ಆ ಪ್ರಸ್ತಾವದೊಳ್

ತನಗೆ ಸೊಬಗಿಂದಮಾತಂ
ಮನದೊಳ್
ಮಚ್ಚರಿಪನೆಂಬ ಸೂಳ್ವಗೆ ಬಗೆಯೊಳ್
ನನೆಕೊನೆವೋದಂತಿರೆ
ನಿಡು
ನನೆಗಣೆಗಳನಾಯ್ದುಕೊಂಡು
ಮನಸಿಜನೆಚ್ಚಂ ೫೧

ಮಱೆದಿರೆಯುಮಿಂದ್ರಿಯಂಗಳ್
ಗುಱಿಯಾದುದು
ನೃಪನ ಚಿತ್ತಮಲರ್ಗಣೆಗೇಂ ಮೆ
ಯ್ಯಱಿದಖಿಕರಣಮುಂ

ಣ್ದೆಱೆದವರಂ
ಕೊಂದು ಕೂಗದಿರ್ಪನೆ ಮದನಂ          ೫೨

ನಿಡುಸಯ್ ಸುಯ್ಯೊಳ್ ಹೃದಯದ
ನಡುಕಂ
ಮಿಡುಕಿನೊಳಪೂರ್ವಘರ್ಮಜಳಂಗಳ್
ಬಿಡುಬೆಮರ್ವನಿಗಳೊಳಾತೂಂ

ಕಡಿನೊಳ್
ಪರವಶತೆ ಬೆರಸಿತರಸನೊಳಾಗಳ್        ೫೩

ಅಂತುಮಲ್ಲದೆಯುಂ

ನನೆಗೋಲ್ ನಟ್ಟುಕೊನರ್ತವೋಲ್ಬುಳಕಮುಣ್ಮಿತ್ತಲ್ಲಿ ರಕ್ತಾಂಬುಗಳ್
ಪನಿವಂತೆರ್ದುವು
ಘರ್ಮವಾರಿ ದಿಟದಿಂ ಹೃದ್ಗೇಹಮಂ ತನ್ನಿತಂ
ಬಿನಿ
ಪೊಕ್ಕಂತಿರೆ ಕಂಪನಕ್ಕೆ ತನು ಕೈಗೊಟ್ಟತ್ತು ಧೀರತ್ವಮಂ
ಮನದಿಂ
ಸುಯ್ ಪೊಱಗಣ್ಗೆ ಪೊತ್ತಡಕುವಂತಿರ್ದತ್ತು ಭೂಪಾಳನಾ        ೫೪

ಕನಸಿನೊಳಗಾ ಕುಮಾರಂ
ವನಿತೆಗೆ ಬಸಮಾಗಿ ಬಹುವಿಕಾರಮನಾಂತಂ
ಮನಮನೆ
ನೆಲೆವನೆಮಾಡಿ
ರ್ಪನಂಗನಂ
ಕೞಿಯಲಾರ್ಗಮೇಂ ಬಂದಪುದೇ        ೫೫

ಬನದೊಳ್ ಪುಟ್ಟಿಯುಮನಲಂ
ಮನದೊಳ್
ಪುಟ್ಟಿಯುಮನಂಗನುರುಪುವನಾತಂ
ಬನಮನಿವಂ
ಮನಮನೆನ
ಲ್ಕನಲಂಗಂ
ಮನಸಿಜಂಗಮಾವುದೊ ಭೇದಂ          ೫೬

ಅಂತುಮಲ್ಲದೆಯುಂ,

ಬಗೆಯೊಳಪೊಕ್ಕ ಕೋಮಳೆಯನೀಕ್ಷಿಸುವಂತೆ ಬೞಲ್ದ ಕಣ್ಮಲರ್
ಮುಗಿದಿರೆ
ಚುಂಬನಕ್ಕೆಳಸುವಂತಧರಂ ತನಿಗೆತ್ತೆ ಪೂವಿನಂ
ಬುಗಳುಗಿವಂತೆ
ಪಾಯ್ದೆರ್ದೆ ಕರಂ ಮಿಸುಗುತ್ತಿರೆ ಸುಯ್ಗಳುಣ್ಮೆ ಮು
ಚ್ಚೆಗೆ
ನೆಱೆದಂತೆ ಮೆಯ್ಮಱೆದು ನಿದ್ರೆಯೊಳೊಪ್ಪಿದನಾ ಕುಮಾರಕಂ        ೫೭

ಆಗಳಾಕೆಯ ಕಣ್ಬೆಳಗೆಂಬ ಕಾಪಪಾಶದಿಂ ಕಟ್ಟಿ ತೆಗೆದಂತೆಯುಂ, ಮದನದಹನಂ ಪತ್ತೆ ನಿತ್ತರಿಸಲಾಱದೆ ಲಲನೆಯ ಲಾವಣ್ಯರಸದ ಬಯಲ್ವೊನಲೊಳೋಲಾಡಿ ಬಿೞ್ದಂತೆಯುಂ, ಕುಸುಮಶರನ ಕೂರ್ಗಣೆಗೆ ತನ್ನನೆ ಗುಱಿಯೊಡ್ಡಿದುದರ್ಕೆ ಬೆಗಡುಗೊಂಡಂತೆಯುಂ, ಬಿಟ್ಟುಪೋಗಿ ಬಗಿದು ಪುಗುವಂತೆಯುಂ, ಸೋಲ್ತು ತನ್ನನೊಪ್ಪಿಸುವಂತೆಯುಮಪ್ಪಿ ಕೊಳ್ವಂತೆಯುಮೆಳಸಿ ಬಳಸಿಪರಿದು ಪತ್ತಿ ಬೞಲ್ದು ಬೆಂಡಾಗಿ ನಾಭಿಕೂಪದೊಳ್ ಬಿರ್ದಂತೆಯುಂ, ಬಟ್ಟಮೊಲೆವೆಟ್ಟದಿನಿೞಿಯಲಱಿಯದಂತೆಯುಂ, ಮುಖಚಂದ್ರಮರೀಚಿ ಯೊಳ್ ಮುೞುಗಿದಂತೆಯುಂ, ಕೇಶಪಾಶದೊಳ್ತೊಡರ್ದಂತೆಯುಮೆಂತುಮತ್ಯಾಸಕ್ತಿಯಿಂ ತಳರಲೊಲ್ಲದ ತಳೋದರಿಯವಯವಮರೀಚಿವಜ್ರಲೇಪದೊಳ್ ತೊಡರ್ದ ಚಪಳಚಿತ್ತಮಂ ತೆಗೆಯಲಾಱದಚ್ಚಮುಂ ತುಚ್ಚಮುಮಲ್ಲದಿಚ್ಚೆಯೆೞ್ಚಱಿಸೆಯೆೞ್ಚ ಱಲುಂ ಮಱೆದಂತೆ ನಿದ್ರಾಮುದ್ರಿತ ವಿಳೋಚನನುಮಾಗಿ ಕಂದರ್ಪದೇವನಿರ್ಪುದುಮನ್ನೆಗಂ ; ದುರ್ವಾರದರ್ಪನಪ್ಪ ದರ್ಪಕನ ಭುಜವಿಜಯಪ್ರಕಟಪಟುಪಟಹರಟನಾಟೋಪಮನಭಿನಯಿಸುವಂತೆ

ಚಂಡಾಳೀಚಂಡಗೀತಧ್ವನಿಯನೊದೆದು ಪಾರಾವತಾರಾವಮಂ ಬೆಂ
ಕೊಂಡೋಕಃಕೀರಕೋಳಾಹಳಮನಲೆದು
ಸೆಜ್ಜಾರದಿಂದೇೞ್ವ ಮಾದ್ಯ
ಚ್ಛುಂಡಾಳೋಚ್ಛೃಂಖಳಾಶಿಂಜಿತವನೆಡೆಗೆ
ಪೊಯ್ದುಣ್ಮಿ ಪೊಣ್ಮಿತ್ತದಂತಾ
ಜಾಂಡಂ
ಪ್ರಾತಸ್ತ್ಯಶಂಖಸ್ಥನಸಹಚರಸಂಚಾರ್ಯತೂರ್ಯಪ್ರಣಾದಂ     ೫೮

ನಿನದದಿನೆೞ್ಚತ್ತಂ
ಭೂನಾಥಂ
ಮಾಣದೆರ್ದೆಯನುರ್ಚುವ ಮದನಾ
ಸ್ತ್ರಾನೀಕದಿನೆೞ್ಚತ್ತಂ

ತಾನೆನೆ
ಮೈ ಮುಱೆದು ನಿದ್ರೆಯಿಂದೆೞ್ಚತ್ತಂ   ೫೯

ಅರಸಂ ಸರಸಿಜಮುಖಿಗಾಂ
ನೆರೆದಿರೆಯುಂ
ಸೋಲ್ತನೆಂದು ಪುರುಡಿಸಿ ಪೋಪಂ
ತಿರೆ
ನಿದ್ರೆ ಪೋದುದವನೀ
ಶ್ವರನುಂ
ಸಂಭ್ರಮದಿನೆರ್ದು ತಳವೆಳಗಾದಂ ೬೦

ಆ ಸಮಯದೊಳ್

ಅಳಿನೀಜ್ಯಾಮೃದುಮಂಜ ಶಿಂಜಿತಸಮಂ ಸಣ್ಣಿಂಚರಂ ಬಂಚರ
ದ್ದಳಿಯೊಳ್ತಳ್ತೊಡನುಣ್ಮಿ
ನುಣ್ಚರದೆ ಮಿಂಚಂ ಸೀೞ್ದವೋಲ್ಪೊಣ್ಮೆ ಕಾ
ಕಳಿಯೊಳ್ಕೂಡಿದ
ಸೀಯನಪ್ಪ ರಸಗೇಯಂ ಚಿತ್ತಮಂ ತಾಗೆ ಪೂ
ಗಳ
ಬಾಣಂಗಳೆ ತಾಗಿದಂತೆರಗಿದಂ ಶೃಂಗಾರಕಾರಾಗೃಹಂ     ೬೧

ಅಂತು ಶಯ್ಯಾತಳದಿನೆರ್ದು ನೀಳ್ದ ಬಿಳಿಯ ನಳಿನದೆಸಳೊಳ್ ಮುಸುಱಿ ಮುತ್ತಿದ ಮತ್ತಮಧುಕರಕುಳಮಂ ಕೆಲಕ್ಕೆ ತೊಲಗಿಸುವಂತೆ ತಳ್ತ ತುಱುಗೆಮೆಗಣ್ಗಳಂ ತೆಗೆದು, ನೆಯ್ದಿಲೊಳ್ ನಿಂದ ತುಷಾರಕಳಿಕೆಗಳಂ ಕೆಂದಳಿರಿಂ ತೊಡೆವಂತೆ ಕೆಂದಳದಿಂ ಕಣ್ಬನಿಗಳನಗಲೆ ನೂಂಕಿ, ಕೊಲಲೆಂದು ಕೊರ್ವಿದ ಕಠಿನಕುಚಕುಂಭಮುರಮನುರ್ಚಿ ಬೆಂಗೆ ಬಳೆವಂತಿರೆ ಕಂಡು ಮೇಲೆವರಿ ದಪ್ಪಳೆಂಬ ತಪ್ಪಿಂಗೆ ಮುಂದೆ ನಿಂದಂತಿರ್ದ ಕೋಮಳೆಯ ರೂಪಂ ಕುಮುದದಳದೀರ್ಘ ದಾಮದಿಂ ಮೋದುವಂತೆಯುಂ, ಪೞಪೂವಲಿ ಕೞಿದು ಕಂದಿ ನಾಱಿದುವೆಂದು ನವಕುಸುಮೋಪ ಹಾರಮಂ ಕೆದಱುವಂತೆಯುಂ ಸೊಡರ್ಗುಡಿಗಳಿಂ ನಿಮಿರ್ದ ಕಾಡಿಗೆವುಡಿಗಳ ನುಣ್ಗಪ್ಪಿನಿಂ ನಸುಮಾಸಿದುವೆಂದು ಸೌಧಭಿತ್ತಿಗಳಂ ಸೊದೆವಳಿವಂತೆಯುಂ, ಕಣ್ಬೆಳಗು ಬಳಸೆ ವಿಳೋಚನಂ ವಿಸ್ಫಾರಿತವಿಲೋಚನನಾಗಿ ಕಾಮಮಾಯೆಯಿಂ ಮೆಯ್ಮಱೆದು ಮೋಹಗ್ರಹದ ಸೋಂಕಿನಿಂ ಮರುಳ್ಗೊಂಡು ಸೋಲದ ಸೊರ್ಕು ತಿಳಿಯದೆ ಕಳವಳಿಸಿ ನೋಡಿ –

ತಳರದೆ ತನ್ನ ಕಣ್ಣ ಮೊದಲೊಳ್ ಸುೞಿದಾಕೆಯರೂಪಂ ತಳತಳ
ತ್ತಳಿಸಿದೊಡಾಕೆಗೆತ್ತು
ರಸಭಾವದ ಚಿತ್ತಮನಾಕೆಗೆತ್ತು ಪು
ತ್ತೞಿಗಳನಾಕೆಗೆತ್ತೆಲೆಗೆ
ಬಾಯೆನುತುಂ ನಿಡುದೋಳನೆತ್ತಿ ಕೋ
ಮಳಕರಕಂಜದಿಂದೆಳವಿ
ನೋಡಿದನಾ ರತಿರಾಗದೋಹಳಂ     ೬೨

ಅಲ್ಲಿಂಬೞಿಯಿಂ,

ಅಂಗಂಗಳೊಳುೞಿದಳೊ ಕರೆ
ಣಂಗಳ್
ತಮ್ಮೊಳಗೆ ಪಚ್ಚುಗೊಂಡುವೊ ಚಿತ್ತಂ
ನುಂಗಿದುದೊ
ಪೇೞೆನಲ್ಕಾ
ಗಂಗನೆಯಂ
ಕಾಣದರಸನಿದು ಕನಸೆಂದಂ   ೬೩

ಅಂತು ಕನಸೆಂದಱಿದಾ ನಿವಾಸಮಣಿಭಿತ್ತಿಭಾಗದೊಳ್

ಬರೆಪದ ಜೀವಚಿತ್ರಮುಮನೀಕ್ಷಿಸಿ ನಾಣ್ಚಿ ಮುಖಾಂಬುಜಾತಮಂ
ತಿರಿಪಿದನಾತ್ಮ
ಬಿಂಬತತಿಗಂ ತಲೆಗುತ್ತಿ ಬೆಗೞ್ಪ ಕಣ್ಗಳಂ
ಬರೆ
ತೆಗೆದಂ ನೃಪಂ ತನಗೆ ತಾಂ ಗಡ ಲಜ್ಜಿಸಿ ಘರ್ಮವಾರಿಯಂ
ಸುರಿದನದಂತೆ
ದಲ್ ಮತಿವಿಮೋಹಮೆ ಮಾನಿಗೆ ಲಜ್ಜೆಯಲ್ಲಮೇ ೬೪

ಮೆದಱಿದ ಮನಮಂ ಸಂತೈ
ಸಿದನೊಯ್ಯನೆ
ವಿಕಳಮಾದ ಸಕಳೇಂದ್ರಿಯಮಂ
ಪದುಳಿಸಿದುಂ
ಪಾಡೞಿದ
ಳ್ಕಿದ
ತನ್ನನೆ ತಾನೆ ಪೊಸತುಮಾೞ್ಪವೊಲರಸಂ       ೬೫

ಅಂತು ಸಂತೈಸಿಯುಂ ಸಂತಮಿರದೆ ಮುನ್ನಮೆಂದುಮನುಭವಿಸಿಯಱಿಯದ ಸುಂದರಿಯ ಸೌಂದರ್ಯದ ಸಲುಗೆ ಸಂದುವೋದಂತೆಯುಂ ಲಾವಣ್ಯವತಿಯ ಲಾವಣ್ಯರಸದ ನವಾಸ್ವಾದನಂ ನಾಲಗೆಯಂ ಪತ್ತಿದಂತೆಯುಂ ಧೃತಿಯೆಂಬ ಪೊಡರ್ಪು ಪಱಿದು ಪೋದುದೆನ್ನನಿನ್ನಾರ್ಪಿಡಿವರೆಂದು ಪೊಡರ್ಪುಗೆಯ್ವಂತೆಯುಂ ಪಿಡಿಯೆ ಪಿಡಿಯೆ ಮುಂದುರುಳಿ ಮಿಱಿ ಪರಿವ ಮನಮಂ ನಿಲಿಸಲಾಱದೆ –

ಸುಯ್ಯುತ್ತುಂ ಮತ್ತೆ ಶಯ್ಯಾತಳದೊಳಸವಸಂ ಮೆಯ್ಯನೀಡಾಡಿ ಧೈರ್ಯ
ಕ್ಕುಯ್ಯುತ್ತುಂ
ಚಿತ್ತಮಂ ವಿಸ್ಮಯಮಯರಸದಿಂ ನಾಂದುತುಂ ಸೆಜ್ಜೆಗೊಟ್ಟಂ
ಗಯ್ಯಂ
ಗಲ್ಲಕ್ಕೆ ಪೇೞಿಂತಿರೆ ಬಱಿದೆ ಬೞಲ್ದನ್ನರಾರೆಂದು ತನ್ನಂ
ಬಯ್ಯುತ್ತುಂ
ಕಾಮನುಚ್ಛೃಂಖಳತೆಗೆ ತಲೆಯಂ ತೂಗಿದಂ ರಾಜಪುತ್ರಂ    ೬೬

ಅಂತು ತೂಗಿ ತನ್ನೊಳಿಂತೆಂದಂ –

ಇದು ಕನಸಾಗಿಯುಂ ಕನಸಿನಂದಮುಮಲ್ತಿದು ಕಣ್ಗೆ ಕಾಂತೆಯ
ಲ್ಲದೆ
ಪೆಱತಾವುದುಂ ಪೊಳೆಯದೆನ್ನಯ ಚಿತ್ತದೊಳಿನ್ನುಮಾಕೆಯ
ಲ್ಲದೆ
ಪೆಱತಾವುದುಂ ಪುಗದು ಮಾಣ್ದೆರ್ದೆಯಂ ಗುಱಿಮಾಡಿ ಲೇಸನ
ಲ್ಲದೆ
ಪೆಱತಾವುದಂ ಬವಸೆಗಾಣವು ಕಾಮನ ಹಸ್ತಶಾಖೆಗಳ್     ೬೭

ಅದಲ್ಲದೆಯುಂ,

ಕಡೆಗಣ್ಣಿಂ ಸೋಲಮಂ ಸೂಸುವ ಸತಿಯಸಿತಸ್ನಿಗ್ಧದೃಗ್ದಾಮದಿಂ ಪೊ
ಯ್ವಡೆದೆನ್ನೀ
ಚಿತ್ತಮಿನ್ನುಂ ಬೆದಱಿದಪುದು ನಟ್ಟಾಲಿಗೊಂಡಪ್ಪುವಿನ್ನುಂ
ನಿಡುಸುಯ್
‌ಸಯ್ತಾಱವಿನ್ನುಂ ಬೆಮರ್ವನಿ ಬೆಱಗಾದಂತೆ ಮೈಕಂಪಮಂ ಮುಂ
ದಿಡೆಯುಂ
ರೋಮಾಂಚಮಿನ್ನುಂ ಕೆಡೆಯದು ಕನಸೆಂದೆಂತಿದಂ ನಂಬಲಕ್ಕುಂ      ೬೮

ಎಂದು ಸತ್ಯಸ್ವಪ್ನಮಂ ಸಕಳಶಾಸ್ತ್ರಕೋವಿದರಿಂ ಕೇಳ್ದು ಕೈಕೊಂಡುಮಱಿವುದುಂಟಪ್ಪುದಱಿಂದಿದು ಸತ್ಯಮಂ ಸೆಱೆವಿಡಿದುದಾಗಲೆವೇೞ್ಕುಮೆಂದು ಸತ್ಯರತ್ನಾಕರನಾ ಕರುಮಾಡದಿಂ ಪೊಱಮಡದೆ ತನ್ನೊಳ್ ಬಗೆದು ಭಾವಿಸುತ್ತಿರ್ಪನ್ನೆಗಂ

ದಾನೇಭಂ ಪುಂಗವಂ ಕೇಸರಿ ಸಿರಿ ಸುಮನೋಮಾಲೆ ಚಂದ್ರಂ ದಿನೇಂದ್ರಂ
ಮಿನಂ
ಕುಂಭಂ ಕೊಳಂ ಪಾಲ್ಗಡಲಿಭರಿಪುಪೀಠಂ ಸುರೋದ್ಯದ್ವಿಮಾನಂ
ಶ್ರೀನಾಗಾವಾಸಮಚ್ಛನ್ಮಣಿಚಯವನಲಜ್ವಾಲೆಯೆಂದಿಂತಿವೆಲ್ಲಂ

ಮಾನಾಲಂಕಾರನೊಳ್ಮಾಡುಗೆ
ಜಿನಜನನೀಷೋಡಶಸ್ವಪ್ನದೊಳ್ಪಂ       ೬೯

ಪರಮಾರ್ಹಂತ್ಯಪ್ರಭಾವಂ ಕುಡುಗೆ ಗಡಣದಿಂ ಕೀರ್ತಿಕಾಮಂಗೆ ನಿಚ್ಚಂ
ಸಿರಿಯಂ
ಶ್ವೇತಾತಪತ್ರಂ ಸುಭಗವಿಭವಮಂ ಚಾಮರಂ ಭೋದಮಂ ದಿ
ವ್ಯರವಂ
ಸಂಪ್ರೀತಿಯಂ ಪೂಮೞೆ ಶುಭಮನಶೋಕದ್ರುಮಂ ಪೆರ್ಮೆಯಂ ಕೇ
ಸರಿಪೀಠಂ
ಕಾಂತಿಯಂ ಭಾವಳಯಮನಭೀಮತೋತ್ಸಾಹಮಂ ದೇವತೂರ್ಯಂ  ೭೦

ಜಿನನಂ ಪೂಜಿಸಿದಕ್ಕಿ ಮಾಲೆ ಸೊಡರ್ಗಳ್ ಧೂಪಂ ಫಲಂ ದರ್ಪಣಂ
ನನೆ
ಗಂಧಂ ದಧಿ ದರ್ಭೆ ಪೂರ್ಣಕಲಶಂ ತುಂಗಧ್ವಜಂ ತೋರಣಮ
ತೆನೆ
ಜಾಗಂ ಮಣಿವಿಷ್ಟರಂ ಚಮರಜಂ ಛತ್ರಾಳಿ ಘಂಟಾಘನ
ಧ್ವನಿ
ಮುಕ್ತಾಫಲಮಂಡಪಂ ಕುಡುಗೆ ಕಂದರ್ಪಂಗೆ ದೀರ್ಘಾಯುವಂ       ೭೧

ವಿಜಿತಾಘಧ್ವಾಂತಜಾತಂ ಮುಕುಳಿತಕುಮುದಾರಂಭಮುದ್ಬುದ್ಧಭವ್ಯ
ವ್ರಜಮಸ್ತನ್ಯದುಶ್ಶಾಸನಶಶಿ
ವಿರಳೋದಸ್ತದುಸ್ತೀರ್ಥತಾರಾ
ವ್ರಜಮುದ್ಯರ್ದ್ಧರಾಗಾಭ್ಯುದಯಬಹಳಸಾಂಧ್ಯೋದಯಂ
ಸೂರವೃಂದಾಂ
ಬುಜಬೋಧಶ್ರೀಮನೋಜ್ಞಂ
ಜಿನಪತಿಸಮಯಂ ಸಂತತಂ ಸುಪ್ರಭಾತಂ ೭೨

ಅರವಿಂದಶ್ರೀಯ ಸೂೞ್ಗೆಂದಿನನತಿಭರದಿಂ ಬರ್ಪುದಂ ಕಂಡು ಚಂಚ
ತ್ಕರದಿಂದಂ
ಸೋವುತುಂ ತೀವಿದ ತಿಮಿರಪಿಶಾಚಂಗಳಂ ವ್ಯೋಮಗೇಹೋ
ದರಮಂ
ಕೈಗೆಯ್ಯುತುಂ ಸಂಪತಿತದಶದಿಶಾಭಿತ್ತಿಭಾಗಂಗಳಂ ಬಿ
ತ್ತರಿಸುತ್ತಿರ್ದಪ್ಪನೆಂಬಂತರುಣನರುಣನಗ್ರೇಸರಂ
ಕಣ್ಗೆವಂದಂ   ೭೩

ಪರೆಯೆ ಕುರುಳ್ಗಳಂತೆ ತಿಮಿರಂ ಮುಗಿಯುತ್ತಿರೆ ನೆಯ್ದಿಲಚ್ಚಿಯಂ
ತಿರೆ
ಬೆಮರಂತಿರಾಱುತಿರೆ ತಾರಗೆ ತೀರೆ ವಿಭಾತಕಾಂತೆ ಕಾಂತನೊಳ್
ನೆರೆದು
ಸುಖಾಂತದೊಳ್ ಕರಗುತಿರ್ಪ ಮನೋಹರಿಯಾರ್ದ್ರಕುಂಕುಮಾ
ಬರಮೆ
ಬೞಲ್ದವೊಲ್ಬಳೆದುದೈಂದ್ರಿಯ ಸಾಂಧ್ಯ ಮಯೂಖಪಲ್ಲವಂ        ೭೪

ಎಳದಳಿರಂತೆ ಪೆರ್ಮರದ ಕೊಂಬುಗಳೊಳ್ ನವಧಾತುನಿರ್ಝರಂ
ಗಳ
ಪೊನಲಂತೆ ಶೈಲಶಿಖರಂಗಳೊಳುಜ್ಜ್ವಲಮಪ್ಪ ಮಾಣಿಕಂ
ಗಳ
ರುಚಿ ಪರ್ವಿದಂತೆ ಸುರಕೂಟಕನತ್ಕಳಶಂಗಳೊಳ್ ತಳ
ತ್ತಳಿಸಿದುದೀಷದುನ್ಚಿಷಿತಮಂಡಳ
ಚಂಡಕರಾಂಶುಜಾಳಕಂ      ೭೫

ಜಳಧಿಚಳೋರ್ಮಿಚಾಮರಚಯಂಗೆ ದಿಶಾಧಿಪದಿಗ್ಗಜೆಂದ್ರಸಂ
ಕುಳಪರಿವಾರಭಾಗಿಗೆ
ನಭೋಮಣಿಮಂಡಪಮಂಡನಂಗೆ
ಣ್ಗೊಳಿಸೆ
ಜಗನ್ಮಹಾಪ್ರಭುಗಭೀಕ್ಷಿಸಲೆತ್ತಿದ ಸುಪ್ರಭಾತಂ
ಗಳ
ಮಣಿದರ್ಪಣಕ್ಕೆ ದೊರೆಯಾಯ್ತುದಯಾದ್ರಿಯೊಳರ್ಕಮಂಡಳಂ       ೭೬

ಅಂತುಮಲ್ಲದೆಯುಂ –

ಅನುರಾಗಂ ನೀರಜಶ್ರೀಗಳವಡೆ ಬೆಳಗಿಂ ಬಳ್ಕಿ ಸಂಪನ್ನತಾರಾ
ರಿನಿಕಾಯಂ
ಮಂಡಳಾಗ್ರದ್ಯುತಿಗೆ ತೆಗೆಯೆ ಲೋಕಕ್ಕೆ ದೃಗ್ಲೋಕನಾನಂ
ದನಮಂ
ಮುಂದಿಟ್ಟು ಚಂಚತ್ಕನಕಕಲಶಮಂ ತೀವಿ ಸರ್ವಾಶೆಯಂ ಭೂ
ವಿನುತಂ
ನಿಂದಂತೆ ಜಾತಾಭ್ಯುದಯನೆಸೆದಪಂ ಪದ್ಮಿನೀಜೀವಿತೇಶಂ    ೭೭

ಇದೆ ಹೇಷಾಘೋಷದಿಂ ವಾಹಳಿಗೆ ಕರೆವವೊಲ್ ಕಟ್ಟಿ ಬಂದಶ್ವಮೀ ಯಿ
ರ್ದುದೆ
ಪರ್ವಿಂ ಪಣ್ಣಿ ಬಂದೋಜೆಗೆ ನಿಱಿಸಿದ ಕಟ್ಟಾನೆ ಸೇವಾರಸೋತ್ಸೇ
ಕದಿನೀಗಳ್
ದೇವ ಬಂದಿರ್ದಪುದು ಸಕಳರಾಜನ್ಯಕಂ ಮಂತ್ರಿವರ್ಗಂ
ಪದನಂ
ಪಾರ್ದಿರ್ಪುದಿನ್ನುಪ್ಪವಡಿಸು ಜನತಾನೇತ್ರನೀರೇಜಭಾನೂ       ೭೮

ಎಂದು ಮೃದುಮಧುರಗಂಭೀರಧ್ವನಿಯಿನೋದುವ ಪ್ರಭಾತಪುಣ್ಯ ಪಾಠಮಾಗಥನಿವಹಕ್ಕೆ ಕನಲ್ದೊನಲ್ದು ಕಮನೀಯಭಿತ್ತಿಭಾಗಂಗಳಂ ಕುಂಕುಮರಸದಿಂ ಕಾಲ್ವಳಿಗೊಳ್ವಂತೆ ಗವಾಕ್ಷವಿವರದಿಂದ ಪೊಕ್ಕು ಪಸರಿಸುವೆಳವಿಸಿಲನಳುರ್ದುಕೊಳ್ವ ಕಾಮಕಾಳಾನಳಜ್ವಾಳೆಗೆತ್ತಳ್ಕಿಂದತಿರಳ್ಕಿ ಧೈರ್ಯ ಮನವಲಂಬಿಸಿ ಬಿಸುಸುಯ್ದು ಶಯ್ಯಾತಳದಿಂದೆಂತಾನುಮೆರ್ದು ನಿಜಹೃತ್ಕವಾಟಪುಟಮಂ ತೆಱೆದ ತರುಣಿಯ ತೆಱನನಱಿದು ತೋಱುವಂತ ಮಣಿಕಂಕಣಝಣತ್ಕಾರಕ್ಕೆ ಸೆಜ್ಜೆವಳನುಜ್ಜಗದಿಂ ಕನಕಕವಾಟ ಪುಟಮಂ ತೆಱೆಯೆ ಪೊಱಮಟ್ಟು ಕರುಮಾಡದ ನೆಲೆಯಿನವತರಿಸಿಯಾ ಕನ್ನೆಯ ಮುಖ ಮುಕುರಮಂ ಪೋಲ್ತೀ ಕನ್ನಡಿಯುಮೆನ್ನನೊಳಗುಮಾಡುವುದಾವ ಕೌತುಕಮೆಂಬಂತೆ ಮಂಗಳಮಣಿದರ್ಪಣಮನೇವೈಸುತ್ತುಮವಳೋಕಿಸಿ ಮೋಹರಸದೊಳ್ ಮುೞುಂಗಿದ ತನ್ನ ನೆನ್ನನೆಂದೀಕ್ಷಿಸುವಂತಿರಾಜ್ಯಾವೇಕ್ಷಣಂಗೆಯ್ದನಂತರಂ ರೋಮಕೂಪವಿವರವಿ ನಿಸ್ಸೃತಮನೋಭಾವಾನಳಧೂಮದಾಮಾವೃತನಾದಂತೆ ಶುಚಿಸುರಭಿಸೋಷ್ಣಸಲಿಲ ಸ್ನಾನಸಂಸಕ್ತಸೂಕ್ಷ್ಮ ಧೂಮಲೇಖಾಳಂಕೃತಶರೀರಂ ಜಾಹ್ನವೀಫೇನ ಪಿಂಡಪಾಂಡು ರಿತಜಟಾಜೂಟಧೂರ್ಜಟಿಯಂತೆ ಸದಯಪ್ರಕ್ಷಾಳನಪರಿಲಘುದುಕೂಲವಸನ ವೇಷ್ಟಿತಮಸ್ತಕಂ ಪಾದಪದ್ಮರಾಗಪಟಳಪಾಟಳಿತಮಣಿಪಾದುಕಾಪದವಿನ್ಯಾಸರಣಿತಮಣಿಕುಟ್ಟಿಮಂ, ಜಗಮಂ ಬಗೆದ ಬೇಗದೊಳೆ ಗೆಲ್ವ ವಿಷಮ ಶರನನದಟಲೆದ ಗೆಲ್ಲಂ ನಿನ್ನೊಳಲ್ಲದೆ ಸಲ್ಲದೆಂದು ತ್ರಿಃಪ್ರದಕ್ಷಿಣಂಗೆಯ್ದು ದೂರದ್ವಾರದೇಶಪರಿಕ್ಷಾಳಿತಕರಚರಣಕಮಳಂ, ತದಾಲಯಮಂ ಪೊಕ್ಕು ಮಣಿಮಂಟಪದ ಮಧ್ಯಸ್ಥಿತಚಂದ್ರಕಾಂತಜಿನಬಿಂಬಕ್ಕೆ ವಿನಮಿತೋತ್ತಮಾಂಗನಭಿಮುಖನಾಗಿ ಕೈಗಳಂ ಮುಗಿದು –

ಶ್ರೀಯಂ ಕೂರಿಸಲಾಜ್ಞೆಯಂ ಪಸರಿಸಲ್ ಸತ್ಕೀರ್ತಿಯಂ ಕೊರ್ವಿಸಲ್
ಕಾಯಕ್ಲೇಶಮನೞ್ಗಿಸಲ್
ದುರಿತಮಂ ನಿರ್ಮೂಲಿಸಲ್ ನಿಂದ ನಿ
ಟ್ಟಾಯಂ
ನಿಟ್ಟಿಸಲೊಳ್ಪನಪ್ಪಿತಣಿಸಲ್ಬೇೞ್ಪಂಗೆ ಬೇೞ್ಪೇಸುಖೋ
ಪಾಯಂ
ತ್ವಚ್ಚರಣಪ್ರಣಾಮಮಱಿದೆಂ ಶ್ರೀಮಜ್ಜಿನಾಧೀಶ್ವರಾ     ೭೯

ಕಡುಕೆಯ್ದುಟ್ಟುದನಿಕ್ಕಿಯುಂ ಸುಭಟನೈ ಸಂಸಾರಕಾಂತಾರಮಂ
ಕಡಿದುಂ
ಶ್ರಾಂತಿಹೀನನೈ ಸುವಿದಿತಂ ಜೀವಾದಿತತ್ತ್ವಂಗಳಂ
ನುಡಿದುಂ
ಮೌನಸಮೇತನೈ ವಿಮಳಿನಶ್ರೀದೋರ್ಲತಾಪಾಶದೊಳ್
ತೊಡರ್ದುಂ
ಮುಕ್ತನೆಯೇಂ ಕರಂಪಿರಿಯೆಯೊ ಶ್ರೀಮಜ್ಜಿನಾಧೀಶ್ವರಾ      ೮೦

ಬನಮಂ ಸಾರ್ದ ನರಂಗೆ ಪಾವನಫಲಂ ಪ್ರೋತ್ಫುಲ್ಲಪಂಕೇಜಕಾ
ನನಮಂ
ಸಾರ್ದ ನರಂಗೆ ಶೀತಳಜಲಂ ಸಾರಸ್ವತಾ ದಾನಸ
ಜ್ಜನರಂ
ಸಾರ್ದ ನರಂಗೆ ಸದ್ಗುಣಗಣಂ ನಿನ್ನಂಘ್ರಿಯಂ ನಂಬಿ ಸಾ
ರ್ದ
ನರಂಗುತ್ತಮಸೌಖ್ಯವಾದ ಗಹನಂ ಶ್ರೀಮಜ್ಜಿನಾಧೀಶ್ವರ     ೮೦

ಕುಳಿರ್ವೇರಿಂ ಕುಳಿರ್ವಾಲಿನೀರ್ದಳಿಪದಿಂ ನೀಹಾರದಿಂ ಹಾರದಿಂ
ತಳಿರಿಂ
ತಣ್ಣೆಲರಿಂದ ಡಂಗದಘಜಾಳಜ್ವಾಲಸಂತಾಪಮಂ
ಕಳೆಗುಂ
ಸಂಸ್ಮೃತಿಮಾತ್ರದಿಂದೆ ಮನುಜಂಗೆಂಬಂತದೇನೊಂದು ಶೀ
ತಳಮೋ
ಪದ್ಮಸನಾಭಿ ನಿನ್ನ ಚರಣಂ ಶ್ರೀಮಜ್ಜಿನಾಧೀಶ್ವರಾ     ೮೧

ನುಡಿ ಕೈಗನ್ನಡಿ ವಿಶ್ವದರ್ಶನಪರರ್ಗಾಚಾರಮಾಚಾರ್ಯಕಂ
ನಡೆಗೆಟ್ಟೀ
ಭುವನಕ್ಕೆ ಶಾಂತಕೆನಿಜಾಕಾರಂ ಶಿಲಾಶಾಸನಂ
ಸೊಡರಜ್ಞಾನತಮಕ್ಕೆ
ನಿನ್ನ ಮತಮಂದಂದೆಂತು ಪೇೞ್ ನಿನ್ನ ಕೇ
ಸಡಿಗಾಂ
ಕೂರೆನದೆಂತು ಮಾಣದೆಱಗೆಂ ಶ್ರೀಮಜ್ಜಿನಾಧೀಶ್ವರಾ  ೮೨

ಮನಮಂ ಜಾನಿಸಲೀಯದಿರ್ದಪುದು ನಿನ್ನಾಸ್ಯಾಜ್ಜದೊಳ್ ಮದ್ವಿಲೋ
ಚನಭೃಂಗದ್ವಯಮೊಂದನೆಂದಪೆನಿದಂ
ವೈರಾಗ್ಯದಿಂದ ನೀನೆ ಕಾ
ಮನನೇಂ
ಗಲ್ದೆಯೊ ನಿನ್ನ ಸಾತಿಶಯ ರೂಪಾಕಾರಮಂ ಕಂಡು ಕಾ
ಮನೆ
ಕಣ್ಸೋಲ್ತನೊ ಪೇೞಿದಂ ಗಡೆನಗಂ ಶ್ರೀಮಜ್ಜಿನಾಧೀಶ್ವರಾ ೮೩

ಭಯದಿಂ ನಿನ್ನಯ ನಾಮಮೆಂದಡಗಿದಂ ಪಂಚೇಷು ನೀನಿರ್ದ ಸಂ
ಶ್ರಯಮಂ
ಸಾರ್ಗುಮೆ ಯುಷ್ಮದಂಘಿನತನೆಂದಾರ್ದೆನ್ನನೊಟ್ಟೈಪ ಹೃ
ಚ್ಛಯನಂ
ತೂಳ್ದುವುದುಳ್ಳೊಡೆನ್ನ ಮನದೊಳ್ನೀಂ ನಿಟ್ಟೆಯಿಂದಿರ್ಪುದಂ
ದಯಗೆಯ್
ಕೈಗಳನೊಡ್ಡಿಬೇಡಿದೆನಿದಂ ಶ್ರೀಮಜ್ಜಿನಾಧೀಶ್ವರಾ   ೮೪

ತೆಗೆದೈ ಮೋಕ್ಷದ ಬಟ್ಟೆಯಂ ಬೆಳಗಿದೈ ತ್ರೈಲೋಕ್ಯದೊಳ್ ಧರ್ಮಮಂ
ಬಗೆದೈ
ನಿನ್ನನದೊಂದುಗುಂದದಱೆದೈ ಸರ್ವಾರ್ಥಸಂದೋಹಮಂ
ನೆಗೞ್ದೈ
ಲೋಕದ ನೀಳ್ದ ತುತ್ತತುದಿಗಿನ್ನುಂ ಕೃತ್ಯಮೊಂದುಂಟು ಕೈ
ಮುಗಿದೆನ್ನಿಷ್ಟಮನೀವ
ಶಿಷ್ಟಕರಣಂ ಶ್ರೀಮಜ್ಜಿನಾಧೀಶ್ವರಾ        ೮೫

ಎಂದು ವಸ್ತುಸ್ತವ ರೂಪಸ್ತವ ಗುಣಸ್ತವಂಗಳಂ ಮಾಡಿ –

ಜಳಜಾಮೋದವಿಮಿಶ್ರ ತೀರ್ಥಜಳದಿಂ ಚಾಂಪೇಯ ಪಿಂಗಾಜ್ಯಕೋ
ಮಳಧಾರಾವಳಿಯಿಂ
ಸುಧಾಕ್ತ ಮಧುರಾಮೋದಕ್ಷರತ್ ಕ್ಷೀರಸಂ
ಕುಳದಿಂ
ನೀರಜಕುಂದಕಾಂತದಧಿಪಿಂಡಾಸಾರದಿಂ ಸಾರ್ದು ಶೀ
ತಳದಿಂ
ಜಾಣ್ಮಿಗೆ ಮಜ್ಜನಂಬುಗಿಸಿದಂ ಸೌಂದರ್ಯಸಂಕ್ರಂದನಂ         ೮೬

ಪೊಸನೀರಿಂ ಪೊಸಗಂಪಿನಿಂ ಪೊಸತು ಬೆಳ್ಪಾದಕ್ಕಿಯಿಂ ದೇವನಂ
ಪೊಸಪೂವಿಂ
ಪೊಸತುಯ್ಯಲಿಂ ಪೊಸವೆನಿಪ್ಪುದ್ದಾಮದೀಪಂಗಳಿಂ
ಪೊಸಧೂಪಂಗಳ
ಧೂಮದಿಂ ಪೊಸರಸಕ್ಕಿಂಬಾದ ಪಣ್ಣಿಂದಮ
ರ್ಚಿಸಿ
ಕಣ್ಣಾರ್ವಿನಮೊಲ್ದು ನೋಡಿ ನಲಿದಂ ವಾಗ್ವಲ್ಲಕೀವೈಣಕಂ  ೮೭

ಮದನಾಗ್ನಿಜ್ವಾಲೆಯಂ ನಂದಿಸಿದನೆನೆ ಜಿನಸ್ನಾಗಗಂಧಾಂಬುವಿಂ ನಾಂ
ದದಯಾನಂಗಾಸ್ತ್ರಪಾತಕ್ಕಗಿದು
ಕವಚಮಂ ತೊಟ್ಟಮೊಲ್ಪೂಸಿ ತಚ್ಛ್ರೀ
ಪದದಿವ್ಯಾಮೋದಗಂಧದ್ರವಮನಿಡುವವೋಲ್
ರಕ್ಕೆಯಂ ಮೌಳಿಯೊಳ್ತೀ
ವಿದನಾಗಳ್
ಸಿದ್ಧಶೇಷಾಕ್ಷತಮನನುದಿನಂ ಕಾವ್ಯಕರ್ಣಾವತಂಸಂ        ೮೮

ಇದು ವಿದಿತಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಲೋಚ್ಚಲಿತ
ನಖಮಯೂಖಮಂದಾಕಿನೀಮಜ್ಜನಾಸಕ್ತ
ಸಂತತೋತ್ಸಿಕ್ತ ದಾನಾಮೋದ ಮುದಿತಬುಧಮಧುಕರಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತಿಯೊಳ್ ನಾಯಿಕಾಸ್ವಪ್ನದರ್ಶನಂ

ತೃತೀಯಾಶ್ವಾಸಂ