆ ಲೀಲಾಮೈತ್ರಿಯಂ ಪುತ್ರಿಯಂ        ೬೨

ಎಂದು ಸ್ವಪ್ನಫಲಮಂ ಪೇೞ್ದ ಪುರೋಹಿತನಂ ಮಣಿಕುಂಡಳಾದಿಗಳಿನರ್ಚಿಸಿ ನಿಚ್ಚಂ ಪೋಪಂದಮಲ್ಲದೆ ಪದ್ಮಾವತಿಯಲ್ಲಿಗೆ ಪಿರಿಯ ಸಿರಿವೆರಸು ಪೋಗಿ ಪರಕೆಯಂ ಕೊಟ್ಟು ಪರಮೇಶ್ವರಪೂಜಾಮದೋನ್ಮತ್ತೆಯಾಗಿರೆ ಮತ್ತೆ ಕೆಲವಾನುಂ ದಿವಸದಿಂ –

ಸೆಳೆನಡುವನುಡಿವ ಭರದಿಂ
ಬಳೆವಂತಿರೆ
ಬಳೆಯೆ ಮೊಲೆಗಳವಱೊಳ್ ಚಲದಿಂ
ಬಳೆವಂತು
ಬಳೆಯೆ ನಡುವು
ಮ್ಮಳಿಸಿದವೊಳ್
ಕರ್ಗಿ ಕೊಂಡುವವಱಮೊಗಂಗಳ್    ೬೩

ಅಂತುಮಲ್ಲದೆ –

ಪ್ರಿಯನ ಮೊಗಕ್ಕೆ ನಾಣ್ಚಿಯೆ ಬೆಳರ್ತವೊಲಾಯ್ತು ಮುಖೇಂದು ಮುಗ್ಧೆ ಮುಂ
ಬಯಕೆಯೊಳಪ್ಪಲೀಯದಿರೆ
ಕಾಯ್ದಿನಿಯಂಕುದಿದಿಟ್ಟ ಕೆಯ್ಯ ಬೆಂ
ಕೆಯೊಳೆ
ಕರಂಗಿದಂತೆಸೆದುದುತ್ಕುಚಚೂಕಮೊಳ್ವಸಿರ್ಗೆ ಮೆ
ಯ್ಮೆಯನಿಡೆ
ಗರ್ಭಶೋಭೆ ಮುಳಿದಂತಿರೆ ಪೋಯ್ತವಳಿಂ ವಳಿತ್ರಯಂ     ೬೪

ಅಂತು ಗರ್ಭಚಿಹ್ನಂಗಳ್ ನೆಱೆಯೆ ನೆಱೆಯೆ –

ಎಳೆವಸಿಱೊಳ್ ಸುಧಾಂಶುಮುಖಿಗೇನೆಸೆದಿರ್ದುದೊ ಬಂದ ನಂದನಾ
ವಳಿಯೊಳಗಾಡುತಿರ್ಪ
ಪೊಸಮಲ್ಲಿಗೆಯಂ ಮುಡಿವಂಗಯಷ್ಟಿಯೊಳ್
ಮಳಯಜದಣ್ಪನಿಕ್ಕುವೆಣೆವಕ್ಕಿಯ
ಕೇಳಿಯನೊಲ್ದು ನೋೞ್ಪ ಕೋ
ಮಳತಳವಲ್ಲ
ಕೀ ರವಮನಾಲಿಸುವೊಂದು ವಿಳಾಸದೋಹಳಂ  ೬೫

ಅಂತು ಬಯಸಲ್ತಕ್ಕ ಬಯಕೆಗಳಿಂ ನವಸುಖಕರಮಾಗಿ ನವದಿವಸದಂತೆ ನವಮಾಸಂ ನೆಱೆಯೆ ವೈಜನನಮೆಂಬ ಪೆಸರಿಂ ಮಿಸುಪ ಮಾಸದೊಳ್ –

ಬಿಸಿಯಂ ತಣ್ಣಿದನಪ್ಪವೊಲ್ ಕಡಲೊಳಂದೋಲಾಡೆ ಚಂಡಾಂಶು ತಾ
ನೊಸೆದಂತುಜ್ಜ್ವಲಮಾಗೆ
ಸಗ್ರಹಗಣಂ ತಾರಾಗಣಂ ಕಂಡು ರಾ
ಗಿಸುವಂತೇೞ್ಗೆಯಿನೊಪ್ಪೆ
ಚಂದ್ರನುದಯಾದ್ರೀಂದ್ರಾಗ್ರದೊಳ್ ಪೊರ್ದಿ
ಳ್ಳಿಸುವಂತೊರ್ಮೊದಲುರ್ಬಿ
ಕೂರ್ಬೆ ಸುಭಗಶ್ರೀಜನ್ಮಸಮ್ಮೋದಿತಂ       ೬೬

ಪೊಸಪೂವಂ ಸೂಸೆ ಮಂದಾನಿಳನತಿಮುದದಿಂ ಮಂಗಳಂಬಾಡೆ ಭೃಂಗೀ
ವಿಸರಂ
ತಳ್ತೋದೆ ಕೀರೋತ್ಕರಮೊಸಗೆಮರುಳ್ಗೊಂಡುವಲ್ಲೀಕುಳಂ
ರ್ತಿಸೆ
ನಾನಾಭಂಗಿಯಿಂದಂ ರತಿಯೊಡನೆ ಪಿಕಸ್ನಿಗ್ಧರಾಗಾನುಗಂ ಘೂ
ರ್ಣಿಸೆ
ಶಂಖಧ್ವಾನದಿಂದಂ ಸ್ಮರನರಮನೆಯೊಳ್ ವರ್ಧಮಾನಪ್ರಣಾದಂ ೬೭

ಲತೆಯಂ ನಂದನಭೂಮಿ ದೀಪಿಕೆಯನಗ್ನಿಜ್ವಾಲೆ ರತ್ನಾಕರ
ಕ್ಷಿತಿ
ಮಾಣಿಕ್ಯಶಲಾಕೆಯಂ ಪ್ರತಿಭೆ ಕಾವ್ಯಪ್ರೌಢಿಯಂ ವೀಣೆ ಸಂ
ರುತಿಯಂ
ಪದ್ಮಿನಿಯಂ ಮಹಾಸರಸಿ ಕಂದರ್ಪಾಗ್ನಿಯಂ ಕಾಮದೇ
ವತೆ
ಪೆಂಪಿಂ ಪಡೆವಂತೆ ಕಾಂತೆ ಪಡೆದಳ್ ಲೀಲಾವತೀದೇವಿಯಂ        ೬೮

ಆಗಳ್ ಬಾಜಿಸುವ ಬದ್ದವಣಮುಂ ತಳಿವ ರಾಜಾಂಗಣಮುಂ, ಎತ್ತಿನಿಮಿರ್ವ ಗುಡಿಗಳು ಮಿಕ್ಕುವ ರಂಗವಲಿಗಳ ದಾಂಗುಡಿಗಳುಂ, ಕಟ್ಟುವ ತೋರಣಂಗಳುಂ, ಪಣ್ಣುವ ವಿನತ ವಾರಣಂಗಳುಂ, ನೈಮಿತ್ತಿಕರೆೞೆದುಕೊಳ್ವ ದಾನಂಗಳುಂ ಪಾಡುವ ಮಂಗಳಗೇಯಂಗಳುಂ, ಕೈನಿಱಿದಾಡುವ ಕುಳವೃದ್ಧೆಯರುಂ, ಮಂದಾರಮಂ ಕಟ್ಟುವ ವಿದಗ್ಧೆಯರುಂ, ಪರಸುವಜ್ಜರುಂ, ಪರಿದುರುಳ್ವ ಗುಜ್ಜರುಂ, ಸುೞಿವ ಸೂಳಾಯಿತರುಂ ಸುತ್ತಿದಡಂಗಾಯಿತರುಂ, ಮಡಿಗಟ್ಟುವ ಪರಿಚಾರಿಕೆಯರುಂ, ಕುಣಿವ ಕುಮಾರಿಯರುಂ, ಬೈತಲೆಯೊಳ್ ಸೆಂದುರಮಂ ತಳೆವ ಸುವಾಸಿನಿಯರುಂ, ಎಡೆಯಾಡುವ ಚಾಮರಗ್ರಾಹಿಣಿಯರುಂ, ಮುಡಿಯೊಳಿಡುವ ಮಾಲೆಗಳುಂ, ಕಿವಿಯೊಳಿಡುವೋಲೆಗಳುಂ, ಮರಿಪಿಟ್ಟುಗಳುಮಿಟ್ಟುಕೊಳ್ವ ಬೊಟ್ಟುಗಳುಂ, ಮಿಡಿವಡಿಕಾಡಿಗೆಗಳುಂ ಪಿಡಿವ ಕೊಡೆಗಳುಂ ತುಡುವ ತೊಡಿಗೆಗಳುಂ, ಉಡಲ್ಕುಡುವ ಜವಳಿಗಳುಂ, ಇೞಿಪಿದ ಪಳಾವಳಿಗಳುಂ, ಕೊಳ್ವ ಬಿೞ್ತುಗಳುಂ, ಕೊಡುವ ಮುತ್ತುಗಳುಂ, ತಳೆವ ಸೇಸೆಯಕ್ಕಿಗಳುಂ ಮರಿಪಿಟ್ಟುಗಳಿಂ ತೀವುವ ನನೆಯಕ್ಕಿಗಳುಂ, ಬೀಱುವ ಬಾಯಿನಂಗಳುಂ, ಪದ್ಮಾವತಿಗೆ ಪೋದ ಪೊಸಬಾಯಿನಂಗುಳುಂ, ನೂಲನುಡಿಸಿದ ನೇಗಿಲುಗಳುಂ, ಕಾಪಂ ಬರೆವ ಬಾಗಿಲುಗಳುಂ, ನಿಱಿಸುವ ಕೈದುಗಳುಂ, ವಿಪ್ರರೋದುಗಳುಂ, ಬೇಳುವ ಹೋಮಂಗಳುಂ, ಮಗಮಗಿಸಿ ನೆಗೆವ ಧೂಪಧೂಮಂಗಳುಂ, ಬೇವಿನೆಲೆಯೊಳ್ ಬಿಳಿಯಪರಲಂ ಪೊರೆದಿಕ್ಕುವ ಧೂಪಂಗಳುಂ, ಕಾೞ್ಪೞ್ತಿಯ ಬತ್ತಿಯೊಳಂ ಕೌಱೆಣ್ಣೆಯೊಳ್ ಪೊತ್ತಿಸಿದ ದೀಪಂಗಳುಂ, ಪಡವಿನೆಡೆಯೊಳ್ ಕೊರಳಿಗಳುಂ, ನಾಂದುವ ಬೇವಿನ ಸರಳಿಗೆಗಳುಂ, ಕೂಲೊಳ್ ಪಾಂಗುನೂಲಂ ಸುತ್ತುವ ಕುಡುಗೋಲ್ಗಳುಂ, ಮರ್ಚಿಸುವ ತಣ್ಣೆೞಲ್ಗಳುಂ, ಪಾಸುವ ಬೆಳ್ಮಡಿಗಳುಂ, ಪೂಜಿಸುವ ಕನ್ನಡಿಗಳುಂ, ಪಾಲಂ ಪೊಯ್ವ ಕಳಶಂಗಳುಂ ಪುಂಜಿಸುವ ಕಣಿಶಂಗಳುಮೆಸೆಯೆ ಚಂದ್ರಲೇಖೆ ಚಂದ್ರಿಕೆಯಂ ಪಡೆಯೆ ಪರಿಕ್ಷುಬ್ಧಮಾದ ಪಯೋಧಿಯಂತೆ ಪಿರಿದುಂ ಕಳವಳಮನಪ್ಪುಕೆಯ್ದ ಪ್ರಸೂತಿಕಾಸದನಕ್ಕೆ ಶೃಂಗಾರಶೇಖರಂ ಬಂದು ಮಹೋತ್ಸವಮಂ ಮಾಡಿ ದಶಮ ದಿನದೊಳ್ ಪ್ರಸೂತಿಕಾಪ್ರಸಾರಿತ ಜಿನೇಂದ್ರ ಮಹಾಮಹಿಮೆಯಿಂ ವಾಸವಂ ಬಂದು ನೋಡಿ ಪೋದುದೆ ನಾಡೆಯುಂ ನಿಮಿತ್ತಮಾಗೆ ಬಾಳಕಿಗೆ ವಾಸವದತ್ತೆಯೆಂದು ಪೆಸರನಿಟ್ಟು ಸಂತೋಷದಂತನೆಯ್ದಿ ತನ್ನ ವಿನೋದಮೆ ವಿನೋದಮಾಗಿ ಸುಖದಿನಿರೆ, ಪೊಳೆವೆಳವೆಱೆಯಂತೆ ಪ್ರತಿದಿನಂ ಪ್ರವರ್ಧಮಾನೆಯಾಗೆ –

ಎಳಲತೆಯಂತೆ ಕೋಮಳಿಕೆಯಿಂದೆಳಮಾಣಿಕದಂತೆ ಕಾಂತಿಯಿಂ
ದೆಳಗಿಳಿಯಂತೆ
ಸೋಲಿಪ ತೊದಳ್ನುಡಿಯಿಂದೆಳೆಯಂಚೆಯಂತೆವೋಲ್
ತಳರಡಿಯಿಂ
ಮನಂಗೊಳಿಸಿದಂತಿರೆ ಪತ್ತಿಸಿ ತಾಂ ಬೞಿಕ್ಕದೇಂ
ಕಳೆದಳೊ
ಬಟ್ಟೆಯಂತೆ ಕಳಕೇಳಿಕೆ ಬಾಳಿಕೆ ಬಾಲ್ಯಕಾಲಮಂ    ೬೯

ಬಟ್ಟುಪಬಟ್ಟುಗೊಂಡ ಕುಚಕುಟ್ಮಲಮುತ್ಪಳಕರ್ಣಪೂರಮಂ
ಗೊಟ್ಟಿಗೆ
ಸಾರ್ವ ದಿಟ್ಟ ಮಣಿಕಾಂಚಿಯನೊಯ್ಯನೆ ಪೆರ್ಚಿಸಲ್ಕಮಿಂ
ಬಿಟ್ಟ
ಕಟೀತಟಂ ಪಸಿಯ ಬಣ್ಣಮುಮಂ ಪಡಿಯಿಟ್ಟ ರೂಪು ನೇ
ರ್ಪಟ್ಟಿರೆ
ಬರ್ಪ ಯೌವನಮದೇನೆಸೆದಿರ್ದುದೊ ಬಾಳವಟ್ಟೆಯಂ ೭೦

ಅಂತು ಬಂದ ಜವ್ವನಂ ಮೆಱೆಯೆ –

ಕಲೆವೆರಸು ಬಳೆವ ತೆಱನಂ
ಕಲ್ಲಿಸುವುದಂ
ಕಲಿಸಿ ತಾನದರ್ಕೆ ಬೞಿಕ್ಕಾ
ಲಲನೆಯ
ಮುಖೇಂದು ತನ್ನಂ
ಗೆಲೆ
ಚಿಂತಿಸಿ ಕುಂದುತಿರ್ಪನಿನ್ನುಂ ಚಂದ್ರಂ   ೭೧

ಎಂಬ ಪೊಗೞ್ತೆಗಗ್ಗಳಮೆನಿಸಿ –

ನೆಱೆ ಪೋಲ್ವಂತಿರೆ ತರುಣಿಯ
ತುಱುಗೆಮೆಗಣ್ಣೆಸೆವ
ಮೊಗಮನೆನ್ನೊಳ್ ಚೆಲ್ವಿಂ
ಮಱೆಯದೆ
ಮಾಡೆಂದಿನ್ನುಂ
ಸೆಱೆವಿಡಿದಿರ್ದಪುದು
ಪದ್ಮಭವನಂ ಪದ್ಮಂ    ೭೨

ಮದನಾನಳನೇೞದೆ ಮಾ
ಣದೆಂದು
ಮನಮೆಂಬ ಮನೆಯ ಮೇಗಬ್ಜಜನೆ
ತ್ತಿದ
ಕೊಡಗಳಂತಿರೆಸೆದುವು
ಸುದತಿಯ
ಲಾವಣ್ಯವಾರಿಪೂರ್ಣಕುಚಂಗಳ್  ೭೩

ಅರ್ಚಿಸಲೆಂದವನೊಱೆಯಿಂ
ದುರ್ಚಿದ
ಕೂರಲಗಿವೆನಿಸಿ ಕಣ್ಬೊಣರವು ಮೆ
ಯ್ವೆರ್ಚಿದೊಡೆ
ಮದನನಲ್ಲಿಯೆ
ಸಾರ್ಚಿದ
ಕಾರೊರೆಗಳಂತೆ ಪುರ್ಬುಗಳೆಸೆಗುಂ         ೭೪

ಕಾದಿರಲೆಂದಸಿತೋರಗ
ನಾದಂ
ಕುಚಕಂಭನಿಧಿಗಧೀಶ್ವರನುರಿಗೊಂ
ಡಾ
ದರ್ಪಕನೆನೆ ಕರಮಿಂ
ಬಾದುದು
ಮೃದುರೋಮರಾಜಿ ರಾಜಾತ್ಮಜೆಯಾ       ೭೫

ವದನವಿಧು ವಿದಳಿತಂ ಕಾ
ಳದ
ಕೞ್ತಲೆ ಪುತ್ತನೇಱಿತೆನೆ ಬಿಣ್ಪಿಂಬಿ
ರ್ದೊದೆದು
ನಿತಂಬಾಗ್ರಮನೇ
ಱಿದ
ನಿಱಿವಿಣಿಲೆಸೆದುದಮೃತಮಧುರಾಧರೆಯಾ       ೭೬

ಅಂತು ಕಂತುರಾಜನ ರಾಗದೊಡನೆ ರಾಗಮನಾಳ್ದ ಬಿಂಬಾಧರಮುಂ, ಮನಸಿಜನ ಮಸೆದಲಗಿನೊಡನೆ ಕೂರ್ಪುಮಂ ಪೊಳಪುಮನಾಳ್ದ ನಿಡಿಯ ಕಡೆಗಣ್ಗಳುಂ, ಕಾಮನೇಱಿಸಿದ ಕರ್ವುವಿಲ್ಲೊಡನೆ ಕೊಂಕುವಡೆದ ಕುಡುವುರ್ವುಗಳುಂ, ಮದನಮಧುಕರ ಜ್ಯಾಲತಾಟಂಕಾರದೊಡನೆ ನುಣ್ಪನಾಂತಿಂಚರಮುಂ, ಕಂದರ್ಪದರ್ಪದೊಡನೆ ಕೊರ್ಬಿದ ಕುಚಕುಂಭಂಗಳುಂ, ಮಕರಧ್ವಜನೆತ್ತಿದ ಪೞಯಿಗೆಯೊಡನೆ ತೋರ್ಕೆವೆತ್ತ ತೋರಮುಡಿಯುಂ, ಚಿತ್ತಜನ ತೇಜದೊಡನೆ ತಳತ್ತಳಿಸುವ ಮೆಯ್ವೆಳಗುಂ, ತ್ರಿಜಗದ್ವಿಜಯಮನೆತ್ತಿಕೊಂಡತನುನೃ ಪನುಮ್ಮೞದೊಡೆ ಬಡವಾದ ನಡುವುಂ,….. ಅಂಗಜನಾಜ್ಞೆಯೊಡನೆಯಾರ್ಗುಂ ಲಂಘಿಸಿ ಬಾರದಲಘುಜಘನಮುಂ, ಮನ್ನಥ ಶೌರ್ಯದೊಡನೆ ಬಟ್ಟಿದುವಾದ ತೊಡೆಗಳುಂ, ಕಾಮುಕರ್ಗೆ ಮುಳಿದ ಕುಸುಮಶರನ ಕಡೆಗಣ್ಗಳೊಡನೆ ಕೆಂಪಿನೊಳ್ ಪುದಿದ ಪಾದಪಲ್ಲವಂಗಳುಂ, ಮಾರನ ಮುಯ್ಪಿನೊಡನೇಱಿದ ಜವ್ವನಮುಂ, ಭುವನಮನೋಹರಮಾಗೆ ತನ್ನೊಡನೆ ನೋಡಿ ನೋಡಲ್ ಕಲ್ತ ಮರಕತಕಾಂತಿಕಬಳೆಯೆ ಮೊದಲಾದ ನೂಱುಂ ಪೊರೆದ ಹರಿಣಂಗಳುಂ, ತನ್ನೊಡನೆ ನಡೆಗಲ್ತ ಪುಳಿನಪುಂಡರೀಕೆ ಮೊದಲಾದಿರ್ನೂಱು ಮನ್ನಣೆಯ ರಾಜಹಂಸೆಗಳುಂ, ತನ್ನ ಕಣ್ಗಳೊಡನಾಡಿ ಬೆಳ್ದಿಂಗಳ ಸವಿಯಱಿಯದ ಚಂದ್ರಿಕಾಲೋಚನೆ ನಾಯಕಿಯಾದ ಮೂನೂಱು ಕಣ್ಚೆಲ್ಲದ ಚಕೋರಿಗಳುಂ, ತನ್ನೊಡನಾಡಿಯಾಡಿಯಾಟಮಂ ಕಲ್ತ ಮೇಘಮಂಡನೆಯಾದಿಯಾದ ನಾಲ್ನೂಱು ನಲವಿನ ನವಿಲ್ಗಳುಂ, ತನ್ನೊಡನಾಲಾ ಪಿಸಿಯಿಂಚರಮಂ ಕಲ್ತ ನವವಿಪಂಚೀ ಪ್ರಮುಖಮಾದ ಐನೂಱು ಪಸಾಯಿತಗೋಗಿಲೆಗಳುಂ, ತನ್ನೊಳಳಸಿಯಳಸಂ ಕಲ್ತ ಮಣಿತ ಮಂಜರಿಯರಸಿಯಾದಱುನೂಱು ಪರಿಯಣದಾಯದ ಪಾರಿವಂಗಳುಂ, ತನ್ನೊಡನೋದಿಯೋದಾಳಿಗಳಾದ ಚೂತಪ್ರಿಯನೆಂಬ ಮುಖ್ಯಮಾದೇೞು ನೂಱು ಬಾಯ ತಂಬುಲದರಗಿಳಿಗಳುಂ, ತನ್ನೊಡನೆ ಕೂಡಿ ವಾತ್ಸ್ಯಾಯನಮಂ ಕಲ್ತ ರತಿ ಪಂಡಿತೆಯೊಡತಿಯಾದ ಎಂಟುನೂಱು ಸರಸದ ಸಾರಿಕೆಗಳುಂ, ತನ್ನೊಡನೆ ಪಣ್ಣಂ ಚುಂಬಿಸಿ ಚುಂಬಿಸಲ್ ಕಲ್ತ ಕಮಳಿನೀ ಕುಚೆಯಿಂ ಸನಾಥಮಾದ ಒಂಭೈನೂಱು ಜಾವದ ಜಕ್ಕವಕ್ಕಿಗಳುಂ, ತನ್ನ ನಾಸಿಕಾಮುಕುಳದೊಡನೆ ಕಂಪನುಣಲ್ ಕಲ್ತ ಕುಸುಮಂಕುಂತಳೆಯಾದ ಸಾಸಿರ ಪೂವಿನಮುಂಗಾಣಿಕೆಯ ತುಂಬಿಗಳುಂ, ತನ್ನ ಪಂತಿಯೊಳುಂಡುಮುಟ್ಟುಮಿಟ್ಟುಂ ತೊಟ್ಟುಂ ವನಲಕ್ಷ್ಮೀಯೊಡನೆ ಬೆಳೆವೆಳಲತೆಗಳೊಡನೆ ಬಳೆದು ತನ್ನೊಡನೆ ಸಕಳಕಳೆಗಳಂ ಕಲ್ತ ಮನದನ್ನಳಾದ ಕಳಾವತಿಯುಂ, ಕೈಗೆಯ್ಯಲ್ ಕಲಿಸಿದ ತಮಾಳಿಕೆಯುಂ ಮೊದಲಾದ ನಾಲ್ಸಾಸಿರ ನರ್ತಕಿಯರುಮನಿಬರೆ ಗಾಯಕಿಯರುಂ, ಕಳಭಾಷಿಣಿ ಮೊದಲಾದೈಸಾಸಿರದ ಮೇಳದ ಕೆಳದಿಯರುಂ, ಅನಿಬರೆ ಪರಿಚಾರಿಕೆಯರುಂ ಬೆರಸಾಗಳುಂ ಲೀಲೆವೆರಸಿರ್ಪುದಱಿಂ, ಲೀಲಾವತಿ ಯೆಂಬ ಪೆಸರಂ ಪಡೆದು ನಿಜಜನಕಂ ಮಾಡಿಸಿಕೊಟ್ಟ ಕಾಂತಿಕಮಲಕರ್ಣಿಕೆಯೆಂಬ ಕನಕವೆಸದ ಕನ್ನೆವಾಡದ ಕಡದೊಳ್ ಕಮಳಕರ್ಣಿಕೆಯೊಳ್ ಕ್ರೀಡಿಸುವ ತುಂಬಿಯಂತೆ ಕೆಳೆವೆರಸಿರ್ಪ ತನ್ನಾತ್ಮಜೆಯ ಯೌವನವಸಂತಮುಡಿಯಿಟ್ಟು ತನುಲತೆಯಂ ಕಂಡು ಶೃಂಗಾರಶೇಖರಂ ಮಾರಾಕಾರರುಮಪ್ಪ ರಾಜಕುಮಾರರಂ ಬರಿಸಿ ಸ್ವಯಂಬರಮಂ ಸ್ಮರಂ ಬರಲಿತ್ತಂತೆ ಬಿತ್ತರಿಸಿದಾಗಳ್ –

ನೇಯಂ ಕವಿತೆಗೆ ನವಚಾಂ
ಪೇಯಂ
ಮಧುಕರಿಗೆ ಸಲ್ಲದಂತಿರೆ ದೊರೆವೆ
ತ್ತಾ
ಯುವತಿಗೆ ಚಿತ್ತೋದ್ಭವ
ದಾಯೆಯೆನಲ್
ಸಂದುದಿಲ್ಲ ರಾಜಸಮಾಜಂ  ೭೭

ಅಂತು ಲೋಕದೊಳಗುಳ್ಳ ರಾಜಸಮಾಜಂ ರೂಪಾಶೇಷಗಂತಮಾಗಿಯುಂ ಕಂಪಿನಂತೆ ಕಣ್ಗೆವಾರದವಸಂಗತಮಾಗಿಯುಂ ಮನಕ್ಕೆ ಸಾರದೆವೋಗೆ, ಸಖೀಜನಮೀಕೆಯ ಜವ್ವನಂ ಕೇತಕೀವನದಂತೆ ನಿಷ್ಫಲಮಾಗಿ ಪೋದುದೆಂದು ಚಿಂತಿಸುತ್ತುಮಿರೆ, ಮತ್ತೊರ್ಮೆ ನಿಶಾವಸಾನಸುಪ್ತಿಯೊಳ್ –

ನಯನಾಂಜನಮಂಜನಮೆನೆ
ನಯದಿಂ
ಮುಸುಕಿದ ದುಕೂಲಮಮರ್ದಿರೆ ಮೊಗದೊಳ್
ಪ್ರಿಯನಿಧಿಯಂ
ಶೈತ್ಯ ಕುಶೇ
ಶಯಲೋಚನೆ
ನೋಡುವಂತೆ ಸೊಗಯಿಸೆ ನೀಡುಂ   ೭೮

ಹರನೇತ್ರಜ್ವಾಲೆಯಿಂ ಬೇವತನುವನುಮೆ ಕಾಣುತ್ತೆ ತನ್ಮೌಳಿಯೊಳ್ ಸುಂ
ದರಲೇಖಾಮಾತ್ರಮಿರ್ಪಂತಮೃತಕಿರಣನಂ
ಕೊಂಡಪೂರ್ವಪ್ರಭಾಮಂ
ಜರಿ
ಮೆಯ್ಯೊಳ್ ಪತ್ತುವನ್ನಂ ಪಿಡಿದು ತಳಿದು ಮತ್ತೆತ್ತಿದಂತಿರ್ದ ಶೋಭಾ
ಕರರೂಪಾಕಾರನಂ
ತತ್ತರುಣಿ ಕನಸಿನೊಳ್ ಕಂಡು ಸೋಲ್ತಳ್ ಮೃಗಾಕ್ಷೀ ೭೯

ಅಂತು ಸೋಲ್ತು ಭೋಂಕನೆೞ್ದು ತಾನತಿಮುಗ್ಧೆಯಪ್ಪುದಱುಂ ಕನಸನೆ ನನಸೆಂದು ಬಗೆದು

ಕೆಲನಂ ಪಿಂತಂ ಮಣಿಸ್ತಂಭದ ಮಱೆಗಳನೌತ್ಸುಕ್ಯದಿಂ ನೋಡಿ ಶಯ್ಯಾ
ತಲದೊಳ್
ಪಾಂಚಾಲಿಕಾಸಂಚಯದೊಳತುಳ ನೀಳಾಂಶುವಿಂದಾದ ಬಲ್ಗ
ೞ್ತಲೆಯೊಳ್
ಜೊನ್ನಂಗಳೊಳ್ ಕನ್ನಡಿಯೊಳಡಕಿಲ್ವೇಣಿ ಕಾಕುಂಜದೊಳ್ಕುಂ
ತಲದೊಳ್
ಚಿತ್ತೇಶನಂ ಸಂಭ್ರಮದಿನಱಸಿದಳ್ ಕಾಂತೆ ವಿಭ್ರಾಂತಿಯಿಂದಂ         ೮೦

ಮಲೆ ಕಣ್ಣೊಳ್ ಸುಱಿದ ಚಿತ್ತದೊಳ್ ನೆಲಸಿದ ಕಾ
ದಲನಂ
ಕಣ್ಮಲರಂ ನಡು
ಮೊಲೆಯಂ
ಮಿಗೆ ಬಗೆದು ನೋಡಿದಳ್ ಬಗೆಯುಳಿಪಿಂ  ೮೧

ಅಂತು ಪ್ರತಿಮಾಗತತರಂಗಹತಪ್ರಿಯನಂ ಕೊಳದೊಳಱಸುವ ಮುಗ್ದಚಕ್ರವಾಕಿಯಂತೆ ಕನಸಿನೊಳ್ ಕಂಡ ಕಾಂತನಂ ನೆನಸಿನೊಳ್ ಕಂಡೆನೆಂದೇ ಬಗೆದು ಬಗೆಯೞಿದಱಸಿ ಎಲ್ಲಿಯುಂ ಕಾಣದೆ –

ಒಳಗಱಿದೆನ್ನನಿಂತಿವಿನಿತುಂ ನಗುತಿರ್ದಪುವೆಂದು ಮಿಂಚುವ
ಲ್ಗಳ
ಮಣಿಸಾಲಭಂಜಿಕೆಗಮೊಳ್ಗುಡಿವುರ್ವಿನ ಜರ್ವನಿತ್ತುಮಿ
ತ್ತಳಕದಿನೊಕ್ಕ
ಮಲ್ಲಿಗೆಮುಗುಳ್ ಬಿಱಿಯುತ್ತಿರೆ ಮುಗ್ಧೆ ಚಿತ್ತದೊಳ್
ಮುಳಿಸನೊಡರ್ಚಿದಳ್
ಮೊಱೆವ ತುಂಬಿಗಳಂ ಕಿಸುಗಣ್ಚಿ ನೋಡಿದಳ್    ೮೨

ಅಂತು ನೋಡಿ ನೀಡುಂ ಭಾವಿಸಿ ಬಸವೞಿದು ಪೊೞ್ತಂ ಕಳೆಯುತ್ತುಮಿರೆ –

ಇಷುಪ್ರಾಯಂ ಗೇಯಂ ಮುಷಿತಕಿರಣಂ ಶೀತಕಿರಣಂ
ವಿಷಾಹಾರಂ
ಹಾರಂ ಹೃದಯದಹನಂ ಗಂಧವಹನಂ
ದ್ವಿಷಜ್ಜಾತಂ
ಚೂತಂ ಪಿತೃವನಮದಾಯ್ತಂಬುಜವನಂ
ವಿಷಾದಾಯಂ
ಕಾಯಂ ವನಿತೆಗವನಿಂ ಚಿತ್ತಭವನಿಂ    ೮೩

ಅಂತಾಕೆ ಸೋಲದ ಸೊರ್ಕಿಂ ಮೇಗುಂ ಮೆಯ್ಯಱಿಯದೆ ಮೂಗರ್ ಕಂಡ ಕನಸಿನಂತೇನುಮೆನಲಱಿಯದೆ ಮದನಮಹಾದಾಹದಿಂ ದೇಹಂ ಕರಂ ಕೊರಗಿ ಕಡುಬಡವಾಗಿ ನೀರ್ಗಿಚ್ಚುಗೊಂಡ ಕಮಲಿನಿಯಂತಿರಿರ್ದ ಕಾಮಿನಿಯಂ ಕಂಡು ಮನಂಗಾಣಲಾಱದೇಕಾಂತಕೆ ಕರೆದು ತಮಾಳಿಕೆ ಕಳಾವತಿಗಿಂತೆಂದಳ್ –

ಗಿಳಿಗಿನ್ನುಂ ಕುಡುಕಿಕ್ಕೆನೆಂಬಳೆಲೆ ನೀನಾರೊಗಿಸೆಂದಂದು ಕೋ
ಕಿಳಮಿನ್ನುಂ
ತಳಿರ್ಗಚ್ಚದೆಂಬಳೆಲೆಯಂ ಮೆಲ್ಲೆಂದೊಡೇೞ್ ಮಜ್ಜನಂ
ಗೊಳಲೆಂದಂದೆಲರಿಂದೆ
ಮೆಯ್ ನಡುಗಿತೆಂಬಳ್ ಚಂದನೋದ್ವರ್ತಮೀ
ಗಳಿದೇಕಿಲ್ಲೆನೆ
ಪಾವು ಕಾವುದೆನೆ ಕೇಳ್ದಂಜಿರ್ದೆನೆಂಬಳ್ ಸಖೀ    ೮೪

ಅದಲ್ಲದೆಯುಂ –

ಇರವೇನೊಂದೆಡೆಯಲ್ಲಿ ಜಾನಿಸುತೆ ನೀನೆಂಬೆ ಕರಂ ಮಚ್ಚಿ
ಚ್ಚರಣ
ನ್ಯಾಸಮನಂಚೆ ತನ್ನ ಮಱೆಂ ಬಿಟ್ಟೇೞ್ವುದೆಂಬಳ್ ಮರು
ಳ್ದಿರುಳಾಯ್ತೇೞಲೆ
ಸಜ್ಜೆಗೆಂಬೆನಬಳೇ ಕಂಡೆಂತು ಕಣ್ಮುಚ್ಚುಗುಂ
ವಿರಹಂ
ಕೈಮಿಗೆ ಜಕ್ಕವಕ್ಕಿ ಪೊರೞುತ್ತಿಂತಿರ್ಪುದೆಂಬಳ್ ಸಖೀ   ೮೫

ಅದಲ್ಲದೆಯುಂ –

ತಿಱಿಯದಿರಕ್ಕ ತೀರ್ದಪುವು ಕೆಂದಳಿರಾಮ್ರದೊಳೇಕೆ ಪದ್ಮಮಂ
ಪಱಿದಪೆಯಂಚೆಗಳ್
ಪಸಿದು ಸತ್ತುಪುವಾಯ್ದೊಡೆ ಮಾಯ್ದ ಪೂಗಳಂ
ಪಱಮೆಗಳೆಂತು
ಜೀವಿಸುಗುಮೆಂದಿರದೀ ನೆವದಿಂದಮೆೞ್ದು ನೀ
ರೆಱೆದಳಿವಳ್
ತಳಿರ್ಮುಡಿಗೆ ಕನ್ನವುರಕ್ಕಲರ್ವಕ್ಕಿಗಿಂತಿದೇಂ     ೮೬

[ಎಂಬುದುಂ] ಆಕೆಯಾನುಮಿದನೆ ಮದಂತರ್ಗತದೊಳ್ ಬಗೆದೀ ಕನ್ನೆ ಕುಸುಮಶರಸನ್ನಿಭನನಾವನಾನುಮೊರ್ವ ಮಹಾನುಭಾವನಂ ಕನಸಿನೊಳ್ ಕಂಡು ದಿಟಮೆಂದೇ ಬಗೆದೆಲ್ಲೆಡೆಯೊಳಱಸಿ ಮಱುಗಿಪ್ಪಳೆಂದಱಿದು ನಿನಗಱಿಪಲೆಂದಿರ್ದೆವಾವಱಿಯೆವೆ ಮತ್ತಾವನುಮನಪೂರ್ವಪ್ರಾಯರೂಪ ವಿಭ್ರಮವಿಭವನಂ ಕಾಣದೀ ಕೋಮಳೆ ಕಾಮವಿಕಾರದಿಂ ಕನಸಿನೊಳ್ ಬಂದ ಸೌಭಾಗ್ಯವಂತನಂ ಚೂತವನಲಕ್ಷ್ಮಿಯ ಕುಸುಮಾಂಕುರವಿಕಾರದಿಂ ಬಂದ ಬಸಂತನುಮಱಿವುದೇ ತಪ್ಪಲ್ಲಱಿಯದಾದೊಡಮಿನ್ನುಮಾನೆ ಮನೋಹರಿಯ ಮನಮಂ ತಿಳಿದು ನಿನಗೆ ತಿಳಿಯವೇೞ್ದಪೆನೆಂದು ಪೋಗಿ ತನ್ನ ಮನದನ್ನಳಪ್ಪುದಱಿಂ ಮೇಳಿಸಿ ಮನದೆಗೊಂಡಾಕೆ ನಿನ್ನ ಪರಿ ಮುನ್ನಿನ ಪರಿಯಲ್ಲದೇಂ ಬನ್ನಂಬಟ್ಟಂತೆ ಬಿನ್ನನಿರ್ಪೆಯೆನೆ –

ಎಮೆ ದುಂಬಿಯುಗುೞ್ದಿವೆಮೆ ಮಧು
ರಮಧುಗಳಂ
ನಿಡಿಯ ಬಿಳಿಯ ಕಣ್ದಾವರೆಯಿಂ
ರಮಣಿ
ನಸುನೆಗಪಿದಳ್ ಮದ
ನಮೋಹದಿಂ
ಬಾಷ್ಪಬಹಳಜಳಕಣಿಕೆಗಳಂ    ೮೭

ಎನೆ; ನೆಗಪಿಯೊರ್ವನಪೂರ್ವವಿಲಾಸನಂ ನಿದ್ದೆಗೆಯ್ದಲ್ಲಿ ಕಂಡೆನೆನೆ ಮುಗುಳ್ನಗೆ ನಕ್ಕು ಕಣ್ಣನೀರ್ಗಳಂ ತೊಡೆದು ನೀಂ ಬೆಸಗೊಳ್ವ ಕನಸಿಂತುಟೆಂದು ಪೇೞ್ದು ಸಂತಸದಂತನೈದಿ ತನ್ನ ಬುದ್ಧಿಗರಿದುಂ ಪಿರಿದುಮಿಲ್ಲಪ್ಪ ಕಾರಣದಿಂ ಕಳಾವತಿ ಮತ್ತಮಿಂತೆಂದಳ್ : ದವನಕ್ಕೆ ಪೂವಂ, ಕರ್ಬಿಂಗೆ ಪಣ್ಣಂ, ತಣ್ಣೆರಲ್ಗೆ ಮೆಯ್ಯಂ, ಬೀಣೆಗೆ ನಾಲಗೆಯಂ, ಕಾಮಂಗೆ ರೂಪನಱಸುವುದೆಗ್ಗಿನ ಸುಗ್ಗಿಯಾದಂತಕ್ಕುಂ, ರಂಭೆಯೊಲ್ದಳೆನೆ ಸೊಬಗಂ, ಸರಸ್ವತಿಯೊಲ್ದಳೆನೆ ಚದುರಂ, ಸಿರಿಯೊಲ್ದಳೆನೆ ಪುಣ್ಯಮಂ,

ನೀನೊಲ್ದೆಯೆನೆ ವಿಳಾಸಮ
ನೇನವಳೋಕಿಪುದೊ
ಎನ್ನನವನೆಂಬ ಪರಿ
ಜ್ಞಾನಂ
ಬೇಳ್ಪುದು ಬಿಸಜನಿ
ಭಾನನೆ
ನೀಂ ಬರೆದು ತೋರ್ಪುದಾತನ ರೂಪಂ       ೮೮

ಎಂದು ಪಳಕಿನ ಪಲಗೆಯುಮಂ ಬಣ್ಣವಣ್ಣಿಗೆಯ ಬಟ್ಟಿಗೆಗಳುಂ ತಾನೆ ತಂದು ಕೊಟ್ಟು ತೊಡೆಯನೇಱಿಸಿಕೊಂಡು ನೋಡುತ್ತುಮಿರೆ –

ಮನದೊಳ್ ಸಲೆ ನೆಲಸಿದ ಮದ
ನನನೀಕ್ಷಿಸಿ
ಬರೆವ ತೆಱದೆ ದರಮುಕುಳಿತಲೋ
ಚನೆ
ನೆನೆದೇಂ ಬರೆದಳೊ ಕಾ
ಮನೆ
ಬರೆದಿತ್ತಂತೆ ವರನ ಮುಖಚಂದ್ರಮನಂ ೮೯

ಉದಿರ್ದುವು ಕರ್ನೆಯ್ದಿಲ ಪನಿ
ಯುದಯಿಸೆ
ಕಾಂತನ ಮುಖೇಂದು ಕರಕಮಳಂ ಮಾ
ಣದೆ
ನಡುಗಿದುದಡರೆ ಬೆಮ
ರ್ತುದು
ತನುಶಶಿಮಣಿಶಲಾಕೆ ದಳತೇಕ್ಷಣೆಯಾ        ೯೦

ಆಗಳದಂ ಕಂಡು –

ನಡುಪ ಬೆರಲ್ಗಳಂ ಪಿಡಿದು ಬಟ್ಟಿಗೆ ತೊಟ್ಟನೆ ಬೀೞೆ ಕೊಟ್ಟು ಮುಂ
ತೊಡೆದು
ಸೆಱಂಗಿನಿಂದವಳ ಘರ್ಮಜಳಂಗಳನಾಯಾತಾಕ್ಷಿಗಳ್
ಬಿಡುವುದಬಿಂದುವಂ
ಕರತಲಂಗಳಿನೊತ್ತಿ ಮನೋಭವಗ್ರಹಂ
ಬಿಡಿದ
ಲತಾಂಗಿಯಂ ಬರೆಯಿಪಂಗನೆಗಂ ಕರಮಾದುದುಬ್ಬೆಗಂ ೯೧

ಅಂತು ಬರೆಯಿಸೆ –

ಚಿತ್ತಭವನೆಂಬ ಶಂಭು ನಿ
ಮಿತ್ತಂ
ತಾನಾಗೆ ರಾಗವಶದಿಂದಮದೇಂ
ಪೆತ್ತುದೊ
ರಮಣನ ರೂಪಂ
ತತ್ತರುಣಿಯ
ಪಾಣಿಪದ್ಮಜವ್ಯಾಪಾರಂ        ೯೨

ಆಗಳ್ –

ಪ್ರತಿಮಾಗತನಿಜರೂಪಕ
ಮತಿನಿರ್ಮಳಫಲಕತಲದಪ್ರತಿರೂಪಕದೊಳ್

ಪತಿಯಂ
ಕಂಡಳೆಗೆತ್ತಾ
ಸ್ಮಿತಮುಖಿ
ಪೊಕ್ಕಪ್ಪಿದಂತಿರೇನೊಪ್ಪಿದಳೋ ೯೩

ಲೋಚನಜಳನಿಪತನಭಯ
ಸಾಚೀಕೃತವದನೆ
ವಿಮುಖವಿಧಿಯಂ ತೋರ್ಪಂ
ತಾ
ಚಿತ್ರದ ಪತಿಗಂ ಮುಳಿ
ದಾ
ಚದುರಿಕೆ ಮೊಗಮನಡ್ಡ ವಿಟ್ಟಂತೆಸೆದಳ್  ೯೪

ಅಲ್ಲಿಂಬಱಿಯಂ ತಮಾಳಿಕೆಯಂ ಕಣ್ಸನ್ನೆಯಿಂ ಕಳಾವತಿ ಕರೆದು ತಲೆಯಂ ತೂಗಿ ನೋಡುತ್ತುಮಿರೆ –

ಶಶಿಯಂ ಱೋಡಾಡುತಿರ್ಕುಂ ಮೊಗಮಲಘುಭುಜಂ ಜಾನುವಂ ಜಕ್ಕುಲಿಕ್ಕುಂ
ದಶನಂ
ದಾಳಿಂಬದಿಂಬಿತ್ತುಗಳನಿೞಿಸುಗುಂ ನೀಳನೀರೇಜಶೋಭಂ
ವಿಶದಶ್ರೀನೇತ್ರಮಂಗಂ
ವಿಕಚಕುವಲಯಶ್ಯಾಮಲಂ ಪ್ರಾಯಮಷ್ಟಾ
ದಶವರ್ಷಂ
ತಾನೆನಲ್ ಚತ್ರದೊಳಮವನ ರೂಪಾದುದಾದಂ ವಿಚಿತ್ರಂ    ೯೫

ಆತನ ತೋಳೊಳ್ ತಳ್ತ
ಹೀತಳಮುಂ
ಪೂಸಿದಮಳ ಮಳಯಜಗಂಧ
ಕ್ಕೋತೆಱಗಿದಳಿಯನಿೞಿಪುದು

ಮಾತೇಂ
ಕರ್ಮಕ್ಕೆ ಮತ್ತಗಜಪತಿಗಮನೇ    ೯೬

ಎಂದು ಪೇೞುತ್ತುಂ ತೂಂಕಡಿಸಿ ಗಿಳಿ ಮಱೆದೊಱಗುವುದುಮದೆಲ್ಲಮಂ ಕೇಳ್ದು ಕಣ್ಮಲರ್ಗಳ್ತೊಳಕರಿಯ ಮತ್ತೆಯುಂ ಮತ್ತೆ ಮತ್ತೆ ನೋಡಿ ಬಹಿರಂಗಮೆಱಿ ಯದುದನಂತರಂಗಮಱಿಗುಮೆಂಬುದನಱಿಪುವಂತೆ ವಿರಹದುರಿಯಿನುರಿದುಹುಱಿ ದಂತಿರಾದ ಮನಮಾಲಿಗೊಡೆ ಮದನಜ್ವರಮೊಳಸೋಱಿ ಸುರಿದಂತಿರಾದ ತತ್ಕಥಾರಸದ ಕಾಳ್ಪುರಂ ಮೇಲೆ ಕವಿಯೆ, ಮುೞುಂಗಿದಂತೆಯುಮಾನದಂದದಿಂ ಮಂದಮಂದಮಾದಂತೆಯುಂ ನಿಶಿತಾನು ನಿಶಿತಶಸ್ತ್ರಂ ನೆಱನಂ ನಡೆ ಮೂರ್ಛೆವೋದಂತೆಯೂ ಸುಖದ ಸೊರ್ಕಿಂ ಮೆಯ್ಮಱೆದು ಕಿಱಿದು ಬೇಗದಿನಱಿದು ಬೆಱಗಾಗಿ ಸಂಜಾತಸ್ವಪ್ನಸಂಸ್ಕಾರಸಂತತಿ ತತ್ಸ್ವರೂಪವಿಶೇಷಶ್ರವಣದಿಂ ಸಾತಿಶಯ ಸ್ಮರಣಮಂ ಮುಂದಿಡೆ, ನಿಜಮನೋಹರಿಯ ಮನೋಹರರೂಪಾತಿಶಯಮಂ ಭಾವಿಸುತ್ತುಮೇನಾನುಮನನುಮಾನಿಸುತ್ತುಮಿರ್ದ ಮಾನವಮದನನಂ ಮನದನು ರಾಗದಿಂ ಮಕರಂದನನಿಂತೆಂದಂ –

ಇದು ನಿನ್ನ ವೃತ್ತಕಂ
ಪ್ಪದು
ಕೂಡಿದುದೆನ್ನ ಬಯಕೆ ಬಯಸಿದುದುದಯಂ
ಬಿದಿಯ
ಚದುರೋಜೆಗೊಂಡುದು
ಮದನಂ
ಕೃತಕೃತ್ಯನಾದನಿಂದು ನರೇಂದ್ರಾ  ೯೭

ಅನುರೂಪರನಿವರಂ ಪಡೆ
ದನುರಾಗಮನಾಗುಮಾಡಿ
ಕನಸಿಂ ಕೂಡ
ಲ್ಕನುವಿಸುತಿರ್ದಪನೀಗಳ್

ಬಿನದಮನೇನೆಂದು
ಪೇೞ್ವೆನಬ್ಜೋದ್ಭವನಾ   ೯೮

ಅಂತೆಂದು ವಿಧಾತ್ರನ ಸಂವಿಧಾನವೈದಗ್ಧತೆಗೆ ಮೆಚ್ಚಿ ಬಿಚ್ಚಳಿಸುತಿರ್ಪಿನಂ –

ಪೆಱದೆಗೆದು ಚಂದ್ರಿಕಾಜಲ
ಮಱತಿರೆ
ಕೆಸರಂತೆ ತೋಱಿ ಗಗನಚ್ಛವಿ ಬಾಂ
ದೊಱೆಯಪರತಟದೊಳೆೞಮೀಂ

ಗುಱುಕುವ
ಬಕದಂತಿರಿರ್ದುದಿಂದುವಬಿಂಬಂ  ೯೯

ತುಱುಗಿರೆ ಗಗನಾಂಗಣದೊಳ್
ಮಿಱುಗುವ
ತಾರಕನಿಕಾಯತಂಡುಳಕುಳವಾ
ಯ್ದಱಸಿ
ರುಚಿಚಂಚುವಿಂದಂ
ಕುಱುಕಿದುದು
ಪತಂಗತಾಮ್ರಚೂಡಂ ಕ್ರಮದಿಂ         ೧೦೦

ಅಂತುಮಲ್ಲದೆಯುಂ –

ಅರುಣರುಚಿರಾಂಬರಂ ಲಂ
ಬಿರುಚಿಜಟಂ
ಸೋವಿ ತಿಮಿರಮಧುಕರಕುಳಮಂ
ಕರಕಿಸಲಯದಿಂದಂ
ಭಾ
ಸ್ಕರಭೌತಿಕನಾಯ್ದನೆಯ್ದೆ
ನೀರ್ವೂವುಗಳಂ   ೧೦೧

ಅಂತು ಸೂರ್ಯೋದಯಮಪ್ಪುದುಮಾ ಸರೋವರಕ್ಕೆ ಬಂದು ಕರಚರಣ ಮುಖ ಸರೋಜ ಪ್ರಕ್ಷಾಳನಂಗೆಯ್ದು ತದುತ್ತರತೀರದೊಳ್ ವಿದ್ಯಾಧರಿಯರ್ ವಿನೋದದಿಂ ಕಿಸುಗಲ್ಲೊಳ್ ಮಾಡಿದು ದಾಗಿಯುಂ ಕಮಲದಲಚ್ಛಾಯೆಯಿಂ ಮರಕತರುಚಿಯಿಂ ರಚನೆಗೆಯ್ದು ಬಳಿದಂತೆ ಕಿಱುಮುಱುಕ ನಾಗಿಯುಂ, ಮಿಱುಪ ಚೆಲ್ವಿಂ ಪಿರಿದೆನಿಸಿದ ಸೋಪಾನವಿಟಂಕಕೂಟದೊಳ್ ಕುಮು ದಕುವಲಯ ಕಲ್ಹಾರಕಮಲಕುಸುಮಪ್ರತಿಬಿಂಬದಿಂ ಬಾೞ್ವೂಗಳಿಂ ನಿತ್ಯಪೂಜೆವಡೆದಂತಿರ್ದ ಜಿನಪ್ರತಿಮೆಯಂ ಬಂದಿಸಿ ನೀರ್ವೂಗಳಿನರ್ಚಿಸಿ ಪದ್ಮಾವತೀಪ್ರೇರಿತಮಾರ್ಗದಿಂದಿರ್ಬರುಂ ಪೋಗೆವೋಗೆ –

ನಿನಗೋರ್ವಂಗಲ್ತು ಕುಂಭೋದ್ಭವನ ಭುವನ ಸಂಸ್ನಿಗ್ಧನೌದ್ಧತ್ಯದಿಂದಾ
ಯ್ತೆನಗಂ
ಕೇಳ್ ಭಂಗಮಿಂದುಕ್ಷಯದ ನೆವದೆ ನೀಂ ಕುಂದದಿರ್ ವೀಚಿಮಾಲಾ
ನಿನದೌಘವ್ಯಾಜದಿಂ
ನೀನೞದಿರೆನುತೆ ತಾಂ ಬುದ್ಧಿವೇೞಲ್ಕೆ ಬಂದಂ
ತೆನಸುಂ
ಪರ್ವಿತ್ತು ಪೂರ್ವಾಪರಜಲನಿಧಿಯಂ ತಾಗಿ ವಿಂಧ್ಯಾಚಲೇಂದ್ರಂ ೧೦೨

ಇಭಕುಂಭೋನ್ಮುಕ್ತಮುಕ್ತಾಶಕಲಸಿಕತಿಲಾಶ್ರಾಂತ ಮಜ್ಜತ್ಪುಳಿಂದೀ
ಸುಭಗಾಸ್ಯಾಂಭೋಜಭೂಷಂ
ಗುರುಮರಕತಶೈವಾಲಪಾಷಾಣಬಿಂದು
ಪ್ರಭವಾಂಭಃಪೂರಮೆತ್ತಂ
ಪರಿಯೆ ಸುರನದೀ ಶೋಭೆಯಿಂ ತನ್ಮಹೀಧ್ರ
ಪ್ರಭುಸಾನುಸ್ಥಾನದೊಳ್
ಬೀಱುವುವು ಹಿಮಮನೊಂದೊಂದೆ ಚಂದ್ರೋಪಲಂಗಳ್ ೧೦೩

ಆ ಪರ್ವತದ ತಪ್ಪಲೊಳ್ –

ಕರಿಗಂಡಸ್ಯಂದಿದಾನದ್ರವಮನೊದೆದು ಸರ್ಪಶ್ರಮಾಮೋದಭೋಗೋ
ದರಮಂ
ಪೊತ್ತೆತ್ತಿ ಬಾಲದ್ವಿಪದಳಿತಲಸತ್ಸಲ್ಲಕೀ ಗಂಧದಿಂದಂ
ಪೊರೆದೇಣೀಸೃಕ್ವದಿಂ
ಸೂಸಿದ ಪಸುನೊರೆಯಿಂ ನಾಂದು ನಿಂದೆತ್ತುಗುಂ ಸೂ
ಕರಪೋತವ್ಯಸ್ತಮುಸ್ತಾಸುರಭಿರಸರಜಃಕಾತರಂ
ಮಾತರಿಶ್ವಂ   ೧೦೪

ಚಮರೀವಾಲಾವಭಿನ್ನಚಪಲಕಪಿಕುಳಂ ಸಾನುಸಂಸುಪ್ತಶಾರ್ದೂ
ಲಮುಖಪ್ರಕ್ಷಿಪ್ತಪರ್ಣೋದ್ಧತತರು
ಚರಮುರ್ವೀರುಹಸ್ಕಂಧ ಕರ್ಷೋ
ದ್ಯಮದಂತಿಪ್ರೋತ್ತತಾಳಳೀಫಲಹತಿಹರಿಶಾಖಾವರೋಹತ್ಪುಳಿಂದ

ಪ್ರಮದಾಹಸ್ತಾವಲಂಬ
ವ್ಯಸನ ಸುಖಿತ ಶಾಖಮೃಗಂ ತನ್ನಗೇಂದ್ರಂ      ೧೦೫

ಸಸಿಯೆರಲೆ ಸುೞಿವ ಪುಲ್ಲೆಯ
ಪೊಸನಸೆಗೆಳಸುವುದು
ತುರಗಮುಖುಯರ್ ಮೊಗಮಂ
ನಸು
ನೆಗಪಿ ನೋಡುತಿರೆ ಮಾ
ಮಸಮಸಗುವಿನದ
ಕುದುರೆಗಳ್ ಗಿರಿಶಿರದೊಳ್       ೧೦೬

ಬಿಯದರಿಸೆ ಭಯದಿನಾ ಶಿಖ
ರಿಯ
ಮೇಗಣ ಮಿಗಮೆ ಮೊಗಸಿ ಮೃಗಧರಬಿಂಬಾ
ಶ್ರಯದೊತ್ತುಗೊಂಡುದೆತ್ತಣ

ಬಿಯಸಂಗಮದಿಲ್ಲದಂದು
ವಿಧುಗಂ ಮಿಗಕಂ  ೧೦೭

ಸಪ್ಪಳಮಾದುದು ಕೆಳೆಯೆಂ
ದುಪ್ಪಳಮಂ
ಚಂದ್ರನಬ್ಜಮಂ ರವಿ ಬಿಂಬಂ
ಒಪ್ಪಿರೆ
ಪರಾಗಪರಿಮಳ
ಮೊಪ್ಪುಗುಮಾ
ನಗದ ನೆತ್ತಿಯಬ್ಜಾಕರದೊಳ್ ೧೦೮

ಅಳುರ್ವ ದವದಹನನಿಂ ಬೇ
ವಳವಿಯ
ಮಲಯಜದ ಸುರಿವ ಕರ್ಪೂರದ ಗು
ಗ್ಗುಳನಿರ್ಯಾಸದ
ನವಪರಿ
ಮಳದಿಂ
ಮಗಮಗಿಪುವಗದ ನಾಲ್ಕುಂದೆಸೆಗಳ್        ೧೦೯

ಕೆಡೆದುದೊ ನೀಲದ ಸಱೆಯೆಂ
ದೊಡವೆರ್ಚಿದ
ಬೆಗಡುಗೊಂಡು ಬೆಳತಿಗೆಗಣ್ಣಿಂ
ಕುಡುಮಿಂಚಿನ
ತುಡುಗೆಗಳಂ
ತುಡಿಸುವ
ತೆಱನಿದು ಮುಗಿಲ್ಗೆ ಶಬರಿಯರರೆಬರ್       ೧೧೦

ಎಱಗೆ ಹರಿ ಮುರಿದ ಕುಲಿಶದ
ಮುಱಿಗಳಿವೆನೆ
ಮಿಱುಗೆ ವಜ್ರದೆಸೆವ ಪರಲ್ಗಳ್
ಪಱಿಯದೆಱಕೆಯನೆ
ಕಿಕ್ಕಿಱಿ
ಗಿಱಿದಿರ್ದುವು
ಕುಧರದಣೆಯೊಳೆಱಪ ಮುಗಿಲ್ಗಳ್       ೧೧೧

ಆವಾಸಮೋಹದಿಂ ಪೆ
ರ್ಬಾವಾದುವು
ಮುತ್ತು ಸತ್ತ ಕೞ್ತಲೆಗಳೆನಲ್
ಕಾವಲಿಯ
ಕರಿಯ ಬಣ್ಣದ
ಪಾವುಗಳೆಸೆದಿರ್ಪುವಾ
ಗುಹಾಗಹ್ವರದೊಳ್  ೧೧೨

ಕಡುವೆಳೆದ ತಾಳತರುವಂ
ಕೆಡಪಿದವೊಲ್
ಪೊರೞುತಿರ್ಪ ಪೆರ್ವಾಪುಗಳೇಂ
ತುಡುಕಿದುವೊ
ಜಿಂಹಜಿಹ್ವಾ
ವಿಡಂಬಮಂ
ಘನಗುಹಾಮುಖಂಗಳೊಳಗದಾ         ೧೧೩

ಮರದಡಿಯೊಳ್ ಮುದುಡಿದ ಮುದು
ಗರಡಿಯ
ಮೆಯ್ಯಲ್ಲಿ ಪರಿಯೆ ಪರೆದೆಲೆಯೆಡೆಯಿಂ
ತರುಣರವಿಕಿರಣತತಿ
ವನ
ಚರಿಯರ್
ಪುಲಿಗೆತ್ತು ತೊಲಗುವರ್ ಗಿರಿವರದೊಳ್    ೧೧೪

ಇಕ್ಕಿದ ತತ್ತಿಗೆ ಕೞ್ತಲೆ
ವಕ್ಕಿ
ಭಯಂಬಿಟ್ಟು ರವಿಕರಾಹಿಯ ದಿಸೆಯಿಂ
ಪಕ್ಕದೆ
ಪೊದೆಯಿಸಿತೆನೆ ಮೆ
ಯ್ಯಿಕ್ಕಿರ್ದುವು
ನೀಳದೊಳ್ ತಮಾಳದ ತರುಗಳ್      ೧೧೫

ಎಂಬ ಪೊಗೞ್ತೆಗಳುಂಬಮಿ
ದೆಂಬುದನಾ
ಕಲಶಭವನನಿನಿಸುಱದೆ ನಭ
ಶ್ಚುಂಬಿನಿಜರುಚಿಗಳಿಂ
ರವಿ
ಬಿಂಬಮುಮಂ
ಮಿಕ್ಕು ಬೆಳೆವವೋಲ್ ಸೊಗಯಿಸುಗುಂ         ೧೧೬

ಆಗಸಮಿದು ಬಕ್ಕಂಬಯ
ಲಾಗಿರಲಾಗೆಂದು
ಪಡೆದ ಮೂಱುಂ ಜಗಮಂ
ತಾಗೆಂ
ತೀವಲ್ ನೆಱೆಯದೊಶ
ಡೀ
ಗಿರಿಯಂ ಪಡೆದನಬ್ಜಭವನೆನಿಸುವುದಂ   ೧೧೭

ಅಂತು ಕಂಡು ಮನಂಗೊಂಡು ಮೆಚ್ಚುತ್ತುಮಚ್ಚರಿವಡುತ್ತುಮರಸನುಮಮಾತ್ಯ ಪುತ್ರನುಮಾ ಪರ್ವತದ ತೞ್ಪಲ್ವಿಡಿದು ಪೋಗೆವೋಗೆ ಮುಂದೊಂದುಪತ್ಯಕದೊಳ್ –

ಕಡುವೆಟ್ಟಿತ್ತಾಗಿ ಮೇಗಿರ್ದಚಲಜಲಧರಂ ಪಿಂದಣರ್ಕೋದಯಂ ಬೆ
ಳ್ಗೊಡೆಯಂ
ಭಾಚಕ್ರಮಂ ಪೋಲ್ತಿರೆ ಕೆಲದಚಳಚ್ಚಾಮರೌಘಂ ಬೆಡಂಗಂ
ತುಡಿಸುತ್ತುಂ
ಸಿಂಧು ಜಾಳಂ ಬಳಸಿದ ಶಿಲೆಯೊಳ್ ನಿಂದ ಯೋಗೀಶ್ವರಂಗೇಂ
ಪೊಡೆಮಟ್ಟಾನಂದಮಂ
ತಾಳ್ದಿದನೊ ಹೃದಯದೊಳ್ ವಿಶ್ವವಿದ್ಯಾವಿನೋದಂ       ೧೧೮

ಇದು ವಿದಿತ ವಿವಿಧ ಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಳೋಚ್ಚಳಿತ ನಖಮಯೂಖಮಂದಾಕಿನೀಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತ ಬುಧಮಧುಕರಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತಿಯೊಳ್ ನಾಯಕಾಭ್ಯುದಯವರ್ಣನಂ

ಸಪ್ತಮಾಶ್ವಾಸಂ